ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಏಳನೇ ಅನುಸೂಚಿ.
2. ನ್ಯಾಯಾಧೀಶರ ವಾಪಸಾತಿ.
3. ಜಾಗತಿಕ ಗೇಮ್ ಚೇಂಜರ್ ಆಗಿ ಯು.ಕೆ.ನ ಲಸಿಕೆ :
ಸಾಮಾನ್ಯ ಅಧ್ಯಯನ ಪತ್ರಿಕೆ :3
1. ಮುಖ ಗುರುತಿಸುವಿಕೆ ತಂತ್ರಜ್ಞಾನ.
2. ಎಥೆನಾಲ್ ಉತ್ಪಾದನೆ.
3. ಸಶಸ್ತ್ರ ಪಡೆ (ವಿಶೇಷ ಅಧಿಕಾರ) ಕಾಯ್ದೆ (AFSPA).
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನವನ.
2. ಎಸ್ಟೋನಿಯಾ, ಪರಾಗ್ವೆ ಹಾಗೂ ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿಗಳನ್ನು ಆರಂಭಿಸಲು ಸರ್ಕಾರದ ಅನುಮೋದನೆ
3. ಆಕಾಶ್ ಕ್ಷಿಪಣಿ.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಾಸ, ಲಕ್ಷಣಗಳು, ತಿದ್ದುಪಡಿಗಳು, ಪ್ರಮುಖ ನಿಬಂಧನೆಗಳು ಮತ್ತು ಮೂಲ ರಚನೆ.
ಏಳನೇ ಅನುಸೂಚಿ.
ಸಂದರ್ಭ:
ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (CII) ಪ್ರವಾಸೋದ್ಯಮ ಕ್ಷೇತ್ರವನ್ನು ಸಮವರ್ತಿ ಪಟ್ಟಿಯಲ್ಲಿ ಸೇರಿಸುವ ಮೂಲಕ ಕೇಂದ್ರ ಮತ್ತು ರಾಜ್ಯಗಳು ಈ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತು ಬೆಳವಣಿಗೆಗೆ ಚೌಕಟ್ಟಿನ ನೀತಿಗಳನ್ನು ರೂಪಿಸಲು ಕೋರಿದೆ.
ಏಳನೇ ಅನುಸೂಚಿ:
ಸಂವಿಧಾನದ 246 ನೇ ವಿಧಿಯಡಿಯಲ್ಲಿನ ಏಳನೇ ಅನುಸೂಚಿಯು ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಅಧಿಕಾರ ವಿಭಜನೆಯ ಬಗ್ಗೆ ಹೇಳುತ್ತದೆ.
ಇದು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿ ಎಂಬ ಮೂರು ಪಟ್ಟಿಗಳನ್ನು ಒಳಗೊಂಡಿದೆ.
- ಕೇಂದ್ರ ಪಟ್ಟಿಯು ಸಂಸತ್ತು ಯಾವ ಕಾನೂನುಗಳನ್ನು ರಚಿಸಬಹುದು ಎಂಬುದನ್ನು ವಿವರಿಸಿದರೆ ರಾಜ್ಯ ಪಟ್ಟಿಯು ರಾಜ್ಯ ಶಾಸಕಾಂಗಗಳ ಅಧಿಕಾರ ವ್ಯಾಪ್ತಿಯ ಕುರಿತು ವಿವರಿಸುತ್ತದೆ.
- ಮತ್ತೊಂದೆಡೆ ಸಮವರ್ತಿ ಪಟ್ಟಿಯು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳೆರಡೂ ಶಾಸನ ಮಾಡಬಹುದಾದ ವಿಷಯಗಳನ್ನು ಒಳಗೊಂಡಿದೆ.ಆದಾಗ್ಯೂ ಸಂವಿಧಾನವು ಸಮವರ್ತಿ ಪಟ್ಟಿಯಲ್ಲಿನ ವಿಷಯಗಳ ಕುರಿತ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಸತ್ತಿಗೆ ಇರುವ ಫೆಡರಲ್ ಪ್ರಾಬಲ್ಯವನ್ನು ಎತ್ತಿಹಿಡಿಯುತ್ತದೆ.
ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ, ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ನ್ಯಾಯಾಧೀಶರ ವಾಪಸಾತಿ.:
ಸಂದರ್ಭ:
“ಮಿಷನ್ ಬಿಲ್ಡ್ ಎ.ಪಿ.” “Mission Build A.P.” ಯೋಜನೆ ಯಡಿಯಲ್ಲಿ ಗುಂಟೂರು ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಸರ್ಕಾರಿ ಭೂಮಿಯನ್ನು ಮಾರಾಟ ಮಾಡಲು ಉದ್ದೇಶಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಾಧೀಶರನ್ನು ಹಿಂಪಡೆಯುವಂತೆ ಮಾಡಿದ ಮನವಿಯನ್ನು ಆಂಧ್ರ ಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ.
ನ್ಯಾಯಾಂಗೀಯ ಅನರ್ಹತೆ ಅಥವಾ ಹಿಂಪಡೆಯವಿಕೆ / ವಾಪಸಾತಿ ಎಂದರೇನು?
ನ್ಯಾಯಾಂಗ ಅನರ್ಹತೆ, ಹಿಂಪಪಡೆಯುವಿಕೆ ಎಂದರೆ, ನ್ಯಾಯಾಧೀಶ ಅಥವಾ ನ್ಯಾಯಾಡಳಿತಾಧಿಕಾರಿಯು ಹಿತಾಸಕ್ತಿ ಸಂಘರ್ಷದಿಂದಾಗಿ ಕಾನೂನು ಕ್ರಮಗಳಂತಹ ಅಧಿಕೃತ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ತ್ಯಜಿಸುವ ಕ್ರಿಯೆಯಾಗಿದೆ.
ಯಾವ ಆಧಾರದ ಮೇಲೆ ಹಿಂಪಡೆಯಲಾಗುತ್ತದೆ :
1.ನ್ಯಾಯಾಧೀಶರು ಒಂದು ಪಕ್ಷದ ಪರವಾಗಿ ಅಥವಾ ಇನ್ನೊಂದು ಪಕ್ಷದ ವಿರುದ್ಧ ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದು ವಸ್ತುನಿಷ್ಠ ವೀಕ್ಷಕನು ಭಾವಿಸಿದರೆ.
- ಸಂಬಂಧಿಸಿದ ವಿಷಯದ ಕುರಿತು ಆಸಕ್ತಿ ಹೊಂದಿರುವ ವ್ಯಕ್ತಿಯೊಂದಿಗಿನ ಸಂಬಂಧ ಹೊಂದಿದ್ದರೆ.
- ನ್ಯಾಯಾಧೀಶರು ಈ ಮೊದಲು ವಕೀಲರಾಗಿ ಮಾಡಿದ ಕೆಲಸದ ಹಿನ್ನೆಲೆ ಅಥವಾ ಅನುಭವ..
- ವಾದಿ ಮತ್ತು ಪ್ರತಿವಾದಿಗಳ ಕುರಿತು ಹೊಂದಿರುವ ವೈಯಕ್ತಿಕ ತಿಳುವಳಿಕೆ ಅಥವಾ ಪ್ರಕರಣದ ಸಂಗತಿಗಳ ಕುರಿತ ಜ್ಞಾನ.
5.ವಕೀಲರು ಅಥವಾ ವಕೀಲರಲ್ಲದವರೊಂದಿಗೆ ನಡೆಸಿದ ಸಂವಹನ..
- ಅವರ ತೀರ್ಪುಗಳು, ಕಾಮೆಂಟ್‌ಗಳು ಅಥವಾ ನಡವಳಿಕೆಗಳು.
ಈ ನಿಟ್ಟಿನಲ್ಲಿ ಯಾವುದೇ ಕಾಯ್ದೆ – ಕಾನೂನುಗಳಿವೆಯೇ?
ನ್ಯಾಯಾಧೀಶರು ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.
- ಆದಾಗ್ಯೂ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳೆರಡರ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವಾಗ, ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ನ್ಯಾಯದಾನ ಮಾಡಲು, “ಯಾವುದೇ ಭಯ ಅಥವಾ ಪಕ್ಷಪಾತ , ವಾತ್ಸಲ್ಯ ಅಥವಾ ಕೆಟ್ಟ ಉದ್ದೇಶವಿಲ್ಲದೆ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡುತ್ತಾರೆ.
ಈ ಕುರಿತು ಸುಪ್ರೀಂ ಕೋರ್ಟ್ ಹೇಳಿರುವುದೇನು ?
ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ (2015) ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು ಹಣದ ಆಸಕ್ತಿಯನ್ನು ಹೊಂದಿರುವುದು ಕಂಡು ಬಂದರೆ ‘ನಿಜವಾದ ಅಪಾಯ’ ಅಥವಾ ಪಕ್ಷಪಾತದ ಕುರಿತು ‘ಸಮಂಜಸವಾದ ಅನುಮಾನ’ ಇದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ “ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಷಯಗಳು : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ವಿಷಯಗಳು.
ಜಾಗತಿಕ ಗೇಮ್ ಚೇಂಜರ್ ಆಗಿ ಯು.ಕೆ ನ ಲಸಿಕೆ :
ಸಂದರ್ಭ :
ಈ ವಾರ ಯುಕೆ ನಲ್ಲಿ ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಬಳಕೆಗೆ ನೀಡಿದ ಅನುಮೋದನೆಯು COVID-19 ಕರೋನವೈರಸ್ ಹರಡುವಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಏಕೆಂದರೆ ಇದು ಇಲ್ಲಿಯವರೆಗೆ ಅನುಮೋದಿಸಲಾದ ಔಷಧಿಗಳಲ್ಲಿ ಕೈಗೆಟುಕುವ ಔಷಧಿಯಾಗಿದ್ದು ಅದು ಹಾಗೆಯೇ ಉಳಿಯುವ ಸಾಧ್ಯತೆಯಿದೆ.
- ಭಾರತಕ್ಕೆ ಇದು ಮಹತ್ವದ್ದಾಗಿದೆ, ಏಕೆಂದರೆ ದೇಶದಲ್ಲಿ ಲಸಿಕೆಯನ್ನು ಹಂಚಲು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಅಸ್ಟ್ರಾಜೆನೆಕಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ಈ ಲಸಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಹೊಸ ಲಸಿಕೆ ವೈರಲ್ ವೆಕ್ಟರ್( ರೋಗವಾಹಕ) ಲಸಿಕೆಯಾಗಿದ್ದು, ಇದು ಈಗಾಗಲೇ ಅನುಮೋದನೆ ಪಡೆದಿರುವ ಎಂಆರ್‌ಎನ್‌ಎ(mRNA) ಲಸಿಕೆಗಳಿಗಿಂತ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ವೈರಲ್ ವೆಕ್ಟರ್ ಲಸಿಕೆ ಡಿಎನ್‌ಎ ರೂಪದಲ್ಲಿ ಮಾನವ ಜೀವಕೋಶಗಳಿಗೆ SARS-CoV-2 ಜೀನ್‌ಗಳನ್ನು ತಲುಪಿಸಲು ಪುನರಾವರ್ತಿಸದ ಮತ್ತೊಂದು ವೈರಸ್ ಅನ್ನು ಬಳಸುತ್ತದೆ ಆ ಮೂಲಕ ರಕ್ಷಣಾತ್ಮಕ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಲು ವೈರಲ್ ಪ್ರೋಟೀನ್ಗಳನ್ನು ಉತ್ಪಾದಿಸಲಾಗುತ್ತದೆ.
ಲಸಿಕೆಗಳ ವಿಧಗಳು:
- ನಿಷ್ಕ್ರಿಯಗೊಳಿಸಲಾದ :ಇವುಗಳು ಸಾಯಿಸಿದ ಕೊವಿಡ್ -19 ವೈರಸ್‌ನ ಕಣಗಳನ್ನು ಬಳಸಿ ಮಾಡಿದ ಲಸಿಕೆಗಳಾಗಿದ್ದು ಅವು ಸೋಂಕಿಗೆ ಅಥವಾ ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ಕಣಗಳ ನಿರ್ದಿಷ್ಟ ಪ್ರಮಾಣವನ್ನು ಚುಚ್ಚುಮದ್ದು ರೂಪದಲ್ಲಿ ನೀಡುವುದರಿಂದ ಸತ್ತ ವೈರಸ್ ನ ವಿರುದ್ಧ ಪ್ರತಿಕಾಯಗಳನ್ನು ರಚಿಸಲು ದೇಹಕ್ಕೆ ಸಹಾಯ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಪುನರಾವರ್ತಿಸದ ವೈರಲ್ ವೆಕ್ಟರ್: ಇದು ದುರ್ಬಲಗೊಂಡ, ತಳೀಯವಾಗಿ ಮಾರ್ಪಡಿಸಿದ ವಿಭಿನ್ನ ವೈರಸ್‌ನ ಆವೃತ್ತಿಯನ್ನು ಕೋವಿಡ್ -19 ಸ್ಪೈಕ್ ಪ್ರೋಟೀನ್ ಅನ್ನು ಸಾಗಿಸಲು ಬಳಸುತ್ತದೆ.
- ಪ್ರೋಟೀನ್ ಉಪಘಟಕ: ಈ ಲಸಿಕೆಯು ವೈರಸ್ ನ ಒಂದು ಭಾಗವನ್ನು ಉದ್ದೇಶಿತ ಶೈಲಿಯಲ್ಲಿ ರೋಗನಿರೋಧಕ ಪ್ರತಿಕ್ರಿಯೆಯನ್ನು ನಿರ್ಮಿಸಲು ಬಳಸುತ್ತದೆ. ಈ ಸಂದರ್ಭದಲ್ಲಿ,ಗುರಿಯಾಗುವ ವೈರಸ್ ನ ಭಾಗವು ಸ್ಪೈಕ್ ಪ್ರೋಟೀನ್ ಆಗಿರುತ್ತದೆ..
- RNA : ಅಂತಹ ಲಸಿಕೆಗಳು ಮೆಸೆಂಜರ್RNA (mRNA) ಅಣುಗಳನ್ನು ಬಳಸುತ್ತವೆ, ಮತ್ತು ಅವು ಜೀವಕೋಶಗಳಿಗೆ ಯಾವ ಪ್ರೋಟೀನ್ಗಳನ್ನು ನಿರ್ಮಿಸಬೇಕು ಎಂದು ಹೇಳುತ್ತವೆ. ಒಮ್ಮೆ ಚುಚ್ಚುಮದ್ದು ನೀಡಿದ ನಂತರ ಕೋಶಗಳು ಎಂಆರ್‌ಎನ್‌ಎ ಸೂಚನೆಗಳನ್ನು ಪಾಲಿಸುತ್ತವೆ, ಸ್ಪೈಕ್ ಪ್ರೋಟೀನ್‌ನ ಪ್ರತಿಗಳನ್ನು ರಚಿಸುತ್ತವೆ, ಇದು ಪ್ರತಿರಕ್ಷಣಾ ಕೋಶಗಳಿಗೆ ಅದರ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ರಚಿಸಲು ಪ್ರೇರೇಪಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
- DNA: ಈ ಲಸಿಕೆಗಳು ತಳೀಯವಾಗಿ ವಿನ್ಯಾಸಗೊಳಿಸಲಾದ ಡಿಎನ್‌ಎ ಅಣುಗಳನ್ನು ಬಳಸುತ್ತವೆ, ಅದನ್ನು ಮತ್ತೆ ಪ್ರತಿಜನಕದೊಂದಿಗೆ ಸಂಕೇತಿಸಲಾಗಿದ್ದು ಇದರ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿರ್ಮಿಸುತ್ತವೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 3
ವಿಷಯಗಳು : ಐಟಿ, ಸ್ಪೇಸ್, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ಟೆಕ್ನಾಲಜಿ, ಬಯೋ-ಟೆಕ್ನಾಲಜಿ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಮುಖ ಗುರುತಿಸುವಿಕೆ ತಂತ್ರಜ್ಞಾನ :
ಸಂದರ್ಭ : ಮುಖ ಗುರುತಿಸುವಿಕೆ ಟ್ರ್ಯಾಕಿಂಗ್ ( ನಿಗಾ ) (Facial Recognition Tracking-FRT) ವ್ಯವಸ್ಥೆಯು ಇತ್ತೀಚಿನ ದಿನಗಳಲ್ಲಿ ಅನೇಕ ಸರ್ಕಾರಿ ಇಲಾಖೆಗಳಿಂದ ತ್ವರಿತ ನಿಯೋಜನೆಯನ್ನು ಕಂಡಿದ್ದರೂ, ಈ ಆಕ್ರಮಣಶೀಲ ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಕಾನೂನುಗಳು ಅಥವಾ ಮಾರ್ಗಸೂಚಿಗಳಿಲ್ಲ.
ಹಿನ್ನೆಲೆ:
1.ಭಾರತದಾದ್ಯಂತ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಕಣ್ಗಾವಲು, ಭದ್ರತೆ ಅಥವಾ ಗುರುತಿನ ದೃಢೀಕರಣಕ್ಕಾಗಿ ಪ್ರಸ್ತುತ 16 ವಿಭಿನ್ನ FRT ವ್ಯವಸ್ಥೆಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿವೆ.
- 2. ಸರ್ಕಾರಿ ಇಲಾಖೆಗಳು 17 FRT ಗಳನ್ನುಸ್ಥಾಪಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಯಾಕಿಷ್ಟು ಕಾಳಜಿ?
- ನಿರ್ದಿಷ್ಟ ಕಾನೂನುಗಳು ಅಥವಾ ಮಾರ್ಗಸೂಚಿಗಳ ಅನುಪಸ್ಥಿತಿಯು ಖಾಸಗಿತನ ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ಭಾರಿ ಬೆದರಿಕೆಯನ್ನುಂಟುಮಾಡುತ್ತದೆ ಏಕೆಂದರೆ, ಅದು ಸುಪ್ರೀಂ ಕೋರ್ಟ್ ‘ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ Vs ಯೂನಿಯನ್ ಆಫ್ ಇಂಡಿಯಾ ’ಪ್ರಕರಣ ದಲ್ಲಿ ಗೌಪ್ಯತೆ ಕುರಿತು ನೀಡಿದ ಹೆಗ್ಗುರುತು ತೀರ್ಪಿನ (Landmark privacy judgment) ಆಶಯವನ್ನು ಪೂರೈಸುವುದಿಲ್ಲ.
- ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (FRS) ಅಳವಡಿಸುವ ಮೊದಲು ಅನೇಕ ಸಂಸ್ಥೆಗಳು “ಗೌಪ್ಯತೆ ಪರಿಣಾಮದ ಮೌಲ್ಯಮಾಪನ” ನಡೆಸಿಲ್ಲ.
- ಫಂಕ್ಷನ್ ಕ್ರೀಪ್: ಮೂಲ ನಿಗದಿತ ಉದ್ದೇಶವನ್ನು ಹೊರತು ಪಡಿಸಿ ಬೇರೆ ಉದ್ದೇಶಕ್ಕಾಗಿ ಯಾರಾದರೂ ಮಾಹಿತಿಯನ್ನು ಬಳಸಿದಾಗ ಅತಿ ಗಾಬರಿ ಸಂಭವಿಸುತ್ತದೆ. (ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ದೆಹಲಿ ಹೈಕೋರ್ಟ್‌ನ ಆದೇಶವು FRS ಬಳಸಲು ಪೊಲೀಸರಿಗೆ ಅನುಮತಿ ದೊರೆತಿದೆ ಆದರೆ ಅವರು ಈಗ ಅದನ್ನು ವ್ಯಾಪಕ ಭದ್ರತೆ ಮತ್ತು ಕಣ್ಗಾವಲು ಮತ್ತು ತನಿಖಾ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ, ಇದು ಒಂದು ಫಂಕ್ಷನ್ ಕ್ರೀಪ್ ಆಗಿದೆ.
- ಇದು ಒಂದು ಅತಿಯಾದ ಪೋಲಿಸ್ ಗಿರಿ ಸಮಸ್ಯೆಗೆ ಕಾರಣವಾಗುವುದಲ್ಲದೆ ಯಾವುದೇ ಕಾನೂನು ಬೆಂಬಲವಿಲ್ಲದ ಕೆಲವು ಅಲ್ಪಸಂಖ್ಯಾತರು ಏನಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮೇಲ್ವಿಚಾರಣೆಯ ಅರಿವಿಲ್ಲದೆ ಸಮಸ್ಯೆಗಳಿಗೆ ಗುರಿಯಾಗುವ ಸಂಭವವಿದೆ.
- ಸಾಮೂಹಿಕ ಕಣ್ಗಾವಲು: ಯಾರಾದರೂ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹೋದರೆ, ಮತ್ತು ಪೊಲೀಸರು ಅಂತಹ ವ್ಯಕ್ತಿಯನ್ನು ಗುರುತಿಸಲು ಸಮರ್ಥರಾಗಿದ್ದರೆ, ಆಗ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು.
- ಸ್ವಯಂಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆಗೆ (AFRS) ಆಧಾರವು / ತಳಹದಿಯು 2009 ರ ಕ್ಯಾಬಿನೆಟ್ ಟಿಪ್ಪಣಿಯಾಗಿದೆ.ಆದರೆ ಕ್ಯಾಬಿನೆಟ್ ಟಿಪ್ಪಣಿಯು ಕಾನೂನುಬದ್ಧ ಪ್ರಕ್ರಿಯೆಯಲ್ಲ, ಇದು ಹೆಚ್ಚೆಂದರೆ ಒಂದು ಕಾರ್ಯವಿಧಾನದ ಟಿಪ್ಪಣಿಯಾಗಿರುವುದು.
ಮುಖ ಗುರುತು ಪತ್ತೆ ಎಂದರೇನು?
ಮುಖ ಗುರುತು ಪತ್ತೆ ಒಂದು ಬಯೋಮೆಟ್ರಿಕ್ ತಂತ್ರಜ್ಞಾನವಾಗಿದ್ದು ಅದು ವ್ಯಕ್ತಿಯನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಮುಖದ ಮೇಲಣ ವಿಶಿಷ್ಟ ಲಕ್ಷಣಗಳನ್ನು ಬಳಸುತ್ತದೆ.
- ಜನರ ಮುಖಗಳ ಫೋಟೋಗಳು ಮತ್ತು ವೀಡಿಯೊಗಳ ದೊಡ್ಡ ದತ್ತಾಂಶ ಸಂಗ್ರಹಣಾ ವ್ಯವಸ್ಥೆಯನ್ನು ನಿರ್ವಹಿಸುವ ಮೂಲಕ AFRS ಕಾರ್ಯನಿರ್ವಹಿಸುತ್ತದೆ. ನಂತರ, ಗುರುತಿಸಲಾಗದ ವ್ಯಕ್ತಿಯ ಹೊಸ ಚಿತ್ರವನ್ನು – ಸಿಸಿಟಿವಿ ದೃಶ್ಯಾವಳಿಗಳಿಂದ ತೆಗೆದುಕೊಂಡು – ಹೊಂದಾಣಿಕೆಯನ್ನು ಕಂಡುಹಿಡಿಯಲು ಮತ್ತು ವ್ಯಕ್ತಿಯನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಡೇಟಾಬೇಸ್‌ನೊಂದಿಗೆ ಹೋಲಿಸಲಾಗುತ್ತದೆ.
- ನಮೂನೆಯೊಂದರ-ಶೋಧನೆ ಮತ್ತು ಹೋಲಿಕೆಗಾಗಿ ಬಳಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು “ನರ ಜಾಲಗಳು” “neural networks” ಎಂದು ಕರೆಯಲಾಗುತ್ತದೆ.
ಮುಖ ಗುರುತು ಪತ್ತೆ ತಂತ್ರಜ್ಞಾನದ ಪ್ರಯೋಜನಗಳು:
- ಅಪರಾಧ ಪತ್ತೆ ಮತ್ತು ಪರಿಶೀಲನೆಯ ಕ್ಷೇತ್ರದಲ್ಲಿ ಫಲಿತಾಂಶಗಳನ್ನು ಉತ್ತಮ ಪಡಿಸುತ್ತದೆ.
- ಜನಸಂದಣಿಯಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.
- ಪೊಲೀಸ್ ಇಲಾಖೆಯ ಅಪರಾಧ ತನಿಖಾ ಸಾಮರ್ಥ್ಯಗಳನ್ನು ಉತ್ತಮ ಪಡಿಸುತ್ತದೆ.
- ಅಗತ್ಯವಿದ್ದಾಗ ನಾಗರಿಕರ ಪರಿಶೀಲನೆಗೆ ಸಹಾಯ ಮಾಡುತ್ತದೆ. ಹಾಗಾಗಿ ನಕಲಿ ಐಡಿ ಬಳಸಿ ಯಾರಿಗೂ ಪಾರಾಗಲು ಸಾಧ್ಯವಾಗುವುದಿಲ್ಲ.
ನೀಡ್ ಆಫ್ ದಿ ಅವರ್ : ಈ ಹೊತ್ತಿನ ಅವಶ್ಯಕತೆ :
ಸಾರ್ವಜನಿಕ ಸ್ಥಳಗಳಲ್ಲಿಯೂ ಸಹ ಗೌಪ್ಯತೆ/ ಖಾಸಗಿತನ ಎಂಬುದು ಮೂಲಭೂತ ಹಕ್ಕು ಎಂದು ಪುಟ್ಟಸ್ವಾಮಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಮತ್ತು ಈ ಹಕ್ಕುಗಳನ್ನು ಉಲ್ಲಂಘಿಸಬೇಕಾದ ಪರಿಸ್ಥಿತಿ ಬಂದರೆ ಅಂತಹ ಕ್ರಮವನ್ನು ಕಾನೂನಿನಿಂದ ಅನುಮೋದಿಸಲಾಗಿದೆ ಎಂದು ಸರ್ಕಾರ ತೋರಿಸಬೇಕಾಗುತ್ತದೆ.
ವಿಷಯಗಳು : ಐಟಿ, ಸ್ಪೇಸ್, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ಟೆಕ್ನಾಲಜಿ, ಬಯೋ-ಟೆಕ್ನಾಲಜಿ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಎಥೆನಾಲ್ ಉತ್ಪಾದನೆ :
ಸಂದರ್ಭ :
ಕೇಂದ್ರ ಸರಕಾರವು ಎಥೆನಾಲ್ ಉತ್ಪಾದನೆಗಾಗಿ ಬಡ್ಡಿ ಸಬ್ವೆನ್ಷನ್ ಗಾಗಿ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿದೆ. ಕೇವಲ ಕಾಕಂಬಿ (ಮೊಲಾಸಸ್) ಆಧಾರಿತವಲ್ಲದೆ, ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಸೇರಿಸಲು ಸಹ ಈ ಯೋಜನೆಯನ್ನು ವಿಸ್ತರಿಸಿದೆ.
ಪರಿಣಾಮಗಳು:
- ಈ ನಿರ್ಧಾರವು ಬಾರ್ಲಿ, ಮೆಕ್ಕೆಜೋಳ, ಜೋಳ ಮತ್ತು ಅಕ್ಕಿಯಂತಹ ಧಾನ್ಯಗಳಿಂದ ಸಹ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.
- ಈ ಯೋಜನೆಯು ಉತ್ಪಾದನೆ ಮತ್ತು ಬಟ್ಟಿ ಇಳಿಸುವ ಸಾಮರ್ಥ್ಯವನ್ನು 1,000 ಕೋಟಿ ಲೀಟರ್‌ಗಳಿಗೆ ಹೆಚ್ಚಿಸುತ್ತದೆ ಮತ್ತು 2030 ರ ವೇಳೆಗೆ ಪೆಟ್ರೋಲ್‌ನೊಂದಿಗೆ 20% ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP) ಕಾರ್ಯಕ್ರಮದ ಬಗ್ಗೆ:
- ಪರೀಕ್ಷಾರ್ಥವಾಗಿ 2003 ರಲ್ಲಿ ಪ್ರಾರಂಭಿಸಲಾಯಿತು.
- ಇದರ ಉದ್ದೇಶವು ಪರ್ಯಾಯ ಮತ್ತು ಪರಿಸರ ಸ್ನೇಹಿ ಇಂಧನಗಳ ಬಳಕೆಯನ್ನು ಉತ್ತೇಜಿಸುವುದಾಗಿದೆ.
ಎಥೆನಾಲ್:
- ಅಧಿಕ ಪಿಷ್ಟವನ್ನು ಹೊಂದಿರುವ ಕಬ್ಬು, ಮೆಕ್ಕೆಜೋಳ, ಗೋಧಿ ಇತ್ಯಾದಿಗಳಿಂದ ಎಥೆನಾಲ್ ಅನ್ನು ಉತ್ಪಾದಿಸಲಾಗುವುದು.
- ಭಾರತದಲ್ಲಿ, ಎಥೆನಾಲ್ ಅನ್ನು ಮುಖ್ಯವಾಗಿ ಕಬ್ಬಿನ ಕಾಕಂಬಿಯ ಹುದುಗುವಿಕೆ ಪ್ರಕ್ರಿಯೆಯಿಂದ ಉತ್ಪಾದಿಸಲಾಗುತ್ತದೆ.
- ವಿಭಿನ್ನ ಮಿಶ್ರಣಗಳನ್ನು ತಯಾರಿಸಲು ಎಥೆನಾಲ್ ಅನ್ನು ಗ್ಯಾಸೋಲಿನ್ ನೊಂದಿಗೆ ಬೆರೆಸಲಾಗುವುದು.
- ಎಥೆನಾಲ್ ಕಣವು ಆಮ್ಲಜನಕವನ್ನು ಹೊಂದಿರುವುದರಿಂದ ಇದು ಇಂಧನವನ್ನು ಪರಿಪೂರ್ಣವಾಗಿ ದಹಿಸಲು ಎಂಜಿನ್ ಅನ್ನು ಅನುಮತಿಸುತ್ತದೆ, ಇದರ ಪರಿಣಾಮವಾಗಿ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗುತ್ತದೆ ಮತ್ತು ಇದರಿಂದಾಗಿ ಪರಿಸರ ಮಾಲಿನ್ಯವು ತಗ್ಗುತ್ತದೆ.
- ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವ ಸಸ್ಯಗಳಿಂದ ಎಥೆನಾಲ್ ಉತ್ಪತ್ತಿಯಾಗುವುದರಿಂದ, ಎಥೆನಾಲ್ ಅನ್ನು ನವೀಕರಿಸಬಹುದಾದ ಇಂಧನವಾಗಿಯೂ ಪರಿಗಣಿಸಲಾಗುತ್ತದೆ.
ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲತತ್ವಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.
ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA):
ಸಂದರ್ಭ:
- ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA) ಯ ಅಡಿಯಲ್ಲಿ ಇಡೀ ನಾಗಾಲ್ಯಾಂಡ್ ರಾಜ್ಯವನ್ನು ಮುಂದಿನ ಆರು ತಿಂಗಳುಗಳ ಕಾಲ “ಗಲಭೆಪೀಡಿತ ಪ್ರದೇಶ” ಎಂದು ಗೃಹ ಸಚಿವಾಲಯ ಘೋಷಿಸಿದೆ.
- ಸಂಪೂರ್ಣ ನಾಗಾಲ್ಯಾಂಡ್ ಪ್ರದೇಶವು ಎಂತಹ “ಗಲಭೆಪೀಡಿತ ಮತ್ತು ಅಪಾಯಕಾರಿ ಸ್ಥಿತಿಯಲ್ಲಿದೆ” ಎಂದರೆ ಆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಶಸ್ತ್ರ ಪಡೆಗಳ ಬಳಕೆ ಅತ್ಯಗತ್ಯವಾಗಿದೆ ಎಂದು ಚಿವಾಲಯ ಹೇಳಿದೆ.
AFSPA ಎಂದರೆ ಏನು?
ಸರಳವಾಗಿ ಹೇಳುವುದಾದರೆ, AFSPA ಸಶಸ್ತ್ರ ಪಡೆಗಳಿಗೆ “ಗಲಭೆಪೀಡಿತ ಪ್ರದೇಶಗಳಲ್ಲಿ” ಸಾರ್ವಜನಿಕ ಜೀವನಕ್ರಮವನ್ನು ಕಾಪಾಡುವ ಅಧಿಕಾರವನ್ನು ನೀಡುತ್ತದೆ.
ಸಶಸ್ತ್ರ ಪಡೆಗಳಿಗೆ ನೀಡಲಾದ ಅಧಿಕಾರಗಳು:
- ಸಶಸ್ತ್ರ ಪಡೆಗಳಿಗೆ ಒಂದು ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟುಗೂಡುವುದನ್ನು ನಿಷೇಧಿಸುವ ಅಧಿಕಾರ ಇದ್ದು, ಒಬ್ಬ ವ್ಯಕ್ತಿಯು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿರುವನು ಎಂದು ಭಾವಿಸಿದರೆ ಸರಿಯಾದ ಎಚ್ಚರಿಕೆ ನೀಡಿದ ನಂತರ ಬಲಪ್ರಯೋಗ ಮಾಡಬಹುದು ಅಥವಾ ಗುಂಡು ಹಾರಿಸಬಹುದಾಗಿದೆ.
- ಅನುಮಾನಕ್ಕೆ ಸಕಾರಣವಿದ್ದರೆ, ಸೈನ್ಯವು ವಾರಂಟ್ ಇಲ್ಲದೆ ಒಬ್ಬ ವ್ಯಕ್ತಿಯನ್ನು ಬಂಧಿಸಬಹುದು; ವಾರಂಟ್ ಇಲ್ಲದೆ ಆವರಣವನ್ನು ಪ್ರವೇಶಿಸಬಹುದು ಅಥವಾ ಹುಡುಕಬಹುದು; ಮತ್ತು ಬಂದೂಕುಗಳನ್ನು ಹೊಂದಿರುವುದನ್ನು ನಿಷೇಧಿಸ ಬಹುದಾಗಿದೆ.
- ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯನ್ನು ಹತ್ತಿರದ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಬಂಧನಕ್ಕೆ ಕಾರಣವಾದ ಸಂದರ್ಭಗಳನ್ನು ವಿವರಿಸುವ ವರದಿಯೊಂದಿಗೆ ಹಸ್ತಾಂತರಿಸಬಹುದು.
“ಗಲಭೆಪೀಡಿತ ಪ್ರದೇಶ” ಎಂದರೇನು ಮತ್ತು ಅದನ್ನು ಘೋಷಿಸುವ ಅಧಿಕಾರ ಯಾರಿಗೆ ಇದೆ?
ಗಲಭೆಪೀಡಿತ ಪ್ರದೇಶವೆಂದರೆ AFSPA ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಘೋಷಿಸಲ್ಪಟ್ಟ ಪ್ರದೇಶವಾಗಿದೆ. ಸಮಾಜದ ವಿವಿಧ ಧಾರ್ಮಿಕ, ಜನಾಂಗೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು ಅಥವಾ ಸಮುದಾಯಗಳ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳಿಂದಾಗಿ ಪ್ರದೇಶವೊಂದು ತೊಂದರೆಗೊಳಗಾಗಬಹುದು.
- ಕೇಂದ್ರ ಸರ್ಕಾರ, ಅಥವಾ ರಾಜ್ಯದ ರಾಜ್ಯಪಾಲರು ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸಂಪೂರ್ಣ ಅಥವಾ ಭಾಗಶಃ ಭಾಗವನ್ನು ಗಲಭೆಪೀಡಿತ ಪ್ರದೇಶವೆಂದು ಘೋಷಿಸಬಹುದು.
ಕಾಯಿದೆಯ ಕುರಿತು ಯಾವುದೇ ವಿಮರ್ಶೆ ನಡೆದಿದೆಯೇ?
ನವೆಂಬರ್ 19, 2004 ರಂದು, ಈಶಾನ್ಯ ರಾಜ್ಯಗಳಲ್ಲಿನ ಈ ಕಾಯಿದೆಯ ನಿಬಂಧನೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಬಿ ಪಿ ಜೀವನ್ ರೆಡ್ಡಿ ನೇತೃತ್ವದ ಐದು ಸದಸ್ಯರ ಸಮಿತಿಯನ್ನು ನೇಮಿಸಿತು.
- ಸಮಿತಿಯು 2005 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು ಅದರಲ್ಲಿ ಈ ಕೆಳಗಿನ ಶಿಫಾರಸ್ಸುಗಳು ಸೇರಿವೆ: (ಎ) AFSPA ವನ್ನು ರದ್ದುಪಡಿಸಬೇಕು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ರಲ್ಲಿ ಸೂಕ್ತವಾದ ನಿಬಂಧನೆಗಳನ್ನು ಸೇರಿಸಬೇಕು; (ಬಿ) ಸಶಸ್ತ್ರ ಪಡೆ ಮತ್ತು ಅರೆಸೈನಿಕ ಪಡೆಗಳ ಅಧಿಕಾರವನ್ನು ಸ್ಪಷ್ಟವಾಗಿ ತಿಳಿಸಲು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯನ್ನು ಮಾರ್ಪಡಿಸಬೇಕು ಮತ್ತು (ಸಿ) ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿರುವ ಪ್ರತಿ ಜಿಲ್ಲೆಯಲ್ಲೂ ಕುಂದುಕೊರತೆ ಕೇಂದ್ರಗಳನ್ನು ಸ್ಥಾಪಿಸಬೇಕು.
ಎರಡನೇ ಆಡಳಿತ ಸುಧಾರಣಾ ಆಯೋಗದ 5 ನೇ ವರದಿಯು AFSPA ವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನ:
ಸಂದರ್ಭ:
ಅಸ್ಸಾಂ ನ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ರವರು ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಜನವರಿ 31 ರ ಗಡುವನ್ನು ನಿಗದಿಪಡಿಸಿದ್ದಾರೆ.
ಸಮಸ್ಯೆ ಏನು?
1999 ರಿಂದ ದಿಬ್ರು-ಸೈಖೋವಾ ವನ್ಯಜೀವಿ ಅಭಯಾರಣ್ಯವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಉನ್ನತೀಕರಿಸಿದಾಗಿಂದಲೂ ಇದು ಬೆಂಕಿ ಅವಗಡಗಳಿಗೆ ತುತ್ತಾಗುತ್ತಿದೆ.
ರಾಷ್ಟ್ರೀಯ ಉದ್ಯಾನವನದ ಬಗ್ಗೆ:
- ಇದು ಅಸ್ಸಾಂನ ಬ್ರಹ್ಮಪುತ್ರ ನದಿಯ ದಕ್ಷಿಣ ದಡದಲ್ಲಿದೆ.
- ಇದು ಈಶಾನ್ಯ ಭಾರತದ ಅತಿದೊಡ್ಡ ಜೌಗು ಅರಣ್ಯವಾಗಿದೆ.
- ಇದು ಬರ್ಡ್‌ಲೈಫ್ ಇಂಟರ್‌ನ್ಯಾಷನಲ್ ನಿಂದ ಗುರುತಿಸಲ್ಪಟ್ಟ ಪ್ರಮುಖ ಪಕ್ಷಿ ವಲಯ (IBM) ಆಗಿದೆ,
- ಇದು ಅಪರೂಪದ ಬಿಳಿ-ರೆಕ್ಕೆಯ ಮರದ ಬಾತುಕೋಳಿಗಳು ಮತ್ತು ಕಾಡು ಕುದುರೆಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ.
- ಅರಣ್ಯ ಪ್ರಕಾರವು ಅರೆ ನಿತ್ಯಹರಿದ್ವರ್ಣ ಕಾಡುಗಳು, ಪತನಶೀಲ ಕಾಡುಗಳು, ಕರಾವಳಿ ಮತ್ತು ಜೌಗು ಅರಣ್ಯಗಳು ಮತ್ತು ಆರ್ದ್ರ ನಿತ್ಯಹರಿದ್ವರ್ಣ ಕಾಡುಗಳ ಚಿಕ್ಕ ಭಾಗಗಳನ್ನು ಒಳಗೊಂಡಿದೆ.
- ಮಾಗುರಿ ಮೊಟಾಪುಂಗ್ (Maguri Motapung) ಜೌಗು ಪ್ರದೇಶವು ಈ ಮೀಸಲು ಪ್ರದೇಶದ ಭಾಗವಾಗಿದೆ.
ಎಸ್ಟೋನಿಯಾ, ಪೆರುಗ್ವೆ ಮತ್ತು ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರಗಳಲ್ಲಿ ರಾಯಭಾರ ಕಛೇರಿಗಳನ್ನು ಆರಂಭಿಸಲು ಅನುಮೋದನೆ ನೀಡಿದ ಸರ್ಕಾರ :
- ಭಾರತ ಸರ್ಕಾರವು 2021 ರಲ್ಲಿ ಎಸ್ಟೋನಿಯಾ, ಪೆರುಗ್ವೆ ಮತ್ತು ಡೊಮಿನಿಕನ್ ರಿಪಬ್ಲಿಕ್ ಗಳಲ್ಲಿ ಮೂರು ರಾಯಭಾರ ಕಛೇರಿಗಳನ್ನು ಆರಂಭಿಸಲು ಅನುಮೋದನೆ ನೀಡಿದೆ.
- ಇದು ಭಾರತದ ರಾಜತಾಂತ್ರಿಕ ಹೆಜ್ಜೆಗುರುತನ್ನು ವಿಸ್ತರಿಸಲು, ರಾಜಕೀಯ ಸಂಬಂಧಗಳನ್ನು ಗಟ್ಟಿಗೊಳಿಸಲು, ದ್ವಿಪಕ್ಷೀಯ ವ್ಯಾಪಾರವನ್ನು ವೃದ್ಧಿಸಲು, ಹೂಡಿಕೆ ಮತ್ತು ಆರ್ಥಿಕತೆ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.
(ಗಮನಿಸಿ: ಮೇಲೆ ತಿಳಿಸಿದ ದೇಶಗಳ ಭೌಗೋಳಿಕ ಸ್ಥಳಗಳನ್ನು ಅಟ್ಲಾಸ್ ನಲ್ಲಿ ಗುರುತಿಸಿ ಅವುಗಳ ಬಗ್ಗೆ ಸಾಮಾನ್ಯ ತಿಳಿವಳಿಕೆಯನ್ನು ಹೊಂದಿರಿ).
ಆಕಾಶ್ ಕ್ಷಿಪಣಿ:
ಆಕಾಶ್ ಕ್ಷಿಪಣಿಯ ರಫ್ತಿಗೆ ಅನುಮೋದನೆ ನೀಡಿದ ಕ್ಯಾಬಿನೆಟ್.
- ದೇಶೀಯವಾಗಿ ತಯಾರಿಸಿ ಅಭಿವೃದ್ಧಿಪಡಿಸಿದ ಆಕಾಶ್ ಕ್ಷಿಪಣಿಯು ಕಡಿಮೆ ವ್ಯಾಪ್ತಿಯ (25ಕಿ.ಮೀ. ದೂರದಲ್ಲಿನ ಗುರಿಯನ್ನು ನಿಖರವಾಗಿ ಹೊಡೆದುರಳಿಸಬಲ್ಲದು) ನೆಲದಿಂದ ಆಕಾಶಕ್ಕೆ ಚಿಮ್ಮುಬಲ್ಲ ಈ ಕ್ಷಿಪಣಿಗಳ (SAM ವ್ಯವಸ್ಥೆಯಾಗಿದೆ.
ವ್ಯಾಪ್ತಿ:
- ಸುಮಾರು 2.5 ಮ್ಯಾಕ್ (Mach) ವೇಗದಲ್ಲಿ ಉಡಾವಣೆಗೊಳ್ಳಬಲ್ಲದು ಮತ್ತು ಎತ್ತರವನ್ನು ಗರಿಷ್ಠ 18 ಕಿ.ಮೀ ಮತ್ತು ಕನಿಷ್ಠ 30 ಮೀಟರ್ ತಲುಪಬಲ್ಲದು.