Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 9 ಮಾರ್ಚ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣಗಳ ಘೋಷಣೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಮೀಸಲಾತಿಯಲ್ಲಿ 50% ಮಿತಿಯ ಕುರಿತು ರಾಜ್ಯಗಳ ಅಭಿಪ್ರಾಯಗಳನ್ನು ಕೋರಿದ ಸುಪ್ರೀಂ ಕೋರ್ಟ್.

2. ಬ್ಯಾಂಕ್ ಬೋರ್ಡ್ ಬ್ಯೂರೋ.

3. ಕೈರ್ನ್ ಸಂಸ್ಥೆಯು $ 1.4 ಬಿಲಿಯನ್ ಪರಿಹಾರಕ್ಕಾಗಿ ಐದು ನ್ಯಾಯಾಲಯಗಳ ಸಮ್ಮತಿ ಪಡೆದಿದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ವನ್ ಧನ್ ವಿಕಾಸ್ ಕೇಂದ್ರ ಉಪಕ್ರಮ.

2. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ದೆಹಲಿಯ ತಲಾ ಆದಾಯ.

2. ಅಂತರರಾಷ್ಟ್ರೀಯ ಮಹಿಳಾ ದಿನ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣಗಳ ಘೋಷಣೆ:


(Declaration Of World Heritage Sites By UNESCO)

ಸಂದರ್ಭ:

ಸಂಸ್ಕೃತಿ ಸಚಿವಾಲಯದ ವರದಿಯ ಪ್ರಕಾರ :

 • ಧೋಲವಿರ: ಹರಪ್ಪ ನಾಗರಿಕತೆಯ ನಗರ’ ವನ್ನು 2019-2020ರಲ್ಲಿ ‘ವಿಶ್ವ ಪಾರಂಪರಿಕ ತಾಣ’ದಲ್ಲಿ ಸೇರ್ಪಡೆ ಗೊಳಿಸಲು’ ‘ನಾಮನಿರ್ದೇಶನ ಮಾಡಲು ಪ್ರಸ್ತಾಪಿಸಲಾಗಿದೆ.
 • 2021-22ರಲ್ಲಿ ‘ವಿಶ್ವ ಪಾರಂಪರಿಕ ತಾಣ’ ದಲ್ಲಿ ಭಾರತದಿಂದ ‘ಶಾಂತಿನಿಕೇತನ, ಮತ್ತು ಹೊಯ್ಸಳ ದೇವಾಲಯ ಸಮೂಹಗಳನ್ನು’ ಸೇರಿಸಲು ನಾಮನಿರ್ದೇಶನಕ್ಕೆ ಪೂರಕ ದಾಖಲೆಗಳನ್ನು ಯುನೆಸ್ಕೋಗೆ ಕಳುಹಿಸಲಾಗಿದೆ.

ಪ್ರಸ್ತುತ, ಭಾರತವು 38 ವಿಶ್ವ ಪರಂಪರೆಯ ಸ್ಥಳಗಳನ್ನು ಹೊಂದಿದೆ. ಇದಲ್ಲದೆ, ಭಾರತದ 42 ತಾಣಗಳನ್ನು ತಾತ್ಕಾಲಿಕ ಲಿಸ್ಟ್’ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ, ಇದು ‘ವಿಶ್ವ ಪರಂಪರೆಯ ತಾಣ’ ದಲ್ಲಿ ಸೇರ್ಪಡೆಗೊಳ್ಳುವ ಪೂರ್ವಭಾವಿ ಷರತ್ತು ಆಗಿದೆ.

ವಿಶ್ವ ಪಾರಂಪರಿಕ ತಾಣ ಎಂದರೇನು?

 • ವಿಶ್ವ ಪರಂಪರೆಯ ತಾಣ ಗಳನ್ನು(World Heritage site) ನೈಸರ್ಗಿಕ ಅಥವಾ ಮಾನವ ನಿರ್ಮಿತ ಪ್ರದೇಶಗಳು ಅಥವಾ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಮತ್ತು ವಿಶೇಷ ರಕ್ಷಣೆಯ ಅಗತ್ಯವಿರುವ ರಚನೆಗಳು ಎಂದು ವರ್ಗೀಕರಿಸಲಾಗಿದೆ.
 • ಈ ತಾಣಗಳನ್ನು ವಿಶ್ವಸಂಸ್ಥೆ (UN) ಮತ್ತು ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಅಧಿಕೃತವಾಗಿ ಗುರುತಿಸಿವೆ.
 • ವಿಶ್ವ ಪರಂಪರೆಯೆಂದು ವರ್ಗೀಕರಿಸಲಾದ ತಾಣಗಳನ್ನು ಮನುಕುಲಕ್ಕೆ ಮುಖ್ಯವೆಂದು ಯುನೆಸ್ಕೋ ಪರಿಗಣಿಸುತ್ತದೆ, ಏಕೆಂದರೆ ಈ ತಾಣಗಳು ಸಾಂಸ್ಕೃತಿಕ ಮತ್ತು ಭೌತಿಕ ಮಹತ್ವವನ್ನು ಹೊಂದಿವೆ.

ಪ್ರಮುಖ ಅಂಶಗಳು:

 • ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಯುನೆಸ್ಕೋದ ವಿಶ್ವ ಪರಂಪರೆಯ ಸಮಿತಿಯು ನಿರ್ವಹಿಸುವ ‘ಅಂತರರಾಷ್ಟ್ರೀಯ ವಿಶ್ವ ಪರಂಪರೆ ಕಾರ್ಯಕ್ರಮ’ ಸಿದ್ಧಪಡಿಸಿದೆ. ಈ ಸಮಿತಿಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಿಂದ ಚುನಾಯಿತವಾದ 21 ಯುನೆಸ್ಕೋ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
 • ಪ್ರತಿಯೊಂದು ವಿಶ್ವ ಪರಂಪರೆಯ ತಾಣಗಳ ಪಟ್ಟಿಯನ್ನು ಅವು ಇರುವ ದೇಶದ ಶಾಸನಬದ್ಧ ಪ್ರದೇಶದ ಭಾಗವಾಗಿ ಉಳಿದಿದೆ ಮತ್ತು ಅದರ ರಕ್ಷಣೆಯನ್ನು ಯುನೆಸ್ಕೋ ಸಂಸ್ಥೆಯು ಅಂತರರಾಷ್ಟ್ರೀಯ ಸಮುದಾಯದ ಹಿತದೃಷ್ಟಿಯಿಂದ ಪರಿಗಣಿಸುತ್ತದೆ.
 • ವಿಶ್ವ ಪರಂಪರೆಯ ತಾಣವಾಗಿ ಆಯ್ಕೆ ಮಾಡಲು, ಒಂದು ತಾಣವನ್ನು ಈಗಾಗಲೇ ಭೌಗೋಳಿಕವಾಗಿ ಮತ್ತು ಐತಿಹಾಸಿಕವಾಗಿ ವಿಭಿನ್ನ, ಸಾಂಸ್ಕೃತಿಕ ಅಥವಾ ಭೌತಿಕ ಪ್ರಾಮುಖ್ಯತೆಯ ತಾಣವಾಗಿ ಅನನ್ಯ, ವಿಶಿಷ್ಟ ಹೆಗ್ಗುರುತು ಅಥವಾ ಚಿಹ್ನೆ ಹೊಂದಿದ ತಾಣ ಎಂದು ವರ್ಗೀಕರಿಸಿರಬೇಕು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಮೀಸಲಾತಿಯಲ್ಲಿ 50% ಮಿತಿಯ ಕುರಿತು ರಾಜ್ಯಗಳ ಅಭಿಪ್ರಾಯಗಳನ್ನು ಕೋರಿದ ಸುಪ್ರೀಂ ಕೋರ್ಟ್:


(SC seeks States’ views on 50% cap on quota)

ಸಂದರ್ಭ:

1992 ರ ಇಂದಿರಾ ಸಾಹ್ನಿ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂದು ಪರೀಕ್ಷಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಏನಿದು ಸಮಸ್ಯೆ?

1992 ರಲ್ಲಿ, ಸುಪ್ರೀಂ ಕೋರ್ಟ್ ‘ಅಸಾಧಾರಣ’ ಸಂದರ್ಭಗಳನ್ನು ಹೊರತುಪಡಿಸಿ, ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬಡವರಿಗೆ ಮತ್ತು ಸಮಾಜದಲ್ಲಿನ ಕೆಳಸ್ಥರದವರಿಗೆ 50% ಮೀಸಲಾತಿಯನ್ನು ನಿಗದಿಪಡಿಸಿತು.

ಆದಾಗ್ಯೂ, ಕಳೆದ ಕೆಲ ವರ್ಷಗಳಲ್ಲಿ, ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ಅನೇಕ ರಾಜ್ಯಗಳು ಈ ಮಿತಿಯನ್ನು ಶತಾಯಗತಾಯವಾಗಿ ದಾಟಿ 60% ಕ್ಕಿಂತ ಹೆಚ್ಚು ಮೀಸಲಾತಿ ನೀಡುವ ಕಾನೂನುಗಳನ್ನು ಅಂಗೀಕರಿಸಿವೆ.

 • ಇತ್ತೀಚೆಗೆ, ಮರಾಠಾ ಮೀಸಲಾತಿ ಕಾನೂನನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಐದು ಸದಸ್ಯರ ಸಾಂವಿಧಾನಿಕ ನ್ಯಾಯಪೀಠವು, ಮೀಸಲಾತಿ ನೀಡುವಲ್ಲಿ 50% ಮಿತಿಯನ್ನು ‘ಮಹಾರಾಷ್ಟ್ರ’ಕ್ಕೆ ಮಾತ್ರ ಸೀಮಿತಗೊಳಿಸದಿರಲು ನಿರ್ಧರಿಸಿದೆ.
 • ಸಂವಿಧಾನಿಕ ನ್ಯಾಯಪೀಠವು ಪ್ರಕರಣಗಳ ವ್ಯಾಪ್ತಿಯನ್ನು ಇತರ ರಾಜ್ಯಗಳಿಗೆ ಸಹ ಪಕ್ಷಗಳನ್ನಾಗಿ ಮಾಡಿ ವಿಸ್ತರಿಸಿದೆ ಮತ್ತು ಮೀಸಲಾತಿ 50% ಮಿತಿಯ ಒಳಗೆ ಮುಂದುವರಿಯಬೇಕೇ ಅಥವಾ ಸುಧಾರಣೆಯ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕರೆ ನೀಡಿದೆ.

50% ಮಿತಿಗೆ ಕಾರಣ:

 • 1931 ರ ಜನಗಣತಿಯ ಸಮಯದಲ್ಲಿ ಭಾರತದಲ್ಲಿ ಕೊನೆಯ ಬಾರಿಗೆ ಜಾತಿಗಳನ್ನು ಎಣಿಸಲಾಯಿತು, ಇದರ ಆಧಾರದ ಮೇಲೆ, ‘ಇತರ ಹಿಂದುಳಿದ ವರ್ಗಗಳನ್ನು’ ಮಂಡಲ್ ಆಯೋಗವು ಗುರುತಿಸಿತು. ಈ ಜನಗಣತಿಯ ಪ್ರಕಾರ, ಇತರ ಹಿಂದುಳಿದ ವರ್ಗಗಳ’ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ 52% ಆಗಿತ್ತು. ಆದಾಗ್ಯೂ, ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಮೀಸಲಾತಿಯನ್ನು ಸಮರ್ಥಿಸುತ್ತದೆ ಮತ್ತು ಅದಕ್ಕಾಗಿ ಒಂದು ಮಿತಿಯನ್ನು ನಿಗದಿಪಡಿಸಬೇಕು ಎಂದು ಹೇಳಿದೆ, ಆದರೆ ತೀರ್ಪು ನೀಡುವಾಗ ಜನಸಂಖ್ಯೆಯ ಪ್ರಶ್ನೆಯನ್ನು ಪರಿಗಣಿಸಲಿಲ್ಲ.

ತಮಿಳುನಾಡು ಪ್ರಕರಣ:

ರಾಜ್ಯ ವಿಧಾನಸಭೆಯು ‘ತಮಿಳುನಾಡು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ರಾಜ್ಯ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳು) ಕಾಯ್ದೆ 1993 ಅನ್ನು ಅಂಗೀಕರಿಸಿತು.

 • ನಂತರ, 1994 ರಲ್ಲಿ ಸಂಸತ್ತು ಅಂಗೀಕರಿಸಿದ 76 ನೇ ಸಾಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಈ ಕಾನೂನನ್ನು ಸಂವಿಧಾನದ ಒಂಬತ್ತನೇ ಅನುಸೂಚಿಯಲ್ಲಿ ಸೇರಿಸಲಾಯಿತು.

ಮರಾಠಾ ಮೀಸಲಾತಿ ಕಾಯ್ದೆಯ ಅವಲೋಕನ:

ಗಾಯಕವಾಡ್ ಆಯೋಗದ ಶಿಫಾರಸುಗಳ ಆಧಾರದ ಮೇಲೆ 2019 ರ ಜೂನ್‌ನಲ್ಲಿ ಬಾಂಬೆ ಹೈಕೋರ್ಟ್ ಮರಾಠಾ ಮೀಸಲಾತಿಯನ್ನು ಶಿಕ್ಷಣದಲ್ಲಿ 16% ರಿಂದ 12% ಮತ್ತು ಉದ್ಯೋಗದಲ್ಲಿ 13% ಕ್ಕೆ ಇಳಿಸಿತು.

 • ಮಹಾರಾಷ್ಟ್ರ ಅಂಗೀಕರಿಸಿದ ಕಾನೂನು ಜಾರಿಗೆ ಬಂದಾಗ, ರಾಜ್ಯದಲ್ಲಿ ಲಂಬ ಮೀಸಲಾತಿ 68% ತಲುಪಬಹುದು, ಮೊದಲು ಅದರ ಗರಿಷ್ಠ ಮಿತಿ 52% ಇತ್ತು. ಈ ಅಂಶವನ್ನು ಪ್ರಶ್ನಾರ್ಹವಾಗಿ ತೆಗೆದುಕೊಳ್ಳಲಾಗಿದೆ.
 • ಇಂದಿರಾ ಸಾಹ್ನಿ ತೀರ್ಪಿನಲ್ಲಿ, 50% ಮೀಸಲಾತಿ ನಿಯಮದ ಉಲ್ಲಂಘನೆಯನ್ನು ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅನುಮತಿಸಲಾಗಿದ್ದರಿಂದ, ಮಹಾರಾಷ್ಟ್ರ ಸರ್ಕಾರವು ಅಂಗೀಕರಿಸಿದ ಈ ಕಾನೂನು ‘ವಿನಾಯಿತಿ’ ಯ ಅಡಿಯಲ್ಲಿ ಬರುತ್ತದೆಯೇ ಎಂದು ನ್ಯಾಯಾಲಯವು ಪರೀಕ್ಷಿಸಬೇಕಾಗುತ್ತದೆ.

ಮರಾಠಾ ಮೀಸಲಾತಿ ಇಂದಿರಾ ಸಾಹ್ನಿ ಪ್ರಕರಣಕ್ಕೆ ಹೇಗೆ ಸಂಬಂಧಿಸಿದೆ?

 • ಸಂವಿಧಾನದ 102 ನೇ ತಿದ್ದುಪಡಿಯಡಿಯಲ್ಲಿ ರಾಷ್ಟ್ರಪತಿಗೆ ‘ಹಿಂದುಳಿದ ವರ್ಗಗಳನ್ನು ಅಧಿಸೂಚಿಸುವ ಅಧಿಕಾರ’ ನೀಡಲಾಗಿದೆ. ನ್ಯಾಯಾಲಯವು ಇದೇ 102 ನೇ ತಿದ್ದುಪಡಿಯ ಅನ್ವಯ ರಾಜ್ಯಗಳು ಸಹ ಇದೇ ರೀತಿಯ ಅಧಿಕಾರವನ್ನು ಹೊಂದಿವೆಯೇ ಎಂದು ಪರಿಶೀಲಿಸಲಿದೆ.
 • ಇದಲ್ಲದೆ, ಮೇಲಿನ ಅಧಿಕಾರವನ್ನು ಸಂವಿಧಾನದಿಂದ ರಾಷ್ಟ್ರಪತಿಗೆ ನೀಡಲಾಗಿದೆ, ಮಂಡಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ವಿಧಿಸಿರುವ ಮಾನದಂಡಗಳನ್ನು ರಾಷ್ಟ್ರಪತಿಗಳು ಪಾಲಿಸುವುದು ಇನ್ನೂ ಅಗತ್ಯವೇ? ಎಂಬುದನ್ನು ಪರಿಶೀಲಿಸಬೇಕಾಗಿದೆ.
 • ಸಂವಿಧಾನದ 103 ನೇ ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸುವ ಇನ್ನೊಂದು ಪ್ರಕರಣದಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ತಿಳಿಸಲಾದ ಮಾನದಂಡಗಳ ಪ್ರಸ್ತುತತೆಯೂ ಪ್ರಶ್ನಾರ್ಹವಾಗಿದೆ. 2019 ರಲ್ಲಿ ಅಂಗೀಕರಿಸಲ್ಪಟ್ಟ 103 ನೇ ತಿದ್ದುಪಡಿಯು, ಕಾಯ್ದಿರಿಸದ ವಿಭಾಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10% ಮೀಸಲಾತಿಯನ್ನು ಒದಗಿಸುತ್ತದೆ.
 • ಮೀಸಲಾತಿಗಾಗಿ ನಿರ್ದಿಷ್ಟ ಜಾತಿಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ರೀತಿಯಲ್ಲಿ ಹಿಂದುಳಿದಿದೆ ಎಂದು ಘೋಷಿಸಲು ರಾಜ್ಯಗಳ ಶಾಸಕಾಂಗಗಳು ಸಮರ್ಥವಾಗಿವೆಯೇ ಎಂಬ ಮಹತ್ವದ ಪ್ರಶ್ನೆಯನ್ನು ಸುಪ್ರೀಂಕೋರ್ಟ್‌ ಕೇಳಿದೆ. ಅಲ್ಲದೆ ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ರಾಜ್ಯಗಳಿಗೆ ಸೂಚಿಸಿದೆ.
 • ಈ ಮೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅವರು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹೆಸರಿಸಲಾಗಿರುವ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಾಗಿ ಸಂವಿಧಾನದ 102ನೇ ತಿದ್ದುಪಡಿಯ ವ್ಯಾಖ್ಯಾನವನ್ನು ನ್ಯಾಯಾಲಯ ಪರಿಶೀಲಿಸಲಿದೆ.
 • 338 ಬಿ ವಿಧಿಯು ರಾಷ್ಟ್ರೀಯ ಹಿಂದುಳಿದ ವರ್ಗದ ಆಯೋಗದ ರಚನೆ, ಕರ್ತವ್ಯಗಳು ಮತ್ತು ಅಧಿಕಾರದ ಬಗ್ಗೆ ಪ್ರಸ್ತಾಪಿಸಲಾಗಿದೆ, 342 ಎ ವಿಧಿಯು ಒಂದು ನಿರ್ದಿಷ್ಟ ಜಾತಿಯನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ತಿಳಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡಿದೆ. 102ನೇ ತಿದ್ದುಪಡಿಯ ಮೂಲಕ ಸಿಇಬಿಸಿ ಪಟ್ಟಿ ಸಿದ್ಧಪಡಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ.
 • ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮರಾಠ ಮೀಸಲಾತಿ ಕಾನೂನಿನ ಸಿಂಧುತ್ವ ಮತ್ತು ಒಂದು ನಿರ್ದಿಷ್ಟ ಜಾತಿಯನ್ನು ಸಾಮಾಜಿಕವಾಗಿ ಮತ್ತು ಘೋಷಿಸಲು ರಾಜ್ಯ ಶಾಸಕಾಂಗವು ಸಮರ್ಥವಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುವಾಗ 102 ನೇ ತಿದ್ದುಪಡಿಯ ವ್ಯಾಖ್ಯಾನದ ಪ್ರಶ್ನೆ ಉದ್ಭವಿಸಿದೆ.
 • ವಿವಿಧ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ್ದೇವೆ. ಆದರೆ ಸಂವಿಧಾನದ 102 ನೇ ತಿದ್ದುಪಡಿಯ ವ್ಯಾಖ್ಯಾನವು ಬಹಳ ಪ್ರಮುಖವಾದ್ದರಿಂದ ರಾಜ್ಯಗಳಿಗೆ ಶಾಸಕಾಂಗದ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ’ ಎಂದು ಪೀಠ ಹೇಳಿದೆ.
 • ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲವೊಂದು ಬಣಗಳು, ‘ಎಲ್ಲಾ ರಾಜ್ಯಗಳಿಗೆ ವ್ಯಾಖ್ಯಾನದ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಇದರಿಂದಾಗಿ ವಿಚಾರಣೆಯಲ್ಲಿ ವಿಳಂಬವಾಗಬಹುದು. ಇದರ ಬದಲಿಗೆ ಕೇವಲ ಸಂಬಂಧಪಟ್ಟ ರಾಜ್ಯಕ್ಕೆ ವ್ಯಾಖ್ಯಾನಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸುವುದು ಒಳಿತು’ ಎಂದು ಹೇಳಿದೆ.

 

ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.

ಬ್ಯಾಂಕ್ ಬೋರ್ಡ್ ಬ್ಯೂರೋ (ಬಿಬಿಬಿ)


(Banks Board Bureau)

ಸಂದರ್ಭ:

ಮೂಲಸೌಕರ್ಯ ಹಣಕಾಸು ತ್ವರಿತಗೊಳಿಸಲು, ಉದ್ದೇಶಿತ 1 ಲಕ್ಷ ಕೋಟಿ ಅಭಿವೃದ್ಧಿ ಹಣಕಾಸು ಸಂಸ್ಥೆಯ  (Development Financial Institution – DFI) ವ್ಯವಸ್ಥಾಪಕ ನಿರ್ದೇಶಕರು (MDs) ಮತ್ತು ಉಪ ವ್ಯವಸ್ಥಾಪಕ ನಿರ್ದೇಶಕರನ್ನು (DMDs) ಆಯ್ಕೆ ಮಾಡುವ ಕಾರ್ಯವನ್ನು ‘ಬ್ಯಾಂಕ್ ಬೋರ್ಡ್ ಬ್ಯೂರೋ’ಗೆ (BBB) ವಹಿಸಿಕೊಡಬಹುದು.

ಉದ್ದೇಶಿತ ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಬಗ್ಗೆ:

ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್’  (National Bank for Financing Infrastructure and Development), ಒಂದು ಮೂಲಸೌಕರ್ಯ ಹಣಕಾಸು (infrastructure financier) ಮತ್ತು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (National Infrastructure Pipeline) ಯೋಜನೆಗೆ ಹಣಕಾಸು ಒದಗಿಸುವ ಪ್ರಮುಖ ಕೇಂದ್ರವಾಗಿದೆ.

ಬ್ಯಾಂಕ್ ಬೋರ್ಡ್ ಬ್ಯೂರೋ ಕುರಿತು:

 ಫೆಬ್ರವರಿ 2016 ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಬೋರ್ಡ್ ಬ್ಯೂರೋ ಸ್ವಾಯತ್ತ ಸಂಸ್ಥೆಯಾಗಿದೆ.  ಆರ್‌ಬಿಐ ನೇಮಿಸಿದ ನಾಯಕ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಇದನ್ನು ಸ್ಥಾಪಿಸಲಾಯಿತು.

 • ಅದು ‘ಇಂದ್ರಧನುಷ್ ಯೋಜನೆಯ’ ಒಂದು ಭಾಗವಾಗಿತ್ತು.
 • ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ಮತ್ತು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳ ಪೂರ್ಣ ಸಮಯದ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷರ ನೇಮಕವನ್ನು ಮಾಡಲು ಶಿಫಾರಸು ಮಾಡುವುದು ಇದರ ಕಾರ್ಯವಾಗಿದೆ.
 • ಈ ನೇಮಕಾತಿಗಳ ಬಗ್ಗೆ ಅಂತಿಮ ನಿರ್ಧಾರವನ್ನು ಹಣಕಾಸು ಸಚಿವಾಲಯವು ಪ್ರಧಾನ ಮಂತ್ರಿ ಕಚೇರಿಯೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳುತ್ತದೆ.

ಸಂಯೋಜನೆ:

‘ಬ್ಯಾಂಕ್ ಬೋರ್ಡ್ ಬ್ಯೂರೋ’ ಅಧ್ಯಕ್ಷರು ಮತ್ತು ಮೂವರು ಎಕ್ಸ್ಆಫೀಸಿಯೊ ಸದಸ್ಯರನ್ನು ಒಳಗೊಂಡಿದೆ, ಅವರುಗಳೆಂದರೆ ಸಾರ್ವಜನಿಕ ಉದ್ಯಮಗಳ ಇಲಾಖೆಯ ಕಾರ್ಯದರ್ಶಿ, ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಉಪ ಗವರ್ನರ್. ಇದರ ಜೊತೆಗೆ, ಮಂಡಳಿಯು ಐದು ತಜ್ಞ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಇಬ್ಬರು ಖಾಸಗಿ ವಲಯದಿಂದ ಆಯ್ಕೆಯಾಗಿದ್ದಾರೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು – ಅವುಗಳ ರಚನೆ, ಆದೇಶ.

ಕೈರ್ನ್ ಸಂಸ್ಥೆಯು $ 1.4 ಬಿಲಿಯನ್  ಪರಿಹಾರಕ್ಕಾಗಿ ಐದು ನ್ಯಾಯಾಲಯಗಳ ಸಮ್ಮತಿ ಪಡೆದಿದೆ:


(Cairn wins nod from five courts for $1.4 bn award)

 ಸಂದರ್ಭ:

ಕೈರ್ನ್ ಎನರ್ಜಿಗೆ ಭಾರತ ಸರ್ಕಾರವು $ 1.4 ಬಿಲಿಯನ್ ಮೊತ್ತವನ್ನು  ಪಾವತಿಸುವ ಮಧ್ಯಸ್ಥಿಕೆ ನಿರ್ಧಾರವನ್ನು ಐದು ದೇಶಗಳ ನ್ಯಾಯಾಲಯಗಳು (ಯು.ಎಸ್., ಯು.ಕೆ., ನೆದರ್ಲ್ಯಾಂಡ್ಸ್, ಕೆನಡಾ ಮತ್ತು ಫ್ರಾನ್ಸ್) ಸೂಚಿಸಿವೆ.

ಹಿನ್ನೆಲೆ:

ಕೈರ್ನ್ ಎನರ್ಜಿ ಭಾರತದ ವಿರುದ್ಧ ತನ್ನ $ 1.4 ಬಿಲಿಯನ್ ಮಧ್ಯಸ್ಥಿಕೆ ನಿರ್ಧಾರವನ್ನು ಜಾರಿಗೆ ತರಲು ಒಂಬತ್ತು ದೇಶಗಳಲ್ಲಿ ನ್ಯಾಯಾಲಯಗಳನ್ನು ಸಂಪರ್ಕಿಸಿತು. ಕೈರ್ನ್ ಎನರ್ಜಿಗೆ ಸಂಬಂಧಿಸಿದಂತೆ, ದೇಶದ ಆದಾಯ ಪ್ರಾಧಿಕಾರದ ವಿರುದ್ಧದ ಹಿಂದಿನ ಆದಾಯದ ಬಂಡವಾಳ ಲಾಭದ ಮೇಲೆ ತೆರಿಗೆ ಕಾನೂನಿನ ಪ್ರಕರಣದಲ್ಲಿ ಕಂಪನಿಯು ಗೆದ್ದಿದೆ.

ಪರಿಣಾಮಗಳು:

ಸರ್ಕಾರವು ಸಂಸ್ಥೆಗೆ ಪಾವತಿಸದಿದ್ದಲ್ಲಿ, ನಿರ್ಧಾರವನ್ನು ಅಥವಾ ಪ್ರಶಸ್ತಿಯನ್ನು ನೋಂದಾಯಿಸುವುದು ಅದರ  ಮೊದಲ ಹೆಜ್ಜೆಯಾಗಿದೆ.

 • ಒಂದು ವೇಳೆ, ನವದೆಹಲಿಯು ಮಧ್ಯಸ್ಥಿಕೆ ನ್ಯಾಯಾಲಯದ ಆದೇಶವನ್ನು ಪಾಲಿಸುವಲ್ಲಿ ವಿಫಲವಾದರೆ ಮತ್ತು ಹಿಂದಿನ ಅವಧಿಯ ತೆರಿಗೆ ಕಾನೂನನ್ನು ಬಳಸಿಕೊಂಡು ತೆರಿಗೆ ಬೇಡಿಕೆಯನ್ನು ಮರುಪಡೆಯುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯಿಂದ ತಡೆಹಿಡಿಯಲ್ಪಟ್ಟರೆ ವಿಮಾನ ಮತ್ತು ಹಡಗುಗಳಂತಹ ಸಾಗರೋತ್ತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಮಾರಾಟವಾದ ಷೇರುಗಳ ಮೌಲ್ಯವನ್ನು ಹಿಂತಿರುಗಿಸಬೇಕಾಗುತ್ತದೆ ಎಂದು ಕೈರ್ನ್ ಸೂಚಿಸಿದೆ.

ಏನಿದು ಪ್ರಕರಣ?

 • ಭಾರತ ಸರ್ಕಾರವು ಯುಕೆ-ಇಂಡಿಯಾ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಉಲ್ಲೇಖಿಸಿ, 2012 ರಲ್ಲಿ ಜಾರಿಗೆ ತರಲಾದ ಹಿಂದಿನ ತೆರಿಗೆ ಕಾನೂನು (retrospective tax law) ಬಳಸಿಕೊಂಡು ಆಂತರಿಕ ವ್ಯವಹಾರ ಪುನರ್ರಚನೆಯ ಮೇಲೆ ತೆರಿಗೆಯನ್ನು ಕೋರಿತು, ಇದನ್ನು ಕೈರ್ನ್ ಎನರ್ಜಿ ಪ್ರಶ್ನಿಸಿತು.
 • 2011 ರಲ್ಲಿ, ಕೈರ್ನ್ ಎನರ್ಜಿ, ಕೈರ್ನ್ ಇಂಡಿಯಾದಲ್ಲಿನ ತನ್ನ ಹೆಚ್ಚಿನ ಪಾಲನ್ನು ವೇದಾಂತ ಲಿಮಿಟೆಡ್‌ಗೆ ಮಾರಾಟ ಮಾಡಿತು, ಇದು ಭಾರತೀಯ ಕಂಪನಿಯಲ್ಲಿ ತನ್ನ ಪಾಲನ್ನು ಶೇಕಡಾ 10 ರಷ್ಟಕ್ಕೆ ಇಳಿಸಿತು.
 • 2014 ರಲ್ಲಿ 10,247 ಕೋಟಿ ರೂಪಾಯಿಗಳನ್ನು ($4 ಬಿಲಿಯನ್) ಭಾರತೀಯ ತೆರಿಗೆ ಇಲಾಖೆಯು ತೆರಿಗೆಯಾಗಿ ಬೇಡಿಕೆ ಇಟ್ಟಿತ್ತು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ವನ್ ಧನ್ ವಿಕಾಸ ಕೇಂದ್ರ ಉಪಕ್ರಮ:


(Van Dhan Vikas Kendras initiative)

ಸಂದರ್ಭ:

ಇಲ್ಲಿಯವರೆಗೆ,ದೇಶದ 22 ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರ ಪ್ರದೇಶಕ್ಕೆ 1770 ವನ್ ಧನ್ ಕೇಂದ್ರಗಳಿಗೆ ಮಂಜೂರಾತಿ ನೀಡಲಾಗಿದೆ.

ವನ್ ಧನ್ ವಿಕಾಸ್ ಕೇಂದ್ರ’ ಉಪಕ್ರಮದ ಬಗ್ಗೆ:

 • ಬುಡಕಟ್ಟು ಸಂಗ್ರಾಹಕರು ಮತ್ತು ಕುಶಲಕರ್ಮಿಗಳ ಕಿರು ಅರಣ್ಯ ಉತ್ಪನ್ನಗಳ (MFPs) ಆಧಾರದ ಮೇಲೆ ಜೀವನೋಪಾಯದ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
 • ಈ ಉಪಕ್ರಮದ ಅಡಿಯಲ್ಲಿ, ತಳಮಟ್ಟದಲ್ಲಿ ಪ್ರಾಥಮಿಕ ಹಂತದ ಮೌಲ್ಯವರ್ಧನೆಯನ್ನು ಉತ್ತೇಜಿಸುವ ಮೂಲಕ ಬುಡಕಟ್ಟು ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತದೆ.

ಮಹತ್ವ: ಈ ಉಪಕ್ರಮದ ಮೂಲಕ, ಮರದೇತರ ಉತ್ಪಾದನೆಯ ಮೌಲ್ಯ ಸರಪಳಿಯಲ್ಲಿ ಬುಡಕಟ್ಟು ಜನಾಂಗದವರ ಪಾಲು ಪ್ರಸ್ತುತ ಸುಮಾರು 20% ರಿಂದ 60% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಅನುಷ್ಠಾನ:

 • ಈ ಯೋಜನೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಮೂಲಕ ಕೇಂದ್ರ ಮಟ್ಟದಲ್ಲಿ ಪ್ರಮುಖ ನೋಡಲ್ ಇಲಾಖೆಯಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಮುಖ ಸಂಸ್ಥೆಯಾಗಿ TRIFED ಮೂಲಕ ಜಾರಿಗೆ ತರಲಾಗುವುದು.
 • ರಾಜ್ಯ ಮಟ್ಟದಲ್ಲಿ ಕಿರು ಅರಣ್ಯ ಉತ್ಪಾದನೆಗಾಗಿ ರಾಜ್ಯ ನೋಡಲ್ ಏಜೆನ್ಸಿ ಮತ್ತು ತಳಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
 • ಸ್ಥಳೀಯ ಮಟ್ಟದಲ್ಲಿ, ಈ ಕೇಂದ್ರಗಳನ್ನು ವ್ಯವಸ್ಥಾಪನಾ ಸಮಿತಿ (an SHG) ನಿರ್ವಹಿಸುತ್ತದೆ, ಇದರಲ್ಲಿ ವ್ಯಾನ್ ಧನ್ ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಸೇರಿದ್ದಾರೆ.

ಸಂರಚನೆ: ಯೋಜನೆಯ ಪ್ರಕಾರ, ಕಿರು ಅರಣ್ಯ ಉತ್ಪಾದನೆ ಆಧಾರಿತ ಬಹುಪಯೋಗಿ ಅರಣ್ಯ ಸಂಪತ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು TRIFED ಅನುಕೂಲ ಕಲ್ಪಿಸುತ್ತದೆ. ಬುಡಕಟ್ಟು ಪ್ರದೇಶಗಳಲ್ಲಿ, ಹತ್ತು ಸ್ವ-ಸಹಾಯ ಗುಂಪುಗಳ ಪ್ರತಿ ಕ್ಲಸ್ಟರ್‌ನಲ್ಲಿ 30 ಕಿರು ಅರಣ್ಯ ಉತ್ಪನ್ನ ಸಂಗ್ರಹಕಾರರನ್ನು ಸೇರಿಸಲಾಗುವುದು.

 

ವಿಷಯಗಳು: ಗಡಿ ಪ್ರದೇಶಗಳಲ್ಲಿ ಭದ್ರತಾ ಸವಾಲುಗಳು ಮತ್ತು ಅವುಗಳ ನಿರ್ವಹಣೆ – ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯ ನಡುವಿನ ಸಂಬಂಧ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ:  (UAPA)


(Unlawful Activities (Prevention) Act)

ಸಂದರ್ಭ:

2001 ರ ಡಿಸೆಂಬರ್‌ನಲ್ಲಿ ನಡೆದ ಒಂದು ಸಭೆಯಲ್ಲಿ ನಿಷೇಧಿತ ಸಂಘಟನೆಯಾದ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ’ (SIMI) ಯ ಸದಸ್ಯರಾಗಿ ಭಾಗವಹಿಸಿದ್ದಕ್ಕಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಬಂಧಿಸಲ್ಪಟ್ಟ 122 ಜನರನ್ನು ಸೂರತ್ ನ ನ್ಯಾಯಾಲಯವು ಖುಲಾಸೆಗೊಳಿಸಿದೆ.

 • ಅವರನ್ನು ಖುಲಾಸೆಗೊಳಿಸಿದ ನಂತರ, ಕೆಲವು ಆರೋಪಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು ತಮ್ಮ ವಿರುದ್ಧ ಯಾವುದೇ ಪುರಾವೆ, ಸಾಕ್ಷ್ಯಾಧಾರಗಳಿಲ್ಲದೆ “ಅಕ್ರಮವಾಗಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಕ್ಕಾಗಿ” ಪರಿಹಾರವನ್ನು ಕೋರಿದ್ದಾರೆ.

 ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಕುರಿತು:

 • 1967 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನು (the Unlawful Activities (Prevention) Act) ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಗುಂಪುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಹೊಂದಿದೆ.
 • ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದು ಅದರ ಮೂಲಕ ಕೇಂದ್ರವು ಒಂದು ಚಟುವಟಿಕೆಯನ್ನು ಕಾನೂನುಬಾಹಿರವೆಂದು ಭಾವಿಸಿದರೆ ಸರ್ಕಾರವು ಅಧಿಕೃತ ಗೆಜೆಟ್ ಮೂಲಕ ಅದನ್ನು ಘೋಷಿಸಬಹುದು.
 • ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದಾಗಿದೆ.

ಮುಖ್ಯ ಅಂಶಗಳು:

 • UAPA ಅಡಿಯಲ್ಲಿ, ಭಾರತೀಯ ಮತ್ತು ವಿದೇಶಿ ಪ್ರಜೆಗಳು, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬಹುದು.
 • ಭಾರತದ ಹೊರಗಿನ ವಿದೇಶಿ ನೆಲದಲ್ಲಿ ಅಪರಾಧ ನಡೆದರೂ ಅಪರಾಧಿಗಳಿಗೆ ಈ ಕಾಯ್ದೆಯು ಭಾರತೀಯ ಮತ್ತು ವಿದೇಶಿ ಅಪರಾಧಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ.
 •  ಯುಎಪಿಎ ಅಡಿಯಲ್ಲಿ, ತನಿಖಾ ಸಂಸ್ಥೆಯು ಬಂಧನದ ನಂತರ ಗರಿಷ್ಠ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬಹುದು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಅವಧಿಯನ್ನು ಇನ್ನಷ್ಟು ವಿಸ್ತರಿಸಬಹುದು.

 2019 ರ ತಿದ್ದುಪಡಿಗಳ ಪ್ರಕಾರ:

 • NIA ಯಿಂದ ಪ್ರಕರಣದ ತನಿಖೆ ನಡೆದಾಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಥವಾ ಲಗತ್ತಿಸಲು ಅನುಮತಿ ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮಹಾನಿರ್ದೇಶಕರಿಗೆ ಈ ಕಾಯಿದೆ ಅಧಿಕಾರ ನೀಡುತ್ತದೆ.
 • DSP ಅಥವಾ ACP ಅಥವಾ ರಾಜ್ಯದ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಿದ ಪ್ರಕರಣಗಳಿಗೆ ಹೆಚ್ಚುವರಿಯಾಗಿ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸಲು ಇನ್ಸ್‌ಪೆಕ್ಟರ್ ಅಥವಾ ಹೆಚ್ಚಿನ ಹುದ್ದೆಯ NIA ಅಧಿಕಾರಿಗಳಿಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.
 • ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸುವ ಅವಕಾಶವೂ ಇದರಲ್ಲಿ ಸೇರಿದೆ. ಈ ತಿದ್ದುಪಡಿಗೆ ಮುಂಚಿತವಾಗಿ ಕೇವಲ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸಬಹುದಾಗಿತ್ತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ದೆಹಲಿಯ ತಲಾ ಆದಾಯ:

(Delhi’s per capita income)

 •  ದೆಹಲಿಯ ಆರ್ಥಿಕ ಸಮೀಕ್ಷೆ 2020-21 ರ ಪ್ರಕಾರ, 2019-20ರಲ್ಲಿ ದೆಹಲಿಯ ಜನರ ತಲಾ ಆದಾಯವು 3,76,221 ರೂ. ಆಗಿದ್ದು, 2020-21 ರಲ್ಲಿ ಇದು 5.91% ರಷ್ಟು ಇಳಿಕೆ ಗೊಂಡು (ಪ್ರಸ್ತುತ ಬೆಲೆಯಲ್ಲಿ) 3,54,004 ರೂ. ಗಳಾಗಿದೆ.
 • ಇದಲ್ಲದೆ, ಒಟ್ಟು ರಾಜ್ಯ ದೇಶೀಯ ಉತ್ಪನ್ನ ಅಥವಾ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಪ್ರಸ್ತುತ ಬೆಲೆಯಲ್ಲಿ) 2020-21ನೇ ಸಾಲಿನಲ್ಲಿ ಶೇ 3.92 ರಷ್ಟು ಇಳಿಕೆ ಕಂಡು 7,98,310 ಕೋಟಿ ರೂ.ಗೆ ತಲುಪಿದೆ. 2019-20ನೇ ಸಾಲಿನಲ್ಲಿ ಇದು 8,30,872 ಕೋಟಿ ರೂ. ಗಳಾಗಿತ್ತು.

ಅಂತರರಾಷ್ಟ್ರೀಯ ಮಹಿಳಾ ದಿನ:

 • ಇದನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ.
 • ಮಾರ್ಚ್ 9, 1911 ರಂದು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು’ ಮೊದಲ ಬಾರಿಗೆ ಆಚರಿಸಲಾಯಿತು.
 • ಅಂತರರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವಸಂಸ್ಥೆಯು 1975 ರಲ್ಲಿ ಮೊದಲ ಬಾರಿಗೆ ಆಚರಿಸಿತು.
 • 1977 ರ ಡಿಸೆಂಬರ್‌ನಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವಸಂಸ್ಥೆಯ ಮಹಿಳಾ ಹಕ್ಕುಗಳ ದಿನ ಮತ್ತು ಅಂತರರಾಷ್ಟ್ರೀಯ ಶಾಂತಿಯನ್ನು ರಾಷ್ಟ್ರದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಗಳ ಪ್ರಕಾರ ಸದಸ್ಯ ರಾಷ್ಟ್ರಗಳಿಗೆ ವರ್ಷದ ಯಾವುದೇ ದಿನದಂದು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು.
 • ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ 2021 ರ ವಿಷಯ –: ‘ಸವಾಲು ಆಯ್ಕೆಮಾಡಿ’.

Theme: Choose To Challenge.  


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos