Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 1 ಡಿಸೆಂಬರ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ :  ಭಾರತೀಯ ಸಮಾಜದ ವೈಲಕ್ಷಣಗಳು, ಭಾರತದ ವೈವಿಧ್ಯತೆ. ಮಹಿಳೆಯರು ಮತ್ತು ಮಹಿಳಾ ಸಂಘಗಳ ಪಾತ್ರ

1. Discuss the importance of participation of women in science; Do you think fewer participation of women in it is a reflection of our Indian society? Evaluate. (250 words)

1. ವಿಜ್ಞಾನದಲ್ಲಿ ಮಹಿಳೆಯರ ಭಾಗಿತ್ವದ ಮಹತ್ವವನ್ನು ಚರ್ಚಿಸಿ. ಮಹಿಳೆಯರ ಅಲ್ಪ ಭಾಗಿತ್ವ ನಮ್ಮ ಭಾರತೀಯ ಸಮಾಜದ ಪ್ರತಿಬಿಂಬವಾಗಿದೆ. ಪರಿಶೀಲಿಸಿ. (250 ಪದಗಳು)

Reference: Indian Express

ಪ್ರಶ್ನೆಯ ಆಶಯ

ಲಿಂಗ ಸಮಾನತೆಯ ಮಹತ್ವ ಮತ್ತು ಭಾರತೀಯ ಸಮಾಜದ ರೂಪುರೇಷೆಯ ಅಧ್ಯಯನ

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಗೆ ಪೂರಕವಾಗಿ ಅಂಕಿಅಂಶಗಳನ್ನು ಬರೆಯಿರಿ. ಹೊಸ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯ ನೀತಿಯನ್ನು ಕುರಿತು ಬರೆಯಿರಿ

ಮುಖ್ಯಭಾಗ:

ಲಿಂಗ ಸಮಾನತೆಯ ಅರ್ಥವನ್ನು ಕುರಿತು ಬರೆಯಿರಿ.

ದೇಶದ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಭಾಗಿತ್ವ ಅಲ್ಪವಾಗಿರಲು ಕಾರಣಗಳನ್ನು ಸೂಚಿಸಿ. ಇದರಲ್ಲಿ ಮುಖ್ಯವಾಗಿ ಸಾಮಾಜಿಕ ಅಂಶಗಳನ್ನು ವಿವರಿಸಿ.

ಇದನ್ನು ನಿವಾರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಸೂಚಿಸಿ.

ಉಪಸಂಹಾರ:

ನೈತಿಕ ಮತ್ತು ಶೈಕ್ಷಣಿಕ ಕ್ರಮಗಳ ಕುರಿತು ಬರೆಯಿರಿ. ಆ ಮೂಲಕ ವ್ಯವಸ್ಥೆಯಲ್ಲಿ ಮಹಿಳೆಯರ ಮಹತ್ವವನ್ನು ಬರೆಯಿರಿ.

 

ವಿಷಯ : ದುರ್ಬಲ ವರ್ಗಗಳ ಕಲ್ಯಾಣ ಮತ್ತು ರಕ್ಷಣೆಗೆ ಕೇಂದ್ರ ಮತ್ತು ರಾಜ್ಯಗಳ ಯೋಜನೆ, ಶಾಸನ, ಸಂಸ್ಥೆ ಮತ್ತು ಪ್ರಾಧಿಕಾರಗಳು

2. Explain the challenges associated with targeting welfare beneficiaries in the country. And also analyse how can concept of social registry help addressing the same? (250 words)

2. ದೇಶದಲ್ಲಿ ಕಲ್ಯಾಣ ಯೋಜನೆಗಳ ಮತ್ತು ಅದರ ಫಲಾನುಭವಿಗಳಿಗೆ ಸಂಬಧಿಸಿದ ಸವಾಲುಗಳನ್ನು ವಿವರಿಸಿ. ಸಾಮಾಜಿಕ ನೋಂದಣಿಯ ಪರಿಕಲ್ಪನೆ ಈ ಸವಾಲುಗಳನ್ನು ನಿವಾರಿಸಲು ಪೂರಕವೇ ವಿಶ್ಲೇಷಿಸಿ. (250 ಪದಗಳು)

Reference: Indian Express

ಪ್ರಶ್ನೆಯ ಹಿನ್ನೆಲೆ :

ವಿಶ್ವ ಬ್ಯಾಂಕ್ ವರದಿಯ ಪ್ರಕಾರ 2020 ವೇಳೆಗೆ 88-115 ಮೀ ಜನರು ಬಡತನದ ಅಂಚಿಗೆ ಸರಿಯಲಿದ್ದಾರೆ.

ಪ್ರಶ್ನೆಯ ಆಶಯ :

ಸೇರ್ಪಡೆಯ ಬೆಳವಣಿಗೆಗೆ ಸಾಮಾಜಿಕ ನೊಂದಣಿಯ ಮಹತ್ವ ಮತ್ತು ಕಲ್ಯಾಣ ಯೋಜನೆಗಳ ಅಗತ್ಯತೆ ನಡುವಿನ ಸಂಬಂಧ

ಉತ್ತರದ ರಚನೆ

ಪೀಠಿಕೆ:

ಸೇರ್ಪಡೆ ಬೆಳವಣಿಗೆ ಮತ್ತು ಕಲ್ಯಾಣಿ ಯೋಜನೆಗಳ ಸಂಬಂಧವನ್ನು ಕುರಿತು ಬರೆಯಿರಿ

ಮುಖ್ಯಭಾಗ:

  1. ದೇಶದಲ್ಲಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಸವಾಲುಗಳನ್ನು ಉದಾಹರಣೆ ಸಹಿತವಾಗಿ ಗುರುತಿಸಿ.
    1. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (PMGKY) ಯನ್ನು ಕೇಂದ್ರವಾಗಿಸಿ ಬರೆಯಿರಿ.
    2. ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM-KISAN) – ಬಹುತೇಕ ನೆರವು ದುರ್ಬಲ ವರ್ಗಗಳಿಗೆ ಸಂದಿಲ್ಲ (ನೆರವಿನ ಶೇ 42 ಭಾಗ ಶ್ರೀಮಂತರಿಗೆ)
  2. ಈ ಸವಾಲುಗಳನ್ನು ನಿವಾರಿಸುವ ಕ್ರಮಗಳ ಕುರಿತು ಬರೆಯಿರಿ.
  3. ಸಾಮಾಜಿಕ ನೋದಣಿ ಪರಿಕಲ್ಪನೆಯ ಕುರಿತು ಬರೆಯಿರಿ. ಅದರ ಸಾಧಕ –ಭಾದಕಗಳ ಕುರಿತು ಚರ್ಚಿಸಿ.

ಉಪಸಂಹಾರ:

ನಾವಿನ್ಯಯುಕ್ತ ಕ್ರಮ, ಸವ ನಿವಾರಣಾ ಕ್ರಮಗಳ ಕುರಿತು ಬರೆಯಿರಿ.

 

ವಿಷಯ:  ಭಾರತೀಯ ಸಮಾಜದ ವೈಲಕ್ಷಣಗಳು, ಭಾರತದ ವೈವಿಧ್ಯತೆ. ಮಹಿಳೆಯರು ಮತ್ತು ಮಹಿಳಾ ಸಂಘಗಳ ಪಾತ್ರ.

3. “The caste system is the bane for the Indian society.” In light of the mentioned statement, examine the evil face of this system. (250 words)

3. “ಭಾರತೀಯ ಸಮಾಜಕ್ಕೆ ಜಾತಿ ವ್ಯವಸ್ಥೆಗೆ ಶಾಪ.” ಈ ಹೇಳಿಕೆಯ ನೆಲೆಯಲ್ಲಿ ವ್ಯವಸ್ಥೆಯ ಕರಾಳ ಮುಖವನ್ನು ಪರಿಶೀಲಿಸಿ. (250 ಪದಗಳು)

Reference: Class XI NCERT Indian society, NCERT Book For Class XI: Understanding Society

ಪ್ರಶ್ನೆಯ ಆಶಯ

ಜಾತಿ ವ್ಯವಸ್ಥೆ ಭಾರತೀಯ ಸಮಾಜದ ವೈಲಕ್ಷಣವಾಗಲು ಕಾರಣ

ಉತ್ತರದ ರಚನೆ

ಪೀಠಿಕೆ

ಜಾತಿವಾದ/ಜಾತಿ ವ್ಯವಸ್ಥೆ ಕುರಿತು ಬರೆಯಿರಿ.

ಮುಖ್ಯಭಾಗ:

  1. ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯ ಲಕ್ಷಣಗಳನ್ನು ಕುರಿತು ಬರೆಯಿರಿ.
  2. ಉದಾಹರಣೆ ಅಥವಾ ಪ್ರಕರಣಗಳ ಮೂಲಕ ಜಾತಿವ್ಯವಸ್ಥೆಯ ಕರಾಳ ಮುಖವನ್ನು ಕುರಿತು ಬರೆಯಿರಿ.

ಉಪಸಂಹಾರ:

ದೇಶದಲ್ಲಿ ಜಾತಿ ವ್ಯವಸ್ಥೆಯ ಮಟ್ಟವನ್ನು ಕುರಿತು ಬರೆಯಿರಿ. ಅಥವಾ ಸವಾಲುಗಳನ್ನು ನಿವಾರಿಸುವಕ್ರಮಗಳ ಕುರಿತು ಬರೆಯಿರಿ.


ಸಾಮಾನ್ಯ ಅಧ್ಯಯನ – 3


 

ವಿಷಯ : ನೇರ ಮತ್ತು ಪರೋಕ್ಷ ಕೃಷಿ ತೆರಿಗೆ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿತ ಸಮಸ್ಯೆಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆಯ ಧ್ಯೇಯ, ಕಾರ್ಯ, ಮಿತಿಗಳು, ಮರುಸಂಯೋಜನೆ; ಸಂಗ್ರಹ ಸಮಸ್ಯೆಗಳು ಮತ್ತು ಆಹಾರ ಭದ್ರತೆ; ತಂತ್ರಜ್ಞಾನ ಅಳವಡಿಕೆ; ಪಶುಸಂಗೋಪನೆಯ ಆರ್ಥಿಕತೆ

4. Why is the “Delhi Chalo” call against the agri-marketing laws in the country being witnessed? Discuss the reasons for farmers’ protest in the country and suggest solutions to address the same. (250 words)

4. ದೇಶದಲ್ಲಿ ಕೃಷಿ-ಮಾರುಕಟ್ಟೆಯ ಕಾನೂನುಗಳ ವಿರುದ್ಧದ ‘ದೆಹಲಿ ಚಲೋ’ ಕೂಗು ನಡೆಯಲು ಕಾರಣವೇನು? ದೇಶದಲ್ಲಿನ ರೈತರ ಪ್ರತಿಭಟನೆಗೆ ಕಾರಣವೇನು ಮತ್ತು ಪರಿಹಾರೋಪಾಯಗಳನ್ನು ಸೂಚಿಸಿ. (250 ಪದಗಳು)

Reference: Live Mint

ಪ್ರಶ್ನೆಯ ಹಿನ್ನಲೆ

ಸಾವಿರಾರು ಮಂದಿ ರೈತರು ಕೇಂದ್ರ ಜಾರಿಗೆ ತಂದ ಕೃಷಿ-ಮಾರುಕಟ್ಟೆಯ ಕಾನೂನುಗಳನ್ನು ವಿರೋಧಿಸಿ ‘ದೆಹಲಿ ಚಲೋ’ ಎಂದಿದ್ದಾರೆ. ರಾಜಧಾನಿಯಲ್ಲಿ ಪ್ರತಿಭಟನೆಯ ಧ್ವನಿಯ ಮೂಲಕ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದಾರೆ.

ಪ್ರಶ್ನೆಯ ಆಶಯ

ಭಾರತದ ವ್ಯವಸ್ಥೆಯಲ್ಲಿ ರೈತರ, ಕೃಷಿ ಕೇಂದ್ರಿತ ಕಾನೂನುಗಳ ಮಹತ್ವ.

ಉತ್ತರದ ರಚನೆ

ಪೀಠಿಕೆ:

ಪ್ರಶ್ನೆಯ ಹಿನ್ನೆಲೆ ಕುರಿತು ಬರೆಯಿರಿ.

ಮುಖ್ಯಭಾಗ:

ರೈತರ ಪ್ರತಿಭಟನೆಗೆ ಕಾರಣೀಭೂತವಾದ ಅಂಶಗಳನ್ನು ಪಟ್ಟಿ ಮಾಡಿ.

  1. ಅಗತ್ಯ ಸರಕುಗಳ ಮಸೂದೆ-2020 – ಸರ್ಕಾರಕ್ಕೆ ಕೃಷಿ ಸರಕುಗಳ ನಿಯಂತ್ರಣದ ಸಾಧನ
  2. ದರದ ಖಾತ್ರಿ ಮತ್ತು ಕೃಷಿ ಭೂಮಿ ಸೇವೆಗಳ ಮೇಲೆ ರೈತರ ಒಪ್ಪಂದದ ಮಸೂದೆ 2020 – ‘ಒಪ್ಪಂದದ ಬೇಸಾಯಕ್ಕೆ (Contract farming) ಕಾನೂನಾತ್ಮಕ ಮನ್ನಣೆ
  3. ರೈತರ ಉತ್ಪಾಧನೆ ವ್ಯಾಪಾರ & ವಾಣಿಜ್ಯ ಮಸೂದೆ 2020 – ಸರ್ಕಾರ ನಿಯಂತ್ರಿತ ಕೃಷಿ ಮಂಡಿಗಳ ಏಕಸ್ವಾಮ್ಯತೆಯ ನಿವಾರಣೆ ಮತ್ತು ಕೃಷಿಯೋತ್ಪನ್ನಗಳ ವಹಿವಾಟಿನಲ್ಲಿ ಆಯ್ಕೆ ಸ್ವಾತಂತ್ರ್ಯ

ಸಮಸ್ಯೆಯ ನಿವಾರಣೆಗೆ ಕ್ರಮಗಳನ್ನು ಸೂಚಿಸಿ.

ಉಪಸಂಹಾರ:

ಮುಂದಿನ ಕ್ರಮಗಳ ಕುರಿತು ಬರೆಯಿರಿ.

 

ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆ, ದಿನನಿತ್ಯ ಜೀವನದ ಮೇಲಿನ ಪರಿಣಾಮಗಳು

5. Write a short note on 5G Networks. How will a 5g network power the future of the country? Discuss. (250 words)

5. 5G ಸಂಪರ್ಕದ ಪುರಿತು ಟಿಪ್ಪಣಿ ಬರೆಯಿರಿ. ದೇಶದ ಭವಿಷ್ಯವನ್ನು 5G ತಂತ್ರಜ್ಞಾನ ಹೇಗೆ ನಿರೂಪಿಸುತ್ತದೆ. ಚರ್ಚಿಸಿ. (250 ಪದಗಳು)

Reference: Times of India

ಪ್ರಶ್ನೆಯ ಹಿನ್ನೆಲೆ

ಭಾರತದಲ್ಲಿ 5G ತಂತ್ರಜ್ಞಾನದ ಗುತ್ತಿಗೆಯನ್ನು ಪಡೆಯಲು ವಿಶ್ವದ ಅನೇಕ ಕಂಪನಿಗಳು ಪೈಪೋಟಿ ನಡೆಸುತ್ತಿವೆ.

ಪಶ್ನೆಯ ಆಶಯ

ತಂತ್ರಜ್ಞಾನ, ನಾವಿನ್ಯತೆ ಮತ್ತು ದೇಶದ ಪ್ರಗತಿಗಳ ನಡುವಿನ ಅಂತರ್ಸಂಬಂಧ

ಉತ್ತರದ ರಚನೆ

ಪೀಠಿಕೆ:

5G ಸಂಪರ್ಕ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.

ಇದು 5ನೇ ತಲೆಮಾರಿನ ಮೊಬೈಲ್ ತಂತ್ರಜ್ಞಾನ. ಇದು ಮೊಬೈಲ್ ಜಾಲದಲ್ಲಿ ಡೌನ್ಲೋಡ್ ಗತಿಯನ್ನು ಮತ್ತು ಅಪ್-ಲೋಡ್ ಗತಿಯನ್ನು ವೃದ್ಧಿಸಿ ಮಾಧ್ಯಮದ ವಿಳಂಬತೆಯನ್ನು ಕುಂಠಿತಗೊಳಿಸುವುದು.

ಮುಖ್ಯಭಾಗ:

ಮೊಬೈಲ್ ತಂತ್ರಜ್ಞಾನದ ಬೆಳವಣಿಗೆಯ ಕುರಿತು ಬರೆಯಿರಿ.

  1. ಐತಿಹಾಸಿಕ ಉಗಮದ ಹಂತಗಳು
  2. ಸಾಧಕ ಮತ್ತು ಬಾಧಕಗಳು

ಭಾರತವನ್ನು ಕೇಂದ್ರವಾಗಿಸಿ 5G ತಂತ್ರಜ್ಞಾನ ಭವಿಷ್ಯದ ಮೇಲೆ ಉಂಟುಮಾಡುವ ಪರಿಣಾಮವನ್ನು ವಿವರಿಸಿ.

  1. ಲಿಂಗ ತಾರತಮ್ಯ ನಿವಾರಿಸಲು
  2. ವೈಧ್ಯಕೀಯ ಕ್ಷೇತ್ರದಲ್ಲಿ
  3. ಶೈಕ್ಷಣಿಕ ನೆಲೆಯಲ್ಲಿ
  4. ಆಡಳಿತದ ಸೇವೆಗಳ ಪೂರೈಕೆಯಲ್ಲಿ
  5. ಕೃಷಿ ವಲಯದಲ್ಲಿ
  6. ರಕ್ಷಣೆ ಮತ್ತು ಸೇನಾ ಕ್ಷೇತ್ರದಲ್ಲಿ ಮುಂತಾದವು

ಭಾರತದಲ್ಲಿ ಈ ತಂತ್ರಜ್ಞಾನ ಅಳವಡಿಕೆಗೆ ಇರುವ ಸಮಸ್ಯೆ ಮತ್ತು ಸವಾಲುಗಳನ್ನು ಬರೆಯಿರಿ

ಈ ಸಮಸ್ಯೆಗಳನ್ನು ನಿವಾರಿಸುವ ಕ್ರಮಗಳನ್ನು ಬರೆಯಿರಿ.

ಅದನ್ನು ಸಮರ್ಪಕವಾಗಿ ಬಳಸಲು ಅಗತ್ಯವಿರುವ ನೈತಿಕತೆಯನ್ನು ಕುರಿತು ಬರೆಯಿರಿ.

ಉಪಸಂಹಾರ:

ಈ ರೀತಿಯ ತಂತ್ರಜ್ಞಾನಗಳ ಮಹತ್ವ ಕುರಿತು ಬರೆಯಿರಿ.

 

ವಿಷಯ: ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು

6. What is ‘Sea-sparkle’? Discuss its effect on marine food chain. (250 words)

6. Sea-sparkle ಎಂದರೇನು? ಸಾಗರಿಕ ಆಹಾರ ಸರಪಳಿ/ಜಾಲದ  ಮೇಲೆ ಅದು ಬೀರುವ ಪರಿಣಾಮವನ್ನು ಚರ್ಚಿಸಿ. (250 ಪದಗಳು)

Reference: The Hindu

ಪ್ರಶ್ನೆಯ ಹಿನ್ನೆಲೆ

ಇತ್ತೀಚಿಗೆ ಮುಂಬೈ ತೀರ ಭಾಗದಲ್ಲಿ ‘ನೀಲಿ ಉಬ್ಬರವಿಳಿತ’ ಮತ್ತು ಕರ್ನಾಟಕದ ತೀರ ಭಾಗದಲ್ಲಿ  ಶಿಲಿನ್ದ್ರಗಳ ರೂಪದ ಡೈಯಟಂಗಳಿಂದಾಗಿ  ‘sea-sparkle’ ವಿದ್ಯಾಮಾನಗಳು ಗೋಚರವಾಗಿವೆ.

ಪ್ರಶ್ನೆಯ ಆಶಯ

ಸಾಗರಿಕ ಪರಿಸರವ್ಯವ್ಸ್ಥೆ ಎದುರಿಸುತ್ತಿರುವ ಸವಾಲುಗಳು ಮತ್ತು ನಿವಾರಿಸಲು ಅಗತ್ಯವಿರುವ ಪರಿಸರ ನೈತಿಕತೆಯ ಬಗ್ಗೆ ಅರಿವು ಮೂಡಿಸುವುದು

ಉತ್ತರದ ರಚನೆ

ಪೀಠಿಕೆ:

“sea sparkle” ವಿದ್ಯಾಮಾನ ಕುರಿತು ಬರೆಯಿರಿ. – ಡೈಯಟಂಗಳು ಸಾಗರಿಕ ಆಹಾರದ ಸರಪಳಿಯ ಬುನಾದಿಗಳು.

ಮುಖ್ಯಭಾಗ:

ಜೈವಿಕ ಸಂಗ್ರಹಣೆ (Bio-Accumilation), ಜೈವಿಕ ಸಂವರ್ಧನೆ (Bio-Magnification) ಕುರಿತು ಬರೆಯಿರಿ.

ಇದರಿಂದ ಸಾಗರಿಕ ಆಹಾರ ಸರಪಳಿ/ಜಾಲದ ಮೇಲೆ ಉಂಟಾಗುವ ಪರಿಣಾಮವನ್ನು ಬರೆಯಿರಿ.

ಉಪಸಂಹಾರ:

ಇದನ್ನು ನಿವಾರಿಸುವ ಕ್ರಮಗಳ ಕುರಿತು ಬರೆಯಿರಿ.

 

ವಿಷಯ : ಸಂವಹನ ಜಾಲ, ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳು ಆಂತರಿಕ ಭದ್ರತೆಗೆ ಒಡ್ಡುವ ಸವಾಲುಗಳು; ಸೈಬರ್ ಭದ್ರತೆಯ ಮೂಲಾಂಶಗಳು; ಮನಿ-ಲಾಂಡ್ರಿಂಗ್ ಮತ್ತು ಅದರ ನಿವಾರಣೆ

7. Biological warfare is a potent threat to the countries across globe. Are the existing mechanisms robust enough to prevent biological warfares? Analyse. (250 words)

7. ಜಾಗತಿಕವಾಗಿ ದೇಶಗಳಿಗೆ ಜೈವಿಕ ಸಮರವು ಬಹುದೊಡ್ಡ ಅಪಾಯವಾಗಿದೆ. ಇದನ್ನು ನಿವಾರಿಸಲು ಅಸ್ತಿತ್ವದಲ್ಲಿರುವ ಕ್ರಮಗಳು ಸಮರ್ಪಕವಾಗಿವೆಯೇ? ಪರಿಶೀಲಿಸಿ. (250 ಪದಗಳು)

Reference: Science Direct

ಪ್ರಶ್ನೆಯ ಹಿನ್ನೆಲೆ

ಕೊರೋನಾ ರೋಗಾಣು ವಿಶ್ವದಾದ್ಯಂತ ಹರಡುತ್ತಿದೆ. ಇದರ ಹಿನ್ನಲೆಯಲ್ಲಿ ಜೈವಿಕ ಸಮರದ ಆಯಾಮ ಚರ್ಚಾ ವಿಷಯವಾಗಿದೆ.

ಪ್ರಶ್ನೆಯ ಆಶಯ

ಬೌದ್ಧಿಕ ಮತ್ತು ಮಾನಸಿಕ ಸೂಚ್ಯಂಕದ ಮಹತ್ವ, ಜಾಗತಿಕ ಶಾಂತಿ ಮತ್ತು ವ್ಯವಸ್ಥೆಗಾಗಿ ಜಾರಿಗೆಯಲ್ಲಿರುವ ಜಾಗತಿಕ ಮತ್ತು ರಾಷ್ಟ್ರೀಯ ಕ್ರಮಗಳು

ಉತ್ತರದ ರಚನೆ

ಪೀಠಿಕೆ:

ಜೈವಿಕ ಸಮರದ ವ್ಯಾಖ್ಯಾನ ಕುರಿತು ಬರೆಯಿರಿ.

ಮುಖ್ಯಭಾಗ:

ಭಯೋತ್ಪಾದಕ ಸಂಘ ಮತ್ತು ಉಗ್ರವಾದದ ರಾಷ್ಟ್ರಗಳು ವಿಶ್ವದ ಪ್ರಬಲ ರಾಷ್ಟ್ರಗಳ ವಿರುದ್ಧ ಜೈವಿಕ ಶಸ್ತ್ರಾಸ್ತ್ರವನ್ನು ಬಳಸುವ ದುರ್ಬಲತೆಯನ್ನು ಕೋವಿಡ್-19 ಯಾವ ರೀತಿ ಬಹಿರಂಗಗೊಳಿಸಿದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ.

  1. ಆಂತ್ರಾಕ್ಸ್, ಬೋಟುಲಿನಂ ವಿಷಕಾರಕಗಳು
  2. ಮಂಚೂರಿಯಾದ ಪ್ರಕರಣದ ಯುದ್ದ ಖೈದಿಗಳ ವಿರುದ್ಧ ಜಪಾನ್ ‘ನೋನ್’ (Nown) ಬಳಸುವುದು
  3. ಇರಾಕ್’ನಿಂದಆಫ್ಲಟೋಕ್ಸಿನ್

ಇದನ್ನು ನಿವಾರಿಸಲು ಜಾರಿಗೆ ಯಲ್ಲಿರುವ ಕ್ರಮಗಳನ್ನು ಬರೆಯಿರಿ.

ಈ ಕ್ರಮಗಳಲ್ಲಿನ ನ್ಯೂನ್ಯತೆಗಳನ್ನು ಬರೆಯಿರಿ

ಉಪಸಂಹಾರ:

ನ್ಯೂನ್ಯತೆಗಳ ನಿವಾರಣಾ ತಂತ್ರಗಳನ್ನು ಸ್ಪಷ್ಟಿಕರಿಸಿ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos