Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 27 ನವೆಂಬರ್ 2020

 

ಪರಿವಿಡಿ

ಸಾಮಾನ್ಯ ಅಧ್ಯಯನ ಪತ್ರಿಕೆ  – 2

1. ಭಾರತ ಮತ್ತು ಅಮೆರಿಕಾದಲ್ಲಿ ರಾಷ್ಟ್ರಪತಿ/ಅಧ್ಯಕ್ಷರ ಕ್ಷಮಾದಾನಾಧಿಕಾರ

2. ಏಕ ರಾಷ್ಟ್ರ, ಏಕ ಚುನಾವಣೆ

3. ಆಂಧ್ರಪ್ರದೇಶದಲ್ಲಿ ಕಾರ್ಯಾಂಗಿಯ ಕಾರ್ಯಗಳ ಮೇಲೆ ನ್ಯಾಯಾಲಯದ ಹಿಡಿತ

 

ಸಾಮಾನ್ಯ ಅಧ್ಯಯನ ಪತ್ರಿಕೆ  – 3

1. ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ ಮತ್ತು ಎಕ್ಸ್‌ಪೋ

2. ಜುಹು, ರತ್ನಾಗಿರಿ ಬೀಚ್’ನಲ್ಲಿ ‘ನೀಲಿ ಉಬ್ಬರವಿಳಿತ’

 

ಪೂರ್ವಭಾವಿ ಪರೀಕ್ಷಾ ಕೇಂದ್ರಿತ

1. ಮಾಹಿತಿ ನಿರ್ವಹಣೆ ಮತ್ತು ವಿಶ್ಲೇಷಣೆ ಕೇಂದ್ರ (ಐಎಂಎಸಿ).

2. ಸ್ಕಾಟ್‌ಲ್ಯಾಂಡ್ ಸ್ಯಾನಿಟರಿ ಪ್ಯಾಡ್‌ಗಳನ್ನು, ಟ್ಯಾಂಪೂನ್‌ಗಳನ್ನು ಮುಕ್ತಗೊಳಿಸಿದ ಮೊದಲ ರಾಷ್ಟ್ರ

3. SDG ಹೂಡಿಕೆದಾರರ ನಕ್ಷೆ

 

ದಿನಕ್ಕೊಂದು ವಿಷಯ : ರಾಜ್ಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ

1. ಪರಿಸರ ಅಧ್ಯಯನ : ಶಕ್ತಿಯ ಹರಿವು

 

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ಭಾರತದ ಸಂವಿಧಾನವನ್ನು ಇತರೆ ರಾಷ್ಟ್ರಗಳ ಸಂವಿಧಾನಗಳೊಂದಿಗೆ ತೌಲಾನಿಕತೆ

ಭಾರತ ಮತ್ತು ಅಮೆರಿಕಾದಲ್ಲಿ ರಾಷ್ಟ್ರಪತಿ/ಅಧ್ಯಕ್ಷರ ಕ್ಷಮಾದಾನಾಧಿಕಾರ


ಸಂದರ್ಭ:

ಎಫ್‌ಬಿಐಗೆ ಸುಳ್ಳು ಹೇಳಿದ್ದನ್ನು ಎರಡು ಬಾರಿ ತಪ್ಪೊಪ್ಪಿಕೊಂಡಿದ್ದ ತನ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ಫ್ಲಿನ್‌ಗೆ ಕ್ಷಮಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಸಂವಿಧಾನದಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿದ

 

ಅಮೇರಿಕಾದ ಅಧ್ಯಕ್ಷರ ಕ್ಷಮದಾನಾಧಿಕಾರದ ವ್ಯಾಪ್ತಿ ಎಷ್ಟು?

 1. ಫೆಡರಲ್ ಅಪರಾಧಗಳಿಗೆ ಸಂಬಂಧಿಸಿದ ಶಿಕ್ಷೆಗೆ ಕ್ಷಮೆ ನೀಡುವ ಸಾಂವಿಧಾನಿಕ ಹಕ್ಕಿದೆ.
 2. ಈ ಅಧಿಕಾರ ಅಮಿತವಾಗಿ ನೀಡಲಾಗಿದೆ ಮತ್ತು ಕಾಂಗ್ರೆಸ್ ನಿರ್ಬಂಧಿಸಲಾಗುವುದಿಲ್ಲ.
 3. ಅಂತೆಯೇ, ಕ್ಲೆಮೆನ್ಸಿ (Clemency) ವಿಸ್ತೃತವಾದ ಕಾರ್ಯಾಂಗೀಯ ಅಧಿಕಾರವಾಗಿದೆ
 4. ಇದು ವಿವೇಚನಾಧಿಕಾರವಾಗಿರುವುದರಿಂದ ರಾಷ್ಟ್ರಪತಿಗಳು ಉತ್ತರದಾಹಿತ್ವವನ್ನು ಹೊಂದಿಲ್ಲ.

 

ಮಿತಿಗಳು:

 1. ದೋಷಾರೋಪಣೆ ಪ್ರಕರಣಗಳಲ್ಲಿ ಈ ಅಧಿಕಾರವನ್ನು ಬಳಸುವಂತಿಲ್ಲ.
 2. ಅಧಿಕಾರವು ಫೆಡರಲ್ ಅಪರಾಧಗಳಿಗೆ ಮಾತ್ರ ಅನ್ವಯಿಸುತ್ತದೆ.

 

ವಿಧಿ 72 ರ ಅಡಿಯಲ್ಲಿ ಭಾರತೀಯ ಅಧ್ಯಕ್ಷರ ಕ್ಲೆಮನ್ಸಿ ಅಧಿಕಾರಗಳು:

ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಯ ಶಿಕ್ಷೆಯನ್ನು ಕ್ಷಮಿಸಲು, ಹಿಂಪಡೆಯಲು, ತಡೆ ನೀಡಲು  ಅಥವಾ ಅಮಾನತುಗೊಳಿಸಲು ರಾಷ್ಟ್ರಪತಿಗೆ ಅಧಿಕಾರವಿದೆ ಎಂದು ಹೇಳುತ್ತದೆ.

 

ರಾಷ್ಟ್ರಪತಿ ಈ ಅಧಿಕಾರವನ್ನು ಪ್ರಯೋಗಿಸುವ ಸಂದರ್ಭ:

 1. ರಕ್ಷಣಾ/ಸೇನಾ ನ್ಯಾಯಾಲಯ ಶಿಕ್ಷೆ ನೀಡಿದ ಸಂದರ್ಭದಲ್ಲಿ
 2. ಒಕ್ಕೂಟಕ್ಕೆ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾನೂನಿನ ವಿರುದ್ಧದ ಅಪರಾಧಕ್ಕಾಗಿ ಶಿಕ್ಷೆ ಅಥವಾ ಶಿಕ್ಷೆ ಇರುವ ಎಲ್ಲ ಸಂದರ್ಭಗಳಲ್ಲಿ
 3. ಶಿಕ್ಷೆ ಮರಣದಂಡನೆಯಾದ ಎಲ್ಲಾ ಸಂದರ್ಭಗಳಲ್ಲಿ

 

ಪ್ರಮುಖ ಅಂಶಗಳು:

 1. ಕ್ಷಮಾದಾನದ ಈ ಅಧಿಕಾರವನ್ನು ಅಧ್ಯಕ್ಷರು ಮಂತ್ರಿ ಮಂಡಲದ ಸಲಹೆ ಮೇರೆಗೆ ಚಲಾಯಿಸಬೇಕು.
 2. ರಾಷ್ಟ್ರಪತಿಗಳ ಮತ್ತು ರಾಜ್ಯಪಾಲರ ತೀರ್ಮಾನದ ಕಾನೂನುಬದ್ಧತೆಯನ್ನು ಪ್ರಶ್ನಿಸಲು ಸಂವಿಧಾನವು ಯಾವುದೇ ಕಾರ್ಯವಿಧಾನವನ್ನು ಒದಗಿಸಿಲ್ಲ.
 3. ಆದರೆ ಎಪುರು ಸುಧಾಕರ್ ಪ್ರಕರಣದಲ್ಲಿ ನ್ಯಾಯಾಂಗವು ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕ್ಷಮಾದಾನ ಅಧಿಕಾರದ ನಿರಂಕುಷತೆಯನ್ನು ಪರಿಶೀಲಿಸುವ ಉದ್ದೇಶದಿಂದ ನ್ಯಾಯಾಂಗ ಪರಾಮರ್ಶೆಗೆ ಅವಕಾಶ ಕಲ್ಪಿಸಿದೆ

Sources: Indian Express.

 

ವಿಷಯ : ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಮುಖ ಲಕ್ಷಣಗಳು

ಏಕ ರಾಷ್ಟ್ರ, ಏಕ ಚುನಾವಣೆ


ಸಂದರ್ಭ:

ಪ್ರತಿ ಕೆಲವು ತಿಂಗಳಿಗೊಮ್ಮೆ ನಡೆಯುವ ಚುನಾವಣೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದರಿಂದ  ಮತ್ತೋಮ್ಮೆ ಪ್ರಧಾನ ಮಂತ್ರಿ ‘ಏಕ ರಾಷ್ಟ್ರ, ಏಕ ಚುನಾವಣಾ ನೀತಿ’ಗೆ ಕರೆ ನೀಡಿದರು.

 1. ಇತ್ತೀಚೆಗೆ ನಡೆದ 80 ನೇ ಅಖಿಲ ಭಾರತ ಪ್ರೆಸಿಡಿಂಗ್ ಅಧಿಕಾರಿಗಳ ಸಮಾವೇಶದಲ್ಲಿ ಇದನ್ನು ಸೂಚಿಸಲಾಗಿದೆ.
 2. ಅಲ್ಲದೆ, ಲೋಕಸಭೆ, ವಿಧಾನಸಭೆ ಮತ್ತು ಇತರ ಚುನಾವಣೆಗೆ ಕೇವಲ ಒಂದು ಮತದಾರ ಪಟ್ಟಿ ಬಳಸುವ ಪ್ರಾಮುಖ್ಯತೆಯನ್ನು ಮತ್ತೋಮ್ಮೆ ಪ್ರಕಟಪಡಿಸಿದರು

 

‘ಏಕ ರಾಷ್ಟ್ರ, ಏಕ ಚುನಾವಣೆ’ ಎಂದರೇನು?

ಇದು ಐದು ವರ್ಷಗಳಿಗೊಮ್ಮೆ ಲೋಕಸಭೆ, ರಾಜ್ಯ ವಿಧಾನಸಭೆಗಳು, ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ಸೂಚಿಸುತ್ತದೆ.

 

ಆದರೆ, ಪದೇ ಪದೇ ನಡೆಯುವ ಚುನಾವಣೆಗಳಿಂದ ಎದುರಾಗುವ ಸವಾಲುಗಳೇನು?

 1. ಅಧಿಕ ಖರ್ಚು ಅಥವಾ ಹಣಕಾಸು ಸಂಪನ್ಮೂಲದ ಅಪವ್ಯಯ
 2. ಚುನಾವಣಾ ಸಮಯದ ಮಾದರಿ ನೀತಿ ಸಂಹಿತೆ ಸೃಷ್ಟಿಸುವ ನೀತಿಯ ಪಾರ್ಶ್ವವತೆ
 3. ಅಗತ್ಯ ಸೇವೆಗಳ ಪೂರೈಕೆಯ ಮೇಲೆ ಪರಿಣಾಮ
 4. ಚುನಾವಣಾ ಸಮಯದಲ್ಲಿ ನಿಯೋಜಿಸಲಾಗಿರುವ ಮಾನವಶಕ್ತಿಯ ಮೇಲೆ ಹೊರೆ
 5. ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರುತ್ತದೆ

 

ಏಕಕಾಲಿಕ ಚುನಾವಣೆಯ ಪ್ರಯೋಜನಗಳು:

 1. ಆಡಳಿತ ಮತ್ತು ಸ್ಥಿರತೆ: ಆಡಳಿತ ಪಕ್ಷಗಳು ಶಾಶ್ವತವಾಗಿ ಪ್ರಚಾರ ಕ್ರಮದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಶಾಸನ ಮತ್ತು ಆಡಳಿತದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.
 2. ಹಣ ಮತ್ತು ಆಡಳಿತದ ಮಿತ ವ್ಯಯ
 3. ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳಲ್ಲಿ ನಿರಂತರತೆ
 4. ಆಡಳಿತದ ದಕ್ಷತೆ: ಸರ್ಕಾರಗಳ ಜನಪ್ರಿಯ ಕ್ರಮಗಳು ಮಿತಗೊಳ್ಳುವವು
 5. ಮತದಾರರ ಮೇಲೆ ಕಪ್ಪು ಹಣ ಪ್ರಭಾವವನ್ನು ಬಹುತೇಕ ಮೊಟಕುಗೊಳಿಸಬಹುದು

 

ಪ್ರಾದೇಶಿಕ ಪಕ್ಷಗಳ ಮೇಲೆ ಪರಿಣಾಮ:

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಒಟ್ಟಾಗಿ ನಡೆದರೆ ಮತದಾರರು ಕೇಂದ್ರ & ರಾಜ್ಯದಲ್ಲಿ ಒಂದೇ ಪಕ್ಷಕ್ಕೆ ಮತ ಚಲಾಯಿಸುವ ಪ್ರವೃತ್ತಿ ಯಾವಾಗಲೂ ಇರುತ್ತದೆ.

 

ಏಕಕಾಲದಲ್ಲಿ ಚುನಾವಣೆಗಳನ್ನು ಜಾರಿಗೆ ತರಲು, ಸಂವಿಧಾನ ಮತ್ತು ಶಾಸನಗಳಲ್ಲಿ ಮಾಡಬೇಕಾದ ಬದಲಾವಣೆಗಳು:

 1. ಸಂಸತ್ತಿನ ಸದನಗಳ ಅವಧಿಗೆ ಸಂಬಂಧಿಸಿದ 83 ನೇ ವಿಧಿಗೆ ತಿದ್ದುಪಡಿ ಅಗತ್ಯವಿದೆ.
 2. ವಿಧಿ 85 (ಅಧ್ಯಕ್ಷರಿಂದ ಲೋಕಸಭಾ ವಿಸರ್ಜನೆಯ ಕುರಿತು).
 3. ವಿಧಿ 172 (ರಾಜ್ಯ ಶಾಸಕಾಂಗಗಳ ಅವಧಿಗೆ ಸಂಬಂಧಿಸಿದ).

ಸಂಸತ್ತು ಮತ್ತು ಶಾಸನಸಭೆಗಳ ಅಧಿಕಾರಾವಧಿಯ ಸ್ಥಿರತೆಗಾಗಿ ನಿಬಂಧನೆಗಳನ್ನು ನಿರ್ಮಿಸಲು ಜನ ಪ್ರತಿನಿಧಿ ಕಾಯ್ದೆಯನ್ನು (1951)  ತಿದ್ದುಪಡಿ ಮಾಡಬೇಕಾಗಿತ್ತು. ಇದು ಈ ಕೆಳಗಿನ ನಿರ್ಣಾಯಕ ಅಂಶಗಳನ್ನು ಒಳಗೊಂಡಿರಬೇಕು.

 1. ಏಕಕಾಲಿಕ ಚುನಾವಣೆಗೆ ಅಗತ್ಯವಾದ ಕಾರ್ಯವಿಧಾನಗಳನ್ನು ಸುಲಭಗೊಳಿಸಲು ECI ಅಧಿಕಾರ ಮತ್ತು ಕಾರ್ಯಗಳನ್ನು ಪುನರ್ರಚಿಸುವುದು
 2. ಏಕಕಾಲಿಕ ಚುನಾವಣೆಯ ವ್ಯಾಖ್ಯಾನವನ್ನು 1951 ರ ಕಾಯಿದೆಯ ಸೆಕ್ಷನ್ 2 ಗೆ ಸೇರಿಸುವುದು.

Sources: the Hindu.

 

ವಿಷಯ : ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು

ಆಂಧ್ರಪ್ರದೇಶದಲ್ಲಿ ಕಾರ್ಯಾಂಗಿಯ ಕಾರ್ಯಗಳ ಮೇಲೆ ನ್ಯಾಯಾಲಯದ ಹಿಡಿತ


ಸಂದರ್ಭ:

ಆಂಧ್ರಪ್ರದೇಶದ ನ್ಯಾಯಾಲಯ “ರಾಜ್ಯದ ಕಾರ್ಯಾಂಗೀಯ ಕಾರ್ಯಗಳನ್ನು ವಾಸ್ತವಿಕವಾಗಿ ವಹಿಸಿಕೊಂಡಿದೆ” ಎಂದು ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಉನ್ನತ ನ್ಯಾಯಾಲಯಕ್ಕೆ ತಿಳಿಸಿದೆ.

 

ಈ ಆರೋಪವನ್ನು ಬೆಂಬಲಿಸುವ ನಿದರ್ಶನಗಳು:

ವಿಶಾಖಪಟ್ಟಣಂನಲ್ಲಿ ಪ್ರಸ್ತಾಪಿಸಲಾದ ಅತಿಥಿಗೃಹದ ನಿರ್ಮಾಣ ಯೋಜನೆಗಳನ್ನು ಅದರ ಮುಂದೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯಕ್ಕೆ ನವೆಂಬರ್ 2 ರ ನಿರ್ದೇಶನ ನೀಡಿದೆ.

 

ಇಲ್ಲಿನ ಸಮಸ್ಯೆ

 1. ನ್ಯಾಯಾಂಗ “ಅಧಿಕಾರದ ವಿಭಜನೆಯ ಸಿದ್ಧಾಂತವನ್ನು ಗಂಭೀರವಾಗಿ ಉಲ್ಲಂಘಿಸಿದೆ” ಎಂದು ರಾಜ್ಯ ಸರ್ಕಾರ ಹೇಳುತ್ತದೆ.
 2. ಇದಲ್ಲದೆ, ಹಾಗೆ ಮಾಡುವಾಗ, ಸುಪ್ರೀಂ ಕೋರ್ಟ್ ರಾಜ್ಯದ ಇತರ ಸಹ-ಸಮಾನ ಅಂಗಗಳನ್ನು ಗೌರವಿಸುವಂತೆ ಮತ್ತು ಅಂತಹ ಅಧಿಕಾರಗಳನ್ನು ತಾನೇ ವಹಿಸಿಕೊಳ್ಳುವುದನ್ನು ತಡೆಯುವಂತೆ ನ್ಯಾಯಾಲಯಗಳಿಗೆ ಸಲಹೆ ನೀಡುತ್ತಿದೆ ಎಂಬ ಎಚ್ಚರಿಕೆಯನ್ನು ಹೈಕೋರ್ಟ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ .

 

ಈ ವಿಷಯದಲ್ಲಿ ನ್ಯಾಯಾಂಗದ ಅಭಿಪ್ರಾಯ

ಸರ್ವೋಚ್ಚ ನ್ಯಾಯಾಲಯವು  “ನ್ಯಾಯಾಂಗ ಕ್ರಿಯಾಶೀಲತೆಯ ಹೆಸರಿನಲ್ಲಿ, ನ್ಯಾಯಾಧೀಶರು ತಮ್ಮ ಮಿತಿಗಳನ್ನು ಮೀರುವಂತಿಲ್ಲ ಮತ್ತು ರಾಜ್ಯದ ಮತ್ತೊಂದು ಅಂಗಕ್ಕೆ ಸೇರಿದ ಕಾರ್ಯಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವಂತಿಲ್ಲ” ಎಂದಿದೆ.

 

ಅಧಿಕಾರದ ವಿಭಜನಾ ಸಿದ್ಧಾಂತ:

 1. ಸಂವಿಧಾನವು ವಿವಿಧ ವಿಧಿಗಳಡಿಯಲ್ಲಿ ತಮ್ಮ ಕಾರ್ಯವೈಖರಿಯ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ಅಂತರವನ್ನು ನಿರ್ಮಿಸಿದೆ.
 2. ವಿಧಿ 121 ಮತ್ತು 211 ಶಾಸಕಾಂಗವು ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಯಾವುದೇ ನ್ಯಾಯಾಧೀಶರ ನಡವಳಿಕೆಯನ್ನು ಚರ್ಚಿಸುವುದನ್ನು ನಿಷೇಧಿಸುತ್ತದೆ.
 3. 122 ಮತ್ತು 212 ವಿಧಿಗಳ ಪ್ರಕಾರ ನ್ಯಾಯಾಲಯಗಳು ಶಾಸಕಾಂಗದ ಪ್ರಕ್ರಿಯೆಗಳ ಬಗ್ಗೆ ವಿಚಾರಣೆ ಮಾಡುವಂತಿಲ್ಲ
 4. ವಿಧಿ 105 (2) ಮತ್ತು 194 (2) ಶಾಸಕರ ವಾಕ್ ಸ್ವಾತಂತ್ರ್ಯ ಮತ್ತು ಮತದಾನದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳ ಹಸ್ತಕ್ಷೇಪದಿಂದ ರಕ್ಷಿಸುತ್ತದೆ.

 

ಪ್ರಯೋಜನಗಳು:

 1. ಇತರೆ ಸರ್ಕಾರಿ ಶಾಖೆಗಳಿಗೆ ಪರಿಶೀಲನಾ ಮತ್ತು ಸಮತೋಲನ ವ್ಯವಸ್ಥೆಯನ್ನು ಒದಗಿಸುತ್ತದೆ
 2. ಅಗತ್ಯವಿರುವ ನಾವೀನ್ಯತೆಯನ್ನು ಪರಿಹಾರದ ರೂಪದಲ್ಲಿ ತರುತ್ತದೆ
 3. ನ್ಯಾಯಾಧೀಶರು ಕಾನೂನು ಸಮತೋಲನವನ್ನು ನೆಲೆಗೊಳಿಸಲು ಬಳಸಬಹುದು
 4. ಸಾರ್ವಜನಿಕ ಅಧಿಕಾರದ ದುರುಪಯೋಗವನ್ನು ಪರಿಶೀಲಿಸುತ್ತದೆ.
 5. ಶಾಸಕಾಂಗವು ಬಹುಮತದ ವಿಷಯದಲ್ಲಿ ಸಿಲುಕಿಕೊಂಡಲ್ಲಿ ತ್ವರಿತ ಪರಿಹಾರಗಳನ್ನು ಒದಗಿಸುತ್ತದೆ.

 

ಸಂಬಂಧಿಸಿದ ಅನಾನುಕೂಲಗಳು:

 1. ಸಂವಿಧಾನದ ಗಡಿಯನ್ನು ಉಲ್ಲಂಘಿಸುತ್ತದೆ.
 2. ನ್ಯಾಯಾಧೀಶರ ಅಭಿಪ್ರಾಯಗಳು ಇತರ ಪ್ರಕರಣಗಳನ್ನು ಆಳುವ ಮಾನದಂಡಗಳಾಗಿವೆ.
 3. ತೀರ್ಪು ವೈಯಕ್ತಿಕ ಉದ್ದೇಶಗಳಿಂದ ಪ್ರಭಾವಿತವಾಗಿರುತ್ತದೆ.
 4. ನ್ಯಾಯಾಲಯಗಳ ಪುನರಾವರ್ತಿತ ಹಸ್ತಕ್ಷೇಪವು ಸರ್ಕಾರಿ ಸಂಸ್ಥೆಗಳ ಗುಣಮಟ್ಟ, ಸಮಗ್ರತೆ ಮತ್ತು ದಕ್ಷತೆಯ ಬಗ್ಗೆ ಜನರ ನಂಬಿಕೆಯನ್ನು ಕುಂಠಿತಗೊಳಿಸುತ್ತದೆ.
 5. ನ್ಯಾಯಾಲಯಗಳು ಸರ್ಕಾರದ ಕಾರ್ಯನಿರ್ವಹಣೆಯನ್ನು ಮಿತಿಗೊಳಿಸುತ್ತವೆ.

 

ನ್ಯಾಯಾಂಗದ ಅಭಿಪ್ರಾಯ :

ರಾಮ್ ಜವಾಯ ಪ್ರಕರಣದ (1955)

 1. ರಾಜ್ಯದ ಮೂರು ಅಂಗಗಳಲ್ಲಿ (ಶಾಸಕಾಂಗ, ಕಾರ್ಯನಿರ್ವಾಹಕ, ನ್ಯಾಯಾಂಗ) ಸಾಂವಿಧಾನಿಕ ಅಧಿಕಾರಗಳ ವ್ಯಾಪಕ ವಿಭಜನೆ ಇರಬೇಕು.
 2. ಒಂದು ಅಂಗವು ಇನ್ನೊಂದರ ಕ್ಷೇತ್ರಕ್ಕೆ ಅತಿಕ್ರಮಿಸಬಾರದು ಎಂದು ಸೂಚಿಸಿತು. ಇದು ಸಂಭವಿಸಿದಲ್ಲಿ, ಸಂವಿಧಾನದಲ್ಲಿನ ಸಮತೋಲನಕ್ಕೆ ದಕ್ಕೆಯಾಗುವುದು.

examples

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು

ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆ


ಸಂದರ್ಭ:

3ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಸಭೆಯನ್ನು (RE-Invest 2020) ಇತ್ತೀಚೆಗೆ ಉದ್ಘಾಟಿಸಲಾಯಿತು.

 1. ಸಭೆಯನ್ನು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದೆ.
 2. 2020 ರ ವಿಷಯ – ‘ಸುಸ್ಥಿರ ಶಕ್ತಿ ಪರಿವರ್ತನೆಗಾಗಿ ನಾವೀನ್ಯತೆಗಳು’

 

ಭಾರತದ ಪ್ರದರ್ಶನ

 1. ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತ ವಿಶ್ವದ 4ನೇ ದೊಡ್ಡ ರಾಷ್ಟ್ರವಾಗಿದೆ.
 2. ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಪ್ರಸ್ತುತ 136 GW ಆಗಿದೆ. ಇದು ನಮ್ಮ ಒಟ್ಟು ಸಾಮರ್ಥ್ಯದ ಸುಮಾರು 36% ಆಗಿದೆ.
 3. ಭಾರತದ ವಾರ್ಷಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆ 2017 ರಿಂದ ಕಲ್ಲಿದ್ದಲು ಆಧಾರಿತ ಉಷ್ಣ ಶಕ್ತಿಯನ್ನು ಮೀರಿದೆ .
 4. ಕಳೆದ 6 ವರ್ಷಗಳಲ್ಲಿ, ಭಾರತವು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಎರಡೂವರೆ ಪಟ್ಟು ಹೆಚ್ಚಿಸಿದೆ.

ಒಟ್ಟಾರೆಯಾಗಿ, ಕೈಗೆಟುಕುವಂತಿಲ್ಲದಿದ್ದರೂ ಸಹ ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡುವುದು ಸ್ಕೇಲ್ ಸಾಧಿಸಲು ಸಹಾಯ ಮಾಡಿದೆ ಎಂದು ಭಾರತವು ಜಗತ್ತಿಗೆ ತೋರಿಸಿದೆ , ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಉತ್ತಮ ಪರಿಸರ ನೀತಿಗಳು ಉತ್ತಮ ಅರ್ಥಶಾಸ್ತ್ರವೂ ಆಗಿದೆ.

indian_gov

Sources: the Hindu.

 

ವಿಷಯ : ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು

ಮುಂಬೈ ಕರಾವಳಿಯಲ್ಲಿ ‘ನೀಲಿ ಉಬ್ಬರವಿಳಿತ’


ಸಂದರ್ಭ:

ಇತ್ತೀಚೆಗೆ ಮಹಾರಾಷ್ಟ್ರದ ಕರಾವಳಿಯುದ್ದಕ್ಕೂ ಮುಂಬಯಿಯ ಜುಹು & ಸಿಂಧುದುರ್ಗ್‌ನ ದೇವ್‌ಗಡ್ ಬೀಚ್‌ನಲ್ಲಿ ‘Bioluminescence’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ನೀಲಿ ಬಣ್ಣದ ಉಬ್ಬರವಿಳಿತವು ಕಾಣಿಸಿಕೊಂಡಿದೆ.

 

ಹಿನ್ನೆಲೆ:

‘Bioluminescence’ ಪಶ್ಚಿಮ ಕರಾವಳಿಯಲ್ಲಿ 2016 ರಿಂದ ವಾರ್ಷಿಕ ಘಟನೆಯಾಗಿದೆ. ಇದು ವಿಶೇಷವಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಗೋಚರವಾಗುತ್ತಿದೆ.

 

ಏಕೆ ಉಂಟಾಗುತ್ತದೆ?

ಸಾಮಾನ್ಯವಾಗಿ ಡೈನೋಫ್ಲಾಜೆಲೆಟ್‌ಗಳು ಎಂದು ಕರೆಯಲ್ಪಡುವ ಫೈಟೊಪ್ಲಾಂಕ್ಟನ್’ಗಳು ಪ್ರೋಟೀನ್‌ಗಳೊಂದಿಗೆ ರಾಸಾಯನಿಕ ಕ್ರಿಯೆ ನಡೆಸುವ ಮೂಲಕ ಬೆಳಕನ್ನು ಉತ್ಪಾದಿಸಿದಾಗ ಈ ವಿದ್ಯಾಮಾನ ಗೋಚರವಾಗುವುದು. ಅಲೆಗಳು ಈ ಏಕಕೋಶೀಯ ಸೂಕ್ಷ್ಮಜೀವಿಗಳನ್ನು ಪಲ್ಲಟಗೊಳಿಸುವ ಮೂಲಕ ನೀಲಿ ಬೆಳಕನ್ನು ಎಲ್ಲೆಡೆ ಹರಡುತ್ತವೆ.

ಇದು ಸಂಭವಿಸಲು ಮುಖ್ಯ ಅಂಶ – ಯುಟ್ರೊಫಿಕೇಶನ್ – ನೀರಿನಲ್ಲಿ ಆಮ್ಲಜನಕವನ್ನು ಕಡಿತಗೊಳಿಸುವುದು  & ಫೈಟೊಪ್ಲಾಂಕ್ಟನ್‌ಗಳನ್ನು ಬಹಳ ಪ್ರಬಲಗೊಳಿಸುವುದು.

 

ಇದು ಏಕೆ ಅಪಾಯಕಾರಿ?

 1. ಈ ವಿದ್ಯಾಮಾನ ಸುಂದರವಾಗಿರುವುದರೊಂದಿಗೆ, ಇದು ಅಪಾಯದ ಸಂಕೇತವೂ ಆಗಿದೆ. ವಿಷಕಾರಿಯಾದ ಡೈನೋಫ್ಲಾಜೆಲೆಟ್‌ಗಳು ವೇಗವಾಗಿ ಸಂತಾನೋತ್ಪತ್ತಿ ಮಾಡಿದರೆ, ಅವು ‘ಕೆಂಪು ಉಬ್ಬರವಿಳಿತಗಳು’ ಎಂದು ಕರೆಯಲ್ಪಡುತ್ತವೆ .
 2. ಈ ಅವಧಿಯಲ್ಲಿ ಡೈನೋಫ್ಲಾಜೆಲೆಟ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವುದರಿಂದ ಇವುಗಳನ್ನು ತಿನ್ನುವ ಎಲ್ಲಾ ಪ್ರಾಣಿಗಳು (ಮೃದ್ವಂಗಿಗಳು, ಮೀನುಗಳು) ವಿಷಕಾರಿಯಾಗಿರುತ್ತವೆ.
 3. ಈ ಸಮುದ್ರ ಜೀವಿಗಳನ್ನು ಸೇವಿಸುವುದು ಅಪಾಯಕಾರಿ. ಏಕೆಂದರೆ ಅವುಗಳಲ್ಲಿರುವ
  1. ವಿಷಕಾರಿ ಅಂಶ ವಿವಿಧ ಅಹಿತಕರ ಪರಿಣಾಮಗಳನ್ನು ಬೀರುತ್ತವೆ
  2. ಕೆಲವು ಕೇವಲ ಕರುಳನ್ನು ಕೆರಳಿಸುತ್ತವೆ
  3. ಆಹಾರ ವಿಷಕಾರಿಯಾಗುವುದು
  4. ಕೆಲವು ನ್ಯೂರೋಟಾಕ್ಸಿನ್ಗಳಾಗಿರುವುದರಿಂದ ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುವವು

ನೋಕ್ಟಿಲುಕಾ ಸಿಂಟಿಲಾನ್ಸ್ ನಂತಹ ಕೆಲವು ಪ್ರಭೇದಗಳು ವಿಷಕಾರಿಯಲ್ಲ, ಆದರೆ ಇವು ಇತರೆ ಅಹಿತಕರ ಪರಿಣಾಮಗಳನ್ನು ಬೀರಬಹುದು.

blue_tide

Sources: Indian Express.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಮಾಹಿತಿ ನಿರ್ವಹಣೆ ಮತ್ತು ವಿಶ್ಲೇಷಣೆ ಕೇಂದ್ರ (IMAC)

ಸಂದರ್ಭ:

ನೌಕಾಪಡೆಯ ಮಾಹಿತಿ ನಿರ್ವಹಣೆ ಮತ್ತು ವಿಶ್ಲೇಷಣೆ ಕೇಂದ್ರ (IMAC) ಶೀಘ್ರದಲ್ಲೇ ರಾಷ್ಟ್ರೀಯ ಸಾಗರಿಕ ವಲಯದ ಜಾಗೃತಿ (NMDA ) ಕೇಂದ್ರವಾಗಲಿದೆ.

IMAC ಬಗ್ಗೆ:

 1. ಸಾಗರೀಕ ದತ್ತಾಂಶ ಸಮ್ಮಿಳನಕ್ಕೆ ಕೇಂದ್ರೀಯ ಸಂಸ್ಥೆಯಾಗಿದೆ.
 2. 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಸ್ಥಾಪಿಸಲಾಯಿತು.
 3. 2012 ರಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು ಅನುಮೋದನೆ ನೀಡಿದೆ.
 4. 2014 ರಲ್ಲಿ ಗುರುಗ್ರಾಮದಲ್ಲಿ ಕಾರ್ಯರೂಪಕ್ಕೆ ಬಂದಿತು.

ಇದು ನ್ಯಾಷನಲ್ ಕಮಾಂಡ್ ಕಂಟ್ರೋಲ್ ಕಮ್ಯುನಿಕೇಷನ್ ಅಂಡ್ ಇಂಟೆಲಿಜೆನ್ಸ್ ಸಿಸ್ಟಮ್’ನ (NC3I)) ಕೇಂದ್ರವಾಗಿದೆ, ಇದು ದ್ವೀಪ ಪ್ರದೇಶಗಳು ಸೇರಿದಂತೆ ದೇಶದ ಕರಾವಳಿಯಲ್ಲಿ ಹರಡಿರುವ ನೌಕಾಪಡೆಯ ಮತ್ತು ಕರಾವಳಿ ರಕ್ಷಣಾ ಪಡೆಯ ಕಾರ್ಯಾಚರಣಾ ಕೇಂದ್ರಗಳು ಮತ್ತು ಸಾಗರಿಕ ತಳಭಾಗದಲ್ಲಿನೆ ನೆಲೆಗಳನ್ನು ಸಂಪರ್ಕಿಸಲು ಸ್ಥಾಪಿಸಲಾಯಿತು.

 

ಸ್ಕಾಟ್‌ಲ್ಯಾಂಡ್ ಸ್ಯಾನಿಟರಿ ಪ್ಯಾಡ್‌ಗಳನ್ನು, ಟ್ಯಾಂಪೂನ್‌ಗಳನ್ನು ಮುಕ್ತಗೊಳಿಸಿದ ಮೊದಲ ರಾಷ್ಟ್ರ

ಸ್ಕಾಟ್ಲೆಂಡ್ ಋತುಚಕ್ರದ ವಿರುದ್ಧ ಹೆಜ್ಜೆ ಇಟ್ಟ ವಿಶ್ವದ ಮೊದಲ ರಾಷ್ಟ್ರ. ಇದು ಋತುಚಕ್ರದ ರಕ್ತಸ್ರಾವವನ್ನು ನಿರ್ವಹಿಸಲು ಪದನಂತಹ ಸಾಧನಗಳನ್ನು ಪಡೆಯಲು ಸಾಧ್ಯವಾಗದಿರುವ ಪ್ರಚಲಿತ ವಿದ್ಯಮಾನಗಳನ್ನು ಇದು ಸೂಚಿಸುತ್ತದೆ.

 

SDG ಹೂಡಿಕೆದಾರರ ನಕ್ಷೆ

 1. UNDP ಮತ್ತು ಇನ್ವೆಸ್ಟ್ ಇಂಡಿಯಾದ ಸಹ ಭಾಗಿತ್ವದಲ್ಲಿ ಪ್ರಾರಂಭ
 2. 6 SDG ವಲಯಗಳಲ್ಲಿ 18 ಹೂಡಿಕಾ ಅವಕಾಶ ಪ್ರದೇಶಗಳನ್ನು (IOA) ಗುರುತಿಸಲಾಗಿದೆ. ಇದು ಸುಸ್ಥಿರ ಗುರಿ ಸಾಧನೆಯ ಅಂಕಿಅಂಶಗಳ ಗುರಿಯನ್ನು ಮುಟ್ಟಲು ಪೂರಕವಾದ ವೇದಿಕೆ ನಿರ್ಮಿಸುವುದು.
 3. ಇದು ಸಾರ್ವಜನಿಕ ವಲಯದ ಆದ್ಯತೆಗಳು ಮತ್ತು ಖಾಸಗಿ ವಲಯದ ಹಿತಾಸಕ್ತಿಗಳ ನಡುವಿನ ಅಂತರವನ್ನು ಪ್ರಚುರಪಡಿಸುತ್ತದೆ. ಆ ಮೂಲಕ, ಖಾಸಗಿ ವಲಯದ ಹೂಡಿಕೆ ಮತ್ತು ಸಾರ್ವಜನಿಕ ವಲಯದ ಬೆಂಬಲವನ್ನು ಒಟ್ಟುಗೂಡಿಸುವ ಮಾರ್ಗಗಳನ್ನು ರೂಪಿಸುತ್ತದೆ.

 


ದಿನಕ್ಕೊಂದು ವಿಷಯ


ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಹರಿವು

 1. ಪರಿಸರ ವ್ಯವಸ್ಥೆಯಲ್ಲಿ ಸೂರ್ಯ ಶಕ್ತಿಯ ಏಕೈಕ ಮೂಲ
 2. ಆಹಾರ ಜಾಲಕ್ಕೆ ದ್ಯುತಿಸಂಶ್ಲೇಷಣೆ ಕ್ರಿಯೆ ಶಕ್ತಿಯ ದ್ವಾರವಾಗಿದೆ.
 3. ವ್ಯವಸ್ಥೆಯಲ್ಲಿ ಶಕ್ತಿಯು ಏಕಮುಖೀಯವಾಗಿದೆ. ಅಲ್ಲದೆ, ಪ್ರತಿ ಪರಿಸರ ವ್ಯವಸ್ಥೆಗೆ ನಿರಂತರ ಶಕ್ತಿಯ ಪೂರೈಕೆಯ ಅಗತ್ಯವಿದೆ.
 4. ಪರಿಸರ ವ್ಯವಸ್ಥೆಯ ಆಹಾರ ಜಾಲದಲ್ಲಿ ಪ್ರತಿ ಜೀವಿ ವಿವಿಧ ಸ್ತರವನ್ನು ಹೊದಿವೆ.
 5. ಶಕ್ತಿಯ ಹರಿವಿನ ದಕ್ಷತೆ ಶೇ 10 ಮಾತ್ರ. ಹಾಗಾಗಿ, ಆಹಾರ ಜಾಲದ ಸೀಮಿತ ಸ್ತರಗಳನ್ನು ಹೊಂದಿದೆ.
 6. ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯನ್ನು ನಿರ್ಮಿಸಲು ಅಥವಾ ನಿರಚಿಸಲು ಸಾಧ್ಯವಿಲ್ಲ. ಬದಲಿಗೆ ಸಂರಕ್ಷಿಸಲಾಗುವುದು.
 7. ಶಕ್ತಿಯ ಹರಿವಿನ ಅದಕ್ಷತೆಗೆ ಉಸಿರಾಡುವಿಕೆ, ಪಚನಕ್ರಿಯೆ ಮುಂತಾದ ಜೈವಿಕ ಕ್ರಿಯೆಗಳು ಕಾರಣವಾಗಿವೆ.