Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 5 ಜನವರಿ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಬಜೆಟ್ ಅಧಿವೇಶನ.

2. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ ಪ್ರಕರಣ) ನಿಯಮಗಳು, 2017 ಅನ್ನು ರದ್ದುಗೊಳಿಸಲು ಸರ್ಕಾರ ಕ್ಕೇ ಸೂಚಿಸಿದ ಸರ್ವೊಚ್ಚ ನ್ಯಾಯಾಲಯ.

3. 3 ರಾಜ್ಯಗಳು, 3 ಮತಾಂತರ ವಿರೋಧಿ ಕಾನೂನುಗಳು: ಹೋಲಿಕೆ, ಮತ್ತು ಭಿನ್ನತೆಗಳು ಯಾವುವು?

4. ಪರಮಾಣು ಒಪ್ಪಂದದ ಹೊಸ ಉಲ್ಲಂಘನೆಯ ಮೂಲಕ ಮತ್ತೆ ಯುರೇನಿಯಂ ಅನ್ನು ಸಮೃದ್ಧಗೊಳಿಸಲು ಪ್ರಾರಂಭಿದ ಇರಾನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಮುಖರಹಿತ (Faceless) ತೆರಿಗೆ ಯೋಜನೆ.

2. ಹಕ್ಕಿ ಜ್ವರ.

3. ಫ್ಲೂ ಗ್ಯಾಸ್ ಡಿಸಲ್ಫ್ಯುರಿಕರಣ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಪ್ಯಾಂಗೋಲಿನ್

2. ಭಾರತದ ಆರ್ಕ್ಟಿಕ್ ಸಂಶೋಧನಾ ಚಟುವಟಿಕೆಯು ಜೂನ್‌ನಲ್ಲಿ ಪುನರಾರಂಭಗೊಳ್ಳಲಿದೆ.

3. ನವೀನ ‘ಸ್ಕೂಲ್ ಬ್ಯಾಗ್ ನೀತಿ, 2020’.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು,ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಬಜೆಟ್ ಅಧಿವೇಶನ :


ಸಂದರ್ಭ :

ಸಂಸತ್ತಿನ ಬಜೆಟ್ ಅಧಿವೇಶನವು COVID-19 ಸುರಕ್ಷತಾ ಕ್ರಮಗಳು ಮತ್ತು ಕಟ್ಟುನಿಟ್ಟಾದ ದೈಹಿಕ ಅಂತರದ ಮಾನದಂಡಗಳನ್ನು ಒಳಗೊಂಡಂತೆ ಮಾನ್ಸೂನ್ ಅಧಿವೇಶನದ ವೇಳೆ ಜಾರಿಯಲ್ಲಿದ್ದ  ನಿರ್ಬಂಧಗಳ ಅಡಿಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

 • COVID-19 ನಿರ್ಬಂಧಗಳ ಭಾಗವಾಗಿ ಮಾನ್ಸೂನ್ ಅಧಿವೇಶನದಲ್ಲಿ ಅಮಾನತುಗೊಳಿಸಲಾಗಿದ್ದ ಪ್ರಶ್ನೋತ್ತರ ವೆಳೆಯನ್ನು ಬಜೆಟ್ ಅಧಿವೇಶನದಲ್ಲಿ ಪುನರಾರಂಭಿಸಲಾಗುತ್ತದೆಯೇ ಎಂಬ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ  ದೊರೆತಿಲ್ಲ.

ಸಾಂವಿಧಾನಿಕ ನಿಬಂಧನೆಗಳು:

 • ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚಿನ ಅಂತರವಿರಬಾರದು ಎಂದು ಭಾರತ ಸಂವಿಧಾನದ 85 ನೇ ವಿಧಿಯು ತಿಳಿಸುತ್ತದೆ.
 • ಆದರೆ ಸಂವಿಧಾನವು ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ.

ಸಂಸತ್ತಿನ ಅಧಿವೇಶನವು ಏಕೆ ಇಷ್ಟೊಂದು ಪ್ರಮುಖವಾಗಿದೆ ?

 1. ಕಾನೂನು/ಕಾಯ್ದೆಯ ರಚನೆಯು ಸಂಸತ್ತು ಯಾವಾಗ ಸಭೆ ಸೇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
 2. ಅಲ್ಲದೆ, ಸರ್ಕಾರದ ಕಾರ್ಯವೈಖರಿಗಳ ಕೂಲಂಕಷ ಪರಿಶೀಲನೆ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವುದು ಉಭಯ ಸದನಗಳು ಅಧಿವೇಶನದಲ್ಲಿದ್ದಾಗ ಮಾತ್ರ ಸಾಧ್ಯಗುತ್ತದೆ.
 3. ಸಂಸತ್ತಿನ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮವಾಗಿ ಮತ್ತು ಸಕ್ರಿಯವಾಗಿ  ಭಾಗವಹಿಸುವುದು ಉತ್ತಮ ಪ್ರಜಾಪ್ರಭುತ್ವದ ಪ್ರಮುಖ  ಲಕ್ಷಣವಾಗಿದೆ.

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ  ಪ್ರಕರಣ) ನಿಯಮಗಳು, 2017 ಅನ್ನು ರದ್ದುಗೊಳಿಸಲು ಸರ್ಕಾರ ಕ್ಕೆ ಸೂಚಿಸಿದ ಸರ್ವೊಚ್ಚ ನ್ಯಾಯಾಲಯ.


ಸರ್ವೊಚ್ಚ ನ್ಯಾಯಾಲಯವು ಈ ರೀತಿ ಆದೇಶಿಸಲು ಕಾರಣವೇನು?

 • ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಅವರು ತಪ್ಪಿತಸ್ಥರೆಂದು ಸಾಬಿತಾಗುವ ಮೊದಲೇ,ಜೀವನೋಪಾಯಕ್ಕಾಗಿ ಈ ಪ್ರಾಣಿಗಳನ್ನು ಅವಲಂಬಿಸಿರುವ ಜನರಿಂದ ಜಾನುವಾರುಗಳನ್ನು ‘ ಗೋಶಾಲೆಗಳಿಂದ ವಶಪಡಿಸಿಕೊಳ್ಳಲು ಮತ್ತು ನಂತರದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಈ ಕಾನೂನು ಅವಕಾಶ ಮಾಡಿಕೊಟ್ಟಿತ್ತು.
 • ಪ್ರಾಣಿಗಳು ತಮ್ಮ ಮಾಲೀಕರ ಕೈಯಲ್ಲಿ ಕ್ರೌರ್ಯಕ್ಕೆ ತುತ್ತಾಗಿವೆ ಅಥವಾ ಇವುಗಳನ್ನು ಕಸಾಯಿಖಾನೆಗೆ ತಳ್ಳಲಾಗುವುದು ಎಂಬ ಅನುಮಾನದ ಮೇಲೆ ದನಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಈ ಕಾನೂನು ಅವಕಾಶ ಮಾಡಿಕೊಟ್ಟಿತ್ತು.
 • ಈ ಕಾರಣದಿಂದಾಗಿ, ಒಬ್ಬ ರೈತ, ಜಾನುವಾರು ಮಾಲೀಕರು ಅಥವಾ ದನದ ವ್ಯಾಪಾರಿಗಳು ಕ್ರೌರ್ಯದ ಆರೋಪದಲ್ಲಿ ತಪ್ಪಿತಸ್ಥರಾಗುವ ಮೊದಲೇ ತಮ್ಮ ಪ್ರಾಣಿಗಳನ್ನು ಕಳೆದುಕೊಳ್ಳುತ್ತಾರೆ.
 • ಆದ್ದರಿಂದ ‘ಪ್ರಾಣಿಗಳ ಮಾರಾಟ, ಸಾಗಣೆ ಪ್ರಕರಣಗಳಲ್ಲಿ ಪ್ರಾಣಿಗಳನ್ನು ವಶಕ್ಕೆ ಪಡೆಯುವುದರ ಸಂಬಂಧ 2017ರಲ್ಲಿ ಹೊರಡಿಸಿದ್ದ ನಿಯಮಗಳಿಗೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ತರಬೇಕು ಇಲ್ಲವೇ, ಅವುಗಳನ್ನು ಹಿಂದೆ ಪಡೆಯಬೇಕು’ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆ  ಪ್ರಕರಣ) ನಿಯಮಗಳು, 2017, ಕುರಿತು :

 1. ಪ್ರಾಣಿಗಳ ಮೇಲಿನ ಕ್ರೌರ್ಯ/ ದೌರ್ಜನ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಈ ನಿಯಮಗಳನ್ನು ರೂಪಿಸಲಾಗಿದೆ.
 2. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ವಿಚಾರಣೆಯನ್ನು ಎದುರಿಸುತ್ತಿರುವ ಮಾಲೀಕರ ದನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು, 2017 ರ ನಿಯಮಗಳು ಮ್ಯಾಜಿಸ್ಟ್ರೇಟ್‌ ರವರಿಗೆ ಅವಕಾಶ ನೀಡುತ್ತವೆ.
 3. ಆ ನಂತರ ಪ್ರಾಣಿಗಳನ್ನು ಚಿಕಿತ್ಸಾ ಕೇಂದ್ರಗಳು, ‘, ಗೋಶಾಲೆಗಳು ‘ಪಿಂಜರಪೋಲ್’ ಇತ್ಯಾದಿ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಕೊನೆಗೆ ಈ ಸ್ಥಳಗಳಲ್ಲಿನ ಅಧಿಕಾರಿಗಳು ಅಂತಹ ಪ್ರಾಣಿಗಳನ್ನು “ದತ್ತು” ಪಡೆಯಲು ಬಯಸಿದವರಿಗೆ ನೀಡಬಲ್ಲವರಾಗಿದ್ದಾರೆ.

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

3 ರಾಜ್ಯಗಳು, 3 ಮತಾಂತರ ವಿರೋಧಿ ಕಾನೂನುಗಳು:  ಹೋಲಿಕೆ, ಮತ್ತು ಭಿನ್ನತೆಗಳು ಯಾವುವು?


ಸಂದರ್ಭ :

ಮಧ್ಯಪ್ರದೇಶದ ಸಚಿವ ಸಂಪುಟವು ಧಾರ್ಮಿಕ ಸ್ವಾತಂತ್ರ್ಯ  ಮಸೂದೆ 2020 ನ್ನು ಸುಗ್ರೀವಾಜ್ಞೆ ರೂಪದಲ್ಲಿ ಅಂಗೀಕರಿಸಿದೆ.

ಈ ಮುಂಚೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಇದೇ ರೀತಿಯ ಕಾನೂನುಗಳನ್ನು ಅಂಗೀಕರಿಸಿವೆ.

ಸಾಮ್ಯತೆ/ ಹೋಲಿಕೆಗಳೇನು?

ಈ ಮೂರು ಕಾನೂನುಗಳ ಸಾಮಾನ್ಯ ಲಕ್ಷಣವೆಂದರೆ ಅಂತಹ ವಿವಾಹಗಳನ್ನು “ಅನೂರ್ಜಿತ” ಎಂದು ಘೋಷಿಸುವುದು ಮತ್ತು ರಾಜ್ಯದ ಪೂರ್ವಾನುಮತಿ ಇಲ್ಲದೆ ಮಾಡಿದ ಮತಾಂತರಗಳಿಗೆ ಶಿಕ್ಷೆ ವಿಧಿಸುವುದು.

ಭಿನ್ನತೆ/ ವ್ಯತ್ಯಾಸಗಳು :

ಅವುಗಳು ನಿಗದಿಪಡಿಸಿದ ಶಿಕ್ಷೆಯ ಪ್ರಮಾಣದಲ್ಲಿ ಭಿನ್ನವಾಗಿವೆ ಮತ್ತು ಮತಾಂತರವು ಕಾನೂನುಬದ್ಧವಾಗಿದೆಯೇ ಎಂಬುದಕ್ಕೆ ಪುರಾವೆಗಳ  ಜವಾಬ್ದಾರಿಯನ್ನು ಸಾಬೀತುಪಡಿಸುವಲ್ಲಿ  ಭಿನ್ನವಾಗಿವೆ.

ಪೂರ್ವ ಸೂಚನೆ : Prior Notice:

ಮಧ್ಯಪ್ರದೇಶದ ಕಾನೂನು ಮತಾಂತರವು ಮಾನ್ಯವಾಗಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ ರವರಿಗೆ 60 ದಿನಗಳು ಮುಂಚಿತವಾಗಿ “ಮತಾಂತರದ ಉದ್ದೇಶದ ಘೋಷಣೆ” ಮಾಡುವ ಅಗತ್ಯವಿರುತ್ತದೆ, ಆಗ ಮಾತ್ರ ವಿವಿಧ ಧರ್ಮಗಳ ವ್ಯಕ್ತಿಗಳು ಕಾನೂನುಬದ್ಧವಾಗಿ ಮದುವೆಯಾಗಬಹುದಾಗಿದೆ.

ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ, ಸುಗ್ರೀವಾಜ್ಞೆ 2020 ರಲ್ಲಿಯೂ ಕೂಡ 60 ದಿನಗಳ ಮುಂಚೆ ನೋಟಿಸ್ ನೀಡುವ ಅಗತ್ಯವಿರುತ್ತದೆ ಆದರೆ ಮತಾಂತರದ ಹಿಂದಿನ ನಿಜವಾದ ಉದ್ದೇಶವನ್ನು ಕಂಡುಹಿಡಿಯಲು ಮ್ಯಾಜಿಸ್ಟ್ರೇಟ್ ರವರು ಪೊಲೀಸ್ ವಿಚಾರಣೆ ನಡೆಸುವ ಅಗತ್ಯವಿರುತ್ತದೆ.

ಕಳೆದ ವಾರ ಜಾರಿಗೆ ಬಂದ ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2019 ಸಹ 30 ದಿನಗಳ ಮೊದಲು “ಮತಾಂತರಗೊಳ್ಳುವ ಉದ್ದೇಶದ”  ಕುರಿತು ಮಾಹಿತಿ ನೀಡುವುದು ಕಡ್ಡಾಯವಾಗಿದೆ ಎ೦ದು ತಿಳಿಸುತ್ತದೆ.

ಯಾರು ತನಿಖೆ ಮಾಡಬಹುದು?

ಮಧ್ಯಪ್ರದೇಶದ ಕಾನೂನು: ಮತಾಂತರಗೊಂಡ ವ್ಯಕ್ತಿಯ ಅಥವಾ ವ್ಯಕ್ತಿಯ ಪೋಷಕರು / ಒಡಹುಟ್ಟಿದವರ ಲಿಖಿತ ದೂರನ್ನು ಹೊರತುಪಡಿಸಿ ಪೊಲೀಸ್ ಅಧಿಕಾರಿಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು M.P ಕಾನೂನಿನ ಸೆಕ್ಷನ್ 4 ತಿಳಿಸುತ್ತದೆ.ಸಬ್ ಇನ್ಸ್‌ಪೆಕ್ಟರ್ ಹುದ್ದೆಗಿಂತ ಕೆಳಗಿನ ಯಾವುದೇ ಪೊಲೀಸ್ ಅಧಿಕಾರಿ ಕಾನೂನಿನಡಿಯಲ್ಲಿ ಅಪರಾಧವನ್ನು ತನಿಖೆ ಮಾಡಲು ಸಾಧ್ಯವಿಲ್ಲ.

ಹಿಮಾಚಲ ಪ್ರದೇಶದ ಕಾನೂನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್/ ಉಪ-ವಿಭಾಗಾಧಿಕಾರಿ  ಹುದ್ದೆಗಿಂತ ಕೆಳಗಿರದ ಅಧಿಕಾರಿಯ ಪೂರ್ವಾನುಮತಿ ಇಲ್ಲದೆ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಹೇಳುತ್ತದೆ.

ದೂರು ದಾಖಲಿಸಲು  ಉತ್ತರ ಪ್ರದೇಶದ ಕಾನೂನು ಮಧ್ಯಪ್ರದೇಶದ ಕಾನೂನು ಮಾದರಿಯನ್ನು ಅನುಸರಿಸುತ್ತದೆ.

ಪುರಾವೆಯನ್ನು ಸಾಬೀತುಪಡಿಸುವ ಹೊಣೆಗಾರಿಕೆ:

Burden of proof:

ಮಧ್ಯಪ್ರದೇಶದ ಕಾನೂನು ಯಾವುದೇ ಬಲವಂತ ಅಥವಾ ಕಾನೂನು ಬಾಹಿರವಾಗಿ ಮತಾಂತರ ನಡೆದಿಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು ಮತಾಂತರಗೊಂಡ ವ್ಯಕ್ತಿಯ ಮೇಲೆ ಹೊರಿಸುತ್ತದೆ.

ಹಿಮಾಚಲ ಪ್ರದೇಶದ ಕಾನೂನು   ಮಧ್ಯ ಪ್ರದೇಶದ  ರೀತಿಯ ನಿಬಂಧನೆಯನ್ನು ಹೊಂದಿದೆ.

ಉತ್ತರ ಪ್ರದೇಶದ ಕಾನೂನು ಮತ್ತಷ್ಟು ಮುಂದುವರಿದು, ಈ ಪುರಾವೆಯನ್ನು ಒದಗಿಸುವ ಹೊರೆಯನ್ನು ಮತಾಂತರಗೊಂಡ ವ್ಯಕ್ತಿಯ ಮೇಲಲ್ಲದೆ ಮತಾಂತರಕ್ಕೆ “ ಕಾರಣರಾದ” ಅಥವಾ “ಸುಗಮಗೊಳಿಸಿದ” ಜನರ ಮೇಲೆ ಹೊರೆಸುತ್ತದೆ.

 

ವಿಷಯಗಳು : ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಪರಮಾಣು ಒಪ್ಪಂದದ ಹೊಸ ಉಲ್ಲಂಘನೆಯ ಮೂಲಕ ಮತ್ತೆ ಯುರೇನಿಯಂ ಅನ್ನು ಸಮೃದ್ಧಗೊಳಿಸಲು ಪ್ರಾರಂಭಿದ ಇರಾನ್.


ಸಂದರ್ಭಃ

ಇರಾನ್ ತನ್ನ ಸೂಕ್ಷ್ಮ ಫೊರ್ಡೋ (sensitive Fordow) ಪರಮಾಣು ಕೇಂದ್ರದಲ್ಲಿ 20 ಪ್ರತಿಶತದಷ್ಟು ಯುರೇನಿಯಂ ಅನ್ನು ಸಮೃದ್ಧಗೊಳಿಸಲು ಆರಂಭಿಸುವ ಮೂಲಕ ಜಾಗತಿಕ ಶಕ್ತಿಗಳೊಂದಿಗೆ ಮಾಡಿಕೊಂಡ 2015 ರ ಪರಮಾಣು ಒಪ್ಪಂದದಿಂದ ಒಂದು ಹೆಜ್ಜೆ ದೂರ ಸರಿದಿದೆ.

ಪರಿಣಾಮಗಳು :

ಸಂಸ್ಕರಿಸಿದ/ಸಮೃದ್ಧಗೊಳಿಸಿದ ಯುರೇನಿಯಂ ಅನ್ನು ರಿಯಾಕ್ಟರ್

ಗಳಿಗೆ ಇಂಧನ ತಯಾರಿಸಲು ಬಳಸಬಹುದು. ಆದರೆ ಪರಮಾಣು ಬಾಂಬುಗಳನ್ನು ಸಹ ತಯಾರಿಸಬಹುದಾಗಿದೆ. ಶಸ್ತ್ರಾಸ್ತ್ರ-ದರ್ಜೆಯ ಯುರೇನಿಯಂ ಗೆ 90% ಶುದ್ಧತೆಯ ಅಗತ್ಯವಿದೆ.

ಈ ಕ್ರಮವು ಟೆಹ್ರಾನ್ ಜೊತೆ ಪರಮಾಣು ಮಾತುಕತೆಗಳನ್ನು ಪುನರಾರಂಭಿಸಲು ಬಯಸಿರುವ, ಮು೦ಬರುವ ಬೈಡೆನ್ ಆಡಳಿತದ ಯೋಜನೆಗಳನ್ನು ಸಂಕೀರ್ಣಗೊಳಿಸಬಹುದಾಗಿದೆ.

ಇರಾನ್‌ನ ಬದಲಾಗುತ್ತಿರುವ ವರ್ತನೆ:

 • ತನ್ನ ಪರಮಾಣು ಕಾರ್ಯಕ್ರಮ ಶಾಂತಿಯುತವಾಗಿದೆ ಎಂದು ಪ್ರತಿಪಾದಿಸುವ ಇರಾನ್, ಒಪ್ಪಂದದ ಅಡಿಯಲ್ಲಿ ಹಲವಾರು ಬದ್ಧತೆಗಳನ್ನು ಮುರಿದಿದೆ.
 • ಜಂಟಿ ಸಮಗ್ರ ಕ್ರಿಯಾ ಯೋಜನೆ (Joint Comprehensive Plan of Action– JCPOA) ಎಂದು ಕರೆಯಲ್ಪಡುವ ಈ ಒಪ್ಪಂದವನ್ನು 2018ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೈಬಿಡುವುದಷ್ಟೇ ಅಲ್ಲದೆ ತನ್ನ ಮೇಲೆ ಪುನಃ ವಿಧಿಸಲಾದ ಅಮೆರಿಕದ ಆರ್ಥಿಕ ನಿರ್ಬಂಧಗಳಿಗೆ ಇದು ಪ್ರತೀಕಾರದ ಕ್ರಮವಾಗಿದೆ ಎಂದು ಇರಾನ್ ಹೇಳಿದೆ.

ಸಂಸ್ಕರಿಸಿದ/ಸಮೃದ್ಧಗೊಳಿಸಿದ ಯುರೇನಿಯಂ ಎಂದರೇನು?

 • ಪರಮಾಣು ವಿದಳನಕ್ಕೆ ಹೆಚ್ಚು ಸೂಕ್ತವಾದ U –235 ಎಂದು ಕರೆಯಲ್ಪಡುವ ಐಸೊಟೋಪ್ ಅನ್ನು ಬೇರ್ಪಡಿಸಲು ಯುರೇನಿಯಂ ಹೆಕ್ಸಾಫ್ಲೋರೈಡ್ ಅನಿಲವನ್ನು ಕೇಂದ್ರಾಪಗಾಮಿಗಳಾಗಿ ಒದಗಿಸುವ ಮೂಲಕ ಪುಷ್ಟೀಕರಿಸಿದ ಯುರೇನಿಯಂ ಉತ್ಪಾದಿಸಲಾಗುತ್ತದೆ.
 • ಕಡಿಮೆ-ಸಂಸ್ಕರಿಸಿದ ಯುರೇನಿಯಂ, ಸಾಮಾನ್ಯವಾಗಿ U-235 ನ 3-5% ಶುದ್ಧತೆಯನ್ನು ಹೊಂದಿದ್ದು, ಇದನ್ನು ವಾಣಿಜ್ಯ ಉದ್ದೇಶದ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಇಂಧನವನ್ನು ಉತ್ಪಾದಿಸಲು ಬಳಸಬಹುದಾಗಿದೆ.
 • ಯುರೇನಿಯಮ್-235 ಸುಲಭವಾಗಿ ವಿದಳನ ಕ್ರಿಯೆಗೆ ಒಳಗಾಗುವುದರಿಂದ ಪ್ರಪಂಚದಾದ್ಯಂತ ಅಣುವಿದ್ಯುತ್ ಹಾಗೂ ಅಣುಬಾಂಬುಗಳ ತಯಾರಿಕೆಯಲ್ಲಿ ನ ಮುಖ್ಯ ಕಚ್ಚಾವಸ್ತುವಾಗಿದೆ.
 • ಹೆಚ್ಚು ಸಮೃದ್ಧವಾಗಿರುವ ಯುರೇನಿಯಂ 20% ಅಥವಾ ಅದಕ್ಕಿಂತ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವುದರಿಂದ ಇದನ್ನು ಸಂಶೋಧನಾ ರಿಯಾಕ್ಟರ್‌ಗಳಲ್ಲಿ ಬಳಸಲಾಗುತ್ತದೆ.

centrifuge

20% ಶುದ್ಧತೆ ಏಕೆ ಮಹತ್ವದ್ದಾಗಿದೆ?

 • 120 ಕೆಜಿ ಯುರೇನಿಯಂ ಅನ್ನು 20% ಗೆ ಸಮೃದ್ಧಗೊಳಿಸಿ ಶಸ್ತ್ರಾಸ್ತ್ರಗಳ ದರ್ಜೆಗೆ (90% ಅಥವಾ ಅದಕ್ಕಿಂತ ಹೆಚ್ಚು) ಪುಷ್ಟೀಕರಿಸಿದಾಗ, ಒಂದು ಬಾಂಬ್‌ ತಯಾರಿಸಲು ಅಗತ್ಯವಾದ ಯುರೇನಿಯಂನ ಅರ್ಧದಷ್ಟು ಪ್ರಮಾಣವಾಗಿರುತ್ತದೆ ಎಂದು ಶಸ್ತ್ರಾಸ್ತ್ರ ನಿಯಂತ್ರಣ ಸಂಘದ ತಜ್ಞರು ಹೇಳಿದ್ದಾರೆ.
 • ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ಉತ್ಪಾದನೆಯು ಹೆಚ್ಚು ಗಂಭೀರವಾದ ಪ್ರಸರಣದ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು :   ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೂಢೀಕರಣ , ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ಮುಖರಹಿತ (Faceless) ತೆರಿಗೆ ಯೋಜನೆ :


ಸಂದರ್ಭ :

ಸರ್ಕಾರದ ಮುಖರಹಿತ ತೆರಿಗೆ ಮೌಲ್ಯಮಾಪನ  (faceless tax assessment) ಯೋಜನೆಯು ಆಗಸ್ಟ್ 2020 ರಲ್ಲಿ ಪ್ರಾರಂಭವಾದಾಗಿನಿಂದ, ಸುಮಾರು 24,000 ಅಂತಿಮ ಆದೇಶಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಮುಖರಹಿತ ತೆರಿಗೆ ಯೋಜನೆಯ ಬಗ್ಗೆ:

ಕಳೆದ ಫೆಬ್ರವರಿಯಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಬಜೆಟ್ ಮಂಡಿಸುವ ಸಮಯದಲ್ಲಿ  ಫೇಸ್ ಲೆಸ್ ಇ ಅಸ್ಸೆಸ್ಸ್ ಮೆಂಟ್, (faceless  e assessment) ಎಂಬ ಸುಧಾರಣೆಗಳನ್ನು ತರುವುದಾಗಿ ಪ್ರಕಟಿಸಿದ್ದರು.

 • ಇದು ಆದಾಯ ತೆರಿಗೆ ಅಧಿಕಾರಿಗಳ ವಿವೇಚನೆ ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ನೀಡುವ ಸಂಭಾವ್ಯ ಕಿರುಕುಳವನ್ನು ತೆಗೆದುಹಾಕುವ ಪ್ರಯತ್ನವಾಗಿದೆ.
 • ನಿರ್ದಿಷ್ಟ ವಿಚಾರಣೆಯ ಅಗತ್ಯವಿರುವ ಸೂಕ್ತ ಸಂದರ್ಭಗಳಲ್ಲಿ ಈ ಯೋಜನೆಯು ಶಿಷ್ಟಾಚಾರಗಳನ್ನು ಅನುಸರಿಸಿದ ನಂತರ, ವಿಚಾರಣೆಯನ್ನು ನಡೆಸುವುದನ್ನು ಅನುಮತಿಸುತ್ತದೆ.
 • ದೈಹಿಕ ಸಂವಹನವನ್ನು ಸಾಧ್ಯವಾದಷ್ಟು ತೆಗೆದುಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ,ತೆರಿಗೆ ಪಾವತಿದಾರರು ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮಧ್ಯೆ ಯಾರ ಮಧ್ಯ ಪ್ರವೇಶವಿಲ್ಲದೆ,ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ತೆರಿಗೆ ಪಾವತಿ, ಕುಂದುಕೊರತೆಗಳ ನಿವಾರಣೆ, ವಹಿವಾಟು ನಡೆಯಲಿದೆ.
 • ಭಾರತೀಯ ತೆರಿಗೆ ತೆರಿಗೆ ವ್ಯವಸ್ಥೆಯನ್ನು ತಡೆರಹಿತವಾಗಿ, ಯಾವುದೇ ಪ್ರಯಾಸಗಳಿಲ್ಲದೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.

 

ವಿಷಯಗಳು: ಪ್ರಾಣಿಗಳ ಪಾಲನೆಯ/ ಪಶು ಸಂಗೋಪನಾ ಅರ್ಥಶಾಸ್ತ್ರ.

ಹಕ್ಕಿಜ್ವರ:


ತನ್ನ ಎರಡು ಜಿಲ್ಲೆಗಳಲ್ಲಿ ಪಕ್ಷಿ ಜ್ವರ ಕಾಣಿಸಿಕೊಂಡ ನಂತರ ಎಚ್ಚರಿಕೆ ವಹಿಸಿದ ಕೇರಳ.

ಬಾತುಕೋಳಿಗಳಲ್ಲಿ Influenza A virus ನ ಉಪ ಪ್ರಭೇದವಾದ H5N8 ವರದಿಯಾಗಿದೆ.

type_a_viruses

Avian influenza (ಹಕ್ಕಿ ಜ್ವರ)  ಕುರಿತು :

 • ಇದೊಂದು ವೈರಲ್ ಸೋಂಕಾಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲದೆ  ಮಾನವರು ಮತ್ತು ಇತರ ಪ್ರಾಣಿಗಳಿಗೂ ಈ ಸೋಂಕು ತಗಲುತ್ತದೆ. ಈ ವೈರಸ್ ನ ಹೆಚ್ಚಿನ ರೂಪಗಳು ಪಕ್ಷಿಗಳಿಗೆ ಸೀಮಿತವಾಗಿವೆ.
 • ಇದು ಹೆಚ್ಚು ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದ್ದು, ಆಹಾರಕ್ಕಾಗಿ ಉಪಯೋಗಿಸುವ ಹಲವಾರು ಜಾತಿಯ ಪಕ್ಷಿಗಳ ಮೇಲೆ (ಕೋಳಿಗಳು, ಟರ್ಕಿ ಕೋಳಿಗಳು, quail ಗಳು, guinea fowl, ಇತ್ಯಾದಿ), ಮತ್ತು ಸಾಕು ಪಕ್ಷಿಗಳು ಮತ್ತು ಕಾಡು ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆ.
 • ಸಾಂದರ್ಭಿಕವಾಗಿ ಮಾನವರು ಸೇರಿದಂತೆ ಹಲವಾರು ಸಸ್ತನಿಗಳು ಏವಿಯನ್ ಇನ್ಫ್ಲುಯೆನ್ಸ ದ ಸಂಪರ್ಕಕ್ಕೆ ಒಳಗಾಗಬಹುದು.
 • ಇನ್ಫ್ಲುಯೆನ್ಸ ಎ ವೈರಸ್‌ಗಳನ್ನು Hemagglutinin (HA) and Neuraminidase (NA) ಎಂಬ ಎರಡು ಮೇಲ್ಮೈ ಪ್ರೋಟೀನ್‌ಗಳ ಆಧಾರದ ಮೇಲೆ ಉಪ ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ.

ಇನ್ಫ್ಲುಯೆನ್ಸ ಎ (ಎಚ್ 5 ಎನ್ 8) ವೈರಸ್:Influenza A(H5N8) virus:

ಪ್ಯಾರಿಸ್ ಮೂಲದ ವರ್ಲ್ಡ್ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ಪ್ರಕಾರ, ಎಚ್ 5 ಎನ್ 8 ಏವಿಯನ್ ಇನ್ಫ್ಲುಯೆನ್ಸವು ಪಕ್ಷಿಗಳ ಕಾಯಿಲೆಯಾಗಿದ್ದು, ಇದು Type “A” influenza viruse ಗಳಿಂದ ಉಂಟಾಗುತ್ತದೆ,, ಇದು ಕೋಳಿಗಳು, ಟರ್ಕಿ ಕೋಳಿಗಳು, ಕ್ವಿಲ್ಗಳು, ಗಿನಿಯಿಲಿ ಮತ್ತು ಬಾತುಕೋಳಿಗಳು ಸೇರಿದಂತೆ ಅನೇಕ ಜಾತಿಗಳ ದೇಶೀಯ ಕೋಳಿಗಳ ಮೇಲೆ ಪರಿಣಾಮ ಬೀರುತ್ತದೆ. , ಹಾಗೆಯೇ ಸಾಕುಪ್ರಾಣಿಗಳು, ಕಾಡು ವಲಸೆ ಹಕ್ಕಿಗಳು ಮತ್ತು ನೀರು ಹಕ್ಕಿಗಳನ್ನು ಒಳಗೊಂಡಂತೆ ಪರಿಣಾಮ ಬೀರುತ್ತದೆ.

ವೈರಸ್ ಮನುಷ್ಯರಿಗೆ ವರ್ಗಾವಣೆಯಾಗಬಲ್ಲದೇ?

ಮಾನವರಲ್ಲಿ ಎಚ್ 5 ಎನ್ 8 ಪ್ರಕರಣಗಳು ಕಂಡು ಬಂದಿಲ್ಲ. ಸಾಮಾನ್ಯ ಜನರಿಗೆ ಇದರ ಅಪಾಯ ತುಂಬಾ ಕಡಿಮೆ. ಕೋಳಿ ಮಾಂಸ ಅಥವಾ ಮೊಟ್ಟೆಗಳ ಸೇವನೆಯಿಂದ ವೈರಸ್  ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ನಿಯಂತ್ರಣ ಮತ್ತು ಕಂಟೈನ್ ಮೆಂಟ್  ಕಾರ್ಯಾಚರಣೆಗಳ ಸಮಯದಲ್ಲಿ ಅನಾರೋಗ್ಯಕರ / ಸತ್ತ ಪಕ್ಷಿಗಳು ಮತ್ತು ಕಲುಷಿತ ವಸ್ತುಗಳನ್ನು ನಿರ್ವಹಿಸುವಾಗ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ.ಚನ್ನಾಗಿ ಬೇಯಿಸಿದ ಕೋಳಿ ಮಾಂಸದ  ಸೇವನೆಯು ಸುರಕ್ಷಿತವೆಂದು ಪರಿಗಣಿಸಲಾಗಿದೆ.

ನಿಯಂತ್ರಣ ಕ್ರಮಗಳುಃ

ಪ್ರಾಣಿಗಳಲ್ಲಿ ಸೋಂಕು ಪತ್ತೆಯಾದಾಗ ಅದನ್ನು ನಿಯಂತ್ರಿಸಲು ಅವುಗಳ ಸಾಮೂಹಿಕ ವಧೆಯನ್ನು (Culling) ಸಾಮಾನ್ಯವಾಗಿ ಕೈಗೊಳ್ಳಲಾಗುತ್ತದೆ.ಕೊಲ್ಲುವ ಜೊತೆಗೆ, ಅಂತಹ ಎಲ್ಲಾ ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸಹ ಮುಖ್ಯವಾಗಿದೆ. ಸೋಂಕಿತ ಆವರಣದ ಸ್ವಚ್ಛಗೊಳಿಸುವಿಕೆ ಕಾರ್ಯವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಕಲುಷಿತ ವಾಹನಗಳು ಮತ್ತು ಸಿಬ್ಬಂದಿಗಳು ಇತರರ ಸಂಪರ್ಕಕ್ಕೆ ಬರದಂತೆ ನಿರ್ಬಂಧಿಸುವ (ಕ್ವಾರಂಟೈನ್)  ಕ್ರಮ ಕೈಗೊಳ್ಳಬೇಕು.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಫ್ಲೂ ಗ್ಯಾಸ್  ಡಿಸಲ್ಫ್ಯುರಿಕರಣ : Flue Gas Desulphurization:


ಸಂದರ್ಭ:

ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕಗಳಿಗೆ  ಹೊಸ ಹೊರಸೂಸುವಿಕೆಯ ಮಾನದಂಡಗಳನ್ನು ಅಳವಡಿಸಿಕೊಳ್ಳಲು ನೀಡಿದ ಗಡುವನ್ನು ವಿಸ್ತರಿಸಲು ವಿದ್ಯುತ್ ಸಚಿವಾಲಯ ಪ್ರಸ್ತಾಪಿಸಿದೆ, “ಅಪ್ರಾಯೋಗಿಕ ಸಮಯ ಕೋಷ್ಟಕ” ದಿಂದಾಗಿ ಈ ಸ್ಥಾವರಗಳ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ ಮತ್ತು ಅದು ವಿದ್ಯುತ್ ದರ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸಚಿವಾಲಯ ಹೇಳುತ್ತದೆ.

ವಿವರಣೆ:

 • ವಿಷಕಾರಿ ಸಲ್ಫರ್ ಡೈಆಕ್ಸೈಡ್ ನ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಫ್ಲೂ ಗ್ಯಾಸ್ ಡೆಸುಲ್ಫುರೈಸೇಶನ್ (FGD) ಘಟಕಗಳನ್ನು ಸ್ಥಾಪಿಸಲು ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸಲು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕೇಂದ್ರವು ಈ ಮೊದಲು 2017 ರ ಗಡುವನ್ನು ನಿಗದಿಪಡಿಸಿತ್ತು.
 • ನಂತರ ಅದನ್ನು 2022 ರಲ್ಲಿ ಕೊನೆಗೊಳ್ಳುವ೦ತೆ ಬೇರೆ ಬೇರೆ ಪ್ರದೇಶಗಳಿಗೆ ವಿಭಿನ್ನ ಗಡುವನ್ನು ಬದಲಾಯಿಸಲಾಗಿದೆ.ಇತ್ತೀಚಿನ ಪ್ರಸ್ತಾವನೆಯಡಿಯಲ್ಲಿ, ಯಾವುದೇ ಹೊಸ ದಿನಾಂಕಗಳನ್ನು ನಿಗದಿಪಡಿಸಿಲ್ಲ.
 • ದೇಶಾದ್ಯಂತ ಆವರಿಸಿರುವ ಗಾಳಿಯ ಗುಣಮಟ್ಟವನ್ನು ಏಕರೂಪವಾಗಿ   ಕಾಯ್ದುಕೊಳ್ಳುವ ಗುರಿ ನಿರ್ವಹಿಸುವುದಾಗಿರಬೇಕೆ ಹೊರತು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಏಕರೂಪದ ಹೊರಸೂಸುವಿಕೆಯ ಮಾನದಂಡಗಳನ್ನು ನಿಗದಿಪಡಿಸುವುದಲ್ಲ ಎ೦ದು ಸಚಿವಾಲಯ ಹೇಳಿದೆ.

ಫ್ಲೂ ಗ್ಯಾಸ್ ಡೆಸಲ್ಫುರೈಸೇಶನ್ ಎಂದರೇನು?

 • ಸಲ್ಫರ್ ಡೈಆಕ್ಸೈಡ್ ಅನ್ನು ಬೇರ್ಪಡಿಸುವುದನ್ನು ಫ್ಲೂ-ಗ್ಯಾಸ್ ಡೆಸುಲ್ಫುರೈಸೇಶನ್ (FGD) ಎಂದು ಕರೆಯಲಾಗುತ್ತದೆ.
 • ಉಷ್ಣ ಸಂಸ್ಕರಣೆ, ಚಿಕಿತ್ಸೆ ಮತ್ತು ದಹನದಿಂದಾಗಿ. ಕುಲುಮೆಗಳು, ಬಾಯ್ಲರ್ಗಳು ಮತ್ತು ಇತರ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಉತ್ಪತ್ತಿಯಾಗುವ ನಿಷ್ಕಾಸ ಫ್ಲೂ ಅನಿಲಗಳಿಂದ SO2 ಮುಂತಾದ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ.

ಬಳಸುವ ಸಾಮಾನ್ಯ ವಿಧಾನಗಳು:

 • ಅನಿಲಗಳನ್ನು ತೆರವುಗೊಳಿಸಲು ಕ್ಷಾರೀಯ ವಸ್ತುಗಳು, ಸಾಮಾನ್ಯವಾಗಿ ಆರ್ದ್ರ ಸುಣ್ಣ ಅಥವಾ ಸಮುದ್ರದ ನೀರನ್ನು ಬಳಸಲಾಗುತ್ತದೆ;
 • ಇದೇ ರೀತಿಯ ಸೋರ್ಬೆಂಟ್ ಸ್ಲರಿಗಳನ್ನು (ಅಪಘರ್ಷಕ ದ್ರಾವಣ) ಬಳಸಿ ಸ್ಪ್ರೇ-ಡ್ರೈ ಸ್ಕ್ರಬ್ಬಿಂಗ್ ಮಾಡುವುದು.
 • ಆರ್ದ್ರ ಸಲ್ಫ್ಯೂರಿಕ್ ಆಮ್ಲ ಪ್ರಕ್ರಿಯೆಯು ವಾಣಿಜ್ಯ ಗುಣಮಟ್ಟದ ಸಲ್ಫ್ಯೂರಿಕ್ ಆಮ್ಲವನ್ನು ಪಡೆಯಲು ಸಹಾಯಕವಾಗಿದೆ;
 • SNOX ಫ್ಲೂ ಗ್ಯಾಸ್ ಡೀಸಲ್ಫೈರೈಸೇಶನ್ ವು ಸಲ್ಫರ್ ಡೈಆಕ್ಸೈಡ್, ಸಾರಜನಕ ಆಕ್ಸೈಡ್ ಮತ್ತು ಫ್ಲೂ ಅನಿಲಗಳಿಂದ ಕಣಗಳನ್ನು ತೆಗೆದುಹಾಕುತ್ತದೆ;
 • ಒಣ ಹೊರಸೂಸುವಿಕೆಯಿಂದ SO2 ಮತ್ತು SO3 ಅನ್ನು ತೆಗೆದುಹಾಕಲು ಒಣ ಹೈಡ್ರೀಕರಿಸಿದ ಸುಣ್ಣವನ್ನು (ಅಥವಾ ಇತರ ಸೋರ್ಬೆಂಟ್ ವಸ್ತುಗಳನ್ನು) ನಿಷ್ಕಾಸ ನಾಳಗಳಲ್ಲಿ ಸೇರಿಸುವ ಡ್ರೈ ಸೋರ್ಬೆಂಟ್ ಇಂಜೆಕ್ಷನ್ ವ್ಯವಸ್ಥೆಗಳ ಬಳಕೆ ಮಾಡುವುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


  ಪ್ಯಾಂಗೋಲಿನ್

       ಸಂದರ್ಭ:

ಪ್ಯಾಂಗೊಲಿನ್ ಗಳ ಬೇಟೆ ಯಾಡುವುದು ಮತ್ತು ವ್ಯಾಪಾರದ ಬಗ್ಗೆ ತನಿಖೆ ನಡೆಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ನಡೆಸುವ ಅಗತ್ಯವನ್ನು ಒಡಿಶಾ ಅರಣ್ಯ ಇಲಾಖೆ ಒತ್ತಿಹೇಳಿದೆ.

ಪ್ರಮುಖ ಅಂಶಗಳು:

ಪ್ಯಾಂಗೊಲಿನ್ ನಮ್ಮ ಭೂ ಗ್ರಹದ ಚಿಪ್ಪುಗಳುಳ್ಳ ಏಕೈಕ ಸಸ್ತನಿಯಾಗಿದೆ.

CITES (ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ)  ಪ್ರಕಾರ, ಇದು ತನ್ನ ವರ್ಗದ (ಸಸ್ತನಿ ವರ್ಗದ) ಜೀವಿಗಳಲ್ಲಿ ಅತಿ ಹೆಚ್ಚು ಅಕ್ರಮ ವ್ಯಾಪಾರಕ್ಕೆ  ಒಳಪಟ್ಟ ಕಶೇರುಕವಾಗಿದೆ.

ವಿಶ್ವಾದ್ಯಂತ ಕಂಡು ಬರುವ ಎಂಟು ಜಾತಿಯ ಪ್ಯಾಂಗೊಲಿನ್,ಗಳಲ್ಲಿ ಎರಡು  ಭಾರತದಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಒಂದು, ಹೆಚ್ಚಾಗಿ ಈಶಾನ್ಯ ಭಾರತದಲ್ಲಿ ಕಂಡುಬರುವ  ಚೀನೀ ಪ್ಯಾಂಗೊಲಿನ್, ಮತ್ತೊಂದು  ಭಾರತೀಯ ಪ್ಯಾಂಗೊಲಿನ್‌.

ಚೀನೀ ಪ್ಯಾಂಗೊಲಿನ್ ಅನ್ನು “ ತೀವ್ರ ಅಳಿವಿನಂಚಿನಲ್ಲಿರುವ” (CR)ಎಂದು ಪಟ್ಟಿ ಮಾಡಲಾಗಿದೆ.

ಭಾರತೀಯ ಪ್ಯಾಂಗೊಲಿನ್ (Manis crassicaudata) ಅನ್ನು “ಅಳಿವಿನಂಚಿನಲ್ಲಿರುವ”  (EN) ಎಂದು ಪಟ್ಟಿ ಮಾಡಲಾಗಿದೆ.

ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ರ ಅನುಸೂಚಿ I ವರ್ಗದ ಅಡಿಯಲ್ಲಿ ಸಂರಕ್ಷಿತ ಪ್ರಾಣಿಯಾಗಿದೆ.

table_2

 ಭಾರತದ ಆರ್ಕ್ಟಿಕ್ ಸಂಶೋಧನಾ ಚಟುವಟಿಕೆಯು ಜೂನ್‌ನಲ್ಲಿ ಪುನರಾರಂಭಗೊಳ್ಳಲಿದೆ.

ನಾರ್ವೆಯ ಸ್ಪಿಟ್ಸ್‌ಬರ್ಗ್ ದ್ವೀಪದಲ್ಲಿರುವ ಅಂತರರಾಷ್ಟ್ರೀಯ ಸಂಶೋಧನಾ ಕೇಂದ್ರದ  ಸೌಲಭ್ಯವನ್ನು ಬಳಸಿಕೊಂಡು 2007 ರ ಆಗಸ್ಟ್ ಮೊದಲ ವಾರದಲ್ಲಿ ಆರ್ಕ್ಟಿಕ್‌ನಲ್ಲಿ ತನ್ನ ಮೊದಲ ವೈಜ್ಞಾನಿಕ ಸಂಶೋಧನಾ ಯಾತ್ರೆಯನ್ನು ಪ್ರಾರಂಭಿಸುವ ಮೂಲಕ ಭಾರತ ಆರ್ಕ್ಟಿಕ್ ಸಂಶೋಧನೆಗೆ ಕೈಹಾಕಿತು.

ತರುವಾಯ, ಆರ್ಕ್ಟಿಕ್‌ನಲ್ಲಿ ಅಧ್ಯಯನ ನಡೆಸಲು ಭಾರತವು ಪ್ರತಿ ಬೇಸಿಗೆ ಮತ್ತು ಚಳಿಗಾಲದಲ್ಲಿ ವೈಜ್ಞಾನಿಕ ತಂಡಗಳನ್ನು ಕಳುಹಿಸುತ್ತಿದೆ, ಮುಖ್ಯವಾಗಿ ಗ್ಲೇಶಿಯಾಲಜಿ,(ಹಿಮನದಿವಿಜ್ಞಾನ) ಹೈಡ್ರೋಕೆಮಿಸ್ಟ್ರಿ, ಮೈಕ್ರೋಬಯಾಲಜಿ ಮತ್ತು ವಾಯುಮಂಡಲದ ವಿಜ್ಞಾನ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಲು.

ಹಿನ್ನೆಲೆ:

ಭಾರತವು ಅಂಟಾರ್ಕ್ಟಿಕ್ ಒಪ್ಪಂದಕ್ಕೆ ಮತ್ತು ಪರಿಸರ ಸಂರಕ್ಷಣೆ ಕುರಿತ ಅಂಟಾರ್ಕ್ಟಿಕ್ ಶಿಷ್ಟಾಚಾರ ಒಪ್ಪಂದಕ್ಕೆ ಸಹಿ ಹಾಕಿದೆ ಮತ್ತು ಅಂಟಾರ್ಕ್ಟಿಕಾದಲ್ಲಿ ಎರಡು ಸಂಶೋಧನಾ ಕೇಂದ್ರಗಳನ್ನು ಹೊಂದಿದೆ: ಭಾರತಿ (2012 ರಲ್ಲಿ ಕಾರ್ಯಾರಂಭಿಸಿದೆ) ಮತ್ತು ಮೈತ್ರಿ (1988 ರಿಂದ). ಆರ್ಕ್ಟಿಕ್ ಕೌನ್ಸಿಲ್ನಲ್ಲಿ ಭಾರತವು  ವೀಕ್ಷಕ ಸ್ಥಾನ ಮಾನ (Observer Status) ವನ್ನು ಹೊಂದಿದೆ.

ನವೀನ ‘ಸ್ಕೂಲ್ ಬ್ಯಾಗ್ ನೀತಿ, 2020’:

 • ಇದನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಬಿಡುಗಡೆ ಮಾಡಿದೆ.
 • ಶಾಲಾ ಚೀಲಗಳ ತೂಕ, ನೀತಿಯ ಪ್ರಕಾರ, 1 ಮತ್ತು 2ನೇ ತರಗತಿಗಳ        ವಿದ್ಯಾರ್ಥಿಗಳಿಗೆ 1.6 ರಿಂದ 2.2 ಕೆಜಿ ಇರಬೇಕು, ಮತ್ತು

3,4 ಮತ್ತು 5 ನೇ ತರಗತಿಗಳಿಗೆ 1.7 ರಿಂದ 2.5 ಕೆಜಿ, 6 ಮತ್ತು 7 ನೇ ತರಗತಿಗಳಿಗೆ 2 ರಿಂದ 3 ಕೆಜಿ, ಎಂಟನೇ ತರಗತಿಗೆ 2.5 ರಿಂದ 4 ಕೆಜಿ, ಒಂಬತ್ತನೇ ಮತ್ತು ಹತ್ತನೇ ತರಗತಿಗಳಿಗೆ 2.5 ರಿಂದ 4.5 ಕೆಜಿ ಮತ್ತು 11 ಮತ್ತು 12 ನೇ ತರಗತಿಗಳಿಗೆ 3.5 ರಿಂದ 5 ಕೆಜಿ. ತೂಕ ಇರಬೇಕೆಂದು ಸೂಚಿಸಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos