Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 12 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಅಮೆರಿಕ ಅಧ್ಯಕ್ಷರನ್ನು ಪದಚ್ಯುತಿ ಗೊಳಿಸುವುದು ಹೇಗೆ?

2. ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ 1960 .

3. ತನ್ನ ಸೈನ್ಯವನ್ನು LAC ಯಿಂದಯಿಂದ ಹಿಂದಕ್ಕೆ ಸರಿಸಿದ ಚೀನಾ.

4. ವಿಶ್ವ ಸಂಸ್ಥೆಯ ಉನ್ನತ ಸ್ಥಾನದಲ್ಲಿ ಭಾರತ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. PM ಕಿಸಾನ್.

2. ಗಗನಯಾನ ಯೋಜನೆಯ ಭಾಗವಾದ ಇಬ್ಬರು ಫ್ಲೈಟ್ ಸರ್ಜನ್‌ಗಳಿಗೆ ರಷ್ಯಾದಲ್ಲಿ ತರಬೇತಿ.

3. ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ. (UAPA)

 

ಪೂರ್ವ ಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. Dzukou ಕಣಿವೆ  Dzukou Valley.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು:  ಇತರ ದೇಶಗಳೊಂದಿಗೆ ಭಾರತೀಯ ಸಾಂವಿಧಾನಿಕ ವ್ಯವಸ್ಥೆಯ ಹೋಲಿಕೆ.

ಅಮೆರಿಕ ಅಧ್ಯಕ್ಷರನ್ನು ಪದಚ್ಯುತಿ ಗೊಳಿಸುವುದು ಹೇಗೆ?


 ಸಂದರ್ಭಃ

ಇತ್ತೀಚೆಗೆ ಅಮೇರಿಕ ಸಂಸತ್ತಿನ ಮೇಲೆ ಅವರ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾತ್ರಕ್ಕಾಗಿ  ಅಂದರೆ

ದಂಗೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜನಪ್ರತಿನಿಧಿಗಳ ಸಭೆ( House of Representatives) ಯಲ್ಲಿ, ಡೆಮೊಕ್ರಾಟ್ ನ್ನರು  ಟ್ರಂಪ್ ರನ್ನು ಪದಚ್ಯುತಿ ಗೊಳಿಸುವ  ಲೇಖನವನ್ನು/ ಗೊತ್ತುವಳಿಯನ್ನು ಮಂಡಿಸಿದರು.

ಮಹಾಭಿಯೋಗ / ಪದಚ್ಯುತಿ ಎಂದರೇನು?

ಮಹಾಭಿಯೋಗ ಎಂದರೆ, ಅಮೇರಿಕಾದ ಅಧ್ಯಕ್ಷರನ್ನು ತೆಗೆದುಹಾಕಲು ಕಾಂಗ್ರೆಸ್(ಸಂಸತ್ತಿಗೆ) ಗೆ  ಅನುಮತಿಸುವ ಒಂದು ನಿಬಂಧನೆಯಾಗಿದೆ.

ಯುಎಸ್ ಸಂವಿಧಾನದಡಿಯಲ್ಲಿ:

 1. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ( ಜನಪ್ರತಿನಿಧಿಗಳ ಸಭೆ) (ಕೆಳಮನೆ) “ದೋಷಾರೋಪಣೆಯ/ಮಹಾಭಿಯೋಗ ದ ಏಕೈಕ ಅಧಿಕಾರ” ವನ್ನು ಹೊಂದಿದ್ದರೆ, ಸೆನೆಟ್ (ಮೇಲ್ಮನೆ) “ಎಲ್ಲಾ ದೋಷಾರೋಪಣೆಗಳನ್ನು ಪ್ರಯತ್ನಿಸುವ ಏಕೈಕ ಅಧಿಕಾರವನ್ನು” ಹೊಂದಿದೆ.
 2. ಅಮೇರಿಕಾ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು ಸೆನೆಟ್ ನಲ್ಲಿ ದೋಷಾರೋಪಣೆ ವಿಚಾರಣೆಯ ಅಧ್ಯಕ್ಷತೆಯನ್ನು ವಹಿಸುತ್ತಾರೆ.

ದೋಷಾರೋಪಣೆಗೆ ಆಧಾರಗಳು/ ಕಾರಣಗಳು :

 1. “ದೇಶದ್ರೋಹ, ಲಂಚ ಅಥವಾ ಇತರ ಹೆಚ್ಚಿನ ಅಪರಾಧ ಮತ್ತು ದುಷ್ಕೃತ್ಯಕ್ಕಾಗಿ” ಅಧ್ಯಕ್ಷರನ್ನು ಕಚೇರಿಯಿಂದ ತೆಗೆದುಹಾಕಬಹುದು.
 2. ಮೂಲಭೂತವಾಗಿ, ಇದರರ್ಥ ಉನ್ನತ ಮಟ್ಟದ ಸಾರ್ವಜನಿಕ ಅಧಿಕಾರಿಯೊಬ್ಬರು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದಾಗಿದೆ. ಇದು ಸಾಮಾನ್ಯ ಶಾಸನ ಉಲ್ಲಂಘನೆಯ ಅಪರಾಧವೇ ಆಗಬೇಕಾಗಿಲ್ಲ.
 3. ಐತಿಹಾಸಿಕವಾಗಿ, ಯು.ಎಸ್ ನಲ್ಲಿ ನ್ಯಾಯಾಂಗ ವಿಚಾರಣೆಯನ್ನು ತಡೆಯಲು ಪ್ರಯತ್ನಿಸುವುದು ಸೇರಿದಂತೆ ಇದು ಭ್ರಷ್ಟಾಚಾರ ಮತ್ತು ಇತರ ಅಧಿಕಾರ ದುರುಪಯೋಗಗಳನ್ನು ಒಳಗೊಂಡಿದೆ.

Stage_By_Stage

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ 1960 :

ಸಂದರ್ಭಃ

ಪ್ರಾಣಿಗಳ ಮೇಲಿನ ಕ್ರೌರ್ಯ/ದೌರ್ಜನ್ಯ ತಡೆ ಕಾಯ್ದೆ 1960 ರ ಅಡಿಯಲ್ಲಿ 2017 ರ ನಿಯಮಗಳ ಬಗ್ಗೆ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದು, ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸುತ್ತ ಪ್ರಾಣಿಗಳನ್ನು ವಶಪಡಿಸಿಕೊಳ್ಳುವುದು ಮತ್ತು ಮುಟ್ಟುಗೋಲು ಹಾಕಿಕೊಳ್ಳುವುದರ ನಡುವೆ ವ್ಯತ್ಯಾಸವಿದೆ ಎಂದು ಹೇಳಿದೆ.

 • ಕಳೆದ ವಾರ ನ್ಯಾಯಾಲಯವು ಪ್ರಾಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕಾನೂನಿನಡಿಯಲ್ಲಿ ಆರೋಪಿಯನ್ನು ಶಿಕ್ಷೆಗೊಳಪಡಿಸುವ ಮೊದಲು ನಿಯಮವನ್ನು ತಿದ್ದುಪಡಿ ಮಾಡಬೇಕು,ಇಲ್ಲವೇ ಅವುಗಳನ್ನು ಹಿಂದೆ ಪಡೆಯಬೇಕು, ಎಂದು ಸೂಚಿಸಿದ ನಂತರ ಕೇಂದ್ರವು ಈ ರೀತಿ ಪ್ರತಿಕ್ರಿಯಿಸಿತು.

ಏನಿದು ಸಮಸ್ಯೆ?

ಜಾನುವಾರು ಸಾಗಣೆಗೆ ಬಳಸುವ ವಾಹನಗಳನ್ನು ವಶಪಡಿಸಿಕೊಳ್ಳಲು ಮತ್ತು ಪ್ರಾಣಿಗಳನ್ನು ಆಶ್ರಯ ತಾಣಗಳಿಗೆ ಕಳುಹಿಸಲು ಅಧಿಕಾರಿಗಳಿಗೆ ಅವಕಾಶ ನೀಡುವ ನಿಯಮಗಳ ಸಿಂಧುತ್ವವನ್ನು ಪ್ರಶ್ನಿಸಿ, ಎಮ್ಮೆ ವ್ಯಾಪಾರಿಗಳ ಕಲ್ಯಾಣ ಸಂಘವು ( Buffalo Traders Welfare Association) ಮನವಿ ಸಲ್ಲಿಸಿದೆ. ಅರ್ಜಿಯಲ್ಲಿ,  ಈ ನಿಯಮಗಳನ್ನು ಜಾರಿಗೊಳಿಸಿದಾಗಿನಿಂದ ಸಾಗಣೆದಾರರು, ರೈತರು ಮತ್ತು ಜಾನುವಾರು ವ್ಯಾಪಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ತಿಳಿಸಲಾಗಿದೆ.

ಕೇಂದ್ರ ಹೇಳುವುದೆನು?

ವಶಪಡಿಸಿಕೊಳ್ಳುವಿಕೆಯು  ತಾತ್ಕಾಲಿಕ ಸ್ವರೂಪದ್ದಾಗಿರುತ್ತದೆ ಮತ್ತು ಕೇವಲ ಆಸ್ತಿಯನ್ನು (ಜಾನುವಾರು) ಸ್ವಾಧೀನಪಡಿಸಿಕೊಳ್ಳುತ್ತದೆ, ಮುಟ್ಟುಗೋಲು ಎನ್ನುವುದು ಆಸ್ತಿಯ ಮಾಲೀಕತ್ವವನ್ನು ವರ್ಗಾಯಿಸುವುದಕ್ಕೆ ಸಮಾನವಾಗಿರುತ್ತದೆ ಮತ್ತು ನಿರ್ದಿಷ್ಟ ಪ್ರಕರಣದಲ್ಲಿ ಪಕ್ಷಗಳ ಹಕ್ಕುಗಳ ಬಗ್ಗೆ ಅಂತಿಮ ತೀರ್ಮಾನದ ನಂತರವೇ ಇದನ್ನು ಮಾಡಲಾಗುತ್ತದೆ.

ಹಿನ್ನೆಲೆ:

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ  ಪ್ರಕರಣ) ನಿಯಮಗಳು, 2017, ಕುರಿತು :

 • ಪ್ರಾಣಿಗಳ ಮೇಲಿನ ಕ್ರೌರ್ಯ/ ದೌರ್ಜನ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಈ ನಿಯಮಗಳನ್ನು ರೂಪಿಸಲಾಗಿದೆ.
 • ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ವಿಚಾರಣೆಯನ್ನು ಎದುರಿಸುತ್ತಿರುವ ಮಾಲೀಕರ ದನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, 2017 ರ ನಿಯಮಗಳು ಮ್ಯಾಜಿಸ್ಟ್ರೇಟ್‌ ರವರಿಗೆ ಅವಕಾಶ ನೀಡುತ್ತವೆ.
 • ಆ ನಂತರ ಪ್ರಾಣಿಗಳನ್ನು ಚಿಕಿತ್ಸಾ ಕೇಂದ್ರಗಳು, ‘, ಗೋಶಾಲೆಗಳು ‘ಪಿಂಜರಪೋಲ್’ ಇತ್ಯಾದಿ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ.
 • ಕೊನೆಗೆ ಈ ಸ್ಥಳಗಳಲ್ಲಿನ ಅಧಿಕಾರಿಗಳು ಅಂತಹ ಪ್ರಾಣಿಗಳನ್ನು “ದತ್ತು” ಪಡೆಯಲು ಬಯಸಿದವರಿಗೆ ನೀಡಬಲ್ಲವರಾಗಿದ್ದಾರೆ. 

ವ್ಯಾಪಾರಿಗಳು ವ್ಯಕ್ತಪಡಿಸಿದ ಕಳವಳಗಳು:

 • ಗೋಶಾಲೆಗಳಿಗೆ ಕಳುಹಿಸಲಾಗುವ ತಮ್ಮ ಜಾನುವಾರುಗಳಿಂದ ತಮ್ಮನ್ನು ಬಲವಂತವಾಗಿ ವಂಚಿತಗೊಳಿಸಲಾಗುತ್ತಿದೆ ಎಂದು ಜಾನುವಾರು ವ್ಯಾಪಾರಿಗಳು ಪ್ರತಿಪಾದಿಸಿದ್ದಾರೆ.
 • ಆಗಾಗ್ಗೆ ನಡೆಯುವ ಈ ಶೋಷಣೆಗಳು ಕಾನೂನಿನ ನಿಯಮವನ್ನೇ ಬೆದರಿಸುತ್ತವೆ ಮತ್ತು ಸಾಮಾನ್ಯವಾಗಿ ವ್ಯಕ್ತಿಗಳ ಗುಂಪುಗಳು ಕಾನೂನನ್ನು ತಮ್ಮ ಕೈಗೆ ಧೈರ್ಯವಾಗಿ ತೆಗೆದುಕೊಳ್ಳಲು ಸಹಾಯ ಮಾಡುತ್ತವೆ.
 • ಹೆಚ್ಚಾಗಿ, ಇಂತಹ ಘಟನೆಗಳು ಸಮಾಜದಲ್ಲಿ ಕೋಮು ಧ್ರುವೀಕರಣಕ್ಕೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತಿವೆ.

ಮುಂದಿನ ದಾರಿ:

ಇಂತಹ ಘಟನೆಗಳನ್ನು,ಪರಿಣಾಮಕಾರಿಯಾಗಿ ಮತ್ತು ತಕ್ಷಣವೇ ನಿಲ್ಲಿಸದಿದ್ದರೆ, ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತವೆ.

ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ 1960 ಕುರಿತು :

 • “ಪ್ರಾಣಿಗಳಿಗೆ ಅನಗತ್ಯವಾಗಿ ನೋವನ್ನು ಉಂಟುಮಾಡುವುದನ್ನು ತಡೆಯಲು” ಪ್ರಯತ್ನಿಸುತ್ತದೆ.
 • ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು 1962 ರಲ್ಲಿ ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ಸ್ಥಾಪಿಸಲಾಯಿತು.
 • ಪ್ರಾಣಿಗೆ ನೋವು ಮಾಡುವುದು, ಹೆಚ್ಚಿನ ಭಾರ ಹೊರಿಸಿದರೆ; ಪ್ರಾಣಿಗಳು ಅನಾರೋಗ್ಯದಿಂದ ನರಳುತ್ತಿದ್ದಾಗ ಅಥವಾ ತುಂಬಾ ವಯಸ್ಸಾಗಿದ್ದಾಗ ಅವುಗಳನ್ನು ಕೆಲಸಕ್ಕೆ ಬಳಸಿಕೊಂಡರೆ; ಉದ್ದೇಶಪೂರ್ವಕವಾಗಿ ಮಾರಣಾಂತಿಕ ಔಷಧಗಳನ್ನು ನೀಡಿದರೆ; ಪ್ರಾಣಿಗಳ ಉಸಿರಾಟಕ್ಕೆ ತೊಂದರೆ ಆಗುವ ರೀತಿಯಲ್ಲಿ ವಾಹನಗಳಲ್ಲಿ ಸಾಗಿಸಿದರೆ ಪ್ರಾಣಿಗಳ ರಕ್ಷಣೆಗೆ ಹಲವು ನಿಯಮಗಳನ್ನು ರೂಪಿಸಲಾಗಿದೆ. ಹಾಗೂ ಈ ಕಾಯಿದೆಯು ಪ್ರಾಣಿಗಳಲ್ಲಿ ವಿವಿಧ ರೀತಿಯ ಪ್ರಾಣಿಗಳನ್ನು ವ್ಯಾಖ್ಯಾನಿಸುತ್ತದೆ.
 • ಇದು ವೈಜ್ಞಾನಿಕ ಉದ್ದೇಶಗಳಿಗಾಗಿ ಪ್ರಾಣಿಗಳ ಮೇಲಿನ ಪ್ರಯೋಗಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ.

 

ವಿಷಯಗಳುಃ ಭಾರತ ಮತ್ತು ಅದರ ನೆರೆಹೊರೆ ದೇಶಗಳೊಂದಿಗೆ – ಸಂಬಂಧಗಳು.

ತನ್ನ ಸೈನ್ಯವನ್ನು LAC ಯಿಂದಯಿಂದ ಹಿಂದಕ್ಕೆ ಸರಿಸಿದ ಚೀನಾ:


ಸಂದರ್ಭ :

ಪೂರ್ವ ಲಡಾಖ್‌ನ ವಿವಾದಿತ ಗಡಿಯುದ್ದಕ್ಕೂ ಆಳ ಪ್ರದೇಶಗಳಿಂದ ಸುಮಾರು 10,000 ಸೈನಿಕರನ್ನು ಚೀನಾ ಹಿಂತೆಗೆದುಕೊಂಡಿದೆ, ಆದರೆ ಮುಂಚೂಣಿ ಪಡೆಗಳು ಈ ಮೊದಲಿದ್ದ ಸ್ಥಾನದಲ್ಲೇ ಮುಂದುವರಿಯುತ್ತವೆ.

ಈ ಪ್ರದೇಶವು ವಿವಾದಗ್ರಸ್ತವಾಗಿದೆ ಏಕೆ?

1962 ರಿಂದ ಭಾರತೀಯ ಮತ್ತು ಚೀನೀ ಸೈನಾ ಪಡೆಗಳನ್ನು ಬೇರ್ಪಡಿಸುವ ರೇಖೆಯಾದ – ವಾಸ್ತವ ನಿಯಂತ್ರಣ ರೇಖೆ (LAC) ಯು ಸಾಮಾನ್ಯವಾಗಿ ಪಾಂಗೊಂಗ್ ತ್ಸೋ (Pangong Tso)  ಸರೋವರದ ವಲಯವನ್ನು ಹೊರತುಪಡಿಸಿ ಭೂ ಗಡಿರೇಖೆಯ ಉದ್ದಕ್ಕೂ ಇದೆ. ಇಲ್ಲಿ, ನೀರಿನ ಮೂಲಕವೂ ಗಡಿಯನ್ನು ಗುರುತಿಸಲಾಗುತ್ತದೆ.

 • ಯಾವ ಪ್ರದೇಶ ಯಾರಿಗೆ ಸೇರಿದೆ ಎಂದು ಎರಡೂ ದೇಶದವರು ತಮ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ.
 • ಭಾರತವು ಪಾಂಗೊಂಗ್ ತ್ಸೋ ವಲಯದ ಸುಮಾರು 45 ಕಿ.ಮೀ. ಪ್ರದೇಶವನ್ನು ನಿಯಂತ್ರಿಸಿದರೆ ಚೀನಾ ಉಳಿದ ಪ್ರದೇಶವನ್ನು ನಿಯಂತ್ರಿಸುತ್ತದೆ.

ಸರೋವರವನ್ನು ಬೆರಳುಗಳು ( fingers )  ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ:

ಅವುಗಳಲ್ಲಿ ಎಂಟು ವಿವಾದಗ್ರಸ್ಥವಾಗಿವೆ. LAC ಎಲ್ಲಿ ಹಾದುಹೋಗುತ್ತದೆ ಎಂಬುದರ ಬಗ್ಗೆ ಭಾರತ ಮತ್ತು ಚೀನಾ ವಿಭಿನ್ನ ತಿಳುವಳಿಕೆಯನ್ನು ಹೊಂದಿವೆ.

 • ಚೀನಾದ ಅಂತಿಮ ಮಿಲಿಟರಿ ಪೊಸ್ಟ್ ಆದ ಫಿಂಗರ್ 8 ಮೂಲಕ LAC ಹಾದುಹೋಗಲಿದೆ ಎಂದು ಭಾರತ ಹೇಳಿದೆ.
 • ಭಾರತವು ಈ ಭೂಪ್ರದೇಶದ ಸ್ವರೂಪದಿಂದಾಗಿ – ಫಿಂಗರ್ 8 ರವರೆಗಿನ ಪ್ರದೇಶದಲ್ಲಿ ಹೆಚ್ಚಾಗಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದೆ – ಆದರೆ ಭಾರತೀಯ ಪಡೆಗಳು ಫಿಂಗರ್ 4 ಅನ್ನು ಮೀರಿ ಸಕ್ರಿಯ ನಿಯಂತ್ರಣವನ್ನು ಹೊಂದಿಲ್ಲ.
 • ಮತ್ತೊಂದೆಡೆ, ಚೀನಾ LAC ಯು ಫಿಂಗರ್ 2 ಮೂಲಕ ಹಾದುಹೋಗುತ್ತದೆ ಎಂದು ಹೇಳುತ್ತದೆ. ಇದು ಹೆಚ್ಚಾಗಿ ಲಘು ವಾಹನಗಳಲ್ಲಿ ಫಿಂಗರ್ 4 ರವರೆಗೆ ಮತ್ತು ಕೆಲವೊಮ್ಮೆ ಫಿಂಗರ್ 2 ವರೆಗೆ ಗಸ್ತು ತಿರುಗುತ್ತದೆ.

ಪ್ಯಾಂಗೊಂಗ್ ತ್ಸೊಗೆ ಹೊಂದಿಕೊಂಡಿರುವ ಪ್ರದೇಶಗಳನ್ನು, ಚೀನಾ ಏಕೆ ಆಕ್ರಮಿಸಿಕೊಳ್ಳಲು ಬಯಸುತ್ತದೆ?

 • ಭಾರತ ಮತ್ತು ಚೀನಾ ನಡುವಿನ 1962 ರ ಯುದ್ಧದ ಸಮಯದಲ್ಲಿ ಮುಂಚೂಣಿ ಯುದ್ಧಭೂಮಿಯಲ್ಲಿ ಒಂದಾದ ಚುಸುಲ್ ಕಣಿವೆ (Chusul Valley) ಗೆ ಇದು ತುಂಬಾ ಹತ್ತಿರದಲ್ಲಿರುವುದರಿಂದ ಪಂಗೊಂಗ್ ತ್ಸೊ ಆಯಕಟ್ಟಿನ ನಿರ್ಣಾಯಕ ಪ್ರದೇಶವಾಗಿದೆ.
 • ಎಲ್‌ಎಸಿ ಬಳಿ ಎಲ್ಲಿಯೂ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ.ಅಕ್ಸಾಯ್ ಚಿನ್ ಮತ್ತು ಲಾಸಾ-ಕಾಶ್ಗರ್ ಹೆದ್ದಾರಿಯನ್ನು (Aksai Chin and Lhasa-Kashgar highway) ಭಾರತವು ಆಕ್ರಮಿಸಿಕೊಳ್ಳುವ ಅಪಾಯವಿದೆ ಎಂಬುದು ಚೀನಾದ ಆತಂಕವಾಗಿದೆ.
 • ಈ ಹೆದ್ದಾರಿಗೆ ಎದುರಾಗುವ ಯಾವುದೇ ಬೆದರಿಕೆಯು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಾದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಮತ್ತು ಪಾಕಿಸ್ತಾನದ ಆಚೆಗೂ ಸಹ ಚೀನಾದ ಸಾಮ್ರಾಜ್ಯಶಾಹಿ ಯೋಜನೆಗಳಿಗೆ ಬೆದರಿಕೆಯೊಡ್ಡ ಬಲ್ಲದ್ದಾಗಿದೆ.

About Pangong Tso: ಪ್ಯಾಂಗೊಂಗ್ ತ್ಸೊ ಕುರಿತುಃ 

 • ಪ್ಯಾಂಗೊಂಗ್ ತ್ಸೊ ಎಂದರೆ ಅಕ್ಷರಶಃ “ಕಾನ್ಕ್ಲೇವ್ ಸರೋವರ” (conclave lake)

ಎಂದಾಗುತ್ತದೆ.

 • 14,000 ಅಡಿಗಳಷ್ಟು ಎತ್ತರವಿರುವ ಈ ಸರೋವರವು ಸುಮಾರು 135 ಕಿ.ಮೀ. ವಿಸ್ತೀರ್ಣ ಹೊಂದಿದೆ.
 • ಇದು ಟೆಥಿಸ್ ಜಿಯೋಸಿಂಕ್ಲೈನ್‌ನಿಂದ (Tethys geosyncline) ರೂಪುಗೊಂಡಿದೆ.
 • ಕಾರಕೋರಂ ಪರ್ವತ ಶ್ರೇಣಿ ಯು ಪಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿ ಕೊನೆಗೊಳ್ಳುತ್ತದೆ.

ಇದರ ದಕ್ಷಿಣದ ದಂಡೆಯಲ್ಲಿನ ಎತ್ತರದ ಮುರಿದ ಪರ್ವತಗಳು, ದಕ್ಷಿಣದಲ್ಲಿ ಸ್ಪಂಗೂರ್ ಸರೋವರದ (Spangur Lake) ಕಡೆಗೆ ಇಳಿಜಾರು ಹೊಂದಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ.

ವಿಶ್ವಸಂಸ್ಥೆಯ ಉನ್ನತ ಸ್ಥಾನದಲ್ಲಿ ಭಾರತ :


ಸಂದರ್ಭ:

 ಭಾರತವು ಶಾಶ್ವತ ವಲ್ಲದ ಸದಸ್ಯ ರಾಷ್ಟ್ರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (UNSC) ಪ್ರವೇಶಿಸಿದೆ ಮತ್ತು ಅದು ಎರಡು ವರ್ಷಗಳ ಕಾಲ ಈ ಮಂಡಳಿಯಲ್ಲಿ ಮುಂದುವರೆಯುತ್ತದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ :

 • ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 1950–51ರಿಂದ 2011–12ರವರೆಗೆ ಭಾರತವು ಏಳು ಬಾರಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
 • 1950-51ರಲ್ಲಿ, ಕೊರಿಯನ್ ಯುದ್ಧದ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಕೊರಿಯಾ ಗಣರಾಜ್ಯದ ಸಹಾಯಕ್ಕಾಗಿ ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಲು ಭಾರತ ಅಧ್ಯಕ್ಷತೆ ವಹಿಸಿತ್ತು.
 • 1972-73ರಲ್ಲಿ ಭಾರತವು ವಿಶ್ವಸಂಸ್ಥೆಯಲ್ಲಿ ಬಾಂಗ್ಲಾದೇಶದ ಸದಸ್ಯತ್ವಕ್ಕಾಗಿ ಬಲವಾಗಿ ಬೆಂಬಲಿಸಿತು. ಆದರೆ, ಖಾಯಂ ಸದಸ್ಯ ರಾಷ್ಟ್ರವೊಂದರ ವೀಟೋ ಕಾರಣ ದಿಂದಾಗಿ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ.
 • 1977-78ರಲ್ಲಿ ಭಾರತವು UNSC ಯಲ್ಲಿ ಆಫ್ರಿಕಾಕ್ಕೆ ಬಲವಾದ ಧ್ವನಿಯಾಗಿ ವರ್ಣಭೇದ ನೀತಿಯ ವಿರುದ್ಧ ಮಾತನಾಡಿತು. 1978 ರಲ್ಲಿ ನಮೀಬಿಯಾದ ಸ್ವಾತಂತ್ರ್ಯಕ್ಕಾಗಿ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ UNSC ಯಲ್ಲಿ ಮಾತನಾಡಿದರು.
 • 1984-85ರಲ್ಲಿ, ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ಪ್ಯಾಲೆಸ್ಟೈನ್ ಮತ್ತು ಲೆಬನಾನ್‌ಗಳ ವಿವಾದಗಳನ್ನು ಬಗೆಹರಿಸಲು UNSC ಯಲ್ಲಿ ಭಾರತ ಪ್ರಮುಖ ಧ್ವನಿಯಾಗಿತ್ತು.
 • 2011-2012ರಲ್ಲಿ, ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ, ಶಾಂತಿಪಾಲನೆ, ಭಯೋತ್ಪಾದನೆ ನಿಗ್ರಹ ಮತ್ತು ಆಫ್ರಿಕಾದ ದೇಶಗಳಿಗೆ ಬಲವಾದ ಧ್ವನಿಯಾಗಿತ್ತು.
 • ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ

UNSC 1373 ಸಮಿತಿ, ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಬಗ್ಗೆ 1566 ಕಾರ್ಯನಿರತ ಗುಂಪು , ಮತ್ತು ಭಯೋತ್ಪಾದಕ ಕೃತ್ಯಗಳಿಂದ ಸುರಕ್ಷತೆ, ಮತ್ತು ಸೊಮಾಲಿಯಾ ಮತ್ತು ಎರಿಟ್ರಿಯಾಕ್ಕೆ ಸಂಬಂಧಿಸಿದ ಭದ್ರತಾ ಮಂಡಳಿ 751/1907 ಸಮಿತಿಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ.

ವಿಶ್ವಸಂಸ್ಥೆಯ ಸುಧಾರಣೆಗಳು:

 ಭದ್ರತಾ ಮಂಡಳಿಯನ್ನು ಶಾಶ್ವತ ಮತ್ತು ಶಾಶ್ವತವಲ್ಲದ ಎರಡೂ ವಿಭಾಗಗಳಲ್ಲಿ ವಿಸ್ತರಿಸುವುದು ಅತ್ಯಗತ್ಯ ಎಂದು ನವದೆಹಲಿ ಆಗ್ರಹಿಸಿದೆ.

 • ಜನಸಂಖ್ಯೆ, ಪ್ರಾದೇಶಿಕ ಗಾತ್ರ, ಜಿಡಿಪಿ, ಆರ್ಥಿಕ ಸಾಮರ್ಥ್ಯ, ನಾಗರಿಕ ಪರಂಪರೆ, ಸಾಂಸ್ಕೃತಿಕ ವೈವಿಧ್ಯತೆ, ರಾಜಕೀಯ ವ್ಯವಸ್ಥೆ ಮತ್ತು ವಿಶ್ವಸಂಸ್ಥೆಯ ಕಾರ್ಯಾಚರಣೆಗಳಿಗೆ, ವಿಶೇಷವಾಗಿ ಯುಎನ್ ಶಾಂತಿಪಾಲನಾ ಕಾರ್ಯಾಚರಣೆಗಳಂತಹ ಯಾವುದೇ ವಸ್ತುನಿಷ್ಠ ಮಾನದಂಡಗಳಿಂದ ಭಾರತ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಅರ್ಹವಾಗಿದೆ ಎಂದು ಅದು ಹೇಳಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆಯ ಉದ್ದೇಶಗಳು, ಕಾರ್ಯನಿರ್ವಹಣೆ,ಮಿತಿಗಳು, ಪುನರುಜ್ಜೀವನಗೊಳಿಸುವಿಕೆ; ಬಫರ್ ಸ್ಟಾಕ್ಗಳು / ತುರ್ತು ಸಂಗ್ರಹ ವ್ಯವಸ್ಥೆ ​​ಮತ್ತು ಆಹಾರ ಸುರಕ್ಷತೆಯ ಸಮಸ್ಯೆಗಳು; ತಂತ್ರಜ್ಞಾನ ಕಾರ್ಯಾಚರಣೆಗಳು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ: PM ಕಿಸಾನ್ :


ಸಂದರ್ಭ :

ಪಿಎಂ-ಕಿಸಾನ್‌ನ ಅನರ್ಹ ಫಲಾನುಭವಿಗಳಿಗೆ ರೂ.1,364 ಕೋಟಿ ಸಂದಾಯ :

ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಬಗ್ಗೆ:

 • ಇದನ್ನು ಕೇಂದ್ರ ಪುರಸ್ಕೃತ ಯೋಜನೆಯಾಗಿ ಭಾರತ ಸರ್ಕಾರವು ಅನುಷ್ಠಾನಗೊಳಿಸಿದೆ.
 • ಅನೇಕ ಸಣ್ಣ ಮತ್ತು ಅಂಚಿನ ರೈತರ ಆದಾಯದ ಮೂಲವನ್ನು ಹೆಚ್ಚಿಸಲು ಈ ಯೋಜನೆಯನ್ನು ಪರಿಚಯಿಸಲಾಯಿತು.
 • ಈ ಯೋಜನೆಯಡಿಯಲ್ಲಿ ಹೆಚ್ಚಿನ ಆದಾಯದ ಸ್ಥಿತಿಗೆ ಸಂಬಂಧಿಸಿದ ಕೆಲವು ಮಾನದಂಡಗಳಿಗೆ ಒಳಪಟ್ಟು, ವರ್ಷಕ್ಕೆ ರೂ .6000 – ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
 • ಫಲಾನುಭವಿಗಳನ್ನು ಗುರುತಿಸುವ ಸಂಪೂರ್ಣ ಜವಾಬ್ದಾರಿಯು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೇಲಿದೆ.

 ವ್ಯಾಪ್ತಿ :

ಈ ಯೋಜನೆಯು ಆರಂಭದಲ್ಲಿ ದೇಶದಾದ್ಯಂತ

2 ಹೆಕ್ಟೇರ್ ವರೆಗೆ ಕೃಷಿ ಭೂಮಿಯನ್ನು ಹೊಂದಿರುವ  ಎಲ್ಲಾ ಸಣ್ಣ ಮತ್ತು ಅಂಚಿನ

ರೈತ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡಿತ್ತು, ನಂತರ ಇದರ ವ್ಯಾಪ್ತಿಯನ್ನು 01.06.2019 ರಿಂದ ಜಮೀನುಗಳ ಗಾತ್ರವನ್ನು ಲೆಕ್ಕಿಸದೆ ದೇಶದ ಎಲ್ಲಾ ರೈತ ಕುಟುಂಬಗಳಿಗೆ  ವಿಸ್ತರಿಸಲಾಗಿದೆ.

ವಿನಾಯಿತಿಗಳು: / ಅಪವಾದಗಳು :

 ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿದಾರರಂತಹ ಶ್ರೀಮಂತ ರೈತರನ್ನು, ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮುಂತಾದ ವೃತ್ತಿಪರರು ಮತ್ತು ತಿಂಗಳಿಗೆ ಕನಿಷ್ಠ ರೂ .10,000 / – ಪಿಂಚಣಿ ಪಡೆಯುವ ಪಿಂಚಣಿದಾರರನ್ನು (ಎಂಟಿಎಸ್ / ಕ್ಲಾಸ್ IV / ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ) ಯೋಜನೆಯಿಂದ ಹೊರಗಿಡಲಾಗಿದೆ.

ರಾಜ್ಯಗಳ ಇದೇ ರೀತಿಯ ಕಾರ್ಯಕ್ರಮಗಳು:

 • ಭವಂತರ್ ಭುಗ್ತಾನ್ ಯೋಜನೆ- ಮಧ್ಯಪ್ರದೇಶ.
 • ರೈತು ಬಂಧು ಯೋಜನೆ- ತೆಲಂಗಾಣ.
 • ಜೀವನೋಪಾಯ ಮತ್ತು ಆದಾಯ ವೃದ್ಧಿಗೆ ಕ್ರುಶಕ್ ನೆರವು (ಕಾಲಿಯಾ) – ಒಡಿಶಾ.

Krushak Assistance for Livelihood and Income augmentation (KALIA) –  Odisha.

 •  ಭಾರತ ಸರಕಾರದ M ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುವ ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ  ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.4000/-ಗಳನ್ನು ಎರಡು ಸಮಾನ ಕಂತುಗಳಲ್ಲಿ (ರೂ.2000/-ಪ್ರತಿ ಕಂತು) ನೇರ ನಗದು ವರ್ಗಾವಣೆ ಮುಖಾಂತರ ನೆರವು ನೀಡಲಾಗುವುದು.

 

ವಿಷಯಗಳು: ಬಾಹ್ಯಾಕಾಶದಲ್ಲಿ ಜಾಗೃತಿ / ಅರಿವು.

 ಗಗನಯಾನ ಯೋಜನೆಯ  ಭಾಗವಾದ ಇಬ್ಬರು ಫ್ಲೈಟ್ ಸರ್ಜನ್‌ಗಳಿಗೆ ರಷ್ಯಾದಲ್ಲಿ ತರಬೇತಿ :


ಸಂದರ್ಭ:

ಗಗನಯಾನ ಯೋಜನೆಗಾಗಿ ರಷ್ಯಾ ಭಾರತದ ಇಬ್ಬರು ಫ್ಲೈಟ್ ಸರ್ಜನ್ಗಳಿಗೆ ಬಾಹ್ಯಾಕಾಶ ಔಷಧದಲ್ಲಿ ತರಬೇತಿ ನೀಡಲಿದೆ.

ಫ್ಲೈಟ್ ಸರ್ಜನ್ ಎಂದರೆ :

 • ಏರೋಸ್ಪೇಸ್ ಔಷಧದಲ್ಲಿ ಪರಿಣತಿ ಪಡೆದ ಭಾರತೀಯ ವಾಯುಪಡೆಯ ವೈದ್ಯರು.
 • ಉಡಾವಣೆಯ ಮೊದಲು,ಸಮಯದಲ್ಲಿ ಮತ್ತು ನಂತರ ಗಗನಯಾತ್ರಿಗಳ ಆರೋಗ್ಯದ ಜವಾಬ್ದಾರಿ ವಹಿಸುವವರಾಗಿದ್ದಾರೆ.

ಭಾರತೀಯ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮ:

2022 ರಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಮೊದಲು ಇಸ್ರೋ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ, ಗಗನ ಯಾನ ವನ್ನು ಪ್ರಾರಂಭಿಸುವ ಗುರಿ ಹೊಂದಿದೆ.

ಯೋಜನೆಯ ಉದ್ದೇಶಗಳು:

 • ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಮಟ್ಟಗಳ ಬಲವರ್ಧನೆ.
 • ಹಲವಾರು ಸಂಸ್ಥೆಗಳು, ಶೈಕ್ಷಣಿಕ ಮತ್ತು ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ಯೋಜನೆ.
 • ಕೈಗಾರಿಕಾ ಬೆಳವಣಿಗೆಯ ಸುಧಾರಣೆ.
 • ಸಾಮಾಜಿಕ ಲಾಭಕ್ಕಾಗಿ ತಂತ್ರಜ್ಞಾನದ ಅಭಿವೃದ್ಧಿ.
 • ಯುವಕರನ್ನು ಪ್ರೋತ್ಸಾಹಿಸುವುದು.
 • ಅಂತರರಾಷ್ಟ್ರೀಯ ಸಹಯೋಗವನ್ನು ವೃದ್ಧಿಸುವುದು.

ಭಾರತಕ್ಕೆ ಮಾನವಸಹಿತ ಬಾಹ್ಯಾಕಾಶ ಯೋಜನೆಯ ಪ್ರಸ್ತುತತೆ:

ಕೈಗಾರಿಕೆಗಳಿಗೆ ಉತ್ತೇಜನ:

ಹೆಚ್ಚಿನ ಬೇಡಿಕೆಯಿರುವ ಬಾಹ್ಯಾಕಾಶ ಯಾತ್ರೆಗಳಲ್ಲಿ ಭಾಗವಹಿಸುವುದರಿಂದ ಭಾರತೀಯ ಉದ್ಯಮಕ್ಕೆ ದೊಡ್ಡ ಅವಕಾಶಗಳಿವೆ.ಗಗನ್ಯಾನ್ ಮಿಷನ್ ತನ್ನ ಅವಶ್ಯಕ ಉಪಕರಣಗಳಿಗಾಗಿ ಸುಮಾರು 60% ನಷ್ಟು ಉಪಕರಣಗಳನ್ನು ಭಾರತದ ಖಾಸಗಿ ವಲಯದಿಂದ ಪಡೆಯಲಿದೆ.

ಉದ್ಯೋಗ: ಇಸ್ರೊ ಮುಖ್ಯಸ್ಥರ ಪ್ರಕಾರ, ಗಗನ್ಯಾನ್ ಮಿಷನ್ 15,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಅವುಗಳಲ್ಲಿ 13,000 ಖಾಸಗಿ ಉದ್ಯಮದಲ್ಲಿವೆ

ಮತ್ತು ಬಾಹ್ಯಾಕಾಶ ಸಂಸ್ಥೆಗೆ ಹೆಚ್ಚುವರಿ 900 ಮಾನವಶಕ್ತಿ ಅಗತ್ಯವಿರುತ್ತದೆ.

ತಾಂತ್ರಿಕ ಅಭಿವೃದ್ಧಿ: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಾನವ ಬಾಹ್ಯಾಕಾಶ ಹಾರಾಟಗಳು ಮುಂಚೂಣಿಯಲ್ಲಿವೆ. ಮಾನವಸಹಿತ ಬಾಹ್ಯಾಕಾಶ ಹಾರಾಟಗಳು ಭಾರತಕ್ಕೆ ಒಡ್ಡುವ ಸವಾಲುಗಳು ಮತ್ತು ಆ ಕಾರ್ಯಗಳನ್ನು ತೆಗೆದುಕೊಳ್ಳುವುದರಿಂದ ಆಗುವ ಲಾಭಗಳು ಅಪಾರವಾಗಿವೆ ಮತ್ತು ಇದು ಭಾರತದಲ್ಲಿ ತಾಂತ್ರಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ: ಇದು ಉತ್ತಮ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಸರಿಯಾದ ಉಪಕರಣಗಳು ಮತ್ತು ಹೆಚ್ಚಿನ ಸಂಖ್ಯೆಯ ಸಂಶೋಧಕರೊಂದಿಗೆ, ವಸ್ತು ಸಂಸ್ಕರಣೆ, ಖಗೋಳ-ಜೀವಶಾಸ್ತ್ರ, ಸಂಪನ್ಮೂಲ ಗಣಿಗಾರಿಕೆ, ಗ್ರಹಗಳ ರಸಾಯನಶಾಸ್ತ್ರ, ಗ್ರಹಗಳ ಕಕ್ಷೀಯ  ಚಲನಶಾಸ್ತ್ರ ಹಲವು ಕ್ಷೇತ್ರಗಳಲ್ಲಿ HSF ಗಮನಾರ್ಹ ಸಂಶೋಧನೆ ನಡೆಸುತ್ತದೆ.

ಅಭಿಪ್ರೇರಣೆ: ಮಾನವ ಬಾಹ್ಯಾಕಾಶ ಹಾರಾಟವು ಯುವಕರಿಗೆ ಮತ್ತು ರಾಷ್ಟ್ರೀಯ ಸಾರ್ವಜನಿಕ ಮುಖ್ಯವಾಹಿನಿಗೆ  ಪ್ರೇರಣೆಯನ್ನು ಒದಗಿಸುತ್ತದೆ. ಇದು ಯುವ ಪೀಳಿಗೆಯನ್ನು, ಗುರುತಿಸಬಹುದಾದ ಯಶಸ್ಸನ್ನು ಸಾಧಿಸಲು ಪ್ರೇರೇಪಿಸುತ್ತದೆ ಮತ್ತು ಅವರು ಭವಿಷ್ಯದ  ಸವಾಲುಗಳನ್ನು ಎದುರಿಸಲು ನ್ಯಾಯಸಮ್ಮತ ಪಾತ್ರವನ್ನು ವಹಿಸಲು ಅನುವು ಮಾಡಿಕೊಡುತ್ತದೆ.

ಪ್ರತಿಷ್ಠೆ : ಮಾನವ ಬಾಹ್ಯಾಕಾಶ ಹಾರಾಟವನ್ನು ಪ್ರಾರಂಭಿಸಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಗಗನಯಾನವು ರಾಷ್ಟ್ರಕ್ಕೆ ಪ್ರತಿಷ್ಠೆಯನ್ನು ತರುವುದಲ್ಲದೆ, ಬಾಹ್ಯಾಕಾಶ ಉದ್ಯಮದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವ ಭಾರತದ ಪಾತ್ರವನ್ನು ಸ್ಥಾಪಿಸುತ್ತದೆ.

 

ವಿಷಯಗಳು: ಆಂತರಿಕ ಭದ್ರತೆಗೆ ಸವಾಲುಗಳನ್ನು ಸೃಷ್ಟಿಸುವಲ್ಲಿ ಬಾಹ್ಯ ಮತ್ತು ರಾಜ್ಯದ ಒಳಗಿನ ವ್ಯಕ್ತಿಗಳ ಪಾತ್ರ :

ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ:


UAPA-Unlawful Activities (Prevention) Act:

ಸಂದರ್ಭ :

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕ ವಹೀದ್ ಪ್ಯಾರಾ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (UAPA) ಪ್ರಕರಣ ದಾಖಲಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆ ಕುರಿತುಃ

1967 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನು ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಸಂಘಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಹೊಂದಿದೆ.

ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದು ಅದರ ಮೂಲಕ ಕೇಂದ್ರವು ಒಂದು ಚಟುವಟಿಕೆಯನ್ನು ಕಾನೂನುಬಾಹಿರವೆಂದು ಭಾವಿಸಿದರೆ ಸರ್ಕಾರವು ಅಧಿಕೃತ ಗೆಜೆಟ್ ಮೂಲಕ ಅದನ್ನು ಘೋಷಿಸಬಹುದು.

 • ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದಾಗಿದೆ.

ಮುಖ್ಯ ಅಂಶಗಳು:

ಯುಎಪಿಎ ಅಡಿಯಲ್ಲಿ, ಭಾರತೀಯ ಮತ್ತು ವಿದೇಶಿ ಪ್ರಜೆಗಳು, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬಹುದು. 

 • ಭಾರತದ ಹೊರಗಿನ ವಿದೇಶಿ ನೆಲದಲ್ಲಿ ಅಪರಾಧ ನಡೆದರೂ ಅಪರಾಧಿಗಳಿಗೆ ಈ ಕಾಯ್ದೆಯು ಅದೇ ರೀತಿ ಅನ್ವಯಿಸುತ್ತದೆ.
 • ಯುಎಪಿಎ ಅಡಿಯಲ್ಲಿ, ತನಿಖಾ ಸಂಸ್ಥೆ ಬಂಧನದ ನಂತರ ಗರಿಷ್ಠ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬಹುದು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಅವಧಿಯನ್ನು ಇನ್ನಷ್ಟು ವಿಸ್ತರಿಸಬಹುದು.

2019 ರ ತಿದ್ದುಪಡಿಗಳ ಪ್ರಕಾರ:

 • NIA ಯಿಂದ ಪ್ರಕರಣದ ತನಿಖೆ ನಡೆದಾಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಥವಾ ಲಗತ್ತಿಸಲು ಅನುಮತಿ ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮಹಾನಿರ್ದೇಶಕರಿಗೆ ಈ ಕಾಯಿದೆ ಅಧಿಕಾರ ನೀಡುತ್ತದೆ.
 • DSP ಅಥವಾ ACP ಅಥವಾ ರಾಜ್ಯದ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಿದ ಪ್ರಕರಣಗಳಿಗೆ ಹೆಚ್ಚುವರಿಯಾಗಿ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸಲು ಇನ್ಸ್‌ಪೆಕ್ಟರ್ ಅಥವಾ ಹೆಚ್ಚಿನ ಹುದ್ದೆಯ NIA ಅಧಿಕಾರಿಗಳಿಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.
 • ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸುವ ಅವಕಾಶವೂ ಇದರಲ್ಲಿ ಸೇರಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


Dzukou ಕಣಿವೆ : Dzukou Valley :

ಸುದ್ದಿಯಲ್ಲಿರಲು ಕಾರಣ?

ಮಣಿಪುರ-ನಾಗಾಲ್ಯಾಂಡ್ ಗಡಿಯನ್ನು ಸುತ್ತುವರೆದಿರುವ Dzukou ಕಣಿವೆಯಲ್ಲಿನ ಕಾಡ್ಗಿಚ್ಚನ್ನು, ಅದು ಭುಗಿಲೆದ್ದ ಎರಡು ವಾರಗಳ ನಂತರ ನ೦ದಿಸಲಾಗಿದೆ / ಹತೋಟಿಗೆ ಬಂದಿದೆ.

Dzukou ಕಣಿವೆ ಕುರಿತು:

 • ನಾಗಾಲ್ಯಾಂಡ್ ಮತ್ತು ಮಣಿಪುರ ರಾಜ್ಯಗಳ ಗಡಿಯಲ್ಲಿದೆ.
 • ಈ ಕಣಿವೆಯಲ್ಲಿ ಮಾತ್ರ ಕಂಡುಬರುವ Dzüko Lily ಗೆ ಇದು ಪ್ರಸಿದ್ಧವಾಗಿದೆ.
 • ಏಷ್ಯನ್ ಹೆದ್ದಾರಿ ನಂ –1 ಮತ್ತು ರಾಷ್ಟ್ರೀಯ ಹೆದ್ದಾರಿ

ನಂ -2 ಗಳು ಅದರ ಪಾದಬೆಟ್ಟಗಳ  ಮೂಲಕ ಹಾದುಹೋಗುತ್ತವೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos