ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಮಧ್ಯಪ್ರದೇಶದ ಮತಾಂತರ ನಿಷೇಧ ಮಸೂದೆ.
2. ಲಸಿಕೆಗಳು ಮತ್ತು ರೋಗನಿರೋಧಕ ಶಕ್ತಿಗಾಗಿ ಜಾಗತಿಕ ಒಕ್ಕೂಟ (GAVI).
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. 43% ಹೆಚ್ಚು ಸಾಲ ಪಡೆಯುವ ಮೂಲಕ, ಸಾಲದ ಸುಳಿಗೆ ಸಿಲುಕಿದ ರಾಜ್ಯಗಳು
2. ಶೂನ್ಯ ಕೂಪನ್ ಬಾಂಡ್‌ಗಳು ಎಂದರೇನು?
3. ’TiHAN- IIT ಹೈದರಾಬಾದ್’.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಮುಂದಿನ ಆಸನಗಳಿಗೆ ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸಿದ ಸರ್ಕಾರ
2. ಗಾಜಾ(Gaza)
3. ದೈತ್ಯ ರಾಕ್ ಬೀ ಹನಿ (Giant Rock Bee Honey).
4. ಡಿಜಿಟಲ್ ಸಾಗರ.
5. ಲೇಹ್‌ನಲ್ಲಿನ ಹವಾಮಾನ (Met) ಕೇಂದ್ರ.
ಸಾಮಾನ್ಯ ಅಧ್ಯಯನ ಪತ್ರಿಕೆ – 1
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಸ್ತಕ್ಷೇಪಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಮಧ್ಯಪ್ರದೇಶದ ಮತಾಂತರ ನಿಷೇಧ ಮಸೂದೆ:
ಸಂದರ್ಭ:
ಪ್ರಸ್ತಾವಿತ ಕಾನೂನನ್ನು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ (ಧಾರ್ಮಿಕ ಸ್ವಾತಂತ್ರ್ಯ) ಮಸೂದೆ 2020 ಎಂದು ಕರೆಯಲಾಗುತ್ತದೆ.
ಮದುವೆಯಾಗುವ ಏಕೈಕ ಉದ್ದೇಶದಿಂದ ಅಥವಾ ವಂಚಿಸಿ ಧಾರ್ಮಿಕ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕುವ ಕುರಿತ ಸುಗ್ರೀವಾಜ್ಞೆಗೆ ಮಧ್ಯಪ್ರದೇಶ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿದ್ದು, ಅದನ್ನು ರಾಜ್ಯಪಾಲರ ಸಮ್ಮತಿಗಾಗಿ ಕಳುಹಿಸಿದೆ.
ಪ್ರಮುಖ ಅಂಶಗಳು:
- ರಾಜ್ಯದಲ್ಲಿ ಅಂತರ್-ಧರ್ಮೀಯ ವಿವಾಹಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ.
- ಮೂಲ ಪಿತೃ ಧರ್ಮಕ್ಕೆ ಮತಾಂತರ ವಾಗುವುದನ್ನು ಅದರ ವ್ಯಾಪ್ತಿಯಿಂದ ವಿನಾಯಿತಿ ನೀಡುತ್ತದೆ.
- ಮದುವೆ ಮೂಲಕ ಮತಾಂತರ ಅಥವಾ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವವರಿಗೆ ₹1 ಲಕ್ಷ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಕಾನೂನಿನಲ್ಲಿ ಇರಲಿದೆ.
- ಮಸೂದೆ ಧಾರ್ಮಿಕ ಮತಾಂತರಗಳನ್ನು ಅಥವಾ ಮತಾಂತರದ ಪ್ರಯತ್ನವನ್ನು ಆಮಿಷ, ಬೆದರಿಕೆ, ಅನಗತ್ಯ ಪ್ರಭಾವ, ಬಲಾತ್ಕಾರ, ಮದುವೆ ಮತ್ತು ಇನ್ನಿತರ ಯಾವುದೇ ಮೋಸದ ವಿಧಾನಗಳ ಮೂಲಕ ಮಾಡುವುದನ್ನು ನಿಷೇಧಿಸುತ್ತದೆ.
- ಮತಾಂತರಕ್ಕಾಗಿ ವ್ಯಕ್ತಿಯನ್ನು ಬೆಂಬಲಿಸುವ ಅಥವಾ ಸಹಾಯ ಮಾಡುವ ಪಿತೂರಿಯನ್ನೂ (ಕೃತ್ಯವನ್ನು) ಸಹ ನಿಷೇಧಿಸಲಾಗಿದೆ.
- ಬಲವಂತದ ಮತಾಂತರಗಳು ಮತ್ತು ವಿವಾಹಗಳು ಶಿಕ್ಷಾರ್ಹ ಅಪರಾಧವಾಗಿದ್ದು ಮತ್ತು ಜಾಮೀನು ರಹಿತವಾಗಿರುತ್ತದೆ.
ಸಮಸ್ಯೆಗಳು ಮತ್ತು ಕಾಳಜಿಗಳು:
ರಾಜ್ಯಗಳು ಮದುವೆಗೆ ಸಂಬಂಧಿಸಿದಂತೆ ಧಾರ್ಮಿಕ ಸ್ವಾತಂತ್ರ್ಯದ ಕಾನೂನುಗಳನ್ನು (‘ಲವ್ ಜಿಹಾದ್ ಮಟ್ಟ ಹಾಕಲು’) ಆರಿಸಿಕೊಳ್ಳುತ್ತಿವೆ.
- ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು `ಉತ್ತರಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ 2020’ ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಮೂಲಕ ಈ ಕಾಯ್ದೆ ಜಾರಿಗೆ ಕಳೆದ ತಿಂಗಳು ಉತ್ತರ ಪ್ರದೇಶದಿಂದ ಅಧಿಸೂಚಿಸಲಾಗಿದೆ.
- ಹರಿಯಾಣ ಮತ್ತು ಕರ್ನಾಟಕ ಇಂತಹ ಕಾನೂನುಗಳನ್ನು ಜಾರಿಗೆ ತರುವ ಉದ್ದೇಶವನ್ನು ಪ್ರಕಟಿಸಿದ್ದು ಈಗ ಈ ವಿಷಯವು ಚರ್ಚಾಸ್ಪದವಾಗಿದೆ.
ವಿಮರ್ಶಕರು ಹೇಳುವುದೇನು?
ಹಲವಾರು ಕಾನೂನು ಪಂಡಿತರು ‘ಲವ್ ಜಿಹಾದ್’ ಪರಿಕಲ್ಪನೆಗೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಆಧಾರಗಳಿಲ್ಲ ಎಂದು ವಾದಿಸಿ ಈ ಕಾನೂನನ್ನು ತೀವ್ರ ಟೀಕೆಗೆ ಗುರಿ ಪಡಿಸಿದ್ದಾರೆ.
- ಒಬ್ಬರು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯನ್ನು ಅವರು ಸೂಚಿಸಿದ್ದಾರೆ.
- ಅಲ್ಲದೆ, ಸಂವಿಧಾನದ 25 ನೆಯ ವಿಧಿಯು ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಭಾದಿತ ಅವಲಂಬನೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯ ನೀಡುತ್ತದೆ.
ಮದುವೆ ಮತ್ತು ಮತಾಂತರದ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯ:
- ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುಕೊಳ್ಳುವ ವಯಸ್ಕರ ಸಂಪೂರ್ಣ ಹಕ್ಕಿನ ಕುರಿತು ಮಧ್ಯಪ್ರವೇಶಿಸಿಸಲು ರಾಜ್ಯ ಮತ್ತು ನ್ಯಾಯಾಲಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
- ಭಾರತದ ಸುಪ್ರೀಂ ಕೋರ್ಟ್, ಲಿಲಿ ಥಾಮಸ್ ಮತ್ತು ಸರಳಾ ಮುದ್ಗಲ್ ಎರಡೂ ಪ್ರಕರಣಗಳಲ್ಲಿ, ಧಾರ್ಮಿಕ ಮತಾಂತರಗಳು ನಂಬಿಕೆಯಿಲ್ಲದೆ ನಡೆದಿವೆ ಮತ್ತು ಕೆಲವು ಕಾನೂನು ಪ್ರಯೋಜನವನ್ನು ಪಡೆಯುವ ಏಕೈಕ ಉದ್ದೇಶಕ್ಕಾಗಿ ನಡೆದಿವೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.
ವಿಷಯಗಳು: ಭಾರತವನ್ನು ಒಳಗೊಂಡ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಒಕ್ಕೂಟಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಬೀರುವ ಪರಿಣಾಮ.
ಲಸಿಕೆಗಳು ಮತ್ತು ರೋಗನಿರೋಧಕ ಶಕ್ತಿಗಾಗಿ ಜಾಗತಿಕ ಒಕ್ಕೂಟ (GAVI).
Global Alliance for Vaccines and Immunisation (GAVI):
ಸಂದರ್ಭ:
ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರನ್ನು ಲಸಿಕೆಗಳು ಮತ್ತು ರೋಗನಿರೋಧಕ ಶಕ್ತಿಗಾಗಿ ಜಾಗತಿಕ ಒಕ್ಕೂಟ (GAVI) ವು ಈ ಮಂಡಳಿಯಲ್ಲಿ ಸದಸ್ಯರನ್ನಾಗಿ ನೇಮಿಸಿದೆ.
ಡಾ. ಹರ್ಷ್ ವರ್ಧನ್ ಅವರು GAVI ಮಂಡಳಿಯಲ್ಲಿ ಆಗ್ನೇಯ ಪ್ರದೇಶ/ ಸೌಥ್ ಈಸ್ಟ್ ಏರಿಯಾ ಪ್ರಾದೇಶಿಕ ಕಚೇರಿ (SEARO) / ವೆಸ್ಟರ್ನ್ ಪೆಸಿಫಿಕ್ ಪ್ರಾದೇಶಿಕ ಕಚೇರಿ (WPRO) ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.
ಗಾವಿ ಬೋರ್ಡ್:
- GAVI ಮಂಡಳಿಯು ಕಾರ್ಯತಂತ್ರದ ನಿರ್ದೇಶನ ಮತ್ತು ನೀತಿ ನಿರೂಪಣೆಗೆ ಕಾರಣವಾಗಿದ್ದು, ಲಸಿಕೆ ಒಕ್ಕೂಟದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವುದರ ಜೊತೆಗೆ ಕಾರ್ಯಕ್ರಮದ ಅನುಷ್ಠಾನದ ಮೇಲ್ವಿಚಾರಣೆಯನ್ನು ಮಾಡುತ್ತದೆ.
- ಪಾಲುದಾರ ಸಂಸ್ಥೆಗಳು ಮತ್ತು ಖಾಸಗಿ ವಲಯದ ತಜ್ಞರಿಂದ ಸದಸ್ಯತ್ವವನ್ನು ಪಡೆದುಕೊಳ್ಳುವುದರೊಂದಿಗೆ, ಸಮತೋಲಿತ ಕಾರ್ಯತಂತ್ರದ ನಿರ್ಧಾರ ತೆಗೆದುಕೊಳ್ಳುವಿಕೆ, ನಾವೀನ್ಯತೆ ಮತ್ತು ಪಾಲುದಾರರ ನಡುವೆ ಸಹಯೋಗ ಏರ್ಪಡಿಸಲು GAVI ಯು ಒಂದು ವೇದಿಕೆಯನ್ನು ಒದಗಿಸುತ್ತದೆ.
ಏನಿದು GAVI ?
GAVI ಯು ವಿಶ್ವದ ಬಡ ದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಹೊಸ ಮತ್ತು ಬಳಕೆಯಾಗದ ಲಸಿಕೆಗಳ ಸಮಾನ ಅವಕಾಶ ಸೃಷ್ಟಿಸುವ ಗುರಿಯೊಂದಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ 2000 ರಲ್ಲಿ ರಚಿಸಲಾದ ಒಂದು ಅಂತರಾಷ್ಟ್ರೀಯ ಸಂಸ್ಥೆ ಮತ್ತು ಜಾಗತಿಕ ಲಸಿಕೆ ಒಕ್ಕೂಟವಾಗಿದೆ.
ಸದಸ್ಯರು:
GAVI ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಮತ್ತು ದಾನಿ ಸರ್ಕಾರಗಳು, ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್, ವಿಶ್ವಬ್ಯಾಂಕ್, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ಲಸಿಕೆ ಉದ್ಯಮ, ಸಂಶೋಧನೆ ಮತ್ತು ತಾಂತ್ರಿಕ ಸಂಸ್ಥೆಗಳು, ನಾಗರಿಕ ಸಮಾಜ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಮತ್ತು ಇತರ ಖಾಸಗಿ ಲೋಕೋಪಕಾರಿಗಳನ್ನು ಒಟ್ಟುಗೂಡಿಸುತ್ತದೆ.
ಮುಖ್ಯ ಚಟುವಟಿಕೆಗಳು:
- GAVI ಯು ಬಡ ದೇಶಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಕ್ಕಳ ಜೀವಗಳನ್ನು ಉಳಿಸುವ ಮತ್ತು ಜನರ ಆರೋಗ್ಯವನ್ನು ರಕ್ಷಿಸುವ ಉದ್ದೇಶದ ಕಾರ್ಯತಂತ್ರವನ್ನು ಬೆಂಬಲಿಸುತ್ತದೆ.
- ಕಾರ್ಯಸಾಧನೆ, ಮತ್ತು ಫಲಿತಾಂಶಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ವಿಶ್ವಸಂಸ್ಥೆಯ ಮಿಲೇನಿಯಮ್ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಇದು ಕೊಡುಗೆ ನೀಡುತ್ತದೆ.
- ಲಸಿಕೆಗಳು ಮತ್ತು ಆರೈಕೆಯ ಪ್ರಗತಿಯ ಬೌದ್ಧಿಕ ಸಂಪನ್ಮೂಲಗಳಿಗೆ ಅದರ ಪಾಲುದಾರರು ಆರ್ಥಿಕ ಸಹಾಯ ಮಾಡುತ್ತಾರೆ.
- ರೋಗನಿರೋಧಕ ಲಸಿಕೆ ಮತ್ತು ಇತರ ಆರೋಗ್ಯ ಸೇವೆಗಳನ್ನು ಸುಸ್ಥಿರ ರೀತಿಯಲ್ಲಿ ತಲುಪಿಸಲು ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯವನ್ನು ಬಲಪಡಿಸಲು ಅವರು ಸಹಕರಿಸುತ್ತಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 1
ವಿಷಯಗಳು : ಭಾರತದ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಹಂಚಿಕೆ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.
43% ಹೆಚ್ಚು ಸಾಲ ಪಡೆಯುವ ಮೂಲಕ, ಸಾಲದ ಸುಳಿಗೆ ಸಿಲುಕಿದ ರಾಜ್ಯಗಳು :
ಸಂದರ್ಭ :
ಮೊದಲ 9 ತಿಂಗಳಲ್ಲಿ 43% ರಷ್ಟು ಹೆಚ್ಚು ಸಾಲ ಪಡೆಯುವುದರಿಂದ, ರಾಜ್ಯಗಳು ಸಾಲದ ಬಲೆಗೆ ಬೀಳುತ್ತವೆ.
ರೇಟಿಂಗ್ ಏಜೆನ್ಸಿ ICRA ನಡೆಸಿದ ವಿಶ್ಲೇಷಣೆಯ ಪ್ರಕಾರ,2020 ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ರಾಜ್ಯಗಳು, 3,87,400 ಕೋಟಿ ರೂಪಾಯಿ ಸಾಲ ಪಡೆದಿವೆ.
ರಾಜ್ಯಗಳು ಪಡೆದ ಎರವಲು:
ಭಾರತ ಸರ್ಕಾರ ಮತ್ತು ರಾಜ್ಯಗಳು ಪಡೆದ ಎರವಲು ಕ್ರಮವಾಗಿ ಭಾರತ ಸಂವಿಧಾನದ 292 ಮತ್ತು 293 ನೇ ವಿಧಿ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ.
ಭಾರತದ ಸಂವಿಧಾನದ 293 ನೇ ವಿಧಿ “ರಾಜ್ಯಗಳು ಪಡೆದ ಎರವಲು: ”:
- ಈ ಲೇಖನದ ನಿಬಂಧನೆಗಳಿಗೆ ಒಳಪಟ್ಟು, ಒಂದು ರಾಜ್ಯದ ಕಾರ್ಯಾಂಗವು ತನ್ನ ಇತಿ ಮಿತಿಗಳಲ್ಲಿ ತನ್ನ ರಾಜ್ಯದ ಸಂಚಿತ ನಿಧಿಯ ಸುರಕ್ಷತೆಯ ಮೇಲೆ ಭಾರತದ ಭೂಪ್ರದೇಶದೊಳಗೆ ಸಾಲ ಪಡೆಯುವುದನ್ನು ವಿಸ್ತರಿಸುತ್ತದೆ, ಮತ್ತು ಕಾಲಕಾಲಕ್ಕೆ ಅಂತಹ ರಾಜ್ಯದ ಶಾಸಕಾಂಗವು ಕಾನೂನಿನ ಮೂಲಕ ನಿಗದಿಪಡಿಸಬಹುದಾದ ಅಂತಹ ಮಿತಿಗಳಲ್ಲಿ ಖಾತರಿಗಳನ್ನು ನೀಡುವುತ್ತದೆ.
- ಭಾರತ ಸರ್ಕಾರವು,ಸಂಸತ್ತು ಮಾಡಿದ ಯಾವುದೇ ಕಾನೂನಿನಡಿಯಲ್ಲಿ ಅಥವಾ ಅದರ ಅಡಿಯಲ್ಲಿ ವಿಧಿಸಬಹುದಾದ ಷರತ್ತುಗಳಿಗೆ ಒಳಪಟ್ಟು, ಯಾವುದೇ ರಾಜ್ಯಕ್ಕೆ ಸಾಲವನ್ನು ನೀಡಬಹುದು ಅಥವಾ, ಅನುಚ್ಛೇದ 292 ರ ಅಡಿಯಲ್ಲಿ ನಿಗದಿಪಡಿಸಿದ ಯಾವುದೇ ಮಿತಿಗಳನ್ನು ಮೀರದಂತೆ, ಸಂಗ್ರಹಿಸಿದ ಸಾಲಗಳಿಗೆ ಸಂಬಂಧಿಸಿದಂತೆ ಗ್ಯಾರಂಟಿ ನೀಡಬಹುದು ಮತ್ತು ಯಾವುದೇ ರಾಜ್ಯವು ಅಂತಹ ಸಾಲಗಳನ್ನು ಮಾಡುವ ಉದ್ದೇಶ ಹೊಂದಿದ್ದರೆ ಅದನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.
- ಭಾರತ ಸರ್ಕಾರ ಅಥವಾ ಹಿಂದಿನ ಸರ್ಕಾರ ನೀಡಿದ ಸಾಲದ ಯಾವುದೇ ಭಾಗವು ಇನ್ನೂ ಬಾಕಿ ಇದ್ದರೆ ರಾಜ್ಯವೊಂದು ಯಾವುದೇ ಸಾಲವನ್ನು ಭಾರತ ಸರ್ಕಾರದ ಒಪ್ಪಿಗೆಯಿಲ್ಲದೆ ಸಂಗ್ರಹಿಸಲು ಸಾಧ್ಯವಿಲ್ಲ.
ವಿಷಯಗಳು: ಭಾರತದ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಹಂಚಿಕೆ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.
ಶೂನ್ಯ ಕೂಪನ್ ಬಾಂಡ್‌ಗಳು ಎಂದರೇನು?
ಸಂದರ್ಭ:
5,500 ಕೋಟಿ ರೂ. ಮೌಲ್ಯದ ಬಡ್ಡಿರಹಿತ ಬಾಂಡ್‌ಗಳನ್ನು ಸಾಲದಾತರಿಗೆ ಸಮಾನವಾಗಿ ನೀಡುವ ಮೂಲಕ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ ಮರು ಬಂಡವಾಳ ಹೂಡಲು ಸರ್ಕಾರ ಆರ್ಥಿಕ ಆವಿಷ್ಕಾರಗಳನ್ನು ಬಳಸಿದೆ.
- .ಇವುಗಳು ಸರಿಯಾದ ಪರಿಶ್ರಮದ ನಂತರ ಸರ್ಕಾರವು ನೀಡುವ ವಿಶೇಷ ರೀತಿಯ ಶೂನ್ಯ ಕೂಪನ್ ಬಾಂಡ್‌ಗಳಾಗಿವೆ ಮತ್ತು ಇವುಗಳನ್ನು ಸಮನಾಗಿ ನೀಡಲಾಗುತ್ತದೆ.
ಈ ವಿಶೇಷ ಪ್ರಕಾರದ ಶೂನ್ಯ ಕೂಪನ್ ಬಾಂಡ್‌ಗಳು ಯಾವುವು?
- ಇವುಗಳು “ಬಡ್ಡಿರಹಿತ, ವರ್ಗಾಯಿಸಲಾಗದ ವಿಶೇಷ GOI ಭದ್ರತೆಗಳಾಗಿವೆ”(Securities).
- ಅವುಗಳು 10-15 ವರ್ಷಗಳ ಮುಕ್ತಾಯ ಅವಧಿಯನ್ನು ಹೊಂದಿದ ಮತ್ತು ನಿರ್ದಿಷ್ಟವಾಗಿ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗೆ ನೀಡುವ ಬಾಂಡ್ ಗಳಾಗಿವೆ.
- ಈ ಪುನರ್ ಬಂಡವಾಳೀಕರಣ ಬಾಂಡ್‌ಗಳು ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಒಂದು ನಿರ್ದಿಷ್ಟ ಸಂಸ್ಥೆಗೆ ನೀಡುವ ವಿಶೇಷ ರೀತಿಯ ಬಾಂಡ್‌ಗಳಾಗಿವೆ.
- ಇದನ್ನು ಬಳಸಿ ವ್ಯಾಪಾರ ಮಾಡಲಾಗುವುದಿಲ್ಲ, ಮತ್ತು ವರ್ಗಾಯಿಸಲೂ ಆಗುವುದಿಲ್ಲ.
- ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಇದನ್ನು ಬ್ಯಾಂಕಿನ ಹೋಲ್ಡ್-ಟು-ಮೆಚುರಿಟಿ (HTM) ವಿಭಾಗದಲ್ಲಿ ಇಡಲಾಗುತ್ತದೆ. ಇದು ಪಕ್ಷತೆಗೆ ಹಿಡಿದಿರುವುದರಿಂದ, ಅದನ್ನು ಮುಖಬೆಲೆಗೆ ಲೆಕ್ಕಹಾಕಲಾಗುತ್ತದೆ (ಮತ್ತು) ಮಾರುಕಟ್ಟೆಗೆ ಯಾವುದೇ ಗುರುತು ಇರುವುದಿಲ್ಲ.
ಸಾಂಪ್ರದಾಯಿಕ ಬಾಂಡ್ ಗಳಿಗಿಂತ ಅವು ಹೇಗೆ ಭಿನ್ನವಾಗಿವೆ?
ಶೂನ್ಯ ಕೂಪನ್ ಆದರೂ, ಈ ಬಾಂಡ್ ಗಳು ಸಾಂಪ್ರದಾಯಿಕ ಶೂನ್ಯ ಕೂಪನ್ ಬಾಂಡ್‌ಗಳಿಗಿಂತ ಒಂದು ಅಂಶದಲ್ಲಿ ಭಿನ್ನವಾಗಿವೆ, ಹೇಗೆಂದರೆ , ಅವುಗಳನ್ನು ಸಮನಾಗಿ ನೀಡಲಾಗುತ್ತಿರುವುದರಿಂದ, ಯಾವುದೇ ಬಡ್ಡಿ ಇಲ್ಲ,ಹಿಂದಿನ ಸಂದರ್ಭಗಳಲ್ಲಿ, ಅವುಗಳನ್ನು ರಿಯಾಯಿತಿಯಲ್ಲಿ ನೀಡಲಾಗುತ್ತಿದ್ದುದರಿಂದ, ತಾಂತ್ರಿಕವಾಗಿ ಅವು ಬಡ್ಡಿಯನ್ನು ಸಂಪಾದಿಸುತ್ತಿದ್ದವು.
ವಿಷಯಗಳು :ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
‘TiHAN- IIT ಹೈದರಾಬಾದ್’ :
ಸಂದರ್ಭ:
1.ಇದನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
2.ಇದು ಭಾರತದ ಮೊದಲ ಸ್ವಾಯತ್ತ ಸಂಚಾರ ವ್ಯವಸ್ಥೆ (Autonomous Navigation Systems) (ಟೆರೆಸ್ಟ್ರಿಯಲ್ ಮತ್ತು ಏರಿಯಲ್) (ಭೂಮಿಯ ಮತ್ತು ವೈಮಾನಿಕ) ಗಾಗಿನ ಟೆಸ್ಟ್ ಬೆಡ್ ಆಗಿದೆ.
3.ಈ ಸೌಲಭ್ಯದ ವಿಶೇಷ ಲಕ್ಷಣಗಳು ಟೆಸ್ಟ್ ಟ್ರ್ಯಾಕ್‌ಗಳು, ನೈಜ-ಪ್ರಪಂಚದ ಸನ್ನಿವೇಶಗಳನ್ನೂ ಮೀರಿಸುವ, ಸ್ಟೇಟ್ ಆಫ್ ದಿ ಆರ್ಟ್ ನಕಲು ತಂತ್ರಜ್ಞಾನ, ರಸ್ತೆ ಮೂಲಸೌಕರ್ಯ, V2X ಸಂವಹನ (ವಾಹನ ಸಂವಹನ ವ್ಯವಸ್ಥೆ), ಡ್ರೋನ್ ರನ್‌ವೇಸ್ ಮತ್ತು ಲ್ಯಾಂಡಿಂಗ್ ಏರಿಯಾ ಮತ್ತು ಇನ್ನೂ ಹಲವು.
ಹಿನ್ನೆಲೆ:
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST)ಯು ಐಐಟಿ ಹೈದರಾಬಾದ್‌ಗೆ 135 ಕೋಟಿ ರೂ ಗಳನ್ನು ನ್ಯಾಷನಲ್ ಮಿಷನ್ ಆನ್ ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ (NM-ICPS) ಅಡಿಯಲ್ಲಿ ಸ್ವಾಯತ್ತ ಸಂಚಾರ ಮತ್ತು ಡೇಟಾ ಸ್ವಾಧೀನ ವ್ಯವಸ್ಥೆಗಳಲ್ಲಿ (UAVs, RoVs, etc) ತಂತ್ರಜ್ಞಾನ ಇನ್ನೋವೇಶನ್ ಹಬ್ ಅನ್ನು ಸ್ಥಾಪಿಸಲು ನೀಡಿದೆ.
ಸೈಬರ್ ಭೌತಿಕ ವ್ಯವಸ್ಥೆಗಳು (CPS) ಎಂದರೇನು?
ಅವು ಕ್ರಿಯಾತ್ಮಕ ಪರಿಸರದಲ್ಲಿ ಗಣನೆ ಮತ್ತು ಭೌತಿಕ ಪ್ರಕ್ರಿಯೆಗಳನ್ನು ಸಂಯೋಜಿಸುವ ಎಂಜಿನಿಯರಿಂಗ್ ವ್ಯವಸ್ಥೆಗಳ ಒಂದು ಹೊಸ ವರ್ಗವಾಗಿದೆ. ಸೈಬರ್ ಭೌತಿಕ ವ್ಯವಸ್ಥೆಗಳು ತಂತ್ರಜ್ಞಾನ ಕ್ಷೇತ್ರಗಳಾದ ಸೈಬರ್ನೆಟಿಕ್ಸ್, ಮೆಕಾಟ್ರಾನಿಕ್ಸ್, ಡಿಸೈನ್ ಮತ್ತು ಎಂಬೆಡೆಡ್ ಸಿಸ್ಟಮ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಬಿಗ್ ಡಾಟಾ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) (AI) ಗಳನ್ನು ಒಳಗೊಂಡಿದೆ.
ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ ((NM-ICPS)) ಕುರಿತ ರಾಷ್ಟ್ರೀಯ ಮಿಷನ್ ಬಗ್ಗೆ:
ಈ ಹೊಸ ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಸಿಪಿಎಸ್‌ನಲ್ಲಿ ಭಾರತವನ್ನು ಪ್ರಮುಖ ದೇಶವನ್ನಾಗಿ ಮಾಡಲು ಕೇಂದ್ರ ಸಚಿವ ಸಂಪುಟವು 2018 ರಲ್ಲಿ NM-ICPS ಗೆ ಅನುಮೋದನೆ ನೀಡಿತು.
ಇದು ಐದು ವರ್ಷಗಳ ಅವಧಿಗೆ ಒಟ್ಟು 3,660 ಕೋಟಿ ರೂ. ಗಳ ನಿಧಿಯನ್ನು ಹೊಂದಿತ್ತು.
ಯೋಜನೆಯ ಅನುಷ್ಠಾನವು ತರುವ ಅಭಿವೃದ್ಧಿ :
1.ಸೈಬರ್ ಭೌತಿಕ ವ್ಯವಸ್ಥೆಗಳು (CPS) ಮತ್ತು ಸಂಬಂಧಿತ ತಂತ್ರಜ್ಞಾನಗಳು ದೇಶದಲ್ಲಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತಾಗುತ್ತದೆ.
2.ಸಿಪಿಎಸ್ ತಂತ್ರಜ್ಞಾನಗಳನ್ನು ಭಾರತದ ನಿರ್ದಿಷ್ಟ ರಾಷ್ಟ್ರೀಯ / ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸಲು ಅಳವಡಿಸಿಕೊಳ್ಳಲಾಗುವುದು.
3.CPS ನಲ್ಲಿ ಮುಂದಿನ ಪೀಳಿಗೆಯ ನುರಿತ ಮಾನವಶಕ್ತಿಯನ್ನು ಉತ್ಪಾದಿಸಲಾಗುವುದು
4.ಅನುವಾದ ಸಂಶೋಧನೆಯನ್ನು ವೇಗವರ್ಧಿಸಲು
5.CPS ನಲ್ಲಿ ಉದ್ಯಮಶೀಲತೆ ಮತ್ತು ಪ್ರಾರಂಭಿಕ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ವೇಗಗೊಳಿಸುವುದು.
6.ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಿಪಿಎಸ್, ತಂತ್ರಜ್ಞಾನ ಅಭಿವೃದ್ಧಿ ಮತ್ತು ಉನ್ನತ ಶಿಕ್ಷಣದಲ್ಲಿ ಸುಧಾರಿತ ಸಂಶೋಧನೆಗಳನ್ನು ಉತ್ತೇಜಿಸಲು.
7.ಭಾರತವನ್ನು ಇತರ ಮುಂದುವರಿದ ದೇಶಗಳ ಸಾಲಿನಲ್ಲಿ ಸಮನಾಗಿ ನಿಲ್ಲಿಸುವುದು ಮತ್ತು ಹಲವಾರು ನೇರ ಮತ್ತು ಪರೋಕ್ಷ ಪ್ರಯೋಜನಗಳನ್ನು ಪಡೆಯುವುದು.
ಅನುಷ್ಠಾನ:
1.ಈ ಯೋಜನೆಯು 15 ಸಂಖ್ಯೆಯ ಟೆಕ್ನಾಲಜಿ ಇನ್ನೋವೇಶನ್ ಹಬ್‌ಗಳು (TIH), ಆರು ಸಂಖ್ಯೆಯ ಅಪ್ಲಿಕೇಷನ್ ಇನ್ನೋವೇಶನ್ ಹಬ್‌ಗಳು (AIH) ಮತ್ತು ನಾಲ್ಕು ಸಂಖ್ಯೆಯ ತಂತ್ರಜ್ಞಾನ ಅನುವಾದ ಸಂಶೋಧನಾ ಪಾರ್ಕ್ ಗಳನ್ನು (TTRP) ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
- 2. ಹಬ್ಸ್ ಮತ್ತು TTRP ಗಳು ಅಕಾಡೆಮಿಕ್ಸ್, ಇಂಡಸ್ಟ್ರಿ, ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಹೊಂದಿದ್ದು, ದೇಶಾದ್ಯಂತ ಹೆಸರಾಂತ ಶೈಕ್ಷಣಿಕ, ಸಂಶೋಧನೆ & ಅಭಿವೃದ್ಧಿ ಮತ್ತು ಇತರ ಸಂಸ್ಥೆಗಳಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತವೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಮುಂದಿನ ಆಸನಗಳಿಗೆ ಏರ್ ಬ್ಯಾಗ್ ಗಳನ್ನು ಕಡ್ಡಾಯಗೊಳಿಸಿದ ಸರ್ಕಾರ :
1.ವಾಹನದ ಮುಂದಿನ ಆಸನಗಳಲ್ಲಿ ಪ್ರಯಾಣಿಕರಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲು ಸರ್ಕಾರ ತೀರ್ಮಾನಿಸಿದೆ.
2. ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ.
3.ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಗಾಜಾ: GAZA
ಇಸ್ರೇಲ್ ಜೊತೆಗಿನ 2008 ರ ಸಂಘರ್ಷದ ಪ್ರಾರಂಭದ ವಾರ್ಷಿಕೋತ್ಸವವನ್ನು ಆಚರಿಸಲು ಗಾಜಾದಿಂದ ಇಸ್ಲಾಮಿಕ್ ಗುಂಪುಗಳು ಸಮುದ್ರಕ್ಕೆ ರಾಕೆಟ್ ಉಡಾಯಿಸಿದವು.
ಗಾಜಾ ಎಲ್ಲಿದೆ?
1.ಗಾಜಾ ಜನನಿಬಿಡ ವಾದ ಪುಟ್ಟ ಪ್ರದೇಶವಾಗಿದ್ದು, ಬಹುತೇಕ ಇಸ್ರೇಲ್ ನಿಂದ ಆವೃತವಾಗಿದೆ ಮತ್ತು ಪ್ಯಾಲೆಸ್ಟೀನಿಯಾದ ಜನರಿಂದ ತುಂಬಿದೆ. ಇಸ್ರೇಲ್ ಮೊದಲು ಇಲ್ಲಿ ಮಿಲಿಟರಿ ಉಪಸ್ಥಿತಿಯನ್ನು ಹೊಂದಿತ್ತು, ಆದರೆ 2005 ರಲ್ಲಿ ಏಕಪಕ್ಷೀಯವಾಗಿ ಹಿಂತೆಗೆದುಕೊಂಡಿತು.
- 1987 ರಲ್ಲಿ ಇಸ್ರೇಲ್ ವಿರುದ್ಧ ಹೋರಾಡಲು ಉಗ್ರಗಾಮಿ “ಪ್ರತಿರೋಧ” ಗುಂಪಾಗಿ ರೂಪುಗೊಂಡಿರುವ ಇದನ್ನು ಹಮಾಸ್ ಎಂಬ ಇಸ್ಲಾಮಿಸ್ಟ್ ಗುಂಪು ನಿಯಂತ್ರಿಸುತ್ತದೆ.
ದೈತ್ಯ ರಾಕ್ ಬೀ ಹನಿ. Giant Rock Bee Honey :
ದೈತ್ಯ ರಾಕ್ ಬೀ ಹನಿ ಯು ಭಾರತೀಯ ಬುಡಕಟ್ಟು ಸಂಗ್ರಹ ಕ್ಕೆ ಸೇರಿಸಲ್ಪಟ್ಟಿದೆ.
- ತಮಿಳುನಾಡಿನ ಮಲಯಾಳಿ ಬುಡಕಟ್ಟು ಜನಾಂಗದವರ ಜೇನುತುಪ್ಪದ ವಿಶಿಷ್ಟ ರೂಪಾಂತರವಾದ ದೈತ್ಯ ರಾಕ್ ಬೀ ಹನಿಯು ಟ್ರೈಬ್ಸ್ ಇಂಡಿಯಾ ಕಲೆಕ್ಷನ್‌ಗೆ (ಭಾರತೀಯ ಬುಡಕಟ್ಟು ಸಂಗ್ರಹ) ಸೇರಿಸಲ್ಪಟ್ಟಿದೆ.
- “ನಮ್ಮ ಮನೆಯಿಂದ ನಿಮ್ಮ ಮನೆಗೆ’ ಅಭಿಯಾನದ 8 ನೇ ಆವೃತ್ತಿಯಲ್ಲಿ 35 ಕ್ಕೂ ಹೆಚ್ಚು ಹೊಸ, ಆಕರ್ಷಕ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬುಡಕಟ್ಟು ಉತ್ಪನ್ನಗಳು ಟ್ರೈಬ್ಸ್ ಇಂಡಿಯಾ ಮಳಿಗೆಗಳಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಹೊಸ ಸ್ಥಾನವನ್ನು ಕಂಡುಕೊಂಡಿವೆ..
- ಮಲಯಾಳಿ ಬುಡಕಟ್ಟು ಉತ್ತರ ತಮಿಳುನಾಡಿನ ಪೂರ್ವ ಘಟ್ಟದಲ್ಲಿನ ಒಂದು ಬುಡಕಟ್ಟು ಗುಂಪಾಗಿದೆ.
- ಸುಮಾರು 3,58,000 ಜನಸಂಖ್ಯೆಯೊಂದಿಗೆ, ಅದು ಆ ಪ್ರದೇಶದ ಅತಿದೊಡ್ಡ ಬುಡಕಟ್ಟು ಪಂಗಡವಾಗಿದೆ.
ಡಿಜಿಟಲ್ ಸಾಗರ :
- ಸಾಗರದತ್ತಾಂಶ ನಿರ್ವಹಣೆಗಾಗಿ ಸ್ಥಾಪಿಸಲಾದ ಪ್ರಥಮ ಡಿಜಿಟಲ್ ಪ್ಲಾಟ್‌ಫಾರ್ಮ್ ಆದ ಇದನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ.
- ಭಾರತದ ವಿದೇಶಾಂಗ ಇಲಾಖೆ ಅಧೀನದ ಭಾರತದ ರಾಷ್ಟ್ರೀಯ ಸಾಗರ ಮಾಹಿತಿ ಕೇಂದ್ರವು (Indian National Centre for Oceanic Information ) (INCOIS) ಇದನ್ನು ಅಭಿವೃದ್ಧಿಪಡಿಸಿದೆ
- ಜಿಯೋಸ್ಪೇಷಿಯಲ್ ತಂತ್ರಜ್ಞಾನದಲ್ಲಿ ತ್ವರಿತ ಪ್ರಗತಿಯನ್ನು ಅಳವಡಿಸಿಕೊಳ್ಳುವ ಮೂಲಕ ವೈವಿಧ್ಯಮಯ ಸಾಗರಶಾಸ್ತ್ರದ ದತ್ತಾಂಶವನ್ನು ಸಂಘಟಿಸಲು ಮತ್ತು ಪ್ರಸ್ತುತಪಡಿಸಲು ಅಭಿವೃದ್ಧಿಪಡಿಸಿದ ಅನ್ವಯಗಳ ಒಂದು ಗುಂಪನ್ನು ಇದು ಒಳಗೊಂಡಿದೆ.
- ಇದು ದತ್ತಾಂಶ ದೃಶ್ಯೀಕರಣ, ಸಾಗರಶಾಸ್ತ್ರದ ಗುಣಲಕ್ಷಣಗಳನ್ನು ನಿರ್ಣಯಿಸಲು ದತ್ತಾಂಶ ವಿಶ್ಲೇಷಣೆ, ದತ್ತಾಂಶ ಸಮ್ಮಿಳನ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತದೆ.
ಲೇಹ್‌ನಲ್ಲಿನ ಹವಾಮಾನ (Met) ಕೇಂದ್ರ.
- ಇದನ್ನುಇತ್ತೀಚೆಗೆ ಉದ್ಘಾಟಿಸಲಾಯಿತು.
- 3500 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಲೇಹ್‌ನಲ್ಲಿನ ಹವಾಮಾನ ಕೇಂದ್ರವು ಭಾರತದ ಅತ್ಯುನ್ನತ ಹವಾಮಾನ ಕೇಂದ್ರವಾಗಿದೆ.
- ಇದು ಪ್ರಮುಖ ಪ್ರವಾಸಿ ಸ್ಥಳಗಳಾದ ನುಬ್ರಾ, ಚಾಂಗ್ ಥಾಂಗ್, ಪಾಂಗೊಂಗ್ ಸರೋವರ, ಝಸ್ಕರ್ ಶ್ರೇಣಿ, ಕಾರ್ಗಿಲ್, ಡ್ರಾಸ್, ಧಾ-ಬೈಮಾ (ಆರ್ಯನ್ ಕಣಿವೆ), ಖಲ್ಸಿ ಮುಂತಾದವುಗಳಿಗೆ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ.