Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 30 ನವೆಂಬರ್ 2020

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 

ಪರಿವಿಡಿ

ಸಾಮಾನ್ಯ ಅಧ್ಯಯನ ಪತ್ರಿಕೆ  – 2

1. ಚೀನಾದಿಂದ ಬ್ರಹ್ಮಪುತ್ರ ನದಿಗೆ ಬೃಹತ್ ಜಲಾಶಯ ನಿರ್ಮಾಣ

2. ಇಸ್ಲಾಮಿಕ್ ಸಹಕಾರಿ ರಾಷ್ಟ್ರಗಳು

3. ಪ್ರತಿ ನಿರೋಧತೆಯ ಮೇಲೆ ಏಕೀಕೃತ ಆರೋಗ್ಯದ ಜಾಗತಿಕ ನಾಯಕರ ಸಂಘ

 

ಸಾಮಾನ್ಯ ಅಧ್ಯಯನ ಪತ್ರಿಕೆ  – 3

1. ಕ್ಷುದ್ರಗ್ರಹದ ಮಣ್ಣಿನ್ನು ತರುವ ಜಪಾನಿನ ಹಯಬುಸ-2 ಬಾಹ್ಯಾಕಾಶ ನೌಕೆ ಭೂಮಿಯ ಸಾಮೀಪ್ಯ

2. ಡ್ರೈ ಸ್ವ್ಯಾಬ್ – ನೇರ ರತ್-PCR ಪದ್ಧತಿ

 

ಪೂರ್ವಭಾವಿ ಪರೀಕ್ಷಾ ಕೇಂದ್ರಿತ

1. ಮೌಂಟ್ ಇಲಿ ಲೆವೊಟೋಲೋಕ್

2. ಜಾಗತಿಕ ನಾವಿನ್ಯತೆ ಮತ್ತು ತಂತ್ರಜ್ಞಾನ ಮೈತ್ರಿ (Global Innovation & Technology Alliance – GITA)

 

ದಿನಕ್ಕೊಂದು ವಿಷಯ : ರಾಜ್ಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ

1. ಪಕ್ಷಾಂತರ ನಿಷೇದ ಕಾಯ್ದೆ

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ಭಾರತ ಮತ್ತು ನೆರೆ ರಾಷ್ಟ್ರಗಳೊಂದಿಗಿನ ಅದರ ಸಂಬಂಧ

ಚೀನಾದಿಂದ ಬ್ರಹ್ಮಪುತ್ರ ನದಿಗೆ ಬೃಹತ್ ಜಲಾಶಯ ನಿರ್ಮಾಣ


ಸಂದರ್ಭ :

ಟಿಬೆಟ್ ವಲಯದಲ್ಲಿ ಚೀನಾ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಸ್ಥಾವರವನ್ನು ರಚಿಸುವ ಯೋಜನೆ ರೂಪಿಸಿದೆ. ಇದನ್ನು 14ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಜಾರಿಗೆ ತರಲು ಮುಂದಾಗಿದೆ

 

ಭಾರತ ಮತ್ತು ಬಾಂಗ್ಲಾದೇಶದಿಂದ ಪ್ರತಿಕ್ರಿಯೆ

ಭಾರತ ಮತ್ತು ಬಾಂಗ್ಲಾದೇಶಗಳು ಕೆಳಹಂತದ ರಾಷ್ಟ್ರಗಳಾಗಿದ್ದು ಉಭಯ ರಾಷ್ಟ್ರಗಳಲ್ಲಿ ಅಸಮಾಧಾನ ಉಂಟಾಗಿದೆ.

ಆದರೆ, ಚೀನಾ ತನ್ನ ಹಿತಾಸಕ್ತಿಗೆ ಗಮನ ನೀಡಿದೆ.

 

ಭಾರತದ ಸಮಸ್ಯೆ

 1. ನದಿ ನೀರನ್ನು ಕುರಿತು ದ್ವಿಪಕ್ಷೀಯ ಅಥವಾ ಬಹುಪಕ್ಷೀಯ ಒಪ್ಪಂದಗಳಿಲ್ಲ
 2. ಅರುಣಾಚಲ ಪ್ರದೇಶದ ಮೇಲೆ ತನ್ನ ಅಧಿಕೃತತೆಯನ್ನು ಸಾಧಿಸಲು ಪೂರಕ
 3. ಭಾರತದಲ್ಲಿ ನದಿ ಹರಿವಿನ ಪ್ರಮಾಣವನ್ನು ಮೊಟಕುಗೊಳಿಸುತ್ತದೆ.
 4. ನದಿ ನೀರು ರಾಜಕೀಯ ಅಸ್ತ್ರವಾಗುವ ಸಾಧ್ಯತೆ
 5. ಯಾರ್ಲಾಂಗ್ ಸಾಂಗ್ ಪೋ ಚಲನೆಯ ದಿಕ್ಕಿನ ಬದಲಿಕೆ

 

ಭಾರತಕ್ಕೆ ಬ್ರಹ್ಮಪುತ್ರ ನದಿಯ ಪ್ರಾಮುಖ್ಯತೆ

 1. ಟಿಬೆಟ್, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ 3000 ಕಿ.ಮೀ ನದಿ ಪಾತ್ರವನ್ನು ಹೊಂದಿದೆ
 2. ಇದು ಭಾರತಕ್ಕೆ ಬಹು ಮುಖ್ಯವಾಗಿದ್ದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಸಿಕ್ಕಿಂ, ನಾಗಲ್ಯಾಂಡ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನದಿ ಪಾತ್ರವನ್ನು ಹೊಂದಿದೆ
 3. ಬ್ರಹ್ಮಪುತ್ರ ಕಣಿವೆಯು ಹಲವಾರು ದೇಶಿಯ ಸಮುದಾಯಗಳಿಗೆ ತಾಣವಾಗಿದೆ

ganges

 

 

ವಿಷಯ : ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು, ಸಂಘಗಳು ಮತ್ತು ವೇದಿಕೆಗಳ – ರಚನೆ, ಧ್ಯೇಯ

ಇಸ್ಲಾಮಿಕ್ ಸಹಕಾರಿ ರಾಷ್ಟ್ರಗಳು (Islamic Cooperation Countries-IOC)


ಸಂದರ್ಭ

ಭಾರತ ಇತ್ತೀಚಿಗೆ ನಡೆದ ವಿದೇಶಿ ಸಚಿವರ ಸಂಘದ 47ನೇಸಮಾವೇಶದಲ್ಲಿ  ಜಮ್ಮು ಕಾಶ್ಮೀರ ಕುರಿತ IOCಯ ಹೇಳಿಕೆಯನ್ನು ನಿರಾಕರಿಸಿದೆ.

 

IOC ಕುರಿತು

 1. 1969ರಲ್ಲಿ ರಚನೆಯಾದ ಅಂತರರಾಷ್ಟ್ರೀಯ ಸಂಸ್ಥೆ
 2. ವಿಶ್ವ ಸಂಸ್ಥೆಯ ನಂತರ 2ನೇ ದೊಡ್ಡ ಅಂತರ್-ಸರ್ಕಾರಿಯ ಸಂಸ್ಥೆ
 3. ಇದು ಮುಸ್ಲಿಂ ರಾಷ್ಟ್ರಗಳ ಸಾಂಘಿಕ ಧ್ವನಿಯಾಗಿದೆ
 4. ಇಸ್ಲಾಂ ಧರ್ಮಿಯರ ಹಿತಾಸಕ್ತಿಯನ್ನು ರಕ್ಷಿಸುವ ಮಾತು ಜಾಗತಿಕ ಶಾಂತಿ – ಸಾಮರಸ್ಯವನ್ನು ಸಾರುವ ಧ್ಯೇಯ ಹೊಂದಿದೆ
 5. ಕೇಂದ್ರ ಸ್ಥಾನ : ಜೆದ್ದಃ (ಸೌದಿ ಅರೇಬಿಯಾ)

 

ಭಾರತಕ್ಕೆ IOC ಪ್ರಾಮುಖ್ಯತೆ

ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗುತ್ತಿರುವ OICಯ ಆರ್ಥಿಕ ಮತ್ತು ಶಕ್ತಿಯ ಕ್ಷೇತ್ರದಲ್ಲಿ ಪರಸ್ಪರ-ಅವಲಂಬನಿಯತೆ.

 

ವಿಷಯ : ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು, ಸಂಘಗಳು ಮತ್ತು ವೇದಿಕೆಗಳ – ರಚನೆ, ಧ್ಯೇಯ

ಪ್ರತಿ ನಿರೋಧತೆಯ ಮೇಲೆ ಏಕೀಕೃತ ಆರೋಗ್ಯದ ಜಾಗತಿಕ ನಾಯಕರ ಸಂಘ


ಸಂದರ್ಭ

ವಿಶ್ವ ಆರೋಗ್ಯ ಸಂಸ್ಥೆ, ಪ್ರಾಣಿಗಳ ಆರೋಗ್ಯದ ವಿಶ್ವ ಸಂಸ್ಥೆ, ಆಹಾರ ಮತ್ತು ಕೃಷಿ ಸಂಸ್ಥೆ ಇತ್ತೀಚಿಗೆ ಹೊರಡಿಸಿದೆ

 

ಸಂಯೋಜನೆ

 1. 20 ಸದಸ್ಯರ ಸಂಘ
 2. ಪ್ರಧಾನ ಮಂತ್ರಿ, ವಿವಿಧ ರಾಷ್ಟ್ರಗಳ ಮಾಜಿ ಮಂತ್ರಿಗಳು, ಖಾಸಗಿ ವಲಯದ ನಾಯಕರು ಮತ್ತು ನಾಗರೀಕ ಸಂಘಗಳು ಇದರ ಸದಸ್ಯರು
 3. ಇದರ ಅಧ್ಯಕ್ಷತೆಯನ್ನು ಕ್ರಮವಾಗಿ ಬಾರ್ಬಡೋಸ್ ಮತ್ತು ಬಾಂಗ್ಲಾದೇಶದ ಪ್ರಧಾನ ಮಂತ್ರಿ, ಮಿಯಾ ಮೊಟ್ಲಿ ಮತ್ತು ಶೇಖ್ ಹಸೀನಾ ವಹಿಸಿದ್ದರು

 

ನಿರ್ಮಾಣಕ್ಕೆ ಕಾರಣ

 1. ಪ್ರತಿ ನಿರೋಧಕಗಳಿಂದಾಗುವ ಪರಿಣಾಮವನ್ನು ಮಿತಗೊಳಿಸುವುದು
 2. ಜಾಗತಿಕ ಗಮನವನ್ನು ಸೆಳೆಯುವುದು ಮತ್ತು ಸಂರಕ್ಷಿಸುವ ಕಾರ್ಯ

 

ಈ ಸಂಘದ ಕಾರ್ಯಗಳು

 1. ಪ್ರತಿ ನಿರೋಧಕ ಕುರಿತ ಜಾಗತಿಕ ಪ್ರತಿಕ್ರಿಯೆಯ ನಿರ್ವಹಣೆ
 2. ಸಾರ್ವಜನಿಕ ಸಂಚಲನೆಯ ನಿರ್ವಹಣೆ
 3. ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ವೈಜ್ಞಾನಿಕ ವರದಿ ಸಲ್ಲಿಸುವುದು
 4. ಆಹಾರ, ಆರೋಗ್ಯ, ಕೃಷಿ, ಮುಂತಾದವುಗಳಲ್ಲಿ ಹೂಡಿಕೆ
 5. ಬಹು-ಸದಸ್ಯರ ಜಂಟಿ ಕಾರ್ಯತಂತ್ರ ರಚನೆ

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ. ಕಂಪ್ಯೂಟರ್, ರೊಬೋಟಿಕ್ಸ್, ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯಗಳಿಗೆ ಮತ್ತು ಬೌದ್ಧಿಕ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರಿವು

ಕ್ಷುದ್ರಗ್ರಹದ ಮಣ್ಣಿನ್ನು ತರುವ ಜಪಾನಿನ ಹಯಬುಸ-2 ಬಾಹ್ಯಾಕಾಶ ನೌಕೆ ಭೂಮಿಯ ಸಾಮೀಪ್ಯ

ಸಂದರ್ಭ:

ಒಂದು ವರ್ಷದ ಹಿಂದೆ ರಯುಗೂ ಕ್ಷುದ್ರಗ್ರಹದಿಂದ ಹೋರಟಜಪಾನಿನ ಹಯಬುಸ-2 ನೌಕೆಯುಭೂಮಿಯನ್ನು ಸಮೀಪಿಸುತ್ತಿದೆ. ಇದು ಆಸ್ಟ್ರೇಲಿಯದ ದಕ್ಷಿಣ ಭಾಗಕ್ಕೆ ತಲುಪಲಿದೆ. ಇದು ಹೊತ್ತು ತರುವ ಮಣ್ಣು ಸೌರಮಂಡಲದ ಉಗಮವನ್ನು ಕುರಿತು ಮಾಹಿತಿ ನೀಡುವುದು

 

ಹಯಬುಸ-2 ಯೋಜನೆ:

 1. ಕ್ಷುದ್ರಗ್ರಹದ ಕಣವನ್ನು ಮರಳಿತರುವ ಜಪಾನಿನ ಬಾಹ್ಯಾಕಾಶ ಸಂಸ್ಥೆಯ ಯೋಜನೆ
 2. 2014 ರ ಡಿಸೆಂಬರ್ ನಲ್ಲಿ ಉದಾವನೆಯಾದ ಯೋಜನೆ
 3. ದೂರ ಸಂವಹನ, ನಾಲ್ಕು ಕಿರು ರೋವರ್’ಗಳು ಕ್ಷುದ್ರಗ್ರಹವನ್ನು ಪರಿಶೀಲಿಸುವವು ಮತ್ತು ಪಾರಿಸರಿಕ ಹಾಗೂ ಭೌಗೋಳಿಕ ಮಾಹಿತಿಯನ್ನು ನೀಡುವವು.

hayabusa_2

 

ವೈಜ್ಞಾನಿಕ ಉದ್ದೇಶ

 1. ದೂರ ಸಂವಹನದಂತಹ ತಂತ್ರಜ್ಞಾನದ ಮೂಲಕ ಕ್ಷುದ್ರಗ್ರಹದ ಪರಿಶೀಲನೆ
 2. ಅತೀ ಸೂಕ್ಷ್ಮ ಹಂತದಲ್ಲಿ ಮಣ್ಣಿನ ಪರಿಶೀಲನೆ

 

ಯೊಜನೆಯ ಪ್ರಾಮುಖ್ಯತೆ

ರಯಗು c-ಮಾದರಿಯ ಕ್ಷುದ್ರಗ್ರಹ – ಇದು ಸೌರಮಂಡಲದ ಪಳೆಯುಳಿಕೆಯಾಗಿದೆ.

ಇದು ಜೈವಿಕ ಅಂಶ, ನಿರ್ಬಂಧಿತ ಜಲ, ಮತ್ತು ಭೂಮಿಯ ಮೇಲೆ ಜೀವಿಗಳ ಉಗಮಕ್ಕೆ ಕಾರಣವಾದ ಮೂಲಾಂಶಗಳನ್ನು ತಿಳಿಸುವುದೆಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

hayabusa_mission

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಮೌಂಟ್ ಇಲಿ ಲೆವೊಟೋಲೋಕ್

 1. ಇತ್ತೀಚಿಗೆ ಸ್ಪೋಟಗೊಂಡಿದೆ
 2. ಇಂಡೋನೇಷ್ಯಾದ ಪೂರ್ವ ಭಾಗದಲ್ಲಿರುವ ಜ್ವಾಲಾಮುಖಿ
 3. ಇದು 5423 ಮೀ ಎತ್ತರವಿರುವ ಪರ್ವತವಾಗಿದೆ.
 4. ಇಂಡೋನೇಷ್ಯಾದಲ್ಲಿ ಜಾವಾ ದ್ವೀಪದ ಮೆರಪಿ, ಸುಮಾತ್ರಾ ದ್ವೀಪದ ಸಿನಬುಂಗ್ ಮತ್ತು ಮೌಂಟ್ ಇಲಿ ಲೆವೊಟೋಲೋಕ್ ಜ್ವಾಲಾಮುಖಿಗಳು ಕ್ರಿಯಾಶೀಲವಾಗಿವೆ

 

ಜಾಗತಿಕ ನಾವಿನ್ಯತೆ ಮತ್ತು ತಂತ್ರಜ್ಞಾನ ಮೈತ್ರಿ (Global Innovation & Technology Alliance – GITA)

 1. ಇದು ಖಾಸಗಿ ಭಾಗಿತ್ವದಲ್ಲಿ ರಚನೆಯಾದ ಕಂಪನಿ
 2. ಇದು ತಾಂತ್ರಿಕ ಅಭಿವೃದ್ಧಿ ಮಂಡಳಿ (TDB), ವಿಜ್ಞಾನ ಮತ್ತು ತಾಂತ್ರಿಕ ಇಲಾಖೆ, ಭಾರತೀಯ ಕೈಗಾರಿಕೆಯ ಕಾನ್ಫೆಡರೆಶನ್ (CII)
 3. ಕಾರ್ಯಗಳು
  1. ನಾವಿನ್ಯತೆಯ ತಂತ್ರಜ್ಞಾನದಲ್ಲಿ ಕೈಗಾರಿಕಾ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ
  2. ಪರಿಣಿತಜ್ಞರಿಂದ ತಂತ್ರಜ್ಞಾನಗಳ ಪರಿಶೀಲನೆ
  3. ತಾಂತ್ರಿಕ ಸಹಭಾಗಿತ್ವದ ಸೌಲಭ್ಯ

 


ದಿನಕ್ಕೊಂದು ವಿಷಯ


ಪಕ್ಷಾಂತರ ನಿಷೇಧ ಕಾನೂನು

ಸದನದ ಇತರ ಯಾವುದೇ ಸದಸ್ಯರ ಅರ್ಜಿಯ ಆಧಾರದ ಮೇಲೆ ಸಭಾಧ್ಯಕ್ಷರು ಪಕ್ಷಾಂತರದ ನೆಲೆಯಲ್ಲಿ  ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ವಿಷದ ಪಡಿಸುತ್ತದೆ. .

ಅನುಸೂಚಿ ೧೦ರಡಿಯಲ್ಲಿ ಪಕ್ಷಾಂತರದ ಆಧಾರದ ಮೇಲೆ ಅನರ್ಹಗೊಳಿಸುವ ಪ್ರಶ್ನೆಯನ್ನು ನಿರ್ಣಯಿಸುವ ಅಧಿಕಾರವು ಸದನದ ಅಧ್ಯಕ್ಷರು ಅಥವಾ ಸ್ಪೀಕರ್‌ಗೆ ನೀಡಲಾಗಿದೆ ಮತ್ತು ಅವರ ತೀರ್ಮಾನವು ಅಂತಿಮವಾಗಿರುತ್ತದೆ. ಈ ಕಾನೂನು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಅನ್ವಯವಾಗುವುದು.

 

ಪಕ್ಷಾಂತರ ವಿರೋಧಿ ಕಾನೂನಿನ ಪ್ರಯೋಜನಗಳು

 1. ರಾಜಕೀಯ ನಿಷ್ಠೆಯನ್ನು ಒದಗಿಸುವ ಮೂಲಕ ಸರ್ಕಾರಕ್ಕೆ ಸ್ಥಿರತೆಯನ್ನು ಒದಗಿಸಿ ಆಡಳಿತದೆಡೆಗೆ ಗಮನ ಹರಿಸುವಂತೆ ಮಾಡುತ್ತದೆ.
 2. ಜನಪ್ರತಿನಿಧಿಗಳು ಪಕ್ಷಕ್ಕೆ ಮತ್ತು ಮತ ಚಲಾಯಿಸಿದ ನಾಗರಿಕರಿಗೆ ನಿಷ್ಠರಾಗಿರುತ್ತಾರೆ ಎಂದು ಖಚಿತಪಡಿಸುತ್ತದೆ.
 3. ಪಕ್ಷದ ಶಿಸ್ತನ್ನು ಉತ್ತೇಜಿಸುತ್ತದೆ.
 4. ಪಕ್ಷಾಂತರ ವಿರೋಧಿ ನಿಬಂಧನೆಗಳನ್ನು ಆಕರ್ಷಿಸದೆ ರಾಜಕೀಯ ಪಕ್ಷಗಳ ವಿಲೀನಕ್ಕೆ ಅನುಕೂಲ ಮಾಡಿಕೊಡುತ್ತದೆ
 5. ರಾಜಕೀಯ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.
 6. ಪಕ್ಷಾಂತರ ಗೈವ ದೋಷಪೂರಿತ ಸದಸ್ಯರ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ಒದಗಿಸುತ್ತದೆ.

 

ಪಕ್ಷಾಂತರ ನಿಷೇಧ ಕಾನೂನಿನ ವೈಶಿಷ್ಟ್ಯಗಳು

 1. ಅನರ್ಹತೆ
  1. ರಾಜಕೀಯ ಪಕ್ಷಕ್ಕೆ ಸೇರಿದ ಸದನದ ಸದಸ್ಯರಾಗಿದ್ದರೆ:
   1. ಸ್ವಯಂಪ್ರೇರಿತವಾಗಿ ರಾಜಕೀಯ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ
   2. ಶಾಸಕಾಂಗದಲ್ಲಿ ರಾಜಕೀಯ ಪಕ್ಷದ ನಿರ್ದೇಶನಗಳಿಗೆ ವಿರುದ್ಧವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರೆ. ಆದರೆ, ಸದಸ್ಯನು ಪೂರ್ವಾನುಮತಿ ಪಡೆದಿದ್ದರೆ, ಅಥವಾ ಅಂತಹ ಮತದಾನವನ್ನು 15 ದಿನಗಳಲ್ಲಿ ಪಕ್ಷವು ಕ್ಷಮಿಸಿದ್ದರೆ, ಸದಸ್ಯನನ್ನು ಅನರ್ಹಗೊಳಿಸಲಾಗುವುದಿಲ್ಲ.
  2. ಸ್ವತಂತ್ರ ಅಭ್ಯರ್ಥಿಯು ಚುನಾವಣೆಯ ನಂತರ ರಾಜಕೀಯ ಪಕ್ಷಕ್ಕೆ ಸೇರಿದರೆ
  3. ನಾಮನಿರ್ದೇಶಿತ ಸದಸ್ಯರೊಬ್ಬರು ಶಾಸಕಾಂಗದ ಸದಸ್ಯರಾದ ಆರು ತಿಂಗಳ ನಂತರ ಪಕ್ಷಕ್ಕೆ ಸೇರಿದರೆ.
 2. ಅನರ್ಹಗೊಳಿಸುವ ಅಧಿಕಾರ
  1. ಸದಸ್ಯರನ್ನು ಅನರ್ಹಗೊಳಿಸುವ ನಿರ್ಧಾರವನ್ನು ಸದನದ ಅಧ್ಯಕ್ಷರು ಅಥವಾ ಸ್ಪೀಕರ್ ತೆಗೆದುಕೊಳ್ಳುತ್ತಾರೆ.
  2. ‘ಅಧ್ಯಕ್ಷರು ಅಥವಾ ಸ್ಪೀಕರ್’ ರವರ ಪಕ್ಷಾಂತರಕ್ಕೆ ಸಂಬಂಧಿಸಿದ ದೂರನ್ನು ನಿರ್ಣಯಿಸುವ ಅಧಿಕಾರವನ್ನು ಆ ಸದನದಿಂದ ಚುನಾಯಿಸಲ್ಪಟ್ಟ ಸದನದ ಸದಸ್ಯರೊಬ್ಬರಿಗೆ ನೀಡಲಾಗುವುದು.
 3. ವಿನಾಯಿತಿ
  1. ಒಂದು ರಾಜಕೀಯ ಪಕ್ಷವು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಂಡರೆ ಪಕ್ಷದ ಸದಸ್ಯರನ್ನು ಅನರ್ಹಗೊಳಿಸಲಾಗುವುದಿಲ್ಲ
   1. ಆ ರಾಜಕೀಯ ಪಕ್ಷದ ಸರ್ವ ಸದಸ್ಯರು ಹೊಸ ರಾಜಕೀಯ ಪಕ್ಷದ ಸದಸ್ಯರಾಗುತ್ತಾರೆ, ಅಥವಾ
   2. ಆ ವ್ಯಕ್ತಿ ಮತ್ತು ಇತರ ಸದಸ್ಯರು ವಿಲೀನವನ್ನು ಸ್ವೀಕರಿಸದೆ, ಪ್ರತ್ಯೇಕ ಗುಂಪಾಗಿ ಕಾರ್ಯನಿರ್ವಹಿಸವ ಅಧಿಕಾರವನ್ನು ಹೊಂದಿರುತ್ತಾರೆ..
  2. ಸದನದಲ್ಲಿ 2/3 ಭಾಗದಷ್ಟು ಸದಸ್ಯರು ವಿಲೀನಕ್ಕೆ ಸಮ್ಮತಿಯನ್ನು ನೀಡಿದ್ದರೆ ಮಾತ್ರ ಈ ವಿನಾಯಿತಿ ಕಾರ್ಯನಿರ್ವಹಿಸುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos