[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 12 ಡಿಸೆಂಬರ್ 2020

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

    1. ಸೋಮವಾರ – ರಾಜ್ಯಶಾಸ್ತ್ರ
    2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
    3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
    4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
    5. ಶುಕ್ರವಾರ – ಪರಿಸರ ಅಧ್ಯಯನ
    6. ಶನಿವಾರ – ಇತಿಹಾಸ

 

ಪರಿವಿಡಿ

ಸಾಮಾನ್ಯ ಪತ್ರಿಕೆ 1:

1. ಭಾರತದ ಎಲ್ಲಾ ಬರಗಾಲಗಳಿಗೆ ಎಲ್-ನೀನೋ  ಒಂದೇ ಕಾರಣವಲ್ಲ

 

ಸಾಮಾನ್ಯ ಪತ್ರಿಕೆ 2:

1. 7ನೇ ಅನುಸೂಚಿಯನ್ನು ನವರೀತಿಯಲ್ಲಿ ನೋಡುವ ಅಗತ್ಯತೆಯನ್ನು ಎನ್.ಕೆ.ಸಿಂಗ್ ಸಾರಿದ್ದಾರೆ

2. ಪ್ಲಾಸ್ಮೋಡಿಯಮ್ ಅಂಡಾಕಾರ ಮತ್ತು ಇತರ ರೀತಿಯ ಮಲೇರಿಯಾ :

3. ನ್ಯಾಯಾಮೂರ್ತಿ ಜೈನ ಸಮಿತಿ

 

ಸಾಮಾನ್ಯ ಪತ್ರಿಕೆ 3:

1. ನಿರ್ವಹಣೆ ಅಡಿಯ ಸಂಪತ್ತು (AUM)

2. ವಿಲಕ್ಷಣ ಸಾಕುಪ್ರಾಣಿಗಳನ್ನು ಘೋಷಿಸಿ ಕಾನೂನು ಕ್ರಮ

 

ಪೂರ್ವಭಾವಿ ಪರೀಕ್ಷೆ

1. ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವಾಭಾವಿ-ಅರ್ಹತೆಗಳು

2. ಮಹಾರಾಷ್ಟ್ರಾದಲ್ಲಿ ಚಲನಚಿತ್ರ ಮತ್ತು ಮನೋರಂಜನಾ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ

3. ಮಾಲ್ಡಿವ್ಸ್’ನಲ್ಲಿ ಸೇವೆಗಾಗಿ ವಾರೆಂಟ್ ನಿಯಮಾವಳಿಗಳು

4. ಮಹಾಶರದ್ (ಮಹಾರಾಷ್ಟ್ರಾದ ದಿವ್ಯಾಂಗರ ಆರೋಗ್ಯ ಮರುವಸತೀಕರಣ & ನೆರವಿನ ವ್ಯವಸ್ಥೆ)

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

ಭಾರತದ ಎಲ್ಲಾ ಬರಗಾಲಗಳಿಗೆ ಎಲ್-ನೀನೋ  ಒಂದೇ ಕಾರಣವಲ್ಲ:


ಸಂದರ್ಭ:

ಇತ್ತೀಚಿನ ಸಂಶೋಧನೆಗಳ ಪ್ರಕಾರ ಕಳೆದ ಶತಮಾನದಲ್ಲಿ ಉಂಟಾದ  10 ಬರಗಾಲಗಳಲ್ಲಿ ಸುಮಾರು ಆರು ಬರಗಾಲಗಳು  ಎಲ್ ನಿನೊ ರಹಿತ ವರ್ಷಗಳಲ್ಲಿ ಸಂಭವಿಸಿವೆ. ಅಲ್ಲದೆ, ಇವುಗಳು ಮುಂಗಾರು ಕಾಲದಲ್ಲಿ ಸಂಭವಿಸಿದ ಉತ್ತರ ಅಟ್ಲಾಂಟಿಕ್ ವಲಯದ ವಾತಾವರಣದ ಅಡಚಣೆಗಳಿಂದ ಸಂಭವಿಸಿರುವ ಸಾಧ್ಯತೆ ಅಧಿಕವಾಗಿದೆ..

2014 ರಲ್ಲಿ, ಭಾರತವು 14% ಮಳೆ ಕೊರತೆಯನ್ನು ಹೊಂದಿದೆ. ಅಲ್ಲದೆ ಇದು ಎಲ್-ನಿನೊಗೆ ಸಂಬಂಧಿಸಿಲ್ಲ ಮತ್ತು ಅದಕ್ಕೂ ಮೊದಲು 1986 ಮತ್ತು 1985 ರಲ್ಲಿಯೂ ಇದೇ ಸ್ಥಿತಿಯನ್ನು ಕಂಡಿದೆ

 ಬರಸ್ಥಿತಿಯ ಮೇಲೆ ಪ್ರಭಾವ ಬೀರುವ ಅಂಶಗಳು

  1. ಬರಗಾಲಗಳು ಆಗಸ್ಟ್ ಅಂತ್ಯದಲ್ಲಿ ಮಳೆಯ ಹಠಾತ್ ಕ್ಷಿಣಗೊಂಡಾಗ ಅಥವಾ ಬಹುತೇಕ ಮಳೆಯ ಅಭಾವದ ಪರಿಣಾಮವಾಗಿದೆ.
  2. ವಾತಾವರಣದ ಉನ್ನತ ಸ್ಥರದಲ್ಲಿ ಉಂಟಾಗುವ Rossby wave ಟಿಬೆಟ್ ಪ್ರಸ್ಥಭೂಮಿಯ ಮೇಲೆ ಪ್ರಭಾವ ಬೀರಿ ಮಾನ್ಸೂನ್ ಮೇಲೆ ಪರಿಣಾಮ ಬೀರುವುದು. ಇದು ಮಳೆಯ ಅಭಾವಕ್ಕೆ ಕಾರಣವಾಗಿದೆ.

ಎಲ್ ನಿನೊ

  1. ಇದು ವಾಯುಗುಣ ಆವರ್ತನವಾಗಿದ್ದು, ಪೆಸಿಫಿಕ್ ಪಶ್ಚಿಮ ಭಾಗದಲ್ಲಿ ಅಧಿಕ ಒತ್ತಡ ಮತ್ತು ಪೂರ್ವ ಭಾಗದಲ್ಲಿ ಕಡಿಮೆ ಒತ್ತಡ ವಲಯ ನಿರ್ಮಾಣವಾಗಿರುವುದು.
  2. ಈ ಸಮಯದಲ್ಲಿ ಪೆಸಿಫಿಕ್ ಸಾಗರದ ಮಧ್ಯಭಾಗ ಮತ್ತು ಪೂರ್ವಭಾಗದ ಮೇಲ್ಮೈ ಜಲರಾಶಿ ಬಿಸಿಯಾಗಿರುವುದು.
  3. ಎಲ್-ನಿನೊದ ದಕ್ಷಿಣ ಓಲಾಟ (ENSO) ಆಯಾಮದ ಒಂದು ಹಂತವಾಗಿದೆ.

ಎಲ್-ನಿನೋಗೆ ಕಾರಣ

  1. ವ್ಯವಸ್ಥೆಯಲ್ಲಿ ವೈಪರಿತ್ಯ ಉಂಟಾಗುವುದರಿಂದ
  2. ಪೆಸಿಫಿಕ್ ಸಾಗರದ ಮಧ್ಯ ಮತ್ತು ಪೂರ್ವ ವಲಯದಲ್ಲಿ ಮೇಲ್ಮೈ ಜಲರಾಶಿಯು 6 ತಿಂಗಳ ಕಾಲ ಬಿಸಿಯಾಗಿ ಎಲ್-ನಿನೋ ಪರಿಸ್ಥಿತಿ ಉಂಟಾಗುವುದು.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ: ಭಾರತದ ಸಂವಿಧಾನ – ಐತಿಹಾಸಿಕ ಬೆಳವಣಿಗೆಗಳು, ಉಗಮ, ವಿಕಸನ, ಲಕ್ಷಣಗಳು, ತಿದ್ದುಪಡಿಗಳು, ಪ್ರಧಾನ ನಿಬಂಧನೆಗಳು ಮತ್ತು ಮೂಲ ರಚನೆ

7ನೇ ಅನುಸೂಚಿಯನ್ನು ನವರೀತಿಯಲ್ಲಿ ನೋಡುವ ಅಗತ್ಯತೆಯನ್ನು ಎನ್.ಕೆ.ಸಿಂಗ್ ಸಾರಿದ್ದಾರೆ


ಸಂದರ್ಭ:

ಹದಿನೈದನೇ ಹಣಕಾಸು ಆಯೋಗ ಅಧ್ಯಕ್ಷ ಎನ್.ಕೆ ಸಿಂಗ್ ಸಂವಿಧಾನದ ಏಳನೇ ವೇಳಾಪಟ್ಟಿಗೆ ನವರೂಪ ನೀಡಲು ಕರೆ ನೀಡಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯಗಳಿಗೆ ವಿಷಯ ಹಂಚಿಕೆಗೆ ಆಧಾರವಾಗಿದೆ.

ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯಗಳಿಗೆ ಹೆಚ್ಚಿನ ನಮ್ಯತೆಯನ್ನು ನೀಡಲು ಮತ್ತು ಹಣಕಾಸಿನ ಒಕ್ಕೂಟವಾದದಲ್ಲಿ ವಿಶ್ವಾಸವನ್ನು ಬಲಪಡಿಸಲು ಇದು ಅವಶ್ಯಕವಾಗಿದೆ .

7ನೇ ಅನುಸೂಚಿ:

ಸಂವಿಧಾನದ 246 ನೇ ವಿಧಿಯು ಏಳನೇ ಅನುಸೂಚಿಯ ಮೂಲಕ ಒಕ್ಕೂಟ ಮತ್ತು ರಾಜ್ಯಗಳ ನಡುವಿನ ಅಧಿಕಾರ ವಿಭಜನೆಯ ಬಗ್ಗೆ ಹೇಳುತ್ತದೆ.

  1. ಇದು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ಥಿ ಪಟ್ಟಿ ಎಂಬ ಮೂರು ಪಟ್ಟಿಗಳನ್ನು ಒಳಗೊಂಡಿದೆ .
  2. ಕೇಂದ್ರ ಪಟ್ಟಿಯ ವಿಷಯಗಳ ಮೇಲೆ ಸಂಸತ್ತು ಕಾನೂನು ರೂಪಿಸಬಹುದಾಗಿದೆ.
  3. ರಾಜ್ಯ ಪಟ್ಟಿಯ ವಿಷಯಗಳು ರಾಜ್ಯ ಶಾಸನಸಭೆಗಳ ವ್ಯಾಪ್ತಿಯಲ್ಲಿವೆ.
  4. ಸಮವರ್ಥಿ ಪಟ್ಟಿ ಒಂದೆಡೆ ಸಂಸತ್ತಿನ ಮತ್ತು ಮತ್ತೊಂದೆಡೆ ಶಾಸನ ಸಭೆಗಳೆರಡಕ್ಕೂ ಒಳಪಟ್ಟಿರುತ್ತವೆ. ಆದಾಗ್ಯೂ ಸಂವಿಧಾನವು ಸಂಘರ್ಷದ ಸಂದರ್ಭದಲ್ಲಿ ಸಮವರ್ಥಿ ಪಟ್ಟಿಯ ವಿಷಯಗಳ ಮೇಲೆ ಸಂಸತ್ತಿಗೆ ಒಕ್ಕೂಟದ ಪ್ರಾಬಲ್ಯವನ್ನು ಒದಗಿಸಿದೆ.

Sources: the Hindu.

 

ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

ಪ್ಲಾಸ್ಮೋಡಿಯಮ್ ಅಂಡಾಕಾರ ಮತ್ತು ಇತರ ರೀತಿಯ ಮಲೇರಿಯಾ :


ಸಂದರ್ಭ:

ಕೇರಳದ ಸೈನಿಕನಲ್ಲಿ ಪ್ಲಾಸ್ಮೋಡಿಯಮ್ ಓವಾಲೆ ಎಂಬ ಸಾಮಾನ್ಯ ರೀತಿಯ ಮಲೇರಿಯಾವನ್ನು ಗುರುತಿಸಲಾಗಿದೆ.

ಮಲೇರಿಯಾದ ವಿಧಗಳು

  1. ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಡಿತ ಮಲೇರಿಯಾಗೆ ಕಾರಣವಾಗಿದೆ.
  2. ಐದು ಮಲೇರಿಯಾದ ಬಗೆಗಳು :
    1. Plasmodium falciparum,
    2. Plasmodium vivax (the commonest ones),
    3. Plasmodium malariae,
    4. Plasmodium ovale
    5. Plasmodium knowlesi

Sources: Indian Express.

 

ವಿಷಯ : ಆಡಳಿತದ ಪ್ರಮುಖ ಅಂಶಗಳು, ಇ-ಆಡಳಿತದ ಉದ್ದೇಶ, ಮಿತಿಗಳು ಮತ್ತು ಸಾಮರ್ಥ್ಯ, ನಾಗರೀಕ ಸನ್ನದು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂಸ್ಥಿಕ ಕ್ರಮಗಳು

ನ್ಯಾಯಾಮೂರ್ತಿ ಜೈನ್ ಸಮಿತಿ


  1. ಸೆಪ್ಟೆಂಬರ್ 2018 ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ರಚಿಸಲ್ಪಿತ್ತಿದೆ.
  2. ದೇಶದ ಪ್ರಮುಖ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಒಬ್ಬರಾದ ನಂಬಿ ನಾರಾಯಣನ್ ಅವರ ಜೀವನ ಮತ್ತು ಖ್ಯಾತಿಯನ್ನು ನಾಶಪಡಿಸಿದ 1994 ರ ಕುಖ್ಯಾತ ಇಸ್ರೋ “ಫ್ರೇಮ್-ಅಪ್” ಪ್ರಕರಣಕ್ಕೆ ಕಾರಣವಾದ ಅಧಿಕಾರಿಗಳನ್ನು ಬಹಿರಂಗಪಡಿಸುವುದು ಇದರ ಕಾರ್ಯವಾಗಿದೆ.

ಇಲ್ಲಿನ ಸಮಸ್ಯೆ

ನವೆಂಬರ್ 30, 1994 ರಲ್ಲಿ ಬಂಧನಕ್ಕೊಳಗಾದಾಗ, ಶ್ರೀ ನಾರಾಯಣನ್ ಅವರು ಪ್ರಧಾನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಕಾಸ್ ಎಂಜಿನ್ ತಂತ್ರಜ್ಞಾನ, ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನ ಮತ್ತು ಪಿಎಸ್‌ಎಲ್‌ವಿ ಸಂಬಂಧಿಸಿದ ದಾಖಲೆಗಳು ಮತ್ತು ಇಸ್ರೋದ ರೇಖಾಚಿತ್ರಗಳನ್ನು ಪಾಕಿಸ್ತಾನಕ್ಕೆ ರವಾನಿಸಲಾಗಿದೆ ಎಂದು ಪೊಲೀಸ್ ತನಿಖಾಧಿಕಾರಿಗಳು ಆರೋಪಿಸಿದ್ದರು .

ನ್ಯಾಯಾಲಯದಲ್ಲಿ ಆದದ್ದೇನು ?

  1. ನ್ಯಾಯಾಂಗ 2018 ರಲ್ಲಿ ಈ ಪ್ರಕರಣವನ್ನು ಉದ್ದೇಶಪೂರ್ವಕ “ಕ್ರಿಮಿನಲ್ ಚೌಕಟ್ಟು” ಎಂದು ತಳ್ಳಿಹಾಕಿತು. ಶ್ರೀ ನಾರಾಯಣನ್ ಅವರ ವೃತ್ತಿಜೀವನವನ್ನು ಸುಗಮಗೊಳಿಸಿತು.
  2. ಕೇರಳ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡ ಸಿಬಿಐ 1996 ರಲ್ಲಿ FIR ಸಲ್ಲಿಸಿತ್ತು. ಆದರೆ ಶ್ರೀ ನಾರಾಯಣನ್ ತಮ್ಮನ್ನು ಆರೋಪಿಸುವವರನ್ನು ನ್ಯಾಯಾಂಗಕ್ಕೆ ತರಲು ಹೋರಾಡಿದರು.
  3. ನ್ಯಾಯಾಂಗ 2018 ರ ತೀರ್ಪಿನಲ್ಲಿ, ವಿಜ್ಞಾನಿ ಬಂಧನದಲ್ಲಿದ್ದಾಗ ಮಾಡಿದ ಚಿಕಿತ್ಸೆಯನ್ನು “ಸೈಕೋ-ಪ್ಯಾಥೋಲಾಜಿಕಲ್” ಎಂದು ಕರೆದಿದೆ.
  4. ವಿಜ್ಞಾನಿ 24 ವರ್ಷಗಳಿಂದ ಅನುಭವಿಸಿದ ಚಿತ್ರಹಿಂಸೆಗಾಗಿ ಸರಿದೂಗಿಸಲು ಕೇವಲ ಹಣ ಸಾಕಾಗುವುದಿಲ್ಲ ಎಂದು ಹೇಳಿದ್ದರೂ, ಶ್ರೀ ನಾರಾಯಣನ್ ಅವರಿಗೆ ₹ 50 ಲಕ್ಷ ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಕೇರಳ ಸರ್ಕಾರಕ್ಕೆ ಆದೇಶಿಸಿತು.
  5. ಅಲ್ಲದೆ, ಬಾಹ್ಯಾಕಾಶ ಸಂಶೋಧನೆಯಲ್ಲಿ ತಾಂತ್ರಿಕ ಪ್ರಗತಿಯನ್ನು ಹಿಮ್ಮೆಟ್ಟಿಸುವುದರ ಜೊತೆಗೆ ಕೇರಳ ಪೊಲೀಸರು ಪ್ರಾರಂಭಿಸಿದ ಕಾನೂನು ಕ್ರಮವು ಅವರ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ “ದುರಂತ ಪರಿಣಾಮ” ಬೀರಿದೆ ಎಂದು ವಿಜ್ಞಾನಿ ಹೇಳಿದ್ದಾರೆ

ಕ್ರಯೋಜನಿಕ್ ತಂತ್ರಜ್ಞಾನ:

  1. ರಾಕೆಟ್ ಇಂಜಿನ್ ವಾಹಕವನ್ನು ಅತ್ಯಂತ ಕಡಿಮೆ ತಾಪಮಾನದಲ್ಲಿ ಬಳಸಲು ಸುಗಮವಾಗುವುದು.
  2. ಅತ್ಯಧಿಕ ಇಂಧನ ದಕ್ಷತೆಯನ್ನು ನೀಡುವ ದ್ರವ ಆಮ್ಲಜನಕ ಮತ್ತು ದ್ರವ ಜಲಜನಕದ ಸಂಯೋಜನೆಯನ್ನು ಬಳಸಿ ಅಧಿಕ ಒತ್ತಡವನ್ನು ಉತ್ಪಾದಿಸಲು ಪೂರಕವಾಗಿದೆ.

ಭಾರತಕ್ಕೆ ಈ ತಂತ್ರಜ್ಞಾನದ ಪ್ರಾಮುಖ್ಯತೆ

  1. ಅಮೇರಿಕಾ, ಜಪಾನ್, ಫ್ರಾನ್ಸ್, ಚೀನಾ ಮತ್ತು ರಷ್ಯಾದ ನಂತರ ಭಾರತ ಈ ತಂತ್ರಜ್ಞಾನವನ್ನು ಹೊಂದಿದ 6ನರ ರಾಷ್ಟ್ರವಾಗಿದೆ.
  2. ಭಾರತವು ಕ್ರಯೋಜೆನಿಕ್ ಎಂಜಿನ್‌ಗಳ ಸಹಾಯದಿಂದ ಭಾರವಾದ ಉಪಗ್ರಹಗಳನ್ನು (2500-3000 ಕಿ.ಗ್ರಾಂ ಗಿಂತ ಅಧಿಕ ತೂಕ) ಉಡಾಯಿಸಬಲ್ಲದು. ಅಲ್ಲದೇ, ಜಿಎಸ್‌ಎಲ್‌ವಿ ಯೋಜನೆಯ ಯಶಸ್ಸಿಗೆ ಇದು ನಿರ್ಣಾಯಕವಾಗಿದೆ.
  3. ತಂತ್ರಜ್ಞಾನದ ವರ್ಗಾವಣೆಗೆ ಭಾರತವು ರಷ್ಯಾದ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ 1990 ರ ದಶಕದಲ್ಲಿ ಅಮೇರಿಕಾ ಇದನ್ನು ನಿರಾಕರಿಸಿತು. ಇದರ ಹಿನ್ನೆಲೆಯಲ್ಲಿ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆದಿದೆ.
  4. ಈ ತಂತ್ರಜ್ಞಾನಕ್ಕಾಗಿ ಭಾರತವು ಇತರ ಬಾಹ್ಯಾಕಾಶ ಸಂಸ್ಥೆಗಳನ್ನು ಅವಲಂಬಿಸಬೇಕಾಗಿಲ್ಲ.
  5. ಇದು ಇಸ್ರೋಗೆ ಬಾಹ್ಯಾಕಾಶದ ಅಧ್ಯಯನವನ್ನು ಆಳವಾಗಿ ಮಾಡಲು ಸಹಾಯ ಮಾಡಬಲ್ಲದು. ಅಲ್ಲದೆ, ಹೆಚ್ಚುವರಿ ಆದಾಯವನ್ನು ತರುಲು ವಾಣಿಜ್ಯ ವಿಭಾಗವನ್ನು ತೆರೆಯಲು ವೇದಿಕೆ ನಿರ್ಮಿಸುವುದು.
  6. ವೆಚ್ಚದ ಪರಿಣಾಮಕಾರಿತ್ವ ವೃದ್ಧಿಸಿ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುವ ಮೂಲಕ ಭಾರತವು ಏಷ್ಯನ್ ಮತ್ತು ಆಫ್ರಿಕನ್ ಬಾಹ್ಯಾಕಾಶ ಮಾರುಕಟ್ಟೆಗಳನ್ನು ಸ್ಪರ್ಶಿಸಬಹುದು.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು

ನಿರ್ವಹಣೆ ಅಡಿಯ ಸಂಪತ್ತು (AUM)


ಸಂದರ್ಭ:

ಪ್ರಸಕ್ತ ವರ್ಷದಲ್ಲಿ ಹಣಕಾಸು ಸಂಕೋಚನದತ್ತ ಸಾಗುತ್ತಿದೆ. ಒಂದು ದಶಕಕ್ಕೂ ಹೆಚ್ಚು ಸಮಯದ ನಂತರ, ಬ್ಯಾಂಕೇತರ ಹಣಕಾಸು ಕಂಪನಿಗಳ (NBFC) ನಿರ್ವಹಣೆಯ (ಎಯುಎಂ) ಸ್ವತ್ತುಗಳು ಮುಂದಿನ ಹಣಕಾಸು ವರ್ಷದಲ್ಲಿ 5-6% ರಷ್ಟು ದರದಲ್ಲಿ ವೃದ್ಧಿಯಾಗುವವು.

ಮುಂದಿನ ಸವಾಲುಗಳು :

  1. ಮುಂದಿನ ಹಣಕಾಸು ವರ್ಷದಲ್ಲಿ ಅಂದಾಜು 10% ಜಿಡಿಪಿ ಬೆಳವಣಿಗೆಯ ಹೊರತಾಗಿಯೂ, NBFC ವಲಯದ ಬೆಳವಣಿಗೆ ಕುಂತಿತಗೊಳ್ಳುವುದು. ಏಕೆಂದರೆ ಆಸ್ತಿ ಗುಣಮಟ್ಟದ ಮೇಲೆ ಪ್ರಸ್ತುತದಲ್ಲಿನ ಸಾಂಕ್ರಾಮಿಕತೆ ಒಡ್ಡಿರುವ ಹಣದ ಒಳಹರಿವು ಒಂದು ಸವಾಲಾಗಿ ಉಳಿದಿದೆ.
  2. ಹಿಂದಿನ ವರ್ಷಗಳಿಗಿಂತ ಸುಧಾರಿತ ಬಂಡವಾಳದೊಂದಿಗೆ ಉತ್ತಮವಾಗಿ ಇರಿಸಲಾಗಿರುವ ಬ್ಯಾಂಕುಗಳಿಂದ ಸ್ಪರ್ಧೆಯು ಹೆಚ್ಚು ತೀವ್ರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ .

ನಿರ್ವಹಣೆಯಲ್ಲಿರುವ ಸಂಪತ್ತು

ಇದು ಹಣಕಾಸು ಸಂಸ್ಥೆಯ ತನ್ನ ಗ್ರಾಹಕರ ಪರವಾಗಿ ಮತ್ತು ತಮ್ಮ ಪರವಾಗಿ ನಿರ್ವಹಿಸುವ ಎಲ್ಲಾ ಹಣಕಾಸು ಸ್ವತ್ತುಗಳ ಒಟ್ಟು ಮಾರುಕಟ್ಟೆ ಮೌಲ್ಯವನ್ನು ಮೌಲ್ಯೀಕರಿಸುತ್ತದೆ.

Sources: the Hindu.

 

ವಿಷಯ : ಸಂರಕ್ಷಣೆ ಕುರಿತಾದ ಸಮಸ್ಯೆಗಳು

ವಿಲಕ್ಷಣ ಸಾಕುಪ್ರಾಣಿಗಳನ್ನು ಘೋಷಿಸಿ ಕಾನೂನು ಕ್ರಮ


ಸಂದರ್ಭ :

ವನ್ಯಜೀವಿಗಳ ಕಾನೂನು ಬಾಹಿರ ಸ್ವಾಧೀನ ಪಡಿಸಿಕೊಳ್ಳುವಿಕೆ ಮತ್ತು ಸ್ವಾಮ್ಯತೆ ಹೊಂದುವಿಕೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಅಲಹಾಬಾದ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

 ಸರ್ಕಾರದ ಸ್ವಯಂಪ್ರೇರಿತ ಬಹಿರಂಗ ಯೋಜನೆ

ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು (MoEFCC) ಸ್ವಯಂಪ್ರೇರಿತ  ಮಾಹಿತಿ ಬಹಿರಂಗಪಡಿಸುವಿಕೆ ಯೋಜನೆಯ ಸಲಹೆಯನ್ನು ನೀಡಿದೆ. ಇದು ಕಾನೂನುಬಾಹಿರವಾಗಿ ಅಥವಾ ದಾಖಲೆಗಳಿಲ್ಲದೆ ಸ್ವಾಧೀನಪಡಿಸಿಕೊಂಡಿರುವ ಜೀವಂತ ಮೃಗಗಳ ಮಾಲೀಕರು ತಮ್ಮ ದಾಖಲೆಗಳನ್ನು ಸರ್ಕಾರಕ್ಕೆ ಘೋಷಿಸಲು ಅನುವು ಮಾಡಿಕೊಡುತ್ತದೆ.

ಪರಿಣಾಮ

  1. ಪ್ರಾಣಿ ಜನ್ಯ ರೋಗಗಳ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಸಹಾಯಕವಾಗುವುದು
  2. CITES ಒಪ್ಪದದಡಿಯಲ್ಲಿ ಅವುಗಳ ಆಮದನ್ನು ನಿಯಂತ್ರಿಸಬಹುದು ಮತ್ತು ದತ್ತಾಂಶ ಸಂಗ್ರಹದಿಂದ ಮೇಲ್ವಿಚಾರಣೆ ಸುಗಮಗೊಳ್ಳುವುದು.

ವನ್ಯಜೀವಿಗಳ ಸೇರ್ಪಡೆ

  1. CITES ಅಡಿಯಲ್ಲಿನ ಅನುಬಂಧ I, II ಮತ್ತು III ಗಳಲ್ಲಿನ ಪ್ರಾಣಿಗಳು
  2. ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿನ ಅನುಸೂಚಿಯ ಪ್ರಾಣಿಗಳನ್ನು ಒಳಗೊಂಡಿಲ್ಲ.

CITES:

  1. ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳಲ್ಲಿನ ಅಂತರರಾಷ್ಟ್ರೀಯ ವ್ಯಾಪಾರವು ಅವುಗಳ ಅಸ್ತಿತ್ವಕ್ಕೆ ದಕ್ಕೆಯಾಗದಂತೆ ನಿರ್ವಹಿಸಲು ಸರ್ಕಾರಗಳು ಅಂಗೀಕರಿಸಿದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
  2. ಭಾರತ ಇದರ ಸದಸ್ಯತ್ವವನ್ನು ಪಡೆದಿದೆ.
  3. CITES ನ ಅನುಬಂಧ I, II ಮತ್ತು III ಮೂಲಕ 5,950 ಪ್ರಭೇದಗಳನ್ನು ಅಂತರರಾಷ್ಟ್ರೀಯ ವ್ಯಾಪಾರದ ಮೂಲಕ ಉಂಟಾಗುವ ಶೋಷಣೆಯಿಂದ ರಕ್ಷಿಸಲಾಗಿದೆ.
  4. ಇಗುವಾನಾಸ್, ಲೆಮರ್ಸ್, ಸಿವೆಟ್ಸ್, ಅಲ್ಬಿನೋ ಕೋತಿಗಳು, ಹವಳ ಹಾವುಗಳು, ಆಮೆ ಮುಂತಾದ ಅನೇಕ ಪ್ರಾಣಿಗಳು ಭಾರತದಲ್ಲಿ ವಿಲಕ್ಷಣ ಸಾಕುಪ್ರಾಣಿಗಳಾಗಿ ಜನಪ್ರಿಯವಾಗಿವೆ.

ಪ್ರಾಣಿಗಳ ಕಾನೂನುಬಾಹಿರ ಸಮಸ್ಯೆಯ ಪ್ರಮಾಣ

  1. ಕಳ್ಳಸಾಗಣೆ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಕಂದಾಯ ಗುಪ್ತಚರ ನಿರ್ದೇಶನಾಲಯದ  (DRI) ಪ್ರಕಾರ ಭಾರತವು ದೊಡ್ಡ ಬೇಡಿಕೆಯ ಕೇಂದ್ರವಾಗಿ  ವಿಶ್ವದ ವಿವಿಧ ಭಾಗಗಳಿಂದ ಗಳನ್ನು ಕಳ್ಳಸಾಗಣೆ ಹೆಚ್ಚಿಸುವುದರೊಂದಿಗೆ ವಿಲಕ್ಷಣ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಹೊರಹೊಮ್ಮಿದೆ.
  2. ಈ ವನ್ಯಜೀವಿಗಳಲ್ಲಿ ಹೆಚ್ಚಿನದನ್ನು ಅಕ್ರಮ ಮಾರ್ಗಗಳ ಮೂಲಕ ಆಮದು ಮಾಡಿಕೊಂಡು ನಂತರ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

Sources: Indian Express.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವಾಭಾವಿ-ಅರ್ಹತೆಗಳು

  1. ಇದನ್ನು 2001ರಲ್ಲಿ ಸ್ಥಾಪಿಸಲಾಯಿತು.
  2. ಇದು HIV/AIDS, ಮಲೇರಿಯ, ಟಿಬಿ ಕಾಯಿಲೆಗಳ ಚಿಕಿತ್ಸೆಯ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಕುರಿತಾಗಿದೆ.
  3. ಪೂರ್ವಾಭಾವಿ-ಅರ್ಹತಾ ಪ್ರಕ್ರಿಯೆಯು ಉತ್ಪಾದಕರ ಪಾರದರ್ಶಕ, ವೈಜ್ಞಾನಿಕತೆಯಿಂದ ಕೂಡಿದ ಪರಿಶೀಲನಾ ವ್ಯವಸ್ಥೆ, ನಿಯಮಿತ ಪರೀಕ್ಷೆ, ತಯಾರಿಕಾ ಕೇಂದ್ರಗಳ ನಿಯಮಿತ ಭೇಟಿಯನ್ನು ಒಳಗೊಂಡಿದೆ.

ಮಹಾರಾಷ್ಟ್ರಾದಲ್ಲಿ ಚಲನಚಿತ್ರ ಮತ್ತು ಮನೋರಂಜನಾ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ

ಮಹಾರಾಷ್ಟ್ರ ಸರ್ಕಾರ  ಚಲನಚಿತ್ರ ಮತ್ತು ಮನೋರಂಜನಾ ಕ್ಷೇತ್ರಕ್ಕೆ ಕೈಗಾರಿಕಾ ಸ್ಥಾನಮಾನ ನೀಡಲು ಮುಂದಾಗಿದೆ.

  1. ಭಾರತದಲ್ಲಿ ‘ಕೈಗಾರಿಕಾ ಸ್ಥಾನಮಾನ’ ವನ್ನು ಯಾವುದೇ ಕಾಯ್ದೆ ವ್ಯಾಖ್ಯಾನಿಸಿಲ್ಲ. ಕೈಗಾರಿಕಾ ಸ್ಥಾನಮಾನವು ಈ ಕ್ಷೇತ್ರವನ್ನು ರಾಜ್ಯ/ಕೇಂದ್ರ ಕೈಗಾರಿಕಾ ನೀತಿಯಲ್ಲಿ ಸೇರ್ಪಡೆಗೊಳಿಸಲಾಗುವುದು.
  2. ತತ್ಕ್ಷಣದ ಉಪಯೋಗಗಳು
    1. ಕಡಿಮೆ ದರದಲ್ಲಿ ಸಾಲ ಸೌಲಭ್ಯ
    2. ಹಣಕಾಸಿನ ನೆರವಿಗಾಗಿ ಬೃಹತ್ ಹೂಡಿಕೆದಾರರು
    3. ಕ್ಷೇತ್ರದಲ್ಲಿ ಹೂಡಿಕೆಯ ಸಮತೆ
    4. ಮರು-ಹಣಕಾಸೀಕರಣ

ಮಾಲ್ಡಿವ್ಸ್’ನಲ್ಲಿ ಸೇವೆಗಾಗಿ ವಾರೆಂಟ್ ನಿಯಮಾವಳಿಗಳು

  1. ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಮೇರೆಗೆ ಅನುಷ್ಠಾನ
  2. ಗೃಹ ಸಚಿವಾಲಯದಿಂದ ಈ ನಿಯಮಗಳ ಜಾರಿಗೆ
  3. ಮಾಲ್ಡಿವ್ಸ್’ನಲ್ಲಿರುವ ಆರೋಪಿಯನ್ನು ವಿಚಾರಣೆಗೆ ಆದೇಶಿಸುವ ಹಕ್ಕನ್ನು ಭಾರತದ ನ್ಯಾಯಾಲಯಗಳು ಪಡೆದಿವೆ.

ಮಹಾಶರದ್ (ಮಹಾರಾಷ್ಟ್ರಾದ ದಿವ್ಯಾಂಗರ ಆರೋಗ್ಯ ಮರುವಸತೀಕರಣ & ನೆರವಿನ ವ್ಯವಸ್ಥೆ) :

  1. ಮಹಾರಾಷ್ಟ್ರಾದ ಸಾಮಾಜಿಕ ನ್ಯಾಯ ಇಲಾಖೆಯಿಂದ ಜಾರಿಗೆ
  2. ವಿಕಲ ಚೇತನರಿಗೆ ಅಗತ್ಯವಾದ ಸಲಕರಣೆಗಳನ್ನು ಒದಗಿಸುವ ಡಿಜಿಟಲ್ ವೇದಿಕೆಯಾಗಿದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos