Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 29 ಡಿಸೆಂಬರ್ 2020

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಪಾರಂಪರಿಕ ಯೋಜನೆಯೊಂದನ್ನು ಅಳವಡಿಸಿಕೊಳ್ಳಿ ಅಥವಾ ದತ್ತು ಸ್ವೀಕರಿಸಿ:

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1.ಭಾಷಾನ್ ಚಾರ್ ದ್ವೀಪಕ್ಕೆ ರೊಹಿಂಗ್ಯಾ ನಿರಾಶ್ರಿತರ ಸ್ಥಳಾಂತರ ಆರಂಭಿಸಿದ ಬಾಂಗ್ಲಾದೇಶ:

2.ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ CPEC :

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (NCMC)

2. ದೇಶಾದ್ಯಂತ 8 ಕಡಲತೀರಗಳಲ್ಲಿ ಅಂತರರಾಷ್ಟ್ರೀಯ ನೀಲಿ ಧ್ವಜವನ್ನು (International Blue Flag) ಹಾರಿಸಲಾಯಿತು:

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. 100ನೇ ಕಿಸಾನ್ ರೈಲು ಸೇವೆ :

2. ಭಾರತದ ಮೊಟ್ಟಮೊದಲ ಚಾಲಕರಹಿತ ರೈಲು:

3. ಪಾರೆಯ ಸಮಾಧಾನ್:

4. ನನ್ನ ಸ್ಟ್ಯಾಂಪ್ ’ಯೋಜನೆ:

5. ಮದರಸಾಗಳನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲು ಅಸ್ಸಾಂ ಮಸೂದೆಯನ್ನು ಮಂಡಿಸಿದೆ.

6. ಪೆದಲಾಂಡರಿಕಿ ಇಲ್ಲು : Pedalandariki Illu:

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ಪಾರಂಪರಿಕ ಯೋಜನೆಯೊಂದನ್ನು ಅಳವಡಿಸಿಕೊಳ್ಳಿ ಅಥವಾ ದತ್ತು ಸ್ವೀಕರಿಸಿ:


ಸಂದರ್ಭ:

ಇಲ್ಲಿಯವರೆಗೆ, ಯೋಜನೆಯಡಿಯಲ್ಲಿ, 12 ಸ್ಮಾರಕ ಮಿತ್ರರಿಗೆ  ರತದಾದ್ಯಂತ ಇಪ್ಪತ್ತೈದು (25) ತಾಣಗಳು ಮತ್ತು ಎರಡು (2) ತಾಂತ್ರಿಕ ಮಧ್ಯಸ್ಥಿಕೆಗಳಿಗೆ  27 ಜ್ಞಾಪಕ ಪತ್ರಗಳನ್ನು (memorandum of understanding) ನೀಡಲಾಗಿದೆ.

ಪಾರಂಪರಿಕ ಯೋಜನೆಯೊಂದನ್ನು ಅಳವಡಿಸಿಕೊಳ್ಳಿ ಅಥವಾ ದತ್ತು ಸ್ವೀಕರಿಸಿ:

ಈ ಯೋಜನೆಯನ್ನು ವಿಶ್ವ ಪ್ರವಾಸೋದ್ಯಮ ದಿನವಾದ ಸೆಪ್ಟೆಂಬರ್ 27, 2017 ರಂದು ಪ್ರಾರಂಭಿಸಲಾಯಿತು.

 1. ಈ ಯೋಜನೆಯು ಪ್ರವಾಸೋದ್ಯಮ ಸಚಿವಾಲಯದ ಪ್ರಮುಖ ಉಪಕ್ರಮವಾಗಿದ್ದು, ಸಂಸ್ಕೃತಿ ಸಚಿವಾಲಯ ಮತ್ತು ಭಾರತದ ಪುರಾತತ್ವ ಸಮೀಕ್ಷೆ ಮಂಡಳಿ ಯೊಂದಿಗಿನ (ASI) ನಿಕಟ ಸಹಯೋಗದೊಂದಿಗೆ,ಪಾರಂಪರಿಕ ತಾಣಗಳು / ಸ್ಮಾರಕಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನು ಮತ್ತು ಅವುಗಳ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಯೋಜಿತವಾಗಿ ಮತ್ತು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿಗಾಗಿ ಪಾರಂಪರಿಕ ತಾಣಗಳು / ಸ್ಮಾರಕಗಳು ಮತ್ತು ಇತರ ಪ್ರವಾಸಿ ತಾಣಗಳನ್ನು ಖಾಸಗಿ ವಲಯದ ಕಂಪನಿಗಳು, ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ವಹಿಸಲು ಯೋಜಿಸಲಾಗಿದ್ದು, ಆ ಮೂಲಕ ಯೋಜನೆಯ ಎಲ್ಲಾ ಪಾಲುದಾರರಲ್ಲಿ ಸಹಕಾರ ಭಾವನೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಸ್ಮಾರಕ ಮಿತ್ರರು ಎಂದರೆ ಯಾರು?

ಮೇಲ್ವಿಚಾರಣೆ ಮತ್ತು ದೂರದೃಷ್ಟಿ ಸಮಿತಿಯಿಂದ ಪಾರಂಪರಿಕ ತಾಣಗಳು / ಸ್ಮಾರಕಗಳನ್ನು ಅಳವಡಿಸಿಕೊಳ್ಳಲು ಅಥವಾ ದತ್ತು ಪಡೆಯಲು ಆಯ್ಕೆಯಾದ ಯಶಸ್ವಿ ಬಿಡ್ಡುದಾರರನ್ನು ಸ್ಮಾರಕ ಮಿತ್ರರು ಎಂದು ಕರೆಯಲಾಗುತ್ತದೆ ಹಾಗೂ ಪ್ರವಾಸಿ ತಾಣಗಳಲ್ಲಿನ ಮೂಲ ಮತ್ತು ಸುಧಾರಿತ ಸೌಲಭ್ಯಗಳನ್ನು ಸ್ಮಾರಕ ಮಿತ್ರರಿಂದ ಒದಗಿಸಲಾಗುವುದು.

ಸ್ಮಾರಕ ಮಿತ್ರರು’ ತಮ್ಮ  ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಚಟುವಟಿಕೆಗಳೊಂದಿಗೆ ಹೆಮ್ಮೆಯನ್ನು ಸಂಯೋಜಿಸುತ್ತ ಕಾರ್ಯಾಚರಣೆ ಮತ್ತು ಮೂಲಸೌಕರ್ಯಗಳ ನಿರ್ವಹಣೆಯನ್ನು ಸಹ ನೋಡಿಕೊಳ್ಳುತ್ತಿದ್ದರು.

ಈ ಯೋಜನೆಯ ಮಹತ್ವ:

ಹೆರಿಟೇಜ್ ಯೋಜನೆಯನ್ನು ಅಳವಡಿಸಿಕೊ ಉಪಕ್ರಮವು, ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ಭಾರತೀಯ ಪುರಾತತ್ವ ಸಮೀಕ್ಷೆ ಮತ್ತು ಇತರ ಸರ್ಕಾರಿ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸುವುದಾಗಿದೆ.

 1. ತಾಣಗಳಲ್ಲಿ “ಪ್ರವಾಸಿ-ಸ್ನೇಹಿ” ಮತ್ತು “ವಿಶ್ವ ದರ್ಜೆಯ ಸೌಕರ್ಯಗಳನ್ನು ನಿರ್ಮಿಸಲು, ಕಾರ್ಯಾಚರಿಸಲು ಮತ್ತು ನಿರ್ವಹಿಸಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡುವ ಮೂಲಕ, ಈ ಯೋಜನೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಬೆಳೆಸುತ್ತದೆ ಎಂಬ ನಿರೀಕ್ಷಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಭಾರತ ಮತ್ತು  ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಭಾಷಾನ್ ಚಾರ್ ದ್ವೀಪಕ್ಕೆ ರೊಹಿಂಗ್ಯಾ ನಿರಾಶ್ರಿತರ ಸ್ಥಳಾಂತರ ಆರಂಭಿಸಿದ ಬಾಂಗ್ಲಾದೇಶ:


ಸಂದರ್ಭ:

ಮಾನವ ಹಕ್ಕುಗಳ ಕಾರ್ಯಕರ್ತರ ವಿರೋಧದ ನಡುವೆಯೂ ಬಾಂಗ್ಲಾದೇಶವು ರೋಹಿಂಗ್ಯಾ ನಿರಾಶ್ರಿತರನ್ನು ಬಂಗಾಳಕೊಲ್ಲಿಯಲ್ಲಿರುವ ವಿವಾದಾತ್ಮಕ ಪ್ರವಾಹ ಪೀಡಿತ ಭಾಷಾನ್ ಚಾರ್ ದ್ವೀಪಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದೆ.

ಕಾಳಜಿಯ ವಿಷಯವೇನು?

ಈ ದ್ವೀಪವು ಬಂಗಾಳಕೊಲ್ಲಿಯಲ್ಲಿ ಕೇವಲ 20 ವರ್ಷಗಳ ಹಿಂದೆ ಹೂಳು ತುಂಬುವಿಕೆಯಿಂದಾಗಿ ರೂಪುಗೊಂಡಿದೆ ಮತ್ತು ಈ ದ್ವೀಪವು ಕಠಿಣ ಹವಾಮಾನ ಬದಲಾವಣೆ ಪರಿಸ್ಥಿತಿಗಳಿಗೆ ತುತ್ತಾಗುವ ಹಾಗೂ ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಇದು ಬಾಂಗ್ಲಾದೇಶದ ಮುಖ್ಯ ಭೂಮಿಯಿಂದ ದೂರವಿರುವುದು, ಈ ವಿಚಾರವನ್ನು  ಬಾಂಗ್ಲಾದೇಶವು  2015 ರಲ್ಲಿ ಮೊದಲ ಬಾರಿಗೆ  ಪ್ರಸ್ತಾಪಿಸಿದಾಗಿನಿಂದಲೂ ತುಂಬ ಕಾಳಜಿಯ ವಿಷಯವಾಗಿದೆ.

ರೋಹಿಂಗ್ಯಾಗಳು ಯಾರು?

 1. ಅವರು, ಹೆಚ್ಚಾಗಿ ಮುಸ್ಲಿಮರೇ ಇರುವ ಒಂದು ಜನಾಂಗೀಯ ಗುಂಪಾಗಿದ್ದು, ಅವರಿಗೆ ಮ್ಯಾನ್ಮಾರ್‌ ನ್ ಪೂರ್ಣ ಪೌರತ್ವ ನೀಡಲಾಗಿಲ್ಲ.
 2. ನಿವಾಸಿ ವಿದೇಶಿಯರು ಅಥವಾ ಸಹ ನಾಗರಿಕರು ಎಂದು ವರ್ಗೀಕರಿಸಲಾಗಿದೆ.
 3. ಅವರು ಚೀನಾ-ಟಿಬೆಟಿಯನ್ ದೇಶದವರಿಗಿಂತ ಭಾರತ ಮತ್ತು ಬಾಂಗ್ಲಾದೇಶದ ಇಂಡೋ-ಆರ್ಯನ್ ಜನಾಂಗದವರಿಗೆ ಹೆಚ್ಚು ಹತ್ತಿರವಾಗಿದ್ದಾರೆ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾದ ಆಂಟೋನಿಯೊ ಗುಟೆರೆಸ್ ರವರು ರೊಹಿಂಗ್ಯಾಗಳನ್ನೂ  “ವಿಶ್ವದಲ್ಲಿ ಅತ್ಯಂತ ತಾರತಮ್ಯಕ್ಕೊಳಗಾದ ಜನಾಂಗಎಂದು ಬಣ್ಣಿಸಿದ್ದಾರೆ.  

ಅವರು ಈಗ ಎಲ್ಲಿದ್ದಾರೆ?

 1. ಸುಮಾರು 860,000 ರೋಹಿಂಗ್ಯಾಗಳು ದಕ್ಷಿಣ ಬಾಂಗ್ಲಾದೇಶದ ವಿಶ್ವದ ಅತಿದೊಡ್ಡ ಮತ್ತು ಹೆಚ್ಚು ಜನನಿಬಿಡ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
 2. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಸರ್ಕಾರಗಳು ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ವಾಪಸ್ ಕಳುಹಿಸುವ ಕುರಿತ ಮಾತುಕತೆಯನ್ನು ಮುಂದುವರೆಸಿವೆ.
 3. ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ಭಾರತದಲ್ಲಿ ಸುಮಾರು 40,000 ರೋಹಿಂಗ್ಯಾಗಳು ವಾಸಿಸುತ್ತಿದ್ದಾರೆ.

bhasan

 

 ವಿಷಯಗಳು: ಭಾರತ ಮತ್ತು  ನೆರೆಹೊರೆ ದೇಶಗಳೊಂದಿಗೆ ಅದರ ಸಂಬಂಧಗಳು.

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ CPEC :


ಸಂದರ್ಭ:

ಚೀನಾ ಈ ಕಾರಿಡಾರ್ ನ ಪ್ರಗತಿಯನ್ನು ಸಮರ್ಥಿಸುತ್ತದೆ ಮತ್ತು CPEC ಗಾಗಿ ಸಾಲವನ್ನು ಮಂಜೂರು ಮಾಡುವ ಮೊದಲು ಇಸ್ಲಾಮಾಬಾದ್‌ನಿಂದ ಹೆಚ್ಚುವರಿ ಖಾತರಿಗಳನ್ನು ಪಡೆಯುವ ವರದಿಗಳನ್ನು ತಿರಸ್ಕರಿಸುತ್ತದೆ.

CPEC ಕುರಿತು :

CPECಯು ಬಹು-ಶತಕೋಟಿ-ಡಾಲರ್ ಮೊತ್ತದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ನ ಪ್ರಮುಖ ಯೋಜನೆಯಾಗಿದೆ, ಚೀನಾ ಅನುದಾನಿತ ಮೂಲಸೌಕರ್ಯ ಯೋಜನೆಗಳ ಮೂಲಕ ವಿಶ್ವದಾದ್ಯಂತ ಬೀಜಿಂಗ್‌ನ ಪ್ರಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

 1. 3,000 ಕಿ.ಮೀ ಉದ್ದದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಹೆದ್ದಾರಿಗಳು, ರೈಲ್ವೆಜಾಲಗಳು ಮತ್ತು ಪೈಪ್‌ಲೈನ್‌ಗಳನ್ನು ಒಳಗೊಂಡಿದೆ.
 2. ಈ ಯೋಜನೆಯು ಅಂತಿಮವಾಗಿ ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಗ್ವಾದರ್ ನಗರವನ್ನು ಚೀನಾದ ವಾಯುವ್ಯ ಪ್ರಾಂತ್ಯವಾದ ಕ್ಸಿನ್‌ಜಿಯಾಂಗ್‌ಗೆ ಹೆದ್ದಾರಿಗಳು ಮತ್ತು ರೈಲ್ವೆಗಳ ವಿಶಾಲ ಜಾಲದ ಮೂಲಕ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
 3. ಪ್ರಸ್ತಾವಿತ ಯೋಜನೆಗೆ ಹಣಕಾಸಿನ ನೆರವನ್ನು ಚೀನೀ ಬ್ಯಾಂಕುಗಳು ಭಾರಿ ಸಬ್ಸಿಡಿ ರೂಪದ ಸಾಲದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ವಿತರಿಸುತ್ತಿವೆ.

ಆದರೆ, ಇದು ಭಾರತಕ್ಕೆ ಏಕೆ ಕಳವಳಕಾರಿ ವಿಷಯವಾಗಿದೆ?

ಇದು PoK ಮೂಲಕ ಹಾದು ಹೋಗುತ್ತದೆ.

 1. ಹಿಂದೂ ಮಹಾಸಾಗರದಲ್ಲಿ ಹೆಚ್ಚಿನ ಉಪಸ್ಥಿತಿಯೊಂದಿಗೆ ಗ್ವಾದರ್ ಮೂಲಕ ತನ್ನ ಸರಬರಾಜು ಮಾರ್ಗಗಳನ್ನು ಸುರಕ್ಷಿತ ಮತ್ತು ಕಡಿಮೆ ಅಂತರದನ್ನಾಗಿ ಮಾಡಿಕೊಳ್ಳಲು ಚೀನಾ CPEC ಯೋಜನೆಯನ್ನು ಅವಲಂಬಿಸಿದೆ. ಆದ್ದರಿಂದ, CPEC ಯಶಸ್ಸಿನ ನಂತರ, ವ್ಯಾಪಕವಾದ ಚೀನೀ ಉಪಸ್ಥಿತಿಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
 2. CPEC ಯು ಪಾಕಿಸ್ತಾನದ ಆರ್ಥಿಕತೆಯನ್ನು ಯಶಸ್ವಿಯಾಗಿ ಪರಿವರ್ತಿಸಿದರೆ ಅದು ಭಾರತಕ್ಕೆ (red rag) ಪ್ರಕೋಪದಾಯಕವಾಗಬಹುದು, ಮತ್ತು ಭಾರತವು ಶ್ರೀಮಂತ ಮತ್ತು ಪ್ರಬಲವಾದ ಪಾಕಿಸ್ತನದ ಮುಂದೆ ಕೈ ಚಾಚುವ ಸ್ಥಿತಿಯಲ್ಲಿ ಉಳಿಯಬಹುದು ಎಂದು ವಾದಿಸಲಾಗುತ್ತಿದೆ.
 3. ಇದಲ್ಲದೆ,ಭಾರತವು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಮತ್ತು ಎರಡರೊಂದಿಗೂ ಸಂಘರ್ಷದ ಇತಿಹಾಸವನ್ನು ಹೊಂದಿದೆ. ಪರಿಣಾಮವಾಗಿ, ಯೋಜನೆಯನ್ನು ಪ್ರಾಯೋಗಿಕವಾಗಿ ಮರು-ಸಂಪರ್ಕಿಸಲು ಸಲಹೆಗಳನ್ನು ನೀಡಲಾಗಿದ್ದರೂ, ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ಸಮೀಕರಣಗಳನ್ನು ಮುಂದುವರೆಸಬೇಕಾಗಿರುವುದರಿಂದ ವಿವಾದದ ತತ್ವಗಳನ್ನು ಯಾವುದೇ ವಕೀಲರು ರದ್ದುಗೊಳಿಸಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಮೂಲಸೌಕರ್ಯ.

ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ :


ಸಂದರ್ಭ:

ಕಳೆದ ವರ್ಷ ಅಹಮದಾಬಾದ್‌ನಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ ಅನ್ನು (National Common Mobility Card) ದೆಹಲಿ ಮೆಟ್ರೊದ ವಿಮಾನ ನಿಲ್ದಾಣ ಎಕ್ಸ್ ಪ್ರೆಸ್ ಮಾರ್ಗಕ್ಕೆ ವಿಸ್ತರಿಸಲಾಯಿತು.

ಪ್ರಮುಖ ಲಕ್ಷಣಗಳು:

 1. ಒನ್ ನೇಷನ್ ಒನ್ ಕಾರ್ಡ್’ ಎಂದು ಕರೆಯಲ್ಪಡುವ ಇಂಟರ್-ಆಪರೇಬಲ್ ಟ್ರಾನ್ಸ್ ಪೋರ್ಟ್ ಕಾರ್ಡ್ , (ಅಂತರ-ಕಾರ್ಯಾಚರಣೆಯ ಸಾರಿಗೆ ಕಾರ್ಡ್ ) ಇದನ್ನು ಹೊಂದಿರುವವರು ತಮ್ಮ ಬಸ್ ಪ್ರಯಾಣ, ಟೋಲ್ ತೆರಿಗೆ, ಪಾರ್ಕಿಂಗ್ ಶುಲ್ಕ, ಚಿಲ್ಲರೆ ಶಾಪಿಂಗ್ ಮತ್ತು ಹಣವನ್ನು ಹಿಂಪಡೆಯಲು ಸಹ ಅವಕಾಶ ನೀಡುತ್ತದೆ.
 2. ಭಾರತೀಯ ರಿಸರ್ವ್ ಬ್ಯಾಂಕ್ ನೇಮಿಸಿದ ನಂದನ್ ನಿಲೇಖಣಿ ಸಮಿತಿಯು ಈ ಕಲ್ಪನೆಯನ್ನು ಮಂಡಿಸಿತು.

ಇದು ಹೇಗೆ ಕೆಲಸ ಮಾಡುತ್ತದೆ?

NCMC, ಇದೊಂದು ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆಯಾಗಿದ್ದು, ಇದು ಸ್ಮಾರ್ಟ್ ಫೋನ್ ಗಳನ್ನು ಇಂಟರ್-ಆಪರೇಬಲ್ ಟ್ರಾನ್ಸ್ ಪೋರ್ಟ್ ಕಾರ್ಡ್ ಗಳಾಗಿ ಪರಿವರ್ತಿಸುತ್ತದೆ, ಕೊನೆಗೆ  ಪ್ರಯಾಣಿಕರು ಮೆಟ್ರೋ, ಬಸ್ ಮತ್ತು ಉಪನಗರ ರೈಲ್ವೆ ಸೇವೆಗಳಿಗೆ ಪಾವತಿಸಲು ಬಳಸ ಬಲ್ಲವರಾಗಿದ್ದಾರೆ.

 1. ರೂಪೇ ಕಾರ್ಡನ್ನೂ ಸಹ ಕಾಮನ್ ಮೊಬಿಲಿಟಿ ಕಾರ್ಡ್ ಆಗಿ ಬಳಸಬಹುದು.
 2. ಕಾರ್ಡ್‌ನಲ್ಲಿ ಸಂಗ್ರಹವಾಗಿರುವ ಮೌಲ್ಯವು ಎಲ್ಲಾ ಮಧ್ಯಸ್ಥಗಾರರನ್ನು ಒಳಗೊಂಡ ಕನಿಷ್ಠ ಹಣಕಾಸಿನ ಅಪಾಯದೊಂದಿಗೆ ಎಲ್ಲಾ ಪ್ರಯಾಣದ ಅವಶ್ಯಕತೆಗಳಿಗಾಗಿ ಆಫ್‌ಲೈನ್ ವಹಿವಾಟುಗಳನ್ನು ಬೆಂಬಲಿಸುತ್ತದೆ.
 3. ಚಿಲ್ಲರೆ ವ್ಯಾಪಾರ ಮತ್ತು ಖರೀದಿಗಳ ಹೊರತಾಗಿ ದೇಶಾದ್ಯಂತ ವಿವಿಧ ಮಹಾನಗರಗಳು ಮತ್ತು ಇತರ ಸಾರಿಗೆ ವ್ಯವಸ್ಥೆಗಳ ಮೂಲಕ ತಡೆರಹಿತ ಪ್ರಯಾಣವನ್ನು ಸಕ್ರಿಯಗೊಳಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (NCMC) ಯನ್ನು ಮುನ್ನೆಲೆಗೆ ತಂದಿತು.

NCMC ಯ ಅವಶ್ಯಕತೆ ಮತ್ತು ಮಹತ್ವ:

ಭಾರತದಾದ್ಯಂತ ಸಾರ್ವಜನಿಕ ಸಾರಿಗೆಯನ್ನು ಸಮಾಜದ ಎಲ್ಲಾ ವರ್ಗದವರ ಆರ್ಥಿಕ ಮತ್ತು ಅನುಕೂಲಕರ ಪ್ರಯಾಣದ ವಿಧಾನವಾಗಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಎಲ್ಲ ಪ್ರಕಾರದ ಸಾರ್ವಜನಿಕ ಸಾರಿಗೆಯಲ್ಲಿ ಹಣದ ನಗದು ರೂಪವು ಶುಲ್ಕ ಪಾವತಿಗಳ ಹೆಚ್ಚು ಆದ್ಯತೆಯ ವಿಧಾನವಾಗಿ ಮುಂದುವರೆದಿದೆ.

 1. ಆದಾಗ್ಯೂ, ನಗದು ಪಾವತಿಗೆ ಸಂಬಂಧಿಸಿದಂತೆ ನಗದು ಪಾವತಿ, ನಗದು ನಿರ್ವಹಣೆ, ಆದಾಯ ಸೋರಿಕೆ, ನಗದು ಸಮನ್ವಯ ದಂತಹ ಅನೇಕ ಸವಾಲುಗಳಿವೆ.
 2. ಸಾರಿಗೆ ನಿರ್ವಾಹಕರು, ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆ (AFC) ಯನ್ನು ಬಳಸಿ ಶುಲ್ಕ ಸಂಗ್ರಹವನ್ನು ಸ್ವಯಂಚಾಲಿತಗೊಳಿಸಲು ಮತ್ತು ಡಿಜಿಟಲೀಕರಣಗೊಳಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದಾರೆ.
 3. ಈ ಸಾರಿಗೆ ನಿರ್ವಾಹಕರು ಪರಿಚಯಿಸಿದ ಮುಚ್ಚಿದ ಲೂಪ್ ಕಾರ್ಡ್‌ಗಳು (closed loop cards) ಶುಲ್ಕ ಸಂಗ್ರಹವನ್ನು ಗಮನಾರ್ಹ ಪ್ರಮಾಣದಲ್ಲಿ ಡಿಜಿಟಲೀಕರಣಗೊಳಿಸಲು ಸಹಾಯ ಮಾಡಿತು. ಆದಾಗ್ಯೂ, ಈ ಪಾವತಿ ಸಾಧನಗಳ ನಿರ್ಬಂಧಿತ ಬಳಕೆಯು ಗ್ರಾಹಕರ ಡಿಜಿಟಲ್ ಪಾವತಿ ಅವಕಾಶಗಳನ್ನು ಮಿತಿಗೊಳಿಸುತ್ತದೆ.

 

ವಿಷಯಗಳು: ಸಂರಕ್ಷಣೆ ಮತ್ತು ಮಾಲಿನ್ಯ ಸಂಬಂಧಿತ ವಿಷಯಗಳು.

ದೇಶಾದ್ಯಂತ 8 ಕಡಲತೀರಗಳಲ್ಲಿ ಅಂತರರಾಷ್ಟ್ರೀಯ ನೀಲಿ ಧ್ವಜವನ್ನು (International Blue Flag) ಹಾರಿಸಲಾಯಿತು:


ಸಂದರ್ಭ:

ಅಂತರರಾಷ್ಟ್ರೀಯ ನೀಲಿ ಧ್ವಜಗಳನ್ನು ಹಾರಿಸಿದ ಕಡಲತೀರಗಳೆಂದರೆ: ಕಪ್ಪಾಡ್ (ಕೇರಳ), ಶಿವರಾಜ್‌ಪುರ (ಗುಜರಾತ್), ಘೋಘ್ಲಾ (ಡಿಯು), ಕಾಸರ್ ಕೋಡ್ ಮತ್ತು ಪಡುಬಿದ್ರಿ (ಕರ್ನಾಟಕ), ಋಷಿಕೊಂಡ (ಆಂಧ್ರಪ್ರದೇಶ), ಗೋಲ್ಡನ್ (ಒಡಿಶಾ) ಮತ್ತು ರಾಧನಗರ (ಅಂಡಮಾನ್ ಮತ್ತು ನಿಕೋಬಾರ್).

2020 ರ ಅಕ್ಟೋಬರ್ 6 ರಂದು ಭಾರತವು ಈ 8 ಕಡಲತೀರಗಳಿಗೆ ಅಂತರರಾಷ್ಟ್ರೀಯ ನೀಲಿ ಧ್ವಜ ಪ್ರಮಾಣೀಕರಣವನ್ನು ಪಡೆದುಕೊಂಡಿತು, ಸದಸ್ಯ ಸಂಘಟನೆಗಳಾದ UNEP, UNWTO, UNESCO, IUCN, ILS, FEE ಇತ್ಯಾದಿಗಳನ್ನು ಒಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರ ತಂಡವು ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ (Copenhagen) ಪ್ರಶಸ್ತಿಯನ್ನು ಘೋಷಿಸಿತು.

ನೀಲಿ ಧ್ವಜ ಕಾರ್ಯಕ್ರಮದ ಬಗ್ಗೆ:

ಬೀಚ್ ಗಳು ಮತ್ತು ಸಮುದ್ರತೀರಗಳಿಗಾಗಿನ ನೀಲಿ ಧ್ವಜ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ, ಸರ್ಕಾರೇತರ, ಲಾಭರಹಿತ ಸಂಸ್ಥೆ FEE (ಪರಿಸರ ಶಿಕ್ಷಣದ ಪ್ರತಿಷ್ಠಾನ/ the Foundation for Environmental Education) ನಡೆಸುತ್ತಿದೆ.

 • ಇದು 1985 ರಲ್ಲಿ ಫ್ರಾನ್ಸ್‌ನಲ್ಲಿ ಪ್ರಾರಂಭವಾಯಿತು ಮತ್ತು 1987 ರಿಂದ ಯುರೋಪಿನಲ್ಲಿ ಮತ್ತು ಯುರೋಪಿನ ಹೊರಗಿನ ಪ್ರದೇಶಗಳಲ್ಲಿ, 2001ರಲ್ಲಿ ದಕ್ಷಿಣ ಆಫ್ರಿಕಾ ಸೇರಿದಂದಿನಿಂದ ಜಾರಿಗೆ ಬಂದಿದೆ.

ನೀಲಿ ಧ್ವಜ ಕಡಲತೀರ ಎಂದರೇನು?

ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಸುರಕ್ಷತೆ ಮುಂತಾದ ಅಂಶಗಳನ್ನು ಒಳಗೊಂಡಿರುವ ಕಡಲ ತೀರವಾಗಿದೆ.

ಇದು  ಒಂದು ‘ಪರಿಸರ-ಪ್ರವಾಸೋದ್ಯಮ ಮಾದರಿ’ ಯಾಗಿದೆ ಮತ್ತು ಪ್ರವಾಸಿಗರಿಗೆ ಮತ್ತು ಕಡಲತೀರದ ವಿಹಾರಿಗಳಿಗೆ ಸ್ವಚ್ಛ ಮತ್ತು ಆರೋಗ್ಯಕರ ಸ್ನಾನದ ನೀರನ್ನು ಒದಗಿಸುವ ಮತ್ತು ಸೌಲಭ್ಯಗಳು / ಸೌಕರ್ಯಗಳು, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ಮತ್ತು ಪ್ರದೇಶದ ಸುಸ್ಥಿರ ಅಭಿವೃದ್ಧಿಯನ್ನು ಒದಗಿಸುವ ಕಡಲತೀರಗಳೆಂದು ಗುರುತಿಸಲಾಗುತ್ತದೆ.

ಮಾನದಂಡ:

ನೀಲಿ ಧ್ವಜ ಪ್ರಮಾಣೀಕರಣಕ್ಕೆ ಅರ್ಹತೆ ಪಡೆಯಲು ಸುಮಾರು 33 ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ, ಉದಾಹರಣೆಗೆ ನೀರು ಕೆಲವು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದು, ತ್ಯಾಜ್ಯ ವಿಲೇವಾರಿ ಸೌಲಭ್ಯಗಳನ್ನು ಹೊಂದಿರುವುದು, ಅಂಗವಿಕಲ ಸ್ನೇಹಿಯಾಗಿರುವುದು, ಪ್ರಥಮ ಚಿಕಿತ್ಸಾ ಸಾಧನಗಳನ್ನು ಹೊಂದಿರುವುದು ಮತ್ತು ಕಡಲತೀರದ ಮುಖ್ಯ ಪ್ರದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನೀಡದಿರುವುದು. ಕೆಲವು ಮಾನದಂಡಗಳು ಸ್ವಯಂಪ್ರೇರಿತ ವಾಗಿದ್ದರೆ ಇನ್ನು ಕೆಲವು ಕಡ್ಡಾಯವಾಗಿವೆ.

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಉಪಯುಕ್ತ ಅಂಶಗಳು :

 • ಇಂತಹ 560 ಕ್ಕೂ ಹೆಚ್ಚು ಕಡಲತೀರಗಳನ್ನು ಹೊಂದಿರುವ ಸ್ಪೇನ್ ಮೊದಲ ಸ್ಥಾನದಲ್ಲಿದ್ದರೆ; ಗ್ರೀಸ್ ಮತ್ತು ಫ್ರಾನ್ಸ್ ನಂತರದ ಸ್ಥಾನಗಳಲ್ಲಿವೆ.
 • ಭಾರತವು ಈಗ 50 “ಬ್ಲೂ ಫ್ಲಾಗ್” ದೇಶಗಳ ಗುಂಪಿನಲ್ಲಿದೆ.

ನೀಲಿ ಧ್ವಜ ಪ್ರಮಾಣೀಕರಣವು ಕಡಲತೀರಗಳಿಗೆ ಮಾತ್ರ ಲಭ್ಯವಿದೆಯೇ?

ಹಾಗೇನೂ ಇಲ್ಲ. ಇದನ್ನು ಬೀಚ್, ಮರೀನಾ (ಸಣ್ಣ ಬೋಟುಗಳ ವಿರಾಮಕ್ಕಾಗಿ ಬಳಸುವ ಸಣ್ಣ ಬಂದರು) ಅಥವಾ ಸುಸ್ಥಿರ ಬೋಟಿಂಗ್ ಪ್ರವಾಸೋದ್ಯಮ ಆಯೋಜಕರಿಗೆ ನೀಡಲಾಗುವುದು.

ಮೂಲಭೂತವಾಗಿ, ನೀಲಿ ಧ್ವಜ ಎನ್ನುವುದು ಒಂದು ಟ್ರೇಡ್‌ಮಾರ್ಕ್ ಆಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


100ನೇ ಕಿಸಾನ್ ರೈಲು ಸೇವೆ :

 1. ಸೋಮವಾರ ಮಹಾರಾಷ್ಟ್ರದ ಸಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರ್‌ವರೆಗೆ 100 ನೇ ‘ಕಿಸಾನ್ ರೈಲಿಗೆ ಚಾಲನೆ ನೀಡಿಲಾಗಿದ್ದು ಈ ಕಿಸಾನ್ ರೈಲು ಸೇವೆಯು ರೈತರ ಸಬಲೀಕರಣ ಮತ್ತು ಅವರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ.
 2. ರೈಲು’ ಸೇವೆಯ ಉಪಕ್ರಮವು ಶೇಕಡಾ 80 ಕ್ಕಿಂತಲೂ ಹೆಚ್ಚು ಇರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಮ್ಮ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ಪೂರೈಸಲು ಸಹಾಯ ಮಾಡುತ್ತದೆ.
 3. 4 ತಿಂಗಳಲ್ಲಿ 100 ಕಿಸಾನ್ ರೈಲುಗಳನ್ನು ಪ್ರಾರಂಭಿಸಲಾಗಿದೆ.

ಭಾರತದ ಮೊಟ್ಟಮೊದಲ ಚಾಲಕರಹಿತ ರೈಲು:

 1. ದೆಹಲಿ ಮೆಟ್ರೊ ರೈಲಿನ ಮೆಜೆಂಟಾ ಮಾರ್ಗದಲ್ಲಿ (ಜನಕಪುರಿ– ಪಶ್ಚಿಮ ಬಟಾನಿಕಲ್ ಗಾರ್ಡನ್) ದೇಶದ ಮೊಟ್ಟ ಮೊದಲ ಚಾಲಕ ರಹಿತ, ಮೆಟ್ರೊ ರೈಲಿಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದರು.
 2. ಈ ರೈಲುಗಳನ್ನು ಕಾರ್ಯಾಚರಣೆ ನಿಯಂತ್ರಣ ಕೇಂದ್ರ (OCC) ಎಂದು ಕರೆಯಲ್ಪಡುವ ಡಿಎಂಆರ್‌ಸಿಯ ಕಮಾಂಡ್ ರೂಮ್‌ಗಳಿಂದ ಈ ರೈಲುಗಳನ್ನು ಹೆಚ್ಚಾಗಿ ನಿಯಂತ್ರಿಸಲಾಗುತ್ತದೆ, ಈ ಕಮಾಂಡ್ ರೂಮ್ ಗಳಿಂದ ಎಂಜಿನಿಯರ್‌ಗಳ ತಂಡಗಳು DMRC ನೆಟ್‌ವರ್ಕ್‌ನಾದ್ಯಂತ ನೈಜ ಸಮಯದ ರೈಲು ಚಲನೆಯನ್ನು ಪತ್ತೆಹಚ್ಚುತ್ತವೆ ಮತ್ತು ಮೇಲ್ವಿಚಾರಣೆ ಮಾಡುತ್ತವೆ.

ಪಾರೆಯ ಸಮಾಧಾನ್:

 1. ಇದು ಪಶ್ಚಿಮ ಬಂಗಾಳವು ಇತ್ತೀಚೆಗೆ ಪ್ರಾರಂಭಿಸಿದ ಹೊಸ ಕುಂದುಕೊರತೆ ನಿವಾರಣಾ ಕಾರ್ಯವಿಧಾನವಾಗಿದೆ.
 2. ಪಾರೆಯ ಸಮಾಧಾನ್ ಎಂದರೆ ನೆರೆಹೊರೆಯಲ್ಲಿ ಪರಿಹಾರ ಕಂಡುಕೊಳ್ಳುವುದಾಗಿದೆ.
 3. ಪ್ರಮುಖ ಮೂಲಸೌಕರ್ಯದ ಅಂತರವನ್ನು ಪರಿಹರಿಸುವುದಾಗಿರದೆ  ಪುರಸಭೆ, ಸ್ಥಳೀಯ ಅಥವಾ ಸೇವಾ ಅಂತರವನ್ನು ನಿರ್ಧಿಷ್ಟ ಕಾರ್ಯವಿಧಾನದ ಮೂಲಕ ನೆರೆಹೊರೆಯನ್ನು ತಲುಪಿ ಪರಿಹರಿಸುವುದಾಗಿದೆ.
 4. ಇದು ‘Duare Sarkar’ ಗೆ ಪೂರಕವಾಗಲಿದೆ.

ಡುಯೆರ್ ಸರ್ಕಾರ್, ಇದೊಂದು ಗ್ರಾಮ ಪಂಚಾಯಿತಿ ಮತ್ತು ಪುರಸಭೆಯ ವಾರ್ಡ್ ಮಟ್ಟದಲ್ಲಿ ಆಯೋಜಿಸಲಾದ  ಶಿಬಿರಗಳ ಮೂಲಕ ರಾಜ್ಯ ಸರ್ಕಾರದ ನಿರ್ದಿಷ್ಟ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು 60 ದಿನಗಳವರೆಗೆ ನಡೆದ ರಾಜ್ಯ ಸರ್ಕಾರದ ಒಂದು ಉಪಕ್ರಮವಾಗಿದೆ.

ನನ್ನ ಸ್ಟ್ಯಾಂಪ್ ಯೋಜನೆ:

‘ನನ್ನ ಅಂಚೆ ಚೀಟಿ’ ಎನ್ನುವುದು ಇಂಡಿಯಾ ಪೋಸ್ಟ್ ನ ಅಂಚೆ ಚೀಟಿಗಳ ವೈಯಕ್ತಿಕ ಹಾಳೆಗಳ ಬ್ರಾಂಡ್ ಹೆಸರು ಆಗಿದೆ.

 1. ಅಂಚೆ ಚೀಟಿಗಳ ವೈಯಕ್ತಿಕ ಹಾಳೆಗಳಿಗಾಗಿ ಭಾರತೀಯ ಪೋಸ್ಟ್ ನಡೆಸುವ ಒಂದು ಉಪಕ್ರಮವಾಗಿದೆ.
 2. ಯಾವುದೇ ವ್ಯಕ್ತಿಯು ತಮ್ಮ ಭಾವಚಿತ್ರ ಅಥವಾ ಅವರ ಸಂಬಂಧಿಕರು ಅಥವಾ ಸ್ನೇಹಿತರ ಅಥವಾ ಲೋಗೋ, ಚಿಹ್ನೆಗಳು, ಪಾರಂಪರಿಕ ಸ್ಥಳಗಳು ಅಥವಾ ವನ್ಯಜೀವಿಗಳು ಸೇರಿದಂತೆ ಯಾವುದೇ ಚಿತ್ರಗಳ ಸಾಫ್ಟ್ ಅಥವಾ ಹಾರ್ಡ್ ಪ್ರತಿಗಳನ್ನು ಅಂಚೆಚೀಟಿಗಳಲ್ಲಿ ಮುದ್ರಿಸಲು ಮತ್ತು ಪ್ರಕಟಿಸಲು ಸಲ್ಲಿಸಬಹುದು.
 3. ಪ್ರತಿ ಸ್ಟಾಂಪ್ ಶೀಟ್‌ ಮುದ್ರಸಲು ಅರ್ಜಿದಾರರಿಗೆ ರೂ. 300 ವೆಚ್ಚವಾಗುತ್ತದೆ.

ಸುದ್ದಿಯಲ್ಲಿ ಏಕಿದೆ?

ಅನೇಕ ಸಾಮಾಜಘಾತುಕ ಅಂಶಗಳಿರುವ ಛಾಯಾಚಿತ್ರಗಳನ್ನು ಹೊಂದಿರುವ ಅಂಚೆಚೀಟಿಗಳನ್ನು ‘ಮೈ ಸ್ಟ್ಯಾಂಪ್’ ಯೋಜನೆಯಡಿ ನೀಡಲಾಗಿತ್ತು. ಆದರೆ ಇದೊಂದು ಅಲಕ್ಷ್ಯತನದಿಂದಾದ ಪ್ರಮಾದ ಎಂದು ಹೇಳಿದ ಅಂಚೆ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸಿದೆ.

ಮದರಸಾಗಳನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಲು ಅಸ್ಸಾಂ ಮಸೂದೆಯನ್ನು ಮಂಡಿಸಿದೆ.

 1. ಮುಂದಿನ ಹಣಕಾಸು ವರ್ಷದಿಂದ ರಾಜ್ಯದ ಧನ ಸಹಾಯದಿಂದ ನಡೆಸಲ್ಪಡುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಲು ಈ ಮಸೂದೆಯು ಪ್ರಯತ್ನಿಸುತ್ತದೆ.
 2. ಮಸೂದೆಯು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸ್ಥಾನ – ಮಾನ ಮತ್ತು ವೇತನ, ಭತ್ಯೆಗಳು ಮತ್ತು ಸೇವಾ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನು ತರದೆ ಮದರಸಾಗಳನ್ನು ಹಿರಿಯ ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳಾಗಿ ಪರಿವರ್ತಿಸಲು ಪ್ರಸ್ತಾಪಿಸಿದೆ.

ಪೆದಲಾಂಡರಿಕಿ ಇಲ್ಲು : Pedalandariki Illu:

ಆಂಧ್ರಪ್ರದೇಶ ಸರ್ಕಾರವು ‘ಪೆದಲಾಂಡರಿಕಿ ಇಲ್ಲು’ (ಎಲ್ಲ ಬಡವರಿಗೆ ವಸತಿ) ಎಂಬ ಯೋಜನೆಯಡಿ ವಸತಿ-ತಾಣಗಳ ವಿತರಣಾ ಕಾರ್ಯವನ್ನು ಪ್ರಾರಂಭಿಸಿದೆ.

ಈ ಯೋಜನೆಯು ರಾಜ್ಯದ ಅಂದಾಜು 30.6 ಲಕ್ಷ ಜನರಿಗೆ ಕಡಿಮೆ-ವೆಚ್ಚದ ವಸತಿ ಒದಗಿಸುವ ನಿರೀಕ್ಷೆಯಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos