Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 3 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ :  ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು..

1. Differentiate between tropical and extra-tropical cyclones. (250 words)

1. ಉಷ್ಣವಲಯದ ಮತ್ತು ಸಮಶಿತೋಷ್ಣ ವಲಯದ ಚಂಡಮಾರುತಗಳಿಗಿರುವ ವ್ಯತ್ಯಾಸವೇನು? (250 ಪದಗಳು)

Reference: World physical geography by Savindra Singh/ G C Leong , The Hindu 

ಪ್ರಶ್ನೆಯ ಹಿನ್ನೆಲೆ

ಬುರೆವಿ ಚಂಡಮಾರುತ ಶ್ರೀಲಂಕಾದಿಂದ ತಮಿಳುನಾಡಿನ ದಕ್ಷಿಣ ತೀರದೆಡೆಗೆ ಚಲಿಸುತ್ತಿದೆ.

ಉತ್ತರದ ರಚನೆ

ಪೀಠಿಕೆ:

ಚಂಡಮಾರುತಗಳ ವ್ಯಾಖ್ಯಾನ ಬರೆಯಿರಿ

ಮುಖ್ಯಭಾಗ:

ಆವರ್ತ ಮಾರುತಗಳಲ್ಲಿ ಎರಡು ಬಗೆ – ಉಷ್ಣವಲಯದ ಆವರ್ತ ಮಾರುತಗಳು ಮತ್ತು ಸಮಶೀತೋಷ್ಣ ವಲಯದ ಆವರ್ತ ಮಾರುತಗಳು

ಇವುಗಳ ನಡುವಿನ ವ್ಯತ್ಯಾಸಗಳನ್ನು – ಉಗಮ, ಗಾತ್ರ, ಗತಿ, ಮೂಲಗಳು, ಚಲನೆಯ ದಿಕ್ಕು, ಮುಂತಾದ ಅಂಶಗಳನ್ನು ಕೇಂದ್ರೀಕರಿಸಿ ಬರೆಯಿರಿ. 

ಉಪಸಂಹಾರ:

ಇವುಗಳು ಜಾಗತಿಕವಾಗಿ ವಾತಾವರಣದ ಮೇಲೆ ಬೀರುವ ಪರಿಣಾಮ ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 2


 

ವಿಷಯ: ಭಾರತ ಮತ್ತು ನೆರೆ ರಾಷ್ಟ್ರಗಳೊಂದಿಗಿನ ಅದರ ಸಂಬಂಧ

2. The Nepal-India relationship has never been free of controversy as the perspectives of both sides are yet to change, In this context discuss the need for recalibrating their ties. (250 words)

2. ನೇಪಾಳ-ಭಾರತ ನಡುವಿನ ಸಂಬಂಧ ವಿವಾದ ಮುಕ್ತವಾಗಿಲ್ಲ. ಇದಕ್ಕೆ ಉಭಯ ರಾಷ್ಟ್ರಗಳ ದೃಷ್ಟಿಕೋನ ಬದಲಾಗಬೇಕು. ಇದರ ಹಿನ್ನೆಲೆಯಲ್ಲಿ ಸಂಬಂಧದ ಮರುಸಂಯೋಜನೆಯ ಅಗತ್ಯತೆಯನ್ನು ಚರ್ಚಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ

ನೇಪಾಳ-ಭಾರತದ ಸಂಬಂಧದ ಮಹತ್ವ; ಈ ದ್ವಿಪಕ್ಷೀಯ ಮೈತ್ರಿಯ ಬಲಪಡಿಸುವ ಕ್ರಮಗಳು

ಉತ್ತರದ ರಚನೆ

ಪೀಠಿಕೆ:

ಉಭಯ ರಾಷ್ಟ್ರಗಳ ಮೈತ್ರಿಯ  ಐತಿಹಾಸಿಕ ಬೆಳವಣಿಗೆ ಕುರಿತು ಬರೆಯಿರಿ.

ಮುಖ್ಯಭಾಗ:

ಉಭಯ ರಾಷ್ಟ್ರಗಳ ನಡುವಿನ ವಿವಾದ ಕುರಿತು ಬರೆಯಿರಿ

ಉಭಯ ರಾಷ್ಟ್ರಗಳ ದೃಷ್ಟಿಕೋನದಲ್ಲಿ ಯತಾಸ್ಥಿತಿ ಮುಂದುವರಿಯಲು ಕಾರಣೀಭೂತವಾದ ಅಂಶಗಳನ್ನು ಚರ್ಚಿಸಿ.

ಈ ಸಂಬಂಧವನ್ನು ಜನತೆಯ ನಡುವೆ, ಸರ್ಕಾರಗಳ ನಡುವೆ ಮತ್ತು ಚೀನಾ ಅಂಶ ಮುಂತಾದವುಗಳ ನೆಲೆಯಲ್ಲಿ ಚರ್ಚಿಸಿ.

 1. ಭೌಗೋಳಿಕ ಅಂಶ
 2. ತೆರೆದ ಗಡಿಯ ಮೇಲೆ ಜನತಯ ಜೀವನೋಪಾಯ
 3. ಜಾಗತಿಕ ಬೆಳವಣಿಗೆಗಳು ಮುಂತಾದವು

ಉಪಸಂಹಾರ:

ಈ ದ್ವಿಪಕ್ಷೀಯ ಮೈತ್ರಿಯನ್ನು ಬಲಪಡಿಸುವ ಕ್ರಮಗಳ ಕುರಿತು ಬರೆಯಿರಿ.

 

ವಿಷಯ: ದುರ್ಬಲ ವರ್ಗಗಳ ಕಲ್ಯಾಣ ಮತ್ತು ರಕ್ಷಣೆಗೆ ಕೇಂದ್ರ ಮತ್ತು ರಾಜ್ಯಗಳ ಯೋಜನೆ, ಶಾಸನ, ಸಂಸ್ಥೆ ಮತ್ತು ಪ್ರಾಧಿಕಾರಗಳು

3. Discuss briefly the various measures taken by the government in protection of rights of disabled person in India. (250 words)

3. ಭಾರತದಲ್ಲಿ ವಿಕಲಚೇತನರ  (ದಿವ್ಯಾಂಗರ) ಹಕ್ಕುಗಳ ರಕ್ಷಣೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಕುಇರ್ತು ಸಂಕ್ಷಿಪ್ತವಾಗಿ ಚರ್ಚಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ

ಸೇರ್ಪಡೆ ಬೆಳವಣಿಗೆಯ ಪ್ರಾಮುಖ್ಯತೆ, ಮೂಲಭೂತ ಹಕ್ಕುಗಳ ರಕ್ಷಣೆಯ ಅಗತ್ಯತೆ

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆ ಕುರಿತು ಬರೆಯಿರಿ. ಅಥವಾ ಇತ್ತೀಚಿನ ಪ್ರಕರಣಗಳನ್ನು ಸಂಕ್ಷಿಪ್ತವಾಗಿ ಬರೆಯಿರಿ

ಮುಖ್ಯಭಾಗ:

ಸರ್ಕಾರ ವಿಕಲಚೇತನರ ಹಕ್ಕುಗಳ ರಕ್ಷಣೆಗೆ ತೆಗೆದುಕೊಂಡ ಕ್ರಮಗಳನ್ನು ಪಟ್ಟಿ ಮಾಡಿ.

ಭಾರತದಲ್ಲಿ ವಿಕಲಚೇತನರ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವ  ಕಾನೂನು, ನೀತಿ ಮತ್ತು ಇತರೆ ಅಂಶಗಳ ಕುರಿತು ಚರ್ಚಿಸಿ.

ಈ ಕಾನೂನು ಮತ್ತು ನೀತಿಗಳಲ್ಲಿನ ನ್ಯೂನ್ಯತೆಗಳನ್ನು ಗುರುತಿಸಿ

ಉಪಸಂಹಾರ:

ಈ ಕಾನೂನು ಮತ್ತು ನೀತಿಗಳನ್ನು ಬಲಪಡಿಸುವ ಕ್ರಮಗಳ ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 3


 

ವಿಷಯ: ಮೂಲಸೌಕರ್ಯ – ಶಕ್ತಿ, ಬಂದರು, ವಿಮಾನ ನಿಲ್ದಾಣಗಳು, ರಸ್ತೆ, ರೈಲ್ವೆ ಮುಂತಾದವು

4. Discuss what gaps need to be addressed so as to ensure cheaper solar power generation in the country. (250 words)

4. ದೇಶದಲ್ಲಿ ಅಗ್ಗದ ಸೌರ ಶಕ್ತಿಯ ಉತ್ಪಾದನೆಯನ್ನು ಖಾತ್ರಿಪಡಿಸಿ, ಉತ್ಪಾದನೆಯ ಕಂದರವನ್ನು ನಿವಾರಿಸುವುದನ್ನು ಚರ್ಚಿಸಿ. (250 ಪದಗಳು)

Reference: Financial Express 

ಪ್ರಶ್ನೆಯ ಆಶಯ

ಶುದ್ಧ ಇಂಧನದ ಅಗತ್ಯತೆ. ಭಾರತ ವಿಶ್ವದ ಶುದ್ಧ ಇಂಧನ ಉತ್ಪಾದನೆಯ ಬೃಹತ್ ರಾಷ್ಟ್ರವಾಗುವ ಮಾರ್ಗ

ಉತ್ತರದ ರಚನೆ

ಪೀಠಿಕೆ:

ಸೌರಶಕ್ತಿಯ ಅಗತ್ಯತೆಯನ್ನು ಕುರಿತು ಬರೆಯಿರಿ.

ಮುಖ್ಯಭಾಗ:

ಅಗ್ಗದ ಸೌರ ಶಕ್ತಿ ಉತ್ಪಾದನೆಗೆ ಕ್ರಮಗಳನ್ನು ಸೂಚಿಸಿ ಮತ್ತು ಚರ್ಚಿಸಿ

 1. ಮಾರುಕಟ್ಟೆ ರಚನೆಯ ಸಮಸ್ಯೆಗಳ ನಿವಾರಣೆ
 2. ವಿತರಣಾ ಕಂಪನಿಗಳ ಹಣಕಾಸು
 3. ಜಾಗತಿಕ ಒಪ್ಪಂದಗಳು
 4. ತಂತ್ರಜ್ಞಾನದ ಲಭ್ಯತೆ
 5. ಕಚ್ಚಾವಸ್ತುಗಳು ಇತ್ಯಾದಿ

ಕೇವಲ ಅಗ್ಗದ ಸೌರಶಕ್ತಿಯೊಂದೆ ಶಕ್ತಿ ವಲಯದ ಸಮಸ್ಯೆಗಳನ್ನು ನಿವಾರಿಸುವುದಿಲ್ಲ ಎಂಬುದನ್ನು ಚರ್ಚಿಸಿ.

ಉಪಸಂಹಾರ:

ಮುಂದಿನ ಕ್ರಮಗಳ ಕುರಿತು ಬರೆಯಿರಿ

 

 ವಿಷಯ : ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು.

5. Do you think Paris agreement can prove to be a panacea for all the environmental issues? Analyse and present your views with suitable arguments. (250 words)

5. ಪರಿಸರ ಎದುರಿಸುತ್ತಿರುವ  ಸರ್ವ ಸಮಸ್ಯೆಗಳಿಗೆ ಪ್ಯಾರೀಸ್ ಒಪ್ಪಂದ ರಾಮಬಾಣವೇ ವಿಮರ್ಶಾತ್ಮಕವಾಗಿ ಚರ್ಚಿಸಿ.  ಸೂಕ್ತ ಉದಾಹರಣೆಯ ಮೂಲಕ ನಿಮ್ಮ ಅನಿಸಿಕೆಯನ್ನು ವಿಶ್ಲೇಷಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಆಶಯ

ವಾಯುಗುಣ ವೈಪರಿತ್ಯ ಮತ್ತು ಜಾಗತಿಕ ತಾಪಮಾನ ಏರಿಕೆಯ ನಿಯಂತ್ರಣದ ಅಗತ್ಯತೆ.

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆಯನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ

ಮುಖ್ಯಭಾಗ:

ಪರಿಸರ ಸಂರಕ್ಷಣೆಯ ಕುರಿತಾದ ಕ್ರಮಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿ.

 1. ಸ್ಟಾಕ್ಹೋಮ್ ಸಮಾವೇಶ (1972)
 2. ರಿಯೋ ಸಮಾವೇಶ (1992)
 3. UNFCC ಸಮಾವೇಶ ಇತ್ಯಾದಿ

ಪ್ಯಾರಿಸ್ ಒಪ್ಪಂದ ಕುರಿತು ಸವಿವರವಾಗಿ ಬರೆಯಿರಿ.

 1. ಉದ್ದೇಶ ಮತ್ತು ಧ್ಯೇಯ
 2. ಇದರ ಸಾಧಕ ಮತ್ತು ಬಾಧಕ
 3. ನ್ಯೂನ್ಯತೆಗಳು
 4. ಪರಿಹಾರ ಮಾರ್ಗಗಳು

ಉಪಸಂಹಾರ:

ಜಾಗತಿಕ ಒಪ್ಪಂದಗಳಲ್ಲಿ ಪಾರಿಸರಿಕ ನೈತಿಕತೆ, IPCC ವರದಿಯ ಶಿಫಾರಸ್ಸುಗಳನ್ನು ಕುಇರ್ತು ಬರೆಯಿರಿ


ಸಾಮಾನ್ಯ ಅಧ್ಯಯನ – 4


 

ವಿಷಯ : ಆಡಳಿತದಲ್ಲಿ ಸತ್ಯನಿಷ್ಠತೆ : ನಾಗರೀಕ ಸೇವೆಯ ಪರಿಕಲ್ಪನೆ; ಸತ್ಯನಿಷ್ಠತೆ ಮತ್ತು ಆಡಳಿತದ ತಾತ್ವಿಕ ತಳಹದಿ; ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಪಾರದರ್ಶಕತೆ, ಮಾಹಿತಿ ಹಕ್ಕು, ನೈತಿಕ ಮತ್ತು ನೀತಿ ಸಂಹಿತೆ; ನಾಗರೀಕ ಸನ್ನದು, ಕಾಯಕ ಸಂಸ್ಕೃತಿ, ಸೇವಾ ಪೂರೈಕೆಯ ಗುಣಮಟ್ಟ; ಸಾರ್ವಜನಿಕ ನಿಧಿಯ ಸದುಪಯೋಗ; ಭ್ರಷ್ಟಾಚಾರದ ಸವಾಲುಗಳು

6. Privacy and RTI are often labeled as the two sides of same coin. In this context what are the practical challenges in RTI implementation? Also propose the management of conflicts that arise while upholding the both. (250 words )

6. ಖಾಸಗಿತನ ಮತ್ತು ಮಾಹಿತಿ ಹಕ್ಕುಕಾಯ್ದೆ (RTI) ಒಂದು ನಾಣ್ಯದ ಎರಡು ಮುಖಗಳು. ಇದರ ಹಿನ್ನೆಲೆಯಲ್ಲಿ RTI ಅನುಷ್ಟಾನದಲ್ಲಿನ ಸವಾಲುಗಳನ್ನು ಬರೆಯಿರಿ. ಇದನ್ನು ಅನುಷ್ಠಾನಗೊಳಿಸುವಲ್ಲಿ ಉಗಮವಾಗುವ ನಿರ್ವಹಣಾ ಸಂಘರ್ಷವನ್ನು ಅನಾವರಗೊಳಿಸಿ. (250 ಪದಗಳು)

Reference: The Hindu 

ಪ್ರಶ್ನೆಯ ಹಿನ್ನೆಲೆ

ಇತ್ತೀಚಿಗೆ ಬಾಂಬೆ ನ್ಯಾಯಾಲಯ ಮಾಹಿತಿ ಮತ್ತು ಸಂವಹನ ಸಚಿವಾಲಯಕ್ಕೆ ಜಾಲತಾಣದಿಂದ ಸಾಕೇತ್ ಗೋಖಲೆಯವರ ಮಾಹಿತಿಯನ್ನು ನಿರಚಿಸಲು ಆದೇಶ ನೀಡಿದೆ.

ಪ್ರಶ್ನೆಯ ಆಶಯ

ಆಡಳಿತದಲ್ಲಿ ಪಾರದರ್ಶಕತೆಯ ಮಹತ್ವ ಮತ್ತು ಉತ್ತಮ ಆಡಳಿತದ ಅನಾವರಣದ ಮಾರ್ಗ. ಖಾಸಗಿತನ ಮತ್ತು ಮಾಹಿತಿಯ ಬಹಿರಂಗದ ನಡುವಿನ ಸಂಬಂಧ

ಉತ್ತರದ ರಚನೆ

ಪೀಠಿಕೆ:

ಖಾಸಗಿತನ ಮತ್ತು ಮಾಹಿತಿ ಹಕ್ಕಿನ ನಡುವಿನ ಸಂಬಧ ಕುರಿತು ಬರೆಯಿರಿ.

ಮುಖ್ಯಭಾಗ:

ಖಾಸಗಿತನ ಮತ್ತು ಮಾಹಿತಿ ಹಕ್ಕಿನ ಮಹತ್ವವನ್ನು ಬರೆಯಿರಿ

ಖಾಸಗಿತನ ಮತ್ತು ಮಾಹಿತಿ ಹಕ್ಕಿನ ನಡುವಿನ ಅಂತರ್ಸಂಬಂಧ ಉಂಟುಮಾಡುವ ಸಮಸ್ಯೆ ಮತ್ತು ಸವಾಲುಗಳನ್ನು ಪಟ್ಟಿಮಾಡಿ.

 1. ಮೂಲಭೂತ ಹಕ್ಕುಗಳ ನಡುವಿನ ಸಂಘರ್ಷ
 2. ಮೂಲಭೂತ ಹಕ್ಕು ಮತ್ತು ರಾಷ್ಟ್ರೀಯ ಹಿತಾಸಕ್ತಿ

ಹಾಗಾಗಿ, ಹಕ್ಕುಗಳ ನಡುವಿನ ಸಾಮರಸ್ಯ ಅತ್ಯಗತ್ಯ.

ಉದಾಹರಣೆ ಸಹಿತವಾಗಿ ಈ ಸಂಘರ್ಷವನ್ನು ನಿವಾರಿಸುವ ಕ್ರಮಗಳನ್ನು ಬರೆಯಿರಿ.

ಉಪಸಂಹಾರ:

ಕಾನೂನಾತ್ಮಕ ಮತ್ತು ನೈತಿಕ ಕ್ರಮಗಳ ಕುರಿತು ಬರೆಯಿರಿ. ಸ್ವ-ನಿಯಂತ್ರಣ – ಆತ್ಮಾವಲೋಕನ ಕುರಿತು ಬರೆಯಿರಿ.

 

ವಿಷಯ : ನೈತಿಕತೆ ಮತ್ತು ಮಾನವ ಹಸ್ತಕ್ಷೇಪ – ಮಾನವನ ಚಟುವಟಿಕೆಯಲ್ಲಿ ನೈತಿಕತೆಯ ಪಾತ್ರ, ಸಾರ, ನಿರ್ಧಾರಕಗಳು ಮತ್ತು ಪರಿಣಾಮಗಳು; ನೈತಿಕತೆಯ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ

7. Law is nevertheless an indispensable part of the picture. It is a necessary complement to both morality and ethics. Elucidate. (250 words)

7. ಕಾನೂನು ವ್ಯವಸ್ಥೆಯ ಅವಿಭಾಜ್ಯ ಅಂಗ. ಇದು ನೀತಿಯತೆ ಮತ್ತು ನೈತಿಕತೆಗಳಿಗೆ ಅಗತ್ಯವಾದ ಪೂರಕಾಂಶ. ವಿಷದಪಡಿಸಿ. (250 ಪದಗಳು)

Reference: Ethics, Integrity and Aptitude by Lexicon Publications

ಪ್ರಶ್ನೆಯ ಆಶಯ

ಕಾನೂನು, ನೈತಿಕತೆ, ನಿತಿಯತೆಗಳ ನಡುವಿನ ಅಂತರ್ಸಂಬಂಧ

ಉತ್ತರದ ರಚನೆ

ಪೀಠಿಕೆ:

ಕಾನೂನು ಮತ್ತು ನತಿಕತೆ ಕುಇರ್ತು ಬರೆಯಿರಿ.

ಮುಖ್ಯಭಾಗ:

ಸಮಾಜದಲ್ಲಿ ನೈತಿಕ ನಡವಳಿಕೆಯಲ್ಲಿ ಕಾನೂನಿನ ಪಾತ್ರವನ್ನು ಉದಾಹರಣೆ ಸಹಿತ ವಿವರಿಸಿ.

ಸಮಾಜದ ಹಿತಾಸಕ್ತಿಗಾಗಿ ತೀರ್ಮಾನ ಪ್ರಕ್ರಿಯೆಯಲ್ಲಿ ಕಾನೂನು ನೈತಿಕತೆ ಮತ್ತು ನೀತಿಯತೆಗಳಿಗೆ ಪೂರಕವಾಗಿದೆ  – ಎನ್ನುವುದನ್ನು ವಿವರಿಸಿ

ಉಪಸಂಹಾರ:

ಕಾನೂನು ನಿರ್ವಾತವಿದ್ದಾಗ ನೈತಿಕತೆ ಮುನ್ನೆಲೆಗೆ ಬರುವುದು. ಆದರೆ ಇದು ನೈತಿಕತೆಯು ಕಾನೂನಿನ ಮಹತ್ವವನ್ನು ಕುಂಟಿತಗೊಳಿಸುವುದಿಲ್ಲ ಎಂಬುದನ್ನು ಬರೆಯಿರಿ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos