Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 20 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ‘ಪರಾಕ್ರಮ ದಿವಸ್’ ಆಗಿ ನೇತಾಜಿಯವರ ಜಯಂತಿಯನ್ನು ಆಚರಿಸಲಾಗುವುದು.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪ್ರಶ್ನೋತ್ತರ ವೇಳೆ.

2. ಬರ್ಡ್ ಫ್ಲೂ ವೈರಸ್ ಏಕೆ ಹಲವು ತಳಿಗಳನ್ನು ಹೊಂದಿದೆ ಮತ್ತು ಇದರಿಂದ ಮಾನವರ ಮೇಲಾಗುವ ಪರಿಣಾಮಗಳೇನು?

3. ಮಾಸ್ಕೋದಲ್ಲಿ ಎಸ್ -400 ಕುರಿತ ತರಬೇತಿ ಪಡೆಯಲಿರುವ ಸೇನಾ ಸಿಬ್ಬಂದಿ.

4. ವೆಸ್ಟ್ ಬ್ಯಾಂಕ್ ಮತ್ತು ಸಂಬಂಧಿತ ಸಮಸ್ಯೆಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ  3:

1. ನದಿ ನೀರಿನ ಗುಣಮಟ್ಟದ ಕುರಿತ ವಸ್ತುಸ್ಥಿತಿ ವರದಿಯನ್ನು ಕೋರಿದ ಸರ್ವೋಚ್ಚ ನ್ಯಾಯಾಲಯ.

 

ಪೂರ್ವ ಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಭಾರತೀಯ ನಕ್ಷತ್ರ ಆಮೆ.

2. ಸೆಮೆರು ಜ್ವಾಲಾಮುಖಿ./Semeru volcano.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

‘ಪರಾಕ್ರಮ ದಿವಸ್’ ಆಗಿ ನೇತಾಜಿಯವರ ಜಯಂತಿಯನ್ನು ಆಚರಿಸಲಾಗುವುದು.


ಸಂದರ್ಭ:

ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವಾದ ಜನವರಿ 23 ಅನ್ನು ಪ್ರತಿವರ್ಷ “ಪರಾಕ್ರಮ ದಿವಸ್”, ಶೌರ್ಯದ ದಿನ, ಎಂದು ಆಚರಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರಕಟಿಸಿದೆ.

 • 2021 ರ ಜನವರಿ 23, ಸುಭಾಸ್ ಚಂದ್ರ ಬೋಸ್ ಅವರ 125 ನೇ ಜನ್ಮ ಜಯಂತಿ ದಿನವಾಗಿದೆ. ಹಾಗೂ ಪ್ರಥಮ ‘ಪರಾಕ್ರಮ ದಿವಸ್’ ಕಾರ್ಯಕ್ರಮವು ಕೊಲ್ಕತ್ತಾದಲ್ಲಿ ನಡೆಯಲಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಬಗ್ಗೆ:

 • 1943 ರಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಆಕ್ರಮಿತ ಸಿಂಗಾಪುರದಲ್ಲಿ ಅವರ ತಾತ್ಕಾಲಿಕ ಸರ್ಕಾರ ಆಜಾದ್ ಹಿಂದ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.
 • ಅರ್ಜಿ ಹುಕುಮಾತ್-ಎ-ಆಜಾದ್ ಹಿಂದ್ (Arzi Hukumat-e-Azad Hind) ಎಂದು ಕರೆಯಲ್ಪಡುವ ಇದನ್ನು ಆಕ್ಸಿಸ್ ಶಕ್ತಿ ಬಣವಾದ, ಇಂಪೀರಿಯಲ್ ಜಪಾನ್, ನಾಜಿ ಜರ್ಮನಿ, ಇಟಾಲಿಯನ್ ಸೋಷಿಯಲ್ ರಿಪಬ್ಲಿಕ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳು ಬೆಂಬಲಿಸಿದವು.
 • ಎರಡನೆಯ ಮಹಾಯುದ್ಧದ ನಂತರದಲ್ಲಿ ದೇಶಭ್ರಷ್ಟ ಸರ್ಕಾರ ಅಥವಾ ಗಡಿಪಾರಿನಲ್ಲಿರುವ –ತಾತ್ಕಾಲಿಕ ಸರ್ಕಾರ– ಎಂಬ ಹೆಸರಿನಲ್ಲಿ ಅವರು ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸುವ ಹೋರಾಟವನ್ನು ಪ್ರಾರಂಭಿಸಿದ್ದರು.
 • ಇವರ ನೇತೃತ್ವದ ತಾತ್ಕಾಲಿಕ ಸರ್ಕಾರದ ಅಡಿಯಲ್ಲಿ, ವಿದೇಶದಲ್ಲಿ ವಾಸಿಸುವ ಭಾರತೀಯರು ಒಂದುಗೂಡಿದರು.
 • ತಾತ್ಕಾಲಿಕ ಸರ್ಕಾರದಲ್ಲಿ, ಬೋಸ್ ರವರು ರಾಷ್ಟ್ರದ ಮುಖ್ಯಸ್ಥ, ಪ್ರಧಾನಿ ಮತ್ತು ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.
 • ಸುಭಾಷ್ ಚಂದ್ರ ಬೋಸ್ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ (1938-ಹರಿಪುರ ಮತ್ತು 1939-ತ್ರಿಪುರಿ) ಆಯ್ಕೆಯಾಗಿದ್ದರು.
 • ಅವರು 1939 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಗಾಳದಲ್ಲಿ ಕಾಂಗ್ರೆಸ್ ನ ಒಳಗೆ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಅನ್ನು ಸಂಘಟಿಸಿದರು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಪ್ರಶ್ನೋತ್ತರ ವೇಳೆ: Question Hour:


ಸಂದರ್ಭ:  

ಮುಂಗಾರು ಅಧಿವೇಶನದಲ್ಲಿ ಸರ್ಕಾರವು ಅಮಾನತುಗೊಳಿಸಿದ್ದ ಪ್ರಶ್ನೋತ್ತರ ವೇಳೆಯು, ಜನವರಿ 29 ರಿಂದ ಆರಂಭ ಗೊಳ್ಳಲಿರುವ ಬಜೆಟ್ ಅಧಿವೇಶನದಲ್ಲಿ  ಪುನರಾರಂಭಗೊಳ್ಳಲಿದೆ.

ಪ್ರಶ್ನೋತ್ತರ ವೇಳೆ ಎಂದರೇನು?

 • ಪ್ರತಿ ಸಂಸದೀಯ ಸಭೆಯ ಮೊದಲ ಗಂಟೆಯನ್ನು ಪ್ರಶ್ನೋತ್ತರ ವೇಳೆ ಎಂದು ಕರೆಯಲಾಗುತ್ತದೆ.
 • ಇದನ್ನು ಸದನದ ಕಾರ್ಯವೈಖರಿಯ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
 • ಈ ಸಮಯದಲ್ಲಿ, ಸದನದ ಸದಸ್ಯರು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಮಂತ್ರಿಗಳು ಸಾಮಾನ್ಯವಾಗಿ ಉತ್ತರಗಳನ್ನು ನೀಡುತ್ತಾರೆ.
 • ಪ್ರಶ್ನೆಗಳನ್ನು ಖಾಸಗಿ ಸದಸ್ಯರಿಗೂ (ಮಂತ್ರಿಗಳಲ್ಲದ ಸಂಸದರು) ಕೇಳಬಹುದು.

ಅಧಿವೇಶನದ ಎಲ್ಲಾ ದಿನಗಳಲ್ಲಿ ಉಭಯ ಸದನಗಳಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತದೆ. ಆದರೆ ವಿನಾಯಿತಿ ನೀಡಲಾದ ಎರಡು ದಿನಗಳಿವೆ:

 • ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನಗಳ ಸಂಸದರನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡುವ ದಿನ ಯಾವುದೇ ಪ್ರಶ್ನೋತ್ತರ ಕಲಾಪ ಇರುವುದಿಲ್ಲ.
 • ಹಣಕಾಸು ಸಚಿವರು ಬಜೆಟ್ ಮಂಡಿಸುವ ದಿನದಂದು ಪ್ರಶ್ನೋತ್ತರ ಕಲಾಪ ನಿಗದಿಪಡಿಸಲಾಗಿರುವುದಿಲ್ಲ.

ಪ್ರಮುಖ ಅಂಶಗಳು:

 • ಉಭಯ ಸದನಗಳ ಸಭಾಧ್ಯಕ್ಷರು (ರಾಜ್ಯಸಭೆ ಮತ್ತು ಲೋಕಸಭೆ) ಪ್ರಶ್ನೋತ್ತರ ಕಲಾಪದ ನಡಾವಳಿಗೆ ಸಂಬಂಧಿಸಿದಂತೆ ತೀರ್ಮಾನಿಸುವ ಅಂತಿಮ ಪ್ರಾಧಿಕಾರವಾಗಿದ್ದಾರೆ.

 

ವಿಷಯಗಳು : ಆರೋಗ್ಯ ಸಂಬಂಧಿ ಸಮಸ್ಯೆಗಳು.

ಬರ್ಡ್ ಫ್ಲೂ ವೈರಸ್ ಏಕೆ ಹಲವು ತಳಿಗಳನ್ನು ಹೊಂದಿದೆ ಮತ್ತು ಇದರಿಂದ ಮಾನವರ ಮೇಲಾಗುವ ಪರಿಣಾಮ ಗಳೇನು?


ಸಂದರ್ಭ:

ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರ ವೈರಸ್ ಅಥವಾ ಏವಿಯನ್ ಇನ್ಫ್ಲುಯೆನ್ಸದ ಎರಡು ವಿಭಿನ್ನ ತಳಿ/ ಉಪವಿಭಾಗಗಳು ಪತ್ತೆಯಾಗಿವೆ.

Flu A ವೈರಸ್‌ನ ಎಷ್ಟು ವಿಭಿನ್ನ ಉಪವಿಭಾಗಗಳು ಅಥವಾ ತಳಿಗಳು ಇವೆ?

ಪ್ರಕೃತಿಯಲ್ಲಿ ಕನಿಷ್ಠ 131 ವಿಭಿನ್ನ ಉಪವಿಭಾಗಗಳ / ಉಪತಳಿಗಳ ಇನ್ಫ್ಲುಯೆನ್ಸ ಎ ವೈರಸ್ ಗಳ (influenza A virus) ಪತ್ತೆಯಾಗಿದೆ.

 • ಇನ್ಫ್ಲುಯೆನ್ಸ ಎ ವೈರಸ್‌ಗಳು Hemagglutinin (H) and Neuraminidase (N) ಎಂಬ ಎರಡು ಮೇಲ್ಮೈ ಪ್ರೋಟೀನ್‌ಗಳನ್ನು ಹೊಂದಿದ್ದು, ಇವೆರಡೂ ಕ್ರಮವಾಗಿ 18 ಮತ್ತು 11 ವಿಭಿನ್ನ ಉಪವಿಭಾಗಗಳನ್ನು ಹೊಂದಿವೆ, ಇದು H3N2 ಮತ್ತು H7N9 ನಂತಹ ವಿಭಿನ್ನ ಸಂಯೋಜನೆಗಳಿಗೆ ಕಾರಣವಾಗುತ್ತದೆ.
 • ಕೆಲವು ವೈರಸ್ ತಳಿಗಳು ಪಕ್ಷಿಗಳಿಗೆ ಮಾತ್ರ ಸೋಂಕು ಉಂಟು ಮಾಡಿದರೆ, ಇತರ ಕೆಲವು ತಳಿಗಳು ಪಕ್ಷಿಗಳಿಗೆ ಮಾತ್ರವಲ್ಲದೆ ಸಸ್ತನಿಗಳಾದ ಹಂದಿಗಳು, ನಾಯಿಗಳು, ಕುದುರೆಗಳು ಮತ್ತು ಮನುಷ್ಯರಿಗೂ ಕೂಡ ಸೋಂಕು ತಗುಲಿಸುತ್ತವೆ.

ಇವುಗಳಲ್ಲಿ ಎಷ್ಟು ತಳಿಗಳು ಮನುಷ್ಯರಿಗೆ ಸೋಂಕು ತರುತ್ತವೆ?

ಬಹುತೇಕವಾಗಿ, ಮಾನವರು ಮೂರು ವಿಭಿನ್ನ H ಪ್ರಕಾರಗಳಿಂದ (ಎಚ್ 1, ಎಚ್ 2 ಮತ್ತು ಎಚ್ 3), ಮತ್ತು ಎರಡು ವಿಭಿನ್ನ N ಪ್ರಕಾರಗಳಿಂದ (ಎನ್ 1 ಮತ್ತು ಎನ್ 2) ಸೋಂಕುಗಳನ್ನು ಅನುಭವಿಸಿದ್ದಾರೆ.

 • ಪ್ರಸ್ತುತ, H1N1 ಮತ್ತು H3N2 ಎಂಬ ಎರಡು ಉಪವಿಭಾಗಗಳು ಋತುಮಾನಿಕ ಜ್ವರವಾಗಿ ಮಾನವರ ನಡುವೆ ಹರಡುತ್ತ, ಸಾಂಕ್ರಾಮಿಕಕ್ಕೆ ಕಾರಣವಾಗುತ್ತಿವೆ. ವೈರಸ್ ನ ಈ ತಳಿಗಳು ಮನುಷ್ಯರಿಗೆ ಚೆನ್ನಾಗಿ ಹೊಂದಿಕೊಂಡಿರುವುದರಿಂದ, ಅವುಗಳನ್ನು ಪಕ್ಷಿ ಜ್ವರ ಎನ್ನುವುದಕ್ಕಿಂತ ಮಾನವ ಜ್ವರ ಎಂದು ಕರೆಯಲಾಗುತ್ತದೆ.
 • ಹೊಸ ಫ್ಲೂ ಎ ವೈರಸ್(flu A virus) ಮಾನವರಲ್ಲಿ ನೆಲೆಗೊಂಡಾಗಲೆಲ್ಲಾ, ಇದು ಒಂದು ಸಾಂಕ್ರಾಮಿಕ ರೋಗವನ್ನು ಉಂಟುಮಾಡುತ್ತದೆ, ಮತ್ತು 1918 ರಿಂದ ಸ್ಪ್ಯಾನಿಷ್ ಫ್ಲೂ (H1N1), ಸೇರಿದಂತೆ, 1957-58 ರ ಏಷ್ಯನ್ ಫ್ಲೂ (H2N2), 1968 ರ ಹಾಂಗ್ ಕಾಂಗ್ ಫ್ಲೂ (H3N2) ಮತ್ತು 2009 ರ ಹಂದಿ ಜ್ವರ (H1N1 ನ ಹೊಸ ಆವೃತ್ತಿಯಿಂದ ಉಂಟಾಗಿದೆ) ಇಂತಹ ನಾಲ್ಕು ಸಾಂಕ್ರಾಮಿಕ ರೋಗಗಳು ಸಂಭವಿಸಿವೆ.

Flu A ವೈರಸ್‌ಗಳು ಏಕೆ ಹಲವು ತಳಿಗಳನ್ನು ಹೊಂದಿವೆ?

Influenza A ವೈರಸ್ ನಿರಂತರವಾಗಿ ರೂಪಾಂತರಗೊಳ್ಳುತ್ತದೆ ಮತ್ತು ಇದಕ್ಕೆ ಕಾರಣವೆಂದರೆ:

 • ಮೊದಲನೆಯದಾಗಿ, ಇದು RNA ವೈರಸ್ ಆಗಿದ್ದು ಅದು ಛಿದ್ರಗೊಂಡ / ವಿಭಾಗಿಸಲಾದ ಜೀನೋಮ್ ಅನ್ನು ಹೊಂದಿದೆ, ಅಂದರೆ ಇದು ಎಂಟು ವಿಭಿನ್ನ ಪ್ರಭೇದಗಳನ್ನು ಹೊಂದಿದೆ, ಇದು ಅದರ ನಕಲು ದೋಷಗಳು ಅಥವಾ ರೂಪಾಂತರಗಳಿಗೆ ಕಾರಣವಾಗುತ್ತದೆ.ಈ ‘ಆಂಟಿಜೆನಿಕ್ ಡ್ರಿಫ್ಟ್’ ಮೇಲ್ಮೈ ಪ್ರೋಟೀನ್‌ಗಳಲ್ಲಿ ಸ್ವಲ್ಪ ಆದರೆ ನಿರಂತರ ರೂಪಾಂತರಗಳಿಗೆ ಕಾರಣವಾಗುತ್ತದೆ,ಅದಕ್ಕಾಗಿಯೇ ಫ್ಲೂ ಲಸಿಕೆಗಳನ್ನು ನಿಯಮಿತವಾಗಿ ನವೀಕರಿಸಬೇಕಾಗುತ್ತದೆ.
 • ಎರಡನೆಯದಾಗಿ, ಒಂದು ಕೋಶವು ಎರಡು ವಿಭಿನ್ನ ಫ್ಲೂ ಎ ವೈರಸ್‌ಗಳಿಂದ ಸೋಂಕಿಗೆ ಒಳಗಾದಾಗ, ಅವುಗಳ ವಂಶವಾಹಿಗಳು ಸುಲಭವಾಗಿ ಬೆರೆಯಬಹುದು. ಪುನರ್ರಚನೆ / ಪುನಸ್ಸಂಯೋಜನೆ ಎಂದು ಕರೆಯಲ್ಪಡುವ ಈ ಮಿಶ್ರಣವು ಲೈಂಗಿಕತೆಯ ವೈರಲ್ ಆವೃತ್ತಿಯಾಗಿದೆ.

bird_flu

 

ವಿಷಯಗಳು: ಭಾರತವನ್ನು ಒಳಗೊಂಡ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಮಾಸ್ಕೋದಲ್ಲಿ ಎಸ್ -400 ಕುರಿತ ತರಬೇತಿ ಪಡೆಯಲಿರುವ ಸೇನಾ ಸಿಬ್ಬಂದಿ:


ಸಂದರ್ಭ:

ರಷ್ಯಾದ ಐದು ಅಲ್ಮಾಜ್-ಆಂಟೀ ಎಸ್ -400 ಟ್ರಯಂಫ್ ಭೂಮಿಯಿಂದ ಆಕಾಶಕ್ಕೆ (SAM) ಚಿಮ್ಮುವ ಸ್ವಯಂ ಚಾಲಿತ ಕ್ಷಿಪಣಿ ವ್ಯವಸ್ಥೆಗಳನ್ನು 5.5 ಬಿಲಿಯನ್‌ $ ಗೆ ಖರೀದಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯದಿದ್ದರೆ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಮತ್ತೊಮ್ಮೆ ಭಾರತಕ್ಕೆ ಎಚ್ಚರಿಕೆ ನೀಡಿದೆ.

ರಷ್ಯಾದಿಂದ ‘ಎಸ್–400 ಟ್ರೈಂಫ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆ’ ಖರೀದಿಸಲು ಭಾರತ ಮುಂದಾದರೆ ಅದನ್ನು ಗಮನಾರ್ಹ ವಹಿವಾಟು’ ಎಂದು ಪರಿಗಣಿಸಲಾಗುವುದು ಮತ್ತು ಭಾರತದ ಮೇಲೂ ಕಠಿಣ ನಿರ್ಬಂಧ ಹೇರಲು ಇದು ಆಹ್ವಾನ ನೀಡಿದಂತಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

 • ಭಾರತವು, ತನ್ನ ಭಾರತೀಯ ವಾಯುಪಡೆಯ (IAF) ಎಸ್ -400 ಖರೀದಿ ವಹಿವಾಟಿಗೆ ವಾಷಿಂಗ್ಟನ್ ನ, ‘ನಿರ್ಬಂಧಗಳ ಕಾಯ್ದೆಯಿಂದ ಅಮೆರಿಕದ ವಿರೋಧಿಗಳನ್ನು ಎದುರಿಸುವುದು ಕಾಯ್ದೆ’ಯನ್ನು (CATSA) ಜಾರಿಗೊಳಿಸುವುದರಿಂದ ವಿನಾಯತಿ ಪಡೆಯುವ ಸಾಧ್ಯತೆಯಿಲ್ಲ.

CAATSA ಎಂದರೇನು, ಮತ್ತು S-400 ಒಪ್ಪಂದವು ಈ ಕಾಯಿದೆಯ ವ್ಯಾಪ್ತಿಗೆ ಹೇಗೆ ಬಂತು?

 • CAATSA (Countering America’s Adversaries through Sanctions Act)( ನಿರ್ಬಂಧಗಳ ಕಾಯ್ದೆಯಿಂದ ಅಮೆರಿಕದ ವಿರೋಧಿಗಳನ್ನು ಎದುರಿಸುವ ಕಾಯ್ದೆ ) ಕಾಯ್ದೆಯ ಮುಖ್ಯ ಉದ್ದೇಶವು ಇರಾನ್, ರಷ್ಯಾ ಮತ್ತು ಉತ್ತರ ಕೊರಿಯಾವನ್ನು ದಂಡನಾತ್ಮಕ ಕ್ರಮಗಳ ಮೂಲಕ ಎದುರಿಸುವುದಾಗಿದೆ.
 • ಈ ಕಾಯಿದೆಯು ಮುಖ್ಯವಾಗಿ ರಷ್ಯಾದ ಹಿತಾಸಕ್ತಿಗಳಾದ ತೈಲ ಮತ್ತು ಅನಿಲ ಉದ್ಯಮ, ರಕ್ಷಣಾ ಮತ್ತು ಭದ್ರತಾ ವಲಯ ಮತ್ತು ಹಣಕಾಸು ಸಂಸ್ಥೆಗಳ ಮೇಲಿನ ನಿರ್ಬಂಧಗಳೊಂದಿಗೆ ಉಕ್ರೇನ್‌ನಲ್ಲಿನ ಮಿಲಿಟರಿ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ವ್ಯವಹರಿಸುತ್ತದೆ. ಮತ್ತು 2016 ರ ಯುಎಸ್ ಅಧ್ಯಕ್ಷೀಯ ಚುನಾವಣೆಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿದ  ಆರೋಪವನ್ನು ಒಳಗೊಂಡಿದೆ.

 ಆದರೆ ಅಮೆರಿಕಾವು  CAATSA ದಂತಹ ಕಾನೂನನ್ನು ಏಕೆ ಹೊಂದಿದೆ?

 • ಯುಎಸ್ ಚುನಾವಣೆಗಳು ಮತ್ತು ರಷ್ಯಾದ ಮಧ್ಯಪ್ರವೇಶದ ಆರೋಪಗಳ ನಂತರ ಕೆಲವರು ಇದನ್ನು ಯುಎಸ್ ಚುನಾವಣೆಗಳಲ್ಲಿ, ರಷ್ಯಾದ ಕಾನೂನುಬಾಹಿರ ಸಹಕಾರ ಅಥವಾ ಪಿತೂರಿ ಎಂದು ಕರೆಯುತ್ತಾರೆ, ಆಗ ವಾಷಿಂಗ್ಟನ್ ಮತ್ತು ಮಾಸ್ಕೋ ನಡುವಿನ ಭಿನ್ನಾಭಿಪ್ರಾಯವು ಹೊಸ ಮಟ್ಟವನ್ನು ತಲುಪಿತು.
 • ಪ್ರಪಂಚದಾದ್ಯಂತದ ಮಾಸ್ಕೋದ ಕ್ರಮಗಳಿಂದ ಕೋಪಗೊಂಡ ಅಮೆರಿಕದ ಕಾನೂನು ನಿರೂಪಕರು ರಷ್ಯಾ ಗೆ ಹೆಚ್ಚು ಹಾನಿ ಉಂಟು ಮಾಡಲು CAATSA ಕಾಯ್ದೆಯ ಮೂಲಕ ಅದರ ರಕ್ಷಣೆ ಮತ್ತು ಇಂಧನ ವ್ಯವಹಾರ ಕ್ಷೇತ್ರಗಳನ್ನು ಗುರಿಯಾಗಿಸಲು ಬಯಸಿದರು.

russia

 

ವಿಷಯಗಳು:   ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

 ವೆಸ್ಟ್ ಬ್ಯಾಂಕ್ ಮತ್ತು ಸಂಬಂಧಿತ ಸಮಸ್ಯೆಗಳು:

ಸಂದರ್ಭ :

 ಟ್ರಂಪ್ ನಿರ್ಗಮಣದ ಮೊದಲು ಇಸ್ರೇಲ್ ವೆಸ್ಟ್ ಬ್ಯಾಂಕ್ ನ ವಸಾಹತು ನೆಲೆಗಳಿಗೆ ಅನುಮೋದನೆ ನೀಡಿತು.

 • ಈ ಅನುಮೋದನೆಗಳು,ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಕೊನೆಯ ಕೆಲವು ದಿನಗಳ ಲಾಭವನ್ನು ಪಡೆದುಕೊಳ್ಳುವಂತೆ ವ್ಯಾಪಕವಾಗಿ ಕಂಡುಬರುತ್ತಿವೆ.

ವೆಸ್ಟ್ ಬ್ಯಾಂಕ್/ ಪಶ್ಚಿಮ ದಂಡೆ ಎಲ್ಲಿದೆ?

ಇದು ಪಶ್ಚಿಮ ಏಷ್ಯಾದ ಮೆಡಿಟರೇನಿಯನ್ ಕರಾವಳಿಯ ಸಮೀಪವಿರುವ ಭೂ ಆವೃತ ಪ್ರದೇಶವಾಗಿದ್ದು, ಪೂರ್ವಕ್ಕೆ ಜೋರ್ಡಾನ್ ಗಡಿಯಿದೆ ಮತ್ತು ಗ್ರೀನ್ ಲೈನ್ ಇದನ್ನು ಪ್ರತ್ಯೇಕಿಸುತ್ತದೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಮತ್ತು ಉತ್ತರದಲ್ಲಿ ಇಸ್ರೇಲ್ ನಿಂದ ಆವರಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್ ಸಹ ಮೃತ ಸಮುದ್ರದ ಪಶ್ಚಿಮ ತೀರದ ಗಮನಾರ್ಹ ವಿಭಾಗವನ್ನು ಹೊಂದಿದೆ.

ಇಲ್ಲಿ ವಿವಾದಗಳ ಇತ್ಯರ್ಥ ಏನು? ಅಲ್ಲಿ ಯಾರು ವಾಸಿಸುತ್ತಾರೆ?

 • 1948 ರ ಅರಬ್-ಇಸ್ರೇಲ್ ಯುದ್ಧದ ನಂತರ ಪಶ್ಚಿಮ ದಂಡೆಯನ್ನು ಜೋರ್ಡಾನ್ ವಶಪಡಿಸಿಕೊಂಡಿತು.
 • 1967 ರ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಅದನ್ನು ಮರಳಿ ವಶಪಡಿಸಿಕೊಂಡಿತು ಮತ್ತು ಅಂದಿನಿಂದಲೂ ಅದನ್ನು ಆಕ್ರಮಿಸಿಕೊಂಡಿದೆ. ಈ ಯುದ್ಧದ ಸಮಯದಲ್ಲಿ, ಇಸ್ರೇಲ್ ದೇಶವು ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್‌ನ ಸಂಯೋಜಿತ ಪಡೆಗಳನ್ನು ಸೋಲಿಸಿತು.
 • ಇಸ್ರೇಲ್ ಪಶ್ಚಿಮ ದಂಡೆಯಲ್ಲಿ ಸುಮಾರು 130 ಅಧಿಕೃತ ನೆಲೆಗಳನ್ನು ನಿರ್ಮಿಸಿದೆ ಮತ್ತು ಕಳೆದ 20-25 ವರ್ಷಗಳಲ್ಲಿ ಇದೇ ರೀತಿಯ ಸಣ್ಣ, ಅನೌಪಚಾರಿಕ ವಸಾಹತುಗಳು ತಲೆಯೆತ್ತಿವೆ.
 • ಸುಮಾರು 26 ಲಕ್ಷ ಪ್ಯಾಲೆಸ್ಟೀನಿಯನ್ನರೊಂದಿಗೆ, ಸುಮಾರು 4ಲಕ್ಷಕ್ಕೂ ಹೆಚ್ಚು ಇಸ್ರೇಲಿ ವಸಾಹತುಗಾರರು – ಅವರಲ್ಲಿ ಅನೇಕರು ಈ ಭೂಮಿಯ ಮೇಲೆ ಬೈಬಲ್ನ ಜನ್ಮಸಿದ್ಧ ಹಕ್ಕುಗಳನ್ನು ಪ್ರತಿಪಾದಿಸುವ ಧಾರ್ಮಿಕ ಝಿಯಾನಿಸ್ಟ್‌ಗಳು (religious Zionists ) – ಈಗ ಇಲ್ಲಿ ವಾಸಿಸುತ್ತಿದ್ದಾರೆ.
 • ಅಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯಾದ ಜನರು ವಾಸಿಸುತ್ತಿರುವುದರಿಂದ ಮತ್ತು ಈ ಭೂಮಿ ತಮ್ಮ ಭವಿಷ್ಯದ ದೇಶದ ಭಾಗವಾಗಲಿದೆ ಎಂಬ ಅವರ ಆಶಯದಿಂದಾಗಿ ಈ ಪ್ರದೇಶವು ಇನ್ನೂ ವಿವಾದ ಗ್ರಸ್ತವಾಗಿದೆ.
 • 1967 ರಲ್ಲಿ ಇಸ್ರೇಲ್ ಈ ಭೂಮಿಯ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅದು ಯಹೂದಿ ಜನರಿಗೆ ಅಲ್ಲಿ ಹೋಗಲು ಅವಕಾಶ ಮಾಡಿಕೊಟ್ಟಿತು,ಆದರೆ ಪ್ಯಾಲೆಸ್ಟೀನಿಯಾದವರು ವೆಸ್ಟ್ ಬ್ಯಾಂಕ್ ಅನ್ನು ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ಯಾಲೇಸ್ಟಿನಿಯನ್ ಭೂಮಿಯೆಂದು ಪರಿಗಣಿಸುತ್ತಾರೆ.

ಈ ನೆಲೆಗಳು ಕಾನೂನುಬಾಹಿರವೇ?

 • ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಯುಎನ್ ಭದ್ರತಾ ಮಂಡಳಿ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯ, ಇವುಗಳು ವೆಸ್ಟ್ ಬ್ಯಾಂಕ್ ನಲ್ಲಿನ ನೆಲೆಗಳು ನಾಲ್ಕನೇ ಜಿನೀವಾ ಸಮಾವೇಶದ ಉಲ್ಲಂಘನೆಯಾಗಿದೆ ಎಂದು ಹೇಳಿವೆ.
 • ನಾಲ್ಕನೇ ಜಿನೀವಾ ಸಮಾವೇಶದ (1949) ಅಡಿಯಲ್ಲಿ, ಆಕ್ರಮಿಸಿಕೊಂಡ ದೇಶವು “ತನ್ನದೇ ಆದ ನಾಗರಿಕ ಜನಸಂಖ್ಯೆಯ ಒಂದು ಭಾಗವನ್ನು ಅದು ಆಕ್ರಮಿಸಿಕೊಂಡ ಪ್ರದೇಶಕ್ಕೆ ಕಳುಹಿಸಬಾರದು ಅಥವಾ ವರ್ಗಾಯಿಸಬಾರದು” ಎ೦ದು ಹೇಳಲಾಗಿದೆ.
 • 1998 ರಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು ಸ್ಥಾಪಿಸಿದ ರೋಮ್ ಶಾಸನದಡಿಯಲ್ಲಿ, ಅಂತಹ ವರ್ಗಾವಣೆಗಳು ಯುದ್ಧ ಅಪರಾಧಗಳನ್ನು ಒಳಗೊಂಡಿರುತ್ತವೆ, ಜೊತೆಗೆ “ವ್ಯಾಪಕ ವಿಧ್ವಂಸಕತೆ ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳುವುದು, ಇದು ಮಿಲಿಟರಿ ಬಲದಿಂದ ಸಮರ್ಥಿಸಲ್ಪಡುವುದಿಲ್ಲ ಮತ್ತು ಕಾನೂನುಬಾಹಿರವಾಗಿ ಮತ್ತು ಸ್ವಯಂಪ್ರೇರಣೆಯಿಂದ ನಡೆಸಲ್ಪಡುತ್ತದೆ” ಎಂದು ಹೇಳಲಾಗಿದೆ.

israel

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ನದಿ ನೀರಿನ ಗುಣಮಟ್ಟದ ಕುರಿತ ವಸ್ತುಸ್ಥಿತಿ ವರದಿಯನ್ನು ಕೋರಿದ ಸರ್ವೋಚ್ಚ ನ್ಯಾಯಾಲಯ:


ಸಂದರ್ಭ :

ನೀರಿನ ಗುಣಮಟ್ಟವನ್ನು ಸುಧಾರಿಸಲು ಮತ್ತು ರಾಜ್ಯಗಳು ತಮ್ಮ ಸಲಹೆಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತಂದಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಕ ಮಾಡಿದ ಯಮುನಾ ನದಿ ಉಸ್ತುವಾರಿ ಸಮಿತಿಯಿಂದ ವಸ್ತುಸ್ಥಿತಿ ವರದಿಯನ್ನು ಕೋರಿದೆ.

 • ಸಮಿತಿಯ ನೇತೃತ್ವವನ್ನು ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ಶೈಲಾಜಾ ಚಂದ್ರ ವಹಿಸಿದ್ದಾರೆ.

ಹಿನ್ನೆಲೆ:

“ನದಿಗಳು ಸೇರಿದಂತೆ ತೆರೆದ ಮೇಲ್ಮೈ ನೀರಿನ ಸಂಪನ್ಮೂಲಗಳು ಮಾನವ ನಾಗರಿಕತೆಯ ಜೀವಸೆಲೆ” ಎ೦ದು ಹೇಳುವ ಮೂಲಕ, ಸುಪ್ರೀಂ ಕೋರ್ಟ್ ಜನವರಿ 13 ರಂದು ಸ್ವಯಂ ಪ್ರೇರಿತವಾಗಿ  ಪುರಸಭೆಗಳು ಮಾಡಿದ ತಪ್ಪುಗಳಿಂದಾಗಿ ಒಳಚರಂಡಿ ಕೊಳಚೆನೀರಿನ ತ್ಯಾಜ್ಯದಿಂದ ನದಿಗಳ ಮಾಲಿನ್ಯವನ್ನು ಅರಿತುಕೊಂಡಿದೆ.

ಯಮುನಾ ನದಿ ಏಕೆ  ಅಷ್ಟೊಂದು ಕಲುಷಿತವಾಗಿದೆ?

 • ದೆಹಲಿಯ ಒಳಚರಂಡಿ ಸಂಸ್ಕರಣಾ ಘಟಕಗಳು ನದಿಯಲ್ಲಿ ಮಾಲಿನ್ಯಕಾರಕಗಳ ಸಂಗ್ರಹಣೆಗೆ ಪ್ರಮುಖ ಕಾರಣಗಳಾಗಿವೆ.
 • ವಿವಿಧ ರೀತಿಯ ಉದ್ಯಮಗಳು ವಿಸರ್ಜಿಸುವ ಮಾಲಿನ್ಯಕಾರಕಗಳು ಕೂಡ ಒಂದು ಪ್ರಮುಖ ಸಮಸ್ಯೆಯಾಗಿದೆ.
 • ದೆಹಲಿಯ ನದಿಯ ದಡದಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳು ನದಿ ಮಾಲಿನ್ಯಕ್ಕೆ ಕಾರಣವಾಗಿವೆ.
 • ಹರಿಯಾಣ ಕೃಷಿ ಕ್ಷೇತ್ರದಿಂದ ವಿಸರ್ಜನೆ ಯಾಗುವ ಕೃಷಿ ತ್ಯಾಜ್ಯ ಮತ್ತು ಕೀಟನಾಶಕಗಳು ಮಾಲಿನ್ಯಕ್ಕೆ ಕಾರಣವಾಗಿವೆ.
 • ನದಿಯಲ್ಲಿನ ಕಡಿಮೆ ಪ್ರಮಾಣದ ನೀರಿನ ಹರಿವು ಮಾಲಿನ್ಯಕಾರಕಗಳ ಸಂಗ್ರಹಕ್ಕೆ ಮತ್ತು ಮಾಲಿನ್ಯ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಯಮುನಾ ನದಿಯ ಬಗ್ಗೆ:

 • ಯಮುನಾ ನದಿಯು ಗಂಗಾ ನದಿಯ ಪ್ರಮುಖ ಉಪನದಿಯಾಗಿದೆ.
 • ಇದು ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಕೆಳ ಹಿಮಾಲಯದ ಮಸ್ಸೂರಿ ಶ್ರೇಣಿಯಲ್ಲಿರುವ ಬಂದರ್‌ಪೂಂಚ್ ಶಿಖರಗಳ ಬಳಿಯ ಯಮುನೋತ್ರಿ ಹಿಮನದಿಯಿಂದ ಉಗಮವಾಗುತ್ತದೆ.
 • ಇದು ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮೂಲಕ ಹರಿದು ನಂತರ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿನ ಸಂಗಮದಲ್ಲಿ ಗಂಗಾ ನದಿಯನ್ನು ಸೇರುತ್ತದೆ.
 • ಉಪನದಿಗಳು: ಚಂಬಲ್, ಸಿಂಧ್, ಬೆಟ್ವಾ ಮತ್ತು ಕೆನ್.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಭಾರತೀಯ ನಕ್ಷತ್ರ ಆಮೆ:

 • ಇವುಗಳು, ಭಾರತದ ಉಪಖಂಡದಾದ್ಯಂತ, ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತದ ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ, ಪಶ್ಚಿಮ ಪಾಕಿಸ್ತಾನದಲ್ಲಿ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ.
 • ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅನುಸೂಚಿ IV ಅಡಿಯಲ್ಲಿ ರಕ್ಷಿಸಲಾಗಿದೆ.
 • ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ (CITES) : ಅನುಬಂಧ I ಅಡಿ ರಕ್ಷಣೆ ಪಡೆದಿವೆ.
 • IUCN ಸ್ಥಿತಿ: ಅಪಾಯಕ್ಕೊಳಗಾಗಬಲ್ಲ ಪ್ರಭೇದ.

star_tortoise

 ಸೆಮೆರು ಜ್ವಾಲಾಮುಖಿ / Semeru volcano :

 • ಇತ್ತೀಚೆಗೆ ಸ್ಫೋಟಗೊಂಡಿರುವ ಇದು ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದಲ್ಲಿದೆ.
 • ಇದು ಜಾವಾದಲ್ಲಿನ ಅತಿ ಹೆಚ್ಚು ಎತ್ತರದ ಮತ್ತು ಅತ್ಯಂತ ಜಾಗ್ರತ ಜ್ವಾಲಾಮುಖಿಯಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos