Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 9 ಡಿಸೆಂಬರ್ 2020

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 

ಪರಿವಿಡಿ

ಸಾಮಾನ್ಯ ಪತ್ರಿಕೆ -1

1. ಮೌಂಟ್ ಎವರೆಸ್ಟ್ 3 ಅಡಿ ಎತ್ತರ ಏರಿಕೆ – ಚೀನಾ ಮತ್ತು ನೇಪಾಳದಿಂದ ಅನುಮೋದನೆ

 

ಸಾಮಾನ್ಯ ಪತ್ರಿಕೆ-2:

1. ನ್ಯಾಯಾಂಗದಿಂದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಹೇಳಿಕೆ/ಆದೇಶಕ್ಕೆ ನಿರಾಕರಣೆ

2. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (NCLAT)

3. ಎಲುರು ನಿಗೂಡ ಕಾಯಿಲೆ ಸೋಂಕಿತರ ರಕ್ತದ ಮಾದರಿಗಳನ್ನು AIIMS ನಿಂದ ಆವಿಷ್ಕಾರ

4. ಪಾಕಿಸ್ತಾನ, ಚೀನಾದಿಂದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ

 

ಸಾಮಾನ್ಯ ಪತ್ರಿಕೆ-3:

1. ‘ಭಾರತದಲ್ಲಿ ತಯಾರಿಸಿ’ ನೀತಿಯಿಂದಾಗಿ ಜೀವ ವಾಹಕ ಔಷಧಿಯ ಪೂರೈಕೆಗೆ ಧಕ್ಕೆ

2. ಮಕ್ಕಳ ಅಶ್ಲಿಲತೆಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಪೋಲಿಸರಿಂದ ಕ್ರಮ

 

ಪೂರ್ವಭಾವಿ ಪರೀಕ್ಷೆ:

1. ಚೀನಾದ ಟೈರ್ ಕಾರ್ಖಾನೆಯಿಂದ ಶ್ರೀಲಂಕಾಕ್ಕೆ $300 ಮಿಲಿಯನ್

2. ಉತರ ಐರ್ಲಾಂಡಿನ ಪ್ರೋಟೋಕೋಲ್ (Northern Ireland protocol)

3. ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ಭಾಗಿತ್ವ (PPD)

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

ಮೌಂಟ್ ಎವರೆಸ್ಟ್ 3 ಅಡಿ ಎತ್ತರ ಏರಿಕೆ – ಚೀನಾ ಮತ್ತು ನೇಪಾಳದಿಂದ ಅನುಮೋದನೆ


ಸಂದರ್ಭ

1954ರಲ್ಲಿ ಗುರುತಿಸಿದ್ದ ಮೌಂಟ್ ಎವರೆಸ್ಟ್ ಪರ್ವತದ ಎತ್ತರವು ಸಮುದ್ರ ಮಟ್ಟದಿಂದ 86 cm ಹೆಚ್ಚಿದೆ ಎಂದು ಇತ್ತೀಚಿಗೆ ನೇಪಾಳ ಮತ್ತು ಚೀನಾದ ವಿದೇಶಾಂಗ ಸಚಿವರು ಜಂಟಿಯಾಗಿ ಅನುಮೋದಿಸಿದ್ದಾರೆ.

 

ಮೌಂಟ್ ಎವರೆಸ್ಟ್ ಬಗ್ಗೆ

 1. ಈ ಪರ್ವತವು ನೇಪಾಳ ಮತ್ತು ಚೀನಾದ ಗಡಿಯಿಂದ ಪ್ರಾರಂಭವಾಗುವುದು
 2. ನೇಪಾಳದಲ್ಲಿ ಸಾಗರ್ ಮಾತಾ, ಚೀನಾದಲ್ಲಿ ಮೌಂಟ್ ಕೊಮೊಲಾಂಗ್ಮಾ ಪರ್ವತ ಎನ್ನಲಾಗಿದೆ

 

ಹಿನ್ನೆಲೆ:

ಇತ್ತೀಚಿಗೆ ಮೌಂಟ್ ಎವರೆಸ್ಟ್ ಪರ್ವತದ ಎತ್ತರದ ಕುರಿತು ಚರ್ಚೆ ಮೊದಲಾಯಿತು. ಎತ್ತರವನ್ನು ಶಿಲೆಯ ಎತ್ತರದಿಂದ ಅಥವಾ ಹಿಮದ ಎತ್ತರದಿಂದ ಪರಿಗಣಿಸುವುದರ ಕುರಿತು ವಿವಾದ ಮುನ್ನೆಲೆಗೆ ಬಂದಿದೆ.

 

ಈ ಹಿಂದಿನ ಮಾಪನ

1954ರಲ್ಲಿ ಭಾರತದ ಸಮೀಕ್ಷೆ ಈ ಪರ್ವತದ ಎತ್ತರವನ್ನು ಮೌಲ್ಯ ಮಾಪನ ಮಾಡಿತು. ಇದು ಗುರುತಿಸಿದ 8848 ಮೀ ಎತ್ತರ ಚೀನಾ ಹೊರತುಪಡಿಸಿ ವಿಶ್ವದಾದ್ಯಂತ ಅನುಮೋದನೆಗೊಳಗಾಯಿತು.

1999ರಲ್ಲಿ ಅಮೇರಿಕಾದ ತಂಡವೊಂದು ಮೌಂಟ್ ಎವರೆಸ್ಟ್ ಪರ್ವತದ ಔನ್ನತ್ಯವನ್ನು 8850ಮೀ ಎಂದಿತು.

mountains

Sources: Indian Express.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ: ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು

ನ್ಯಾಯಾಂಗದಿಂದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಹೇಳಿಕೆ/ಆದೇಶಕ್ಕೆ ನಿರಾಕರಣೆ


ಸಮಸ್ಯೆ:

ಕೈಗಾರಿಕೆ, ರಿಯಲ್ ಎಸ್ಟೇಟ್, ಶಕ್ತಿ ವಲಯ ಮತ್ತು ಇತರರು ಸಾಲ ಮನ್ನ, ಬಡ್ಡಿ ಅಂತ್ಯ ಮುಂತಾದ ವಿಷಯಗಲ ಮೇಲೆಯಲ್ಲಿ ಸರ್ಕಾರವನ್ನು ನ್ಯಾಯಾಂಗ ಮೆಟ್ಟಿಲೆರುವಂತೆ ಮಾಡಿದ್ದವು.

 • ಕೇಂದ್ರ ಸರ್ಕಾರ ಮೊರಟೊರಿಯಂ ಅವಧಿಯಲ್ಲಿ ಮಾಡಿದ ಎಲ್ಲ ವರ್ಗ ಮತ್ತು ವಲಯದಲ್ಲಿನ ಸಾಲಗಳ ಮೇಲಿನ ಬಡ್ಡಿ ಮನ್ನಾ ಕ್ರಮವು ಸುಮಾರು 6 ಲಕ್ಷ ಕೋಟಿಗಿಂತ ಅಧಿಕವೆಂದು ಅಂದಾಜಿಸಲಾಗಿದೆ.

 

ಸರ್ಕಾರದ ಕ್ರಮಗಳು

RBI ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಹಣಕಾಸು ಸಚಿವಾಲಯಗಳು ಸಕ್ರಿಯವಾಗಿ ಪ್ರತಿಕ್ರಿಯಿಸಿವೆ.

 1. ವಿದ್ಯುತ್ ವಿತರಣಾ ಕಂಪನಿಗಳಿಗೆ ಸರ್ಕಾರವು, 800 90,800 ಕೋಟಿಗಿಂತ ಹೆಚ್ಚಿನ ನಿಧಿಯನ್ನು ಮಂಜೂರು ಮಾಡಿತ್ತು. ಇದು ವಿದ್ಯುತ್ ಉತ್ಪಾದಕ ಮತ್ತು ಪ್ರಸರಣ ಕಂಪನಿಗಳಿಗೆ ತಮ್ಮ ಬಾಕಿ ಹಣವನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.
 2. ರಿಯಲ್ ಎಸ್ಟೇಟ್ ವಲಯದಲ್ಲಿ, COVID-19 ಅನ್ನು ‘ದೇವರ ಕಾರ್ಯ’ ಕ್ರಿಯೆಯೆಂದು ಪರಿಗಣಿಸುವ ಮೂಲಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳ ಅಡಿಯಲ್ಲಿ ಯೋಜನೆಗಳ ನೋಂದಣಿ ಮತ್ತು ಪೂರ್ಣಗೊಳಿಸುವ ದಿನಾಂಕಗಳನ್ನು ವಿಸ್ತರಿಸಲಾಯಿತು.
 3. ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯಕ್ಕೆ (MSME) ಸರ್ಕಾರವು 3 ಲಕ್ಷ ಕೋಟಿಗಳವರೆಗೆ ತುರ್ತು ಅನುದಾನವನ್ನು ಪ್ರಾರಂಭಿಸುವ ಮೂಲಕ ಪರಿಹಾರವನ್ನು ನೀಡಿತು. MSMEಗಳು ನಿಯಮಿತವಾಗಿ ಕಾರ್ಯಾಚರಣೆಯಲ್ಲಿರಲು ಸರ್ಕಾರದ 100% ಖಾತರಿಯನ್ನು ನೀಡಿದೆ. ಹಾಗಾಗಿ,₹ 1.87 ಲಕ್ಷ ಕೋಟಿ ಮಂಜೂರಾಗಿದೆ.
 4. ಕೇಂದ್ರೀಯ ಬ್ಯಾಂಕ್’ನ ಪರಿಶೀಲನಾ ಚೌಕಟ್ಟು ಸಾಲದ ಖಾತೆಗಳನ್ನು ಪ್ರಮಾಣಿತದಿಂದ  ನಿಷ್ಕ್ರಿಯ ಸಂಪತ್ತಾಗಿ ರೂಪಾಂತರವಾಗುವ ಸಾಧ್ಯತೆಯನ್ನು ನಿವಾರಿಸಿ ಮತ್ತು ರೇಟಿಂಗ್‌ಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಆತಂಕ ವ್ಯಕ್ತಪಡಿಸಿತು.
 5. SEBI ಮೊರಟೊರಿಯಂ ಸಮಯದಲ್ಲಿ ಮಾಡಿದ ಡೀಫಾಲ್ಟ್‌ಗಳನ್ನು ಸಡಿಲಿಸಲು ಸುತ್ತೋಲೆಯನ್ನು ಹೊರಡಿಸಿದೆ.
 6. ಕೇಂದ್ರೀಯ ಬ್ಯಾಂಕಿನ ಕಾಮತ್ ಸಮಿತಿಯು ಸಾಲದ ಪುನರ್ರಚನೆಗೆ ಕೋವಿಡ್-19ನಿಂದ ಪರಿಣಾಮಕ್ಕೊಳಗಾದ 26 ವಲಯಗಳಲ್ಲಿ ಸಾಲ ಪುನರ್ರಚನೆಗೆ ಹಣಕಾಸಿನ ನಿಯತಾಂಕಗಳನ್ನು ಶಿಫಾರಸು ಮಾಡಿದೆ.

Sources: the Hindu.

 

ವಿಷಯ: ಶಾಸನಾತ್ಮಕ, ನಿಯಂತ್ರಕ ಮತ್ತು ಇತರೆ ಅರೆ-ನ್ಯಾಯಿಕ ಸಂಸ್ಥೆಗಳು

ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (NCLAT)


ಕಂಪನಿ ಕಾಯ್ದೆ (2013) ಅಡಿಯಲ್ಲಿ ಈ ನ್ಯಾಯಾಧೀಕರಣಗಳನ್ನು ರಚಿಸಲಾಗಿದೆ.

ಕಾರ್ಯಗಳು:

ಕೆಳಗಿನ ಸಂದರ್ಭದಲ್ಲಿ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳುವುದು

 1. ದಿವಾಳಿ ಮತ್ತು ದಿವಾಳಿತನ ನೀತಿ ಕಾಯ್ದೆಯ (2016) ಸೆಕ್ಷೆನ್ 61 ಅಡಿಯಲ್ಲಿ NCLT
 2. ದಿವಾಳಿ ಮತ್ತು ದಿವಾಳಿತನ ನೀತಿಯ ಸೆಕ್ಷೆನ್ 202 ಮತ್ತು ಸೆಕ್ಷೆನ್ 211 ಅಡಿಯಲ್ಲಿ ಭಾರತೀಯ ದಿವಾಳಿ ಮತ್ತು ದಿವಾಳಿತನ ಮಂಡಳಿ
 3. ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ತೀರ್ಪುಗಳ ಪರಿಶೀಲನೆ

ಸಂಯೋಜನೆ:

 1. ನ್ಯಾಯಾಧೀಕರಣದ ಸಭಾಧ್ಯಕ್ಷರು, ಮೇಲ್ಮನವಿ ನ್ಯಾಯಾಧೀಕರಣದ ನ್ಯಾಯಿಕ ಸದಸ್ಯರನ್ನು ರಾಷ್ಟ್ರಪತಿ ಭಾರತದ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ನೇಮಿಸುವರು.
 2. ನ್ಯಾಯಾಧೀಕರಣದ ಸದಸ್ಯರನ್ನು ಮತ್ತು ತಾಂತ್ರಿಕ ಸದಸ್ಯರನ್ನು ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ನೇಮಕ ಮಾಡುವರು.
 3. ಭಾರತದ ಮುಖ್ಯ ನ್ಯಾಯಾಧೀಶರು (ಸಭಾಧ್ಯಕ್ಷರು)
 4. ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಅಥವಾ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರು – ಸದಸ್ಯರು
 5. ಔದ್ಯೋಗಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ – ಸದಸ್ಯರು
 6. ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾರ್ಯದರ್ಶಿ – ಸದಸ್ಯರು
 7. ಹಣಕಾಸು ಸಚಿವಾಲಯದ ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ – ಸದಸ್ಯರು

 

ಅರ್ಹತೆ:

 1. ಸಭಾಧ್ಯಕ್ಷ – ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಥವಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿರಬೇಕು
 2. ನ್ಯಾಯಿಕ ಸದಸ್ಯರು – ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಥವಾ ಕನಿಷ್ಠ 5 ವರ್ಷಗಳವರೆಗೆ ನ್ಯಾಯಾಧೀಕರಣದ ಸದಸ್ಯರಾಗಿರಬೇಕು
 3. ತಾಂತ್ರಿಕ ಸದಸ್ಯರು – ನಿರ್ಧಿಷ್ಟ ವಲಯದಲ್ಲಿ ವ್ಯಕ್ತಿಯ ಸಾಮರ್ಥ್ಯ, ಸಮಗ್ರತೆಯ ನೆಲೆಯಲ್ಲಿ ವಿಶೇಷ ಜ್ಞಾನ ಮತ್ತು ಕನಿಷ್ಠ 25 ವರ್ಷಗಳ ಅನುಭವ

 

ಅವಧಿ :

ಸಭಾಧ್ಯಕ್ಷರು ಮತ್ತು ಸದಸ್ಯರ ಕಾರ್ಯಾವಧಿ 5 ವರ್ಷ ಮತ್ತು 5 ವರ್ಷಗಳ ಅವಧಿವರೆಗೆ ಮರು-ನೇಮಕ ಮಾಡಬಹುದಾಗಿದೆ

Sources: the Hindu.

 

ವಿಷಯ : ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು

ಎಲುರು ನಿಗೂಡ ಕಾಯಿಲೆ ಸೋಂಕಿತರ ರಕ್ತದ ಮಾದರಿಗಳನ್ನು AIIMS ನಿಂದ ಪರೀಕ್ಷೆ


ಸಂದರ್ಭ:

ಆಂಧ್ರ ಪ್ರದೇಶದ ಎಲುರು ನಗರದಲ್ಲಿ ಕನಿಷ್ಠ 550 ಜನ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಅಖಿಲ ಭಾರತದ ವೈಧ್ಯಕೀಯ ವಿಜ್ಞಾನದ ಸಂಸ್ಥೆ ರಕ್ತ ಪರೀಕ್ಷೆಯನ್ನು ನಡೆಸಿದೆ.

 

ಇದಕ್ಕೆ ಕಾರಣ

 • ಕುಡಿಯುವ ನೀರಿನಲ್ಲಿ ಅಥವಾ ಹಾಲಿನಲ್ಲಿ ಸೀಸ ಮತ್ತು ನಿಕ್ಕಲ್ ಅಂಶದ ಇರುವಿಕೆಯೇ ಜನತೆಯ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ.

 

ರೋಗಿಗಳ ಲಕ್ಷಣಗಳು

ಅನೇಕ ಜನರಲ್ಲಿ ಉದ್ವೇಗ, ವಾಂತಿ, ತಲೆನೋವಿನ ಲಕ್ಷಣಗಳು ಗೋಚರವಾಗಿವೆ. ಆದರೆ ಇದುವರೆಗೆ ಒಬ್ಬರಿಂದೊಬ್ಬರಿಗೆ ಹರಡಿದ ಲಕ್ಷಣಗಲಿಲ್ಲ.

 

ಪ್ರಮುಖಾಂಶಗಳು

 1. ರಕ್ತದ ಮಾದರಿಯಲ್ಲಿ ರಾಸಾಯನಿಕಗಳ ಪ್ರಮಾಣ ಅತೀ ಕಡಿಮೆಯಿರುವುದರಿಂದ ರೋಗಿಗಳು ತ್ವರಿತವಾಗಿ ಚೇತರಿಕೆ ಕಾಣುವರು.
 2. ವಿಷಾಣುವಿನ ಪ್ರಮಾಣ ಅಧಿಕವಾಗಿದ್ದರೆ ಅಥವಾ ವಾಯುವಿನ ಮೂಲಕ ಹರಡಿದರೆ ಇದು ನರಗಳ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು.

 

ಸೀಸ ಪ್ರಮಾಣದ ಏರಿಕೆಗೆ ಕಾರಣಗಳು

 1. ಸೀಸ-ಆಮ್ಲದ ಬ್ಯಾಟರಿಗಳ ಅನೌಪಚಾರಿಕವಾದ ಮರುಬಳಕೆ
 2.  ವಾಹನಗಳ ಮಾರಾಟ ಅಧಿಕವಾಗಿದ್ದು, ಅದಕ್ಕೆ ಪೂರಕವಾಗಿ ವಾಹನಗಳ ಬ್ಯಾಟರಿ ಮರುಬಳಕೆಯ ನಿಯಮ ಮತ್ತು ಮೂಲಸೌಕರ್ಯದ ಕೊರತೆ
 3. ಬ್ಯಾಟರಿ ಮರುಬಳಕೆಯ ಕಾನೂನುಬಾಹಿರ ಪದ್ಧತಿಯಿಂದಾಗಿ ಆಮ್ಲ, ಸೀಸದ ಕಣಗಳು ಮಣ್ಣನ್ನು ಸೇರುವವು.

general_facts

Sources: the Hindu.

 

ವಿಷಯ: ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿತ ರಾಷ್ಟ್ರಗಳ ರಾಜಕೀಯ ಬೆಳವಣಿಗೆಗಳು ಮತ್ತು ನೀತಿಗಳಿಂದ ಭಾರತದ ಹಿತಾಸಕ್ತಿ, ಅನಿವಾಸಿ ಭಾರತೀಯರ ಮೇಲೆ ಉಂಟಾಗುವ ಪರಿಣಾಮ

ಪಾಕಿಸ್ತಾನ, ಚೀನಾದಿಂದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ


ಸಂದರ್ಭ:

ಅಮೇರಿಕಾ ರಾಜ್ಯ ಇಲಾಖೆ ಅಂತರಾರಾಷ್ಟ್ರೀಯ ಧಾರ್ಮಿಕ ಸ್ವಾತ್ನತ್ರ್ಯ ಕಾಯ್ದೆ (IRFA) ಅಡಿಯಲ್ಲಿ ಅನೇಕ ರಾಷ್ಟ್ರಗಳನ್ನು ವಿವಿಧ ಪಟ್ಟಿಗಳಲ್ಲಿ ಇರಿಸಿದೆ.

 

ಮುಖ್ಯಾಂಶಗಳು:

 1. ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮಾಡಿದ 8 ಪ್ರಮುಖ ದೇಶಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳು ಮುಖ್ಯವಾಗಿವೆ. ಮಯನ್ಮಾರ್, ಎರಿಟ್ರಿಯ, ಇರಾನ್, ನೈಜಿರಿಯ, ಉತ್ತರ ಕೊರಿಯ, ಸೌದಿ ಅರೇಬಿಯಾ, ತಜಿಕಿಸ್ತಾನ ಮತ್ತು ತುರ್ಕ್ಮೇನಿಸ್ತಾನ ಉಳಿದ ರಾಷ್ಟ್ರಗಳಾಗಿವೆ.
 2. ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗೆ ಸಹಿಷ್ಣತಾಭಾವವನ್ನು ತೋರಿದ್ದ ಕೋಮರೋಸ್, ಕ್ಯೂಬಾ, ನಿಕಾರಗೊವಾ ಮತ್ತು ರಷ್ಯಾದ ಸರ್ಕಾರಗಳನ್ನು ವಿಶೇಷ ಗಮನಿಕ ಪಟ್ಟಿಗೆ ಸೇರಿಸಲಾಗಿದೆ.
 3. ಅಲ್-ಶಾಬಾದ್, ಆಲ್-ಖೈದಾ, ಬೊಕೊ ಹರಾಮ್, ತಾಹಿರ್ ಅಲ್-ಶಾಮ್, ಹೌತಿಯರು, ISIS ತಾಲಿಬಾನ್ ಮುಂತಾದವುಗಳನ್ನು ನಿರ್ಧಿಷ್ಟ ಸಮಸ್ಯೆಯ ಘಟಕಗಳು (CPCs) ಎನ್ನಲಾಗಿದೆ.
 4. ಆದರೆ, USCIRF ಶಿಫಾರಸ್ಸಿನಂತೆ ಭಾರತ, ರಷ್ಯಾ, ಸಿರಿಯಾ ಮತ್ತು ವಿಯಾಟ್ನಾಂ ದೇಶಗಳನ್ನು CPCs ಎಂದು ನಿರ್ದೇಶಿಸಲು ರಾಜ್ಯ ಇಲಾಖೆ ನಿರಾಕರಿಸಿರುವುದು ಗಮನಿಸಬೇಕಾದ ಅಂಶವಾಗಿದೆ.

 

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅಮೇರಿಕಾದ ಆಯೋಗ (USCIRF)

 • 1988 ರಲ್ಲಿ ಅಮೇರಿಕಾ ಒಕ್ಕೂಟ ಸರ್ಕಾರದ ಆಯೋಗದಿಂದ ಸ್ಥಾಪಿತವಾದ ಈ ಸ್ವತಂತ್ರ ಸಂಸ್ಥೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿಶ್ವಾಸದ ಸಾರ್ವತ್ರಿಕ ಹಕ್ಕುಗಳನ್ನು ನಿರ್ವಹಿಸುವುದು
 • ಇದು ಜಾಗತಿಕವಾಗಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು ನಿಯಂತ್ರಿಸಲು ಅಂತರಾರಾಷ್ಟ್ರೀಯ ಮಾಪಕಗಳನ್ನು ರಚಿಸುವುದು.
 • ಮಾನವ ಹಕ್ಕುಗಳ ಮೇಲಿನ ಸಾರ್ವತ್ರಿಕ ಘೋಷಣೆಯು ಪ್ರತಿಯೊಬ್ಬರಿಗೂ ಆಲೋಚನೆ, ಆತ್ಮಸಾಕ್ಷಿ, ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇದು ಮತಾಂತರದ ಸ್ವಾತಂತ್ರ್ಯ, ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಮುಂತಾದವನ್ನು ಒಳಗೊಂಡಿದೆ.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಜಾಗತೀಕರಣದಿಂದ ಆರ್ಥಿಕತೆ ಮತ್ತು ಕೈಗಾರಿಕೆಯ ಬೆಳವಣಿಗೆಯ ಮೇಲಾದ ಪರಿಣಾಮಗಳು, ಕೈಗಾರಿಕಾ ನೀತಿಯಯಲ್ಲಾದ ಬದಲಾವಣೆಗಳು

ಭಾರತದಲ್ಲಿ ತಯಾರಿಸಿ’ ನೀತಿಯಿಂದಾಗಿ ಜೀವ ವಾಹಕ ಔಷಧಿಯ ಪೂರೈಕೆಗೆ ಧಕ್ಕೆ


ಸಂದರ್ಭ:

ಭಾರತದಾಚೆ ತಯಾರಾದ ನಿರ್ದಿಷ್ಟ ವೈಧ್ಯಕೀಯ ಸಲಕರಣೆಗಳನ್ನು (ಮುಖ್ಯವಾಗಿ ಕೋವಿಡ್-19 ಮತ್ತು ಕ್ಯಾನ್ಸರ್) ನಿರ್ಬಂಧಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಾ ಇಲಾಖೆಗೆ ರೈಲ್ವೆ ಸಚಿವಾಲಯ ಸೂಚಿಸಿದೆ.

 

ಇಲ್ಲಿಯ ಸಮಸ್ಯೆ

ಅನುಷ್ಠಾನಗೊಂಡಿರುವ ‘ಭಾರತದಲ್ಲಿ ತಯಾರಿಸಿ‘ ನೀತಿಯಲ್ಲಿ ಸ್ಥಳೀಯತೆಯ ಸರಕಿನ ನಿಬಂಧನೆಯನ್ನು ವರ್ಗ-I ವರ್ಗ –II ವಿಸ್ತರಿಸಿಲ್ಲ

ಈ ವರ್ಗದ ಪೂರೈಕೆದಾರರು ಸರ್ವ ಸರಕು ಮತ್ತು ಸೇವೆಗಳ ವಹಿವಾಟು 200 ಕೋಟಿಗಿಂತ ಕಡಿಮೆಯಿದ್ದರೆ ಅರ್ಹರಾಗಬೇಕು.

 

ಇದರ ಪರಿಣಾಮ

ಭಾರತದ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಲಭ್ಯವಿರುವ ಕೆಲವು ನಿರ್ದಿಷ್ಟ ಔಷಧಗಳು ಭಾರತದಾಚೆ ನಿರ್ಮಾಣವಾಗಿವೆ. ಇವುಗಳು ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿಲ್ಲ.

 

ಭಾರತದಲ್ಲಿ ತಯಾರಿಸಿ ಅಭಿಯಾನ

ಈ ಅಭಿಯಾನವನ್ನು ಭಾರತ ಸರ್ಕಾರವು 2014 ರಲ್ಲಿ ಪ್ರಾರಂಭಿಸಿತು. ಭಾರತದಲ್ಲಿ ತಯಾರಿಕ ವಲಯವನ್ನು ಉತ್ತೇಜಿಸುವುದು, ಸೇವೆ ಮತ್ತು ಸರಕಿನ ತಯಾರಿಕೆಯಲ್ಲಿ ಹೂಡಿಕೆಯನ್ನು ವೃದ್ಧಿಸಿ ಆರ್ಥಿಕತೆಯನ್ನು ಸಂವರ್ಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 

ಗುರಿಗಳು :

 1. ಆರ್ಥಿಕತೆಯಲ್ಲಿ ತಯಾರಿಕಾ ವಲಯದ ಬೆಳವಣಿಗೆಯ ದರವನ್ನು 12-14% ನಷ್ಟು ವಾರ್ಷಿಕವಾಗಿ ವೃದ್ಧಿಸುವುದು.
 2. 2022 ರ ವೇಳೆಗೆ ಆರ್ಥಿಕತೆಯಲ್ಲಿ ತಯಾರಿಕ ವಲಯದ ಮೂಲಕ 100 ಮಿಲಿಯನ್ ಉದ್ಯೋಗಗಳನ್ನು ನಿರ್ಮಿಸುವುದು
 3. ಜಿಡಿಪಿಯಲ್ಲಿ ಈಗಿನ 15-16% ನಷ್ಟಿರುವ ತಯಾರಿಕ ವಲಯದ ಕೊಡುಗೆಯನ್ನು 2022 ರ ವೇಳೆಗೆ 25%ಗೆ ವೃದ್ಧಿಸುವುದು

 

ಇದುವರೆಗಿನ ಫಲಿತಾಂಶ

 1. 2013-14 ರಿಂದ 2015-16 ವರೆಗೆ 20 ಮಿಲಿಯನ್ ಡಾಲರ್’ನಷ್ಟು ವಿದೇಶಿ ಹೂಡಿಕೆ ಏರಿಕೆಯಾಗಿದ್ದರು ಭಾರತೀಯ ಕೈಗಾರಿಕೀಕರಣದ ಮೇಲೆ ನಿರೀಕ್ಷಿತ ಕೊಡುಗೆ ನೀಡಿಲ್ಲ
 2. ತಯಾರಿಕ ವಲಯದಲ್ಲಿ ನೇರ ಹೊಡಿಕೆ ಮೊದಲಿಗಿಂತಲೂ ಕುಂಟಿತವಾಗಿದೆ. (2014-15 – 9.6 ಬಿಲಿಯನ್ ಡಾಲರ್, 2017-18 – 7 ಬಿಲಿಯನ್ ಡಾಲರ್)
 3. ಸೇವಾ ವಲಯದಲ್ಲಿ ನೇರ ಹೂಡಿಕೆಯ ಪ್ರಮಾಣ ತಯಾರಿಕಾ ವಲಯಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ಇದು ಭಾರತೀಯ ಸಾಂಪ್ರದಾಯಿಕ ಆರ್ಥಿಕತೆಯಲ್ಲಿ ಕಂಪ್ಯೂಟರ್ ಸೇವೆಗಳ ಅಭಿವೃದ್ಧಿಯನ್ನು ನಿದರ್ಶಿಸುತ್ತದೆ.
 4. ಜಾಗತಿಕವಾಗಿ ತಯಾರಿಕ ವಲಯದ ಉತ್ಪನ್ನಗಳಲ್ಲಿ ಭಾರತದ ಭಾಗ ಶೇ2 ಇದ್ದರೆ, ಚೀನಾದ ಭಾಗ ಶೇ18 ಇದೆ.

Sources: the Hindu.

 

ವಿಷಯ : ಸಂವಹನ ಜಾಲ, ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳು ಆಂತರಿಕ ಭದ್ರತೆಗೆ ಒಡ್ಡುವ ಸವಾಲುಗಳು; ಸೈಬರ್ ಭದ್ರತೆಯ ಮೂಲಾಂಶಗಳು

ಮಕ್ಕಳ ಅಶ್ಲಿಲತೆಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಪೋಲಿಸರಿಂದ ಕ್ರಮ


ಸಂದರ್ಭ:

ಇಂಟರ್ಪೋಲ್’ನಿಂದ ಪಡೆದ ತಂತ್ರಾಂಶದಿಂದ ಮಹಾರಾಷ್ಟ್ರ ಪೋಲಿಸಿನ ಸೈಬರ್ ವಿಭಾಗ ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲತೆಯನ್ನು ನಿಯಂತ್ರಿಸಲು ಮುಂದಾಗಿದೆ.

 

ತಂತ್ರಾಂಶದ ಕುರಿತು

 1. ತಂತ್ರಾಂಶವು ನಗ್ನತೆಯ ಚಿತ್ರಗಳ ಗುರುತಿಸುವಿಕೆ, ಮುಖದ ರಚನೆಯ ನೆಲೆಯಲ್ಲಿ ವಯಸ್ಸಿನ ಗುರುತಿಸುವಿಕೆ ಮುಂತಾದ ಕ್ರಮಗಳನ್ನು ಅಳವಡಿಸಿದೆ.
 2. ಇದು ಅಲ್ಗೋರಿದಂ (Algorithms)ಗಳ ಮೂಲಕ ಮಕ್ಕಳ ಅಶ್ಲೀಲತೆ ಕುರಿತ ಪದಗಳನ್ನು ಗುರುತಿಸಲು ಕಾನೂನು ಅನುಷ್ಟಾನದ ಸಂಸ್ಥೆಗಳಿಗೆ ಪೂರಕವಾಗಿದೆ
 3. ಇದರಲ್ಲಿನ ಕೆಲವು ತಂತ್ರಗಳ ಮೂಲಕ ಸಂಸ್ಥೆಗಳು ಅಶ್ಲೀಲತೆಗೆ ಸಂಬಂಧಿಸಿದ ಚಿತ್ರ, ಪದ, ಕಿರು ಚಿತ್ರಗಳನ್ನು ಪರಿಶೀಲಿಸುತ್ತದೆ.

 

ಮಹಾರಾಷ್ಟ್ರದ TRACE ತಂಡ

 1. ದಕ್ಷಿಣ ಏಷ್ಯಾದ ಇಂಟರ್ಪೋಲ್ ವಿಭಾಗ ರಾಜ್ಯದ 12 ಅಧಿಕಾರಿಗಳಿಗೆ ತರಬೇತಿ ನೀಡಲು ಮುಂದಾಗಿದೆ. ಇವರು TRACE ಘಟಕದ ಮೂಲಾಂಶವಾಗಿದೆ.
 2. ಇದು 2019 ರಿಂದ ದೇಶಾದ್ಯಂತ ಜಾರಿಗೆಯಾದ ‘ಮಕ್ಕಳ ಲೈಂಗಿಕ ದೌರ್ಜನ್ಯ ಯೋಜನೆ’ಯ (Child Sexual Abuse Material – CSAM) ಭಾಗವಾಗಿದೆ.

 

CSAMಗೆ ಉತ್ತೇಜನ ದೊರೆಯಲು ಕಾರಣ

 1. ಅಮೇರಿಕಾ ಮೂಲದ ಸರ್ಕಾರೇತರ ಸಂಸ್ಥೆ ಶೋಷಿತ ಮತ್ತು ಕಾಣೆಯಾದ ಮಕ್ಕಳ ರಾಷ್ಟ್ರೀಯ ಕೇಂದ್ರವು (NCMEC)  ಉತ್ತಮ ಅಂಶಗಳನ್ನು ಭಾರತೀಯ ಸಂಸ್ಥೆಗಳಿಗೆ ಸಮಾಲೋಚನೆ ನಡೆಸಿದ್ದರಿಂದ 2019 ರಲ್ಲಿ ಮಕ್ಕಳ ಅಶ್ಲೀಲತೆ ಮತ್ತು ಶೋಷಣೆಯನ್ನು ನಿಯಂತ್ರಿಸುವ ಅಭಿಯಾನಕ್ಕೆ ವೇದಿಕೆ ನಿರ್ಮಾಣವಾಯಿತು.
 1.  ‘ಅಪರಾಧ ದಾಖಲೆಗಳ ರಾಷ್ಟ್ರೀಯ ಮಂಡಳಿ’ಯಿಂದ ರಾಜ್ಯಗಳು ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಪ್ರಕರಣಗಳ ಮೇಲೆ ಸಲಹೆಗಳನ್ನು ಪಡೆದಿದ್ದಾರೆ

interpols

Sources: Indian Express.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಚೀನಾದ ಟೈರ್ ಕಾರ್ಖಾನೆಯಿಂದ ಶ್ರೀಲಂಕಾಕ್ಕೆ $300 ಮಿಲಿಯನ್

ಶ್ರೀಲಂಕಾದ ಆಯಾಕಟ್ಟಿನ ಬಂದರು ವಲಯದಲ್ಲಿ ಚೀನಾ $300 ಮಿಲಿಯನ್ ಹೂಡಿಕೆಯ ಮೂಲಕ ಟೈರ್ ಕಾರ್ಖಾನೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇದು ಹಂಬಂಟೋಟ ಬಂದರಿಗೆ ಪಕ್ಕದಲ್ಲಿದೆ. ಶ್ರೀಲಂಕಾ 1.4 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಲು ವಿಫಲವಾದುದರಿಂದ ಈ ಬಂದರನ್ನು ಚೀನಾ ಕಂಪನಿಗೆ 2017 ರಿಂದ ಗುತ್ತಿಗೆ ನೀಡಲಾಗಿದೆ.

ಹಿನ್ನೆಲೆ :

Belt & Road ಮೂಲಸೌಕರ್ಯ ಅಭಿಯಾನದ ಮೂಲಕ ಚೀನಾ ವಿಶ್ವದಾದ್ಯಂತ ತನ್ನ ಪ್ರಭಾವವನ್ನು ಬೀರಲು ಮುಂದಾಗಿರುವುದು ಪಾಶ್ಚಾತ್ಯ ರಾಷ್ಟ್ರಗಳಿಗೆ ಮತ್ತು ಪ್ರಾದೇಶಿಕ ವಲಯದಲ್ಲಿ ಸಮಸ್ಯೆಯನ್ನು ಉಂಟುಮಾಡಿದೆ.

srilanka_1

 

ಉತರ ಐರ್ಲಾಂಡಿನ ಪ್ರೋಟೋಕೋಲ್ (Northern Ireland protocol)

 1. ಬ್ರೆಕ್ಸಿಟ್ ನಂತರ ಉತ್ತರ ಐರ್ಲೆಂಡ್’ನ 310 ಮೈಲಿ ಗಡಿ ಭಾಗವು ಯುಕೆ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವೆ ಇರುವ ಏಕ ಮಾತ್ರ ಭೂಭಾಗವಾಗಿದೆ.
 2. ಜನೇವರಿ 1 ರಿಂದ ಯುಕೆ- ಯುರೋಪಿಯನ್ ಒಕ್ಕೂಟದ ನವ ಸಂಬಂಧ ಪ್ರಾರಂಭವಾಗಲಿದ್ದು ಸರಕುಗಳನ್ನು ಐರಿಷ್ ಗಡಿಯಲ್ಲಿ ಪರಿಶೀಲನೆಗೊಳಪಡಿಸದೆ ವಹಿವಾಟಿಗೆ ಸಹಕರಿಸಬೇಕೆಂದು ‘ಉತ್ತರ ಐರ್ಲೆಂಡ್ ಪ್ರೋಟೋಕೋಲ್’ ನಲ್ಲಿ ಅನುಮೋದಿಸಲಾಗಿದೆ.

northern_ireland

 

ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ಭಾಗಿತ್ವ (PPD)

ಸಂದರ್ಭ:

ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ಭಾಗಿತ್ವವು ಅಂತರ್-ಸಚಿವಾಲಯದ ಸಮಾವೇಶವಾಗಿದೆ. ಇತ್ತೀಚಿಗೆ ನಡೆದ ಈ ಸಮಾವೇಶದಲ್ಲಿ ಭಾರತ ಭಾಗವಹಿಸಿತ್ತು.

 

PPD ಕುರಿತು:

 • ಇದು ಆರೋಗ್ಯ, ಜನಸಂಖ್ಯೆ, ಅಭಿವೃದ್ಧಿ ಮುಂತಾದ ಸಾಮಾಜಿಕ ವಲಯದಲ್ಲಿ ದಕ್ಷಿಣ-ದಕ್ಷಿಣ ಸಹಕಾರವನ್ನು ಉತ್ತೇಜಿಸುವ ಅಂತರ್-ಸರ್ಕಾರಿಯ ಸಂಸ್ಥೆಯಾಗಿದೆ.
 • ಬಾಂಗ್ಲಾದೇಶದ ಢಾಕಾದಲ್ಲಿ ಇದರ ಕಾರ್ಯಾಲಯವಿದೆ.
 • ಪ್ರಸ್ತುತ 26 ಅಭಿವೃದ್ಧಿಶೀಲ ರಾಷ್ಟ್ರಗಳು ಸದಸ್ಯತ್ವ ಪಡೆದಿದ್ದು, ಜಾಗತಿಕವಾಗಿ 59% ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
 • ಜನಸಂಖ್ಯೆ ಮತ್ತು ಅಭಿವೃದ್ಧಿ ಮೇಲಿನ ಅಂತರರಾಷ್ಟ್ರೀಯ ಸಮಾವೇಶ (1994) ದಲ್ಲಿ ಜಾರಿಗೆ ತರಲಾಯಿತು. ಇದು ಏಷಿಯಾ, ಆಫ್ರೀಕಾ, ಲ್ಯಾಟಿನ್ ಅಮೇರಿಕಾದ 10 ಅಭಿವೃದ್ಧಿಶೀಲ ರಾಷ್ಟ್ರಗಳ ಸರಕಾರಗಳ ಮೈತ್ರಿಯಾಗಿದ್ದು ಕೈರೋ ಕ್ರಿಯಾ ಯೋಜನೆಯ (POA) ಅನುಷ್ಠಾನಕ್ಕೆ ಪೂರಕವಾಗಿದೆ.
 • ಇದನ್ನು 179 ರಾಷ್ಟ್ರಗಳು ಅಂಗೀಕರಿಸಿದ್ದು, ಸಂತಾನೋತ್ಪತ್ತಿ ಆರೋಗ್ಯ, ಕುಟುಂಬ ಯೋಜನೆ ಮುಂತಾದವುಗಳಲ್ಲಿನ ಉತ್ತಮ ಕ್ರಮಗಳ ಹಂಚಿಕೆಯ ಮೂಲಕ ಅಭಿವೃದ್ಧಿಗೆ ಗಮನ ನೀಡಲಾಗುವುದು. ಇದು ಸರ್ಕಾರ, NGOs, ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪರಿಣಾಮಕಾರಿ ಭಾಗಿತ್ವಕ್ಕೆ ಪ್ರೇರಕವಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos