ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಏಕೆ ಮರುನಾಮಕರಣ ಮಾಡಲಾಗುತ್ತಿದೆ?
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ನ್ಯಾಯಾಂಗ ಮರುಪರಿಶೀಲನೆ/ ವಿಮರ್ಶೆ :
2. ವರ್ಷಗಳ ಹಳೆಯ ವಿವಾದವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿದ ಗಲ್ಫ್ ನಾಯಕರು.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಕೊಚ್ಚಿ-ಮಂಗಳೂರು (ಎಲ್‌ಎನ್‌ಜಿ) ಅನಿಲ ಪೈಪ್‌ಲೈನ್.
2. ಏಷ್ಯನ್ (ವಾಟರ್ ಬರ್ಡ್) ನೀರು ಹಕ್ಕಿ ಗಣತಿ.
3. ಇಂಟರ್ನೆಟ್ ಸ್ಥಗಿತಗೊಳ್ಳುವಿಕೆಯಿಂದ ಉಂಟಾಗುವ ಆರ್ಥಿಕ ಪರಿಣಾಮ;
ಪೂರ್ವ ಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು :
1. ಸಾಗರಮಾಲಾ ಸೀ-ಪ್ಲೇನ್ ( ಕಡಲ ವಿಮಾನ) ಸೇವೆಗಳು .
2. TRIFOOD ಉದ್ಯಾನಗಳು.
ಸಾಮಾನ್ಯ ಅಧ್ಯಯನ ಪತ್ರಿಕೆ – 1
ವಿಷಯಗಳು : ಆಧುನಿಕ ಭಾರತದ ಇತಿಹಾಸ – ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.
ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಏಕೆ ಮರುನಾಮಕರಣ ಮಾಡಲಾಗುತ್ತಿದೆ?
ಸಂದರ್ಭ :
- ಮಹಾರಾಷ್ಟ್ರದ ಔರಂಗಾಬಾದ್ ನಗರವನ್ನು ಸಂಭಾಜಿ ನಗರವೆಂದು ಮರುನಾಮಕರಣ ಮಾಡುವುದು ಶಿವಸೇನೆಯ ಬಹುದಿನಗಳ ಬೇಡಿಕೆಯಾಗಿತ್ತು.
- ಕ್ರಿ.ಶ.1610 ರಲ್ಲಿ ನಿಜಾಂಶಾಹಿ ರಾಜವಂಶದ ಮಲಿಕ್ ಅಂಬರ್ ಔರಂಗಾಬಾದನ್ನು ನಿರ್ಮಿಸಿದರು.
- ಇದನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ಮೊಘಲ್ ಚಕ್ರವರ್ತಿ ಔರಂಗಜೇಬ್ ಇದಕ್ಕೆ ಔರಂಗಾಬಾದ್ ಎಂದು ಮರುನಾಮಕರಣ ಮಾಡಿದನು.
ಮರುನಾಮಕರಣಕ್ಕೆ ಏಕೆ ಈ ಹಕ್ಕೊತ್ತಾಯ ?
ಕೊನೆಯುಸಿರಿರುವವರೆಗೂ ಔರಂಗಾಬಾದ್‌ನಲ್ಲಿ ವಾಸಿಸುತ್ತಿದ್ದ ಔರಂಗಜೇಬ್, ಮರಾಠಾ ಶ್ರೇಷ್ಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಂಭಾಜಿ ಮಹಾರಾಜ್‌ನನ್ನು ಹಿಂಸಿಸಿ ಕೊಂದನು. ಆದ ಕಾರಣ, ಈ ನಗರಕ್ಕೆ ಸಂಭಾಜಿ ನಗರ ಎಂದು ಹೆಸರಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.
ಹಿನ್ನೆಲೆ:
ಔರಂಗಾಬಾದ್ ಮಹಾನಗರ ಪಾಲಿಕೆಯು (AMC) 1995 ರಲ್ಲಿ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಅಂಗೀಕರಿಸಿತು.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು : ವಿಭಿನ್ನ ಅಂಗಗಳ ನಡುವೆ ಅಧಿಕಾರದ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ನ್ಯಾಯಾಂಗ ಮರುಪರಿಶೀಲನೆ/ ವಿಮರ್ಶೆ :
ಸಂದರ್ಭಃ
ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಒಂದು ದೊಡ್ಡ ಅಥವಾ “ಉತ್ತುಂಗವಾದ” ನ್ಯಾಯಾಂಗ ಪರಿಶೀಲನೆಯ ಅಗತ್ಯವಿರುವ ಒಂದು ಅನನ್ಯ ಯೋಜನೆ ಎಂದು ಪರಿಗಣಿಸಲು ಅಥವಾ ವಿಶೇಷವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕೋರ್ಟ್ ನ ಅಭಿಪ್ರಾಯವೇನು?
- ಸಾಂವಿಧಾನಿಕ ತತ್ವಗಳನ್ನು ಅನುಸರಿಸುವವರೆಗೂ ನ್ಯಾಯಾಲಯದ ಹಸ್ತಕ್ಷೇಪವಿಲ್ಲದೆ ನೀತಿ ವಿಷಯಗಳಲ್ಲಿ “ದೋಷಗಳು ಅಥವಾ ಯಶಸ್ಸನ್ನು ಸಾಧಿಸಲು” ಸರ್ಕಾರಕ್ಕೆ ಅರ್ಹತೆ ಇದೆ ಎಂಬುದು ಸುಪ್ರೀಂಕೋರ್ಟ್‌ನ ಬಹುಮತದ ಅಭಿಪ್ರಾಯವಾಗಿದೆ.
- ಚುನಾಯಿತ ಸರ್ಕಾರದ ಆದ್ಯತೆಗಳನ್ನು ವಿಚಾರಣೆಗೊಳಪಡಿಸುವುದು ನ್ಯಾಯಾಲಯದ ಕಾಳಜಿಯ ವಿಷಯವಲ್ಲ,ನ್ಯಾಯಾಂಗ ಪರಿಶೀಲನೆಯು ಎಂದಿಗೂ ಸರ್ಕಾರದ ಮನಸ್ಸಿನಲ್ಲಿರುವುದನ್ನು ತಿಳಿದುಕೊಳ್ಳುವ ಮೂಲಕ ಅದರ ನಿರ್ಧಾರದ ಸಿಂಧುತ್ವವನ್ನು ಪರೀಕ್ಷಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿತು.
ನ್ಯಾಯಾಂಗ ಮರುಪರಿಶೀಲನೆ/ ವಿಮರ್ಶೆ ಎಂದರೇನು?
- ನ್ಯಾಯಾಂಗ ವಿಮರ್ಶೆ ಎಂದರೆ ಶಾಸಕಾಂಗ ಮತ್ತು ಕಾರ್ಯಾಂಗಗಳ ಯಾವುದೇ ಕಾಯ್ದೆ ಅಥವಾ ಆದೇಶವನ್ನು ಪರಿಶೀಲಿಸುವ ಮತ್ತು ಪೀಡಿತ ವ್ಯಕ್ತಿಯಿಂದ ಪ್ರಶ್ನಿಸಲ್ಪಟ್ಟಾಗ ಆ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಉಚ್ಚರಿಸುವ ನ್ಯಾಯಾಂಗದ ಅಧಿಕಾರವಾಗಿದೆ.
ಪ್ರಸ್ತುತ , ಭಾರತದಲ್ಲಿ ನ್ಯಾಯಾಂಗ ವಿಮರ್ಶೆ :
- ನ್ಯಾಯಾಂಗ ವಿಮರ್ಶೆಯ ಅಧಿಕಾರವು ಭಾರತದ ಸಂವಿಧಾನದಿಂದಲೇ ಪ್ರದತ್ತವಾಗಿದೆ.(ಸಂವಿಧಾನದ 13, 32, 136, 142 ಮತ್ತು 147 ನೇ ವಿಧಿಗಳಲ್ಲಿ ಅಡಕವಾಗಿದೆ).
- ಸಂವಿಧಾನದ ಭಾಗ III ರಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮತ್ತು ಜಾರಿಗೊಳಿಸಲು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ನೀಡಲಾಗಿದೆ.
- ಸಂವಿಧಾನದ 13 ನೇ ವಿಧಿಯು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ದೇಶದ ನಾಗರಿಕರಿಂದ“ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ತೆಗೆದುಹಾಕುವ” ಕಾನೂನುಗಳನ್ನು ಜಾರಿಗೊಳಿಸುವುದನ್ನು ನಿಷೇಧಿಸುತ್ತದೆ.
- ಆರ್ಟಿಕಲ್ 13 ರ ನಿಬಂಧನೆಗಳು ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುತ್ತವೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಉಲ್ಲಂಘಿಸಿದಲ್ಲಿ ಯಾವುದೇ ಕಾನೂನನ್ನು “ಶೂನ್ಯ ಮತ್ತು ಅನೂರ್ಜಿತ” ಎಂದು ಪರಿಗಣಿಸುತ್ತವೆ.
ನ್ಯಾಯಾಂಗ ಕ್ರಿಯಾಶೀಲತೆ ಮತ್ತು ನ್ಯಾಯಾಂಗ ಸಂಯಮದ ನಡುವಿನ ವ್ಯತ್ಯಾಸವೇನು?
ನ್ಯಾಯಾಂಗ ಕ್ರಿಯಾಶೀಲತೆಯು ಸರ್ಕಾರದ ಕಾರ್ಯಗಳನ್ನು ನಿರ್ಧರಿಸಲು ನ್ಯಾಯಾಂಗ ವಿಮರ್ಶೆಯ ಅಧಿಕಾರದ ಹಕ್ಕು (ಅಥವಾ, ಕೆಲವೊಮ್ಮೆ, ಅನ್ಯಾಯದ ಹಕ್ಕು). ನ್ಯಾಯಾಂಗ ಸಂಯಮವು ಇಂತಹ ಕೃತ್ಯಗಳನ್ನು ಮಾಡಲು ನಿರಾಕರಿಸುವುದು, ಈ ವಿಷಯವನ್ನು ಶಾಸಕಾಂಗದ ಸುಪರ್ದಿಗೆ ಬಿಡುವುದಾಗಿದೆ.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ವರ್ಷಗಳ ಹಳೆಯ ವಿವಾದವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿದ ಗಲ್ಫ್ ನಾಯಕರು.
ಸಂದರ್ಭಃ
ಸೌದಿ ಅರೇಬಿಯಾ ಮತ್ತು ಕತಾರ್ ನಾಯಕರು ಸಾರ್ವಜನಿಕವಾಗಿ ಅಪ್ಪಿಕೊಂಡ ನಂತರ ಕೊಲ್ಲಿ ನಾಯಕರು “ಒಗ್ಗಟ್ಟಿನ ಮತ್ತು ಸ್ಥಿರತೆ” ಒಪ್ಪಂದಕ್ಕೆ ಸಹಿ ಹಾಕಿದರು, ಆ ಮೂಲಕ ಮೂರು ವರ್ಷಗಳ ದೀರ್ಘಾವಧಿಯ ಬಿರುಕಿನ ನಂತರ ದೋಹಾವನ್ನು ಮತ್ತೆ ಪ್ರಾದೇಶಿಕ ವಲಯಕ್ಕೆ ಕರೆತಂದರು.
ಏನಿದು ವಿವಾದ ?
ಕತಾರ್ ದೇಶವು,ಇರಾನ್ ನೊಂದಿಗೆ ತುಂಬಾ ಆಪ್ತವಾಗಿದೆ ಮತ್ತು ಮೂಲಭೂತವಾದಿ ಇಸ್ಲಾಮಿಸ್ಟ್ ಗುಂಪುಗಳನ್ನು ಬೆಂಬಲಿಸಿದೆ ಎಂದು ಆರೋಪಿಸಿದ ಸೌದಿ ಅರೇಬಿಯಾ 2017 ರ ಜೂನ್‌ನಲ್ಲಿ ಕತಾರ್‌ನೊಂದಿಗಿನ ಎಲ್ಲ ರೀತಿಯ ಸಂಬಂಧ ಮತ್ತು ಸಾರಿಗೆ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಕೊಲ್ಲಿ ಮತ್ತು ಅದರಾಚೆಗಿನ ದೇಶಗಳ ಒಕ್ಕೂಟವನ್ನು ಮುನ್ನಡೆಸಿತು. ಆದರೆ, ಈ ಆರೋಪಗಳನ್ನು ದೋಹಾ ನಿರಾಕರಿಸಿದೆ.
ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಏಕೆ ಪ್ರಮುಖವಾಗಿದೆ ?
- ಮಧ್ಯಪ್ರಾಚ್ಯದಲ್ಲಿ ಯಾವುದೇ ರೀತಿಯ ಅಸ್ಥಿರತೆಯು ತೈಲ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಈ ಹೆಚ್ಚಿದ ಬೆಲೆಗಳಿಂದಾಗಿ, ತೈಲ ಆಮದು ರಾಷ್ಟ್ರಗಳು ಇಂಧನಕ್ಕಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
- ಕತಾರ್ ವಿಶ್ವದ ಅತಿದೊಡ್ಡ LNG ಪೂರೈಕೆದಾರ ರಾಷ್ಟ್ರವಾಗಿದ್ದು ಈಜಿಪ್ಟ್ ಮತ್ತು ಸಂಯುಕ್ತ ಅರಬ್ ಸಂಸ್ಥಾನಗಳು (UAE) ಪ್ರಮುಖ ಆಮದು ದೇಶಗಳಾಗಿವೆ.
- ಭಾರತವು ತನ್ನ 90% ನೈಸರ್ಗಿಕ ಅನಿಲದ ಅವಶ್ಯಕತೆಗಳಿಗಾಗಿ ಕತಾರ್ ಅನ್ನು ಅವಲಂಬಿಸಿದೆ.
- ಕತಾರ್‌ನ ಸಾರ್ವಭೌಮ ಸಂಪತ್ತು ನಿಧಿ (Sovereign Wealth Fund) ಮತ್ತು ಇತರ ಸರ್ಕಾರಿ ಸ್ವಾಮ್ಯದ ಉದ್ಯಮಗಳು ಮತ್ತು ಕತಾರಿ ಖಾಸಗಿ ಹೂಡಿಕೆದಾರರು ಭಾರತದ ಮೂಲಸೌಕರ್ಯ ಕ್ಷೇತ್ರದಲ್ಲಿನ ಹೂಡಿಕೆ ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ಕೊಚ್ಚಿ-ಮಂಗಳೂರು (ಎಲ್‌ಎನ್‌ಜಿ) ಅನಿಲ ಪೈಪ್‌ಲೈನ್:
ಸಂದರ್ಭ :
- ಕೊಚ್ಚಿನ್‌ನಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಪೂರೈಸುವ 450 ಕಿ.ಮೀ. ಉದ್ದದ ಪೈಪ್‌ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಿದರು.
- ‘ಒಂದು ರಾಷ್ಟ್ರ ಒಂದು ಅನಿಲ ಸ್ಥಾವರ’ ಯೋಜನೆಯಡಿ ಈ ಪೈಪ್‌ಲೈನ್ ನಿರ್ಮಿಸಲಾಗಿದ್ದು, ನಿತ್ಯ 1.2 ಕೋಟಿ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮರ್ಥ್ಯ ಹೊಂದಿದೆ. ಆ ಮೂಲಕ ಇದು ಇನ್ನೂ 21 ಲಕ್ಷ ಪಿಎನ್‌ಜಿ ಸಂಪರ್ಕಗಳನ್ನು ಒದಗಿಸುತ್ತದೆ.
ಮುಂದೆ ಏನು?
- ಭಾರತವನ್ನು ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಯನ್ನಾಗಿ ಮಾಡುವ ಪ್ರಯತ್ನಗಳ ಭಾಗವಾಗಿ, ಇನ್ನೂ 10,000 CNG (ಸಂಕುಚಿತ ನೈಸರ್ಗಿಕ ಅನಿಲ) ಕೇಂದ್ರಗಳನ್ನು ತೆರೆಯಲಾಗುವುದು ಮತ್ತು ಮುಂಬರುವ ದಿನಗಳಲ್ಲಿ ಲಕ್ಷಾಂತರ PNG (ಕೊಳವೆ ನೈಸರ್ಗಿಕ ಅನಿಲ) ಗೃಹ ಸಂಪರ್ಕಗಳನ್ನು ನೀಡಲಾಗುವುದು.
- ಅಗ್ಗದ, ಅನುಕೂಲಕರ ಮತ್ತು ಪರಿಸರ ಸ್ನೇಹಿಯಾಗಿರುವ ಅನಿಲ ಆಧಾರಿತ ಆರ್ಥಿಕತೆಯತ್ತ ಸಾಗಲು ಸರ್ಕಾರವು ದೃಢವಾದ ಯೋಜನೆಯನ್ನು ಹೊಂದಿದೆ.
- ಸರ್ಕಾರವು ಕಲ್ಲಿದ್ದಲು ಮತ್ತು ಅನಿಲ ಕ್ಷೇತ್ರಗಳಲ್ಲಿ ಸಾಕಷ್ಟು ಹೂಡಿಕೆ ಮಾಡುವ ಮೂಲಕ, 2030 ರ ವೇಳೆಗೆ ಇಂಧನ ಕ್ಷೇತ್ರದಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಪ್ರಸ್ತುತ 6% ರಿಂದ 15% ಕ್ಕೆ ಹೆಚ್ಚಿಸುವ ಯೋಜನೆಯನ್ನು ಹೊಂದಿದೆ.
“ಒಂದು ರಾಷ್ಟ್ರ, ಒಂದು ಅನಿಲ ಸ್ಥಾವರ” ಪರಿಕಲ್ಪನೆ:
ಇದು ಭಾರತದ ಮುಖ್ಯ ಭೂಭಾಗದಲ್ಲಿ ಹೈ-ವೋಲ್ಟೇಜ್ ವಿದ್ಯುತ್ ಶಕ್ತಿ ಪ್ರಸರಣ ಜಾಲವಾಗಲಿದ್ದು, ವಿದ್ಯುತ್ ಕೇಂದ್ರಗಳು ಮತ್ತು ಪ್ರಮುಖ ಸಬ್‌ಸ್ಟೇಷನ್‌ಗಳನ್ನು ಸಂಪರ್ಕಿಸುತ್ತದೆ ಮತ್ತು ಭಾರತದ ಮುಖ್ಯ ಭೂಭಾಗದಲ್ಲಿ ಎಲ್ಲಿಯಾದರೂ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಬೇರೆಡೆಯ ಬೇಡಿಕೆಯನ್ನು ಪೂರೈಸಲು ಬಳಸಬಹುದೆಂದು ಖಚಿತಪಡಿಸುತ್ತದೆ.
ರಾಷ್ಟ್ರೀಯ ಗ್ರಿಡ್ ಅಭಿವೃದ್ಧಿ:
- ವಲಯ ಆಧಾರಿತ ಗ್ರಿಡ್ ನಿರ್ವಹಣೆಯು ಅರವತ್ತರ ದಶಕದಲ್ಲಿ ಪ್ರಾರಂಭವಾಯಿತು.
- ಆರಂಭದಲ್ಲಿ, ರಾಜ್ಯ ಗ್ರಿಡ್‌ಗಳನ್ನು ಪ್ರಾದೇಶಿಕ ಗ್ರಿಡ್ ರೂಪಿಸಲು ಪರಸ್ಪರ ಸಂಪರ್ಕಿಸಲಾಗಿತ್ತು ಮತ್ತು ಭಾರತವನ್ನು ಉತ್ತರ, ಪೂರ್ವ, ಪಶ್ಚಿಮ, ಈಶಾನ್ಯ ಮತ್ತು ದಕ್ಷಿಣ ವಲಯ ಎಂದು 5 ವಲಯಗಳಾಗಿ ಗುರುತಿಸಲಾಯಿತು..
- ಆಗಸ್ಟ್ 2006 ರಲ್ಲಿ, ಉತ್ತರ ಮತ್ತು ಪೂರ್ವ ಗ್ರಿಡ್‌ಗಳನ್ನು ಪರಸ್ಪರ ಜೋಡಿಸಲಾಯಿತು, ಹೀಗಾಗಿ 4 ಪ್ರಾದೇಶಿಕ ಗ್ರಿಡ್‌ಗಳನ್ನು ಉತ್ತರ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಗ್ರಿಡ್‌ಗಳೊಂದಿಗೆ ಏಕಕಾಲದಲ್ಲಿ ಸಂಪರ್ಕಿಸಿ ಆವರ್ತನದಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಗ್ರಿಡ್ ಅನ್ನು ರೂಪಿಸಲಾಯಿತು.
- 31 ಡಿಸೆಂಬರ್ 2013 ರಂದು, 765 ಕೆವಿ ರಾಯಚೂರು-ಸೋಲಾಪುರ ಪ್ರಸರಣ ಮಾರ್ಗವನ್ನು ಪ್ರಾರಂಭಿಸುವುದರೊಂದಿಗೆ ದಕ್ಷಿಣ ವಲಯವನ್ನು ಕೇಂದ್ರ ಗ್ರಿಡ್‌ಗೆ ಸಿಂಕ್ರೊನಸ್ ಮೋಡ್‌ನಲ್ಲಿ ಸಂಪರ್ಕಿಸಲಾಯಿತು, ಆ ಮೂಲಕ ‘ಒಂದು ರಾಷ್ಟ್ರ’ – ‘ಒಂದು ಗ್ರಿಡ್’ – ‘ಒಂದು ಆವರ್ತನ’ ಸಾಧಿಸಲಾಯಿತು.
ರಾಷ್ಟ್ರೀಯ ಗ್ರಿಡ್ ನ ಪ್ರಯೋಜನಗಳು:
- ವಿದ್ಯುತ್ತಿನ ಉತ್ತಮ ಲಭ್ಯತೆಯು, ಕಡಿಮೆ ವಿದ್ಯುತ್ ಕಡಿತಕ್ಕೆ ಕಾರಣವಾಗುತ್ತದೆ.
- ವಿದ್ಯುತ್ ಪೊರೈಕೆಯಲ್ಲಿ ಹೆಚ್ಚು ಸ್ಥಿರತೆ ಉಂಟಾಗುತ್ತದೆ
- ಉತ್ತಮ ಸಿಂಕ್ರೊನೈಸೇಶನ್ ಸಾಧ್ಯವಾಗುತ್ತದೆ.
ವಿಷಯಗಳು: ಜೀವ ವೈವಿಧ್ಯತೆ.
ಏಷ್ಯನ್ ವಾಟರ್ ಬರ್ಡ್ ಸೆನ್ಸಸ್ (AWC) -2020 ಕುರಿತು:
ಸಂದರ್ಭ:
ಎರಡು ದಿನಗಳ ಏಷ್ಯನ್ (ವಾಟರ್ ಬರ್ಡ್ ಸೆನ್ಸಸ್) ನೀರು ಹಕ್ಕಿ ಗಣತಿ -2020 ಆಂಧ್ರಪ್ರದೇಶದಲ್ಲಿ ಪ್ರಾರಂಭವಾಯಿತು.
ಏಷ್ಯನ್ ನೀರು ಹಕ್ಕಿ ಗಣತಿಯು ಒಂದು ವಾರ್ಷಿಕ ಕಾರ್ಯಕ್ರಮ ವಾಗಿದ್ದು, ಇದರಲ್ಲಿ ಏಷ್ಯಾ ಮತ್ತು ಆಸ್ಟ್ರೇಲಿಯಾದ ಸಾವಿರಾರು ಸ್ವಯಂಸೇವಕರು ತಮ್ಮ ದೇಶದ ಜೌಗು ಪ್ರದೇಶಗಳಲ್ಲಿ ವಾಟರ್ ಬರ್ಡ್‌ಗಳನ್ನು ಎಣಿಸುತ್ತಾರೆ.
ಇಲ್ಲಿಯವರೆಗೆ 27 ದೇಶಗಳಲ್ಲಿ ಕನಿಷ್ಠ 6,000 ಜೌಗು ಪ್ರದೇಶಗಳನ್ನು ಸಮೀಕ್ಷೆ ಮಾಡಲಾಗಿದೆ.
ಈ ಪ್ರಕ್ರಿಯೆಯು ಪ್ರತಿ ಜನವರಿಯಲ್ಲಿ ನಡೆಯುತ್ತದೆ.
ಈ ಕಾರ್ಯಕ್ರಮವನ್ನು ವೆಟ್‌ಲ್ಯಾಂಡ್ಸ್ ಇಂಟರ್‌ನ್ಯಾಷನಲ್ ಸಂಯೋಜಿಸುತ್ತದೆ ಮತ್ತು ಇದು ಇಂಟರ್ನ್ಯಾಷನಲ್ ವಾಟರ್ ಬರ್ಡ್ ಸೆನ್ಸಸ್ (IWC) (ಅಂತಾರಾಷ್ಟ್ರೀಯ ನೀರು ಹಕ್ಕಿ ಗಣತಿ) ಎಂದು ಕರೆಯಲ್ಪಡುವ ಜಾಗತಿಕ ವಾಟರ್ ಬರ್ಡ್ ಮಾನಿಟರಿಂಗ್ (ಉಸ್ತುವಾರಿ) ಕಾರ್ಯಕ್ರಮದ ಭಾಗವಾಗಿದೆ.
ಇದು 1987 ರಲ್ಲಿ ಪ್ರಾರಂಭವಾಯಿತು.
ಇದು ವಾಟರ್ ಬರ್ಡ್ಸ್ ಮತ್ತು ಜೌಗು ಪ್ರದೇಶಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದರ ಕಡೆಗೆ ಗಮನ ಕೇಂದ್ರೀಕರಿಸುತ್ತದೆ.
ಭಾರತದಲ್ಲಿ, AWC ಯನ್ನು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಮತ್ತು ವೆಟ್‌ಲ್ಯಾಂಡ್ಸ್ ಇಂಟರ್‌ನ್ಯಾಷನಲ್ ಸಂಯೋಜಿಸುತ್ತವೆ.
What are waterbirds? ನೀರು ಹಕ್ಕಿಗಳು ಎಂದರೆ ಯಾವುವು?
ವೆಟ್‌ಲ್ಯಾಂಡ್ಸ್ ಇಂಟರ್‌ನ್ಯಾಷನಲ್ (WI) ಪ್ರಕಾರ, ನೀರು ಹಕ್ಕಿಗಳು ಪಾರಿಸಾರಿಕವಾಗಿ ಜೌಗು ಪ್ರದೇಶಗಳ ಮೇಲೆ ಅವಲಂಬಿತವಾಗಿರುವ ಪಕ್ಷಿ ಜಾತಿಗಳಲ್ಲೊಂದು ಎಂದು ವ್ಯಾಖ್ಯಾನಿಸಲಾಗಿದೆ. ಈ ಪಕ್ಷಿಗಳನ್ನು ಜೌಗು ಭೂಮಿ ವಲಯದ ಪ್ರಮುಖ ಆರೋಗ್ಯ ಸೂಚಕಗಳೆಂದು ಪರಿಗಣಿಸಲಾಗಿದೆ.
ವಿಷಯಗಳು: ಮಾಧ್ಯಮ ಮತ್ತು ಸಂವಹನ ಜಾಲದ ಪಾತ್ರ.
ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಿಂದ ಉಂಟಾಗುವ ಆರ್ಥಿಕ ಪರಿಣಾಮ;
ಸಂದರ್ಭ :
ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯಿಂದ ಉಂಟಾಗುವ ಆರ್ಥಿಕ ಪರಿಣಾಮದ ಕುರಿತು ಯುಕೆ ಮೂಲದ ಗೌಪ್ಯತೆ ಮತ್ತು ಭದ್ರತಾ ಸಂಶೋಧನಾ ಸಂಸ್ಥೆ Top10VPN, ಸಂಶೋಧನಾ ವರದಿಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.
ಪ್ರಮುಖ ಆವಿಷ್ಕಾರಗಳು :
- ಭಾರತವು 2020 ರಲ್ಲಿ ಇಂಟರ್ನೆಟ್ ಸ್ಥಗಿತದಿಂದಾಗಿ ವಿಶ್ವದಲ್ಲಿಯೇ ಅತಿ ಹೆಚ್ಚು ಆರ್ಥಿಕ ಪರಿಣಾಮವನ್ನು ಅನುಭವಿಸಿತು.
- 8,927 ಗಂಟೆಗಳಷ್ಟು ಅಮೂಲ್ಯ ಸಮಯ ಮತ್ತು 8 ಬಿಲಿಯನ್ ಡಾಲರ್ ($) ನಷ್ಟು ಆರ್ಥಿಕ ನಷ್ಟ ಅನುಭವಿಸಿದೆ.
ಇಂಟರ್ನೆಟ್ ಸ್ಥಗಿತಗೊಳಿಸುವಿಕೆ:
ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ಇಂಟರ್ನೆಟ್ ಅಥವಾ ಎಲೆಕ್ಟ್ರಾನಿಕ್ ಸಂವಹನಗಳ ಉದ್ದೇಶಪೂರ್ವಕ ಅಡಚಣೆಯಾಗಿದೆ. ನಿರ್ದಿಷ್ಟ ಜನಸಂಖ್ಯೆ ಅಥವಾ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಬಳಸಲಾಗದ ರೀತಿಯಲ್ಲಿ ನಿರೂಪಿಸುವುದು ಹಾಗೂ ಆಗಾಗ್ಗೆ ಮಾಹಿತಿಯ ಹರಿವಿನ ಮೇಲೆ ನಿಯಂತ್ರಣ ಸಾಧಿಸುವುದಾಗಿದೆ.
ಬಾಧೆಗೊಳಪಟ್ಟ ಪ್ರದೇಶಗಳು:
- ಹಿಂದಿನ ವರ್ಷಗಳಂತೆ, ಭಾರತವು 2020 ರಲ್ಲಿಯೂ ಸಹ 75 ಕ್ಕೂ ಹೆಚ್ಚು ಬಾರಿ ಇಂಟರ್ನೆಟ್ ಪ್ರವೇಶವನ್ನು ನಿರ್ಬಂಧಿಸಿದೆ.
- ಇಂಟರ್ನೆಟ್ ಪ್ರವೇಶವನ್ನು ನಿರ್ಬಂಧಿಸಿದ್ದರ ಪರಿಣಾಮವು ಹಳ್ಳಿಗಳ ಗುಂಪುಗಳು ಅಥವಾ ಪ್ರತ್ಯೇಕ ನಗರ ಜಿಲ್ಲೆಗಳ ಮೇಲೆ ಹೆಚ್ಚಾಗಿ ಕಂಡುಬಂದಿತು ಆದರೆ ಇದು ವಿಸ್ತಾರವಾದ ಪ್ರದೇಶಗಳ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಹಳ್ಳಿಗಳ ಗುಂಪುಗಳು ಅಥವಾ ಪ್ರತ್ಯೇಕ ನಗರ ಜಿಲ್ಲೆಗಳ ಮೇಲಾದ ಪರಿಣಾಮವನ್ನು ಈ ವರದಿಯಲ್ಲಿ ಸೇರಿಸಲಾಗಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿನ ನಿರ್ಬಂಧಗಳು:
- ವರದಿಯು ಕಾಶ್ಮೀರದಲ್ಲಿ ಇಂಟರ್ನೆಟ್ ಬಳಕೆಯ ಮೇಲಿನ ವಿಸ್ತೃತ ನಿರ್ಬಂಧಗಳ ಬಗ್ಗೆ ಪ್ರತ್ಯೇಕ ಉಲ್ಲೇಖವನ್ನು ನೀಡಿತು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಆಗಸ್ಟ್ 2019 ರಿಂದ ಮಾರ್ಚ್ 2020 ರವರೆಗೆ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಯಿತು ಮತ್ತು ಈ ನಿರ್ಬಂಧಗಳು ಇನ್ನೂ ತೀವ್ರವಾಗಿ ಉಳಿದಿದ್ದು, ಕೇವಲ 2 ಜಿ ಸೌಲಭ್ಯ ಮಾತ್ರ ಲಭ್ಯವಿದೆ.
- ವರದಿಯು,ಇದನ್ನು ಪ್ರಜಾಪ್ರಭುತ್ವ ದೇಶವೊಂದರಲ್ಲಿನ ಅತಿ ದೀರ್ಘಾವಧಿಯ ಇಂಟರ್ನೆಟ್ ಸ್ಥಗಿತ ಎಂದು ಕರೆದಿದ್ದು,”ನಿರ್ಬಂಧಗಳು ಆರೋಗ್ಯ, ವಾಣಿಜ್ಯ -ವ್ಯವಹಾರಗಳು ಮತ್ತು ಶೈಕ್ಷಣಿಕ ಕ್ಷೇತ್ರಗಳ ಬೆಳವಣಿಗೆಯ ಮೇಲೆ ಋಣಾತ್ಮಕವಾದ ಪರಿಣಾಮ ಬೀರಿವೆ.” ಎ೦ದು ಹೇಳಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಸಾಗರಮಾಲಾ ಸೀ-ಪ್ಲೇನ್ ( ಕಡಲ ವಿಮಾನ) ಸೇವೆಗಳು :
ಇದನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಪ್ರಾರಂಭಿಸಲಿದೆ.
ನಿಗದಿತ ವಿಮಾನಯಾನ ನಿರ್ವಾಹಕರ ಮೂಲಕ ಇದನ್ನು ವಿಶೇಷ ಉದ್ದೇಶದ ವಾಹನ (SPV) ಚೌಕಟ್ಟಿನಡಿಯಲ್ಲಿ ಆರಂಭಿಸಲಾಗುತ್ತದೆ.
ಈ ಯೋಜನೆಯ ಕಾರ್ಯಾರಂಭ ಮತ್ತು ಅನುಷ್ಠಾನವು ಬಂದರು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸಾಗರಮಾಲಾ ಅಭಿವೃದ್ಧಿ ಕಂಪನಿ ನಿಗಮದ (SDCL) ಮೂಲಕ ನಡೆಯಲಿದೆ.
TRIFOOD PARKS( ಉದ್ಯಾನಗಳು ) :
- ಮಧ್ಯಪ್ರದೇಶದಲ್ಲಿ ಟ್ರೈಫುಡ್ ಉದ್ಯಾನವನಗಳನ್ನು ಸ್ಥಾಪಿಸಲಾಗುವುದು.
- ಇದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಒಕ್ಕೂಟ (TRIFED) ಮತ್ತು ಆಹಾರ ಸಂಸ್ಕರಣಾ ಸಚಿವಾಲಯದ ಜಂಟಿ ಉಪಕ್ರಮವಾಗಿದೆ.
- ಇದನ್ನು 2020 ರಲ್ಲಿ ವನ್ ಧನ್ ಯೋಜನೆ ಅಡಿಯಲ್ಲಿ ಪ್ರಾರಂಭಿಸಲಾಯಿತು.
- ಈ ಉದ್ಯಾನಗಳು ವನ್ ಧನ್ ಕೇಂದ್ರಗಳಿಂದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ, ಸಂಸ್ಕರಿಸಿ ಅವುಗಳನ್ನು ಟ್ರೈಬ್ಸ್ ಇಂಡಿಯಾ ಮಳಿಗೆಗಳ ಮೂಲಕ ದೇಶಾದ್ಯಂತ ಮಾರಾಟ ಮಾಡುತ್ತವೆ.
- ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಬುಡಕಟ್ಟು ವ್ಯವಹಾರಗಳ ಸಚಿವಾಲಯ ನಿಗದಿಪಡಿಸುತ್ತದೆ ಮತ್ತು ಇದನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಸಚಿವಾಲಯದ ಅಡಿಯಲ್ಲಿ ರಚಿಸಲಾದ ಬೆಲೆ ಕೋಶದ ಮೂಲಕ (pricing cell) ಪರಿಷ್ಕರಿಸಲಾಗುತ್ತದೆ.












