Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 19 ಡಿಸೆಂಬರ್ 2020

ಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 

ಪರಿವಿಡಿ

ಸಾಮಾನ್ಯ ಪತ್ರಿಕೆ 2:

1. ರಾಜ್ಯದಲ್ಲಿ ‘ಸಾಂವಿಧಾನಿಕ ವಿಕೋಪ’ದ ಅಧ್ಯಯನ ಮಾಡಲು ಆಂಧ್ರಪ್ರದೇಶದ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆ

2. ಕೋವಿಡ್ ಆರೈಕೆಯಿಂದ ಹೆಚ್ಚುತ್ತಿರುವ ವೆಚ್ಚದ ಮೇಲೆ ಸರ್ಕಾರಕ್ಕೆ ನ್ಯಾಯಾಂಗದಿಂದ ಅವಲೋಕನ

3. ಸಂಸದೀಯ ಸಮಿತಿಯು ವಲಸೆ ಕಾರ್ಮಿಕರ ದತ್ತಾಂಶ ತಾಣದ ರಚನೆಗೆ ಕರೆ

 

ಸಾಮಾನ್ಯ ಪತ್ರಿಕೆ 3:

1. ಸರ್ಕಾರದಿಂದ ಅಸಮರ್ಪಕ ಬ್ಯಾಂಕ್ (Bad Bank) ರಚನೆಗೆ ಪರಿಶೀಲನೆ

2. ಭಾರತವು ವಾಹನ ಹೊರಸೂಸುವಿಕೆಯನ್ನು ಕಡಿತಗೊಳಿಸಲು E20 ಇಂಧನ ಕುರಿತು ಪರ್ಯಾಲೋಚನೆ

3. ಉದ್ದೇಶಪೂರ್ವಕ ಜೀನೋಮಿಕ್ ಮಾರ್ಪಾಡು (IGA) ಮತ್ತು ಗಾಲ್ ಸೇಫ್ ಹಂದಿಗಳು

 

ಪೂರ್ವಾಭಾವಿ ಪರೀಕ್ಷಾ ಕೇಂದ್ರಿತ :

1. ಮಾಹಿತಿ ತಂತ್ರಜ್ಞಾನ ಗುತ್ತಿಗೆ ಸಿಬ್ಬಂದ್ದಿಯ ಬಾಡಿಗೆದಾರರಲ್ಲಿ ಮೊದಲೆರಡು ಸ್ಥಾನ ಅಮೇರಿಕಾ ಮತ್ತು ಯು.ಕೆಗೆ

2. ಬೊಕೊ ಹರಮ್.

3. ಧರ್ಮವನ್ನು ಆಚರಿಸಲು ಸರ್ವರಿಗೂ ಸಮಾನ ಹಕ್ಕು

4. ಸೋಲಾರ್ ವಿಂಡ್ಸ್ ಹ್ಯಾಕ್

5. ಹಿರಿಯ ಹುದ್ದೆಗಳಲ್ಲಿ ‘ಅಧಿಕ ಮಹಿಳೆಯರನ್ನು’ ನೇಮಿಸಿದ್ದಕ್ಕಾಗಿ ಪ್ಯಾರಿಸ್ ದಂಡ ವಿಧಿಸಿದೆ.

6. CORPAT

7. ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ (CDRI)

8. ಶನಿ ಮತ್ತು ಗುರುಗಳ ‘ಕ್ರಿಸ್‌ಮಸ್ ಸ್ಟಾರ್’ ಸಂಯೋಗ

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ಭಾರತದ ಸಂವಿಧಾನ – ಐತಿಹಾಸಿಕ ಬೆಳವಣಿಗೆಗಳು, ಉಗಮ, ವಿಕಸನ, ಲಕ್ಷಣಗಳು, ತಿದ್ದುಪಡಿಗಳು, ಪ್ರಧಾನ ನಿಬಂಧನೆಗಳು ಮತ್ತು ಮೂಲ ರಚನೆ

ರಾಜ್ಯದಲ್ಲಿ ಸಾಂವಿಧಾನಿಕ ವೈಫಲ್ಯ’ ಅಧ್ಯಯನ ಮಾಡಲು ಆಂಧ್ರಪ್ರದೇಶದ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದಿಂದ ಮಧ್ಯಂತರ ತಡೆ :


ಸಂದರ್ಭ:

ಆಂಧ್ರದ ನ್ಯಾಯಾಂಗ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅಡಿಯಲ್ಲಿ “ಸಾಂವಿಧಾನಿಕ ವಿಪತ್ತ”ನ್ನು ಕುರಿತು ವಿಚಾರಣೆಗೆ ಮುಂದಾಗಿರುವುದಕ್ಕೆ ಉನ್ನತ ನ್ಯಾಯಾಲಯ ತಡೆ ನೀಡಿದೆ.

ಇಲ್ಲಿನ ಸಮಸ್ಯೆ

 1. ನ್ಯಾಯಾಂಗ ಅಕ್ಟೋಬರ್ 1 ರಂದು, ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ನಿರ್ಧರಿಸುತ್ತದೆ.
 2. ನ್ಯಾಯಾಂಗ ಬಂಧನದಲ್ಲಿ ಅಥವಾ ಜಾಮೀನಿನ ಮೇಲೆ ಬಂಧನಕ್ಕೊಳಗಾದ ವ್ಯಕ್ತಿಗಳ ಸಂಬಂಧಿಕರು ಸಲ್ಲಿಸಿದ ಅರ್ಜಿಗೆ ಸುಯೋ ಮೋಟು ನೆಲೆಯಲ್ಲಿ ರಾಜ್ಯ ವಕೀಲರ ಸಹಾಯದ ಮೂಲಕ ರಾಜ್ಯದಲ್ಲಿ ಸಾಂವಿಧಾನಿಕ ವಿಕೋಪತೆ ಇದೆಯೋ ಇಲ್ಲವೋ ಎಂಬುದನ್ನು ನ್ಯಾಯಾಲಯ ದಾಖಲಿಸಬಹುದಾಗಿದೆ.

ನ್ಯಾಯಾಂಗದ ಅನಿಸಿಕೆ

 1. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಶಿಫಾರಸು ಮಾಡಲು ಮತ್ತು ವಿಚಾರಣೆ ನಡೆಸಲು ಉಚ್ಚ ನ್ಯಾಯಾಲಯ ಮುಂದಾಗಬಾರದು.
 2. ವಿಧಿ 356 ರಾಜ್ಯದಲ್ಲಿನ ಸಾಂವಿಧಾನಿಕ ನಿಬಂಧನೆಗಳ ವೈಫಲ್ಯಕ್ಕೆ ಸಂಬಂಧಿಸಿದೆ. ಇದು ಕಾರ್ಯಾಂಗಿಯ ಕ್ರಮವಾಗಿದೆ.

ರಾಜ್ಯ ಸರ್ಕಾರದ ಅವಲೋಕನ

 1. ನ್ಯಾಯಾಂಗದ ಅವಲೋಕನವು ಸಂವಿಧಾನದ ಮೂಲ ರಚನಾ ಸಿದ್ಧಾಂತವನ್ನು ಉಲ್ಲಂಘಿಸಿದೆ.
 2. ಸಾಂವಿಧಾನಿಕ ನ್ಯಾಯಾಲಯಗಳು ಸಾಂವಿಧಾನಿಕ ವೈಫಲ್ಯವನ್ನು ನಿರ್ಧರಿಸಲು ನ್ಯಾಯಿಕವಾದ ಮತ್ತು ನಿರ್ವಹಿಸಬಹುದಾದ ಮಾನದಂಡಗಳನ್ನು ಹೊಂದಿಲ್ಲ.
 3. ಇದು ಸಂವಿಧಾನದ ಪ್ರಕಾರ ಕಾರ್ಯಾಂಗದ ಮೇಲೆ ಗಂಭೀರವಾದ ಅತಿಕ್ರಮಣವಾಗಿದೆ.
 4. ಇದು ಅಧಿಕಾರದ ಪ್ರತ್ಯೇಕತಾ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ .

ಭಾರತೀಯ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆ

ವಿಧಿ 356 ರಡಿಯಲ್ಲಿ ರಾಜ್ಯ ಸರ್ಕಾರ ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿರದಿದ್ದರೆ  ಭಾರತದ ರಾಷ್ಟ್ರಪತಿಗೆ ರಾಜ್ಯ ಸರ್ಕಾರವನ್ನು ಅಮಾನತುಗೊಳಿಸುವ ಮತ್ತು ದೇಶದ ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಧಿಸುವ ಅಧಿಕಾರವನ್ನು ನೀಡುತ್ತದೆ .

 1. ರಾಷ್ಟ್ರಪತಿಯ ಆಳ್ವಿಕೆ ಹೇರಿದ ನಂತರ, ಮಂತ್ರಿ ಮಂಡಲವಿರುವುದಿಲ್ಲ. ವಿಧಾನಸಭೆಯು ಅಮಾನತುಗೊಳಿಸಲಾಗುವುದು.
 2. ರಾಜ್ಯವು ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಬರುವುದು ಮತ್ತು ರಾಜ್ಯದ ಮುಖ್ಯಸ್ಥರಾಗಿರುವ ರಾಜ್ಯಪಾಲರು ರಾಷ್ಟ್ರಪತಿಯರನ್ನು ಪ್ರತಿನಿಧಿಸುತ್ತಾರೆ.
 3. ರಾಷ್ಟ್ರಪತಿಯ ಆಳ್ವಿಕೆ ಹೇರಲು ಸಂಸತ್ತಿನ ಉಭಯ ಸದನಗಳ ಅನುಮತಿ ಅಗತ್ಯ.
 4. ಅನುಮೋದನೆ ನೀಡಿದರೆ, ಆರು ತಿಂಗಳ ಅವಧಿಗೆ ಮುಂದುವರಿಯುವುದು.
 5. ಹೇರಿಕೆಯನ್ನು ಮೂರು ವರ್ಷಗಳಿಗಿಂತ ಹೆಚ್ಚು ವಿಸ್ತರಿಸಲಾಗುವುದಿಲ್ಲ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ ಎರಡು ಸದನಗಳ ಅನುಮೋದನೆ ಅಗತ್ಯವಾಗಿದೆ.

ಹಿಂತೆಗೆದುಕೊಳ್ಳುವಿಕೆ:

 1. ಅಧ್ಯಕ್ಷರ ನಿಯಮದ ಘೋಷಣೆಯನ್ನು ಅಧ್ಯಕ್ಷರು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳಬಹುದು. ಅಂತಹ ಘೋಷಣೆಗೆ ಸಂಸತ್ತಿನ ಅನುಮೋದನೆ ಅಗತ್ಯವಿಲ್ಲ.

Sources: the Hindu.

 

ವಿಷಯ : ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು

ಕೋವಿಡ್ ಆರೈಕೆಯಿಂದ ಹೆಚ್ಚುತ್ತಿರುವ ವೆಚ್ಚದ ಮೇಲೆ ಸರ್ಕಾರಕ್ಕೆ ನ್ಯಾಯಾಂಗದಿಂದ ಅವಲೋಕನ


ಸಂದರ್ಭ:

ಕೋವಿಡ್ 19 ಆರೈಕೆ ಯ ಸರ್ಕಾರದ ಕ್ರಮಗಳ ಕುರಿತು ನ್ಯಾಯಾಂಗ ಇತ್ತೀಚೆಗೆ ತನ್ನ ಆದೇಶವನ್ನು ಜಾರಿಗೊಳಿಸಿತು.

ಆಯಾಸಗೊಂಡ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಆರೋಗ್ಯ ಕ್ಷೀಣಿಸುತ್ತಿರುವ ವಿಷಯವನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿರುವುದು ವಿಶೇಷ ಸಂಗತಿಯಾಗಿದೆ.

ಸರ್ಕಾರದ ಹಸ್ತಕ್ಷೇಪದ ಅವಶ್ಯಕತೆ:

 1. ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಆರೈಕೆ ತುಂಬಾ ದುಬಾರಿಯಾಗಿದ್ದು, ಸಾಮಾನ್ಯ ಜನರಿಗೆ ಕೈಗೆಟುಕದಂತಾಗಿದೆ.
 2. ಆರೋಗ್ಯದ ಹಕ್ಕು (ವಿಧಿ 21) ಕೈಗೆಟುಕುವ ಚಿಕಿತ್ಸೆಯನ್ನು ಒಳಗೊಂಡಿದೆ.
 3. ಒಬ್ಬರು COVID-19 ನಿಂದ ಬದುಕುಳಿದರೂ ಸಹ, ಅನೇಕ ಬಾರಿ ಆರ್ಥಿಕವಾಗಿ ಮತ್ತು ವಿತ್ತಿಯವಾಗಿ ಅವನು ಅಂತ್ಯಗೊಂಡಿದ್ದಾನೆ.

ಸರ್ಕಾರದ ಮುಂದಿನ ನಡೆ

 1. COVID -19 ರೋಗಿಗಳಿಗೆ ಕೈಗೆಟುಕುವ ವೈದ್ಯಕೀಯ ಚಿಕಿತ್ಸೆ ಖಚಿತಪಡಿಸುವುದು ಸರ್ಕಾರದ ಕರ್ತವ್ಯವಾಗಿದೆ.
 2. ವೈರಸ್ ಮೇಲಿನ ಈ “ವಿಶ್ವ ಸಮರ”ದ ಯಶಸ್ವಿಯತೆ “ಸರ್ಕಾರ-ಸಾರ್ವಜನಿಕ ಸಹಭಾಗಿತ್ವವನ್ನು ಅವಲಂಬಿಸಿರುತ್ತದೆ.
 3. COVID-19 ಸೋಂಕು ಹರಡುವಿಕೆಗೆ ಸಂಬಂಧಿಸಿದ ಸಂಗತಿಗಳು ಮತ್ತು ಅಂಕಿ ಅಂಶಗಳ ಬಗ್ಗೆ ಸರ್ಕಾರ ಪಾರದರ್ಶಕವಾಗಿರಬೇಕು. ಇಲ್ಲದಿದ್ದರೆ, ಜನರನ್ನು ದಾರಿ ತಪ್ಪಿಸಲಾಗುವುದು ಮತ್ತು ಎಲ್ಲವೂ ಸರಿಯಾಗಿದೆ ಎಂದು  ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆಗಳು ಅಧಿಕವಾಗಿವೆ.
 4. ಮುಂಚೂಣಿ ಕಾರ್ಮಿಕರಿಗೆ “ಮಧ್ಯಂತರ ವಿಶ್ರಾಂತಿ” ನೀಡಲು ಸರ್ಕಾರವು ಕ್ರಮವನ್ನು ರೂಪಿಸಬೇಕಾಗಿದೆ.
 5. ರಾಜ್ಯಗಳು ವಾರಾಂತ್ಯ / ರಾತ್ರಿಗಳಲ್ಲಿ ಕರ್ಫ್ಯೂವನ್ನು ಪರಿಗಣಿಸಬೇಕು.
 6. ಕಿರು ನಿರ್ಬಂಧಿತ (Containment) ಪ್ರದೇಶಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನು ನಿರ್ಬಂಧಿಸಬೇಕು.
 7. ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳು ತಮ್ಮ ಆಸ್ಪತ್ರೆಗಳಲ್ಲಿ ಕೈಗೆಟುಕುವ ಚಿಕಿತ್ಸೆಗಾಗಿ ಹೆಚ್ಚಿನ ನಿಬಂಧನೆಗಳನ್ನು ಮಾಡಬೇಕು ಅಥವಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಧಿಕಾರವನ್ನು ಚಲಾಯಿಸಲು ಖಾಸಗಿ ಆಸ್ಪತ್ರೆಗಳು ವಿಧಿಸುವ ಶುಲ್ಕದ ಮೇಲೆ ಮಿತಿ ನಿಗದಿಪಡಿಸಬೇಕು.

Sources: the Hindu.

 

ವಿಷಯ : ದುರ್ಬಲ ವರ್ಗಗಳ ಕಲ್ಯಾಣ ಮತ್ತು ರಕ್ಷಣೆಗೆ ಕೇಂದ್ರ ಮತ್ತು ರಾಜ್ಯಗಳ ಯೋಜನೆ, ಶಾಸನ, ಸಂಸ್ಥೆ ಮತ್ತು ಪ್ರಾಧಿಕಾರಗಳು

ಸಂಸದೀಯ ಸಮಿತಿಯು ವಲಸೆ ಕಾರ್ಮಿಕರ ದತ್ತಾಂಶ ತಾಣದ ರಚನೆಗೆ ಕರೆ


ಸಂದರ್ಭ:

ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ತನ್ನ ವರದಿಯನ್ನು “COVID-19 ಸಾಂಕ್ರಾಮಿಕ ಮತ್ತು ಸಂಬಂಧಿತ ವಿಷಯಗಳ ನಿರ್ವಹಣೆ” ಯ ವರಡಿಯನ್ನು ಬಿಡುಗಡೆ ಮಾಡಿದೆ.

ಪ್ರಮುಖ ಶಿಫಾರಸ್ಸುಗಳು

 1. COVID-19 ಮಾದರಿಯ ಸಾಂಕ್ರಾಮಿಕ ರೋಗವು ಪುನರಾವರ್ತಿತವಾಗಿದ್ದರೆ, ಪರಿಹಾರ ಕ್ರಮಗಳು ಉದ್ದೇಶಿತ ಫಲಾನುಭವಿಗಳನ್ನು ತಲುಪಿರುವುದನ್ನು ಖಚಿತಪಡಿಸಿಕೊಳ್ಳಲು ವಲಸೆ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಶೀಘ್ರವಾಗಿ ಸಂಯೋಜಿಸಬೇಕು.
 2. ದತ್ತಾಂಶವು ಮೂಲ ರಾಜ್ಯ, ಗಮ್ಯಸ್ಥಾನ ಸ್ಥಿತಿ, ಕೆಲಸಗಾರನ ಕೌಶಲ್ಯ ಮತ್ತು ಇತರ ಸಂಪರ್ಕ ವಿವರಗಳನ್ನು ಹೊಂದಿರಬೇಕು.
 3. ವಿಪತ್ತು ನಿರ್ವಹಣೆ ಕಾಯ್ದೆ (2005) ಮತ್ತು ಸಾಂಕ್ರಾಮಿಕ ರೋಗಗಳು ಕಾಯ್ದೆ (1897) – ಸಾಂಕ್ರಾಮಿಕ ಸಮಯದಲ್ಲಿ ಕಾರ್ಯರೂಪಕ್ಕೆ ಬರುವ ಈ ಮಾರ್ಗದರ್ಶಿ ಕಾನೂನುಗಳು ಸಮರ್ಕವಾಗಿಲ್ಲ.
 4. ಸಾಂಕ್ರಾಮಿಕ ರೋಗಗಳ ಕಾಯ್ದೆ (1897) 1918 ರ ಸ್ಪ್ಯಾನಿಷ್ ಜ್ವರಕ್ಕೂ ಮುಂಚೆಯೇ ವಸಾಹತುಶಾಹಿ ಯುಗದಲ್ಲಿ ರೂಪುಗೊಂಡಿದ್ದರಿಂದ ಈ ಕಾಯಿದೆಯು ಪ್ರಸ್ತುತತೆಯ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸಲು ಶಕ್ತವಾಗಿಲ್ಲ. ಹಾಗಾಗಿ ಇದನ್ನು ಪರಿಶೀಲಿಸುವ ಅಗತ್ಯತಯಿದೆ.

ದತ್ತಾಂಶದ ಅಗತ್ಯತೆ:

ವಿಸ್ತೃತ ಲಾಕ್‌ಡೌನ್ ಸಮಯದಲ್ಲಿ, ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರ ಯಾವುದೇ ದತ್ತಾಂಶವನ್ನು ಹೊಂದಿರದ ಕಾರಣ ಸ್ಥಳವನ್ನು ಗುರುತಿಸುವ ಮತ್ತು ವಲಸೆ ಕಾರ್ಮಿಕರಿಗೆ ಪರಿಹಾರ ಕ್ರಮಗಳನ್ನು ನೀಡುವ ಕಾರ್ಯವು ಕಷ್ಟಕರವಾಯಿತು.

ಸಮಗ್ರ ರಾಷ್ಟ್ರೀಯ ದತ್ತಾಂಶದ ಅನುಪಸ್ಥಿತಿಯಲ್ಲಿ, ಸರ್ಕಾರವು ಪರಿಹಾರ ಕ್ರಮಗಳನ್ನು ಉದ್ದೇಶಿತ ಫಲಾನುಭವಿಗಳಿಗೆ ವಿಸ್ತರಿಸುವುದು ಕಷ್ಟವಾಗುವುದು.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಸೇರ್ಪಡೆ ಬೆಳವಣಿಗೆ ಮತ್ತು ಅದರ ಸಮಸ್ಯೆಗಳು

ಸರ್ಕಾರದಿಂದ ಅಸಮರ್ಪಕ ಬ್ಯಾಂಕ್ (Bad Bank) ರಚನೆಗೆ ಪರಿಶೀಲನೆ


ಸಂದರ್ಭ:

ದೇಶದ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯವನ್ನು ಸುಧಾರಿಸಲು ಅಸಮರ್ಪಕ ಬ್ಯಾಂಕ್ ಸ್ಥಾಪನೆ ಸೇರಿದಂತೆ ಎಲ್ಲಾ ಆಯ್ಕೆಗಳನ್ನು ಸರ್ಕಾರ ಅನ್ವೇಷಿಸುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಇದರ ಅವಶ್ಯಕತೆ:

NPAಗಳು ವೃದ್ದಿಯಾಗುವ ಸಾಧ್ಯತೆಯಿರುವಾಗ ಈ ಕ್ರಮ ಅನಿವಾರ್ಯವಾಗಿದೆ ಮತ್ತು ಹೆಚ್ಚಿನ ನಿರ್ಣಯವು IBC ಚೌಕಟ್ಟಿನಾಚೆ ನಿರ್ವಹಿಸಬೇಕಾಗುವುದು.

ಅಸಮರ್ಪಕ ಬ್ಯಾಂಕ್ ಪರಿಕಲ್ಪನೆ:

 1. ಇತರೆ ಹಣಕಾಸು ಸಂಸ್ಥೆಯ NPAಗಳನ್ನು ಮತ್ತು ಇತರ ದ್ರವರೂಪದ ಹಿಡುವಳಿಗಳನ್ನು ಖರೀದಿಸಲು ಸ್ಥಾಪಿಸಲಾದ ಬ್ಯಾಂಕ್.
 2. ಗಮನಾರ್ಹ ಲಾಭರಹಿತ ಸ್ವತ್ತುಗಳನ್ನು ಹೊಂದಿರುವ ಘಟಕವು ಮಾರುಕಟ್ಟೆ ಬೆಲೆಯಲ್ಲಿ ಈ ಬ್ಯಾಂಕ್‌ಗೆ ತನ್ನ ಪಾಲನ್ನು ವರ್ಗಾವಣೆ ಮಾಡುತ್ತದೆ.
 3. ಈ ವರ್ಗಾಯಿಸುವ ಪ್ರಕ್ರಿಯೆಯ ಮೂಲಕ, ಮೂಲ ಸಂಸ್ಥೆಯು ತನ್ನ ಬ್ಯಾಲೆನ್ಸ್ ಶೀಟನ್ನು ಸಮತೋಲನಗೊಳಿಸಬಹುದು.

NPAಗಳ ಸಮಸ್ಯೆ

 1. ಭಾರತೀಯ ಬ್ಯಾಂಕುಗಳ NPA ರಾಶಿಯು ಆರ್ಥಿಕತೆಯ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ..
 2. ಇದು ಬ್ಯಾಂಕುಗಳ ಲಾಭವನ್ನು ಮೊಟಕುಗೊಳಿಸುವವು.
 3. ಸಾಲ ನೀಡಿಕೆ ಕುಂಟಿತವಾಗಿ ಬಂಡವಾಳದ ಹೂಡಿಕೆ ಪ್ರಮಾಣ ಕ್ಷಿಣಿಸುವುದು. ಇದು ಕೈಗಾರಿಕೋದ್ಯಮದ ಬೆಳವಣಿಗೆಗೆ ಮಾರಕವಾಗುವುದು.
 4. ಸಾಲದ ಬೆಳವಣಿಗೆಯ ಕೊರತೆಯು ಆರ್ಥಿಕತೆಯ ಬೆಳವಣಿಗೆ ದರದ 8% ಗುರಿಗೆ ಅಡ್ಡಿಯಾಗುವುದು.

ಈ ಬ್ಯಾಂಕ್ ಪ್ರಯೋಜನಗಳು:

 1. ಬ್ಯಾಂಕುಗಳು ಅಥವಾ FIIಗಳು NPAಗಳನ್ನು ವರ್ಗಾವಣೆ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ತೆರವುಗೊಳಿಸಬಹುದು. ಇದರಿಂದ ಬ್ಯಾಂಕ್ ತಮ್ಮ ಪ್ರಮುಖ ವ್ಯವಹಾರ ಮತ್ತು ಸಾಲ ಚಟುವಟಿಕೆಗಳತ್ತ ಗಮನ ಹರಿಸುವವು.
 2. ದೊಡ್ಡ ಸಾಲಗಾರರು ಅನೇಕ ಪಾವತಿದಾರರನ್ನು ಹೊಂದಿರುತ್ತಾರೆ. ಆದ್ದರಿಂದ ಅಸಮರ್ಪಕ ಬ್ಯಾಂಕ್ ಸಮನ್ವಯ ಸಮಸ್ಯೆಯನ್ನು ಪರಿಹರಿಸಬಹುದು. ಏಕೆಂದರೆ NPAಗಳನ್ನು ಒಂದೇ ಸಂಸ್ಥೆಯಲ್ಲಿ ಕೇಂದ್ರೀಕರಿಸಲಾಗುವುದು.
 3. ಇದು ವೈಯಕ್ತಿಕ ಬ್ಯಾಂಕುಗಳನ್ನು ಕಡಿತಗೊಳಿಸುವ ಮೂಲಕ ಸಾಲಗಾರರೊಂದಿಗೆ ತ್ವರಿತವಾಗಿ ವ್ಯವಹರಿಸಬಹುದಾಗಿದೆ.
 4. ಇದು ಸಾಲಗಾರರ ವಿರುದ್ಧ ಹೆಚ್ಚು ಕಠಿಣ ಜಾರಿ ಕ್ರಮ ತೆಗೆದುಕೊಳ್ಳಲು ಪೂರಕವಾಗಿದೆ.
 5. ಇದು ಸರ್ಕಾರವನ್ನು ಮಾತ್ರ ಆಶ್ರಯಿಸುವುದಕ್ಕಿಂತ ಸಾಂಸ್ಥಿಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಬಹುದು.

Sources: the Hindu.

 

ವಿಷಯ : ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು

ಭಾರತವು ವಾಹನ ಹೊರಸೂಸುವಿಕೆಯನ್ನು ಕಡಿತಗೊಳಿಸಲು E20 ಇಂಧನ ಕುರಿತು ಪರ್ಯಾಲೋಚನೆ


ಸಂದರ್ಭ:

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ E20 ಇಂಧನ ಮಾಹಿತಿ ಆಟೋಮೊಬೈಲ್ ಇಂಧನ ಕುರಿತು ಕರಡು ಅಧಿಸೂಚನೆ ಜಾರಿಗೊಳಿಸಿ ಮತ್ತು ಅಳವಡಿಕೆಗಾಗಿ ಜನಾಭಿಪ್ರಾಯಕ್ಕೆ ಅವಕಾಶ ಕಲ್ಪಿಸಿದೆ. E20 ಇಂಧನವು ಶೇ20 ರಷ್ಟು ಎಥೆನಾಲ್ ಮತ್ತು ಗ್ಯಾಸೋಲಿನ್ ಮಿಶ್ರಣವಾಗಿದೆ.

ಪ್ರಸ್ತುತ ಸ್ಥಿತಿ:

ಪ್ರಸ್ತುತ ಅನುಮತಿಸುವ ಮಿಶ್ರಣವು ಶೇ 10ರಷ್ಟು ಎಥೆನಾಲ್ ಆಗಿದ್ದರೂ ಭಾರತವು 2019 ರಲ್ಲಿ ಕೇವಲ 5.6% ಮಿಶ್ರಣವನ್ನು ತಲುಪಿದೆ.

E20 ಇಂಧನದ ಪ್ರಯೋಜನಗಳು

 1. ವಾಹನ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು
 2. ಇಂಗಾಲದ ಡೈಆಕ್ಸೈಡ್, ಹೈಡ್ರೋಕಾರ್ಬನ್ ಇತ್ಯಾದಿಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು
 3. ತೈಲ ಆಮದು ಮಸೂದೆಯನ್ನು ಕಡಿಮೆ ಮಾಡುವುದು ಆ ಮೂಲಕ ವಿದೇಶಿ ವಿನಿಮಯವನ್ನು ಉಳಿಸುತ್ತದೆ
 4. ಇಂಧನ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಎಥೆನಾಲ್

 1. ಎಥೆನಾಲ್ ಒಂದು ಜೈವಿಕ ಇಂಧನವಾಗಿದೆ.
 2. ಮೆಕ್ಕೆಜೋಳ, ಕಬ್ಬು, ಸೆಣಬು, ಆಲೂಗಡ್ಡೆ ಮುಂತಾದ ಕೃಷಿ ಬೆಳೆಗಳ ತ್ಯಾಜ್ಯಗಳಿಂದ ಉತ್ಪಾದಿಸಲಾಗುವುದು.

ಈ ನಿಟ್ಟಿನಲ್ಲಿ ಸರ್ಕಾರ ಕ್ರಮಗಳು

 1. ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿ (NBCC) FCIನೊಂದಿಗೆ ಲಭ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಎಥೆನಾಲ್ಗೆ ಪರಿವರ್ತಿಸಿ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ಗಳನ್ನು ತಯಾರಿಸಲು ಮತ್ತು ಪೆಟ್ರೋಲ್‌ನಲ್ಲಿ ಮಿಶ್ರಣ ಮಾಡಲು ಅನುಮತಿ ನೀಡಿದೆ.
 2. ಪಳೆಯುಳಿಕೆ ಇಂಧನದ ಬಳಕೆಯಿಂದ ಉಂಟಾಗುವ ಪರಿಸರದ ಮೇಲಿನ ಸಮಸ್ಯೆಗಳನ್ನು ಪರಿಹರಿಸಲು, ರೈತರಿಗೆ ಆದಾಯವನ್ನು ವೃದ್ಧಿಸಲು, ಕಚ್ಚಾ ಆಮದುಗಳಿಗೆ ಸಬ್ಸಿಡಿ ನೀಡಲು ಮತ್ತು ವಿದೇಶೀ ವಿನಿಮಯ ಉಳಿತಾಯವನ್ನು ಸಾಧಿಸಲು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಕೈಗೊಳ್ಳಲು ಭಾರತ ಸರ್ಕಾರ 2003 ರಲ್ಲಿ EBP ಕಾರ್ಯಕ್ರಮವನ್ನು ಪ್ರಾರಂಭಿಸಿತು.
 3. ಕೃಷಿ & ರೈತ ಕಲ್ಯಾಣ ಸಚಿವಾಲಯವು ಹೆಚ್ಚುವರಿ ಪ್ರಮಾಣದ ಆಹಾರ ಧಾನ್ಯಗಳನ್ನು ಎಥೆನಾಲ್‌ಗೆ ಪರಿವರ್ತಿಸಲು ಜೈವಿಕ ಇಂಧನಗಳ ರಾಷ್ಟ್ರೀಯ ನೀತಿಗೆ (2018) ಅನುಮೋದನೆ ನೀಡಿದೆ.

Sources: the Hindu.

 

ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆ, ದಿನನಿತ್ಯ ಜೀವನದ ಮೇಲಿನ ಪರಿಣಾಮಗಳು

ಉದ್ದೇಶಪೂರ್ವಕ ಜೀನೋಮಿಕ್ ಮಾರ್ಪಾಡು (IGA) ಮತ್ತು ಗಾಲ್ ಸೇಫ್ ಹಂದಿಗಳು


ಸಂದರ್ಭ:

ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (FDA) ಗ್ಯಾಲ್ ಸೇಫ್ ಹಂದಿಗಳು ಎಂದು ಕರೆಯಲ್ಪಡುವ ದೇಶೀಯ ಹಂದಿಗಳಲ್ಲಿ ಮೊದಲ ಬಾರಿಗೆ ಉದ್ದೇಶಪೂರ್ವಕ ಜೀನೋಮಿಕ್ ಮಾರ್ಪಾಡನ್ನು (IGA) ಅನುಮೋದಿಸಿತು.

 1. ಈ ಹಂದಿಗಳನ್ನು ಆಹಾರ ಮತ್ತು ಮಾನವ ಚಿಕಿತ್ಸೆಗೆ ಬಳಸಬಹುದು.
 2. ಆಹಾರ ಮತ್ತು ಜೀವ ವೈದ್ಯಕೀಯ ಉದ್ದೇಶಗಳಿಗಾಗಿ ಮೊದಲ ಬಾರಿಗೆ ಪ್ರಾಣಿ ಜೈವಿಕ ತಂತ್ರಜ್ಞಾನದ ಉತ್ಪನ್ನದ ಬಳಕೆಗೆ ನಿಯಂತ್ರಕ ವ್ಯವಸ್ಥೆ ಅನುಮೋದನೆ ನೀಡಿದೆ.

ಉದ್ದೇಶಪೂರ್ವಕ ಜೀನೋಮಿಕ್ ಬದಲಾವಣೆ

 1. ಪ್ರಾಣಿಗಳ ಉದ್ದೇಶಪೂರ್ವಕ ಜೀನೋಮಿಕ್ ಮಾರ್ಪಾಡು ಪ್ರಕ್ರಿಯೆ ಮೂಲಕ ಆಧುನಿಕ ಆಣ್ವಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಜೀವಿಯ ಜೀನೋಮ್‌ಗೆ ನಿರ್ದಿಷ್ಟ ಬದಲಾವಣೆಗಳನ್ನು ಮಾಡುವುದನ್ನು “ಜೀನೋಮ್ ಎಡಿಟಿಂಗ್” ಅಥವಾ “ಜೆನೆಟಿಕ್ ಎಂಜಿನಿಯರಿಂಗ್” ಎಂದು ಕರೆಯಲಾಗುತ್ತದೆ.
 2. ಪ್ರಾಣಿಗಳ DNA ಅನುಕ್ರಮದಲ್ಲಿನ ಇಂತಹ ಬದಲಾವಣೆಗಳನ್ನು ಸಂಶೋಧನಾ ಉದ್ದೇಶಗಳಿಗಾಗಿ, ಮಾನವ ಬಳಕೆಗಾಗಿ ಆರೋಗ್ಯಕರ ಮಾಂಸವನ್ನು ಉತ್ಪಾದಿಸಲು ಮತ್ತು ಪ್ರಾಣಿಗಳಲ್ಲಿ ರೋಗ ನಿರೋಧಕತೆಯನ್ನು ಅಧ್ಯಯನ ಮಾಡಲು ಬಳಸಬಹುದಾಗಿದೆ.

Sources: Indian Express.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಮಾಹಿತಿ ತಂತ್ರಜ್ಞಾನ ಗುತ್ತಿಗೆ ಸಿಬ್ಬಂದ್ದಿಯ ಬಾಡಿಗೆದಾರರಲ್ಲಿ ಮೊದಲೆರಡು ಸ್ಥಾನ ಅಮೇರಿಕಾ ಮತ್ತು ಯು.ಕೆಗೆ

 1. ‘ಭಾರತೀಯ ಐಟಿ ಗುತ್ತಿಗೆದಾರರಿಗೆ ಜಾಗತಿಕ ಬೇಡಿಕೆ’ ಎಂಬ ಶೀರ್ಷಿಕೆಯ ಸಮೀಕ್ಷೆ ಕೆಳಗಿನ ಅಂಶಗಳನ್ನು ಬಿಡುಗಡೆ ಮಾಡಿದೆ.
 2. ಗುತ್ತಿಗೆದಾರರ ನೇಮಕಾತಿ ವೇದಿಕೆಯಾದ Techfynder ಈ ಸಮೀಕ್ಷೆಯನ್ನು ನಡೆಸಿದೆ.
 3. ಈ ವರದಿ ಜನವರಿ & ಡಿಸೆಂಬರ್ ನಡುವಿನ 52,000 ಗುತ್ತಿಗೆದಾರರ ಪ್ರತಿಕ್ರಿಯೆಗಳನ್ನು ಆಧರಿಸಿದೆ.
 4. ಪ್ರಮುಖಾಂಶಗಳು :
 1. ಯು.ಕೆ, ಐರ್ಲೆಂಡ್, ನೆದರ್ಲ್ಯಾಂಡ್ಸ್, ಅಮೇರಿಕಾ ಮತ್ತು ದಕ್ಷಿಣ ಆಫ್ರಿಕಾಗಳು ಗುತ್ತಿಗೆ ಮಾರುಕಟ್ಟೆಯಲ್ಲಿ ಹೆಚ್ಚು ನುರಿತ ಭಾರತೀಯ ಕಾರ್ಮಿಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ಉನ್ನತ ರಾಷ್ಟ್ರಗಳ ಪಟ್ಟಿಗೆ ಸೇರಿವೆ.
 2. ಸಾಂಕ್ರಾಮಿಕ ರೋಗದಿಂದಾಗಿ, ಅನೇಕ ಸಂಸ್ಥೆಗಳು ತಮ್ಮ ವ್ಯವಹಾರ, ಉತ್ಪನ್ನ ಮತ್ತು ಸೇವೆಗಳನ್ನು ನೀಡಲು ಅಂತರ್ಜಾಲವನ್ನು ಆಶ್ರಿಯಿಸಿದ್ದವು.
 3. ಇದು ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಜಾವಾ ಡೆವಲಪರ್‌ಗಳು, ಸೈಬರ್‌ ಸೆಕ್ಯುರಿಟಿ ಎಂಜಿನಿಯರ್‌ಗಳು, ದತ್ತಾಂಶದ ವಿಜ್ಞಾನಿಗಳು, ವೆಬ್ ಡೆವಲಪರ್‌ಗಳು ಮತ್ತು ಯುಐ / ಯುಎಕ್ಸ್ ವಿನ್ಯಾಸಕರ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬೊಕೊ ಹರಮ್:

 1. ಬೊಕೊ ಹರಮ್ ಹಿಂಸಾತ್ಮಕ ಇಸ್ಲಾಮಿಸ್ಟ್ ದಂಗೆಕೋರ ಗುಂಪಾಗಿದೆ.
 2. ಇದು ಈಶಾನ್ಯ ನೈಜೀರಿಯಾದಿಂದ ನೆರೆಯ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಾದ ನೈಜರ್, ಚಾಡ್ ಮತ್ತು ಕ್ಯಾಮರೂನ್ ಸರೋವರ ಚಾಡ್ ಜಲಾನಯನ ಪ್ರದೇಶಗಳಿಗೆ ಹರಡಿತು.
 3. ಸುದ್ದಿಯಲ್ಲಿ : 344 ಅಪಹರಣಕ್ಕೊಳಗಾದ ನೈಜೀರಿಯಾದ ಹುಡುಗರನ್ನು ಬೊಕೊ ಹರಮ್ ಬಿಡುಗಡೆ ಮಾಡಿದೆ.

ಧರ್ಮವನ್ನು ಆಚರಿಸಲು ಸರ್ವರಿಗೂ ಸಮಾನ ಹಕ್ಕು

ಉತ್ತರ ಪ್ರದೇಶದ ಮತಾಂತರ ವಿರೋಧಿ ಸುಗ್ರೀವಾಜ್ಞೆ ಅಡಿಯಲ್ಲಿ ಅಪಾದಿತನಾದ ವ್ಯಕ್ತಿಗೆ ಅಲಹಾಬಾದ್ ನ್ಯಾಯಾಂಗ ರಕ್ಷಣೆ ನೀಡುತ್ತದೆ.

ಮೂಲಭೂತ ಹಕ್ಕುಗಳು ಸಜೀವವಾಗಿವೆ :

 1. ವಿಧಿ 21 ರಡಿಯಲ್ಲಿ ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿದೆ.
 2. ಸಾರ್ವಜನಿಕ ಆದೇಶ, ನೈತಿಕತೆ, ಆರೋಗ್ಯ ಮತ್ತು ಸಂವಿಧಾನದ ಭಾಗ-3ರ ಇತರ ನಿಬಂಧನೆಗಳಿಗೆ ಒಳಪಟ್ಟು ಧರ್ಮವನ್ನು ಮುಕ್ತವಾಗಿ ಹೇಳಿಕೊಳ್ಳಲು, ಆಚರಿಸಲು ಮತ್ತು ಪ್ರಚಾರ ಮಾಡಲು ಎಲ್ಲ ವ್ಯಕ್ತಿಗಳಿಗೆ ಸಮಾನ ಹಕ್ಕನ್ನು 25 ನೇ ವಿಧಿ ಕಲ್ಪಿಸಿದೆ.

SolarWinds hack:

 1. ಇತ್ತೀಚಿಗೆ ಅಮೇರಿಕಾದಲ್ಲಿ ಜರುಗಿದ ಸೈಬರ್‌ ಅಪರಾಧವಾಗಿದೆ.
 2. ಇದು ಅಮೇರಿಕಾದ ಸರ್ಕಾರ, ಅದರ ಏಜೆನ್ಸಿಗಳು ಮತ್ತು ಹಲವಾರು ಖಾಸಗಿ ಕಂಪನಿಗಳ ವಿರುದ್ಧದ ಅತಿದೊಡ್ಡ ಅಪರಾಧವಾಗಿದೆ.

ಹಿರಿಯ ಹುದ್ದೆಗಳಲ್ಲಿ ಅಧಿಕ ಮಹಿಳೆಯರನ್ನುನೇಮಿಸಿದ್ದಕ್ಕಾಗಿ ಪ್ಯಾರಿಸ್ ದಂಡ ವಿಧಿಸಿದೆ.

 1. 2018ರಲ್ಲಿ ಹೆಚ್ಚಿನ ಮಹಿಳೆಯರನ್ನು ಉನ್ನತ ಮಟ್ಟದ ಹುದ್ದೆಗಳಿಗೆ ನೇಮಕ ಮಾಡಿದ್ದಕ್ಕಾಗಿ ಮತ್ತು ಉದ್ಯೋಗದಲ್ಲಿ ಲಿಂಗ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ರಾಷ್ಟ್ರೀಯ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ಯಾರಿಸ್ ನಗರದ ಅಧಿಕಾರಿಗಳಿಗೆ 90,000 ಯುರೋ (80 ಲಕ್ಷ ರೂ.ಗಿಂತ ಹೆಚ್ಚಿನ) ದಂಡ ವಿಧಿಸಲಾಗಿದೆ.
 2. ಪ್ಯಾರಿಸ್ ಮೇಯರ್ ಅನ್ನಿ ಹಿಡಾಲ್ಗೊ – ನಗರದ ಸರ್ಕಾರಕ್ಕೆ ಹೆಚ್ಚಿನ ಮಹಿಳೆಯರನ್ನು ಕರೆತರುವ ಚಾಲನೆಗೆ ಕಾರಣರಾದರು – ನಗರ ಸಭೆಯ ಸಭೆಯಲ್ಲಿ ದಂಡವನ್ನು “ಅನ್ಯಾಯ”, “ಬೇಜವಾಬ್ದಾರಿ” ಮತ್ತು “ಅಸಂಬದ್ಧ” ಎಂದು ಟೀಕಿಸಿದ್ದಾರೆ.
 3. ‘ಸೌವಾಡೆಟ್ ಕಾನೂನು
  1. 2018 ರಲ್ಲಿ ಪ್ಯಾರಿಸ್ ನಗರ ಸಭಾಂಗಣದಲ್ಲಿ 11 ಮಹಿಳೆಯರು ಮತ್ತು ಐದು ಪುರುಷರನ್ನು ನಾಯಕತ್ವದ ಸ್ಥಾನಗಳಿಗೆ ನೇಮಿಸಲಾಯಿತು.
  2. ಶೇ 69 ರಷ್ಟು ನೇಮಕಾತಿಗಳು ಮಹಿಳೆಯರಿಗೆ ನೀಡಿದ್ದು, ತಾಂತ್ರಿಕವಾಗಿ 2013ರ ಕಾನೂನನ್ನು ಉಲ್ಲಂಘಿಸಿತ್ತು. ಇದನ್ನು ಸೌವಾಡೆಟ್ ಕಾನೂನುಎಂದು ಕರೆಯಲಾಗುತ್ತದೆ.
  3. ಇದು ಪ್ರತಿ ಲಿಂಗಕ್ಕೆ ಕನಿಷ್ಠ 40 ಶೇಕಡಾ ನೇಮಕಾತಿಗಳ ಅಗತ್ಯವಿರುತ್ತದೆ ಎಂದು ಅನುಮೋದಿಸಿತ್ತು.

CORPAT:

 1. ಇತ್ತೀಚೆಗೆ ಭಾರತ-ಇಂಡೋನೇಷ್ಯಾ ಸಹಭಾಗಿತ್ವದ ಸೇನಾ ಕಾರ್ಯಾಚರಣೆಯ 35ನೇ ಆವೃತ್ತಿ ನಡೆಯಿತು.
 2. ಭಾರತ ಮತ್ತು ಇಂಡೋನೇಷ್ಯಾ ನೌಕಾಪಡೆಗಳ ನಡುವೆ ನಡೆಸಲಾಯಿತು.
 3. ಈ ಪ್ರದೇಶದಲ್ಲಿ ಹಡಗು ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಸುರಕ್ಷತೆ ಖಚಿತಪಡಿಸುವುದು ಇದರ ಉದ್ದೇಶವಾಗಿದೆ.

ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯದ ಒಕ್ಕೂಟ (CDRI)

 1. 2019 ರಲ್ಲಿ ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ರವರ ಹವಾಮಾನ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರಾರಂಭಿಸಿದರು.
 2. ವಿಪತ್ತು & ಹವಾಮಾನ ಸ್ಥಿತಿಸ್ಥಾಪಕತ್ವದ ಮೂಲಸೌಕರ್ಯದ ವಿವಿಧ ಅಂಶಗಳ ಬಗ್ಗೆ ಜ್ಞಾನವನ್ನು ಉತ್ಪಾದಿಸುವ ಮತ್ತು ವಿನಿಮಯ ಮಾಡಿಕೊಳ್ಳುವ ವೇದಿಕೆ.
 3. ದೇಶಗಳು ತಮ್ಮ ಅಪಾಯದ ಸಂದರ್ಭ ಮತ್ತು ಆರ್ಥಿಕ ಅಗತ್ಯಗಳಿಗನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಸಾಮರ್ಥ್ಯ ಮತ್ತು ಅಭ್ಯಾಸಗಳನ್ನು ನವೀಕರಿಸಲು ಸಹಾಯ ಮಾಡುವ ಯಾಂತ್ರಿಕ ವ್ಯವಸ್ಥೆಯನ್ನು ರಚಿಸುತ್ತದೆ.

ಶನಿ ಮತ್ತು ಗುರುಗಳ ಕ್ರಿಸ್‌ಮಸ್ ಸ್ಟಾರ್ಸಂಯೋಗ

 1. ಸುಮಾರು 400 ವರ್ಷಗಳ ನಂತರ, ಸೌರವ್ಯೂಹದ ಎರಡು ದೊಡ್ಡ ಗ್ರಹಗಳಾದ ಶನಿ ಮತ್ತು ಗುರುಗಳು ಇಂದು ಆಕಾಶದಲ್ಲಿ ಹತ್ತಿರಕ್ಕೆ ಬರುವ ಖಗೋಳ ಘಟನೆಯನ್ನು “ಮಹಾ ಸಂಯೋಗ” ಎನ್ನಲಾಗಿದೆ. ಇದನ್ನು “ಕ್ರಿಸ್‌ಮಸ್ ಸ್ಟಾರ್” ಎಂದು ಕರೆಯಲಾಗುತ್ತದೆ.
 2. “ಗ್ರೇಟ್ ಸಂಯೋಗ”
 3. ಸಂಯೋಗವು ಶನಿ & ಗುರುಗಳಿಗೆ ವಿಶಿಷ್ಟವಲ್ಲ. ಭೂಮಿಯಿಂದ ನೋಡಿದಾಗ ಗ್ರಹಗಳು ಅಥವಾ ಕ್ಷುದ್ರಗ್ರಹಗಳು ಆಕಾಶದಲ್ಲಿ ಬಹಳ ಹತ್ತಿರವಿರುವಂತೆ ಕಂಡುಬರುವ ಘಟನೆಯಾಗಿದೆ.
 4. ಗ್ರಹಗಳ ಗಾತ್ರದಿಂದಾಗಿ ಖಗೋಳಶಾಸ್ತ್ರಜ್ಞರು ಗುರು ಮತ್ತು ಶನಿಯ ಸಂಯೋಗಕ್ಕೆ “ಶ್ರೇಷ್ಠ” ಪದವನ್ನು ಬಳಸುತ್ತಾರೆ.
 5. “ಗ್ರೇಟ್ ಕಂಜಂಕ್ಷನ್” ಸುಮಾರು 20 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಇದು ಪ್ರತಿ ಗ್ರಹವು ಸೂರ್ಯನ ಸುತ್ತ ಪರಿಭ್ರಮಿಸಲು ತೆಗೆದುಕೊಳ್ಳುವ ಸಮಯವನ್ನು ಅವಲಂಬಿಸಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos