Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 2 ಫೆಬ್ರವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸ್ಟಾರ್ಸ್ ಯೋಜನೆ.

2. ಮ್ಯಾನ್ಮಾರ್ ನಲ್ಲಿ ದಂಗೆ ಎದ್ದಿರುವ ಸೇನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬಜೆಟ್ ( ಆಯವ್ಯಯ ) ಎಂದರೇನು?

2. 2026ರ ಹಣಕಾಸು ವರ್ಷದ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡ 4.5ಕ್ಕೆ ಮಿತಿಗೊಳಿಸುವ ಭರವಸೆ ಹೊಂದಿರುವ ಸರ್ಕಾರ.

3. ಏನಿದು, ಜೈವಿಕ ಇಂಧನದಿಂದ ಚಲಿಸುವ ಮೊದಲ ರಾಕೆಟ್ ಆದ ಸ್ಟಾರ್‌ಡಸ್ಟ್ 1.0?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು :

1. ಕೊಲಂಬೊದಲ್ಲಿನ ಪೂರ್ವ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಪಡಿಸುವಲ್ಲಿ ಭಾರತಕ್ಕೆ ಯಾವುದೇ ಪಾತ್ರವಿಲ್ಲ.

2. ಲಡಾಕ್‌ನಲ್ಲಿ ತಲೆಯೆತ್ತಲಿರುವ ಕೇಂದ್ರೀಯ ವಿಶ್ವವಿದ್ಯಾಲಯ.

3. ಪ್ರಭುದ್ಧ ಭಾರತ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸ್ಟಾರ್ಸ್ ಯೋಜನೆ :


STARS project to develop education:

ಸಂದರ್ಭ :

ಶಿಕ್ಷಣ ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ (DEA) ಮತ್ತು ವಿಶ್ವಬ್ಯಾಂಕ್ ಗಳು ರಾಜ್ಯಗಳಲ್ಲಿ ಬೋಧನೆ-ಕಲಿಕೆ ಮತ್ತು ಫಲಿತಾಂಶಗಳನ್ನು ಬಲಪಡಿಸುವ ಅಥವಾ ಸುಧಾರಿಸುವ ಅನುಷ್ಠಾನ ಯೋಜನೆಗೆ (the Strengthening Teaching-Learning and Results for States (STARS) project.)  5718 ಕೋಟಿ ರೂ.ಗಳ ಆರ್ಥಿಕ ನೆರವು ನೀಡುವ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಯೋಜನೆಯ ಕುರಿತು:

STARS ಎಂದರೆ ರಾಜ್ಯಗಳಲ್ಲಿ ಬೋಧನೆ-ಕಲಿಕೆ ಮತ್ತು ಫಲಿತಾಂಶಗಳನ್ನು ಬಲಪಡಿಸುವ ಅಥವಾ ಸುಧಾರಿಸುವ ಕಾರ್ಯಕ್ರಮ (STARS) ವಾಗಿದೆ.

STARS stands for – Strengthening Teaching-Learning and Results for States Program- STARS .

ಸ್ಟಾರ್ಸ್ ಯೋಜನೆಯನ್ನು,ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಹೊಸ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು.

ಇದು ಭಾರತದ ಆರು ರಾಜ್ಯಗಳಲ್ಲಿ ಶಾಲಾ ಶಿಕ್ಷಣದ ಗುಣಮಟ್ಟ ಮತ್ತು ಆಡಳಿತವನ್ನು ಸುಧಾರಿಸುವ ಯೋಜನೆಯಾಗಿದೆ.

 • ಆರು ರಾಜ್ಯಗಳೆಂದರೆ – ಹಿಮಾಚಲಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಓಡಿಶಾ, ಮಹಾರಾಷ್ಟ್ರ ಮತ್ತು ಕೇರಳ ಗಳಾಗಿವೆ.
 • 5 ಮಿಲಿಯನ್ ಶಾಲೆಗಳಲ್ಲಿ ಓದುತ್ತಿರುವ ಸುಮಾರು 250 ಮಿಲಿಯನ್ ವಿದ್ಯಾರ್ಥಿಗಳು (6 ರಿಂದ 17 ವರ್ಷದೊಳಗಿನವರು), ಮತ್ತು 10 ದಶಲಕ್ಷಕ್ಕೂ ಹೆಚ್ಚು ಶಿಕ್ಷಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯುಲಿದ್ದಾರೆ.

ಈ ಯೋಜನೆಯಡಿಯಲ್ಲಿನ ಸುಧಾರಣಾ ಉಪಕ್ರಮಗಳು:

 • ಶಾಲಾ ಸುಧಾರಣೆಗೆ ಕಸ್ಟಮೈಸ್ ಮಾಡಿದ (ಮಾರ್ಪಡಿಸಿದ) ಸ್ಥಳೀಯ ಮಟ್ಟದ ಪರಿಹಾರಗಳನ್ನು ಒದಗಿಸುವ ಮೂಲಕ ರಾಜ್ಯ, ಜಿಲ್ಲಾ ಮತ್ತು ಉಪ ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಸೇವೆಗಳನ್ನು ತಲುಪಿಸಲು ಹೆಚ್ಚು ಗಮನಹರಿಸುವುದು.
 • ಕಲಿಕೆಯ ಗುಣಮಟ್ಟವನ್ನು ನಿರ್ಣಯಿಸಲು ಉತ್ತಮ ಡೇಟಾವನ್ನು ಉತ್ಪಾದಿಸುವ ಮೂಲಕ ಹೆಚ್ಚಿನ ಹೊಣೆಗಾರಿಕೆ ಮತ್ತು ಸೇರ್ಪಡೆಗಾಗಿ ಮಧ್ಯಸ್ಥಗಾರರಿಂದ, ವಿಶೇಷವಾಗಿ ಪೋಷಕರಿಂದ ಬೇಡಿಕೆಗಳನ್ನು ಪರಿಹರಿಸುವುದು;ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ನೀಡುವುದು.
 • ಉತ್ತಮ ಕಲಿಕೆಯ ಫಲಿತಾಂಶಗಳನ್ನು ಸಾಧಿಸಲು ಶಿಕ್ಷಕರು ಕೇಂದ್ರ ಬಿಂದುವಾಗಿದ್ದಾರೆ ಎಂದು ಗುರುತಿಸುವ ಮೂಲಕ ಈ ರೂಪಾಂತರವನ್ನು ನಿರ್ವಹಿಸಲು ಶಿಕ್ಷಕರನ್ನು ಸಜ್ಜುಗೊಳಿಸುವುದು.
 • 1 ರಿಂದ 3 ನೇ ತರಗತಿಗಳಲ್ಲಿನ ಮಕ್ಕಳಿಗೆ ಅಡಿಪಾಯದ (Basics) ಕಲಿಕೆಯನ್ನು ಬಲಪಡಿಸುವ ಮೂಲಕ ಭಾರತದ ಮಾನವ ಬಂಡವಾಳದ ಅಗತ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚು ಹೂಡಿಕೆ ಮಾಡುವುದು ಮತ್ತು ಭವಿಷ್ಯದ ಕಾರ್ಮಿಕ ಮಾರುಕಟ್ಟೆಯ ಅಗತ್ಯತೆಗಳನ್ನು ಪೂರೈಸಲು ಅವರ ಅರಿವಿನ, ಸಾಮಾಜಿಕ-ವರ್ತನೆಯ ಮತ್ತು ಭಾಷಾ ಕೌಶಲ್ಯ ಅಭಿವೃದ್ಧಿಯನ್ನು ಖಚಿತಪಡಿಸುವುದು.

ಯೋಜನೆಯ ವಿಶಿಷ್ಟ ಅಂಶಗಳು :

ಆಕಸ್ಮಿಕ ತುರ್ತು ಪ್ರತಿಕ್ರಿಯೆ ಘಟಕ (CERC) :

ಸ್ಟಾರ್ಸ್ ಯೋಜನೆಯು ರಾಷ್ಟ್ರೀಯ ಘಟಕದ ಅಡಿಯಲ್ಲಿ ಆಕಸ್ಮಿಕ ತುರ್ತು ಪ್ರತಿಕ್ರಿಯೆ ಘಟಕವನ್ನು (Contingency Emergency Response Component– CERC) ಒಳಗೊಂಡಿದೆ, ಅದು ಯಾವುದೇ ನೈಸರ್ಗಿಕ, ಮಾನವ ನಿರ್ಮಿತ ಮತ್ತು ಆರೋಗ್ಯ ವಿಪತ್ತುಗಳಿಗೆ ಹೆಚ್ಚು ಜವಾಬ್ದಾರಿಯನ್ನು ನೀಡುತ್ತದೆ.

 • ಕಲಿಕೆ ನಷ್ಟಕ್ಕೆ ಕಾರಣವಾಗುವ ಶಾಲೆಗಳ ಮುಚ್ಚುವಿಕೆ / ಮೂಲಸೌಕರ್ಯ ನಷ್ಟ, ಅಸಮರ್ಪಕ ಸೌಲಭ್ಯಗಳು ಮತ್ತು ದೂರಸ್ಥ ಕಲಿಕೆಯಲ್ಲಿ ಬೆಂಬಲವನ್ನು ಒದಗಿಸಲು ತಂತ್ರಜ್ಞಾನದ ಬಳಕೆಯಂತಹ ಸಂದರ್ಭಗಳನ್ನು ಎದುರಿಸಲು ಇವು ಸರ್ಕಾರಕ್ಕೆ ಸಹಾಯ ಮಾಡುತ್ತವೆ.
 • CERC ಘಟಕವು ಹಣದ ತ್ವರಿತ ಮರು ವರ್ಗೀಕರಣ ಮತ್ತು ತಡೆರಹಿತ ಹಣಕಾಸು ವಿನಂತಿಯ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಬೆಂಬಲಿಸುತ್ತದೆ.

ಪರಖ್ (PARAKH):

ಯೋಜನೆಯ ಪ್ರಮುಖ ಅಂಶವೆಂದರೆ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ ಪರಖ್’ ಅನ್ನು ಸ್ಥಾಪಿಸುವುದು ಆಗಿದೆ.

PARAKH – (Performance Assessment, Review, and Analysis of Knowledge for Holistic Development).

ಪರಖ್- ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ಷಮತೆ ಮೌಲ್ಯಮಾಪನ ವಿಮರ್ಶೆ ಮತ್ತು ಜ್ಞಾನದ ವಿಶ್ಲೇಷಣೆ.

 • ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಸಂಯೋಜಿಸಲ್ಪಟ್ಟ ‘ಪರಖ್’, ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ಇದು ದೇಶದ ಎಲ್ಲಾ ಶಾಲಾ ಮಂಡಳಿಗಳಿಗೆ ವಿದ್ಯಾರ್ಥಿಗಳ ಮೌಲ್ಯಮಾಪನ ಮತ್ತು ಮೌಲ್ಯಮಾಪನದ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಪ್ರಸ್ತುತ, ಹೆಚ್ಚಿನ ಶಾಲಾ ಮಂಡಳಿಗಳು ರಾಜ್ಯ ಸರ್ಕಾರಗಳು ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸುತ್ತವೆ.
 • ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಇದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನ ಫಲಿತಾಂಶಗಳನ್ನು ಮೇಲ್ವಿಚಾರಣೆ ಮಾಡಲು ಪ್ರಮಾಣೀಕೃತ ಪರೀಕ್ಷೆಗೆ ಮಾರ್ಗದರ್ಶನಗಳನ್ನು ನೀಡುತ್ತದೆ.

 

ವಿಷಯಗಳು : ಭಾರತ ಮತ್ತು ಅದರ ನೆರೆಹೊರೆಯ ದೇಶಗಳೂ೦ದಿಗಿನ ಸಂಬಂಧಗಳು.

 ಮ್ಯಾನ್ಮಾರ್ ನಲ್ಲಿ ದಂಗೆ ಎದ್ದಿರುವ ಸೇನೆ :


 ಸಂದರ್ಭ :

ಮ್ಯಾನ್ಮಾರ್ ಸೇನೆಯು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂಕಿ’ ಸರ್ಕಾರದ ವಿರುದ್ಧ ದಂಗೆ ಎದ್ದಿದೆ.

 • ‘ಚುನಾವಣಾ ವಂಚನೆಗೆ’ ಪ್ರತಿಕ್ರಿಯೆಯಾಗಿ ನಾಯಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ಹೇಳಿದೆ.

ಈ ಸೇನಾ ದಂಗೆಯಿಂದ ಭಾರತದ ಮೇಲಾಗುವ ಪರಿಣಾಮಗಳು :

 • ಭಾರತಕ್ಕೆ ಸಂಬಂಧಿಸಿದಂತೆ, ಮ್ಯಾನ್ಮಾರ್ ನ ಸೈನ್ಯ ‘ಟಾಟ್ಮಾಡಾವ್’ ಮಿಲಿಟರಿ ಆಡಳಿತಕ್ಕೆ ಹಿಂದಿರುಗಿರುವುದು ಮತ್ತು ಆಂಗ್ ಸಾನ್ ಸೂಕಿ ಮತ್ತು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (NLD) ಯ ರಾಜಕೀಯ ನಾಯಕರನ್ನು ಬಂಧಿಸಿರುವುದು 30 ವರ್ಷಗಳ ಹಿಂದಿನ ಘಟನೆಗಳ ಪುನರಾವರ್ತನೆಯಾಗಿದೆ.

 ಭಾರತದ ಮುಂದಿನ ಪ್ರತಿಕ್ರಿಯೆ:

ಈ ಬಾರಿ ಭಾರತದ ಪ್ರತಿಕ್ರಿಯೆ ವಿಭಿನ್ನವಾಗಿರಬಹುದು. ಭಾರತವು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಂಡಿರುವುದರಿಂದಲೇ, ಮಿಲಿಟರಿ ದಂಗೆಯನ್ನು ವಿರೋಧಿಸಲು ಅದು ಸಾಧ್ಯವಿಲ್ಲ. ಏಕೆಂದರೆ:

 • ಮ್ಯಾನ್ಮಾರ್‌ನ ಮಿಲಿಟರಿಯೊಂದಿಗೆ ಭಾರತದ ಭದ್ರತಾ ಸಂಬಂಧಗಳು ನಿಕಟಗೊಂಡಿವೆ ಮತ್ತು ಭಾರತಕ್ಕೆ, ಈಶಾನ್ಯ ಗಡಿನಾಡುಗಳನ್ನು ಬಂಡುಕೋರ ಗುಂಪುಗಳಿಂದ ಭದ್ರಪಡಿಸುವಲ್ಲಿ ಮ್ಯಾನ್ಮಾರ್ ಸೈನ್ಯದ ಸಹಾಯದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಗಳ ಸೇತುವೆಗೆ’ ಬೆಂಕಿಹೊತ್ತಿಸುವುದು ಅಂದರೆ ಮ್ಯಾನ್ಮಾರ್ ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದು ಕಷ್ಟಕರವಾಗಿರುತ್ತದೆ.
 • ಅಲ್ಲದೆ ಭಾರತವು, ‘ಮ್ಯಾನ್ಮಾರ್ ನಲ್ಲಿ ಸೇನಾ ದಂಗೆಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಹಾಗೂ ರಾಜಕೀಯ ಮುಖಂಡರ ಬಂಧನವು ತೀವ್ರ ಕಳವಳಕಾರಿಯಾಗಿದೆ’ ಎಂದು ಸಮಯೋಚಿತವಾಗಿ ಪ್ರತಿಕ್ರಿಯಿಸಿದೆ. 
 • ಆಂಗ್ ಸ್ಯಾನ್ ಸೂಕಿ ಅವರ ಬದಲಾದ ವ್ಯಕ್ತಿತ್ವ : ಪ್ರಜಾಪ್ರಭುತ್ವದ ಸಂಕೇತವಾಗಿ ಮತ್ತು ಶಾಂತಿ ನೊಬೆಲ್ ಪ್ರಶಸ್ತಿ ವಿಜೇತರಾಗಿ ಮಿಸ್ ಸೂಕಿ ಅವರ ಚಿತ್ರಣವು ಅವರ ಅಧಿಕಾರಾವಧಿಯಲ್ಲಿ ಕಳಂಕಿತವಾಗಿದೆ. 2015 ರಲ್ಲಿ ತನ್ನ ಅಧಿಕಾರಾವಧಿಯಲ್ಲಿ, ಶ್ರೀಮತಿ ಸೂಕಿ ಯವರು, ಮ್ಯಾನ್ಮಾರ್ ಸೈನ್ಯವು 2015 ರಲ್ಲಿ ರಾಖೈನ್ ರಾಜ್ಯದಲ್ಲಿ ರೋಹಿಂಗ್ಯಾ ಸಮುದಾಯವನ್ನು ಕ್ರೂರವಾಗಿ ಹತ್ಯೆಗೈಯ್ಯುವುದನ್ನು ತಡೆಯುವಲ್ಲಿ ವಿಫಲರಾದರು ಅಲ್ಲದೆ ಸೇನೆಯ ಈ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದರು.
 • ಚೀನಾಕ್ಕೆ ಆಗುವ ಲಾಭ: ಅಮೆರಿಕದಂತೆಯೇ, ಭಾರತದಿಂದ ಕಠಿಣ ಪ್ರತಿಕ್ರಿಯೆ ವ್ಯಕ್ತವಾದರೆ ಮುಖ್ಯವಾಗಿ ಚೀನಾಕ್ಕೆ ಪ್ರಯೋಜನವನ್ನು ನೀಡುತ್ತದೆ. ಸೇನೆಯು ಆಕ್ರಮಣವನ್ನು ಕೊನೆಗೊಳಿಸದಿದ್ದರೆ “ದಂಗೆ” ಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಬೆದರಿಕೆ ಹಾಕಿದೆ.
 • ಕಾರ್ಯತಂತ್ರದ ಕಾಳಜಿಗಳ ಹೊರತಾಗಿ, ಭಾರತವು ಮ್ಯಾನ್ಮಾರ್‌ನಲ್ಲಿ ಹಲವಾರು ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಭಾರತವು ಇವುಗಳನ್ನು ಪೂರ್ವದ ಮತ್ತು ‘ಆಸಿಯಾನ್ ದೇಶಗಳೆಡೆಗಿನ ಹೆಬ್ಬಾಗಿಲು’ ಎಂದು ನೋಡುತ್ತದೆ. (ಉದಾಹರಣೆಗೆ: ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿ ಮತ್ತು ಕಲಾದನ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ನೆಟ್‌ವರ್ಕ್, ಸಿಟ್ವೆ ಆಳ ನೀರಿನ ಬಂದರಿನಲ್ಲಿ ವಿಶೇಷ ಆರ್ಥಿಕ ವಲಯದ ಯೋಜನೆ).
 • ಇದಲ್ಲದೆ, ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸಲು ಭಾರತ ಇನ್ನೂ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ಮ್ಯಾನ್ಮಾರ್ ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸಲು ಬಯಸುತ್ತದೆ. ಕೆಲವು ರೋಹಿಂಗ್ಯಾ ನಿರಾಶ್ರಿತರು ಭಾರತಕ್ಕೆ ವಲಸೆ ಬಂದಿದ್ದಾರೆ.

ಮ್ಯಾನ್ಮಾರ್‌ನ ಮಿಲಿಟರಿ ಸಂವಿಧಾನ:

2008 ರಲ್ಲಿ ಮ್ಯಾನ್ಮಾರ್‌ನಲ್ಲಿ ಮಿಲಿಟರಿಯಿಂದ ಸಂವಿಧಾನವನ್ನು ರಚಿಸಲಾಯಿತು ಮತ್ತು ಈ ವರ್ಷದ ಏಪ್ರಿಲ್‌ನಲ್ಲಿ ಅನುಮಾನಾಸ್ಪದ ಜನಾಭಿಪ್ರಾಯ ಸಂಗ್ರಹಿಸಲಾಯಿತು.

 • ಈ ಸಂವಿಧಾನವು ಸೈನ್ಯವು ರಚಿಸಿದ ‘ಪ್ರಜಾಪ್ರಭುತ್ವಕ್ಕೆ ಮಾರ್ಗಸೂಚಿ’ ಆಗಿದ್ದು, ಇದನ್ನು ಪಾಶ್ಚಿಮಾತ್ಯ ದೇಶಗಳ ಒತ್ತಡದಿಂದಾಗಿ ಮ್ಯಾನ್ ಮಾರ್ ಸೈನ್ಯವು ಅಂಗೀಕರಿಸಿತು.
 • ಇದಲ್ಲದೆ, ಮ್ಯಾನ್ಮಾರ್ ಅನ್ನು ಹೊರಗಿನ ಪ್ರಪಂಚಕ್ಕೆ ತೆರೆಯುವುದು ಇನ್ನು ಮುಂದೆ ಒಂದು ಆಯ್ಕೆಯಾಗಿಲ್ಲ ಆದರೆ ಗಂಭೀರವಾದ ಆರ್ಥಿಕ ಅಗತ್ಯವಾಗಿದೆ ಎಂಬುದು ಮಿಲಿಟರಿ ಆಡಳಿತಕ್ಕೂ ಅರಿವಾಯಿತು.
 • ಆದರೆ ಸೇನೆಯು ಸಂವಿಧಾನದಲ್ಲಿ ತನ್ನ ಪಾತ್ರವನ್ನು ಮತ್ತು ರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಶ್ರೇಷ್ಟತೆ ಅಥವಾ ಪ್ರಾಬಲ್ಯವನ್ನು ಖಚಿತಪಡಿಸಿಕೊಂಡಿತ್ತು.
 • ಸಂವಿಧಾನದ ನಿಬಂಧನೆಗಳ ಪ್ರಕಾರ, ಸಂಸತ್ತಿನ ಉಭಯ ಸದನಗಳಲ್ಲಿ 25 ಪ್ರತಿಶತ ಸ್ಥಾನಗಳನ್ನು ಸೈನ್ಯಕ್ಕಾಗಿ ಕಾಯ್ದಿರಿಸಲಾಗಿದೆ, ಅದರ ಮೇಲೆ ಸೇವಾ ನಿರತ ಮಿಲಿಟರಿ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲಾಗುತ್ತದೆ.
 • ಅಲ್ಲದೆ, ಸೈನ್ಯದ ಪರವಾಗಿ ಚುನಾವಣೆಗಳಲ್ಲಿ ಭಾಗವಹಿಸುವ ಪ್ರತಿನಿಧಿ ರಾಜಕೀಯ ಪಕ್ಷವನ್ನು ರಚಿಸಲಾಯಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ –  3


 

ವಿಷಯಗಳು : ಸರ್ಕಾರಿ ಬಜೆಟ್.

ಬಜೆಟ್ ( ಆಯವ್ಯಯ ) ಎಂದರೇನು ?


 ಸಂದರ್ಭ :

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮೊಟ್ಟಮೊದಲ ಕಾಗದ ರಹಿತ ಕೇಂದ್ರ ಬಜೆಟ್ ಅನ್ನು ಮಂಡಿಸಿದರು.

ಬಜೆಟ್ ಎಂದರೇನು?

ಭಾರತದ ಸಂವಿಧಾನದ 112 ನೇ ವಿಧಿ ಪ್ರಕಾರ ಭಾರತದ ಕೇಂದ್ರ ಬಜೆಟ್ ಅನ್ನು ವಾರ್ಷಿಕ ಹಣಕಾಸು ಹೇಳಿಕೆ (Annual Financial Statement– AFS) ಎಂದು ಕರೆಯಲಾಗುತ್ತದೆ.

ಇದು ಒಂದು ಆರ್ಥಿಕ ವರ್ಷದಲ್ಲಿ ಸರ್ಕಾರದ ಅಂದಾಜು ಸ್ವೀಕೃತಿ  (ರಶೀದಿ) ಮತ್ತು ಖರ್ಚಿನ ಹೇಳಿಕೆಯಾಗಿದೆ. ಹೆಚ್ಚುವರಿಯಾಗಿ, ಬಜೆಟ್ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:

 • ಆದಾಯ ಮತ್ತು ಬಂಡವಾಳ ರಶೀದಿಗಳ ಅಂದಾಜು
 • ಆದಾಯವನ್ನು ಹೆಚ್ಚಿಸುವ ಮಾರ್ಗಗಳು ಮತ್ತು ವಿಧಾನಗಳು,
 • ಖರ್ಚು-ವೆಚ್ಚದ ಅಂದಾಜುಗಳು,
 • ಮುಕ್ತಾಯವಾಗುವ ಹಣಕಾಸು ವರ್ಷದ ನಿಜವಾದ ರಶೀದಿಗಳು ಮತ್ತು ಖರ್ಚು-ವೆಚ್ಚಗಳ ಹೇಳಿಕೆಗಳು ಮತ್ತು ಆ ವರ್ಷದಲ್ಲಿ ಬರಬೇಕಾದ ಯಾವುದೇ ಕೊರತೆ ಅಥವಾ ಹೆಚ್ಚುವರಿ, ಮತ್ತು
 • ಮುಂಬರುವ ವರ್ಷದ ಆರ್ಥಿಕ ಮತ್ತು ಹಣಕಾಸು ನೀತಿ, ಅಂದರೆ ತೆರಿಗೆ ಪ್ರಸ್ತಾಪಗಳು, ಆದಾಯದ ನಿರೀಕ್ಷೆಗಳು, ಖರ್ಚು ಕಾರ್ಯಕ್ರಮಗಳು ಮತ್ತು ಹೊಸ ಯೋಜನೆಗಳು / ಕಾರ್ಯಕ್ರಮಗಳ ಪರಿಚಯ.

ಮುಖ್ಯವಾಗಿ ಬಜೆಟ್‌ ಆರು ಹಂತಗಳನ್ನು ಒಳಗೊಂಡಿದೆ:

 • ಬಜೆಟ್ ಪ್ರಸ್ತುತಿ.
 • ಸಾಮಾನ್ಯ .
 • ಇಲಾಖಾ ಸಮಿತಿಗಳ .
 • ಅನುದಾನಕ್ಕಾಗಿ ಬೇಡಿಕೆಗಳ ಮೇಲೆ .
 • ವಿನಿಯೋಜನೆ ಮಸೂದೆಯ ಅಂಗೀಕಾರ .
 • ಹಣಕಾಸು ಮಸೂದೆಯ ಅಂಗೀಕಾರ.

 ಇತ್ತೀಚಿನ ಕೇಂದ್ರ ಬಜೆಟ್‌ ಒಳಗೊಂಡಿರುವ ಪ್ರಮುಖ ಯೋಜನೆಗಳ ಪಟ್ಟಿ:

ಆರೋಗ್ಯ ಮತ್ತು ಯೋಗಕ್ಷೇಮ:

 • ಪ್ರಧಾನಮಂತ್ರಿ ಆತ್ಮ ನಿರ್ಭರ ಸ್ವಾಸ್ತ ಭಾರತ ಯೋಜನೆ:

ಕೇಂದ್ರ ಪ್ರಾಯೋಜಿತ ಹೊಸ ಯೋಜನೆಯಾದ ಪಿ.ಎಂ.ಆತ್ಮ ನಿರ್ಭರ ಸ್ವಾಸ್ತ ಭಾರತ ಯೋಜನೆ ಯನ್ನು 6 ವರ್ಷಗಳಲ್ಲಿ ಪ್ರಾರಂಭಿಸಲಾಗುವುದು, ಸುಮಾರು 64,180 ಕೋಟಿ ರೂ.ವಿನಿಯೋಗ ದೊಂದಿಗೆ ಇದು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ವ್ಯವಸ್ಥೆಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ, ಹಾಗೂ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸಂಸ್ಥೆಗಳನ್ನು ಬಲಪಡಿಸುತ್ತದೆ ಮತ್ತು ಹೊಸ ಸಂಸ್ಥೆಗಳನ್ನು ರಚಿಸುತ್ತದೆ, ಇದು ಹೊಸ ಮತ್ತು ಉದಯೋನ್ಮುಖ ರೋಗಗಳ ಗುರುತಿಸುವಿಕೆ ಮತ್ತು ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ.

 • ಮಿಷನ್ ಪೋಶನ್ 2.0 : 112 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಪೌಷ್ಠಿಕಾಂಶದ ಫಲಿತಾಂಶವನ್ನು ಸುಧಾರಿಸಲು’ ನ್ಯೂಟ್ರಿಷನ್ ಕ್ಯಾಂಪೇನ್ 2.0/ ಮಿಷನ್ ಪೋಶನ್ 2.0‘ಅನ್ನು ಪ್ರಾರಂಭಿಸಲಾಗುವುದು.
 • ಜಲ ಜೀವನ್ (ನಗರ) ಮಿಷನ್: 4378 ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ86 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್ ಮಿಷನ್ (ನಗರ) ಯೋಜನೆಯ ಅನುಷ್ಠಾನಕ್ಕಾಗಿ ಈ ವರ್ಷದಲ್ಲಿ 50 ಸಾವಿರ ಕೋಟಿ ಅನುದಾನ ಒಳಗೊಂಡಂತೆ ಮುಂದಿನ ಐದು ವರ್ಷಗಳಲ್ಲಿ 2.87 ಲಕ್ಷ ಕೋಟಿ ರೂ.ಗಳ ವೆಚ್ಚದೊಂದಿಗೆ ಪ್ರಾರಂಭಿಸಲಾಗುವುದು.
 • ಸ್ವಯಂಪ್ರೇರಿತ ವಾಹನಗಳ ಸ್ಕ್ರ್ಯಾಪ್ ನೀತಿ: ಹಳೆಯ ಮತ್ತು ಬಳಕೆಯಾಗದ ವಾಹನಗಳನ್ನು ಹಂತಹಂತವಾಗಿ ಹೊರಹಾಕಲು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪ್ (ಗುಜರಿಗೆ ಸೇರಿಸುವ – ನೀತಿಯನ್ನು ಅಂದರೆ ಹಂತಹಂತವಾಗಿ ಹಳೆಯ ವಾಹನಗಳನ್ನು ಬಳಕೆಯಿಂದ ಹಿಂಪಡೆಯುವ ಕಾರ್ಯಕ್ರಮ) ಸಹ ಘೋಷಿಸಲಾಯಿತು. ಖಾಸಗಿ ವಾಹನಗಳ ವಿಷಯದಲ್ಲಿ 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳ ವಿಷಯದಲ್ಲಿ 15 ವರ್ಷಗಳ ನಂತರ ಸ್ವಯಂಚಾಲಿತ ಫಿಟ್‌ನೆಸ್ ಕೇಂದ್ರಗಳಲ್ಲಿ ತಪಾಸಣೆಗೆ ಒಳಪಡಿಸಿ ಪ್ರಮಾಣಪತ್ರ ಪಡೆಯುವುದು ಅಗತ್ಯವಾಗಿದೆ. ಈ ನೀತಿಯ ವ್ಯಾಪ್ತಿಗೆ ಒಂದು ಕೋಟಿಯಷ್ಟು ಹಳೆಯ, ಹಗುರ,ಮತ್ತು ಭಾರಿ ವಾಹನಗಳು ಒಳಪಡಲಿವೆ.ಹಳೆಯ ವಾಹನಗಳು ಹೊಸ ವಾಹನಗಳಿಗಿಂತ ಶೇಕಡ 10ರಿಂದ 12 ಪಟ್ಟು ಹೊಗೆಯನ್ನು ವಾತಾವರಣಕ್ಕೆ ಸೇರಿಸುತ್ತವೆ.
 • ನ್ಯುಮೋಕೊಕಲ್ ಲಸಿಕೆ ಲಭ್ಯತೆ: ಪ್ರಸ್ತುತ ಐದು ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುವ ಭಾರತದಲ್ಲಿ ಉತ್ಪಾದನೆಯಾಗುವ ‘ನ್ಯುಮೋಕೊಕಲ್ ಲಸಿಕೆ’ ದೇಶಾದ್ಯಂತ ಲಭ್ಯವಾಗಲಿದೆ. ಪ್ರತಿವರ್ಷ 50,000 ಮಕ್ಕಳು ಸಾಯುವುದನ್ನು ತಡೆಯುವ ಗುರಿ ಹೊಂದಿದೆ. ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಈ ಲಸಿಕೆ ಯನ್ನು ಅಭಿವೃದ್ಧಿಪಡಿಸಿದೆ.
 • ಸ್ವಚ್ಛ ಭಾರತ ಮಿಷನ್ (ನಗರ) 2.0 ಅನ್ನು ಐದು ವರ್ಷಗಳ (2021 – 2026) ಅವಧಿಯಲ್ಲಿ47 ಲಕ್ಷ ಕೋಟಿ ರೂಪಾಯಿ ವೆಚ್ಚದೊಂದಿಗೆ ಅನುಷ್ಠಾನ ಗೊಳಿಸಲಾಗುವುದು.

ಮೂಲಸೌಕರ್ಯ:

 • ಭಾರಿ ಹೂಡಿಕೆ ಟೆಕ್ಸ್ ಟೈಲ್ ಪಾರ್ಕ್ ( ಮಿತ್ರಾ) – ಜವಳಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಗಳ ಸೃಷ್ಟಿ,  ಅಧಿಕ ಬಂಡವಾಳ ಆಕರ್ಷಿಸಲು ಮೂರು ವರ್ಷಗಳಲ್ಲಿ ಏಳು ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಯ ಗುರಿ ಹೊಂದಲಾಗಿದೆ.
 • 20,000 ಕೋಟಿ ರೂ ವೆಚ್ಚದಲ್ಲಿ ಹಣಕಾಸು ಅಭಿವೃದ್ಧಿ ಸಂಸ್ಥೆ (Development Finance Institution) ಸ್ಥಾಪಿಸಲು ಉದ್ದೇಶಿಸಲಾಗಿದೆ.
 • ರಾಷ್ಟ್ರೀಯ ಹಣಗಳಿಸುವ ಪೈಪ್‌ಲೈನ್ (national monetising pipeline) ಪ್ರಾರಂಭಿಸಲು ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್‌ಬೋರ್ಡ್ ಸಿದ್ಧಪಡಿಸಲಾಗುತ್ತದೆ.
 • ಭಾರತಕ್ಕಾಗಿ ರಾಷ್ಟ್ರೀಯ ರೈಲು ಯೋಜನೆ 2030 ಅನ್ನು ಭಾರತೀಯ ರೈಲ್ವೆ ಸಿದ್ಧಪಡಿಸಿದೆ. 2030 ರ ವೇಳೆಗೆ ಭವಿಷ್ಯದಲ್ಲಿ ಸಿದ್ಧ’ ರೈಲ್ವೆ ವ್ಯವಸ್ಥೆಯನ್ನು ರಚಿಸುವ ಯೋಜನೆ ಇದೆ.
 • ಸಾರ್ವಜನಿಕ ಬಸ್ ಸಾರಿಗೆ ಸೇವೆಗಳ ವಿಸ್ತರಣೆಯಲ್ಲಿ ಅಗತ್ಯ ನೆರವು ನೀಡಲು 18000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು.
 • ಸಮಾನ ಅನುಭವ, ಅನುಕೂಲತೆ ಮತ್ತು ಸುರಕ್ಷತೆಯೊಂದಿಗೆ ಕಡಿಮೆ ವೆಚ್ಚದ ಮೆಟ್ರೋ ರೈಲು ವ್ಯವಸ್ಥೆಯನ್ನು ಒದಗಿಸಲು ಎರಡು ಹೊಸ ತಂತ್ರಜ್ಞಾನಗಳಾದ ಮೆಟ್ರೊಲೈಟ್’ ಮತ್ತು ‘ಮೆಟ್ರೊನಿಯೊ’ ಸೇವೆಗಳನ್ನು 2 ನೇ ಹಂತದ ನಗರಗಳಲ್ಲಿ ಮತ್ತು 1 ನೇ ಹಂತದ ನಗರಗಳ ಪಕ್ಕದ ಪ್ರದೇಶಗಳಲ್ಲಿ ಜಾರಿಗೆ ತರಲಾಗುವುದು.
 • ಗ್ರಾಹಕರು ತಮಗೆ ಇಷ್ಟವಾದ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ಆರಂಭಿಸಲಾಗಿದೆ.
 • ಹಸಿರು ಶಕ್ತಿ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಆರಂಭ.
 • ದೊಡ್ಡ ಬಂದರುಗಳು ತಮ್ಮದೇ ಆದ ಕಾರ್ಯಾಚರಣೆಯ ಸೇವೆಗಳನ್ನು ನಿರ್ವಹಿಸುವುದರಿಂದ ಹಿಡಿದು ಖಾಸಗಿ ಪಾಲುದಾರರು ತಮ್ಮ ಪರವಾಗಿ ಬಂದರನ್ನು ನಿರ್ವಹಿಸುವ ಕಾರ್ಯಕ್ಕೆ ಅನುವು ಮಾಡಿಕೊಡುವುದು.
 • ಉಜ್ವಾಲಾ ಯೋಜನೆಯ ಲಾಭವನ್ನು ಈಗಾಗಲೇ 8 ಕೋಟಿ ಕುಟುಂಬಗಳಿಗೆ ಒದಗಿಸಲಾಗಿದ್ದು, ಇದೀಗ ಇದನ್ನು 1 ಕೋಟಿ ಹೆಚ್ಚುವರಿ ಫಲಾನುಭವಿಗಳಿಗೆ ವಿಸ್ತರಿಸಲಾಗುವುದು.
 • ಮುಂದಿನ ಮೂರು ವರ್ಷಗಳಲ್ಲಿ 100 ಹೆಚ್ಚುವರಿ ನಗರಗಳನ್ನು ನಗರ ಅನಿಲ ವಿತರಣಾ ಜಾಲಕ್ಕೆ ಸೇರಿಸಲಾಗುವುದು.
 • ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಅನಿಲ ಪೈಪ್‌ಲೈನ್ ಯೋಜನೆ ಪ್ರಾರಂಭಿಸಲಾಗುವುದು.

ಹಣಕಾಸು:

 • ಏಕ ಸೆಕ್ಯುರಿಟೀಸ್ ಮಾರುಕಟ್ಟೆ ಕೋಡ್ (Single securities market code): ಸೆಬಿ ಆಕ್ಟ್, 1992, ಡಿಪಾಸಿಟರೀಸ್ ಆಕ್ಟ್, 1996, ಸೆಕ್ಯುರಿಟೀಸ್ ಕಾಂಟ್ರಾಕ್ಟ್ಸ್ (ರೆಗ್ಯುಲೇಷನ್) ಆಕ್ಟ್, 1956 ಮತ್ತು ಸರ್ಕಾರಿ ಸೆಕ್ಯುರಿಟೀಸ್ ಆಕ್ಟ್, 2007 ರ ನಿಬಂಧನೆಗಳನ್ನು ಏಕ ಸೆಕ್ಯುರಿಟೀಸ್ ಮಾರುಕಟ್ಟೆ ಕೋಡ್ ಆಗಿ ಕ್ರೋಢೀಕರಿಸಲು ಪ್ರಸ್ತಾಪಿಸಲಾಗಿದೆ.
 •  ಹೂಡಿಕೆದಾರರ ಚಾರ್ಟರ್ (Investor Charter): ಹೂಡಿಕೆದಾರರಿಗೆ ರಕ್ಷಣೆಯನ್ನು ಒದಗಿಸಲು ಎಲ್ಲಾ ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆದಾರರಿಗೆ ಹೂಡಿಕೆದಾರರ ಹಕ್ಕಾಗಿ ಹೂಡಿಕೆದಾರರ ಚಾರ್ಟರ್ ಜಾರಿಗೊಳಿಸಲಾಗುವುದು.

ಕೃಷಿ :

 • ಪ್ರಸಕ್ತ ಟೊಮೆಟೊ,ಈರುಳ್ಳಿ ಹಾಗೂ ಆಲೂಗೆಡ್ಡೆಗಳಿಗೆ ಮಾತ್ರ ಸೀಮಿತವಾಗಿರುವ ಆಪರೇಷನ್ ಗ್ರೀನ್ ಯೋಜನೆಯನ್ನು ಶೀಘ್ರದಲ್ಲಿ ಹಾಳಾಗುವ ಇನ್ನು 22 ಸರಕುಗಳಿಗೆ ವಿಸ್ತರಿಸಲಾಗುವುದು.
 • APMC ಯ ಇನ್ನು 1000 ಗಳನ್ನು ಎಲೆಕ್ಟ್ರಾನಿಕ್ ರಾಷ್ಟ್ರೀಯ ಮಾರುಕಟ್ಟೆಯ (E-NAM Market Place) ಜೊತೆ ಸಂಯೋಜಿಸಲು ಕ್ರಮ ತೆಗೆದುಕೊಳ್ಳಲಾಗುವುದು.
 • APMC ಗಳ ಮೂಲ ಸೌಲಭ್ಯ ಅಭಿವೃದ್ಧಿಗೂ ಕೃಷಿ ಮೂಲಸೌಲಭ್ಯ ಅಭಿವೃದ್ಧಿ ನಿಧಿಯ ಬಳಕೆಗೆ ಅನುಮೋದನೆ.
 • 5 ಮೀನುಗಾರಿಕಾ ಬಂದರುಗಳ ಅಭಿವೃದ್ಧಿ: ಕೊಚ್ಚಿ, ಚೆನ್ನೈ, ವಿಶಾಖಪಟ್ಟಣ, ಪರದೀಪ ಹಾಗೂ ಪೆಟುವಾ ಘಾಟ್ ಬಂದರುಗಳ ಅಭಿವೃದ್ಧಿ.ಇವುಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪಿಸಲು ಪ್ರಸ್ತಾವನೆ.
 •  ಕಡಲ ಕೃಷಿ ಉತ್ತೇಜನಕ್ಕೆ ಅನುದಾನ : ತಮಿಳುನಾಡಿನಲ್ಲಿ ವಿವಿಧೋದ್ದೇಶ ಕಡಲ ಕೃಷಿ ಉದ್ಯಾನವನವನ್ನು ಸ್ಥಾಪಿಸಲಾಗುವುದು.
 •  ಆಯ್ದ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಸೇಬು ಮತ್ತು ವೈನ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (Agriculture Infrastructure and Development Cess– AIDC) ವಿಧಿಸಲಾಗುವುದು.
 •  ರೈತರು ಬೆಳಗ್ಗೆ ಮಾಡುವ ವೆಚ್ಚದ5 ರಷ್ಟು ಪಟ್ಟು ಆದಾಯ ಬರಬೇಕೆಂಬ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಅಗತ್ಯ ಬದಲಾವಣೆ ತರಲಾಗಿದೆ.

 ವಿಜ್ಞಾನ ಮತ್ತು ತಂತ್ರಜ್ಞಾನ :

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ (National Research Foundation– NRF), ಒಂದು ನಿಗದಿತ ಮಾನದಂಡವನ್ನು ಹೊಂದಿರುವ ನಿಕಾಯ ವಾಗಿದ್ದು, ಅದರ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮಾನವೀಯತೆಗಳವರೆಗಿನ ಅನೇಕ ವಿಷಯಗಳ ಸಂಶೋಧನೆಗೆ ಹಣವನ್ನು ಲಭ್ಯವಾಗುವಂತೆ ಮಾಡಲಾಗುವುದು. NRF ಸ್ವಾಯತ್ತ ಸಂಸ್ಥೆಯಾಗಿದ್ದು ಎಲ್ಲಾ ಪ್ರಮುಖ ಸಂಶೋಧನೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ.

ರಕ್ಷಣಾ ಕ್ಷೇತ್ರ :

15 ನೇ ಹಣಕಾಸು ಆಯೋಗದ ಈ ಕೆಳಗಿನ ಪ್ರಮುಖ ಶಿಫಾರಸುಗಳನ್ನು ಕೇಂದ್ರ ಬಜೆಟ್‌ನಲ್ಲಿ ಸೇರಿಸಲಾಗಿದೆ:

 • ಆರೋಗ್ಯ ವೆಚ್ಚದಲ್ಲಿ ಹೆಚ್ಚಳ.
 • ರಾಜ್ಯಗಳಿಗೆ ಹೆಚ್ಚಿನ ಸಾಲದ ಮಿತಿ.
 • ಕೇಂದ್ರ ಪ್ರಾಯೋಜಿತ ಯೋಜನೆಗಳು ಅಥವಾ ರಾಜ್ಯಗಳು ಜಾರಿಗೆ ತರಬೇಕಾದ ಸಾರ್ವಜನಿಕ ಕಾರ್ಯಕ್ರಮಗಳನ್ನು ಕ್ರೋಡೀಕರಿಸಬೇಕು, ಆದರೆ ಅವುಗಳಿಗೆ ಮುಖ್ಯವಾಗಿ ಕೇಂದ್ರ ಸರ್ಕಾರದಿಂದ ಧನಸಹಾಯ ನೀಡಬೇಕು.
 • ಕಳೆದುಹೋಗದ ರಕ್ಷಣಾ ಮತ್ತು ಆಂತರಿಕ ಭದ್ರತಾ ನಿಧಿಗಳನ್ನು (non-lapsable defence and internal security fund) ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಂಡಿರುವ ಹಣದ ಭಾಗದಿಂದ ಅಥವಾ ‘ಸೆಸ್’ ಮೂಲಕ ಹಂಚಿಕೆ ಮಾಡುವ ಮೂಲಕ ರಚಿಸಬೇಕು.

ತೆರಿಗೆ:

 • ಸ್ಟಾರ್ಟ್-ಅಪ್ ಕಂಪನಿಯ ತೆರಿಗೆ ವಿನಾಯಿತಿ ಕ್ಲೈಮ್ ಗಡುವನ್ನು ಒಂದು ವರ್ಷ ವಿಸ್ತರಿಸಲಾಗಿದೆ.
 • ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡುವುದರಿಂದ ಬಂಡವಾಳ ಲಾಭದಿಂದ ವಿನಾಯಿತಿಯನ್ನು ಮುಂದಿನ ವರ್ಷದ ಮಾರ್ಚ್ ಅಂತ್ಯದ ರವರೆಗೆ ವಿಸ್ತರಣೆ ಮಾಡಲಾಯಿತು.
 • ಪಾವತಿಸಿದ ಬಂಡವಾಳ ಮತ್ತು ವಹಿವಾಟಿನ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ಬೆಳೆಯಲು ಅವಕಾಶ ನೀಡುವ ಮೂಲಕ ಏಕವ್ಯಕ್ತಿ ಕಂಪನಿಗಳನ್ನು (one-person companies- OPCs) ಪ್ರೋತ್ಸಾಹಿಸುವುದು.

 

ವಿಷಯಗಳು : ಸರ್ಕಾರಿ ಬಜೆಟ್.

2026ರ ಹಣಕಾಸು ವರ್ಷದ ವೇಳೆಗೆ ವಿತ್ತೀಯ ಕೊರತೆಯನ್ನು ಶೇಕಡ 4.5ಕ್ಕೆ ಮಿತಿಗೊಳಿಸುವ ಭರವಸೆ ಹೊಂದಿರುವ ಸರ್ಕಾರ.


ಸಂದರ್ಭ :

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ 6.8% ಎಂದು ಊಹಿಸಿದ್ದಾರೆ ಮತ್ತು 2025-26ರ ಆರ್ಥಿಕ ವರ್ಷದಲ್ಲಿ ಅದನ್ನು 4.5% ಕ್ಕೆ ಇಳಿಸುವ ಗುರಿ ಹೊಂದಿದ್ದಾರೆ.

ವಿತ್ತೀಯ ಕೊರತೆಯ ಗುರಿಯನ್ನು ಮೂಲತಃ 2021-22ರ ಆರ್ಥಿಕ ವರ್ಷಕ್ಕೆ 3.5% ಎಂದು ನಿಗದಿಪಡಿಸಲಾಗಿತ್ತು. ಆದಾಗ್ಯೂ, ನಿಜವಾದ ಹಣಕಾಸಿನ / ವಿತ್ತೀಯ ಕೊರತೆಯು ಜಿಡಿಪಿಯ 9.5% ರಷ್ಟನ್ನು ತಲುಪಿದೆ. ಇದಕ್ಕಾಗಿ ಈ ಕೆಳಗಿನ ಕಾರಣಗಳನ್ನು ನೀಡಲಾಗಿದೆ:

 • ಕೋವಿಡ್ -19 ಸಾಂಕ್ರಾಮಿಕದ ಪರಿಣಾಮ.
 • ಲಾಕ್‌ಡೌನ್ ಕಾರಣ ಕಡಿಮೆ ಆದಾಯ ಸಂಗ್ರಹ.
 • ಸಮಾಜದ ದುರ್ಬಲ ವರ್ಗಗಳಿಗೆ ಪರಿಹಾರ ಒದಗಿಸಲು ಸರ್ಕಾರದ ಹೆಚ್ಚಿನ ಖರ್ಚಿನೊಂದಿಗೆ ನಕಾರಾತ್ಮಕ ಆರ್ಥಿಕ ಅಭಿವೃದ್ಧಿ.

ಮುಂದಿನ ಕ್ರಮ:

ಹಣಕಾಸಿನ ಬಲವರ್ಧನೆ ಮಾರ್ಗಸೂಚಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಗೆ (Fiscal Responsibility and Budget Management – FRBM) ತಿದ್ದುಪಡಿ ತರಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.

ವಿತ್ತೀಯ ಕೊರತೆ’ ಎಂದರೇನು?

ಹಣಕಾಸಿನ / ವಿತ್ತೀಯ ಕೊರತೆ’ ಎನ್ನುವುದು ಆದಾಯ ರಶೀದಿಗಳು ಮತ್ತು ಸರ್ಕಾರದ ಸಾಲೇತರ ಬಂಡವಾಳ ರಶೀದಿಗಳು ಸೇರಿದಂತೆ (Non-debt Capital Receipts– NDCR) ಒಟ್ಟು ಖರ್ಚುಗಳ ನಡುವಿನ ವ್ಯತ್ಯಾಸವಾಗಿದೆ. ಅಥವಾ ಸರ್ಕಾರದ ಕಂದಾಯ ವೆಚ್ಚವು ಅದರ ಕಂದಾಯ ಸ್ವೀಕೃತಿ ಗಿಂತ ಅಧಿಕವಾಗಿರುವ ಸ್ಥಿತಿಯಾಗಿದೆ.

ಬೇರೆ ಮಾತಿನಲ್ಲಿ ಹೇಳುವುದಾದರೆ, ವಿತ್ತೀಯ ಕೊರತೆಯು ಸರ್ಕಾರದ ಒಟ್ಟು ಸಾಲದ ಅವಶ್ಯಕತೆಗಳನ್ನು ಪ್ರತಿಬಿಂಬಿಸುತ್ತದೆ”.

 ಹೆಚ್ಚಿನ ಹಣಕಾಸಿನ ಕೊರತೆಯ ಪರಿಣಾಮ:

ಆರ್ಥಿಕತೆಯಲ್ಲಿ, ಹೂಡಿಕೆ ಮಾಡಬಹುದಾದ ಉಳಿತಾಯದ ಸೀಮಿತ ಪೂಲ್ ಇದೆ. ಈ ಉಳಿತಾಯವನ್ನು ಖಾಸಗಿ ವ್ಯವಹಾರಗಳಿಗೆ (ಸಣ್ಣ ಮತ್ತು ದೊಡ್ಡ ಎರಡೂ) ಮತ್ತು ಸರ್ಕಾರಗಳಿಗೆ (ಕೇಂದ್ರ ಮತ್ತು ರಾಜ್ಯ) ಸಾಲ ಒದಗಿಸಲು ಬ್ಯಾಂಕುಗಳಂತಹ ಹಣಕಾಸು ಸಂಸ್ಥೆಗಳು ಬಳಸುತ್ತವೆ.

 • ಹಣಕಾಸಿನ ಕೊರತೆಯ ಅನುಪಾತವು ಸಾಕಷ್ಟು ಹೆಚ್ಚಿದ್ದರೆ, ಖಾಸಗಿ ಉದ್ಯಮಿಗಳು ಮತ್ತು ವ್ಯವಹಾರಗಳಿಗೆ ಸಾಲ ಒದಗಿಸಲು ಮಾರುಕಟ್ಟೆಯಲ್ಲಿ ಕಡಿಮೆ ಹಣ ಉಳಿದಿದೆ ಎಂದು ಇದು ಸೂಚಿಸುತ್ತದೆ.
 • ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದ ಹಣ ಲಭ್ಯವಿರುವುದರಿಂದ, ಸಾಲದ ಮೇಲಿನ ಬಡ್ಡಿದರಗಳು ಹೆಚ್ಚುತ್ತವೆ.
 • ಹೆಚ್ಚಿನ ಹಣಕಾಸಿನ ಕೊರತೆ ಮತ್ತು ಹೆಚ್ಚಿನ ಬಡ್ಡಿದರಗಳು ಎಂದರೆ ಬಡ್ಡಿದರಗಳನ್ನು ಕಡಿಮೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ ಪ್ರಯತ್ನಗಳು ಪರಿಣಾಮಕಾರಿಯಾಗಿಲ್ಲ ಎಂದರ್ಥ.

ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಹಣಕಾಸಿನ / ವಿತ್ತೀಯ ಕೊರತೆಯ ಸ್ವೀಕಾರಾರ್ಹ ಮಟ್ಟ ಯಾವುದು?:

ಅಭಿವೃದ್ಧಿಶೀಲ ಆರ್ಥಿಕತೆಯಲ್ಲಿ ಹೂಡಿಕೆ ಮಾಡಲು ಸರ್ಕಾರಗಳು ಖಾಸಗಿ ಉದ್ಯಮಗಳಿಗಿಂತ ಉತ್ತಮ ಸ್ಥಾನದಲ್ಲಿರುತ್ತವೆ ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಿಂತ ಹಣಕಾಸಿನ ಕೊರತೆ ಹೆಚ್ಚಿರಬಹುದಾದ ಸ್ಥಿತಿ ಯಾಗಿದೆ.

 • ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಲ್ಲಿ, ಆದಾಯದ ಬೆಳವಣಿಗೆಗೆ ಸಾಕಷ್ಟು ಮಾರ್ಗಗಳಿಲ್ಲದಿದ್ದರೂ ಸರ್ಕಾರಗಳು ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯಗಳಿಗೆ ಮುಂಚಿತವಾಗಿ ಹೂಡಿಕೆ ಮಾಡಬೇಕಾಗುತ್ತದೆ.
 • ಭಾರತದಲ್ಲಿ, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯಡಿ, (Fiscal Responsibility and Budget Management – FRBM)  ವಿತ್ತೀಯ ಕೊರತೆಯನ್ನು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 3 ಕ್ಕೆ ಇಳಿಸುವುದು ಆದರ್ಶ ಪರಿಸ್ಥಿತಿ ಎಂದು ಹೇಳಲಾಗಿದೆ. ದುರದೃಷ್ಟವಶಾತ್, ಯಾವುದೇ ಸರ್ಕಾರಗಳಿಗೆ ಈ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ.

‘ FRBM ಆಕ್ಟ್’ ಎಂದರೇನು?

ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ – (FRBM ಆಕ್ಟ್,2003,) ಹಣಕಾಸಿನ ಕೊರತೆಯನ್ನು ಕಡಿಮೆ ಮಾಡಲು ಹಣಕಾಸಿನ ನಿಯಂತ್ರಣವನ್ನು ಮಾಡುತ್ತದೆ.

FRBM ಕಾಯ್ದೆಯ ಉದ್ದೇಶಗಳು ಯಾವವು?

 • ಎಫ್‌ಆರ್‌ಬಿಎಂ ಕಾಯ್ದೆಯು ಭಾರತದ ಹಣಕಾಸು ನಿರ್ವಹಣಾ ವ್ಯವಸ್ಥೆಗಳಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆ.
 • ಭಾರತದಲ್ಲಿ ಹಣಕಾಸಿನ ಸ್ಥಿರತೆಯನ್ನು ಸಾಧಿಸುವುದು ಮತ್ತು ಭಾರತದಲ್ಲಿ ಹಣದುಬ್ಬರವನ್ನು ಎದುರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಮ್ಯತೆಯನ್ನು ಒದಗಿಸುವುದು ಈ ಕಾಯಿದೆಯ ದೀರ್ಘಕಾಲೀನ ಉದ್ದೇಶವಾಗಿದೆ.
 • ಭಾರತದಲ್ಲಿ ಸಾಲಗಳನ್ನು ಹೆಚ್ಚು ಸಮನಾಗಿ ವಿತರಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು.

FRBM ಕಾಯ್ದೆಯ ಪ್ರಮುಖ ಲಕ್ಷಣಗಳು:

ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್‌ಆರ್‌ಬಿಎಂ ಕಾಯ್ದೆ) ಅಡಿಯಲ್ಲಿ, ಸರ್ಕಾರವು ಪ್ರತಿವರ್ಷ ಕೇಂದ್ರ ಬಜೆಟ್‌ನೊಂದಿಗೆ ಈ ಕೆಳಗಿನ ದಾಖಲೆಗಳನ್ನು ಸಂಸತ್ತಿಗೆ ಸಲ್ಲಿಸುವುದು ಕಡ್ಡಾಯವಾಗಿದೆ:

 • ಮಧ್ಯಮ ಅವಧಿಯ ಹಣಕಾಸಿನ ನೀತಿ ಹೇಳಿಕೆ.

(Medium Term Fiscal Policy Statement).

 • ಸ್ಥೂಲ ಆರ್ಥಿಕ ಚೌಕಟ್ಟು ಹೇಳಿಕೆ.

(Macroeconomic Framework Statement).

 • ವಿತ್ತೀಯ ನೀತಿ ಕಾರ್ಯತಂತ್ರದ ಹೇಳಿಕೆ.

(Fiscal Policy Strategy Statement).

 

ವಿಷಯ: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ಏನಿದು, ಜೈವಿಕ ಇಂಧನದಿಂದ ಚಲಿಸುವ ಮೊದಲ ರಾಕೆಟ್ ಆದ ಸ್ಟಾರ್‌ಡಸ್ಟ್ 1.0? 


ಸಂದರ್ಭಃ

ಸ್ಟಾರ್ಡಸ್ಟ್ 1.0 ಅನ್ನು ಜನವರಿ 31 ರಂದು ಅಮೇರಿಕಾದ ಮೈನೆ ನಲ್ಲಿರುವ ಲೊರಿಂಗ್ ವಾಣಿಜ್ಯ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

 • ಇದು ಮೊದಲ ಜೈವಿಕ ಇಂಧನ-ಚಾಲಿತ ವಾಣಿಜ್ಯ ಬಾಹ್ಯಾಕಾಶ ಉಡಾವಣೆಯಾಗಿದೆ. ಈ ಜೈವಿಕ ಇಂಧನಗಳು ಸಾಂಪ್ರದಾಯಿಕ ರಾಕೆಟ್ ಇಂಧನಗಳಿಗಿಂತ ಭಿನ್ನವಾಗಿದ್ದು ಪರಿಸರ ಸ್ನೇಹಿಯಾಗಿದೆ.
 • ಸ್ಟಾರ್‌ಡಸ್ಟ್ 1.0 ಇದು ,ವಿದ್ಯಾರ್ಥಿಗಳಿಗೆ ಮತ್ತು ಬಜೆಟ್ ಪೇಲೋಡ್‌ಗಳಿಗೆ ಸೂಕ್ತವಾದ ಉಡಾವಣಾ ವಾಹನವಾಗಿದೆ.

 ಜೈವಿಕ ಇಂಧನಗಳು ಯಾವುವು?

ಯಾವುದೇ ಸಾವಯವ ವಸ್ತುಗಳಿಂದ (ಜೀವಂತ ಅಥವಾ ಸತ್ತ ವಸ್ತು) ಕಡಿಮೆ ಸಮಯದಲ್ಲಿ (ದಿನ, ವಾರ ಅಥವಾ ತಿಂಗಳು) ಉತ್ಪತ್ತಿಯಾಗುವ ಯಾವುದೇ ಹೈಡ್ರೋಕಾರ್ಬನ್ ಇಂಧನವನ್ನು ಜೈವಿಕ ಇಂಧನವೆಂದು (Biofuels)  ಪರಿಗಣಿಸಲಾಗುತ್ತದೆ.

ಜೈವಿಕ ಇಂಧನಗಳು ಘನ, ದ್ರವ ಅಥವಾ ಅನಿಲ ಸ್ಥಿತಿಯಲ್ಲಿರಬಹುದು.

ಘನ: ಬಣಗಿದ ಮರ, ಒಣಗಿದ ವಸ್ತು ಮತ್ತು ಗೊಬ್ಬರ.

ದ್ರವ: ಬಯೋಇಥೆನಾಲ್ ಮತ್ತು ಜೈವಿಕ ಡೀಸೆಲ್.

ಅನಿಲ: ಜೈವಿಕ ಅನಿಲ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕೊಲಂಬೊದಲ್ಲಿನ ಪೂರ್ವ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಪಡಿಸುವಲ್ಲಿ ಭಾರತಕ್ಕೆ ಯಾವುದೇ ಪಾತ್ರವಿಲ್ಲ:

ಈಸ್ಟರ್ನ್ ಕಂಟೇನರ್ ಟರ್ಮಿನಲ್ (ಇಸಿಟಿ) ನಲ್ಲಿ ಯಾವುದೇ ಒಪ್ಪಂದ ಮಾಡಿಕೊಳ್ಳಲು ಅಥವಾ ಯಾವುದೇ ವಿದೇಶಿ ದೇಶಗಳೊಂದಿಗೆ ಮಾರಾಟ ಮಾಡಲು ಅಥವಾ ಗುತ್ತಿಗೆ ನೀಡಲು ಶ್ರೀಲಂಕಾ ನಿರಾಕರಿಸಿದೆ.

 • ಶ್ರೀಲಂಕಾದ ಈ ನಡೆಯು ಭಾರತ, ಜಪಾನ್ ಮತ್ತು ಶ್ರೀಲಂಕಾ ನಡುವಿನ ECT ತ್ರಿಪಕ್ಷೀಯ ಒಪ್ಪಂದಕ್ಕೆ ವಿರುದ್ಧವಾಗಿದೆ.
 • ಪೋರ್ಟ್ ಯೂನಿಯನ್ ಕಾರ್ಮಿಕರ ಯಾವುದೇ ವಿದೇಶಿ ಪಾತ್ರ ಅಥವಾ ಇಸಿಟಿ ಯೋಜನೆಯಲ್ಲಿ ಹೂಡಿಕೆಯ ವಿರುದ್ಧ ಹೆಚ್ಚುತ್ತಿರುವ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶ್ರೀಲಂಕಾದ ವರ್ಗಾವಣೆ ವ್ಯಾಪಾರದ ಸುಮಾರು 70% ವ್ಯವಹಾರವು ಭಾರತದೊಂದಿಗೆ ಸಂಪರ್ಕ ಹೊಂದಿದೆ.
 • ಶ್ರೀಲಂಕಾ ಸರ್ಕಾರವು ಇಸಿಟಿಗೆ ಬದಲಾಗಿ ಸಂಭಾವ್ಯ ಹೂಡಿಕೆಗಳಿಗಾಗಿ ಪಶ್ಚಿಮ ಕಂಟೈನರ್ ಟರ್ಮಿನಲ್ ಅನ್ನು ಭಾರತಕ್ಕೆ ನೀಡುವುದಾಗಿ ಹೇಳಿದೆ.

ಲಡಾಕ್‌ನಲ್ಲಿ ತಲೆಯೆತ್ತಲಿರುವ ಕೇಂದ್ರೀಯ ವಿಶ್ವವಿದ್ಯಾಲಯ :

 • ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವೆಂದು ಗುರುತಿಸಿದ ನಂತರ, ಕೇಂದ್ರ ಸರ್ಕಾರವು ಲೇಹ್‌ನಲ್ಲಿ ಹೊಸ ಕೇಂದ್ರ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ.
 • ಈ ನಿಟ್ಟಿನಲ್ಲಿ ಕೇಂದ್ರೀಯ ಲಡಾಖ್ ವಿಶ್ವವಿದ್ಯಾಲಯದ ಮಸೂದೆಯನ್ನು ಸರ್ಕಾರ ಪರಿಚಯಿಸಲಿದೆ.

ಪ್ರಭುದ್ಧ ಭಾರತ :

 • ಪ್ರಬುದ್ಧ ಭಾರತ’125 ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ, ಆಚರಿಸಲಾಯಿತು.
 •  ಇದು ಸ್ವಾಮಿ ವಿವೇಕಾನಂದರು ಪ್ರಾರಂಭಿಸಿದ ರಾಮಕೃಷ್ಣ ಪಂಥದ ಮಾಸಿಕ ಪತ್ರಿಕೆ ಯಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos