Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 4 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ :  ಭಾರತೀಯ ಸಮಾಜದ ವೈಲಕ್ಷಣಗಳು, ಭಾರತದ ವೈವಿಧ್ಯತೆ. ಮಹಿಳೆಯರು ಮತ್ತು ಮಹಿಳಾ ಸಂಘಗಳ ಪಾತ್ರ

1. What do you understand by idea of exclusive belonging? How far can the concept are applied to Indian cultural aspects. Comment. (250 words)

1. ಸಮಾಜದಲ್ಲಿ ‘ಪ್ರತ್ಯೇಕ ಸೇರ್ಪಡೆ ಆಲೋಚನೆಯ’ ಅರ್ಥವೇನು? ಈ ಪರಿಕಲ್ಪನೆಯನ್ನು ಭಾರತೀಯ ಸಾಂಸ್ಕೃತಿಕ ಅಂಶಗಳಿಗೆ ಅನ್ವಯವಾಗುವಿಕೆಯನ್ನು ಕುರಿತು ಬರೆಯಿರಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ

ಭಾರತೀಯ ಸಮಾಜದ ಅನನ್ಯತೆ ಮತ್ತು ವಿವಿಧ ಪರಿಕಲ್ಪನೆಗಳ ಅಳವಡಿಕೆ

ಉತ್ತರದ ರಚನೆ

ಪೀಠಿಕೆ:

ಪ್ರತ್ಯೇಕ ಸೇರ್ಪಡೆಯನ್ನು ಸಂಕ್ಷಿಪ್ತವಾಗಿ ವಿವರಿಸಿ –  ಪ್ರತಿ ಮಾನವ ಕೇವಲ ಒಂದು ಧರ್ಮ ಅಥವಾ ಭಾಷಿಕ ಸಮುದಾಯಕ್ಕೆ ಸೇರ್ಪಡೆಯಾಗಿದ್ದು, ಏಕ ಸಂಸ್ಕೃತಿ, ಅನನ್ಯ ನಾಗರಿಕತೆಯನ್ನು ಹೊಂದಿರುವರು.

ಮುಖ್ಯಭಾಗ:

ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಕುರಿತು ಬರೆಯಿರಿ.

ಭಾರತದಲ್ಲಿ ವೈವಿಧ್ಯತೆಯ ಪ್ರಾಮುಖ್ಯತೆಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಅಂಶಗಳನ್ನು ವಿವರಿಸಿ.

ಉಪಸಂಹಾರ:

ವೈವಿಧ್ಯತೆ ಭಾರತದ ಸಮಸ್ಯೆಯಲ್ಲ ಆದರೆ ಅದನ್ನು ಭಾರತೀಯ ಸಮಾಜದಲ್ಲಿ ನಿರ್ವಹಿಸುವುದು ಸವಾಲಿನ ಕಾರ್ಯವಾಗಿದೆ.  ಪ್ರಾದೇಶಿಕತೆ, ಕೋಮುವಾದ, ಜನಾಂಗಿಕ ಸಂಘರ್ಷ ಮುಂತಾದವು ಅಭಿವೃದ್ಧಿಯ ಪ್ರಕ್ರಿಯೆ ಅಸಮನ ಹಂಚಿಕೆಯಿಂದ ಉಗಮವಾಗಿವೆ.


ಸಾಮಾನ್ಯ ಅಧ್ಯಯನ – 2


 

ವಿಷಯ : ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಹಾಗೂ ಜವಾಬ್ದಾರಿಗಳು, ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು

2. Why are parliamentary standing committees necessary? Explain with recent examples. (250 words)

2. ಸಂಸದೀಯ ಸ್ಥಾಯಿ ಸಮಿತಿಗಳ ಅಗತ್ಯತೆಯನ್ನು ಉದಾಹರಣೆ ಸಹಿತ ವಿವರಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಹಿನ್ನೆಲೆ

ಕೃಷಿ ವಲಯದ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ಮಸೂದೆಗಳ ಕೂಲಂಕುಷ ಪರಿಶೀಲನೆಗೆ ಸಮಿತಿಗಳ ಅಗತ್ಯತೆಯನ್ನು ಸಾರಿದೆ.

ಪ್ರಶ್ನೆಯ ಆಶಯ

ಭಾರತೀಯ ರಾಜ್ಯಶಾಸ್ತ್ರ ವ್ಯವಸ್ಥೆಯಲ್ಲಿ ಪರಿಶೀಲನಾ ಮತ್ತು ಸಮತೋಲನ ವ್ಯವಸ್ಥೆಯ ಅಗತ್ಯತೆ ಮತ್ತು ಮಾರ್ಗಗಳು

ಉತ್ತರದ ರಚನೆ

ಪೀಠಿಕೆ:

ಸಂಸದೀಯ ಸಮಿತಿಗಳ ಅರ್ಥವನ್ನು ವಿವರಿಸಿ

ಮುಖ್ಯಭಾಗ:

ಸಮಿತಿಗಳ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ

ಸಮಿತಿಗಳಲ್ಲಿನ ಸಮಸ್ಯೆಗಳನ್ನು ಬರೆಯಿರಿ

ಉಪಸಂಹಾರ:

ಸಮಿತಿಗಳನ್ನು ಬಲಪಡಿಸಳು ಕ್ರಮಗಳನ್ನು ಸೂಚಿಸಿ

 

ವಿಷಯ: ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

3.  Analyse the various challenges a vaccine poses to qualify as a ‘public health’ intervention in India. (250 words)

3. ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಸುಧಾರಣ ಕ್ರಮವಾಗಿ ಒಂದು ಲಸಿಕೆ ಅರ್ಹತೆಯನ್ನು ಪಡೆಯಲು ಅದು ಎದುರಿಸುವ ಸವಾಲುಗಳನ್ನು ವಿಶ್ಲೇಷಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ

ಉತ್ತಮ ಆಡಳಿತದ ಅಂಶಗಳು ಮತ್ತು ಸಾರ್ವಜನಿಕ ಆರೋಗ್ಯದ ನಡುವಿನ ಸಂಬಂಧ

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ಚರ್ಚಿಸಿ

ಮುಖ್ಯಭಾಗ:

ಲಸಿಕೆಯ ಉದ್ದೇಶವನ್ನು ಕುರಿತು ಬರೆಯಿರಿ

ಲಸಿಕೆಯ ಸವಾಲುಗಳ ಕುರಿತು ಚರ್ಚಿಸಿ

 1. ಮೂಲಸೌಕರ್ಯದ ಕೊರತೆ
 2. ವೆಚ್ಚದ ಪ್ರಮಾಣ
 3. ವಿಶ್ವಾಸಾರ್ಹತೆ
 4. ಲಸಿಕೆಯ ಸುರಕ್ಷತೆ ಮುಂತಾದವು

ಕೋವಿಡ್-19 ಪ್ರಕರಣವನ್ನು ಉದಾಹರಣೆಯಾಗಿಸಿ ವಿವರಿಸಿ

ಉಪಸಂಹಾರ:

ಮುಂದಿನ ಕ್ರಮಗಳ ಕುರಿತು ಬರೆಯಿರಿ


ಸಾಮಾನ್ಯ ಅಧ್ಯಯನ – 3


 

ವಿಷಯ: ಭಾರತದ ಪ್ರಮುಖ ಬೆಳೆಗಳು – ದೇಶದ ವಿವಿಧ ಭಾಗದಲ್ಲಿರುವ ಬೆಳೆಗಳ ಮಾದರಿ, ವಿವಿಧ ರೀತಿಯ ನೀರಾವರಿ ಪದ್ಧತಿಗಳು, ದಾಸ್ತಾನು, ಸಾಗಾಣಿಕೆ, ಕೃಷಿ ಉತ್ಪಾದನೆಯ ಮಾರುಕಟ್ಟೆ ಮತ್ತು ಸಂಬಂಧಿತ ಸಮಸ್ಯೆಗಳು; ರೈತರಿಗೆ ಪೂರಕವಾಗಿ ಇ-ತಂತ್ರಜ್ಞಾನ

4. Agriculture in India needs state support to thrive.do you agree? Critically analyse. (250 words)

4. ಭಾರತದಲ್ಲಿ ಕೃಷಿ ವೃದ್ಧಿಗೆ ರಾಜ್ಯಗಳ ಬೆಂಬಲ ಅಗತ್ಯವೆಂಬುದರ ಮೇಲೆ ನಿಮ್ಮ ಅಭಿಪ್ರಾಯವೇನು. ವಿಮರ್ಶಾತ್ಮಕ ಚರ್ಚಿಸಿ. (250 ಪದಗಳು)

Reference: Indian Express 

ಪ್ರಶ್ನೆಯ ಆಶಯ

ಕೃಷಿ ವಲಯದಲ್ಲಿ ಸಹಕಾರಿ ಒಕ್ಕೂಟವಾದದ ಅಗತ್ಯತೆ

ಉತ್ತರದ ರಚನೆ

ಪೀಠಿಕೆ:

ಭಾರತದಲ್ಲಿ ಕೃಷಿಯ ಸ್ಥಿತಿಯನ್ನು ಕುರಿತು ಬರೆಯಿರಿ.

ಮುಖ್ಯಭಾಗ:

ಭಾರತದಲ್ಲಿ ಕೃಷಿಯ ಸಂವೃದ್ಧಿಗೆ ರಾಜ್ಯಗಳ ಬೆಂಬಲದ ಅಗತ್ಯತೆಯನ್ನು ವಿಶ್ಲೇಷಿಸಿ

 1. ಕೃಷಿ ಸೇವೆಗಳು ಮತ್ತು ದರ ಖಾತ್ರಿ ಮೇಲಿನ ರೈತರ ಒಪ್ಪಂದ ಕಾಯ್ದೆ (2020)
 2. ಕೃಷಿ ಉತ್ಪನ್ನದ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ (2020)
 3. ಅಗತ್ಯ ಸರಕಿನ ಕಾಯ್ದೆ (2020)
 4. ಕೋವಿಡ್-19ನಿಂದಾಗಿ ಭಾರತದ ಗ್ರಾಮೀಣ ಜೀವನದಲ್ಲಿ ಉಂಟಾದ ಆರ್ಥಿಕ ಕುಸಿತವನ್ನು ನಿವಾರಿಸಲು ಕೃಷಿ ವಲಯದಲ್ಲಿ ರಚನಾತ್ಮಕ ಸುಧಾರಣೆಗಳು
 5. ಕೃಷಿ ವಲಯದಲ್ಲಿ ಉದಾರೀಕರಣ ಪ್ರಕ್ರಿಯೆ

ಉಪಸಂಹಾರ:

ಮುಂದಿನ ಪರಿಹಾರ ಮಾರ್ಗಗಳನ್ನು ಬರೆಯಿರಿ

 

ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು

5. Discuss some reforms that can be made to improve manufacturing in India and thus leading to making India a ‘Plus One’ destination. (250 words)

5. ಭಾರತದಲ್ಲಿ ತಯಾರಿಕಾ ವಲಯವನ್ನು ಪ್ಲಸ್ ಒನ್’ ಕೇಂದ್ರವಾಗಿಸಲು ಜಾರಿಗೆ ತರಬೇಕಾದ ಸುಧಾರಣೆಗಳ ಕುರಿತು ಚರ್ಚಿಸಿ. (250 ಪದಗಳು)

Reference: Times of India 

ಪ್ರಶ್ನೆಯ ಹಿನ್ನೆಲೆ

ಭಾರತ ಚೀನಾದ ಮೇಲಿನ ಅವಲಂಬನೆಯನ್ನು ಮಿತಗೊಳಿಸಲು ಅನೇಕ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ

ಪ್ರಶ್ನೆಯ ಆಶಯ

ಭಾರತದ ಆರ್ಥಿಕತೆಯಲ್ಲಿ ತಯಾರಿಕಾ ವಲಯದ ಪ್ರಾಮುಖ್ಯತೆ

ಉತ್ತರದ ರಚನೆ

ಪೀಠಿಕೆ:

ಭಾರತದಲ್ಲಿ ತಯಾರಿಕಾ ವಲಯದ ಕುರಿತು ಅಂಕಿಅಂಶಗಳನ್ನು ಬರೆಯಿರಿ.

ಮುಖ್ಯಭಾಗ:

ಭಾರತದಲ್ಲಿ ತಯಾರಿಕಾ ವಲಯದ ಅಗತ್ಯತೆಯನ್ನು ಕುರಿತು ಬರೆಯಿರಿ.

ಭಾರತದಲ್ಲಿ ತಯಾರಿಕಾ ವಲಯ ಹಿಂದುಳಿದಿರಲು ಕಾರಣವನ್ನು ತಿಳಿಸಿ.

ಭಾರತವನ್ನು ತಯಾರಿಕಾ ವಲಯದ ಕೇಂದ್ರವಾಗಿಸಲು ಅಗತ್ಯವಾದ ಕ್ರಮಗಳು/ಸುಧಾರಣೆಗಳನ್ನು ವಿವರಿಸಿ.

ಸುಧಾರಣೆಗಳ ಅನುಷ್ಟಾನಕ್ಕಿರುವ  ಸವಾಲುಗಳನ್ನು ಬರೆಯಿರಿ

ಉಪಸಂಹಾರ

ಶೈಕ್ಷಣಿಕ-ಕೈಗಾರಿಕಾ ಭಾಗಿತ್ವ, ತಂತ್ರಜ್ಞಾನದ ನಾವಿನ್ಯತೆ ಮುಂತಾದ ಕ್ರಮಗಳ ನೆಲೆಯಲ್ಲಿ ಮುಂದಿನ ಮಾರ್ಗವನ್ನು ಸೂಚಿಸಿ.


ಸಾಮಾನ್ಯ ಅಧ್ಯಯನ – 4


 

ವಿಷಯ :ನಾಗರೀಕ ಸನ್ನದು

6. Discuss the core principles of a Citizen’s Charter. Why has Citizen’s Charter not been a success in India so far? Explain, (250 words)

6. ನಾಗರೀಕ ಸನ್ನದುವಿನ ಮೂಲ ಸಿದ್ಧಾಂತವನ್ನು ಕುರಿತು ಚರ್ಚಿಸಿ. ಭಾರತದಲ್ಲಿ ಇದುವರೆಗೂ ನಾಗರೀಕ ಸನ್ನದು ಯಶಸ್ವಿಯಾಗದಿರಲು ಕಾರಣವನ್ನು ವಿವರಿಸಿ. (250 ಪದಗಳು)

Reference: Ethics, Integrity and aptitude

ಪ್ರಶ್ನೆಯ ಆಶಯ

ಉತ್ತಮ ಆಡಳಿತದ ಮೂಲಾಂಶ ಪಾರದರ್ಶಕತೆ. ಆಡಳಿತದಲ್ಲಿ ಇದರ ಅಳವಡಿಕೆಯ ಮಾರ್ಗ

ಉತ್ತರದ ರಚನೆ

ಪೀಠಿಕೆ:

ನಾಗರೀಕ ಸನ್ನದುವಿನ ಅರ್ಥವನ್ನು ಸಂಕ್ಷಿಪ್ತವಾಗಿ ವಿವರಿಸಿ

ಮುಖ್ಯಭಾಗ:

ನಾಗರೀಕ ಸನ್ನದುವಿನ ಮೂಲ ಸಿದ್ಧಾಂತಗಳನ್ನು ವಿಷದಪಡಿಸಿ

 1. ಅರಿವು
 2. ಗುಣಮಟ್ಟದ ಸೇವಾ ಪೂರೈಕೆ
 3. ಪಾರದರ್ಶಕತೆ & ಹೊಣೆಗಾರಿಕೆ
 4. ಸಬಲೀಕರಣ ಇತ್ಯಾದಿ

ನಾಗರೀಕ ಸನ್ನದುವಿನ ವಿಫಲತೆಗೆ ಕಾರಣೀಭೂತವಾದ ಅಂಶಗಳನ್ನು ಸೂಚಿಸಿ.

ಉಪಸಂಹಾರ:

ನಾಗರೀಕ ಸನ್ನದನ್ನು ಬಲಪಡಿಸಲು ಅಗತ್ಯವಿರುವ ನೈತಿಕ ಕ್ರಮಗಳ ಕುರಿತು ಬರೆಯಿರಿ


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos