ಪರಿವಿಡಿ :
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ‘ಅವಕಾಶ ಸೂಚ್ಯಂಕ 2021 ’ವರದಿ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಅಮೇರಿಕಾ ಅಧ್ಯಕ್ಷರ 2021 ರ ವ್ಯಾಪಾರ ಕಾರ್ಯಸೂಚಿ ಮತ್ತು 2020 ರ ವಾರ್ಷಿಕ ವರದಿ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ತರಂಗಾಂತರ (Spectrum ) ಹರಾಜು ಎಂದರೇನು?
2. ಚೀನಾದ ಸೈಬರ್ ದಾಳಿಯನ್ನು ವಿಫಲ ಗೊಳಿಸಲಾಗಿದೆ: ವಿದ್ಯುತ್ ಸಚಿವಾಲಯ.
3. ವಾಟ್ಸಾಪ್ ನ ಹೊಸ ನೀತಿಯನ್ನು ಪರಿಶೀಲಿಸಲಾಗುತ್ತಿದೆ: ಸರ್ಕಾರ
ಸಾಮಾನ್ಯ ಅಧ್ಯಯನ ಪತ್ರಿಕೆ 4:
1. ಹುಡುಗಿಯನ್ನು ಅತ್ಯಾಚಾರ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಗೆ, ಅದೇ ಹುಡುಗಿಯನ್ನು ಮದುವೆಯಾಗುವಂತೆ ಕೇಳಿದ ಸುಪ್ರೀಂಕೋರ್ಟ್.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಖರೀದಿ ವ್ಯವಸ್ಥಾಪಕ ಸೂಚಂಕ ಎಂದರೇನು (PMI)?
ಸಾಮಾನ್ಯ ಅಧ್ಯಯನ ಪತ್ರಿಕೆ – 1
ವಿಷಯಗಳು : ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು.
‘ಅವಕಾಶ ಸೂಚ್ಯಂಕ 2021 ’ವರದಿ :
(‘The Opportunity Index 2021’ report)
ಸಂದರ್ಭ :
ಇದು ಆನ್‌ಲೈನ್ ವೃತ್ತಿಪರ ನೆಟ್‌ವರ್ಕ್ ಆದ ಲಿಂಕ್ಡ್‌ಇನ್‌ನ ಹೊಸ ವರದಿಯಾಗಿದೆ.
- ಜನವರಿಯಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ, ಏಷ್ಯಾ ಪೆಸಿಫಿಕ್ (APAC) ಪ್ರದೇಶದಲ್ಲಿ 10,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ. ಈ ಸಮೀಕ್ಷೆಗೆ ಭಾರತದಿಂದ 2,285 ಮಂದಿ ಪ್ರತಿಕ್ರಿಯಿಸಿದ್ದಾರೆ.
ಪ್ರಮುಖ ಆವಿಷ್ಕಾರಗಳು:
- ಪ್ರತಿ 10 ಮಹಿಳೆಯರಲ್ಲಿ 9 ಅಥವಾ 89 ಪ್ರತಿಶತ ಮಹಿಳೆಯರು ಕೊರೊನೊವೈರಸ್ ಸಾಂಕ್ರಾಮಿಕದಿಂದ ನಕಾರಾತ್ಮಕ ಪರಿಣಾಮವನ್ನು ಎದುರಿಸಿದ್ದಾರೆ.
- ಭಾರತದಲ್ಲಿ ಕೆಲಸ ಮಾಡುವ ಐದು ಮಹಿಳೆಯರಲ್ಲಿ ನಾಲ್ವರು ಅಥವಾ, ಸರಿಸುಮಾರು 85%, ಮಹಿಳೆಯರು ತಮ್ಮ ಲಿಂಗತ್ವ ಕಾರಣದಿಂದಾಗಿ,ಅವರಿಗೆ ವೇತನ ಹೆಚ್ಚಳ, ಬಡ್ತಿ ಅಥವಾ ಕೆಲಸದ ಅವಕಾಶಗಳನ್ನು ನಿರಾಕರಿಸಲಾಗಿದೆ ಎಂದು ನಂಬುತ್ತಾರೆ. ಏಷ್ಯಾ ಪೆಸಿಫಿಕ್ (APAC) ಪ್ರದೇಶದಲ್ಲಿ ಈ ರೀತಿಯ ಮಹಿಳೆಯರ ಸರಾಸರಿ ಸಂಖ್ಯೆ 60% ಇದೆ.
- ಏಷ್ಯಾ ಪೆಸಿಫಿಕ್ (APAC) ಪ್ರದೇಶಕ್ಕೆ ಹೋಲಿಸಿದರೆ, ಭಾರತದಲ್ಲಿ ಹೆಚ್ಚಿನ ಮಹಿಳೆಯರು ವೃತ್ತಿಜೀವನದ ಅಭಿವೃದ್ಧಿಯ ಮೇಲೆ ಲಿಂಗ ತಾರತಮ್ಯದ ಪರಿಣಾಮವನ್ನು ಎದುರಿಸಿದ್ದಾರೆ.
ಮಹಿಳೆಯರ ಮುಂದಿರುವ ಸವಾಲುಗಳು:
- ಕುಟುಂಬದ ಆರೈಕೆಯಲ್ಲಿ ತಾರತಮ್ಯ ಮತ್ತು ಸಮಯದ ಕೊರತೆ.
- ಅವಕಾಶಗಳ ಸಾಧನೆಗೆ ಲಿಂಗ ಅಡೆತಡೆಗಳು.
- ನೆಟ್ವರ್ಕ್ ಮೂಲಕ ಮಾರ್ಗದರ್ಶನದ ಕೊರತೆ.
- ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಕೆಲಸದ ಸ್ಥಳದಲ್ಲಿ ತಾರತಮ್ಯ.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಅಮೇರಿಕಾ ಅಧ್ಯಕ್ಷರ 2021 ರ ವ್ಯಾಪಾರ ಕಾರ್ಯಸೂಚಿ ಮತ್ತು 2020 ರ ವಾರ್ಷಿಕ ವರದಿ :
(The US 2021 President’s Trade Agenda and 2020 Annual Report)
ಸಂದರ್ಭ :
ಇದು, ಅಮೆರಿಕಾದ ವ್ಯಾಪಾರ ಪ್ರತಿನಿಧಿಯು (USTR) ಯುಎಸ್ ಕಾಂಗ್ರೆಸ್ ಗೆ ಸಲ್ಲಿಸುವ ವಾರ್ಷಿಕ ವರದಿಯಾಗಿದೆ.
ಅಮೆರಿಕಾದ ವ್ಯಾಪಾರ ಪ್ರತಿನಿಧಿ (USTR) ಮಾಡಿದ ಪ್ರಮುಖ ಅವಲೋಕನಗಳು:
- ಭಾರತದ ದೊಡ್ಡ ಮಾರುಕಟ್ಟೆ, ಅದರ ಆರ್ಥಿಕತೆಯ ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ಅದರ ಪ್ರಗತಿಯು ಅಮೆರಿಕಾದ ಅನೇಕ ರಫ್ತುದಾರರಿಗೆ ಇದು ಅಗತ್ಯವಾದ ಮಾರುಕಟ್ಟೆಯನ್ನಾಗಿ ಮಾಡುತ್ತದೆ, ಆದರೆ,ಸಾಮಾನ್ಯ ಮತ್ತು ಸ್ಥಿರವಾದ ವ್ಯಾಪಾರ ನಿರ್ಬಂಧ ನೀತಿಗಳಿಂದಾಗಿ ಭಾರತದಲ್ಲಿ ದ್ವಿಪಕ್ಷೀಯ ವ್ಯಾಪಾರದ ಭವಿಷ್ಯವನ್ನು ಅಥವಾ ಸಾಮರ್ಥ್ಯವನ್ನು ಕಡಿಮೆ ಮಾಡಿದೆ.
- ಭಾರತದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳು ಎದುರಿಸುತ್ತಿರುವ ಸವಾಲುಗಳನ್ನು ನಿರೂಪಿಸಿದೆ.
- ವರದಿಯಲ್ಲಿ, 2019 ರ ಜೂನ್‌ನಲ್ಲಿ ಟ್ರಂಪ್ ಆಡಳಿತವು ಸಾಮಾನ್ಯೀಕರಿಸಿದ ಪ್ರಾಶಸ್ತ್ಯ ವಿಧಾನಗಳ (Generalised System of Preferences- GSP) ಕಾರ್ಯಕ್ರಮದಡಿಯಲ್ಲಿ ಮತ್ತು 2020 ರ ಅವಧಿಯಲ್ಲಿ ಸಂಕ್ಷಿಪ್ತ ವ್ಯಾಪಾರ ಒಪ್ಪಂದ ಅಥವಾ ಮಿನಿ ಟ್ರೇಡ್ ಡೀಲ್ ಸಾಧಿಸಲು (“ಪ್ಯಾಕೇಜ್”) ಭಾರತದ ಆದ್ಯತೆಯ ವ್ಯಾಪಾರ ಪರಿಸ್ಥಿತಿಯನ್ನು ಪ್ರಾರಂಭಿಸುವ ಸಂಬಂಧವನ್ನು ವಿವರವಾಗಿ ನೀಡಲಾಗಿದೆ.
‘ಮೇಕ್ ಇನ್ ಇಂಡಿಯಾ’ ಅಭಿಯಾನದ ಬಗ್ಗೆ:
- ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು 2014 ರಲ್ಲಿ ಪ್ರಧಾನಿ ಮೋದಿ ಈ ಅಭಿಯಾನವನ್ನು ಪ್ರಾರಂಭಿಸಿದರು.
- ಮೇಕ್ ಇನ್ ಇಂಡಿಯಾ ಮುಖ್ಯವಾಗಿ ನಿರ್ಮಾಣ ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸುತ್ತದೆ ಆದರೆ ದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಸಹ ಹೊಂದಿದೆ.
- ಹೂಡಿಕೆ, ಆಧುನಿಕ ಮತ್ತು ಪರಿಣಾಮಕಾರಿ ಮೂಲಸೌಕರ್ಯಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವುದು, ವಿದೇಶಿ ಹೂಡಿಕೆಗೆ ಹೊಸ ಕ್ಷೇತ್ರಗಳನ್ನು ತೆರೆಯುವುದು ಮತ್ತು ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಸಹಭಾಗಿತ್ವವನ್ನು ನಿರ್ಮಿಸುವುದು ಇದರ ದೃಷ್ಟಿಕೋನವಾಗಿದೆ.
ಅದರ ಗುರಿಯನ್ನು ಸಾಧಿಸಲು ಉದ್ದೇಶಗಳನ್ನು ಗುರುತಿಸಿ ನೀತಿಗಳನ್ನು ಪರಿಷ್ಕರಿಸಲಾಗಿದೆ.
- ಆರ್ಥಿಕತೆಯಲ್ಲಿ ಉತ್ಪಾದನಾ ಕ್ಷೇತ್ರದ ಪಾಲನ್ನು ಹೆಚ್ಚಿಸುವ ಸಲುವಾಗಿ ಈ ಕ್ಷೇತ್ರದ ಬೆಳವಣಿಗೆ ದರವನ್ನು ವಾರ್ಷಿಕವಾಗಿ 12 – 14% ನಂತೆ ಹೆಚ್ಚಿಸುವುದು.
- 2022 ರ ವೇಳೆಗೆ (ಪರಿಷ್ಕೃತ 2025) ದೇಶದ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ಪಾಲನ್ನು ಪ್ರಸ್ತುತವಿರುವ 15–16% ರಿಂದ 25% ಗೆ ಹೆಚ್ಚಳ ಮಾಡುವುದು.
- ಉತ್ಪಾದನಾ ಕ್ಷೇತ್ರದಲ್ಲಿ 2022 ರ ವೇಳೆಗೆ 100 ಮಿಲಿಯನ್ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
- ಸಮಗ್ರ ಬೆಳವಣಿಗೆಗೆ ಗ್ರಾಮೀಣ ವಲಸಿಗರು ಮತ್ತು ನಗರ ಬಡವರ ನಡುವೆ ಸೂಕ್ತ ಕೌಶಲ್ಯಗಳನ್ನು ಬೆಳೆಸಲು ಸೂಕ್ತ ಕಾರ್ಯಕ್ರಮಗಳನ್ನು ಸಂಯೋಜಿಸುವುದು.
ಸಾಮಾನ್ಯ ಅಧ್ಯಯನ ಪತ್ರಿಕೆ – 3
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ – ಅಭಿವೃದ್ಧಿ ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಪರಿಣಾಮಗಳು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿ.
ತರಂಗಾಂತರ (Spectrum ) ಹರಾಜು ಎಂದರೇನು?
(What are spectrum auctions?)
ಸಂದರ್ಭ:
ಸರ್ಕಾರಕ್ಕೆ, ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನ 77,146 ಕೋಟಿ ರೂ.ಗಳ ಬಿಡ್ ಬಂದಿದ್ದು, ಇದು ಸರ್ಕಾರ ನಿರೀಕ್ಷೆ ಮಾಡಿದ 45,000 ಕೋಟಿ ರೂ.ಗಳನ್ನು ಮೀರಿ ಉತ್ತಮ ಸಾಧನೆ ತೋರಿದೆ.
ಹಿನ್ನೆಲೆ:
ಒಟ್ಟು 3.92 ಲಕ್ಷ ಕೋಟಿ ಮೌಲ್ಯದ ಸ್ಪೆಕ್ಟ್ರಮ್ ಗಳನ್ನು ಹರಾಜಿನಲ್ಲಿ ಇರಿಸಲಾಗಿದ್ದು, ಇದರಲ್ಲಿ 700 ಮೆಗಾಹರ್ಟ್ಜ್, 800 ಮೆಗಾಹರ್ಟ್ಜ್, 900 ಮೆಗಾಹರ್ಟ್ಜ್, 1800 ಮೆಗಾಹರ್ಟ್ಜ್, 2100 ಮೆಗಾಹರ್ಟ್ಜ್, 2300 ಮೆಗಾಹರ್ಟ್ಜ್ ಮತ್ತು 2500 ಮೆಗಾಹರ್ಟ್ಜ್ ನ 7 ಆವರ್ತನ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್ ಅನ್ನು ಹರಾಜು ಮಾಡಲಾಗುತ್ತಿದೆ.
ತರಂಗಾಂತರ (Spectrum ) ಹರಾಜು ಎಂದರೇನು?
- ಸೆಲ್‌ಫೋನ್‌ಗಳು ಮತ್ತು ವೈರ್‌ಲೈನ್ ದೂರವಾಣಿಗಳಂತಹ ಸಾಧನಗಳಿಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಸಂಪರ್ಕ ಸಾಧಿಸಲು ಸಂಕೇತಗಳ ಸಹಾಯ ಬೇಕಾಗುತ್ತದೆ.ಈ ಸಂಕೇತಗಳನ್ನು ಗಾಳಿಯ ಅಲೆಗಳಲ್ಲಿ ಸಾಗಿಸಲಾಗುವುದಷ್ಟೇ ಅಲ್ಲದೆ, ಯಾವುದೇ ರೀತಿಯ ಅಡಚಣೆಯನ್ನು ತಪ್ಪಿಸಲು ಗೊತ್ತುಪಡಿಸಿದ ಆವರ್ತನಗಳಲ್ಲಿ ಕಳುಹಿಸಬೇಕಾಗುತ್ತದೆ.
- ಸೆಲ್ ಫೋನ್ಗಳು ಮತ್ತು ವೈರ್-ಲೈನ್ ಟೆಲಿಫೋನ್ಗಳಂತಹ ಸಾಧನಗಳು ಪರಸ್ಪರ ಸಂಪರ್ಕ ಸಾಧಿಸಲು ಸಂಕೇತಗಳನ್ನು ಬಯಸುತ್ತವೆ. ಈ ಸಂಕೇತಗಳು ಗಾಳಿಯ ಅಲೆಗಳಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಈ ಸಂಕೇತಗಳನ್ನು ನಿರಂತರ ಪ್ರಸರಣಕ್ಕಾಗಿ ನಿರ್ದಿಷ್ಟ ಆವರ್ತನಗಳಲ್ಲಿ ಕಳುಹಿಸಲಾಗುತ್ತದೆ.
- ಗಾಳಿಯ ಅಲೆಗಳೂ ಸೇರಿದಂತೆ,ದೇಶದ ಭೌಗೋಳಿಕ ಗಡಿಯೊಳಗೆ ಸಾರ್ವಜನಿಕವಾಗಿ ಲಭ್ಯವಿರುವ ಎಲ್ಲಾ ಸ್ವತ್ತುಗಳ ಮೇಲೆ ಕೇಂದ್ರ ಸರ್ಕಾರವು ಒಡೆತನವನ್ನು ಹೊಂದಿದೆ.
- ಸೆಲ್‌ಫೋನ್, ವೈರ್‌ಲೈನ್ ಟೆಲಿಫೋನ್ ಮತ್ತು ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ, ಕಾಲಕಾಲಕ್ಕೆ ಸಿಗ್ನಲ್‌ಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು ನೀಡಬೇಕಾಗುತ್ತದೆ.
- ಈ ಸಂಕೇತಗಳನ್ನು ಪ್ರಸಾರ ಮಾಡಲು ಮೂಲಸೌಕರ್ಯಗಳನ್ನು ನಿರ್ಮಿಸಲು ಬಯಸುವ ಕಂಪನಿಗಳಿಗೆ ಈ ಸ್ವತ್ತುಗಳನ್ನು ಮಾರಾಟ ಮಾಡಲು, ಕೇಂದ್ರ ಸರ್ಕಾರವು ದೂರಸಂಪರ್ಕ ಇಲಾಖೆ (DOT) ಮೂಲಕ ಕಾಲಕಾಲಕ್ಕೆ ಈ ಗಾಳಿಯ ಅಲೆಗಳನ್ನು ಹರಾಜು ಮಾಡುತ್ತದೆ.
- ಈ ಗಾಳಿಯ ಅಲೆಗಳನ್ನು ಸ್ಪೆಕ್ಟ್ರಮ್ / ತರಂಗಾಂತರ ಎಂದು ಕರೆಯಲಾಗುತ್ತದೆ, ಇದನ್ನು ವಿಭಿನ್ನ ಆವರ್ತನಗಳನ್ನು ಹೊಂದಿರುವ ಬ್ಯಾಂಡ್‌ಗಳಾಗಿ ವಿಂಗಡಿಸಲಾಗಿದೆ. ಈ ಎಲ್ಲಾ ಗಾಳಿಯ ಅಲೆಗಳನ್ನು ಒಂದು ನಿರ್ದಿಷ್ಟ ಅವಧಿಗೆ ಮಾರಾಟ ಮಾಡಲಾಗುತ್ತದೆ, ಅದರ ನಂತರ ಅವುಗಳ ಸಿಂಧುತ್ವವು ಕೊನೆಗೊಳ್ಳುತ್ತದೆ, ಇದನ್ನು ಸಾಮಾನ್ಯವಾಗಿ 20 ವರ್ಷಗಳ ವರೆಗೆ ನಿಗದಿಪಡಿಸಲಾಗುತ್ತದೆ.
ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.
ಚೀನಾದ ಸೈಬರ್ ದಾಳಿಯನ್ನು ವಿಫಲ ಗೊಳಿಸಲಾಗಿದೆ: ವಿದ್ಯುತ್ ಸಚಿವಾಲಯ :
(Chinese cyber attack foiled: Power Ministry)
ಸಂದರ್ಭ :
ಇತ್ತೀಚೆಗೆ, ಕೆಲವು “ಸರ್ಕಾರಿ ಪ್ರಯೋಜಿತ” ಚೀನೀ ಹ್ಯಾಕರ್ ಗುಂಪುಗಳು ವಿವಿಧ ಭಾರತೀಯ ವಿದ್ಯುತ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡವು.ಆದಾಗ್ಯೂ, ಸರ್ಕಾರಿ ಸೈಬರ್ ಏಜೆನ್ಸಿಗಳು ಇವುಗಳ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿದ ನಂತರ ಈ ಗುಂಪುಗಳನ್ನು ದಾಳಿ ಮಾಡದಂತೆ ತಡೆಯಲಾಗಿದೆ.
ಕೇಂದ್ರ ವಿದ್ಯುತ್ ಸಚಿವಾಲಯ ಇದನ್ನು ಸ್ಪಷ್ಟಪಡಿಸಿದೆ:
- ಉಲ್ಲೇಖಿತ ಸೈಬರ್ ದಾಳಿಯ ಬೆದರಿಕೆಯಿಂದಾಗಿ ವಿದ್ಯುತ್ ವಲಯ ಕಾರ್ಯಾಚರಣೆ ನಿಗಮದ (Power Sector Operations Corporation – POSOCO) ಕಾರ್ಯನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
- ಈ ಘಟನೆಗಳಿಂದ ಯಾವುದೇ ಡೇಟಾ ಉಲ್ಲಂಘನೆ / ಡೇಟಾ ನಷ್ಟ ಪತ್ತೆಯಾಗಿಲ್ಲ.
- ವಿವಿಧ ಏಜೆನ್ಸಿಗಳಿಂದ ಪಡೆದ ಯಾವುದೇ ಘಟನೆ / ಸಲಹೆಗಳ ಕುರಿತು POSOCO ನಿರ್ವಹಿಸುವ ಎಲ್ಲಾ ನಿಯಂತ್ರಣ ಕೇಂದ್ರಗಳಲ್ಲಿ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುತ್ತಿದ್ದಾರೆ.
- ವಿದ್ಯುತ್ ಗ್ರಿಡ್ ಮೇಲೆ ಸೈಬರ್ ದಾಳಿಯ ಯತ್ನ ನಡೆದಿದ್ದು ಹೌದು. ಶ್ಯಾಡೊ ಪ್ಯಾಡ್ ಎಂಬ ಕುತಂತ್ರಾಂಶದಿಂದ ಕಂಪ್ಯೂಟರ್ ಜಾಲಕ್ಕೆ ಬೆದರಿಕೆ ಇದೆ ಎಂಬ ಸಂದೇಶ ಸಿಇಆರ್‌ಟಿ–ಇನ್‌ನಿಂದ (ಭಾರತದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ) 2020ರ ನವೆಂಬರ್ 19ರಂದು ಬಂದಿತ್ತು. ಈ ಬೆದರಿಕೆಯನ್ನು ನಿವಾರಿಸಲು ಬೇಕಾದ ಕ್ರಮವನ್ನು ಅಂದೇ ಕೈಗೊಳ್ಳಲಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
ಈ ಘಟನೆಯ ಕುರಿತು ಅಮೇರಿಕಾದ ವರದಿ:
ಅಮೇರಿಕನ್ ಸೈಬರ್ ಭದ್ರತೆ ಮತ್ತು ಗುಪ್ತಚರ ಸಂಸ್ಥೆಯ ಪ್ರಕಾರ:
- ಗಡಿ ಬಿಕ್ಕಟ್ಟು ತೀವ್ರಗೊಂಡಿದ್ದ ಸಂದರ್ಭದಲ್ಲಿ ಚೀನಾವು ಭಾರತದ ವಿದ್ಯುತ್ ಗ್ರಿಡ್‌ಗ ಳನ್ನು ಹಾಳುಗೆಡವುವ ಸಂಚು ರೂಪಿಸಿತ್ತು ಎಂದು ಅಮೆರಿಕದ ರೆಕಾರ್ಡೆಡ್ ಫ್ಯೂಚರ್ ಎಂಬ ಕಂಪೆನಿಯ ಅಧ್ಯಯನ ವರದಿಯು ಹೇಳಿದೆ.
- ಕಳೆದ ಮೇನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿಯಲ್ಲಿ ಉದ್ವಿಗ್ನತೆಯ ಉಲ್ಬಣವು ಜೂನ್ ಮಧ್ಯದಲ್ಲಿ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಘೋರ ಘರ್ಷಣೆಗೆ ಕಾರಣವಾಯಿತು, ಈ ಸಮಯದಲ್ಲಿ ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಮಾಲ್ವೇರ್ ಅಥವಾ ಕುತಂತ್ರಾಂಶವನ್ನು ಭಾರತೀಯ ವಿದ್ಯುತ್ ಗ್ರಿಡ್‌ಗಳು ಮತ್ತು ಬಂದರುಗಳಿಗೆ ನಿಯೋಜಿಸಿರಬಹುದು.
- ಅಕ್ಟೋಬರ್ 12 ರಂದು ಮುಂಬೈನಲ್ಲಿ ಗ್ರಿಡ್ ವೈಫಲ್ಯಕ್ಕೆ ಅದೇ ಚೀನೀ ಮಾಲ್ವೇರ್ ಕಾರಣವಾಗಿರಬಹುದು.
- ಇತ್ತೀಚೆಗೆ, ಈ ಮಾಲ್ವೇರ್ ಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾದ ನಂತರವೂ, ಒಳನುಸುಳುವಿಕೆಗೆ ಕೆಲವು ಪುರಾವೆಗಳಿವೆ.
ಒಳನುಸುಳಿದ ಪ್ಲಗ್‌ಎಕ್ಸ್?
- 2020ರ ಮೇ ತಿಂಗಳ ಹೊತ್ತಿಗೆ ಭಾರತದ ಸಂಸ್ಥೆಗಳ ಕಂಪ್ಯೂಟರ್ ಜಾಲದಲ್ಲಿ ಪ್ಲಗ್ ಎಕ್ಸ್ ಎಂಬ ಕುತಂತ್ರಾಂಶದ ಚಟುವಟಿಕೆ ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗಿತ್ತು. ಭಾರತದ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ರಕ್ಷಣಾ ಸಂಸ್ಥೆಗಳಲ್ಲಿಯೂ ಪ್ಲಗ್ ಎಕ್ಸ್ ಕಾಣಿಸಿಕೊಂಡಿದೆ. ಚೀನಾದ ಸೈಬರ್ ಗೂಢಚರ್ಯೆಯಲ್ಲಿ ಪ್ಲಗ್ ಎಕ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಹಲವು ವರ್ಷಗಳಿಂದ ಚೀನಾವು ಈ ಕುತಂತ್ರಾಂಶವನ್ನು ಬಳಸುತ್ತಿದೆ ಎಂದು ವರದಿಯು ವಿವರಿಸಿದೆ.
ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರ ಕೈಗೊಂಡ ಕ್ರಮಗಳು:
- ಮಕ್ಕಳ ಅಶ್ಲೀಲತೆ (Child pornography)/ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ ವಸ್ತು,(Child Sexual Abuse Material ) ಅತ್ಯಾಚಾರ / ಸಾಮೂಹಿಕ ಅತ್ಯಾಚಾರ ಚಿತ್ರಣಗಳು ಅಥವಾ ಲೈಂಗಿಕವಾಗಿ ಸ್ಪಷ್ಟವಾದ ವಿಷಯಗಳಿಗೆ (sexually explicit content ) ಸಂಬಂಧಿಸಿದ ದೂರುಗಳನ್ನು ವರದಿ ಮಾಡಲು ದೂರುದಾರರಿಗೆ ಅನುವು ಮಾಡಿಕೊಡಲು ಆನ್‌ಲೈನ್ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (Online cybercrime reporting portal) ಅನ್ನು ಪ್ರಾರಂಭಿಸಲಾಗಿದೆ.
- ಸೈಬರ್ ಅಪರಾಧ ಸಂಬಂಧಿತ ಸಮಸ್ಯೆಗಳನ್ನು ದೇಶದಲ್ಲಿ ಸಮಗ್ರ ಮತ್ತು ಸಂಘಟಿತ ರೀತಿಯಲ್ಲಿ ಪರಿಹರಿಸಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (Indian Cyber Crime Coordination Centre –I 4 C) ಸ್ಥಾಪಿಸಲು ಯೋಜಿಸಲಾಗಿದೆ.
- ದೇಶದ ಪ್ರಮುಖ ಮಾಹಿತಿ ಮೂಲಸೌಕರ್ಯಗಳನ್ನು ರಕ್ಷಿಸಲು ‘ರಾಷ್ಟ್ರೀಯ ವಿಮರ್ಶಾತ್ಮಕ ಮಾಹಿತಿ ಮೂಲಸೌಕರ್ಯ ಸಂರಕ್ಷಣಾ ಕೇಂದ್ರ – (National Critical Information Infrastructure Protection Centre– NCIIPC) ಸ್ಥಾಪನೆ ಮಾಡಲಾಗಿದೆ.
- ಭಾರತದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (CERT-In) ನಲ್ಲಿ ಸೈಬರ್ ಭದ್ರತಾ ಘಟನೆಗಳನ್ನು ತ್ವರಿತವಾಗಿ ವರದಿ ಮಾಡುವುದು ಡಿಜಿಟಲ್ ಸೇವೆಗಳನ್ನು ಒದಗಿಸುವ ಎಲ್ಲಾ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.
- ದುರುದ್ದೇಶಪೂರಿತ ಕಾರ್ಯಕ್ರಮಗಳು ಮತ್ತು ಉಚಿತ ಸಾಧನಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಸೈಬರ್ ಸ್ವಚ್ಛತಾ ಕೇಂದ್ರವನ್ನು (Cyber Swachhta Kendra) ಪ್ರಾರಂಭಿಸಲಾಗಿದೆ.
- ಸೈಬರ್ ದಾಳಿ ಮತ್ತು ಸೈಬರ್ ಭಯೋತ್ಪಾದನೆಯನ್ನು ಎದುರಿಸಲು ಬಿಕ್ಕಟ್ಟು ನಿರ್ವಹಣಾ ಯೋಜನೆಯನ್ನು (Crisis Management Plan) ರೂಪಿಸುವುದು.
ಮುಂದೆ ಕೈಗೊಳ್ಳಬೇಕಾದ ಇತರೆ ಕ್ರಮಗಳು:
- ನಿಯಮಿತ ಎಚ್ಚರಿಕೆಗಳು / ಸಲಹೆಗಳನ್ನು ನೀಡುವುದು.
- ಕಾನೂನು ಜಾರಿ ಸಿಬ್ಬಂದಿ / ಪ್ರಾಸಿಕ್ಯೂಟರ್ / ನ್ಯಾಯಾಂಗ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ / ತರಬೇತಿ ನೀಡುವುದು.
- ಸೈಬರ್ ಫೊರೆನ್ಸಿಕ್ ಸೌಲಭ್ಯಗಳನ್ನು ಸುಧಾರಿಸುವುದು.
- ತನಿಖೆಯನ್ನು ಚುರುಕು ಅಥವಾ ವೇಗ ಗೊಳಿಸುವುದು.
ಅಂತಿಮವಾಗಿ, ‘ಪೊಲೀಸ್’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ಯು ಭಾರತದ ಸಂವಿಧಾನದ ಪ್ರಕಾರ ರಾಜ್ಯ ಪಟ್ಟಿಯಲ್ಲಿನ ವಿಷಯಗಳಾಗಿವೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕಾನೂನು ಜಾರಿ ಸಂಸ್ಥೆಗಳ ಮೂಲಕ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ವಿಚಾರಣೆಗೆ ಮುಖ್ಯವಾಗಿ ಕಾರಣವಾಗಿವೆ.
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ – ಅಭಿವೃದ್ಧಿ ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಪರಿಣಾಮಗಳು, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿ.
ವಾಟ್ಸಾಪ್ ನ ಹೊಸ ನೀತಿಯನ್ನು ಪರಿಶೀಲಿಸಲಾಗುತ್ತಿದೆ: ಸರ್ಕಾರ.
(WhatsApp’s new policy being examined: govt)
ಸಂದರ್ಭ:
ಮೇ 15 ರಿಂದ ಜಾರಿಗೆ ಬರಲಿರುವ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಏನಿದು ಸಮಸ್ಯೆ?
ವಾಟ್ಸಾಪ್ ಘೋಷಿಸಿದ ಹೊಸ ಗೌಪ್ಯತೆ ನೀತಿಯ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯು ಸಂವಿಧಾನವು ಒದಗಿಸಿರುವ ‘ಗೌಪ್ಯತೆ ಹಕ್ಕನ್ನು’ ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
- ಹೊಸ ನೀತಿಯು “ಸರ್ಕಾರದ ಮೇಲ್ವಿಚಾರಣೆಯಿಲ್ಲದೆ ವ್ಯಕ್ತಿಯ ಆನ್‌ಲೈನ್ ಚಟುವಟಿಕೆಗಳ (virtually gives a 360-degree profile) ಬಗ್ಗೆ ಕಂಪನಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
- ವಾಟ್ಸಾಪ್ ನೀಡುವ ಗೌಪ್ಯತೆ ನೀತಿಯಲ್ಲಿ ಅಂತಹ ಬದಲಾವಣೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ನೀತಿಯ ಪ್ರಮುಖ ಲಕ್ಷಣಗಳು:
- ಮೂರನೇ ವ್ಯಕ್ತಿಯ ಸೇವೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು: ಬಳಕೆದಾರರು ಇತರ ತೃತೀಯ ವ್ಯಕ್ತಿಯ ಸೇವೆಗಳನ್ನು ಅಥವಾ ವಾಟ್ಸಾಪ್ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟ ಇತರ ಫೇಸ್‌ಬುಕ್ ಕಂಪನಿ ಉತ್ಪನ್ನಗಳನ್ನು ಅವಲಂಬಿಸಿದಾಗ, ಬಳಕೆದಾರರ ಬಗ್ಗೆ ಮತ್ತು ಸೇವೆಗಳನ್ನು ಹಂಚಿಕೊಳ್ಳುವ ಇತರರ ಬಗ್ಗೆ ಮೂರನೇ ವ್ಯಕ್ತಿಯ ಸೇವೆಗಳು ಮಾಹಿತಿಯನ್ನು ಪಡೆಯಬಹುದು.
- ಹಾರ್ಡ್ ವೇರ್ ಮಾಹಿತಿ: ಬಳಕೆದಾರರ ಸಾಧನಗಳಿಂದ ಬ್ಯಾಟರಿ ಮಟ್ಟ, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಸಂಪರ್ಕ ಮಾಹಿತಿ (ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ISP ಸೇರಿದಂತೆ) ನಂತಹ ಮಾಹಿತಿಯನ್ನು ವಾಟ್ಸಾಪ್ ಸಂಗ್ರಹಿಸುತ್ತದೆ.
- ಖಾತೆಯನ್ನು ಅಳಿಸಲಾಗುತ್ತಿದೆ: ಅಪ್ಲಿಕೇಶನ್‌ನಲ್ಲಿ ನೀಡಿರುವ ಕಾರ್ಯವಿಧಾನವನ್ನು ಬಳಸದೆ ಬಳಕೆದಾರರು ತಮ್ಮ ಸಾಧನದಿಂದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆಗೆದುಹಾಕಿದರೆ, ಆ ಬಳಕೆದಾರರ ಮಾಹಿತಿಯನ್ನು ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಲಾಗುತ್ತದೆ.
- ಡೇಟಾ ಸಂಗ್ರಹಣೆ: ಇದು ಫೇಸ್‌ಬುಕ್‌ನ ಜಾಗತಿಕ ಮೂಲಸೌಕರ್ಯ ಮತ್ತು ದತ್ತಾಂಶ ಕೇಂದ್ರಗಳನ್ನು ಬಳಸುತ್ತದೆ ಎಂದು ವಾಟ್ಸಾಪ್ ಹೇಳಿದೆ. ಕೆಲವು ಸಂದರ್ಭಗಳಲ್ಲಿ, ಬಳಕೆದಾರರ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್ ಅಥವಾ ಫೇಸ್‌ಬುಕ್ ಅಂಗಸಂಸ್ಥೆಗಳನ್ನು ಹೊಂದಿರುವ ಸ್ಥಳಗಳಿಗೆ ವರ್ಗಾಯಿಸಬಹುದು ಎಂದು ಸಹ ಹೇಳಲಾಗಿದೆ.
- ಸ್ಥಳ: ಬಳಕೆದಾರರು ತಮ್ಮ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸದಿದ್ದರೂ ಸಹ, ವಾಟ್ಸಾಪ್ ಅವರ ಸಾಮಾನ್ಯ ಸ್ಥಳವನ್ನು (ನಗರ, ದೇಶ) ಅಂದಾಜು ಮಾಡಲು ಐಪಿ ವಿಳಾಸ ಮತ್ತು ಫೋನ್ ಸಂಖ್ಯೆ ಪ್ರದೇಶ ಕೋಡ್‌ನಂತಹ ಇತರ ಮಾಹಿತಿಯನ್ನು ಸಂಗ್ರಹಿಸುತ್ತದೆ.
- ಪಾವತಿ ಸೇವೆ: ಯಾವುದೇ ಬಳಕೆದಾರರು ತಮ್ಮ ಪಾವತಿ ಸೇವೆಗಳನ್ನು ಬಳಸಿದರೆ ಅವರು ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತಾರೆ ಎಂದು ವಾಟ್ಸಾಪ್ ಹೇಳುತ್ತದೆ.
ಸಂಬಂಧಿತ ಕಾಳಜಿಗಳು ಮತ್ತು ಸಮಸ್ಯೆಗಳು:
- ವಾಟ್ಸಾಪ್ನ ಹೊಸ ನೀತಿಯು 2019 ರ ಡೇಟಾ ಸಂರಕ್ಷಣಾ ಮಸೂದೆಗೆ ಆಧಾರವನ್ನು ಒದಗಿಸುವ ‘ಶ್ರೀಕೃಷ್ಣ ಸಮಿತಿ’ ವರದಿಯ ಶಿಫಾರಸುಗಳನ್ನು ಕಡೆಗಣಿಸುತ್ತದೆ.
- ಡೇಟಾ ಸ್ಥಳೀಕರಣದ ತತ್ವವು ವೈಯಕ್ತಿಕ ಡೇಟಾದ ಹೊರಗಿನ ವರ್ಗಾವಣೆಯನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ, ಇದು ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯೊಂದಿಗೆ ವಿರೋಧಾಭಾಸಕ್ಕೆ ಕಾರಣವಾಗಬಹುದು.
- ಹೊಸ ಗೌಪ್ಯತೆ ನೀತಿ ಜಾರಿಗೆ ಬಂದಾಗ, ವಾಟ್ಸಾಪ್ ಬಳಕೆದಾರರ ಮೆಟಾಡೇಟಾವನ್ನು ಹಂಚಿಕೊಳ್ಳಬಹುದು, ಅಂದರೆ, ಸಂಭಾಷಣೆಯ ಮೂಲ ಸಂದೇಶಗಳನ್ನು ಹೊರತುಪಡಿಸಿ ಎಲ್ಲವನ್ನೂ ಹಂಚಿಕೊಳ್ಳಬಹುದು.
- ಬಳಕೆದಾರರು ವಾಟ್ಸಾಪ್ ನ ನವೀಕರಿಸಿದ ಗೌಪ್ಯತೆ ನೀತಿಯನ್ನು ಒಪ್ಪದಿದ್ದರೆ, ಈ ಹೊಸ ನೀತಿ ಜಾರಿಗೆ ಬಂದ ನಂತರ ಅವರು ವಾಟ್ಸಾಪ್ ಅನ್ನು ಬಿಡಬೇಕಾಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 4
ಹುಡುಗಿಯನ್ನು ಅತ್ಯಾಚಾರ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಗೆ, ಅದೇ ಹುಡುಗಿಯನ್ನು ಮದುವೆಯಾಗುವಂತೆ ಕೇಳಿದ ಸುಪ್ರೀಂಕೋರ್ಟ್ :
(SC asks man accused of rape if he can marry girl)
ಹುಡುಗಿಯೊಬ್ಬಳು ಅಪ್ರಾಪ್ತ ವಯಸ್ಕಳಾಗಿದ್ದಾಗ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ರಾಜ್ಯ ಸರ್ಕಾರಿ ನೌಕರನೊಬ್ಬನಿಗೆ ಅದೇ ಹುಡುಗಿಯನ್ನು ಮದುವೆಯಾಗಬಹುದೇ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಳಿದೆ.
ಆ ವ್ಯಕ್ತಿ ತಾನು ಈಗಾಗಲೇ ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಆ ಹುಡುಗಿಯನ್ನು ವಿವಾಹವಾಗಲು ನಿರಾಕರಿಸಿದ, ಆನಂತರ ಸರ್ವೋಚ್ಚ ನ್ಯಾಯಾಲಯವು ಸಂಬಂಧಪಟ್ಟ ನ್ಯಾಯಾಲಯದಿಂದ ನಿಯಮಿತ ಜಾಮೀನು ಪಡೆಯಲು ನಿರ್ದೇಶಿಸಿತು.
ಏನಿದು ಸಮಸ್ಯೆ?
ಕಳೆದ ವರ್ಷ ಜನವರಿಯಲ್ಲಿ ವಿಚಾರಣಾ ನ್ಯಾಯಾಲಯವು ತನಗೆ ನೀಡಿದ್ದ ನಿರೀಕ್ಷಿತ ಜಾಮೀನನ್ನು ರದ್ದುಪಡಿಸಿದ ಬಾಂಬೆ ಹೈಕೋರ್ಟ್‌ನ ಫೆಬ್ರವರಿ 5 ರ ಆದೇಶದ ವಿರುದ್ಧ ಆರೋಪಿತ ವ್ಯಕ್ತಿಯು ಸಲ್ಲಿಸಿದ್ದ ಅರ್ಜಿಯನ್ನು ವರಿಷ್ಠ ನ್ಯಾಯಾಲಯವು ವಿಚಾರಣೆ ನಡೆಸಿತ್ತು.
ಆತನ ಮೇಲೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (Protection of Children from Sexual Offences -POCSO) ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳ ಆರೋಪವೂ ಇದೆ.
ಆರೋಪಿಯು ಮೊದಲಿಗೆ ಸಂತ್ರಸ್ತ ಬಾಲಕಿಯನ್ನು ಮದುವೆಯಾಗಲು ಸಿದ್ಧನಾಗಿದ್ದನು, ಆದರೆ ಅವಳು ನಿರಾಕರಿಸಿದ್ದರಿಂದ ಈಗ ಅವನು ಬೇರೊಬ್ಬರನ್ನು ಮದುವೆಯಾಗಿದಾನೆ.
ನ್ಯಾಯಾಲಯದ ಅಭಿಪ್ರಾಯವೇನು?
- ನ್ಯಾಯಪೀಠವು, “ ನೀವು ಒಬ್ಬ ಸರ್ಕಾರಿ ನೌಕರ ಎಂಬುದನ್ನು ತಿಳಿದ ನಿಮಗೆ ಹುಡುಗಿಯ ಮೇಲೆ ಅತ್ಯಾಚಾರ ಮಾಡುವ ಮೊದಲು ನೀವು ಇದನ್ನು ಯೋಚಿಸಬೇಕಾಗಿತ್ತು” ಎಂದು ಹೇಳಿದೆ.
- ವಿಶ್ವಸಂಸ್ಥೆ ನಿರ್ಣಯದ ಕಾಯ್ದೆ: 1992 ಡಿಸೆಂಬರ್ ತಿಂಗಳಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಮಕ್ಕಳ ಹಕ್ಕುಗಳ ರಕ್ಷಣೆ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ 2012 ಜೂನ್ 12ರಂದು ದೇಶದಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂತು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
‘ಖರೀದಿ ವ್ಯವಸ್ಥಾಪಕ ಸೂಚಂಕ ಎಂದರೇನು (PMI)?
ಖರೀದಿ ವ್ಯವಸ್ಥಾಪಕ ಸೂಚ್ಯಂಕವು (Purchasing Managers’ Index- PMI) ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿನ ವ್ಯವಹಾರ ಚಟುವಟಿಕೆಯ ಸೂಚಕವಾಗಿದೆ.
- ಇದು ಸಮೀಕ್ಷೆ ಆಧಾರಿತ ವ್ಯವಸ್ಥೆ. ಇದರಲ್ಲಿ, ಹಿಂದಿನ ತಿಂಗಳಿನಿಂದ ಕೆಲವು ಪ್ರಮುಖ ವ್ಯವಹಾರ ಅಂಶಗಳ ಬಗ್ಗೆ ಅವರ ಗ್ರಹಿಕೆಯ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದವರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
- ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗೆ ಇದನ್ನು ಪ್ರತ್ಯೇಕವಾಗಿ ಲೆಕ್ಕಹಾಕಲಾಗುತ್ತದೆ ಮತ್ತು ನಂತರ ಸಂಯೋಜಿತ ಸೂಚಿಯನ್ನು ನಿರ್ಮಿಸಲಾಗುತ್ತದೆ.
- 50 ಕ್ಕಿಂತ ಹೆಚ್ಚಿನ ಡೇಟಾವು ವ್ಯಾಪಾರ ಚಟುವಟಿಕೆಯ ವಿಸ್ತರಣೆಯನ್ನು ಸೂಚಿಸುತ್ತದೆ, ಆದರೆ 50 ಕ್ಕಿಂತ ಕೆಳಗಿನ ಡೇಟಾವು ಸಂಕೋಚನವನ್ನು ಪ್ರತಿನಿಧಿಸುತ್ತದೆ.
- ಮಧ್ಯದ ಬಿಂದುವಿನಿಂದ ವ್ಯತ್ಯಾಸವು ಹೆಚ್ಚಿದಂತೆ, ವಿಸ್ತರಣೆ ಅಥವಾ ಸಂಕೋಚನವು ಹೆಚ್ಚುತ್ತದೆ.










