[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26 ನವೆಂಬರ್ 2020

 

ಪರಿವಿಡಿ

ಸಾಮಾನ್ಯ ಅಧ್ಯಯನ ಪತ್ರಿಕೆ  – 2

1. ಲೋಕಸಭೆಯ ಅಧ್ಯಕ್ಷರು (ಸ್ಪೀಕರ್)

2. ಕೇಂದ್ರವು MPLAD ಯೋಜನೆಯನ್ನು ಅಮಾನತುಗೊಳಿಸುವ ಹಕ್ಕನ್ನು ಹೊಂದಿದೆ : ಬಾಂಬೆ ಉಚ್ಚನ್ಯಾಯಾಲಯ

3. ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ

 

ಸಾಮಾನ್ಯ ಅಧ್ಯಯನ ಪತ್ರಿಕೆ  – 3

1. ಮೆಗಾ ಫುಡ್ ಪಾರ್ಕ್

2. ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿರ್ಬಂಧ

 

ಪೂರ್ವಭಾವಿ ಪರೀಕ್ಷಾ ಕೇಂದ್ರಿತ

1. MQ-9B ನಿರಾಯುಧ ಡ್ರೋನ್’ಗಳು ಸಾಗರದ ರಕ್ಷಕರು

2. AUSINDEX

3. ಜರ್ಮನಿಯೊಂದಿಗೆ ಭೂತಾನ್ ಔಪಚಾರಿಕ ಸಂಬಂಧವನ್ನು ಹೊಂದಿದೆ

4. ಸಂವಿಧಾನದ ದಿನ ಎಂದರೇನು?

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ಸಾಂವಿಧಾನಿಕ ಸಂಸ್ಥೆಗಳ ಹುದ್ದೆಗೆ ನೇಮಕಾತಿ, ಅಧಿಕಾರ, ಕಾರ್ಯಗಳು ಜವಾಬ್ದಾರಿ,

ಲೋಕಸಭೆಯ ಅಧ್ಯಕ್ಷರು (ಸ್ಪೀಕರ್)


ಸಂದರ್ಭ :

ಬಿಹಾರ ವಿಧಾನಸಭಾ ಸ್ಪೀಕರ್ – ವಿಜಯ್ ಕುಮಾರ್ ಸಿನ್ಹಾ ರವರು ಆಯ್ಕೆ

 

ಸ್ಪೀಕರ್

ಲೋಕಸಭೆಯ ಅಥವಾ ವಿಧಾನ ಸಭೆಯ ಸಭಾಧ್ಯಕ್ಷರನ್ನು ಸ್ಪೀಕರ್ ಎನ್ನಲಾಗಿದೆ. ಇವರು, ಭರ್ತಿಯಾಗದ ಸ್ಥಾನಗಳ ಹೊರತುಪಡಿಸಿ ಉಳಿದ ಸ್ಥಾನಗಳ ನೆಲೆಯಲ್ಲಿ ಸರಳ ಬಹುಮತದ ಮೂಲಕ ಆಯ್ಕೆಯಾಗುವರು.

 

ಲೋಕಸಭಾ ಸ್ಪೀಕರ್ ಕಾರ್ಯಗಳು ಮತ್ತು ಅಧಿಕಾರಗಳು

  1. ಮೂಲತಃ ಸದನದ ಮುಖ್ಯಸ್ಥರು ಮತ್ತು ಸಂಸತ್ತಿನ ಸಭೆಗಳ ಅಧ್ಯಕ್ಷತೆ ವಹಿಸಿ ಅದರ ಕಾರ್ಯವನ್ನು ನಿಯಂತ್ರಿಸುತ್ತಾರೆ.
  2. ಸಂವಿಧಾನವು ಸ್ಪೀಕರ್ ಅವರ ವೇತನವನ್ನು ಭಾರತದ ಸಂಚಿತ ನಿಧಿಯಲ್ಲಿರಿಸುವ ಮೂಲಕ ಹುದ್ದೆಯ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ. ಅಲ್ಲದೆ. ಅದು ಸಂಸತ್ತಿನ ಬಹುಮತಕ್ಕೆ ಒಳಪಡುವುದಿಲ್ಲ.
  3. ಮಸೂದೆಯ ಬಗ್ಗೆ ಚರ್ಚಿಸುವಾಗ ಅಥವಾ ಸಾಮಾನ್ಯ ಚರ್ಚೆಯ ಸಮಯದಲ್ಲಿ, ಸಂಸತ್ತಿನ ಸದಸ್ಯರು ಸ್ಪೀಕರ್‌ಗೆ ಮಾತ್ರ ಸಂಬೋಧಿಸಬೇಕು.
  4. ಸಂಸತ್ತಿನ ಉಭಯ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಜಂಟಿ ಸಭೆ ನಡೆದಾಗ ಲೋಕಸಭೆಯ ಸ್ಪೀಕರ್ ಈ ಸಭೆಯ ಅಧ್ಯಕ್ಷತೆ ವಹಿಸುವರು.
  5. ಲೋಕಸಭೆಯ ಸ್ಪೀಕರ್ ಭಾರತ ಸರ್ಕಾರದ ಆದೇಶದ ಆದ್ಯತೆಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
  6. ಸಾಮಾನ್ಯ ಸಂದರ್ಭಗಳಲ್ಲಿ ಸ್ಪೀಕರ್ ಲೋಕಸಭೆಯಲ್ಲಿ ಯಾವುದೇ ವಿಷಯದ ಬಗ್ಗೆ ಮತ ಚಲಾಯಿಸುವುದಿಲ್ಲ. ಆದರೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಸಮ ಮತದ ಬಿಕ್ಕಟ್ಟು ಉಂಟಾದಾಗ ಸ್ಪೀಕರ್ ತಮ್ಮ ಮತ ಚಲಾಯಿಸಬಹುದು.
  7. ವಿವಿಧ ಚರ್ಚೆಗಳ ಕಾರ್ಯಸೂಚಿಯನ್ನು ಸ್ಪೀಕರ್ ನಿರ್ಧರಿಸುತ್ತಾರೆ.
  8. ಕೋರಂ ಪೂರೈಸದಿದ್ದಲ್ಲಿ ಸಭೆಯನ್ನು ಮುಂದೂಡುವ ಅಥವಾ ಅಮಾನತುಗೊಳಿಸುವ ಅಧಿಕಾರ ಸ್ಪೀಕರ್‌ಗಿದೆ.
  9. ಸ್ಪೀಕರ್ ಸದನದ ಶಿಸ್ತು ಮತ್ತು ಸಭ್ಯತೆಯನ್ನು ಖಚಿತಪಡಿಸುತ್ತಾರೆ.
  10. ಸಂಸತ್ತಿನ ಸದಸ್ಯರ ನಡವಳಿಕೆ ಅಸಮರ್ಪಕವಾಗಿದ್ದರೆ, ಅಶಿಸ್ತಿನಿಂದ ಕೂಡಿದ್ದರೆ ಸ್ಪೀಕರ್ ಅವರನ್ನು ಅಶಿಸ್ತಿನ ಅಮಾನತುಗೊಳಿಸುವ ಮೂಲಕ ಶಿಕ್ಷಿಸಬಹುದು.
  11. ಸದನದಲ್ಲಿನ ಮಸೂದೆ ಹಣದ ಮಸೂದೆ ಎಂದು ನಿರ್ಧರಿಸುವ ಏಕಮೇವಾ ಅಧಿಕಾರವನ್ನು ಹೊಂದಿದ್ದಾರೆ. ಇದನ್ನು ಯಾವ ನ್ಯಾಯಾಲಯವು ಸಹ ಪ್ರಶ್ನಿಸುವಂತಿಲ್ಲ.
  12. ವಿಶ್ವಾಸಾರ್ಹತೆಯ ಗೊತ್ತುವಳಿ, ಮುಂದೂಡಿಕೆ, ಸೆನ್ಸಾರ್ ನಿಳುವಳಿಗಳು ಮುಂತಾದ ವಿವಿಧ ರೀತಿಯ ಗೊತ್ತುವಳಿ ಮತ್ತು ನಿರ್ಣಯಗಳನ್ನು ಅನುಮತಿಸುವ ಅಂತಿಮ ಮತ್ತು ಏಕೈಕ ಅಧಿಕಾರ ಸ್ಪೀಕರ್ ಹೊಂದಿದ್ದಾರೆ.
  13. ವಿಧಾನಸಭೆಯನ್ನು ವಿಸರ್ಜಿಸಿದ ನಂತರ ಲೋಕಸಭಾ ಸ್ಪೀಕರ್ ಹುದ್ದೆಯನ್ನ ಬಿಡುವುದಿಲ್ಲ. ಹೊಸದಾಗಿ ರೂಪುಗೊಂಡ ಸಭೆ ತನ್ನ ಮೊದಲ ಅದಿವೇಶನದಲ್ಲಿ ಹೊಸ ಸ್ಪೀಕರ್ ಅವರನ್ನು ಆಯ್ಕೆ ಮಾಡುವವರೆಗೂ ಅವರು ಹುದ್ದೆಯಲ್ಲಿರುತ್ತಾರೆ.

 

ಲೋಕಸಭೆಯ ಸ್ಪೀಕರ್ ಹುದ್ದೆಯ ಅನರ್ಹತೆ

  1. ಸಂಸತ್ತಿನ ಸದಸ್ಯತ್ವಕ್ಕೆ ಚ್ಯುತಿ ಬಂದರೆ
  2. ಡೆಪ್ಯುಟಿ ಸ್ಪೀಕರ್’ಗೆ ರಾಜೀನಾಮೆ ನೀಡಿದರೆ
  3. ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ.
  4. ಅಸ್ಪಷ್ಟ ಮನಸ್ಸಿನವರಾಗಿದ್ದರೆ ಮತ್ತು ಅದನ್ನೂ ನ್ಯಾಯಾಲಯವು ಘೋಷಿಸಿದರೆ.
  5. ನಿರ್ವಿವಾದ ದಿವಾಳಿಯೆಂದು ಘೋಷಿಸಿದರೆ.
  6. ಭಾರತದ ಪೌರತ್ವ ಕಳೆದುಕೊಂಡರೆ
  7. ಲೋಕಸಭೆ ಸದಸ್ಯರಿಂದ ನಿರ್ಣಯ ಅಂಗೀಕೃತವಾದರೆ ಅವರನ್ನು ಸ್ಪೀಕರ್ ಹುದ್ದೆಯಿಂದ ವಜಾಗೊಳಿಸಬಹುದು

 

ಸ್ಪೀಕರ್ ಮತ್ತು ಸಮಿತಿಗಳು

  1. ಸದನದ ಸಮಿತಿಗಳು ಸ್ಪೀಕರ್’ನ ಒಟ್ಟಾರೆ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತವೆ.
  2. ಎಲ್ಲಾ ಸಂಸದೀಯ ಸಮಿತಿಗಳ ಅಧ್ಯಕ್ಷರನ್ನು ನಾಮಕರಣ ಮಾಡುತ್ತಾರೆ.
  3. ಸಮಿತಿಗಳ ಕಾರ್ಯ ವಿಧಾನದ ಯಾವುದೇ ಸಮಸ್ಯೆಗಳಿಗೆ ನಿರ್ದೇಶನ ನೀಡುವರು
  4. ವ್ಯವಹಾರ ಸಲಹಾ ಸಮಿತಿ, ಸಾಮಾನ್ಯ ಉದ್ದೇಶಗಳ ಸಮಿತಿ ಮತ್ತು ನಿಯಮಗಳ ಸಮಿತಿಯಂತಹ ಸಮಿತಿಗಳು ನೇರವಾಗಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತವೆ.

Sources: the Hindu.

 

ವಿಷಯ: ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು

ಕೇಂದ್ರವು MPLAD ಯೋಜನೆಯನ್ನು ಅಮಾನತುಗೊಳಿಸುವ ಹಕ್ಕನ್ನು ಹೊಂದಿದೆ : ಬಾಂಬೆ ಉಚ್ಚನ್ಯಾಯಾಲಯ


ಸಂದರ್ಭ

“ಈ ಯೋಜನೆಯನ್ನು ಸ್ಥಗಿತಗೊಳಿಸಿ ಇದರ ನಿಧಿಯನ್ನು ಕೋವಿಡ್-19 ಎದುರಿಸಲು ವಿನಿಯೋಗಿಸುವ ಅಧಿಕಾರ ಕೇಂದ್ರ ಸರ್ಕಾರ ಹೊಂದಿದೆ. ಕೋವಿಡ್-19 ಒಂದು ವಿಪತ್ತಾಗಿದ್ದು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಆಶ್ರಯಿಸಬೇಕಾಗಿತ್ತು. ಇದನ್ನು ಪರಿಶೀಲಿಸುವ ಅಧಿಕಾರ ಕೇಂದ್ರದ ಬಳಿಯಿದೆ” ಎಂದು ಇತ್ತೀಚಿಗೆ ಬಾಂಬೆ ಹೈಕೋರ್ಟ್ ತೀರ್ಪುನೀಡಿತು.

 

ಇಲ್ಲಿನ ಸಮಸ್ಯೆ

ಈ ವರ್ಷದ ಏಪ್ರಿಲ್‌ನಲ್ಲಿ MPLAD ಯೋಜನೆಯ ಸದಸ್ಯರನ್ನು ಅಮಾನತುಗೊಳಿಸಲು ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸಿತು . ಇದರ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು.

 

MPLAD ಯೋಜನೆ ಕುರಿತು

  1. ಈ ಯೋಜನೆಯನ್ನು1993 ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಯಿತು.
  2. ಇದು ಭಾರತ ಸರ್ಕಾರದಿಂದ ಸಂಪೂರ್ಣವಾಗಿ ಧನಸಹಾಯ ಪಡೆದ ಯೋಜನೆಯಾಗಿದೆ.
  3. ಸಂಸತ್ತಿನ ಸದಸ್ಯರು ಮತಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ವರ್ಷ ರೂ. 5 ಕೋಟಿ ಅನುದಾನ ಪಡೆಯುವರು
  4. ಈ ನಿಧಿ/ಅನುದಾನವನ್ನು ಸಂಸತ್ತಿನ ಸದಸ್ಯರು ಮತಕ್ಷೇತ್ರದ ಅಭಿವೃದ್ಧಿಗೆ , ಮೂಲಸೌಕರ್ಯ ನಿರ್ಮಾಣಕ್ಕೆ ಸದ್ವಿನಿಯೋಗ ಮಾಡಲು ಬಳಸಬಹುದಾಗಿದೆ.

 

  1. ವಿಶೇಷ ಗಮನ
    1. ಸಂಸತ್ತಿನ ಸದಸ್ಯರು ತಮ್ಮ ಮತಕ್ಷೆತ್ರದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಕ್ರಮವಾಗಿ ಕನಿಷ್ಠ ಶೇ 15ರಷ್ಟು ಮತ್ತು ಶೇ 7.5ರಷ್ಟು ವಿನಿಯೋಗಿಸಬೇಕು.
    2. ಬುಡಕಟ್ಟು ಜನರ ಸುಧಾರಣೆಗಾಗಿ ಟ್ರಸ್ಟ್‌ಗಳು ಮತ್ತು ಸಂಘಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯೋಜನೆಯ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿದ ಷರತ್ತುಗಳಿಗನುಗುಣವಾಗಿ 75 ಲಕ್ಷ ರೂ ವಿನಿಯೋಗಿಸಬೇಕು.
  2. ನಿಧಿಯ ಬಿಡುಗಡೆ
    1. ಅನುದಾನದ ರೂಪದಲ್ಲಿ ನೇರವಾಗಿ ಜಿಲ್ಲಾಧಿಕಾರಿಗೆ ಬಿಡುಗಡೆ ಮಾಡಲಾಗುವುದು
    2. ಈ ಅನುದಾನ ಮುಂದಿನ ವರ್ಷಕ್ಕೆ ವರ್ಗಾವಣೆಯಾಗುವ (Non-Lapsable) ಲಕ್ಷಣ ಹೊಂದಿವೆ
    3. ಈ ಯೋಜನೆಯಡಿ ಸಂಸತ್ತಿನ ಸದಸ್ಯರು ಸಲಹಾತ್ಮಕ ಕಾರ್ಯ ರೂಪವನ್ನು ಹೊಂದಿದ್ದಾರೆ.
    4. ಪ್ರತಿ ವರ್ಷ ಜಿಲ್ಲೆಯಲ್ಲಿ ಕನಿಷ್ಠ 10% ಯೋಜನೆಗಳನ್ನು ಜಿಲ್ಲಾ ಪ್ರಾಧಿಕಾರ ಪರಿಶೀಲಿಸಬೇಕು.
    5. ಕಾರ್ಯದ ಅರ್ಹತೆಯನ್ನು ಪರೀಕ್ಷಿಸಲು, ನಿಧಿಯನ್ನು ಮಂಜೂರು ಮಾಡಲು ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿಗಳನ್ನು ಆಯ್ಕೆ ಮಾಡಲು, ಮೇಲ್ವಿಚಾರಣೆ ನಡೆಸಲು ಜಿಲ್ಲಾ ಪ್ರಾಧಿಕಾರಕ್ಕೆ ಅಧಿಕಾರವಿದೆ

 

ನಿಧಿಯ ವಿನಿಯೋಗದ  ಶಿಫಾರಸ್ಸುಗಳು

  1. ಲೋಕಸಭೆಯ ಚುನಾಯಿತ ಸದಸ್ಯರು ಆಯಾ ಮತಕ್ಷೇತ್ರಗಳ ಅಭಿವೃದ್ಧಿಗೆ ನಿಧಿಯನ್ನು ಬಳಸಬಹುದು.
  2. ರಾಜ್ಯಸಭೆಯ ಚುನಾಯಿತ ಸದಸ್ಯರು ತಾವು ಚುನಾಯಿತರಾದ ರಾಜ್ಯದ ಯಾವುದಾದರೂ ಮತಕ್ಷೇತ್ರದಲ್ಲಿ ಬಳಕೆ ಮಾಡಬಹುದು.
  3. ಲೋಕಸಭೆ ಮತ್ತು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ದೇಶದಲ್ಲಿ ಯಾವುದೇ ಮತಕ್ಷೇತ್ರದಲ್ಲಿ ಕಾರ್ಯಗಳ ಅನುಷ್ಠಾನಕ್ಕೆ ಬಳಕೆ ಮಾಡಬಹುದು

Sources: Times of India.

 

ವಿಷಯ : ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು

ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (1968)


ಸಂದರ್ಭ

ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯನ್ನು ವಿಸ್ತರಿಸಿತು. ಈ ಕಾಯ್ದೆ ಅಡಿಯಲ್ಲಿರುವ ಎಲ್ಲಾ ಇಲಾಖೆ ಮತ್ತು ನಿಗಮಗಳಲ್ಲಿನ ಮುಷ್ಕರಗಳನ್ನು ಇನ್ನೂ ಆರು ತಿಂಗಳ ಅವಧಿಗೆ ನಿಷೇಧಿಸಿದೆ.

 

ಕಾಯ್ದೆ ಕುರಿತು

  1. ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ (Esma) ಭಾರತದ ಸಂಸತ್ತಿನ ಒಂದು ಕ್ರಮವಾಗಿದೆ.
  2. ಉದ್ದೇಶ :
    1. ಕೆಲವು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ರಚಿಸಲಾಯಿತು
    2. ಈ ಸೇವೆಗಳ ವಿತರಣೆ ಅಡಚಣೆಯಾದರೆ ಜನರ ನಿತ್ಯ ಜೀವನದ ಮೇಲೆ ಪರಿಣಾಮ ಉಂಟಾಗುವುದು
  3. ಇವುಗಳಲ್ಲಿ ಸಾರ್ವಜನಿಕ ಸಾರಿಗೆ (ಬಸ್ ಸೇವೆಗಳು), ಆರೋಗ್ಯ ಸೇವೆಗಳು (ವೈದ್ಯರು ಮತ್ತು ಆಸ್ಪತ್ರೆಗಳು) ಸೇರಿವೆ.
  4. ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ ವಾರಂಟ್ ಇಲ್ಲದೆ ಬಂಧಿಸುವ ಹಕ್ಕನ್ನು ಎಸ್ಮಾ ಪೊಲೀಸರಿಗೆ ನೀಡುತ್ತದೆ.

 

ಅನುಷ್ಠಾನ

  1. ಇದು ಭಾರತದ ಸಂಸತ್ತಿನ 7ನೇ ಅನುಸೂಚಿಯ ಸಮವರ್ತಿ ಪಟ್ಟಿಯ ಅಡಿಯಲ್ಲಿ ಭಾರತದ ಸಂಸತ್ತು ಈ ಕಾನೂನನ್ನು ರಚಿಸಿದೆ.
  2. ಇದು ಅತ್ಯಂತ ಶಕ್ತಿಯುತವಾದ ಕಾನೂನಾಗಿದ್ದರೂ, ಸಂಪೂರ್ಣವಾಗಿ ರಾಜ್ಯ ಸರ್ಕಾರದ ವಿವೇಚನೆಯ ಮೇಲೆ ನಿಂತಿದೆ.
  3. ಭಾರತದ ಒಕ್ಕೂಟದಲ್ಲಿರುವ ಪ್ರತಿಯೊಂದು ರಾಜ್ಯವು ಪ್ರತ್ಯೇಕ ರಾಜ್ಯ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು ಹೊಂದಿವೆ.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ಮೆಗಾ ಫುಡ್ ಪಾರ್ಕ್


ಸಂದರ್ಭ:

ಮೆಗಾ ಫುಡ್ ಪಾರ್ಕನ್ನು ಪಂಜಾಬ್‌ನಲ್ಲಿ ಉದ್ಘಾಟಿಸಲಾಯಿತು.

 

ಮೆಗಾ ಫುಡ್ ಪಾರ್ಕ್ಸ್ ಯೋಜನೆ ಕುರಿತು:

  1. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು 2008 ರಿಂದ ದೇಶದಲ್ಲಿ ಮೆಗಾ ಫುಡ್ ಪಾರ್ಕ್ ಯೋಜನೆಯನ್ನು ಜಾರಿಗೊಳಿಸಿದೆ.
  2. ರೈತರು, ಸಂಸ್ಕಾರಣಾ ಘಟಕ’ಗಳು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಒಟ್ಟುಗೂಡಿಸುವ ಮೂಲಕ ಕೃಷಿ ಉತ್ಪಾದನೆಯನ್ನು ಮಾರುಕಟ್ಟೆಗೆ ಸಂಪರ್ಕಿಸುವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಗುರಿ ಹೊಂದಿದೆ.
  3. ಧನಸಹಾಯ: ಎಮ್‌ಎಫ್‌ಪಿ ಸ್ಥಾಪಿಸಲು ಗರಿಷ್ಠ 50 ಕೋಟಿ ರೂ ಅನುದಾನವನ್ನು ನೀಡಲಾಗುತ್ತದೆ, ಕನಿಷ್ಠ 50 ಎಕರೆ ಭೂಮಿಯಲ್ಲಿ, ಒಟ್ಟು ಯೋಜನಾ ವೆಚ್ಚದ ಕೇವಲ 50% ಕೊಡುಗೆಯನ್ನು ನೀಡಲಾಗುತ್ತದೆ.

 

ಮಹತ್ವ

  1. ಇವುಗಳು ಸಂಸ್ಕರಣಾ ಕ್ಷೇತ್ರಕ್ಕೆ ಮೌಲ್ಯವನ್ನು ಹೆಚ್ಚಿಸುತ್ತವೆ
  2. ಸರಬರಾಜು ಸರಪಳಿಯ ಪ್ರತಿ ಹಂತದಲ್ಲೂ ಬೆಳೆಗಳ ಮೇಲೆ ನಿರ್ದಿಷ್ಟ ಗಮನಹರಿಸಿ ಆಹಾರ ಅಪವ್ಯಯವನ್ನುಕಡಿಮೆ ಮಾಡುವ ಉದ್ದೇಶವಿದೆ.

food_park

 

ಅನುಷ್ಠಾನ:

ಕಂಪೆನಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಔದ್ಯೋಗಿಕ ಸಂಸ್ಥೆ ವಿಶೇಷ ಉದ್ದೇಶದ ವೇದಿಕೆ (SPV)) ಯಾಗಿ ಅನುಷ್ಠಾನಗೊಳಿಸಿದೆ.

ಮೆಗಾ ಫುಡ್ ಪಾರ್ಕ್ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ, ರಾಜ್ಯ ಸರ್ಕಾರಿ ಘಟಕಗಳು ಮತ್ತು ಸಹಕಾರಿ ಸಂಸ್ಥೆಗಳು ಪ್ರತ್ಯೇಕ ಎಸ್‌ಪಿವಿ ರಚಿಸುವ ಅಗತ್ಯವಿಲ್ಲ

ಯೋಜನೆಯ ಮಾರ್ಗಸೂಚಿ ಮತ್ತು ಷರತ್ತುಗಳಿಗನುಗುಣವಾಗಿ ಅನುದಾನವನ್ನು SPVಗಳಿಗೆ ಬಿಡುಗಡೆ ಮಾಡಲಾಗುತ್ತದೆ.

Sources: PIB.

 

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿರ್ಬಂಧ


ಸಂದರ್ಭ:

ಜೆ ಮತ್ತು ಕೆ ಆಡಳಿತವು ಗಂದೆರ್ಬಲ್ & ಉಧಂಪುರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಭಾಗಕ್ಕೆ ಅಂತರ್ಜಾಲದ ಬಳಕೆಯ ನಿರ್ಬಂಧನವನ್ನು ವಿಸ್ತರಿಸಿತು. ಇತ್ತೀಚೆಗೆ ಈ ಬಗ್ಗೆ ಚರ್ಚಿಸಲು ಮಾಹಿತಿ & ತಂತ್ರಜ್ಞಾನದ ಸ್ಥಾಯಿ ಸಮಿತಿ ಸಭೆ ಸೇರಿತ್ತು.

 

ಇಲ್ಲಿನ ಸಮಸ್ಯೆ

  1. ನ್ಯಾಯಾಂಗ ಅನುರಾಧಾ ಭಾಸಿನ್ ಪ್ರಕರಣದಲ್ಲಿ “ಅಂತರ್ಜಾಲದ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಲಾಗದು” ಎಂದು ತೀರ್ಮಾನ ನೀಡಿತ್ತು.
  2. ಈ ಆದೇಶದ ಮೇರೆಗೆ ಕೇಂದ್ರಸರ್ಕಾರವು ಟೆಲಿಕಾಂ ಸೇವಾ ಸ್ಥಗಿತತೆಯ ನಿಯಮಗಳನ್ನು (2017) ತಿದ್ದುಪಡಿಗೊಳಪಡಿಸಿ ಗರಿಷ್ಠ 15 ದಿನಗಳವರೆಗೆ ಸ್ಥಗಿತಗೊಳಿಸುವ ನಿಬಂಧನೆಯನ್ನು ಸೇರಿಸಿತು.
  3. ಅಲ್ಲದೆ ನ್ಯಾಯಾಂಗ CrPCಯ ಸೆಕ್ಷೆನ್ 144ರ ಅಡಿಯಲ್ಲಿನ ಎಲ್ಲಾ ನಿರ್ಬಂಧಗಳನ್ನು ಮತ್ತು ಜೆ&ಕೆ ಯಲ್ಲಿ ಅಂತರ್ಜಾಲದ ಸ್ಥಗಿತತೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕಾಗಿದೆ  ಎಂದಿದೆ. ಮುಂದುವರಿದು, ಅಂತರ್ಜಾಲದ ಸೇವೆಯನ್ನು ಸ್ಥಗಿತಗೊಳಿಸುವ ರೀತಿ, ಸ್ಥಗಿತಗೊಳಿಸಿದಾಗ ನಾಗರೀಕ ಹಕ್ಕುಗಳ ರಕ್ಷಣೆ ಕುರಿತು ಚೌಕಟ್ಟನ್ನು ಸೂಚಿಸಿತ್ತು.

 

ನ್ಯಾಯಾಲಯ ಮಾಡಿದ ವಿಶ್ಲೇಷಣೆ:

  1. ಅಂತರ್ಜಾಲದ ಹಕ್ಕು ಭಾರತೀಯ ಸಂವಿಧಾನದ ವಿಧಿ 19 ರಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಸೇರಿಸಲಾಗಿರುವ ಮೂಲಭೂತ ಹಕ್ಕಾಗಿದೆ. ಇದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ.
  2. ನಿರಂಕುಶ ಅಧಿಕಾರದ ನೆಲೆಯಲ್ಲಿ ಮೂಲಭೂತ ಹಕ್ಕುಗಳನ್ನು ಮೇಲೆ ಈ ನಿರ್ಬಂಧಗಳನ್ನು ವಿಧಿಸಲಾಗದು. ಬೇರೆ ಯಾವುದೇ ಆಯ್ಕೆಗಳಿಲ್ಲದಿದ್ದರೆ ಮಾತ್ರ ಕೊನೆಯ ಮಾರ್ಗವಾಗಿ ಈ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು.
  3. ಅಂತರ್ಜಾಲದ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸುವುದು ಟೆಲಿಕಾಂ ನಿಯಮಗಳ ಉಲ್ಲಂಘನೆಯಾಗಿದೆ.

 

ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಯಾವ ವಿಧಾನವನ್ನು ಅನುಸರಿಸುತ್ತದೆ?

2017 ಕ್ಕಿಂತ ಮೊದಲು, CrPCಯ ಸೆಕ್ಷನ್ 14 ರ ಅಡಿಯಲ್ಲಿ ಅಂತರ್ಜಾಲದ ನಿರ್ಬಂಧನಕ್ಕೆ ಆದೇಶ ನೀಡಲಾಯಿತು .

2017 ರಲ್ಲಿ, ಕೇಂದ್ರ ಸರ್ಕಾರ ಟೆಲಿಗ್ರಾಫ್ ಕಾಯ್ದೆ ಅಡಿಯ ದೂರವಾಣಿ ಸೇವೆಗಳ ತಾತ್ಕಾಲಿಕ ನಿರ್ಬಂಧನ ನಿಯಮಗಳ ನೆಲೆಯಲ್ಲಿ ಸ್ಥಗಿತಗೊಳಿಸಬಹುದು. ಈ ನಿಯಮಗಳು ತಮ್ಮ ಅಧಿಕೃತತೆಯನ್ನು ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 5 (2) ರಿಂದ ಪಡೆದುಕೊಳ್ಳುತ್ತವೆ, ಇದು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತಾಸಕ್ತಿಗಳಲ್ಲಿ” ಸಂದೇಶಗಳ ಪ್ರತಿಬಂಧದ ಬಗ್ಗೆ ಮಾತನಾಡುತ್ತದೆ.

2017 ರ ನಿಯಮಗಳ ಹೊರತಾಗಿಯೂ, ಸರ್ಕಾರವು ಅಧಿಕವಾಗಿ ಸೆಕ್ಷನ್ 144 ರ ಅಡಿಯಲ್ಲಿ ವಿಶಾಲ ಅಧಿಕಾರವನ್ನು ಬಳಸಿದೆ.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


MQ-9B ನಿರಾಯುಧ ಡ್ರೋನ್’ಗಳು ಸಾಗರದ ಪೋಷಕರು

  1. ಭಾರತೀಯ ನೌಕಾಪಡೆ US ನಿಂದ ಎರಡು MQ-9 ಬಿ ಸಾಗರ ರಕ್ಷಕ ನಿರಾಯುಧ ಡ್ರೋನ್‌ಗಳನ್ನು ಗುತ್ತಿಗೆಗೆ ಪಡೆದಿದೆ.
  2. ಈ ಡ್ರೋನ್’ಗಳು 4೦,೦೦೦ ಅಡಿ ಎತ್ತರದಲ್ಲಿ 40 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ
  3. 3600 ಸಾಗರಿಕ ಕಣ್ಗಾವಲಿನ ರಡಾರ್ ಮತ್ತು ಅಗತ್ಯದ ಮೇರೆಗೆ ಸಾಗರಿಕ ಮೇಲ್ಮೈ ಕಾರ್ಯಾಚರಣೆಯ ಸೌಲಭ್ಯವನ್ನು ಹೊಂದಿದೆ
  4. ಇತ್ತೀಚೆಗೆ ಸರ್ಕಾರವು ‘ರಕ್ಷಣಾ ಸಾಧನ ಖರೀದಿ ಪ್ರಕ್ರಿಯೆ’ (DAP 2020) ಯನ್ನು ಜಾರಿಗೆ ತಂದಿದೆ. ಈ ನೀತಿಯ ಮೂಲಕ ಭಾರತೀಯ ಸೇನಾ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಗುತ್ತಿಗೆ ಸೌಲಭ್ಯವನ್ನು ಅಳವಡಿಸಲಾಗಿದೆ.

mq_9b

AUSINDEX.

  1. ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ನೌಕಾ ಕಾರ್ಯಾಚರಣೆ AUSINDEX ಗೆ ಸೇರಲು ಫ್ರಾನ್ಸ್ ಉತ್ಸುಕವಾಗಿದೆ.
  2. ಆಸ್ಟ್ರೇಲಿಯ-ಭಾರತ ಕಾರ್ಯಾಚರಣೆ – ಭಾರತೀಯ ನೌಕಾಪಡೆ ಮತ್ತು ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ನಡುವಿನ ದ್ವಿಪಕ್ಷೀಯ ಕಡಲ ಕಾರ್ಯಾಚರನೆಯಾಗಿದೆ.

 

ಜರ್ಮನಿಯೊಂದಿಗೆ ಭೂತಾನ್ ಔಪಚಾರಿಕ ಸಂಬಂಧವನ್ನು ಸಾಧಿಸಿತು

  1. ಭೂತಾನ್ ಜರ್ಮನಿಯೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಸ್ಥಾಪಿಸಿದೆ ಎಂದು ಘೋಷಿಸಿದೆ. ಆ ಮೂಲಕ ಯುರೋಪಿಯನ್ ಒಕ್ಕೂಟದ 53 ನಿರ್ಬಂಧಿತ ರಾಜ್ಯಗಳ ಸಂಖ್ಯೆಯನ್ನು ಹೆಚ್ಚಿಸಿದೆ.
  2. ಈ ಏಳು ವರ್ಷಗಳಲ್ಲಿ ಭೂತಾನ್’ನ ಮೊದಲ ರಾಜತಾಂತ್ರಿಕ ಅಭಿಯಾನವಾಗಿದೆ.

ಹಿನ್ನೆಲೆ:

  1. 1949ರಲ್ಲಿ ಭೂತಾನ್ ಭಾರತದೊಂದಿಗೆ ಮೊದಲ ಬಾರಿಗೆ ಸ್ನೇಹ ಒಪ್ಪಂದಕ್ಕೆ ಸಹಿ ಹಾಕಿತು. ಇದು ಎಲ್ಲಾ ವಿದೇಶಿ ನೀತಿ ವಿಷಯಗಳ ಬಗ್ಗೆ ಉಭಯ ದೇಶಗಳನ್ನು ನಿಕಟವಾಗಿ ತೊಡಗಿಸಿಕೊಂಡಿದೆ, ಭೂತಾನ್ ಇತರ ದೇಶಗಳೊಂದಿಗೆ ಸಂಬಂಧವನ್ನು ಸ್ಥಾಪಿಸುವ ಬಗ್ಗೆ ಐತಿಹಾಸಿಕವಾಗಿ ಎಚ್ಚರಿಕೆವಹಿಸಿದೆ.
  2. 2007 ರವರೆಗೆ, ಭೂತಾನ್ ತನ್ನ ಮೊದಲ ಚುನಾವಣೆಯನ್ನು ನಡೆಸಿದಾಗ, ಕೇವಲ 22 ದೇಶಗಳೊಂದಿಗೆ ಔಪಚಾರಿಕ ಸಂಬಂಧವನ್ನು ಹೊಂದಿತ್ತು, ಇದರಲ್ಲಿ ಜಪಾನ್, ಆಸ್ಟ್ರೇಲಿಯಾ ಮತ್ತು ಹಲವಾರು ನಾರ್ಡಿಕ್ ದೇಶಗಳು ಮುಂತಾದ ದಾನಿ ರಾಷ್ಟ್ರಗಳು ಮುಖ್ಯವಾಗಿವೆ.
  3. UNSCಯಲ್ಲಿ ಶಾಶ್ವತ ಐವರು ಸದಸ್ಯರೊಂದಿಗೆ, ನಿರ್ದಿಷ್ಟವಾಗಿ ಯುಎಸ್ ಮತ್ತು ಚೀನಾದಿಂದ ಅನೇಕ ವಿನಂತಿಗಳ ಹೊರತಾಗಿಯೂ ಸಂಬಂಧವನ್ನು ನಿರಾಕರಿಸುವ ಧೃಡ ನಿರ್ಧಾರವನ್ನು ತೆಗೆದುಕೊಂಡಿತು .
  4. ಆದಾಗ್ಯೂ, 2008 ರಲ್ಲಿ ಪ್ರಧಾನಿ ಜಿಗ್ಮೆ ಥಿನ್ಲೆ ಆಯ್ಕೆಯಾದ ನಂತರ, ಭೂತಾನ್ ಸರ್ಕಾರವು ತನ್ನ ರಾಜತಾಂತ್ರಿಕ ಹಾದಿಯನ್ನು ವೇಗವಾಗಿ ಹೆಚ್ಚಿಸಿತು. ಐದು ವರ್ಷಗಳಲ್ಲಿ 31 ದೇಶಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು.

Bhutan

 

ಸಂವಿಧಾನದ ದಿನ ಎಂದರೇನು?

  1. ಪ್ರತಿ ವರ್ಷ ನವೆಂಬರ್ 26ನ್ನು ಸಂವಿಧಾನ ದಿನವೆಂದು ಆಚರಿಸಲಾಗುವುದು.
  2. ಈ ದಿನ ಸಂವಿಧಾನವನ್ನು ಅಂಗೀಕರಿಸಲಾಯಿತು.

Constitution_day

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos