Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 22 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ನಾಲ್ಕು ಸ್ಥಳೀಯ ಸಮರ ಕಲಾ ಪ್ರಕಾರಗಳನ್ನು ಸೇರ್ಪಡೆ ಮಾಡಲಾಗಿದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜೀವ್ ಗಾಂಧಿ ಪ್ರಕರಣದ ಅಪರಾಧಿಯ ಕ್ಷಮಾದಾನದ ಅರ್ಜಿ.

2. H.O ಒಪ್ಪಂದಕ್ಕೆ ಮರಳಿದ ಅಮೇರಿಕಾ.

3. ಯುಎಸ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಪಡೆದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ತೈವಾನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. V-ಆಕಾರದ ಚೇತರಿಕೆ ನೋಡುತ್ತಿರುವ RBI, ನೀತಿಗಳನ್ನು ಸುಗಮಗೊಳಿಸುವ ಸಾಧ್ಯತೆಯಿದೆ.

2. ತನಗೆ ಮೌನವಾಗಿರುವ ಹಕ್ಕಿದೆ ಎಂದು ಹೇಳಿದ ಫೇಸ್ ಬುಕ್ ಅಧಿಕಾರಿ.

3. ಆಸ್ಟ್ರೋಸಾಟ್ / AstroSat.

 

ಪೂರ್ವ ಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸಂಕಷ್ಟದಲ್ಲಿರುವ ಮಹಿಳೆಯರ ಸಹಾಯಕ್ಕಾಗಿ ಸ್ಮಾರ್ಟ್ ಕ್ಯಾಮೆರಾಗಳು.

2. ಕವಚ್ ವ್ಯಾಯಾಮ /Exercise Kavach.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ನಾಲ್ಕು ಸ್ಥಳೀಯ ಸಮರ ಕಲಾ ಪ್ರಕಾರಗಳನ್ನು ಸೇರ್ಪಡೆ ಮಾಡಲಾಗಿದೆ:


ಸಂದರ್ಭ:

ಖೇಲೋ ಇಂಡಿಯಾ ಯೂತ್ ಗೇಮ್ಸ್ ಅನ್ನು 17 ಮತ್ತು 21 ವರ್ಷದೊಳಗಿನವರಿಗೆ ಬಹುಶಿಸ್ತೀಯ ತಳಮಟ್ಟದ ಕಾರ್ಯಕ್ರಮವಾಗಿ ಪ್ರಾರಂಭಿಸಲಾಗಿದೆ.

 • ಇದನ್ನು ವಾರ್ಷಿಕವಾಗಿ ಆಯೋಜಿಸಲಾಗುತ್ತಿದ್ದು, ಉತ್ತಮ ಪ್ರದರ್ಶನ ನೀಡುವ ಕ್ರೀಡಾಪಟುಗಳಿಗೆ ಅಂತರರಾಷ್ಟ್ರೀಯ ಸಿದ್ಧತೆ ನಡೆಸಲು ಎಂಟು ವರ್ಷಗಳವರೆಗೆ ಪ್ರತಿ ವರ್ಷ ₹ 5 ಲಕ್ಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ಕ್ರೀಡಾ ಸಚಿವಾಲಯವು ನಾಲ್ಕು ಸ್ಥಳೀಯ ಸಮರ ಕಲಾ ಪ್ರಕಾರಗಳಾದ ಕೇರಳದ ಕಳರಿಪಯಟ್ಟು, ಮಧ್ಯ ಭಾರತದ ಮಲ್ಲಕಂಬ, ಪಂಜಾಬ್‌ನ ಗಟ್ಕಾ ಮತ್ತು ಮಣಿಪುರದ ಥಾಂಗ್-ಟಾ – ಗಳನ್ನು ಖೇಲೋ ಇಂಡಿಯಾ ಯೂತ್ ಗೇಮ್ಸ್ (KIYG) ಗೆ ಸೇರಿಸಿದೆ.

ಮಲ್ಲಕಂಬ ಎಂದರೇನು?

 • ಇದು ಮರದ ಕಂಬದಿಂದ ನಡೆಸುವ ಜಿಮ್ನಾಸ್ಟಿಕ್ಸ್‌ನ ಸಾಂಪ್ರದಾಯಿಕ ರೂಪವಾಗಿದೆ,(ಶೀಶಮ್ ಅಥವಾ ಇಂಡಿಯನ್ ರೋಸ್‌ವುಡ್‌ ಮರದಿಂದ ತಯಾರಿಸಲಾಗುತ್ತದೆ ಮತ್ತು ಕ್ಯಾಸ್ಟರ್ ಆಯಿಲ್‌ನಿಂದ ಹೊಳಪು ನೀಡಲಾಗುತ್ತದೆ).
 • ಮಧ್ಯಪ್ರದೇಶವು 2013 ರಲ್ಲಿ ಮಲ್ಲಕಂಬವನ್ನು ರಾಜ್ಯ ಕ್ರೀಡೆಯೆಂದು ಘೋಷಿಸಿದರೂ, 1981 ರಿಂದಲೇ ಇದನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಅಭಿವೃದ್ಧಿಪಡಿಸಲಾಯಿತು, ಮತ್ತು ಆ ವರ್ಷದಲ್ಲಿ ನಡೆದ ಮೊದಲ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರಲಾಯಿತು.

mallakhamba

ಗಟ್ಕಾ:

ಇದು 15 ನೇ ಶತಮಾನದಲ್ಲಿ ಪಂಜಾಬ್‌ನಲ್ಲಿ ಹುಟ್ಟಿದ ಮರದ ಕೋಲುಗಳೊಂದಿಗೆ ಹೋರಾಡುವ ಶೈಲಿಯಾಗಿದೆ. ಬಾನಾ ಮತ್ತು ಚೋಳ ಎಂಬ ಸಾಂಪರದಾಯಿಕವಾದ ಉಡುಗೆಗಳನ್ನು ಧಾರ್ಮಿಕ ಪ್ರದರ್ಶನಕ್ಕಾಗಿ ಧರಿಸಿದರೂ, ಕ್ರೀಡೆಯಾಗಿ ಪ್ರದರ್ಶನ ನೀಡುವಾಗ ಸ್ಪರ್ಧಾಳುಗಳು ಟ್ರ್ಯಾಕ್ ಪ್ಯಾಂಟ್ ಮತ್ತು ಟೀ ಶರ್ಟ್‌ಗಳನ್ನು ಧರಿಸುತ್ತಾರೆ, ಮತ್ತು ದಂಡವು / ಕೋಲು, ಮನುಷ್ಯನ ಗಾತ್ರಕ್ಕಿಂತ ಎತ್ತರವಾಗಿರುವುದಿಲ್ಲ.

gatka

ಥಾಂಗ್-ಟಾ:

 • ಇದೊಂದು ಮಣಿಪುರಿ ಕಲಾ ಪ್ರಕಾರವಾಗಿದೆ.
 • ಇದು ಆಚರಣೆ, ಪ್ರದರ್ಶನ ಮತ್ತು ಯುದ್ಧವನ್ನು ಸಂಯೋಜಿಸುತ್ತದೆ ಮತ್ತು ವೈವಿಧ್ಯಮಯ ನೃತ್ಯ ಪ್ರಕಾರಗಳು ಮತ್ತು ಯೋಧರ ಡ್ರಿಲ್‌ಗಳನ್ನು (ವ್ಯಾಯಾಮ) ಒಳಗೊಂಡಿದೆ.

thang_ta

ಕಳರಿಪಯಟ್ಟು:

 • ಇದು ಒಂದು ಸಮರ ಕಲೆಯಾಗಿದ್ದು, ಕ್ರಿ.ಪೂ 3 ನೇ ಶತಮಾನದಿಂದ ಕ್ರಿ.ಶ 2 ನೇ ಶತಮಾನದವರೆಗಿನ ಅವಧಿಯಲ್ಲಿ, ಕೇರಳದಲ್ಲಿ ಒಂದು ಶೈಲಿಯಾಗಿ ಹುಟ್ಟಿಕೊಂಡಿತು.
 • ಕಳರಿ ಎಂಬ ಪದವು ಸಂಗಮ್ ಸಾಹಿತ್ಯದಲ್ಲಿ ಮೊದಲು ಕಾಣಿಸಿಕೊಂಡಿದ್ದು,ಯುದ್ಧಭೂಮಿ ಮತ್ತು ಯುದ್ಧ ರಂಗ ಎಂಬ ಎರಡು ಅರ್ಥವನ್ನು ವಿವರಿಸುತ್ತದೆ.
 • ಇದು ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಹೋರಾಟದ ಪದ್ಧತಿಯೆಂದು ಪರಿಗಣಿತವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು : ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ರಾಜೀವ್ ಗಾಂಧೀ ಪ್ರಕರಣದ ಅಪರಾಧಿಯ ಕ್ಷಮಾದಾನದ ಅರ್ಜಿ :


ಸಂದರ್ಭ :

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ AG ಪೆರಾರಿವಾಳನ್ ಅವರ ಕ್ಷಮಾದಾನದ ಅರ್ಜಿಯ ಬಗ್ಗೆ ನಾಲ್ಕು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ರವರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.

ಏನಿದು ಸಮಸ್ಯೆ?

2015 ರ ಡಿಸೆಂಬರ್ 30 ರಿಂದ ರಾಜ್ಯಪಾಲರ ಬಳಿ ಈ ಕ್ಷಮಾದಾನದ ಅರ್ಜಿ ಇತ್ಯರ್ಥಗೊಳ್ಳದೆ ಬಾಕಿ ಇದೆ.

 • ರಾಜ್ಯಪಾಲರು, ಸಂವಿಧಾನದ 161 ನೇ ವಿಧಿ ಅನ್ವಯ ಸಲ್ಲಿಸಿದ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸುವಲ್ಲಿ ರಾಜ್ಯಪಾಲರ ನಿಷ್ಕ್ರಿಯತೆಯನ್ನು ಉಲ್ಲೇಖಿಸಿ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಕೋರಿ ಪೆರಾರಿವಾಳನ್ ಸುಪ್ರೀಂ ಕೋರ್ಟ್‌ಗೆ  ತೆರಳಿದ್ದಾರೆ.

seeking_mercy

ಏನಿದು ಆರ್ಟಿಕಲ್ 161 ?

ಸಂವಿಧಾನದ 161 ನೇ ವಿಧಿಯು ರಾಜ್ಯಪಾಲರಿಗೆ “ರಾಜ್ಯದ ಕಾರ್ಯಾಂಗ ಅಧಿಕಾರವು ವ್ಯಾಪ್ತವಾಗುವ ಯಾವುದೇ ವಿಷಯಕ್ಕೆ ಸಂಬಂಧಿಸಿದ ನಿರ್ಣೀತನಾದ ಯಾವುದೇ ವ್ಯಕ್ತಿಗೆ ವಿಧಿಸಿರುವ ಶಿಕ್ಷೆಗೆ  “ಕ್ಷಮೆಯನ್ನು ನೀಡುವ, ಹಿಂಪಡೆಯುವ, ಶಿಕ್ಷೆಯನ್ನು ಅಮಾನತ್ತಿನಲ್ಲಿಡುವ, ಅಥವಾ ಶಿಕ್ಷೆಯ ಸ್ವರೂಪವನ್ನು ಪರಿವರ್ತನೆ ಮಾಡುವ ಅಧಿಕಾರವನ್ನು ನೀಡುತ್ತದೆ”.

ಆರ್ಟಿಕಲ್ 72 vs  ಆರ್ಟಿಕಲ್ 161:

ಆರ್ಟಿಕಲ್ 72 ರ ಅಡಿಯಲ್ಲಿ ರಾಷ್ಟ್ರಪತಿಗಳ ಕ್ಷಮಾದಾನದ ಅಧಿಕಾರ ವ್ಯಾಪ್ತಿಯು 161 ನೇ ವಿಧಿ ಅನ್ವಯ ರಾಜ್ಯಪಾಲರ ಕ್ಷಮಾದಾನದ ಅಧಿಕಾರ ವ್ಯಾಪ್ತಿಗಿಂತ ವಿಸ್ತಾರವಾಗಿದೆ.

ಕ್ಷಮಾದಾನದ ಅಧಿಕಾರವು ಈ ಕೆಳಗಿನ ಎರಡು ವಿಧಾನಗಳಲ್ಲಿ ಭಿನ್ನವಾಗಿರುತ್ತದೆ.

 • ಅಧ್ಯಕ್ಷರ ಅಧಿಕಾರವು ಕೋರ್ಟ್ ಮಾರ್ಷಲ್ ನಿಂದ ಶಿಕ್ಷೆಗೊಳಗಾದ ವ್ಯಕ್ತಿಗೂ ಕ್ಷಮಾದಾನ ನೀಡುವ ವರೆಗೂ ವಿಸ್ತಾರ ಹೊಂದಿದೆ ಆದರೆ 161 ನೇ ವಿಧಿಯು ರಾಜ್ಯಪಾಲರಿಗೆ ಅಂತಹ ಯಾವುದೇ ಅಧಿಕಾರವನ್ನು ನೀಡುವುದಿಲ್ಲ.
 • ರಾಷ್ಟ್ರಪತಿಯವರು ಮರಣದಂಡನೆಗೂ ಕ್ಷಮಾದಾನ ನೀಡಬಹುದು, ಆದರೆ ರಾಜ್ಯಪಾಲರಿಗೆ ಅಂತಹ ಯಾವುದೇ ಅಧಿಕಾರವಿಲ್ಲ.

ಕ್ಷಮಾದಾನ ಅಧಿಕಾರಗಳ ಮಹತ್ವ:

 • ನ್ಯಾಯಾಂಗದ ದೋಷಗಳನ್ನು ಸರಿಪಡಿಸುವಲ್ಲಿ ಕಾರ್ಯನಿರ್ವಾಹಕನ ಕ್ಷಮಿಸುವ ಅಧಿಕಾರವು ಬಹಳ ಮಹತ್ವದ್ದಾಗಿದೆ.ಇದು ಪ್ರತಿವಾದಿಯ ತಪ್ಪನ್ನು ಅಥವಾ ಮುಗ್ಧತೆಯನ್ನು ಯೋಚಿಸದೆ ಅಪರಾಧ ನಿರ್ಣಯದ ಪರಿಣಾಮವನ್ನು ತೆಗೆದುಹಾಕುತ್ತದೆ.
 • ಕ್ಷಮಾದಾನದ ಅಧಿಕಾರವು ನ್ಯಾಯಾಲಯದ ತಪ್ಪು ಗ್ರಹಿಕಯ ಕಾರಣದಿಂದಾಗಿ ಮುಗ್ಧ ಜನರನ್ನು ಶಿಕ್ಷೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
 • ಕ್ಷಮಾದಾನದ ಅಧಿಕಾರದ ಉದ್ದೇಶವೆಂದರೆ ನ್ಯಾಯಾಂಗದ ದೋಷಗಳನ್ನು ಸರಿಪಡಿಸುವುದು, ಏಕೆಂದರೆ ಮಾನವ ವ್ಯವಸ್ಥೆಯ ಯಾವುದೇ ನ್ಯಾಯಾಂಗ ಆಡಳಿತವು ನ್ಯೂನ್ಯತೆಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ.

who

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

W.H.O ಒಪ್ಪಂದಕ್ಕೆ ಮರಳಿದ ಅಮೇರಿಕಾ:


ಸಂದರ್ಭ :

COVID-19 ವಿರುದ್ಧದ ಹೋರಾಟದಲ್ಲಿ ಅಧ್ಯಕ್ಷ ಜೋ ಬೈಡನ್ ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರದತ್ತ ಸಾಗುತ್ತಿರುವುದರಿಂದ WHO ಗೆ,  ಅನುದಾನ ನೀಡುವುದನ್ನು ಅಮೇರಿಕಾ ಪುನರಾರಂಭಿಸಿದೆ.

ಹಿನ್ನೆಲೆ:

ಕರೋನವೈರಸ್ ಸಾಂಕ್ರಾಮಿಕದ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಕೇಂದ್ರಿತವಾಗಿ ವರ್ತಿಸುತ್ತಿದೆ ಎಂದು ಆರೋಪಿಸುವ ಮೂಲಕ,ಕಳೆದ ವರ್ಷ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದ ಧನಸಹಾಯವನ್ನು ತಡೆಹಿಡಿದಿದ್ದರು.

 • ಅಮೇರಿಕಾವು ವಿಶ್ವ ಆರೋಗ್ಯ ಸಂಸ್ಥೆಯ ಅತಿದೊಡ್ಡ ಕೊಡುಗೆದಾರನಾಗಿದೆ.

WHO ಗೆ ಹೇಗೆ ಹಣ / ಅನುದಾನ ನೀಡಲಾಗುತ್ತದೆ?

WHO ಗಾಗಿ ನಾಲ್ಕು ರೀತಿಯ ಧನಸಹಾಯ ಕೊಡುಗೆಗಳಿವೆ: ಅವುಗಳೆಂದರೆ,

 • ಮೌಲ್ಯಮಾಪನ ಕೊಡುಗೆ: ಇದರ ಅಡಿಯಲ್ಲಿ, ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಸದಸ್ಯತ್ವ ಮೊತ್ತವಾಗಿ ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಪ್ರತಿ ಸದಸ್ಯ ರಾಷ್ಟ್ರವು ಮಾಡಿದ ಪಾವತಿಗಳನ್ನು ದೇಶದ ಸಂಪತ್ತು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ.
 • ಸ್ವಯಂಪ್ರೇರಿತ ಕೊಡುಗೆಗಳು: ಇದರ ಅಡಿಯಲ್ಲಿ, ಸದಸ್ಯ ರಾಷ್ಟ್ರಗಳಿಂದ (ಅವರ ನಿಗದಿತ ಕೊಡುಗೆಗೆ ಹೆಚ್ಚುವರಿಯಾಗಿ) ಮತ್ತು ಇತರ ಪಾಲುದಾರರಿಂದ ಅನುದಾನವನ್ನು ನೀಡಲಾಗುತ್ತದೆ.
 • ಮೂಲ / ಕೋರ್ ಸ್ವಯಂಪ್ರೇರಿತ ಕೊಡುಗೆಗಳು :ಕಡಿಮೆ-ಹಣದ ಚಟುವಟಿಕೆಗಳಿಗೆ ಸಂಪನ್ಮೂಲಗಳ ಸುಧಾರಿತ ಹರಿವಿನಿಂದ ಲಾಭ ಪಡೆಯಲು ಮತ್ತು ತಕ್ಷಣದ ಹಣದ ಕೊರತೆಯಿದ್ದಾಗ ಉಂಟಾಗುವ ಅಡೆತಡೆಗಳನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.
 • ಸಾಂಕ್ರಾಮಿಕ ಇನ್ಫ್ಲುಯೆನ್ಸ ಸಿದ್ಧತೆ (PIP) ಕೊಡುಗೆ: ಸಂಭಾವ್ಯ ಸಾಂಕ್ರಾಮಿಕ ಸಮಯದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಗಳು ಮತ್ತು ಇತರ ಸರಬರಾಜುಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು 2011 ರಿಂದ ಪ್ರಾರಂಭಿಸಲಾಗಿದೆ.

 WHO ಗೆ ಪ್ರಸ್ತುತ ಧನಸಹಾಯದ ಮಾದರಿ:

 2019 ರ ನಾಲ್ಕನೇ ತ್ರೈಮಾಸಿಕದ ವೇಳೆಗೆ, ಒಟ್ಟು ಕೊಡುಗೆಗಳು  5.62 ಶತಕೋಟಿ $ ಗಳಷ್ಟಿದ್ದು, ಮೌಲ್ಯಮಾಪನ ಮಾಡಿದ ಕೊಡುಗೆಗಳು $ 956 ಮಿಲಿಯನ್, ನಿರ್ದಿಷ್ಟಪಡಿಸಿದ ಸ್ವಯಂಪ್ರೇರಿತ ಕೊಡುಗೆಗಳು $ 4.38 ಬಿಲಿಯನ್,

ಮೂಲ ಸ್ವಯಂಪ್ರೇರಿತ ಕೊಡುಗೆಗಳು  $ 160 ಮಿಲಿಯನ್, ಮತ್ತು PIP ಕೊಡುಗೆಗಳು  $ 178 ಮಿಲಿಯನ್ ಗಳಾಗಿವೆ.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಯುಎಸ್ ಅಧ್ಯಕ್ಷರ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಪಡೆದು  ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾದ ತೈವಾನ್ :


 ಸಂದರ್ಭ :

ಅಧ್ಯಕ್ಷ ಜೋ ಬೈಡನ್ ಅವರ ಪ್ರಮಾಣವಚನ ಸಮಾರಂಭಕ್ಕೆ ಅಮೇರಿಕಾದಲ್ಲಿನ ತೈವಾನ್‌ನ ವಾಸ್ತವ ರಾಯಭಾರಿಯನ್ನು ಔಪಚಾರಿಕವಾಗಿ ಆಹ್ವಾನಿಸಲಾಯಿತು.

 • ತೈಪೆಯ ವಿದೇಶಾಂಗ ಸಚಿವಾಲಯವು, ದಶಕಗಳಲ್ಲಿ ಮೊದಲ ಬಾರಿಗೆ ಉದ್ಘಾಟನಾ ಸಮಿತಿಯಿಂದ ತೈವಾನೀಸ್ ರಾಯಭಾರಿಯನ್ನು “ಆಹ್ವಾನಿಸಲಾಗಿದೆ” ಎಂದು ಹೇಳಿದೆ.

ಚೀನಾ- ತೈವಾನ್ ಸಂಬಂಧಗಳು-

ಹಿನ್ನೆಲೆ:

ಚೀನಾದ ಅಂತರ್ಯುದ್ಧದಲ್ಲಿ ಸೋಲಿಸಲ್ಪಟ್ಟ ರಾಷ್ಟ್ರೀಯವಾದಿಗಳನ್ನು 1949 ರಲ್ಲಿ  ತೈವಾನ್ ದ್ವೀಪಕ್ಕೆ ಒತ್ತಾಯಪೂರ್ವಕವಾಗಿ ಪಲಾಯನ ಮಾಡಿಸಿದಂದಿನಿಂದ ಚೀನಾ ತನ್ನ “ಒಂದು ಚೀನಾ” ನೀತಿಯ ಮೂಲಕ ತೈವಾನ್‌ ಮೇಲೆ ಹಕ್ಕು ಸಾಧಿಸುತ್ತಿದ್ದು,ಅಗತ್ಯವೆನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಬೀಜಿಂಗ್ ಆಳ್ವಿಕೆಯ ಅಡಿಯಲ್ಲಿ ತರುವುದಾಗಿ ಶಪಥ ಮಾಡಿದೆ.

 • ಚೀನಾ ತೈವಾನ್‌ನ ಉನ್ನತ ವ್ಯಾಪಾರ ಪಾಲುದಾರರಾಗಿದ್ದು, 2018 ರಲ್ಲಿ ವ್ಯಾಪಾರವು $ 226 ಬಿಲಿಯನ್ ಆಗಿದೆ. ತೈವಾನ್ ಚೀನಾದೊಂದಿಗೆ ದೊಡ್ಡ ವ್ಯಾಪಾರ ಕೊರತೆಯನ್ನು ಹೊ೦ದಿದೆ.
 • ತೈವಾನ್ ಸ್ವಯಂ ಆಡಳಿತ ಹೊಂದಿದೆ ಮತ್ತು ,ವಾಸ್ತವಿಕವಾಗಿ ಸ್ವತಂತ್ರವಾಗಿದ್ದರೂ, ಅದು ಎಂದಿಗೂ ಔಪಚಾರಿಕವಾಗಿ ಚೀನಾ -ಮುಖ್ಯ ಭೂಭಾಗದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿಲ್ಲ.
 • “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” ಸೂತ್ರದಡಿಯಲ್ಲಿ, ತೈವಾನ್‌ಗೆ ತನ್ನದೇ ಆದ ಆಡಳಿತ ವ್ಯವಹಾರಗಳನ್ನು ನಡೆಸುವ ಹಕ್ಕಿದೆ; ಇದೇ ರೀತಿಯ ವ್ಯವಸ್ಥೆಯನ್ನು ಹಾಂಗ್ ಕಾಂಗ್‌ನಲ್ಲಿಯೂ ಬಳಸಲಾಗುತ್ತದೆ.
 • ತೈವಾನ್ ವಿವಿಧ ಹೆಸರುಗಳಲ್ಲಿ ವಿಶ್ವ ವ್ಯಾಪಾರ ಸಂಘಟನೆ , ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸದಸ್ಯತ್ವ ವನ್ನು ಹೊಂದಿದೆ.

ಇಂಡೋ- ತೈವಾನ್ ಸಂಬಂಧಗಳು:

 • ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ತೈವಾನ್ ಮತ್ತು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಹಕರಿಸುತ್ತಿವೆ.
 • 2010 ರಿಂದ “ಒಂದು-ಚೀನಾ” ನೀತಿಯನ್ನು ಅನುಮೋದಿಸಲು ಭಾರತ ನಿರಾಕರಿಸಿದೆ.

who 

 


ಸಾಮಾನ್ಯ ಅಧ್ಯಯನ ಪತ್ರಿಕೆ –  3


 

ವಿಷಯಗಳು :   ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೂಢೀಕರಣ , ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

V-ಆಕಾರದ ಚೇತರಿಕೆ ನೋಡುತ್ತಿರುವ RBI, ನೀತಿಗಳನ್ನು ಸುಗಮಗೊಳಿಸುವ ಸಾಧ್ಯತೆಯಿದೆ :


ಸಂದರ್ಭ :

V ಆಕಾರದ ಚೇತರಿಕೆಯ ಮುನ್ಸೂಚನೆಯನ್ನು , ಕಾಣುತ್ತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬೆಳವಣಿಗೆಯ ಆವೇಗವು ಹೀಗೆಯೆ ಮುಂದುವರಿದರೆ ಮತ್ತು ಹಣದುಬ್ಬರವು ಹಾನಿಕರವಲ್ಲದಿದ್ದರೆ ಬೆಳವಣಿಗೆಯನ್ನು ಬೆಂಬಲಿಸಲು ನೀತಿ ಕ್ರಮಕ್ಕೆ ಅವಕಾಶವಿರುತ್ತದೆ ಎಂದು ಹೇಳಿದೆ.

 • ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಹೆಚ್ಚುವರಿ ಹಣವನ್ನು ಮಾರುಕಟ್ಟೆಯಿಂದ ತೆಗೆದುಹಾಕುವ ಮೂಲಕ ಕೇಂದ್ರೀಯ ಬ್ಯಾಂಕ್ ಹಣದ ಮಾರುಕಟ್ಟೆಯಲ್ಲಿ ದ್ರವ್ಯತೆಯನ್ನು ಸಾಮಾನ್ಯೀಕರಿಸಲು ಪ್ರಾರಂಭಿಸಿರುವ ಸಮಯದಲ್ಲಿ ಇದು ಬಂದಿದೆ.

ಆರ್ಥಿಕ ಚೇತರಿಕೆಯ ವಿವಿಧ ಆಕಾರಗಳು (Shapes) ಯಾವುವು?

 •  Z-ಆಕಾರದ ಚೇತರಿಕೆ, ಇದು ಅತ್ಯಂತ ಆಶಾವಾದಿ ಸನ್ನಿವೇಶವಾಗಿದ್ದು, ಕುಸಿತದ ನಂತರ ಆರ್ಥಿಕತೆಯು ಫೀನಿಕ್ಸ್‌ನಂತೆ ತ್ವರಿತವಾಗಿ ಚೇತರಿಸಿಕೊಳ್ಳುತ್ತದೆ. ಇದು ಸಾಮಾನ್ಯ ಪ್ರವೃತ್ತಿ-ರೇಖೆಗೆ ಮರಳುವ ಮೊದಲು ಕಳೆದುಹೋದ ನೆಲವನ್ನು (ಲಾಕ್‌ಡೌನ್ ತೆಗೆದುಹಾಕಿದ ನಂತರ ಅದನ್ನು ಬದಲಾಯಿಸುವ-ಖರೀದಿಸುವ ಸಾಧ್ಯತೆಯಿದೆ), ಹೀಗಾಗಿ Z ಡ್-ಆಕಾರದ ಚಾರ್ಟ್ ಅನ್ನು ರೂಪಿಸುತ್ತದೆ.Z-Shaped_Recovery
 • V ಆಕಾರದ ಚೇತರಿಕೆಯಲ್ಲಿ ಆರ್ಥಿಕತೆಯು ಕಳೆದುಹೋದ ಭೂಮಿಯನ್ನು ತ್ವರಿತವಾಗಿ ಮರಳಿ ಪಡೆಯುತ್ತದೆ ಮತ್ತು ಸಾಮಾನ್ಯ ಬೆಳವಣಿಗೆಯ ಪ್ರವೃತ್ತಿಯನ್ನು ತಲುಪುತ್ತದೆ.V-Shaped_Recovery
 • U-ಆಕಾರದ ಚೇತರಿಕೆ ಎಂದರೆ, ಆರ್ಥಿಕತೆಯು ಕುಸಿದ ನಂತರ, ಕ್ರಮೇಣ ಸಾಮಾನ್ಯ ಮಟ್ಟಕ್ಕೆ ಏರುವ ಮೊದಲು, ಸ್ವಲ್ಪ ಸಮಯದವರೆಗೆ ಕಡಿಮೆ ಬೆಳವಣಿಗೆಯ ದರದಲ್ಲಿ ಹೋರಾಡುತ್ತದೆ ಮತ್ತು ಗೊಂದಲಮಯವಾಗಿರುತ್ತದೆ.U-Shaped_Recovery
 • W- ಆಕಾರದ ಚೇತರಿಕೆ ಅಪಾಯಕಾರಿಯಾದ ವಿದ್ಯಮಾನವಾಗಿದೆ – ಆರ್ಥಿಕ ಬೆಳವಣಿಗೆ ಕುಸಿಯುತ್ತದೆ ಮತ್ತು ಏರುತ್ತದೆ, ಆದರೆ ಮತ್ತೆ ಚೇತರಿಸಿಕೊಳ್ಳುವ ಮೊದಲು ಮತ್ತೆ ಪಾತಾಳಕ್ಕಿಳಿಯುತ್ತದೆ, ಹೀಗಾಗಿ W- ತರಹದ ಚಾರ್ಟ್ ಅನ್ನು ರೂಪಿಸುತ್ತದೆ.w-Shaped_Recovery
 • L-ಆಕಾರದ ಚೇತರಿಕೆಯು ಅತ್ಯಂತ ಕೆಟ್ಟ ಸನ್ನಿವೇಶವಾಗಿದೆ, ಇದರಲ್ಲಿ ಕುಸಿದ ನಂತರ ಬೆಳವಣಿಗೆ, ಕಡಿಮೆ ಮಟ್ಟದಲ್ಲಿ ಸ್ಥಗಿತಗೊಳ್ಳುತ್ತದೆ ಮತ್ತು ದೀರ್ಘಕಾಲದವರೆಗೆ ಆರ್ಥಿಕತೆಯು ಚೇತರಿಸಿಕೊಳ್ಳುವುದೇ ಇಲ್ಲ.L-Shaped_Recovery
 • J ಆಕಾರದ ಚೇತರಿಕೆಯು ಸ್ವಲ್ಪ ಅವಾಸ್ತವಿಕ ಸನ್ನಿವೇಶವಾಗಿದೆ, ಇದರಲ್ಲಿ ಬೆಳವಣಿಗೆ ವೇಗವಾಗಿರುತ್ತದೆ ಮತ್ತು ಪ್ರವೃತ್ತಿ-ರೇಖೆಗಿಂತ ತುಂಬ ವೇಗವಾಗಿ ಇರುತ್ತದೆ ಆದರೆ ಅಲ್ಲಿಯೇ ಇರುತ್ತದೆ.other_shapes

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲ ತತ್ಪಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ :

ತನಗೆ ಮೌನವಾಗಿರುವ ಹಕ್ಕಿದೆ ಎಂದು ಹೇಳಿದ ಫೇಸ್ ಬುಕ್ ಅಧಿಕಾರಿ:


ಸಂದರ್ಭ :

ಫೆಬ್ರವರಿ 2020 ರ ದೆಹಲಿ ಗಲಭೆಗಳ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿ (Peace and Harmony Committee) ತನಗೆ ನೀಡಿರುವ ಸಮನ್ಸ್ “ರಾಜಕೀಯ ಪ್ರೇರಿತವಾಗಿದೆ” ಎಂದು ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಏನಿದು ಸಮಸ್ಯೆ?

 • ತನಗೆ ಪ್ರದತ್ತವಾದ ಮೌನ ವಾಗಿರುವ ಹಕ್ಕನ್ನು ಉಪಯೋಗಿಸಿಕೊಳ್ಳುವ ಮೂಲಕ, ಗಲಭೆಗೆ ಸಂಬಂಧಿಸಿದಂತೆ ದ್ವೇಷದ ಭಾಷಣವನ್ನು ತಡೆಯುವಲ್ಲಿ ಫೇಸ್‌ಬುಕ್‌ನ ಪಾತ್ರವನ್ನು ಪರಿಶೀಲಿಸುತ್ತಿರುವ ಸಮಿತಿಯ ಮುಂದೆ ಹಾಜರಾಗುವುದಿಲ್ಲ ಎಂದು ಅಜಿತ್ ಮೋಹನ್ ಹೇಳಿದ್ದಾರೆ.
 • ಸಮಿತಿಯ ವಿಚಾರಣೆಯಲ್ಲಿ ದ್ವೇಷದ ಮಾತು/ಭಾಷಣ ಯಾವುದು ಮತ್ತು ಅನುಮತಿಸುವ ಮಾತು ಯಾವುದು ಎಂಬುದರ ಬಗ್ಗೆ ಶೀಘ್ರದಲ್ಲೇ ಒಳಗೊಳ್ಳುತ್ತದೆ, ಆದರೆ ,ಇದು ಬಹಳ ಧ್ರುವೀಕರಿಸುವ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ.

ದ್ವೇಷದ ಮಾತು/ ಭಾಷಣ ಎಂದರೇನು?

ದ್ವೇಷದ ಮಾತು ಎನ್ನುವುದು ಒಂದು ನಿರ್ದಿಷ್ಟ ಗುಂಪಿನ ಅಂಚಿನಲ್ಲಿರುವ ವ್ಯಕ್ತಿಗಳ ವಿರುದ್ಧ ಅವರ ಧಾರ್ಮಿಕ ನಂಬಿಕೆಗಳು, ಲೈಂಗಿಕ ದೃಷ್ಟಿಕೋನ, ಲಿಂಗ ಮತ್ತು ಮುಂತಾದವುಗಳ ಬಗೆಗೆ ದ್ವೇಷವನ್ನು ಪ್ರಚೋದಿಸುವುದಾಗಿದೆ.

 • ಕಾನೂನು ಆಯೋಗ, ದ್ವೇಷ ಭಾಷಣ ಕುರಿತ ತನ್ನ 267 ನೇ ವರದಿಯಲ್ಲಿ, ಇಂತಹ ಮಾತುಗಳು ಭಯೋತ್ಪಾದನೆ, ನರಮೇಧ ಮತ್ತು ಜನಾಂಗೀಯ ವಿನಾಶದಂತಹ ಕೃತ್ಯಗಳನ್ನು ಮಾಡಲು ವ್ಯಕ್ತಿಗಳು ಮತ್ತು ಸಮಾಜವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದೆ.

ದ್ವೇಷದ ಭಾಷಣವನ್ನು ಏಕೆ ತಡೆಯಬೇಕು?

 • ಆಂತರಿಕ ಭದ್ರತೆ: ಕೋಮು ಭಾವೋದ್ರೇಕಗಳನ್ನು ಪ್ರಚೋದಿಸುವ ನಕಲಿ ವೀಡಿಯೊದಿಂದ 2013 ರಲ್ಲಿ ಮುಜಫರ್ ನಗರ ಗಲಭೆಗಳು ಪ್ರಚೋದಿಸಲ್ಪಟ್ಟವು.
 • ಉಗ್ರಗಾಮಿ ಭಾವನೆಗಳನ್ನು ಹೊತ್ತಿಸುತ್ತದೆ.
 • ಗುಂಪು ಹಲ್ಲೆ.(Mob Lynching)
 • ತಪ್ಪು ಮಾಹಿತಿ ಮತ್ತು ಹಾದಿ ತಪ್ಪಿಸುವ ಸುಳ್ಳು ಮಾಹಿತಿ ಹರಡದಂತೆ ತಡೆಯಲು: ದೆಹಲಿ ಗಲಭೆಗಳು.

ಕ್ರಮಗಳು:

 • ಫೇಸ್‌ಬುಕ್, ಗೂಗಲ್, ಟ್ವಿಟರ್ ಮತ್ತು ಬೈಟ್‌ಡ್ಯಾನ್ಸ್ ಸೇರಿದಂತೆ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದಲ್ಲಿನ ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನಕಲಿ ಸುದ್ದಿಗಳನ್ನು ನಿಗ್ರಹಿಸಲು ಉದ್ಯಮದಾದ್ಯಂತದ ಮೈತ್ರಿಯನ್ನು / ಸಹಕಾರವನ್ನು ಎದುರು ನೋಡುತ್ತಿವೆ.
 • ಅಂತಹ ಸುದ್ದಿಗಳ ಸೃಷ್ಟಿಕರ್ತನನ್ನು ಗುರುತಿಸಲು ಭಾರತದ ಚುನಾವಣಾ ಆಯೋಗವು ಟೆಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು.
 • ಅಂತಿಮ ಬಳಕೆದಾರರಿಗೆ ತಿಳಿವಳಿಕೆ ನೀಡುವುದು.
 • ಇಂಟರ್ನೆಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಉಂಟಾಗುವ ಅಪಾಯಗಳ ಕುರಿತು ಆಳವಾದ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಸರ್ಕಾರವು ನೀತಿ ಚೌಕಟ್ಟನ್ನು ಜಾರಿಗೆ ತರಬೇಕಾಗಿದೆ.
 • ಜರ್ಮನಿಯಂತೆ ಭಾರಿ ದಂಡ ವಿಧಿಸುವುದು, ಅಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಸೈಟ್‌ಗಳಿಂದ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವಲ್ಲಿ ನಿರಂತರವಾಗಿ ವಿಫಲವಾದರೆ 50 ಮಿಲಿಯನ್ € ದಂಡವನ್ನು ಎದುರಿಸಬೇಕಾಗುತ್ತದೆ.

 

ವಿಷಯಗಳ: ಬಾಹ್ಯಾಕಾಶದಲ್ಲಿ ಜಾಗೃತಿ:

ಆಸ್ಟ್ರೋಸಾಟ್ / AstroSat:


ಸಂದರ್ಭ :

ಇತ್ತೀಚೆಗೆ, ಆಸ್ಟ್ರೋಸಾಟ್‌ನ ನೇರಳಾತೀತ ಇಮೇಜಿಂಗ್ ದೂರದರ್ಶಕವು ಕ್ಷಿರಪಥದಲ್ಲಿನ ನಕ್ಷತ್ರಪುಂಜದ ವಿಶಾಲವಾದ ಸಂಕೀರ್ಣ ಕಾಸ್ಮಿಕ್ ಡೈನೋಸಾರ್‌ನಲ್ಲಿ ಅಪರೂಪದ ನೇರಳಾತೀತ-ಪ್ರಕಾಶಮಾನ ನಕ್ಷತ್ರಗಳನ್ನು ಕಂಡುಹಿಡಿದಿದೆ.

AstroSat

ಆವಿಷ್ಕಾರದ ಮಹತ್ವ:

ಇಂತಹ ಅಪರೂಪದ ಈ ‘ನೇರಳಾತೀತ-ಪ್ರಕಾಶಮಾನವಾದ ನಕ್ಷತ್ರಗಳು’ ಯುವ ನೀಲಿ ನಕ್ಷತ್ರಗಳಿಲ್ಲದ ಅಂಡಾಕಾರದ ಗೆಲಕ್ಸಿಗಳಂತಹ ಪ್ರಾಚೀನ ನಾಕ್ಷತ್ರಿಕ ವ್ಯವಸ್ಥೆಗಳಿಂದ ಹೊರಸೂಸುವ ನೇರಳಾತೀತ ವಿಕಿರಣಕ್ಕೆ ಕಾರಣವೆಂದು ಊಹಿಸಲಾಗಿದೆ. ಆದ್ದರಿಂದ, ಅಂತಹ ಎಲ್ಲಾ ತಂತಿಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ಗಮನಿಸುವುದು ಹೆಚ್ಚು ಮುಖ್ಯವಾಗಿದೆ.

ಆಸ್ಟ್ರೋಸಾಟ್ ಕುರಿತು :

 • ಆಸ್ಟ್ರೋಸಾಟ್ ಭಾರತದ ಮೊದಲ ಬಹು-ತರಂಗಾಂತರ ಬಾಹ್ಯಾಕಾಶ ದೂರದರ್ಶಕವಾಗಿದೆ, (multi-wavelength space telescope) ಇದು ಐದು ದೂರದರ್ಶಕಗಳನ್ನು ಹೊಂದಿದ್ದು ವಿಭಿನ್ನ ತರಂಗಾಂತರಗಳ ಮೂಲಕ ನೋಡುತ್ತದೆ, ಏಕಕಾಲದಲ್ಲಿ – UV ಹತ್ತಿರ, UV ದೂರದ, ಮೃದುವಾದ ಎಕ್ಸರೆ ಮತ್ತು ಹಾರ್ಡ್ ಎಕ್ಸರೆ, ಗೋಚರಿಸುತ್ತದೆ.
 • ಆಸ್ಟ್ರೋಸಾಟ್‌ನಲ್ಲಿ ಅಳವಡಿಸಲಾಗಿರುವ 38 ಸೆಂ.ಮೀ ಅಗಲದ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (UltraViolet Imaging Telescope -UVIT) ಗೋಚರ, ನೇರಳಾತೀತ ಮತ್ತು ದೂರದ ನೇರಳಾತೀತ ವಿದ್ಯುತ್ಕಾಂತೀಯ ವರ್ಣಪಟಲದ ಕ್ಷೇತ್ರಗಳ ಬಳಿ ಆಕಾಶವನ್ನು ವೀಕ್ಷಿಸುವ ಸಾಮರ್ಥ್ಯ ಹೊಂದಿದೆ.
 • ಆಸ್ಟ್ರೋಸಾಟ್ ಅನ್ನು ಇಸ್ರೋ 28 ಸೆಪ್ಟೆಂಬರ್ 2015 ರಂದು ಭೂಮಿಯ ಸಮೀಪವಿರುವ ಭೂಸ್ಥಾಯೀ ಕಕ್ಷೆಯಲ್ಲಿ ಸ್ಥಾಪಿಸಿತು.
 • ಇದು IUCAA, ISRO, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ಮುಂಬೈ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಬೆಂಗಳೂರು), ಮತ್ತು ಭೌತಿಕ ಸಂಶೋಧನಾ ಪ್ರಯೋಗಾಲಯ (ಅಹಮದಾಬಾದ್) ಒಳಗೊಂಡ ಬಹು-ಸಂಸ್ಥೆಗಳ ಸಹಯೋಗದ ಯೋಜನೆಯಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸಂಕಷ್ಟದಲ್ಲಿರುವ ಮಹಿಳೆಯರ ಸಹಾಯಕ್ಕಾಗಿ  ಸ್ಮಾರ್ಟ್ ಕ್ಯಾಮೆರಾಗಳು :

ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್ ಕ್ಯಾಮೆರಾಗಳನ್ನು ಸ್ಥಾಪಿಸಲು ಸಿದ್ಧರಾಗಿದ್ದಾರೆ, ಇದು ಮಹಿಳೆಯರ ಮುಖದ ಅಭಿವ್ಯಕ್ತಿಗಳನ್ನು ಓದುವ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರ ಚಿತ್ರಗಳನ್ನು ಸ್ವಯಂಚಾಲಿತವಾಗಿ ಕ್ಲಿಕ್ ಮಾಡುತ್ತದೆ ಮತ್ತು ಹತ್ತಿರದ ಪೊಲೀಸ್ ವಾಹನವನ್ನು ಎಚ್ಚರಿಸುತ್ತದೆ.

ಕವಚ್ ವ್ಯಾಯಾಮ /Exercise Kavach:

 • ಇದು ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ ಗಳನ್ನು ಒಳಗೊಂಡ ಜಂಟಿ ಮಿಲಿಟರಿ ವ್ಯಾಯಾಮವಾಗಿದೆ.
 • ಈ ಮಿಲಿಟರಿ ವ್ಯಾಯಾಮವನ್ನು ದೇಶದ ಏಕೈಕ ಜಂಟಿ ಪಡೆಗಳ ಕಮಾಂಡ್ ಆದ– ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ (ANC) ಆಶ್ರಯದಲ್ಲಿ ಮುಂದಿನ ವಾರದಲ್ಲಿ ಆಯೋಜಿಸಲಾಗುತ್ತಿದೆ.
 • ಮೂರು ಸೈನ್ಯಗಳ ಅಭ್ಯಾಸವು ಜಂಟಿ ಯುದ್ಧ ಸಾಮರ್ಥ್ಯಗಳನ್ನು ಸುಧಾರಿಸುವ ಮತ್ತು ಕಾರ್ಯಾಚರಣೆಯ ಸಮನ್ವಯವನ್ನು ಹೆಚ್ಚಿಸುವತ್ತ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos