ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 8 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

Topic: Geomorphic Processes, Weathering Erosion and Mass Movements

1. What do you understand by weathering and mass movements? How does weathering, mass wasting and erosion change the landscape together? Explain. (250 words)

1. ಶಿಥಿಲೀಕರಣ ಮತ್ತು ಭೂ ಕುಸಿತವನ್ನು ವಿವರಿಸಿ. ನಗ್ನೀಕರಣ, ಶಿಥಿಲೀಕರಣಗಳು ಭೂ ಮೇಲ್ಮೈ ಸ್ವರೂಪವನ್ನು ರೂಪಾಂತರಿಸುವ ರೀತಿಯನ್ನು ಕುರಿತು ಬರೆಯಿರಿ. (250 ಪದಗಳು)

Reference: World Geography by G C Leong

ಪ್ರಶ್ನೆಯ ಆಶಯ

ಭೂ ಮೇಲ್ಮೈಯನ್ನು ರೂಪಿಸುವ ಅಂಶಗಳನ್ನು ಕುರಿತು ಅರಿಯುವುದು.

ಉತ್ತರದ ರಚನೆ

ಪೀಠಿಕೆ:

ಬಹಿರ್ಜನಿತ ಶಕ್ತಿಗಳ ಕುರಿತು ಸಂಕ್ಷಿಪ್ತವಾಗಿ ನರೆಯಿರಿ.

ಮುಖ್ಯ ಭಾಗ:

ಶಿಥಿಲೀಕರಣ, ನಗ್ನೀಕರಣ ಮತ್ತು ಭೂ ಕುಸಿತದ ಪ್ರಕ್ರಿಯೆಯ ಕುರಿತು ಬರೆಯಿರಿ.

ಭೂಸ್ವರೂಪಗಳ ನಿರ್ಮಾಣಕ್ಕೆ ಕಾರಣೀಭೂತವಾದ ಅಂಶಗಳನ್ನು ವಿವರಿಸಿ.

ಉದಾಹರಣೆ ಸಹಿತವಾಗಿ ಬಹಿರ್ಜನಿತ ಶಕ್ತಿಗಳ ಕುರಿತು ಚರ್ಚಿಸಿ.

ಉಪಸಂಹಾರ:

ವಿವಿಧ ಭೂ ಸ್ವರೂಪಗಳ ಮಹತ್ವ ಕುರಿತು ಬರೆಯಿರಿ.

 

ವಿಷಯ :  ವಿಶ್ವ ಭೌತಿಕ ಭೂಗೋಳಶಾಸ್ತ್ರದ ವೈಲಕ್ಷಣಗಳು

2. Discuss in detail the Aeolian landforms with suitable examples. (250 words)

2. ವಾಯುವಿನ ಚಲನೆ ಅಥವಾ ಮಾರುತಗಳಿಂದಾದ ಭೌಗೋಳಿಕ ಮೇಲ್ಮೈ ಲಕ್ಷಣಗಳನ್ನು (250 ಪದಗಳು)

Reference: World Geography by G C Leong

ಪ್ರಶ್ನೆಯ ಆಶಯ

ನಗ್ನೀಕರಣ ಮತ್ತು ಶಿಥಿಲೀಕರಣದ ಮಹತ್ವ ಹಾಗೂ ಭೂ ಮೇಲ್ಮೈ ಲಕ್ಷಣಗಳನ್ನು ರೂಪಿಸುವಲ್ಲಿ ಅವುಗಳ ಪಾತ್ರ

ಉತ್ತರದ ರಚನೆ

ಪೀಠಿಕೆ:

ವಾಯುವಿನ ಚಲನೆಯಿಂದ ಉಂಟಾಗುವ ನಗ್ನೀಕರಣ ಮತ್ತು ಶಿಥಿಲೀಕರಣದ ಕುರಿತು ಬರೆಯಿರಿ

ಮುಖ್ಯಭಾಗ:

ಮಾರುತಗಳ ಚಲನೆಯಿಂದ ಉಂಟಾಗುವ ಸವಕಳಿ ಮತ್ತು ಸಂಚಯನಗಳ ಕುರಿತು ಬರೆಯಿರಿ. ಇವುಗಳಿಂದ ರೂಪಿತವಾದ ಭೂ ಸ್ವರೂಪಗಳನ್ನು ಕುರಿತು ಬರೆಯಿರಿ.

ಈ ಭೂ ಸ್ವರೂಪಗಳನ್ನು ಚಿತ್ರ ಸಹಿತ ವಿವರಿಸಿ.

ಉಪಸಂಹಾರ:

ಈ ಭೂ ಸ್ವರೂಪಗಳ ಮಹತ್ವ ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 2


 

ವಿಷಯ : ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು

3. What are the issues with current labour laws in the country? Examine the need for carrying out labour reforms to progress on the performance of India’s manufacturing sector. (250 words)

3. ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳಲ್ಲಿನ ಸಮಸ್ಯೆಗಳನ್ನುಬರೆಯಿರಿ. ಭಾರತದ ತಯಾರಿಕಾ ವಲಯದ ದಕ್ಷತೆಯನ್ನು ವೃದ್ಧಿಸಲು ಅಗತ್ಯವಿರುವ ಕಾರ್ಮಿಕ ಕಾನೂನುಗಳ ಸುಧಾರಣೆಯನ್ನು ಚರ್ಚಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಹಿನ್ನೆಲೆ

ಕೇಂದ್ರ ಸರ್ಕಾರ ಇತ್ತೀಚಿಗೆ 29 ಕಾರ್ಮಿಕ ಕಾನೂನುಗಳನ್ನು ಕ್ರೋಡಿಕರಿಸಿ ನಾಲ್ಕು ಕಾನೂನುಗಳನ್ನಾಗಿಸಿದೆ.

ಪ್ರಶ್ನೆಯ ಆಶಯ

ದೇಶದ ಪ್ರಗತಿಯಲ್ಲಿ ತಯಾರಿಕಾ ವಲಯದ ಮಹತ್ವ ಮತ್ತು ಕಾರ್ಮಿಕ ಕಾನೂನುಗಳು ಈ ನಿಟ್ಟಿನಲ್ಲಿ ನಿರ್ವಹಿಸುವ ಪಾತ್ರ.

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಮುಖ್ಯಭಾಗ:

ಅಸ್ತಿತ್ವದಲ್ಲಿರುವ ಕಾರ್ಮಿಕ ಕಾನೂನುಗಳಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿ.

  1. ಅನುಷ್ಠಾನದ ರೀತಿ
  2. ವ್ಯಾಪ್ತಿಯ ಪ್ರಮಾಣ
  3. ಪ್ರಾದೇಶಿಕ ಅಸಮಾನತೆಯನ್ನು ನಿವಾರಣೆ ಮುಂತಾದವು

ಈ ಸಮಸ್ಯೆ ಮತ್ತು ಸವಾಲುಗಳನ್ನು ನಿವಾರಿಸಲು ಅಗತ್ಯವಾದ ಸುಧಾರಣೆಗಳನ್ನು ಬರೆಯಿರಿ.

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ತಯಾರಿಕಾ ವಲಯದ ಪ್ರಾಮುಖ್ಯತೆಯನ್ನು ಬರೆಯಿರಿ. ಇದರಲ್ಲಿ  ಕಾರ್ಮಿಕ ಕಾನೂನುಗಳು ನಿರ್ವಹಿಸುವ ಪಾತ್ರವನ್ನು ಬರೆಯಿರಿ.

ಉಪಸಂಹಾರ:

ಮುಂದಿನ ಮಾರ್ಗಗಳನ್ನು ಕುರಿತು ಬರೆಯಿರಿ


ಸಾಮಾನ್ಯ ಅಧ್ಯಯನ – 3


 

ವಿಷಯ : ವಿವಿಧ ಭದ್ರತಾ ಪಡೆಗಳು ಮತ್ತು ಸಂಸ್ಥೆಗಳು ಹಾಗೂ ಅವುಗಳ ಧ್ಯೇಯ; ಗಡಿ ಭಾಗದಲ್ಲಿ ಭದ್ರತೆಯ ಸವಾಲುಗಳು ಮತ್ತು ಗಡಿ ನಿರ್ವಹಣೆ – ಭಯೋತ್ಪಾದನೆ ಮತ್ತು ವ್ಯವಸ್ಥಿತ (ಸಂಘಟಿತ) ಅಪರಾಧಗಳ ನಡುವಿನ ಸಂಬಂಧ

4. Deliberate upon the possible role that Intelligence agencies in India can and must play in tracking the ecological threats and epidemics. (250 words)

4. ಭಾರತದಲ್ಲಿ ಪಾರಿಸರಿಕ ಅಪಾಯ ಮತ್ತು ಸಾಂಕ್ರಾಮಿಕಗಳ ನಿಯಂತ್ರಣ ಪ್ರಕ್ರಿಯೆಯಲ್ಲಿ ಗುಪ್ತಚರ ಸಂಸ್ಥೆಗಳ ಪಾತ್ರವನ್ನು ಅವಲೋಕಿಸಿ. (250 ಪದಗಳು)

Reference: Live Mint

ಪ್ರಶ್ನೆಯ ಆಶಯ

ಜಾಗತೀಕರಣಗೊಂಡ ವಿಶ್ವದಲ್ಲಿ ಆಂತರಿಕ ಭದ್ರತೆಯ ಸಂಸ್ಥೆಗಳ ಪ್ರಾಮುಖ್ಯತೆ ಮತ್ತು ಆಂತರಿಕ ಭದ್ರತೆಯ ಮೇಲೆ ಪ್ರಭಾವ ಬೀರುವ ಅಂಶಗಳು

ಉತ್ತರದ ರಚನೆ

ಪೀಠಿಕೆ

ಕೋವಿಡ್-19ನಿಂದಾಗಿ ನಮ್ಮ ಆರೋಗ್ಯ, ಆರ್ಥಿಕತೆ ಮತ್ತು ಭದ್ರತೆ ಕುರಿತಾದ ಮಾಹಿತಿಯ ಸಂಗ್ರಹದ ಅಗತ್ಯತೆ ಮುನ್ನೆಲೆಗೆ ಬಂದಿದೆ. ಇಂದನ್ನು ಕುರಿತು ಸಂಕ್ಷಿಪ್ತವಾಗಿ  ಬರೆಯಿರಿ.

ಮುಖ್ಯಭಾಗ:

ಪಾರಿಸರಿಕ ಅಪಾಯ ಮತ್ತು ಸಾಂಕ್ರಾಮಿಕಗಳನ್ನು ನಿವಾರಿಸುವ ಮೂಲಕ ಜೈವಿಕ ಭದ್ರತೆಯನ್ನು  ಖಾತ್ರಿ ಪಡಿಸುವ ಗುಪ್ತಚರ ಸಂಸ್ಥೆಗಳ ಮಹತ್ವವನ್ನು ಕುರಿತು ಬರೆಯಿರಿ.

ದೇಶದಲ್ಲಿ ಗುಪ್ತಚರ ಸಂಸ್ಥೆಗಳ ಕಾರ್ಯಗಳ ನೆಲೆಯಲ್ಲಿ ಅನುಷ್ಟಾನಗೊಳ್ಳ ಬೇಕಾದ ಸುಧಾರಣೆಗಳನ್ನು ವಿಷದ ಪಡಿಸಿ.

ಈ ರೀತಿಯ ಅಪಾಯಗಳನ್ನು ನಿಯಂತ್ರಿಸಿ ನಿರ್ವಹಿಸುವಲ್ಲಿ ಗುಪ್ತಚರ ಸಂಸ್ಥೆಗಳ ಮಹತ್ವವನ್ನು ವಿವರಿಸಿ.

ಉಪಸಂಹಾರ:

ನೈತಿಕ ಸುಧಾರಣೆ ಮತ್ತು ಅಂತರಾರಾಷ್ಟ್ರೀಯ ಸಂಬಂಧದಲ್ಲಿ ನೈತಿಕತೆಯ ಮಹತ್ವವನ್ನು ಕುರಿತು ಬರೆಯಿರಿ.

 

ವಿಷಯ : ನೇರ ಮತ್ತು ಪರೋಕ್ಷ ಕೃಷಿ ತೆರಿಗೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿತ ಸಮಸ್ಯೆಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆಯ ಧ್ಯೇಯ, ಕಾರ್ಯ, ಮಿತಿಗಳು, ಮರುಸಂಯೋಜನೆ; ಸಂಗ್ರಹ ಸಮಸ್ಯೆಗಳು ಮತ್ತು ಆಹಾರ ಭದ್ರತೆ; ತಂತ್ರಜ್ಞಾನ ಅಳವಡಿಕೆ; ಪಶುಸಂಗೋಪನೆಯ ಆರ್ಥಿಕತೆ.

5. What do you understand by Monoculture farming? Analyse its impact on the agroecology of the country, how can one stop it from depleting the natural resources? (250 words)

5. ಏಕರೂಪತೆಯ ಬೇಸಾಯವೆಂದರೇನು? ದೇಶದ ಕೃಷಿ ಪರಿಸರ ವ್ಯವಸ್ಥೆ ಮೇಲೆ ಇದರ ಪರಿಣಾಮವನ್ನು ವಿಶ್ಲೇಷಿಸಿ. ಇದು ನೈಸರ್ಗಿಕ ಸಂಪನ್ಮೂಲಗಳನ್ನು ನಶಿಸುವ ಬಗೆಯನ್ನು ತಿಳಿಸಿ. (250 ಪದಗಳು)

Reference Indian Express 

ಪ್ರಶ್ನೆಯ ಆಶಯ

ಸುಸ್ಥಿರ ಕೃಷಿ ಪದ್ಧತಿಗಳನ್ನು ಅರಿಯುವುದು ಮತ್ತು ದೇಶದಲ್ಲಿ ಅವುಗಳ ಅಳವಡಿಕೆಗೆ ಮುಂದಾಗುವುದು

ಉತ್ತರದ ರಚನೆ

ಪೀಠಿಕೆ

ಏಕರೂಪತೆಯ ಬೇಸಾಯದ ಅರ್ಥವನ್ನು ಬರೆಯಿರಿ.

ಮುಖ್ಯಭಾಗ:

ಈ ಬೇಸಾಯ ಪದ್ಧತಿಯ ಲಕ್ಷಣಗಳನ್ನು ಬರೆಯಿರಿ.

ಇದರ ನ್ಯೂನ್ಯತೆಗಳನ್ನು ತಿಳಿಸುವ ಮೂಲಕ ಸಮಸ್ಯೆಗಳನ್ನು ವಿಷದ ಪಡಿಸಿ.

ಇದು ಕೃಷಿ ಪರಿಸರ ವ್ಯವಸ್ಥೆಯ ಮೇಲೆ ಉಂಟು ಮಾಡುವ ಪರಿಣಾಮ ಕುರಿತು ಬರೆಯಿರಿ.

ಈ ಸಮಸ್ಯೆಗಳ ನಿವಾರಣೆಗೆ ಕ್ರಮಗಳನ್ನು ಚರ್ಚಿಸಿ. ಮತ್ತು ಸರ್ಕಾರ, ರೈತರು ಮತ್ತು ಇನ್ತಾರೆ ಭಾಗಿದಾರರ ಪಾತ್ರವನ್ನು ನಿರೂಪಿಸಿ.

ಉಪಸಂಹಾರ:

ವೈಜ್ಞಾನಿಕತೆ ಮತ್ತು ತಂತ್ರಜ್ಞಾನದ ಅಳವಡಿಕೆಯ ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 4


 

ವಿಷಯ : ಮನೋಧೋರಣೆ : ಆಶಯ, ರಚನೆ ಮಾತು ಕಾರ್ಯಗಳು; ಆಲೋಚನೆ ಮತ್ತು ನಡತೆಯೊಂದಿಗಿನ ಸಂಬಂಧ; ನೀತಿಯತೆ ಮತ್ತು ರಾಜಕೀಯ ಮನೋಧೋರಣೆ; ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆ; ಅಭಿಕ್ಷಮತೆ ಮತ್ತು ನಾಗರೀಕ ಸೇವೆಯ ಮೂಲಭೂತ ಮೌಲ್ಯಗಳು – ಸಾರ್ವಜನಿಕ ಸೇವೆಯಲ್ಲಿ ಸಮಗ್ರತೆ, ಸಮದರ್ಶಿತ್ವ, ನಿಷ್ಪಕ್ಷಪಾತ, ವಸ್ತುನಿಷ್ಠತೆ ಮತ್ತು ಬದ್ಧತೆ; ದುರ್ಬಲ ವರ್ಗಗಳ ಮೇಲೆ ಪರಾನುಭೂತಿ, ಸಹಿಷ್ಣತೆ, ಅಂತಃಕರಣ.

6. “The greatest intoxication is that of the ego. The worst madness is that of anger. The person who is free from arrogance and anger finds goodness and beauty wherever she goes! When we think we know everything, we lose the battle of life”. Elucidate. (250 words)

6. ಮನುಷ್ಯನಿಗೆ ಪ್ರಬಲವಾದ ವಿಷಾಣುವೆಂದರೆ ಅಹಂ ಮತ್ತು ಅತೀ ಅಜ್ಞಾನ ವೆಂದರೆ ಕೋಪ. ಯಾರು ಗರ್ವ ಮತ್ತು ಕೋಪದಿಂದ ಮುಕ್ತರಾಗಿರುವರೋ ಅವರು ಎಲ್ಲೆಡೆ ಸುಂದರತೆ ಮತ್ತು ಒಳ್ಳೆಯತೆಯನ್ನು ಕಾಣುವರು. ಯಾವಾಗ ನಾವು ಎಲ್ಲವನ್ನು ಬಲ್ಲೆವು ಎಂದು ಯೋಚಿಸಿದಾಗ ಜೀವನದ ಸಮರದಲ್ಲಿ ಅಪಜಯ ಹೊಂದುವೆವು. ವಿವರಿಸಿ. (250 ಪದಗಳು)

Reference: Quote based question

ಪ್ರಶ್ನೆಯ ಆಶಯ

ಮನುಷ್ಯನಲ್ಲಿನ ಗರ್ವ, ಅಹಂ, ದರ್ಪದಂತಹ ಗುಣಗಳು ಜೀವನದ ಮೇಲೆ ಆ ಮೂಲಕ ಸಮಾಜದ ಮೇಲೆ ಉಂಟು ಮಾಡುವ ಪರಿಣಾಮ 

ಉತ್ತರದ ರಚನೆ

ಪೀಠಿಕೆ:

ಕೋಪ, ಅಹಂಗಳನ್ನು ವ್ಯಾಖ್ಯಾನಿಸಿ ಅವುಗಳ ಲಕ್ಷಣಗಳನ್ನು ಬರೆಯಿರಿ.

ಮುಖ್ಯಭಾಗ:

ಅಹಂ ಉಂಟಾಗಲು ಕಾರಣಗಳನ್ನು ಬರೆಯಿರಿ ಆ ಮೂಲಕ ಅದರ ಪರಿಣಾಮವನ್ನು ಉದಾಹರಣೆ ಸಹಿತ ವಿವರಿಸಿ.

ಕೋಪ ಉಂಟಾಗಲು ಕಾರಣಗಳನ್ನು ಬರೆದು ಆ ಮೂಲಕ ಅದರ ಪರಿಣಾಮವನ್ನು ಉದಾಹರಣೆ ಸಹಿತ ವಿವರಿಸಿ.

ನಿರಂತರ ಕಲಿಯುಕೆಯ ಅಗತ್ಯತೆ ಮತ್ತು ಮಹತ್ವವನ್ನು ಬರೆಯಿರಿ.

ಉಪಸಂಹಾರ:

ಜೀವನದಲ್ಲಿ ಯೋಗ, ಧ್ಯಾನ, ಸಮರ್ಪಕ ಸಾಮಾಜೀಕರಣದ ಮಹತ್ವವನ್ನು ಬರೆಯಿರಿ.

 

ವಿಷಯ : ನೈತಿಕತೆ ಮತ್ತು ಮಾನವ ಹಸ್ತಕ್ಷೇಪ – ಮಾನವನ ಚಟುವಟಿಕೆಯಲ್ಲಿ ನೈತಿಕತೆಯ ಪಾತ್ರ, ಸಾರ, ನಿರ್ಧಾರಕಗಳು ಮತ್ತು ಪರಿಣಾಮಗಳು; ನೈತಿಕತೆಯ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ ; ಮಾನವೀಯ ಮೌಲ್ಯಗಳು – ಪ್ರಸಿದ್ಧ ಸುಧಾರಣಾಕಾರರ, ಆಡಳಿತ ತಜ್ಞರ ಮತ್ತು ಜನನಾಯಕರ ಜೀವನ ಮತ್ತು ಮೌಲ್ಯಗಳು; ಮೌಲ್ಯಗಳನ್ನು ಅಂತರ್ಗತಗೊಳಿಸುವಲ್ಲಿ ಕುಟುಂಬ, ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ

7. Describe the following terms in your own words:  i. Commitment, ii. Confession, iii. Rationality

7 ಕೆಳಗಿನ ಪದಗಳ ಕುರಿತು ನಿಮ್ಮ ಪದಗಳಲ್ಲಿ ಬರೆಯಿರಿ 1) ಬದ್ಧತೆ (Coomitment), 2) ಪಶ್ಚಾತ್ತಾಪ (Confession) 3) ತಾರ್ಕಿಕತೆ (Rationality) (250 ಪದಗಳು)

Reference: Ethics, Integrity and Aptitude by Lexicon Publications

ಪ್ರಶ್ನೆಯ ಆಶಯ

ಆಡಳಿತದಲ್ಲಿ ಸಾರ್ವಜನಿಕ ಸೇವಾ ಮೌಲ್ಯಗಳ ಅಗತ್ಯತೆ ಮತ್ತು ಮಹತ್ವ

ಉತ್ತರದ ರಚನೆ

ಪೀಠಿಕೆ:

ನಿಮಗೆ ಅರ್ಥವಾದ ರೀತಿಯಲ್ಲಿ ಸರಳ ಭಾಷೆಯಲ್ಲಿ ಪ್ರತಿ ಮೌಲ್ಯದ ಅರ್ಥವನ್ನು ಬರೆಯಿರಿ.

ಮುಖ್ಯಭಾಗ:

  1. ಪ್ರತಿಯೊಂದಕ್ಕೆ ಒಂದು ಉದಾಹರಣೆ ನೀಡಿ.
  2. ಆಡಳಿತ ವ್ಯವಸ್ಥೆಯಲ್ಲಿ ಅವುಗಳ ಪ್ರಾಮುಖ್ಯತೆ ಕುರಿತು ಬರೆಯಿರಿ.

ಉಪಸಂಹಾರ:

ಪ್ರಸ್ತುತತೆಯ ಬಗ್ಗೆ ಬರೆಯಿರಿ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos