Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 1 ಜನವರಿ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1.  ಸುಭಾಷ್ ಚಂದ್ರ ಬೋಸ್.

2. ಮಿಂಚು/ಸಿಡಿಲು ಇಂದಿಗೂ ಅನೇಕ ಭಾರತೀಯರ ಪ್ರಾಣ ಹಾನಿಗೆ ಏಕೆ ಕಾರಣವಾಗುತ್ತಿದೆ?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಕ್ತಹೀನತೆ ಎಂದರೇನು?

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಜಾಗತಿಕ ವಸತಿ ತಂತ್ರಜ್ಞಾನದ ಸವಾಲು.

2. ಕೃಷ್ಣಪಟ್ಟಣಂ ಮತ್ತು ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಅನುಮೋದನೆ:

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸಹಾಯಕ್-ಎನ್.ಜಿ. SAHAYAK-NG.

2. ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ ಅರ್ಜೆಂಟೀನಾ.

3. ಮೂಲ ಕೈಗರಿಕಾ ವಲಯ – Core Sector.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಸುಭಾಷ್ ಚಂದ್ರ ಬೋಸ್:


ಸಂದರ್ಭ: ಡಿಸೆಂಬರ್ 30, 1943 ರಂದು ಪೋರ್ಟ್ ಬ್ಲೇರ್‌ನಲ್ಲಿ ತ್ರಿವರ್ಣ ಧ್ವಜರೋಹಣ ಮಾಡಿದ ಸುಭಾಷ್ ಚಂದ್ರ ಬೋಸ್.

ಹಿನ್ನೆಲೆ:ಎರಡನೇ ವಿಶ್ವಯುದ್ಧದ ಸಮಯದಲ್ಲಿ ಜಪಾನ್ ವಶಪಡಿಸಿಕೊಂಡಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆಜಾದ್ ಹಿಂದ್ ಸರ್ಕಾರಕ್ಕೆ ಹಸ್ತಾಂತರಿಸಿದ ನಂತರ ಬೋಸ್ ರವರು  ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ 1943ರಲ್ಲಿ ಆಗಮಿಸಿದ್ದರು.

ಆಜಾದ್ ಹಿಂದ್ ಸರ್ಕಾರದ ಬಗ್ಗೆ:

 • ನೇತಾಜಿ ಸುಭಾಷ್ ಚಂದ್ರ ಬೋಸ್ ಸಿಂಗಾಪುರದಲ್ಲಿ ತಮ್ಮ ಆಜಾದ್ ಹಿಂದ್ ನ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.
 • ಅರ್ಜಿ ಹುಕುಮಾತ್-ಎ-ಆಜಾದ್ ಹಿಂದ್ ಎಂದು ಕರೆಯಲ್ಪಡುವ ಇದನ್ನು ಆಕ್ಸಿಸ್ ಬಣದ ಇಂಪೀರಿಯಲ್ ಜಪಾನ್, ನಾಜಿ ಜರ್ಮನಿ, ಇಟಾಲಿಯನ್ ಸೋಷಿಯಲ್ ರಿಪಬ್ಲಿಕ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳು ಬೆಂಬಲಿಸಿದವು.
 • ಎರಡನೆಯ ಮಹಾಯುದ್ಧದ ನಂತರದಲ್ಲಿ ದೇಶಭ್ರಷ್ಟ ಸರ್ಕಾರ ಅಥವಾ ಗಡಿಪಾರಿನಲ್ಲಿರುವತಾತ್ಕಾಲಿಕ ಸರ್ಕಾರ ಎಂಬ ಹೆಸರಿನಲ್ಲಿ ಅವರು  ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸುವ ಹೋರಾಟವನ್ನು ಪ್ರಾರಂಭಿಸಿದ್ದರು.

ಇದರಲ್ಲಿ ಭಾಗಿಯಾದವರು ?

 • ಇವರ ನೇತೃತ್ವದ ತಾತ್ಕಾಲಿಕ ಸರ್ಕಾರದ ಅಡಿಯಲ್ಲಿ, ವಿದೇಶದಲ್ಲಿ ವಾಸಿಸುವ ಭಾರತೀಯರು ಒಂದುಗೂಡಿದರು.ಭಾರತೀಯ ರಾಷ್ಟ್ರೀಯ ಸೇನೆಯು ಮಲಯ (ಇಂದಿನ ಮಲೇಷ್ಯಾ) ಮತ್ತು ಬರ್ಮಾದಲ್ಲಿದ್ದ (ಈಗಿನ ಮ್ಯಾನ್ಮಾರ್) ಭಾರತೀಯ ವಲಸಿಗ ಜನಸಂಖ್ಯೆಯಿಂದ ಮಾಜಿ ಕೈದಿಗಳು ಮತ್ತು ಸಾವಿರಾರು ಸ್ವಯಂಸೇವಕರನ್ನು ಸೆಳೆಯಿತು.
 • ತಾತ್ಕಾಲಿಕ ಸರ್ಕಾರದಲ್ಲಿ, ಬೋಸ್ ರವರು ರಾಷ್ಟ್ರದ ಮುಖ್ಯಸ್ಥ, ಪ್ರಧಾನಿ ಮತ್ತು ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.
 • ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಮಹಿಳಾ ಸಂಘಟನೆಯ ನೇತೃತ್ವ ವಹಿಸಿದರೆ, ಎಸ್ ಎ ಅಯ್ಯರ್ ರವರು ಪ್ರಚಾರ ತಂತ್ರ ವಿಭಾಗದ ಮುಖ್ಯಸ್ಥರಾಗಿದ್ದರು.
 • ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಅವರನ್ನು ಸರ್ವೋಚ್ಚ ಸಲಹೆಗಾರರನ್ನಾಗಿ ನೇಮಿಸಲಾಯಿತು.

ಸುಭಾಷ್ ಚಂದ್ರ ಬೋಸ್ ರವರಿಗೆ ಸಂಬಂಧಿಸಿದ ಪ್ರಮುಖ ಅಂಶಗಳು:

 • ಸುಭಾಷ್ ಚಂದ್ರ ಬೋಸ್ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ (1938-ಹರಿಪುರ ಮತ್ತು 1939-ತ್ರಿಪುರಿ) ಆಯ್ಕೆಯಾಗಿದ್ದರು.
 • ಅವರು 1939 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಗಾಳದಲ್ಲಿ ಕಾಂಗ್ರೆಸ್ ನ ಒಳಗೆ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಅನ್ನು ಸಂಘಟಿಸಿದರು.

 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಗಳಂತಹ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

 ಮಿಂಚು ಇಂದಿಗೂ  ಅನೇಕ ಭಾರತೀಯರ ಪ್ರಾಣ ಹಾನಿಗೆ ಏಕೆ ಕಾರಣ ವಾಗುತ್ತಿದೆ?


ಸಂದರ್ಭ :

ಮಿಂಚಿನ ಹೊಡೆತದಿಂದಾಗಿ ಏಪ್ರಿಲ್ 1,2019 ರಿಂದ ಮಾರ್ಚ್ 31, 2020 ರ ನಡುವೆ 1,771 ಸಾವುಗಳುಂಟಾಗಿವೆ.

ಇಂತಹ  ಸಾವುಗಳನ್ನು ಹೇಗೆ ಕಡಿಮೆ ಮಾಡಬಹುದು?

 • CROPC (ಹವಾಮಾನ ಸ್ಥಿತಿಸ್ಥಾಪಕ ವೀಕ್ಷಣಾ ವ್ಯವಸ್ಥೆಗಳ ಪ್ರಚಾರ ಮಂಡಳಿ) ಪ್ರಕಾರ, ರೈತರು, ದನಗಾಹಿಗಳು, ಮಕ್ಕಳು ಮತ್ತು ಬಯಲು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮಿಂಚಿನ ಕುರಿತು ಮುನ್ನೆಚ್ಚರಿಕೆ ನೀಡುವುದು ಮುಖ್ಯವಾದ ಅಂಶವಾಗಿದೆ.
 • ಸ್ಥಳೀಯ, ಮಿಂಚು ಸುರಕ್ಷತಾ ಕ್ರಿಯಾ ಯೋಜನೆಗಳಾದಂತಹ ಮಿಂಚು ಸಂರಕ್ಷಣಾ ಸಾಧನಗಳನ್ನು ಅಳವಡಿಸುವ ಮೂಲಕ ಸಾವು ನೋವುಗಳನ್ನು ತಡೆಗಟ್ಟಬಹುದು.

ಮಿಂಚಿನ ಪರಿಣಾಮವೇನು?

ನೈಸರ್ಗಿಕ ವಿಕೋಪಕ್ಕೆ ತುತ್ತಾದವರಿಗೆ ನೀಡುವ ಪರಿಹಾರವನ್ನು ಕೇಂದ್ರವು 2015 ರಲ್ಲಿ 4 ಲಕ್ಷ ರೂ.ಗೆ ಹೆಚ್ಚಿಸಿತ್ತು.

 • ಕಳೆದ ಐದು ವರ್ಷಗಳಲ್ಲಿ ಉಂಟಾದ 13,994 ಸಾವುನೋವುಗಳಿಗೆ ಒಟ್ಟು ಪರಿಹಾರವಾಗಿ  ಸುಮಾರು 359 ಕೋಟಿ ರೂ.ಗಳನ್ನು ನೀಡಲಾಗಿದೆ.
 • ಮಿಂಚಿನ ಹೊಡೆತದಿಂದ ಪ್ರಾಣಿಗಳ ಜೀವ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ಮಿಂಚು ಎಂದರೇನು?

ಇದು ವಾತಾವರಣದಲ್ಲಿ ಅತ್ಯಂತ ವೇಗವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ವಿದ್ಯುಚ್ಛ ಕ್ತಿಯು ಬಿಡುಗಡೆ ಯಾಗುವ ಪ್ರಕ್ರಿಯೆಯಾಗಿದ್ದು ಅವುಗಳಲ್ಲಿ ಕೆಲವು ಭಾಗ ಭೂಮಿಯ ಮೇಲ್ಮೈ ಕಡೆಗೆ ನಿರ್ದೇಶಿಸಲ್ಪಡುತ್ತದೆ.

 • ಈ ವಿದ್ಯುಚ್ಛಕ್ತಿ ಬಿಡುಗಡೆಯಾಗುವ ಪ್ರಕ್ರಿಯೆಯು 10-12 ಕಿ.ಮೀ ನಷ್ಟು ಎತ್ತರವಾದ ದೈತ್ಯ ತೇವಾಂಶವನ್ನು ಹೊಂದಿರುವ ಮೋಡಗಳಲ್ಲಿ ಉಂಟಾಗುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು : ಆರೋಗ್ಯ ಸಂಬಂಧಿ ಸಮಸ್ಯೆಗಳು.

ರಕ್ತಹೀನತೆ ಎಂದರೇನು? What is anaemia?


ಸಂದರ್ಭ :

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-20ರ ಪ್ರಕಾರ ಭಾರತೀಯ ಮಹಿಳೆಯರು ಮತ್ತು ಮಕ್ಕಳು ಅತಿಯಾದ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ರಕ್ತಹೀನತೆ ಎಂದರೇನು?

ಸಾಮಾನ್ಯಕ್ಕಿಂತ ಕಡಿಮೆ ಸಂಖ್ಯೆಯ ಕೆಂಪು ರಕ್ತ ಕಣಗಳನ್ನು ಹೊಂದಿರುವ ಸ್ಥಿತಿ ಅಥವಾ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಿರುವ ಸ್ಥಿತಿಯಾಗಿದೆ.

 • ದಣಿವು, ಶೀತ, ತಲೆತಿರುಗುವಿಕೆ ಮತ್ತು ಕಿರಿಕಿರಿ ಹಾಗೂ ಉಸಿರಾಟದ ತೊಂದರೆ ಅನುಭವಿಸುವಂತಹ ಇತರೆ ರೋಗಲಕ್ಷಣಗಳ ಪರಿಸ್ಥಿತಿಯಾಗಿದೆ.
 • ಸಾಕಷ್ಟು ಕಬ್ಬಿಣಾಂಶ, ಫೋಲಿಕ್ ಆಮ್ಲ ಅಥವಾ ವಿಟಮಿನ್ ಬಿ 12 ಅನ್ನು ಹೊಂದಿರದ ಆಹಾರ ಸೇವನೆಯು ರಕ್ತಹೀನತೆಗೆ ಸಾಮಾನ್ಯ ಕಾರಣವಾಗಿದೆ.

ದೇಶದಲ್ಲಿ ರಕ್ತಹೀನತೆ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚಾಗಿರಲು ಕಾರಣವೇನು ?

 •  ಕಬ್ಬಿಣಾಂಶದ ಕೊರತೆಯ ಮತ್ತು ವಿಟಮಿನ್ ಬಿ 12-ಕೊರತೆಯ ರಕ್ತಹೀನತೆಯು ಭಾರತದಲ್ಲಿ ರಕ್ತಹೀನತೆಯ ಎರಡು ಸಾಮಾನ್ಯ ವಿಧಗಳಾಗಿವೆ.
 • ಮುಟ್ಟಿನ ಸಮಯದಲ್ಲಿನ ಕಬ್ಬಿಣಾಂಶದ ನಷ್ಟ ಮತ್ತು ಗರ್ಭಾವಸ್ಥೆಯಲ್ಲಿ ಬೆಳೆಯುತ್ತಿರುವ ಭ್ರೂಣದ ಹೆಚ್ಚಿನ ಕಬ್ಬಿಣಾಂಶದ ಬೇಡಿಕೆಯಿಂದಾಗಿ ಮಹಿಳೆಯರಲ್ಲಿ ಕಬ್ಬಿಣಾಂಶದ ಕೊರತೆಯು ಪುರುಷರಿಗಿಂತ ಹೆಚ್ಚಾಗಿದೆ.
 • ಆಹಾರದಲ್ಲಿ ಅಕ್ಕಿ ಮತ್ತು ಗೋಧಿಯ ಮೇಲೆ ಅತಿಯಾದ ಅವಲಂಬನೆಯಿಂದ ಸಿರಿಧಾನ್ಯಗಳ ಕೊರತೆ ಉಂಟಾಗಿ ಹಸಿರುಸೊಪ್ಪಿನ ಮತ್ತು  ತರಕಾರಿಗಳ ಸಾಕಷ್ಟು ಬಳಕೆಯಿಲ್ಲದಿರುವುದು ಮತ್ತು ಪೌಷ್ಠಿಕಾಂಶ ಕಡಿಮೆ ಇರುವ ಪ್ಯಾಕೇಜ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರಗಳ ಅತಿಯಾದ ಬಳಕೆಯಿಂದಾಗಿ ಭಾರತದಲ್ಲಿ ರಕ್ತಹೀನತೆಯು ಹೆಚ್ಚಾಗಲು ಕಾರಣವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು : ಮೂಲಸೌಕರ್ಯ.

ಜಾಗತಿಕ ವಸತಿ ತಂತ್ರಜ್ಞಾನದ ಸವಾಲು :


ಸಂದರ್ಭ :

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ‌ಕಡಿಮೆ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸುವ  ಲೈಟ್ ಹೌಸ್ ಪ್ರಾಜೆಕ್ಟ್‌ ಯೋಜನೆಗೆ (ಎಲ್‌ಎಚ್‌ಪಿ) ಶಂಕುಸ್ಥಾಪನೆಯನ್ನು ಆರು ರಾಜ್ಯಗಳ ಆರು ತಾಣಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೆರವೇರಿಸಿದರು.

ಲೈಟ್ ಹೌಸ್ ಯೋಜನೆಗಳು (Light House Project) ಯಾವುವು?

 • ಇಂದೋರ್ (ಮಧ್ಯಪ್ರದೇಶ), ರಾಜ್‌ಕೋಟ್ (ಗುಜರಾತ್), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ್), ಅಗರ್ತಲಾ (ತ್ರಿಪುರ) ಮತ್ತು ಲಕ್ನೋ (ಉತ್ತರ ಪ್ರದೇಶ) ಗಳಲ್ಲಿ LHPಗಳನ್ನು ನಿರ್ಮಿಸಲಾಗುತ್ತಿದೆ.
 • ಪ್ರತಿ ನಗರದಲ್ಲಿ ಒಂದು ಸಾವಿರ ಮನೆಗಳಂತೆ 12 ತಿಂಗಳೊಳಗೆ ದೇಶದ ಆರು ರಾಜ್ಯಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳೊಂದಿಗೆ, ಮನೆಗಳನ್ನು ನಿರ್ಮಾಣ ಮಾಡುವ ಗುರಿ ನಿಗದಿಪಡಿಸಲಾಗಿದೆ.
 • ಸಾಂಪ್ರದಾಯಿಕ ಇಟ್ಟಿಗೆ ಮತ್ತು ಗಾರೆ ಮೂಲಕ ನಿರ್ಮಿಸಿದ ಮನೆಗಳಿಗೆ ಹೋಲಿಸಿದರೆ ಇವು ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಬಾಳಿಕೆ ಹೊಂದಿರುವ ಆರ್ಥಿಕವಾಗಿ ಸುಸ್ಥಿರವಾದವುಗಳಾಗಿದ್ದು  ತ್ವರಿತಗತಿಯಲ್ಲಿ ನಿರ್ಮಿಸಿ ವಾಸಿಸಲು ಸಿದ್ಧ ಮನೆಗಳನ್ನು (ready to live houses) ನೀಡುವ ಗುರಿ ಹೊಂದಿದೆ.
 • ‘ಆಧುನಿಕ ತಂತ್ರಜ್ಞಾನ ಮತ್ತು ನವೀನ ಪ್ರಕ್ರಿಯೆಗಳಿಂದಾಗಿ, ಈ ಯೋಜನೆಯಡಿ ಕಡಿಮೆ ಸಮಯದಲ್ಲಿ, ಕೈಗೆಟಕುವ ಬೆಲೆಯಲ್ಲಿ ಉನ್ನತ ತಂತ್ರಜ್ಞಾನದ ಮನೆಗಳನ್ನು ನಿರ್ಮಿಸಲಾಗುತ್ತಿದೆ‘.
 • ಇಂದೋರ್‌ನ ಎಲ್‌ಎಚ್‌ಪಿಯಲ್ಲಿ ಪ್ರಿಫ್ಯಾಬ್ರಿಕೇಟೆಡ್ ಸ್ಯಾಂಡ್‌ವಿಚ್ ಪ್ಯಾನಲ್ ಸಿಸ್ಟಮ್, ಟನಲ್ ಫಾರ್ಮ್‌ವರ್ಕ್ ಬಳಸಿ ನಿರ್ಮಿಸಿದ ಏಕಶಿಲೆಯ ಕಾಂಕ್ರೀಟ್ ನಂತಹ ವಿವಿಧ ತಂತ್ರಜ್ಞಾನಗಳನ್ನು ಈ LHPಗಳು ಪ್ರದರ್ಶಿಸುತ್ತವೆ.
 • ಒಟ್ಟಿನಲ್ಲಿ, ‘ಫ್ರಾನ್ಸ್, ಜರ್ಮನಿ ಮತ್ತು ಕೆನಡಾದಂತಹ ದೇಶಗಳಲ್ಲಿ ಅನುಸರಿಸಿರುವ ಆಧುನಿಕ ನಿರ್ಮಾಣ ಪದ್ಧತಿಗಳನ್ನು ಈ ಯೋಜನೆಯಡಿ ಅಳವಡಿಸಲಾಗುತ್ತಿದೆ’. 

ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್ (Global Housing Technology Challenge) (GHTC) ಪ್ರಮುಖ ಲಕ್ಷಣಗಳು:

2019 ರಲ್ಲಿ ಪ್ರಾರಂಭಿಸಲಾದ ಈ ಸವಾಲನ್ನು ಪ್ರಧಾನ್ ಮಂತ್ರಿ ಆವಾಸ್ (ನಗರ)ಯೋಜನೆ (PMAY-U) ಅಡಿಯಲ್ಲಿ ಕೈಗೊಳ್ಳಲಾಗಿದೆ.

 • , ಈ ಯೋಜನೆಯಡಿ ಕಡಿಮೆ ಸಮಯದಲ್ಲಿ, ಕೈಗೆಟಕುವ ಬೆಲೆಯಲ್ಲಿ ಉನ್ನತ ತಂತ್ರಜ್ಞಾನದ ಮನೆಗಳನ್ನು 2022 ರ ವೇಳೆಗೆ 2 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.
 • GHTC ಯು ಲೈಟ್‌ಹೌಸ್ ಯೋಜನೆಗಳಿಗಾಗಿ ಗುರುತಿಸಿ ಮುಖ್ಯವಾಹಿನಿಗೆ ತರುವ ಸಾಬೀತಾಗಿರುವ ಪ್ರದರ್ಶಿಸಬಹುದಾದ ತಂತ್ರಜ್ಞಾನಗಳ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಮತ್ತು  ಮತ್ತು ASHA (ಕೈಗೆಟುಕುವ ಸುಸ್ಥಿರ ವಸತಿ ವೇಗವರ್ಧಕಗಳು)(ASHA (Affordable Sustainable Housing Accelerators) — India.) ಮೂಲಕ ವೇಗವರ್ಧನೆ ಬೆಂಬಲಕ್ಕಾಗಿ ಭವಿಷ್ಯದ ತಂತ್ರಜ್ಞಾನಗಳನ್ನು ಗುರುತಿಸುತ್ತದೆ.

  

ವಿಷಯಗಳು : ಮೂಲಸೌಕರ್ಯ.

ಕೃಷ್ಣಪಟ್ಟಣಂ ಮತ್ತು ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಅನುಮೋದನೆ:


ಸಂದರ್ಭ : ಕೇಂದ್ರ ಸಚಿವ ಸಂಪುಟವು ತುಮಕೂರಿನಲ್ಲಿ ಮತ್ತು ಆಂಧ್ರಪ್ರದೇಶದ ಕೃಷ್ಣಪಟ್ಟಣದಲ್ಲಿ ಕೈಗಾರಿಕಾ ಕಾರಿಡಾರ್ ನೋಡ್ ಸ್ಥಾಪಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಕೈಗಾರಿಕಾ ಕಾರಿಡಾರ್ ಎಂದರೇನು?

ಕೈಗಾರಿಕಾ ಕಾರಿಡಾರ್ ಮೂಲತಃ ಬಹು-ಮಾದರಿ ಸಾರಿಗೆ ಸೇವೆಗಳನ್ನು ಒಳಗೊಂಡಿರುವ ಕಾರಿಡಾರ್ ಆಗಿದ್ದು ಅದು ರಾಜ್ಯಗಳ ಮೂಲಕ ಮುಖ್ಯ ಜೀವನಾಡಿಯಂತೆ ಹಾದುಹೋಗುತ್ತದೆ.

 • ಕೈಗಾರಿಕಾ ಕಾರಿಡಾರ್‌ಗಳು ಒಟ್ಟಾರೆಯಾಗಿ ಉದ್ಯಮ ಮತ್ತು ಮೂಲಸೌಕರ್ಯಗಳ ನಡುವೆ ಪರಿಣಾಮಕಾರಿ ಐಕ್ಯತೆಯನ್ನು ನಿರ್ಮಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾರಣವಾಗುತ್ತವೆ.
 • ಕೈಗಾರಿಕಾ ಕಾರಿಡಾರ್‌ಗಳು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತವೆ, ಅವುಗಳೆಂದರೆ:
 • ಹೈಸ್ಪೀಡ್ ಸಾರಿಗೆ – ಸಂಪರ್ಕ ಜಾಲ – ರೈಲು ಮತ್ತು ರಸ್ತೆ.
 • ಅತ್ಯಾಧುನಿಕ ಸರಕು ನಿರ್ವಹಣಾ ಸಾಧನಗಳನ್ನು ಹೊಂದಿರುವ ಬಂದರುಗಳು.
 • ಆಧುನಿಕ ವಿಮಾನ ನಿಲ್ದಾಣಗಳು.
 • ವಿಶೇಷ ಆರ್ಥಿಕ ಪ್ರದೇಶಗಳು / ಕೈಗಾರಿಕಾ ಪ್ರದೇಶಗಳು.
 • ಲಾಜಿಸ್ಟಿಕ್ ಉದ್ಯಾನವನಗಳು / ಸಾಗಣೆ ಕೇಂದ್ರಗಳು.
 • ಕೈಗಾರಿಕಾ ಅಗತ್ಯಗಳನ್ನು ಪೂರೈಸುವ ಕಡೆಗೆ ಗಮನ ಕೇಂದ್ರೀಕರಿಸಿದ ಜ್ಞಾನ ಉದ್ಯಾನಗಳು.
 • ಟೌನ್‌ಶಿಪ್‌ಗಳು / ರಿಯಲ್ ಎಸ್ಟೇಟ್ ನಂತಹ ಪೂರಕ ಮೂಲಸೌಕರ್ಯ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸಹಾಯಕ್ಎನ್.ಜಿ. SAHAYAK-NG.

 • SAHAYAK-NG ಯು ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಏರ್ ಡ್ರಾಪ್ಪಬಲ್ ಕಂಟೇನರ್ ಆಗಿದೆ.
 • ಇದು ಜಿಪಿಎಸ್ ನೆರವಿನ ಏರ್ ಡ್ರಾಪ್ ಕಂಟೇನರ್ ಆಗಿದ್ದು, 50 ಕೆಜಿ ವರೆಗೆ ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು ಇದನ್ನು ಭಾರೀ ವಿಮಾನದ ಮೂಲಕವೂ ಕಾರ್ಯಾಚರಿಸಬಹುದಾಗಿದೆ.
 • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯು ಭಾರತೀಯ ನೌಕಾಪಡೆಯ ಜೊತೆಗೂಡಿ ಚೊಚ್ಚಲ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

 

ಗರ್ಭಪಾತವನ್ನು ಕಾನೂನುಬದ್ಧಗೊಳಿಸಿದ ಅರ್ಜೆಂಟೈನ·        

ಅರ್ಜೆಂಟೈನ ದೇಶವು ಗರ್ಭಧಾರಣೆಯ ನಂತರದ 14 ನೇ ವಾರಗಳವರೆಗೆ ಗರ್ಭಪಾತ ಮಾಡಿಸುವುದನ್ನು ಕಾನೂನುಬದ್ಧಗೊಳಿಸಿದೆ.·         ಈ ಮೊದಲು ಅರ್ಜೆಂಟೈನದಲ್ಲಿ ಗರ್ಭಪಾತವು ಕಾನೂನಿಗೆ ವಿರುದ್ಧವಾಗಿದ್ದ ಕಾರಣ ಮಹಿಳೆಯರು ಕಾನೂನುಬಾಹಿರವಾದ ಮತ್ತು ಸುರಕ್ಷಿತವಲ್ಲದ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿತ್ತು.·         ಸಾಮಾಜಿಕವಾಗಿ ಮತ್ತುಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳೆಯರಿಗೆ, ಸುರಕ್ಷಿತ ಗರ್ಭಪಾತಕ್ಕಿರುವ ವೈದ್ಯಕೀಯ ಆಯ್ಕೆಯ ವ್ಯಾಪ್ತಿಯು ಇನ್ನೂ ಸಂಕುಚಿತವಾಗಿತ್ತು

ಮೂಲ ಕೈಗಾರಿಕಾ ವಲಯ·

ಎಂಟು ಪ್ರಮುಖ ವಲಯದ ಕೈಗಾರಿಕೆಗಳಲ್ಲಿ ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ ಇವುಗಳು ಎಂಟು ಮೂಲ ಕೈಗಾರಿಕಾ ವಲಯಗಳಾಗಿವೆ.·         ಈ ಎಂಟು ಮೂಲ ಕೈಗಾರಿಕಾ ವಲಯಗಳು  ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ದಲ್ಲಿ ಸೇರಿಸಲಾದ ಒಟ್ಟು ವಸ್ತುಗಳ ಶೇ. 40% ಭಾಗವನ್ನುಒಳಗೊಂಡಿದೆ.·         ಈ ಎಂಟು ಮೂಲ ಕೈಗಾರಿಕೆಗಳು  ಅವುಗಳ ಪ್ರಾಮುಖ್ಯತೆಗೆ ಅನುಗುಣವಾಗಿ ಈ ಮುಂದಿನಂತೆ ಇಳಿಕೆ  ಕ್ರಮದಲ್ಲಿವೆ: ಸಂಸ್ಕರಣಾ ಉತ್ಪನ್ನಗಳು> ವಿದ್ಯುತ್> ಉಕ್ಕು> ಕಲ್ಲಿದ್ದಲು> ಕಚ್ಚಾ ತೈಲ> ನೈಸರ್ಗಿಕ ಅನಿಲ> ಸಿಮೆಂಟ್> ರಸಗೊಬ್ಬರಗಳು.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos