Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
ವಿಷಯ : ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು; ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು; ನಗರೀಕರಣದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು
1. What do you understand by the ‘age structure’ of a population? Discuss its relevance for economic development and growth. (250 words)
1. ‘ಜನಸಂಖ್ಯೆಯ ವಯೋಮಾನಿಕ ರಚನೆ’ಯ ಅರ್ಥವೇನು? ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅದರ ಪ್ರಸ್ತುತತೆಯನ್ನು ಚರ್ಚಿಸಿ. (250 ಪದಗಳು)
Reference: NCERT Geography Class 12 Chapter 11 Population: Distribution, Density, Growth and Composition.
ಪ್ರಶ್ನೆಯ ಆಶಯ
ಜನಸಂಖ್ಯೆ ಲಾಭಾಂಶ ಮತ್ತು ಮಾನವ ಬಂಡವಾಳದ ಮಹತ್ವದ ಅನಾವರಣ
ಉತ್ತರದ ರಚನೆ
ಪೀಠಿಕೆ:
ವಯೋಮಾನಿಕ ರಚನೆ ಮತ್ತು ಜನಸಂಖ್ಯೆ ಲಾಭಾಂಶದ ಕುರಿತು ಬರೆಯಿರಿ.
ಮುಖ್ಯಭಾಗ:
ವಯೋಮಾನಿಕ ರಚನೆಯ ಪರಿಕಲ್ಪನೆ ಕುರಿತು ಬರೆಯಿರಿ. ಜನಸಂಖ್ಯೆಯ ಸ್ಥಿತ್ಯಂತರ ಮಾದರಿಗೆ ಸಂಬಂಧ ಕಲ್ಪಿಸಿ ಮತ್ತು ವಯೋಮಾನಿಕ ರಚನೆಯ ಬದಲಾವಣೆಗೆ ಕಾರಣಗಳನ್ನು ಸೂಚಿಸಿ.
ಸರಾಸರಿ ಜೀವಿತಾವಧಿ ಮತ್ತು ಅಭಿವೃದ್ಧಿಯ ಮಟ್ಟದ ಬದಲಾವಣೆಗನುಗುಣವಾಗಿ ವಯೋಮಾನಿಕ ರಚನೆಯ ಪ್ರತಿಕ್ರಿಯೆಯನ್ನು ವಿವರಿಸಿ
- ಕೆಳಮಟ್ಟದ ವೈದ್ಯಕೀಯ ಸೌಲಭ್ಯ
- ಸಾಂಕ್ರಾಮಿಕ ರೋಗಗಳ ಗಾಢತೆ
- ಅಧಿಕ ಶಿಶು ಮರಣ ದರ ಮುಂತಾದವು
ಆರ್ಥಿಕ ಬೆಳವಣಿಗೆಗೆ ವಯೋಮಾನಿಕ ರಚನೆಯ ಪ್ರಸ್ತುತತೆಯನ್ನು ತಿಳಿಸಿ.
ಉಪಸಂಹಾರ:
ವಯೋಮಾನಿಕ ಆಧಾರಿತ ಸಮಸ್ಯೆಗಳ ನಿವಾರಣೆಗೆ ಕ್ರಮಗಳನ್ನು ಸೂಚಿಸಿ
ಸಾಮಾನ್ಯ ಅಧ್ಯಯನ – 2
ವಿಷಯ: ಭಾರತ ಮತ್ತು ನೆರೆ ರಾಷ್ಟ್ರಗಳೊಂದಿಗಿನ ಅದರ ಸಂಬಂಧ; ಭಾರತದ ಹಿತಾಸಕ್ತಿಗೆ ಪ್ರಭಾವ ಬೀರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಂಘಗಳು ಮತ್ತು ಒಪ್ಪಂದಗಳು
2. Why is India on a digital strike with China? Discuss the reasons with which India is banning apps? What are the concerns related to it? Discuss the way forward. (250 words )
2. ಚೀನಾದೊಂದಿಗಿನ ಭಾರತದ ಡಿಜಿಟಲ್ ಪ್ರತಿಭಟನೆಯನ್ನು ಚರ್ಚಿಸಿ. ಚೀನಾದ ಮೊಬೈಲ್ ಅಪ್ಲಿಕೇಶನ್’ಗಳನ್ನು ನಿರ್ಬಂಧಿಸಲು ಕಾರಣಗಳನ್ನು ಚರ್ಚಿಸಿ. ಇದರೊಂದಿಗೆ ಭಾರತದ ಸವಾಲು ಮತ್ತು ಸಮಸ್ಯೆಗಳೇನು? ಮುಂದಿನ ಕ್ರಮಗಳ ಕುರಿತು ಚರ್ಚಿಸಿ. (250 ಪದಗಳು)
Reference: Economic Times
ಪ್ರಶ್ನೆಯ ಹಿನ್ನೆಲೆ
ಭಾರತ ಸರ್ಕಾರ ಇತ್ತೀಚಿಗೆ ಚೀನಾದ 43 ಮೊಬೈಲ್ ಅಪ್ಲಿಕೇಶನ್’ಗಳನ್ನು ದೇಶದ ಸಾರ್ವಭೌಮತೆ, ಏಕತೆಮತ್ತು ಭದ್ರತೆಯ ನೆಲೆಯಲ್ಲಿ ನಿರ್ಬಂಧಿಸಿತ್ತು.
ಪ್ರಶ್ನೆಯ ಆಶಯ
ಜಾಗತೀಕರಣಗೊಂಡ ವಿಶ್ವದಲ್ಲಿ ಸೈಬರ್ ಭದ್ರತೆ, ಮೊಬೈಲ್ ತಂತ್ರಜ್ಞಾನದ ಪ್ರಾಮುಖ್ಯತೆ ಮತ್ತು ಅದು ಒಡ್ಡುವ ಸವಾಲುಗಳು
ಉತ್ತರದ ರಚನೆ
ಪೀಠಿಕೆ:
ಪ್ರಶ್ನೆಯ ಹಿನ್ನೆಲೆಯನ್ನು ಕುರಿತು ಬರೆಯಿರಿ.
ಮಾಹಿತಿ ತಂತ್ರಜ್ಞಾನ ಸಚಿವಾಲಯ PUBG ಸೇರಿದಂತೆ 117 ಇತರೆ ಮೊಬೈಲ್ ಅಪ್ಲಿಕೇಶನ್’ಗಳನ್ನು ನಿರ್ಬಂಧಿಸಿದೆ. ಈ ಅಪ್ಲಿಕೇಶನ್’ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷೆನ್ 69A ಅಡಿಯಲ್ಲಿ ನಿರ್ಬಂಧಿಸಲಾಗಿದೆ.
ಮುಖ್ಯಭಾಗ:
- ಮೊಬೈಲ್ ಅಪ್ಲಿಕೇಶನ್’ಗಳ ಅಗತ್ಯತೆಯನ್ನು ಬರೆಯಿರಿ.
- ಅಪ್ಲಿಕೇಶನ್’ಗಳ ನಿರ್ಬಂಧನಕ್ಕೆ ಕಾರಣಗಳನ್ನು ವಿವರಿಸಿ.
- ಇದು ಒಡ್ಡುವ ಸಮಸ್ಯೆಗಳನ್ನು ಕುರಿತು ಚರ್ಚಿಸಿ
ಉಪಸಂಹಾರ:
ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಗೆ ಕ್ರಮಗಳನ್ನು ಸೂಚಿಸಿ.
ವಿಷಯ: ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು
3. Account for brief history of Ayurveda and Allopathic practices in India. Discuss the issues with Ayurveda and Allopathic professionals of today. Suggest solutions. (250 words)
3. ಭಾರತದಲ್ಲಿ ಆಯುರ್ವೇಧ ಮತ್ತು ಆಲೋಪಥಿಕ್ ಪದ್ಧತಿಗಳ ಇತಿಹಾಸ ಕುರಿತು ಬರೆಯಿರಿ. ಇಂದು ಆಯುರ್ವೇದ ಮತ್ತು ಆಲೋಪಥಿಕ್ ವೃತ್ತಿಪರರ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮತ್ತು ಪರಿಹಾರ ಮಾರ್ಗಗಳನ್ನು ಸೂಚಿಸಿ. (250 ಪದಗಳು)
Reference: The Hindu
ಪ್ರಶ್ನೆಯ ಹಿನ್ನೆಲೆ
ಕೊರೋನಾ ಸಾಂಕ್ರಾಮಿಕ ರೋಗದ ಹರಡುವಿಕೆ, ಜೀವನ ಕ್ರಮಾಧಾರಿತ ಅನಾರೋಗ್ಯದ ಪ್ರಕರಣಗಳು ಏರಿಕೆಯು ವಿವಿಧ ವೈದ್ಯಕೀಯ ಪದ್ಧತಿಗಳ ಮೇಲೆ ಬೆಳಕ ಹರಡಿದೆ.
ಪ್ರಶ್ನೆಯ ಆಶಯ
ವಿವಿಧ ವೈದ್ಯಕೀಯ ಪದ್ದತಿಗಳ ಅಗತ್ಯತೆ ಮತ್ತು ಸಾಧಕ-ಬಾಧಕಗಳ ಪರಿಚಯ.
ಉತ್ತರದ ರಚನೆ
ಪೀಠಿಕೆ:
ಇತ್ತೀಚಿಗೆ ಆಯುರ್ವೇದ, ಸಿದ್ಧಾ, ಸೋವ-ರಿಗ್ಪಾ, ಯುನಾನಿಯ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಸ್ನಾತಕೋತ್ತರ ಪದವಿದರರು ಶಸ್ತ್ರ ಚಿಕಿತ್ಸೆ ಮಾಡುವ ಅನುಮತಿ ಪಡೆದಿದ್ದಾರೆ.
ಮುಖ್ಯಭಾಗ:
ಭಾರತದಲ್ಲಿ ಆಯುರ್ವೇದ ಮತ್ತು ಅಲೋಪಥಿಕ್ ಪದ್ಧತಿಗಳ ಇತಿಹಾಸ ಕುರಿತು ಚರ್ಚಿಸಿ.
ಆಯುರ್ವೇದ ಮತ್ತು ಆಲೋಪಥಿಕ್ ವೃತ್ತಿಪರರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿ.
ಈ ಸಮಸ್ಯೆಗಳನ್ನು ಸವಿವರವಾಗಿ ಬರೆಯಿರಿ ಮತ್ತು ಪರಿಹಾರ ಮಾರ್ಗಗಳನ್ನು ಸೂಚಿಸಿ
ಉಪಸಂಹಾರ:
ಮುಂದಿನ ಕ್ರಮಗಳ ಕುರಿತು ಬರೆಯಿರಿ.
ವಿಷಯ : ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಹಾಗೂ ಜವಾಬ್ದಾರಿಗಳು, ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು
4. Decentralisation has to be extended beyond designated district committees to gram panchayats to accelerate skill development in the country. Analyse. (250 words)
4. ದೇಶದಲ್ಲಿ ಕೌಶಲ್ಯಾಭಿವೃದ್ದಿ ತ್ವರಿತಗೊಳಿಸಲು ವಿಕೇಂದ್ರೀಕರಣವು ಗ್ರಾಮ ಪಂಚಾಯತಿಯ ನಿಯೋಜಿತ ಜಿಲ್ಲಾ ಸಮಿತಿಗಳಾಚೆ ವಿಸ್ತರಿಸಬೇಕು. ವಿಶ್ಲೇಷಿಸಿ. (250 ಪದಗಳು)
Reference: Financial Express
ಪ್ರಶ್ನೆಯ ಆಶಯ
ವಿಕೇಂದ್ರೀಕರಣ ಪ್ರಕ್ರಿಯೆ ಮತ್ತು ಕೌಶಲ್ಯಾಭಿವೃದ್ಧಿ ನಡುವಿನ ಸಂಬಂಧ
ಉತ್ತರದ ರಚನೆ
ಪೀಠಿಕೆ:
ಕೋವಿಡ್-19 ಹಿನ್ನೆಲೆಯಲ್ಲಿ ವಿಕೇಂದ್ರೀಕರಣದ ಮತ್ತು ಕೌಶಲ್ಯಾಭಿವೃದ್ಧಿಯ ಪ್ರಾಮುಖ್ಯತೆ ಯನ್ನು ಬರೆಯಿರಿ.
ಮುಖ್ಯಭಾಗ:
ದೇಶದಲ್ಲಿ ಅಸ್ತಿತ್ವದಲ್ಲಿರುವ ವಿಕೇಂದ್ರೀಕರಣವನ್ನು ವಿವರಿಸಿ.
- ಯೋಜನಾ ಪ್ರಕ್ರಿಯೆ ಮತ್ತು ಅನುಷ್ಠಾನ ರೀತಿ
- ಸಾಮರ್ಥ್ಯಾಭಿವೃದ್ಧಿ
- ಉದ್ಯೋಗಾವಕಾಶಗಳು
ದೇಶದಲ್ಲಿ ಅಸ್ತಿತ್ವದಲ್ಲಿರುವ ಕೌಶಲ್ಯ ಅಭಿವೃದ್ಧಿಯ ಪರಿಸರವನ್ನು ಕುರಿತು ಬರೆಯಿರಿ.
ಗ್ರಾಮ ಪಂಚಾಯತಿ ಮತ್ತು ಕೌಶ್ಯಾಭಿವೃದ್ಧಿ ಯೋಜನೆಗಳ ನಡುವಿನ ಸಂಬಂಧ ಪ್ರಾಮುಖ್ಯತೆಯನ್ನು ವಿವರಿಸಿ.
ಉಪಸಂಹಾರ:
ನೈಜ ವಿಕೇಂದ್ರೀಕರಣದ ಮಹತ್ವ ಬರೆಯಿರಿ. ವಿಕೇಂದ್ರೀಕರಣಕ್ಕೆ ಪೂರಕವಾಗಿ ಕ್ರಮಗಳನ್ನು ಸೂಚಿಸಿ.
ಸಾಮಾನ್ಯ ಅಧ್ಯಯನ – 3
Topic : Challenges to internal security through communication networks, role of media and social networking sites in internal security challenges, basics of cyber security; money laundering and its prevention.
5. Discuss the efforts required at both global level and national level combat the virus of disinformation during the pandemic. (250 words)
5. ಸಾಂಕ್ರಾಮಿಕದ ಸಂದರ್ಭದಲ್ಲಿ ಸುಳ್ಳು ವದಂತಿಯನ್ನು ನಿಯಂತ್ರಿಸುಲು ಅಗತ್ಯವಿರುವ ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಕ್ರಮಗಳ ಕುರಿತು ಚರ್ಚಿಸಿ. (250 ಪದಗಳು)
Reference: The Hindu
ಪ್ರಶ್ನೆಯ ಹಿನ್ನೆಲೆ
5ನೇ ಬ್ರಿಕ್ಸ್ ಮಾಧ್ಯಮ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಸಾಂಕ್ರಾಮಿಕ ಸಂದರ್ಭದಲ್ಲಿ ಮಾಹಿತಿಯ ಅಧಿಕೃತತೆ ಕುರಿತು ಚರ್ಚೆ ನದೆಸಿದರು.
ಪ್ರಶ್ನೆಯ ಆಶಯ
ಸುಳ್ಳು ವದಂತಿಗಳ ನಿಯಂತ್ರಣ, ಮಾಹಿತಿಯ ಅಧಿಕೃತತೆ, ಮಾಹಿತಿಯ ಮೂಲದ ತನಿಖೆಗಳ ಮಹತ್ವ ಮತ್ತು ಆಂತರಿಕ ಭದ್ರತೆ ಮತ್ತು ವ್ಯವಸ್ಥೆಯ ನಡುವಿನ ಸಂಬಂಧ
ಉತ್ತರದ ರಚನೆ
ಪೀಠಿಕೆ:
ಮಾಹಿತಿಯ ಅಭೂತತೆ (ಸುಳ್ಳು ವದಂತಿ) ಅರ್ಥವನ್ನು ಸಂಕ್ಷಿಪ್ತವಾಗಿ ವಿವರಿಸಿ. ಅಥವಾ
ಪ್ರಶ್ನೆಯ ಹಿನ್ನೆಲೆ ಬರೆಯಿರಿ.
ಮುಖ್ಯಭಾಗ:
ಕೋವಿಡ್-19 ಸಂದರ್ಭದಲ್ಲಿ ಜನತೆಯಲ್ಲಿ ಅಭದ್ರತೆ ಮತ್ತು ದ್ವಂದ್ವತೆ ಸೃಷ್ಟಿಸುವ ಮೂಲಕ ದುರ್ಮಾಹಿತಿ ಮತ್ತು ಸುಳ್ಳು ವದಂತಿಗಳು ಮುಖ್ಯ ಸಮಸ್ಯೆಗಳಾಗಿವೆ.
- ಇದಕ್ಕೆ ಕಾರಣಗಳನ್ನು ಸೂಚಿಸಿ
- ನಿಯಂತ್ರಣಕ್ಕೆ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡ ಕ್ರಮಗಳನ್ನು ಸೂಚಿಸಿ
ಉಪಸಂಹಾರ:
ನಿಯಂತ್ರಕ ಕ್ರಮಗಳಲ್ಲಿ ನೈತಿಕತೆಯ ಅಳವಡಿಕೆಯ ಕುರಿತು ಬರೆಯಿರಿ.
ಸಾಮಾನ್ಯ ಅಧ್ಯಯನ – 4
Topic : Case Study
6. A judge of the Supreme Court has been part of a judgment. Now the matter has been referred to a five judge bench in which he is also a member. The judge is known for his honesty and integrity. But there is immense pressure on him to recuse himself as his presence brings potential conflict of interest. But he refuses to do so. In your view, what should be the most appropriate conduct in this situation? Give adequate reasons for the justification of your view. (250 words)
6. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ತೀರ್ಪಿನ ಭಾಗವಾಗಿದ್ದರು. ನಂತರ ಈ ಪ್ರಕರಣವನ್ನು ಪಂಚ ಸದಸ್ಯ ಪೀಠಕ್ಕೆ ವರ್ಗಾಯಿಸಲಾಯಿತು. ಈ ಪೀಠಕ್ಕೆ ಹಿಂದಿನ ನ್ಯಾಯಾಧೀಶರು ಸದಸ್ಯತ್ವವನ್ನು ಪಡೆದಿದ್ದರು. ಈ ನ್ಯಾಯಾಧೀಶರು ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಹೆಸರಾಗಿದ್ದರು. ಇವರ ಮೇಲೆ ಹಿತಾಸಕ್ತಿ ಸಂಘರ್ಷದ ನೆಲೆಯಲ್ಲಿ ಒತ್ತಡ ಅಧಿಕವಾಗಿದ್ದರೂ ಪೀಠದ ಸದಸ್ಯತ್ವವನ್ನು ತ್ಯಜಿಸಲು ನಿರಾಕರಿಸುತ್ತಿರುವರು. ಈ ಸನ್ನಿವೇಶದಲ್ಲಿ ನಿಮ್ಮ ಅಭಿಪ್ರಾಯದ ನೆಲೆಯಲ್ಲಿ ಸಮರ್ಪಕವಾದ ಕ್ರಮ ಯಾವುದು. ಸೂಕ್ತ ಕಾರಣಗಳ ಮೂಲಕ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟಿಕರಿಸಿ. (250 ಪದಗಳು)
ಪ್ರಶ್ನೆಯ ಆಶಯ
ಆಡಳಿತ ಪ್ರಕ್ರಿಯೆ / ನ್ಯಾಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆ ಸಿದ್ಧಾಂತಗಳ ಮಹತ್ವ. ಹಿತಾಸಕ್ತಿ ಸಂಘರ್ಷದ ಪರಿಣಾಮ ಮತ್ತುನಿವಾರಣೆಯ ಕುರಿತು ಬರೆಯಿರಿ.
ಉತ್ತರದ ರಚನೆ
ಪೀಠಿಕೆ:
ಈ ಪ್ರಕರಣದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ
ಮುಖ್ಯಭಾಗ:
- ಪ್ರಕರಣದಲ್ಲಿರುವ ಹಿತಾಸಕ್ತಿ ಸಂಘರ್ಷವನ್ನು ಕುರಿತು ಚರ್ಚಿಸಿ
- ಹಿತಾಸಕ್ತಿ ಸಂಘರ್ಷದ ಅರ್ಥವನ್ನು ಬರೆಯಿರಿ
- ಇದನ್ನು ನಿವಾರಿಸಿವ ಕ್ರಮಗಳನ್ನು ಕುರಿತು ಬರೆಯಿರಿ
- ನ್ಯಾಯಾಧೀಶರ ಸ್ಥಾನವನ್ನು ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಮತ್ತು ಅವರಿಗಿರುವ ಭಿನ್ನ ಮಾರ್ಗಗಳ ಕುರಿತು ಬರೆಯಿರಿ.
- ಈ ಮಾರ್ಗಗಳನ್ನು ಚರ್ಚಿಸಿ ಮತ್ತು ಪರಿಶೀಲಿಸಿ. ಅಲ್ಲದೆ ನಿಮ್ಮ ದೃಷ್ಟಿಕೋನವನ್ನು ದೃಡೀಕರಿಸಿ.
ಉಪಸಂಹಾರ:
ಸಾಂವಿಧಾನಿಕ ಮೌಲ್ಯ ಮತ್ತು ಸ್ವಾಭಾವಿಕ ನ್ಯಾಯ, ಸಮರ್ಪಕ ಕಾನೂನಿನ ಪ್ರಕ್ರಿಯೆಯ ಮಹತ್ವವನ್ನು ಕುರಿತು ಬರೆಯಿರಿ.
Topic : Case Study
7. In the wake of scrapping of Article 370, two civil servants have resigned from the service as IAS. They are of the view that the building blocks of the democracy are at threat and they cannot be the part of the system. It has become difficult to work with the government. As an IAS, they were highly meritorious and had earned the government acclaim. Their resignation has resulted into a debate that should civil servants be given more autonomy especially freedom of expression? (250 words)
7. ವಿಧಿ 370ನ್ನು ನಿರಚಿಸುವ ಹಿನ್ನಲೆಯಲ್ಲಿ ಇಬ್ಬರು ನಾಗರೀಕ ಸೇವಾಧಿಕಾರಿಗಳು ರಾಜಿನಾಮೆ ನೀಡಿದರು. ಇವರ ಪ್ರಕಾರ ಪ್ರಜಾಪ್ರಭುತ್ವದ ಆಧಾರಸ್ತಂಭಗಳಿಗೆ ದಕ್ಕೆಯಾಗಿದೆ. ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ ಮತ್ತು ಈ ವ್ಯವಸ್ಥೆಯ ಭಾಗವಾಗಿರಲು ಅವರ ಆತ್ಮಸಾಕ್ಷಿ ಸಮ್ಮತಿಸುತ್ತಿಲ್ಲ. ಒಬ್ಬ ನಾಗರೀಕ ಸೇವಾಧಿಕಾರಿ ಪ್ರತಿಭಾವಂತನಾಗಿದ್ದು ಸರ್ಕಾರದಿಂದ ಮಾನ್ಯತೆ ಪಡೆದಿರುತ್ತಾನೆ. ಇವರ ರಾಜೀನಾಮೆ ಅಧಿಕಾರಶಾಹಿಯ ಸ್ವಾಯತ್ತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆಯನ್ನು ಮುನ್ನೆಲೆಗೆ ತಂದಿದೆ. (250 ಪದಗಳು)
ಪ್ರಶ್ನೆಯ ಹಿನ್ನೆಲೆ
ಇತ್ತೀಚಿಗೆ ವಿಧಿ 370ನ್ನು ನಿರಚನೆಮಾಡಲಾಗಿದೆ. ಇದರ ಹಿನ್ನೆಲೆಯಲ್ಲಿ ಆದ ಬೆಳವಣಿಗೆಗಳನ್ನು ಕೇಂದ್ರಿಕರಿಸಿ ಪ್ರಷೆನ್ಯನ್ನು ಕೇಳಲಾಗಿದೆ
ಪ್ರಶ್ನೆಯ ಆಶಯ
ಪ್ರಜಾಪ್ರಭುತ್ವದಲ್ಲಿ ನಾಗರೀಕ ಸೇವಾಧಿಕಾರಿಗಳ ಪಾತ್ರ.
ಉತ್ತರದ ರಚನೆ
ಪೀಠಿಕೆ:
ವಿಧಿ 370ರ ನಿರಚನೆಯ ಪರಿಣಾಮ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ.
- ಉದ್ದೇಶ – ಆರ್ಥಿಕ ಅಭಿವೃದ್ಧಿ, ಜನತೆಯ ಏಕೀಕೃತತೆ, ಆತ್ಮವಿಶ್ವಾಸದ ವೃದ್ಧಿ ಇತ್ಯಾದಿ
ಮುಖ್ಯಭಾಗ:
ಈ ಪ್ರಕರಣದಲ್ಲಿರುವ ನೈತಿಕ ಸಮಸ್ಯೆಗಳನ್ನು ಗುರುತಿಸಿ
- ಭದ್ರತೆ ಮತ್ತು ವ್ತವಸ್ಥೆ
- ಜೀವನೋಪಾಯ ಮತ್ತು ಉದ್ಯೋಗ
- ಆರ್ಥಿಕ ಅಭಿವೃದ್ಧಿ
- ವ್ಯಾಪಾರಿ ಸ್ನೇಹಿ ಪರಿಸರ
ಅಧಿಕಾರಶಾಹಿಯ ಸ್ವಾಯತ್ತತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವ ಕುರಿತು ವಿವರಿಸಿ.
ಉಪಸಂಹಾರ:
ಪರಿಹಾರ ಮಾರ್ಗಗಳನ್ನು ಸೂಚಿಸಿ.








