ಪರಿವಿಡಿ:
- ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಆಹಾರದಲ್ಲಿನ ಟ್ರಾನ್ಸ್ ಫ್ಯಾಟ್ (ಪರಿವರ್ತಿತ ಕೊಬ್ಬು) ಮೇಲೆ ವಿಧಿಸಿದ್ದ ಮಿತಿಯನ್ನು ಕಡಿತಗಳಿಸಿದ FSSAI .
2. ಯುದ್ಧದ ಸನ್ನದ್ಧತೆಯನ್ನು ಹೆಚ್ಚಿಸಲು ರಕ್ಷಣಾ ಕಾನೂನನ್ನು ತಿದ್ದುಪಡಿ ಮಾಡಿದ ಚೀನಾ.
3. ಭದ್ರತಾ ಸಮಿತಿಯ ಅಂತಾರಾಷ್ಟ್ರೀಯ ಸಂಘಟನೆ.
4. ಸ್ವತಂತ್ರ್ಯ ಕ್ಕಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾದ ಸ್ಕಾಟ್ಲ್ಯಾಂಡ್.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಕೋವಿಶಿeಲ್ಡ್ V/S ಕೋವ್ಯಾಕ್ಸಿನ್
2. ವಾತಾವರಣ ಮತ್ತು ಹವಾಮಾನ ಸಂಶೋಧನಾ ಮಾದರಿ ವಿಕ್ಷಣಾ ವ್ಯವಸ್ಥೆಗಳು ಮತ್ತು ಸೇವೆಗಳ ( ACROSS) ಯೋಜನೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಮನ್ನತು ಪದ್ಮನಾಭನ್.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು : ಆರೋಗ್ಯ ಸಂಬಂಧಿ ಸಮಸ್ಯೆಗಳು.
ಆಹಾರದಲ್ಲಿನ ಟ್ರಾನ್ಸ್ ಫ್ಯಾಟ್ (ಪರಿವರ್ತಿತ ಕೊಬ್ಬು) ಮೇಲೆ ವಿಧಿಸಿದ್ದ ಮಿತಿಯನ್ನು ಕಡಿತಗಳಿಸಿದ FSSAI .
ಸಂದರ್ಭ :
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (The Food Safety and Standards Authority of India) ತೈಲಗಳು ಮತ್ತು ಕೊಬ್ಬುಗಳಲ್ಲಿನ ಟ್ರಾನ್ಸ್ ಫ್ಯಾಟಿ ಆಸಿಡ್ (TFA) ಪ್ರಮಾಣವನ್ನು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಮಾರಾಟದ ಮೇಲಿನ ನಿರ್ಬಂಧ ಮತ್ತು ನಿಷೇಧ) ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಪ್ರಸ್ತುತ ಅನುಮತಿಸಲ್ಪಟ್ಟ ಮಿತಿಯಾದ 5% ರಿಂದ 2021 ಕ್ಕೆ 3% ಮತ್ತು 2022 ರ ವೇಳೆಗೆ 2% ಕ್ಕೆ ಇಳಿಸುವ ಮಿತಿ ನಿಗದಿಗೊಳಿಸಿದೆ.
ಹಿನ್ನೆಲೆ:
ಪರಿಷ್ಕೃತ ನಿಯಂತ್ರಣವು ಸಂಸ್ಕರಿಸಿದ ಖಾದ್ಯ ತೈಲಗಳು, ವನಸ್ಪತಿ (ಭಾಗಶಃ ಹೈಡ್ರೋಜನೀಕರಿಸಿದ ತೈಲಗಳು), ಮಾರ್ಗರೀನ್(ಅಡಿಗೆಗೆ ಬಳಸುವ ಜಿಡ್ಡು ಪದಾರ್ಥ) ಬೇಕರಿ ಉತ್ಪನ್ನಗಳು ಮತ್ತು ಅಡುಗೆ ಮಾಡುವ ಇತರ ಮಾಧ್ಯಮಗಳಾದ ತರಕಾರಿ ಕೊಬ್ಬು ಮತ್ತು ಮಿಶ್ರ ಕೊಬ್ಬಿಗೆ ಅನ್ವಯಿಸುತ್ತದೆ.
ಭಾಗಶಃ ಹೈಡ್ರೋಜನೀಕರಿಸಿದ ತೈಲಗಳು ಟ್ರಾನ್ಸ್ ಕೊಬ್ಬನ್ನು ಹೊಂದಿರುತ್ತವೆ, ಅದು ಮೃದುವಾದ ಬೆಣ್ಣೆಯ ಸ್ಥಿರತೆ ನೀಡುತ್ತದೆ. ಆಹಾರ ತಯಾರಕರು ಸಂಸ್ಕರಿಸಿದ ಆಹಾರಗಳು, ಬೇಯಿಸಿದ ಸರಕುಗಳು ಮತ್ತು ಸ್ಟಿಕ್ ಮಾರ್ಗರೀನ್ಗಳಲ್ಲಿ ಭಾಗಶಃ ಹೈಡ್ರೋಜನೀಕರಿಸಿದ ತೈಲವನ್ನು ಬಳಸಬಹುದು ಏಕೆಂದರೆ ಇದು ನಿಯಮಿತವಾದ ತೈಲಕ್ಕಿಂತ ದೀರ್ಘಕಾಲ ಇರುತ್ತದೆ ಮತ್ತು ಪ್ಯಾಸ್ಟ್ರಿಗಳ ವಿನ್ಯಾಸವನ್ನು ನೀಡುತ್ತದೆ.
ಅಗತ್ಯತೆ :
ಟ್ರಾನ್ಸ್ ಕೊಬ್ಬುಗಳು ಹೃದಯಾಘಾತದ ಅಪಾಯದೊಂದಿಗೆ ಹೃದಯರಕ್ತನಾಳದ ಕಾಯಿಲೆಯಿಂದ ಸಂಭವಿಸುವ ಹೆಚ್ಚಿನ ಸಾವುಗಳೊಂದಿಗೆ ಸಂಬಂಧ ಹೊಂದಿವೆ. ಟ್ರಾನ್ಸ್ ಕೊಬ್ಬುಗಳ ಸೇವನೆಯು ಹೃದಯದ ಕಾಯಿಲೆ ಮಾತ್ರವಲ್ಲದೆ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಟೈಪ್ 2 ಮಧುಮೇಹಕ್ಕೂ ಕಾರಣವಾಗುತ್ತದೆ.
- ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೈಗಾರಿಕಾ ಜನ್ಯ ಟ್ರಾನ್ಸ್ ಫ್ಯಾಟಿ (ಪರಿವರ್ತಿತ ಕೊಬ್ಬಿನಾಮ್ಲ) ಆಸಿಡ್ ಗಳ ಸೇವನೆಯಿಂದ ಜಾಗತಿಕವಾಗಿ ಪ್ರತಿವರ್ಷ ಸುಮಾರು 5.4 ಲಕ್ಷ ಸಾವುಗಳು ಸಂಭವಿಸುತ್ತಿವೆ.
- 2023 ರ ವೇಳೆಗೆ ಟ್ರಾನ್ಸ್ ಕೊಬ್ಬನ್ನು / ಪರಿವರ್ತಿತ ಕೊಬ್ಬನ್ನು ಜಾಗತಿಕವಾಗಿ ನಿರ್ಮೂಲನೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ಕರೆ ನೀಡಿದೆ.
ಟ್ರಾನ್ಸ್ ಕೊಬ್ಬುಗಳು ಎಂದರೇನು ? What are Trans fats?
- ಟ್ರಾನ್ಸ್ ಫ್ಯಾಟಿ ಆಸಿಡ್ (ಟಿಎಫ್‌ಎ) ಅಥವಾ ಟ್ರಾನ್ಸ್ ಕೊಬ್ಬುಇತರ ಯಾವುದೇ ಆಹಾರ ಘಟಕಗಳಿಗಿಂತ ನಮ್ಮ ದೇಹದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುವ ಅತ್ಯಂತ ಹಾನಿಕಾರಕ ಕೊಬ್ಬುಗಳಾಗಿವೆ.
- ಈ ಕೊಬ್ಬುಗಳು ಹೆಚ್ಚಾಗಿ ಕೃತಕವಾಗಿ ಉತ್ಪತ್ತಿಯಾಗುತ್ತವೆಯಾದರೂ ಅಲ್ಪ ಪ್ರಮಾಣದಲ್ಲಿ ನೈಸರ್ಗಿಕವಾಗಿಯೂ ದೊರೆಯುತ್ತವೆ. ಆದ್ದರಿಂದ ಇವು ನಮ್ಮ ಆಹಾರದಲ್ಲಿ, ಕೃತಕ ಟಿಎಫ್‌ಎಗಳ ರೂಪದಲ್ಲಿಯಾಗಲಿ ಅಥವಾ ನೈಸರ್ಗಿಕ ಟಿಎಫ್‌ಎಗಳ ರೂಪದಲ್ಲಿಯಾಗಲಿ ಉಪಸ್ಥಿತ ವಿರಬಹುದು.
- ಕೃತಕ TFA ಗಳು ಶುದ್ಧ ತುಪ್ಪ / ಬೆಣ್ಣೆಯನ್ನು ಹೋಲುವ ಕೊಬ್ಬುಗಳನ್ನು ಉತ್ಪಾದಿಸಲು ಎಣ್ಣೆಯೊಂದಿಗೆ ಪ್ರತಿಕ್ರಿಯಿಸಲು ಹೈಡ್ರೋಜನ್ ಅನ್ನು ತಯಾರಿಸಿದಾಗ ರೂಪುಗೊಳ್ಳುತ್ತವೆ.
- ನಮ್ಮ ಆಹಾರದಲ್ಲಿ ಕೃತಕ TFA ಗಳ ಪ್ರಮುಖ ಆಕರಗಳು ಭಾಗಶಃ ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳು (PHVO) / ವನಸ್ಪತಿ / ಮಾರ್ಗರೀನ್ ಗಳಾದರೆ ನೈಸರ್ಗಿಕ TFAಗಳು ಸಣ್ಣ ಪ್ರಮಾಣದಲ್ಲಿಯಾದರೂ ಮಾಂಸ ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತವೆ.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳು.
ಯುದ್ಧದ ಸನ್ನದ್ಧತೆಯನ್ನು ಹೆಚ್ಚಿಸಲು ರಕ್ಷಣಾ ಕಾನೂನನ್ನು ತಿದ್ದುಪಡಿ ಮಾಡಿದ ಚೀನಾ.
ಸಂದರ್ಭ:
ಚೀನಾದ ರಾಷ್ಟ್ರೀಯ ರಕ್ಷಣಾ ಕಾನೂನನ್ನು ತಿದ್ದುಪಡಿ ಮಾಡಲಾಗಿದೆ.
ಪ್ರಮುಖ ಬದಲಾವಣೆಗಳು:
ರಾಷ್ಟ್ರೀಯ ಹಿತಾಸಕ್ತಿ ಯಾವುದು ಎಂಬುದರ ನವೀನ ಮತ್ತು ವಿಶಾಲವಾದ ವ್ಯಾಖ್ಯಾನವನ್ನು ರಕ್ಷಿಸಲು ಸಂಪನ್ಮೂಲಗಳ ನಿಯೋಜನೆ ಮಾಡಲು ಕೇಂದ್ರೀಯ ಮಿಲಿಟರಿ ಆಯೋಗಕ್ಕೆ (CMC) ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ತಜ್ಞರು ಹೇಳುವಂತೆ “ಅಭಿವೃದ್ಧಿ ಆಸಕ್ತಿಗಳು” ಎಂಬ ಪದವು ಚೀನಾದ ಆರ್ಥಿಕ ಚಟುವಟಿಕೆಗಳು ಮತ್ತು ಸಾಗರೋತ್ತರ ಸ್ವತ್ತುಗಳ ರಕ್ಷಣೆಯನ್ನು ಒಳಗೊಂಡಿದೆ, ಅಂದರೆ ಚೀನಾದ ಬೆಲ್ಟ್ ಮತ್ತು ರೋಡ್ ಉಪಕ್ರಮದಡಿಯಲ್ಲಿ ಸೇನೆಯನ್ನು ಸಂಘಟಿಸಿ ನಿಯೋಜಿಸುವುದಾಗಿದೆ.
ಈ ತಿದ್ದುಪಡಿಯು ಭೂ ಗಡಿಗಳು, ಸಾಗರತೀರ ಮತ್ತು ವಾಯು ರಕ್ಷಣೆಯನ್ನು ಮೀರಿದ ಬಾಹ್ಯಾಕಾಶ ಕ್ಷೇತ್ರ ಮತ್ತು ವಿದ್ಯುತ್ಕಾಂತೀಯ ಜಾಲಗಳನ್ನು ಒಳಗೊಂಡು ಭದ್ರತಾ ಕ್ಷೇತ್ರಗಳ ವ್ಯಾಪ್ತಿಯನ್ನು ವಿಸ್ತರಿಸಿದೆ.
ಈ ತಿದ್ದುಪಡಿಯು ಚೀನಾ ದೇಶವು “ಜಾಗತಿಕ ಭದ್ರತಾ ಆಡಳಿತದಲ್ಲಿ ಭಾಗವಹಿಸುತ್ತದೆ, ಬಹುಪಕ್ಷೀಯ ಭದ್ರತಾ ಮಾತುಕತೆಗಳಲ್ಲಿ ತೊಡಗುತ್ತದೆ ಮತ್ತು ವ್ಯಾಪಕವಾಗಿ ಅಂಗೀಕರಿಸಲ್ಪಡುವ, ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಅಂತರರಾಷ್ಟ್ರೀಯ ನಿಯಮಗಳನ್ನು ಸ್ಥಾಪಿಸುತ್ತದೆ” ಎಂದು ಹೇಳಿದೆ.
ಪರಿಣಾಮಗಳು:
ಈ ಬದಲಾವಣೆಯು ನಾಗರಿಕ-ಮಿಲಿಟರಿ ಸಮ್ಮಿಲನದ ಭಾಗವಾಗಿ 2049 ರ ವೇಳೆಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ 100 ನೇ ವರ್ಷಕ್ಕೆ ಕಾಲಿಟ್ಟಾಗ, ಚೀನಾದ ಸೇನೆ (PLA) ಯನ್ನು “ವಿಶ್ವ ದರ್ಜೆಯ” ಮಿಲಿಟರಿ ಶಕ್ತಿಯನ್ನಾಗಿ ಅಥವಾ ಯುನೈಟೆಡ್ ಸ್ಟೇಟ್ಸ್ ಮಿಲಿಟರಿಗೆ ಸಮನಾದ ಶಕ್ತಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಭದ್ರತಾ ಸಮಿತಿಯ ಅಂತಾರಾಷ್ಟ್ರೀಯ ಸಂಘಟನೆ.
International Organization of Securities Commissions (IOSCO):
ಸಂದರ್ಭ : ಅಂತರಾಷ್ಟೀಯ ಹಣಕಾಸು ಸೇವೆಗಳ ಕೇಂದ್ರೀಯ ಪ್ರಾಧಿಕಾರವು(IFSCA), ಭದ್ರತಾ ಸಮಿತಿಯ ಅಂತಾರಾಷ್ಟ್ರೀಯ ಸಂಘಟನೆಯ ಸಹ ಸದಸ್ಯತ್ವ ಪಡೆದಿದೆ.
ಭಾರತದಲ್ಲಿ IFSC :
ದೇಶದ ಮೊದಲ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವನ್ನು (IFSC) ಗುಜರಾತ್ ನ ಗಾಂಧಿನಗರದ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (GIFT) ಯಲ್ಲಿ ಸ್ಥಾಪಿಸಲಾಗಿದೆ.
ಅಂತಹ ಸಂಸ್ಥೆಗಳನ್ನು ನಿಯಂತ್ರಿಸಲು ಗಾಂಧಿನಗರದಲ್ಲಿ ಅದರ ಪ್ರಧಾನ ಕಚೇರಿಯೊಂದಿಗೆ ಸರ್ಕಾರ ಕಳೆದ ವರ್ಷದ ಏಪ್ರಿಲ್ 27 ರಂದು IFSCA ವನ್ನು ಸ್ಥಾಪಿಸಿತು.
2019 ರ ಡಿಸೆಂಬರ್‌ನಲ್ಲಿ ಸಂಸತ್ತು, ದೇಶದ IFSC ಗಳಲ್ಲಿ ನಡೆಯುವ ಎಲ್ಲಾ ಹಣಕಾಸು ಚಟುವಟಿಕೆಗಳನ್ನು ನಿಯಂತ್ರಿಸಲು ಏಕೀಕೃತ ಪ್ರಾಧಿಕಾರವನ್ನು ಸ್ಥಾಪಿಸುವ ಮಸೂದೆಯನ್ನು ಅಂಗೀಕರಿಸಿತು.
IOSCO ಕುರಿತು :
ಇದು ವಿಶ್ವದ ಸೆಕ್ಯುರಿಟೀಸ್(ಷೇರುಪೇಟೆ) ನಿಯಂತ್ರಕರನ್ನು ಒಟ್ಟುಗೂಡಿಸುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ ಮತ್ತು ಸೆಕ್ಯುರಿಟೀಸ್ ಕ್ಷೇತ್ರಕ್ಕೆ ಜಾಗತಿಕ ಗುಣಮಟ್ಟದ ಸೆಟ್ಟರ್ ಎಂದು ಗುರುತಿಸಲ್ಪಟ್ಟಿದೆ.
ಸೆಕ್ಯುರಿಟೀಸ್/ ಷೇರುಪೇಟೆ ನಿಯಂತ್ರಣಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಮಾನದಂಡಗಳನ್ನು IOSCO ಅನುಸರಣೆಯನ್ನು ಅಭಿವೃದ್ಧಿಪಡಿಸುತ್ತದೆ, ಕಾರ್ಯಗತಗೊಳಿಸುತ್ತದೆ ಮತ್ತು ಉತ್ತೇಜಿಸುತ್ತದೆ.
ಇದು ಜಾಗತಿಕ ನಿಯಂತ್ರಕ ಸುಧಾರಣಾ ಕಾರ್ಯಸೂಚಿಯಲ್ಲಿ ಜಿ 20 ರಾಷ್ಟ್ರಗಳು ಮತ್ತು ಹಣಕಾಸು ಸ್ಥಿರತೆ ಮಂಡಳಿ (FSB) ಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.
ಸದಸ್ಯರು :
IOSCO ವನ್ನು 1983 ರಲ್ಲಿ ಸ್ಥಾಪಿಸಲಾಗಿದ್ದು ಇದರ ಸದಸ್ಯತ್ವವು 115 ಕ್ಕೂ ಹೆಚ್ಚು ಆಡಳಿತವ್ಯಾಪ್ತಿಯನ್ನು ಹೊಂದಿರುವ ವಿಶ್ವದ 95% ಕ್ಕಿಂತ ಹೆಚ್ಚು ಸೆಕ್ಯುರಿಟಿ(ಷೇರು) ಮಾರುಕಟ್ಟೆಗಳನ್ನು ನಿಯಂತ್ರಿಸುತ್ತದೆ; ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸೆಕ್ಯುರಿಟೀಸ್ ನಿಯಂತ್ರಕರು ಅದರ ಸಾಮಾನ್ಯ ಸದಸ್ಯತ್ವದ 75% ನಷ್ಟು ಪಾಲನ್ನು ಹೊಂದಿದ್ದಾರೆ.
ವಿಷಯಗಳು : ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮ,
ಸ್ವತಂತ್ರ್ಯ ಕ್ಕಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾದ ಸ್ಕಾಟ್ಲ್ಯಾಂಡ್.
ಸಂದರ್ಭ :
ಬ್ರೆಕ್ಸಿಟ್ ಪ್ರಕರಣವು ಸ್ಕಾಟ್ಲೆಂಡ್ ನಲ್ಲಿ ಹೊಸ ಜನ ಮತ ಗಣನೆಗೆ ಪುಷ್ಠಿ ನೀಡಿದೆ ಎಂಬ ವಾದವನ್ನು ತಳ್ಳಿ ಹಾಕುತ್ತ ಬೋರಿಸ್ ಜಾನ್ಸನ್ ಸ್ಕಾಟ್ಲೆಂಡ್ ಕನಿಷ್ಠ 2050 ರವರೆಗೆ ಸ್ವಾತಂತ್ರ್ಯಕ್ಕಾಗಿ ಮತ್ತೊಂದು ಜನಾಭಿಪ್ರಾಯ ಸಂಗ್ರಹವನ್ನು ನಡೆಸಬಾರದು ಎಂದು ಸೂಚಿಸಿದ್ದಾರೆ,
ಕೊನೆಯ ಜನಾಭಿಪ್ರಾಯ ಸಂಗ್ರಹ ಯಾವಾಗ ನಡೆದಿತ್ತು?
ಸ್ಕಾಟಿಷ್ ಸ್ವಾತಂತ್ರ್ಯಕ್ಕಾಗಿ ಜನಾಭಿಪ್ರಾಯ ಸಂಗ್ರಹವನ್ನು 2014 ರಲ್ಲಿ ನಡೆಸಲಾಗಿತ್ತು ಆದರೆ ಸ್ಕಾಟ್ಲೆಂಡ್ ನ ಜನರು ಯುಕೆ ನಲ್ಲಿಯೇ ಮುಂದುವರೆಯುವ ವರವಾಗಿ ಮತ ಚಲಾಯಿಸಿದ್ದರು.
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಒಂದಾಗಿದ್ದು ಯಾವಾಗ?
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಏಕೀಕರಣದ ಕಾಯಿದೆಗೆ 1707 ರ ಜನವರಿ 16 ರಂದು ಸಹಿ ಹಾಕಲ್ಪಟ್ಟಿತು. ಇದು ಅದೇ ವರ್ಷದ ಮೇ 1 ರಂದು ಜಾರಿಗೆ ಬರುವ ಮೂಲಕ ಯುನೈಟೆಡ್ ಕಿಂಗ್‌ಡಮ್ ಆಫ್ ಬ್ರಿಟನ್ ಅನ್ನು ರಚಿಸಿತು. ಸ್ಕಾಟಿಷ್ ಸಂಸತ್ತಿನ ವಿಸರ್ಜನೆಯೊಂದಿಗೆ ಮತ್ತು ಲಂಡನ್‌ನ ವೆಸ್ಟ್ ಮಿನಿಸ್ಟರ್ ನಲ್ಲಿ ಒಂದೇ ಸಂಸತ್ತನ್ನು ರಚಿಸಲಾಯಿತು.
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಏಕೆ ಒಗ್ಗೂಡಿದವು?
ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ಸಂಕೀರ್ಣ ಇತಿಹಾಸವನ್ನು ಹೊಂದಿದ್ದು, ಆದರೆ ಇದಕ್ಕೆ ನೀಡಬಹುದಾದ ಚುಟುಕು ಉತ್ತರವೆಂದರೆ ಸ್ಕಾಟ್ಲೆಂಡ್‌ಗೆ ಆರ್ಥಿಕ ಉತ್ತೇಜನ ಬೇಕಿತ್ತು. ಪನಾಮದಲ್ಲಿ ವ್ಯಾಪಾರಿ ವಸಾಹತು ಸ್ಥಾಪಿಸುವ ವಿಫಲ ಪ್ರಯತ್ನದ ನಂತರ ದೇಶದ ಹಣಕಾಸು ವ್ಯವಸ್ಥೆ ಅಧೋಗತಿಗೆ ಇಳಿಯಿತು ಆಗ ಸ್ಕಾಟ್ಲೆಂಡ್ನ ಭವಿಷ್ಯದ ಸಮೃದ್ಧಿಯನ್ನು ಯೂನಿಯನ್ ಉತ್ತಮವಾಗಿ ಪೂರೈಸ ಬಲ್ಲದು ಎಂಬ ಮಹತ್ವಾಕಾಂಕ್ಷೆಯು ಈ ವಿಫಲ ಯೋಜನೆಗೆ ನಿರ್ಣಾಯಕ ಸಾಕ್ಷಿಯಾಯಿತು.
ಸ್ವಾತಂತ್ರ್ಯದ ಮುಖ್ಯ ಕಾರಣ ಯಾವುದು?
ಸ್ವಾತಂತ್ರ್ಯವನ್ನು ಬೆಂಬಲಿಸುವವರು ಸ್ಕಾಟ್‌ಲ್ಯಾಂಡ್ ಇಂಗ್ಲೆಂಡ್‌ನಿಂದ ಬೇರ್ಪಟ್ಟರೆ ಅದು ಇನ್ನೂ “ಶ್ರೀಮಂತ” ವಾಗುತ್ತದೆ ಎಂದು ನಂಬುತ್ತಾರೆ.
ಸಂಪನ್ಮೂಲಗಳ ನಿಯಂತ್ರಣ ಮತ್ತು ಹಣಕಾಸಿನ ಹೂಡಿಕೆ ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಸ್ಕಾಟ್ಲೆಂಡ್ ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಸ್ವಾತಂತ್ರ್ಯದ ಪ್ರತಿಪಾದಕರು ಬಯಸುತ್ತಾರೆ.
ಉದಾಹರಣೆಗೆ, ಅವರು ಬಿಲಿಯನ್ ಗಟ್ಟಲೆ ಪೌಂಡ್‌ಗಳನ್ನು ಪರಮಾಣು ಶಸ್ತ್ರಾಸ್ತ್ರಗಳಲ್ಲಿ ಹೂಡಿಕೆ ಮಾಡುವ ಬದಲು, ಮಕ್ಕಳ ಆರೈಕೆ ಅಥವಾ ಪ್ರತಿಭೆಯನ್ನು ಉಳಿಸಿ ಬೆಳೆಸಲು ಮತ್ತು ಸ್ಕಾಟ್ ಲ್ಯಾಂಡ್ ಯುವಕರ ಬೆಳವಣಿಗೆಯಂತಹ ಕಾರ್ಯಕ್ರಮಗಳಿಗೆ ಖರ್ಚು ಮಾಡಲು ಬಯಸುತ್ತಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 3
ವಿಷಯಗಳು: ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನದ ಅಭಿವೃದ್ಧಿ:
ಸೀರಮ್ ಸಂಸ್ಥೆಯ ಕೋವಿಶೀಲ್ಡ್ V/S ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್:
ಸಂದರ್ಭ:
ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಿದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ನ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಭಾರತದ ಔಷಧ ಮಹಾನಿಯಂತ್ರಕರು (DCGI) ಇತ್ತೀಚೆಗೆ ಅನುಮೋದನೆ ನೀಡಿದ್ದಾರೆ.
ಹಿನ್ನೆಲೆ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾದ ಮೂರನೇ ಹಂತದ ಪ್ರಯೋಗಗಳ ಮಾನದಂಡಗಳನ್ನು ಕೋವಿಶಿeಲ್ಡ್ ಆಗಲಿ ಅಥವಾ ಕೋವ್ಯಾಕ್ಸಿನ್ ಆಗಲಿ ಪೂರೈಸಿಲ್ಲ, ಆದರೆ ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ಸ್ವಯಂಸೇವಕರಿಗೆ ಲಸಿಕೆಯನ್ನು ನೀಡಲಾಗುತ್ತಿದೆ.
ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯ (CDSCO) ಕೋವಿಡ್–19 ವಿಷಯ ಪರಿಣತ ಸಮಿತಿಯ ಶಿಫಾರಸಿನ ಆಧಾರದಲ್ಲಿ ಲಸಿಕೆಗಳ ಬಳಕೆಗೆ ಅನುಮತಿ ನೀಡುವ ನಿರ್ಧಾರವನ್ನು DCGI ತೆಗೆದುಕೊಂಡಿದೆ.
ಕೋವಿಶಿeಲ್ಡ್ ಕುರಿತು:
ಕೋವಿಶೀಲ್ಡ್ ಲಸಿಕೆಯನ್ನು ಆಸ್ಟ್ರಾಜೆನೆಕಾ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ.
ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅದರ ಉತ್ಪಾದನೆ ಮತ್ತು ಪ್ರಯೋಗಗಳ ಪಾಲುದಾರನಾಗಿದೆ.
ಸಾಮಾನ್ಯ ಶೀತ ವೈರಸ್ ನ ದುರ್ಬಲಗೊಂಡ ಆವೃತ್ತಿಯನ್ನು ಆಧರಿಸಿ ಇದು ಪುನರಾವರ್ತನೆಯ-ಕೊರತೆಯಿರುವ ಚಿಂಪಾಂಜಿ ವೈರಲ್ ವೆಕ್ಟರ್ ಅನ್ನು ಬಳಸುತ್ತದೆ.
ಈ ವೈರಸ್ ಚಿಂಪಾಂಜಿಗಳಲ್ಲಿ ಸೋಂಕನ್ನು ಉಂಟುಮಾಡುತ್ತದೆ ಮತ್ತು SARS-CoV-2 ವೈರಸ್ ನ ಸ್ಪೈಕ್ ಪ್ರೋಟೀನ್‌ನ ಆನುವಂಶಿಕ ಅಂಶಗಳನ್ನು ಹೊಂದಿರುತ್ತದೆ.
ಕೋವ್ಯಾಕ್ಸಿನ್ ಕುರಿತು:
ಕೋವಾಕ್ಸಿನ್ ಅನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಇದು ಕೋವಿಡ್ -19 ವಿರುದ್ಧ ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿದೆ.
ಭಾರತ್ ಬಯೋಟೆಕ್ ಈ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಮತ್ತು ಪುಣೆ ಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ಇದು ನಿಷ್ಕ್ರಿಯಗೊಳಿಸಿದ ಲಸಿಕೆಯಾಗಿದ್ದು, ರೋಗವನ್ನು ಉಂಟುಮಾಡುವ ಸಜೀವ ಸೂಕ್ಷ್ಮಾಣುಜೀವಿಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ (ಕೊಲ್ಲುವ) ಅಭಿವೃದ್ಧಿ ಪಡಿಸಲಾಗುತ್ತದೆ
ಇದುರೋಗಕಾರಕದ ಪುನರಾವರ್ತನೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ ಆದರೆ ರೋಗನಿರೋಧಕ ವ್ಯವಸ್ಥೆಯು ಅದನ್ನು ಇನ್ನೂ ಗುರುತಿಸಲು ಸಾಧ್ಯವಾಗುವಂತೆ ಅದನ್ನು ಹಾಗೇ ಇಡುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತದೆ.
ಇದು ಸುರಕ್ಷಿತವೇ?
ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆ ಗಳಿಗೆ ಅನುಮೋದನೆ ನೀಡಿರುವುದನ್ನು ಸ್ವಾಗತಿಸಿದೆ, ಆದರೆ ಲಸಿಕೆ ಮತ್ತು ಅದರ ಸುರಕ್ಷತೆಯ ಬಗ್ಗೆ ಭಯಪಡುವವರು ಹಲವರಿದ್ದಾರೆ. ಅನೇಕ ಭಾರತೀಯರು ಲಸಿಕೆ ಪಡೆಯಲು ಯಾವುದೇ ಅವಸರದಲ್ಲಿಲ್ಲ ಎಂದು ಸಮೀಕ್ಷೆಗಳು ದೃಢಪಡಿಸಿವೆ, ಅನೇಕ ತಜ್ಞರು ಲಸಿಕೆ ಪ್ರಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಕಟಿಸಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಲಸಿಕೆಗಳ ನಿರ್ಬಂಧಿತ ತುರ್ತು ಬಳಕೆಯ ಅನುಮತಿಯನ್ನು / ದೃಢಕರಣವನ್ನು ಪಡೆಯುವ ವಿಧಾನ ಯಾವುದು?
ತಜ್ಞರು ಮತ್ತು ಅರೋಗ್ಯ ಕಾರ್ಯಕರ್ತರು ಭಾರತದ ಔಷಧಿ ನಿಯಮಗಳಲ್ಲಿ EUA ಗೆ ಅವಕಾಶವಿಲ್ಲ,ಮತ್ತು ಸ್ವೀಕರಿಸುವ ಪ್ರಕ್ರಿಯೆಯನ್ನು ಸಹ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ ಅಥವಾ ಸ್ಥಿರವಾಗಿಲ್ಲ .ಎಂದು ಹೇಳುತ್ತಾರೆ.
ಇದರ ಹೊರತಾಗಿಯೂ,ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯು (CDSCO) ಕೋವಿಡ್ -19 ಔಷಧಿ ಗಳಿಗೆ ತುರ್ತು ಅಥವಾ ನಿರ್ಬಂಧಿತ ತುರ್ತು ಅನುಮೋದನೆಗಳನ್ನು ಈ ಸಾಂಕ್ರಾಮಿಕದ ಸಮಯದಲ್ಲಿ ರೆಮಡೆಸಿವಿರ್ ಮತ್ತು ಫೆವಿಪಿರವಿರ್ ಗಳಿಗೆ ನೀಡುತ್ತಿದೆ.
ತುರ್ತು ಬಳಕೆಯ ದೃಢಕರಣವನ್ನು ಮಾತ್ರ ಪಡೆದಿರುವ ಉತ್ಪನ್ನವನ್ನು ಬಳಸುವುದರಲ್ಲಿ ಅಪಾಯವಿದೆಯೇ?
ಯುಎಸ್ FDA ದ ಪ್ರಕಾರ, ಉತ್ಪನ್ನಕ್ಕೆ EUA ಮಾತ್ರ ನೀಡಲಾಗಿದೆ ಮತ್ತು ಪೂರ್ಣ ಪ್ರಮಾಣದ ಅನುಮೋದನೆ ನೀಡಲಾಗಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ.
ಕೋವಿಡ್ -19 ಲಸಿಕೆಯ ವಿಚಾರದಲ್ಲಿ, ಉದಾಹರಣೆಗೆ, ಜನರಿಗೆ ಲಸಿಕೆಯ ಸಂಭಾವ್ಯ ಪ್ರಯೋಜನಗಳು ಮತ್ತು ಅಪಾಯಗಳ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ ಮತ್ತು “ಅಂತಹ ಪ್ರಯೋಜನಗಳು ಅಥವಾ ಅಪಾಯಗಳು ಎಷ್ಟರ ಮಟ್ಟಿಗೆ ತಿಳಿದಿಲ್ಲ”,ಎಂಬುದನ್ನು ತಿಳಿಸುವ ಮೂಲಕ ಲಸಿಕೆ ನಿರಾಕರಿಸುವ ಅವರ ಹಕ್ಕನ್ನು ಗೌರವಿಸಬೇಕಾಗುತ್ತದೆ.
ವಿಷಯಗಳು: ಪರಿಸರ ಸಂಬಂಧಿತ ಸಮಸ್ಯೆಗಳು.
ವಾತಾವರಣ ಮತ್ತು ಹವಾಮಾನ ಸಂಶೋಧನಾ ಮಾದರಿ ವಿಕ್ಷಣಾ ವ್ಯವಸ್ಥೆಗಳು ಮತ್ತು ಸೇವೆಗಳ ( ACROSS) ಯೋಜನೆ.
“Atmosphere & Climate Research-Modelling Observing Systems & Services (ACROSS)” scheme:
ಸಂದರ್ಭ:
ಇತ್ತೀಚೆಗೆ ಈ ಯೋಜನೆಯನ್ನು ಭೂ ವಿಜ್ಞಾನ ಸಚಿವಾಲಯವು ಪರಿಶೀಲಿಸಿದೆ.
“ACROSS” scheme: ಯೋಜನೆ:
ACROSS ಯೋಜನೆ ಭೂ ವಿಜ್ಞಾನ ಸಚಿವಾಲಯದ (MoES) ವಾಯುಮಂಡಲದ ವಿಜ್ಞಾನ ಕಾರ್ಯಕ್ರಮಗಳಿಗೆ ಸಂಬಂಧಿಸಿದೆ.
ಇದು ಹವಾಮಾನ ಮತ್ತು ವಾಯುಗುಣ ಸೇವೆಗಳ ವಿಭಿನ್ನ ಅಂಶಗಳಾದ, ಚಂಡಮಾರುತ, ಚಂಡಮಾರುತಗಳ ಉಲ್ಬಣಗಳು, ಬಿಸಿಗಾಳಿಯ ತೀವೃತೆ , ಗುಡುಗು ಸಿಡಿಲಿನ ಮುನ್ನೆಚ್ಚರಿಕೆಗಳ ಕುರಿತು ಮಾಹಿತಿ ನೀಡುತ್ತದೆ.
ಈ ಪ್ರತಿಯೊಂದು ಅಂಶಗಳನ್ನು “ACROSS” ಯೋಜನೆಯಡಿಯಲ್ಲಿ ಒಂಬತ್ತು ಉಪ-ಯೋಜನೆಗಳಾಗಿ ಸಂಯೋಜಿಸಲಾಗಿದ್ದು ಸಮಗ್ರವಾಗಿ ಕಾರ್ಯಗತಗೊಳಿಸಲಾಗುತ್ತದೆ.
ಈ ಯೋಜನೆಯ ಪ್ರಯೋಜನಗಳು:
ಈ ಯೋಜನೆಯು ಸುಧಾರಿತ ಹವಾಮಾನ, ವಾಯುಗುಣ ಮತ್ತು ಸಾಗರ ಮುನ್ಸೂಚನೆ ಮತ್ತು ಸೇವೆಗಳನ್ನು ಒದಗಿಸುತ್ತದೆ ಮತ್ತು ಆ ಮೂಲಕ ವಿವಿಧ ಸೇವೆಗಳಿಗೆ ಸಂಪೂರ್ಣ ಪ್ರಯೋಜನಗಳ ವರ್ಗಾವಣೆಯನ್ನು ಖಾತ್ರಿಪಡಿಸುತ್ತದೆ.
ಇದು ಅಗತ್ಯವಾದ ಆಡಳಿತಾತ್ಮಕ ಬೆಂಬಲದೊಂದಿಗೆ ಗಣನೀಯ ಸಂಖ್ಯೆಯ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಸಹ ಒದಗಿಸುತ್ತದೆ ಆ ಮೂಲಕ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ.
ಹವಾಮಾನ ಆಧಾರಿತ ಸೇವೆಗಳ ಕೊನೆಯ ಮೈಲಿ ಸಂಪರ್ಕವನ್ನು ಅಂತಿಮ ಬಳಕೆದಾರರಿಗೆ ಸಿಗುವಂತಾಗುವುದನ್ನು ಖಚಿತಪಡಿಸಿಕೊಳ್ಳಲು, ICAR ನ ಕೃಷಿ ವಿಜ್ಞಾನ ಕೇಂದ್ರಗಳು,ವಿಶ್ವವಿದ್ಯಾನಿಲಯಗಳು ಮತ್ತು ಸ್ಥಳೀಯ ಪುರಸಭೆಗಳಂತಹ ಅಧಿಕ ಸಂಖ್ಯೆಯ ಏಜೆನ್ಸಿಗಳು ಅನೇಕ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವಲ್ಲಿ ನಿರತವಾಗಿವೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಮನ್ನತು ಪದ್ಮನಾಭನ್: Mannathu Padmanabhan:
ಅವರೊಬ್ಬ ಭಾರತೀಯ ಸಾಮಾಜಿಕ ಸುಧಾರಕ ಮತ್ತು ಕೇರಳದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
ಅವರು ಜನವರಿ 2, 1878 ರಿಂದ ಫೆಬ್ರವರಿ 25, 1970 ರವರೆಗೆ ಜೀವಿಸಿದ್ದರು.
ಅವರು ಅಸ್ಪೃಶ್ಯತೆ ಆಚರಣೆ ವಿರೋಧಿ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು ಮತ್ತು ಎಲ್ಲಾ ಜಾತಿಯ ಜನರಿಗೆ ದೇವಾಲಯಗಳನ್ನು ತೆರೆಯಬೇಕೆಂದು ಸಲಹೆ ನೀಡಿದರು.
ಅವರು ವೈಕೋಮ್ ಸತ್ಯಾಗ್ರಹದಲ್ಲೂ ಭಾಗವಹಿಸಿದ್ದರು.
ಅವರು ಸ್ಥಾಪಿಸಿದ ನಾಯರ್ ಸರ್ವಿಸ್ ಸೊಸೈಟಿ/ ನಾಯರ್ ಸೇವಾ ಸಂಸ್ಥೆ (NSS) ಯ ಮೂಲಕವೂ ಗುರುತಿಸಲ್ಪಡುತ್ತಾರೆ.
ಸುದ್ದಿಯಲ್ಲಿರುವ ಕಾರಣ ?
ಜನ್ಮ ವಾರ್ಷಿಕೋತ್ಸವ.