ಪರಿವಿಡಿ :
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಭೀಮಾ ಕೋರೆಗಾಂವ್ ಕದನ.
2. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ.
2. ‘ಕಾನೂನಾತ್ಮಕ ಜನಾಭಿಪ್ರಾಯ ಸಂಗ್ರಹವನ್ನು’ ಬಯಸಿರುವ ಸ್ಕಾಟಿಷ್ ನಾಯಕಿ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಸುಂದರಬನ ಜೀವಗೋಳ ಮೀಸಲಿನ ಪಕ್ಷಿಗಳು- ಭಾರತದ ಪ್ರಾಣಿಶಾಸ್ತ್ರ ಸಮೀಕ್ಷೆ (ZSI)ಯ ಪ್ರಕಟಣೆ.
2. ಬೋಡೊಲ್ಯಾಂಡ್ ಭೌಗೋಳಿಕ ಪ್ರದೇಶ (BTR) ಒಪ್ಪಂದ.
ಸಾಮಾನ್ಯ ಅಧ್ಯಯನ ಪತ್ರಿಕೆ 4:
1. ಒಡಿಶಾದಲ್ಲಿ, ಶುಲ್ಕ ಪಾವತಿ ಮಾಡಲು MGNREGS ನಲ್ಲಿ ಕೆಲಸ ಮಾಡುತ್ತಿರುವ ಸಹೋದರಿಯರು:
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. 143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ, ವಿಶ್ವ ಬಾಹ್ಯಾಕಾಶ ದಾಖಲೆಯನ್ನು ಮುರಿದ ಸ್ಪೇಸ್‌ಎಕ್ಸ್:
2. ಎರಡು ಹೊಸ ಇರುವೆ ಪ್ರಭೇದಗಳ ಅನ್ವೆಷಣೆ:
3. ರಾಷ್ಟ್ರೀಯ ಮತದಾರರ ದಿವಸ (NVD):
ಸಾಮಾನ್ಯ ಅಧ್ಯಯನ ಪತ್ರಿಕೆ – 1
ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.
ಭೀಮಾ ಕೋರೆಗಾಂವ್ ಕದನ:
ಸಂದರ್ಭ:
ಭೀಮಾ ಕೋರೆಗಾಂವ್ ಚಳುವಳಿಗಾರರನ್ನು ಬಿಡುಗಡೆ ಮಾಡಲು ಕರೆ ನೀಡಿದ, ಮಾನವ ಹಕ್ಕುಗಳಿಗಾಗಾಗಿನ ಹೈಕಮಿಷನರ್ ಕಚೇರಿ,(Office of the high commissioner for Human rights – OCHCR).
ಏನಿದು ಸಮಸ್ಯೆ:
ಭೀಮಾ ಕೋರೆಗಾವ್ ಪ್ರಕರಣವು 1 ನೇ ಜನವರಿ 2018ರಂದು ನಡೆದ ಮೂರುವರ್ಷಗಳಷ್ಟು ಹಳೆಯದಾದ ಪ್ರಕರಣವಾಗಿದ್ದು, ಭೀಮಾ ಕೋರೆಗಾಂವ್ ಯುದ್ಧದ 200 ನೇ ವರ್ಷಾಚರಣೆಯನ್ನು ಸೂಚಿಸುತ್ತದೆ.
- ಪೇಶ್ವಾ ಎರಡನೇ ಬಾಜಿ ರಾವ್ ರ ಸೈನ್ಯದ ವಿರುದ್ಧ ಹೆಚ್ಚಿನ ಸಂಖ್ಯೆಯ ಮಹಾರ್‌ಗಳನ್ನು ಒಳಗೊಂಡ ಬ್ರಿಟಿಷ್ ಸೈನ್ಯದ ವಿಜಯೋತ್ಸವವನ್ನು ಆಚರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
- ಸುಧಾ ಭಾರದ್ವಾಜ್, ವರವರ ರಾವ್ ಮತ್ತು ಗೌತಮ್ ನವಲಖಾ ಸೇರಿದಂತೆ ಹಲವಾರು ಮಾನವ ಹಕ್ಕುಗಳ ಕಾರ್ಯಕರ್ತರನ್ನು ತನಿಖೆಯ ಸಮಯದಲ್ಲಿ ಬಂಧಿಸಲಾಗಿದೆ.
ಭೀಮಾ-ಕೋರೆಗಾ೦ವ್ ಕದನದ ಕುರಿತು :
- ಈ ಯುದ್ಧವು ಜನವರಿ 1-1818 ರಂದು ಪೇಶ್ವೆ ಮತ್ತು ಬ್ರಿಟಿಷರ ಸೈನ್ಯದ ನಡುವೆ ಪುಣೆಯಲ್ಲಿರುವ ಬಲವಾದ ಐತಿಹಾಸಿಕ ದಲಿತ ಸಂಪರ್ಕವನ್ನು ಹೊಂದಿರುವ ಜಿಲ್ಲೆಯಾದ ಭೀಮಾ-ಕೋರೆಗಾ೦ವ್ ನಲ್ಲಿ ನಡೆಯಿತು.
- ಬಹುತೇಕ ದಲಿತ ಸೈನಿಕರನ್ನು ಒಳಗೊಂಡ ಬ್ರಿಟಿಷರ ಸೈನ್ಯವು ಮೇಲ್ಜಾತಿ ಪ್ರಾಬಲ್ಯದ ಪೇಶ್ವೆ ಸೈನ್ಯದೊಂದಿಗೆ ಹೋರಾಡಿ ವಿಜಯ ಸಾಧಿಸಿತು.
ಯುದ್ಧದ ಫಲಿತಾಂಶಗಳು:
- ಈ ವಿಜಯವನ್ನು ಜಾತಿ ಆಧಾರಿತ ತಾರತಮ್ಯ ಮತ್ತು ದಬ್ಬಾಳಿಕೆಯ ವಿರುದ್ಧದ ಗೆಲುವಿನಂತೆ ನೋಡಲಾಯಿತು.ಪೇಶ್ವೆಗಳು ಮಹರ್‌ದಲಿತರ ಮೇಲಿನ ದಬ್ಬಾಳಿಕೆ ಮತ್ತು ಅತ್ಯಾಚಾರ ಕೃತ್ಯಗಳಿಂದ ಕುಖ್ಯಾತರಾಗಿದ್ದರು.ಪೇಶ್ವೆಗಳ ವಿರುದ್ಧ ಸಿಕ್ಕ ಗೆಲುವು ದಲಿತರಿಗೆ ನೈತಿಕ ಜಯವಾಗಿತ್ತು. ಅಂದರೆ ಜಾತಿ ಆಧಾರಿತ ತಾರತಮ್ಯದ ದಬ್ಬಾಳಿಕೆಯ ವಿರುದ್ಧದ ಜಯವಾಗಿತ್ತು ಮತ್ತು ದಲಿತರಿಗೆ ಗುರುತಿನ ಪ್ರಜ್ಞೆಯ ಗೆಲುವಾಗಿತ್ತು.
- ಆದಾಗ್ಯೂ, ಬ್ರಿಟಿಷರ ಒಡೆದಾಳುವ ನೀತಿಯು ಭಾರತೀಯ ಸಮಾಜದಲ್ಲಿ ಅನೇಕ ಬಿರುಕುಗಳನ್ನು ಸೃಷ್ಟಿಸಿತು, ಇದು ಜಾತಿ ಮತ್ತು ಧಾರ್ಮಿಕ ತಾರತಮ್ಯದ ರೀತಿಯಲ್ಲಿ ವಿಪರೀತವಾಗಿ ಇಂದಿಗೂ ಗೋಚರಿಸುತ್ತದೆ, ಆದ್ದರಿಂದ ಇದನ್ನು ಸಂವಿಧಾನದ ಸಿದ್ಧಾಂತಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲಿಸಬೇಕಾಗಿದೆ.
ಭೀಮಾ ಕೋರೆಗಾಂವ್ ಅನ್ನು ದಲಿತ ಸಂಕೇತವಾಗಿ ಏಕೆ ಕಾಣಲಾಗುತ್ತದೆ?
- ಈ ಯುದ್ಧವನ್ನು ದಲಿತ ಹೆಮ್ಮೆಯ ಸಂಕೇತವಾಗಿ ನೋಡಲಾಗಿದೆ ಏಕೆಂದರೆ ಕಂಪನಿ ಪಡೆಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ಮಹರ್ ಜಾತಿಯ ದಲಿತರು. ಬ್ರಾಹ್ಮಣರಾಗಿದ್ದ ಪೇಶ್ವಗಳನ್ನು ದಲಿತರ ದಬ್ಬಾಳಿಕೆಗಾರರಂತೆ ನೋಡಲಾಗಿದ್ದರಿಂದ, ಪೇಶ್ವಾ ಪಡೆಯ ಮೇಲಣ ಮಹರ್ ಸೈನಿಕರ ವಿಜಯವನ್ನು ದಲಿತ ಪ್ರತಿಪಾದನೆ ಎಂದು ಪರಿಗಣಿಸಲಾಗುತ್ತದೆ.
- 1 ಜನವರಿ 1927 ರಂದು ಬಿ.ಆರ್. ಅಂಬೇಡ್ಕರ್ ರವರು ಸುಮಾರು ಎರಡು ಡಜನ್ ಮಹರ್ ಸೈನಿಕರು ಸೇರಿದಂತೆ ಸತ್ತವರ ಹೆಸರನ್ನು ಹೊಂದಿರುವ (Memorial obelisk ) ಸ್ಮಾರಕವನ್ನು ನಿರ್ಮಿಸಿದ ಸ್ಥಳಕ್ಕೆ ಭೇಟಿ ನೀಡಿದರು. ಕೋರೆಗಾಂವ್ ಯುದ್ಧದಲ್ಲಿ ಹೋರಾಡಿದ ಪುರುಷರು ಮಹರ್ ಜಾತಿಯವರು, ಮತ್ತು ಮಹರ್ ಗಳು ಅಸ್ಪೃಶ್ಯರಾಗಿದ್ದರು.
ಮಾನವ ಹಕ್ಕುಗಳಿಗಾಗಾಗಿನ ಹೈಕಮಿಷನರ್ ಕಚೇರಿ – (Office of the high commissioner for Human rights) ಕುರಿತು :
- ಮಾನವ ಹಕ್ಕುಗಳಿಗಾಗಾಗಿನ ಹೈಕಮಿಷನರ್ (ಉನ್ನತ ಆಯುಕ್ತರ ) ಕಚೇರಿಯು (ವಿಶ್ವಸಂಸ್ಥೆಯ ಮಾನವ ಹಕ್ಕುಗಳು) ಮಾನವ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಪ್ರಮುಖ ಘಟಕವಾಗಿದೆ.
- ಇದಕ್ಕೆ,ಎಲ್ಲಾ ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಮತ್ತು ಆ ನಿಟ್ಟಿನಲ್ಲಿ ಅಗತ್ಯವಾದ ವಕಾಲತ್ತುಗಳನ್ನು ನಡೆಸಲು ಕಡ್ಡಾಯ ನಿರ್ದೇಶನ ನೀಡಲಾಗಿದೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 48/141 ರ ಪ್ರಕಾರ OCHCR ಅನ್ನು ಸ್ಥಾಪಿಸಲಾಗಿದೆ.
- ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಆಚರಣೆಯನ್ನು ಉತ್ತೇಜಿಸಬೇಕಾಗಿದೆ ಮತ್ತು ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಅಂತರರಾಷ್ಟ್ರೀಯ ಕಾನೂನು ಕಟ್ಟುಪಾಡುಗಳ ಅನುಷ್ಠಾನವನ್ನು ಖಚಿತಪಡಿಸಲು, ದೇಶೀಯ ನ್ಯಾಯಾಲಯಗಳನ್ನು ಅವುಗಳ ಸಾಂವಿಧಾನಿಕ ಅಥವಾ ನ್ಯಾಯಾಂಗ ಕಾರ್ಯಗಳ ಜೊತೆಗೆ, ಬೆಂಬಲಿಸಬೇಕಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಅದಕ್ಕೆ ಆಧಾರವಾಗಿದೆ.
ವಿಷಯಗಳು: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ :
ಸಂದರ್ಭ :
ಭಾರತವು ಪ್ರತಿ ವರ್ಷ ಜನವರಿ 24 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪಕ್ರಮವಾದ, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತದೆ.
- ಇದರ ಉದ್ದೇಶ ಕ್ಷೀಣಿಸುತ್ತಿರುವ ಮಕ್ಕಳ ಲಿಂಗಾನುಪಾತದ (Child Sex Ratio) ಕುರಿತು ಜಾಗೃತಿ ಮೂಡಿಸುವುದಾಗಿದೆ.
- ಈ ಸಂಭ್ರಮಾಚರಣೆಯು (ಮಗಳನ್ನು ಉಳಿಸಿ ಮಗಳನ್ನು ಓದಿಸಿ) ಬೇಟಿ ಬಚಾವೊ, ಬೇಟಿ ಪಢಾವೊ (BBBP) ಯೋಜನೆಯ ವಾರ್ಷಿಕೋತ್ಸವವನ್ನು ಸಹ ಗುರುತಿಸಲಿದೆ.
- ಪಂಜಾಬ್ ಜನವರಿ 2021 ಅನ್ನು “ಹೆಣ್ಣು ಮಗುವಿನ ತಿಂಗಳು” ಎಂದು ಘೋಷಿಸಿದ್ದು, Dheeiyan Di Lohri (ಧೀಯನ್ ಡಿ ಲೋಹ್ರಿ) ಎಂಬ ಯೋಜನೆಯನ್ನು ಸಹ ಪ್ರಾರಂಭಿಸಿದೆ.
ಮಗಳನ್ನು ಉಳಿಸಿ ಮಗಳನ್ನು ಓದಿಸಿ (Beti Bachao, Beti Padhao ) ಕುರಿತು :
ಪ್ರಾರಂಭ ಮತ್ತು ವಿಸ್ತರಣೆ:
- ಹರಿಯಾಣದ ಪಾಣಿಪತ್‌ನಲ್ಲಿ 2015 ರ ಜನವರಿಯಲ್ಲಿ ‘ಬೇಟಿ ಬಚಾವೊ, ಬೇಟಿ ಪಢಾವೊ’ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು 2018 ರ ಮಾರ್ಚ್ 8 ರಂದು, ರಾಜಸ್ಥಾನದ ಝನ್ ಝನು ಜಿಲ್ಲೆಯಲ್ಲಿ ಪುನರಾರಂಭಿಸುವ ಮೂಲಕ ದೇಶದ ಎಲ್ಲಾ 640 ಜಿಲ್ಲೆಗಳಲ್ಲಿ (2011 ರ ಜನಗಣತಿಯ ಪ್ರಕಾರ) ‘ಬೇಟಿ ಬಚಾವೊ, ಬೇಟಿ ಪಢಾವೊ’ ಕಾರ್ಯಕ್ರಮವನ್ನು ವಿಸ್ತರಿಸಲಾಯಿತು.
- ಇದು ಮೂರು ಕೇಂದ್ರ ಸಚಿವಾಲಯಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಗಳ ಜಂಟಿ ಪ್ರಯತ್ನವಾಗಿದೆ.
ಅನುಷ್ಠಾನ:
ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಜಿಲ್ಲಾ ಮಟ್ಟದ ಘಟಕಕ್ಕೆ 100% ಆರ್ಥಿಕ ನೆರವು ನೀಡಲಾಗುತ್ತದೆ ಮತ್ತು ಯೋಜನೆಯ ಸುಗಮ ಕಾರ್ಯಾಚರಣೆಗಾಗಿ ನಿಧಿಯ ನೆರವು ಮೊತ್ತವನ್ನು ನೇರವಾಗಿ ಜಿಲ್ಲಾಧಿಕಾರಿ / ಜಿಲ್ಲಾ ಮ್ಯಾಜಿಸ್ಟ್ರೇಟ್ ರವರ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ.
ಉದ್ದೇಶಗಳು:
- ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಮಕ್ಕಳ ಲಿಂಗಾನುಪಾತ (Child Sex Ratio) ದಲ್ಲಿನ ಕಡಿತ ಮತ್ತು ಜೀವನ-ಚಕ್ರ ನಿರಂತರತೆಯ (life-cycle continuum) ಹಿನ್ನೆಲೆಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ.
- ಯೋಜನೆಯ ನಿರ್ದಿಷ್ಟ ಉದ್ದೇಶಗಳು ಲಿಂಗ-ಪಕ್ಷಪಾತದ ಲಿಂಗ ಆಯ್ಕೆಯ ನಿರ್ಮೂಲನೆಯನ್ನು ತಡೆಯುವುದು; ಬಾಲಕಿಯರ ಜೀವನ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ಮತ್ತು ಬಾಲಕಿಯರ ಶಿಕ್ಷಣ ಮತ್ತು ಭಾಗವಹಿಸುವಿಕೆಯನ್ನು ಖಾತರಿಪಡಿಸುವುದು.
ಯೋಜನೆಯ ಫಲಿತಾಂಶಗಳು:
- ಆರೋಗ್ಯ ಸಚಿವಾಲಯದ ಪ್ರಕಾರ, ಜನನದ ಸಮಯದಲ್ಲಿನ ಲಿಂಗಾನುಪಾತವು ಸುಧಾರಣೆಯ ಭರವಸೆಯ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು 2014-15 ರಲ್ಲಿದ್ದ 918 ರಿಂದ 2019-20 ರಲ್ಲಿ 934 ಕ್ಕೆ ಏರಿಕೆಯಾಗಿ 16 ಅಂಶ್ ಗಳಷ್ಟು ಸುಧಾರಿಸಿದೆ.
- ಪ್ರಸವಪೂರ್ವ ಆರೈಕೆಯ ಮೊದಲ ತ್ರೈಮಾಸಿಕದಲ್ಲಿ, (first trimester Antenatal Care –ANC) ಆರೋಗ್ಯ ಸೂಚಿಯು ಶೇಕಡಾವಾರು ಸುಧಾರಣೆಯ ಪ್ರವೃತ್ತಿಯನ್ನು ತೋರಿಸಿದೆ, ಮತ್ತು ಇದು 2014-15ರಲ್ಲಿ 61 ಪ್ರತಿಶತದಿಂದ 2019-20ರಲ್ಲಿ 71 ಪ್ರತಿಶತಕ್ಕೆ ಏರಿಕೆ ಕಂಡಿದೆ.
- ಪ್ರೌಢಶಾಲಾ ಹಂತದ ಶಾಲೆಗಳಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು 2014-15ರಲ್ಲಿದ್ದ45 ಪ್ರತಿಶತದಿಂದ 2018-19ರಲ್ಲಿ 81.32 ಪ್ರತಿಶತ ಕ್ಕೆ ಏರಿದೆ. (ತಾತ್ಕಾಲಿಕ ಅಂಕಿಅಂಶಗಳು).
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು : ಆರೋಗ್ಯ ಸಂಬಂಧಿ ಸಮಸ್ಯೆಗಳು.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ :
ಸಂದರ್ಭ :
ಕೇಂದ್ರ ಆರೋಗ್ಯ ವಿಮಾ ಕಾರ್ಯಕ್ರಮದ ಪ್ರಯೋಜನವನ್ನು ದೇಶದ ಎಲ್ಲಾ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಗೆ ವಿಸ್ತರಿಸುತ್ತಾ ‘ಆಯುಷ್ಮಾನ್ ಸಿಎಪಿಎಫ್’ (‘Ayushman CAPF’ ) ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ.
ಈ ಯೋಜನೆಯ ಪ್ರಮುಖ ಲಕ್ಷಣಗಳು:
ಈ ಯೋಜನೆಯು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ,(CAPF) ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (National Security Guard) ಮತ್ತು ಅವರ ಕುಟುಂಬಗಳ ಸುಮಾರು 28 ಲಕ್ಷ ಸದಸ್ಯರನ್ನು ‘ಆಯುಷ್ಮಾನ್ ಭಾರತ್: ಒಳಗೊಂಡಿದೆ. ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ’ (AB PM-JAY).
ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (Pradhan Mantri Jan Arogya Yojana) ಯ ಪ್ರಮುಖ ಲಕ್ಷಣಗಳು:
- ಸಂಪೂರ್ಣವಾಗಿ ಸರ್ಕಾರಿ ಪುರಸ್ಕೃತ, ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ / ಭರವಸೆ ಯೋಜನೆ ಯಾಗಿದೆ.
- ಈ ಯೋಜನೆಯು ಭಾರತದ ಸಾರ್ವಜನಿಕ ಮತ್ತು ಪಟ್ಟಿಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ಪ್ರತಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.
- ವ್ಯಾಪ್ತಿ:74 ಕೋಟಿಗೂ ಹೆಚ್ಚು ಬಡ ಮತ್ತು ಅಸಹಾಯಕ ಕುಟುಂಬಗಳು (ಅಂದಾಜು 50 ಕೋಟಿ ಫಲಾನುಭವಿಗಳು) ಈ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.
- ಈ ಯೋಜನೆಯಡಿ, ಆಸ್ಪತ್ರೆಗಳಲ್ಲಿ ಫಲಾನುಭವಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.
ಅರ್ಹತೆ:
- ಈ ಯೋಜನೆಯಡಿ ಕುಟುಂಬದ ಗಾತ್ರ, ವಯಸ್ಸು ಅಥವಾ ಲಿಂಗ ಎಂಬ ಯಾವುದೇ ಮಿತಿಯಿಲ್ಲ.
- ಈ ಯೋಜನೆಯಡಿಯಲ್ಲಿ, ಚಿಕಿತ್ಸೆ ನೀಡುವಾಗ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ವಿವಿಧ ವೈದ್ಯಕೀಯ ಸಮಸ್ಯೆಗಳು ಮತ್ತು ಗಂಭೀರ ಕಾಯಿಲೆಗಳನ್ನು ಮೊದಲ ದಿನದಿಂದಲೇ ಈ ಯೋಜನೆಯು ಒಳಗೊಳ್ಳುತ್ತದೆ.
- ಈ ಯೋಜನೆಯು, ಆಸ್ಪತ್ರೆಗೆ ದಾಖಲಾಗುವ 3 ದಿನಗಳ ಮೊದಲು ಮತ್ತು ಆಸ್ಪತ್ರೆಗೆ ದಾಖಲಾದ ನಂತರ 15 ದಿನಗಳವರೆಗಿನ ಆರೋಗ್ಯ ಚಿಕಿತ್ಸೆ ಮತ್ತು ಔಷಧಿಗಳ ಖರ್ಚುವೆಚ್ಚವನ್ನು ಒಳಗೊಂಡಿದೆ.
- ಇದೊಂದು ಸರಳ-ಸುಲಭ (ಪೋರ್ಟಬಲ್), ಯೋಜನೆಯಾಗಿದೆ. ಅಂದರೆ ಫಲಾನುಭವಿಗಳು ದೇಶಾದ್ಯಂತದ ಯಾವುದೇ ಸಾರ್ವಜನಿಕ ಅಥವಾ ಪಟ್ಟಿಮಾಡಿದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
- ಈ ಯೋಜನೆಯು, ಔಷಧಗಳ ಸರಬರಾಜು, ರೋಗನಿರ್ಣಯ ಸೇವೆಗಳು, ವೈದ್ಯರ ಶುಲ್ಕಗಳು, ಕೊಠಡಿ ಶುಲ್ಕಗಳು, ಶಸ್ತ್ರಚಿಕಿತ್ಸಕರ ಶುಲ್ಕಗಳು, ಶಸ್ತ್ರ ಚಿಕಿತ್ಸಾ ಕೊಠಡಿ (OT ) ಮತ್ತು ತೀವ್ರ ಚಿಕಿತ್ಸಾ ಘಟಕ (ICU) ಶುಲ್ಕಗಳು ಸೇರಿದಂತೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿರುವ ಸರಿಸುಮಾರು 1,393 ಕಾರ್ಯವಿಧಾನ ಸೇವೆಗಳನ್ನು ಒಳಗೊಂಡಿದೆ.
- ಸಾರ್ವಜನಿಕ ಆಸ್ಪತ್ರೆಗಳಿಗೂ ಕೂಡ ನೀಡಿದ ಆರೋಗ್ಯ ಸೇವೆಗಳಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ಮರುಪಾವತಿ ಮಾಡಲಾಗುತ್ತದೆ.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
‘ಕಾನೂನಾತ್ಮಕ ಜನಾಭಿಪ್ರಾಯ ಸಂಗ್ರಹವನ್ನು’ ಬಯಸಿರುವ ಸ್ಕಾಟಿಷ್ ರಾಜಕೀಯ ನಾಯಕಿ :
ಸಂದರ್ಭ :
ಸ್ಕಾಟ್‌ಲ್ಯಾಂಡ್‌ನ ಪ್ರಮುಖ ಮಂತ್ರಿ ನಿಕೋಲಾ ಸ್ಟರ್ಜನ್ (Nicola Sturgeon)ಅವರು ಇತ್ತೀಚೆಗೆ ವೆಸ್ಟ್ಮಿನಿಸ್ಟರ್ ನ ವಿರೋಧದ ಹೊರತಾಗಿಯೂ, ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆಯಲು ಕಾನೂನಾತ್ಮಕ ಜನಾಭಿಪ್ರಾಯ ಸಂಗ್ರಹಿಸಲು (a legal referendum) ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಭಿಪ್ರಾಯ ಸಂಗ್ರಹದಲ್ಲಿ ಬ್ರಿಟನ್‌ನಿಂದ ಪ್ರತ್ಯೇಕವಾಗುವುದರ ಪರವಾಗಿ ಬಹುಮತದ ಜನಾಭಿಪ್ರಾಯದ ಕಂಡುಬಂದಿದೆ.
ಜನಾಭಿಪ್ರಾಯ ಸಂಗ್ರಹವು ಕೊನೆಯ ಬಾರಿ ಯಾವಾಗ ನಡೆದಿತ್ತು?
ಸ್ಕಾಟಿಷ್ ಸ್ವಾತಂತ್ರ್ಯಕ್ಕಾಗಿ ಜನಾಭಿಪ್ರಾಯ ಸಂಗ್ರಹವನ್ನು 2014 ರಲ್ಲಿ ನಡೆಸಲಾಗಿತ್ತು. ಆದರೆ ಆ ಸಮಯದಲ್ಲಿ ಸ್ಕಾಟ್ಲೆಂಡ್ ಜನರು ಯುನೈಟೆಡ್ ಕಿಂಗ್ಡಮ್ ನಲ್ಲಿಯೇ ಉಳಿಯುವ ಪರವಾಗಿ ಮತ ಚಲಾಯಿಸಿದ್ದರು.
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಒಂದಾಗಿದ್ದು ಯಾವಾಗ?
- ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಏಕೀಕರಣದ ಕಾಯಿದೆಗೆ 1707 ರ ಜನವರಿ 16 ರಂದು ಸಹಿ ಹಾಕಲ್ಪಟ್ಟಿತು.
- ಇದು ಅದೇ ವರ್ಷದ ಮೇ 1 ರಂದು ಜಾರಿಗೆ ಬರುವ ಮೂಲಕ ಯುನೈಟೆಡ್ ಕಿಂಗ್‌ಡಮ್ ಆಫ್ ಬ್ರಿಟನ್ ಅನ್ನು ರಚಿಸಿತು.
- ಸ್ಕಾಟಿಷ್ ಸಂಸತ್ತಿನ ವಿಸರ್ಜನೆಯೊಂದಿಗೆ ಮತ್ತು ಲಂಡನ್‌ನ ವೆಸ್ಟ್ ಮಿನಿಸ್ಟರ್ ನಲ್ಲಿ ಒಂದೇ ಸಂಸತ್ತನ್ನು ರಚಿಸಲಾಯಿತು.
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಏಕೆ ಒಗ್ಗೂಡಿದವು?
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಸಂಕೀರ್ಣ ಇತಿಹಾಸವನ್ನು ಹೊಂದಿದ್ದು, ಆದರೆ ಇದಕ್ಕೆ ನೀಡಬಹುದಾದ ಚುಟುಕು ಉತ್ತರವೆಂದರೆ ಸ್ಕಾಟ್ಲೆಂಡ್‌ಗೆ ಆರ್ಥಿಕ ಉತ್ತೇಜನ ಬೇಕಿತ್ತು. ಪನಾಮದಲ್ಲಿ ವ್ಯಾಪಾರಿ ವಸಾಹತು ಸ್ಥಾಪಿಸುವ ವಿಫಲ ಪ್ರಯತ್ನದ ನಂತರ ದೇಶದ ಹಣಕಾಸು ವ್ಯವಸ್ಥೆ ಅಧೋಗತಿಗೆ ಇಳಿಯಿತು ಆಗ ಸ್ಕಾಟ್ಲೆಂಡ್ನ ಭವಿಷ್ಯದ ಸಮೃದ್ಧಿಯನ್ನು ಯೂನಿಯನ್ ಉತ್ತಮವಾಗಿ ಪೂರೈಸ ಬಲ್ಲದು ಎಂಬ ಮಹತ್ವಾಕಾಂಕ್ಷೆಯು ಈ ವಿಫಲ ಯೋಜನೆಗೆ ನಿರ್ಣಾಯಕ ಸಾಕ್ಷಿಯಾಯಿತು.
ಸ್ವಾತಂತ್ರ್ಯದ ಮುಖ್ಯ ಕಾರಣ ಯಾವುದು?
- ಸ್ವಾತಂತ್ರ್ಯವನ್ನು ಬೆಂಬಲಿಸುವವರು ಸ್ಕಾಟ್‌ಲ್ಯಾಂಡ್ ಇಂಗ್ಲೆಂಡ್‌ನಿಂದ ಬೇರ್ಪಟ್ಟರೆ ಅದು ಇನ್ನೂ “ಶ್ರೀಮಂತ” ವಾಗುತ್ತದೆ ಎಂದು ನಂಬುತ್ತಾರೆ.
- ಸಂಪನ್ಮೂಲಗಳ ನಿಯಂತ್ರಣ ಮತ್ತು ಹಣಕಾಸಿನ ಹೂಡಿಕೆ ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಸ್ಕಾಟ್ಲೆಂಡ್ ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಸ್ವಾತಂತ್ರ್ಯದ ಪ್ರತಿಪಾದಕರು ಬಯಸುತ್ತಾರೆ.
- ಪ್ರಮುಖವಾಗಿ, ಅವರು ಬಿಲಿಯನ್ ಗಟ್ಟಲೆ ಪೌಂಡ್‌ಗಳನ್ನು ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಹೂಡಿಕೆ ಮಾಡುವ ಬದಲು, ಮಕ್ಕಳ ಆರೈಕೆ ಅಥವಾ ಪ್ರತಿಭೆಯನ್ನು ಉಳಿಸಿ ಬೆಳೆಸಲು ಮತ್ತು ಸ್ಕಾಟ್ ಲ್ಯಾಂಡ್ ಯುವಕರ ಬೆಳವಣಿಗೆಯಂತಹ ಕಾರ್ಯಕ್ರಮಗಳಿಗೆ ಖರ್ಚು ಮಾಡಲು ಬಯಸುತ್ತಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 3
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಸುಂದರಬನ ಜೀವಗೋಳ ಮೀಸಲಿನ ಪಕ್ಷಿಗಳು- ಭಾರತದ ಪ್ರಾಣಿಶಾಸ್ತ್ರ ಸಮೀಕ್ಷೆ (Zoological Survey of India)ಯ ಪ್ರಕಟಣೆ.
ಸಂದರ್ಭ :
ಸುಂದರಬನ ಜೀವಗೋಳ ಮೀಸಲಿನ ಪಕ್ಷಿಗಳು ಎಂಬ ವರದಿಯನ್ನು ಇತ್ತೀಚೆಗೆ ಭಾರತದ ಪ್ರಾಣಿಶಾಸ್ತ್ರ ಸಮೀಕ್ಷೆ (ZSI) ಯು ಪ್ರಕಟಿಸಿದೆ.
- ಈ ವರದಿಯು ಸುಂದರಬನ ಜೀವಗೋಳ ಮೀಸಲಿನ ಪಕ್ಷಿ ಪ್ರಪಂಚದ ವಿವರಣೆಯನ್ನು ನೀಡುವುದರ ಜೊತೆಗೆ, ಈ ಪ್ರದೇಶದ ಎಲ್ಲಾ ಜೀವಿ ಪ್ರಜಾತಿಗಳ ವಿವರವಾದ ಹ೦ಚಿಕೆ ಮತ್ತು ಸ್ಥಳೀಕರಣದ ದತ್ತಾಂಶದೊಂದಿಗೆ ಸಮಗ್ರ ಛಾಯಾಗ್ರಹಣದ ಕ್ಷೇತ್ರ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಮುಖ ಸಂಶೋಧನೆಗಳು:
- ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಅರಣ್ಯದ ಭಾಗವಾಗಿರುವ ಭಾರತದ ಸುಂದರಬನ ಪ್ರದೇಶವು 428 ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇದರರ್ಥ ದೇಶದ ಪ್ರತಿ ಮೂರು ಪಕ್ಷಿಗಳಲ್ಲಿ ಒಂದು ಪಕ್ಷಿಯು ಈ ಅನನ್ಯ ಪರಿಸರ ವ್ಯವಸ್ಥೆಯಲ್ಲಿ ಅಂದರೆ ಈ ಸುಂದರಬನದಲ್ಲಿ ಕಂಡುಬರುತ್ತದೆ.
- ಮುಖವಾಡದ ಫಿನ್‌ಫೂಟ್ (the masked finfoot ) the ಮತ್ತು ಬಫಿ ಫಿಶ್ ಗೂಬೆ ( Buffy fish owl ) ಯಂತಹ ಕೆಲವು ಪಕ್ಷಿಗಳು ಸುಂದರಬನಗಳಲ್ಲಿ ಮಾತ್ರ ಕಂಡುಬರುತ್ತವೆ.
- ಈ ಸುಂದರಬನ ಪ್ರದೇಶವು ದೇಶದಲ್ಲಿ ಕಂಡುಬರುವ 12 ಜಾತಿಯ ರಾಜ ಮಿಂಚುಳ್ಳಿ (kingfishers) ಗಳಲ್ಲಿ 9 ರಾಜ ಮಿಂಚುಳ್ಳಿ ಗಳಿಗೆ ಸ್ಪ-ನೆಲೆಯಾಗಿದೆ. ಅಷ್ಟೇ ಅಲ್ಲದೆ ಗೋಲಿಯಾತ್ ಹೆರಾನ್ ( the Goliath heron )ಮತ್ತು ಸ್ಪೂನ್ – ಬಿಲ್ಡ ಸ್ಯಾಂಡ್‌ಪೈಪರ್ಸ್ ( the spoon-billed sandpiper) ನಂತಹ ಅಪರೂಪದ ಪ್ರಭೇದಗಳಿಗೂ ಆವಾಸಸ್ಥಾನ ಒದಗಿಸಿದೆ.
ಭಾರತದ ಸುಂದರಬನ ಪ್ರದೇಶದ ಕುರಿತು :
- ಇದು 4,200 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಮತ್ತು ಅದರಲ್ಲಿ 2,585 ಚದರ ಕಿ.ಮೀ ವಿಸ್ತಾರದ ಸುಂದರಬನ ಹುಲಿ-ಸಂರಕ್ಷಿತ ಪ್ರದೇಶ (Sunderban Tiger Reserve ) ವನ್ನು ಒಳಗೊಂಡಿದೆ ಹಾಗೂ ಸುಮಾರು 96 ರಾಯಲ್ ಬಂಗಾಳ ಹುಲಿಗಳಿಗೆ ಆವಾಸಸ್ಥಾನವಾಗಿದೆ. (2020 ರ ಕೊನೆಯ ಹುಲಿಗಣತಿಯ ಪ್ರಕಾರ).
- ಇದು ವಿಶ್ವ ಪಾರಂಪರಿಕ ತಾಣ ಮತ್ತು ರಾಮ್‌ಸಾರ್ ತಾಣವೂ ಆಗಿದೆ (ಅಂತರರಾಷ್ಟ್ರೀಯ ಪ್ರಾಮುಖ್ಯತೆ ಯನ್ನು ಹೊಂದಿರುವ ಜೌಗು ತಾಣ).
- “ತೀವ್ರ ಅಳಿವಿನಂಚಿನಲ್ಲಿರುವ (critically endangered) ನಾರ್ದರ್ನ್ ರಿವರ್ ಟೆರಾಪಿನ್ (Batagur baska), ಅಳಿವಿನಂಚಿನಲ್ಲಿರುವ (endangered) ಇರ್ರಾವಾಡಿ ಡಾಲ್ಫಿನ್ (Orcaella brevirostris), ಮತ್ತು ಅಪಾಯಕ್ಕೆ ಒಳಗಾಗಬಲ್ಲ (vulnerable)ಮೀನುಗಾರ ಬೆಕ್ಕು (fishing cat) (Prionailurus viverrinus)” ನಂತಹ ಅಪರೂಪದ ಮತ್ತು ಜಾಗತಿಕವಾಗಿ ಬೆದರಿಕೆ ಇರುವ ಪ್ರಭೇದಗಳಿಗೆ ಇದು ನೆಲೆಯಾಗಿದೆ.
- ವಿಶ್ವದ ನಾಲ್ಕು ಕುದುರೆ ಏಡಿ ಪ್ರಭೇದಗಳಲ್ಲಿ (horseshoe crab species) ಎರಡು ಇಲ್ಲಿ ಕಂಡು ಬರುತ್ತವೆ, ಮತ್ತು ಇತ್ತೀಚಿನ ಅಧ್ಯಯನಗಳು ಭಾರತದ ಸುಂದರ್‌ಬನ ಪ್ರದೇಶವು 2,626 ಪ್ರಾಣಿ ಸಂಕುಲಗಳು ಮತ್ತು ದೇಶದ 90% ಮ್ಯಾಂಗ್ರೋವ್ ಪ್ರಭೇದಗಳಿಗೆ ಸ್ವ ನೆಲೆಯಾಗಿದೆ ಎಂದು ಹೇಳುತ್ತದೆ.
ವಿಷಯಗಳು: ಗಡಿ ಪ್ರದೇಶಗಳಲ್ಲಿ ಭದ್ರತಾ ಸವಾಲುಗಳು ಮತ್ತು ಅವುಗಳ ನಿರ್ವಹಣೆ; ಭಯೋತ್ಪಾದನೆ ಯೊಂದಿಗೆ ಸಂಘಟಿತ ಅಪರಾಧದ ಸಂಪರ್ಕ.
ಬೋಡೊಲ್ಯಾಂಡ್ ಭೌಗೋಳಿಕ ಪ್ರದೇಶ (BTR) ಒಪ್ಪಂದ.
Bodoland Territorial Region (BTR) agreement:
ಸಂದರ್ಭ:
ಅಸ್ಸಾಂ ರಾಜ್ಯವು ಐತಿಹಾಸಿಕ ಬೋಡೋಲ್ಯಾಂಡ್ ಭೌಗೋಳಿಕ ಪ್ರದೇಶ (BRT) ಒಪ್ಪಂದದ ಮೊದಲ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಪ್ರಸ್ತುತ, ಬೋಡೋಲ್ಯಾಂಡ್ ಭೌಗೋಳಿಕ ಪ್ರದೇಶದ ಜಿಲ್ಲೆಗಳು- (Bodoland Territorial Area Districts- BTAD) ಅಸ್ಸಾಂ ನ, ಕೊಕ್ರಜಾರ್, ಚಿರಾಂಗ್, ಬಕ್ಸಾ ಮತ್ತು ಉದಲ್ಗುರಿ ಎಂಬ ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಿಸಿದೆ.
ಬೋಡೊ ಜನರ ಭೂಹಕ್ಕುಗಳ ರಕ್ಷಣೆಗಾಗಿ ‘ಬೋಡೊಲ್ಯಾಂಡ್ ಭೂಹಕ್ಕುಗಳ ರಕ್ಷಣಾ ಆಯೋಗ’ವನ್ನು ರಚಿಸಲಾಗುತ್ತದೆ.
ಒಪ್ಪಂದದ ಅವಲೋಕನ:
- BTR ಒಪ್ಪಂದದ ಪ್ರಕಾರ, ಪ್ರಸ್ತುತ ಬೋಡೋಲ್ಯಾಂಡ್ ಭೌಗೋಳಿಕ ಪ್ರಾದೇಶಿಕ ಜಿಲ್ಲೆಗಳ (BTAD) ಹೊರಗಡೆ ಇರುವ ಬೋಡೋ ಪ್ರಾಬಲ್ಯದ ಗ್ರಾಮಗಳನ್ನು ಈ ಪ್ರದೇಶದಲ್ಲಿ ಸೇರಿಸಲಾಗುವುದು ಮತ್ತು ಬೋಡೋ ಅಲ್ಲದ ಜನಸಂಖ್ಯೆಯನ್ನು ಈ ಪ್ರದೇಶದಿಂದ ಹೊರಗಿಡಲಾಗುತ್ತದೆ.
- ‘ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊಡೋಲ್ಯಾಂಡ್- (NDFB) ಬಣಗಳ ಸದಸ್ಯರ ವಿರುದ್ಧದ “ಘೋರವಲ್ಲದ” ಅಪರಾಧಗಳಿಗೆ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಅಸ್ಸಾಂ ಸರ್ಕಾರವು ಹಿಂಪಡೆಯುತ್ತದೆ ಮತ್ತು ಘೋರವಾದ ಪ್ರಕರಣಗಳನ್ನು ಪರಿಶೀಲಿಸಲಾಗುವುದು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ.
- ಬೋಡೋ ಚಳವಳಿಯಲ್ಲಿ / ಹೋರಾಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿಗಳನ್ನು ನೀಡಲಾಗುವುದು.
- ಬೋಡೋ ಪ್ರದೇಶಗಳ ಅಭಿವೃದ್ಧಿಗಾಗಿ ಇರುವ ನಿರ್ದಿಷ್ಟ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು 1,500 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಿದೆ.
- ಬೋಡೋಲ್ಯಾಂಡ್ ಭೌಗೋಳಿಕ ಪ್ರಾದೇಶಿಕ ಜಿಲ್ಲೆಗಳಲ್ಲಿ (BTAD) ಹೊಸ ಪ್ರದೇಶಗಳನ್ನು ಸೇರಿಸಲು ಮತ್ತು ಹೊರಗಿಡಲು ಸಮಿತಿಯ ಮೂಲಕ ನಿರ್ಧರಿಸಲಾಗುತ್ತದೆ.
- BTR ವ್ಯಾಪ್ತಿಯಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸಲು ಬೋಡೊಲ್ಯಾಂಡ್ ನಾಗರಿಕ ಸೇವಾ ಆಯೋಗ ರಚನೆಗೆ ಅವಕಾಶ ನೀಡಲಾಗಿದೆ. ಈ ಎಲ್ಲದಕ್ಕೂ ಕೇಂದ್ರ ಸರ್ಕಾರವು ಅನುದಾನ ಒದಗಿಸಲಿದೆ.
- ಬೋಡೊ ಭಾಷೆಯನ್ನು ಶಿಕ್ಷಣದ ಭಾಷೆಯನ್ನಾಗಿ ಮಾಡುವ ಮತ್ತು ಅಸ್ಸಾಂನ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಒಪ್ಪಂದದಲ್ಲಿ ಅವಕಾಶ ನೀಡಲಾಗಿದೆ.
- ಈಗ BTAD ಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಬೋಡೊಲ್ಯಾಂಡ್ ಭೌಗೋಳಿಕ ಸಮಿತಿ (BTC) 40 ಸದಸ್ಯರ ಬಲ ಹೊಂದಿದೆ. ಬಿಟಿಎಡಿಗಿಂತಲೂ BTR ನ ವ್ಯಾಪ್ತಿ ಹಿಗ್ಗುವ ಕಾರಣ, BTC ಸದಸ್ಯರ ಸಂಖ್ಯೆ 40ರಿಂದ 60ಕ್ಕೆ ಏರಿಕೆ ಆಗಲಿದೆ.
- ರಾಜ್ಯವೊಂದು ವಿಧಿಸಬಹುದಾದ ಎಲ್ಲಾ ಸ್ವರೂಪದ ತೆರಿಗೆ, ಸುಂಕ ಮತ್ತು ರಾಜಧನಗಳನ್ನು ವಿಧಿಸುವ ಅಧಿಕಾರ.
- ತೆರಿಗೆ, ಸುಂಕ ಮತ್ತು ರಾಜಧನವನ್ನು ಬಳಸುವ ಅಧಿಕಾರ.
- ಕೇಂದ್ರ ಸರ್ಕಾರದ ಎಲ್ಲಾ ಅನುದಾನಗಳು ನೇರವಾಗಿ ಬಿಟಿಸಿಗೆ ಹಂಚಿಕೆ ಆಗಲಿದೆ.
- ವಿಶ್ವ ಬ್ಯಾಂಕ್ ಮತ್ತು ಜಾಗತಿಕ ಹಣಕಾಸು ಸಂಸ್ಥೆಗಳ ನೆರವಿನ ಹಣ ನೇರವಾಗಿ ಬಿಟಿಸಿಗೆ ಹಂಚಿಕೆ ಆಗಲಿದೆ.
ಮಹತ್ವ:
BTR ಒಪ್ಪಂದಕ್ಕೆ ಸಹಿ ಹಾಕಿದ ನಂತರ, 50 ವರ್ಷಗಳ ಬೋಡೋ ಬಿಕ್ಕಟ್ಟು ಕೊನೆಗೊಂಡಿದೆ.
- NDFB(P), NDFB(RD) ಮತ್ತು NDFB(S) ದ ಸುಮಾರು 1500 ಕಾರ್ಯಕರ್ತರಿಗೆ ಕೇಂದ್ರ ಮತ್ತು ಅಸ್ಸಾಂ ಸರ್ಕಾರವು ಪುನರ್ವಸತಿ ಒದಗಿಸಲಿವೆ. ಹೀಗಾಗಿ, ಈಗ ಇವರುಗಳನ್ನು ಮುಖ್ಯವಾಹಿನಿಗೆ ಸೇರಿಸಲಾಗುವುದು.
- ಒಪ್ಪಂದದ ನಂತರ, ಎನ್‌ಡಿಎಫ್‌ಬಿ ಬಣಗಳು ಹಿಂಸಾಚಾರದ ಹಾದಿಯನ್ನು ಬಿಟ್ಟು ಶಸ್ತ್ರಾಸ್ತ್ರ ಸಹಿತ ಶರಣಾಗುತ್ತವೆ ಮತ್ತು ಒಪ್ಪಂದಕ್ಕೆ ಸಹಿ ಹಾಕಿದ ಒಂದು ತಿಂಗಳೊಳಗೆ ತಮ್ಮ ಸಶಸ್ತ್ರ ಸಂಸ್ಥೆಗಳ ಎಲ್ಲಾ ಚಟುವಟಿಕೆಗಳನ್ನು ಕೊನೆಗೊಳಿಸುತ್ತವೆ.
ಯಾರು ಈ ಬೋಡೋಗಳು?
- ಬೋಡೋಗಳು ಅಸ್ಸಾಂನ ಅತಿದೊಡ್ಡ ಬುಡಕಟ್ಟು ಸಮುದಾಯವಾಗಿದೆ, ಮತ್ತು ಅವರ ಜನಸಂಖ್ಯೆಯು ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 5-6 ಕ್ಕಿಂತ ಹೆಚ್ಚಾಗಿದ್ದು ಈ ಹಿಂದೆ ಅವರು ಅಸ್ಸಾಂನ ವಿಶಾಲ ಪ್ರದೇಶವನ್ನು ನಿಯಂತ್ರಿಸುತ್ತಿದ್ದರು.
- ಅಸ್ಸಾಂನ ನಾಲ್ಕು ಜಿಲ್ಲೆಗಳು – ಬೋಡೋಲ್ಯಾಂಡ್ ಭೌಗೋಳಿಕ ಪ್ರಾದೇಶಿಕ ಜಿಲ್ಲೆಗಳ (BTAD) ಅಡಿಯಲ್ಲಿರುವ ಕೊಕ್ರಜಾರ್, ಚಿರಾಂಗ್, ಬಕ್ಸಾ ಮತ್ತು ಉದಲ್ಗುರಿ –ಗಳು ಹಲವಾರು ಜನಾಂಗಗಳಿಗೆ ನೆಲೆಯಾಗಿವೆ.
ಬೋಡೋಲ್ಯಾಂಡ್ ವಿವಾದ:
- 1966-67ರಲ್ಲಿ, ‘ಪ್ಲೇನ್ಸ್ ಟ್ರೈಬಲ್ಸ್ ಕೌನ್ಸಿಲ್ ಆಫ್ ಅಸ್ಸಾಂ-ಪಿಟಿಸಿಎ’ (Plains Tribals Council of Assam -PTCA), ಎಂಬ ರಾಜಕೀಯ ಸಂಘಟನೆಯ ಮೂಲಕ ಮೊದಲ ಬಾರಿಗೆ ಪ್ರತ್ಯೇಕ ಬೋಡೋಲ್ಯಾಂಡ್ ರಾಜ್ಯಕ್ಕಾಗಿ ಒತ್ತಾಯಿಸಲಾಯಿತು.
- 1987 ರಲ್ಲಿ, ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್-(All Bodo Students Union-ABSU) ವು, ಮತ್ತೊಮ್ಮೆ ಪ್ರತ್ಯೇಕ ಬೋಡೋಲ್ಯಾಂಡ್ ಗಾಗಿನ ಬೇಡಿಕೆಯನ್ನು ಹೆಚ್ಚಿಸಿತು ಮತ್ತು “ಅಸ್ಸಾಂ ರಾಜ್ಯವನ್ನು ಎರಡು ಸಮಾನ ಭಾಗಗಳಾಗಿ ವಿಂಗಡಿಸಿ” (“Divide Assam fifty- fifty”) ಎಂದು ಅಂದಿನ ABSU ಅಧ್ಯಕ್ಷ ಉಪೇಂದ್ರನಾಥ್ ಬ್ರಹ್ಮ ಬೇಡಿಕೆ ಮಂಡಿಸಿದರು.
- 1979-85ರಲ್ಲಿ, ‘ಅಸ್ಸಾಂ ಜನರನ್ನು ರಕ್ಷಿಸುವುದು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡುವುದು’ ಅದಕ್ಕಾಗಿ ಆಗಿದ್ದ ‘ಅಸ್ಸಾಂ ಚಳವಳಿ’ ಯನ್ನು ‘ಅಸ್ಸಾಂ ಒಪ್ಪಂದ’ ಎಂದು ತೀರ್ಮಾನಿಸಲಾಯಿತು. ಇದರ ನಂತರ, ಬೋಡೋ ಸಮುದಾಯದ ಜನರು ತಮ್ಮ ಸಂಸ್ಕೃತಿ ಮತ್ತು ಗುರುತನ್ನು ಉಳಿಸಲು ಮತ್ತೆ ಆಂದೋಲನವನ್ನು ಪ್ರಾರಂಭಿಸಿದರು.
ಸಾಮಾನ್ಯ ಅಧ್ಯಯನ ಪತ್ರಿಕೆ – 4
ವಿಷಯಗಳು: ಸಾರ್ವಜನಿಕ /ನಾಗರಿಕ ಸೇವಾ ಮೌಲ್ಯಗಳು ಸಾರ್ವಜನಿಕ ಆಡಳಿತದಲ್ಲಿ ನೈತಿಕತೆ: ಸ್ಥಿತಿ ಮತ್ತು ಸಮಸ್ಯೆಗಳು; ನೈತಿಕ ಕಾಳಜಿ ಮತ್ತು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂದಿಗ್ಧತೆಗಳು;ನೈತಿಕ ಮಾರ್ಗದರ್ಶನದ ಮೂಲಗಳಾಗಿ ಕಾನೂನುಗಳು, ನೀತಿಗಳು, ನಿಯಮಗಳು ಮತ್ತು ಆತ್ಮಸಾಕ್ಷಿ;ಹೊಣೆಗಾರಿಕೆ ಮತ್ತು ನೈತಿಕ ಆಡಳಿತ;ಆಡಳಿತದಲ್ಲಿ ನೈತಿಕ ಮೌಲ್ಯಗಳನ್ನು ಬಲಪಡಿಸುವುದು; ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಧನಸಹಾಯ ನೀಡಿಕೆಯಲ್ಲಿ ನೈತಿಕ ಸಮಸ್ಯೆಗಳು; ಸಾಂಸ್ಥಿಕ ಆಡಳಿತ.
ಒಡಿಶಾದಲ್ಲಿ ಶುಲ್ಕ ಪಾವತಿ ಮಾಡಲು MGNREGS ನಲ್ಲಿ ಕೆಲಸ ಮಾಡುತ್ತಿರುವ ಸಹೋದರಿಯರು:
- ಒಡಿಶಾದಲ್ಲಿ, 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ರಮವಾಗಿ ಬಿ.ಟೆಕ್ ಮತ್ತು ಹನ್ನೆರಡನೇ ತರಗತಿಯಲ್ಲಿ ಕಲಿಯುತ್ತಿರುವ ಮಿಸ್ ಬೆಹೆರಾ ಅವರ ಇಬ್ಬರು ಸಹೋದರಿಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGS) ಅಡಿಯಲ್ಲಿ ದಿನಕ್ಕೆ 207 ರೂ. ಸಂಪಾದಿಸಲು ದುಡಿಯುತ್ತಿದ್ದಾರೆ.
- ಅವರು ಚೈನ್‌ಪುರ ಪಂಚಾಯತ್ ವ್ಯಾಪ್ತಿಯ ಗೋರಡಿಪಿಧ ಗ್ರಾಮದಲ್ಲಿರುವ ದಲಿತ ಕುಟುಂಬಕ್ಕೆ ಸೇರಿದವರು.
- ಐವರು ಸಹೋದರಿಯರಲ್ಲಿ ಹಿರಿಯರಾದ ಶ್ರೀಮತಿ ಬೆಹೆರಾ ಅವರ ಉನ್ನತ ಅಧ್ಯಯನವನ್ನು ಪೂರ್ಣಗೊಳಿಸುವುದಕ್ಕೆ ಸಹಾಯ ಮಾಡಲು ಅವರು ಹಣವನ್ನು ವ್ಯವಸ್ಥೆ ಮಾಡಲು ಹತಾಶರಾಗಿದ್ದಾರೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
143 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ, ವಿಶ್ವ ಬಾಹ್ಯಾಕಾಶ ದಾಖಲೆಯನ್ನು ಮುರಿದ ಸ್ಪೇಸ್‌ಎಕ್ಸ್:
- 2017 ರ ಫೆಬ್ರವರಿ ಯಲ್ಲಿ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದ ಭಾರತದ ದಾಖಲೆಯನ್ನು, ಸ್ಪೇಸ್ಎಕ್ಸ್ ಇತ್ತೀಚೆಗೆ 143 ಉಪಗ್ರಹಗಳನ್ನು ತ್ವರಿತವಾಗಿ ಉಡಾವಣೆ ಮಾಡುವ ಮೂಲಕ ವಿಶ್ವ ಬಾಹ್ಯಾಕಾಶ ದಾಖಲೆಯನ್ನು ಮುರಿಯಿತು.
- ಸ್ಪೇಸ್‌ಎಕ್ಸ್ ನ ರೆಕಾರ್ಡ್ ಬ್ರೇಕಿಂಗ್ ಹಾರಾಟದ ಉಡಾವಣಾ ವಾಹಕ ಫಾಲ್ಕನ್ 9 ಮತ್ತು ಈ ಯೋಜನೆ ಯನ್ನು ಟ್ರಾನ್ಸ್‌ಪೋರ್ಟರ್ -1 ಎಂದು ನಿಗದಿಪಡಿಸಲಾಗಿದೆ.
- ಉಡಾವಣೆಯನ್ನು ಸ್ಪೇಸ್‌ಎಕ್ಸ್‌ನ ಮೊದಲ ಸ್ಮಾಲ್ ಸಾಟ್ ರೈಡ್‌ಶೇರ್ ಪ್ರೋಗ್ರಾಂ ( SpaceX’s SmallSat Rideshare Program) ಮಿಷನ್‌ಗೆ ಸಮರ್ಪಿಸಲಾಗಿದೆ. ಈ ಕಾರ್ಯಕ್ರಮವು ಸಣ್ಣ ಉಪಗ್ರಹ ಕಂಪನಿಗಳಿಗೆ ಕಡಿಮೆ ವೆಚ್ಚದಲ್ಲಿ ಸ್ಪೇಸ್‌ಎಕ್ಸ್‌ನೊಂದಿಗೆ ಸ್ಥಳಾವಕಾಶವನ್ನು ಕ್ಕಾಯ್ದಿರಿಸಿ ವಿಹರಿಸಲು ಅನುವು ಮಾಡಿಕೊಡುತ್ತದೆ.
ಎರಡು ಹೊಸ ಇರುವೆ ಪ್ರಭೇದಗಳ ಅನ್ವೆಷಣೆ:
ಅಪರೂಪದ ಇರುವೆ ತಳಿಯ ಎರಡು ಹೊಸ ಪ್ರಭೇದಗಳನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ಕಂಡುಹಿಡಿಯಲಾಗಿದೆ.ಇರುವ ಆಂಟೆನಾಗಳ ಸಂಖ್ಯೆಯನ್ನು ಆಧರಿಸಿ ಅವು ಒಂದೇ ಜಾತಿಯ ಇತರ ಇರುವೆಪ್ರಭೇದ ಗಳಿಗಿಂತ ಭಿನ್ನವಾಗಿವೆ.
ಹೊಸ ಪ್ರಭೇದಗಳು:
- ಒಕೆರಿಯಾ ಜೋಶಿ: (Ooceraea Joshii):
ಇದು ಕೇರಳದ ಪೆರಿಯಾರ್ ಟೈಗರ್ ರಿಸರ್ವ್‌ನಲ್ಲಿ ಕಂಡುಬರುತ್ತದೆ.
ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರ) ನ ಪ್ರಸಿದ್ಧ ವಿಕಾಸವಾದ ಜೀವಶಾಸ್ತ್ರಜ್ಞರಾದ ಪ್ರಾಧ್ಯಾಪಕ ಅಮಿತಾಬ್ ಜೋಶಿ ಅವರ ಗೌರವಾರ್ಥವಾಗಿ ಇದಕ್ಕೆ ಒಕೆರಿಯಾ ಜೋಶಿ ಎಂದು ಹೆಸರು ಇಡಲಾಗಿದೆ.
ಒಕೆರಿಯಾ ಡೆಕಮೆರಾ:
ಡೆಕಮ್ರಾ ಹತ್ತು-ವಿಭಾಗದ ಆಂಟೆನಾ ಎಣಿಕೆಯನ್ನು ಸೂಚಿಸುತ್ತದೆ. ಇದನ್ನು ಮಧುರೈನ ಅಲಗರ್ಕೋಯಿಲ್ ನಿಂದ ಕಂಡುಹಿಕಂಡುಹಿಡಿಯಲಾಗಿದೆ.
ರಾಷ್ಟ್ರೀಯ ಮತದಾರರ ದಿವಸ (NVD):
(National Voters’ Day):
- ಭಾರತದ ಚುನಾವಣಾ ಆಯೋಗವು 2021 ರ ಜನವರಿ 25 ರಂದು 11 ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುತ್ತಿದೆ.
- ಈ ವರ್ಷದ ರಾಷ್ಟ್ರೀಯ ಮತದಾರರ ದಿವಸದ ವಿಷಯ ‘ನಮ್ಮ ಮತದಾರರನ್ನು ಸಬಲೀಕರಣಗೊಳಿಸುವುದು, ಜಾಗೃತ, ಸುರಕ್ಷಿತ ಮತ್ತು ಮಾಹಿತಿ ನೀಡುವುದು’.
(Theme: ‘Making Our Voters Empowered, Vigilant, Safe and Informed’)
- ಭಾರತದ ಚುನಾವಣಾ ಆಯೋಗದ ಸ್ಥಾಪನೆಯಾದ ದಿನವನ್ನು ಗುರುತಿಸಲು ದೇಶಾದ್ಯಂತ ( ಅಂದರೆ ಜನವರಿ 25, 1950) ರಾಷ್ಟ್ರೀಯ ಮತದಾರರ ದಿನವನ್ನು 2011 ರಿಂದ ಪ್ರತಿವರ್ಷ ಜನವರಿ 25 ರಂದು ಆಚರಿಸಲಾಗುತ್ತಿದೆ.









