Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 6 ಮಾರ್ಚ್ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಎಲ್ ಸಾಲ್ವಡಾರ್ ಮಲೇರಿಯಾ ಮುಕ್ತ ಎಂದು ಘೋಷಿಸಲ್ಪಟ್ಟ ಮಧ್ಯ ಅಮೆರಿಕದ ಮೊದಲ ರಾಷ್ಟ್ರವಾಗಿದೆ.

2. ಭಾರತವು ಶ್ರೀಲಂಕಾ ದೊಂದಿಗಿನ ರಕ್ಷಣಾ ಸಂಬಂಧಗಳನ್ನು ಪುನರುಚ್ಚರಿಸುತ್ತದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಒಪೆಕ್ + ನ ನಿರ್ಧಾರ ಆರ್ಥಿಕ ಚೇತರಿಕೆ ಪ್ರಕ್ರಿಯೆಗೆ ಒಂದು ಹೊಡೆತ:

2. ಕುಲಾಂತರಿ (GMO) ಬೆಳೆಗಳ ಕುರಿತು FSSAI ಮಾರ್ಗಸೂಚಿಗಳು.

3. ಕಾಡ್ಗಿಚ್ಚಿನ ಕುರಿತು ಭಾರತೀಯ ಅರಣ್ಯ ಸಮೀಕ್ಷೆಯ ವರದಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಘನ ಇಂಧನ ನಾಳದ ರಾಮ್‌ಜೆಟ್ (SFDR) ತಂತ್ರಜ್ಞಾನ.

2. ರಕ್ತ ಚಂದನ.

3. ತಿಮಿಂಗಿಲ ಶಾರ್ಕ್.

4. ಪೋಚಂಪಲ್ಲಿ ಇಕತ್ .

5. ಮೀನುಗಾರ ಬೆಕ್ಕುಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ಸಮಸ್ಯೆಗಳು.

 ಎಲ್ ಸಾಲ್ವಡಾರ್ ಮಲೇರಿಯಾ ಮುಕ್ತ ಎಂದು ಘೋಷಿಸಲ್ಪಟ್ಟ ಮಧ್ಯ ಅಮೆರಿಕದ ಮೊದಲ ರಾಷ್ಟ್ರವಾಗಿದೆ.


(El Salvador becomes first central American country to be declared malaria-free)

ಸಂದರ್ಭ:

ಎಲ್ ಸಾಲ್ವಡಾರ್ ಇತ್ತೀಚಿನ ವರ್ಷಗಳಲ್ಲಿ, ಮಧ್ಯ ಅಮೆರಿಕದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಯಿಂದ ಮಲೇರಿಯಾ ಮುಕ್ತ ಪ್ರಮಾಣಪತ್ರವನ್ನು ಪಡೆದ ಮೊದಲ ಮತ್ತು ಇಡೀ ಅಮೇರಿಕಾ ವಲಯದಲ್ಲಿ ಮೂರನೆಯ ರಾಷ್ಟ್ರವಾಗಿದೆ.

 • ಒಂದು ದೇಶವು ರಾಷ್ಟ್ರವ್ಯಾಪಿ ರೋಗದ ಸ್ಥಳೀಯ ಪ್ರಸರಣ / ಹರಡುವಿಕೆಯನ್ನು ಸತತವಾಗಿ ಕನಿಷ್ಠ ಮೂರು ವರ್ಷಗಳವರೆಗೆ ವಿಫಲಗೊಳಿಸಿದಾಗ, ಆ ದೇಶಕ್ಕೆ ಮಲೇರಿಯಾ ನಿರ್ಮೂಲನೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
 • ಇತ್ತೀಚಿನ ವರ್ಷಗಳಲ್ಲಿ, ಮಲೇರಿಯಾವನ್ನು ನಿರ್ಮೂಲನೆ ಮಾಡಿದ WHO ದ ಅಮೆರಿಕ ವಲಯದ ಇತರ ದೇಶಗಳು ಎಂದರೆ ಪರಾಗ್ವೆ (2018) ಮತ್ತು ಅರ್ಜೆಂಟೀನಾ (2019) ಗಳಾಗಿವೆ.

ಅಧಿಕ ಹೊರೆ ಅಧಿಕ ಪರಿಣಾಮ (HBHI) ಉಪಕ್ರಮ:

(High Burden to High Impact initiative)

 • ವಿಶ್ವ ಆರೋಗ್ಯ ಸಂಸ್ಥೆ ಮಲೇರಿಯಾ ಅಪಾಯವನ್ನು ಹೊಂದಿರುವ 11 ದೇಶಗಳಲ್ಲಿ ಹೈ ರಿಸ್ಕ್ ಅಂಡ್ ಹೈ ಇಂಪ್ಯಾಕ್ಟ್ (HBHI) ಉಪಕ್ರಮವನ್ನು ಪ್ರಾರಂಭಿಸಿದೆ.
 • ಭಾರತದಲ್ಲಿ, ಪಶ್ಚಿಮ ಬಂಗಾಳ, ಜಾರ್ಖಂಡ್,    ಛತ್ತೀಸ್ಗಢ, ಮಧ್ಯಪ್ರದೇಶ ಎಂಬ ನಾಲ್ಕು ರಾಜ್ಯಗಳಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದೆ.

 ಮಲೇರಿಯಾ ಕುರಿತು:

 • ಮಲೇರಿಯಾ ಒಂದು ಪರಾವಲಂಬಿ ರೋಗ. ಮಲೇರಿಯಾ ಪರಾವಲಂಬಿಗಳು ಸಾಮಾನ್ಯವಾಗಿ ಮನುಷ್ಯರ ಮೇಲೆ ಅವಲಂಬಿತವಾಗಿರುವ ಒಂದು ನಿರ್ದಿಷ್ಟ ರೀತಿಯ ಸೊಳ್ಳೆಗೆ ಸೋಂಕು ತರುತ್ತವೆ.
 • ಸೋಂಕುಗಳು: ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ. ಹೆಣ್ಣು ಅನಾಫಿಲಿಸ್ ಸೊಳ್ಳೆ ಸ್ಪೊರೊಜೊಯಿಟ್‌ಗಳನ್ನು (sporozoites) ಮಾನವನ ಚರ್ಮದಲ್ಲಿ ಸೇರಿಸುತ್ತವೆ.

ನಾಲ್ಕು ವಿಧದ ಮಲೇರಿಯಾ ಪರಾವಲಂಬಿಗಳು ಮನುಷ್ಯರಿಗೆ ಸೋಂಕು ತಗುಲಿಸುತ್ತವೆ:

 • ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ (Plasmodium falciparum), ಪ್ಲಾಸ್ಮೋಡಿಯಮ್ ವೈವಾಕ್ಸ್ (P.vivax) , ಪಿ. ಓವಲೆ (P. ovale), ಮತ್ತು ಪಿ. ಮಲೇರಿಯಾ (P. malariae), ಅದು ಆಗ್ನೇಯ ಏಷ್ಯಾದಲ್ಲಿನ ಮಕಾಕ್ ಗಳಿಗೆ ಸ್ವಾಭಾವಿಕವಾಗಿ ಸೋಂಕನ್ನು ಉಂಟುಮಾಡುತ್ತದೆ ಹಾಗೂ ಮನುಷ್ಯರಿಗೂ ಸೋಂಕು ತರುತ್ತದೆ. ಇದರಿಂದಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಮಲೇರಿಯಾ ಹರಡುತ್ತದೆ. (“zoonotic” malaria).

ದುರ್ಗಾಮಾ ಅಂಚಲೇರ್ ಮಲೇರಿಯಾ ನಿರಕರನ್ (DAMaN) ಉಪಕ್ರಮ:

ಭಾರತದ ರಾಜ್ಯಗಳಲ್ಲಿ, ಒಡಿಶಾದ ದುರ್ಗಾಮಾ ಆಂಚಲೇರ್ ಮಲೇರಿಯಾ ನಿರಕರನ್ (DAMaN) ಉಪಕ್ರಮವು ಗಮನಾರ್ಹವಾಗಿದೆ.

 • ಈ ಉಪಕ್ರಮದ ಉದ್ದೇಶವು ತನ್ನ ಸೇವೆಗಳನ್ನು ‘ತಲುಪಿಸಲು ಸಾಧ್ಯವಿಲ್ಲದ’ ಮತ್ತು ರಾಜ್ಯದ ಹೆಚ್ಚು ರೋಗ ಪೀಡಿತ ಜನರಿಗೆ ಆರೋಗ್ಯಸೇವೆಯನ್ನು ವಿಸ್ತರಿಸುವುದಾಗಿದೆ. ಈ ಉಪಕ್ರಮವು ಲಕ್ಷಣರಹಿತ ಮಲೇರಿಯಾವನ್ನು ಎದುರಿಸಲು ಅಂತರ್ನಿರ್ಮಿತ ನವೀನ ತಂತ್ರಗಳನ್ನು ಒಳಗೊಂಡಿದೆ.
 • ಈ ಕಾರ್ಯಕ್ರಮವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ರಾಷ್ಟ್ರೀಯ ಮಲೇರಿಯಾ ಸಂಶೋಧನ ಸಂಸ್ಥೆ (ICMR-NIMR), ರಾಷ್ಟ್ರೀಯ ಮಾಧ್ಯಮದ (ವೆಕ್ಟರ್) ಮೂಲಕ ಹರಡುವ ರೋಗ ನಿಯಂತ್ರಣ ಕಾರ್ಯಕ್ರಮ (NVBDCP), ಒಡಿಶಾ ಮತ್ತು ಮೆಡಿಸಿನ್ ಫಾರ್ ಮಲೇರಿಯಾ ವೆಂಚರ್ (MMV) ಜಂಟಿಯಾಗಿ ಪ್ರಾರಂಭಿಸಿವೆ.

 

ವಿಷಯಗಳು: ಭಾರತ ಮತ್ತು ಅದರ ನೆರೆ ಹೊರೆಯ ದೇಶಗಳೊಂದಿಗಿನ ಅದರ ಸಂಬಂಧಗಳು.

ಭಾರತವು ಶ್ರೀಲಂಕಾ ದೊಂದಿಗಿನ ರಕ್ಷಣಾ ಸಂಬಂಧಗಳನ್ನು ಗಟ್ಟಿಗೊಳಿಸಲು ಪುನರುಚ್ಚರಿಸುತ್ತದೆ:


(India reaffirms Lanka defence ties)

ಸಂದರ್ಭ:

ಇತ್ತೀಚೆಗೆ, ಕೊಲಂಬೊದಲ್ಲಿ ಶ್ರೀಲಂಕಾ ವಾಯುಪಡೆಯ (SLAF) 70 ನೇ ವರ್ಷಾಚರಣೆಯ ನೆನಪಿಗಾಗಿ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥ ಮತ್ತು 23 ಭಾರತೀಯ ವಿಮಾನಗಳು ಭಾಗವಹಿಸಿದ್ದವು, ಆಮೂಲಕ ಶ್ರೀಲಂಕಾದೊಂದಿಗೆ ಭಾರತವು ತನ್ನ ಬಲವಾದ ರಕ್ಷಣಾ-ಸಹಕಾರ ಸಂಬಂಧವನ್ನು ಸಾಬೀತುಪಡಿಸಲು ಪ್ರಯತ್ನಿಸಿತು.

ಭಾರತೀಯ ವಾಯುಪಡೆಯು ಇಂತಹ ಕಾರ್ಯಕ್ರಮದಲ್ಲಿ ಕೊನೆಯದಾಗಿ 2001 ರಲ್ಲಿ, ಶ್ರೀಲಂಕಾ ವಾಯುಪಡೆಯ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭಾಗವಹಿಸಿತ್ತು.

ಭಾರತ-ಶ್ರೀಲಂಕಾ ರಕ್ಷಣಾ ಸಂಬಂಧಗಳು:

ಐತಿಹಾಸಿಕ ಹಿನ್ನೆಲೆ:

 • ಶ್ರೀಲಂಕಾದಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ನಡೆದ ಅಂತರ್ಯುದ್ಧದ ಸಮಯದಲ್ಲಿ, ಭಾರತವು ರಾಜಕೀಯವಾಗಿ ಮತ್ತು ಕೆಲವೊಮ್ಮೆ ತನ್ನ ಮಿಲಿಟರಿಯನ್ನು ಬಳಸಿಕೊಳ್ಳುವ ಮೂಲಕ ಮಹತ್ವದ ಪಾತ್ರವನ್ನು ವಹಿಸಿದೆ.
 • ಆ ಸಮಯದಲ್ಲಿ, ವಿವಾದಾತ್ಮಕ ಭಾರತೀಯ ಶಾಂತಿ ಪಾಲನಾ ಪಡೆಯು (Indian Peace Keeping Force –IPKF) ಶ್ರೀಲಂಕಾದಲ್ಲಿ ಇತ್ತು.
 • ಭಾರತವು 1987 ರಲ್ಲಿ,ಆಪರೇಷನ್ ಪೂಮಲೈ’ ಯನ್ನು ಪ್ರಾರಂಭಿಸಿತು, ಜಾಫ್ನಾದಲ್ಲಿ ಆಹಾರ ಪದಾರ್ಥಗಳ ಬಿಕ್ಕಟ್ಟು ಉಂಟಾದಾಗ ಭಾರತೀಯ ವಾಯುಪಡೆಯು ಆಹಾರ ಪದಾರ್ಥಗಳ ಸರಬರಾಜನ್ನು ಮಾಡಿತು.
 • ಶ್ರೀಲಂಕಾದಲ್ಲಿ ಯುದ್ಧ ಮುಗಿದಾಗಿನಿಂದ, ಭಾರತ-ಶ್ರೀಲಂಕಾ ಮಿಲಿಟರಿ ಸಹಭಾಗಿತ್ವದ ಹೆಚ್ಚಿನ ಗಮನವು ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಕೇಂದ್ರೀಕರಿಸಿದೆ. ಪ್ರತಿ ವರ್ಷ ಸುಮಾರು 1,200 ಶ್ರೀಲಂಕಾದ ಮಿಲಿಟರಿ ಸಿಬ್ಬಂದಿಗೆ ಭಾರತ ತರಬೇತಿ ನೀಡುತ್ತಿದೆ.
 • 2020 ರಲ್ಲಿ, ದ್ವೀಪ ರಾಷ್ಟ್ರದ ಪೂರ್ವ ಕರಾವಳಿಯಲ್ಲಿ ತೈಲ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಶ್ರೀಲಂಕಾ ನೌಕಾಪಡೆಗೆ ಮಹತ್ವದ ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು.

ಶ್ರೀಲಂಕಾದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆ:

ಹಿಂದೂ ಮಹಾಸಾಗರ ಪ್ರದೇಶದಲ್ಲಿ ದ್ವೀಪ ರಾಷ್ಟ್ರವಾಗಿ ಶ್ರೀಲಂಕಾದ ಆಯಕಟ್ಟಿನ ಸ್ಥಳವು ಹಲವಾರು ಪ್ರಮುಖ ಶಕ್ತಿಗಳಿಗೆ ಕಾರ್ಯತಂತ್ರದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆಯನ್ನು ಹೊಂದಿದೆ.

 • 1948 ರ ಬ್ರಿಟಿಷ್ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಒಪ್ಪಂದ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ದೊಂದಿಗೆ 1962 ರಲ್ಲಿ ಸಹಿ ಮಾಡಿದ ಕಡಲ ಒಪ್ಪಂದವು ಶ್ರೀಲಂಕಾದ ಕಾರ್ಯತಂತ್ರದ ಸ್ಥಳದಲ್ಲಿ ಪಾಶ್ಚಿಮಾತ್ಯ ಆಸಕ್ತಿಯ ಕೆಲವು ಉದಾಹರಣೆಗಳಾಗಿವೆ.
 • 2015 ರ ನಂತರ, ಶ್ರೀಲಂಕಾವು ಪೋರ್ಟ್ ಸಿಟಿ ಯೋಜನೆಗಾಗಿ ಮತ್ತು ಚೀನಾದ ಅನುದಾನಿತ ಮೂಲಸೌಕರ್ಯ ಯೋಜನೆಗಳನ್ನು ಮುಂದುವರೆಸಲು ಚೀನಾವನ್ನು ಹೆಚ್ಚು ಅವಲಂಬಿಸಿದೆ.
 • ಚೀನಾದ ಸ್ಟ್ರಿಂಗ್ ಆಫ್ ಪರ್ಲ್’ ತಂತ್ರವು ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಭಾರತವನ್ನು ಸುತ್ತುವರಿಯುವ ಗುರಿಯನ್ನು ಹೊಂದಿದೆ.
 • ಶ್ರೀಲಂಕಾದ ಭೌಗೋಳಿಕ ಸ್ಥಳವು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳನ್ನು ಪೂರೈಸಬಲ್ಲದು ಮತ್ತು ಮಿಲಿಟರಿ ನೆಲೆಯಾಗಿಯೂ ಬಳಸಬಹುದು.
 • ಶ್ರೀಲಂಕಾದ ಕೊಲಂಬೊ ಬಂದರು ವಿಶ್ವದ 25 ನೇ ಅತ್ಯಂತ ಜನನಿಬಿಡ ಕಂಟೇನರ್ ಬಂದರು, ಮತ್ತು ಟ್ರಿಂಕೊಮಾಲೈ ಆಳವಾದ ನೀರಿನ ನೈಸರ್ಗಿಕ ಬಂದರು ವಿಶ್ವದ ಅತಿದೊಡ್ಡ ನೈಸರ್ಗಿಕ ಬಂದರು ಆಗಿದೆ.
 • ಎರಡನೆಯ ಮಹಾಯುದ್ಧದ ಸಮಯದಲ್ಲಿ, ಟ್ರಿಂಕೊಮಾಲೈ ಪೋರ್ಟ್ ಸಿಟಿಯು, (ಟ್ರಿಂಕೊಮಾಲೈ ಬಂದರು ನಗರವು) ಅಮೆರಿಕದ ಈಸ್ಟರ್ನ್ ಫ್ಲೀಟ್ ಮತ್ತು ಬ್ರಿಟಿಷ್ ರಾಯಲ್ ನೇವಿಯ ಪ್ರಮುಖ ಮಿಲಿಟರಿ ನೆಲೆಯಾಗಿತ್ತು.

china's_string_pearls

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಒಪೆಕ್ + ನಿರ್ಧಾರವು  ಆರ್ಥಿಕ ಚೇತರಿಕೆ ಪ್ರಕ್ರಿಯೆಗೆ ಒಂದು ಹೊಡೆತ:


(OPEC+ move to hit recovery)

ಸಂದರ್ಭ:

COVID-19 ಸಾಂಕ್ರಾಮಿಕದ ಮಧ್ಯೆ ತೈಲೋತ್ಪನ್ನಗಳ ಬೇಡಿಕೆಯಲ್ಲಿ ಇನ್ನಷ್ಟು ಗಟ್ಟಿಯಾದ ಸುಧಾರಣೆ ಕಂಡುಬರುವವರೆಗೂ ಉತ್ಪಾದನೆಯನ್ನು ಹೆಚ್ಚಿಸುವುದು ಬೇಡ ಎಂದು ಒಪೆಕ್‌+ ನಿರ್ಧರಿಸಿದೆ.

ಈ ಪ್ರಕಟಣೆಯ ನಂತರ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆಯಾಗಿದ್ದು, ಅದು ಈ ವರ್ಷ 33% ರಷ್ಟು ಆದ ಹೆಚ್ಚಳವಾಗಿದೆ.

ಭಾರತದ ಕಳವಳ:

ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ದಾರ  ದೇಶವಾಗಿದೆ. ಭಾರತವು ತನ್ನ ತೈಲ ಬೇಡಿಕೆಯ ಸುಮಾರು 84% ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ತನ್ನ ಬೇಡಿಕೆಯ ಮೂರನೇ ಐದು ಭಾಗವನ್ನು ಪೂರೈಸಿಕೊಳ್ಳಲು ಪಶ್ಚಿಮ ಏಷ್ಯಾ ದೇಶಗಳ ಸರಬರಾಜುಗಳನ್ನು ಅವಲಂಬಿಸಿದೆ.

 • ತೈಲ ಉತ್ಪಾದಿಸುವ ದೇಶಗಳ ಇಂತಹ ಕ್ರಮಗಳು ಅತಿದೊಡ್ಡ ಕಚ್ಚಾತೈಲ ಗ್ರಾಹಕ ದೇಶಗಳಲ್ಲಿ ಒಂದಾಗಿರುವ ಭಾರತದ ಬಳಕೆ-ಆಧಾರಿತ ಆರ್ಥಿಕ ಚೇತರಿಕೆಗೆ ಧಕ್ಕೆ ತರುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ವಿಶೇಷವಾಗಿ ನಮ್ಮ ಬೆಲೆ-ಸೂಕ್ಷ್ಮ ಮಾರುಕಟ್ಟೆಯಲ್ಲಿ ಗ್ರಾಹಕರ ಮೇಲೆ ದೂರಗಾಮಿ ಪರಿಣಾಮಕ್ಕೆ ಕಾರಣವಾಗುತ್ತದೆ.

ಒಪೆಕ್ + ಎಂದರೇನು?

(ಒಪೆಕ್‌ ರಾಷ್ಟ್ರಗಳು ಹಾಗೂ ಆ ರಾಷ್ಟ್ರಗಳ ಮಿತ್ರ ರಾಷ್ಟ್ರಗಳ ಒಕ್ಕೂಟ)

 • ಒಪೆಕ್ + ಕಚ್ಚಾತೈಲ ಉತ್ಪಾದಕರ ಮೈತ್ರಿಕೂಟ ವನ್ನು ಅಥವಾ ಒಕ್ಕೂಟವನ್ನು ಸೂಚಿಸುತ್ತದೆ, ಅವರು 2017 ರಿಂದ ತೈಲ ಮಾರುಕಟ್ಟೆಗಳಲ್ಲಿ ಪೂರೈಕೆಯಲ್ಲಿ ನಿಯಂತ್ರಣಗಳನ್ನು ಮಾಡುತ್ತಿದ್ದಾರೆ.
 • ಒಪೆಕ್ ಪ್ಲಸ್ ದೇಶಗಳಲ್ಲಿ ಅಜೆರ್ಬೈಜಾನ್, ಬಹ್ರೇನ್, ಬ್ರೂನಿ, ಕಝಾಕಿಸ್ತಾನ್, ಮಲೇಷ್ಯಾ, ಮೆಕ್ಸಿಕೊ, ಓಮನ್, ರಷ್ಯಾ, ದಕ್ಷಿಣ ಸುಡಾನ್ ಮತ್ತು ಸುಡಾನ್ ದೇಶಗಳು ಸೇರಿವೆ.

OPEC_1

ಒಪೆಕ್ ಎಂದರೇನು?

 • ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ವೇನಿಜುವೆಲಾ ಎಂಬ ಈ ಐದು ದೇಶಗಳು 1960 ಸೆಪ್ಟೆಂಬರ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ದೇಶಗಳ ಸಂಘಟನೆಯನ್ನು (Organization of the Petroleum Exporting Countries -OPEC) ಇರಾಕ್ ನ ಬಾಗ್ದಾದ್ ನಲ್ಲಿ ಸ್ಥಾಪಿಸಿದವು. ಇವು ಈ ಸಂಘಟನೆಯ ಸ್ಥಾಪಕ ಸದಸ್ಯ ದೇಶಗಳಾಗಿವೆ.
 • ಪೆಟ್ರೋಲಿಯಂ ಉತ್ಪಾದಕ ದೇಶಗಳು ನ್ಯಾಯಯುತ ಮತ್ತು ಸ್ಥಿರವಾದ ಬೆಲೆಗಳನ್ನು ಪಡೆಯುವಂತಾಗಲು ಸದಸ್ಯ ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ನೀತಿಗಳನ್ನು ಸಮನ್ವಯಗೊಳಿಸುವುದು ಮತ್ತು ಏಕೀಕರಿಸುವುದು ಒಪೆಕ್‌ನ ಉದ್ದೇಶವಾಗಿದೆ; ಗ್ರಾಹಕ ರಾಷ್ಟ್ರಗಳಿಗೆ ಪೆಟ್ರೋಲಿಯಂನ ದಕ್ಷ, ಆರ್ಥಿಕ ಮಿತವ್ಯಯಕಾರಿ ಮತ್ತು ನಿಯಮಿತ ಪೂರೈಕೆ; ಮತ್ತು ಉದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಬಂಡವಾಳದ ಮೇಲೆ ನ್ಯಾಯಯುತ ಲಾಭ ದೊರೆಯುವಂತೆ ಮಾಡುವುದು ಸಹ ಇದರ ಉದ್ದೇಶ ಗಳಲ್ಲೊಂದಾಗಿದೆ.
 • ಒಪೆಕ್ ಒಂದು ಶಾಶ್ವತ, ಅಂತರ್ ಸರ್ಕಾರಿ ಸಂಘಟನೆಯಾಗಿದೆ.
 • ಇದರ ಪ್ರಧಾನ ಕಚೇರಿಯು ಆಸ್ಟ್ರಿಯಾದ ವಿಯೆನ್ನಾದಲ್ಲಿದೆ.
 • ಗಣನೀಯ ಪ್ರಮಾಣದಲ್ಲಿ ತೈಲ ರಫ್ತು ಮಾಡುವ ಮತ್ತು ಸಂಘಟನೆಯ ಆದರ್ಶಗಳನ್ನು ಹಂಚಿಕೊಳ್ಳುವ ಯಾವುದೇ ದೇಶಕ್ಕೆ ಒಪೆಕ್ ನ ಸದಸ್ಯತ್ವವು ಮುಕ್ತವಾಗಿದೆ.

  

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ಕುಲಾಂತರಿ (GMO) ಬೆಳೆಗಳ ಕುರಿತು FSSAI ಮಾರ್ಗಸೂಚಿಗಳು:


(FSSAI guidelines on GMO Crops)

ಸಂದರ್ಭ:

ಫೆಬ್ರವರಿ 8 ರಂದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಆದೇಶದ ಪ್ರಕಾರ,ಆಮದು ಮಾಡಿಕೊಂಡ ಆಹಾರ ಬೆಳೆಗಳಲ್ಲಿ ತಳೀಯವಾಗಿ ಮಾರ್ಪಡಿಸಿದ ಜೀವಿಗಳ’ (Genetically Modified Organisms- GMO) ಅನುಮತಿಸಬಹುದಾದ ‘ಮಿತಿಯನ್ನು 1% ಎಂದು ನಿಗದಿಪಡಿಸಲಾಗಿದೆ.

 • ಆದರೆ, ವ್ಯಾಪಾರ ಸಂಸ್ಥೆಗಳು ಈ ಮಿತಿಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿವೆ.
 • ಇದು ಆಹಾರ ಮತ್ತು ಇತರ ಕೆಲವು ಉಪಭೋಗದ ವಸ್ತುಗಳಲ್ಲಿ GMO ಗಳ ಶೂನ್ಯ ಪ್ರಮಾಣವನ್ನು ಪ್ರತಿಪಾದಿಸುವುದಕ್ಕೆ ಸಮಾನವಾಗಿರುತ್ತದೆ.

ಭಾರತದಲ್ಲಿ GMO ನಿಯಂತ್ರಣ:

 • ಆಮದು ಮಾಡಿದ ಸರಕುಗಳಲ್ಲಿ ಜಿಎಂಒ ಮಟ್ಟವನ್ನು ನಿಯಂತ್ರಿಸುವುದನ್ನು ಆರಂಭದಲ್ಲಿ ಕೇಂದ್ರ ಪರಿಸರ ಸಚಿವಾಲಯದ ಅಧೀನದಲ್ಲಿರುವ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (Genetic Engineering Appraisal Committee- GEAC) ಅಧೀನದಲ್ಲಿತ್ತು.
 • ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಜಾರಿಗೆ ಬಂದ ನಂತರ, ಅದರ ಪಾತ್ರವನ್ನು ಕಡಿಮೆಗೊಳಿಸಲಾಯಿತು ಮತ್ತು ಬದಲಾಗಿ ಆಮದು ಮಾಡಿದ ವಸ್ತುಗಳನ್ನು ಅನುಮೋದಿಸಲು FSSAI ಗೆ ಸೂಚಿಸಲಾಯಿತು.

 ತಳೀಯವಾಗಿ ಮಾರ್ಪಡಿಸಿದ ಜೀವಿಗಳು ( ಕುಲಾಂತರಿ ತಳಿಗಳು) ಯಾವುವು?

 • ತಳೀಯವಾಗಿ ಮಾರ್ಪಡಿಸಿದ ಜೀವಿಗಳಲ್ಲಿ (GMO ಗಳು), ಆನುವಂಶಿಕ ವಸ್ತುವನ್ನು (DNA) ಆನುವಂಶಿಕ ಎಂಜಿನಿಯರಿಂಗ್ ತಂತ್ರಗಳನ್ನು ಬಳಸಿ ಪರಿವರ್ತಿಸಲಾಗುತ್ತದೆ ಅಥವಾ ಕೃತಕವಾಗಿ ಮತ್ತೊಂದು ಬ್ಯಾಕ್ಟೀರಿಯಂಗೆ ಪರಿಚಯಿಸಲಾಗುತ್ತದೆ.
 • ಆನುವಂಶಿಕ ಮಾರ್ಪಾಡು ಪ್ರಕ್ರಿಯೆಯು ವಂಶವಾಹಿಗಳ ರೂಪಾಂತರ, ಅಳವಡಿಕೆ ಅಥವಾ ಅಳಿಸುವಿಕೆಯನ್ನು ಒಳಗೊಂಡಿರುತ್ತದೆ.
 •  ಚುಚ್ಚುಮದ್ದಿನ ಜೀನ್‌ಗಳನ್ನು ಸಾಮಾನ್ಯವಾಗಿ ಮತ್ತೊಂದು ಬ್ಯಾಕ್ಟೀರಿಯಂನಿಂದ ಪಡೆಯಲಾಗುತ್ತದೆ (ಬಿಟಿ ಹತ್ತಿಯಂತೆ, ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (Bacillus thuringiensis- Bt) ಬ್ಯಾಕ್ಟೀರಿಯಂನ ಜೀನ್‌ಗಳನ್ನು ಸೇವಿಸಲಾಗುತ್ತದೆ).
 •  ಪ್ರಭೇದಗಳಲ್ಲಿ ಆನುವಂಶಿಕ ಮಾರ್ಪಾಡನ್ನು, ಪ್ರಭೇದಗಳಲ್ಲಿ ಸ್ವಾಭಾವಿಕವಾಗಿ ಇಲ್ಲದಿರುವ ಅಪೇಕ್ಷಣೀಯ ಹೊಸ ವೈಶಿಷ್ಟ್ಯವನ್ನು ವೇಗವರ್ಧಿಸಲು ಮಾಡಲಾಗುತ್ತದೆ.

GM ತಂತ್ರಗಳ ಬಳಕೆ:

 • ಜೈವಿಕ ಮತ್ತು ವೈದ್ಯಕೀಯ ಸಂಶೋಧನೆ,
 • ಔಷಧಿಗಳ ಉತ್ಪಾದನೆಯಲ್ಲಿ,
 • ಪ್ರಾಯೋಗಿಕ ಚಿಕಿತ್ಸೆ (ಉದಾ. ಜೀನ್ ಚಿಕಿತ್ಸೆ),
 • ಕೃಷಿ (ಉದಾ. ಗೋಲ್ಡನ್ ರೈಸ್, ಬಿಟಿ ಹತ್ತಿ ಇತ್ಯಾದಿ),
 • ತಳೀಯವಾಗಿ ಮಾರ್ಪಡಿಸಿದ ಬ್ಯಾಕ್ಟೀರಿಯಾದಿಂದ ಪ್ರೋಟೀನ್ ಇನ್ಸುಲಿನ್ ಉತ್ಪಾದಿಸಲು,
 • ಜಿಎಂ ಬ್ಯಾಕ್ಟೀರಿಯಾ ಇತ್ಯಾದಿಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸಲು.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಸವೆತ, ಪರಿಸರ ಪ್ರಭಾವದ ಮೌಲ್ಯಮಾಪನ.

ಕಾಡ್ಗಿಚ್ಚಿನ ಕುರಿತು ಭಾರತೀಯ ಅರಣ್ಯ ಸಮೀಕ್ಷೆಯ ವರದಿ:


(FSI Report on forest fires)

ಸಂದರ್ಭ:

ದೇಶದಲ್ಲಿ ಕಾಡ್ಗಿಚ್ಚಿನ ಕುರಿತ ವರದಿಯನ್ನು ಭಾರತೀಯ ಅರಣ್ಯ ಸಮೀಕ್ಷೆಯು (FSI) ಬಿಡುಗಡೆ ಮಾಡಿದೆ.

ಪ್ರಮುಖ ಸಂಶೋಧನೆಗಳು:

 • ಅರಣ್ಯ ಸಮೀಕ್ಷೆಯ ವರದಿಯ ಪ್ರಕಾರ, 2021 ರ ಫೆಬ್ರವರಿ 22 ಮತ್ತು ಮಾರ್ಚ್ 1 ರ ನಡುವೆ ಒಡಿಶಾದಲ್ಲಿ ಕನಿಷ್ಠ 5,291 ವನಾಗ್ನಿ / ಕಾಡ್ಗಿಚ್ಚು ಘಟನೆಗಳು ವರದಿಯಾಗಿವೆ. ಇದು ಈ ಅವಧಿಯಲ್ಲಿ ಇಡೀ ದೇಶದಲ್ಲಿ ಸಂಭವಿಸಿದ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣವಾಗಿದೆ.
 • ಒಡಿಶಾದ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಕೆಲವು ಪ್ರಮುಖ ಕಾರಣಗಳಲ್ಲಿ ಮಾಹುವಾ ಹೂವುಗಳು ಮತ್ತು ಕೆಂಡು ಎಲೆಗಳ ಸಂಗ್ರಹ, ಅರಣ್ಯ ಪ್ರದೇಶಗಳಲ್ಲಿ ಕೃಷಿ ಸಾಗುವಳಿ (ಝೂಮ್ ಕೃಷಿ) ಗಳು ಪ್ರಮುಖ ಕಾರಣಗಳಾಗಿವೆ.
 • FSI ಅಂಕಿಅಂಶಗಳ ಪ್ರಕಾರ ತೆಲಂಗಾಣವು ದೇಶದಲ್ಲಿ ಎರಡನೇ ಅತಿ ಹೆಚ್ಚು ಕಾಡ್ಗಿಚ್ಚನ್ನು (1,527) ದಾಖಲಿಸಿದೆ, ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (1,507) ಮತ್ತು ಆಂಧ್ರಪ್ರದೇಶ (1,292) ಗಳಿವೆ.

ಕಳವಳಗಳು:

ಕಾಡಿನ ಬೆಂಕಿ ಜಾಗತಿಕ ಕಾಳಜಿಯ ವಿಷಯವಾಗಿದೆ. ಅನೇಕ ದೇಶಗಳಲ್ಲಿ, ಕಾಡಿನ ಬೆಂಕಿಯಿಂದಾಗಿ   ವಿಶಾಲವಾದ ಪ್ರದೇಶಗಳು ನಾಶವಾಗುತ್ತಿವೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಬೆಂಕಿಯ ಋತುಮಾನ’ ಹೆಚ್ಚುತ್ತಿದೆ.

ಜಾಗತಿಕವಾಗಿ, ಕಾಡ್ಗಿಚ್ಚಿನಿಂದಾಗಿ, ಶತಕೋಟಿ ಟನ್ CO2 ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಮತ್ತು ವನಾಗ್ನಿ ಮತ್ತು ಇತರೆಡೆಗಳಲ್ಲಿ ಬೆಂಕಿಯಿಂದ ಉಂಟಾಗುವ ಹೊಗೆಗೆ ಒಡ್ಡಿಕೊಳ್ಳುವುದರಿಂದ ಲಕ್ಷಾಂತರ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಸಾಯುತ್ತಾರೆ ಎಂದು ನಂಬಲಾಗಿದೆ.

ಕಾಡ್ಗಿಚ್ಚಿಗೆ ಕಾರಣಗಳು:

ಕಾಡ್ಗಿಚ್ಚು, ಹೆಚ್ಚಾಗಿ ನೈಸರ್ಗಿಕ ಕಾರಣಗಳಿಂದಾಗಿ ಮತ್ತು ಮಾನವ ನಿರ್ಮಿತ ಅಥವಾ ಮಾನವಜನ್ಯ ಕಾರಣಗಳಿಂದ ಉಂಟಾಗತ್ತದೆ.

 • ನೈಸರ್ಗಿಕ ಕಾರಣಗಳು: ಆಕಾಶದಲ್ಲಿನ ಮಿಂಚು ಅಥವಾ ಬಿದಿರಿನ ಮರಗಳು ಪರಸ್ಪರ ಉಜ್ಜುವುದು ಮುಂತಾದ ನೈಸರ್ಗಿಕ ಕಾರಣಗಳಿಂದಾಗಿ, ಕಾಡುಗಳಲ್ಲಿ ಸಾಂದರ್ಭಿಕವಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ವಾತಾವರಣದ ತಾಪಮಾನ ಮತ್ತು ಕಡಿಮೆ ಆರ್ದ್ರತೆಯು ಬೆಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ.
 • ಮಾನವ ನಿರ್ಮಿತ ಕಾರಣಗಳು: ದನಗಾಹಿ ಮತ್ತು ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವವರು ಆಹಾರವನ್ನು ಬೇಯಿಸಲು ತಾತ್ಕಾಲಿಕ ಒಲೆ ಹೊಂದಿಸಿ ಅಲ್ಲಿಂದ ಹೋಗುವ ಮುನ್ನ ಹೊಗೆಯಾಡುತ್ತಿರುವ ಬೆಂಕಿಯನ್ನು ನೀರಿನಿಂದ ನಂದಿಸದೆ ಹಾಗೆಯೇ ಬಿಟ್ಟು ಹೋಗುವುದರಿಂದ, ಅದು ಕಾಡಿನ ಬೆಂಕಿಯಾಗಿ ಬೆಳೆಯಬಲ್ಲದಾಗಿದೆ.
 • ಸಾಂಪ್ರದಾಯಿಕವಾಗಿ ಭಾರತೀಯ ಕಾಡುಗಳು ಬೆಂಕಿಯಿಂದ ಪ್ರಭಾವಿತವಾಗಿವೆ. ಹೆಚ್ಚುತ್ತಿರುವ ಮನುಷ್ಯ ಮತ್ತು ಜಾನುವಾರುಗಳ ಸಂಖ್ಯೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳಿಂದ ಮೇಯಿಸುವಿಕೆ, ಸಾಗುವಳಿ ಕೃಷಿ ಮತ್ತು ಅರಣ್ಯ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆಯಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
 • ಹೆಚ್ಚಿನ ತಾಪಮಾನ, ಗಾಳಿಯ ವೇಗ ಮತ್ತು ದಿಕ್ಕು, ಮಣ್ಣು ಮತ್ತು ವಾತಾವರಣದಲ್ಲಿನ ತೇವಾಂಶದ ಮಟ್ಟ ಮತ್ತು ಶುಷ್ಕ ತಿಂಗಳುಗಳಲ್ಲಿನ ಬೆಳವಣಿಗೆಯು ಅರಣ್ಯಬೆಂಕಿಯನ್ನು ಉಲ್ಬಣಗೊಳಿಸುತ್ತದೆ.

ಕಾಡ್ಗಿಚ್ಚನ್ನು ಕಡಿಮೆ ಮಾಡಲು ಭಾರತ ಕೈಗೊಂಡ ಉಪಕ್ರಮಗಳು:

ಕಾಡ್ಗಿಚ್ಚು ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆ:

(National Action Plan on Forest Fires– NAPFF)

ಕಾಡ್ಗಿಚ್ಚನ್ನು ಕಡಿಮೆ ಮಾಡಲು 2018 ರಲ್ಲಿ ಈ ಕ್ರಿಯಾ ಯೋಜನೆ ಯನ್ನು ಪ್ರಾರಂಭಿಸಲಾಯಿತು. ಅರಣ್ಯದ ಅಂಚಿನಲ್ಲಿ ವಾಸಿಸುವ ಸಮುದಾಯಗಳಿಗೆ ಮಾಹಿತಿ ನೀಡುವ ಮೂಲಕ ಶಕ್ತಗೊಳಿಸುವ ಮೂಲಕ ಮತ್ತು ಸಬಲೀಕರಣಗೊಳಿಸುವ ಮೂಲಕ ಹಾಗೂ ಅಗತ್ಯ ಪ್ರೋತ್ಸಾಹಧನ ನೀಡುವ ಮೂಲಕ ರಾಜ್ಯ ಅರಣ್ಯ  ಇಲಾಖೆಗಳೊಂದಿಗೆ ಅವರನ್ನು ಕೆಲಸ ಮಾಡಲು ಉತ್ತೇಜಿಸಲಾಯಿತು.

ಕಾಡ್ಗಿಚ್ಚು ತಡೆಗಟ್ಟುವಿಕೆ ಮತ್ತು ನಿರ್ವಹಣಾ ಯೋಜನೆ (Forest Fire Prevention and Management Scheme– FPM) ಯು, ನಿರ್ದಿಷ್ಟ ಅರಣ್ಯ ಬೆಂಕಿ ಅಥವಾ ವನಾಗ್ನಿ ಅಥವಾ ಕಾಡ್ಗಿಚ್ಚು ಘಟನೆಗಳನ್ನು ಎದುರಿಸಲು ರಾಜ್ಯಗಳಿಗೆ ಸಹಾಯ ಮಾಡಲು ಮೀಸಲಾಗಿರುವ ಏಕೈಕ ಕೇಂದ್ರೀಯ ಧನಸಹಾಯ ಕಾರ್ಯಕ್ರಮವಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಘನ ಇಂಧನ ನಾಳದ ರಾಮ್‌ಜೆಟ್ (SFDR)ತಂತ್ರಜ್ಞಾನ:

(Solid Fuel Ducted Ramjet)

 •  ಇತ್ತೀಚೆಗೆ ‘ಘನ ಇಂಧನ ನಾಳದ ರಾಮ್‌ಜೆಟ್ ತಂತ್ರಜ್ಞಾನ (Solid Fuel Ducted Ramjet– SFDR)  ವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ಪರೀಕ್ಷಿಸಿತು.
 • ಈ ತಂತ್ರಜ್ಞಾನದ ಯಶಸ್ವಿ ಪ್ರದರ್ಶನವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ತಾಂತ್ರಿಕ ಪ್ರಯೋಜನವನ್ನು ನೀಡಿದೆ, ಇದು ದೀರ್ಘ-ಶ್ರೇಣಿಯ ಗಾಳಿಯಿಂದ ಗಾಳಿಗೆ ನಿಖರ ಗುರಿ ಇಡಬಲ್ಲ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ.

ಪ್ರಯೋಜನಗಳು:

 • ರಾಮ್‌ಜೆಟ್-ಚಾಲಿತ ಕ್ಷಿಪಣಿಗಳು ಘನ ಪ್ರೊಪೆಲ್ಲಂಟ್-ಚಾಲಿತ ಕ್ಷಿಪಣಿಗಳಿಗಿಂತ ಹೆಚ್ಚಿನ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅಧಿಕ ಸರಾಸರಿ ವೇಗವನ್ನು ಕೂಡ ಒದಗಿಸುತ್ತವೆ.
 • ರಾಮ್‌ಜೆಟ್ ಕ್ಷಿಪಣಿಗಳಲ್ಲಿ, ಘನ ಪ್ರೊಪೆಲ್ಲಂಟ್‌ನ ಭಾಗವಾಗಿ ಆಕ್ಸಿಡೈಸರ್ ಅನ್ನು ಬಳಸುವ ಬದಲು ವಾತಾವರಣದ ಆಮ್ಲಜನಕವನ್ನು ಬಳಸಲಾಗುತ್ತದೆ.
 • ರಾಮ್‌ಜೆಟ್ ಕ್ಷಿಪಣಿಗಳಿಗೆ ಆಕ್ಸಿಡೈಜರ್ ಅನ್ನು ಸಾಗಿಸಬೇಕಾಗಿಲ್ಲವಾದ್ದರಿಂದ, ಅದು ದೊಡ್ಡ ಸಿಡಿತಲೆಗಳನ್ನು ಸಹ ಸಾಗಿಸಬಲ್ಲದಾಗಿದೆ.

ರಕ್ತ ಚಂದನ (Red sanders):

 • ರಕ್ತ ಚಂದನ / ರೆಡ್ ಸ್ಯಾಂಡರ್ಸ್ (Pterocarpus santalinus) ತನ್ನ  ಶ್ರೀಮಂತ ವರ್ಣಕ್ಕೆ ಮತ್ತು ಚಿಕಿತ್ಸಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
 • ಈ ಮರವು ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲಿ ಮತ್ತು ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಸ್ಥಳೀಯವಾಗಿ ಕಂಡುಬರುತ್ತದೆ.
 • ಈ ಸಸ್ಯ ಪ್ರಭೇದವನ್ನು 1995 ರಲ್ಲಿ CITES ನ ಅನುಬಂಧ II ರಲ್ಲಿ ಪಟ್ಟಿಮಾಡಲಾಯಿತು, ಮತ್ತು 2004 ರಲ್ಲಿ ರಕ್ತ ಚಂದನದ ರಫ್ತು ಮಾಡುವುದನ್ನು ನಿಷೇಧಿಸಲಾಯಿತು.
 • ಆದರೆ, 2019 ರಲ್ಲಿ ವಿದೇಶಿ ವ್ಯಾಪಾರ ನಿರ್ದೇಶನಾಲಯವು (DGFT) ತನ್ನ ರಫ್ತು ನೀತಿಯನ್ನು ಪರಿಷ್ಕರಿಸಿತು ಮತ್ತು ಕೃಷಿ ಭೂಮಿಯಲ್ಲಿ ಬೆಳೆದ ಕೆಂಪು ಶ್ರೀಗಂಧದ ಅಥವಾ ರಕ್ತ ಚಂದನದ ರಫ್ತಿಗೆ ಅವಕಾಶ ನೀಡಲಾಯಿತು.
 • ರಕ್ತ ಚಂದನವು ಸಾಮಾನ್ಯವಾಗಿ ಕಲ್ಲಿನಿಂದ ಆವೃತ ಪ್ರದೇಶ, ಬಂಜರು ಮತ್ತು ಪಾಳುಭೂಮಿ ಭೂಮಿಯಲ್ಲಿ ಕೆಂಪು ಮಣ್ಣು ಮತ್ತು ಬಿಸಿ ಮತ್ತು ಶುಷ್ಕ ವಾತಾವರಣದೊಂದಿಗೆ ಬೆಳೆಯುತ್ತದೆ.
 • ಇದನ್ನು ಈ ಹಿಂದೆ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನಿಂದ ಅಳಿವಿನಂಚಿನಲ್ಲಿರುವ ಪ್ರಭೇದಗಳ (EN) ಕೆಂಪು ಪಟ್ಟಿಯಲ್ಲಿ ಇರಿಸಲಾಗಿತ್ತು, ನಂತರ ಇದನ್ನು ಅಪಾಯಕ್ಕೆ ಹತ್ತಿರದ (NT) ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.

ಪೋಚಂಪಲ್ಲಿ ಇಕತ್:


(Pochampally Ikat)

 • ಪೋಚಂಪಲ್ಲಿ ಇಕತ್ (ಇಕಾಟ್) ಒಂದು ಸಾಂಪ್ರದಾಯಿಕ ನೇಯ್ಗೆ ತಂತ್ರವಾಗಿದೆ, ಇದರಲ್ಲಿ ನೇಯ್ಗೆ ಮಾಡುವ ಮೊದಲು ನೂಲಿನ ಕಟ್ಟುಗಳ ಭಾಗಗಳನ್ನು ಈ ಮೊದಲೇ ನಿರ್ಧರಿಸಿದ ಬಣ್ಣದ ಪ್ರಕಾರದಲ್ಲಿ ಅದ್ದಿಡಲಾಗುತ್ತದೆ.
 • ಪೋಚಂಪಲ್ಲಿ ಇಕತ್ ನಲ್ಲಿ ಡಬಲ್ ಇಕಾಟ್ ಶೈಲಿಯನ್ನು ಬಳಸುತ್ತಾರೆ. ಬಟ್ಟೆಗಳಿಗೆ ಬಣ್ಣಗಳನ್ನು ನೈಸರ್ಗಿಕ ಮೂಲಗಳಿಂದ ಪಡೆಯಲಾಗುತ್ತದೆ.
 • ನಿಜಾಮನ ಕಾಲದಲ್ಲಿ, ಪೋಚಂಪಲ್ಲಿ ಇಕಾತ್ ಅನ್ನು ಬರ್ಮ (ಮ್ಯಾನ್ಮಾರ್) ಮತ್ತು ಪಶ್ಚಿಮ ಏಷ್ಯಾ ಮತ್ತು ಪೂರ್ವ ಆಫ್ರಿಕಾಗಳಿಗೆ ರಫ್ತು ಮಾಡಲಾಗುತ್ತಿತ್ತು, ಅಲ್ಲಿ ಅವುಗಳನ್ನು ಏಷ್ಯನ್ ರುಮಾಲುಗಳು ಎಂದು ಕರೆಯಲಾಗುತ್ತಿತ್ತು.
 • ‘ಇಕಾತ್’ ಎಂಬ ಪದವು ಮಲಯ-ಇಂಡೋನೇಷ್ಯಾದ ಸೌಮ್ಯೋಕ್ತಿ / ಅಭಿವ್ಯಕ್ತಿಯಾದ ‘ಮಂಗಿಕಾಟ್’ ನಿಂದ ಬಂದಿದೆ, ಇದರರ್ಥ ಗಂಟುಕಟ್ಟು ಅಥವಾ ಗಾಳಿಯನ್ನು ಕಟ್ಟುವುದು ಆಗಿದೆ.
 • ಇದಕ್ಕೆ ಈಗ ಭೌಗೋಳಿಕ ಸೂಚಕ (GI) ಸ್ಥಾನಮಾನ ನೀಡಲಾಗಿದೆ.
 • ಈ ಸೀರೆಗಳ ನೇಯ್ಗೆ ಪ್ರಕ್ರಿಯೆಯ ಕರಕುಶಲತೆಯನ್ನು ಚಿರಾಲ ಗ್ರಾಮದಿಂದ ಪೋಚಂಪಲ್ಲಿಗೆ ತರಲಾಯಿತು ಎಂದು ಹೇಳಲಾಗುತ್ತದೆ.

ತಿಮಿಂಗಿಲ ಶಾರ್ಕ್ (Whale shark):

 • ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಪ್ರಕಾರ, ‘ತಿಮಿಂಗಿಲ ಶಾರ್ಕ್’ ಮೀನುಗಳ ಅತಿದೊಡ್ಡ ಜೀವಂತ ಪ್ರಭೇದವಾಗಿವೆ ಮತ್ತು ಇದನ್ನು ಪ್ರಸ್ತುತ ‘ಅಳಿವಿನಂಚಿನಲ್ಲಿರುವ ಪ್ರಭೇದಗಳ’ ವರ್ಗದಲ್ಲಿ ಪಟ್ಟಿ ಮಾಡಲಾಗಿದೆ.
 • ಭಾರತದಲ್ಲಿ ಇದನ್ನು ‘ವನ್ಯಜೀವಿ ಸಂರಕ್ಷಣಾ ಕಾಯ್ದೆ’ ಅಡಿಯಲ್ಲಿ ರಕ್ಷಿಸಲಾಗಿದೆ.
 • ತಿಮಿಂಗಿಲ ಶಾರ್ಕ್ ಗಳು ಸುಮಾರು 130 ವರ್ಷಗಳ ಜೀವಿತಾವಧಿಯನ್ನು ಹೊಂದಿವೆ ಮತ್ತು ಅದರ ದೇಹದ ಮೇಲೆ ವಿಶಿಷ್ಟವಾದ ಚುಕ್ಕೆಗಳನ್ನು ಹೊಂದಿದೆ.
 • ಇದು 10 ಮೀಟರ್ ವರೆಗೆ ಉದ್ದವಾಗಿ ಬೆಳೆಯುತ್ತದೆ ಮತ್ತು ಸುಮಾರು 20 ಟನ್ ತೂಕವಿರುತ್ತದೆ.
 • ಆವಾಸ ಸ್ಥಾನ: ತಿಮಿಂಗಿಲ ಶಾರ್ಕ್ಗಳು ​​ವಿಶ್ವದ ಎಲ್ಲಾ ಉಷ್ಣವಲಯದ ಸಾಗರಗಳಲ್ಲಿ ಕಂಡುಬರುತ್ತವೆ. ಅದೇ ರೀತಿ ತಿಮಿಂಗಿಲ ಶಾರ್ಕ್ಗಳು ​​ಭಾರತದ ಕಡಲತೀರಗಳಲ್ಲಿಯೂ ಕಂಡುಬರುತ್ತವೆ.

ಮೀನುಗಾರ ಬೆಕ್ಕುಗಳು:

(Fishing Cats)

 • ಏಷ್ಯಾದ ಅತಿದೊಡ್ಡ ಉಪ್ಪುನೀರಿನಿಂದ ಆವೃತವಾದ ಮತ್ತು ಒಡಿಶಾದ ಚಿಲ್ಕಾ ಸರೋವರದ ಸುತ್ತಲಿನ ಪ್ರದೇಶದಲ್ಲಿ ಈ ಚುರುಕುಬುದ್ಧಿಯ ಮತ್ತು ಕೈಗೆ ಸಿಗದ ಮೀನುಗಾರ ಬೆಕ್ಕಿನ (Fishing Cats) ಮೊದಲ ಸಮೀಕ್ಷೆ 2021 ರ ಮಾರ್ಚ್ 1 ರಿಂದ ಪ್ರಾರಂಭವಾಗಿದೆ.
 • ಮೀನುಗಾರಿಕೆ ಬೆಕ್ಕುಗಳು ಸಾಕು / ಮನೆ ಬೆಕ್ಕುಗಳ ಗಾತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಿರುತ್ತವೆ.
 • ಅವು ಹೆಚ್ಚಾಗಿ ಉತ್ತರ ಮತ್ತು ಪೂರ್ವ ಭಾರತದ ಜವುಗು ಗದ್ದೆಗಳಲ್ಲಿ ಮತ್ತು ಪೂರ್ವ ಕರಾವಳಿಯ ಮ್ಯಾಂಗ್ರೋವ್ ಕಾಡುಗಳಲ್ಲಿ ಕಂಡುಬರುತ್ತವೆ.

 IUCN ಕೆಂಪು ಪಟ್ಟಿ: ಅಪಾಯ ಕೊಳ್ಳಗಾಗಬಲ್ಲ ಪ್ರಭೇದ.

  ನಕಾರಾತ್ಮಕ ವಿವರಣೆಯನ್ನು’ ಎದುರಿಸಲು ಮಂತ್ರಿಗಳ ಗುಂಪಿನ ಸಲಹೆಗಳು:

(GoM suggests steps to stem ‘negative narrative’)

ಇತ್ತೀಚೆಗೆ, ಸರ್ಕಾರದ ಮಾಹಿತಿ ಅಥವಾ ಸಂವಹನಗಳನ್ನು ಸರಿಪಡಿಸಲು ಮತ್ತು ಸರ್ಕಾರದ ಹೇಳಿಕೆ ಅಥವಾ ಅಭಿಪ್ರಾಯಗಳನ್ನು ‘ನಕಾರಾತ್ಮಕ ನಿರೂಪಣೆ’ ಗಳು ಎಂದು ಕರೆಯುವುದನ್ನು ತಟಸ್ಥಗೊಳಿಸಲು ಸಲಹೆಗಳನ್ನು ನೀಡಲು ಮಂತ್ರಿಗಳ ಗುಂಪನ್ನು (GoM) ರಚಿಸಲಾಯಿತು.

 • ಸೋಷಿಯಲ್ ಮೀಡಿಯಾದಲ್ಲಿ 50 ನಕಾರಾತ್ಮಕ ಮತ್ತು 50 ಸಕಾರಾತ್ಮಕ ಪ್ರಭಾವಶಾಲಿಗಳನ್ನು ಪತ್ತೆಹಚ್ಚಲು, ಸತ್ಯವನ್ನು ತಿಳಿಯದೆ ಸರ್ಕಾರದ ವಿರುದ್ಧ ಬರೆಯುವ ಜನರನ್ನು ತಟಸ್ಥಗೊಳಿಸಲು ಮತ್ತು ಸುಳ್ಳು ನಿರೂಪಣೆಗಳನ್ನು / ನಕಲಿ ಸುದ್ದಿಗಳನ್ನು ಹರಡುವುದನ್ನು ತಡೆಯಲು ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳಲು ಮಂತ್ರಿಗಳ ಗುಂಪು ಸಲಹೆ ನೀಡಿದೆ.
 • ಕ್ಯಾಬಿನೆಟ್ ಗುಂಪು / ಮಂತ್ರಿಗಳ ಗುಂಪು ಶಿಫಾರಸು ಮಾಡಿದ ಕ್ರಿಯಾಶೀಲ ಅಂಶಗಳಲ್ಲಿ ಪ್ರಸರಣ ಭಾರತಿ ಸುದ್ದಿ ಸೇವೆಯನ್ನು “ಮುಖ್ಯವಾಹಿನಿಯ ಸುದ್ದಿ ಸಂಸ್ಥೆ” ಯಾಗಿ ವಿಸ್ತರಿಸುವುದು ಸೇರಿದೆ.
 • ದೀರ್ಘಕಾಲೀನ ಕಾರ್ಯತಂತ್ರಗಳಲ್ಲಿ, “ಪತ್ರಿಕೋದ್ಯಮದ ಪ್ರಸ್ತುತ ವಿದ್ಯಾರ್ಥಿಗಳು ಭವಿಷ್ಯದ ಪತ್ರಕರ್ತರಾಗಿರುವುದರಿಂದ ಪತ್ರಿಕೋದ್ಯಮ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು” ಒಪ್ಪಲಾಗಿದೆ. 

fishing_cats_1

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos