Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 1 ಮಾರ್ಚ್ 2021

 

ಪರಿವಿಡಿ :

  ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸಿಟಿ ಇನ್ನೋವೇಶನ್ ಎಕ್ಸ್ಚೇಂಜ್  (ನಗರ ನಾವೀನ್ಯತೆ ವಿನಿಮಯ – CIX).

2. ಈಶಾನ್ಯ ಭಾರತದ ಕಬ್ಬು ಮತ್ತು ಬಿದಿರು ಅಭಿವೃದ್ಧಿ ಮಂಡಳಿ (NECBDC).

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. PSLV-C 51 ಉಡಾವಣೆ.

2. ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಕಾರ್ಯಕ್ರಮ (TEQIP).

3. ರಾಷ್ಟ್ರೀಯ ವಿಜ್ಞಾನ ದಿನ.

4. ಹಿಮಾಚಲ ಪ್ರದೇಶದಲ್ಲಿನ ಹಿಮ ಚಿರತೆ ಕುರಿತ ಅಧ್ಯಯನ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

 1. ಆಸ್ಟ್ರೇಲಿಯಾದ ಹಳೆಯ ಮೂಲನಿವಾಸಿ ರಾಕ್ ಕಲೆ.

2. ಗೇಮಿಂಗ್ ನಲ್ಲಿ ಶ್ರೇಷ್ಠತೆಯ ಕೇಂದ್ರ.

3. ಖುಜ್ಲಿ ಘರ್.

4. ಜಲಶಕ್ತಿ ಸಚಿವಾಲಯದ ‘ಮಳೆ ನೀರು ಸಂಗ್ರಹ’ ಅಭಿಯಾನ್.

5. ಬಿರ್ ಚಿಲಾರೈ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆ ಮತ್ತು ಪರಿಹಾರಗಳು.

ಸಿಟಿ ಇನ್ನೋವೇಶನ್ ಎಕ್ಸ್ಚೇಂಜ್:  (ನಗರ ನಾವೀನ್ಯತೆ ವಿನಿಮಯ – CIX)


ಸಂದರ್ಭ:

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಿಟಿ ಇನ್ನೋವೇಶನ್ ಎಕ್ಸ್ಚೇಂಜ್ (CIX) ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.

 

ಏನಿದು ನಗರ ನಾವೀನ್ಯತೆ ವಿನಿಮಯ – CIX ಉಪಕ್ರಮ?

 • ನಗರ ನಾವೀನ್ಯತೆ ವಿನಿಮಯ ಉಪಕ್ರಮವು (CIX) ನಗರಗಳನ್ನು ರಾಷ್ಟ್ರೀಯ ಪರಿಸರ ವ್ಯವಸ್ಥೆಯಾದ್ಯಂತ ನಾವಿನ್ಯಕಾರರೊಂದಿಗೆ ಸಂಪರ್ಕಿಸುವ ಮೂಲಕ ಅವುಗಳ ಒತ್ತಡದ ಸವಾಲುಗಳಿಗೆ ನವೀನ ಪರಿಹಾರಗಳನ್ನು ವಿನ್ಯಾಸಗೊಳಿಸುತ್ತದೆ.
 • ದೃಢವಾದ, ಪಾರದರ್ಶಕ ಮತ್ತು ಬಳಕೆದಾರ-ಕೇಂದ್ರಿತ ಪ್ರಕ್ರಿಯೆಯ ಮೂಲಕ ಪರಿಹಾರಗಳನ್ನು ಹುಡುಕಲು, ವಿನ್ಯಾಸಗೊಳಿಸಲು ಮತ್ತು ಮೌಲ್ಯೀಕರಿಸಲು ಈ ವೇದಿಕೆಯು ಸುಲಭ ಸಾಧನವಾಗಿದೆ.ಇದು ಹೊಸತನವನ್ನು ಮತ್ತು ನಗರಗಳಿಗೆ ಸೂಕ್ತವಾದ ಪರಿಹಾರಗಳನ್ನು ಹುಡುಕಲು ಇರುವ ಅಡೆತಡೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
 • ಮುಕ್ತ ನಾವೀನ್ಯತೆ’ ಪರಿಕಲ್ಪನೆಯ ಮೇಲೆ ನಿರ್ಮಿಸಲಾಗಿರುವ ಈ ವೇದಿಕೆಯು ಒಳಗಿನ ಮತ್ತು ಹೊರಗಿನ ಆಲೋಚನೆಗಳ ಹರಿವಿಗೆ ಸಹಾಯ ಮಾಡುತ್ತದೆ,ಮತ್ತು ಸ್ಮಾರ್ಟ್ ನಗರ ಆಡಳಿತವನ್ನು ತಲುಪಿಸಲು ಅಗತ್ಯವಾದ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ವೇದಿಕೆಯ ಮಹತ್ವ:

 • ನಗರ ಭಾರತದ ಭವಿಷ್ಯಕ್ಕಾಗಿ ಪರಿಹಾರಗಳ, ಸಹ-ರಚನೆಗಾಗಿ ಈ ವೇದಿಕೆಯು ನಾಗರಿಕ-ಸಂಸ್ಥೆಗಳು-ಅಕಾಡೆಮಿಕ್ ವ್ಯವಹಾರಗಳು- ಮತ್ತು ಸರ್ಕಾರವನ್ನು ಒಟ್ಟುಗೂಡಿಸುತ್ತದೆ.
 • ನಗರಗಳು ತಮ್ಮ ನಿವಾಸಿಗಳ ಜೀವನ ಮಟ್ಟವನ್ನು ಹೆಚ್ಚಿಸುವ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಈ ವೇದಿಕೆಯು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಸುಲಲಿತ ವ್ಯಾಪಾರ ವ್ಯವಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ.
 • ಇದು ಭಾರತದಲ್ಲಿ ಬೆಳೆಯುತ್ತಿರುವ ನಾವೀನ್ಯತೆ ಪರಿಸರ ವ್ಯವಸ್ಥೆಗೆ ಮಹತ್ವದ ಸೇರ್ಪಡೆಯಾಗಲಿದ್ದು, ಅಲ್ಲದೆ ಇದು ನಗರಗಳಲ್ಲಿ ನವೀನ ಅಭ್ಯಾಸಗಳನ್ನು ಉತ್ತೇಜಿಸುವತ್ತ ಗಮನಹರಿಸುತ್ತದೆ.

 

ವಿಷಯಗಳು: ವಿಶ್ವಾದ್ಯಂತ ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ವಿತರಣೆ (ದಕ್ಷಿಣ ಏಷ್ಯಾ ಮತ್ತು ಭಾರತೀಯ ಉಪಖಂಡ ಸೇರಿದಂತೆ); ವಿಶ್ವದ ವಿವಿಧ ಭಾಗಗಳಲ್ಲಿ (ಭಾರತ ಸೇರಿದಂತೆ) ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ವಲಯದ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾದ ಅಂಶಗಳು.

ಈಶಾನ್ಯ ಭಾರತದ ಕಬ್ಬು ಮತ್ತು ಬಿದಿರು ಅಭಿವೃದ್ಧಿ ಮಂಡಳಿ  (NECBDC):


(North East Cane and Bamboo Development Council – NECBDC)

ಸಂದರ್ಭ:

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ತಾಂತ್ರಿಕ ಜ್ಞಾನ ಮತ್ತು ಈಶಾನ್ಯ ಕಬ್ಬು ಮತ್ತು ಬಿದಿರಿನ ಅಭಿವೃದ್ಧಿ ಮಂಡಳಿ (NECBDC) ಸಹಯೋಗದೊಂದಿಗೆ ಮೂರು ಬಿದಿರಿನ (ಕ್ಲಸ್ಟರ್) ಸಮೂಹಗಳನ್ನು ಸ್ಥಾಪಿಸಲಿದೆ.

 • ಮೂರು ಕ್ಲಸ್ಟರ್ ಗಳಲ್ಲಿ ಪ್ರತಿಯೊಂದನ್ನು ಕ್ರಮವಾಗಿ ಅಗರಬತ್ತಿ, ಬುಟ್ಟಿಗಳು ಮತ್ತು ಇದ್ದಿಲು ಉತ್ಪಾದನೆಗೆ ಮೀಸಲಿಡಲಾಗುತ್ತದೆ.

ಈಶಾನ್ಯ ಭಾರತದ ಕಬ್ಬು ಮತ್ತು ಬಿದಿರು ಅಭಿವೃದ್ಧಿ ಮಂಡಳಿ ಕುರಿತು:

ಈ ಹಿಂದೆ ‘ಕಬ್ಬು ಮತ್ತು ಬಿದಿರು ಅಭಿವೃದ್ಧಿ ಮಂಡಳಿ’ (CBDC) ಎಂದು ಕರೆಯಲಾಗುತ್ತಿದ್ದ NECBDC ಯನ್ನು ಇಲ್ಲಿಯವರೆಗೆ ಬಳಸದ ಈಶಾನ್ಯ ಭಾರತದ ಬಿದಿರಿನ ವಲಯವನ್ನು ಸಂಘಟಿಸುವ ಉದ್ದೇಶದಿಂದ ಸಂಯೋಜಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ದಲ್ಲಿ ‘ಕಬ್ಬು ಮತ್ತು ಬಿದಿರು’:

 • ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭವಿಷ್ಯದಲ್ಲಿ ತನ್ನ ಆರ್ಥಿಕತೆಯನ್ನು ಉತ್ತೇಜಿಸುವಂತಹ ಬಿದಿರಿನ ಬೃಹತ್ ನಿಕ್ಷೇಪಗಳನ್ನು ಹೊಂದಿದೆ.
 • ಬಿದಿರಿನ ಕೃಷಿಯು ಜಮ್ಮು ಮತ್ತು ಕಾಶ್ಮೀರದ ಉದ್ಯಮವನ್ನು ವೆಚ್ಚ-ಪರಿಣಾಮಕಾರಿ ರೀತಿಯಲ್ಲಿ ಕ್ರಾಂತಿಕಾರಕ ಗೊಳಿಸಬಹುದು ಮತ್ತು ಯುವ ಸ್ಟಾರ್ಟಪ್ ಗಳಿಗೆ ಅವಕಾಶದ ಹೊಸ ದ್ವಾರಗಳನ್ನು ತೆರೆಯಬಹುದು.
 • ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಇದಕ್ಕಾಗಿ 100 ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಮೊದಲ ಹಂತದಲ್ಲಿ ಅಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನು ಗುರುತಿಸಲಿದೆ.

ರಾಷ್ಟ್ರೀಯ ಬಿದಿರು ಯೋಜನೆ (NBM):

 • ಈ ಯೋಜನೆಯನ್ನು 2018 ರ ಏಪ್ರಿಲ್ ನಲ್ಲಿ ಪ್ರಾರಂಭಿಸಲಾಯಿತು.
 • ಇದು ಬಿದಿರು ಕೃಷಿಯ ವಿಸ್ತೀರ್ಣವನ್ನು ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಬಿದಿರಿನ ಉತ್ಪನ್ನಗಳ ಉತ್ತೇಜನಕ್ಕಾಗಿ ವಲಯ ಆಧಾರಿತ ತಂತ್ರಗಳನ್ನು ಅಳವಡಿಸಿಕೊಳ್ಳುವ ಉದ್ದೇಶ ಹೊಂದಿದೆ.
 • ಪ್ರದೇಶ ಆಧಾರಿತವಾಗಿ, ಪ್ರಾದೇಶಿಕವಾಗಿ ವಿಭಿನ್ನ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಬಿದಿರಿನ ಕೃಷಿ ಮತ್ತು ಮಾರುಕಟ್ಟೆ ಅಡಿಯಲ್ಲಿ ಪ್ರದೇಶವನ್ನು ಹೆಚ್ಚಿಸುವ ಮೂಲಕ ಬಿದಿರಿನ ಕ್ಷೇತ್ರದ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು NBM ಉದ್ದೇಶಿಸಿದೆ.
 • ರಾಷ್ಟ್ರೀಯ ಬಿದಿರು ಯೋಜನೆಯು, ಕ್ರಷೋನ್ನತಿ ಯೋಜನೆ ಎಂಬ ಒಂದು ನಿಗದಿತ ಮಾನದಂಡವನ್ನು ಹೊಂದಿರುವ ನಿಕಾಯದ ಅಡಿ ಸುಸ್ಥಿರ ಕೃಷಿಯ ಮೇಲಿನ ರಾಷ್ಟ್ರೀಯ ಯೋಜನೆಯ (NMSA) ಒಂದು ಉಪ-ಯೋಜನೆಯಾಗಲಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB) :


(Asian Infrastructure Investment Bank)

ಸಂದರ್ಭ:

ಅಸ್ಸಾಂನಲ್ಲಿ ವಿದ್ಯುತ್ ಪ್ರಸರಣ ಜಾಲದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB) ನೊಂದಿಗೆ $ 304 ಮಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದೆ.

 • ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಜಾಲದ ವಿಶ್ವಾಸಾರ್ಹತೆ, ಸಾಮರ್ಥ್ಯ ಮತ್ತು ಸುರಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ನಿಧಿಯನ್ನು ಅಸ್ಸಾಂ ರಾಜ್ಯದೊಳಗಿನ ವಿದ್ಯುತ್ ಪ್ರಸರಣ ವ್ಯವಸ್ಥೆಯ (Assam Intra-State Transmission System Enhancement Project) ಬಲವರ್ಧನೆ ಯೋಜನೆ’ಗಾಗಿ ಬಳಸಲಾಗುವುದು.

ಏನಿದು ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB)?

ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB), ಇದು ಏಷ್ಯಾ ಮತ್ತು ಅದರಾಚೆಗಿನ ಪ್ರದೇಶಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಉದ್ದೇಶವನ್ನು ಹೊಂದಿರುವ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ.

ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು (57 ಸ್ಥಾಪಕ ಸದಸ್ಯರು) AIIB ಬ್ಯಾಂಕಿನ ಸದಸ್ಯತ್ವವನ್ನು ಹೊಂದಿರುತ್ತವೆ.

 • ಪ್ರಧಾನ ಕಛೇರಿ ಬೀಜಿಂಗ್ ನಲ್ಲಿದೆ.
 • ಜನವರಿ 2016 ರಿಂದ ಈ ಬ್ಯಾಂಕ್ ಕಾರ್ಯಾರಂಭ ಮಾಡಿತು.

ಗುರಿ:

ಇಂದು ಸುಸ್ಥಿರ ಮೂಲಸೌಕರ್ಯ ಮತ್ತು ಇತರ ಉತ್ಪಾದಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ, ಕಾಲಾನಂತರದಲ್ಲಿ ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರುವ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸುವ ದೃಷ್ಟಿಯಿಂದ ಜನರು, ಸೇವೆಗಳು ಮತ್ತು ಮಾರುಕಟ್ಟೆಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ.

ಸದಸ್ಯತ್ವ:

 • ಈಗ 100 ಕ್ಕೂ ಹೆಚ್ಚು ಸದಸ್ಯರಿದ್ದಾರೆ.
 • ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಜಿ -20 ರಾಷ್ಟ್ರಗಳಲ್ಲಿ ಹದಿನಾಲ್ಕು ರಾಷ್ಟ್ರಗಳು AIIB ಸದಸ್ಯತ್ವವನ್ನು ಹೊಂದಿವೆ.

ಮತದಾನದ ಹಕ್ಕುಗಳು:

 • ಚೀನಾವು 26.61% ರಷ್ಟು ಮತಗಳನ್ನು ಹೊಂದುವ ಮೂಲಕ ಅತಿದೊಡ್ಡ ಷೇರುದಾರನಾಗಿದ್ದು, ನಂತರದ ಸ್ಥಾನದಲ್ಲಿ ಭಾರತ (7.6%), ರಷ್ಯಾ (6.01%) ಮತ್ತು ಜರ್ಮನಿ (4.2%) ಇವೆ.
 • ಪ್ರಾದೇಶಿಕ ಸದಸ್ಯರು ಬ್ಯಾಂಕಿನಲ್ಲಿ ಒಟ್ಟು ಮತದಾನದ 75% ರಷ್ಟು ಭಾಗವನ್ನು ಹೊಂದಿದ್ದಾರೆ.

AIIB ಯ ವಿವಿಧ ಅಂಗಗಳು:

ಆಡಳಿತ ಮಂಡಳಿ: (Board of Governors) ಆಡಳಿತ ಮಂಡಳಿಯು ಪ್ರತಿ ಸದಸ್ಯ ರಾಷ್ಟ್ರದಿಂದ ನೇಮಕಗೊಂಡ ಒಬ್ಬ ಗವರ್ನರ್‌ ಮತ್ತು ಒಬ್ಬ ಪರ್ಯಾಯ ಗವರ್ನರ್‌ ರನ್ನು ಒಳಗೊಂಡಿದೆ. ಗವರ್ನರ್‌ಗಳು ಮತ್ತು ಪರ್ಯಾಯ ಗವರ್ನರ್‌ಗಳು ನೇಮಕ ಮಾಡುವ ಸದಸ್ಯರ ಇಚ್ಛೆಯಮೇರೆಗೆ ಸೇವೆ ಸಲ್ಲಿಸುತ್ತಾರೆ.

ನಿರ್ದೇಶಕ ಮಂಡಳಿ: ( Board of Directors) ಅನಿವಾಸಿ ನಿರ್ದೇಶಕರ ಮಂಡಳಿಯು ಬ್ಯಾಂಕಿನ ಸಾಮಾನ್ಯ ಕಾರ್ಯಾಚರಣೆಗಳ ನಿರ್ದೇಶನದ ಜವಾಬ್ದಾರಿಯನ್ನು ಹೊಂದಿದ್ದು, ಆಡಳಿತ ಮಂಡಳಿಯಿಂದ ನಿಯೋಜಿಸಲಾದ ಎಲ್ಲಾ ಅಧಿಕಾರಗಳನ್ನು ಚಲಾಯಿಸುತ್ತದೆ.

ಅಂತರರಾಷ್ಟ್ರೀಯ ಸಲಹಾ ಸಮಿತಿ: (International Advisory Panel ) ಬ್ಯಾಂಕಿನ ಕಾರ್ಯತಂತ್ರಗಳು ಮತ್ತು ನೀತಿಗಳ ಬಗ್ಗೆ ಮತ್ತು ಸಾಮಾನ್ಯ ಕಾರ್ಯಾಚರಣೆಯ ವಿಷಯಗಳ ಬಗ್ಗೆ ಅಧ್ಯಕ್ಷ ಮತ್ತು ಹಿರಿಯ ನಿರ್ವಾಹಕರಿಗೆ ಸಹಾಯ ಮಾಡಲು ಬ್ಯಾಂಕ್ ಅಂತರರಾಷ್ಟ್ರೀಯ ಸಲಹಾ ಸಮಿತಿಯನ್ನು (IAP) ಸ್ಥಾಪಿಸಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಐಟಿ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಧ್ರುವೀಯ ಉಪಗ್ರಹ ಉಡ್ಡಯನ ವಾಹನ -C 51 ಉಡಾವಣೆ: (PSLV-C51 launch)


ಸಂದರ್ಭ:

ಪಿಎಸ್‌ಎಲ್‌ವಿ-ಸಿ 51 ಅನ್ನು ಇತ್ತೀಚೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಆಂಧ್ರಪ್ರದೇಶದಲ್ಲಿನ ಶ್ರೀಹರಿಕೋಟದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ (SHAR) ಯಶಸ್ವಿಯಾಗಿ ಉಡಾವಣೆ ಮಾಡಿತು.

 • ಇದು ಇಸ್ರೋದ ಉಡಾವಣಾ ವಾಹನವಾದ PSLV 53 ನೇ ಕಾರ್ಯಾಚರಣೆಯಾಗಿದೆ ಮತ್ತು ಅದರ ವಾಣಿಜ್ಯ ಘಟಕವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (NSIL) ಮೊದಲ ಮೀಸಲಾದ ಕಾರ್ಯಚರಣೆಯಾಗಿದೆ (dedicated mission).
 •  ಈ ಕಾರ್ಯಾಚರಣೆಯನ್ನು ಅಮೇರಿಕಾದ ಸ್ಪೇಸ್ ಫ್ಲೈಟ್ ಇಂಕ್, ನೊಂದಿಗಿನ ವಾಣಿಜ್ಯ ವ್ಯವಸ್ಥೆ ಯಡಿಯಲ್ಲಿ ಕೈಗೊಳ್ಳಲಾಯಿತು.

ಉಡಾವಣೆಗೊಂಡ ಉಪಗ್ರಹಗಳು:

ಇದು 19 ಉಪಗ್ರಹಗಳನ್ನು (ಬ್ರೆಜಿಲ್‌ನ ಭೂ ಪರಿವೀಕ್ಷಣಾ ಉಪಗ್ರಹ, ಅಮೇಜಾನಿಯಾ-1, ಮತ್ತು 18 ಇತರೆ  ಚಿಕ್ಕ ಸಹ- ಉಪಗ್ರಹಗಳನ್ನು – ಭಾರತದಿಂದ ಐದು ಮತ್ತು ಅಮೇರಿಕಾದ 13 ಉಪಗ್ರಹಗಳನ್ನು ಒಳಗೊಂಡಂತೆ ) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

 • ಅಮೆಜೋನಿಯಾ -1 (Amazonia-1) ಬ್ರೆಜಿಲಿಯನ್ ನಿರ್ಮಿತ ಮೊದಲ ಉಪಗ್ರಹವಾಗಿದ್ದು, ಇದು ಅಮೆಜಾನ್ ಕಾಡುಗಳ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ.
 •  ಅಮೆಜೋನಿಯಾ -1 ಅನ್ನು 758 ಕಿ.ಮೀ. ಎತ್ತರದಲ್ಲಿ, ಸೂರ್ಯ ಸ್ಥಾಯಿ ಧ್ರುವೀಯ ಕಕ್ಷೆಗೆ ಸೇರಿಸಲಾಯಿತು.

18 ಉಪಗ್ರಹಗಳಲ್ಲಿ, ಇಸ್ರೊದ ಇನ್‌ಸ್ಪೇಸ್‌ಇ ಕಾರ್ಯಕ್ರಮದ 4 ಉಪಗ್ರಹಗಳು ಇದ್ದವು: ಅವುಗಳು,

 • ಸ್ಪೇಸ್ ಕಿಡ್ಜ್ ಇಂಡಿಯಾ ನಿರ್ಮಿಸಿದ ಸತೀಶ್ ಧವನ್ ಸ್ಯಾಟ್ (SDSAT). ಇದು ತನ್ನ ಉನ್ನತ ಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ಹೊಂದಿದೆ.ಈ ಉಪಗ್ರಹವು ಏಕತೆಯನ್ನು ಮಾನವೀಯತೆಯ ಅತ್ಯುನ್ನತ ರೂಪ ಹಾಗೂ ಗೌರವ ಎಂದು ಸಾರುವ ಭಗವದ್ಗೀತೆಯ ಇ-ಕಾಪಿಯನ್ನು ಸಹ ಹೊಂದಿದ್ದು, ಮೆಮೊರಿ ಕಾರ್ಡ್‌ನಲ್ಲಿ ಈ ಇ-ಕಾಪಿ ಯನ್ನು ಇರಿಸಿ, ಕಕ್ಷೆಗೆ ಕಳುಹಿಸಲಾಗಿದೆ.
 • ವಿಕಿರಣ ಮಟ್ಟಗಳು, ಬಾಹ್ಯಾಕಾಶ ಹವಾಮಾನವನ್ನು ಅಧ್ಯಯನ ಮಾಡಲು ಮತ್ತು ದೀರ್ಘ-ವ್ಯಾಪ್ತಿಯ ಸಂವಹನ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಉದ್ದೇಶಿಸಿರುವ ನ್ಯಾನೊ-ಉಪಗ್ರಹ.
 • ರೇಡಿಯೊ ಪ್ರಸಾರ ಸೇವೆಗಳನ್ನು ಒದಗಿಸಲು ಮೂರು ಉಪಗ್ರಹಗಳ ಸಂಯೋಜನೆಯಾದ UNITYsat.
 • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನೆರವಿನಿಂದ ಅಭಿವೃದ್ಧಿ ಪಡಿಸಿದ, ಕಿರು ಉಪಗ್ರಹ. ಡಿಆರ್‌ಡಿಒ ಈ ಕಾರ್ಯಕ್ಕೆ ₹2.2 ಕೋಟಿ ಧನಸಹಾಯ ನೀಡಿದೆ.
 • ಈ ಉಪಗ್ರಹಕ್ಕೆ ‘ಸಿಂಧುನೇತ್ರ’ ಎಂದು ಹೆಸರಿಡಲಾಗಿದೆ.

‘ಸಿಂಧುನೇತ್ರ’ ವಿಶೇಷತೆ:

 • 15 ಕೆಜಿ ತೂಕದ ಉಪಗ್ರಹ
 • 45 ವಾಟ್‌ ಸೌರಶಕ್ತಿ ಉತ್ಪಾದನೆ ಸಾಮರ್ಥ್ಯ
 • ಸೋಲಾರ್ ಫಲಕ, ಬ್ಯಾಟರಿ, ಆಂಟೇನಾ ಅಳವಡಿಕೆ.
 • ಉಪಗ್ರಹದ ಕಾರ್ಯಸಾಮರ್ಥ್ಯ ಅವಧಿ 2 ವರ್ಷ.
 • ಹಡಗುಗಳ ಚಲನೆಯ ಮೇಲೆ ನಿಗಾ ಇಡುವ ಸಾಮರ್ಥ್ಯ.
 • ನೌಕೆಗಳಲ್ಲಿರುವ ‘ಸ್ವಯಂ ಪತ್ತೆ ಸಾಧನ’ದ ತರಂಗ ಗ್ರಹಿಸಿ ಕೇಂದ್ರಕ್ಕೆ ಮಾಹಿತಿ ರವಾನೆ.

honour

PSLV ಎಂದರೇನು?

 • ಧ್ರುವೀಯ ಉಪಗ್ರಹ ಉಡ್ಡಯನ ವಾಹನ (PSLV) ವು ಇಸ್ರೋ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಡಿಮೆ ವೆಚ್ಚದ ಉಡಾವಣಾ ವ್ಯವಸ್ಥೆಯಾಗಿದೆ.
 • ಇದು ಭೂ ಸ್ಥಾಯಿ ವರ್ಗವಣಾ ಕಕ್ಷೆ (Geo Synchronous Transfer Orbit), ಕೆಳಮಟ್ಟದ-ಭೂ ಕಕ್ಷೆ (Lower Earth Orbit), ಮತ್ತು ಧ್ರುವಿಯ ಸೂರ್ಯ ಸ್ಥಾಯಿ ಕಕ್ಷೆ (Polar Sun Synchronous Orbit) ಸೇರಿದಂತೆ ವಿವಿಧ ಕಕ್ಷೆಗಳನ್ನು ತಲುಪುವ ಮಧ್ಯಮ-ಉಡಾವಣಾ ವಾಹನಗಳ ವಿಭಾಗದಲ್ಲಿ ಬರುತ್ತದೆ.
 • ಪಿಎಸ್‌ಎಲ್‌ವಿಯ ಎಲ್ಲಾ ಕಾರ್ಯಾಚರಣೆಗಳನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿಯಂತ್ರಿಸಲಾಗುತ್ತದೆ.

PSLV ಮತ್ತು GSLV ನಡುವಿನ ವ್ಯತ್ಯಾಸ:

 • ಭಾರತವು ಧ್ರುವೀಯ ಉಪಗ್ರಹ ಉಡ್ಡಯನ ವಾಹನ (PSLV) ಮತ್ತು ಭೂ ಸ್ಥಾಯಿ ಉಪಗ್ರಹ ಉಡ್ಡಯನ ವಾಹನ (GSLV) ಎಂಬ 2 ಕಾರ್ಯಾಚರಣೆ ಉಡಾವಣಾ ವಾಹಕಗಳನ್ನು ಹೊಂದಿದೆ.
 • PSLV ಯನ್ನು ಕೆಳಮಟ್ಟದ-ಭೂ ಕಕ್ಷೆಯ (low-Earth Orbit satellites) ಉಪಗ್ರಹಗಳನ್ನು ಧ್ರುವೀಯ ಕಕ್ಷೆಗೆ ಮತ್ತು ಸೂರ್ಯ ಸ್ಥಾಯಿ ಕಕ್ಷೆಗೆ (sun synchronous orbits ) ಉಡಾಯಿಸಿ, ಸ್ಥಾಪಿಸಲು ಅಭಿವೃದ್ಧಿಪಡಿಸಲಾಗಿದೆ. ತುಂಬಾ ಹಿಂದಿನಿಂದ,ಭೂ ಸ್ಥಾಯಿ, ಚಂದ್ರ ಮತ್ತು ಅಂತರಗ್ರಹ ಬಾಹ್ಯಾಕಾಶ ನೌಕೆಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ PSLV ಯು ತನ್ನ ಬಹುಮುಖತೆಯನ್ನು ಸಾಬೀತುಪಡಿಸಿದೆ.
 • ಮತ್ತೊಂದೆಡೆ, GSLV ಅನ್ನು ಭಾರೀ ಗಾತ್ರದ INSAT ವರ್ಗದ ಭೂ ಸ್ಥಾಯಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಅಭಿವೃದ್ಧಿಪಡಿಸಲಾಯಿತು. GSLV ತನ್ನ ಮೂರನೇ ಮತ್ತು ಅಂತಿಮ ಹಂತದಲ್ಲಿ, ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಕ್ರಯೋಜೆನಿಕ್ ಉನ್ನತ ಹಂತವನ್ನು ಬಳಸುತ್ತದೆ.

342 ವಿದೇಶಿ ಉಪಗ್ರಹಗಳು ಕಕ್ಷೆಗೆ: ಇಸ್ರೊ ಇದುವರೆಗೆ ವಿದೇಶಗಳ 342 ಉಪಗ್ರಹಗಳನ್ನು ಬಾಹ್ಯಾಕಾಶದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಇವುಗ ಳಲ್ಲಿ ಖಾಸಗಿ ಕಂಪನಿಗಳ ಉಪಗ್ರಹ ಗಳು ಮತ್ತು ಸರ್ಕಾರಿ ಪ್ರಾಯೋಜಿತ ಉಪಗ್ರಹಗಳು ಸೇರಿವೆ. ಇಸ್ರೊ ಇದುವರೆಗೆ 34 ದೇಶಗಳ ಉಪಗ್ರಹ ಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.

53ನೇ ಪಿಎಸ್‌ಎಲ್‌ವಿ: ಪಿಎಸ್‌ಎಲ್‌ವಿ (ಧ್ರುವೀಯ ಉಪಗ್ರಹ ಉಡ್ಡಯನ ವಾಹನ) ನೌಕೆಯ 53ನೇ ಕಾರ್ಯಾ ಚರಣೆ ಇದಾಗಿದೆ. ಪಿಎಸ್ಎಲ್‌ವಿ-ಸಿ51 ಸ್ಟ್ರಾಪ್‌ಆನ್ ಮೋಟರ್‌ ಇದ್ದ ಮೂರನೇ ಕಾರ್ಯಾಚರಣೆಯಾಗಿದೆ.

  

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

 ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಕಾರ್ಯಕ್ರಮ (TEQIP):


(Technical Education Quality Improvement Programme – TEQIP)

ಸಂದರ್ಭ:

TEQIP [ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಕಾರ್ಯಕ್ರಮ] ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದ್ದು, 1,200 ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರು ಕೆಲಸದಿಂದ ಹೊರಗುಳಿದಿದ್ದಾರೆ ಮತ್ತು ಕೆಲವು ಗ್ರಾಮೀಣ ಕಾಲೇಜುಗಳು ತಮ್ಮ ಅರ್ಧದಷ್ಟು ಬೋಧಕವರ್ಗವನ್ನು ಕಳೆದುಕೊಂಡಿವೆ.

ಮುಂದಿನ ನಡೆ?

ತಾಂತ್ರಿಕ ಶಿಕ್ಷಣವನ್ನು ಸುಧಾರಿಸಲು ಕೇಂದ್ರವು ತನ್ನದೇ ಆದ ಮೆರೈಟ್ ಯೋಜನೆ (MERITE project) ಯನ್ನು TEQIP ರೀತಿಯ ಉದ್ದೇಶಗಳೊಂದಿಗೆ ಸಿದ್ಧಪಡಿಸುತ್ತಿದೆ, ಆದರೆ ಪ್ರಸ್ತುತ ಯೋಜನೆಯಡಿಯಲ್ಲಿ ಕಾರ್ಯ ನಿರತರಾಗಿರುವ ಅಧ್ಯಾಪಕರಿಗೆ ಇದು ಸಹಕಾರಿಯಾಗದು .

ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಕಾರ್ಯಕ್ರಮದ ಕುರಿತು:

 • 2002 ರಲ್ಲಿ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವು TEQIP ಯೋಜನೆಯನ್ನು ಪ್ರಾರಂಭಿಸಿತು.
 • ವಿಶ್ವಬ್ಯಾಂಕ್ ನೆರವಿನೊಂದಿಗೆ ಯೋಜನೆ ಪ್ರಾರಂಭವಾಯಿತು.
 • ಭಾರತದಲ್ಲಿ ಕಡಿಮೆ ಆದಾಯದ ರಾಜ್ಯಗಳು ಮತ್ತು ವಿಶೇಷ ವರ್ಗ ರಾಜ್ಯಗಳಲ್ಲಿ (States and Special Category States -SCS) ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಒಳಗೊಂಡಿರುವ ಕ್ರಮಗಳು:

ಸಾಂಸ್ಥಿಕ ಆಧಾರಿತ: (Institution based)

ರಾಷ್ಟ್ರೀಯ ಮಾನ್ಯತಾ ಮಂಡಳಿ(NBA) ಯ ಮೂಲಕ ಕೋರ್ಸ್‌ಗಳ ಮಾನ್ಯತೆ, ಆಡಳಿತದ ಸುಧಾರಣೆಗಳು, ಪ್ರಕ್ರಿಯೆಗಳ ಸುಧಾರಣೆ, ಡಿಜಿಟಲ್ ಉಪಕ್ರಮಗಳು, ಕಾಲೇಜುಗಳಿಗೆ ಸ್ವಾಯತ್ತತೆಯನ್ನು ಭದ್ರಪಡಿಸುವುದು.

ವಿದ್ಯಾರ್ಥಿ ಆಧಾರಿತ: (Student based)

ಬೋಧನೆಯ ಗುಣಮಟ್ಟವನ್ನು ಸುಧಾರಿಸುವುದು, ಶಿಕ್ಷಕರ ತರಬೇತಿ, ತರಗತಿ ಕೊಠಡಿಗಳನ್ನು ನವೀಕರಿಸುವುದು, ಪಠ್ಯಕ್ರಮದ ಪರಿಷ್ಕರಣೆ, ಉದ್ಯಮದೊಂದಿಗೆ ಸಂವಹನ, ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಇಂಟರ್ನ್‌ಶಿಪ್, ವಿದ್ಯಾರ್ಥಿಗಳಿಗೆ ಉದ್ಯಮ-ಸಂಬಂಧಿತ ಕೌಶಲ್ಯಗಳಲ್ಲಿ ತರಬೇತಿ ನೀಡುವುದು, ಗೇಟ್ ನಂತಹ ಪರೀಕ್ಷೆಗಳಿಗೆ ಸಿದ್ಧರಾಗಿಸುವುದು ಇತ್ಯಾದಿ.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ರಾಷ್ಟ್ರೀಯ ವಿಜ್ಞಾನ ದಿನ:


(National Science Day)

ಸಂದರ್ಭ:

ಫೆಬ್ರವರಿ 28 ಅನ್ನು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ (NSD) ಎಂದು ಆಚರಿಸಲಾಗುತ್ತದೆ.

Sir C.V. ರಾಮನ್ ರವರಿಗೆ  ನೊಬೆಲ್ ಪ್ರಶಸ್ತಿ ದೊರೆಯಲು ಕಾರಣವಾದ ‘ರಾಮನ್ ಪರಿಣಾಮದ’  ಸಂಶೋಧನೆಯ ಸ್ಮರಣೆಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

 • ಮೊದಲ ರಾಷ್ಟ್ರೀಯ ವಿಜ್ಞಾನ ದಿನವನ್ನು ಫೆಬ್ರವರಿ 28, 1987 ರಂದು ಆಚರಿಸಲಾಯಿತು.

ಥೀಮ್ / ವಿಷಯ: “ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಭವಿಷ್ಯ: ಶಿಕ್ಷಣ, ಕೌಶಲ್ಯ ಮತ್ತು ಕೆಲಸದ ಮೇಲೆ ಪರಿಣಾಮಗಳು”.

Theme: “Future of STI: Impacts on Education, Skills, and Work”.

ರಾಮನ್ ಪರಿಣಾಮ ಎಂದರೆನು?

1928 ರಲ್ಲಿ ಪ್ರಖ್ಯಾತ ಭೌತಶಾಸ್ತ್ರಜ್ಞ ಸರ್ ಚಂದ್ರಶೇಖರ ವೆಂಕಟ ರಾಮನ್ ಕಂಡುಹಿಡಿದ ಸ್ಪೆಕ್ಟ್ರೋಸ್ಕೋಪಿಯಲ್ಲಿನ ಒಂದು ವಿದ್ಯಮಾನ.

ಪಾರಕ ಮಾಧ್ಯಮದ ಮೂಲಕ ಏಕವರ್ಣೀ ಬೆಳಕು ಹಾಯುವಾಗ ಅದರ ತರಂಗ ದೂರಕ್ಕೂ ಚೆದುರಿದ ಬೆಳಕಿನ ತರಂಗ ದೂರಕ್ಕೂ ವ್ಯತ್ಯಾಸವಿರುವುದು’ಇದು ರಾಮನ್ ಪರಿಣಾಮ. ತನ್ನಿಮಿತ್ತ ಪ್ರತಿವರ್ಷವೂ ಅಂದು ಭಾರತದ ಪಾಲಿಗೆ ‘ರಾಷ್ಟ್ರೀಯ ವಿಜ್ಞಾನ ಹಬ್ಬ’.

 • ಬೆಳಕಿನ ಕಿರಣವು ರಾಸಾಯನಿಕ ಸಂಯುಕ್ತ ವೊಂದರ ಧೂಳು-ಮುಕ್ತ, ಪಾರದರ್ಶಕ ಮಾದರಿಯನ್ನು ಹಾದುಹೋದಾಗ, ಒಳಬರುವ ಕಿರಣವನ್ನು ಹೊರತುಪಡಿಸಿ ಬೇರೆ ದಿಕ್ಕುಗಳಲ್ಲಿ ಬೆಳಕಿನ ಒಂದು ಸಣ್ಣ ಭಾಗವು ಹೊರಹೊಮ್ಮುತ್ತದೆ.
 • ಈ ಚದುರಿದ ಬೆಳಕಿನಲ್ಲಿ ಹೆಚ್ಚಿನ ಕಿರಣಗಳು ಬದಲಾಗದ ತರಂಗಾಂತರವನ್ನು ಹೊಂದಿವೆ. ಆದಾಗ್ಯೂ, ಒಂದು ಸಣ್ಣ ಭಾಗವು ಘಟನೆಯ ಬೆಳಕಿನಿಂದ ಭಿನ್ನವಾದ ತರಂಗಾಂತರಗಳನ್ನು ಹೊಂದಿದೆ; ಅದರ ಉಪಸ್ಥಿತಿಯು ರಾಮನ್ ಪರಿಣಾಮದ ಫಲಿತಾಂಶವಾಗಿದೆ.

Scattering_liquid

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಹಿಮಾಚಲ ಪ್ರದೇಶದಲ್ಲಿನ ಹಿಮ ಚಿರತೆ ಕುರಿತ ಅಧ್ಯಯನ:


(Study on snow leopard in Himachal Pradesh)

ಸಂದರ್ಭ:

ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳು 73 ಹಿಮ ಚಿರತೆಗಳಿಗೆ (Panthera uncia)  ಆಶ್ರಯ ತಾಣ ವಾಗಿರಬಹುದು ಎಂದು ತಪ್ಪಿಸಿಕೊಳ್ಳಲಾಗದ (ಸಿಕ್ಕದ) ಪ್ರಾಣಿಗಳ ವೈಜ್ಞಾನಿಕ ಎಣಿಕೆಯ ಆಧಾರದ ಮೇಲೆ ಇತ್ತೀಚಿನ ಅಧ್ಯಯನವು ಹೇಳಿದೆ.

ಆವಾಸಸ್ಥನಗಳು:

ಹಿಮ ಚಿರತೆಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಈ ಐದು ರಾಜ್ಯಗಳಲ್ಲಿ ಉನ್ನತ ಹಿಮಾಲಯ ಮತ್ತು ಟ್ರಾನ್ಸ್-ಹಿಮಾಲಯನ್ ಭೂದೃಶ್ಯದಲ್ಲಿ ವಾಸಿಸುತ್ತವೆ.

 • ಹಿಮಾಚಲ ಪ್ರದೇಶದಲ್ಲಿ, ಹಿಮ ಚಿರತೆಯ ಆವಾಸಸ್ಥಾನವು ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್ ಜಿಲ್ಲೆಗಳ ಬಹುತೇಕ ಭಾಗವನ್ನು ಒಳಗೊಂಡಿದೆ.
 • ಇದರ ಸಂಭಾವ್ಯ ಆವಾಸಸ್ಥಾನವು ಶಿಮ್ಲಾ, ಕುಲ್ಲು, ಚಂಬಾ ಮತ್ತು ಕಾಂಗ್ರಾ ಜಿಲ್ಲೆಗಳ ಎತ್ತರದ / ಉನ್ನತ ಪ್ರದೇಶಗಳಿಗೂ ವ್ಯಾಪಿಸಿದೆ.
 • ಈ ಪ್ರದೇಶಗಳಲ್ಲಿ ಹೆಚ್ಚಿನವು ದೂರಸ್ಥವಾಗಿದ್ದು, (remote) ಚಳಿಗಾಲದಲ್ಲಿ ಈ ಪ್ರದೇಶಗಳಿಗೆ ಹೋಗಲು ಸೀಮಿತ ಪ್ರವೇಶದ ಅವಕಾಶವಿರುವುದು ಒಂದು ಹೆಚ್ಚುವರಿ ಸವಾಲಾಗಿದೆ.

ಅಧ್ಯಯನ ನೀಡಿದ ಸಲಹೆಗಳು:

ಸ್ಥಳೀಯ ಸಮುದಾಯಗಳ ಕಾಳಜಿಗಳನ್ನು ಸಂರಕ್ಷಣಾ ಯೋಜನೆಯಲ್ಲಿ ಸೇರಿಸಿಕೊಂಡರೆ, ಹಿಮ ಚರಿತೆಗಳ ಸಂರಕ್ಷಣೆಯಲ್ಲಿ ಅವರು ಪ್ರಬಲ ಮತ್ತು ನಂಬಿಕಸ್ಥ ಮಿತ್ರ  ರಾಗಿರುತ್ತರೆ / ಸಂರಕ್ಷಕ ರಾಗಿರುತ್ತಾರೆ.

ಭಾರತದಲ್ಲಿ ಹಿಮ ಚಿರತೆ ಸಂರಕ್ಷಣೆ:

 • ಹಿಮಚಿರತೆ ಯೋಜನೆ (PSL) ಮೂಲಕ ಭಾರತ ಹಿಮ ಚಿರತೆ ಮತ್ತು ಅದರ ಆವಾಸಸ್ಥಾನವನ್ನು ಸಂರಕ್ಷಿಸುತ್ತಿದೆ.
 • ಭಾರತವು 2013 ರಿಂದ ಜಾಗತಿಕ ಹಿಮ ಚಿರತೆ ಮತ್ತು ಪರಿಸರ ವ್ಯವಸ್ಥೆ ಸಂರಕ್ಷಣೆ (Global Snow Leopard and Ecosystem Protection -GSLEP) ಕಾರ್ಯಕ್ರಮದ ಪಕ್ಷವಾಗಿದೆ / ಸದಸ್ಯನಾಗಿದೆ.
 • ಸಂರಕ್ಷಣೆಗಾಗಿ, ಭಾರತವು ಮೂರು ದೊಡ್ಡ ಭೂದೃಶ್ಯಗಳನ್ನು ಗುರುತಿಸಿದೆ, ಅವುಗಳೆಂದರೆ, ಲಡಾಕ್ ಮತ್ತು ಹಿಮಾಚಲ ಪ್ರದೇಶದಾದ್ಯಂತ ಹೆಮಿಸ್-ಸ್ಪಿಟಿ; ಉತ್ತರಾಖಂಡದಲ್ಲಿ ನಂದಾದೇವಿ ಗಂಗೋತ್ರಿ; ಮತ್ತು ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಾದ್ಯಂತ, ಕಾಂಚೆನ್ ಜೊಂಗಾ – ತವಾಂಗ್.
 • ಅಂತರ್ಗತ ಮತ್ತು ಭಾಗವಹಿಸುವ ವಿಧಾನವನ್ನು ಉತ್ತೇಜಿಸುವ ಮೂಲಕ ಹಿಮ ಚಿರತೆಗಳನ್ನು ಮತ್ತು ಅವುಗಳ ಆವಾಸಸ್ಥಾನವನ್ನು ಸಂರಕ್ಷಿಸಲು ಹಿಮ ಚಿರತೆ ಯೋಜನೆ ಯನ್ನು (PSL) 2009 ರಲ್ಲಿ ಪ್ರಾರಂಭಿಸಲಾಯಿತು.
 • ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಚೇತರಿಕೆ ಕಾರ್ಯಕ್ರಮದಡಿಯಲ್ಲಿ ಹಿಮ ಚಿರತೆಯು 21 ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಬೇಧಗಳ ಪಟ್ಟಿಯಲ್ಲಿದೆ.

ಸಂರಕ್ಷಣೆ:

 • ಹಿಮ ಚಿರತೆಗಳನ್ನು IUCN ‘ ಅಪಾಯಕ್ಕೆ ಒಳಗಾಗಬಲ್ಲ’ (Vulnerable) ಪ್ರಾಣಿ ಎಂದು ವರ್ಗೀಕರಿಸಿದ್ದು ಮತ್ತು ಇದನ್ನು ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972 ರ ಅನುಸೂಚಿ I ರಲ್ಲಿ ಸೇರಿಸಲಾಗಿದೆ.
 • ಜಾಗತಿಕವಾಗಿ ಮತ್ತು ಭಾರತದಲ್ಲಿ ಈ ಪ್ರಭೇದಗಳಿಗೆ ಅತ್ಯುನ್ನತ ಸಂರಕ್ಷಣಾ ಸ್ಥಾನಮಾನವನ್ನು ಒದಗಿಸುವ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ (Convention on International Trade in Endangered Species –CITES) ಮತ್ತು ವಲಸೆ ಪ್ರಭೇದಗಳ ಸಮಾವೇಶ (Convention on Migratory Species –CMS) ಗಳ ಅನುಬಂಧ I ರಲ್ಲಿ ಇವುಗಳನ್ನು ಪಟ್ಟಿಮಾಡಲಾಗಿದೆ.

ಭಾರತ ಪ್ರಾರಂಭಿಸಿದ ಸಂರಕ್ಷಣಾ ಪ್ರಯತ್ನಗಳು ಹೀಗಿವೆ:

ಹಿಮ ಚಿರತೆ ಯೋಜನೆ (PSL): ಇದು ಸ್ಥಳೀಯ ಸಮುದಾಯಗಳನ್ನು ಸಂಪೂರ್ಣವಾಗಿ ಒಳಗೊಂಡು,    ಹಿಮ ಚಿರತೆಗಳ ಸಂರಕ್ಷಣೆಗೆ ಒಂದು ಅಂತರ್ಗತ ಮತ್ತು ಭಾಗವಹಿಸುವ ವಿಧಾನವನ್ನು ಉತ್ತೇಜಿಸುತ್ತದೆ.

ಸುರಕ್ಷಿತ ಹಿಮಾಲಯ: ಜಾಗತಿಕ ಪರಿಸರ ಸೌಲಭ್ಯ (Global Environment Facility – GEF)– ಮತ್ತು     ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಈ ಯೋಜನೆಗೆ, ಹೆಚ್ಚಿನ ಉನ್ನತ ಪ್ರದೇಶದ ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೆ ಸ್ಥಳೀಯ ಸಮುದಾಯಗಳ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಧನಸಹಾಯ ಮಾಡುತ್ತಿವೆ. ಈ ಯೋಜನೆಯು ಈಗ ಹಿಮ ಚಿರತೆ ವ್ಯಾಪ್ತಿಯ ನಾಲ್ಕು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಅವುಗಳೆಂದರೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಸಿಕ್ಕಿಂ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಆಸ್ಟ್ರೇಲಿಯಾದ ಪ್ರಾಚೀನ ಮೂಲನಿವಾಸಿ ರಾಕ್ ಕಲೆ:

(Australia’s Oldest Aboriginal rock art)

 • ಕೆಲವು ಪ್ರಾಚೀನ ಕಣಜಗಳಿಂದ ಸ್ವಲ್ಪ ಸಹಾಯ ಪಡೆಯುವ ಮೂಲಕ (with a little help from some ancient wasps) – ಆಸ್ಟ್ರೇಲಿಯಾದ ಹಳೆಯ ಅಖಂಡ ರಾಕ್ ಕಲೆಯಾಗಿ, 17,000 ವರ್ಷಗಳ ಹಿಂದೆ ಮೂಲನಿವಾಸಿ ಕಲಾವಿದರು ರಚಿಸಿದ ಕಾಂಗರೂ ವರ್ಣಚಿತ್ರವನ್ನು ಗುರುತಿಸಲಾಗಿದೆ.
 • ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿನ ಬಂಡೆಯ ಆಶ್ರಯದ ಇಳಿಜಾರಿನ ಚಾವಣಿಯ ಮೇಲೆ ಎರಡು ಮೀಟರ್ ಉದ್ದದ (ಆರು-ಅಡಿ) ಕಲಾಕೃತಿಯನ್ನು ಆರಂಭಿಕ ನೈಸರ್ಗಿಕ ಶೈಲಿಯಲ್ಲಿ (an early naturalistic style) ಚಿತ್ರಿಸಲಾಗಿದೆ, ಇದು ಸಾಮಾನ್ಯವಾಗಿ ಪ್ರಾಣಿಗಳ ಜೀವನ ಗಾತ್ರದ ನಿರೂಪಣೆಯನ್ನು ಹೊಂದಿರುತ್ತದೆ.

ಗೇಮಿಂಗ್ ನಲ್ಲಿ ಶ್ರೇಷ್ಠತೆಯ ಕೇಂದ್ರ:

(Centre of Excellence in gaming)

ಐಐಟಿ ಬಾಂಬೆ ಸಹಯೋಗದೊಂದಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಗೇಮಿಂಗ್ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ.

ಖುಜ್ಲಿ ಘರ್: (khujli ghar)

 • ಇದು ಸ್ಥಳೀಯ ಮರದ ಕತ್ತರಿಸಿದ ಕೊಂಬೆಗಳಿಂದ ಮಾಡಿದ ಇಕ್ಕಟ್ಟಾದ, ತ್ರಿಕೋನಾಕಾರದ ಪಂಜರವಾಗಿದ್ದು ಇದು ಚರ್ಮವನ್ನು ಕೆರಳಿಸುತ್ತದೆ ಅಥವಾ ಚರ್ಮಕ್ಕೆ ಕಿರುಕುಳವುಂಟುಮಾಡುತ್ತದೆ.
 • ಇದು ಅಪರಾಧವನ್ನು ಪತ್ತೆ ಹಚ್ಚಲು ಬಳಸುವ ಸಾಂಪ್ರದಾಯಿಕ ಶಿಕ್ಷೆಯ ರೂಪವಾಗಿದೆ.
 • ನಾಗಾಲ್ಯಾಂಡ್‌ನ ಕೆಲವು ಹಳ್ಳಿಗಳು ಈ ರೀತಿಯ ಶಿಕ್ಷೆಯನ್ನು ಪುನರುಜ್ಜೀವನಗೊಳಿಸಲು / ಪುನಃ ಜಾರಿಗೊಳಿಸಲು ಪ್ರಯತ್ನಿಸುತ್ತಿವೆ.
 • ಅಂತಹ ತುರಿಕೆ ಪಂಜರಗಳನ್ನು ನಾಗಾಮೀಸ್‌ ಭಾಷೆಯಲ್ಲಿ ಖುಜ್ಲಿ ಘರ್ ಎಂದು ಕರೆಯಲಾಗುತ್ತದೆ. ಆದರೆ ಪ್ರತಿ ನಾಗ ಸಮುದಾಯವೂ ತನ್ನದೇ ಆದ  ಹೆಸರನ್ನು ಹೊಂದಿದೆ. ನಾಗಾಲ್ಯಾಂಡ್‌ನ ಪ್ರಮುಖ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಅಯೋಸ್ (The Aos) ಇದನ್ನು ಶಿ-ಕಿ  (Shi-ki )ಎಂದು ಕರೆಯುತ್ತದೆ, ಇದರರ್ಥ ಮಾಂಸದ-ಮನೆ ಎಂದಾಗಿದೆ.
 • ಪಂಜರವನ್ನು ಸಾಮಾನ್ಯವಾಗಿ ಹಳ್ಳಿಯ ಕೇಂದ್ರ ಸ್ಥಳದಲ್ಲಿ, ಸಾಮಾನ್ಯವಾಗಿ ಮೊರುಂಗ್ ಅಥವಾ ವಸತಿ ನಿಲಯದ ಮುಂದೆ ಇರಿಸಲಾಗುತ್ತದೆ, ಕಾರಣ ತಪ್ಪಿತಸ್ಥರು ಸಂಪೂರ್ಣವಾಗಿ ಸಾರ್ವಜನಿಕ ವೀಕ್ಷಣೆಗೆ ಲಭ್ಯ ಇರುವಂತೆ ಮಾಡುವುದಾಗಿದೆ.
 • ಪಂಜರವನ್ನು, ಮಸಾಂಗ್-ಫಂಗ್ ( Masang-fung) ಎಂಬ ಸ್ಥಳೀಯ ಮರದ ಕೊಂಬೆಗಳಿಂದ ಮಾಡಲಾಗಿದ್ದು, ಅದು ಉಂಟುಮಾಡುವ ಕಿರಿಕಿರಿಯಿಂದ ಜನರು ಅದರಿಂದ ದೂರ ಇರಲು ಬಯಸುತ್ತಾರೆ. ಇದು ಹಸ್ತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ಪಂಜರಗಳನ್ನು ಮಾಡುವ ಜನರು ಜಾಗರೂಕರಾಗಿರಬೇಕು.

khujli_ghar

ಜಲಶಕ್ತಿ ಸಚಿವಾಲಯದ ‘ಮಳೆ ನೀರು ಸಂಗ್ರಹ’  ಅಭಿಯಾನ್:

(Jal Shakti Abhiyan ‘catch the rain’)

 • ಈ ಅಭಿಯಾನವನ್ನು ಜಲಶಕ್ತಿ ಸಚಿವಾಲಯವು ಪ್ರಾರಂಭಿಸಲಿದೆ.
 • ಇದು, ನಮ್ಮ ಸುತ್ತಮುತ್ತಲಿನ ನೀರಿನ ಮೂಲಗಳನ್ನು ಸ್ವಚ್ಛ ಗೊಳಿಸುವ ಮತ್ತು ಮಳೆನೀರನ್ನು ಸಂರಕ್ಷಿಸುವ ಉದ್ದೇಶದ 100 ದಿನಗಳ ಅಭಿಯಾನವಾಗಿದೆ.

ಬಿರ್ ಚಿಲಾರೈ:  (Bir Chilarai)

 • ಬಿರ್ ಚಿಲಾರೈ (ಕ್ರಿ.ಶ. 1510 – 1571) ಒಬ್ಬ ಪರಾಕ್ರಮಿ ಯೋಧ ಮತ್ತು ಅಸ್ಸಾಮೀಸ್ ಕೋಚ್ ರಾಜವಂಶದ ಸೇನಾಧಿಪತಿ.
 • ಅವರು ಕಾಮತಾ ಸಾಮ್ರಾಜ್ಯದ ರಾಜನಾದ, ನಾರಾ ನಾರಾಯಣ್ ಅವರ ಕಿರಿಯ ಸಹೋದರರಾಗಿದ್ದರು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos