Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 25 ನವೆಂಬರ್ 2020

 

ಪರಿವಿಡಿ

ಸಾಮಾನ್ಯ ಅಧ್ಯಯನ ಪತ್ರಿಕೆ  – 1

1. ಲಚಿತ್ ಬೋರ್’ಫುಕನ್

2. ಏನಿದು : ಜರ್ಮನಿಯ ನವ ಮಂಡಳಿಯಲ್ಲಿ ಮಹಿಳೆಯರ ಕೋಟಾ

3. ಈ ವರ್ಷ ಈಶಾನ್ಯ ಮಾನ್ಸೂನ್ ಇಳಿಮುಖವಾಗಲು ಕಾರಣವೇನು?

ಸಾಮಾನ್ಯ ಅಧ್ಯಯನ ಪತ್ರಿಕೆ  – 2

1. ಉತ್ತರ ಪ್ರದೇಶದ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಯಂತ್ರಣಾ ಸುಗ್ರೀವಾಜ್ಞೆ (2020)

2. ಪೋಶನ್ ಅಭಿಯಾನ

ಸಾಮಾನ್ಯ ಅಧ್ಯಯನ ಪತ್ರಿಕೆ  – 3

1. ಋಣಾತ್ಮಕ ಆದಾಯದ ಬಾಂಡ್ ಎಂದರೇನು?

2. ಖಾಸಗಿ (ಕಾರ್ಪೋರೆಟ್) ವಲಯದಿಂದ ಬ್ಯಾಂಕ್ ರಚನೆಯ ನಡೆ ಅಪಾಯವನ್ನು ಆಕರ್ಷಿಸುತ್ತದೆ

 

ಪೂರ್ವಭಾವಿ ಪರೀಕ್ಷಾ ಕೇಂದ್ರಿತ

1. ಭದ್ರತೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಸರ್ಕಾರ 43 ಮೊಬೈಲ್ ಅಪ್ಲಿಕೇಶನ್’ಗಳನ್ನು ಸ್ಥಗಿತಗೊಳಿಸಿದೆ

2. ದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯ

3. ಸರ್ ಚೋಟು ರಾಮ್

4. ಸಹಕರ್ ಪ್ರಗ್ಯಾ

 

ದಿನಕ್ಕೊಂದು ವಿಷಯ : ರಾಜ್ಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಿತ

1. ಹಿಮಾಲಯ ಪರ್ವತ ಶ್ರೇಣಿ

2. ಬೆಳೆಗಳ ಮಾದರಿ (Cropping Pattern) – ಬೆಳೆ ವ್ಯವಸ್ಥೆ (Cropping System) – ಕೃಷಿ ವ್ಯವಸ್ಥೆ (Farming System)

 

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯ : 18ನೇ ಶತಮಾನದ ಮಧ್ಯ ಭಾಗದಿಂದ ಇಲ್ಲಿಯವರೆಗಿನ ಪ್ರಮುಖ ಘಟನೆಗಳು, ವ್ಯಕ್ತಿಗಳು, ಸಮಸ್ಯೆ, ವಿವಾದಗಳನ್ನು ಒಳಗೊಂಡ ಅಧುನಿಕ ಭಾರತದ ಇತಿಹಾಸ

ಲಚಿತ್ ಬೋರ್ಫುಕನ್


ಸಂದರ್ಭ

ಪಿಮ್ ಲಚಿತ್ ದಿನದಂದು ಲಚಿತ್ ಬೋರ್ಫುಕನ್’ಗೆ ಗೌರವ ಸೂಚಿಸಿದರು.

ಲಚಿತ್ ಬೋರ್ಫುಕನ್ ಯಾರು ?

 1. ಅಹೋಮ್ ಸಂಸ್ಥಾನದ ರಕ್ಷಣಾಧಿಕಾರಿ
 2. ಸರೈಘಾಟ್ ಕದನದಲ್ಲಿ (1671) ತೋರಿದ ನಾಯಕತ್ವದ ಗುಣಗಳಿಂದ ಮುನ್ನೆಲೆಗೆ ಬಂದನು. 1ನೇ ರಾಂಸಿಂಗ್ ನೇತೃತ್ವದ ಮೊಘಲ್ ಪಡೆಗಳು ಕೈಗೊಂಡ ಪ್ರಯತ್ನವನ್ನು ತಡೆದರು.
 3. ಈ ಕದನ ಬ್ರಹ್ಮಪುತ್ರ ನದಿ ದಂಡೆ ಮೇಲಿನ ಗೌಹಾತಿಯಲ್ಲಿ ನಡೆದ ಕದನವಾಗಿದೆ.
 4. ಇವರ ಹೆಸರಿನ ಚಿನ್ನದ ಪದಕವನ್ನು 1999ರಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಯ ಉತ್ತಮ ಅಭ್ಯರ್ಥಿಗೆ ನೀಡಲಾಗುವುದು

 

ಹಿನ್ನೆಲೆ

ಮೊಘಲ್ ಪಡೆಗಳು ಸಾರೈಘಾಟ್’ನಲ್ಲಿ ನದಿಯ ಮೂಲಕ ಅಸ್ಸಾಮಿ ಪಡೆಗಳ ಮೇಲೆ ದಾಳಿ ನಡೆಸಿದರು.  1671 ರ ಸಾರೈಘಾಟ್ ಕದನದ ಕೊನೆಯ ಹಂತದಲ್ಲಿ ಅಸ್ಸಾಮೀ ಸೈನಿಕರು ಸೋಲಿನ ಹೊಸ್ತಿಲಲ್ಲಿದ್ದು ಹೋರಾಡುವ ಮನೋಬಲವನ್ನು ಕಳೆದುಕೊಂಡಿದ್ದರು. ಆಗ ಲಚಿತ್ ಬೋರ್ಫುಕನ್ ನಾಯಕತ್ವ ಅಹೋಮ್ ಸಂಸ್ಥಾನಕ್ಕೆ ಜಯ ಲಭಿಸುವಂತಾಯಿತು.

 

ವಿಷಯ : ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು

ಏನಿದು : ಜರ್ಮನಿಯ ನವ ಮಂಡಳಿಯಲ್ಲಿ ಮಹಿಳೆಯರ ಕೋಟಾ


ಸಂದರ್ಭ :

ಜರ್ಮನಿ ಸರ್ಕಾರ ದೇಶದ ಸಂಸ್ಥೆಗಳಲ್ಲಿ ಉನ್ನತ ನಿರ್ವಹಣಾ ಹುದ್ದೆಗಳನ್ನು ಮಹಿಳೆಯರಿಗೆ ಕಡ್ಡಾಯವಾಗಿ ಮೀಸಲಿಡುವ ಕೋಟಾ ವ್ಯವಸ್ಥೆಯನ್ನು ಜಾರಿಗೆಗೊಳಿಸಿದೆ.

ಈ ಐತಿಹಾಸಿಕ ಕ್ರಮವು ದೇಶದಲ್ಲಿ ಲಿಂಗ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವ ಮುಂದಿನ ಹಂತವಾಗಿ ನೋಡಲಾಗುತ್ತಿದೆ.

 

ಮಹಿಳೆಯರಿಗಾಗಿ ಜರ್ಮನಿಯ ಹೊಸ ಮಂಡಳಿಯ ಕೋಟಾ ಯಾವುದು?

ಒಪ್ಪಿದ ನಿಬಂಧನೆಗಳ ಪ್ರಕಾರ:

 1. ಕಂಪನಿಯ ಕಾರ್ಯನಿರ್ವಾಹಕ ಮಂಡಳಿಗಳು ಮೂರು ಸದಸ್ಯರಿಗಿಂತ ಹೆಚ್ಚಿನವರನ್ನು ಹೊಂದಿದ್ದರೆ, ಅವರಲ್ಲಿ ಒಬ್ಬರು ಮಹಿಳೆಯಾಗಿರಬೇಕು
 2. ಫೆಡರಲ್ ಸರ್ಕಾರ ಭಾಗಿತ್ವವಿರುವ ಕಂಪನಿಗಳಿಗೆ ಕನಿಷ್ಠ 30% ರಷ್ಟು ಮೇಲ್ವಿಚಾರಣಾ ಮಂಡಳಿ ಕೋಟಾ ಮತ್ತು ಕಾರ್ಯನಿರ್ವಾಹಕ ಮಂಡಳಿಗಳಲ್ಲಿ ಭಾಗವಹಿಸುವಿಕೆಯ ಅಗತ್ಯವಿರುತ್ತದೆ.

 

ಜರ್ಮನಿಯಲ್ಲಿ ಈ ರೀತಿಯ ಕೋಟಾದ ಅಗತ್ಯವೇನು?

ಯುರೋಪಿನ ಅತಿದೊಡ್ಡ ಆರ್ಥಿಕತೆಯಾಗಿರುವ ಜರ್ಮನಿ, 2015 ರಿಂದ ಮೇಲ್ವಿಚಾರಣಾ ಮಂಡಳಿಯಲ್ಲಿ ಮಹಿಳೆಯರಿಗೆ ಶೇ 30 ರಷ್ಟು ಕೋಟಾ ವ್ಯವಸ್ಥೆಯನ್ನು ಸ್ವಯಂಪ್ರೇರಿತ ನೆಲೆಯಲ್ಲಿ ಜಾರಿಗೆ ತಂದಿದೆ. ಆದರೆ, ಈ ಕ್ರಮ ಮಹಿಳೆಯರ ಸ್ಥಿತಿಯನ್ನು ಸುಧಾರಿಸಲು ಸಮರ್ಪಕವಾಗಿ ಅನುಷ್ಟಾನವಾಗಿಲ್ಲ.

  

ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು

ಈ ವರ್ಷ ಈಶಾನ್ಯ ಮಾನ್ಸೂನ್ ಇಳಿಮುಖವಾಗಲು ಕಾರಣವೇನು?


ಸಂದರ್ಭ

ಪರ್ಯಾಯ ಪ್ರಸ್ಥಭೂಮಿಯ ದಕ್ಷಿಣ ಭಾಗದಲ್ಲಿ ಹಿಂಗಾರು ಮಳೆ ಸರಾಸರಿಗಿಂತ ಕಡಿಮೆಯಾಗಿದೆ

 

ಕಾರಣ

 1. ಲಾ-ನಿನೋ ಪರಿಸ್ಥಿತಿ ಮತ್ತು ಕಡಿಮೆ ಒತ್ತಡದ ಪಟ್ಟಿ ಸಾಮಾನ್ಯ ಸ್ಥಾನದಿಂದ ಉತ್ತರದಲ್ಲಿದೆ
 2. ಉಷ್ಣವಲಯದ ಅಂತರ್ ಸಂಧಿ ವಲಯದ (ITCZ) ಪ್ರಸ್ತುತ ಸ್ಥಾನ

 

ಲಾ-ನಿನೋ ಎಂದರೇನು?

ಫೆಸಿಫಿಕ್ ಮಹಾ ಸಾಗರದಲ್ಲಿ ಆಸ್ಟ್ರೇಲಿಯಾದ ಉತ್ತರ ಕರಾವಳಿ ಭಾಗದಲ್ಲಿ ಉಷ್ಣ ಜಲರಾಶಿ ಮತ್ತು ಪೆರು ತೀರಭಾಗದಲ್ಲಿ ತಂಪಾದ ಜಲರಾಶಿ ನೆಲೆಗೊಳ್ಳುವ ವಾಯುಗುಣದ ಆವರ್ತನ ಕ್ರಿಯೆಯಾಗಿದೆ. ಇದಕ್ಕೆ ವಿರುದ್ಧವಾಗಿ ನಡೆಯುವ ವಾಯುಗುಣದ ಅನನ್ಯ ಆವರ್ತನ ಕ್ರಿಯೆಯನ್ನು ಎಲ್-ನಿನೋ ಎನ್ನಲಾಗಿದೆ.

 1. ಇವು ಬೃಹತ್ ಪ್ರಮಾಣದಲ್ಲಿ ಸಾಗರಿಕ ವಿದ್ಯಾಮಾನಗಳು.
 2. ಇದು ವಾಯು ರಾಶಿ, ತಾಪಮಾನ ಮತ್ತು ಮಳೆಯ ಮೂಲಕ ಜಾಗತಿಕ ಹವಾಮಾನವನ್ನು ಪ್ರಭಾವಿಸುತ್ತದೆ.
 3. ಜಾಗತಿಕವಾಗಿ ಬರ, ಪ್ರವಾಹ, ತಾಪಮಾನ ಏರಿಕೆ ಮುಂತಾದ ಹವಾಮಾನ ವೈಪರಿತ್ಯಗಳ ಮೇಲೆ ಪ್ರಭಾವ ಬೀರಿವೆ.
 4. ಈ ಸಾಗರಿಕ ವಿದ್ಯಾಮಾನಗಳು ಪ್ರತಿ 3 ರಿಂದ 5 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

 

ಈಶಾನ್ಯ ಮಾನ್ಸೂನ್ ಎಂದರೇನು?

 1. ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸಂಭವಿಸುತ್ತದೆ
 2. ಇದು ನೈರುತ್ಯ ಮಾರುತಗಳಿಗೆ ಹೋಲಿಸಿದರೆ ಸಣ್ಣ-ಪ್ರಮಾಣದ ಮಾನ್ಸೂನಾಗಿದೆ.
 3. ಇದು ದಕ್ಷಿಣ ಪರ್ಯಾಯ ದ್ವೀಪಕ್ಕೆ ಸೀಮಿತವಾಗಿದೆ.
 4. ಈಶಾನ್ಯ ಮಾನ್ಸೂನ್‌ಗೆ ಸಂಬಂಧಿಸಿದ ಮಳೆ ತಮಿಳುನಾಡು, ಪುದುಚೇರಿ, ಕಾರೈಕಲ್, ಯಾನಂ, ಕರಾವಳಿ ಆಂಧ್ರಪ್ರದೇಶ, ಕೇರಳ ಮತ್ತು ಲಕ್ಷದ್ವೀಪಗಳಿಗೆ ಕೇಂದ್ರಿತವಾಗಿದೆ.
 5. ದಕ್ಷಿಣ ಏಷ್ಯಾದ ಕೆಲವು ದೇಶಗಳಾದ ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಮಯನ್ಮಾರ್ ಸಹ ಅಕ್ಟೋಬರ್’ನಿಂದ ಡಿಸೆಂಬರ್ ಅವಧಿಯಲ್ಲಿ ಮಳೆಯಾಗಿದೆ.

 

ಲಾ-ನಿನೋ ಮತ್ತು ಈಶಾನ್ಯ ಮಾನ್ಸೂನ್ ನಡುವಿನ ಸಂಬಂಧವೇನು?

ಲಾ-ನಿನೋ ವಿದ್ಯಾಮಾನ  ನೈರುತ್ಯ ಮಾನ್ಸೂನ್‌ಗೆ ಸಂಬಂಧಿಸಿದ ಮಳೆಯನ್ನು ಹೆಚ್ಚಿಸಿದರೆ, ಇದು ಈಶಾನ್ಯ ಮಾನ್ಸೂನ್‌ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಲಾ ನಿನಾ ವರ್ಷಗಳಲ್ಲಿ, ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಕಡಿಮೆ ಒತ್ತಡ ಅಥವಾ ಚಂಡಮಾರುತದ ಸಿನೊಪ್ಟಿಕ್ ವ್ಯವಸ್ಥೆ ಸಾಮಾನ್ಯ ಸ್ಥಾನದ ಉತ್ತರದಲ್ಲಿ ನೆಲೆಗೊಂಡಿದೆ.

ಅಲ್ಲದೆ, ಪಶ್ಚಿಮ ದಿಕ್ಕಿಗೆ ಚಲಿಸುವ ಬದಲು, ಎಲಿಪ್ಟಿಕ್ ಮಾದರಿಯಲ್ಲಿ ಚಲಿಸುವವು. ಮೇಲೆ ಸೂಚಿಸಿದಂತೆ ಸಾಮಾನ್ಯ ಸ್ಥಾನದ ಉತ್ತರಕ್ಕೆ ನೆಲೆಗೊಂಡಿರುವುದರಿಂದ  ತಮಿಳುನಾಡಿನಂತಹ ದಕ್ಷಿಣ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗುವುದು

la_nina

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು

ಉತ್ತರ ಪ್ರದೇಶದ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಯಂತ್ರಣಾ ಸುಗ್ರೀವಾಜ್ಞೆ (2020)


ಸಂದರ್ಭ

ಉತ್ತರ ಪ್ರದೇಶದ ಸರ್ಕಾರ ಇತ್ತೀಚಿಗೆ ಈ ಕಾನೂನನ್ನು ತೆರವುಗೊಳಿಸಿತು.

 

ಈ ಸುಗ್ರೀವಾಜ್ಞೆಯ ಕುರಿತು

 1. ಇದು ವಿವಾಹದ ಹೆಸರಿನಲ್ಲಿ ನಡೆಯುವ ಧಾರ್ಮಿಕ ಮತಾಂತರವನ್ನು ಜಾಮೀನು ರಹಿತ ಅಪರಾಧವನ್ನಾಗಿ ಮಾಡುತ್ತದೆ
 2. ‘ಮತಾಂತರವು ವಿವಾಹಕ್ಕಾಗಿ ಅಲ್ಲ’ ಎಂಬುದನ್ನು ಸಾಬೀತು ಪಡಿಸುವ ಅಧಿಕಾರ ಆರೋಪಿಯ ಮೇಲಿದೆ
 3. ಜಿಲ್ಲಾಧಿಕಾರಿಗೆ ಧಾರ್ಮಿಕ ಮತಾಂತರದ ಪ್ರಕರಣವನ್ನು ವಿಚಾರಣೆ ನಡೆಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗುವುದು
 4. ವಿವಾಹದ ಏಕೈಕ ಉದ್ದೇಶದಿಂದ ಮಹಿಳೆ ಮತಾಂತರಕ್ಕೊಳಗಾದರೆ ವಿವಾಹವನ್ನು ಅಸಿಂಧುತ್ವವೆಂದು ಘೋಷಿಸಲಾಗುವುದು.

 

ದಂಡಗಳು

 1. 15 ಸಾವಿರ ದಂಡ ಮತ್ತು ಕನಿಷ್ಠ ಒಂದು ವರ್ಷ ಗರಿಷ್ಠ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು.
 2. ಅಪ್ರಾಪ್ತ ಮಹಿಳೆ, ಪರಿಶಿಷ್ಟ ಪಂಗಡ ಅಥವಾ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಕಾನೂನು ಬಾಹಿರವಾಗಿ ಮತಾಂತರಕ್ಕೊಳಪಡಿಸಿದರೆ 10 ವರ್ಷಗಳಿಗೆ ಮೀರದಂತೆ ಕನಿಷ್ಠ ಮೂರು ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಲಾಗುವುದು.
 3. ಸಾಮೂಹಿಕ ಮತಾಂತರ ನಡೆಸುವ ಸಾಮಾಜಿಕ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸುವ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೆ ತರುವುದು.

 

ಇದು ವಿವಾದಾತ್ಮಕ ಕಾನೂನಾಗಲು ಕಾರಣವೇನು

‘ಸಂಗಾತಿಯನ್ನು ಆಯ್ಕೆ ಮಾಡುವ ಅಥವಾ ಇಚ್ಚೆಯ ವ್ಯಕ್ತಿಯೊಂದಿಗೆ ವಾಸಿಸುವುದು ನಾಗರಿಕರ ಮೂಲಭೂತ ಹಕ್ಕಾಗಿದೆ’ ಎಂದ ಪ್ರಿಯಾಂಕಾ ಖಾರ್ವಾರ್ ಪ್ರಕರಣದ ನಂತರ ಈ ಸುಗ್ರೀವಾಜ್ಞೆ ಹೊರಡಿಸಲಾಯಿತು.

 1. ‘ವಿವಾಹಕ್ಕಾಗಿ ಧಾರ್ಮಿಕ ಮತಾಂತರ ಸ್ವಿಕಾರಾರ್ಹವಲ್ಲ’ – ಎಂಬ ಹಿಂದಿನ ತೀರ್ಪನ್ನು ಈ ಪ್ರಕರಣ ನಿರಚಿಸಿದರೂ ಕಾನೂನು ಪೂರ್ವದ ತೀರ್ಪಿನ ತಳಹದಿಯಲ್ಲಿ ಸಾಗಿದೆ.

 

ಇದರ ಸಮಸ್ಯೆ ಮತ್ತು ಸವಾಲುಗಳು

 1. ಈ ಕಾನೂನಿನ ವ್ಯಾಪ್ತಿಗೆ ‘ಲವ್ ಜಿಹಾದ್’ ಪರಿಕಲ್ಪನೆ ಸೇರುವುದು ಅಸ್ಪಷ್ಟವಾಗಿದೆ.
 2. ಕಾನೂನಿನಲ್ಲಿ ಅನುಚಿತ ಪ್ರಭಾವ (Undue Influence), ಪ್ರಲೋಭನೆ (Allurement), ಬಲವಂತತೆ (Coercion) ಶಬ್ದಗಳ ಬಳಕೆಯಿದೆ
 3. ವಾಸ್ತವವಾಗಿ ವಿವಾಹದ ಉದ್ದೇಶಕ್ಕಾಗಿ ಮಾತ್ರ ಧಾರ್ಮಿಕ ಮತಾಂತರವನ್ನು ಮಾಡಲಾಗಿದೆಯೇ- ಎಂಬ ಪ್ರಶ್ನೆ ಅಂತರ್ಗತವಾಗಿದ್ದು ಅಸ್ಪಷ್ಟವಾಗಿದೆ.
 4. ಕಾನೂನು ಬಹುತೇಕವಾಗಿ ನ್ಯಾಯಾಧೀಶರ ವಿವೇಚನೆಯನ್ನು ಅವಲಂಭಿಸಿದೆ

 

ನ್ಯಾಯಾಂಗದ  ಅಭಿಪ್ರಾಯ

ಉನ್ನತ ನ್ಯಾಯಾಲಯ ಲಿಲ್ಲಿ ಥಾಮಸ್ ಪ್ರಕರಣ ಮತ್ತು ಸರಳಾ ಮುದ್ಗಲ್ ಪ್ರಕರಣಗಳಲ್ಲಿ ಧಾರ್ಮಿಕ ಮತಾಂತರಗಳು ವಾಸ್ತವದಲ್ಲಿ ಅಂಗೀಕಾರದ ಮೇರೆಗೆ ಅಥವಾ ಕಾನೂನಿನ ಲಾಭವನ್ನು ಪಡೆಯುವ ಉದ್ದೇಶದಿಂದ ಮಾಡಲಾಗಿದೆಯೇ?   ಎಂಬುದನ್ನು ಸ್ಪಷ್ಟವಾಗಿ ಹೇಳಲಾಗದು.

 

ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

ಪೋಷಣ್ ಅಭಿಯಾನ


ಸಂದರ್ಭ

ಇತ್ತೀಚಿಗೆ ನೀತಿ ಆಯೋಗ ಪೋಷಣ್ ಅಭಿಯಾನ ಕುರಿತು ವರದಿ ಬಿಡುಗಡೆ ಮಾಡಿದೆ.

 

ಆಯೋಗದ ಸಲಹೆಗಳೇನು?

 1. 2022ರ ವೇಳೆಗೆ ಕುಬ್ಜತೆ, ರಕ್ತಹಿನತೆ ಮತ್ತು ಶಿಶು ಮರಣದ ಗುರಿಗಳನ್ನು ಸಾಧಿಸಸಲು ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಬೇಕಾಗಿದೆ
 2. ಅಭಿಯಾನದ ನಾಲ್ಕು ಸ್ತಂಭಗಳನ್ನು ಬಲಪಡಿಸಲು ಪೋಷಣ್ ಪ್ಲಸ್ ಕಾರ್ಯತಂತ್ರದ ಪದವಿದರರೊಂದಿಗೆ NHM/ICDS ವಿತರಣಾ ವ್ಯವಸ್ಥೆಯ ಸವಾಲುಗಳನ್ನು ನಿವಾರಿಸಬೇಕು ಮತ್ತು ಇತರೆ ಸಾಮಾಜಿಕ ನಿರ್ಧಾರಕಗಳ ಕಡೆಗೆ ಗಮನ ಹರಿಸಬೇಕಾಗಿದೆ.
 3. ಸ್ತನಪಾನಕ್ಕೆ ಪೂರಕವಾದ ಆಹಾರ ಪದ್ಧತಿಗೆ ಹೆಚ್ಚಿನ ಒತ್ತು ನೀಡಬೇಕು. ಇದು ಕುಬ್ಜತೆಯಲ್ಲಿ ಶೇ 60ರಷ್ಟನ್ನು ತಪ್ಪಿಸಲು ಪೂರಕವಾಗಿದೆ.

 

ಪೋಷಣ ಅಭಿಯಾನ ಕುರಿತು

 1. ಯೋಜನೆಯು ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರರಲ್ಲಿ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸುತ್ತದೆ.
 2. 2022 ರ ವೇಳೆಗೆ ಸಾಧಿಸಬೇಕಾದ ನಿರ್ದಿಷ್ಟ ಗುರಿಗಳೊಂದಿಗೆ 2018 ರಲ್ಲಿ ಪ್ರಾರಂಭಿಸಲಾಯಿತು.
  1. ಮಕ್ಕಳಲ್ಲಿ ಕುಬ್ಜತೆ ಮತ್ತು ಸಾವನ್ನು ಪ್ರತಿ ವರ್ಷ ಶೇ 2 (2022 ವೇಳೆಗೆ ಒಟ್ಟು ಶೇ 6)
  2. ಮಕ್ಕಳು, ತರುಣಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ರಕ್ತಹೀನತೆ ವರ್ಷಕ್ಕೆ 3% (ಒಟ್ಟು 9%).
  3. 2022 ವೇಳೆಗೆ 6 ವರ್ಷದೊಳಗಿನ ಮಕ್ಕಳಲ್ಲಿ ಕುಬ್ಜತೆಯನ್ನು ಶೇ 38.4 ರಿಂದ ಶೇ 25ಗೆ ಇಳಿಕೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.

ಹಿನ್ನೆಲೆ

ಐದು ವರ್ಷದೊಳಗಿನ ಮಕ್ಕಳಲ್ಲಿ 1/3 ಭಾಗದಷ್ಟು ಕುಬ್ಜರು  ಮತ್ತು ಸಾವಿಗೀಡಾಗುವರು.  1 ರಿಂದ 4 ವರ್ಷದೊಳಗಿನ 40% ವಯಸ್ಸಿನವರು ರಕ್ತಹೀನತೆ. 50% ಗರ್ಭಿಣಿ ಮತ್ತು ಇತರ ಮಹಿಳೆಯರಲ್ಲಿ ರಕ್ತಹೀನತೆ ಕಂಡುಬಂದಿದೆ ಎಂದು 2016 ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 4 ತಿಳಿಸಿದೆ

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು

ಋಣಾತ್ಮಕ ಆದಾಯದ ಬಾಂಡ್ ಎಂದರೇನು?


ಸಂದರ್ಭ:

ಕಳೆದ ವಾರ, ಚೀನಾ ಮೊದಲ ಬಾರಿಗೆ ಋಣಾತ್ಮಕ ಆದಾಯದ ಬಾಂಡಿನ ವಹಿವಾಟು ನಡೆಸಿತು.

 1. 5 ವರ್ಷದ ಬಾಂಡ್‌ಗೆ -152% ದರದೊಂದಿಗೆ ಬೆಲೆ ನಿಗದಿಯಾಗಿತ್ತು,
 2. 10 ವರ್ಷ ಮತ್ತು 15 ವರ್ಷದ ಸೆಕ್ಯೂರಿಟಿಗಳು ಕ್ರಮವಾಗಿ 318% ಮತ್ತು 0.664% ನಷ್ಟು ಧನಾತ್ಮಕ ಆದಾಯವನ್ನು ಹೊಂದಿವೆ.

 

ಇನಿದು ಬಾಂಡ್/ಸೆಕ್ಯುರಿಟಿ?

ಇವು ಸಾಲ ನೀಡಿಕೆಯ ಸಾಧನಗಳು. ಹೂಡಿಕೆದಾರರು ಬಾಂಡ್‌ನ ಖರೀದಿ ಬೆಲೆಗಿಂತ ಕಡಿಮೆ ಮೆಚ್ಯೂರಿಟಿ ಮೊತ್ತವನ್ನು ಪಾವತಿಸುವರು.

 1. ಕೇಂದ್ರ ಬ್ಯಾಂಕುಗಳು ಅಥವಾ ಸರ್ಕಾರಗಳು ನೀಡಬಹುದು.
 2. ಇಲ್ಲಿ, ಹೂಡಿಕೆದಾರರು ತಮ್ಮ ಹಣವನ್ನು ಇಟ್ಟುಕೊಳ್ಳಲು ಸಾಲಗಾರನಿಗೆ ಬಡ್ಡಿ ನೀಡುತ್ತಾರೆ.

 

ಆದರೆ, ಹೂಡಿಕೆದಾರರು ಅಂತಹ ಬಾಂಡ್‌ಗಳನ್ನು ಏಕೆ ಖರೀದಿಸುತ್ತಾರೆ?

 1. ಒತ್ತಡ ಮತ್ತು ಅನಿಶ್ಚಿತತೆಯ ಸಮಯದಲ್ಲಿ ಇಂತಹ ಸಾಧನಗಳು ಸಾಮಾನ್ಯವಾಗಿ ಬೇಡಿಕೆಯಲ್ಲಿರುತ್ತವೆ. ಗಮನಾರ್ಹ ಅಂಶವೆಂದರೆ ಇದು ಬಂಡವಾಳವನ್ನು ರಕ್ಷಿಸುವ ಮಾರ್ಗವಾಗಿದೆ.
 2. ವಿನಿಮಯ ದರದ ಏರಿಳಿತ ಮತ್ತು ಹಣದುಬ್ಬರವಿಳಿತ ಮುಂತಾದ ಸಂದರ್ಭದಲ್ಲಿ ಋಣಾತ್ಮಕ ಆದಾಯದ ಬಾಂಡ್‌ಗಳ ಖರೀದಿದಾರರು ಮೊದಲು ಮಾರುಕಟ್ಟೆಯಿಂದ ಹೊರ ನಡೆಯುವ ಸಾಧ್ಯತೆ ಅಧಿಕವಾಗಿದೆ.

 

ಬಾಂಡ್ ಬೆಲೆ ಮತ್ತು ಇಳುವರಿ ನಡುವಿನ ಸಂಬಂಧ:

 1. ಬಾಂಡ್‌ನ ಬೆಲೆ ಮತ್ತು ಬಡ್ಡಿದರದೊಂದಿಗೆ ವಿಲೋಮವಾಗಿ ಚಲಿಸುತ್ತದೆ
 2. ಬಾಂಡ್‌ನ ಬೆಳೆ ಹೆಚ್ಚಿದಂತೆ, ಆದಾಯ ಇಳಿಮುಖವಾಗುವುದು.
 3. ಈ ವಿಲೋಮ ಸಂಬಂಧಕ್ಕೆ ಭಾಗಶಃ ಬಾಂಡ್‌ಗಳು ಸ್ಥಿರ ದರದ ಹೂಡಿಕೆಗಳಾಗಿರುವುದು ಕಾರಣವಾಗಿದೆ.
  1. ಭವಿಷ್ಯದಲ್ಲಿ ಬಡ್ಡಿದರ ಏರಿಕೆಯಾಗುವುದು ಮತ್ತು ಹೆಚ್ಚಿನ ದರದ ಬಾಂಡ್‌ಗಳನ್ನು ಆರಿಸಿಕೊಳ್ಳಬಹುದೆಂಬ ನಿರೀಕ್ಷೆಯಿಂದ ಹೂಡಿಕೆದಾರರು ತಮ್ಮ ಬಾಂಡ್‌ಗಳನ್ನು ಮಾರಾಟ ಮಾಡಬಹುದು.
  2. ಇದಕ್ಕೆ ವ್ಯತಿರಿಕ್ತವಾಗಿ, ಭವಿಷ್ಯದಲ್ಲಿ ಬಡ್ಡಿದರಗಳು ಕುಸಿಯುತ್ತವೆ; ಬಾಂಡ್ ಬೆಲೆ ಏರಿಕೆಯಾಗುವುದೆಂಬ ನಿರೀಕ್ಷೆಯಿಂದ ಬಾಂಡ್ ಹೂಡಿಕೆದಾರರು ಬಾಂಡ್‌ಗಳನ್ನು ಖರೀದಿಸಬಹುದು. ಇದು ಬಾಂಡ್ ಬೆಲೆಯನ್ನು ಹೆಚ್ಚಿಸುವುದು. ಇದಕ್ಕೆ ಅಸ್ತಿತ್ವದಲ್ಲಿರುವ ಸ್ಥಿರ ದರದ ಬಾಂಡ್‌ಗಳು ಹೆಚ್ಚಿನ ದರ ಅಥವಾ ಆದಾಯವನ್ನು ಹೊಂದಿರುತ್ತವೆ.

 

ಬೇಡಿಕೆಯನ್ನು ಹೆಚ್ಚಿಸುವ ಪ್ರಮುಖ ಅಂಶ ಯಾವುದು?                                  

 1. ಇದು ಜಾಗತಿಕ ಕೇಂದ್ರ ಬ್ಯಾಂಕುಗಳು ಕೋವಿಡ್ – 19ನ  ಪ್ರಭಾವದಿಂದಾಗಿ ಉದರ ನೀತಿಯನ್ನು ಅನುಸರಿಸಿ ವ್ಯವಸ್ಥೆಯಲ್ಲಿ ಹಣದ ಒಳಹರಿವಿನಲ್ಲಿ ಎರಿಕೆಯನ್ನು ಉಂಟುಮಾಡಿವೆ. ಇದು ಇಕ್ವಿಟಿಗಳೊಂದಿಗೆ ಸಾಲ ಮತ್ತು ಸರಕುಗಳ ದರಗಳನ್ನು ಹೆಚ್ಚಿಸಿತು.
 2. ಅನೇಕ ಹೂಡಿಕೆದಾರರು ತಮ್ಮ ಅಪಾಯದ ಬಂಡವಾಳವನ್ನು ಈಕ್ವಿಟಿಗಳಲ್ಲಿ ರಕ್ಷಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಋಣಾತ್ಮಕ ಆದಾಯ ನೀಡುವ ಸರ್ಕಾರದ ಸಾಲದಲ್ಲಿ ಹಣವನ್ನು ವಿನಿಯೊಗಿಸುವರು.
 3. ಒಂದು ವೇಳೆ ಕೋವಿಡ್ -19 ಸಾಂಕ್ರಾಮಿಕ ರೋಗದ ಹೊಸ ತರಂಗವು ಆರ್ಥಿಕತೆಯ ಮತ್ತಷ್ಟು ಲಾಕ್‌ಡೌನ್‌ಗಳಿಗೆ ಕಾರಣವಾದರೆ, ನಂತರ ಬಡ್ಡಿದರಗಳ ಮೇಲೆ ಮತ್ತಷ್ಟು ಋಣಾತ್ಮಕ ಒತ್ತಡ ಉಂಟಾಗಬಹುದು, ಆದಾಯ ಮತ್ತಷ್ಟು ಕುಸಿಯಬಹುದು. ಅಲ್ಲದೆ, ಪ್ರಸ್ತುತ ಹಂತದಲ್ಲಿ ಹಣವನ್ನು ಹಾಕುವ ಹೂಡಿಕೆದಾರರಿಗೆ ಸಹ ಲಾಭವಾಗಬಹುದು.

 

ವಿಷಯ : ಸೇರ್ಪಡೆ ಬೆಳವಣಿಗೆ ಮತ್ತು ಅದರ ಸಮಸ್ಯೆಗಳು

ಕಾರ್ಪೋರೆಟ್ ವಲಯದಿಂದ ಬ್ಯಾಂಕ್ ರಚನೆಯ ನಡೆ ವ್ಯವಸ್ಥೆಗೆ ಅಪಾಯಕಾರಿ


ಸಂದರ್ಭ

ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣದ ಬಗ್ಗೆ RBI’ನ  ವರದಿ ಸಾಕಷ್ಟು ಗಮನ ಸೆಳೆಯಿತು. ಅಲ್ಲದೆ ರಘುರಾಮ್ ರಂಜನ್ ಇದರ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.

 

ನಡೆದುದು?

ಕೇಂದ್ರೀಯ ಬ್ಯಾಂಕ್’ನ ಆಂತರಿಕ ಕಾರ್ಯಾಕಾರಿ ಸಮಿತಿ (IWG) ಕಳೆದವಾರ “ಭಾರತೀಯ ಖಾಸಗಿ ವಲಯದ ಬ್ಯಾಂಕುಗಳ ಒಡೆತನದ ಮಾರ್ಗಸೂಚಿ ಮತ್ತು ಸಾಂಸ್ಥಿಕ ರಚನೆಯನ್ನು ಪರಿಶೀಲಿಸುವ” ವರದಿಯನ್ನು ಸಲ್ಲಿಸಿತು.

ಬೃಹತ್ ಕೈಗಾರಿಕಾ/ಔದ್ಯೋಗಿಕ ಸಂಸ್ಥೆಗಳನ್ನು ಖಾಸಗಿ ಬ್ಯಾಂಕ್’ಗಳ ಪ್ರವರ್ತಕರಾಗಿಸುವ ಶಿಫಾರಸ್ಸನ್ನು ವರದಿಯ ಮಂಡಿಸಿತ್ತು.

 

ಇಲ್ಲಿನ ಸಮಸ್ಯೆಗಳೇನು?

ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಆರ್‌ಬಿಐ ಉಪ ಗವರ್ನರ್ ಆಚಾರ್ಯ ಅವರು IWG ನೀಡಿದ ಸಲಹೆಯನ್ನು ಟೀಕಿಸಿದ್ದಾರೆ. ಇದನ್ನು “ಬಾಂಬ್ ಶೆಲ್” ಎಂದು ಬಣ್ಣಿಸಲಾಗಿದೆ.

ಸಂಘರ್ಷಮಯದಿಂದ ಕೂಡಿರುವ ಖಾಸಗಿ ವಲಯಗಳಿಗೆ ಕಳಪೆ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ಬ್ಯಾಂಕ್’ಗಳ ಉಸ್ತುವಾರಿ ನೀಡುವುದು – ‘penny wise pound foolish’ಗೆ ನಿದರ್ಶನವಾಗಿದೆ

 

ಟೀಕೆಗೆ ಕಾರಣಗಳೇನು

 1. ಐತಿಹಾಸಿಕವಾಗಿ, ಬ್ಯಾಂಕುಗಳ ಒಡೆತನದ ಆದರ್ಶ ಸ್ಥಿತಿಯು ಅದರ ದಕ್ಷತೆ, ಸಮತೆ ಮತ್ತು ಆರ್ಥಿಕ ಸ್ಥಿರತೆಯ ನಡುವಿನ ಸಮತೋಲನವನ್ನು ಉತ್ತೇಜಿಸಬೇಕು ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ .
 2. ಖಾಸಗಿ ಬ್ಯಾಂಕುಗಳು ಅಪಾಯದಿಂದ ಮುಕ್ತವಾಗಿಲ್ಲ. ಇದಕ್ಕೆ 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಒಂದು ಉದಾಹರಣೆಯಾಗಿದೆ.
 3. ಪ್ರಧಾನವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ವ್ಯವಸ್ಥೆಯು ಒಂದು ಸಂಸ್ಥೆಯಾಗಿ ಸರ್ಕಾರದ ಮೇಲಿನ ನಂಬಿಕೆಯಿಂದಾಗಿ ಹೆಚ್ಚು ಆರ್ಥಿಕವಾಗಿ ಸ್ಥಿರವಾಗಿರುತ್ತದೆ.
 • ನಿರ್ದಿಷ್ಟವಾಗಿ ಹೇಳುವುದಾದರೆ, ಕಾರ್ಪೊರೇಟ್‌ಗಳಿಗೆ ತಮ್ಮದೇ ಬ್ಯಾಂಕನ್ನು ತೆರೆಯಲು ಅವಕಾಶ ನೀಡುವುದು ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಮಾಡುವುದು. ಇದನ್ನು ತಾಂತ್ರಿಕವಾಗಿ “ಸಂಪರ್ಕಿತ ಸಾಲ” ಎನ್ನಲಾಗಿದೆ.

big_bank 

 

 

ಸಂಪರ್ಕಿತ ಸಾಲ ಏನು?

ಬ್ಯಾಂಕಿನ ಪ್ರವರ್ತಕ ಸಹ ಸಾಲಗಾರನಾಗಿರುವಂತಹ ಪರಿಸ್ಥಿತಿ & ಪ್ರವರ್ತಕ ಠೇವಣಿದಾರರ ಹಣವನ್ನು ತನ್ನ ಸ್ವಂತ ಉದ್ಯಮಗಳಿಗೆ ವಿನಿಯೋಗಿಸುವ ಸಾಧ್ಯತೆ ಇದೆ.

 1. ಸಂಪರ್ಕಿತ ಸಾಲವು ಬಹಳ ಸಮಯದಿಂದ ಪ್ರಚಲಿತದಲ್ಲಿದೆ.
 2. ಅದನ್ನು ಗುರುತಿಸುವಲ್ಲಿ ಆರ್‌ಬಿಐ ಬಹುತೇಕ ವೈಫಲ್ಯವನ್ನು ಕಂಡಿದೆ.
 3. ICICI ಬ್ಯಾಂಕ್, YES ಬ್ಯಾಂಕ್, DHFL ಇತ್ಯಾದಿಗಳಲ್ಲಿನ ಪ್ರಕರಣಗಳು ಇತ್ತೀಚಿಗೆ ಸಂಪರ್ಕಿತ ಸಾಲಕ್ಕೆ ಉದಾಹರಣೆಗಳಾಗಿವೆ.
 4. ಸಾಲಗಳ ಹಸಿರೀಕರಣವು (ಸಾಲಗಾರನು ಸಾಲವನ್ನು ಮರುಪಾವತಿಸಲು ಮತ್ತೆ ಸಾಲವನ್ನು ಅಶ್ರಯಿಸುವುದು) ಸಾಮಾನ್ಯವಾಗಿ ಇದರ ಪ್ರಾರಂಭದ ಹಂತವಾಗಿದೆ.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


ಭದ್ರತೆಗೆ ಧಕ್ಕೆಯಾಗುವ ಹಿನ್ನೆಲೆಯಲ್ಲಿ ಸರ್ಕಾರದಿಂದ 43 ಮೊಬೈಲ್ ಅಪ್ಲಿಕೇಶನ್’ಗಳ ಸ್ಥಗಿತತೆ

 1. ಸರ್ಕಾರ ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ AliSuppliers, AliExpress, Alipay Cashier, CamCard and DingTalk ಮುಂತಾದ ಮೊಬೈಲ್ ಅಪ್ಲಿಕೇಶನ್’ಗಳು ದೇಶದ ಭದ್ರತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ಮಾಡುವವೆಂಬ ನೆಲೆಯಲ್ಲಿ ನಿರ್ಬಂಧಿಸಲಾಗಿದೆ.
 2. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷೆನ್ 69A ಅಡಿಯಲ್ಲಿ ಈ ಕ್ರಮವನ್ನು ಕೈಗೊಂಡಿದೆ.
 3. ಈ ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತೆ, ದೇಶದ ಸಾರ್ವಭೌಮತೆ & ಸಮಗ್ರತೆ, ವಿದೇಶಗಳೊಂದಿಗಿನ ಮಿತೃತ್ವ, ಸಾರ್ವಜನಿಕ ವ್ಯವಸ್ಥೆ, ಅಪರಾಧಗಳಿಗೆ ಉತ್ತೇಜನ. ದೇಶದ ರಕ್ಷಣಾ ಹಿತಾಸಕ್ತಿಗೆ ಆದ್ಯತೆ ನೀಡಲು ಅಂತರ್ಜಾಲ ಬಳಕೆಯ ಮೇಲೆ ಕೆಲವು ನಿರ್ಬಂಧನ ವಿಧಿಸಬಹುದಾಗಿದೆ.

ದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯ

 1. 2010 ರಲ್ಲಿ ಭಾರತದಲ್ಲಿ ಸ್ಥಾಪಿತವಾದ ಅಂತರಾರಾಷ್ಟ್ರೀಯ ವಿಶ್ವ ವಿದ್ಯಾಲಯವಾಗಿದೆ.
 2. ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರಿ ಸಂಘದ (ಸಾರ್ಕ್) 8 ಸದಸ್ಯ ರಾಷ್ಟ್ರಗಳ ಸಹಯೋಗದಲ್ಲಿ ಸ್ಥಾಪಿತವಾಗಿದೆ.
 3. ಇದು ಪ್ರಧಾನ ಮಾಡುವ ಪದವಿಗಳು, ಪ್ರಮಾಣ ಪತ್ರಗಳು ರಾಷ್ಟ್ರೀಯ ವಿಶ್ವ ವಿದ್ಯಾಲಯ ಪ್ರಧಾನ ಮಾಡುವ ಪದವಿ ಮತ್ತು ಪ್ರಮಾಣ ಪತ್ರಗಳಿಗೆ ಸಮನಾಗಿವೆ.

ಸರ್ ಚೋಟು ರಾಮ್

 1. 1881ರಲ್ಲಿ ಜನಿಸಿದ ಸರ್ ಚೋಟು ರಾಮ್ ಬ್ರಿಟಿಷ್ ಭಾರತದ ಪಂಜಾಬ್ ಪ್ರಾಂತ್ಯದ ಪ್ರಮುಖ ರಾಜಕಾರಣಿ.
 2. ಇವರು ತುಳಿತಕ್ಕೊಳಗಾದ ಸಮುದಾಯದ ಹಿತಾಸಕ್ತಿಗೆ ಶ್ರಮಿಸಿದರು. ಹಾಗಾಗಿ, 1937ರಲ್ಲಿ ‘ಸರ್’ ಪದವಿಗೆ ಭಾಜನರಾದರು.
 3. ಇವರು ನ್ಯಾಷನಲ್ ಯುನಿಯನಿಸ್ಟ್ ಪಕ್ಷದ ಸಂಸ್ಥಾಪಕರು
 4. ಉಳುವವನ ಹಕ್ಕನ್ನು ನೀಡಲು ಮತ್ತು ಲೇವಾದೇವಿಗಾರರ ಕಪಿಮುಷ್ಟಿಯಿಂದ ರಕ್ಷಿಸುವPunjab Relief Indebtedness Act (1934) & Punjab Debtor’s Protection Act (1936) ಕಾಯ್ದೆಗಳ ಜಾರಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಸಹಕಾರ ಪ್ರಗ್ಯಾ

 1. ಆತ್ಮ ನಿರ್ಬರ ಭಾರತದಡಿಯಲ್ಲಿ ಸಹಕಾರಿ ಸಂಘಗಳು ಪ್ರಮುಖ ಪಾತ್ರವಹಿಸುವಂತೆ ಮಾಡುವ ಮುಖ್ಯೋದ್ದೇಶದಿಂದ ಸರ್ಕಾರ ಸಹಕಾರ ಪ್ರಗ್ಯಾ ಯೋಜನೆಯನ್ನು ಜಾರಿಗೆ ತಂದಿದೆ.
 2. ದೇಶದಲ್ಲಿ ಈ ಸಂಘಗಳಿಗೆ ಸಂಬಂಧಿತ ರೈತರ ಸಾಮರ್ಥ್ಯವನ್ನು ವೃದ್ಧಿಸುವ ನಾವಿನ್ಯಯುಕ್ತ ಕ್ರಮವಾಗಿದೆ.
 3. ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಕಾರ್ಪೋರೇಶನ್ (NCDC) ಅಡಿಯಲ್ಲಿ ದೇಶದ ಗ್ರಾಮೀಣ ವಲಯದ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ರೈತರಿಗೆ ತರಬೇತಿ ನೀಡಲಾಗುವುದು.
 4. ಈ ಯೋಜನೆ ಅಡಿಯಲ್ಲಿ ಜ್ಞಾನ ರವಾನೆ, ಕೌಶಲ್ಯ ಮತ್ತು ಸಾಂಸ್ಥಿಕ ಸಾಮರ್ಥ್ಯ ಕುರಿತು ತರಬೇತಿ ನೀಡಲು 45 ಕೇಂದ್ರಗಳನ್ನು ತೆರೆಯಲಾಗಿದೆ.

 


ದಿನಕ್ಕೊಂದು ವಿಷಯ


ಹಿಮಾಲಯ ಪರ್ವತ ಶ್ರೇಣಿ

 1. ಅಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ, ಭಾರತ, ನೇಪಾಳ, ಭೂತಾನ್, ಮಯನ್ಮಾರ್ ದೇಶಗಳಲ್ಲಿ ಹಬ್ಬಿದೆ.
 2. ಸುಮಾರು 4-5 ಕೋಟಿ ವರ್ಷಗಳ ಹಿಂದೆ ಇಂಡೋ-ಆಸ್ಟ್ರೇಲಿಯ ಭೂಭಾಗ ಮತ್ತು ಯುರೋಪ್ ಭೂಭಾಗಗಳ ಅಭಿಸರಣೆಯಿಂದಾಗಿ (Convegence of Plates) ಉಗಮವಾಗಿವೆ.
 3. ಅಕ್ಷಾಂಶಿಕವಾಗಿ ಗಡಿಯಾಚೆಗಿನ ಹಿಮಾಲಯ, ಮಹಾ ಹಿಮಾಲಯ (ಹಿಮಾದ್ರಿ), ಮಧ್ಯ ಹಿಮಾಲಯ (ಹಿಮಾಚಲ), ಶಿವಾಲಿಕ್ ಬೆಟ್ಟಗಳು (ಪಾದ ಬೆಟ್ಟಗಳು) ಎಂದು ನಾಲ್ಕು ಶ್ರೇಣಿಗಳಾಗಿ ವಿಭಜಿಸಲಾಗಿದೆ.
 4. ಅಲ್ಲದೆ, ಪಶ್ಚಿಮದಲ್ಲಿ ಪಾಮೀರ್ ಗ್ರಂಥಿಗಳಿಂದ ಪೂರ್ವದ ನಾಗಾಲ್ಯಾಂಡ್ ವರೆಗೆ ಹಬ್ಬಿವೆ. ಇವನ್ನು ಕ್ರಮವಾಗಿ
  1. ಕಾಶ್ಮೀರ/ಪಂಜಾಬ್/ಹಿಮಾಚಲ್ ಹಿಮಾಲಯ
  2. ಕುಮೌನ್ ಹಿಮಾಲಯ
  3. ನೇಪಾಳ ಹಿಮಾಲಯ
  4. ಅಸ್ಸಾಂ ಹಿಮಾಲಯ ಎಂದು ಹೆಸರಿಸಲಾಗಿದೆ.

 

ಬೆಳೆಗಳ ಮಾದರಿ (Cropping Pattern) – ಬೆಳೆ ವ್ಯವಸ್ಥೆ (Cropping System) – ಕೃಷಿ ವ್ಯವಸ್ಥೆ (Farming System)

ಒಂದು ನಿರ್ದಿಷ್ಟ ಪ್ರದೇಶದಲ್ಲಿ ವಾರ್ಷಿಕ ಮತ್ತು ವಲಯವಾರು ಬಿತ್ತಿರುವ ಬೆಳೆಗಳ ಸ್ವರೂಪವನ್ನು ಬೆಳೆಗಳ ಮಾದರಿ ಎನ್ನಲಾಗಿದೆ. ಇದು ಬೆಳೆಗಳ ಆವರ್ತನವನ್ನು ಒಳಗೊಂಡಿದೆ.

ಬೆಳೆಗಳ ಮಾದರಿಯೊಂದಿಗೆ ತಂತ್ರಜ್ಞಾನದ ಅಳವಡಿಕೆ, ಪರಿಸರದ ಸ್ಥಿತಿಗತಿ, ಮಣ್ಣಿನ ನಿರ್ವಹಣೆ ಮತ್ತು ಸಂವಹನವನ್ನು ಸಾಂಘಿಕವಾಗಿ ಬೆಳೆ ವ್ಯವಸ್ಥೆಯಾಗಿದೆ. ಇದು ವಲಯಿಕ-ಸಾಮಯಿಕವಾಗಿ ಬೆಳೆಗಳ ನಿರ್ವಹಣೆಯನ್ನು ಒಳಗೊಂಡಿದೆ.

ಬೆಳೆ ವ್ಯವಸ್ಥೆಯೊಂದಿಗೆ ಕೃಷಿ ಉದ್ಯಮ, ಹೈನುಗಾರಿಕೆ, ಆಹಾರ ಸಂಸ್ಕರಣೆಯನ್ನು ಒಟ್ಟಾಗಿ ಕೃಷಿ ವ್ಯವಸ್ಥೆ ಎನ್ನಲಾಗಿದೆ.

 

ಬೆಳೆ ವ್ಯವಸ್ಥೆಯ ಪ್ರಾಮುಖ್ಯತೆ

 1. ಮಣ್ಣಿನ ಫಲವತ್ತತೆ ವೃದ್ದಿ – ಸಾರಜನಕದ ಶೇಖರಣೆ, ಜೈವಿಕ ಅಂಶದ ವೃದ್ದಿ
 2. ದೊಗ ಮತ್ತು ಕೀಟ ನಿಯಂತ್ರಣ, ಕಳೆ ನಿವಾರಣೆ
 3. ಸಂಪನ್ಮೂಲಗಳ ಸದುಪಯೋಗ ಮತ್ತು ಫಲಕಾರಿತ್ವ ವೃದ್ಧಿ (ಮೇವು, ಸಾವಯವ ಗೊಬ್ಬರ, ಹೈನುಗಾರಿಕೆ)
 4. ನೈಸರ್ಗಿಕವಾಗಿ ಬೆಳೆ ವಿಮೆ – ಬೆಳೆ ವಿಫಲತೆಯ ಅಪಾಯ ಮಿತಗೊಳ್ಳುವುದು.
 5. ಆಹಾರ ಭದ್ರತೆ ಮತ್ತು ಆರ್ಥಿಕ ಭದ್ರತೆ

 

ಬೆಳೆಗಳ ಮಾದರಿ

 1. ಏಕ ಬೆಳೆ ಮಾದರಿ/ಪದ್ಧತಿ (Monoculture)
  1. ರೈತನ ಪರಿಣಿತಜ್ಞತೆ ಹೆಚ್ಚಾಗಿ ಬೇಕಿಲ್ಲ
  2. ವಾಯುಗುಣ ಪರಿಸ್ಥಿತಿ ಮತ್ತು ಸಮಾಜೋ-ಆರ್ಥಿಕ ಸ್ಥಿತಿಯನ್ನು ಅವಲಂಭಿಸಿದೆ
  3. ಕ್ರಮೇಣ ಮಣ್ಣಿನ ಫಲವತ್ತತೆ & ಉತ್ಪಾದಕತೆ ಕುಂಟಿತವಾಗುವುದು
 2. ಬಹುಬೆಳೆ ಮಾದರಿ/ಪದ್ಧತಿ (Polyculture)
  1. ಮಿಶ್ರ ಬೆಳೆಗಳು (Mixed Farming)
   1. ಏಕ ಕಾಲದಲ್ಲಿ ಎರಡು – ಎರಡಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುವುದು
   2. ನಿಯಮ ರಹಿತವಾದ ಒಣ ಬೇಸಾಯವಾಗಿದೆ
   3. ಕುಟುಂಬದ ಅವಶ್ಯಕತೆ ಪೂರೈಕೆಯೇ ಮುಖ್ಯವಾಗಿದೆ.
   4. ಸಾಮಾನ್ಯವಾಗಿ – ಒಂದೇ ರೀತಿಯ ಗೊಬ್ಬರ ಮತ್ತು ಕೀಟ ನಾಶಕಗಳ ಬಳಕೆ, ಏಕಕಾಲದಲ್ಲಿ ಬಿತ್ತನೆ, ಕೀಟ ನಿವಾರಣೆ ಕಷ್ಟ
  2. ಅಂತರ ಬೆಳೆಗಳು (Inter Cropping)
   1. ನಿರ್ಧಿಷ್ಟ ಸರಣಿಯಲ್ಲಿ 2 ಅಥವಾ 2ಕ್ಕಿಂತ ಅಧಿಕ ಬೆಳೆಗಳ ಬಿತ್ತನೆ
   2. ಉತ್ಪಾದನೆಯ ಸ್ಥಿರತೆ ನೆಲೆಯುರುವುದು
   3. ಸ್ಪರ್ಧಾತ್ಮಕತೆ ವೃದ್ಧಿಯಾಗುವುದು
   4. ವೈಜ್ಞಾನಿಕತೆಯ ಅರಿವು ಅಗತ್ಯ
   5. Row, Strip, Alley, Relay, Ratoon, Parallel ಮುಂತಾದವು ಈ ಪದ್ಧತಿಗೆ ಸೇರಿವೆ
  3. ಸರದಿ ಬೆಳೆಗಳು (Sequence Cropping)
   1. 2 -3 ಬೆಳೆಗಳು
   2. ಒಂದು ಬಾರಿ ಒಂದೇ ಬೆಳೆ
   3. ಬೆಳೆಗಳ ನಡುವೆ ಸ್ಪರ್ಧಾತ್ಮಕತೆ ಇರುವುದಿಲ್ಲ

 

ಕೃಷಿ ವ್ಯವಸ್ಥೆಗೆ ಉದಾಹರಣೆಗಳು

 1. ತೇವ ಪ್ರದೇಶಾಧಾರಿತ ಬೇಸಾಯ ಪದ್ಧತಿ
 2. ಒಣ ಭೂಮಿ ಆಧಾರಿತ ಕೃಷಿ ಪದ್ಧತಿ
 3. Gardenland based farming system

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos