Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 28 ಡಿಸೆಂಬರ್ 2020

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ   1 :

1. 1761 ಪಾಣಿಪತ್ ಕದನ.

 

ಸಾಮಾನ್ಯ ಅಧ್ಯಯನ ಪತ್ರಿಕೆ  2:

1. ಹವಾಮಾನ ಇಲಾಖೆಯು ಶೀತ ಗಾಳಿ ಬೀಸುವ ಸಮಯದಲ್ಲಿ ಮದ್ಯಪಾನ ಮಾಡದಂತೆ ಉತ್ತರ ಭಾರತೀಯರನ್ನು ಏಕೆ ಕೇಳಿಕೊಳ್ಳುತ್ತಿದೆ.

2. ನ್ಯುಮೋಕೊಕಲ್ ಪಾಲಿಸ್ಯಾಕರೈಡ್ ಕಂಜುಗೇಟ್ ಲಸಿಕೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ  3:

1. ನಿಯಂತ್ರಿತ ಕೃಷಿಯನ್ನು ಹಿಂತೆಗೆದುಕೊಂಡ ತೆಲಂಗಾಣ.

2. ಮಾಸಿಕ ರೂ.50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳು ಕನಿಷ್ಠ 1% GST ಹೊಣೆಗಾರಿಕೆಯನ್ನು ನಗದು ರೂಪದಲ್ಲಿ ಪಾವತಿಸುವುದು.

3. ಪೂರ್ವದ ಸರಕು ಸಾಗಣೆಯ ಮೀಸಲು ಕಾರಿಡಾರ್.

4. ಇನ್ನರ್ ಲೈನ್ ಪರ್ಮಿಟ್ / ಪರವಾನಗಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕಣಿವೆಯಲ್ಲಿ ಬ್ರಾಂಡ್ ಬಜ್ ವರ್ಡ್ಸ್ ಗಳಾಗಿ ಪರಿವರ್ತಿತವಾದ LAC ಹಾಟ್‌ಸ್ಪಾಟ್‌ಗಳು

2. ಪೋರ್ಚುಲಾಕಾ ಲಾಲ್ಜಿ.

3. ಸಾಹಿ ಫಾಸಲ್ ಅಭಿಯಾನ.

4. ಮೊನ್ಪಾ ಕರ ಕುಶಲ ಕಾಗದ

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಆಧುನಿಕ ಭಾರತೀಯ ಇತಿಹಾಸ – ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

1761 ರ ಪಾಣಿಪತ್ ಕದನ.


ಯು.ಎಸ್. ಮೂಲದ ಸ್ವತಂತ್ರ, ಕಲಾ ಇತಿಹಾಸದ ಸಂಶೋಧಕ ಮನೋಜ್ ಡ್ಯಾನಿ,ಯವರು  ಯುದ್ಧ ಮತ್ತು ಅದರ ಪ್ರಮುಖ ಯೋಧರಿಗೆ ಸಂಬಂಧಿಸಿದ ಅಪರೂಪದ ವರ್ಣಚಿತ್ರಗಳನ್ನು “ಬ್ಯಾಟಲ್ ಆಫ್ ಪಾಣಿಪತ್: ಇನ್ ಲೈಟ್ ಆಫ್ ರಿಡಿಸ್ಕವರ್ಡ್ ಪೇಂಟಿಂಗ್ಸ್” ಎಂಬ ಕೃತಿಯಲ್ಲಿ ಸಮೀಕರಿಸಿದ್ದಾರೆ.

 • ಪುಸ್ತಕವು ಬಿಬ್ಲಿಯೊಥೆಕ್ ನ್ಯಾಷನಲ್ ಡಿ ಫ್ರಾನ್ಸ್ (BnF), ಎಂಬ ಬ್ರಿಟಿಷ್ ಲೈಬ್ರರಿ, ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಯು.ಕೆ.ನ ಬೊನ್ಹ್ಯಾಮ್ಸ್ ಮತ್ತು ಪುಣೆ ಮೂಲದ ಭಾರತ್ ಇತಿಹಾಸ್ ಸಂಶೋಧಕ್ ಮಂಡಲ್ (BIMS) ಗಳಲ್ಲಿನ ಅಪರೂಪದ ವರ್ಣಚಿತ್ರಗಳನ್ನು ಒಳಗೊಂಡಿದೆ.

ಪುಸ್ತಕವು ಯುದ್ಧದ ಬಗ್ಗೆ ಏನು ಹೇಳುತ್ತದೆ?

ಪಾಣಿಪತ್ ಘಟನೆಯ ಕುರಿತು ಅಸಂಖ್ಯಾತ ಕಟ್ಟುಕತೆಗಳಿದ್ದು, ನಾವು ಈ ನಿರ್ಣಾಯಕ ಪ್ರಸಂಗದ  ಕುರಿತು ಹೊಂದಿರುವ ತಿಳುವಳಿಕೆಯು ಪ್ರಮುಖ ಸ್ಥಾಪಿತ ನಿರೂಪಣೆಗೆ ದೂರವಾದದ್ದು, ಮತ್ತು ನಮಗೆ ತಿಳಿದಿರುವುದು ಬೆರಳೆಣಿಕೆಯಷ್ಟು ಮಾತ್ರ ಅಥವಾ ಸಂಶಯಾಸ್ಪದ ನಿಖರತೆಯ ಆಯ್ದ ಮೂಲಗಳದ್ದಾಗಿದೆ.

 1. ಈ ವರ್ಣಚಿತ್ರಗಳಲ್ಲಿ ಪ್ರಮುಖ ಯೋಧರಾದ ಅಹ್ಮದ್ ಷಾ ಅಬ್ದಾಲಿ, ಸದಾಶಿವರಾವ್ ಬಾಹು, ನಜೀಬ್ ಖಾನ್ ರೋಹಿಲ್ಲಾ, ದತ್ತಾಜಿ ಶಿಂಧೆ, ವಿಶ್ವಾಸ್ ರಾವ್, ಸೂರಜ್ ಮಾಲ್ ಜಾಟ್ ಮತ್ತು ಇತರ ಮರಾಠ, ಅಫಘಾನ್, ರೋಹಿಲ್ಲಾ ಮತ್ತು ಜಾಟ್ ಮುಖ್ಯಸ್ಥರನ್ನು ಚಿತ್ರಿಸಲಾಗಿದೆ.
 2. ಪುಸ್ತಕವು ಕುಶಲತೆಯಿಂದ ನೈಜ ದಾಖಲೆ ಮೂಲಗಳಿಂದ ವಿಶ್ಲೇಷಣೆಯನ್ನು ಹೆಣೆದಿದ್ದು, 18 ನೇ ಶತಮಾನದ ಭಾರತೀಯ ರಾಜಕಾರಣದ ಬದಲಾಗುತ್ತಿರುವ ಮೈತ್ರಿಗಳ ಮೇಲೆ ಬಹಿರಂಗವಾದ ಬೆಳಕನ್ನು ಚೆಲ್ಲುತ್ತದೆ.

ಹಿನ್ನೆಲೆ:

ಪಾಣಿಪತ್ ಬಯಲಿನಲ್ಲಿ  ಇನ್ನೂ ಎರಡು ಪ್ರಮುಖ ಯುದ್ಧಗಳು ನಡೆದಿವೆ:

 1. 1526 ರಲ್ಲಿ ಲೋಧಿ ವಂಶದ ಆಡಳಿತವನ್ನು ಕೊನೆಗೊಳಿಸುವ ಮೂಲಕ ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಅಡಿಪಾಯವನ್ನು ,ಅದರ ಮೊದಲ ಆಡಳಿತಗಾರ ಬಾಬರ್ ಹಾಕಿದನು.
 2. 1556 ರಲ್ಲಿ ಎರಡನೇ ಪಾಣಿಪತ್ ಯುದ್ಧದಲ್ಲಿ  ರಾಜ ಹೇಮು ‘ವಿಕ್ರಮಾದಿತ್ಯ’ ನಿಂದ ಎದುರಾದ ಬೆದರಿಕೆಯನ್ನು ಕೊನೆಗೊಳಿಸುವ ಮೂಲಕ ಅಕ್ಬರ್, ಭಾರತದಲ್ಲಿ ಮೊಘಲ್ ಆಡಳಿತವನ್ನು ಭದ್ರಪಡಿಸಿದನು.

1761 ರಲ್ಲಿ ನಡೆದ ಮೂರನೇ ಪಾಣಿಪತ್ ಕದನದ ಬಗ್ಗೆ:

 1. 1761 ರಲ್ಲಿ ಈ ಕದನವು ಮರಾಠಾ ಪಡೆಗಳು ಮತ್ತು ದುರಾನಿ ಸಾಮ್ರಾಜ್ಯದ ಅಫಘಾನ್ ಜನರಲ್ ಅಹ್ಮದ್ ಷಾ ಅಬ್ದಾಲಿ ಅವರ ಸೈನ್ಯಗಳ ನಡುವೆ ನಡೆಯಿತು.
 2. ಅಬ್ದಾಲಿಯನ್ನು ಇಬ್ಬರು ಭಾರತೀಯ ಮಿತ್ರರಾದ ದೋಅಬ್ ಪ್ರದೇಶದ ಆಫ್ಘನ್ನನಾದ ರೋಹಿಲ್ಲಾಸ್ ನಜೀಬ್-ಉದ್-ದೌಲಾ, ಮತ್ತು ಅವಧ್ ನ ನವಾಬನಾದ ಶುಜಾ-ಉದ್-ದೌಲಾ  ಬೆಂಬಲಿಸಿದರು.

ಇದೆಲ್ಲ ಹೇಗೆ ಪ್ರಾರಂಭವಾಯಿತು?

 1. ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣದ ನಂತರ, ಮರಾಠರ ಬೆಳವಣಿಗೆಯಲ್ಲಿ ಹಠಾತ್ ಪ್ರಗತಿ ಕಂಡುಬಂದಿತು. ಮರಾಠರು ಡೆಕ್ಕನ್ ಪ್ರದೇಶದಲ್ಲಿ ಔರಂಗಜೇಬನು ಸಂಪಾದಿಸಿದ್ದ ಎಲ್ಲ ಪ್ರದೇಶಗಳನ್ನು ಮರುವಶಪಡಿಸಿಕೊಂಡಿದ್ದಲ್ಲದೆ, ಭಾರತದ ಗಣನೀಯ ಭಾಗದ ಮೇಲೆ ಪ್ರಭುತ್ವ ಸಾಧಿಸಿದರು.
 2. 1739 ರಲ್ಲಿ ತಖ್ತ್-ಇ-ಟೌಸ್ (ಮಯೂರ ಸಿಂಹಾಸನ) ಮತ್ತು ಕೊಹಿನೂರ್ ವಜ್ರ ವನ್ನೂ ಸಹ ತೆಗೆದುಕೊಂಡು ಹೋದ ನಾದಿರ್ ಷಾ ನ  ಭಾರತದ ಮೇಲಿನ ಆಕ್ರಮಣವು ಈ ಕುಸಿತವನ್ನು ತ್ವರಿತಗೊಳಿಸಿತು.
 3. ತನ್ನ ಮಗನನ್ನು ಲಾಹೋರ್‌ನಿಂದ ಹೊರಹಾಕಿದಾಗ, ಅಬ್ದಾಲಿ ಮರಾಠರ ಮೇಲೆ ದಾಳಿ ಮಾಡಲು ಯೋಜಿಸಿದ.
 4. 1759 ರ ಅಂತ್ಯದ ವೇಳೆಗೆ, ಅಬ್ದಾಲಿ ತನ್ನ ಅಫಘಾನ್ ಬುಡಕಟ್ಟು ಜನಾಂಗದವರೊಂದಿಗೆ ಲಾಹೋರ್ ಮತ್ತು ದೆಹಲಿಯನ್ನು ತಲುಪಿ ಸಣ್ಣ ಶತ್ರು ಪಡೆಗಳನ್ನು ಸೋಲಿಸಿದನು.
 5. ಎರಡು ಸೈನ್ಯಗಳು ಕರ್ನಾಲ್ ಮತ್ತು ಕುಂಜ್ಪುರದಲ್ಲಿ ಹೋರಾಡಿದವು, ಅಲ್ಲಿ ಇಡೀ ಅಫ್ಘಾನ್ ಸೈನ್ಯಪಡೆಯು ಕೊಲ್ಲಲ್ಪಟ್ಟಿತು ಅಥವಾ ಗುಲಾಮರನ್ನಾಗಿಸಲಾಯಿತು.
 6. ಕುಂಜಪುರ ಸೈನ್ಯದ ಹತ್ಯಾಕಾಂಡವು ದುರಾನಿಯನ್ನು ಎಷ್ಟರ ಮಟ್ಟಿಗೆ ಕೆರಳಿಸಿತು ಎಂದರೆ ಮರಾಠರ ಮೇಲೆ ದಾಳಿ ಮಾಡಲು ಯಾವುದೇ ಬೆಲೆ ತೆತ್ತಾದರೂ ನದಿಯನ್ನು ದಾಟಲು ಆದೇಶಿಸಿದನು.
 7. ಸಣ್ಣ ಕದನಗಳು ತಿಂಗಳುಗಳವರೆಗೆ ಮುಂದುವರೆದವು ಮತ್ತು ಅಂತಿಮ ಯುದ್ಧಕ್ಕೆ ಎರಡೂ ಪಡೆಗಳು ಸಿದ್ಧಗೊಂಡವು ಆದರೆ ಮರಾಠರಿಗೆ ಆಹಾರದ ಅಭಾವ ಎದುರಾಯಿತು.

ಫಲಿತಾಂಶ:

 1. ಯುದ್ಧದಲ್ಲಿ ಮರಾಠರು ಪರಾಭವಗೊಂಡರು, ಮತ್ತು ಅವರ 40,000 ಸೈನಿಕರು ಕೊಲ್ಲಲ್ಪಟ್ಟರು, ಆದರೆ ಅಬ್ದಾಲಿಯ ಸೈನ್ಯವು ಸುಮಾರು 20,000 ದಷ್ಟು ಸೈನಿಕರ ಸಾವುನೋವುಗಳನ್ನು ಅನುಭವಿಸಿತು ಎಂದು ಅಂದಾಜಿಸಲಾಗಿದೆ.
 2. ಈ ಯುದ್ಧದ ನಂತರ ಉತ್ತರ ಭಾರತದಲ್ಲಿ ತಮ್ಮ ಪ್ರಮುಖ ಸ್ಥಾನವನ್ನು ಕಳೆದುಕೊಂಡ ಮರಾಠರಿಗೆ ಇದು ಅವರ ಘನತೆಯ ನಷ್ಟವನ್ನು ಸೂಚಿಸಿತಲ್ಲದೆ  ಬ್ರಿಟಿಷ್ ವಸಾಹತುಶಾಹಿ ಶಕ್ತಿ ಇಲ್ಲಿ ವಿಸ್ತರಿಸಲು ದಾರಿ ಮಾಡಿಕೊಟ್ಟಿತು.
 3. ಮರಾಠರು, ಈ ಯುದ್ಧದಲ್ಲಿ ಸದಾಶಿವರಾವ್ ಮತ್ತು ಪೇಶ್ವಾ ಮನೆತನದ ಉತ್ತರಾಧಿಕಾರಿ ವಿಶ್ವಾಸರಾವ್, ಇಬ್ರಾಹಿಂ ಖಾನ್ ಗಾರ್ಡಿ, ಜಂಕೋಜಿರಾವ್ ಸಿಂಧಿಯಾ, ಮತ್ತು ಯಶ್ವಂತ್ ರಾವ್ ಪುವಾರ್ ರಂತಹ ಪ್ರಮುಖ ಜನರಲ್‌ಗಳನ್ನು ಮತ್ತು ಆಡಳಿತಗಾರರನ್ನು ಕಳೆದುಕೊಂಡರು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಹವಾಮಾನ ಇಲಾಖೆಯು ಶೀತ ಗಾಳಿ ಬೀಸುವ ಸಮಯದಲ್ಲಿ ಮದ್ಯಪಾನ ಮಾಡದಂತೆ ಉತ್ತರ ಭಾರತೀಯರನ್ನು  ಏಕೆ ಕೇಳಿಕೊಳ್ಳುತ್ತಿದೆ.

ಹವಾಮಾನ ಇಲಾಖೆಯು ಶೀತ ಗಾಳಿ ಬೀಸುವ ಸಮಯದಲ್ಲಿ ಮದ್ಯಪಾನ ಮಾಡದಂತೆ ಉತ್ತರ ಭಾರತೀಯರನ್ನು ಏಕೆ ಕೇಳಿಕೊಳ್ಳುತ್ತಿದೆ.


ಸಂದರ್ಭ:

ಶೀತ ಗಾಳಿಯ ಪ್ರತಿಕೂಲ ಪ್ರತಿಕ್ರಿಯೆಯನ್ನು ತಪ್ಪಿಸಲು, IMD ಯು ಶಿಫಾರಸುಗಳ ಪಟ್ಟಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಒಂದು ಆಲ್ಕೊಹಾಲ್ ಅನ್ನು ವರ್ಜಿಸುವುದು ಸೇರಿದೆ.

ಹಿನ್ನೆಲೆ:

ಐಎಂಡಿ (IMD) ಪ್ರಕಾರ, ಡಿಸೆಂಬರ್ 29 ರಿಂದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ತೀವ್ರ ಶೀತ ಗಾಳಿಯ  ಪರಿಸ್ಥಿತಿ ಕಂಡುಬರುತ್ತದೆ  ಹಾಗೂ  ಡಿಸೆಂಬರ್ 28 ರ ನಂತರ ಗರಿಷ್ಠ ತಾಪಮಾನವು 3 ರಿಂದ 5 ಡಿಗ್ರಿ ಸೆಲ್ಸಿಯಸ್ ಗೆ ಕುಸಿಯುವ ಮುನ್ಸೂಚನೆ ಇದೆ.

ಶೀತ ವಾತಾವರಣದಲ್ಲಿ ಆಲ್ಕೋಹಾಲ್ ಏಕೆ ಅಪಾಯಕಾರಿ?

ಆಲ್ಕೊಹಾಲ್ ದೇಹದ ಮೂಲ  ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಶೀತ ಗಾಳಿಯ  ಸಮಯದಲ್ಲಿ ಲಘೂಷ್ಣತೆಯ(hypothermia) ಅಪಾಯವನ್ನು ಹೆಚ್ಚಿಸುತ್ತದೆ. 2004 ರಲ್ಲಿ ನಡೆದ ಒಂದು ಅಧ್ಯಯನವು ಆಲ್ಕೊಹಾಲ್ ಸೇವನೆಯು ಶೇಕಡಾ 68 ರಷ್ಟು ಆಕಸ್ಮಿಕ ಲಘೂಷ್ಣತೆ ಪ್ರಕರಣಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

 1. ಆಲ್ಕೋಹಾಲ್ ಒಂದು ವಾಸೋಡಿಲೇಟರ್ ಆಗಿದೆ, (a vasodilator) ಆಗಿದೆ, ಇದರರ್ಥ ಇದು ರಕ್ತನಾಳಗಳು ವಿಶ್ರಾಂತಿ ಪಡೆಯಲು ಮತ್ತು ಹಿಗ್ಗಲು ಅಥವಾ ತೆರೆಯಲು ಕಾರಣವಾಗುತ್ತದೆ.
 2. ಆದ್ದರಿಂದ ಆಲ್ಕೊಹಾಲ್ ಸೇವಿಸಿದ ನಂತರ, ಚರ್ಮದ ಮೇಲ್ಮೈಗೆ ರಕ್ತದ ಪೂರೈಕೆ ಪ್ರಮಾಣವು ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ನೀವು ಬೆಚ್ಚಗಿರುವಂತೆ ಭಾಸವಾಗುತ್ತದೆ.
 3. ಇದು ಮಾದಕ ವ್ಯಸನಿಯು ಚಡಪಡಿಸುವಂತೆ ಕಾಣಲು ಕಾರಣವಾಗಿದೆ.
 4. ದೇಹವು ತಾನು ಬೆಚ್ಚಗಿರುವೆ ಎಂದು ನಂಬಲು ಪ್ರಾರಂಭಿಸಿದಾಗ, ನೀವು ಸಹ ಬೆವರಲು ಪ್ರಾರಂಭಿಸುತ್ತೀರಿ – ಇದು ಒಟ್ಟಾರೆ ದೇಹದ ಉಷ್ಣತೆಯನ್ನು ಸ್ವಯಂಚಾಲಿತವಾಗಿ ಕಡಿಮೆ ಮಾಡುತ್ತದೆ.
 5. ಸಾಕಷ್ಟು ಪ್ರಮಾಣದಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಫ್ರಾಸ್ಟ್ ಬೈಟ್ (frostbite and hypothermia) ಮತ್ತು ಲಘು ಉಷ್ಣತೆಯಿಂದ ನಿಮ್ಮನ್ನು ರಕ್ಷಿಸುವ ಮತ್ತು ಶೀತವನ್ನು ಸರಿಯಾಗಿ ಕಂಡುಹಿಡಿಯುವ ನಿಮ್ಮ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

ಆದಾಗ್ಯೂ, ಸಮಶೀತೋಷ್ಣ ಪರಿಸರದಲ್ಲಿ ಮಧ್ಯಮ ಪ್ರಮಾಣದಲ್ಲಿ ಕುಡಿಯುವುದು ದೇಹದ ಮೂಲ ತಾಪಮಾನದ ಮೇಲೆ ಯಾವುದೇ ಗಮನಾರ್ಹವಾದ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಲಘು ಉಷ್ಣತೆ( hypothermia) ಎಂದರೇನು?

 1. ಲಘೂಷ್ಣತೆ ಕಠಿಣವಾದ ವೈದ್ಯಕೀಯ ಸ್ಥಿತಿಯಾಗಿದ್ದು, ದೇಹವು ಶಾಖವನ್ನು ಉತ್ಪಾದಿಸುವ ಮೊದಲು ಶಾಖವನ್ನು ಕಳೆದುಕೊಳ್ಳುವ ಸ್ಥಿತಿಯಾಗಿದೆ, ಇದರ ಪರಿಣಾಮವಾಗಿ ದೇಹದ ಉಷ್ಣತೆಯು ಅಪಾಯಕಾರಿಯಾಗಿ ಕಡಿಮೆಯಾಗುತ್ತದೆ.
 2. ಸಾಮಾನ್ಯ ದೇಹದ ಉಷ್ಣತೆಯು ಸುಮಾರು 37 ಡಿಗ್ರಿ ಸೆಲ್ಸಿಯಸ್‌ನಲ್ಲಿದ್ದರೆ, ಲಘೂಷ್ಣತೆಯಿಂದ ಬಳಲುತ್ತಿರುವ ವ್ಯಕ್ತಿಯ ದೇಹದ ಉಷ್ಣತೆಯು 35 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗುತ್ತದೆ.
 3. ನಡುಗುವಿಕೆ, ನಿಧಾನಗತಿಯ ಉಸಿರಾಟ, ಮಂದವಾದ ಮಾತು, ತಂಪು ಚರ್ಮ ಮತ್ತು ಆಯಾಸ ಇದರ ಸಾಮಾನ್ಯ ಲಕ್ಷಣಗಳಾಗಿವೆ.
 4. ಆಲ್ಕೊಹಾಲ್, ಶೀತ ಎಷ್ಟಿದೆ ಎಂದು ಸರಿಯಾಗಿ ಗ್ರಹಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮಾನಸಿಕ ಮತ್ತು ನಡವಳಿಕೆಯ ಪರಿಣಾಮಗಳನ್ನು ಸಹ ಹೊಂದಿದೆ.

ಶೀತ ಗಾಳಿ ಎಂದರೇನು?

 1. ಕನಿಷ್ಠ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಇಳಿದಾಗ ಮತ್ತು ಸಾಮಾನ್ಯ ತಾಪಮಾನದಿಂದ ನಿರ್ಗಮನವು 5 ಡಿಗ್ರಿ ಸೆಲ್ಸಿಯಸ್ ಅಥವಾ ಕಡಿಮೆಯಾದಾಗ  ಶೀತ ಗಾಳಿಯು ಸಂಭವಿಸುತ್ತದೆ.
 2. ತೀವ್ರ ಶೀತ ಗಾಳಿಯ ಪರಿಸ್ಥಿತಿಗಳಲ್ಲಿ, ಸಾಮಾನ್ಯ ತಾಪಮಾನದಿಂದ ನಿರ್ಗಮನವು 6.5 ಡಿಗ್ರಿ ಅಥವಾ ಕಡಿಮೆ ಯಾಗಿರುತ್ತದೆ.

 

ವಿಷಯಗಳು: ಆರೋಗ್ಯ ಸಂಬಂಧಿ ಸಮಸ್ಯೆಗಳು.

ನ್ಯುಮೋಕೊಕಲ್ ಪಾಲಿಸ್ಯಾಕರೈಡ್ ಕಂಜುಗೇಟ್ ಲಸಿಕೆ. 


ಸಂದರ್ಭ:

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ರವರು ಅಭಿವೃದ್ಧಿಪಡಿಸಿದ ನ್ಯುಮೋನಿಯಾ ವಿರುದ್ಧದ ಮೊದಲ ಸ್ಥಳೀಯ ಲಸಿಕೆಯ  ಬಳಕೆಯನ್ನು ಪ್ರಾರಂಭಿಸಲಾಗುವುದು.

ಜುಲೈನಲ್ಲಿ, ಭಾರತದ  ಔಷಧ ನಿಯಂತ್ರಣ ಸಂಸ್ಥೆಯು ನ್ಯುಮೋಕೊಕಲ್ ಪಾಲಿಸ್ಯಾಕರೈಡ್ ಕಾಂಜುಗೇಟ್ ಲಸಿಕೆಯ ಬಳಕೆಗೆ ಮಾರುಕಟ್ಟೆ ಅನುಮೋದನೆಯನ್ನು ನೀಡಿತ್ತು.

ರೋಗ ಹೇಗೆ ಹರಡುತ್ತದೆ?

ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳನ್ನು ಒಳಗೊಂಡಿರಬಹುದಾದ ಸಾಂಕ್ರಾಮಿಕ ವಾಹಕಗಳ ಮೂಲಕ ಹರಡುತ್ತದೆ.

1.ಮಕ್ಕಳಲ್ಲಿ ಬ್ಯಾಕ್ಟೀರಿಯಾದ ನ್ಯುಮೋನಿಯಾಕ್ಕೆ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಸಾಮಾನ್ಯ ಕಾರಣವಾಗಿದೆ ಮತ್ತು ಹಿಮೋಫಿಲಸ್ ಇನ್ಫ್ಲುಯೆನ್ಸ ಟೈಪ್ ಬಿ (Haemophilus influenzae type ) (Hib)  ಬ್ಯಾಕ್ಟೀರಿಯಾದ ಮೂಲಕ ಹರಡುವ ನ್ಯುಮೋನಿಯಾದ ಎರಡನೆಯ ಸಾಮಾನ್ಯ ಕಾರಣವಾಗಿದೆ. ಉಸಿರಾಟದ ಸಿನ್ಸಿಟಿಯಲ್ ವೈರಾಣುವು (Respiratory syncytial virus) ನ್ಯುಮೋನಿಯಾದ ಸಾಮಾನ್ಯ ವೈರಲ್ ಕಾರಣವಾಗಿದೆ.

2.ಸೋಂಕಿತ ವ್ಯಕ್ತಿಯ ಶ್ವಾಸಕೋಶದಲ್ಲಿನ (alveoli) ಗಾಳಿಯ ಚೀಲಗಳು ದ್ರವ ಪದಾರ್ಥ ಮತ್ತು ಕೀವು ಶೇಖರಣೆಯಿಂದಾಗಿ ಉಬ್ಬಿಕೊಳ್ಳುತ್ತವೆ, ಇದರಿಂದ ಅವರಿಗೆ ಉಸಿರಾಡಲು ನೋವು ಮತ್ತು ಕಷ್ಟವಾಗುತ್ತದೆ.

ನ್ಯುಮೋಕೊಕಲ್ ಪಾಲಿಸ್ಯಾಕರೈಡ್ ಲಸಿಕೆ (PPSV 23) ಕುರಿತು:

ಇದು ನ್ಯುಮೋಕೊಕಲ್ ಸೋಂಕಿನಿಂದ ರಕ್ಷಿಸುತ್ತದೆ.

PPSV23 – ಇದು 23 ರೀತಿಯ ನ್ಯುಮೋಕೊಕಲ್ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಸಹಾಯಕವಾದ/ ಉಪಯುಕ್ತವಾದ ಪದ/ ನಿಯಮಗಳು:

ಸಂಯೋಗ: Conjugate:

ಲಸಿಕೆಯು ಒದಗಿಸುವ ರಕ್ಷಣೆಯನ್ನು ಸುಧಾರಿಸುವ ಸಲುವಾಗಿ ಪ್ರತಿಜನಕಕ್ಕೆ  ಪ್ರೋಟೀನ್ ಅನ್ನು ಸೇರುವ ಒಂದು ರೀತಿಯ ಲಸಿಕೆಯಾಗಿದೆ.

ಪಾಲಿಸ್ಯಾಕರೈಡ್:Polysaccharide: ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುವ ಸಲುವಾಗಿ ಕೆಲವು ರೀತಿಯ ಬ್ಯಾಕ್ಟೀರಿಯಾಗಳ ಮೇಲ್ಮೈಯನ್ನು ಹೋಲುವ ಸಕ್ಕರೆ ಅಣುಗಳ ಉದ್ದದ ಸರಪಳಿಗಳಿಂದ ಕೂಡಿದ ಒಂದು ರೀತಿಯ ಲಸಿಕೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ದೇಶದ ವಿವಿಧ ಭಾಗಗಳಲ್ಲಿನ  ಪ್ರಮುಖ ಬೆಳೆಗಳು  ಬೆಳೆ ಮಾದರಿಗಳು, ವಿವಿಧ ರೀತಿಯ ನೀರಾವರಿ ಮತ್ತು ನೀರಾವರಿ ವ್ಯವಸ್ಥೆಗಳ ಸಂಗ್ರಹಣೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆ ಮತ್ತು ಸಮಸ್ಯೆಗಳು ಮತ್ತು ಸಂಬಂಧಿತ ನಿರ್ಬಂಧಗಳು; ರೈತರಿಗೆ ಸಹಾಯಕವಾಗಿ

ನಿಯಂತ್ರಿತ ಕೃಷಿಯನ್ನು ಹಿಂತೆಗೆದುಕೊಂಡ ತೆಲಂಗಾಣ.


ಸಂದರ್ಭ:

ರೈತರು ಮೆಕ್ಕೆಜೋಳ ಬೆಳೆಯುವುದನ್ನು  ನಿರುತ್ಸಾಹಗೊಳಿಸಲು ಮತ್ತು ಮಾರುಕಟ್ಟೆಯಲ್ಲಿನ  ಬೇಡಿಕೆಯ ಕಾರಣಗಳಿಗಾಗಿ ಉತ್ತಮವಾದ ವೈವಿಧ್ಯಮಯ ಭತ್ತ, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳನ್ನು  ಬೆಳೆಯುವುದನ್ನು ಉತ್ತೇಜಿಸಲು ಕಳೆದ ಕೃಷಿ  ಋತುವಿನಲ್ಲಿ ಪರಿಚಯಿಸಲಾಗಿದ್ದ ನಿಯಂತ್ರಿತ ಕೃಷಿಯನ್ನು ತೆಲಂಗಾಣ ಸರ್ಕಾರ ಹಿಂತೆಗೆದುಕೊಂಡಿದೆ.

1.ಸರ್ಕಾರವು ಹಳ್ಳಿಗಳಲ್ಲಿನ ರೈತರಿಂದ ಉತ್ಪನ್ನಗಳನ್ನು ಸ್ವಯಂಕೃತವಾಗಿ ಖರೀದಿಸದಿರಲು ನಿರ್ಧರಿಸಿದ್ದು, ಈಗ, ರೈತರು  ತಮಗೆಲ್ಲಿ ಉತ್ತಮ ಬೆಲೆ  ದೊರೆಯುವುದೋ  ಅಲ್ಲಿ ತಮ್ಮ ಉತ್ಪನ್ನಗಳನ್ನು  ಮಾರಾಟಮಾಡಬಹುದಾಗಿದೆ.

ಈ ನಡೆಯ ಹಿಂದಿನ ತರ್ಕ:

ರೈತರ ಉತ್ಪನ್ನಗಳು  ಮಾರಾಟದ ಸರಕುಗಳಾಗಿರದ ಕಾರಣ,ಅವುಗಳನ್ನು  ಖರೀದಿಸಲು ಅಥವಾ ಮಾರಾಟ ಮಾಡಲು ಸರ್ಕಾರಕ್ಕೆ ಅಸಾಧ್ಯವಾಗಿದೆ.

ತೆಲಂಗಾಣದ ನಿಯಂತ್ರಿತ ಕೃಷಿ ನೀತಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು:

ಮಾರುಕಟ್ಟೆಯ ಬೇಡಿಕೆಗಳ ಆಧಾರದ ಮೇಲೆ ವೈಜ್ಞಾನಿಕ ಕೃಷಿಯ ಮೂಲಕ ಕೃಷಿಯನ್ನು ಹೆಚ್ಚು ಲಾಭದಾಯಕ ಉದ್ಯಮವನ್ನಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

 • ನೀತಿಯಡಿಯಲ್ಲಿ, ಯಾವ ಪ್ರದೇಶದಲ್ಲಿ ಯಾವ ಬೆಳೆಗಳನ್ನು ಯಾವ ಪ್ರಮಾಣದಲ್ಲಿ ಬೆಳೆಯಬೇಕು ಎಂಬುದರ ಕುರಿತು ಸರ್ಕಾರ ರೈತರಿಗೆ ಮಾರ್ಗದರ್ಶನ ನೀಡುತ್ತದೆ.
 • ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಅನುಸರಿಸುವ ರೈತರಿಗೆ ಮಾತ್ರ ಎಂಎಸ್ಪಿಯನ್ನು ನೀಡುವ ಮತ್ತು ರೈತು ಬಂಧು ಯೋಜನೆಯ ಪ್ರಯೋಜನಗಳನ್ನು ವಿಸ್ತರಿಸುವುದನ್ನು ರಾಜ್ಯ ಸರ್ಕಾರವು ಖಚಿತಪಡಿಸುತ್ತದೆ.

ಏನಿದು ರೈತು ಬಂಧು ಯೋಜನೆ?

ರೈತು ಬಂಧು ಯೋಜನೆ ಸಹ ರೈತರ ಹೂಡಿಕೆ ಬೆಂಬಲ ಯೋಜನೆಯ  (FISS) ಒಂದು ಕಲ್ಯಾಣ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ ಎರಡು ಬೆಳೆಗಳನ್ನು ತೆಗೆಯುವ ರೈತರ ಹೂಡಿಕೆಯನ್ನು ಬೆಂಬಲಿಸುವ ತೆಲಂಗಾಣ ಸರ್ಕಾರದ ಕಾರ್ಯಕ್ರಮವಾಗಿದೆ.

 • ಈ ಯೋಜನೆಯು ರಾಜ್ಯದ ರೈತರಿಗೆ ಅವರ ದಿನನಿತ್ಯದ ಕೆಲಸಗಳಿಗೆ ಪ್ರೋತ್ಸಾಹಿಸುವ ಉದ್ದೇಶವನ್ನು  ಹೊಂದಿದೆ.
 • ಈ ಯೋಜನೆಯಡಿ, ತೆಲಂಗಾಣ ರಾಜ್ಯದ ಸುಮಾರು 58.33 ಲಕ್ಷ ರೈತರಿಗೆ ಪ್ರತಿ ಎಕರೆಗೆ 4000 ರೂ.ಪ್ರತಿ ಋತುವಿಗೆ (ಬೆಳೆ-ಬಿತ್ತನೆ) – ವರ್ಷಕ್ಕೆ ಎರಡು ಬಾರಿ (ರಬಿ ಮತ್ತು ಖಾರಿಫ್) ಕೃಷಿ ಹೂಡಿಕೆಯನ್ನು ಬೆಂಬಲಿಸಲು (ಒಟ್ಟು 8,000 ರೂ.) ನೀಡಲಾಗುತ್ತದೆ.
 • ಯೋಜನೆಯ ಹಿಂದಿನ ಉದ್ದೇಶವು ಗ್ರಾಮೀಣ ಋಣಭಾರದ (rural indebtedness) ಕೆಟ್ಟ ಸಂಪ್ರದಾಯವನ್ನೂ ಮುರಿಯುವುದಾಗಿದೆ.

ರೈತು ಬಂಧು ಯೋಜನೆಯಡಿ ಅರ್ಹತೆ ಪಡೆಯುವವರು ಯಾರು?

 1. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಮತ್ತು ಫಲಾನುಭವಿಯಾಗಲು, ರೈತನಾದವನು ತೆಲಂಗಾಣ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಕೃಷಿ ಭೂಮಿಯನ್ನು ಹೊಂದಿರಬೇಕು.
 2. ಸಣ್ಣ ಮತ್ತು ಅಂಚಿನ ರೈತರಿಗೆ ಈ ಯೋಜನೆ ಅನ್ವಯಿಸುತ್ತಿದ್ದು; ವಾಣಿಜ್ಯ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
 3. ಅಲ್ಲದೆ ಭೂಮಿಯನ್ನು ಗುತ್ತಿಗೆ ಪಡೆದು ಉಳುಮೆ ಮಾಡುವ ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ.

ಪ್ರಸ್ತುತ, ತೆಲಂಗಾಣದಲ್ಲಿ 8 ಲಕ್ಷಕ್ಕೂ ಹೆಚ್ಚು ರೈತರು ರೈತು ಬಂಧು ಯೋಜನೆಯ ಫಲಾನಭವಿಗಳಾಗಿದ್ದಾರೆ.

 

ವಿಷಯಗಳು: ಭಾರತದ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಹಂಚಿಕೆ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ಮಾಸಿಕ ರೂ.50 ಲಕ್ಷಕ್ಕಿಂತ ಹೆಚ್ಚಿನ ಮಾಸಿಕ ವಹಿವಾಟು ಹೊಂದಿರುವ ವ್ಯವಹಾರಗಳು ಕನಿಷ್ಠ 1% GST ಹೊಣೆಗಾರಿಕೆಯನ್ನು ನಗದು ರೂಪದಲ್ಲಿ ಪಾವತಿಸುವುದು.


ಸಂದರ್ಭ:

ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ ಮತ್ತು ಕಸ್ಟಮ್ಸ್ (CBIC) ವು  ಸರಕು ಮತ್ತು ಸೇವಾ ತೆರಿಗೆ (GST) ನಿಯಮಗಳಲ್ಲಿ ನಿಯಮ 86 ಬಿ ಅನ್ನು ಪರಿಚಯಿಸಿದ್ದು ಇದು ಜಿಎಸ್ಟಿ ಹೊಣೆಗಾರಿಕೆಯನ್ನು ಶೇಕಡಾ 99  ಕ್ಕೆ ಬಿಡುಗಡೆ/ ನಿರ್ವಹಣೆ ಮಾಡಲು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಬಳಕೆಯನ್ನು ನಿರ್ಬಂಧಿಸುತ್ತದೆ.

 • ಹೊಸ ನಿಯಮದ ಪ್ರಕಾರ, ಮಾಸಿಕ ₹ 50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳು ತಮ್ಮ ಜಿಎಸ್‌ಟಿ ಹೊಣೆಗಾರಿಕೆಯ ಕನಿಷ್ಠ ಶೇಕಡಾ 1 ರಷ್ಟನ್ನು  ಕಡ್ಡಾಯವಾಗಿ ನಗದು ರೂಪದಲ್ಲಿ ಪಾವತಿಸಬೇಕಾಗುತ್ತದೆ.

ಹೊಸ ನಿಯಮದಡಿಯಲ್ಲಿರುವ ವಿನಾಯಿತಿಗಳು:

ವ್ಯವಸ್ಥಾಪಕ ನಿರ್ದೇಶಕರು ಅಥವಾ ಯಾವುದೇ ಪಾಲುದಾರರು ರೂ.1 ಲಕ್ಷಕ್ಕಿಂತ ಹೆಚ್ಚಿನ ಆದಾಯ ತೆರಿಗೆಯನ್ನು ಪಾವತಿಸಿದಲ್ಲಿ ಅಥವಾ ನೋಂದಾಯಿತ ವ್ಯಕ್ತಿಯು ಹಿಂದಿನ ಹಣಕಾಸು ವರ್ಷದಲ್ಲಿ ರೂ. 1 ಲಕ್ಷಕ್ಕಿಂತ ಹೆಚ್ಚಿನ ಮರುಪಾವತಿ ಮೊತ್ತವನ್ನು ಬಳಕೆಯಾಗದ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ನಿಂದ ಸ್ವೀಕರಿಸಿದಲ್ಲಿ ಈ ನಿರ್ಬಂಧವು ಅನ್ವಯಿಸುವುದಿಲ್ಲ.

ಈ ನಡೆಯ ಹಿಂದಿನ ತರ್ಕ :

ಇದು ನಕಲಿ ಕ್ರೆಡಿಟ್‌(ಸಾಲ)ಗಳನ್ನು ತೆಗೆದುಕೊಳ್ಳುವ ವ್ಯವಹಾರಗಳ ಮೂಲಕ ಆಗುವ ಸಾಲದ ದುರುಪಯೋಗವನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

ಈಗ ಆಗಿರುವ ಸಮಸ್ಯೆ ಏನು?

ಕಡ್ಡಾಯ ನಗದು ಪಾವತಿಯು ಸಣ್ಣ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಲ್ಲದೆ ಅವುಗಳ ಕಾರ್ಯನಿರತ ಬಂಡವಾಳದ ಅಗತ್ಯವನ್ನು ಹೆಚ್ಚಿಸುತ್ತದೆ ಮತ್ತು ಜಿಎಸ್‌ಟಿಯನ್ನು ಹೆಚ್ಚು ಸಂಕೀರ್ಣವಾದ ಪರೋಕ್ಷ ತೆರಿಗೆ ವ್ಯವಸ್ಥೆಯನ್ನಾಗಿ ಮಾಡುತ್ತದೆ ಎಂಬ ಆತಂಕಗಳಿವೆ.

ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ( ITC) ಎಂದರೇನು?

ವ್ಯವಹಾರವೊಂದು ಖರೀದಿ ಸಮಯದಲ್ಲಿ ಪಾವತಿಸುವ ತೆರಿಗೆಯಾಗಿದೆ ಮತ್ತು ಮಾರಾಟದ ಸಮಯದಲ್ಲಿ ಅದರ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ಅದನ್ನು ಬಳಸಬಹುದಾಗಿದೆ.

ಸರಳವಾಗಿ ಹೇಳುವುದಾದರೆ, ಇನ್ ಪುಟ್ ಕ್ರೆಡಿಟ್ ಎಂದರೆ output  ಮೇಲೆ ತೆರಿಗೆ ಪಾವತಿಸುವ ಸಮಯದಲ್ಲಿ, ನೀವು ಈಗಾಗಲೇ Input ಗಳಲ್ಲಿ ಪಾವತಿಸಿದ ತೆರಿಗೆಯನ್ನು ಕಡಿಮೆ ಮಾಡಬಲ್ಲ ಮತ್ತು ಉಳಿದ ಮೊತ್ತವನ್ನು ಪಾವತಿಸಬಹುದಾದ ತೆರಿಗೆ ಯಾಗಿದೆ.

ವಿನಾಯಿತಿಗಳು:  ಸಂಯೋಜಾತ್ಮಕ ಯೋಜನೆಯಡಿಯಲ್ಲಿನ  ವ್ಯವಹಾರವು ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪಡೆಯಲು ಸಾಧ್ಯವಿಲ್ಲ ಹಾಗೆಯೇ ITC ಯನ್ನು ವೈಯಕ್ತಿಕ ಬಳಕೆಗಾಗಿ ಅಥವಾ ವಿನಾಯಿತಿ ಪಡೆದ ಸರಕುಗಳಿಗೆ ಪಡೆಯಲು ಸಾಧ್ಯವಿಲ್ಲ.

ವಿಷಯಗಳು: ಮೂಲಸೌಕರ್ಯ- ರಸ್ತೆಮಾರ್ಗಗಳು.

ಪೂರ್ವದ ಸರಕು ಸಾಗಣೆಯ ಮೀಸಲು ಕಾರಿಡಾರ್:


ಸಂದರ್ಭ:

ನವ ಭೌಪುರ್- ನವ ಖುರ್ಜಾ ವಿಭಾಗ ಮತ್ತು ಪೂರ್ವ- ಮೀಸಲು ಸರಕು ಕಾರಿಡಾರ್‌ನ ಕಾರ್ಯಾಚರಣೆ ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಲಿರುವ ಪ್ರಧಾನ ಮಂತ್ರಿಗಳು.

ಪೂರ್ವ ಕಾರಿಡಾರ್ ಕುರಿತು:

ಉದ್ದ: 1856 ಕಿ.ಮೀ.

 • ಇದು ಎರಡು ವಿಭಿನ್ನ ವಿಭಾಗಗಳನ್ನು ಒಳಗೊಂಡಿದ್ದು ಒಂದು ವಿದ್ಯುದ್ದೀಕೃತ ಡಬಲ್-ಟ್ರ್ಯಾಕ್ ವಿಭಾಗವಾದರೆ ಮತ್ತೊಂದು ವಿದ್ಯುದ್ದೀಕೃತ ಸಿಂಗಲ್-ಟ್ರ್ಯಾಕ್ ವಿಭಾಗ ವಾಗಿದೆ.
 • ಇದು ಲುಧಿಯಾನ (ಪಂಜಾಬ್) ಬಳಿಯ ಸಾಹ್ನೆವಾಲ್ ನಿಂದ ಪ್ರಾರಂಭವಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ಮೂಲಕ ಪಶ್ಚಿಮ ಬಂಗಾಳದ ಡಾಂಕುನಿ ಯಲ್ಲಿ ಕೊನೆಗೊಳ್ಳುತ್ತದೆ.
 • ಇದನ್ನು ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ ( ಸರಕು ಸಾಗಣೆಗೆ ಮಾತ್ರ ಮೀಸಲಾದ ಕಾರಿಡಾರ್) ಗಳನ್ನು ನಿರ್ಮಿಸಿ ಮತ್ತು ನಿರ್ವಹಿಸುವ ವಿಶೇಷ ಉದ್ದೇಶದ ವಾಹನವಾಗಿ ಸ್ಥಾಪಿಸಲಾದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (DFCCIL) ನಿರ್ಮಿಸಿದೆ.

ಮಹತ್ವ:

ಪೂರ್ವ ಕಾರಿಡಾರ್ ಉತ್ತರ ಪ್ರದೇಶದ ಉತ್ತರ ವಲಯ, ದೆಹಲಿ, ಹರಿಯಾಣ, ಪಂಜಾಬ್ ಗಳಲ್ಲಿನ ಉಷ್ಣವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸುವ ಮತ್ತು ಪೂರ್ವ ಕಲ್ಲಿದ್ದಲು ಕ್ಷೇತ್ರಗಳಿಂದ ರಾಜಸ್ಥಾನದ ಕೆಲವು ಭಾಗಗಳಲ್ಲಿನ ಉಷ್ಣವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸುವ , ಹಾಗೂ ಸಿದ್ಧಪಡಿಸಿದ ಉಕ್ಕು, ಆಹಾರ ಧಾನ್ಯಗಳು, ಸಿಮೆಂಟ್, ರಸಗೊಬ್ಬರಗಳು, ರಾಜಸ್ಥಾನದಿಂದ ಸುಣ್ಣದ ಕಲ್ಲು ಪೂರ್ವದಲ್ಲಿ ಉಕ್ಕಿನ ಸ್ಥಾವರಗಳು  ಮತ್ತು ಸಾಮಾನ್ಯ ಸರಕುಗಳನ್ನೂ ಪೂರೈಸುವ ನಿರೀಕ್ಷೆಯಿದೆ.

ನಮಗೆ DFC ಗಳ ಅವಶ್ಯಕತೆ ಏಕಿದೆ?

ಹೆಚ್ಚಿದ ಹೊರೆ:  ಒಟ್ಟು 10,122 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಕಾರಿಡಾರ್‌ಗಳು ಅತಿ ಹೆಚ್ಚು ದಟ್ಟಣೆಯನ್ನು ಹೊಂದಿವೆ ಮತ್ತು ಹೆಚ್ಚು ದಟ್ಟಣೆಯಿಂದ ಕೂಡಿರುತ್ತವೆ. 2017 ರ ಮೇಕ್-ಇನ್-ಇಂಡಿಯಾ ವರದಿಯ ಪ್ರಕಾರ, ಈ ಮಾರ್ಗವು 52% ಪ್ರಯಾಣಿಕರ ಮತ್ತು 58% ಸರಕು ಸಾಗಣೆಯ ದಟ್ಟಣೆ ಯನ್ನು ಹೊಂದಿದೆ. ಅಲ್ಲದೆ, ಈ ಮಾರ್ಗಗಳು ಹೆಚ್ಚು  (ಆರ್ದ್ರವಾಗಿದ್ದು) ಸ್ಯಾಚುರೇಟೆಡ್ ಆಗಿದ್ದು, ಲೈನ್ ಸಾಮರ್ಥ್ಯದ ಬಳಕೆಯು 150% ನಷ್ಟು ತಲುಪುತ್ತಿದೆ.

ಬೇಡಿಕೆಯಲ್ಲಿ ಏರಿಕೆ: ಹೆಚ್ಚಿದ ಸಾರಿಗೆ ಬೇಡಿಕೆಗಳು, ಬಹಿರಂಗವಾಗಿ ದಟ್ಟಣೆ ಇರುವ ಮಾರ್ಗಗಳು ಮತ್ತು ರಸ್ತೆ ಸಾರಿಗೆಗೆ ಸಂಬಂಧಿಸಿದ ಹಸಿರುಮನೆ ಅನಿಲ (GHG) ಹೊರಸೂಸುವಿಕೆಗಳನ್ನು ಪರಿಗಣಿಸಿ, ಈ ಸರಕು ಕಾರಿಡಾರ್‌ಗಳು  ಸಾಗಾಣಿಕಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ವೇಗವಾಗಿ ಸಾಗಿಸಲು ಅನುವು ಮಾಡಿಕೊಡುತ್ತವೆ.

ಆದಾಯದ ಉತ್ಪತ್ತಿ: ಇವು (DFC) ಗಳು ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆಯುವುದಲ್ಲದೆ ಈ ಮಾರ್ಗಗಳಲ್ಲಿ ಕೈಗಾರಿಕಾ ಕಾರಿಡಾರ್ ಮತ್ತು ಲಾಜಿಸ್ಟಿಕ್ (logistic parks )  ಉದ್ಯಾನವನಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ.

 

ವಿಷಯಗಳು: ಗಡಿ ಪ್ರದೇಶಗಳಲ್ಲಿ ಭದ್ರತಾ ಸವಾಲುಗಳು ಮತ್ತು ಅವುಗಳ ನಿರ್ವಹಣೆ;  ಭಯೋತ್ಪಾದನೆಯೊಂದಿಗೆ ಸಂಘಟಿತ ಅಪರಾಧಗಳ ಸಂಪರ್ಕ.

ಇನ್ನರ್ ಲೈನ್ ಪರ್ಮಿಟ್ / ಪರವಾನಗಿ.


ಸಂದರ್ಭ:

ಮೇಘಾಲಯದ ನಾಗರಿಕ ಸಮಾಜದ ಗುಂಪುಗಳು ಬ್ರಿಟಿಷ್ ಯುಗದ ಇನ್ನರ್ ಲೈನ್ ಪರವಾನಗಿಗಾಗಿನ  ಕರೆಗಳನ್ನು ನವೀಕರಿಸಿವೆ.

ಮೇಘಾಲಯವು ILP ಅನ್ನು ಏಕೆ ಬಯಸುತ್ತಿದೆ?

ಈಶಾನ್ಯ ಭಾರತವು ಚೀನಾ, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಭೂತಾನ್ ಮುಂತಾದ ದೇಶಗಳೊಂದಿಗೆ ಗಡಿ ಹಂಚಿಕೊಳ್ಳುವುದಾರಿಂದ,ಈಶಾನ್ಯದ ಸ್ಥಳೀಯ ಜನರಲ್ಲಿ “ಅಕ್ರಮ ವಲಸಿಗರ ಒಳಹರಿವು”, ಅದರ ಪರಿಣಾಮಗಳು ಮತ್ತು ದೀರ್ಘಕಾಲೀನ ಹಾನಿಗಳ ವಿರುದ್ಧ ಭಯವಿದೆ.

ಐಎಲ್‌ಪಿ ಎಂದರೇನು?

ಇದು ಸ್ಥಳೀಯ ನಿವಾಸಿಗಳಲ್ಲದವರು ಐಎಲ್‌ಪಿ ವ್ಯವಸ್ಥೆಯಡಿಯಲ್ಲಿ ರಕ್ಷಿಸಲ್ಪಟ್ಟಿರುವ ರಾಜ್ಯಕ್ಕೆ ಭೇಟಿ ನೀಡಲು ಅಥವಾ ಉಳಿದುಕೊಳ್ಳಲು ಅಗತ್ಯವಿರುವ ದಾಖಲೆಯಾಗಿದೆ.

ಪ್ರಸ್ತುತ, ILP ಯು ಈಶಾನ್ಯದ ನಾಲ್ಕು ರಾಜ್ಯಗಳನ್ನು ಒಳಗೊಂಡಿದೆ, ಅವುಗಳೆಂದರೆ, ಅರುಣಾಚಲ ಪ್ರದೇಶ, ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್.

 1. 1. ನೀಡುವ ILP ಯು ವಾಸ್ತವ್ಯದ ಅವಧಿ ಮತ್ತು ಪ್ರವೇಶಿಸಲು ಅನುಮತಿಸಲಾದ ಪ್ರದೇಶಗಳು ಎರಡನ್ನೂ ನಿರ್ಧರಿಸುತ್ತದೆ.
 2. 2. ರಾಜ್ಯ ಸರ್ಕಾರವು ನೀಡುವ ILP ಯನ್ನು ಆನ್‌ಲೈನ್ ಅಥವಾ ವೈಯಕ್ತಿಕವಾಗಿ ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು.

ILP ಯು ದೇಶೀಯ ಪ್ರವಾಸಿಗರಿಗೆ ಮಾತ್ರ ಮಾನ್ಯವಾಗಿರುತ್ತದೆ.

ಇದರ ಹಿಂದಿನ ತರ್ಕ :

ಇನ್ನರ್ ಲೈನ್ ಪರ್ಮಿಟ್ “ಬಂಗಾಳ ಪೂರ್ವ ಗಡಿನಾಡು ನಿಯಂತ್ರಣ ಕಾಯ್ದೆ 1873” ರ ವಿಸ್ತರಣೆಯಾಗಿದೆ.

ಬ್ರಿಟಿಷರು ಈಶಾನ್ಯ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರ, ವಸಾಹತುಶಾಹಿಗಳು ಈ ಪ್ರದೇಶವನ್ನು ಮತ್ತು ಅದರ ಸಂಪನ್ಮೂಲಗಳನ್ನು ಆರ್ಥಿಕ ಲಾಭಕ್ಕಾಗಿ ಶೋಷಿಸಲು ಪ್ರಾರಂಭಿಸಿದರು.

 • ಅವರು ಮೊದಲು ಬ್ರಹ್ಮಪುತ್ರ ಕಣಿವೆಯಲ್ಲಿ ಚಹಾ ತೋಟಗಳು ಮತ್ತು ತೈಲ ಉದ್ಯಮಗಳನ್ನು ಪ್ರಾರಂಭಿಸಿದರು.
 • ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಬುಡಕಟ್ಟು ಜನಾಂಗದವರು ನಿಯಮಿತವಾಗಿ ಬಯಲು ಪ್ರದೇಶಗಳಲ್ಲಿ ಲೂಟಿಗಾಗಿ ದಾಳಿ ನಡೆಸುತ್ತಿದ್ದರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದ ಚಹಾತೋಟ ಹಾಗೂ ತೈಲ ಬಾವಿಗಳು ಮತ್ತು ಟ್ರೇಡಿಂಗ್ ಪೋಸ್ಟ್‌ಗಳನ್ನು ದೋಚುತ್ತಿದ್ದರು.
 • ಈ ಕಾರಣಕ್ಕಾಗಿಯೇ BEFR 1873 ಅನ್ನು ಜಾರಿಗೊಳಿಸಲಾಯಿತು.

ಮೇಘಾಲಯವನ್ನು ಐಎಲ್‌ಪಿ ಅಡಿಯಲ್ಲಿ ತರಬೇಕೇ?

ILP ಯನ್ನು ರಾಜ್ಯದಲ್ಲಿಅಕ್ರಮ ವಲಸಿಗರ ಒಳಹರಿವನ್ನುತಡೆಯಲು ಇರುವ ಏಕೈಕ ಕಾರ್ಯವಿಧಾನವೆಂದು ಪರಿಗಣಿಸಲಾಗಿದೆ.

 ಈ ಒಳಹರಿವನ್ನು ಅಪಾಯಕಾರಿ ಎಂದು ಗ್ರಹಿಸಲಾಗಿದೆ ಏಕೆಂದರೆ ಇದು ಮೇಘಾಲಯದ ಬುಡಕಟ್ಟು ಜನಾಂಗದವರ ದುರ್ಬಲ ಜನಸಂಖ್ಯಾ ಸಮತೋಲನವನ್ನು ಅಸಮತೋಲನಗೊಳಿಸುತ್ತದೆ.

ಒಳಹರಿವು ಖಂಡಿತವಾಗಿಯೂ ಚಿಂತಿಸಬೇಕಾದ ವಿಷಯವಾಗಿದೆ ಆದರೆ ಇದಕ್ಕೆ ಐಎಲ್‌ಪಿಗಿಂತ ಉತ್ತಮ ಪರಿಹಾರಗಳ ಅವಶ್ಯಕತೆಯಿದೆ, ಅಂದರೆ ಒತ್ತಡ ಗುಂಪುಗಳು ಬಯಸುವ ತ್ವರಿತ ಪರಿಹಾರಗಳಲ್ಲ. ವಾಸ್ತವವಾಗಿ, ಅಂತಹ ದೂರದೃಷ್ಟಿಯ ನೀತಿಯನ್ನು ಒಂದು ಅಥವಾ ಎರಡು ಒತ್ತಡ ಗುಂಪುಗಳು ಹೇಗೆ ನಿರ್ಧರಿಸಲು ಸಾಧ್ಯ?

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


1.ಕಣಿವೆಯಲ್ಲಿ ಬ್ರಾಂಡ್ ಬಜ್ ವರ್ಡ್ಸ್ ಗಳಾಗಿ ಪರಿವರ್ತಿತವಾದ LAC ಹಾಟ್‌ಸ್ಪಾಟ್‌ಗಳು

LAC hotspots turn brand buzzwords in Valley:

ದೆಹಲಿ ಮೂಲದ ಶೂ ಕಂಪನಿಗೆ, ಎಲ್‌ಎಸಿ ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಇರುವ ಆಯಕಟ್ಟಿನ ಸ್ಥಳಗಳು volatile locations , ಹಣ ಸಂಪಾದನೆಯ money-spinners  ತಾಣಗಳಾಗಿವೆ. ಆ ಸ್ಥಳಗಳ ಹೆಸರಿಡಲಾದ ಒಂದು ಶ್ರೇಣಿಯ ಚಳಿಗಾಲದ ಬೂಟುಗಳು ಕಾಶ್ಮೀರ ಕಣಿವೆಯಾದ್ಯಂತ ಓಡಾಡುತ್ತಿವೆ.

ಪ್ರಮುಖ ಅಂಶಗಳು: ‘ಗಾಲ್ವಾನ್’, ‘ಡೋಕ್ಲಾಮ್’, ‘ಕಾರ್ಗಿಲ್’, ಮತ್ತು ‘ಪಾಯಿಂಟ್ 5’ ಇತ್ಯಾದಿಗಳು.

(ಸೂಚನೆ :  ನಕ್ಷೆಯಲ್ಲಿ ಮೇಲೆ ತಿಳಿಸಿದ ಸ್ಥಳಗಳನ್ನು ಕಂಡುಹಿಡಿಯಲು ಪ್ರಯತ್ನಿಸಿ ಮತ್ತು ಅವುಗಳ ಸುತ್ತಮುತ್ತಲಿನ ಕುರಿತು ಸಂಕ್ಷಿಪ್ತ ಕಲ್ಪನೆಯನ್ನು ಹೊಂದಿರಿ).

ಪೋರ್ಚುಲಾಕಾ ಲಾಲ್ಜಿ: Portulaca laljii:

ಇದು ಭಾರತದ ಪೂರ್ವ ಘಟ್ಟದಲ್ಲಿ ಇತ್ತೀಚೆಗೆ ಪತ್ತೆಯಾದ ಕಾಡು ಸೂರ್ಯ ಗುಲಾಬಿಯ ಹೊಸ ಪ್ರಭೇದವಾಗಿದೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಿಂದ ಪತ್ತೆಯಾಗಿರುವ ಇದು ಕೊಳವೆಯಾಕಾರದ ಬೇರು, ಅದರ ಎಲೆ ಅಕ್ಷಗಳಲ್ಲಿ ಕೂದಲು ಇಲ್ಲದಿರುವಿಕೆ, ಕೆಂಪು-ಗುಲಾಬಿ ಹೂವು, ಪ್ರೊಲೇಟ್ ಆಕಾರದ ಹಣ್ಣುಗಳು ಮತ್ತು ತಾಮ್ರದ ಕಂದು ಬೀಜಗಳಂತಹ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ. ಟ್ಯೂಬರಸ್ ಬೇರುಗಳ ರಸವತ್ತಾದ ಸ್ವಭಾವವು ಸಸ್ಯವು ಕಲ್ಲಿನ ಬಿರುಕುಗಳ ಮೇಲೆ ಬದುಕುಳಿಯಲು ಅನುವು ಮಾಡಿಕೊಡುತ್ತದೆ.

ಸಾಹಿ ಫಾಸಲ್ ಅಭಿಯಾನ.

ನೀರಿನ ಒತ್ತಡವಿಲ್ಲದ ಪ್ರದೇಶಗಳಲ್ಲಿನ ರೈತರು ನೀರಿನ ತೀವ್ರತೆಯಿಲ್ಲದ ಬೆಳೆಗಳನ್ನು ಬೆಳೆಯಲು ಇದನ್ನು ರಾಷ್ಟ್ರೀಯ ಜಲ ಮಿಷನ್  2019 ರಲ್ಲಿ ಪ್ರಾರಂಭಿಸಿದ್ದು; ನೀರನ್ನು ಬಹಳ ಪರಿಣಾಮಕಾರಿಯಾಗಿ ಬಳಸಿ; ಆರ್ಥಿಕವಾಗಿ ಲಾಭ ಪಡೆಯುವ; ಮತ್ತು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಪಡೆಯುವ ಪರಿಸರ ಸ್ನೇಹಿ ಪ್ರದೇಶದ ಕೃಷಿ-ಹವಾಮಾನ-ಜಲೀಯ ಗುಣಲಕ್ಷಣಗಳಿಗೆ ಸೂಕ್ತವಾಗಿದೆ;

ರೈತರಲ್ಲಿ ಸೂಕ್ತ ಬೆಳೆಗಳು, ಹನಿ ನೀರಾವರಿ, ಮಣ್ಣಿನ ತೇವಾಂಶದ ಸಂರಕ್ಷಣೆ ಇತ್ಯಾದಿಗಳ ಬಗ್ಗೆ  ಜಾಗೃತಿ ಮೂಡಿಸುವುದು; ನೀರಿನ ತೀವ್ರ ಬೇಡಿಕೆಯಿರುವ ಬೆಳೆಗಳಾದ ಭತ್ತ, ಕಬ್ಬು ಬಾಳೆ ಗಳಂತವುಗಳಿಂದ ಅವರನ್ನು ವಿಮುಖಗೊಳಿಸಿ ಕಡಿಮೆ ನೀರಿನ ಅಗತ್ಯವಿರುವ ಜೋಳ, ಮೆಕ್ಕೆಜೋಳ ಮುಂತಾದ ಬೆಳೆಗಳ ಕಡೆಗೆ ಅವರ ಗಮನ ಸೆಳೆದು ಅಂತಿಮವಾಗಿ ರೈತರ ಆದಾಯ ಹೆಚ್ಚಳಕ್ಕೆ ಕಾರಣವಾಗುವುದು “ಸಾಹಿ ಫಸಲ್” ನ ಪ್ರಮುಖ ಉದ್ದೇಶಳಾಗಿವೆ.

ಮೊನ್ಪಾ ಕರ ಕುಶಲ ಕಾಗದ.

 • ಕೈಯಿಂದ ಮಾಡಿದ ಕಾಗದವನ್ನು ತಯಾರಿಸುವ ಕಲೆ ಮೊನ್‌ಪಾ ಜನರಲ್ಲಿ 1000 ವರ್ಷಗಳ ಹಿಂದೆ ಹುಟ್ಟಿಕೊಂಡಿದ್ದು, ಇದು ಅರುಣಾಚಲ ಪ್ರದೇಶದ ಪಾರಂಪರಿಕ ಕಲೆ ಯಾಗಿದೆ.
 • ಕ್ರಮೇಣ ಈ ಕಲೆಯು ಅರುಣಾಚಲ ಪ್ರದೇಶದ ತವಾಂಗ್‌ನ ಸ್ಥಳೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಯಿತು.
 • ಸ್ಥಳೀಯ ಉಪಭಾಷೆಯಲ್ಲಿ ‘ ಮೊನ್ ಶುಗು’(‘Mon shugu’) ಎಂದು ಕರೆಯಲ್ಪಡುವ ಸೂಕ್ಷ್ಮ-ವಿನ್ಯಾಸದ ಕೈಯಿಂದ ಮಾಡಿದ ಈ ಕಾಗದವು ತವಾಂಗ್‌ನಲ್ಲಿನ ಸ್ಥಳೀಯ ಬುಡಕಟ್ಟು ಜನಾಂಗದವರ ರೋಮಾಂಚಕ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ.
 • ಕೈಯಿಂದ ಮಾಡಿದ ಮೊನ್ಪಾ ಕಾಗದವನ್ನು ‘ಶುಗು ಶೆಂಗ್’ (‘Shugu Sheng’) ಎಂಬ ಸ್ಥಳೀಯ ಮರದ ತೊಗಟೆಯಿಂದ ತಯಾರಿಸಲಾಗುತ್ತಿದ್ದು ಇದು ಔಷಧೀಯ ಗುಣಗಳನ್ನು ಸಹ ಹೊಂದಿದೆ.

ಸಂದರ್ಭ:

KVIC ಯು (ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ) ತವಾಂಗ್‌ನಲ್ಲಿ  ಕೈಯಿಂದ ಮಾಡಿದ ಮೊನ್‌ಪಾ ಕಾಗದ ತಯಾರಿಕೆ ಘಟಕವನ್ನು ನಿಯೋಜಿಸಿದ್ದು, ಇದು ಕೇವಲ ಕಲೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಮಾತ್ರ ಹೊಂದಿರದೆ ಸ್ಥಳೀಯ ಯುವಕರು ಈ ಕಲೆಯೊಂದಿಗೆ ವೃತ್ತಿಪರವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಅವರು ಅದರಿಂದ ಆದಾಯವನ್ನು ಕೂಡ ಗಳಿಸುವಂತೆ ಮಾಡುವ ಉದ್ದೇಶವನ್ನು ಕೂಡ ಹೊಂದಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos