Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 11 ಡಿಸೆಂಬರ್ 2020

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 

ಪರಿವಿಡಿ :

ಸಾಮಾನ್ಯ ಪತ್ರಿಕೆ 1:

1. ಇಂದು ಅಮೇರಿಕಾದ ಉತ್ತರ ಭಾಗದಲ್ಲಿ ದೃವೀಯ ಬೆಳಕು

 

ಸಾಮಾನ್ಯ ಪತ್ರಿಕೆ 2:

1. ಕರ್ನಾಟಕದಿಂದ ಗೋ-ಹತ್ಯೆ ನಿಷೇದ ಮಸೂದೆ

2. ಆಂತ್ರಾಕ್ಸ್’ನಿಂದಾಗಿ ಆನೆಯ ಮರಣದ ನಂತರ ಲಸಿಕೆ ಅಭಿಯಾನ

3. ಅಸಿಯಾನದ ರಕ್ಷಣಾ ಸಚಿವರಿಂದ ಸಭೆ (ADMM-Plus)

 

ಸಾಮಾನ್ಯ ಪತ್ರಿಕೆ 3:

1. ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನಾ (ABRY)

2. Quantum key distribution (QKD).

3. ಸಂಸತ್ತಿನ ನವ ಕಟ್ಟಡ

4. ಇಸ್ಲಾಂವಾದಕ್ಕೆ ವಿರೋಧವಾಗಿ ಫ್ರಾನ್ಸ್’ನ ಕಾನೂನು

 

ಪೂರ್ವಾಭಾವಿ ಪರೀಕ್ಷೆ:

1. ಜಗನನ್ನ ಜೀವ ಕ್ರಾಂತಿ ಯೋಜನೆ

2. HelpAge Indiaಗೆ 2020ರ ವಿಶ್ವ ಸಂಸ್ಥೆಯ ಜನಸಂಖ್ಯ ಪ್ರಶಸ್ತಿ

3. ನಗದಿಗಿಂತ ಉತ್ತಮ ಮೈತ್ರಿ (Better Than Cash Alliance)

4. ಹನುಕ್ಕಃ (Hanukkah)

5. Ischaemum janarthanamii.

6. ಕೊಲಿವಾರ್ ಸೇತುವೆ

7. ವಿಶ್ವದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಉಪಗ್ರಹ ಆಧಾರಿತ IoT ಜಾಲ

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

ಇಂದು ಅಮೇರಿಕಾದ ಉತ್ತರ ಭಾಗದಲ್ಲಿ ದೃವೀಯ ಬೆಳಕು


ಸಂದರ್ಭ:

ಯೂರೋಪಿನ ದೃವೀಯ ವಲಯದ ಉನ್ನತ ಸ್ಥರದಲ್ಲಿ ಗೋಚರವಾಗುವುದು. ಈ ಆಯಾಮವು ಅಮೇರಿಕಾದ ಪೆನ್ಸಲ್ವೇನಿಯಾ ಭಾಗಗಳಲ್ಲಿ ಗೋಚರವಾಗುವುದು.

 

ಪ್ರಮುಖಾಂಶ

 1. ಇವುಗಳು Sunspot ನಿಂದ ಉಗಮವಾಗುವ ಸೌರ ಮಾರುತಗಳಿಂದ ಉಂಟಾಗುವವು.
 2. ಸೌರ ಸ್ಪೋಟದಿಂದ ಹೊಮ್ಮುವ Coronal Mass Ejection (CME) ಎಂಬ ವಿಕಿರಣತೆಯಿಂದ ಮಾರುತಗಳು ಉಂಟಾಗುವವು.

 

ಆರೋರಾ

ಇದನ್ನು ದೃವೀಯ ಬೆಳಕು ಎನ್ನಲಾಗಿದೆ. ಇದು ದೃವೀಯ ವಲಯದ ಉನತ ಸ್ಥರದಲ್ಲಿ ಗೋಚರವಾಗುವ ಬೆಳಕಾಗಿದೆ.

 

ವಿಧಗಳು:

ಇದರಲ್ಲಿ ಆರೋರಾ ಬೋರಿಯಾಲಿಸ್ ಮತ್ತು ಆರೋರಾ ಆಸ್ಟ್ರಲಿಸ್ ಎಂಬ ಎರಡು ವಿಧಗಳಿವೆ. ಇವುಗಳನ್ನು ಉತ್ತರೀಯ ಬೆಳಕು ಮತ್ತು ದಕ್ಷಿಣಿಯ ಬೆಳಕು ಎನ್ನಲಾಗಿದೆ.

 

ವರ್ಣಗಳು:

ಸಾಮಾನ್ಯವಾಗಿ ಹಸಿರು ಬಣ್ಣದಿಂದ ಕೂಡಿರುವ ಆರೋರಾಗಳು ಬಿಳಿ, ಗುಲಾಬಿ, ನೀಲಿ, ಕೆಂಪು, ವರ್ಣಗಳನ್ನು ಸಹ ಹೊಂದಿದೆ. ಈ ಬಣ್ಣಗಳು ವಿಭಿನ್ನ ಆಕಾರದಲ್ಲಿ ಗೋಚರವಾಗುವವು.

 

ಇವುಗಳ ಉಗಮದ ಹಿಂದಿನ ವಿಜ್ಞಾನ

 1. ನಮ್ಮ ಗ್ರಹ ಸೂರ್ಯನೊಂದಿಗೆ ವಿದ್ಯುತ್ಕಾಂತೀಯ ರೂಪದಲ್ಲಿ ಸಂಪರ್ಕ ಹೊಂದಿರುವುದಕ್ಕೆ ನಿದರ್ಶನವಾಗಿದೆ.
 2. ಭೂಮಿಯ ವಾಯುಮಂಡಲದ ಉನ್ನತ ಸ್ಥರದಲ್ಲಿರುವ ಆಮ್ಲಜನಕ ಮತ್ತು ಸಾರಜನಕದ ಎಲೆಕ್ಟ್ರಾನ್’ಗಳ ನಡುವಿನ ಸಂಘರ್ಷದಿಂದ ಆರೋರಾಗಳು ಉಂಟಾಗುವವು.
 3. ಭೂಮಿಯ ಅಯಸ್ಕಾಂತೀಯಗೋಳದಿಂದ ಉಗಮವಾಗುವ ಎಲೆಕ್ಟ್ರಾನ್’ಗಳು ಶಕ್ತಿಯನ್ನು ಆಮ್ಲಜನಕ ಮತ್ತು ಸಾರಜನಕದ ಅಣುಗಳಿಗೆ ವರ್ಗಾಯಿಸುವ ಮೂಲಕ ಅಸ್ತಿತ್ವ ಪಡೆಯುವವು.
 4. ಈ ಅನಿಲಗಳು ಸಾಮಾನ್ಯ ಸ್ಥಿತಿಗೆ ಮರಳಿದಾಗ ಬೆಳಕಿನ ರೂಪದಲ್ಲಿ ಶಕ್ತಿಯನ್ನು ಫೋಟಾನ್’ಗಳ ಮೂಲಕ್ ಬಿಡುಗಡೆಗೊಳಿಸುವುದು.
 5. ಈ ಎಲೆಕ್ಟ್ರಾನ್’ಗಳು ವಾಯುಮಂಡಲದೊಂದಿಗೆ ಸಂಧಿಸಿದಾಗ ಕಣ್ಣಿಗೆ ಗೋಚರವಾಗುವಂತೆ ಬೆಳಕನ್ನು ಚೆಲ್ಲಿ ಸುಂದರ ಆರೋರಾದ ರೂಪ ತಾಳುವುದು.

 

ಉಗಮ ತಾಣ

ಇವುಗಳು 100 ರಿಂದ 400 ಕಿ.ಮೀ ಔನ್ನತ್ಯದಲ್ಲಿ ಉಗಮವಾಗುವವು.

 

ಪರಿಣಾಮಗಳು :

 1. ಇದು ಸಂವಹನದ ಮಾರ್ಗವನ್ನು, ರೇಡಿಯೋ ವ್ಯವಸ್ಥೆಯನ್ನು, ವಿದ್ಯುತ್ ಹರಿವಿನ ಮೇಲೆ ಪ್ರಭಾವ ಬೀರುವುದು.
 2. ಸೌರ ಮಾರುತದ ರೂಪದಲ್ಲಿರುವ ಸೌರ ಶಕ್ತಿ ಈ ಪ್ರಕ್ರಿಯೆಯನ್ನು ಚಾಲಕವಾಗಿದೆ

Auroras_affect

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು

ಕರ್ನಾಟಕದಿಂದ ಗೋ-ಹತ್ಯೆ ನಿಷೇದ ಮಸೂದೆ


ಸಂದರ್ಭ:

ಇತ್ತೀಚಿಗೆ ಕರ್ನಾಟಕ ಶಾಸಕಾಂಗ ಸಭೆಯಲ್ಲಿ ರಾಜ್ಯ ಸರ್ಕಾರ ‘ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಮಸೂದೆ (2020)ಯನ್ನು ಅಂಗೀಕರಿಸಿದೆ.

 

ಕರ್ನಾಟಕದ ಮಸೂದೆಯ ಪ್ರಕಾರ ಹಸು ಮತ್ತು Beef

 1. ‘Beef’ – ಯಾವುದೇ ರೂಪದಲ್ಲಿರುವ ಹಸುವಿನ ಮಾಂಸವಾಗಿದೆ
 2. ಹಸು –ಇದನ್ನು ಗೋವು ಎನ್ನಲಾಗಿದೆ. 13 ವರ್ಷಕ್ಕಿಂತ ಕಡಿಮೆಯಿರುವ ಜಾನುವಾರುವನ್ನು ಹಸು ಎನ್ನಲಾಗಿದೆ.
 3. ಗೋ ಶಾಲೆ : ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯೊಂದಿಗೆ ನೋಂದಣಿಯಾದ ಗೋ ರಕ್ಷಣಾ ಮತ್ತು ಸಂರಕ್ಷಣಾ ಕೇಂದ್ರಗಳಾಗಿವೆ.

 

ತನಿಖಾಧಿಕಾರ

 1. ಸಬ್-ಇನ್ಸ್ಪೆಕ್ಟರ್ ಶ್ರೇಣಿಯ ಮತ್ತು ಅದಕ್ಕಿಂತ ಉನ್ನತ ಶ್ರೇಣಿಯ ಅಧಿಕಾರಿಗೆ ವಿಚಾರಣೆ, ತನಿಖೆ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಹೊಂದಿದ್ದಾರೆ.
 2. ಮುಟ್ಟುಗೋಲು ಹಾಕುವ ಪ್ರಕರಣವನ್ನು ಉಪ ವಿಭಾಗಿಯ ನ್ಯಾಯಾಧೀಶರ ವರದಿಯ ಮೇರೆಗೆ ನಡೆಸಬಹುದಾಗಿದೆ.

 

ದಂಡ/ಶಿಕ್ಷೆ

 • ಇದು ಅಕ್ಷಮ್ಯ ಅಪರಾಧವಾಗಿದೆ
 • ಕಾನೂನು ಉಲ್ಲಂಘನೆಯು 3 ರಿಂದ 7 ವರ್ಷದ ವರೆಗೆ ಜೈಲು ವಾಸವನ್ನು ಆದೇಶಿಸುತ್ತದೆ.
 • ಮೊದಲ ಬಾರಿಗೆ 50 ಸಾವಿರದಿಂದ 5 ಲಕ್ಷದವರೆಗೆ, ನಂತರದಲ್ಲಿ 1 ಲಕ್ಷದಿಂದ 10 ಲಕ್ಷದವರೆಗೆ ದಂಡವಿಧಿಸಲಾಗುವುದು.

Sources: Indian Express.

 

ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

ಆಂತ್ರಾಕ್ಸ್’ನಿಂದಾಗಿ ಆನೆಯ ಮರಣದ ನಂತರ ಲಸಿಕೆ ಅಭಿಯಾನ


ಸಂದರ್ಭ:

ಅಸ್ಸಾಮಿನ ಜೋಯಪುರ ಅರಣ್ಯದಲ್ಲಿ ವಾರದ ಹಿಂದೆ ಎರಡು ಹೆಣ್ಣಾನೆಗಳ ಸಾವು ಆಂತ್ರಾಕ್ಸ್’ನ್ನು ಧೃಡೀಕರಿಸಿವೆ. ಮರಣ ಹೊಂದಿದ ಹೆಣ್ಣಾನೆಗಳಲ್ಲಿನ ಸೂಕ್ಷ್ಮ ಜೀವಿಗಳು ಎರಡರಿಂದ ಮೂರು ದಶಕಗಳ ಕಾಲ ಭೂಮಿಯಡಿಯಲ್ಲಿ ಜೀವಂತವಾಗಿರುವವು.

ಈ ವಲಯದಲ್ಲಿ ಪ್ರಾಧಿಕಾರವು ಜಾನುವಾರುಗಳ ಲಸಿಕೆಯ ಅಭಿಯಾನವನ್ನು ನಡೆಸಿವೆ. 2019 ರಲ್ಲಿ ಅಸ್ಸಾಮಿನ ಪೋಬಿತೋರ ವನ್ಯಜೀವಿ ಸಂರಕ್ಷಣಾಲಯದಲ್ಲಿ ಎರಡು ನೀರೆಮ್ಮೆಗಳು ಸಾವನಪ್ಪಿದ್ದವು.

anthrax

 

ಆಂತ್ರಾಕ್ಸ್

ಇದು ಬ್ಯಾಸಿಲಸ್ ಆಂತ್ರಾಸಿಸ್ ಬ್ಯಾಕ್ಟಿರಿಯಾದಿಂದ ಹರಡುತ್ತದೆ.

 1. ಇದು ಹಸು, ಮೇಕೆ, ಆಡು ಮುಂತಾದ ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಹರಡುತ್ತದೆ.
 2. ಸೋಂಕಿತ ಪ್ರಾಣಿ, ಮಾಂಸ, ಉಣ್ಣೆಯ ಮೂಲಕ ಮನುಷ್ಯರು ಸೋಂಕನ್ನು ಪಡೆಯುವರು.

 

ರೋಗ ಲಕ್ಷಣಗಳು :

 1. ಮಾನವರಲ್ಲಿ ಉಸಿರಾಟದ ತೊಂದರೆ – ಪ್ರಾರಂಭದಲ್ಲಿ ಬಹುದಿನಗಳ ಕಾಲ ಶೀತ, ಜ್ವರವಿದ್ದು ನಂತರ ಉಸಿರಾಟದ ತೀವ್ರ ಸಮಸ್ಯೆಯಾಗುವುದು.
 2. ಮನುಷ್ಯರಲ್ಲಿ Gastrointestinal (GI) ಸೋಂಕನ್ನು ಆಂತ್ರಾಕ್ಸ್ ಸೋಂಕಿತ ಮಾಂಸದ ಸೇವನೆಯಿಂದ ಉಂಟಾಗುವುದು. ಇದು ರಕ್ತಯುಕ್ತವಾದ ವಾಂತಿ, ಅತಿಸಾರ, ಬೇದಿ, ಕರುಳ ಸಂಬಂಧಿ ಸೋಂಕು ಮುಂತಾದ ಲಕ್ಷಣಗಳನ್ನು ಹೊಂದಿದೆ.

 

ಜೈವಿಕ ಭಯೋತ್ಪಾದನೆ

ಉದ್ದೇಶಪೂರ್ವಕವಾಗಿ ಸೋಂಕನ್ನು ಹರಡಲು ಭಯೋತ್ಪಾದಕರು ಆಂತ್ರಾಕ್ಸನ್ನು ಜೈವಿಕ ಯುದ್ಧಕ್ರಮವಾಗಿ ಬಳಸಲಾಗುವುದು. ಮಿಂಚಂಚೆಯ ಮೂಲಕ ಅಮೇರಿಕಾದಲ್ಲಿ ಹರದಲ್ಪಟ್ಟಿದೆ. ಇದು ಐವರ ಸಾವಿಗೆ ಮತ್ತು 22 ಜನರ ಅನಾರೋಗ್ಯಕ್ಕೆ ಕಾರಣವಾಗಿದೆ.

 

ಭಾರತದಿಂದ ಲಸಿಕೆ

2019ರಲ್ಲಿ ಆಂತ್ರಾಕ್ಸ್ ಲಸಿಕೆಯನ್ನು  DRDO & JNU ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಈ ಲಸಿಕೆಯು ಅಸ್ತಿತ್ವದಲ್ಲಿರುವ ಲಸಿಕೆಗಿಂತ ಬಲವಾಗಿದ್ದು, ರೋಗನಿರೋದಕ ಶಕ್ತಿಯನ್ನು ವೃದ್ಧಿಸುವುದು.

Sources: the Hindu.

 

ವಿಷಯ : ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು, ಸಂಘಗಳು ಮತ್ತು ವೇದಿಕೆಗಳ – ರಚನೆ, ಧ್ಯೇಯ

ಆಸಿಯಾನದ ರಕ್ಷಣಾ ಸಚಿವರಿಂದ ಸಭೆ (ADMM-Plus)


ಸಂದರ್ಭ :

ADMM-Plus 14ನೇ ಸಭೆಯು ಇತ್ತೀಚಿಗೆ ನಡೆಯಿತು.

 

ADMM – Plus ಕುರಿತು:

ADMM-Plus ಆಸಿಯಾನ್ (ASEAN) ವೇದಿಕೆಯಾಗಿದೆ. ಪ್ರಾದೇಶಿಕ ಅಭಿವೃದ್ಧಿ, ಸ್ಥಿರತೆ, ಶಾಂತಿಗಾಗಿ ಸೇನಾ ಸಹಕಾರ, ಭದ್ರತೆಯ ಸಂವರ್ಧನೆಗಾಗಿ ಎಂಟು ಸದಸ್ಯರ  ಸಂಘವಾಗಿದೆ. ಇದಕ್ಕೆ ಬಾಹ್ಯ ಮತ್ತು ಮುಕ್ತ ದೃಷ್ಟಿಕೋನವಾಗಿದೆ. ಇದರ ಸದಸ್ಯ ರಾಷ್ಟ್ರಗಳು – ಆಸ್ಟ್ರೇಲಿಯ, ಚೀನಾ, ಜಪಾನ, ಗಣತಂತ್ರಿಯ ಕೊರಿಯ, ರಷ್ಯಾ, ಅಮೇರಿಕಾ

 

ಐದು ವಲಯಗಳಲ್ಲಿ ಪ್ರಾಯೋಗಿಕ ಸಹಕಾರಕ್ಕೆ ಅಂಗೀಕಾರ :

 1. ಸಾಗರಿಕ ಭದ್ರತೆ
 2. ಭಯೋತ್ಪಾದನೆ ನಿಗ್ರಹ
 3. ಮಾನವೀಯತೆಯ ಬೆಂಬಲ ಮತ್ತು ವಿಪತ್ತು ನಿರ್ವಹಣೆ
 4. ಶಾಂತಿಯುತ ಆಪರೇಷನ್’ಗಳು ಮತ್ತು ಸೇನಾ ಕಾರ್ಯಾಚರಣೆಗಳು
 5. ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು

2013 ರಲ್ಲಿ, ಮಾನವೀಯತೆಯ ಕಾರ್ಯಗಳು ಎಂಬ ನವ ಆಧ್ಯತಾ ವಲಯವನ್ನು ಪರಿಗಣಿಸಿದೆ.

aseans

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು

ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆ (ABRY) :


ಸಂದರ್ಭ :

ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಕೋವಿಡ್ ನಂತರದ ಆರ್ಥಿಕತೆಯ ಸುಧಾರಣೆಗಾಗಿ ಆತ್ಮನಿರ್ಭರ ಭಾರತ ರೋಜ್ಗಾರ್ ಯೋಜನೆಯ ಮೂಲಕ ಸಂಘಟಿತ ವಲಯದಲ್ಲಿ ಉದ್ಯೋಗ ವೃದ್ಧಿ ಮತ್ತು ನವ ಉದ್ಯೋಗಾವಕಾಶಗಳ ನಿರ್ಮಾಣಕ್ಕೆ ಅನುದಾನವನ್ನು ನೀಡಲು ಕೇಂದ್ರೀಯ ಕ್ಯಾಬಿನೆಟ್ ಮುಂದಾಗಿದೆ.

 

ಯೋಜನೆ ಕುರಿತು

 1. 2020 ರ ಅಕ್ಟೋಬರ್ 1ರಿಂದ 2021 ರ ಜೂನ್ 30ರವರೆಗೆ ಮುನ್ನೆಲೆಗೆ ಬಂದ ನವ ಉದ್ಯೋಗಿಗಳಿಗೆ ಭಾರತ ಸರ್ಕಾರ ಎರಡು ವರ್ಷಗಳ ಕಾಲ ಸಬ್ಸಿಡಿಯನ್ನು ನೀಡುವುದು.
 2. ಸರ್ಕಾರವು ಶೇ12 ರಷ್ಟು ಕೊಡುಗೆಯನ್ನು ಉದ್ಯೋಗಿಗಳಿಗೆ ಮತ್ತು ಶೇ12 ರಷ್ಟು ಕೊಡುಗೆಯನ್ನು ಉದ್ಯೋಗದಾತರಿಗೆ ನೀಡಲು ಮುಂದಾಗಿದೆ
 3. ಸರ್ಕಾರವು ಕೇವಲ ಉದ್ಯೋಗಿಯ EPFನ್ನು ಮಾತ್ರ ಪಾವತಿಸುತ್ತದೆ.

 

ಅರ್ಹತೆ :

 1. ಉದ್ಯೋಗಿಯ ಮಾಸಿಕ ವೇತನ 15000 ಕ್ಕಿಂತ ಕಡಿಮೆಯಿದ್ದು, 1ನೇ ಅಕ್ಟೋಬರ್, 2020ಕ್ಕಿಂತ ಮುಂಚಿತವಾಗಿ EPFOದೊಂದಿಗೆ  ನೋಂದಣಿಯಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಅಲ್ಲದೆ, ಈ ಉದ್ಯೋಗಿ ಸಾರ್ವತ್ರಿಕ ಖಾತಿ ಸಂಖ್ಯೆಯನ್ನು ಹೊಂದಿರಬಾರದು.
 2. EPF ಸದಸ್ಯನಾಗಿ ಸಾರ್ವತ್ರಿಕ ಖಾತಾ ಸಂಖ್ಯೆ ಹೊದಿರುವ ಉದ್ಯೋಗಿಯ ಮಾಸಿಕ ವೇತನ 15000ಕ್ಕಿಂತ ಕಡಿಮೆಯಿದ್ದು ಕೋವಿಡ್ ಸಮಯದಲ್ಲಿ ಉದ್ಯೋಗ ವಂಚಿತನಾದರೆ, ಕೋವಿಡ್ ನಂತರದ ವ್ಯವಸ್ಥೆಯಲ್ಲಿ ನಿರುದ್ಯೋಗಿಯಾಗಿದ್ದರೆ ಈ ಸೌಲಭ್ಯವನ್ನು ಪಡೆಯಬಹುದು.

Sources: PIB.

 

ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆ, ದಿನನಿತ್ಯ ಜೀವನದ ಮೇಲಿನ ಪರಿಣಾಮಗಳು; ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು, ದೇಶಿಯ ತಂತ್ರಜ್ಞಾನ, ನವ ತಂತ್ರಜ್ಞಾನದ ಅಭಿವೃದ್ಧಿ

Quantum Key Distribution (QKD):


ಸಂದರ್ಭ:

Quantum Key Distribution ತಂತ್ರಜ್ಞಾನದ ಮೂಲಕ ರಕ್ಷಣಾ ಸಂಶೋಧನೆ & ಅಭಿವೃದ್ಧಿ ಸಂಸ್ಥೆ (DRDO) ತನ್ನ ಎರಡು ಪ್ರಯೋಗಾಲಯಗಳಾದ ರಕ್ಷಣಾ ಸಂಶೋಧನೆ & ಅಭಿವೃದ್ಧಿ ಪ್ರಯೋಗಾಲಯ (DRDL) ಮತ್ತು ಇಮಾರತ್ ಸಂಶೋಧನಾ ಕೇಂದ್ರಗಳ (RCI) ನಡುವೆ ಸಂವಹನವನ್ನು ಯಶಸ್ವಿಯಾಗಿ ನಡೆಸಿದೆ.

qkd

 

ಈ ತಂತ್ರಜ್ಞಾನದ ಪ್ರಾಮುಖ್ಯತೆ :

 1. ಫೋಟಾನ್ ಮೂಲಕ ದತ್ತಾಂಶ ರವಾನೆಯಾಗುವುದರಿಂದ ಎಂಕ್ರಿಪ್ಶನ್ (Encryption) ಪ್ರಕ್ರಿಯೆ ಪ್ರಬಲವಾಗಿರುವುದು.
 2. ಫೋಟಾನ್’ಗಳ  ಪ್ರತಿ ತಯಾರಿಕೆ ಕಷ್ಟಕರವಾಗಿದ್ದು, ಅಪರಾಧದ ದಾಖಲೆಗಳ ರಹಿತವಾದ ಕ್ರಿಯೆ ಅಸಾಧ್ಯವಾಗಿದೆ.
 3. ಸೈಬರ್ ಭದ್ರತೆಯಲ್ಲಿ ಏರಿಕೆ – ಹೆಚ್ಚು ರಕ್ಷಣಾತ್ಮಕವಾದ ವ್ಯಾಪಾರ ವಹಿವಾಟುಗಳು, ಸಂವಹನದ ಕದ್ದಾಲಿಕೆ/ದತ್ತಾಂಶ ನಿರಚನ ಕ್ರಮ ಮತ್ತು ತಂತ್ರಗಳನ್ನು ನಿಯಂತ್ರಿಸುತ್ತದೆ.

Sources: PIB.

 

ವಿಷಯ : ಮೂಲಸೌಕರ್ಯ

ಸಂಸತ್ತಿನ ನವ ಕಟ್ಟಡ


ಸಂದರ್ಭ:

ಸಂಸತ್ತಿನ ನವ ಕಟ್ಟಡಕ್ಕೆ ಅಡಿಪಾಯ ಹಾಕಲಾಗಿದೆ. 1921 ರಲ್ಲಿ ಡ್ಯೂಕ್ ಆಫ್ ಕನ್ನೌಟ್ ಅಸ್ತಿತ್ವದಲ್ಲಿರುವ ಸಂಸತ್ತನ್ನು ನಿರ್ಮಿಸಿದನು. ಇದು ಸರಿ ಸುಮಾರು 100 ವರ್ಷಗಳ ಇತಿಹಾಸವನ್ನು ಹೊಂದಿದೆ.

new_parliment

 

ಪ್ರಮುಖಾಂಶ

 1. ಈ ಕಟ್ಟಡ ಕಾಮಗಾರಿ 2022 ರ ವೇಳೆಗೆ ಸಂಪೂರ್ಣವಾಗಿ ಮುಗಿಯುವ ನಿರೀಕ್ಷೆಯಿದೆ.
 2. ಭಾರತದ ಸ್ವಾತಂತ್ರ್ಯದ 75 ವರ್ಷದ ಆಚರಣೆಯೊಂದಿಗೆ ಸಂಗಮಿಸುವ ಸಾಧ್ಯತೆಯಿದೆ.
 3. ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಉದ್ದೇಶವನ್ನು ಹೊಂದಿದೆ.
 4. ಪ್ರಾದೇಶಿಕ ಕಲೆ ಮತ್ತು ಕರಕುಶಲತೆಯನ್ನು ಅಳವಡಿಸಿಕೊಂಡಿದೆ. ಇದು ಅತ್ಮನಿರ್ಭರ ಭಾರತದ ಸಂಕೇತವಾಗಿದೆ.
 5. 862 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣದ ಕಾರ್ಯವನ್ನು Tata Projects Limited ಪಡೆದಿದೆ.
 6. Central Vista redevelopment project ಸಾಮಿಪ್ಯದಲ್ಲಿ ಈ ಕಟ್ಟಡದ ನಿರ್ಮಾಣ ಕಾರ್ಯ ಜರುಗಿದೆ

new_seat_pow

 

ನ್ಯಾಯಾಂಗದಿಂದ Central Vista project ತಡೆ

 1. ಇದು ಕಟ್ಟಡದ ಮರು-ಅಭಿವೃದ್ಧಿ ಯೋಜನೆಯಾಗಿದೆ. ಇದು ನವ ಸಂಸತ್ತಿನ ಕಟ್ಟಡ, ಏಕ ರೀತಿಯ ಕೇಂದ್ರೀಯ ನಿರ್ದೇಶನಾಲಯ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟಿನವರೆಗಿನ ರಾಜಪಥ್ ನವೀಕರಣವನ್ನು ಒಳಗೊಂಡಿದೆ.
 2. ಈ ಬೃಹತ್ ಮರು-ಅಭಿವೃದ್ಧಿ ಯೋಜನೆಯ ವಿರುದ್ಧ 10 ದೂರುಗಳನ್ನು ಸ್ವಿಕರಿಸಿದ ನ್ಯಾಯಾಂಗ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ತಡೆಯಾಜ್ಞೆ ನೀಡಿದೆ.

Sources: the Hindu.

 

ವಿಷಯ : ಗಡಿ ಭಾಗದಲ್ಲಿ ಭದ್ರತೆಯ ಸವಾಲುಗಳು ಮತ್ತು ಗಡಿ ನಿರ್ವಹಣೆ – ಭಯೋತ್ಪಾದನೆ ಮತ್ತು ವ್ಯವಸ್ಥಿತ (ಸಂಘಟಿತ) ಅಪರಾಧಗಳ ನಡುವಿನ ಸಂಬಂಧ

ಇಸ್ಲಾಂವಾದಕ್ಕೆ ವಿರೋಧವಾಗಿ ಫ್ರಾನ್ಸ್’ನ ಕಾನೂನು


ಸಂದರ್ಭ:

ಫ್ರಾನ್ಸ್ ಕ್ಯಾಬಿನೆಟ್ ‘ಬಂಡಾಯದ ಇಸ್ಲಾಂವಾದ’ವನ್ನು ಗುರಿಯಾಗಿಸಿದ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ.

 

ಕಾನೂನಿನ ಹಿಂದಿನ ಕಾರಣಗಳು :

 1. ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದ ಭಯೋತ್ಪಾದನೆಯ ದಾಳಿಗಳ ಹಿನ್ನೆಲೆಯಲ್ಲಿ ಕಾನೂನನ್ನು ಜಾರಿಗೆ ತರಲು ಮುಂದಾಗಿದೆ.
 2. ಇದನ್ನು ಶಿಕ್ಷಕ ಸ್ಯಾಮ್ಯುಲ್ ಪ್ರಕರಣದ ನೆಲೆಯಲ್ಲಿ ಗುರುತಿಸಲಾಗಿದೆ.

 

ಕಾನೂನಿನ ಗುರಿ

 1. ಮುಸ್ಲಿಂ ಮಕ್ಕಳ ಶಿಕ್ಷಣ ಮುಂದುವರಿಕೆಗೆ ಶಾಲಾ ಶಿಕ್ಷಣ ಸುಧಾರಣೆಯ ಕ್ರಮ
 2. ಮಸೀದಿಯಲ್ಲಿನ ಶಿಕ್ಷಣ ನಿಯಂತ್ರಕ ಕ್ರಮ

 

ಕಾನೂನಿನ ಅನುಷ್ಠಾನದ ನಂತರ

 1. ಫ್ರಾನ್ಸ್ ಮಸೀದಿಗಳು ಹೆಚ್ಚಿನ ನಿಯಂತ್ರಣಕ್ಕೆ ಒಳಪಡುತ್ತವೆ.
 2. ಇಮಾಂಗಳ ತರಬೇತಿಯ ಮೇಲ್ವಿಚಾರಣೆ, ಲಿಂಗ ಸಮಾನತೆಯಂತಹ ಗಣತಂತ್ರದ ಸಿದ್ಧಾಂತಗಳಿಗೆ ದಕ್ಕೆಯಾದರೆ ಸಾರ್ವಜನಿಕ ಸಬ್ಸಿಡಿ ಪಡೆಯುವ ಕೇಂದ್ರಗಳ ಮೇಲೆ ಸರ್ಕಾರ ಮೇಲ್ವಿಚಾರಣೆ ನಡೆಸುವುದು.
 3. ಸರ್ಕಾರಿ ಉದ್ಯೋಗಿಗಳ ಧಾರ್ಮಿಕ ಸಂಕೇತಗಳ ನಿರ್ಬಂಧ (ಹಿಜಾಬ್ ಪ್ರಕರಣ) ವನ್ನು ಸರ್ಕಾರಿ ವಲಯದಿಂದ ಇತರೆ ವಲಯಕ್ಕೆ ವಿಸ್ತರಿಸಲು ಮುಂದಾಗಿದೆ.

Sources: Indian Express.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಜಗನನ್ನ ಜೀವ ಕ್ರಾಂತಿ ಯೋಜನೆ

ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿದೆ

 1. 1869 ಕೋಟಿ ವೆಚ್ಚದಲ್ಲಿ ಹಂತ-ಹಂತವಾಗಿ ಮಹಿಳೆಯರಿಗೆ 2.49 ಲಕ್ಷ ಆಡು ಮತ್ತು ಮೇಕೆಗಳನ್ನು ವಿತರಿಸುವ ಕ್ರಮವಾಗಿದೆ.
 2. ಮಿತ ಹೂಡಿಕೆಯಲ್ಲಿ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವುದಾಗಿದೆ.

 

HelpAge India 2020ರ ವಿಶ್ವ ಸಂಸ್ಥೆಯ ಜನಸಂಖ್ಯ ಪ್ರಶಸ್ತಿಗೆ ಭಾಜನ

ಸಾಂಸ್ಥಿಕ ವರ್ಗದ ವಿಶ್ವ ಸಂಸ್ಥೆಯ ಜನಸಂಖ್ಯೆ ಪ್ರಶಸ್ತಿಯನ್ನು HelpAge India ಪಡೆದಿದೆ.

 1. ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಭಾರತೀಯ ಸಂಸ್ಥೆಗೆ ನೀಡಲಾಗಿದೆ.
 2. ನಾಲ್ಕು ದಶಕಗಳ ಕಾಲ ಹಿರಿಯ ನಾಗರಿಕ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡಲಾಗಿದೆ.
 3. 28 ವರ್ಷಗಳ ಹಿಂದೆ (1992) ರತನ್ ಟಾಟಾಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

ಪ್ರಶಸ್ತಿ ಕುರಿತು :

 1. 1981ರಲ್ಲಿ ವಿಶ್ವಸಂಸ್ಥೆ ಇದನ್ನು ಸ್ಥಾಪಿಸಿತು.
 2. ಜನಸಂಖ್ಯೆ ಮತ್ತು ಸಂತಾನಾಭಿವೃದ್ಧಿ ಆರೋಗ್ಯದ ವಲಯದಲ್ಲಿನ ಕೊಡುಗೆಯನ್ನು ಪರಿಗಣಿಸಿ ನೀಡಲಾಗುವುದು

 

Better Than Cash Alliance:

 1. ಇದು ಸರ್ಕಾರ, ಕಂಪನಿ, ಅಂತರಾರಾಷ್ಟ್ರೀಯ ಸಂಸ್ಥೆಗಳ ಭಾಗಿತ್ವದಲ್ಲಿ ಅನುಷ್ಟಾನಗೊಳಿಸಲಾಗಿದೆ
 2. ಆರ್ಥಿಕ ಸೇರ್ಪಡೆಗೆ ಪೂರಕವಾಗಿ ಬಡತನವನ್ನು ನಿವಾರಿಸಲು ಡಿಜಿಟಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು.
 3. The United Nations Capital Development Fund serves as the secretariat.
 4. ಇದು ವಿಶ್ವಸಂಸ್ಥೆಯ ಬಂಡವಾಳಾಭಿವೃದ್ಧಿ ನಿಧಿಯ ಕಾರ್ಯಾಲಯವಾಗಿದೆ.
 5. 2015ರಲ್ಲಿ ಭಾರತ ಇದರ ಸದಸ್ಯತ್ವವನ್ನು ಪಡೆಯಿತು.

 

ಹನುಕ್ಕಃ (Hanukkah) :

 1. ಇದು ಪಾರ್ಸಿಗಳ ಬೆಳಕಿನ ಹಬ್ಬ
 2. ಸೇಲುಸಿಡ್ ಸಾಮ್ರಾಜ್ಯದ ವಿರುದ್ದದ ಮಕ್ಕಾಬಿಯನ್ ಕ್ರಾಂತಿಯ ಸಂದರ್ಭದಲ್ಲಿ ನಿರ್ಮಿಸಲಾದ ದೇವಾಲಯದ ನೆನಪಿನಾರ್ಥವಾಗಿ ಇದನ್ನು ಆಚರಿಸಲಾಗುವುದು.

hanukkah

 

Ischaemum janarthanamii:

 1. ವಿಜ್ಞಾನಿಗಳು ಗೋವಾದ ಪಶ್ಚಿಮ ಘಟ್ಟದ ಪ್ರಸ್ಥಭೂಮಿಯಲ್ಲಿ ಮುರೈಹುಲ್ಲಿನ ವಿಶೇಷ ತಳಿಯನ್ನು ಕಂಡುಹಿಡಿದಿದ್ದಾರೆ.
 2. ಗೋವಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಉಪಾಧ್ಯಾಯ M.K.ಜನಾರ್ಥನಂ ರವರ ಗೌರವಾರ್ಥವಾಗಿ ‘Ischaemumjanarthanamiiin’ ಎಂದು ಹೆಸರಿಸಲಾಗಿದೆ.
 3. ಗೋವಾದ ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನದ ಲ್ಯಾಟಿರೈಟ್ ಪ್ರಸ್ಥಭೂಮಿಯ ಕೆಲ ಸ್ಥರದಲ್ಲಿ ಬೆಳೆಯುತ್ತದೆ.
 4. ಇಲ್ಲಿನ ಸಸ್ಯವರ್ಗ ಸರ್ವ ವಾಯುಗುಣ ಪರಿಸ್ಥಿತಿಗಳನ್ನು ಹೊಂದಿದೆ. ಮಣ್ಣಿನಲ್ಲಿ ಕಡಿಮೆ ಪೋಷಕಾಂಶಗಲಿದ್ದು ಬೇಸಿಗೆಯಲ್ಲಿ ಶುಷ್ಕವಾಗಿರುತ್ತದೆ. ಮಾನ್ಸೂನ್ ವೇಳೆಗೆ ಹೂ ಅರಳುತ್ತಿದ್ದು ಸಸ್ಯ ವರ್ಗ ಪ್ರತಿಕೂಲ ಸಂದರ್ಭದಲ್ಲೂ ಜೀವಿಸುವ ಸಾಮರ್ಥ್ಯ ಹೊಂದಿವೆ.

ischaemum

 

ಕೊಲಿವರ ಸೇತುವೆ

 1. ಬಿಹಾರದಲ್ಲಿ ಸೋನೆ ನದಿಗೆ ಪ್ರತಿಯಾಗಿ ಕೊಲಿವಾರ ಸೇತುವೆಯನ್ನು ನಿರ್ಮಿಸಲಾಗಿದೆ
 2. ಇದರ ಉದ್ದ : 1.5 ಕಿ.ಮೀ

koilwar

 

ವಿಶ್ವದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಉಪಗ್ರಹ ಆಧಾರಿತ IoT ಜಾಲ

ಭಾರತದಲ್ಲಿ BSNL ಮತ್ತು ಸ್ಕೈಲೋ ಕಂಪನಿಗಳ ಸಹಭಾಗಿತ್ವದಲ್ಲಿ ವಿಶ್ವದ ಮೊದಲ ಉಪಗ್ರಹ ಆಧಾರಿತ IoT ಜಾಲ ನಿರ್ಮಾಣ

 1. ಇದಕ್ಕೆ ಉಪಗ್ರಹ ಆಧಾರಿತ ಮೂಲಸೌಕರ್ಯವನ್ನು BSNL ಒದಗಿಸಿದರೆ, ತಾಂತ್ರಿಕ ನೆರವನ್ನು ಸ್ಕೈಲೋ ಪೂರೈಸುತ್ತದೆ. ಈ ತಂತ್ರಜ್ಞಾನವನ್ನು ದೇಶಿಯವಾಗಿ ಭಾರತದಲ್ಲಿ ತಯಾರಿಸಿ ಅಭಿಯಾನದಡಿಯಲ್ಲಿ ನಿರ್ಮಿಸಲಾಗಿದೆ
 2. ಹಿಂದೂ ಮಹಾಸಾಗರ ಸೇರಿದಂತೆ ಭಾರತದಾದ್ಯಂತ ಇದರ ಸೇವೆ ಲಭ್ಯವಿದೆ.
 3. ಇದು ಕಾಶ್ಮೀರ & ಲಡಾಖಿನಿಂದ ಕನ್ಯಾಕುಮಾರಿವರೆಗೆ ಮತ್ತು ಗುಜರಾತಿನಿಂದ ಈಶಾನ್ಯದ ಗಡಿಭಾಗದವರೆಗಿನ ಸಂಪೂರ್ಣ ಮಾಹಿತಿ ವರದಿಯನ್ನು ನೀಡುವುದು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos