Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 9 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ : ವಿಶ್ವ ಭೌತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು

1. What do you understand by the continental drift theory ? Discuss the evidences in support of it and also throw light on the criticism faced by it. (250 words)

1. ಭೂಖಂಡಗಳ ಅಲೆತ ಸಿದ್ಧಾಂತವನ್ನು ಅರ್ಥೈಸಿ? ಇದಕ್ಕೆ ಆಧಾರಭೂತವಾದ ದಾಖಲೆಗಳನ್ನು ಮತ್ತು ಈ ಸಿದ್ಧಾಂತ ಕುರಿತಾದ ಟೀಕೆಯನ್ನು ಚರ್ಚಿಸಿ. (250 ಪದಗಳು)

Reference: Fundamentals of Physical Geography NCERT class XI

ಪ್ರಶ್ನೆಯ ಆಶಯ

ಭೂ ಖಂಡಗಳ ನಿರ್ಮಾಣ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಸಿದ್ಧಾಂತಗಳ ವಿಕಸನ

ಉತ್ತರದ ರಚನೆ

ಪೀಠಿಕೆ:

ಭೂ ಖಂಡಗಳ ಉಗಮದ ಕುರಿತು ಬರೆಯಿರಿ. ಆ ಮೂಲಕ ಭೂಖಂಡಗಳ ಅಲೆತ ಸಿದ್ಧಾಂತ ಕುರಿತು ಬರೆಯಿರಿ.

ಮುಖ್ಯಭಾಗ:

ಕೆಳಗಿನವುಗಳನ್ನು ಕುರಿತು ಚರ್ಚಿಸಿ

  1. ಅಲ್ಫ್ರೆಡ್ ವೆಗಿನರ್ ಸಿದ್ಧಾಂತದ ಪರಿಕಲ್ಪನೆಯನ್ನು ರೇಖಾಚಿತ್ರದ ಸಹಿತ ವಿವರಿಸಿ.
  2. ಭೂಖಂಡಗಳ ಅಲೆತದ ಹಿಂದಿರುವ ಬಲಗಳು
  3. ಭೂ ಖಂಡಗಳ ಅಲೆತದ ಪುರಾವೆಗಳು
  4. ಈ ಸಿದ್ಧಾಂತದ ಮಿತಿಗಳನ್ನು ಮತ್ತು ಇತರೆ ವಿಜ್ಞಾನಿಗಳ ಟೀಕೆಯನ್ನು ಬರೆಯಿರಿ.

ಉಪಸಂಹಾರ:

ಈ ಸಿದ್ಧಾಂತದ ಪ್ರಾಮುಖ್ಯತೆಯ ಕುರಿತು ಬರೆಯಿರಿ.

 

ವಿಷಯ : ವಿಶ್ವ ಭೌತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು

2. Discuss the concept of Sea-floor spreading and explain the relationship between underwater ocean ridges and the seafloor spreading theory. (250 words)

2. ಸಾಗರಿಕ ತಳದ ವಿಸ್ತರಣಾ ಸಿದ್ಧಾಂತವನ್ನು ಚರ್ಚಿಸಿ. ಸಾಗರಿಕ ಬದುಗಳು (ಸಮಾನಂತರ ಶ್ರೇಣಿಗಳು) ಮತ್ತು ಸಾಗರಿಕ ತಳದ ವಿಸ್ತರಣಾ ಸಿದ್ಧಾಂತದ ನಡುವಿನ ಸಂಬಂಧವನ್ನು ಕುರಿತು ವಿವರಿಸಿ. (250 ಪದಗಳು)

Reference: National Geographic 

ಪ್ರಶ್ನೆಯ ಆಶಯ

ಸಾಗರದಾಳದ ಪ್ರಾಕೃತಿಕ ಲಕ್ಷಣಗಳು ಮತ್ತು ಸಾಗರದಾಳದ ವಿಸ್ತರಣಾ ಪರಿಕಲ್ಪನೆ ನಡುವಿನ ಸಂಬಂಧ 

ಉತ್ತರದ ರಚನೆ

ಪೀಠಿಕೆ :

ಸಾಗರದಾಳದ ವಿಸ್ತರಣೆಯನ್ನು ಕುರಿತು ಬರೆಯಿರಿ. ಈ ಪರಿಕಲ್ಪನೆಯ ಉಗಮ ಕುರಿತು ಬರೆಯಿರಿ.

ಮುಖ್ಯಭಾಗ:

ಸಾಗರಿಕ ತಳಭಾಗದ ವಿಸ್ತರಣೆಗೆ ಕಾರಣಗಳನ್ನು ವಿವರಿಸಿ. ಇದರ ಹಿಂದಿನ ಪ್ರಕ್ರಿಯೆಯನ್ನು ಬರೆಯಿರಿ.

ಈ ಪರಿಕಲ್ಪನೆಯನ್ನು ಸಚಿತ್ರವಾಗಿ ವಿವರಿಸಿ.

ನಂತರ ಸಾಗರಿಕ ಸಮನಾಂತರ ಪರ್ವತ ಶ್ರೇಣಿ ಮಾತು ಈ ಪರಿಕಲ್ಪನೆ ನಡುವಿನ ಸಂಬಂಧವನ್ನು ಚರ್ಚಿಸಿ.

ಉಪಸಂಹಾರ:

ಇದರ ಪ್ರಾಮುಖ್ಯತೆಯನ್ನು ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 2


 

ವಿಷಯ: ದುರ್ಬಲ ವರ್ಗಗಳ ಕಲ್ಯಾಣ ಮತ್ತು ರಕ್ಷಣೆಗೆ ಕೇಂದ್ರ ಮತ್ತು ರಾಜ್ಯಗಳ ಯೋಜನೆ, ಶಾಸನ, ಸಂಸ್ಥೆ ಮತ್ತು ಪ್ರಾಧಿಕಾರಗಳು; ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

3. Account for specific issues that urban poor face from the perspective of social protection. Also explain in what way giving priority to women would aid to address these issues. (250 words)

3. ಸಾಮಾಜಿಕ ರಕ್ಷಣೆ ಮತ್ತು ಭದ್ರತೆಯ ನೆಲೆಯಲ್ಲಿ ನಗರ ಭಾಗದ ಬಡವರು ಎದುರಿಸುವ ಸಮಸ್ಯೆಗಳಾವುವು? ಈ ಸಮಸ್ಯೆ ನಿವಾರಿಸುವಲ್ಲಿ ಮಹಿಳಾ ಸಬಲಿಕರಣಕ್ಕೆ ನೀಡುವ ಪ್ರಾಧಾನ್ಯತೆಯ ಪಾತ್ರವನ್ನು ವಿವರಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ

ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣದ ಪ್ರಾಮುಖ್ಯತೆ ಮತ್ತು ನಗರೀಕರಣದ ಪರಿಣಾಮಗಳು

ಉತ್ತರದ ರಚನೆ

ಪೀಠಿಕೆ:

ನಗರಭಾಗದ ಬಡವರ ಸಮಸ್ಯೆಗಳನ್ನು ಬಿಂಬಿಸುವ ಅಂಕಿಅಂಶಗಳನ್ನು ಬರೆಯಿರಿ.

ಮುಖ್ಯಭಾಗ:

  1. ಸಾಮಾಜಿಕ ರಕ್ಷಣೆ ಮತ್ತು ಭದ್ರತೆಯ ನೆಲೆಯಲ್ಲಿ ನಗರ ಭಾಗದ ಬಡವರು ಎದುರಿಸುವ ಸಮಸ್ಯೆಗಳನ್ನು ವಿವರಿಸಿ
    1. ಸಾಮಾಜಿಕ ನೆರವು
    2. ಸಬ್ಸಿಡಿ
    3. ಶುಲ್ಕದ ನಿರಚನೆ
    4. ಆರ್ಥಿಕ ಭದ್ರತೆ ಮುಂತಾದವು

ಈ ಸಮಸ್ಯೆಗಳ ನಿವಾರಣೆಯಲ್ಲಿಮಹಿಳೆಯರ ಪಾತ್ರದ ಮಹತ್ವವನ್ನು ವಿವರಿಸಿ.

ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಬರೆಯಿರಿ.

  1. ನಗರದ ಕೊಳೆಗೇರಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾರ್ವತ್ರೀಕರಣ
  2. ರಾಷ್ಟ್ರೀಯ ಆಹಾರ ಭದ್ರತೆ
  3. ಉದ್ಯೋಗಾಧಾರಿತ ನೆರವು ಮುಂತಾದವು

ಉಪಸಂಹಾರ:

ಮುಂದಿನ ಕ್ರಮಗಳ ಕುರಿತು ಬರೆಯಿರಿ

 

 ವಿಷಯ:  ಆಡಳಿತದ ಪ್ರಮುಖ ಅಂಶಗಳು, ಇ-ಆಡಳಿತದ ಉದ್ದೇಶ, ಮಿತಿಗಳು ಮತ್ತು ಸಾಮರ್ಥ್ಯ, ನಾಗರೀಕ ಸನ್ನದು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂಸ್ಥಿಕ ಕ್ರಮಗಳು

4. Evaluate the role of telemedicine in effective disease management in the country. Also reckon the measures taken by the government in this regard.(250 words)

4. ದೇಶದಲ್ಲಿ ರೋಗ ನಿರ್ವಹಣೆಯ ಪರಿಣಾಮಕಾರಿತ್ವ ವೃದ್ಧಿಸುವಲ್ಲಿ ಟೆಲಿ-ಮೆಡಿಸಿನ್ ಪಾತ್ರವನ್ನು ಪರಿಶೀಲಿಸಿ. ಈ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳನ್ನು ಚರ್ಚಿಸಿ. (250 ಪದಗಳು)

Reference: The Hindu

ಪ್ರಶ್ನೆಯ ಆಶಯ

ರೋಗ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ತಂತ್ರಜ್ಞಾನದ ಅಳವಡಿಕೆ.

ಉತ್ತರದ ರಚನೆ

ಪೀಠಿಕೆ:

ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣದಲ್ಲಿ ತಂತ್ರಜ್ಞಾನದ ಪಾತ್ರ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಮುಖ್ಯಭಾಗ

Tele-medicine ಪರಿಕಲ್ಪನೆಯನ್ನು ಕುರಿತು ಬರೆಯಿರಿ. ಇದರ ಅಗತ್ಯತೆಯನ್ನು ಚರ್ಚಿಸಿ

ಇ-ಸಂಜೀವಿನಿಯಂತಹ Tele-medicine ಕುರಿತು ವಿವರಿಸಿ.

  1. ಆರೋಗ್ಯ ಸೇವೆಗಳ ಪೂರೈಕೆ ವೃದ್ಧಿ
  2. ರೋಗ ನಿಯಂತ್ರಣ ಮತ್ತು ನಿರ್ವಹಣೆ ಪ್ರಕ್ರಿಯೆ
  3. ಆರೋಗ್ಯದ ಕುರಿತು ಜಾಗೃತಿ

ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಬರೆಯಿರಿ.

ಉಪಸಂಹಾರ:

ಗ್ರಾಮೀಣ ಆರೋಗ್ಯ ಸುಧಾರಣೆಯಲ್ಲಿ ಇದರ ಪಾತ್ರ ಕುರಿತು ಬರೆಯಿರಿ

 

ವಿಷಯ : GS-2: ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

 GS-3: ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು

5. “Exposure to lead pollution undermines a generation of potential”, Critically analyse the statement in the light of recent incidence of Eluru mystery disease in the country. (250 words)

5. ಸೀಸದ ಮಾಲಿನ್ಯದ (Lead Pollution) ಪರಿಣಾಮದಿಂದಾಗಿ ಸಾಮರ್ಥ್ಯ ವೃದ್ಧಿ ಕುಂಟಿತವಾಗುವುದು. ಈ ಹೇಳಿಕೆಯನ್ನು ಇತ್ತೀಚಿಗೆ ದೇಶದಲ್ಲಿ ಸುದ್ದಿಯಲ್ಲಿದ್ದ “ಎಲುರು” (Eluru) ರೋಗದ ಹಿನ್ನೆಲೆಯಲ್ಲಿ ವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿ. (250 ಪದಗಳು)

Reference: Indian Express 

ಪ್ರಶ್ನೆಯ ಹಿನ್ನೆಲೆ

ಇತ್ತೀಚಿಗೆ ಸೀಸದ ಮಾಲಿನ್ಯದಿಂದ ಕನಿಷ್ಠ 550 ಮಂಡಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಪ್ರಶ್ನೆಯ ಆಶಯ

ಸೀಸ ಮಾಲಿನ್ಯ ಮತ್ತು ಅದು ಆರೋಗ್ಯದ ಮೇಲೆ ಬೀರುವ ಪರಿಣಾಮ

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆಯನ್ನು ವಿವರಿಸಿ.

ಮುಖ್ಯಭಾಗ:

  1. ಸೀಸ ಮಾಲಿನ್ಯದ ಮೂಲಗಳನ್ನು ಕುರಿತು ಬರೆಯಿರಿ
  2. ಸೀಸ ಮಾಲಿನ್ಯದ ಪರಿಣಾಮಗಳನ್ನು ವಿವರಿಸಿ
  3. ಇದು ಜನತೆಯ ಆರೋಗ್ಯ ಮತ್ತು ಸಾಮರ್ಥ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎನ್ನುವುದನ್ನು ಚರ್ಚಿಸಿ

ಉಪಸಂಹಾರ:

ದೀರ್ಘಾವಧಿ ಮತ್ತು ಅಲ್ಪಾವಧಿ ಕ್ರಮಗಳನ್ನು ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 4


 

ವಿಷಯ : ಮನೋಧೋರಣೆ : ಆಶಯ, ರಚನೆ ಮಾತು ಕಾರ್ಯಗಳು; ಆಲೋಚನೆ ಮತ್ತು ನಡತೆಯೊಂದಿಗಿನ ಸಂಬಂಧ; ನೀತಿಯತೆ ಮತ್ತು ರಾಜಕೀಯ ಮನೋಧೋರಣೆ; ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆ

6. What are the cognitive approaches to persuasion? Discuss with examples.(250 words) 

6. ಮನವೊಲಿಕೆಯ ಭೌದ್ಧಿಕ ಮಾದರಿಗಳನ್ನು ವಿವರಿಸಿ. ಇದನ್ನು ಉದಾಹರಣೆ ಸಹಿತ ಚರ್ಚಿಸಿ (250 ಪದಗಳು)

Reference: Ethics, Integrity and Aptitude by Lexicon Publications

ಪ್ರಶ್ನೆಯ ಆಶಯ

ಭೌದ್ಧಿಕ ಸಾಮರ್ಥ್ಯದ ಮಹತ್ವ ಮತ್ತು ವ್ಯವಸ್ಥೆಯಲ್ಲಿ ಮನವೊಲಿಕೆಯ  ಅಗತ್ಯತೆ

ಉತ್ತರದ ರಚನೆ

ಪೀಠಿಕೆ:

ಮನವೊಲಿಕೆಯನ್ನು ಕುರಿತು ಬರೆಯಿರಿ

ಮುಖ್ಯಭಾಗ:

ಮನವೊಲಿಕೆಯ ವಿವಿಧ ಮಾದರಿಗಳನ್ನು ಚರ್ಹಿಸಿ. ಈ ಮಾದರಿಗಳ ನೆಲೆಯಲ್ಲಿ  ತತ್ವಜ್ಞಾನಿಗಳ ಆಲೋಚನಾ ಕ್ರಮವನ್ನು ವಿಷದಪಡಿಸಿ.

ಉದಾಹರಣೆ ಸಹಿತ ಇದನ್ನು ವಿವರಿಸಿ.

ಆಡಳಿತದಲ್ಲಿ ಮತ್ತು ವ್ಯವಸ್ಥಯಲ್ಲಿ ಮನವೊಲಿಕೆಯ ಅಗತ್ಯತೆಯನ್ನು ಚರ್ಚಿಸಿ.

ಉಪಸಂಹಾರ:

ಮನವೊಲಿಕೆಯ ಮಹತ್ವವನ್ನು ಕುರಿತು ಬರೆಯಿರಿ

 

ವಿಷಯ : ಸಾರ್ವಜನಿಕ ಆಡಳಿತದಲ್ಲಿ ಮೌಲ್ಯಗಳು ಮತ್ತು ನೈತಿಕತೆ : ಸ್ಥಿತಿ ಮತ್ತು ಸಮಸ್ಯೆಗಳು; ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ನೈತಿಕ ಸಂದಿಗ್ಧತೆ; ನೈತಿಕತೆಯ ಮೂಲಗಳಾಗಿ ಕಾನೂನು, ನಿಯಮಾವಳಿ ಮತ್ತು ಆತ್ಮಸಾಕ್ಷಿಯ ಪಾತ್ರ; ಹೊಣೆಗಾರಿಕೆ ಮತ್ತು ನೈತಿಕ ಆಡಳಿತ; ಆಡಳಿತದಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆ; ಅಂತರಾರಾಷ್ಟ್ರೀಯ ಸಂಬಂಧ ಮತ್ತು ಹಣಕಾಸಿನಲ್ಲಿ ನೈತಿಕ ಸಮಸ್ಯೆಗಳು; ಔದ್ಯೋಗಿಕ ಆಡಳಿತ

7. Explain the factors which determine an employee’s dedication to public service. (250 words)

7. ಸಾರ್ವಜನಿಕ ಸೇವೆ ಕುರಿತ ಬದ್ಧತೆಯನ್ನು ಪ್ರಭಾವಿಸುವ ಅಂಶಗಳನ್ನು ವಿವರಿಸಿ. (250 ಪದಗಳು)

Reference: Ethics, Integrity and Aptitude by Lexicon Publications

ಪ್ರಶ್ನೆಯ ಆಶಯ

ಸಾರ್ವಜನಿಕ ಸೇವೆಯಲ್ಲಿ ಅಗತ್ಯವಾದ ಮೌಲ್ಯಗಳ ಅನಾವರಣಾ.

ಉತ್ತರದ ರಚನೆ

ಪೀಠಿಕೆ:

ಸಾಮಾನ್ಯ ಪದಗಳಲ್ಲಿ ‘ಬದ್ಧತೆ’ಯ  ಅರ್ಥವನ್ನು ಉದಾಹರಣೆ ಸಹಿತ ಬರೆಯಿರಿ.

ಮುಖ್ಯಭಾಗ:

ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿಗಳ ಬದ್ಧತೆಯನ್ನು ನಿರ್ಧರಿಸುವ ಅಂಶಗಳನ್ನು ವಿವರಿಸಿ.

ಸಾರ್ವಜನಿಕ ಸೇವೆಯಲ್ಲಿ ‘ಬದ್ಧತೆಯ’ ಅಗತ್ಯತೆಯನ್ನು ಚರ್ಚಿಸಿ.

ಸಾರ್ವಜನಿಕ ಸೇವೆಯಲ್ಲಿ ‘ಬದ್ಧತೆಯನ್ನು ನೆಲೆಗೊಳಿಸುವ ಮಾರ್ಗಗಳನ್ನು ತಿಳಿಸಿ.

ಉಪಸಂಹಾರ:

ಸಾರ್ವಜನಿಕ ಸೇವಾ ಮೌಲ್ಯಗಳ ಅಗತ್ಯತೆ ಬರೆಯಿರಿ


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos