Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
ವಿಷಯ : ವಿಶ್ವ ಭೌತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು.
1. Define Catchment area, Drainage basin and Watershed. Differentiate between the Himalayan River System and Peninsular River System. (250 Words)
1. ನದಿ ಪಾತ್ರ, ಜಲಾನಯನ ಪ್ರದೇಶಗಳನ್ನು ವ್ಯಾಖ್ಯಾನಿಸಿ. ಹಿಮಾಲಯದ ಮತ್ತು ಪರ್ಯಾಯ ಪ್ರಸ್ಥಭೂಮಿಯ ನದಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ವಿಷದಪಡಿಸಿ. (250 ಪದಗಳು)
Reference: Class-XI NCERT: India Physical Environment.
ಪ್ರಶ್ನೆಯ ಆಶಯ :
ಭಾರತದ ನದಿ ವ್ಯವಸ್ಥೆಯ ಅನನ್ಯತೆ.
ಉತ್ತರದ ರಚನೆ :
ಪೀಠಿಕೆ :
ರೇಖಾಚಿತ್ರದ ಮೂಲಕ ಜಲಾನಯನ ಪ್ರದೇಶ, ನದಿ ಪಾತ್ರ ಕುರಿತು ಬರೆಯಿರಿ.
ಮುಖ್ಯಭಾಗ :
ಉಗಮ, ವಿಸ್ತಾರ, ಕಣಿವೆ ಭಾಗ, ನದಿ ವ್ಯವಸ್ಥೆ, ನೀರಿನ ಹರಿವು, ಕರಾವಳಿ ಭಾಗದ ನಿರ್ಮಾಣ ಮುಂತಾದ ಅಂಶಗಳ ನೆಲೆಯಲ್ಲಿ ಹಿಮಾಲಯ ಮತ್ತು ಪರ್ಯಾಯ ಪ್ರಸ್ಥಭೂಮಿಯ ನದಿವ್ಯವಸ್ಥೆ ನಡುವೆ ತೌಲಾನಿಕತೆಯನ್ನು ವಿಷದಪಡಿಸಿ.
ಉಪಸಂಹಾರ :
ಉಭಯ ನದಿ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ಬರೆಯಿರಿ.
ವಿಷಯ : ವಿಶ್ವ ಭೌತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು.
2. What are the features of west flowing rivers of India? Assess the importance of west flowing rivers in India? (250 Words)
2. ಪಶ್ಚಿಮಾಭಿಮುಖವಾಗಿ ಹರಿಯುವ ಭಾರತದ ನದಿಗಳ ಲಕ್ಷಣಗಳಾವುವು? ಈ ನದಿಗಳ ಪ್ರಾಮುಖ್ಯತೆಯನ್ನು ಬರೆಯಿರಿ. (250 ಪದಗಳು)
Reference: Class-XI NCERT: India Physical Environment.
ಪ್ರಶ್ನೆಯ ಆಶಯ :
ಭಾರತದಲ್ಲಿ ನದಿ ವ್ಯವಸ್ಥೆಯ ಅನನ್ಯತೆ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಭಾರತದ ಸಾಮಾಜಿಕ, ರಾಜಕೀಯ, ಆರ್ಥಿಕ ವಲಯದಲ್ಲಿ ಬೀರುವ ಪರಿಣಾಮಗಳು.
ಉತ್ತರದ ರಚನೆ
ಪೀಠಿಕೆ :
ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಕುರಿತು ಬರೆಯಿರಿ.
- ಯಾವ ಯಾವ ನದಿಗಳು ಹರಿಯುತ್ತಿವೆ.
- ಬಹುತೇಕ ಪೂರ್ವಾಭಿಮುಖವಾಗಿ ಹರಿಯಲು ಕಾರಣ
ಮುಖ್ಯಭಾಗ :
ಭಾರತದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಗಾತ್ರ, ಪಾತ್ರ, ನದಿಮುಖಜ ಭೂಮಿ, ನದಿ ಅಳಿವೆ (Estuaries) ಮುಂತಾದವುಗಳ ಮೂಲಕ ಲಕ್ಷಣಗಳನ್ನು ವಿವರಿಸಿ.
ಇವುಗಳ ಪ್ರಾಮುಖ್ಯತೆಯನ್ನು ಬರೆಯಿರಿ
- ಜಲವಿದ್ಯುತ್ ಶಕ್ತಿ ಉತ್ಪಾದನೆ
- ಕೈಗಾರಿಕೆಗಳು
- ನೀರಾವರಿ & ಮೀನುಗಾರಿಕೆ
- ಪ್ರವಾಸೋಧ್ಯಮ ಮತ್ತು ಪಾರಿಸರಿಕ ಸಂರಕ್ಷಣೆ
ಉಪಸಂಹಾರ :
ವಾಯುಗುಣ ವೈಪರಿತ್ಯದ ಪ್ರಭಾವದಿಂದ ಇವುಗಳು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ.
ಸಾಮಾನ್ಯ ಅಧ್ಯಯನ – 2
ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು
3. Increasing the government expenditure on health is definitely the need of the hour but it must not just be centered on dealing with pandemic. Analyse. (250 words)
3. ಆರೋಗ್ಯದ ಸುಧಾರಣೆಗಾಗಿ ಸರ್ಕಾರ ವೆಚ್ಚವನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆಯಾಗಿದೆ. ಆದರೆ, ಇದು ಕೇವಲ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಅಥವಾ ನಿವಾರಿಸುವಲ್ಲಿ ಕೇಂದ್ರೀಕೃತವಾಗಬಾರದು. ವಿಶ್ಲೇಷಿಸಿ. (250 ಪದಗಳು)
Reference: Business Standard
ಪ್ರಶ್ನೆಯ ಆಶಯ :
ಭಾರತದಲ್ಲಿ ಆರೋಗ್ಯ ಕ್ಷೇತ್ರದ ಸುಧಾರಣೆಯ ಅಗತ್ಯತೆ
ಉತ್ತರದ ರಚನೆ :
ಪೀಠಿಕೆ :
ಭಾರತದಲ್ಲಿ ಆರೋಗ್ಯ ವಲಯದ ಚಿತ್ರಣವನ್ನು ನೀಡಿ. NFHS-5 ವರದಿಯ ಅಂಕಿಅಂಶಗಳ ಮೂಲಕ ಪುಷ್ಟಿ ನೀಡಿ.
ಮುಖ್ಯ ಭಾಗ:
- ಭಾರತೀಯ ಆರೋಗ್ಯ ಕ್ಷೇತ್ರದ ನ್ಯೂನತೆಗಳನ್ನು ವಿವರವಾಗಿ ಉಲ್ಲೇಖಿಸಿ. ಅಲ್ಲದೆ ಅಂಕಿಅಂಶಗಲ ಮೂಲಕ ವಿವರವಾದ ವಿಶ್ಲೇಷಣೆ ಮಾಡಿ.
- ಕೋವಿಡ್ -19 ಭಾರತದ ಆರೋಗ್ಯ ವ್ಯವಸ್ಥೆಯ ಈ ದುರ್ಬಲತೆಗಳನ್ನು ಹೇಗೆ ಬಹಿರಂಗಪಡಿಸಿದೆ ಎಂಬುದನ್ನು ನಮೂದಿಸಿ.
- ಸಾಂಕ್ರಾಮಿಕ ಮತ್ತು ಮುಂಬರುವ ಲಸಿಕೆ ಯೋಜನೆ ಆರೋಗ್ಯ ವಲಯವನ್ನು ಸುಧಾರಿಸುವಲ್ಲಿ ದೀರ್ಘಾವಧಿಯ ವಿಧಾನಕ್ಕಾಗಿ ಕ್ರಮಗಳನ್ನು ಸೂಚಿಸಿ.
- ಸಾರ್ವತ್ರಿಕ ವಿಮೆ, ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವುದು, ಸಂಶೋಧನಾ ಚಟುವಟಿಕೆಗಳು ಮತ್ತು ಒಟ್ಟಾರೆ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವಿಕೆ ಮುಂತಾದವುಗಳ ನೆಲೆಯಲ್ಲಿ ಕ್ರಮಗಳನ್ನು ಸೂಚಿಸಿ.
ಉಪಸಂಹಾರ :
ಸಮರ್ಪಕವಾದ ಯೋಜನೆ ಮತ್ತು ಅನುಷ್ಠಾನದ ಮೂಲಕ ಬಿಕ್ಕಟ್ಟನ್ನು ಅಥವಾ ಸವಾಲನ್ನು ಅವಕಾಶವಾಗಿ ರೂಪಂತರಿಸಬಹುದು.
ಸಾಮಾನ್ಯ ಅಧ್ಯಯನ – 3
ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆ, ದಿನನಿತ್ಯ ಜೀವನದ ಮೇಲಿನ ಪರಿಣಾಮಗಳು
4. The Polar Satellite Launch Vehicle (PSLV) is ISRO’s workhorse rocket. Elaborate. (250 words)
4. ದೃವೀಯ ಉಪಗ್ರಹ ಉಡಾವಣಾ ವಾಹನ (PSLV) ಇಸ್ರೋವಿನ ಕಾರ್ಯೋನ್ಮುಖ ರಾಕೆಟ್. ವಿವರಿಸಿ. (250 ಪದಗಳು)
References: isro.gov.in , isro.gov.in
ಪ್ರಶ್ನೆಯ ಹಿನ್ನೆಲೆ :
PSLV-C50 PSLVಯ 52 ನೇ ಹಾರಾಟವಾಗಿದ್ದು ‘XL’ ಸಂರಚನೆಯಲ್ಲಿ PSLVಯ 22 ನೇ ಹಾರಾಟವಾಗಿದೆ. (6 ಸ್ಟ್ರಾಪ್-ಆನ್ ಮೋಟರ್‌ಗಳೊಂದಿಗೆ). ಇದು ಶ್ರೀಹರಿಕೋಟಾದಿಂದ ಉದಾವನಣೆಯಾದ 77ನೇ ವಾಹನ ಕಾರ್ಯಾಚರಣೆಯಾಗಿದೆ.
ಪ್ರಶ್ನೆಯ ಆಶಯ :
ಇಸ್ರೋವಿನ ಸಾಧನೆಗಳು ಮತ್ತು ತಾಂತ್ರಿಕ ಮೈಲುಗಲ್ಲುಗಳು.
ಉತ್ತರದ ರಚನೆ :
ಪೀಠಿಕೆ :
ಇಸ್ರೋವಿನ ಉಪಗ್ರಹ ಉಡಾವಣಾ ಯಂತ್ರಗಳ ವಿಕಸನವನ್ನು ಕುರಿತು ಬರೆಯಿರಿ.
ಮುಖ್ಯಭಾಗ:
- PSLV ರಾಕೆಟ್‌ಗಳ ವಿವರಾಂಶಗಳು ಮತ್ತು ಕಾರ್ಯವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ. ಇದನ್ನು ಇಸ್ರೋ ನಡೆಸಿದ ಹೆಚ್ಚಿನ ಉಡಾವಣೆಗಳಿಗೆ ಬಳಸಲಾಗಿದೆ.
- PSLV ಮತ್ತು ಅದರ ವೈವಿಧ್ಯಮಯ ಕಾರ್ಯಗಳ ಪ್ರಯಾಣವನ್ನು ವಿಷದಪಡಿಸಿ. ಚಂದ್ರಯಾನ್ -1 ಮತ್ತು MoM ಮುಂತಾದ ಯಶಸ್ವಿ ಉಡಾವಣೆಗಳ ಕುರಿತು ಬರೆಯಿರಿ.
- GSLVಯೊಂದಿಗೆ ತೌಲಾನಿಕರಿಸಿ ಮತ್ತು ಅದರ ಮಿತಿಗಳನ್ನು ಸ್ಪಷ್ಟಪಡಿಸಿ.
ಉಪಸಂಹಾರ :
PSLVಯ ಪ್ರಾಮುಖ್ಯತೆ ಕುರಿತು ಬರೆಯಿರಿ.
ಸಾಮಾನ್ಯ ಅಧ್ಯಯನ – 4
ವಿಷಯ : ಸಾರ್ವಜನಿಕ ಆಡಳಿತದಲ್ಲಿ ಮೌಲ್ಯಗಳು ಮತ್ತು ನೈತಿಕತೆ : ಸ್ಥಿತಿ ಮತ್ತು ಸಮಸ್ಯೆಗಳು; ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ನೈತಿಕ ಸಂದಿಗ್ಧತೆ; ನೈತಿಕತೆಯ ಮೂಲಗಳಾಗಿ ಕಾನೂನು, ನಿಯಮಾವಳಿ ಮತ್ತು ಆತ್ಮಸಾಕ್ಷಿಯ ಪಾತ್ರ
5. Dedication to public service is the first step towards good governance but in order to achieve good governance you need to go much beyond that first step. Elaborate. (150 Words)
5. ನಾಗರೀಕ ಸೇವೆಯಲ್ಲಿ ಬದ್ಧತೆ ಉತ್ತಮ ಆಡಳಿತದ ಮೊದಲ ಹೆಜ್ಜೆಯಾಗಿದೆ. ಆದರೆ, ಉತ್ತಮ ಆಡಳಿತದ ಅನಾವರಣೆಗೆ ನಾವು ಮೊದಲ ಹೆಜ್ಜೆಯ ಗಡಿಯನ್ನು ಮೀರಬೇಕಾಗಿದೆ. ವಿಷದಪಡಿಸಿ. (150 ಪದಗಳು)
Reference: Ethics, Integrity and Aptitude by Lexicon Publications.
ಪ್ರಶ್ನೆಯ ಆಶಯ :
ಉತಮ ಆಡಳಿತದ ಅನುಷ್ಟಾನದಲ್ಲಿ ನಾಗರೀಕ ಸೇವಾ ಮೌಲ್ಯಗಳ ಪಾತ್ರ
ಉತ್ತರ ರಚನೆ
ಪೀಠಿಕೆ:
ನಾಗರೀಕ ಸೇವೆ, ಉತ್ತಮ ಆಡಳಿತ ಮತ್ತು ಬದ್ದತೆಗಳ ನಡುವಿನ ಸಂಬಂಧವನ್ನು ವಿಷದಪಡಿಸಿ.
ಮುಖ್ಯಭಾಗ:
- ಸಾರ್ವಜನಿಕ ಸೇವೆಯಲ್ಲಿನ ಬದ್ಧತೆ ಉತ್ತಮ ಆಡಳಿತದ ಮೊದಲ ಹೆಜ್ಜೆಯಾಗಿದೆ ಎಂಬುದನ್ನು ವಿವರಿಸಿ.
- ಉತ್ತಮ ಆಡಳಿತದ ಅನುಷ್ಟಾನದಲ್ಲಿ ನಿರ್ಣಾಯಕ ಪಾತ್ರವಹಿಸುವ ಇತರೆ ಅಂಶಗಳನ್ನು ವಿವರಿಸಿ.
ಉಪಸಂಹಾರ:
ಉತ್ತಮ ಆಡಳಿತದ ಅಗತ್ಯತೆಯನ್ನು ಬರೆಯಿರಿ.
ವಿಷಯ : ವಿಶ್ವದ ಮತ್ತು ಭಾರತದ ತತ್ವಜ್ಞಾನಿಗಳ, ಚಿಂತಕರ ಕೊಡುಗೆಗಳು
6. What is your interpretation of Kant’s Categorical Imperative? (150 Words)
6. ಕಾಂಟ್’ನ ‘Categorical Imperative’ ಕುರಿತ ನಿಮ್ಮ ನಿರ್ವಚನೆಯನ್ನು ವಿವರಿಸಿ. (150 ಪದಗಳು)
Reference: plato.stanford.edu
ಪ್ರಶ್ನೆಯ ಆಶಯ :
ಕಾಂಟ್’ನ ನೀತಿಶಾಸ್ತ್ರದ ಅಧ್ಯಯನ
ಉತ್ತರದ ರಚನೆ
ಪೀಠಿಕೆ:
ಕಾಂಟ್ ಸಿದ್ಧಾಂತವನ್ನು ಬರೆಯಿರಿ.
ಮುಖ್ಯ ಭಾಗ:
ಉದಾಹರಣೆ ಸಹಿತವಾಗಿ ನಿಮ್ಮ ಅಭಿಪ್ರಾಯವನ್ನು ವಿಷದಪಡಿಸಿ. ಅಲ್ಲದೆ, ಸಾರ್ವತ್ರಿಕ ನಿತಿಯತೆಯ ಕಾನೂನು ಮುಂತಾದವನ್ನು ಉಲ್ಲೇಖಿಸಿ.
ಉಪಸಂಹಾರ:
ಈ ಸಿದ್ದಾಂತದ ಪ್ರಾಮುಖ್ಯತೆಯನ್ನು ಬರೆಯಿರಿ