Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26 ಫೆಬ್ರವರಿ 2021

 

ದಿನಾಂಕ – 26 ಫೆಬ್ರವರಿ 2021

 ಪರಿವಿಡಿ :

  ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಶ್ರೀ ಕೃಷ್ಣ ದೇವರಾಯ.

2. ಸ್ವಚ್ಛ ಐಕಾನಿಕ್ (ಸಾಂಪ್ರದಾಯಿಕ) ಸ್ಥಳಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ‘ಸಾಂಕ್ರಾಮಿಕ ಸಮಯದಲ್ಲಿ ಪೀಳಿಗೆ’ಗಳು ಎದುರಿಸುತ್ತಿರುವ ತೊಂದರೆಗಳು: CSE.

2. ಟ್ರಂಪ್ ಅವರ ವಲಸೆ ವೀಸಾ ನಿಷೇಧ ನೀತಿಯನ್ನು ರದ್ದುಪಡಿಸಿದ ಬೈಡನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬ್ಯಾಡ ಬ್ಯಾಂಕ್.

2. ಓವರ್ ಟಾಪ್ (OTT) ವೇದಿಕೆಗಳ ವಿಷಯವನ್ನು ಮೇಲ್ವಿಚಾರಣೆ ಮಾಡಲಿರುವ ಸರ್ಕಾರ.

3. ಪರಾರಿಯಾದ ಆರ್ಥಿಕ ಅಪರಾಧಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಚೀನಾದ ‘ಖರೀದಿ, ಸಾಮರ್ಥ್ಯ,ಸಮಾನತೆ’.(PPP).

2. ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಿರುವ ಹರಿಯಾಣ ಸರ್ಕಾರ.

3. ಚೆಕ್ ಬೌನ್ಸ್ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಯೋಜನೆ, ಸರ್ವೋಚ್ಚ ನ್ಯಾಯಾಲಯ.

4. ಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರ (INCOIS)

5. ಬಿಯಾಸ್ ನದಿ.

6. ಮನ್ನಾತು ಪದ್ಮನಾಭನ್.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

 ಶ್ರೀ ಕೃಷ್ಣ ದೇವರಾಯ:


ಸಂದರ್ಭ:

ಇತ್ತೀಚೆಗೆ, ವಿಜಯನಗರದ ರಾಜ ಶ್ರೀ ಕೃಷ್ಣದೇವರಾಯರ ಮರಣದ ದಿನಾಂಕದ ಬಗ್ಗೆ ಮಾಹಿತಿ ನೀಡುವ ಮೊದಲ ಶಾಸನವು ಕರ್ನಾಟಕ ರಾಜ್ಯದ ತುಮಕುರು ಜಿಲ್ಲೆಯ ಹೊನ್ನೇನಹಳ್ಳಿಯಲ್ಲಿ ಪತ್ತೆಯಾಗಿದೆ.

ಈ ಶಾಸನವನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ.

ಶಾಸನದ ಪ್ರಕಾರ:

 • ದಕ್ಷಿಣದಿಂದ ಆಳಿದ ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬನಾದ ಕೃಷ್ಣದೇವರಾಯ 1529 ರ ಅಕ್ಟೋಬರ್ 17ರ ರವಿವಾರದಂದು ನಿಧನರಾದರು ಮತ್ತು ಕಾಕತಾಳೀಯವಾಗಿ ಈ ದಿನದಂದು ಚಂದ್ರಗ್ರಹಣ ಸಂಭವಿಸಿದೆ.
 • ತುಮಕೂರಿನ ದೇವತೆಯಾದ ವೀರಪ್ರಸನ್ನ ಹನುಮಂತ ದೇವರನ್ನು ಪೂಜಿಸಿದ್ದಕ್ಕಾಗಿ ತುಮಕೂರಿನ ಹೊನ್ನೇನಹಳ್ಳಿ ಎಂಬ ಹಳ್ಳಿಯನ್ನು ಉಡುಗೊರೆಯಾಗಿ ನೀಡಲಾಯಿತು.

ವಿಜಯನಗರದ ಅರಸ ಶ್ರೀಕೃಷ್ಣ ದೇವರಾಯರ ಕುರಿತು:

 • ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯ 1509–1529ರ ಅವಧಿಯಲ್ಲಿ ಆಳ್ವಿಕೆ ನಡೆಸಿದರು.
 • ಅವರು ತುಳುವ ರಾಜವಂಶಕ್ಕೆ ಸೇರಿದವರು.
 • ಕೃಷ್ಣದೇವರಾಯರು, ಕನ್ನಡ ರಾಜ್ಯ ರಮಾರಮಣ, ಆಂಧ್ರ ಭೋಜ ಮತ್ತು ಮೂರು ರಾಯರ ಗಂಡ ಎಂಬ ಬಿರುದುಗಳನ್ನು ಹೊಂದಿದ್ದರು.
 • ಬಿಜಾಪುರದ ಸುಲ್ತಾನರು, ಗೋಲ್ಕೊಂಡ, ಬಹಮನಿ ಸುಲ್ತಾನರು ಮತ್ತು ಒಡಿಶಾದ ರಾಜರನ್ನು ಸೋಲಿಸುವ ಮೂಲಕ, ಅವರು ಭಾರತೀಯ ಪರ್ಯಾಯ ದ್ವೀಪದ ಪ್ರಮುಖ ಆಡಳಿತಗಾರರಾಗಿದ್ದರು.
 • ದಕ್ಷಿಣ ಭಾರತದ ಶ್ರೇಷ್ಠ ಗಣಿತಜ್ಞ ನೀಲಕಂಠ ಸೋಮಯಾಜಿ ಕೃಷ್ಣದೇವರಾಯರ ರಾಜ್ಯದಲ್ಲಿ ಜೀವಿಸಿದ್ದರು.
 • ಕೃಷ್ಣದೇವರಾಯರ ಆಳ್ವಿಕೆಯಲ್ಲಿ, ಪೋರ್ಚುಗೀಸ್ ಪ್ರಯಾಣಿಕರಾದ ಡೊಮಿಂಗೊ ​​ಪೇಸ್(Domingo Paes) ಮತ್ತು ಫೆರ್ನಾವೊ ನೂನಿಜ್ (Fernao Nuniz) ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದರು.

  

 

 

ವಿಷಯಗಳು: ಮಹಿಳೆಯರ ಪಾತ್ರ ಮತ್ತು ಮಹಿಳಾ ಸಂಘಟನೆ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು.

ಸ್ವಚ್ಛ ಐಕಾನಿಕ್ (ಸಾಂಪ್ರದಾಯಿಕ) ಸ್ಥಳಗಳು (SIP):


(Swachh Iconic Places)

ಸಂದರ್ಭ:

ಐಕಾನಿಕ್ (ಸಾಂಪ್ರದಾಯಿಕ) ಪರಂಪರೆ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ‘ಸ್ವಚ್ಛ ಪ್ರವಾಸಿ ತಾಣಗಳಾಗಿ’ ಪರಿವರ್ತಿಸಲು ಕೈಗೆತ್ತಿಕೊಂಡಿರುವ ಸ್ವಚ್ಛ ಪ್ರವಾಸಿ ತಾಣಗಳ ನಾಲ್ಕನೇ ಹಂತದ ಅಡಿಯಲ್ಲಿ ಈ ಕೆಳಗಿನ 12 ದೇಶೀಯ ತಾಣಗಳ ಆಯ್ಕೆಯನ್ನು ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಕಟಿಸಿದೆ.

ಆ 12 ತಾಣಗಳೆಂದರೆ:

 • ಅಜಂತ ಗುಹೆಗಳು, ಮಹಾರಾಷ್ಟ್ರ.
 • ಸಾಂಚಿ ಸ್ತೂಪ, ಮಧ್ಯಪ್ರದೇಶ.
 • ಕುಂಭಲ್ಗಡ ಕೋಟೆ, ರಾಜಸ್ಥಾನ.
 • ಜೈಸಲ್ಮೇ ಕೋಟೆ, ರಾಜಸ್ಥಾನ.
 • ರಾಮದೇವ್ರಾ, ಜೈಸಲ್ಮೇರ್, ರಾಜಸ್ಥಾನ.
 • ಗೋಲ್ಕೊಂಡ ಕೋಟೆ, ಹೈದರಾಬಾದ್, ತೆಲಂಗಾಣ.
 • ಸೂರ್ಯ ದೇವಾಲಯ, ಕೊನಾರ್ಕ್, ಒಡಿಶಾ.
 • ರಾಕ್ ಗಾರ್ಡನ್, ಚಂಡೀಗಡ ..
 • ದಾಲ್ ಸರೋವರ, ಶ್ರೀನಗರ, ಜಮ್ಮು ಮತ್ತು ಕಾಶ್ಮೀರ.
 • ಬಂಕೆ ಬಿಹಾರಿ ದೇವಸ್ಥಾನ, ಮಥುರಾ, ಉತ್ತರ ಪ್ರದೇಶ.
 • ಆಗ್ರಾ ಕೋಟೆ, ಆಗ್ರಾ, ಉತ್ತರ ಪ್ರದೇಶ.
 • ಕಾಲಿಗಾಟ್ ದೇವಸ್ಥಾನ, ಪಶ್ಚಿಮ ಬಂಗಾಳ.

ಸ್ವಚ್ಛ ಐಕಾನಿಕ್ (ಸಾಂಪ್ರದಾಯಿಕ) ಸ್ಥಳಗಳ ಕುರಿತು:

 ಏನಿದು S I P?

ಇದು ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಉಪಕ್ರಮವಾಗಿದೆ.

ಉದ್ದೇಶ: ಇದು ಐಕಾನಿಕ್ ಆವರಣದ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಸ್ಥಾಪಿಸುವ ಗುರಿ ಹೊಂದಿದ್ದು ಇದರಿಂದ ಎಲ್ಲಾ ಸಂದರ್ಶಕರು ಇದರ ಲಾಭ ಪಡೆಯಬಹುದು ಮತ್ತು ಅವರ ಮನೆಗಳಲ್ಲಿಯೂ ಸಹ ಸ್ವಚ್ಛತೆಯ ಸಂದೇಶವನ್ನು  ಮುಂದುವರೆಸುತ್ತಾರೆ ಎಂಬ ಆಶಯವನ್ನು ಹೊಂದಿರುವುದಾಗಿದೆ.

ಯೋಜನೆಯ ಅನುಷ್ಠಾನ:

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪ್ರವಾಸೋದ್ಯಮ ಸಚಿವಾಲಯ, ಸಂಸ್ಕೃತಿ ಸಚಿವಾಲಯ ಮತ್ತು ಸಂಬಂಧಿಸಿದ ರಾಜ್ಯ / ಕೇಂದ್ರ  ಸರ್ಕಾರಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಿಸುತ್ತಿದೆ ಮತ್ತು ಮುಖ್ಯವಾಗಿ, ಸಾರ್ವಜನಿಕ ವಲಯ ಮತ್ತು ಖಾಸಗಿ ಕಂಪನಿಗಳು ಪಾಲುದಾರಿಕೆಯಲ್ಲಿ ತೊಡಗಿಕೊಂಡಿವೆ.

ಸ್ವಚ್ಛ ಐಕಾನಿಕ್ (ಸಾಂಪ್ರದಾಯಿಕ) ಸ್ಥಳಗಳ’ ಅಡಿಯಲ್ಲಿ ಪ್ರಾರಂಭಿಸಲಾದ ಉಪಕ್ರಮಗಳು:

ಸುಧಾರಿತ ಒಳಚರಂಡಿ ಮೂಲಸೌಕರ್ಯ, ಒಳಚರಂಡಿ ಸಂಸ್ಕರಣಾ ಘಟಕ (STP) ಸ್ಥಾಪನೆ, ಸ್ಥಳಾಂತರಿಸುವ ಸೌಲಭ್ಯಗಳು, ಸುಧಾರಿತ ನೈರ್ಮಲ್ಯ ಸೌಲಭ್ಯಗಳು, ನೀರು ಮಾರಾಟ ಮಾಡುವ ಯಂತ್ರಗಳು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (SLWM), ಮೂಲಸೌಕರ್ಯ ಪುನರ್ನಿರ್ಮಾಣ, ಬೆಳಕು, ಉದ್ಯಾನವನಗಳ ಸುಂದರೀಕರಣ, ರಸ್ತೆಗಳ ನಿರ್ವಹಣೆ, ಸುಧಾರಿತ ಸಾರಿಗೆ ಸೌಲಭ್ಯಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

‘ಸಾಂಕ್ರಾಮಿಕ ಸಮಯದಲ್ಲಿ ಪೀಳಿಗೆ’ಗಳು ಎದುರಿಸುತ್ತಿರುವ ತೊಂದರೆಗಳು: CSE:


(‘Pandemic generation’ hit hard: CSE)

ಸಂದರ್ಭ:

ಇತ್ತೀಚೆಗೆ, ‘ಪರಿಸರ ಸ್ಥಿತಿ ವರದಿ’, 2021  (State of Environment Report, 2021) ಅನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ಬಿಡುಗಡೆ ಮಾಡಿದೆ.

ವರದಿಯ ಪ್ರಮುಖ ಅಂಶಗಳು:

ಕೋವಿಡ್ -19 ರ ಪರಿಣಾಮಗಳು:

ಅತಿದೊಡ್ಡ ಕಾಳಜಿ: ‘ಸಾಂಕ್ರಾಮಿಕ ಸಮಯದಲ್ಲಿ ಜನಿಸಿದ ಪೀಳಿಗೆಯ’ ಮೂಲಕ ಪರಿಣಾಮಗಳನ್ನು ಎದುರಿಸಲು ಭಾರತ ಸಿದ್ಧವಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಪ್ರಕಾರ, 375 ಮಿಲಿಯನ್ ಭಾರತೀಯ ಮಕ್ಕಳ (ನವಜಾತ ಶಿಶುವಿನಿಂದ 14 ವರ್ಷ ವಯಸ್ಸಿನ) ಆರೋಗ್ಯವು ದೀರ್ಘಕಾಲದವರೆಗೆ ಪರಿಣಾಮಕ್ಕೆ ಒಳಗಾಗಲಿದೆ. ಭವಿಷ್ಯದಲ್ಲಿ, ಈ ಮಕ್ಕಳು ಅಪೌಷ್ಟಿಕತೆ, ಅನಕ್ಷರತೆ ಮತ್ತು ಅನೇಕ ಕಾಣದ ತೊಂದರೆಗಳನ್ನು ಎದುರಿಸಬೇಕಾಗಬಹುದು.

 • ಈ ಪೀಳಿಗೆಯು, ಕಡಿಮೆ ತೂಕದಿಂದ ಚಡಪಡಿಸುವುದು, ಕುಂಠಿತ ಬೆಳವಣಿಗೆ, ಮಕ್ಕಳ ಮರಣ ಪ್ರಮಾಣದಲ್ಲಿನ ಹೆಚ್ಚಳ, ಮತ್ತು ಶಿಕ್ಷಣದ ನಷ್ಟ ಮತ್ತು ಕೆಲಸದ ಉತ್ಪಾದಕತೆಯಂತಹ ಸವಾಲುಗಳನ್ನು ಎದುರಿಸಬಹುದು.
 • ವಿಶ್ವಾದ್ಯಂತ 500 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಭಾರತದವರು.
 • ಕೋವಿಡ್ -19 ರ ಪ್ರಭಾವದಿಂದಾಗಿ, ವಿಶ್ವಾದ್ಯಂತ 115 ಮಿಲಿಯನ್ ಜನರು ತೀವ್ರ ಬಡತನಕ್ಕೆ ತಳ್ಳಲ್ಪಡಬಹುದು. ಅವರಲ್ಲಿ ಹೆಚ್ಚಿನವರು ದಕ್ಷಿಣ ಏಷ್ಯಾದವರು.
 • ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸುವಲ್ಲಿ ಭಾರತ 192 ದೇಶಗಳಲ್ಲಿ 117 ನೇ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಭಾರತವು ಪಾಕಿಸ್ತಾನವನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲ ದೇಶಗಳಿಗಿಂತ ಹಿಂದುಳಿದಿದೆ.

ಪರಿಸರ ಪರಿಸ್ಥಿತಿಗಳು:

 • 2009 ಮತ್ತು 2018 ರ ನಡುವೆ ಭಾರತದ ಗಾಳಿ, ನೀರು ಮತ್ತು ಭೂಮಿ ಹೆಚ್ಚು ಕಲುಷಿತಗೊಂಡಿದೆ.
 • ದೇಶದ 88 ಪ್ರಮುಖ ಕೈಗಾರಿಕಾ ಸಮೂಹಗಳಲ್ಲಿ, 35 ಕೈಗಾರಿಕಾ ಸಮೂಹಗಳು ಒಟ್ಟಾರೆ ಪರಿಸರ ನಾಶವನ್ನು ದಾಖಲಿಸಿವೆ, 33 ಕೈಗಾರಿಕಾ ಸಮೂಹಗಳು ಗಾಳಿಯ ಗುಣಮಟ್ಟದಲ್ಲಿ ಇಳಿಕೆ ತೋರಿಸಿವೆ, ಕೈಗಾರಿಕಾ ಸಮೂಹಗಳಲ್ಲಿ 45 ಹೆಚ್ಚು ಕಲುಷಿತ ನೀರನ್ನು ಹೊಂದಿದ್ದು ಕೈಗಾರಿಕಾ ಸಮೂಹಗಳಲ್ಲಿ 17ಕ್ಲಸ್ಟರ್ಗಳ ಭೂ ಮಾಲಿನ್ಯವು ಕೆಟ್ಟದಾಗಿದೆ.
 • ಮಹಾರಾಷ್ಟ್ರದ ತಾರಾಪುರವು ಅತ್ಯಂತ ಕಲುಷಿತ ಕ್ಲಸ್ಟರ್ ಆಗಿ ಹೊರಹೊಮ್ಮಿದೆ.
 • ಈ ಪ್ರದೇಶಗಳಲ್ಲಿ, ವಿಶೇಷವಾಗಿ ಗಂಭೀರವಾಗಿ ಕಲುಷಿತ ಪ್ರದೇಶಗಳಾಗಿ ಈಗಾಗಲೇ ಗುರುತಿಸಲ್ಪಟ್ಟಿರುವ ಪ್ರದೇಶಗಳಲ್ಲಿ, ವರ್ಷಗಳಿಂದ ಮಾಲಿನ್ಯವನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸಾಕಷ್ಟು ಕ್ರಮ ಕೈಗೊಂಡಿಲ್ಲ, ಎಂದು ಈ ಅಂಕಿಅಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ.

ವಿವಿಧ ರಾಜ್ಯಗಳ ಕಾರ್ಯಕ್ಷಮತೆ:

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದರ ಆಧಾರದ ಮೇಲೆ ಶ್ರೇಯಾಂಕದ ಆಧಾರದ ಮೇಲೆ:

 • ಕೇರಳ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣಗಳು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿವೆ.
 • ಬಿಹಾರ, ಜಾರ್ಖಂಡ್, ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ಉತ್ತರ ಪ್ರದೇಶ ಅತಿ ಕೆಟ್ಟ ಪ್ರದರ್ಶನ ನೀಡಿದ ರಾಜ್ಯಗಳಾಗಿವೆ.

 

ವಿಷಯಗಳು:   ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಟ್ರಂಪ್ ಅವರ ವಲಸೆ ವೀಸಾ ನಿಷೇಧ ನೀತಿಯನ್ನು  ರದ್ದುಪಡಿಸಿದ ಬೈಡನ್:


ಸಂದರ್ಭ:

ಇತ್ತೀಚೆಗೆ, ಡೊನಾಲ್ಡ್ ಟ್ರಂಪ್ ಅವರ ಹೊಸ ವಲಸೆಗಾರರ ​​ವೀಸಾ ಅಮಾನತು ಆದೇಶವನ್ನು ಬೈಡನ್ ಆಡಳಿತ ರದ್ದುಪಡಿಸಿದೆ. ಕಳೆದ ವರ್ಷ ಏಪ್ರಿಲ್ ಅಂತ್ಯದಿಂದ ಈ ಆದೇಶ ಜಾರಿಯಲ್ಲಿತ್ತು.

 • ಈ ರದ್ದುಗೊಳಿಸುವ ಆದೇಶದ ಮೂಲಕ, ಕೋವಿಡ್ -19 ರ ಹಿನ್ನೆಲೆಯಲ್ಲಿ, ಅಮೇರಿಕಾದ ಕಾರ್ಮಿಕ ಮಾರುಕಟ್ಟೆಯ ಸುರಕ್ಷತೆಯ ಆಧಾರದ ಮೇಲೆ ಅಮೇರಿಕಾಗೆ ಬರುವ ಕೆಲವು ವಲಸಿಗರು ಮತ್ತು ವಲಸಿಗರಲ್ಲದವರ ಪ್ರವೇಶವನ್ನು ಅಮಾನತುಗೊಳಿಸಲಾಗಿತ್ತು.

ಈಗಿನ ಸಮಸ್ಯೆ ಏನು?

 • ಆದಾಗ್ಯೂ, ಅಧ್ಯಕ್ಷ ಬೈಡನ್ ರವರು, ಟ್ರಂಪ್ ಆಡಳಿತವು ಜಾರಿಗೆ ತಂದ ಎಚ್ 1-ಬಿ (ನುರಿತ ಕಾರ್ಮಿಕ), ಎಲ್-ವೀಸಾ (ಅಂತರ-ಕಂಪನಿ ವರ್ಗಾವಣೆ) ಮತ್ತು ಇತರ ಹಲವಾರು ಕಾರ್ಯಗಳು ಮತ್ತು ವಿನಿಮಯ/ ಸಂದರ್ಶಕರ (ವಿನಿಮಯ) ವೀಸಾ ವಿಭಾಗಗಳ ಮೇಲೆ ವಿಧಿಸಿದ ನಿಷೇಧವನ್ನು ಹಿಂತೆಗೆದು ಕೊಂಡಿಲ್ಲ. ಈ ವೀಸಾ ವಿಭಾಗಗಳನ್ನು ಕಳೆದ 2020ರ ಜೂನ್ 24 ರಿಂದ ಜಾರಿಗೆ ತರಲಾಗಿದೆ.
 • ಎಚ್ 1-ಬಿ ವೀಸಾಗಳನ್ನು ಮುಖ್ಯವಾಗಿ ಐಟಿ ವಲಯದ ಕಾರ್ಮಿಕರಿಗೆ ನೀಡಲಾಗುತ್ತದೆ, ಮತ್ತು ಈ ವರ್ಗದ ಅಡಿಯಲ್ಲಿ ನೀಡಲಾಗುವ ಹೆಚ್ಚಿನ ವೀಸಾಗಳನ್ನು – 70% ಕ್ಕಿಂತ ಹೆಚ್ಚಿನ ವಿಸಾಗಳನ್ನು – ಇತ್ತೀಚಿನ ವರ್ಷಗಳಲ್ಲಿ ಭಾರತೀಯ ನಾಗರಿಕರಿಗೆ ನೀಡಲಾಗಿದೆ.

H-1B, H-2B, J ಮತ್ತು L ಮತ್ತು ಇತರ ಕೆಲಸದ ವೀಸಾಗಳು ಯಾವವು?

ಐಟಿ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ನುರಿತ ಮತ್ತು ಅಗ್ಗದ ಉದ್ಯೋಗಿಗಳನ್ನು ಪೂರೈಸಲು ಯುಎಸ್ ಆಡಳಿತವು ಪ್ರತಿವರ್ಷ ನಿರ್ದಿಷ್ಟ ಸಂಖ್ಯೆಯ ವೀಸಾಗಳನ್ನು ನೀಡುತ್ತದೆ. ಈ ಮೂಲಕ, ಯುಎಸ್ ಹೊರಗಿನ ಕಂಪನಿಗಳು ಗ್ರಾಹಕರ ಬೇಡಿಕೆಯ ಮೇರೆಗೆ ತಮ್ಮ ಉದ್ಯೋಗಿಗಳನ್ನು ಅಮೆರಿಕಾದಲ್ಲಿ ಕೆಲಸ ಮಾಡಲು ಕಳುಹಿಸುತ್ತವೆ.

 • H-1B ವೀಸಾ: ಇದು ಅಮೆರಿಕದಲ್ಲಿ ಕೆಲಸ ಮಾಡುವ 6 ವರ್ಷಗಳ ಕಾಲ ವಿದೇಶಿ ರಾಷ್ಟ್ರೀಯ ಅಥವಾ ಕಾರ್ಮಿಕರಿಗೆ ನೀಡಲಾಗುವ ವಲಸೆರಹಿತ ವೀಸಾ. ಈ ವೀಸಾದ ಅಡಿಯಲ್ಲಿ ಉದ್ಯೋಗಿಗೆ ಪದವಿ ಮತ್ತು ಯಾವುದೇ ಒಂದು ಕ್ಷೇತ್ರದಲ್ಲಿ ಪರಿಣತಿ ಬೇಕು.
 • L 1 ವೀಸಾ: ಅಮೇರಿಕಾದ ಕಂಪನಿಯೊಂದರಲ್ಲಿ ವರ್ಗಾವಣೆಯಾದ ನುರಿತ ವಿದೇಶಿ ಉದ್ಯೋಗಿಗಳು ಮತ್ತು ವ್ಯವಸ್ಥಾಪಕರ ಶ್ರೇಣಿಯನ್ನು ಹೊಂದಿರುವ ಜನರಿಗೆ 7 ವರ್ಷಗಳ ಅವಧಿಗೆ ಕಂಪನಿಯೊಂದಕ್ಕೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.
 • H-2 Bವೀಸಾ: ಅಮೆರಿಕದಲ್ಲಿ ಆಹಾರ ಮತ್ತು ಕೃಷಿ ಕಾರ್ಮಿಕರು ಉದ್ಯೋಗವನ್ನು ಪಡೆಯಲು ಅನುಮತಿಸುತ್ತದೆ.
 • J -1 ವೀಸಾ: ಇದು ವಿದ್ಯಾರ್ಥಿಗಳಿಗೆ ಕೆಲಸ ಮತ್ತು ಅಧ್ಯಯನದ ದೃಷ್ಟಿಯಿಂದ ಬೇಸಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುವ ವೀಸಾ ಆಗಿದೆ.

 

ವಿಷಯಗಳು :   ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೂಢೀಕರಣ , ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ಬ್ಯಾಡ್ ಬ್ಯಾಂಕ್:


(Bad bank)

ಸಂದರ್ಭ:

ಭಾರತೀಯ ಬ್ಯಾಂಕುಗಳ ಒಕ್ಕೂಟ/ ಸಂಘವು  (IBA) ಕೆಟ್ಟ ಸಾಲಗಳನ್ನು ಗುರುತಿಸಲು ಪ್ರಾರಂಭಿಸಿದೆ. ಈ ಕೆಟ್ಟ ಸಾಲಗಳನ್ನು ಕೇಂದ್ರ ನೀಡುವ ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಬಹುದು.

500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಕೆಟ್ಟ ಸಾಲಗಳನ್ನು ಪಟ್ಟಿ ಮಾಡಲು ಮತ್ತು “ಸಮಸ್ಯೆಯ ಪ್ರಮಾಣವನ್ನು ಗುರುತಿಸಲು” ಮತ್ತು “ಸಂಸ್ಥೆಗೆ ಅಗತ್ಯವಾದ ಆರಂಭಿಕ ಬಂಡವಾಳದ ಬಗ್ಗೆ ಸ್ಪಷ್ಟತೆ ಪಡೆಯಲು” ಭಾರತೀಯ ಬ್ಯಾಂಕುಗಳ ಸಂಘವು ಎಲ್ಲಾ ಬ್ಯಾಂಕುಗಳಿಗೆ ಪತ್ರ ಬರೆದಿದೆ.

ಹಿನ್ನೆಲೆ:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021 ರ ಫೆಬ್ರವರಿ 1 ರಂದು ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ ಬ್ಯಾಡ್ ಬ್ಯಾಂಕ್ ಅನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಪರ್ಯಾಯ ಹೂಡಿಕೆ ನಿಧಿಗೆ (alternative investment funds- AIF) ಮಾರಾಟ ಮಾಡಲು ಉದ್ದೇಶಿತ ಘಟಕವು ಬ್ಯಾಂಕುಗಳಿಂದ ಒತ್ತಡದ ಸಾಲಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

 ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆ:

 • ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ವಸೂಲಾಗದ ಸಾಲ ಮತ್ತು ಇತರ ಅನುತ್ಪಾದಕ ಆಸ್ತಿಗಳನ್ನು ‘ಬ್ಯಾಡ್‌ ಬ್ಯಾಂಕ್’ ಖರೀದಿಸುತ್ತದೆ. ಬ್ಯಾಂಕ್‌ಗಳ ಬ್ಯಾಲೆನ್ಸ್‌ ಶೀಟ್‌ನಲ್ಲಿ ಲೆಕ್ಕಚುಕ್ತವಾಗುತ್ತದೆ.
 • ಗಮನಾರ್ಹವಾದ ಲಾಭರಹಿತ ಸ್ವತ್ತುಗಳನ್ನು ಹೊಂದಿರುವ ಸಂಸ್ಥೆಯು ಈ ಹಿಡುವಳಿಗಳನ್ನು ಕೆಟ್ಟ ಬ್ಯಾಂಕ್‌ಗೆ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತದೆ.
 • ಅಂತಹ ಸ್ವತ್ತುಗಳನ್ನು ಕೆಟ್ಟ ಬ್ಯಾಂಕ್‌ಗೆ ವರ್ಗಾಯಿಸುವ ಮೂಲಕ, ಮೂಲ ಸಂಸ್ಥೆಯು ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಸರಿಪಡಿಸಬಹುದು -ಆದರೂ ಅದನ್ನು ಬರೆಡಿದುವಂತೆ ಒತ್ತಾಯಿಸಲಾಗುತ್ತದೆ ಅಥವಾ ಆದರೂ ಅವರು ಸ್ವತ್ತುಗಳ ಅಂದಾಜು ಮೌಲ್ಯವನ್ನು ಕಡಿತಗೊಳಿಸಬೇಕಾಗುತ್ತದೆ.
 • ಬ್ಯಾಡ್‌ ಬ್ಯಾಂಕ್‌ಗಳ ಪರಿಕಲ್ಪನೆ ಹೊಸತೇನೂ ಅಲ್ಲ. ಬ್ಯಾಂಕ್‌ಗಳು ದಿವಾಳಿಯಾಗುವ ಸ್ಥಿತಿ ಬಂದಾಗ ಮತ್ತು NPA ಪ್ರಮಾಣ ಹೆಚ್ಚಾದಾಗ ವಿಶ್ವದ ವಿವಿಧ ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಆರ್ಥಿಕತೆ ಕುಸಿತದ ಹಾದಿಯಲ್ಲಿ ಇದ್ದಾಗ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಈಗ ಭಾರತವೂ ಈ ಹಾದಿ ಹಿಡಿದಿದೆ.
 • ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಹೀಗಾಗಿ ಇಂತಹ ವ್ಯವಸ್ಥೆ ಹೆಚ್ಚು ಚಾಲ್ತಿಯಲ್ಲಿ ಇದೆ. ಭಾರತದಲ್ಲೂ ಈಗ ಇಂತಹದ್ದೇ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಉದಾ: ಸರಳ ಭಾಷೆಯಲ್ಲಿ ಹೇಳುವುದಾದರೆ (ಕೇವಲ ಪರಿಕಲ್ಪನೆ ಮಾತ್ರ) A ಎಂಬ ಬ್ಯಾಂಕ್‌ B ಎಂಬ ಕಾರ್ಪೊರೇಟ್ ಸಂಸ್ಥೆಗೆ ಸಾಲ ಕೊಟ್ಟಿದೆ ಎಂದುಕೊಳ್ಳೋಣ. B ಸಂಸ್ಥೆ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗುತ್ತದೆ. ಆಗ A ಎಂಬ ಬ್ಯಾಂಕ್‌ ತನ್ನ ಇಡೀ ಸಾಲವನ್ನು (ಅಕೌಂಟ್) ಬ್ಯಾಡ್‌ ಬ್ಯಾಂಕ್‌ಗೆ ಮಾರಿಬಿಡುತ್ತದೆ. ಅಲ್ಲಿಂದಾಚೆಗೆ B ಸಂಸ್ಥೆಯಿಂದ ಸಾಲ ವಸೂಲಿ ಮಾಡಿಕೊಳ್ಳುವುದು ಬ್ಯಾಡ್‌ ಬ್ಯಾಂಕ್‌ನ ಹೊಣೆಯಾಗುತ್ತದೆ. ಸಾಲ ಕೊಟ್ಟಿದ್ದ ಮೂಲ ಬ್ಯಾಂಕ್‌ನ ಲೆಕ್ಕದ ಪುಸ್ತಕಗಳಿಂದ ಎನ್‌ಪಿಎ ಹೊಣೆಗಾರಿಕೆ ಮಾಯವಾಗುತ್ತದೆ.

ಕೆಟ್ಟ ಸಾಲಗಳ ಬಗ್ಗೆ ಏಕೆ ಕಾಳಜಿ ವಹಿಸಬೇಕು?

 • ಭಾರತೀಯ ಬ್ಯಾಂಕುಗಳ ಕೆಟ್ಟ ಸಾಲಗಳ ರಾಶಿಯು ಆರ್ಥಿಕತೆಯ ಮೇಲೆ ಭಾರಿ ಒತ್ತಡವನ್ನು ಸೃಷ್ಟಿಸುತ್ತದೆ.
 • ಇದು ಬ್ಯಾಂಕುಗಳ ಲಾಭದ ಸೋರಿಕೆಗೆ ಕಾರಣವಾಗುತ್ತದೆ ಹಾಗೂ ಲಾಭಾಂಶಗಳು ಕರಗುವುದರಿಂದ, ಕೆಟ್ಟ ಸಾಲಗಳ ಬಹುಪಾಲು ಹೊರೆಯನ್ನು ಹೊಂದಿರುವ ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ತಮ್ಮ ಬೆಳವಣಿಗೆಯನ್ನು ವೃದ್ಧಿಸಲು ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.
 • ಸಾಲದ ಬೆಳವಣಿಗೆಯ ಅನುಪಸ್ಥಿತಿಯಲ್ಲಿ, ಆರ್ಥಿಕತೆಯು 8% ಬೆಳವಣಿಗೆಯ ದರವನ್ನು ಸಾಧಿಸಲು ಅಡ್ಡಿಯಾಗುತ್ತದೆ. ಆದ್ದರಿಂದ, ಕೆಟ್ಟ ಸಾಲಗಳ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ. ಅಥವಾ, ಕೆಟ್ಟ ಸಾಲದ ಸಮಸ್ಯೆಗೆ ಪರಿಣಾಮಕಾರಿ ಪರಿಹಾರದ ಅಗತ್ಯವಿದೆ.

ಪ್ರಯೋಜನಗಳು:

 • ಇದು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಕೆಟ್ಟ ಸಾಲಗಳನ್ನು ವರ್ಗಾವಣೆ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳು ತಮ್ಮ ಪ್ರಮುಖ ವ್ಯವಹಾರವಾದ ಸಾಲ ಚಟುವಟಿಕೆಗಳತ್ತ ಗಮನ ಹರಿಸಲು ಸಹಾಯಕವಾಗುತ್ತದೆ.
 • ದೊಡ್ಡ ಸಾಲಗಾರರು ಅನೇಕ ಸಾಲಗಾರರನ್ನು ಹೊಂದಿದ್ದಾರೆ.ಆದ್ದರಿಂದ ಸಾಲಗಳು ಒಂದು ಏಜೆನ್ಸಿಯಲ್ಲಿ ಕೇಂದ್ರೀಕೃತವಾಗಿರುವುದರಿಂದ ಕೆಟ್ಟ ಬ್ಯಾಂಕ್ ಸಮನ್ವಯದ ಸಮಸ್ಯೆಯನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ.
 • ವಿವಿಧ ಬ್ಯಾಂಕುಗಳನ್ನು ಬೇರ್ಪಡಿಸುವ ಮೂಲಕ, ಕೆಟ್ಟ ಬ್ಯಾಂಕ್ ಸಾಲಗಾರರೊಂದಿಗೆ ವೇಗವಾಗಿ ರಾಜಿ ಮಾಡಿಕೊಳ್ಳಬಹುದು.
 • ಇದು ಸಾಲಗಾರರೊಂದಿಗೆ ಉತ್ತಮ ಚೌಕಾಶಿ ಮಾಡಲು ಮತ್ತು ಅವರ ವಿರುದ್ಧ ಹೆಚ್ಚು ಕಠಿಣ ಕ್ರಮ ಕೈಗೊಳ್ಳಲು ಕಾರಣವಾಗಬಹುದು.
 • ಇದು ಹಣಕ್ಕಾಗಿ ಸರ್ಕಾರದ ಕಡೆಗೆ ಮಾತ್ರ ನೋಡುವುದಕ್ಕಿಂತ ಸಾಂಸ್ಥಿಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಬಹುದು.

ಅಂತಹ ಬ್ಯಾಂಕುಗಳ ಕುರಿತ ಕಾಳಜಿಯ ವಿಷಯಗಳು ಅಥವಾ ದೋಷಗಳು ಯಾವುವು?

 • ಉದಾಹರಣೆಗೆ, ಬ್ಯಾಂಕೊಂದು ಕೆಟ್ಟ ಸಾಲಗಳನ್ನು ಮಾರುತ್ತದೆ ಎಂದು ಭಾವಿಸೋಣ. ನಂತರ, ಇದು ಹಣದ ಕಡಿತವನ್ನು ಒಪ್ಪಿಕೊಳ್ಳಬೇಕಾಗುತ್ತದೆ.ಏಕೆಂದರೆ 100 ರೂ ಕೆಟ್ಟದಾದಾಗ, ಮರಳಿ ನಿರೀಕ್ಷಿಸಬಹುದಾದ ನಿಜವಾದ ಮೊತ್ತವು 100 ರೂ.ಗಿಂತ ಕಡಿಮೆಯಿರುತ್ತದೆ ಮತ್ತು ಅದು ಹಣದ ಕಡಿತಕ್ಕೆ ಕಾರಣವಾಗುತ್ತದೆ. ಅದು P&L (ಲಾಭ ಮತ್ತು ನಷ್ಟ) ಮೇಲೆ ಪರಿಣಾಮ ಬೀರುತ್ತದೆ.
 • ಆದ್ದರಿಂದ, ಆ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸುವವರೆಗೆ, ಹೊಸ ರಚನೆಯನ್ನು ಅಸ್ತಿತ್ವಕ್ಕೆ ತರುವುದು ಸಮಸ್ಯೆಯನ್ನು ಪರಿಹರಿಸುವಲ್ಲಿ ಶಕ್ತಿಯುತವಾಗಿರುವುದಿಲ್ಲ,/ ಸಮರ್ಥವಾಗಿರುವುದಿಲ್ಲ ಎ೦ದು ಹೇಳಲಾಗುತ್ತಿದೆ.

ಮುಂದಿನ ದಾರಿ:

 • ಚಿಲ್ಲರೆ ವಹಿವಾಟು, ಸಗಟು ವಹಿವಾಟು, ರಸ್ತೆಗಳು ಮತ್ತು ಜವಳಿ ಮುಂತಾದ ಕ್ಷೇತ್ರಗಳಲ್ಲಿನ ಕಂಪನಿಗಳು ಒತ್ತಡವನ್ನು ಎದುರಿಸುತ್ತಿವೆ ಎಂದು ಕೆ ವಿ ಕಾಮತ್ ಸಮಿತಿ ಹೇಳಿದೆ.
 • ಕೋವಿಡ್‌ ಪೂರ್ವದಲ್ಲಿ ಒತ್ತಡದಲ್ಲಿದ್ದ ಕ್ಷೇತ್ರಗಳಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು(NBFC), ವಿದ್ಯುತ್, ಉಕ್ಕು, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳು ಸೇರಿವೆ.
 • ಈ ಹಿನ್ನೆಲೆಯಲ್ಲಿ ಕೆಟ್ಟ ಬ್ಯಾಂಕನ್ನು ಸ್ಥಾಪಿಸುವುದು ನಿರ್ಣಾಯಕವೆಂದು ಪರಿಗಣಿಸಲಾಗಿದೆ.

ಇಲ್ಲೆಲ್ಲಾ ಈಗಾಗಲೇ ಬ್ಯಾಡ್‌ ಬ್ಯಾಂಕ್ ಇದೆ:

ಈಗಾಗಲೇ ಅಮೆರಿಕ, ಫಿನ್‌ಲೆಂಡ್, ಇಂಡೊನೇಷಿಯಾ, ಬೆಲ್ಜಿಯಂ ಮತ್ತು ಸ್ವಿಡನ್‌ಗಳಲ್ಲಿ ಈಗಾಗಲೇ ಅಂಥ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಬ್ಯಾಡ್‌ ಬ್ಯಾಂಕ್‌ಗಳ ಯಶಸ್ಸಿಗೆ ಅನೇಕ ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಮುಖ್ಯವಾದುದು ಸರ್ಕಾರದ ಪಾತ್ರ. ನೀತಿ, ಲೆಕ್ಕಪತ್ರಗಳ ನಿರ್ವಹಣೆ ಮತ್ತು ಹಣಕಾಸು ನೆರವು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಬ್ಯಾಡ್‌ ಬ್ಯಾಂಕ್‌ ಎಂದರೇನು?

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ವಸೂಲಾಗದ ಸಾಲಗಳ (NPA) ನಿರ್ವಹಣೆ ಮಾಡಲೆಂದೇ ಸ್ಥಾಪಿಸುವ ಪ್ರತ್ಯೇಕ ಬ್ಯಾಂಕ್‌ ಅನ್ನುಬ್ಯಾಡ್‌ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ NPAಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ಮಾಡಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಾಲ ನೀಡಲು ಬ್ಯಾಂಕ್‌ಗಳ ಬಳಿ ಹಣ ಉಳಿಯುತ್ತದೆ. ಬ್ಯಾಂಕ್‌ಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ.

ಎಲ್ಲೆಲ್ಲಿ ಬ್ಯಾಡ್‌ ಬ್ಯಾಂಕ್‌ ಇದೆ, ಸ್ಥಿತಿಗತಿ ಏನು?

 • ಸದ್ಯ ವಿಶ್ವದಲ್ಲಿ ಎಲ್ಲಿಯೂ ಸರ್ಕಾರದ ಬೆಂಬಲದ ಬ್ಯಾಡ್‌ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ಪರಿಹಾರವಾದ ನಂತರ ಅವುಗಳನ್ನು ಮುಚ್ಚಿವೆ.
 • 1980ರಲ್ಲಿ ಅಮೆರಿಕದ ಮೆಲ್ಲನ್ ಬ್ಯಾಂಕ್‌ ದಿವಾಳಿ ಹಂತ ತಲುಪಿದಾಗ ಬ್ಯಾಡ್‌ ಬ್ಯಾಂಕ್‌ ಅನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಡಲಾಗಿತ್ತು. ಈ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿದ್ದು, 1988ರಲ್ಲಿ. ಈ ಬ್ಯಾಡ್‌ ಬ್ಯಾಂಕ್‌ನ ಸ್ಥಾಪನೆಯ ಉದ್ದೇಶ ಈಡೇರಿದ ನಂತರ 1995ರಲ್ಲಿ ಅದನ್ನು ರದ್ದುಪಡಿಸಲಾಯಿತು. ಭಾರತದಲ್ಲಿ 2004ರಲ್ಲಿ IDBI ಅನ್ನು ಎನ್‌ಪಿಎ ಇಂದ ರಕ್ಷಿಸಲು ಮತ್ತು ಬ್ಯಾಂಕ್‌ ಆಗಿ ಪರಿವರ್ತಿಸಲು ‘ಸ್ಟ್ರೆಸ್ಡ್‌ ಅಸೆಟ್ಸ್ ಸ್ಟೆಬಿಲೈಸೇಷನ್‌ ಫಂಡ್‌’ ಅನ್ನು ಸ್ಥಾಪಿಸಲಾಗಿತ್ತು. ಈ ನಿಧಿಯ ಸ್ಥಾಪನೆಯಿಂದ ಐಡಿಬಿಐಗೆ ₹ 9,000 ಕೋಟಿ ಲಭ್ಯವಾಗಿತ್ತು.
 • 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಕೆಲವು ಬ್ಯಾಂಕ್‌ಗಳು ತಮ್ಮದೇ ಪ್ರತ್ಯೇಕ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡಿದ್ದವು. ಕೆಲವು ದೇಶಗಳಲ್ಲಿ ಸರ್ಕಾರಗಳೇ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬ್ಯಾಂಕ್‌ ಆಫ್ ಅಮೆರಿಕ, ಸಿಟಿಗ್ರೂಪ್ ಬ್ಯಾಂಕ್‌, ಸ್ವೀಡ್‌ಬ್ಯಾಂಕ್‌ಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬೆಲ್ಜಿಯಂ, ಐರ್ಲೆಂಡ್‌, ಇಂಡೊನೇಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಆರ್ಥಿಕತೆ ಪ್ರಗತಿಯತ್ತ ಹೊರಳಿದ ನಂತರ ಈ ಬ್ಯಾಡ್‌ ಬ್ಯಾಂಕ್‌ಗಳನ್ನು ಮುಚ್ಚಲಾಯಿತು.

ಭಾರತಕ್ಕೆ  ಬ್ಯಾಡ್‌ ಬ್ಯಾಂಕ್‌ನ ಅಗತ್ಯವಿದೆಯೇ?

 • ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆ ಎಂದು ಭಾರತದ ಬ್ಯಾಂಕ್‌ಗಳು, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಸಲ್ಲಿಸಿರುವ ಮನವಿಯಲ್ಲಿ ವಿವರಿಸಿವೆ. ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಕಡಿಮೆಯಾಗುತ್ತದೆ. ಬ್ಯಾಲೆನ್ಸ್ ಶೀಟ್‌ನಲ್ಲಿ ಸಮತೋಲನ ಇರುತ್ತದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಉತ್ತಮವಾಗುತ್ತದೆ. ಸಾಲ ನೀಡಿಕೆಯಿಂದ ಆರ್ಥಿಕತೆಗೆ ಚಾಲನೆ ದೊರೆಯುತ್ತದೆ ಎಂದು ಬ್ಯಾಂಕ್‌ಗಳು ಪ್ರತಿಪಾದಿಸಿವೆ.
 • ದೇಶದಲ್ಲಿ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಲಿದೆ. ಆರಂಭಿಕ ಹಂತದಲ್ಲಿ ಸರ್ಕಾರವು ₹ 10,000 ಕೋಟಿಯಿಂದ ₹15,000 ಕೋಟಿ ಅನುದಾನವನ್ನು ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಸಾಧ್ಯತೆ ಇದೆ. ಇದು ತೆರಿಗೆದಾರರ ಹಣ. ಅಲ್ಲದೆ ಅಗತ್ಯವಿರುವ ಮತ್ತಷ್ಟು ಬಂಡವಾಳವನ್ನು ಬ್ಯಾಡ್‌ ಬ್ಯಾಂಕ್, ಮಾರುಕಟ್ಟೆಯಿಂದ ಸಂಗ್ರಹಿಸಲಿದೆ. ಈ ಬಂಡವಾಳದಿಂದಲೂ NPAಗಳನ್ನು ಖರೀದಿಸಲಾಗುತ್ತದೆ.
 • NPA ಗಳು ವಸೂಲಿಯಾದರೆ ಸರ್ಕಾರ ಹೂಡಿರುವ ಬಂಡವಾಳ ಮತ್ತು ಹೂಡಿಕೆದಾರರ ಬಂಡವಾಳವು ವಾಪಸ್ ಆಗಲಿದೆ. ಎನ್‌ಪಿಎ ವಸೂಲಿ ಆಗದಿದ್ದರೆ, ತೆರಿಗೆದಾರರ ಹಣ ಮತ್ತು ಹೂಡಿಕೆದಾರರ ಹಣ ನಷ್ಟವಾಗಲಿದೆ. ಅಲ್ಲದೆ ಬ್ಯಾಡ್‌ ಬ್ಯಾಂಕ್‌, NPAಗಳ ಗೋದಾಮು ಆಗುವ ಅಪಾಯವೂ ಇದೆ.

ಬ್ಯಾಡ್ ಬ್ಯಾಂಕ್ ಕುರಿತ  ಪರ– ವಿರೋಧ ವಾದ:

 • ಬ್ಯಾಡ್‌ ಬ್ಯಾಂಕ್‌ ಕಲ್ಪನೆಯ ಬಗ್ಗೆ ಪರ–ವಿರೋಧ ವಾದಗಳಿವೆ. ವಸೂಲಾಗದ ಸಾಲವನ್ನು ಬೇರೆಕಡೆಗೆ ಹಸ್ತಾಂತರಿಸಿದರೆ ಬ್ಯಾಂಕ್‌ಗಳು ತಮ್ಮ ಮೂಲ ಚಟುವಟಿಕೆಯಾದ ಸಾಲ ನೀಡಿಕೆಯ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತದೆ. ಜತೆಗೆ ವಸೂಲಾತಿಯ ಹೊಣೆಯನ್ನು ತಜ್ಞರಿಗೆ ವಹಿಸಿದಂತಾಗುತ್ತದೆ. ಇದರಿಂದ ವಸೂಲಾತಿ ಪ್ರಮಾಣ ಹೆಚ್ಚಾಗುತ್ತದೆ ಎಂದು ಬ್ಯಾಡ್‌ ಬ್ಯಾಂಕ್‌ ಪರ ವಾದಿಸುವವರು ಹೇಳುತ್ತಾರೆ.
 • ಬೇರೆಬೇರೆ ಬ್ಯಾಂಕ್‌ಗಳು ಸೇರಿ ನೀಡಿರುವ ಸಾಲವು ವಸೂಲಾಗದೆ ಇದ್ದಾಗ, ಸಾಲಗಾರರ ಆಸ್ತಿ ಮಾರಾಟ ಮಾಡಿ ಹಣ ವಸೂಲು ಮಾಡಲು ಅವಕಾಶ ಇದೆ. ಆದರೆ ಖರೀದಿದಾರರು ಎಲ್ಲಾ ಬ್ಯಾಂಕ್‌ಗಳ ಜತೆಗೆ ವ್ಯವಹಾರ ಮಾಡಬೇಕಾಗುತ್ತದೆ. ಬ್ಯಾಡ್‌ ಬ್ಯಾಂಕ್‌ ರಚನೆಯಾದರೆ ಖರೀದಿದಾರರು ಒಂದೇ ಸಂಸ್ಥೆಯ ಜತೆಗೆ ವ್ಯವಹರಿಸಬಹುದಾಗಿದೆ ಎಂದು ಇಂಥವರು ವಾದಿಸುತ್ತಾರೆ.
 • ಆದರೆ, ‘ಒಂದು ಮಾದರಿಯ ಪರಿಹಾರವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಾರದು’ ಎಂದು ಬ್ಯಾಡ್‌ ಬ್ಯಾಂಕ್‌ ಚಿಂತನೆಯನ್ನು ವಿರೋಧಿಸುವವರು ಹೇಳುತ್ತಾರೆ.
 • ರಘುರಾಂ ರಾಜನ್ ಅವರು RBI ಗವರ್ನರ್‌ ಆಗಿದ್ದ ಕಾಲದಲ್ಲೇ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಸ್ವತಃ ರಾಜನ್‌ ಅವರು ಈ ಚಿಂತನೆಯನ್ನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಓವರ್ ಟಾಪ್ (OTT) ವೇದಿಕೆಗಳ ವಿಷಯವನ್ನು ಮೇಲ್ವಿಚಾರಣೆ ಮಾಡಲಿರುವ ಸರ್ಕಾರ:


ಸಂದರ್ಭ:

ಮೊದಲ ಬಾರಿಗೆ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021, (Information Technology (Intermediary Guidelines and Digital Media Ethics Code) Rules 2021) ರ ವ್ಯಾಪ್ತಿಯಲ್ಲಿ, ಡಿಜಿಟಲ್ ಮಾಧ್ಯಮ ಮತ್ತು ಓವರ್ ದಿ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ಗಳಲ್ಲಿ ಡಿಜಿಟಲ್ ವಿಷಯಕ್ಕಾಗಿ ವಿವರವಾದ ಮಾರ್ಗಸೂಚಿಗಳನ್ನು ಸರ್ಕಾರ ತಂದಿದೆ.  

 • ಅಸ್ತಿತ್ವದಲ್ಲಿರುವ ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಎಲ್ಲಾ ನಿಯಮಗಳನ್ನು ರೂಪಿಸಲಾಗಿದೆ ಮತ್ತು ತಿಳಿಸಲಾಗಿದ್ದರೂ, ಒಟಿಟಿ ಮತ್ತು ಡಿಜಿಟಲ್ ಸುದ್ದಿ ಹಂಚಿಕೆ ವೇದಿಕೆಗಳನ್ನು ನಿಯಂತ್ರಿಸುವ ಆಡಳಿತಾತ್ಮಕ ಅಧಿಕಾರಗಳು ‘ಮಾಹಿತಿ ಮತ್ತು ಪ್ರಸಾರ ಸಚಿವಾಲಯ’ (I&B) ಅಡಿಯಲ್ಲಿ ಉಳಿಯುತ್ತವೆ.

ನಿಯಮಗಳ ಅವಲೋಕನ:

ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನ:

ಮೊದಲ ಹಂತ – ಒಟಿಟಿ ಸೇವಾ ಪೂರೈಕೆದಾರ: ಪ್ರತಿ OTT ಪೂರೈಕೆದಾರರ ಮಟ್ಟದಲ್ಲಿ ‘ಕುಂದುಕೊರತೆ ನಿವಾರಣಾ ವ್ಯವಸ್ಥೆ’ ಇರುತ್ತದೆ. ಪ್ರತಿ ದೂರನ್ನು 15 ದಿನಗಳಲ್ಲಿ ಪರಿಹರಿಸಬೇಕಾಗಿದೆ.

ಎರಡನೇ ಹಂತ – ಸ್ವಯಂ-ನಿಯಂತ್ರಕ ಸಂಸ್ಥೆ:(self-regulatory body) ದೂರನ್ನು ತೃಪ್ತಿಕರವಾಗಿ ಪರಿಹರಿಸದಿದ್ದರೆ, ದೂರುದಾರರು ಈ ವಿಷಯವನ್ನು ಒಟಿಟಿ ಸೇವಾ ಪೂರೈಕೆದಾರರು ಒಟ್ಟಾಗಿ ಸ್ಥಾಪಿಸಿರುವ ಸ್ವಯಂ-ನಿಯಂತ್ರಕ ಸಂಸ್ಥೆಗೆ ಕೊಂಡೊಯ್ಯಬಹುದು.

 ಸ್ವಯಂ ನಿಯಂತ್ರಕ ಸಂಸ್ಥೆಯ ಸಂಯೋಜನೆ: ಈ ಸಂಸ್ಥೆಯ ನೇತೃತ್ವವನ್ನು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅಥವಾ ಮಾಧ್ಯಮ, ಪ್ರಸಾರ, ಮನರಂಜನೆ, ಮಕ್ಕಳ ಹಕ್ಕುಗಳು, ಮಾನವ ಹಕ್ಕುಗಳು ಅಥವಾ ಇತರ ಸಂಬಂಧಿತ ಕ್ಷೇತ್ರಗಳ ಸ್ವತಂತ್ರ ಪ್ರಖ್ಯಾತ ವ್ಯಕ್ತಿಗಳು ವಹಿಸಬೇಕು.

ಅಧಿಕಾರಗಳು: ಈ ಸ್ವಯಂ-ನಿಯಂತ್ರಕ ಸಂಸ್ಥೆಯು, ಯಾವುದೇ ದೋಷಾರೋಪಣೆಯ ವಸ್ತು ವಿಷಯದ ಸಂದರ್ಭದಲ್ಲಿ ‘ಸೆನ್ಸಾರ್’ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.

ಮೂರನೇ ಹಂತ: ಮೂರನೇ ಹಂತದಲ್ಲಿ, “ಮೇಲ್ವಿಚಾರಣೆ ಕಾರ್ಯವಿಧಾನ” (oversight mechanism) ರೂಪದಲ್ಲಿ ಅತಿಕ್ರಮಿಸುವ ಅಧಿಕಾರವನ್ನು ನೀಡಲಾಗಿದೆ. ಅಂತರ-ಮಂತ್ರಿ ಸಮಿತಿಯು ಈ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು OTT ಯ ಸಾಮೂಹಿಕ ಸ್ವಯಂ ನಿಯಂತ್ರಕ ಸಂಸ್ಥೆಗೆ ಹೋಲುವ ಅಧಿಕಾರವನ್ನು ಹೊಂದಿರುತ್ತದೆ.

ಅನ್ವಯಿಸುವಿಕೆ:

ಯಾವುದೇ ವಿಷಯ ಅಥವಾ ವಿಷಯವನ್ನು ಪ್ರದರ್ಶಿಸಲು, ಹಂಚಿಕೊಳ್ಳಲು, ವೀಕ್ಷಿಸಲು ಅಥವಾ ಮಾರ್ಪಡಿಸಲು ವೇದಿಕೆಯನ್ನು ಒದಗಿಸುವ ಬಹುತೇಕ ಎಲ್ಲ ಕಂಪನಿಗಳಿಗೆ ಹೊಸ ಮಾರ್ಗಸೂಚಿಗಳು ಅನ್ವಯಿಸುತ್ತವೆ. ಈ ಮಾರ್ಗಸೂಚಿಗಳ ಜೊತೆಗೆ, ಮೊದಲ ಬಾರಿಗೆ, ಆನ್‌ಲೈನ್ ಮಧ್ಯವರ್ತಿಯ ಮಿತಿಯಲ್ಲಿ ಸುದ್ದಿಗಳನ್ನು ಉತ್ಪಾದಿಸುವ ಅಥವಾ ವಿತರಿಸುವ ವ್ಯವಹಾರದಲ್ಲಿ ತೊಡಗಿರುವ ಘಟಕಗಳನ್ನು ಸಹ ಸೇರಿಸಲಾಗಿದೆ.

ಸುರಕ್ಷಿತ ಸೇವಾ ವ್ಯವಸ್ಥೆ:

 (Safe harbour provisions)

 • ನಿಯಮಗಳಲ್ಲಿ ಸೂಚಿಸಲಾದ ತನಿಖೆಯನ್ನು ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಘಟಕಗಳು ಸೇರಿದಂತೆ ಮಧ್ಯವರ್ತಿಗಳು ಅನುಸರಿಸಬೇಕು. ಪರೀಕ್ಷೆಯನ್ನು ಮಧ್ಯಂತರ ಘಟಕಗಳು ಅನುಸರಿಸದಿದ್ದರೆ, “ಸುರಕ್ಷಿತ ಹಾರ್ಬರ್ ನ ನಿಬಂಧನೆಗಳು” ಅವರಿಗೆ ಅನ್ವಯಿಸುವುದಿಲ್ಲ.
 • ಈ ಸೇಫ್ ಹಾರ್ಬರ್ ನಿಬಂಧನೆಗಳನ್ನು ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ, ಮತ್ತು ಇವುಗಳ ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಘಟಕಗಳಿಗೆ ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಲಾದ ಯಾವುದೇ ವಿಷಯಕ್ಕೆ ಕಾನೂನು ಕ್ರಮ ಜರುಗಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ.

ಕುಂದುಕೊರತೆಗಳ ಪರಿಹಾರ ಮತ್ತು ಅನುಸರಣೆ ಕಾರ್ಯವಿಧಾನ:

(Grievances redressal and compliance mechanism)

ಬಳಕೆದಾರರು ಅಥವಾ ಅನ್ಯಾಯಕ್ಕೊಳಗಾದವರಿಂದ ಪಡೆದ ದೂರುಗಳನ್ನು ಪರಿಹರಿಸಲು ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸ್ಥಾಪಿಸಲು ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಘಟಕಗಳು ಸೇರಿದಂತೆ ಮಧ್ಯವರ್ತಿಗಳಿಗೆ ಆದೇಶಿಸಲಾಗಿದೆ. ಅಂತಹ ದೂರುಗಳ ಪರಿಹಾರಕ್ಕಾಗಿ ಮಧ್ಯಸ್ಥರು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ ಮತ್ತು ಈ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

ಶಾಶ್ವತ ಕುಂದುಕೊರತೆ ಅಧಿಕಾರಿ ಭಾರತದಲ್ಲಿ ಕಚೇರಿ ಹೊಂದಿರಬೇಕು ಮತ್ತು ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರಾಗಿರಬೇಕು.

ಮುಖ್ಯ ಅನುಸರಣೆ(ಸಂಪರ್ಕ) ಅಧಿಕಾರಿ:

 (chief compliance officer)

ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸುವುದು ಸಹ ಕಡ್ಡಾಯವಾಗಿರುತ್ತದೆ. ಮುಖ್ಯ ಅನುಸರಣೆ ಅಧಿಕಾರಿ ಭಾರತದಲ್ಲಿ ಹಾಜರಾಗಬೇಕಾಗಿರುತ್ತದೆ ಮತ್ತು ವೇದಿಕೆಯು ಐಟಿ ಕಾಯ್ದೆ ಮತ್ತು ಇತ್ತೀಚೆಗೆ ಅಧಿಸೂಚಿತ ನಿಯಮಗಳಿಗೆ ಅನುಸಾರವಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ನೋಡಲ್ ಸಂಪರ್ಕ ವ್ಯಕ್ತಿ:  (nodal contact person) ಕಾನೂನು ಜಾರಿ ಸಂಸ್ಥೆಗಳೊಂದಿಗೆ 24 × 7 ಸಮನ್ವಯಕ್ಕಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ( social media intermediaries ) ನೋಡಲ್ ಸಂಪರ್ಕ ವ್ಯಕ್ತಿಯನ್ನು ನೇಮಿಸುವುದು ಕಡ್ಡಾಯವಾಗಿರುತ್ತದೆ.

ಮಾಹಿತಿಯ ಮೊದಲ ಮೂಲ ವ್ಯಕ್ತಿಯ ಗುರುತಿಸುವಿಕೆ:

(Identification of the first originator of the information)

 • ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು, ಮುಖ್ಯವಾಗಿ, ಮೊದಲು ನ್ಯಾಯಾಲಯ ಅಥವಾ ಸರ್ಕಾರಿ ಪ್ರಾಧಿಕಾರವು ಕೇಳಿದಾಗ ಚೇಷ್ಟೆಯ ಟ್ವೀಟ್ ಅಥವಾ ಸಂದೇಶದ ಮೊದಲ ಮೂಲ ಮಾಹಿತಿಯನ್ನು ನೀಡಿದವರ ಗುರುತನ್ನು ಬಹಿರಂಗಪಡಿಸಬೇಕಾಗುತ್ತದೆ.
 • ಆದಾಗ್ಯೂ, ಸಂದೇಶದ ಮೂಲವನ್ನು ಬಹಿರಂಗ ಪಡಿಸಲು ವೇದಿಕೆಯು ಜವಾಬ್ದಾರನಾಗಿರುತ್ತದೆ. “ಅಪರಾಧ ತಡೆಗಟ್ಟುವಿಕೆ, ಪತ್ತೆ, ತನಿಖೆ, ಕಾನೂನು ಕ್ರಮ ಅಥವಾ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸಂಬಂಧಿಸಿದ ಶಿಕ್ಷೆ, ದೇಶದ ಸುರಕ್ಷತೆ, ಇತರ ದೇಶಗಳೊಂದಿಗೆ ಸ್ನೇಹ ಸಂಬಂಧಗಳು ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಅಪರಾಧಗಳಿಗೆ ಮಾತ್ರ ಸುದ್ದಿಯ ಮೂಲವನ್ನು ಬಹಿರಂಗಪಡಿಸುತ್ತದೆ”.

ನ್ಯಾಯಯುತ ಅವಕಾಶಗಳು:

ಸಾಮಾಜಿಕ ಜಾಲತಾಣದ ಖಾತೆಯಿಂದ ಯಾವುದೇ ಕಂಟೆಂಟ್‌ ಅನ್ನು ಸಂಸ್ಥೆಯು ಅಳಿಸಿ ಹಾಕುವುದಕ್ಕೆ ಮುಂಚೆ, ಬಳಕೆದಾರರಿಗೆ ಆ ಬಗ್ಗೆ ಮಾಹಿತಿ ನೀಡಬೇಕು; ಅಳಿಸಿ ಹಾಕಲು ಕಾರಣವೇನು ಎಂಬ ವಿವರಣೆಯನ್ನೂ ನೀಡಬೇಕು. ಮಧ್ಯಸ್ಥ ಸಂಸ್ಥೆಯ ಕ್ರಮವನ್ನು ಪ‍್ರಶ್ನಿಸಲು ಬಳಕೆದಾರರಿಗೆ ನ್ಯಾಯಬದ್ಧ ಅವಕಾಶ ಮತ್ತು ಸಮಯವನ್ನೂ ನೀಡಬೇಕು.

ನೀತಿ ಮತ್ತು ನಿಯಮಗಳ ಅನುಸರಣೆ:

ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಅಥವಾ ಸ್ವತಂತ್ರ ಪ್ರಖ್ಯಾತ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ಸ್ವಯಂ-ನಿಯಂತ್ರಕ ಸಂಸ್ಥೆಯನ್ನು ರಚಿಸಲಾಗುವುದು, ಅವರು ಆನ್‌ಲೈನ್ ಡಿಜಿಟಲ್ ನ್ಯೂಸ್ ಪ್ಲಾಟ್‌ಫಾರ್ಮ್‌ಗಳು ನೀತಿ ಮತ್ತು ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.

“ತುರ್ತು” ಅಧಿಕಾರಗಳು:

“ತುರ್ತು ಪ್ರಕೃತಿಯ ಸಂದರ್ಭದಲ್ಲಿ” ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ “ಇದು ಅಗತ್ಯ ಅಥವಾ ಸೂಕ್ತ ಮತ್ತು ಸಮರ್ಥನೀಯ ಎಂದು ತೃಪ್ತಿ ಹೊಂದಿದ್ದರೆ” ಪ್ರವೇಶವನ್ನು ನಿರ್ಬಂಧಿಸಲು ಆದೇಶಗಳನ್ನು ನೀಡಬಹುದು. ಅಂತಹ ಆದೇಶಗಳನ್ನು ಪ್ರಸಾರ ವೇದಿಕೆಗೆ ಅದಕ್ಕೆ ಇರುವ “ಕೇಳುವ ಅವಕಾಶವನ್ನು ನೀಡದೆ” ಬಿಡುಗಡೆ ಮಾಡಬಹುದು.

ಹಿನ್ನೆಲೆ:

ಕಳೆದ 12 ತಿಂಗಳುಗಳಿಂದ ದೇಶ ಮತ್ತು ವಿದೇಶಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದಾಗಿ, ದೊಡ್ಡ ತಂತ್ರಜ್ಞಾನ ಕಂಪನಿಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಉದ್ದೇಶದಿಂದ ಈ ಕ್ರಮವನ್ನು ಸರ್ಕಾರ ಜಾರಿಗೆ ತಂದಿದೆ. ಈ ನಿಯಮಗಳು ವಿಶ್ವದ ಕೆಲವು ಪ್ರಮುಖ ಕಂಪನಿಗಳಿಗೆ ತಮ್ಮ ವ್ಯವಹಾರ ಮಾದರಿಗಳನ್ನು ಆಮೂಲಾಗ್ರವಾಗಿ ಮರುಸಂಘಟಿಸಲು ಒತ್ತಾಯಿಸಬಹುದು.

ಈ ನಿಯಮಗಳ ಪರಿಣಾಮಗಳು ಮತ್ತು ಪ್ರಾಮುಖ್ಯತೆ:

ಸಾಮಾಜಿಕ ಮಾಧ್ಯಮ ಮತ್ತು ಇತರ ಕಂಪನಿಗಳನ್ನು “ನಿಂದನೆ ಮತ್ತು ದುರುಪಯೋಗ” ಕ್ಕೆ ಹೊಣೆಗಾರರನ್ನಾಗಿ ಮಾಡುವ ಅವಶ್ಯಕತೆಯಿದೆ. ಆದ್ದರಿಂದ, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಹೊರಡಿಸಲಾಗಿದೆ. ಅಲ್ಲದೆ,

 • ರೈತರ ಪ್ರತಿಭಟನೆಗೆ ಬೆಂಬಲವಾಗಿ ‘ಪ್ರಚೋದನಕಾರಿ’ ಎಂದು ಹೇಳಲಾದ ಟ್ವೀಟ್‌ಗಳಿಗೆ ಸಂಬಂಧಿಸಿ ಟ್ವಿಟರ್‌ ಮತ್ತು ಸರ್ಕಾರದ ನಡುವೆ ಇತ್ತೀಚೆಗೆ ಜಟಾಪಟಿ ನಡೆದಿತ್ತು. ಸರ್ಕಾರ ಸೂಚಿಸಿದ 1,500 ಟ್ವೀಟ್‌ಗಳು ಅಥವಾ ಖಾತೆಗಳನ್ನು ಅಳಿಸಿ ಹಾಕಲು ಟ್ವಿಟರ್ ಆರಂಭದಲ್ಲಿ ಹಿಂದೇಟು ಹಾಕಿತ್ತು. ಕಾನೂನು ಕ್ರಮದ ಬೆದರಿಕೆ ಒಡ್ಡಿದ ನಂತರವೇ ಸರ್ಕಾರದ ಆದೇಶವನ್ನು ಟ್ವಿಟರ್‌ ಪಾಲಿಸಿತ್ತು. ಆದ್ದರಿಂದ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಟೀಕೆಗಳು:

ಈಗ ರೂ‍ಪಿಸಿರುವ ನಿಯಮಗಳು ಬಳಕೆದಾರರ ಖಾಸಗಿತನವನ್ನು ಕುಗ್ಗಿಸುತ್ತದೆ ಮತ್ತು ಸೆನ್ಸಾರ್‌ಶಿಪ್‌ ಅನ್ನು ಹೆಚ್ಚಿಸುತ್ತದೆ ಎಂದು ವಾಕ್‌ ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದಕರು ಮತ್ತು ತಂತ್ರಜ್ಞಾನ ವ್ಯಾಪಾರ ಗುಂಪುಗಳು ಟೀಕಿಸಿವೆ.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಪರಾರಿಯಾದ ಆರ್ಥಿಕ ಅಪರಾಧಿ:


(Fugitive Economic Offender)

ಸಂದರ್ಭ:

ಉದ್ಯಮಿ ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಇತ್ತೀಚೆಗೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆದೇಶಿಸುವ ಮೂಲಕ ಭಾರತದ ಮನವಿಯನ್ನು ಪುರಸ್ಕರಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ 13,758 ಕೋಟಿ ರೂ.ಗಳ ವಂಚನೆಗೆ ಸಂಬಂಧಿಸಿದಂತೆ ನೀರವ್ ಮೋದಿಯವರನ್ನು ಬಂಧಿಸಲಾಗಿದೆ.

ಮುಂದಿನ ನಡೆ ಏನು?

 • ನ್ಯಾಯಾಲಯದ ಈ ಆದೇಶವನ್ನು ಮುಂದಿನ ಕ್ರಮಕ್ಕಾಗಿ ಯುನೈಟೆಡ್ ಕಿಂಗ್‌ಡಂನ ರಾಜ್ಯ ಕಾರ್ಯದರ್ಶಿಗೆ ಕಳುಹಿಸಲಾಗುವುದು. ಅಂದರೆ ಹಸ್ತಾಂತರ ಆದೇಶಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಾದ ಪ್ರೀತಿ ಪಟೇಲ್ ಅವರಿಗೆ ಕೋರಲಾಗುವುದು. ಈ ಬಗ್ಗೆ ನಿರ್ಧಾರ ಕೈಗೊಳ್ಳಲು ರಾಜ್ಯ ಕಾರ್ಯದರ್ಶಿಯವರಿಗೆ ಎರಡು ತಿಂಗಳ ಕಾಲಾವಕಾಶವಿದೆ. ಅಥವಾ ಈ ಕುರಿತು ನಿರ್ಣಯ ಕೈಗೊಳ್ಳಲು ಇನ್ನೂ ಹೆಚ್ಚಿನ ಕಾಲಾವಕಾಶದ ಅಗತ್ಯವಿದ್ದರೆ ಹೈಕೋರ್ಟ್ ನ ಅನುಮೋದನೆ ಪಡೆಯಬೇಕಾಗುತ್ತದೆ.
 • ಯಾವುದೇ ಮೇಲ್ಮನವಿ ಸಲ್ಲಿಸದಿದ್ದರೆ, ರಾಜ್ಯ ಕಾರ್ಯದರ್ಶಿಯಿಂದ ಹಸ್ತಾಂತರಿಸುವ ಆದೇಶ ನೀಡಿದ 28 ದಿನಗಳಲ್ಲಿ ವಿನಂತಿಸಿದ ವ್ಯಕ್ತಿಯನ್ನು ಹಸ್ತಾಂತರಿಸಲಾಗುತ್ತದೆ.
 • ರಾಜ್ಯ ಕಾರ್ಯದರ್ಶಿಯ ನಿರ್ಧಾರದ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ನ್ಯಾಯಾಲಯದ ಅನುಮತಿಯೊಂದಿಗೆ ಮಾತ್ರ ಸಾಧ್ಯ.
 • ನ್ಯಾಯಾಲಯ ನೀಡಿರುವ ಆದೇಶದ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಲು ನೀರವ್ ಮೋದಿಗೆ 14ದಿನಗಳ ಕಾಲಾವಕಾಶವಿದೆ.

ಪರಾರಿಯಾದ ಆರ್ಥಿಕ ಅಪರಾಧಿ:

ಡಿಸೆಂಬರ್ 2019 ರಲ್ಲಿ, ವಿಶೇಷ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗೆ $ 2 ಬಿಲಿಯನ್ ವಂಚಿಸಿದ ಪ್ರಕರಣದಲ್ಲಿ ವಜ್ರ ವ್ಯಾಪಾರಿ ನೀರವ್ ಮೋದಿಯವರನ್ನು ಪರಾರಿಯಾದ ಆರ್ಥಿಕ ಅಪರಾಧಿ (fugitive economic offender) ಎಂದು ಘೋಷಿಸಲಾಯಿತು.

ಪರಾರಿಯಾದ ಆರ್ಥಿಕ ಅಪರಾಧಿ – ವ್ಯಾಖ್ಯಾನ:

ಕನಿಷ್ಠ 100 ಕೋಟಿ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ಯಾವುದೇ ವ್ಯಕ್ತಿಯ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದ್ದರೆ ಮತ್ತು ಆ ವ್ಯಕ್ತಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನ ಮಾಡಿದ್ದರೆ ಆತನನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಬಹುದು.

ಪ್ರಕ್ರಿಯೆ / ವಿಧಾನ:

ಅಕ್ರಮ ಹಣ ವರ್ಗಾವಣೆತಡೆ ಕಾಯ್ದೆಯ ( Money-Laundering Act) ಅಡಿಯಲ್ಲಿ ಅರ್ಜಿಯಲ್ಲಿ ವಶಪಡಿಸಿಕೊಳ್ಳಬೇಕಾದ ಸ್ವತ್ತುಗಳ ವಿವರಗಳು ಮತ್ತು ವ್ಯಕ್ತಿಯ ಇರುವಿಕೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಒಳಗೊಂಡಿರುವ ತನಿಖಾ ಸಂಸ್ಥೆಗಳು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

 • ತರುವಾಯ, ವಿಶೇಷ ನ್ಯಾಯಾಲಯದಿಂದ, ಗೊತ್ತುಪಡಿಸಿದ ಸ್ಥಳದಲ್ಲಿ ಹಾಜರಾಗುವಂತೆ ಆ ವ್ಯಕ್ತಿಗೆ ನೋಟಿಸ್ ನೀಡಲಾಗುತ್ತದೆ. ಹಾಜರಾಗಲು, ನೋಟಿಸ್ ನೀಡಿದ ಕನಿಷ್ಠ ಆರು ವಾರಗಳ ನಂತರ ದಿನಾಂಕವನ್ನು ನಿಗದಿಪಡಿಸಲಾಗಿದೆ.
 • ಆ ವ್ಯಕ್ತಿಯು ಗೊತ್ತುಪಡಿಸಿದ ಸ್ಥಳ ಮತ್ತು ದಿನಾಂಕದಂದು ಕಾಣಿಸಿಕೊಂಡರೆ, ಮುಂದಿನ ಪ್ರಕ್ರಿಯೆಗಳನ್ನು ಕೊನೆಗೊಳಿಸಲಾಗುತ್ತದೆ.  ಇಲ್ಲದಿದ್ದರೆ, ತನಿಖಾ ಸಂಸ್ಥೆಗಳು ಪ್ರಸ್ತುತಪಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ವ್ಯಕ್ತಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗುತ್ತದೆ.
 • ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ, 2018 ರ ಪ್ರಕಾರ, ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟ ವ್ಯಕ್ತಿಯು ಅಂತಹ ಘೋಷಣೆ ಮಾಡಿದ 30 ದಿನಗಳೊಳಗೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಚೀನಾದ ‘ಖರೀದಿ, ಸಾಮರ್ಥ್ಯ,ಸಮಾನತೆ’.(PPP):

(China’s purchasing power parity– PPP)

 • ಚೀನಾದಲ್ಲಿ, ಒಟ್ಟು ಬಡತನದ ನಿರ್ಮೂಲನೆಯನ್ನು ಸರ್ಕಾರ ನಿಗದಿಪಡಿಸಿದ ಬಡತನ ರೇಖೆಯ ಪ್ರಕಾರ ವ್ಯಾಖ್ಯಾನಿಸಲಾಗಿದೆ. ಚೀನಾದಲ್ಲಿನ ಬಡತನ ರೇಖೆಯನ್ನು ತಲಾ ಖರೀದಿ ಶಕ್ತಿ ಸಮಾನತೆ (ಪಿಪಿಪಿ) ಯ ಪ್ರಕಾರ ದಿನಕ್ಕೆ $30 ಕ್ಕೆ ನಿಗದಿಪಡಿಸಲಾಗಿದೆ ಮತ್ತು ಇದು ಅಂತರರಾಷ್ಟ್ರೀಯ ಬಡತನ ರೇಖೆ ಖರೀದಿ, ಸಾಮರ್ಥ್ಯ,ಸಮಾನತೆ (PPP) $ 1.90 ಗಿಂತ  ಹೆಚ್ಚಾಗಿದೆ.
 • ಕಡಿಮೆ ಮಧ್ಯಮ-ಆದಾಯದ ದೇಶಗಳಿಗೆ $20 ರ ಕೊಳ್ಳುವ ಶಕ್ತಿ ಸಮಾನತೆ (PPP) ಯನ್ನು ಮತ್ತು ಚೀನಾದಂತಹ ಮೇಲ್ಮಧ್ಯಮ-ಆದಾಯದ ದೇಶಗಳಿಗೆ $ 5.50 ರ ಖರೀದಿ ಶಕ್ತಿ ಸಮಾನತೆ (PPP) ಎಂದು ವಿಶ್ವ ಬ್ಯಾಂಕ್ ಬಡತನ ರೇಖೆಯನ್ನು ವ್ಯಾಖ್ಯಾನಿಸಿದೆ.

ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಿರುವ ಹರಿಯಾಣ ಸರ್ಕಾರ:

“ಬಲದಿಂದ ಅಥವಾ ವಂಚನೆಯ ವಿಧಾನದ ಮೂಲಕ ಆದ ಧಾರ್ಮಿಕ ಮತಾಂತರಗಳ” ವಿರುದ್ಧ ಮಸೂದೆಯನ್ನು ಮಂಡಿಸಲು ಹರಿಯಾಣ ಸರ್ಕಾರ ಯೋಜಿಸಿದೆ ಮತ್ತು ಗಲಭೆಕೋರರು ಮತ್ತು ಪ್ರತಿಭಟನಾಕಾರರಿಂದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಉಂಟಾದ ಹಾನಿಯಿಂದಾದ ನಷ್ಟವನ್ನು ಮರುಪಡೆಯಲು ಮಸೂದೆಯನ್ನು ವಿಧಾನಸಭೆಯ ಮುಂಬರುವ ಬಜೆಟ್ ಅಧಿವೇಶನದಲ್ಲಿ ಪರಿಚಯಿಸಲು ಹರಿಯಾಣ ಸರ್ಕಾರ ಯೋಜಿಸುತ್ತಿದೆ.

ಚೆಕ್ ಬೌನ್ಸ್ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಯೋಜನೆ, ಸರ್ವೋಚ್ಚ ನ್ಯಾಯಾಲಯ:

 • ಚೆಕ್ ಬೌನ್ಸ್ ಪ್ರಕರಣಗಳನ್ನು ಆಲಿಸಲು ಮತ್ತು ತೀರ್ಪು ನೀಡಲು ಹೆಚ್ಚುವರಿ ನ್ಯಾಯಾಲಯಗಳ ರಚನೆಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುತ್ತಿದೆ.
 • ನ್ಯಾಯಾಲಯದ ಪ್ರಕಾರ, ದೇಶದ ವಿವಿಧ ನ್ಯಾಯಾಲಯಗಳಲ್ಲಿ5 ದಶಲಕ್ಷಕ್ಕೂ ಹೆಚ್ಚಿನ ಚೆಕ್ ಬೌನ್ಸ್ ಪ್ರಕರಣಗಳು ಬಾಕಿ ಉಳಿದಿವೆ.

ಹಿನ್ನೆಲೆ:

2005 ರಷ್ಟು ಹಿಂದಿನ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅನುಮೋದಿಸದ ಚೆಕ್‌ಗಳಿಗೆ ಸಂಬಂಧಿಸಿದಂತೆ ದೀರ್ಘಕಾಲದ ಮೊಕದ್ದಮೆಯ ಪ್ರಕರಣವು ನ್ಯಾಯಾಲಯದ ಗಮನಕ್ಕೆ ಬಂದಿತು.

ಸಾಗರ ಮಾಹಿತಿ ಸೇವೆಗಳ ಭಾರತೀಯ ರಾಷ್ಟ್ರೀಯ ಕೇಂದ್ರ (INCOIS):

(Indian National Centre for Ocean Information Services)

 • ಇದು ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿರುವ ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದೆ.
 • ಸಮಾಜ, ಕೈಗಾರಿಕೆ, ಸರ್ಕಾರಿ ಸಂಸ್ಥೆಗಳು ಮತ್ತು ವೈಜ್ಞಾನಿಕ ಸಮುದಾಯಕ್ಕೆ ಸಾಗರಕ್ಕೆ ಸಂಬಂಧಿಸಿದ ಅತ್ಯುತ್ತಮ ಮಾಹಿತಿ ಮತ್ತು ಸಲಹಾ ಸೇವೆಗಳನ್ನು ಒದಗಿಸುವುದು INCOIS ನ ಕಾರ್ಯವಾಗಿದೆ.

ಸುದ್ದಿಯಲ್ಲಿರಲು ಕಾರಣ:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳ ವೈಮಾನಿಕ ನಕ್ಷೆಗಾಗಿ ರಾಷ್ಟ್ರೀಯ ದೂರಸ್ಥ ಸಂವೇದನಾ ಕೇಂದ್ರದ (NRSC) ಸಹಾಯ ಪಡೆಯಲು INCOIS ಯೋಜಿಸುತ್ತಿದೆ. ಇದರ ಮೂಲಕ ಸಾಗರ ನಕಾಶೆಗಳನ್ನು ಉತ್ತಮವಾಗಿ ಚಿತ್ರಿಸಬಹುದು, ಈ ರೀತಿಯ ಅಧ್ಯಯನವನ್ನು ‘ಸಾಗರದಾಳದ ಅಧ್ಯಯನ’ (Bathymetric study) ಎಂದೂ ಕರೆಯಲಾಗುತ್ತದೆ.

ಬಾಥಿಮೆಟ್ರಿಕ್ ಅಧ್ಯಯನ ಎಂದರೆ, ನೀರಿನ (ಸಾಗರದ) ಆಳವಾದ ಭಾಗವನ್ನು ಅಳೆಯುವುದು ಮತ್ತು ಆಳ ನೀರಿನ ವೈಶಿಷ್ಟಗಳನ್ನು ಕುರಿತು ನಕ್ಷೆ ತಯಾರಿಸುವುದು ಆಗಿದೆ.

  ಬಿಯಾಸ್ ನದಿ:

 • ಕೇಂದ್ರ ಸರ್ಕಾರವು ಬಿಯಾಸ್ ನದಿಯಿಂದ ಪ್ರತಿದಿನ ದೆಹಲಿಗೆ ಬರುವ 232 ಮಿಲಿಯನ್ ಗ್ಯಾಲನ್ (MGD) ನೀರನ್ನು ಒಂದು ತಿಂಗಳು ನಿಲ್ಲಿಸಲಿದೆ.
 • ದುರಸ್ತಿ ಕಾರ್ಯವನ್ನು ಕೇಂದ್ರ ಸರ್ಕಾರವು ಪ್ರಾರಂಭಿಸುತ್ತಿದ್ದು, ಈ ಕಾರಣದಿಂದಾಗಿ ನಂಗಲ್ ಹೈಡೆಲ್ ಚಾನೆಲ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಇದು ದೆಹಲಿಯ 25% ನೀರು ಸರಬರಾಜನ್ನು ನಿಲ್ಲಿಸುತ್ತದೆ.

ಬಿಯಾಸ ನದಿಯ ಕುರಿತು:

 • ಬಿಯಾಸ್ ನದಿಯ ಮೂಲವು ರೋಹ್ಟಾಂಗ್ ಪಾಸ್ ಬಳಿ, ಸಮುದ್ರ ಮಟ್ಟದಿಂದ 4,062 ಮೀಟರ್ ಎತ್ತರದಲ್ಲಿ, ಪಿರ್ ಪಂಜಾಲ್ ಶ್ರೇಣಿಯ ದಕ್ಷಿಣ ತುದಿಯಲ್ಲಿ, ರಾವಿಯ ಮೂಲಕ್ಕೆ ಹತ್ತಿರದಲ್ಲಿದೆ.

 • ಇದು ಧೌಲಾಧರ್ ಶ್ರೇಣಿಯನ್ನು ದಾಟಿ ನೈಋತ್ಯ ದಿಕ್ಕಿನಲ್ಲಿ ತಿರುಗಿ ಪಂಜಾಬ್‌ನ ಹರಿಕೆ ಎಂಬಲ್ಲಿ ಸಟ್ಲೆಜ್ ನದಿಯನ್ನು ಸೇರುತ್ತದೆ.
 • ಇದು ತುಲನಾತ್ಮಕವಾಗಿ ಸಣ್ಣ ನದಿಯಾಗಿದೆ ಮತ್ತು ಇದರ ಉದ್ದ ಕೇವಲ 460 ಕಿ.ಮೀ., ಆದರೆ ಇದು ಸಂಪೂರ್ಣವಾಗಿ ಭಾರತೀಯ ಭೂಪ್ರದೇಶದಲ್ಲಿ ಹರಿಯುವ ನದಿಯಾಗಿದೆ.

  ಮನ್ನಾತು ಪದ್ಮನಾಭನ್:

 • ಮನ್ನಾತು ಪದ್ಮನಾಭನ್ (1878 1970) ಕೇರಳದ ಭಾರತೀಯ ಸಾಮಾಜಿಕ ಸುಧಾರಕ ಮತ್ತು ಸ್ವಾತಂತ್ರ್ಯ ಹೋರಾಟಗಾರ.
 • ಅಸ್ಪೃಶ್ಯತೆ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ ಅವರು ಎಲ್ಲಾ ಜಾತಿಯ ಜನರಿಗೆ ದೇವಾಲಯಗಳನ್ನು ತೆರೆಯಬೇಕೆಂದು ಪ್ರತಿಪಾದಿಸಿದ್ದರು.
 • ಅವರು ವೈಕೊಮ್ ಸತ್ಯಾಗ್ರಹದಲ್ಲೂ ಭಾಗವಹಿಸಿದ್ದರು.
 • ಅವರು ನಾಯರ್ ಸೇವಾ ಸಂಸ್ಥೆ ಗಳ (Nair Service Society) ಸ್ಥಾಪನೆಗೆ ಹೆಸರುವಾಸಿಯಾಗಿದ್ದಾರೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos