Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 10 ಡಿಸೆಂಬರ್ 2020

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 

ಪರಿವಿಡಿ

ಸಾಮಾನ್ಯ ಪತ್ರಿಕೆ 2:

1. ಪೌರರ ರಾಷ್ಟ್ರೀಯ ದಾಖಲೆ (NRC)

2. ಮಾಹಿತಿ ಹಕ್ಕಿನ ವಿರುದ್ಧ IAF ನ್ಯಾಯಾಲಯಕ್ಕೆ ಮೊರೆ

3. ಕ್ವಾಡ್ (Quad) ಅಮೇರಿಕಾದ ಚೀನಾ ವಿರೋಧಿ ನಡೆ

4. ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಸ್ಥೆ (SAARC)

 

ಸಾಮಾನ್ಯ ಪತ್ರಿಕೆ 3:

1. ಲಕ್ಷದ್ವೀಪಕ್ಕೆ ಆಪ್ಟಿಕಲ್ ಫೈಬರ್ ಕೇಬಲ್

2. ಕರಾವಳಿ ನಿಯಂತ್ರಕ ವಲಯ ನಿಯಮ

3. PM-WANI.

4. ಖಲಿಸ್ತಾನದ ಕಾರ್ಯಕರ್ತರ ಮೇಲೆ NIA ಯಿಂದ ಆದೇಶ

 

ಪೂರ್ವಭಾವಿ ಪರೀಕ್ಷೆ

1. ಕಿರು ಕಾಜೀರಂಗ

2. ಗೋ ಹತ್ಯೆ ವಿರೋಧಿಸಿ ಕರ್ನಾಟಕ ಶಾಸನ ಸಭೆಯಿಂದ ಮಸೂದೆ

3. INS Kalvari ನೆನಪಿನ ನೆಲೆಯಲ್ಲಿ ಜಲಾಂತರ್ಗಾಮಿ ದಿನದ ಆಚರಣೆ

4. ಸಿಂಧೂ ಬಯಲಿನ ನಾಗರೀಕತೆಯಲ್ಲಿ ಹಸು, ಎಮ್ಮೆಗಳ ಮಾಂಸದ ನಿದರ್ಶನ

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು

ಪೌರರ ರಾಷ್ಟ್ರೀಯ ದಾಖಲೆ (NRC)


ಸಂದರ್ಭ:

2019ರಲ್ಲಿ ಬಿಡುಗಡೆಯಾದ ಪೌರರ ನವೀಕೃತ ಪಟ್ಟಿಯಲ್ಲಿನ ‘ಕಾನೂನುಬಾಹಿರ ವಿದೇಶಿಯರ’ ವಿವರಗಳನ್ನು ಆಫೆಡೆವೇಟ್ ಮೂಲಕ ಗುಹಾವಾಟಿ ನ್ಯಾಯಾಲಯಕ್ಕೆ ಪೌರರ ರಾಷ್ಟ್ರೀಯ ದಾಖಲಾ ಪ್ರಾಧೀಕಾರದ ಅಧಿಕಾರಿಗಳು ಸಲ್ಲಿಸಿದ್ದಾರೆ.

 

ಹಿನ್ನೆಲೆ:

3.3 ಕೋಟಿಯಲ್ಲಿ 19.06 ಲಕ್ಷ ಅರ್ಜಿದಾರರನ್ನು2019ರಲ್ಲಿಬಿಡುಗಡೆಯಾದ NRC ಕರುಡು ಪ್ರತಿಯಿಂದ ಹೊರಗಿಡಲಾಗಿದೆ. ನಂತರ ಮಾರ್ಚ್ 24, 1971ರ ಮುಂಚಿತವಾಗಿ ಅಸ್ಸಾಮಿನ ನಿವಾಸಿತನವನ್ನು ದೃಡೀಕರಿಸುವ ದಾಖಲೆಗಲಿಲ್ಲದಿದ್ದರೂ ಕೆಲವರಿಗೆ ಪೌರತ್ವವನ್ನು ನೀಡಲಾಗಿರುವ ಸಂಗತಿ ಬೆಳಕಿಗೆ ಬಂದಿತು.

 

ಪೌರರ ರಾಷ್ಟ್ರೀಯ ದಾಖಲೆ ಕುರಿತು :

 • NRC ಯನ್ನು 1951ರಲ್ಲಿ ನಿರ್ಮಿಸಲಾಯಿತು. ಇದನ್ನು ಅಸ್ಸಾಮಿನಲ್ಲಿ ಜನಿಸಿದವರನ್ನು ಗುರುತಿಸಿ ಭಾರತೀಯ ಪೌರತ್ವವನ್ನು ನೀಡುವುದು ಮತ್ತು ಇಂದಿನ ಬಾಂಗ್ಲಾದೇಶದಿಂದ ಬಂದ ವಲಸಿಗರನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ.
 • 1980ರಲ್ಲಿ ಪ್ರಚಲಿತವಿದ್ದ ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದಿಂದ ಮುನ್ನೆಲೆಗೆ ಬಂದ ವಿದೇಶಿಯರ ವಿರುದ್ಧದ ಅಸ್ಸಾಂ ಚಳುವಳಿಯ ಮೂಲಕ  NRCಯನ್ನು ನವೀಕೃತಗೊಳಿಸುವ ಬೇಡಿಕೆ ಮೊದಲು ಮೂಡಿ ಬಂದಿತು.
 • ಮತ್ತೆ ನವೀಕೃತಗೊಳಿಸುವ ಬೇಡಿಕೆಯನ್ನು ನ್ಯಾಯಾಂಗದ ಮುಂದೆ ಸರ್ಕಾರೇತರ ಸಂಸ್ಥೆ Assam Public Works ಅರ್ಜಿ ಸಲ್ಲಿಸಿತು. ಇದು 2013 ರಲ್ಲಿ ನವೀಕೃತ  ಪ್ರಕ್ರಿಯೆಗೆ ಮುನ್ನುಡಿ ಬರೆಯಿತು.

citizen_count

Sources: the Hindu.

 

ವಿಷಯ: ಆಡಳಿತದ ಪ್ರಮುಖ ಅಂಶಗಳು, ಇ-ಆಡಳಿತದ ಉದ್ದೇಶ, ಮಿತಿಗಳು ಮತ್ತು ಸಾಮರ್ಥ್ಯ, ನಾಗರೀಕ ಸನ್ನದು, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂಸ್ಥಿಕ ಕ್ರಮಗಳು

ಮಾಹಿತಿ ಹಕ್ಕಿನ ವಿರುದ್ಧ IAF ನ್ಯಾಯಾಲಯಕ್ಕೆ ಮೊರೆ


ಸಂದರ್ಭ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತೀಯ ವಾಯು ಸೇನೆಯ ವಿಮಾನದಲ್ಲಿ ಕೈಗೊಂಡ ವಿದೇಶಿ ಪ್ರಯಾಣದ ವಿವರಗಳನ್ನು ನೀಡಬೇಕೆಂದು ಕೇಂದ್ರೀಯ ಮಾಹಿತಿ ಆಯೋಗವು ಭಾರತೀಯ ವಾಯು ಸೇನೆಗೆ ಆದೇಶ ನೀಡಿದೆ. ಇದರ ವಿರುದ್ಧ ವಾಯು ಸೇನೆಯು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದೆ.

 

ವಿವಾದ

 1. ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪ್ರಧಾನ ಮಂತ್ರಿಯ ಪ್ರವಾಸದ ವಿವರಗಳನ್ನು ಬಹಿರಂಗಪಡಿಸಲು ಭಾರತೀಯ ವಾಯು ಸೇನೆಗೆ ಕೇಂದ್ರೀಯ ಮಾಹಿತಿ ಆಯೋಗ ಆದೇಶ ನೀಡಿದೆ.
 2. ಬಹಿರಂಗಪಡಿಸಬೇಕಾದ ಮಾಹಿತಿಯು ಪ್ರಧಾನ ಮಂತ್ರಿಯ ಭದ್ರತೆಗೆ ಸಂಬಂಧಿಸಿದ ವಿವರಗಳಾಗಿದ್ದು ‘ಅತ್ಯಧಿಕ ಸೂಕ್ಷ್ಮ ಸ್ವರೂಪ’ದ್ದಾಗಿವೆ. ಇದು ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುವುದೆಂದು ವಾಯು ಸೇನೆ ಹೇಳಿದೆ.

 

ಬಹಿರಂಗಪಡಿಸಬೇಕಾದ ಮಾಹಿತಿ

ಪ್ರಧಾನಿಯೊಂದಿಗೆ ಪ್ರಯಾಣಿಸಿದ ವಿಶೇಷ ರಕ್ಷಣಾ ಸಂಘದ (SPG) ಸಿಬ್ಬಂದ್ದಿಗಳ ಸಂಪೂರ್ಣ ವಿವರಗಳನ್ನು, ರಕ್ಷಣಾ ಸಿಬ್ಬಂದ್ದಿಗಳ ಮಾಹಿತಿಯನ್ನು ಬಹಿರಂಗ ಪಡಿಸಬೇಕಾಗಿದೆ.

 

ವಿನಾಯಿತಿಗಳು

 1. RTI ಕಾಯ್ದೆಯ ಸೆಕ್ಷನ್ 8(1)(a), 8(1)(e) & 8(1)(g) ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸುವಿಕೆಗೆ ವಿನಾಯಿತಿ ನೀಡಲಾಗಿದೆ
 2. ಮಾಹಿತಿ ಹಕ್ಕು ಕಾಯ್ದೆ (2005) ಯಡಿಯಲ್ಲಿ SPG ಯ ಮಾಹಿತಿಯನ್ನು ಬಹಿರಂಗಗೊಳಿಸುವಿಕೆಯನ್ನು ಪ್ರತ್ಯೇಕವಾಗಿ ನಿರ್ಬಂಧಿಸಲಾಗಿದೆ

 

ಪ್ರಮುಖ ನಿಬಂಧನೆಗಳು

 1. RTI ಕಾಯ್ದೆಯ ಸೆಕ್ಷೆನ್ 24 ರಡಿಯಲ್ಲಿ 2ನೇ ಅನುಸೂಚಿಯಲ್ಲಿನ  ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳನ್ನು ಹೊರಗಿಡಲಾಗಿದೆ. ಆದರೆ, ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮಾಹಿತಿಯು ಕಾಯ್ದೆಯ ಅಡಿಯಲ್ಲಿ ಬಹಿರಂಗಗೊಳಿಸಬೇಕಾಗಿದೆ.
 2. 2ನೇ ಅನುಸೂಚಿ – ಇದು 26 ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ. ಗುಪ್ತಚರ ಮಂಡಳಿ, ಸಂಶೋಧನಾ ಮತ್ತು ಪರಿಶೀಲನ ವಿಭಾಗ (RAW), ಆದಾಯ ಗುಪ್ತಚರದ ನಿರ್ದೇಶನಾಲಯ, ವಿಶೇಷ ಗಡಿ ಭದ್ರತಾ ದಳ (SFF), ರಾಷ್ಟ್ರೀಯ ಭದ್ರತಾ ಸಿಬ್ಬಂದ್ದಿ (NSG), ಅಸ್ಸಾಂ ರೈಫಲ್ಸ್ ಮುಂತಾದವು ಇದಕ್ಕೆ ಸೇರಿವೆ
 3. RTI ಕಾಯ್ದೆಯ ಸೆಕ್ಷೆನ್ 8:  ಇದರ ಪ್ರಕಾರ ಸರ್ಕಾರ ಪೌರರ ಮಾಹಿತಿ ನೀಡಲು ನಿರಾಕರಿಸಬಹುದು. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭದ್ರತೆ, ಆರ್ಥಿಕ ಹಿತಾಸಕ್ತಿ, ಮುಂತಾದ ಅಂಶಗಳ ನೆಲೆಯಲ್ಲಿ ಮಾಹಿತಿ ಬಹಿರಂಗಗೊಳಿಸುವುದನ್ನು ನಿರಾಕರಿಸಬಹುದು.

Sources: the Hindu.

 

ವಿಷಯ : ಭಾರತದ ಹಿತಾಸಕ್ತಿಗೆ ಪ್ರಭಾವ ಬೀರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಂಘಗಳು ಮತ್ತು ಒಪ್ಪಂದಗಳು

ಕ್ವಾಡ್ (Quad) ಅಮೇರಿಕಾದ ಚೀನಾ ವಿರೋಧಿ ನಡೆ


ಸಂದರ್ಭ:

ನಾಲ್ಕು ರಾಷ್ಟ್ರಗಳ ಮೈತ್ರಿಯಾದ Quad ಮೂಲಕ ಪಾಶ್ಚಾತ್ಯ ಶಕ್ತಿಗಳು ಚೀನಾ ವಿರೋಧಿ ನಿಲುವಿಗೆ ಭಾರತವನ್ನು  ಅಸ್ತ್ರವಾಗಿ ಬಳಸುತ್ತಿವೆ ಎಂದು ರಷ್ಯಾ ಟೀಕಿಸಿದೆ.

 

ಸಮಸ್ಯೆ

ರಷ್ಯಾ ಅಮೇರಿಕಾದ ಇಂಡೋ-ಪೆಸಿಫಿಕ್ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಕ್ವಾಡನ್ನು ಟೀಕಿಸಿತು. ಅಲ್ಲದೆ, ಭಾರತ-ರಷ್ಯಾ ಸಂಬಂಧಗಳು ಇದರ ಮೇಲೆ ಪರಿಣಾಮ ಬೀರಬಹುದು ಎಂದು ಮೊದಲ ಬಾರಿಗೆ ಸೂಚಿಸಿದೆ.

 

ರಷ್ಯಾದ ಸಮಸ್ಯೆ

 1. ಕ್ವಾಡ್ ಮೂಲಕ ಭಾರತವನ್ನು ಪಾಶ್ಚಾತ್ಯ ರಾಷ್ಟ್ರಗಳ ಚೀನಾ ವಿರೋಧಿ ನೀತಿಗೆ ಅಸ್ತ್ರವಾಗಿ ಬಳಕೆಯಾಗುತ್ತಿದೆ.
 2. ಇದೇ ಸಮಯದಲ್ಲಿ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದೊಂದಿಗಿನ ಭಾರತದ ಸಂಬಂಧಕ್ಕೆ ದಕ್ಕೆಯನ್ನು ಉಂಟುಮಾಡುವವು.
 3. ಭಾರತ ಖರೀದಿಸುತ್ತಿರುವ ರಷ್ಯಾದ ಪ್ರತಿ ಕ್ಷಿಪಣಿ S-400 ವಿರುದ್ಧ ಅಮೇರಿಕಾ ಒತ್ತುನಿದುತ್ತಿದ್ದು ಆರ್ಥಿಕ ನಿರ್ಬಂಧನ ಹೆರುವ ಸಾಧ್ಯತೆಯಿದೆ.
 • ಅಮೇರಿಕಾ ಮತ್ತು ಯೂರೋಪಿನ ರಾಷ್ಟ್ರಗಳು ಅಮೇರಿಕಾದ ನೇತೃತ್ವದ ಏಕಧ್ರುವೀಯ ಮಾದರಿಯನ್ನು ಮರುರಚಿಸಲು ಪ್ರಯತ್ನಿಸುತ್ತಿವೆ.

 

ಕ್ವಾಡ್ ಸಂಘ

ಜಪಾನ್, ಭಾರತ, ಅಮೇರಿಕಾ, ಆಸ್ಟ್ರೇಲಿಯಾ ರಾಷ್ಟ್ರಗಳನ್ನು ಒಳಗೊಂಡ ಭದ್ರತಾ ಸಂಘವಾಗಿದೆ. ಇದರ ಎಲ್ಲ ಸದಸ್ಯರು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು ಸಾಗರಿಕ ವ್ಯಾಪಾರ ಮತ್ತು ಭದ್ರತೆಯ ಸಾಮಾನ್ಯ ಹಿತಾಸಕ್ತಿಯನ್ನು ಹೊಂದಿವೆ.

 

ಉಗಮ :

2004ರಲ್ಲಿ ಸುನಾಮಿಯ ನಂತರದ ನಿರ್ವಹಣಾ ಪ್ರಕ್ರಿಯೆಯಲ್ಲಿ ನಾಲ್ಕು ರಾಷ್ಟ್ರಗಳು ಒಗ್ಗೂಡಿದವು.  ಆಗ ಈ ಸಂಘದ ಉಗಮಕ್ಕೆ ವೇದಿಕೆ ನಿರ್ಮಾಣವಾಯಿತು.

 • ಈ ನಾಲ್ಕು ರಾಷ್ಟ್ರಗಳು 2007ರ ASEAN ಸಮಾವೇಶದಲ್ಲಿ ಮೊದಲ ಬಾರಿಗೆ ಬೇಟಿಯಾದರು.
 • ನಾಲ್ಕು ದೇಶಗಳ ನಡುವೆ ಸಾಗರಿಕ ಸಹಕಾರದ ವೃದ್ಧಿಯ ಧ್ಯೇಯವನ್ನು ಹೊಂದಿದೆ.

 

ಪ್ರಾಮುಖ್ಯತೆ

 1. ಪರಸ್ಪರ ಹಿತಾಸಕ್ತಿಯುಳ್ಳ ಯೋಜನೆಗಳಲ್ಲಿ ಭಾಗವಹಿಸಲು ಮತ್ತು ಅನುಷ್ಠಾನಗೊಳಿಸಲು ಪೂರಕವಾದ ವೇದಿಕೆಯನ್ನು ನಿರ್ಮಿಸುತ್ತದೆ.
 2. ಇಂಡೋ-ಪೆಸಿಫಿಕ್ ವಲಯದಲ್ಲಿ ಮುಕ್ತ ಮತ್ತು ಉಚಿತ ರವಾನೆಯ ಧ್ಯೇಯವನ್ನು ಹೊದಿವೆ. ಸದಸ್ಯರು ಅಭಿವೃದ್ಧಿ ಮತ್ತು ಆರ್ಥಿಕ ಯೋಜನೆಯ ಮೂಲಕ ಸಾಗರಿಕ ವಲಯದಲ್ಲಿ ಜಾಗೃತಿ ಮತ್ತು ಭದ್ರತೆಯನ್ನು ಪ್ರಚೋದಿಸುತ್ತವೆ.

Sources: the Hindu.

 

ವಿಷಯ : ಭಾರತದ ಹಿತಾಸಕ್ತಿಗೆ ಪ್ರಭಾವ ಬೀರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಂಘಗಳು ಮತ್ತು ಒಪ್ಪಂದಗಳು

ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಸ್ಥೆ (SAARC)


ಸಂದರ್ಭ:

ಸಾರ್ಕ್’ನ 36ನೇ ವಾರ್ಷಿಕ ದಿನ ಇತ್ತೀಚಿಗೆ ಆಚರಿಸಲಾಯಿತು. ಸಾರ್ಕ್ ಒಪ್ಪಂದವು 1985 ರಲ್ಲಿ ಅಂಗೀಕರಿಸಲ್ಪಟ್ಟು ಢಾಕಾದಲ್ಲಿ ಮೊದಲ ಸಮಾವೇಶ ನಡೆಯಿತು.

 

ಹಿನ್ನೆಲೆ :

 1. 2005ರ 13ನೇ ವಾರ್ಷಿಕ ಸಮಾವೇಶದಲ್ಲಿ ಸಾರ್ಕಿನ ನವ ಸದಸ್ಯನಾಗಿ ಅಫ್ಘಾನಿಸ್ತಾನ ಸೇರ್ಪಡೆಗೊಂಡಿತು.
 2. ಇದರ ಕೇಂದ್ರ ಸ್ಥಾನ – ನೇಪಾಳದ ಕಾಟ್ಮಂಡು

 

ಪ್ರಾಮುಖ್ಯತೆ :

 1. ಇದು ವಿಶ್ವದ 3% ಭೂ ಭಾಗವನ್ನು, 21% ವಿಶ್ವದ ಜನಸಂಖ್ಯೆಯನ್ನು ಮತ್ತು 3.8% ಜಾಗತಿಕ ಆರ್ಥಿಕತೆಯನ್ನು ಹೊದಿದೆ.
 1. ಇದು ವಿಶ್ವದಲ್ಲಿ ಅಧಿಕ ಫಲವತ್ತಾದ ವಲಯವಾಗಿದ್ದು ಅತ್ಯಧಿಕ ಜನ ಸಾಂದ್ರತೆಯನ್ನುಹೊಂದಿದೆ.
 2. ಸಾರ್ಕಿನ ರಾಷ್ಟ್ರಗಳು ಉಡುಪು, ಆಹಾರ, ಸಂಸ್ಕೃತಿ, ರಾಜಕೀಯ ಅಂಶಗಳಲ್ಲಿ ಏಕರೂಪತೆಯನ್ನು ಹೊಂದಿವೆ.
 3. ಸಾರ್ಕಿನ ಎಲ್ಲಾ ರಾಷ್ಟ್ರಗಳು ಬಡತನ, ಅಸಾಕ್ಷರತೆ, ಅಪೌಷ್ಟಿಕತೆ, ನೈಸರ್ಗಿಕ ವಿಪತ್ತು, ಆಂತರಿಕ ಸಂಘರ್ಷ, ಕೈಗಾರಿಕೆ ಮತ್ತು ತಾಂತ್ರಿಕ ಹಿಂದುಳಿದಿರುವಿಕೆ  ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿವೆ.

bimstec

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ. ಕಂಪ್ಯೂಟರ್, ರೊಬೋಟಿಕ್ಸ್, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯಗಳಿಗೆ ಮತ್ತು ಬೌದ್ಧಿಕ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಿವು

ಲಕ್ಷದ್ವೀಪಕ್ಕೆ ಆಪ್ಟಿಕಲ್ ಫೈಬರ್ ಕೇಬಲ್


ಸಂದರ್ಭ:

2023 ವೇಳೆಗೆ ಲಕ್ಷದ್ವೀಪದ 11 ದ್ವೀಪಗಳನ್ನು ಕೋಚಿಯೊಂದಿಗೆ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಸಂಪರ್ಕ ಹೋದಗಿಸಲು ಕೇಂದ್ರೀಯ ಕ್ಯಾಬಿನೆಟ್ ಮುಂದಾಗಿದೆ. ಈ ಯೋಜನೆಗೆ Universal Service Obligation Fund ಮೂಲಕ ಹಣಕಾಸನ್ನು ಒದಗಿಸಲಾಗುವುದು.

 

ಹಿನ್ನೆಲೆ :

ಆಗಸ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋಧಿ ಅಂಡಮಾನ್ & ನಿಕೋಬಾರ್ ದ್ವೀಪಗಳಿಗೆ ಜಲಾಂತರ್ಗಾಮಿ ಕೇಬಲ್ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಆಗ ಲಕ್ಷದ್ವೀಪಕ್ಕೆ ಇನ್ನೂ ಸಾವಿರ ದಿನದಲ್ಲಿ ಆಪ್ಟಿಕಲ್ ಫೈಬರ್ ಮೂಲಕ ಸಂಪರ್ಕ ಸಾಧಿಸುವ ಗುರಿಯನ್ನು ಅಭಿವ್ಯಕ್ತಪಡಿಸಿದ್ದರು

 

ಪ್ರಾಮುಖ್ಯತೆ:

 1. ಲಕ್ಷದ್ವೀಪದಲ್ಲಿ ದೂರಸಂವಹನ ಸೌಲಭ್ಯ ವೃದ್ಧಿಯಾಗುವುದು.
 2. ಇ-ಆಡಳಿತದ ಸೇವೆಗಳ ಪೂರೈಕೆಯಲ್ಲಿ ಪ್ರಧಾನ ಪಾತ್ರವಹಿಸುವುದು.
 3. ಮೀನುಗಾರಿಕೆಯಲ್ಲಿ ಅಭಿವೃದ್ಧಿ
 4. ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯ ಅಭಿವೃದ್ಧಿವೆ ವೇದಿಕೆಯಾಗುವುದು.

 

ಜಲಾಂತರ್ಗಾಮಿ ಕೇಬಲ್

 1. ಭೂ ಕೇಂದ್ರಿತ ಸಂವಹನ ಕೇಂದ್ರಗಳನ್ನು ಸಂಪರ್ಕಿಸಲು ಸಾಗರದಾಳದಲ್ಲಿ ಈ ಕೇಬಲ್’ಗಳನ್ನು ಹಾಕಿ ದೂರ ಸಂಪರ್ಕ ಮತ್ತು ಸಂವಹನವನ್ನು ಉಂಟುಮಾಡುವರು.
 2. ಇವುಗಳು ಪ್ಲಾಸ್ಟಿಕ್ ಪದರುಗಳಾಗಿದ್ದು, ರಕ್ಷಣಾ ಟ್ಯೂಬ್ ಮೂಲಕ ನಿರ್ಮಿಸಲಾಗಿದ್ದು ಸಾಗರದಾಳದ ಪರಿಸರಕ್ಕೆ ಪೂರಕವಾಗಿದೆ.

 

ಜಲಾಂತರ್ಗಾಮಿ ಕೇಬಲ್’ಗಳ ಪ್ರಾಮುಖ್ಯತೆ :

 1. ಸಾಗರದಾಳದ ಕೇಬಲ್ ಮೂಲಕವೇ 99% ದತ್ತಾಂಶದ ವರ್ಗಾವಣೆಯಾಗುವುದು.
 2. ಈ ಕೇಬಲ್’ಗಳು ಆಂತರಿಕ ಪ್ರತಿಫಲನಾ ಸಿದ್ದಾಂತದ ನೆಲೆಯಲ್ಲಿ ಕಾರ್ಯ ನಿರ್ವಹಿಸುವುದರಿಂದ ವಿಶ್ವಾಸಾರ್ಹತೆ, ದಕ್ಷತೆ ಅಧಿಕವಾಗಿದೆ.
 • ಇವುಗಳ ದತ್ತಾಂಶ ವರ್ಗಾವಣೆಯ ಒಟ್ಟು ಸಾಮರ್ಥ್ಯ ಪ್ರತಿ ಸೆಕೆಂಡಿಗೆ ಟೆರಾಬಿಟ್ಸ್ ಆದರೆ ಉಪಗ್ರಹದ್ದು ಕೇವಲ 1000 ಮೇಗಾಬಿಟ್ಸ್ ಆಗಿದೆ.

submarine_cables

Sources: the Hindu.

 

ವಿಷಯ: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ. ಕಂಪ್ಯೂಟರ್, ರೊಬೋಟಿಕ್ಸ್, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯಗಳಿಗೆ ಮತ್ತು ಬೌದ್ಧಿಕ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಿವು

PM- WANI:


ಸಂದರ್ಭ:

ಸಾರ್ವಜನಿಕ Wi-Fi ಯೋಜನೆ ‘(PM Wani)ಗೆ ಕ್ಯಾಬಿನೆಟ್ ಅಂಗೀಕಾರ ದೊರೆತಿದೆ.

 1. ಈ ನಡೆ ಅಂತರ್ಜಾಲದ ಸೇವೆಗಳನ್ನು ತ್ವರಿತ ಗತಿಯಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ.
 2. ಇದನ್ನು 2017 ರಲ್ಲಿ ಮೊದಲ ಬಾರಿಗೆ ಭಾರತೀಯ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರ ಶಿಫಾರಸ್ಸು ಮಾಡಿದೆ.

 

ಯೋಜನೆಯ ಪ್ರಮುಖಾಂಶಗಳು

 1. ಸಾರ್ವಜನಿಕ ದತ್ತಾಂಶ ಕಾರ್ಯಾಲಯದ (PDOs) ಮೂಲಕ ದೇಶದಾದ್ಯಂತ ಸಾರ್ವಜನಿಕ WiFi-hotspots ಗಳನ್ನು ಸ್ಥಾಪಿಸಲಾಗುವುದು.
 2. PDOಗಳು ಪರವಾನಿಗೆಗಾಗಿ ಶುಲ್ಕ ಪಾವತಿಸುವ ಅಗತ್ಯವಿಲ್ಲ.
 3. ಇದರಲ್ಲಿ ಸಾರ್ವಜನಿಕ ದತ್ತಾಂಶ ಕಾರ್ಯಾಲಯದ ಅಧಿಕಾರಿಗಳು, ದತ್ತಾಂಶದ ಸಂಗ್ರಾಹಕರು, ಸೇವಾ ಪೂರೈಕೆದಾರರು, ಕೇಂದ್ರೀಯ ನೋಂದಣಿ ಸಂಸ್ಥೆ ಮುಂತಾದವರನ್ನು ಒಳಗೊಂಡು  ಬಹುಜನಯುಕ್ತವಾಗಿದೆ.

 

ಅನುಷ್ಠಾನ :

 1. ಗ್ರಾಹಕರು ಮತ್ತು ಸೇವಾ ಪೂರೈಕೆದಾರರ ನಡುವೆ ಸೌಲಭ್ಯದಾರರಾಗಿ ಕಾರ್ಯ ನಿರ್ವಹಿಸುವರು.
 2. ಸಂಗ್ರಾಹಕರು (PDOA) ಮೇಲ್ವಿಚಾರಣೆಯ ಕಾರ್ಯವನ್ನು ನಿರ್ವಹಿಸುವರು.
 3. ವ್ಯಕ್ತಿಯೊಬ್ಬ ಸಾರ್ವಜನಿಕ wifiಯನ್ನು ಅನ್ವಯಿಕದ ಮೂಲಕ ಬಳಸಬಹುದು
 4. ಯೋಜನೆಯ ನಿರ್ಮಾಣದಾರ ಅನ್ವಯಿಕದ ಮೂಲಕ ನೊಂದಾಯಿತ ಬಳಕೆದಾರರಿಗೆ ವೇದಿಕೆಯನ್ನು, ದೂರು ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿದೆ.
 5. ಕೇಂದ್ರೀಯ ದತ್ತಾಂಶ ಅಭಿವೃದ್ಧಿಯ ಸಂಸ್ಥೆಯು ಕೇಂದ್ರೀಯ ನೋಂದಣಿಯನ್ನು ನಿರ್ವಹಿಸುತ್ತದೆ.

 

ಯೋಜನೆಯ ಪ್ರಾಮುಖ್ಯತೆ :

ಈ ಯೋಜನೆಯು ದತ್ತಾಂಶ ವಿತರಣೆ ಮತ್ತು ಅಂತರ್ಜಾಲ ಸೇವೆಯ ಲಭ್ಯತೆಯನ್ನು ಕೈಗೆಟಕುವ ದರದಲ್ಲಿ ಪ್ರಜಾಪ್ರಭುತ್ವಿಕರಣಗೊಳಿಸುವುದು. ಇದು ಸಂಪರ್ಕ ಸೇವೆಗಳ UPI (unified payments interface) ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

Public_Wi-Fi

Sources: the Hindu.

 

ವಿಷಯ : ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು

ಕರಾವಳಿ ನಿಯಂತ್ರಣ ವಲಯದ ನಿಯಮಗಳು (Coastal Regulatory Zone)


ಸಂದರ್ಭ:

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಚಿಸಿದ ಆರು ಸದಸ್ಯರ ಸಮಿತಿಯು ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಕರವಾಕ ಮತ್ತು ಅಂತರ್ವೇದಿ ಪಲ್ಲಿಪಲೆಮ್ ನಡುವಿನ ಕರಾವಳಿ ಉದ್ದಕ್ಕೂ ಕರಾವಳಿ ನಿಯಂತ್ರಣ ವಲಯದ ನಿಯಮಗಳ ಉಲ್ಲಂಘನೆ ಕುರಿತು ಕ್ಷೇತ್ರ ಮಟ್ಟದ ತನಿಖೆ ನಡೆಸಿತು.

ಜಲಚರ ಸಾಕಣೆ ಮತ್ತು ಕಡಲತೀರದ ಮರಳನ್ನು ಹೊರತೆಗೆಯಲು ನೀಡಲಾದ ಅನುಮತಿಗಳ ಸ್ವರೂಪಕ್ಕೆ ಸಂಬಂಧಿಸಿದ ಅಗತ್ಯ ದತ್ತಾಂಶಗಳನ್ನು ಸಮಿತಿ ವಿಶ್ಲೇಷಿಸಿದೆ.

 

ಕರಾವಳಿ ನಿಯಂತ್ರಣಾ ವಲಯ

1991ರಲ್ಲಿ ಮೊದಲ ಬಾರಿಗೆ ಪರಿಸರ ಸಚಿವಾಲಯ ಭಾರತೀಯ ಪರಿಸರ ಸಂರಕ್ಷಣಾ ಕಾಯ್ದೆ (1986) ಅಡಿಯಲ್ಲಿ ಕರಾವಳಿ ಸಂರಕ್ಷಣೆಗೆ ನಿಯಮಗಳನ್ನು ಹೊರಡಿಸಿತು.

 • ಇದು ಕೆಲವು ಕಾಮಗಾರಿಗಳ ನಿರ್ಮಾಣ ನಿರ್ಬಂಧಗಳ ಸಡಿಲಿಕೆ, ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ, ನಿರ್ವಹಣಾ ಪ್ರಕ್ರಿಯೆಯ ತೆರವುಗೊಳಿಸುವಿಕೆಯಲ್ಲಿ ಬದಲಾವಣೆ ತರಲು 2018-19ರಲ್ಲಿ ನವ ನಿಯಮಗಳನ್ನು ಹೊರಡಿಸಲಾಯಿತು

 

ಧ್ಯೇಯ:

ಬೃಹತ್ ನಿರ್ಮಾಣ ಕಾಮಗಾರಿ, ನವ ಕೈಗಾರಿಕೆಗಳ ಸ್ಥಾಪನೆ, ವಿಷಕಾರಿ ವಸ್ತುಗಳ ಶೇಖರಣೆ ಮಾತು ವಿಲೇವಾರಿ, ಗಣಿಗಾರಿಕೆ ಮುಂತಾದವನ್ನು ತೀರಭಾಗದ ನಿರ್ದಿಷ್ಟ ಅಂತರದಿಂದ ಈ ಚಟುವಟಿಕೆಗಳನ್ನು ನಿರ್ಬಂಧಿಸುತ್ತದೆ

 

ನಿರ್ಬಂಧಗಳು

 • ವಲಯದ ಜನಸಂಖ್ಯೆ, ಪಾರಿಸರಿಕ ಸೂಕ್ಷ್ಮತೆ, ತೀರದಿಂದ ಅಂತರ ಮತ್ತು ವನ್ಯಜೀವಿ ಸಂರಕ್ಷಣಾ ವಲಯಗಳ ನೆಲೆಯಲ್ಲಿ ನಿರ್ಬಂಧಗಳನ್ನು ವಿಧಿಸಬಹುದಾಗಿದೆ.
 • ಇತ್ತೀಚಿನ ನಿಯಮಗಳು ಮುಖ್ಯ ಭೂ ಭಾಗದ ತೀರಕ್ಕೆ ಸಾಮಿಪ್ಯವಿರುವ ಸರ್ವ ದ್ವೀಪಗಳಿಂದ, ಹಿನ್ನೀರಿನ ದ್ವೀಪಗಳಿಂದ 20 ಮೀ ವರೆಗೆ ಅಭಿವೃದ್ಧಿ ರಹಿತ ವಲಯವೆಂದಿವೆ.

 

ಕರಾವಳಿ ನಿಯಂತ್ರಕ ವಲಯ –III (ಗ್ರಾಮೀಣ) ಎರಡು ಪ್ರತ್ಯೇಕ ವರ್ಗಗಳಾಗಿ ಗುರುತಿಸಿದೆ.

 1. CRZ-IIIA à 2011ರ ಜನಗಣತಿ ಪ್ರಕಾರ ಜನಸಾಂದ್ರತೆ ಪ್ರತಿ 2161 ಚ.ಕಿ.ಮೀ ಅಧಿಕಯಿರುವ ಗ್ರಾಮೀಣ ವಲಯದಲ್ಲಿ 200ಮೀ ಇದ್ದ ಅಭಿವೃದ್ಧಿ ರಹಿತ ವಲಯ 50 ಮೀ ಗೆ ಇಳಿಕೆ
 2. CRZ-IIIB à 2011ರ ಜನಗಣತಿ ಪ್ರಕಾರ ಜನಸಾಂದ್ರತೆ ಪ್ರತಿ 2161 ಚ.ಕಿ.ಮೀ ಕಡಿಮೆಯಿರುವ ಗ್ರಾಮೀಣ ವಲಯದಲ್ಲಿ ಉಬ್ಬರದಲೆಯಿಂದ 200 ಮೀಟರ್ ವರೆಗೆ ವಿಸ್ತರಿಸಿದೆ.

 

ಅನುಷ್ಠಾನ :

ಈ ನಿಯಮಗಳನ್ನು ಕೇಂದ್ರದ ಪರಿಸರ ಸಚಿವಾಲಯ ಮಂಡಿಸಿದರೆ, ತೀರ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಮೂಲಕ ರಾಜ್ಯ ಸರ್ಕಾರವು ಅನುಷ್ಠಾನವನ್ನು ಖಾತ್ರಿಪಡಿಸುವುದು.

Sources: the Hindu.

 

ವಿಷಯ: ಗಡಿ ಭಾಗದಲ್ಲಿ ಭದ್ರತೆಯ ಸವಾಲುಗಳು ಮತ್ತು ಗಡಿ ನಿರ್ವಹಣೆ – ಭಯೋತ್ಪಾದನೆ ಮತ್ತು ವ್ಯವಸ್ಥಿತ (ಸಂಘಟಿತ) ಅಪರಾಧಗಳ ನಡುವಿನ ಸಂಬಂಧ

ಖಲಿಸ್ತಾನದ ಕಾರ್ಯಕರ್ತರ ಮೇಲೆ NIA ಯಿಂದ ಆದೇಶ


ಸಂದರ್ಭ :

ವಿದೇಶಿ ಖಲಿಸ್ತಾನಿಯರೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA)  16 ಜನರ ವಿರುದ್ಧ ಚಾರ್ಜ್-ಶೀಟ್ ದಾಖಲಿಸಿದೆ.

 • ದೇಶದಲ್ಲಿ ಧರ್ಮ, ಪ್ರಾದೇಶಿಕ ನೆಲೆಯಲ್ಲಿ ಶತೃತ್ವವನ್ನು ಪ್ರಚೋದಿಸುವ ಮತ್ತು ರಾಜ ದ್ರೋಹದ ಚಟುವಟಿಕೆಗಳಲ್ಲಿ ತೊಡಗಿರುವರೆಂದು ಅಮೇರಿಕಾ , ಯು.ಕೆ, ಕೆನಡಾದ ಮೂಲದವರನ್ನು ಭಯೋತ್ಪಾದನಾ ವಿರೋಧಿ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣಾ ಕಾಯ್ದೆ (UAPA) ಅಡಿಯಲ್ಲಿ ದೂರು ದಾಖಲಿಸಲಾಗಿದೆ.

 

ಸಮಸ್ಯೆ

ಆರೋಪಿತರು ಖಲಿಸ್ತಾನ ನಿರ್ಮಾಣದ ‘ಜನಾಭಿಪ್ರಾಯ 2020’ ಅಡಿಯಲ್ಲಿ ಪ್ರತ್ಯೇಕತಾ ಅಭಿಯಾನವನ್ನು ನಡೆಸುವ ವಿವಾದದ ನೆಲಯಲ್ಲಿ ಚಾರ್ಜ್ ಶೀಟ್ ದಾಖಲಿಸಲಾಗಿದೆ.

 

ಖಲಿಸ್ತಾನದ ಚಳುವಳಿ

ಪಂಜಾಬ್ ಸಭೆಯ ಉಗಮದ ಹಿನ್ನೆಲೆಯಲ್ಲಿ ಮೂಡಿಬಂದ ಪ್ರತ್ಯೇಕ ಸಿಖ್ಖ್ ರಾಜ್ಯದ ಬೇಡಿಕೆಯ ಚಳುವಳಿಯಾಗಿದೆ.

ಅಕಾಲಿ ದಳವು ಸಿಖ್ಖ್ ಪ್ರಾಬಲ್ಯದ ರಾಜಕೀಯ ಪಕ್ಷವಾಗಿದೆ. ಇದು ಪ್ರತ್ಯೇಕ ಸಿಖ್ಖ್ ಸಭಾ ಅಥವಾ ಪ್ರಾಂತ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

 • ಆಕಾಲಿ ದಳದ ಬೇಡಿಕೆಯನ್ನು ಭಾಷಾಧಾರಿತ ಪ್ರತ್ಯೇಕ ರಾಜ್ಯಗಳ ನಿರ್ಮಾಣಕ್ಕೆ ನಿಯೋಜಿತವಾದ  ರಾಜ್ಯ ಮರುವಿಂಗಡನಾ ಆಯೋಗ ನಿರಾಕರಿಸಿತು.
 • ಪಂಜಾಬ್ ಪ್ರಾಂತ್ಯವನ್ನು ಬಹುಸಂಖ್ಯಾತಿ ಪಂಜಾಬಿಗಳ ಪಂಜಾಬ್, ಬಹುಸಂಖ್ಯಾತ ಹಿಂದೂಗಳ ಹರಿಯಾಣ, ಕೇಂದ್ರಾಡಳಿತ ಚಂಡಿಘಢವೆಂದು ತ್ರಿಭಜಿಸಲಾಗಿದೆ. ರಾಜ್ಯದ ಕೆಲವು ಗುಡ್ಡಗಾಡು ವಲಯವನ್ನು ಹಿಮಾಚಲ ಪ್ರದೇಶಕ್ಕೆ ಸೇರಿಸಲಾಯಿತು.

 

ಆನಂದಪುರ ಸಾಹಿಬ್ ಒಪ್ಪಂದ

 1. ಇದನ್ನು ಶಿರೋಮಣಿ ಅಕಾಲಿ ದಳ ಅಳವಡಿಸಿಕೊಂಡಿದೆ.
 2. ಇದು ಪಕ್ಷದ ನೀಲನಕ್ಷೆಯಾಗಿ ಭವಿಷ್ಯದ ಅಜೆಂಡಾವಾಗಿದೆ.
 3. ಇದು ಪಂಜಾಬ್ ರಾಜ್ಯಕ್ಕೆ ಸ್ವಾಯತ್ತತೆಯ ಬೇಡಿಕೆಯನ್ನು ಮಂಡಿಸಿತು
 4. ಕೆಲವು ನಿರ್ದಿಷ್ಟ ವಲಯಗಳನ್ನು ಈ ಪ್ರತ್ಯೇಕ ರಾಜ್ಯದ ಭಾಗವಾಗಿಸಿ ಆಂತರಿಕ ಸಂವಿಧಾನವನ್ನು ರಚಿಸುವ ಹಕ್ಕನ್ನು ಆಶಿಸಿತು.

Sources: the Hindu.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಕಿರು ಕಾಜೀರಂಗ

 • ಅಸ್ಸಾಮಿನ ಪೋಬಿತೋರ ಅಭಯಾರಣ್ಯವನ್ನು ಕಿರು ಕಾಜೀರಂಗಾ ಎನ್ನಲಾಗಿದೆ.
 • ಇದು ವಿಶ್ವದಲ್ಲಿ ಅತೀ ಹೆಚ್ಚು ರೈನೋ (one-horned rihno) ಸಾಂದ್ರತೆಯನ್ನು ಹೊಂದಿರುವ ತಾಣವಾಗಿದೆ.
 • ಅಸ್ಸಾಮಿನ ಕಾಜೀರಂಗ ರಾಷ್ಟ್ರೀಯ ಉದ್ಯಾನವನದ ನಂತರ ಹೆಚ್ಚು ಸಂಖ್ಯೆಯ ರೈನೋ ಹೊಂದಿರುವ ತಾಣವಾಗಿದೆ.

 

ಗೋ ಹತ್ಯೆ ವಿರೋಧಿಸಿ ಕರ್ನಾಟಕ ಶಾಸನ ಸಭೆಯಿಂದ ಮಸೂದೆ

ಜಾನುವಾರು ಹತ್ಯೆ ಮತ್ತು ಸಂರಕ್ಷಣಾ ಮಸೂದೆ (2020) ಯನ್ನು ಕರ್ನಾಟಕ ಶಾಸಕಾಂಗ ಕಾಯ್ದೆಯಾಗಿಸಲು ಮುಂದಾಗಿದೆ. ಇದು ಕಾನೂನು ಉಲ್ಲಂಘನೆಗೆ 3-7 ವರ್ಷ ಜೈಲುವಾಸ ಮತ್ತು 50000 – 7 ಲಕ್ಷದವರೆಗೆ  ದಂಡ ವಿಧಿಸಲಾಗುತ್ತದೆ.

 • ಜಾನುವಾರುಗಳನ್ನು ವಧೆ ಮಾಡುವುದು ಅಥವಾ ಉದ್ದೇಶಪೂರ್ವಕವಾಗಿ ಕೊಲ್ಲುವುದು, ಮಾರಾಟ / ವಿಲೇವಾರಿ ಮಾಡುವುದು ಮಸೂದೆಯ ಪ್ರಕಾರ ಅಪರಾಧವಾಗಿದೆ.
 • ಆರೋಪಿಯು ಶಿಕ್ಷೆಗೊಳಗಾಗಿದ್ದರೆ, ನ್ಯಾಯಾಲಯವು ಮುಟ್ಟುಗೋಲು ಹಾಕಿಕೊಂಡ ಜಾನುವಾರು, ವಾಹನ, ಆವರಣ ಮತ್ತು ವಸ್ತುಗಳನ್ನು ರಾಜ್ಯ ಸರ್ಕಾರದ ಪರವಾಗಿ ಹಾಕಿಕೊಳ್ಳಬಹುದು.
 • ಪ್ರಸ್ತಾವಿತ ಶಾಸನದಡಿಯಲ್ಲಿ ವಧೆ ಮಾಡುವಿಕೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಲು ಸರ್ಕಾರವು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಪಶುವೈದ್ಯ ಅಧಿಕಾರಿ ಹುದ್ದೆಗೆ ಕೆಳಗಿರದ ತಹಶೀಲ್ದಾರ್ ಅಥವಾ ಅಧಿಕಾರಿಯನ್ನು ಸಮರ್ಥ ಪ್ರಾಧಿಕಾರವಾಗಿ ನೇಮಿಸಬಹುದು.

 

INS Kalvari ನೆನಪಿನ ನೆಲೆಯಲ್ಲಿ ಜಲಾಂತರ್ಗಾಮಿ ದಿನದ ಆಚರಣೆ

 1. ಡಿಸೆಂಬರ್ 8 ರಂದು ಆಚರಣೆ
 2. 1967 ರಲ್ಲಿ USSR ನ ಲಾಟ್ವಿಯಾದ ರಿಗಾದಲ್ಲಿ ಮೊದಲ ಬಾರಿಗೆ ಕಲ್ವರಿ ಜಲಾಂತರ್ಗಾಮಿ ನೌಕೆ ಭಾರತೀಯ ನೌಕಾ ಪಡೆಯ ಭಾಗವಾಯಿತು.
 3. ಹಿಂದೂ ಮಹಾಸಾಗರದ ಬೇಟೆಗಾರನಾದ Tiger Shark ಗೆ ಮಲೆಯಾಳಂನಲ್ಲಿ ‘ಕಲ್ವರಿ’ ಎನ್ನಲಾಗಿದೆ.
 4. 29 ವರ್ಷಗಳ ಸೇವೆಯ ನಂತರ 1996 ರಲ್ಲಿ ಕಲ್ವರಿಯನ್ನು ನಿರಚನೆಗೊಳಿಸಲಾಗಿದೆ.

 

ಸಿಂಧೂ ಬಯಲಿನ ನಾಗರೀಕತೆಯಲ್ಲಿ ಜಾನುವಾರುಗಳ ಮಾಂಸದ ಬಳಕೆ

ಇಂದಿನ ಉತ್ತರ ಪ್ರದೇಶ ಮತ್ತು ಹರಿಯಾಣದ ಸಿಂಧೂ ಬಯಲಿನ ನಾಗರೀಕತೆಯ ತಾಣಗಳಲ್ಲಿ 4600 ವರ್ಷಗಳಿಗೆ ಸೇರಿದ ಜಾನುವಾರುಗಳ (ಹಸು, ಎಮ್ಮೆ) ಮಾಂಸ, ಪಿಂಗಾಣಿ ಉಪಕರಣಗಳು ಬಳಕೆಯ ಬಗ್ಗೆ ನವ ಅಧ್ಯಯನಗಳು ಬೆಳಕ ಚೆಲ್ಲಿವೆ.

ಪ್ರಮುಖಾಂಶಗಳು :

 • ಸಿಂಧೂ ಕಣಿವೆಯ ಪ್ರದೇಶಗಳಿಂದ ದೊರೆತ ಸಾಕು ಪ್ರಾಣಿಗಳ ಮೂಳೆಗಳಲ್ಲಿ ಶೇ 50-60 ರಷ್ಟು ಜಾನುವಾರುಗಳಿಗೆ ಸೇರಿವೆ.
 • ಜಾನುವಾರುಗಳ ಮೂಳೆಯ ಪ್ರಮಾಣ ಅಧಿಕವಾಗಿರುವುದು ಆಹಾರ ಸೇವನೆಯಲ್ಲಿ ಸಿಂಧೂ ನಾಗರೀಕತೆ ಜನತೆಯ ಸಾಂಸ್ಕೃತಿಕ ಆಧ್ಯತೆಯನ್ನು ಸೂಚಿಸುತ್ತದೆ. ಇದಕ್ಕೆ ಪೂರಕವಾಗಿ ಮೇಕೆ/ಆಡು ಸೇವನೆಯ ಅಂಶವನ್ನು ತಿಳಿಸುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos