Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 25 ಫೆಬ್ರವರಿ 2021

 

ಪರಿವಿಡಿ :

  ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ.

2. ಪ್ರತಿಭಟನೆಯ ಮಧ್ಯೆಯೂ ಮತಾಂತರದ ಮಸೂದೆಯನ್ನು ಅಂಗೀಕರಿಸಿದ ಉತ್ತರಪ್ರದೇಶ ವಿಧಾನಸಭೆ.

3. ಚೀನಾದ ಕರಾವಳಿ ಕಾವಲು ಪಡೆಯ ಎರಡು ಹಡಗುಗಳು ಪೂರ್ವ ಚೀನಾ ಸಮುದ್ರದಲ್ಲಿನ ದ್ವೀಪಗಳನ್ನು ಪ್ರವೇಶಿಸಿದ ಕುರಿತು ಪ್ರತಿಭಟನೆ ವ್ಯಕ್ತಪಡಿಸಿದ ಜಪಾನ್.

4. ಉಯಿಘರ್ಗಳ ಮೇಲಿನ ‘ದಬ್ಬಾಳಿಕೆಯನ್ನು’ ಖಂಡಿಸಿದ ಫ್ರಾನ್ಸ್.

5. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಚುನಾವಣೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸರ್ಕಾರಿ ಆಸ್ತಿಗಳ ಹಣಗಳಿಕೆ ಅಥವಾ ಆಧುನೀಕರಣಕ್ಕಾಗಿ ಮೋದಿ ಮಂತ್ರ.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ‘ಮೌನವಾಗಿರುವ ಹಕ್ಕನ್ನು ಸದ್ಗುಣವೆಂದು ಅಥವಾ ನೈತಿಕತೆ ಎಂದು ಗುರುತಿಸಿ’.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಮಾನ್ಯತೆ ಪಡೆದ ಹೂಡಿಕೆದಾರ.

2. ಶ್ರೀಲಂಕಾಗೆ $ 50 ಮಿಲಿಯನ್ ರಕ್ಷಣಾ ಕ್ರೆಡಿಟ್ ಲೈನ್ ( ರಕ್ಷಣಾ ಸಾಲವನ್ನು) ಘೋಷಿಸಿದ ಇಮ್ರಾನ್ ಖಾನ್.

3. ಕೋವಾಕ್ಸ್ ಲಸಿಕೆಗಳನ್ನು ಪಡೆದ ಮೊದಲ ದೇಶ ಘಾನಾ.

4. ರಾಷ್ಟ್ರೀಯ ನಗರ ಡಿಜಿಟಲ್ ಅಭಿಯಾನ (NUDM).

5. ಬೃಹತ್ ಅಣೆಕಟ್ಟುಗಳ ಮೇಲಣ ಅಂತರರಾಷ್ಟ್ರೀಯ ಆಯೋಗ (ICOLD).

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ಜನಸಂಖ್ಯೆಯ ಅತ್ಯಂತ ದುರ್ಬಲ ವರ್ಗಗಳಿಗೆ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಈ ದುರ್ಬಲ ವಿಭಾಗಗಳನ್ನು ರಕ್ಷಿಸಲು ಮತ್ತು ಸುಧಾರಿಸಲು ಸ್ಥಾಪಿಸಲಾದ ಕಾರ್ಯವಿಧಾನಗಳು, ಕಾನೂನುಗಳು, ನಿಕಾಯಾಗಳು ಮತ್ತು ಸಂಸ್ಥೆಗಳು.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ:


(National Commission for SCs)

ಸಂದರ್ಭ:

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಹೊಸ ಅಧ್ಯಕ್ಷರನ್ನಾಗಿ ಶ್ರೀ ವಿಜಯ್ ಸಂಪಲಾ ಅವರನ್ನು ನೇಮಿಸಲಾಗಿದೆ.

ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಬಗ್ಗೆ:

 • ಭಾರತೀಯ ಸಮಾಜದಲ್ಲಿ ಪರಿಶಿಷ್ಟ ಜಾತಿಗಳ ಶೋಷಣೆಯ ವಿರುದ್ಧ ರಕ್ಷಣೆ ಒದಗಿಸಲು ಮತ್ತು ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತ ಸರ್ಕಾರವು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಿತು.
 • ಸಂವಿಧಾನದ (89ನೇ ತಿದ್ದುಪಡಿ) ಕಾಯ್ದೆ, 2003 ರ ಮೂಲಕ, ಸಂವಿಧಾನದ ಪರಿಚ್ಛೇದ 338 ಅನ್ನು ತಿದ್ದುಪಡಿ ಮಾಡಿ ಮತ್ತು 338A ಎಂಬ ಹೊಸ ವಿಧಿಯನ್ನು ಸೇರಿಸುವ ಮೂಲಕ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗವನ್ನು (NCST) ಸ್ಥಾಪಿಸಲಾಯಿತು.
 •  ಈ ತಿದ್ದುಪಡಿಯ ಮೂಲಕ, ಹಿಂದಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗವನ್ನು ಎರಡು ಪ್ರತ್ಯೇಕ ಆಯೋಗಗಳಾಗಿ ಪರಿವರ್ತಿಸಲಾಯಿತು – ಅವುಗಳೆಂದರೆ, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (NCSC) ಮತ್ತು 2004 ರಿಂದ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗ (NCST).
 •  ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಮೂವರು ಸದಸ್ಯರನ್ನು ಒಳಗೊಂಡಿದೆ. ರಾಷ್ಟ್ರಪತಿಗಳ ಸಹಿ ಮತ್ತು ಮುದ್ರೆಯನ್ನು ಹೊಂದಿದ ಆದೇಶದ ಮೂಲಕ ಅವರನ್ನು ನೇಮಿಸಲಾಗುತ್ತದೆ.

  

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪ್ರತಿಭಟನೆಯ ಮಧ್ಯೆಯೂ ಮತಾಂತರದ ಮಸೂದೆಯನ್ನು ಅಂಗೀಕರಿಸಿದ ಉತ್ತರಪ್ರದೇಶ ವಿಧಾನಸಭೆ:


ಸಂದರ್ಭ:

ಇತ್ತೀಚೆಗೆ, ಉತ್ತರ ಪ್ರದೇಶ ವಿಧಾನಸಭೆಯು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧಮಸೂದೆ 2021’ ಅನ್ನು ಅಂಗೀಕರಿಸಿದೆ. (Uttar Pradesh Prohibition of Unlawful Conversion of Religion Bill, 2021).

ಈ ಮಸೂದೆಯು ವಂಚನೆ ಅಥವಾ ಇತರ ಯಾವುದೇ ಅನುಚಿತ ವಿಧಾನಗಳಿಂದ ನಡೆಸಲ್ಪಟ್ಟ ಧಾರ್ಮಿಕ ಮತಾಂತರವನ್ನು ತಡೆಯಲು ಪ್ರಯತ್ನಿಸುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪರಿಚಯಿಸಿದ ಸುಗ್ರೀವಾಜ್ಞೆಯನ್ನು ಈ ಮಸೂದೆ ಮೂಲಕ ಬದಲಾಯಿಸಲಾಗಿದೆ.

ಈ ಕಾಯಿದೆಯಡಿಯ ಪ್ರಮುಖ ನಿಬಂಧನೆಗಳು:

 • ಇದರ ಅಡಿಯಲ್ಲಿ, ವಿವಾಹದ ಉದ್ದೇಶಕ್ಕಾಗಿ ಮಾಡುವ ಧಾರ್ಮಿಕ ಮತಾಂತರವನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡಲಾಗಿದೆ.
 • ಮತಾಂತರವು ಮದುವೆಯ ಉದ್ದೇಶವನ್ನು ಹೊಂದಿಲ್ಲ ಎಂದು ಸಾಬೀತುಪಡಿಸುವ ಜವಾಬ್ದಾರಿಯು ‘ಪ್ರತಿವಾದಿಯ’ ಮೇಲಿರುತ್ತದೆ.
 • ಧಾರ್ಮಿಕ ಮತಾಂತರಕ್ಕಾಗಿ, ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಮತ್ತು ಇದಕ್ಕಾಗಿ 60 ದಿನಗಳ ಮುಂಚಿತವಾಗಿ ನೋಟಿಸ್ ನೀಡುವ ಅಗತ್ಯವಿರುತ್ತದೆ.
 • ಮದುವೆಯ ಏಕೈಕ ಉದ್ದೇಶಕ್ಕಾಗಿ ಮಾತ್ರ ಮಹಿಳೆಯನ್ನು ಮತಾಂತರಗೊಳಿಸಿದರೆ, ಆ ಮದುವೆಯನ್ನು ಅಮಾನ್ಯವೆಂದು ಘೋಷಿಸಲಾಗುತ್ತದೆ.

ದಂಡ / ಶಿಕ್ಷೆ :

 • ಕಾನೂನಿನ ನಿಬಂಧನೆಗಳ ಉಲ್ಲಂಘನೆಗೆ 15,000 ದಂಡ ಮತ್ತು ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು, ಇದನ್ನು ಐದು ವರ್ಷಗಳವರೆಗೆ ವಿಸ್ತರಿಸಬಹುದು.
 • ಮೇಲಿನ ಕಾನೂನುಬಾಹಿರ ವಿಧಾನಗಳಿಂದ ಅಪ್ರಾಪ್ತ ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮತಾಂತರ ಗೊಳಿಸಿದರೆ, ಕನಿಷ್ಠ 25 ಸಾವಿರ ದಂಡವನ್ನು ಮತ್ತು ಮೂರರಿಂದ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಶಿಕ್ಷೆಯೊಂದಿಗೆ ನೀಡಲಾಗುತ್ತದೆ.
 • ಇದಲ್ಲದೆ, ಸಾಮೂಹಿಕ ಮತಾಂತರಗಳನ್ನು ನಡೆಸುವ ಸಾಮಾಜಿಕ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ಮಸೂದೆಯಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ.

ಈ ಕಾನೂನಿಗೆ ಸಂಬಂಧಿಸಿದ ವಿವಾದಗಳು:

 • ಇತ್ತೀಚೆಗೆ, ಅಲಹಾಬಾದ್ ಹೈಕೋರ್ಟ್ ಒಂದು ಪ್ರಕರಣದಲ್ಲಿ (ಸಲಾಮತ್ ಅನ್ಸಾರಿ-ಪ್ರಿಯಾಂಕಾ ಖಾರ್ವಾರ್ ಪ್ರಕರಣ) ಬಾಳಸಂಗಾತಿಯನ್ನು ಆಯ್ಕೆ ಮಾಡುವ ಅಥವಾ ತಮ್ಮ ಆಯ್ಕೆಯ ವ್ಯಕ್ತಿಯೊಂದಿಗೆ ವಾಸಿಸುವ ಹಕ್ಕು, ನಾಗರಿಕರ ಮೂಲಭೂತ ಹಕ್ಕಾದ ಜೀವಿಸುವ ಮತ್ತು ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿದೆ ಎಂದು ತೀರ್ಪು ನೀಡಿತು,  ನ್ಯಾಯಾಲಯದ ಈ ತೀರ್ಪಿನ ಕೆಲ ದಿನಗಳಲ್ಲಿಯೇ ಉತ್ತರ ಪ್ರದೇಶ ಸರ್ಕಾರವು ಈ ಸುಗ್ರೀವಾಜ್ಞೆಯನ್ನು (2020ರ ನವೆಂಬರ್) ಜಾರಿಗೆ ತಂದಿದೆ.
 • ಈ ಅಲಹಾಬಾದ್ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ‘ಮದುವೆಗೆ ದಾರ್ಮಿಕ ಮತಾಂತರ ಸ್ವೀಕಾರಾರ್ಹವಲ್ಲ’, ಎಂದು ಈ ಹಿಂದೆ ನ್ಯಾಯಾಲಯವೊಂದು ನೀಡಿದ ತೀರ್ಪು ಕಾನೂನಿನ ಮುಂದೆ ಸಮರ್ಥಿಸಲಾಗುವುದಿಲ್ಲ ಎಂದು ಹೇಳಿದೆ.

ವಿಮರ್ಶಕರು ಹೇಳುವುದೇನು?

 • ಹಲವಾರು ಕಾನೂನು ಪಂಡಿತರು ‘ಲವ್ ಜಿಹಾದ್’ ಪರಿಕಲ್ಪನೆಗೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಆಧಾರಗಳಿಲ್ಲ ಎಂದು ವಾದಿಸಿ ಈ ಕಾನೂನನ್ನು ತೀವ್ರ ಟೀಕೆಗೆ ಗುರಿ ಪಡಿಸಿದ್ದಾರೆ.
 • ಒಬ್ಬರು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯನ್ನು ಅವರು ಉಲ್ಲೇಖಿಸಿದ್ದಾರೆ.
 • ಅಲ್ಲದೆ, ಸಂವಿಧಾನದ 25 ನೆಯ ವಿಧಿಯು ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಭಾದಿತ ಅವಲಂಬನೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯ ನೀಡುತ್ತದೆ.

ಸಂಬಂಧಿತ ಕಾಳಜಿಗಳು ಮತ್ತು ಸವಾಲುಗಳು

 •  ಈ ಹೊಸ ‘ಲವ್ ಜಿಹಾದ್’ ಕಾನೂನಿಗೆ ಸಂಬಂಧಿಸಿದ ನಿಜವಾದ ಅಪಾಯವು ಈ ಕಾನೂನಿನ ಅಸ್ಪಷ್ಟತೆಯಲ್ಲಿದೆ.
 • ಕಾನೂನು “ಅನಗತ್ಯ ಪ್ರಭಾವ”, “ಆಮಿಷ” ಮತ್ತು “ದಬ್ಬಾಳಿಕೆ” ಮುಂತಾದ ನುಡಿಗಟ್ಟುಗಳನ್ನು ಬಳಸುತ್ತದೆ.
 • ವಾಸ್ತವವಾಗಿ, ‘ಮತಾಂತರವು ನಿಜವಾಗಿಯೂ ವಿವಾಹದ ಉದ್ದೇಶಕ್ಕಾಗಿ ಮಾತ್ರವೇ?’ ಎಂಬ ಪ್ರಶ್ನೆ ಮೂಲತಃ ಸ್ಪಷ್ಟವಾಗಿಲ್ಲ.
 • ನಿಜವಾದ ಬಿಕ್ಕಟ್ಟು ಈ ಸೂಕ್ಷ್ಮ ನುಡಿಗಟ್ಟುಗಳ ವ್ಯಕ್ತಿನಿಷ್ಠ ಮೌಲ್ಯಮಾಪನ ಮತ್ತು ಮೆಚ್ಚುಗೆಯಲ್ಲಿದೆ – ಪ್ರಕರಣವು ಸಂಪೂರ್ಣವಾಗಿ ನ್ಯಾಯಾಧೀಶರ ವಿವೇಚನೆಯನ್ನು ಅವಲಂಬಿಸಿರುತ್ತದೆ.

ಮದುವೆ ಮತ್ತು ಮತಾಂತರದ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯ:

 • ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುಕೊಳ್ಳುವ ವಯಸ್ಕರ ಸಂಪೂರ್ಣ ಹಕ್ಕಿನ ಕುರಿತು ಮಧ್ಯಪ್ರವೇಶಿಸಿಸಲು ರಾಜ್ಯ ಮತ್ತು ನ್ಯಾಯಾಲಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
 • ಭಾರತದ ಸುಪ್ರೀಂ ಕೋರ್ಟ್, ಲಿಲಿ ಥಾಮಸ್ ಮತ್ತು ಸರಳಾ ಮುದ್ಗಲ್ ಎರಡೂ ಪ್ರಕರಣಗಳಲ್ಲಿ, ಧಾರ್ಮಿಕ ಮತಾಂತರಗಳು ನಂಬಿಕೆಯಿಲ್ಲದೆ ನಡೆದಿವೆ ಮತ್ತು ಕೆಲವು ಕಾನೂನು ಪ್ರಯೋಜನವನ್ನು ಪಡೆಯುವ ಏಕೈಕ ಉದ್ದೇಶಕ್ಕಾಗಿ ನಡೆದಿವೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.

 

ವಿಷಯಗಳು:   ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಚೀನಾದ ಕರಾವಳಿ ಕಾವಲು ಪಡೆಯ ಎರಡು ಹಡಗುಗಳು ಪೂರ್ವ ಚೀನಾ ಸಮುದ್ರದಲ್ಲಿನ ದ್ವೀಪಗಳನ್ನು ಪ್ರವೇಶಿಸಿದ ಕುರಿತು ಪ್ರತಿಭಟನೆ ವ್ಯಕ್ತಪಡಿಸಿದ ಜಪಾನ್:


ಸಂದರ್ಭ:

ಇತ್ತೀಚೆಗೆ, ಚೀನಾದ ಕರಾವಳಿ ಕಾವಲು ಪಡೆಯ (coast guard) ಎರಡು ಹಡಗುಗಳ ಸೆನ್ಕಾಕು ದ್ವೀಪಗಳ ( the Senkaku islands) ನೀರಿನಲ್ಲಿನ ಪ್ರವೇಶವು, ಪೂರ್ವ ಚೀನಾ ಸಮುದ್ರದಲ್ಲಿನ ಜನವಸತಿ ಇಲ್ಲದ ದ್ವೀಪಗಳಲ್ಲಿ ಚೀನಾದ ಆಕ್ರಮಣಕಾರಿ ನೀತಿಯನ್ನು ವಿರೋಧಿಸಲು ಜಪಾನ್ ಅನ್ನು ಪ್ರೇರೇಪಿಸಿತು.

 • ಕೆಲ ಸಮಯದ ಹಿಂದೆ, ಬೀಜಿಂಗ್ ತನ್ನ ಕೋಸ್ಟ್ ಗಾರ್ಡ್ ಪಡೆಗಳಿಗೆ ಕಾನೂನುಬಾಹಿರವಾಗಿ ತನ್ನ ನೀರಿಗೆ ಪ್ರವೇಶಿಸುವ ವಿದೇಶಿ ಹಡಗುಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿಸುವ ಕಾನೂನನ್ನು ಜಾರಿಗೆ ತಂದಿತು, ಇದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯು ಹೆಚ್ಚಾಗಲು ಕಾರಣವಾಯಿತು.

 ಏನಿದು ಸಮಸ್ಯೆ?

‘ಪೂರ್ವ ಚೀನಾ ಸಮುದ್ರ’ದಲ್ಲಿ ನೆಲೆಗೊಂಡಿರುವ ಕೆಲವು ದ್ವೀಪಗಳ ಬಗ್ಗೆ ಜಪಾನ್ ಮತ್ತು ಚೀನಾ ನಡುವೆ ಸುದೀರ್ಘಕಾಲದಿಂದ ವಿವಾದವಿದೆ. ಈ ದ್ವೀಪಗಳನ್ನು ಟೋಕಿಯೊ ‘ಸೆನ್ಕಾಕು ದ್ವೀಪಗಳು’( the Senkaku islands) ಎಂದು ಮತ್ತು ಬೀಜಿಂಗ್ ಡಿಯೋಯು (the Diaoyu) ಎಂದು ಕರೆಯುತ್ತವೆ. ದ್ವೀಪಗಳು ಜಪಾನ್‌ನ ಅಧೀನದಲ್ಲಿದ್ದರೂ, ಬೀಜಿಂಗ್ ಈ ದ್ವೀಪಗಳ ಮೇಲೆ ಹಕ್ಕನ್ನು ಪ್ರತಿಪಾದಿಸುತ್ತದೆ.

ಚೀನಾದ ನಿಲುವೇನು?

 • ಚೀನಾ (ತೈವಾನ್ ಒಳಗೊಂಡಂತೆ) ಸುಮಾರು 1534 ರಿಂದ ಡಯೋಯು ದ್ವೀಪಗಳು ಚೀನಾದ ಭಾಗವಾಗಿದೆ ಎಂದು ಹೇಳುತ್ತದೆ.
 • ಮೊದಲ ಚೀನಾ-ಜಪಾನೀಸ್ ಯುದ್ಧದ ನಂತರ, ಜಪಾನ್ 1895 ರಲ್ಲಿ ಏಕಪಕ್ಷೀಯವಾಗಿದ್ದ ಶಿಮೋನೊಸೆಕಿ ಒಪ್ಪಂದವನ್ನು ಚೀನಾದ ಮೇಲೆ ಹೇರುವುದರೊಂದಿಗೆ, ಜಪಾನ್ ಈ ದ್ವೀಪಗಳನ್ನು ಬಲವಂತವಾಗಿ ಆಕ್ರಮಿಸಿಕೊಂಡಿದೆ ಎಂದು ಚೀನಾ ವಾದಿಸುತ್ತದೆ.
 • ಎರಡನೇ ಮಹಾಯುದ್ಧವನ್ನು ಕೊನೆಗೊಳಿಸಲು ಸ್ಯಾನ್ ಫ್ರಾನ್ಸಿಸ್ಕೋ ಶಾಂತಿ ಒಪ್ಪಂದದಡಿಯಲ್ಲಿ ಪಾಟ್ಸ್‌ಡ್ಯಾಮ್ ಘೋಷಣೆಯನ್ನು ಜಪಾನ್ ಅಂಗೀಕರಿಸಿದೆ ಎಂದು ಚೀನಾ ಹೇಳಿಕೊಂಡಿದೆ,ಅದರಂತೆ ಜಪಾನ್ ತೈವಾನ್ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವ ಷರತ್ತನ್ನು ಪಾಲಿಸಿದೆ. ಆದರೆ, ಚೀನಾದ ಭಾಗವಾಗಿರುವ  ತೈವಾನ್ ನ  ಮರಳಿಸುವಿಕೆಯೊಂದಿಗೆ ಅದರ(ತೈವಾನ್ ನ) ಭಾಗವಾಗಿರುವ ಈ ದ್ವೀಪಗಳನ್ನು ಹಿಂದಿರುಗಿಸಬೇಕಾಗಿತ್ತು ಎಂಬುದು ವಾದವಾಗಿದೆ.
 • ಆದರೆ ಅಮೇರಿಕಾ ಈ ದ್ವೀಪಗಳ ಮೇಲೆ ಹಿಡಿತ ಸಾಧಿಸಿತು ಮತ್ತು 1971 ರಲ್ಲಿ ಒಕಿನಾವಾ ವಾಪಸಾತಿ ಒಪ್ಪಂದದ ಪ್ರಕಾರ ( Okinawa Reversion Agreement) ಈ ದ್ವೀಪಗಳ ಆಡಳಿತವನ್ನು ಜಪಾನ್‌ಗೆ ಹಸ್ತಾಂತರಿಸಿತು.

ಯಥಾಸ್ಥಿತಿ:

 • 12 ನಾಟಿಕಲ್-ಮೈಲಿ ಪ್ರಾದೇಶಿಕ ಸಮುದ್ರದ ಹೊರಗಿನ ಸಾಗರ ವಲಯದಲ್ಲಿ ಚೀನಾದ ಮೀನುಗಾರಿಕೆ ದೋಣಿಗಳಿಗೆ ಜಪಾನ್ ಹಸ್ತಕ್ಷೇಪ ಮಾಡದಿದ್ದಲ್ಲಿ ಚೀನಾ ಯಥಾಸ್ಥಿತಿಯನ್ನು ಹೆಚ್ಚು ಕಡಿಮೆ ಒಪ್ಪಿಕೊಂಡಿತ್ತು.
 • ನಂತರ, 2012 ರಲ್ಲಿ, ಈ ದ್ವೀಪಗಳನ್ನು ಜಪಾನಿನ ಖಾಸಗಿ ಮಾಲೀಕರಿಂದ ಖರೀದಿಸಿದ ಜಪಾನ್,ಅವುಗಳನ್ನು ರಾಷ್ಟ್ರೀಕರಣಗೊಳಿಸಿ, ಯಥಾಸ್ಥಿತಿಯನ್ನು ಬದಲಿಸಿತು.
 • ಆದಾಗ್ಯೂ, ದ್ವೀಪವನ್ನು ಆಮೂಲಾಗ್ರ ರಾಷ್ಟ್ರೀಯವಾದಿಗಳ ಕೈಗೆ ಬೀಳದಂತೆ ಉಳಿಸಲು ಈ ಕ್ರಮ ಅಗತ್ಯ ಎಂದು ಜಪಾನ್ ಸರ್ಕಾರ ಕರೆ ನೀಡಿತು. ಆದರೆ ಚೀನಾ ಇದನ್ನು ಜಪಾನ್‌ನ ಅವಕಾಶವಾದವೆಂದು ಕಂಡಿತು.

ಅಂತರರಾಷ್ಟ್ರೀಯ ಸಮುದಾಯದ ಚಿಂತೆಗೆ ಕಾರಣ:

 • ಈ ವಿವಾದವು ಪ್ರಾದೇಶಿಕ ಮತ್ತು ವಿಶ್ವ ಶಾಂತಿಗೆ ಧಕ್ಕೆ ತರುತ್ತದೆ, ಏಕೆಂದರೆ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಅದರ ಮಿತ್ರ ರಾಷ್ಟ್ರಗಳು ಅಂತಿಮವಾಗಿ ಈ ವಿವಾದದಲ್ಲಿ ಭಾಗಿಯಾಗಬಹುದು. ಜಪಾನ್‌ನ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ, ಈ ದ್ವೀಪಗಳು ಯುಎಸ್-ಜಪಾನ್ ಪರಸ್ಪರ ಸಹಕಾರ ಮತ್ತು ಭದ್ರತಾ ಒಪ್ಪಂದ’ದ ವ್ಯಾಪ್ತಿಗೆ ಬರುತ್ತವೆ ಎಂದು ಅಮೇರಿಕ ಸಂಯುಕ್ತ ಸಂಸ್ಥಾನವು ಪದೇ ಪದೇ ಪುನರುಚ್ಚರಿಸಿದೆ.

 

ವಿಷಯಗಳು:   ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಉಯಿಘರ್ ಗಳ ಮೇಲಿನ ‘ದಬ್ಬಾಳಿಕೆಯನ್ನು’ ಖಂಡಿಸಿದ ಫ್ರಾನ್ಸ್:


(France slams ‘repression’ of Uighurs)

ಸಂದರ್ಭ:

ಫ್ರೆಂಚ್ ವಿದೇಶಾಂಗ ಸಚಿವ ಜೀನ್-ಯ್ವೆಸ್ ಲೆ ಡ್ರಿಯಾನ್ (French Foreign Minister Jean-Yves Le Drian ) ಅವರು ಚೀನಾದ ಉಯಿಘರ್ ಅಲ್ಪಸಂಖ್ಯಾತ ಸಮುದಾಯದ ಮೇಲಿನಸಾಂಸ್ಥಿಕ ದಬ್ಬಾಳಿಕೆಯನ್ನು / ದಮನವನ್ನು” ಖಂಡಿಸಿದ್ದಾರೆ.

ಏನಿದು ಸಮಸ್ಯೆ?

ಕ್ಸಿನ್‌ಜಿಯಾಂಗ್ ಪ್ರಾಂತ್ಯವು ಅಕ್ರಮ ಬಂಧನ ಶಿಬಿರಗಳ ದೊಡ್ಡ ಜಾಲವನ್ನು ಹೊಂದಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ, ಇದರಲ್ಲಿ ಕನಿಷ್ಠ ಒಂದು ಮಿಲಿಯನ್ ಉಯಿಘರ್ ಅಲ್ಪಸಂಖ್ಯಾತರು ಮತ್ತು ಇತರ ತುರ್ಕಿಕ್ ಮಾತನಾಡುವ ಮುಸ್ಲಿಂ ಅಲ್ಪಸಂಖ್ಯಾತರು ಇದ್ದಾರೆ. ಈ ಶಿಬಿರಗಳನ್ನು ಚೀನಾ ಉಗ್ರವಾದವನ್ನು ಎದುರಿಸಲು ಮಾಡಿರುವ ವೃತ್ತಿಪರ ತರಬೇತಿ ಕೇಂದ್ರಗಳು ಎಂದು ಬಣ್ಣಿಸಿದೆ.

ಶ್ರೀ ಲೆಡ್ರಿಯನ್ ಅವರು ಕ್ಸಿನ್‌ಜಿಯಾಂಗ್ ಅನ್ನು 2020 ರ ಅವಧಿಯಲ್ಲಿ ಮಹತ್ವದ ಮಾನವ ಹಕ್ಕುಗಳ ದಬ್ಬಾಳಿಕೆಯ’ ಅನೇಕ ಉದಾಹರಣೆಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ.

ಉಯಿಘರ್ ಗಳು ಯಾರು?

 • ಉಯಿಘರ್ ಗಳು ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ. ಅವರು ಕ್ಸಿನ್‌ಜಿಯಾಂಗ್ ಪ್ರಾಂತ್ಯದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟಿದ್ದಾರೆ.
 • ಚೀನಾಕ್ಕಿಂತ ಟರ್ಕಿ ಮತ್ತು ಮಧ್ಯ ಏಷ್ಯಾದ ಇತರ ದೇಶಗಳೊಂದಿಗೆ ಉಯಿಘರ್ ಗಳು ಹೆಚ್ಚು ನಿಕಟವಾದ ಜನಾಂಗೀಯ ಸಂಬಂಧವನ್ನು ಹೊಂದಿದ್ದಾರೆ.

ಚೀನಾ ಉಯಿಘರ್ ಗಳನ್ನು ಏಕೆ ಗುರಿಯಾಗಿಸಿಕೊಂಡಿದೆ?

 • ಕ್ಸಿನ್‌ಜಿಯಾಂಗ್ ತಾಂತ್ರಿಕವಾಗಿ ಚೀನಾದ ಸ್ವಾಯತ್ತ ಪ್ರದೇಶವಾಗಿದೆ. ಕ್ಸಿನ್‌ಜಿಯಾಂಗ್ ಚೀನಾದ ಅತಿದೊಡ್ಡ ಪ್ರದೇಶವಾಗಿದೆ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಈ ಪ್ರಾಂತ್ಯವು ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಎಂಟು ದೇಶಗಳೊಂದಿಗೆ ಗಡಿ ಹಂಚಿಕೊಡಿದೆ.
 • ಕಳೆದ ಕೆಲವು ದಶಕಗಳಲ್ಲಿ, ಕ್ಸಿನ್‌ಜಿಯಾಂಗ್ ಪ್ರಾಂತ್ಯವು ಆರ್ಥಿಕವಾಗಿ ಸಮೃದ್ಧವಾಗಿದೆ, ಹೆಚ್ಚಿನ ಸಂಖ್ಯೆಯ ‘ಹಾನ್ ಚೈನೀಸ್’ (Han Chinese) ಸಮುದಾಯವು ಈ ಪ್ರದೇಶದಲ್ಲಿ ನೆಲೆಸಿದೆ ಮತ್ತು ಉತ್ತಮ ಉದ್ಯೋಗಗಳನ್ನು ಹೊಂದಿದೆ. ಹಾನ್ ಚೈನೀಸ್ ಉಯಿಘರ್ ಗಳಿಗೆ ಜೀವನೋಪಾಯ ಮತ್ತು ಗುರುತಿನ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ.
 • ಈ ಕಾರಣಗಳಿಗಾಗಿ, ವಿರಳ ಹಿಂಸಾಚಾರ ಸಂಭವಿಸಿತು ಮತ್ತು 2009 ರಲ್ಲಿ, ಕ್ಸಿನ್‌ಜಿಯಾಂಗ್ ಪ್ರಾಂತ್ಯದ ರಾಜಧಾನಿ ಉರುಮ್ಕಿಯಲ್ಲಿ 200 ಜನರು ಹೆಚ್ಚಾಗಿ ಹಾನ್ ಚೈನೀಸ್ ಕೊಲ್ಲಲ್ಪಟ್ಟರು, ಅಂದಿನಿಂದ ಇನ್ನೂ ಅನೇಕ ಹಿಂಸಾತ್ಮಕ ಘಟನೆಗಳು ನಡೆದಿವೆ.
 • ಬೀಜಿಂಗ್, ಈ ಸಮುದಾಯವು ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಬಯಸಿದೆ ಮತ್ತು ಟರ್ಕಿ ಮತ್ತು ಇತರ ಮಧ್ಯ ಏಷ್ಯಾದ ದೇಶಗಳೊಂದಿಗಿನ ಉಯ್ಘರ್‌ಗಳ ಸಾಂಸ್ಕೃತಿಕ ಸಂಪರ್ಕದಿಂದಾಗಿ, ಪಾಕಿಸ್ತಾನದಂತಹ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಅಂಶಗಳು ಕ್ಸಿನ್‌ಜಿಯಾಂಗ್‌ನಲ್ಲಿನ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸ ಬಹುದೆಂದು ಭಯಪಡುತ್ತಿದೆ.
 • ಆದ್ದರಿಂದ, ಇಡೀ ಸಮುದಾಯವನ್ನು ಅನುಮಾನಾಸ್ಪದವೆಂದು ಪರಿಗಣಿಸಲು ಮತ್ತು ಉಯಿಘರ್ ಗಳ ಪ್ರತ್ಯೇಕ ಗುರುತನ್ನು ತೊಡೆದುಹಾಕಲು ವ್ಯವಸ್ಥಿತ ಯೋಜನೆಯನ್ನು ಪ್ರಾರಂಭಿಸುವುದು ಚೀನಾದ ನೀತಿಯಾಗಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಚುನಾವಣೆ:


ಸಂದರ್ಭ:

ಇತ್ತೀಚೆಗೆ, ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (UNHRC) ಮರು ಆಯ್ಕೆ ಯಾಗಲು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.

ಹಿನ್ನೆಲೆ:

ಅಮೆರಿಕವನ್ನು 2018 ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ (UNHRC) ಟ್ರಂಪ್ ಆಡಳಿತವು ಪ್ರತ್ಯೇಕಿಸಿತ್ತು. ‘ಮಾನವ ಹಕ್ಕುಗಳ ಮಂಡಳಿ’ ಇಸ್ರೇಲ್ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಅದರ ಇತರ ಸದಸ್ಯರ ವಿರುದ್ಧ ಪಕ್ಷಪಾತದ ಧೋರಣೆಯನ್ನು ಹೊಂದಿದೆ ಎಂದು ಟ್ರಂಪ್ ಆಡಳಿತ ವಾದಿಸಿತ್ತು.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಕುರಿತು :

‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ’ (UNHRC) ಅನ್ನು 2006 ರಲ್ಲಿ ಮರುಸಂಘಟಿಸಲಾಯಿತು, ಅದರ ನಿಕಟಪೂರ್ವ ಸಂಘಟನೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದವಿಶ್ವಾಸಾರ್ಹತೆಯ ಕೊರತೆಯನ್ನು’ ನಿವಾರಿಸಲು ಇದು ಸಹಾಯ ಮಾಡುತ್ತದೆ.

ಪ್ರಧಾನ ಕಛೇರಿ : ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.

 •  ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಪ್ರತಿವರ್ಷ ಕೆಲವು ಸದಸ್ಯರನ್ನು ಆಯ್ಕೆ ಮಾಡುತ್ತದೆ. ಅದರ ಸದಸ್ಯ ರಾಷ್ಟ್ರಗಳನ್ನು ಮೂರು ವರ್ಷಗಳ ಅವಧಿಗೆ ಆವರ್ತಕ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ, ಮತ್ತು ಕೆಲವು ಸ್ಥಾನಗಳು ಪ್ರತಿ ವರ್ಷ ಡಿಸೆಂಬರ್ 31 ರಂದು ಖಾಲಿಯಾಗುತ್ತವೆ.
 • ಪ್ರಸ್ತುತ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) 47 ಸದಸ್ಯರನ್ನು ಹೊಂದಿದೆ, ಮತ್ತು ಇಡೀ ವಿಶ್ವದ ಭೌಗೋಳಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆಧಾರದ ಮೇಲೆ, ಐದು ಪ್ರಾದೇಶಿಕ ವಿಭಾಗಗಳಲ್ಲಿ (ಆಫ್ರಿಕಾ, ಏಷ್ಯಾ-ಪೆಸಿಫಿಕ್, ಪೂರ್ವ ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಮತ್ತು ಪಶ್ಚಿಮ ಯುರೋಪ್ ಮತ್ತು ಇತರ ದೇಶಗಳಲ್ಲಿ) ಸ್ಥಾನಗಳನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.
 • ಪ್ರತಿ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
 • ಒಂದು ದೇಶಕ್ಕೆ ಒಂದು ಸ್ಥಾನವನ್ನು ಗರಿಷ್ಠ ಎರಡು ಬಾರಿ ಸತತವಾಗಿ ಹೊಂದಲು ಅವಕಾಶವಿದೆ. ಅಂದರೆ 2 ಕ್ಕಿಂತ ಹೆಚ್ಚು ಬಾರಿ ಸತತವಾಗಿ ಆಯ್ಕೆಯಾಗಲು ಅವಕಾಶವಿಲ್ಲ.
 • ಪರಿಷತ್ತಿಗೆ ಆಯ್ಕೆಯಾಗಲು ಒಂದು ದೇಶಕ್ಕೆ ಕನಿಷ್ಠ 97 ಮತಗಳು ಬೇಕಾಗುತ್ತವೆ ಮತ್ತು ಸದಸ್ಯರನ್ನು ರಹಸ್ಯ ಮತದಾನದಿಂದ ಆಯ್ಕೆ ಮಾಡಲಾಗುತ್ತದೆ.
 • ಜನವರಿ 2020 ರ ಹೊತ್ತಿಗೆ, ವಿಶ್ವಸಂಸ್ಥೆಯ 193 ಸದಸ್ಯರಲ್ಲಿ 117 ಸದಸ್ಯ ರಾಷ್ಟ್ರಗಳು ‘ಮಾನವ ಹಕ್ಕುಗಳ ಮಂಡಳಿ’ ಸದಸ್ಯರಾಗಿ ಸೇವೆ ಸಲ್ಲಿಸಿವೆ. ‘ಮಾನವ ಹಕ್ಕುಗಳ ಮಂಡಳಿ’ ಸದಸ್ಯರ ಈ ವಿಸ್ತರಣೆಯು ವಿಶ್ವಸಂಸ್ಥೆಯ ವೈವಿಧ್ಯತೆಯನ್ನು ಪ್ರತಿಬಿಂಬಿಸುವುದಲ್ಲದೆ, ಎಲ್ಲಾ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಮಾತನಾಡುವಾಗ ಪರಿಷತ್ತಿನ ನ್ಯಾಯಸಮ್ಮತತೆಯನ್ನು ಎತ್ತಿ ಹಿಡಿಯುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು:   ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೂಢೀಕರಣ , ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ಸರ್ಕಾರಿ ಆಸ್ತಿಗಳ ಹಣಗಳಿಕೆ ಅಥವಾ ಆಧುನೀಕರಣಕ್ಕಾಗಿ ಮೋದಿ ಮಂತ್ರ:


(‘Monetise or modernise’ is Modi’s mantra for govt. Assets)

ಸಂದರ್ಭ:

ಸಾರ್ವಜನಿಕ ವಲಯದ ಹೆಚ್ಚಿನ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮತ್ತು 2.5 ಲಕ್ಷ ಕೋಟಿ ರೂ.ಗಳ ಅಂದಾಜು ಹೂಡಿಕೆಯ ಸಾಮರ್ಥ್ಯವಿರುವ ವಿಮಾನ ನಿಲ್ದಾಣಗಳಂತಹ ಬಳಕೆಯಾಗದ ಮತ್ತು ಕಡಿಮೆ ಬಳಕೆಯಾದ ಆಸ್ತಿಗಳನ್ನು’ ವಿತ್ತೀಯಗೊಳಿಸುವ ಸರ್ಕಾರದ ನಿರ್ಧಾರವು ಹೂಡಿಕೆಗೆ ಅವಕಾಶಗಳನ್ನು ಸೃಷ್ಟಿಸಿದೆ ಮತ್ತು ಅವುಗಳಿಂದ ಲಾಭವನ್ನು ಪಡೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಹೂಡಿಕೆದಾರರನ್ನು (foreign investors) ಕೋರಿದ್ದಾರೆ.

ಅಗತ್ಯತೆ:

ಸಾರ್ವಜನಿಕ ಆಸ್ತಿಗಳಾದ ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ಶಿಪ್ಪಿಂಗ್ ಟರ್ಮಿನಲ್‌ಗಳು, ಪೈಪ್‌ಲೈನ್‌ಗಳು, ಮೊಬೈಲ್ ಟವರ್‌ಗಳು ಮತ್ತು ಇತರ ಭೂಮಿ ಮತ್ತು ಕಟ್ಟಡಗಳು ಮತ್ತು ಹಣಕಾಸಿನ ಆಸ್ತಿಗಳಾದ ಷೇರುಗಳು, ಸೆಕ್ಯುರಿಟೀಸ್ / ಭದ್ರತೆಗಳು ಮತ್ತು ಲಾಭಾಂಶ ಪಾವತಿಗಳು ದೇಶಾದ್ಯಂತ ಹರಡಿಕೊಂಡಿವೆ. ಅವುಗಳನ್ನು ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಘಟಕಗಳು ಅಥವಾ ಆಯಾ ರಾಜ್ಯ ಸರ್ಕಾರದ ಇಲಾಖೆಗಳು ನಿಯಂತ್ರಿಸುತ್ತವೆ.

ಈ ಸಾರ್ವಜನಿಕ ಸ್ವತ್ತುಗಳಲ್ಲಿ ಹೆಚ್ಚಿನವು ಬಳಕೆಯಾಗುವುದಿಲ್ಲ ಅಥವಾ ಕನಿಷ್ಠವಾಗಿ ಬಳಕೆಯಾಗುತ್ತವೆ;(sub-optimally utilized or are unutilized) ಇದರ ಅರ್ಥವೇನೆಂದರೆ, ಇದನ್ನು ಮಾರುಕಟ್ಟೆ ಬೆಲೆಯಲ್ಲಿ ಮಾರುಕಟ್ಟೆ ಮೌಲ್ಯಮಾಪನದಲ್ಲಿ ಬಳಸಿಕೊಳ್ಳುವ ಮೂಲಕ ಗಳಿಸಬಹುದಾದ ಗರಿಷ್ಠ ಸಾಮರ್ಥ್ಯವನ್ನು ಬಳಸುತ್ತಿಲ್ಲ.

 • ಆದ್ದರಿಂದ, ಅರ್ಥಶಾಸ್ತ್ರದ ಭಾಷೆಯಲ್ಲಿ, 50 ಕೋಟಿ ರೂ.ಗಳ ನಿವ್ವಳ ಆದಾಯವನ್ನು ಸರ್ಕಾರಿ ಆಸ್ತಿಯಿಂದ ಸಂಪಾದಿಸಿದರೆ, ಆದರೆ ನಿಜವಾಗಿ ಅದು 500 ಕೋಟಿ ರೂ. ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಅದನ್ನು ಅತ್ಯುತ್ತಮ ಸಾಮರ್ಥ್ಯಕ್ಕಿಂತ ಕನಿಷ್ಠ ಉತ್ತಮತೆ ಯೊಂದಿಗೆ ಬಳಸಿಕೊಳ್ಳಲಾಗಿದೆ ಎಂದು ಕರೆಯಲಾಗುತ್ತದೆ. ನಾವು ಖಾಲಿ ಪ್ಲಾಟ್‌ಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ, ಆದರೆ, ಅದರ ಸಾಮರ್ಥ್ಯ ತುಂಬಾ ವಿಶಾಲವಾಗಿರುತ್ತದೆ ಎಂಬುದನ್ನು ನಿರ್ಲಕ್ಷಿಸಿ ನಿರ್ಲಕ್ಷಿಸಿರುತ್ತೇವೆ.

ಅದರ ಪ್ರಯೋಜನಗಳೇನು?

 • ಈ ಪ್ರಕ್ರಿಯೆಯ ಮೂಲಕ ಸಂಗ್ರಹಿಸಿದ ಹಣವನ್ನು ಬಡವರಿಗೆ ಮನೆಗಳನ್ನು ನಿರ್ಮಿಸುವ ಮೂಲಕ ಮತ್ತು ಎಲ್ಲರಿಗೂ ಶುದ್ಧ ನೀರಿನ ಲಭ್ಯತೆಯನ್ನು ಖಾತರಿಪಡಿಸುವ ಮೂಲಕ ನಾಗರಿಕರನ್ನು ಶಕ್ತಗೊಳಿಸಲು ಬಳಸಬಹುದು.
 • ಈ ನೀತಿಯು ವಾರ್ಷಿಕ ಹೂಡಿಕೆಯ ಗುರಿಗಳನ್ನು ಮೀರಿ ಮಧ್ಯಮ-ಅವಧಿಯ ಕಾರ್ಯತಂತ್ರದ ವಿಧಾನಕ್ಕೆ ವಿಸ್ತರಿಸುತ್ತದೆ. ಇದು ಪ್ರತಿ ವಲಯದ ಕೈಗಾರಿಕೆಗಳಲ್ಲಿ ಹೊಸ ಹೂಡಿಕೆ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
 • ಖಾಸಗಿ ವಲಯವು ಬಂಡವಾಳವನ್ನು ಉತ್ಪಾದಿಸಲು ಮಾತ್ರವಲ್ಲ, ಜಾಗತಿಕವಾಗಿ ಉತ್ತಮ ಅಭ್ಯಾಸಗಳನ್ನು ಪರಿಚಯಿಸುತ್ತದೆ ಮತ್ತು ಇದು ಗುಣಮಟ್ಟದ ಮಾನವಶಕ್ತಿ ಸೃಷ್ಟಿಗೆ ಮತ್ತು ಉದ್ಯಮಗಳ ಆಧುನೀಕರಣಕ್ಕೂ ಕಾರಣವಾಗಬಹುದು.

ಸವಾಲುಗಳು:

 • ಇದು ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಇದು ಪ್ರಶ್ನಾರ್ಹವಾದ ಆಸ್ತಿಯ ಸರಿಯಾದ ಮೌಲ್ಯಮಾಪನ, ದೇಶದಲ್ಲಿ ಭವಿಷ್ಯದ ಮೂಲಸೌಕರ್ಯ ಅಗತ್ಯತೆಗಳು ಮತ್ತು ಉದ್ದೇಶಿತ ಉದ್ದೇಶವನ್ನು ಪೂರೈಸುವ ಖಾಸಗಿ ವಲಯದ ಸಾಮರ್ಥ್ಯ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
 • ಇದಲ್ಲದೆ, ಸಾರ್ವಜನಿಕ ಮೂಲಸೌಕರ್ಯ ನಿರ್ವಹಣೆಯನ್ನು ಖಾಸಗಿ ಕೈಯಲ್ಲಿ ಸ್ವೀಕರಿಸುವಲ್ಲಿ ನಾಗರಿಕರ ಒಪ್ಪಿಗೆ ಕೂಡ ಅಷ್ಟೇ ಮುಖ್ಯವಾಗಿದೆ.
 • ಸಾರ್ವಜನಿಕರಿಗೆ ದೂರು ಅಥವಾ ಕುಂದುಕೊರತೆಗಳು ಇದ್ದರೆ, ಅದನ್ನು ಖಾಸಗಿ ವಲಯವು ತಕ್ಷಣವೇ ಪರಿಹರಿಸಬೇಕಾಗಿದೆ.

ಇಲ್ಲದಿದ್ದರೆ, ‘ಸಾರ್ವಜನಿಕ-ಖಾಸಗಿ-ಪಾಲುದಾರಿಕೆ’ ಉದ್ಯಮದ ತಪ್ಪು ಅನುಭವವು ದೀರ್ಘಾವಧಿಯಲ್ಲಿ ಸಾರ್ವಜನಿಕ ಗ್ರಹಿಕೆಗೆ ಹಾನಿ ಉಂಟು ಮಾಡುತ್ತದೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಸೃಷ್ಟಿಸಲ್ಪಟ್ಟ ದಾರಿತಪ್ಪಿಸುವ ಅನುಮಾನಗಳನ್ನು ನಿರ್ಮೂಲನೆ ಮಾಡಲು ಮತ್ತು ಬಲವಾದ ಸಾರ್ವಜನಿಕ ಬೆಂಬಲವನ್ನು ರೂಪಿಸಲು ‘ಸಂವಾದ’ವು ಒಂದು ಪರಿಣಾಮಕಾರಿ ಮಾರ್ಗವಾಗಿದೆ.

ಯಶಸ್ವಿ ‘ಹಣಗಳಿಕೆಗೆ’ ನಾಲ್ಕು-ಹಂತದ ಪ್ರಕ್ರಿಯೆಯ ಅಗತ್ಯವಿದೆ.

 • ಮೊದಲಿಗೆ, ನೀತಿ ರಚಿಸುವ ಸರ್ಕಾರದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು.
 • ಎರಡನೆಯದಾಗಿ, ಸ್ವತ್ತುಗಳ ವಿವರವಾದ ವಿಶ್ಲೇಷಣೆ (ಕಾರ್ಯಾಚರಣೆ ಮತ್ತು ಹಣಕಾಸು ಎರಡೂ) ಅಗತ್ಯವಿದೆ.
 • ಮೂರನೆಯದಾಗಿ, ಸ್ವತ್ತುಗಳ ಪ್ರಸ್ತುತ ಮತ್ತು ಭವಿಷ್ಯದ ಸಾಮರ್ಥ್ಯವನ್ನು ವಿಶ್ಲೇಷಿಸುವುದು ಅವಶ್ಯಕ.
 • ನಾಲ್ಕನೆಯದಾಗಿ, ಎಲ್ಲಾ ಮಧ್ಯಸ್ಥಗಾರರನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಮತ್ತು ಉದ್ದೇಶಿತ ಕಲ್ಪನೆಯನ್ನು ಪೂರೈಸಲು ಯೋಜನೆಯನ್ನು ಕಾರ್ಯಗತಗೊಳಿಸುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 4


 

ವಿಷಯಗಳು: ಮಾನವೀಯ ಮೌಲ್ಯಗಳು – ಶ್ರೇಷ್ಠ ನಾಯಕರು, ಸುಧಾರಕರು ಮತ್ತು ನಿರ್ವಾಹಕರ ಜೀವನ ಮತ್ತು ಬೋಧನೆಗಳಿಂದ ಪಾಠಗಳು; ಮೌಲ್ಯಗಳನ್ನು ಬೆಳೆಸುವಲ್ಲಿ ಕುಟುಂಬ, ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ.

ಮೌನವಾಗಿರುವ ಹಕ್ಕನ್ನು ಸದ್ಗುಣವೆಂದು ಅಥವಾ ನೈತಿಕತೆ ಎಂದು ಗುರುತಿಸಿ’:


(‘Recognise right to silence as a virtue’)

ಸಂದರ್ಭ:

ಈ “ಗದ್ದಲದ ಹೊತ್ತಿನಲ್ಲಿ”ಮೌನವಾಗಿರುವ’ ಹಕ್ಕನ್ನು ನೈತಿಕತೆಯೆಂದು ಗುರುತಿಸಬೇಕೆಂದು ಫೇಸ್‌ಬುಕ್ ಅಧಿಕಾರಿ ಅಜಿತ್ ಮೋಹನ್ ಸುಪ್ರೀಂ ಕೋರ್ಟನ್ನು ಒತ್ತಾಯಿಸಿದ್ದಾರೆ.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಷ್ಟೇ ಮೌನವಾಗಿರಲು ಹಕ್ಕಿದೆ ಎಂದು ಅವರು ಹೇಳಿದ್ದಾರೆ.

ಏನಿದು ಪ್ರಕರಣ?

 • ದೆಹಲಿ ವಿಧಾನಸಭೆಯ ‘ಶಾಂತಿ ಮತ್ತು ಸಾಮರಸ್ಯ ಸಮಿತಿ’ ನೀಡಿದ ಸಮನ್ಸ್ ವಿರುದ್ಧ ಅಜಿತ್ ಮೋಹನ್ ಅರ್ಜಿ ಸಲ್ಲಿಸಿದ್ದಾರೆ.
 • ದೆಹಲಿ ಗಲಭೆಗೆ ಸಂಬಂಧಿಸಿದಂತೆ ‘ದ್ವೇಷದ ಮಾತು’ ನಿಗ್ರಹಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಫೇಸ್‌ಬುಕ್‌ನ ಪಾತ್ರವನ್ನು ತನಿಖೆ ಮಾಡುವ ಸಮಿತಿಯ ಮುಂದೆ ಹಾಜರಾಗಿ ಸಾಕ್ಷಿ ಹೇಳಲು ಕಳೆದ ಫೆಬ್ರವರಿಯಲ್ಲಿ ಸಮಿತಿ ಹೊರಡಿಸಿದ ಸಮನ್ಸ್ ಮತ್ತು ಸವಲತ್ತು ಉಲ್ಲಂಘನೆಯ (breach of privilege) ಬೆದರಿಕೆಯನ್ನು ಅಜಿತ್ ಮೋಹನ್ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಮಾನ್ಯತೆ ಪಡೆದ ಹೂಡಿಕೆದಾರ:

(Accredited investor)

 • ಅವರನ್ನು ಅರ್ಹ ಹೂಡಿಕೆದಾರರು ಅಥವಾ ವೃತ್ತಿಪರ ಹೂಡಿಕೆದಾರರು ಎಂದೂ ಕರೆಯುತ್ತಾರೆ.
 • ಅವರು ವಿವಿಧ ಹಣಕಾಸು ಉತ್ಪನ್ನಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದವರಾಗಿದ್ದರೆ ಮತ್ತು ಅವುಗಳಿಗೆ ಸಂಬಂಧಿಸಿದ ಅಪಾಯಗಳು ಮತ್ತು ಆದಾಯಗಳು.
 • ಅವರು ತಮ್ಮ ಹೂಡಿಕೆಗಳಿಗೆ ಸಂಬಂಧಿಸಿದಂತೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ಜಾಗತಿಕವಾಗಿ ಅನೇಕ ಸೆಕ್ಯುರಿಟೀಸ್ ಮತ್ತು ಹಣಕಾಸು ಮಾರುಕಟ್ಟೆ ನಿಯಂತ್ರಕರಿಂದ ಗುರುತಿಸಲ್ಪಡುತ್ತಾರೆ.

ಸುದ್ದಿಯಲ್ಲಿರಲು ಕಾರಣವೇನು?

 • ‘ಮಾನ್ಯತೆ ಪಡೆದ’ ಹೂಡಿಕೆದಾರರ (Accredited investor) ಪರಿಕಲ್ಪನೆಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಪರಿಗಣಿಸುತ್ತಿದೆ.
 • ಒಮ್ಮೆ ಮಾನ್ಯತೆ / ‘ಪ್ರಮಾಣೀಕರಣ’ (accreditation) ನೀಡಿದರೆ, ಅದು ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ ಎಂದು ಸೆಬಿ ಹೇಳಿದೆ.
 • ‘ಮಾನ್ಯತೆ ಏಜೆನ್ಸಿಗಳ’ ಮೂಲಕ ಮಾನ್ಯತೆ ಅಥವಾ ಪ್ರಮಾಣೀಕರಣವನ್ನು ಸಾಧಿಸಬಹುದು. ಈ ಏಜೆನ್ಸಿಗಳು ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳು ಅಥವಾ ಅವುಗಳ ಅಂಗಸಂಸ್ಥೆಗಳಾಗಿರಬಹುದು.

ಶ್ರೀಲಂಕಾಗೆ  $ 50 ಮಿಲಿಯನ್ ರಕ್ಷಣಾ ಕ್ರೆಡಿಟ್ ಲೈನ್


 (ರಕ್ಷಣಾ ಸಾಲವನ್ನು) ಘೋಷಿಸಿದ ಇಮ್ರಾನ್ ಖಾನ್:

(Imran announces $50 mn defence credit line for Lanka)

 • ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶ್ರೀಲಂಕಾಕ್ಕೆ million 50 ಮಿಲಿಯನ್ ರಕ್ಷಣಾ ಸಾಲ ಸೌಲಭ್ಯವನ್ನು ಘೋಷಿಸಿದ್ದಾರೆ.
 • ಇಮ್ರಾನ್ ಖಾನ್ ಅವರ ಶ್ರೀಲಂಕಾ ಭೇಟಿಯು ಸಾಂಕ್ರಾಮಿಕ ರೋಗವು (ಕೋವಿಡ್-19) ವಿಶ್ವವನ್ನು ಅಪ್ಪಳಿಸಿದ ನಂತರದಲ್ಲಿ ಸರ್ಕಾರದ ಮುಖ್ಯಸ್ಥರೊಬ್ಬರ ಮೊದಲ ಭೇಟಿಯಾಗಿದೆ.
 • ಉಭಯ ದೇಶಗಳಲ್ಲಿ ಹೊಸ ಸರ್ಕಾರಗಳು ರಚನೆಯಾದ ನಂತರ ಇದು ಪಾಕಿಸ್ತಾನದ ಪ್ರಧಾನ ಮಂತ್ರಿಯ ಮೊದಲ ಭೇಟಿಯಾಗಿದೆ.

(ಗಮನಿಸಿ: ಎಲ್ಲ ವಿವರಗಳ ಅಗತ್ಯವಿಲ್ಲ).

 ಕೋವಾಕ್ಸ್ ಲಸಿಕೆಗಳನ್ನು ಪಡೆದ ಮೊದಲ ದೇಶ ಘಾನಾ:

ಕೊವಾಕ್ಸ್ (COVAX) – ಹೆಚ್ಚಿನ ಮತ್ತು ಕಡಿಮೆ ಆದಾಯದ ದೇಶಗಳ ನಡುವಿನ ಲಸಿಕೆ ಅಸಮಾನತೆಯನ್ನು ಕಡಿಮೆ ಮಾಡುವ ಉಪಕ್ರಮದ ಭಾಗವಾಗಿ, ಕೊವಾಕ್ಸ್ ಲಸಿಕೆ ಪಡೆದ ಮೊದಲ ದೇಶ ಘಾನಾ, ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆಯ 600,000 ಪ್ರಮಾಣಗಳು (doses) ರಾಜಧಾನಿ ಅಕ್ರಾದಲ್ಲಿ ಆಗಮಿಸುತ್ತಿವೆ.

ಕೋವಾಕ್ಸ್ ಎಂದರೇನು?

COVAX ಎಂಬುದು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಎರಡು ಅಂತರರಾಷ್ಟ್ರೀಯ ಗುಂಪುಗಳ ನಡುವಿನ ಪಾಲುದಾರಿಕೆಯಾಗಿದೆ – GAVI ಲಸಿಕೆ ಒಕ್ಕೂಟ ಮತ್ತು ಸಾಂಕ್ರಾಮಿಕ ಪೂರ್ವಸಿದ್ಧತೆ ಆವಿಷ್ಕಾರಗಳ ಒಕ್ಕೂಟ- CEPI. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ.

 • ಇದಕ್ಕಾಗಿ, ಹೆಚ್ಚಿನ ಆದಾಯದ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಾದ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ನಿಂದ ಹಣವನ್ನು ನೀಡಲಾಗುತ್ತದೆ.

ರಾಷ್ಟ್ರೀಯ ನಗರ ಡಿಜಿಟಲ್ ಅಭಿಯಾನ (NUDM) :

(National Urban Digital Mission)

 • ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದೆ.
 • ನಗರಗಳು ಮತ್ತು ಪಟ್ಟಣಗಳಿಗೆ ಒಟ್ಟಾರೆ ಬೆಂಬಲವನ್ನು ಒದಗಿಸಲು ಜನರು, ಪ್ರಕ್ರಿಯೆ ಮತ್ತು ವೇದಿಕೆಯಂತಹ ಮೂರು ಸ್ತಂಭಗಳಲ್ಲಿ ಕೆಲಸ ಮಾಡುವ ನಗರ ಭಾರತಕ್ಕಾಗಿ ಹಂಚಿಕೆಯ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತದೆ.
 • 2022 ರ ವೇಳೆಗೆ 2022 ನಗರಗಳಲ್ಲಿ ಮತ್ತು 2024 ರ ವೇಳೆಗೆ ಭಾರತದ ಎಲ್ಲಾ ನಗರಗಳು ಮತ್ತು ಪಟ್ಟಣಗಳಲ್ಲಿ ನಗರ ಆಡಳಿತ ಮತ್ತು ಸೇವಾ ವಿತರಣೆಗೆ ನಾಗರಿಕ ಕೇಂದ್ರಿತ ಮತ್ತು ಪರಿಸರ ವ್ಯವಸ್ಥೆ ಚಾಲಿತ ವಿಧಾನವನ್ನು ಅಳವಡಿಸುವ ಉದ್ದೇಶದಿಂದ ಈ ಮಿಷನ್ ಕಾರ್ಯನಿರ್ವಹಿಸುತ್ತದೆ.
 • ಇದರ ಕಾರ್ಯಾಚರಣೆಯಡಿಯಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಫೆಬ್ರವರಿ 2019 ರಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ನಗರ ಇನ್ನೋವೇಶನ್ ಸ್ಟ್ಯಾಕ್ (NUIS) ಕಾರ್ಯತಂತ್ರ ಮತ್ತು ವಿಧಾನ ಆಧಾರಿತ ತಂತ್ರಜ್ಞಾನ ವಿನ್ಯಾಸ ತತ್ವಗಳನ್ನು ಆಧರಿಸಿವೆ.

ಬೃಹತ್ ಅಣೆಕಟ್ಟುಗಳ ಮೇಲಣ ಅಂತರರಾಷ್ಟ್ರೀಯ ಆಯೋಗ (ICOLD) :


(International Commission on Large Dams)

ಸಂದರ್ಭ :

ಇತ್ತೀಚೆಗೆ, ಅಣೆಕಟ್ಟುಗಳು ಮತ್ತು ನದಿ ಜಲಾನಯನ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ಆಯೋಗದ ಬೃಹತ್ ಅಣೆಕಟ್ಟು (ICOLD) ವಿಚಾರ ಸಂಕಿರಣವನ್ನು ಉದ್ಘಾಟಿಸಲಾಯಿತು.

 • ಬೃಹತ್ ಅಣೆಕಟ್ಟುಗಳ ಅಂತರರಾಷ್ಟ್ರೀಯ ಆಯೋಗವು (International Commission on Large Dams-ICOLD) ಒಂದು ಸರ್ಕಾರೇತರ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಇದು ಅಣೆಕಟ್ಟು ಎಂಜಿನಿಯರಿಂಗ್‌ನಲ್ಲಿ ಜ್ಞಾನ ಮತ್ತು ಅನುಭವದ ವಿನಿಮಯಕ್ಕೆ ಒಂದು ವೇದಿಕೆಯನ್ನು ಒದಗಿಸುತ್ತದೆ.
 •  ICOLD ಅನ್ನು 1928 ರಲ್ಲಿ ಸ್ಥಾಪಿಸಲಾಯಿತು ಮತ್ತು ಸುಮಾರು 10,000 ಖಾಸಗಿ ಸದಸ್ಯರನ್ನು ಹೊಂದಿರುವ 100 ಕ್ಕೂ ಹೆಚ್ಚು ದೇಶಗಳ ರಾಷ್ಟ್ರೀಯ ಸಮಿತಿಗಳನ್ನು ಒಳಗೊಂಡಿದೆ.
 • ಇದರ ಸದಸ್ಯರು ಹೆಚ್ಚಾಗಿ ಎಂಜಿನಿಯರ್‌ಗಳು, ಭೂವಿಜ್ಞಾನಿಗಳು ಮತ್ತು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳ ವಿಜ್ಞಾನಿಗಳು, ಸಲಹಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಪ್ರಯೋಗಾಲಯಗಳು ಮತ್ತು ಇತ್ಯಾದಿ ನಿರ್ಮಾಣ ಕಂಪನಿಗಳನ್ನು ರಚಿಸುತ್ತಿದ್ದಾರೆ.
 • ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ನಿಗದಿಪಡಿಸುವಲ್ಲಿ ICOLD ಯು ವೃತ್ತಿಪರರನ್ನು ಮುನ್ನಡೆಸುತ್ತದೆ ಮತ್ತು ನಿರ್ಮಿಸಬೇಕಾದ ಅಣೆಕಟ್ಟುಗಳು ಪರಿಸರ ಸಮರ್ಥನೀಯ ಮತ್ತು ಸಾಮಾಜಿಕವಾಗಿ ಸಮಾನವಾಗಿವೆ ಮತ್ತು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಖಚಿತಪಡಿಸುತ್ತದೆ.
 • ಇದರ ಪ್ರಧಾನ ಕಛೇರಿಯು ಫ್ರಾನ್ಸ್ ನ ಪ್ಯಾರಿಸ್ ನಲ್ಲಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos