Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.
1. What do you understand by ‘recurving of cyclones’? Discuss with recent examples and also focus the factors supporting such events. (250 words)
1. ಚಂಡಮಾರುತದ ಮರುಚಲನೆಯ ಅರ್ಥವೇನು? ಇತ್ತೀಚಿನ ಉದಾಹರಣೆಗಳ ಮೂಲಕ ಚರ್ಚಿಸಿ. ಈ ವಿದ್ಯಾಮಾನಗಳನ್ನು ಪ್ರಭಾವಿಸುವ ಅಂಶಗಳನ್ನು ಬರೆಯಿರಿ. (250 ಪದಗಳು)
Reference: The Hindu
ಪ್ರಶ್ನೆಯ ಹಿನ್ನೆಲೆ:
ಚಂಡಮಾರುತದ ಮರುಚಲನೆಯು ಮಾರುತಗಳ ಚಲನೆಯನ್ನು ಮುನ್ಸೂಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಶ್ನೆಯ ಆಶಯ
ಚಂಡಮಾರುತಗಳ ಮರುಚಲನೆಯ ಪಾತ್ರ
ಉತ್ತರದ ರಚನೆ
ಪೀಠಿಕೆ:
ಚಂಡಮಾರುತದ ಮರುಚಲನೆಯ ವ್ಯಾಖ್ಯಾನ ಕುರಿತು ಬರೆಯಿರಿ.
ಮುಖ್ಯ ಭಾಗ:
- ಅದರ ಮುಖ್ಯ ಲಕ್ಷಣ ಕುರಿತು ವಿವರಿಸಿ.
- ಬಲಮುಖ ತಿರುವು – ಪೂರ್ವಾಭಿಮುಖ ಚಲನೆ
- ಸ್ಥಳೀಯ ವಾಯುರಾಶಿಯ ಚಲನೆ ಮುಂತಾದವು
- ದಕ್ಷಿಣಗೋಳದಲ್ಲಿ ಚಂಡಮಾರುತಗಳು ಎಡದಿಂದ ಬಲಕ್ಕೆ ಮತ್ತು ಮರುಚಲನೆ ಅಭಿಮುಖವಾಗಿ ಚಲಿಸುವುದು. ಮಾನ್ಸೂನ್ ಕಾಲದಲ್ಲಿ ಚಂಡಮಾರುತಗಳು ಪಶ್ಚಿಮ ಪೆಸಿಫಿಕ್ ಸಾಗರದಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸಿ ಭಾರತಕ್ಕೆ ಮಳೆಯನ್ನು ತರುತ್ತವೆ.
- ಮರುಚಲನೆಯ ಕಾಲದಲ್ಲಿ ಮಳೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.
- ಒಖಿ ಚಂಡಮಾರುತವನ್ನು ಕೇಂದ್ರವಾಗಿಸಿ ಮರುಚಲನೆಯ ಪರಿಣಾಮ ಕುರಿತು ವಿವರಿಸಿ.
ಉಪಸಂಹಾರ:
ಮರುಚಲನೆಯ ಮಹತ್ವ ಕುರಿತು ಬರೆಯಿರಿ ಮತ್ತು ಪರಿಹಾರೋಪಾಯಗಳನ್ನು ಸೂಚಿಸಿ.
ಸಾಮಾನ್ಯ ಅಧ್ಯಯನ – 2
ವಿಷಯ: ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು
2. What explains India’s poor rank under the Global Hunger Index, and what are the solutions? And do you think focus on lack of availability of food as the main cause of hunger takes the attention away from ineffective human development policies in India? (250 words)
2. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಕಳಪೆ ಪ್ರದರ್ಶನಕ್ಕೆ ಕಾರಣವನ್ನು ವಿವರಿಸಿ. ಮತ್ತು ಪರಿಹಾರವನ್ನು ಸೂಚಿಸಿ. ಭಾರತದಲ್ಲಿ ಹಸಿವಿಗೆ ಆಹಾರದ ಲಭ್ಯತೆಯ ಕೊರತೆ ಮತ್ತು ಮಾನವಾಭಿವೃದ್ಧಿ ನೀತಿಯ ಅದಕ್ಷತೆ ಕಾರಣವೇ? ಅವಲೋಕಿಸಿ. (250 ಪದಗಳು)
Reference: The Hindu
ಪ್ರಶ್ನೆಯ ಆಶಯ
ಮಾನವಾಭಿವೃದ್ಧಿಯ ಅಗತ್ಯತೆ ಮತ್ತು ವೃದ್ಧಿಗೆ ಕ್ರಮಗಳು.
ಉತ್ತರದ ರಚನೆ
ಪೀಠಿಕೆ:
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುರಿತು ಬರೆಯಿರಿ.
- ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ‘ವಿಶ್ವದಲ್ಲಿ ಆಹಾರ ಭದ್ರತೆ ಮತ್ತು ಪೋಷಕಾಂಶದ ಸ್ಥಿತಿ-2020
- ಜಾಗತಿಕ ಹಸಿವಿನ ವರದಿ
ಭಾರತೀಯ ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆ ಕುರಿತು ಬರೆಯಿರಿ
ಮುಖ್ಯಭಾಗ:
ಭಾರತದಲ್ಲಿ ಹಸಿವಿಗೆ ಆಹಾರದ ಲಭ್ಯತೆಯ ಕೊರತೆಗೆ ಮುಖ್ಯ ಕಾರಣ ಎನ್ನುವುದನ್ನು ವಿವರಿಸಿ.
ಭಾರತದಲ್ಲಿ ಹಸಿವಿನ ಪ್ರಖರತೆ ಮಾನವಾಭಿವೃದ್ಧಿಯ ನೀತಿಗಳ ಅದಕ್ಷತೆಯನ್ನು ಮರೆಮಾಚಿಸಿದೆ ಎನ್ನುವುದನ್ನು ವಿವರಿಸಿ.
ಉಪಸಂಹಾರ:
ಪರಿಹಾರಗಳನ್ನು ಸೂಚಿಸಿ – ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾರ್ವತ್ರಿಕರಣ, ಗುಣಮಟ್ಟದ ಆಹಾರದ ವಿತರಣೆ, ಸಮುದಾಯ ಪಾಕ ಕೇಂದ್ರ ಮುಂತಾದವು
ಸಾಮಾನ್ಯ ಅಧ್ಯಯನ – 3
ವಿಷಯ : ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು
3. Explain the phenomenon of Blue tide? How does it affect the marine ecosystem of the country? Elaborate. (250 words)
3. ನೀಲಿ ಉಬ್ಬರವಿಳಿತ ಕುರಿತು ವಿವರಿಸಿ? ದೇಶದಲ್ಲಿನ ಸಾಗರಿಕ ಪರಿಸರ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮವನ್ನು ಚರ್ಚಿಸಿ. (250 ಪದಗಳು)
Reference: Indian Express
ಪ್ರಶ್ನೆಯ ಹಿನ್ನೆಲೆ
ಮುಂಬೈ ತೀರ ಪ್ರದೇಶದಲ್ಲಿ ಇತ್ತೀಚಿಗೆ ನೀಲಿ ಉಬ್ಬರವಿಳಿತದ ವಿದ್ಯಾಮಾನ ಗೋಚರವಾಗಿತ್ತು.
ಪಶ್ನೆಯ ಆಶಯ
ನೀಲಿ ಉಬ್ಬರವಿಳಿತದ ನಿರ್ಮಾಣ, ಅದು ಪರಿಸರದ ಮೇಲೆ ಉಂಟು ಮಾಡುವ ಪರಿಣಾಮ, ನಿಯಂತ್ರಿಸುವ ಕ್ರಮಗಳು
ಉತ್ತರದ ರಚನೆ
ಪೀಠಿಕೆ:
ನೀಲಿ ಉಬ್ಬರವಿಳಿತದ ವುದ್ಯಾಮಾನ ಕುರಿತು ಬರೆಯಿರಿ
ಮುಖ್ಯ ಭಾಗ:
ಸಾಮಾನ್ಯವಾಗಿ ಡೈನೋಫ್ಲಾಜೆಲೆಟ್‌ಗಳು ಎಂದು ಕರೆಯಲ್ಪಡುವ ಫೈಟೊಪ್ಲಾಂಕ್ಟನ್’ಗಳು ಪ್ರೋಟೀನ್‌ಗಳೊಂದಿಗೆ ರಾಸಾಯನಿಕ ಕ್ರಿಯೆ ನಡೆಸುವ ಮೂಲಕ ಬೆಳಕನ್ನು ಉತ್ಪಾದಿಸಿದಾಗ ಈ ವಿದ್ಯಾಮಾನ ಗೋಚರವಾಗುವುದು. ಅಲೆಗಳು ಈ ಏಕಕೋಶೀಯ ಸೂಕ್ಷ್ಮಜೀವಿಗಳನ್ನು ಪಲ್ಲಟಗೊಳಿಸುವ ಮೂಲಕ ನೀಲಿ ಬೆಳಕನ್ನು ಎಲ್ಲೆಡೆ ಹರಡುತ್ತವೆ.
ಇದು ಸಂಭವಿಸಲು ಮುಖ್ಯ ಅಂಶ – ಯುಟ್ರೊಫಿಕೇಶನ್ – ನೀರಿನಲ್ಲಿ ಆಮ್ಲಜನಕವನ್ನು ಕಡಿತಗೊಳಿಸುವುದು & ಫೈಟೊಪ್ಲಾಂಕ್ಟನ್‌ಗಳನ್ನು ಬಹಳ ಪ್ರಬಲಗೊಳಿಸುವುದು.
ಸಾಗರಿಕ ಪರಿಸರ ವ್ಯವಸ್ಥೆಯ ಮೇಲೆ ಇವುಗಳ ಪರಿಣಾಮವನ್ನು ವಿವರಿಸಿ
ಉಪಸಂಹಾರ:
ಪರಿಹಾರೋಪಾಯಗಳನ್ನು ಬರೆಯಿರಿ ಮತ್ತು ಮುಂದಿನ ಕ್ರಮಗಳನ್ನು ಸೂಚಿಸಿ.
ವಿಷಯ: GS-2: ಭಾರತದ ಹಿತಾಸಕ್ತಿಗೆ ಪ್ರಭಾವ ಬೀರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಂಘಗಳು ಮತ್ತು ಒಪ್ಪಂದಗಳು
GS-3: ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು
4. What has been India’s experience with FTAs in the past? Why are FTAs not working as expected for India? What are the steps taken by India to strengthen its existing FTAs? Explain. (250 words)
4. ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತದ ಅನುಭವವನ್ನು ಕುರಿತು ಬರೆಯಿರಿ. ಭಾರತ ಈ ಒಪ್ಪಂದಗಳಲ್ಲಿ ನಿರೀಕ್ಷಿಸಿದ ಯಶಸ್ಸುಗಳಿಸದಿರಲು ಕಾರಣವೇನು? ಅಸ್ತಿತ್ವದಲ್ಲಿರುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಬಲಪಡಿಸಲು ಕ್ರಮಗಳನ್ನು ಸೂಚಿಸಿ.(250 ಪದಗಳು)
Reference: Financial Express
ಪ್ರಶ್ನೆಯ ಹಿನ್ನೆಲೆ:
ದಶಕಗಳ ಒಡಂಬಡಿಕೆಯ ಮೇರೆಗೆ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ (RCEP) ಅಸ್ತಿತ್ವಕ್ಕೆ ಬಂದಿತು. ಇದು ವಿಶ್ವದ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಈ ಒಪ್ಪಂದದಿಂದ ಭಾರತ ಹೊರನಡೆದಿದೆ.
ಪ್ರಶ್ನೆಯ ಆಶಯ
ಮುಕ್ತ ವ್ಯಾಪಾರ ಒಪ್ಪಂದದ ಪ್ರಾಮುಖ್ಯತೆ, ಸಮಸ್ಯೆ ಮತ್ತು ಪರಿಹಾರೋಪಾಯ.
ಉತ್ತರದ ರಚನೆ
ಪೀಠಿಕೆ:
ಮುಕ್ತ ವ್ಯಾಪಾರ ಒಪ್ಪಂದವನ್ನು ಚರ್ಚಿಸಿ.
ಮುಖ್ಯ ಭಾಗ:
ಮುಕ್ತ ವ್ಯಾಪಾರ ಒಪ್ಪಂದದ ಪ್ರಾಮುಖ್ಯತೆಯನ್ನು ಕುರಿತು ಬರೆಯಿರಿ
RCEP ಪ್ರಕರಣದ ನೆಲೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಭಾರತದ ಅನುಭವವನ್ನು ವಿವರಿಸಿ.
ಮುಕ್ತ ವ್ಯಾಪಾರ ಒಪ್ಪಂದಗಳನ್ನು ಬಲಪಡಿಸಲು ಕ್ರಮಗಳನ್ನು ಚರ್ಚಿಸಿ
ಉಪಸಂಹಾರ:
ಮುಂದಿನ ಮಾರ್ಗ ಕುರಿತು ಬರೆಯಿರಿ
ವಿಷಯ: ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು
5. Discuss the importance of Sustainable peat land management and explain in what way it has the potential to prevent future pandemics. (250 words)
5. ಸುಸ್ಥಿರ ಪೀಟ್ ಲ್ಯಾಂಡ್ ನಿರ್ವಹಣೆಯ ಪ್ರಾಮುಖ್ಯತೆ ಕುರಿತು ಚರ್ಚಿಸಿ. ಮತ್ತು ಮುಂಬರುವ ಸಾಂಕ್ರಾಮಿಕತೆಯನ್ನು ತಡೆಯುವ ಸಾಮರ್ಥ್ಯ ವಿವರಿಸಿ. (250 ಪದಗಳು)
Reference: Down to Earth
ಪ್ರಶ್ನೆಯ ಆಶಯ:
ತೇವ ಪ್ರದೇಶಗಳ ಮಹತ್ವ ಮತ್ತು ಆರೋಗ್ಯದ ಮೇಲೆ ಅದು ಬೀರುವ ಪ್ರಭಾವ
ಉತ್ತರದ ರಚನೆ
ಪೀಠಿಕೆ:
ತೇವ ಪ್ರದೇಶ ಅಥವಾ ಪೀಟ್ ಲ್ಯಾಂಡ್ ಕುರಿತು ಬರೆಯಿರಿ
ಮುಖ್ಯಭಾಗ:
ಪೀಟ್ ಲ್ಯಾಂಡ್’ ಪ್ರಾಮುಖ್ಯತೆ ಕುರಿತು ಬರೆಯಿರಿ
- ರೋಗಾಣುಗಳ ಬಂದರು
- ಪ್ರಾಣಿ ಜನ್ಯ ರೋಗಗಳ ವಿಸ್ತರಣೆ
- ಜೀವ ವೈವಿಧ್ಯತೆಯೊಂದಿಗೆ ಸಂಬಂಧ
ಅಂಕಣದಲ್ಲಿನ ಪ್ರಕರಣದ ನೆಲೆಯಲ್ಲಿ ನಿರ್ವಹಣೆಯ ಕುರಿತು ವಿವರಿಸಿ.
ಮುಂಬರುವ ಸಾಂಕ್ರಾಮಿಕಗಳ ನಿಯಂತ್ರಣದ ಸಾಮರ್ಥ್ಯ ಕುರಿತು ಚರ್ಚಿಸಿ.
ಉಪಸಂಹಾರ:
ಪೀಟ್ ಲ್ಯಾಂಡ್ ನಿರ್ವಹಣೆಯ ಕ್ರಮಗಳನ್ನು ಕುರಿತು ಬರೆಯಿರಿ
ವಿಷಯ : ಭಾರತದ ಪ್ರಮುಖ ಬೆಳೆಗಳು – ದೇಶದ ವಿವಿಧ ಭಾಗದಲ್ಲಿರುವ ಬೆಳೆಗಳ ಮಾದರಿ, ವಿವಿಧ ರೀತಿಯ ನೀರಾವರಿ ಪದ್ಧತಿಗಳು, ದಾಸ್ತಾನು, ಸಾಗಾಣಿಕೆ, ಕೃಷಿ ಉತ್ಪಾದನೆಯ ಮಾರುಕಟ್ಟೆ ಮತ್ತು ಸಂಬಂಧಿತ ಸಮಸ್ಯೆಗಳು; ರೈತರಿಗೆ ಪೂರಕವಾಗಿ ಇ-ತಂತ್ರಜ್ಞಾನ
6. India is the world’s biggest producers of jute, in this context discuss the potential of Jute industry while highlighting the issues before it and the reforms required to promote. (250 words)
6. ಭಾರತ ಸೆಣಬಿನ ಉತ್ಪಾದನೆಯಲ್ಲಿ ವಿಶ್ವದ ಅಗ್ರಜ. ಇದರ ಹಿನ್ನೆಲೆಯಲ್ಲಿ ಸೆಣಬಿನ ಕೈಗಾರಿಕೆಯ ಸಾಮರ್ಥ್ಯ ಕುರಿತು ಚರ್ಚಿಸಿ. ಈ ಕೈಗಾರಿಕೆ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವಶ್ಯಕವಾಗಿರುವ ಸುಧಾರಣೆಗಳ ಕುರಿತು ಬರೆಯಿರಿ. (250 ಪದಗಳು)
Reference: The Hindu
ಪ್ರಶ್ನೆಯ ಆಶಯ
ಭಾರತದಲ್ಲಿನ ಸೆಣಬು ಬೆಳೆಗಾರರು ಮತ್ತು ಕೈಗಾರಿಕೆಯ ಸಮಸ್ಯೆ ಮತ್ತು ಕ್ರಮಗಳು
ಉತ್ತರ ರಚನೆ
ಪೀಠಿಕೆ:
ಸೆಣಬು ಉತ್ಪಾದನೆಯಲ್ಲಿ ಭಾರತ ವಿಶ್ವದ ಅಗ್ರಜ. ಆದರೆ, ಅದರ ಬಳಕೆಗೆ ಅವಶ್ಯವಿರುವ ಉತ್ತೇಜನದ ಕೊರತೆಯನ್ನು ಕುರಿತು ಬರೆಯಿರಿ.
ಮುಖ್ಯಭಾಗ:
- ಸೆಣಬಿನ ಕೈಗಾರಿಕೆಯ ಪ್ರಾಮುಖ್ಯತೆ ಕುರಿತು ಬರೆಯಿರಿ
- ಭಾರತದಲ್ಲಿ ಸೆಣಬಿನ ಕೈಗಾರಿಕೆ ಎದುರಿಸುತ್ತಿರುವ ಸವಾಲುಗಳೇನು
- ಕಚ್ಚಾ ವಸ್ತುವಿನ ಕೊರತೆ
- ಹಿಂದುಳಿದ ಕೈಗಾರಿಕಾ ತಂತ್ರಜ್ಞಾನ ಇತ್ಯಾದಿ
- ದೇಶದಲ್ಲಿ ಸೆಣಬಿನ ಕೈಗಾರಿಕೆಯ ಸಾಮರ್ಥ್ಯ ಕುರಿತು ಬರೆಯಿರಿ
ಉಪಸಂಹಾರ:
ಮುಂದಿನ ಮಾರ್ಗಗಳ ಕುರಿತು ಬರೆಯಿರಿ
ಸಾಮಾನ್ಯ ಅಧ್ಯಯನ – 4
ವಿಷಯ: ನೈತಿಕತೆ ಮತ್ತು ಮಾನವ ಹಸ್ತಕ್ಷೇಪ – ಮಾನವನ ಚಟುವಟಿಕೆಯಲ್ಲಿ ನೈತಿಕತೆಯ ಪಾತ್ರ, ಸಾರ, ನಿರ್ಧಾರಕಗಳು ಮತ್ತು ಪರಿಣಾಮಗಳು; ನೈತಿಕತೆಯ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ
7. What is the main difference between psychological egoism and ethical egoism? Compare and contrast. (250 words)
7. ಮಾನಸಿಕ ಗರ್ವತೆ ಮತ್ತು ನೈತಿಕ ಗರ್ವತೆ ನಡುವಿನ ವ್ಯತ್ಯಾಸವನ್ನು ಬರೆಯಿರಿ. (250 ಪದಗಳು)
Reference: Ethics, Integrity and Aptitude
ಪ್ರಶ್ನೆಯ ಆಶಯ
ಗರ್ವದ ಮಹತ್ವ & ಪರಿಣಾಮವನ್ನು ಅರಿಯುವುದು
ಉತ್ತರದ ರಚನೆ
ಪೀಠಿಕೆ:
ಎರಡು ಪದಗಳ ವ್ಯಾಖ್ಯಾನವನ್ನು ಬರೆಯಿರಿ
ಮುಖ್ಯಭಾಗ:
ನೈತಿಕ ಗರ್ವತೆ :
- ಒಬ್ಬ ವ್ಯಕ್ತಿಗೆ ಯಾವುದು ಸೌಖ್ಯವೋ ಅದು ಸಮಾಜಕ್ಕೂ ಸೌಖ್ಯ
- ಜರ್ಮಿ ಬೆಂಥಾಂ ಈ ಪರಿಕಲ್ಪನೆಯನ್ನು ನೀಡಿದನು
- ಇದು ಉಪಯುಕ್ತವಾದಕ್ಕೆ ಮೂಲವಾಗಿದೆ
- ಇದು ವ್ಯಕ್ತಿಗತ ಘನತೆ, ಸ್ವಾತಂತ್ರ್ಯ ಮತ್ತು ಸಂತೋಷಕ್ಕೆ ಗಮನ ನೀಡುತ್ತದೆ
ಮಾನಸಿಕ ಗರ್ವತೆ
- ಮಾನವ ಸ್ವಾರ್ಥಿ ಮತ್ತು ಸ್ವ-ರಕ್ಷಣಾ ಕೇಂದ್ರಿ’ ಎಂಬ ನಿಲುವಿನ ಬುನಾದಿ
- ಥಾಮಸ್ ಹಾಬ್ ಈ ಪರಿಕಲ್ಪನೆಯನ್ನು ನೀಡಿದನು
- ಇದು ಸಾಮಾಜಿಕ ಒಡಂಬಡಿಕೆಯ ಸಿದ್ಧಾಂತಕ್ಕೆ ಬುನಾದಿಯಾಗಿದೆ
- ಸಮಾಜದ ಶಾಂತಿ ಮತ್ತು ವ್ಯವಸ್ಥೆಗಾಗಿ ಮಾನವ ಕೆಲವು ಹಕ್ಕುಗಳನ್ನು ತ್ಯಾಗ ಮಾಡುವನು
ಉಪಸಂಹಾರ:
ಇವುಗಳ ಪ್ರಾಮುಖ್ಯತೆ ಕುರಿತು ಬರೆಯಿರಿ