Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 23 ನವೆಂಬರ್ 2020

 

ಪರಿವಿಡಿ

ಸಾಮಾನ್ಯ ಅಧ್ಯಯನ ಪತ್ರಿಕೆ – 2

1. ಚಂಡೀಗಡದ ಮೇಲೆ ಪಂಜಾಬ್ ಹಿಡಿತ ಹರಿಯಾಣಕ್ಕಿಂತ ಬಲವಾಗಿರಲು ಕಾರಣವೇನು?

2. ಟ್ರಂಪ್‘ಗೆ ನೀಡಿದ ಪ್ರಯೋಗಿಗ ಕೋವಿಡ್-19 ಲಸಿಕೆಗೆ FDAಯ ಅನುಮೋದನೆ ದೊರೆತಿದೆ

3. UNSC ಯಲ್ಲಿ ಭಾರತ ಅಫ್ಘಾನಿಸ್ತಾನದಲ್ಲಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ ಆದೇಶಿಸಿದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ  – 3

1. ಸಾಗರದಾಳದ ಯೋಜನೆಗೆ (Deep Ocean Mission) ಸರ್ಕಾರ ಸನ್ನದು

2. ಸೆಂಟಿನಲ್ ಉಪಗ್ರಹ ಎಂದರೇನು? ಅದರ ಪ್ರಾಮುಖ್ಯತೆ ಏನು?

3. ಕೇರಳಾದ ಹೊಸ 118A ಕಾನೂನು

4. ಸೀಮಾಂತ ಹೆದ್ದಾರಿ (Frontier highway) ಯೋಜನೆ

 

ಪೂರ್ವಭಾವಿ ಪರೀಕ್ಷಾ ಕೇಂದ್ರಿತ

1. SITMEX-20

2. ಅಪರಾಧಿ ಹಣಕಾಸು ಮತ್ತು ಕ್ರಿಪ್ಟೋ ಕರೆನ್ಸಿ ಮೇಲೆ ಜಾಗತಿಕ ಸಮಾವೇಶ

3. ರಾಷ್ಟ್ರೀಯ ನವಾಜಾತ ಸಪ್ತಾಹ – 2020

4. ಅವಾಸ್ ದಿನ ಮತ್ತು ಆವಾಸ್ ಸಪ್ತಾಹ

 

ದಿನಕ್ಕೊಂದು ವಿಷಯ

1. ಸಂವಿಧಾನದ ಮೂಲರಚನೆ

 

ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.

  1. ಸೋಮವಾರ – ರಾಜ್ಯಶಾಸ್ತ್ರ
  2. ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
  3. ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
  4. ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
  5. ಶುಕ್ರವಾರ – ಪರಿಸರ ಅಧ್ಯಯನ
  6. ಶನಿವಾರ – ಇತಿಹಾಸ

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯ : ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು

ಚಂಡೀಗಡದ ಮೇಲೆ ಪಂಜಾಬ್ ಹಿಡಿತ ಹರಿಯಾಣಕ್ಕಿಂತ ಬಲವಾಗಿರಲು ಕಾರಣವೇನು?


ಸಂದರ್ಭ

ಹರಿಯಾಣಮತ್ತು ಪಂಜಾಬ್ ಎರಡೂ ಚಂಡೀಗಡವನ್ನು ಕೇಂದ್ರಾಡಳಿತ ಪ್ರದೇಶವೆಂದು ಒಪ್ಪಿಕೊಂಡು, ತಮ್ಮ ಸ್ವತಂತ್ರ ರಾಜಧಾನಿಗಳನ್ನು ಮತ್ತು ಉಚ್ಚನ್ಯಾಯಾಲಯಗಳನ್ನು ರಚಿಸುವುದು ಉತ್ತಮವೆಂದು ಹರಿಯಾಣ ಸರ್ಕಾರ ಇತ್ತೀಚಿಗೆ ಹೇಳಿತು.

 

ಚಂಡೀಗಡದ ರಚನೆಗೆ ಕಾರಣ

 1. ಮೊದಲು ಪಂಜಾಬಿನ ರಾಜಧಾನಿಯಾಗಿದ್ದ ಲಾಹೋರ್ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಸೇರಿತು
 2. 1952 ರಿಂದ 1966 ವರೆಗೆ ಚಂಡೀಗಡ ಪಂಜಾಬಿನ ರಾಜಧಾನಿಯಾಗಿ ಉಳಿಯಿತು
 3. 1966 ರಲ್ಲಿ ಪಂಜಾಬ್ ಮರುಸಂಘಟನಾ ಸಮಯದಲ್ಲಿ ಚಂಡೀಗಡ ಕೇಂದ್ರಾಡಳಿತ ಪ್ರದೇಶವೆಂದು ಉಭಯ ರಾಷ್ಟ್ರಗಳಿಗೆ ರಾಜಧಾನಿಯಾಯಿತು

 

ರಚನೆಯ ಸಂದರ್ಭದಲ್ಲಿ ಏನು ಘೋಷಿಸಲಾಯಿತು

ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಕ್ರಮೇಣ ಹರಿಯಾಣ ತನ್ನದೇ ಆದ ರಾಜಧಾನಿಯನ್ನು ಹೊಂದಬೇಕು ಮತ್ತು ಚಂಡೀಗಡ ಪಂಜಾಬನ್ನು ಸೇರಲಿ ಎಂದು ಘೋಷಿಸಿದ್ದರು

1985ರ ರಾಜೀವ್-ಲಾಂಗೊವರ್ ಒಪ್ಪಂದದ ಪ್ರಕಾರ ಜನವರಿ 26, 1986 ರಂದು ಚಂಡೀಗಡವನ್ನು ಪಂಜಾಬಿಗೆ ಹಸ್ತಾಂತರಿಸಬೇಕಾಗಿತ್ತು. ಆದರೆ, ರಾಜೀವ್ ಗಾಂಧಿ ಸರ್ಕಾರ ಕೊನೆ ಹಂತದಲ್ಲಿ ಹಿಂದೆ ಸರಿಯಿತು.

 

ಇತ್ತೀಚಿನ ಬೆಳವಣಿಗೆಗಳು

2018 ರಲ್ಲಿ ಹರಿಯಾಣ ಮುಖ್ಯ ಮಂತ್ರಿಮನೋಹರ್ ಲಾಲ್ ಚಂಡೀಗಡದ ಅಭಿವೃದ್ಧಿಗೆ ವಿಶೇಷ ಸಂಸ್ಥೆಯನ್ನು ಸ್ಥಾಪಿಸಲು ಸೂಚಿಸಿದರು. ಪಂಜಾಬಿನ ಮುಖ್ಯ ಮಂತ್ರಿ ಇದನ್ನು ತಿರಸ್ಕರಿಸಿ ನಗರವು ನಿರ್ವಿವಾದವಾಗಿ ಪಂಜಾಬಿಗೆ ಸೇರಿದೆ ಎಂದರು.

Sources: Indian Express.

 

ವಿಷಯ : ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು

ಟ್ರಂಪ್‘ಗೆ ನೀಡಿದ ಪ್ರಯೋಗಿಗ ಕೋವಿಡ್-19 ಲಸಿಕೆಗೆ FDAಯಿಂದ ಅನುಮೋದನೆ ದೊರೆತಿದೆ


ಸಂದರ್ಭ

ಕೋವಿಡ್-19ಗೆ ಒಳಗಾದ ಟ್ರಂಪ್’ಗೆ ನೀಡಿದ ಪ್ರಾಯೋಗಿಕ ಹಂತದ ‘Antibody ಚಿಕಿತ್ಸೆ’ಗೆ ಆಹಾರ ಮತ್ತು ಔಷಧ ಇಲಾಖಾವತಿಯು ತುರ್ತುಪರಿಸ್ಥಿತಿಯ ನೆಲೆಯಲ್ಲಿ ಅಂಗೀಕರಿಸಿದೆ.

 

ಔಷಧ ಕುರಿತು :

 1. ಔಷಧವನ್ನು ರೆಜೆನೆರಾನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದೆ
 2. ಇದು ಕ್ಯಾಸಿರಿವಿಮಾಬ್ ಮತ್ತು ಇಮ್ಡೆವಿಮಾಬ್ ಎಂಬ ಎರಡು ‘Monocolonal Antibody’ಗಳ ಮಿಶ್ರಣವಾಗಿದೆ.
 3. ಇದನ್ನು ಸೊಂಕಿತರು ತೀವ್ರ ಅನಾರೋಗ್ಯಕ್ಕೆ ಒಳಗಾಗದಂತೆ ತಡೆಯಲು ವಿನ್ಯಾಸಗೊಳಿಸಲಾಗಿದೆ.
 4. ಇದು ತನ್ನದೇ ಆದ ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸುವ ಬದಲು ದೇಹದ ಸ್ವಾಭಾವಿಕ ರಕ್ಷಣಾ ವ್ಯವಸ್ಥಯನ್ನು ಅನುಕರಿಸುತ್ತದೆ.

 

Monocolonal Antibody’ಗಳು ಎಂದರೇನು?

 1. ಇವುಗಳು ಮಾನವ ನಿರ್ಮಿತ ಪ್ರೋಟೀನ್’ಗಳು
 2. ದೇಹದ ರೋಗ ನಿರೋಧಕ ಶಕ್ತಿಯನ್ನು ಅನುಕರಿಸಿ ಜೀವವನ್ನು ರಕ್ಷಿಸುತ್ತವೆ

polyclonal

Sources: the Hindu.

 

ವಿಷಯ : ಭಾರತ ಮತ್ತು ನೆರೆ ರಾಷ್ಟ್ರಗಳೊಂದಿಗಿನ ಅದರ ಸಂಬಂಧ

UNSC ಯಲ್ಲಿ ಭಾರತ ಅಫ್ಘಾನಿಸ್ತಾನದಲ್ಲಿ ತಾತ್ಕಾಲಿಕ ಯುದ್ಧ ವಿರಾಮಕ್ಕೆ ಆದೇಶಿಸಿದೆ


ಸಂದರ್ಭ :

ಇತ್ತೀಚಿಗೆ ನಡೆದ UNSC ಸಮಾವೇಶದಲ್ಲಿ ಭಾರತ “ಅರಿಯ ಸೂತ್ರ”ದ ನೆಲೆಯಲ್ಲಿ ಡ್ಯುರಾಂಡ್ ಗಡಿಯುದ್ದಕ್ಕೂ ಭಯೋತ್ಪಾದನೆ ನಿಗ್ರಹ ಮೂಲಕ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಗೊಳಿಸಲು ಕೋರಿದೆ.

 

ಭಾರತದ ಈ ನಡೆಗೆ ಕಾರಣವೇನು?

ಆಫ್ಘನ್ ಶಾಂತಿ ಪ್ರಕ್ರಿಯೆ ಮತ್ತು ನ್ಯಾಟೋ ಮಾತ್ರಿ ಕೂಟಗಳ ಹಿನ್ನಡೆಯಿಂದಾಗಿ ಉಭಯ ರಾಷ್ಟ್ರಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಗುರಿಯಾಗುವ ಸಾಧ್ಯತೆಗಳಿವೆ.

ಈ ವರ್ಷದ ಮೇ ತಿಂಗಳಿನಲ್ಲಿ, ವಿಶ್ವ ಸಂಸ್ಥೆಯ ವರದಿಯು ಅಮೇರಿಕಾದ ಆಶ್ವಾಸನೆಯ ಹೊರತಾಗಿಯೂ ತಾಲಿಬಾನ್ ಆಶ್ರಯದಿಂದಾಗಿ ಆಫ್ಘಾನಿಸ್ತಾನದಲ್ಲಿ ಆಲ್ ಖೈದಾ ಇನ್ನೂ ಅಸ್ತಿತ್ವದಲ್ಲಿದ್ದು ಕ್ರಿಯಾಶೀಲವಾಗಿದೆ ಎಂಬುದಕ್ಕೆ ಪುರಾವೆಗಳನ್ನು ನೀಡಿದೆ.

 

ಮುಂದಿನ ಕ್ರಮಗಳು

ಆಫ್ಘಾನಿಸ್ತಾನದಲ್ಲಿ  ಹಿಂಸೆಯನ್ನು ನಿವಾರಿಸಿ ಶಾಂತಿ ಮತ್ತು ಸುಸ್ಥಿರತೆಯನ್ನು ನೆಲೆಗೊಳಿಸಲು ಭಯೋತ್ಪಾದಕರ ಜಾಲವನ್ನು ಅಂತ್ಯಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತ ನಾಲ್ಕು ಅಂಶಗಳನ್ನು ಮಂಡಿಸಿದೆ

 1. ಪ್ರಕ್ರಿಯೆಯು ಅಫ್ಘಾನಿಸ್ತಾನದ ನೇತೃತ್ವದಲ್ಲಿರಬೇಕು ಮತ್ತು ಆಫ್ಘಾನಿಸ್ತಾನದ ಸ್ವಾಮ್ಯತೆಯನ್ನು ಹೊಂದಿರಬೇಕು
 2. ಭಯೋತ್ಪಾದನೆಗೆ ಶೂನ್ಯ ಸಹಿಷ್ಣತೆಯನ್ನು (Zero Tolerence) ಹೊಂದಿರಬೇಕು
 3. ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಅಲ್ಪಸಂಖ್ಯಾತರ ಮತ್ತು ದುರ್ಬಲರ ಹಕ್ಕು – ಹಿತಾಸಕ್ತಿಗೆ ಒತ್ತು ನೀಡಬೇಕು
 4. ಇತರೆ ರಾಷ್ಟ್ರಗಳು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಆಫ್ಘಾನಿಸ್ತಾನದ ಸಾರಿಗೆ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳಬಾರದು.

Sources: the Hindu.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು, ದೇಶಿಯ ತಂತ್ರಜ್ಞಾನ, ನವ ತಂತ್ರಜ್ಞಾನದ ಅಭಿವೃದ್ಧಿ

ಸಾಗರದಾಳದ ಯೋಜನೆಗೆ (Deep Ocean Mission) ಸರ್ಕಾರ ಸನ್ನದು


ಸಂದರ್ಭ:  :
ಭಾರತ “Deep Ocean Mission” ಎಂಬ ಮಹಾತ್ವಾಕಾಂಕ್ಷೆಯ ಯೋಜನೆಗಾಗಿ ಅಗತ್ಯವಾದ ಅನುಮೋದನೆಯನ್ನು ಶೀಘ್ರದಲ್ಲಿ ಪಡೆಯಲು ಪ್ರಯತ್ನಿಸುತ್ತಿದೆ.

 

ಯೋಜನೆ ಕುರಿತು :

ಸುಮಾರು ಮೂರು ದಶಕಗಳ ಹಿಂದೆ ಇಸ್ರೋ ಬಾಹ್ಯಾಕಾಶವನ್ನು ಅನ್ವೇಷಿಸಿದ ರೀತಿಯಲ್ಲಿ ಸಾಗರದಾಳದ ಮೇಲ್ಮೈಯನ್ನು ಅನ್ವೇಷಿಸುವುದಾಗಿದೆ.

ಯೋಜನೆಯ ಉದ್ದೇಶವು

 1. ಸಾಗರದಾಳದ ಗಣಿಗಾರಿಕೆ
 2. ಸಾಗರಿಕ ವಾಯುಗುಣ ವೈಪರಿತ್ಯದ ಸಲಹಾ ಸೇವೆಗಳು
 3. ಸಾಗರದಾಳದ ವಾಹನ ಮತ್ತು ಯಂತ್ರೋಪಕರಣಗಳಿಗೆ ಸಂಬಧಿಸಿದ ತಂತ್ರಜ್ಞಾನಗಳು
 4. ಸಾಗರದಲೆಗಳ ಮೂಲಕ ನಿರ್ಲವಣೀಕರಣ ಕೇಂದ್ರಗಳ ನಿರ್ಮಾಣ

 

ಪ್ರಾಮುಖ್ಯತೆ

 1. ವಿಶಾಲವಾದ ವಿಶೇಷ ಆರ್ಥಿಕ ವಲಯ ಮತ್ತು ಖಂಡಾಂತರ ತೀರ ಭಾಗದ (COntinental Shelf) ಅನ್ವೇಷಣೆಗೆ ಈ ಉತ್ತೇಜನ ದೊರೆಯಲಿದೆ.
 2. ಹಿಂದೂ ಮಹಾಸಾಗರದ ಮಧ್ಯ ಭಾಗದಲ್ಲಿರುವ ಸಂಪನ್ಮೂಲಗಳ ಬಳಕೆಗೆ ಅಗತ್ಯವಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಭಾರತಕ್ಕೆ ಅವಕಾಶ ದೊರೆಯಲಿದೆ.

 

ಸಾಮರ್ಥ್ಯ

UN International Sea Bed Authority ಹಿಂದೂ ಮಹಾಸಾಗರದ ಮಧ್ಯ ಭಾಗದಲ್ಲಿ (CIOB)75000 ಚ.ಕಿ.ಮೀ ಪ್ರದೇಶವನ್ನು ಭಾರತಕ್ಕೆ ಪಾಲಿ ಮೆಟಲಿಕ್ ನಡ್ಯುಲ್ ಅನ್ವೇಷಣೆಗೆ ಬಳಸಲು ಅನುಮತಿ ನೀಡಿದೆ

 1. ಇಲ್ಲಿ ಕಬ್ಬಿಣ, ಮ್ಯಾಂಗನೀಸ್, ಕೋಬಾಲ್ಟ್ ಮತ್ತು ನಿಕಲ್ ಲೋಹಗಳ ನಿಕ್ಷೇಪಗಳಿವೆ.
 2. ಈ ನಿಕ್ಷೇಪದ 10% ಬಳಕೆ ಮುಂದಿನ 100 ವರ್ಷಗಳವರೆಗೆ ಭಾರತದ ಶಕ್ತಿಯ ಅಗತ್ಯವನ್ನು ಪೂರೈಸುತ್ತದೆ.ಎಂದು ಅಂದಾಜಿಸಲಾಗಿದೆ.

 

ಪಾಲಿ ಮೆಟಲಿಕ್ ನೋಡ್ಯುಲ್ ಎಂದರೇನು ?

ಇವುಗಳು ಮ್ಯಾಂಗನೀಸ್ ನೋಡ್ಯುಲ್‘ಗಳು. ಇವು ದುಂಡಾಕಾರವಾಗಿದ್ದು ರಂಧ್ರಮಯವಾಗಿವೆ. ಅಲ್ಲದೆ, ಸಾಗರದ ತಳಭಾಗವನ್ನು ಬಹುತೇಕವಾಗಿ ಸುತ್ತುವರೆದಿವೆ.

ಇವುಗಳು ಕಬ್ಬಿಣ, ಮ್ಯಾಂಗನೀಸ್, ಕೋಬಾಲ್ಟ್, ನಿಕಲ್, ಸೀಸ, ತಾಮ್ರ, ಮೊಲುಬ್ದಿನಂ, ಕ್ಯಾಡ್ಮಿಯಂ, ವ್ಯನಡಿಯಂ, ಟೈಟ್ಯಾನಿಯಂ, ಮುಂತಾದವುಗಳಿಂದ ಸಂಯೋಜಿಸಲ್ಪಟ್ಟಿದೆ.

ಇದರಲ್ಲಿ ನಿಕ್ಕಲ್, ಕೋಬಾಲ್ಟ್ ಮತ್ತು ತಾಮ್ರ ಆರ್ಥಿಕ ಮತ್ತು ಆಯಾಕಟ್ಟಿನ ಮಹತ್ವವನ್ನು ಹೊಂದಿವೆ.

Sources: the Hindu.

 

ವಿಷಯ : ಬಾಹ್ಯಾಕಾಶ. ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಲಯ ಮತ್ತು ಬೌದ್ಧಿಕ ಹಕ್ಕುಗಳ ಕುರಿತು ಅರಿವು

ಸೆಂಟಿನಲ್ ಉಪಗ್ರಹ ಎಂದರೇನು? ಅದರ ಪ್ರಾಮುಖ್ಯತೆ ಏನು?


ಸಂದರ್ಭ :

ಕೋಪರ್ನಿಕಸ್ ಸೆಂಟಿನಲ್ -6 ಮೈಕಲ್ ಉಪಗ್ರಹದ ಮೂಲಕ ಸಾಗರದ ವಿದ್ಯಾಮಾನಗಳನ್ನು ಗ್ರಹಿಸಲು ವಿನ್ಯಾಸಗೊಳಿಸಲಾಗಿದೆ.

 1. ಸ್ಪೆಸೆಕ್ಸ್ ಫಾಲ್ಕನ್ -9 ರಾಕೆಟ್ ಮೂಲಕ ಕ್ಯಾಲಿಫೋರ್ನಿಯಾದಿಂದ ಉಡಾಯಿಸಲಾಯಿತು.
 2. ಜಾಸನ್-CS ಯೋಜನೆಯ ಭಾಗವಾಗಿದ್ದು ಜಾಗತಿಕವಾಗಿ ಸಮುದ್ರಮಟ್ಟದ ಬದಲಾವಣೆಯನ್ನು ಅಳೆಯಲು ಬದ್ಧವಾಗಿದೆ

 

ಏನಿದು ಯೋಜನೆ ?

 1. ಇದು ‘ಜಾಸನ್ ನಿರಂತರ ಸೇವಾ’ ಯೋಜನೆಯಾಗಿದೆ.
 2. ಸಮುದ್ರ ಮಟ್ಟವನ್ನು ಅಳೆಯುವ ಮೂಲಕ ಭೂಮಿಯ ವಾಯುಗುಣ ಬದಲಾಗುತ್ತಿರುವ ಬಗೆಯನ್ನು ಅರಿಯಬಹುದಾಗಿದೆ.
 3. ಇದನ್ನು ಯೂರೋಪಿನ ಬಾಹ್ಯಾಕಾಶ ಸಂಸ್ಥೆ, ನಾಸಾ, ಅಮೇರಿಕಾದ NOAA, ಯುರೋಪಿಯನ್ ಒಕ್ಕೂಟ ಫ್ರಾನ್ಸ್’ನ ಬಾಹ್ಯಾಕಾಶ ಅಧ್ಯಯನದ ರಾಷ್ಟ್ರೀಯ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

 

ಉಪಗ್ರಹದ ಕಾರ್ಯವೇನು?

 1. ಜಾಗತಿಕವಾಗಿ ಸಮುದ್ರ ಮಟ್ಟದ ಏರಿಕೆಯನ್ನು ಅಳೆಯುವುದು
 2. ತರಂಗಗಳನ್ನು ಭೂ ಮೇಲ್ಮೈಯಿಂದ ಕಳುಹಿಸಿ ಮರುಪಡೆಯುವ ಪ್ರಕ್ರಿಯೆ ಮೂಲಕ ವಿಜ್ಞಾನಿಗಳು ಸಾಗರದ ಮಟ್ಟವನ್ನು ಅಳೆಯಬಹುದಾಗಿದೆ
 3. ನೀರಾವಿಯ ಪ್ರಮಾಣವನ್ನು ಅಳೆಯಬಹುದಾಗಿದೆ. ಅಲ್ಲದೆ, ಲೇಸರ್ ಮೂಲಕ ಜಿಪಿಎಸ್ ಸೌಲಭ್ಯ ಪಡೆಯಬಹುದಾಗಿದೆ.

 

ಉಪಗ್ರಹದ ದತ್ತಾಂಶದ ಪ್ರಾಮುಖ್ಯತೆ

 1. ದತ್ತಾಂಶದ ಮೂಲಕ ಅಲ್ಪಾವಧಿ ಹವಾಮಾನ ಮುನ್ಸೂಚನೆ ನೀಡಬಹುದಾಗಿದೆ.
 2. ಎಲ್-ನಿನೋ, ಲಾ-ನಿನೋ ಕುರಿತು ದೀರ್ಘಾವಧಿ ಮುನ್ಸೂಚನೆ ಪಡೆಯಬಹುದಾಗಿದೆ.

 

ಸಾಗರದ ಮಟ್ಟ ಅರಿಯುವ ಉದ್ದೇಶವೇನು?

 1. ಬಾಹ್ಯಾಕಾಶದಿಂದಲೇ
  1. ಜಾಗತಿಕವಾಗಿ ಸಾಗರದ ಮಟ್ಟವನ್ನು ಗಮನಿಸಬಹುದು
  2. ಸಾಗರಿಕ ಪ್ರವಾಹದಲ್ಲಿನ ಬದಲಾವಣೆ ಮತ್ತು ಉಷ್ಣತೆಯನ್ನ ಅಭ್ಯಸಿಸಬಹುದಾಗಿದೆ
 2. ವಿಜ್ಞಾನಿಗಳಿಗೆ ವಾಯುಗುಣದ ಮೇಲೆ ಬದಲಾಗುತ್ತಿರುವ ಸಾಗರಿಕ ಮೇಲ್ಮೈ ಉಂಟುಮಾಡುವ ಪರಿಣಾಮದ ಬಗ್ಗೆ ಮಾಹಿತಿ ನೀಡುತ್ತದೆ.
 3. ಸಾಗರಿಕ ಉಷ್ಣ ಆಯವ್ಯಯದ ಬದಲಾವಣೆಯನ್ನು ಅರಿಯಬಹುದಾಗಿದೆ

 

ಇದೇ ಉದ್ಧೇಶವನ್ನು ಪೂರೈಸುವ ಇತರೆ ಉಪಗ್ರಹಗಳು :

 1. ಟೊಪೆಕ್ಸ್ / ಪೋಸಿಡಾನ್
 2. ಜೇಸನ್ -1
 3. ಒಎಸ್ಟಿಎನ್ / ಜೇಸನ್ -2

 

 

ವಿಷಯ : ಸಂವಹನ ಜಾಲ, ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳು ಆಂತರಿಕ ಭದ್ರತೆಗೆ ಒಡ್ಡುವ ಸವಾಲುಗಳು; ; ಸೈಬರ್ ಭದ್ರತೆಯ ಮೂಲಾಂಶಗಳು; ಮನಿ-ಲಾಂಡ್ರಿಂಗ್ ಮತ್ತು ಅದರ ನಿವಾರಣೆ

ಕೇರಳಾದ ಹೊಸ 118A ಕಾನೂನು


ಸಂದರ್ಭ :

ಸಾಮಾಜಿಕ ಮಾಧ್ಯಮದಲ್ಲಿ ‘ಆಕ್ರಮಣಕಾರಿ,’ ‘ನಿಂದನೀಯ’ ಮತ್ತು ‘ಬೆದರಿಕೆ’ ಪ್ರೇರಿತ ಪೋಸ್ಟ್‌ಗಳಿಗೆ ದಂಡ ವಿಧಿಸಲು ಕೇರಳ ಸರ್ಕಾರ ಕೇರಳ ಪೊಲೀಸ್ ಕಾಯ್ದೆ ಅಡಿಯಲ್ಲಿ ಸೆಕ್ಷನ್ 118 ಎ ಅನ್ನು ಸುಗ್ರೀವಾಜ್ಞೆಯ ಮೂಲಕ ಪರಿಚಯಿಸಿದೆ .

 

ನವ ಕಾನೂನು :

“ವ್ಯಕ್ತಿಯೊಬ್ಬನನ್ನು ಅಥವಾ ಒಂದು ವರ್ಗದ ವ್ಯಕ್ತಿಗಳನ್ನು ಬೆದರಿಸುವುದು, ನಿಂದಿಸುವುದು, ಅವಮಾನಿಸುವುದು ಅಥವಾ ಮಾನಹಾನಿ ಮಾಡುವುದು, ಅದು ಸುಳ್ಳು ಎಂದು ತಿಳಿದುಕೊಂಡು ಮನಸ್ಸಿಗೆ, ಪ್ರತಿಷ್ಠೆಗೆ ಹಾನಿ ಉಂಟುಮಾಡುವ, ಯಾವುದೇ ರೀತಿಯ ಸಂವಹನ ವಿಧಾನ, ಯಾವುದೇ ವಿಷಯ ಅಥವಾ ವಿಷಯದ ಮೂಲಕ ವ್ಯಕ್ತಪಡಿಸುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ. ಅಥವಾ ಅಂತಹ ವ್ಯಕ್ತಿ ಅಥವಾ ವರ್ಗದ ವ್ಯಕ್ತಿಗಳ ಆಸ್ತಿ ಅಥವಾ ಅವರು ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿಯ ಮೇಲೆ ಅಪರಾಧ ಸಾಬೀತಾದರೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10 ಸಾವಿರ ರೂ ದಂಡ ಅಥವಾ ಎರಡನ್ನೂ ವಿಧಿಸ ಬಹುದಾಗಿದೆ. ”

 1. ಇದರರ್ಥ ಒಬ್ಬ ವ್ಯಕ್ತಿಯು ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡವನ್ನು “ಆಕ್ರಮಣಕಾರಿ” ಅಥವಾ “ಮಾನಹಾನಿಕರ” ಎಂದು ಪರಿಗಣಿಸುವ ಯಾವುದೇ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಅನುಭವಿಸಬೇಕಾಗುವುದು.
 2. ಕೇವಲ ಅಂತಹ ಪೋಸ್ಟ್ ಬರೆಯಲು ಅಥವಾ ರಚಿಸಲು ಮಾತ್ರವಲ್ಲ, ಆದರೆ ಆ ಪೋಸ್ಟ್ ಅಥವಾ ಅಭಿಪ್ರಾಯವನ್ನು ಹಂಚಿಕೊಳ್ಳುವವರು ಸಹ ಅದೇ ರೀತಿಯ ಶಿಕ್ಷೆಯನ್ನು ಒಳಗಾಗುವರು.

 

ಕಾನೂನಿನ ಅಗತ್ಯತೆ :

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ 2015ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಧನ್ 66A – ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118 (ಡಿ)ಯನ್ನು ನಿರಚನೆಗೊಳಿಸಿತ್ತು.

 1. ಈ ಹೊಸ ಕಾನೂನು ಮೇಲಿನ ಕಾನೂನುಗಳನ್ನು ನಿರಚನೆಗೊಳಪಡಿಸಿ ಆಮೂಲಕ ‘ಕಾನೂನಿನ ನಿರ್ವಾತ’ವನ್ನು ನಿವಾರಿಸುತ್ತದೆ.
 2. ಪ್ರಸ್ತುತದಲ್ಲಿನ ಕಾನೂನುಗಳು ಆನ್‌ಲೈನ್‌ನಲ್ಲಿ ಅಪರಾಧಗಳನ್ನುತಡೆಗಟ್ಟಲು, ನಮ್ಮ ಸಮಾಜದ ಮಹಿಳೆಯರಿಗೆ ಘನತೆಯನ್ನು ಎತ್ತಿಹಿಡಿಯಲು, ಖಾಸಗಿತನದ ಹಕ್ಕಿನ ಸಮಸ್ಯೆಯನ್ನು ದಕ್ಷವಾಗಿ ಎದುರಿಸಲು ಅಸಮರ್ಪಕವಾಗಿವೆ.

118

 

ಈ ಕಾನೂನು ಟೀಕೆಗೆ ಒಳಗಾಗಲು ಕಾರಣವೇನು?

ವಿದ್ವಾಂಸರು ಕಾನೂನನ್ನು ದಮನಿಯ ಎನ್ನಲು

 1. ಇದು ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ನಿರಾಕರಣೆಯ ಹಕ್ಕನ್ನು ಮೊಟಕುಗೊಳಿಸಿದೆ
 2. ನ್ಯಾಯಾಲಯ ರದ್ದುಗೊಳಿಸಿದ್ದ ಐಟಿ ಕಾಯ್ದೆಯ ಸೆಕ್ಷನ್-66A ಮರುಜೀವಪಡೆದಂತಾಗಿದೆ.
 3. ಕಾನೂನು ಅನಿರ್ದಿಷ್ಟ ಮತ್ತು ಅಸ್ಪಷ್ಟವಾಗಿದೆ. ಹಾಗಾಗಿ, ಸರ್ಕಾರ, ಜನತೆ ಮತ್ತು ಪೊಲೀಸರಿಂದ ಅಪಪ್ರಯೋಗಗಕ್ಕೆ ಒಳಗಾಗಬಹುದಾಗಿದೆ
 4. ಮಹಿಳೆಯರ ಮೇಲಿನ ಸೈಬರ್ ಅಪರಾದಗಳ ವಿರುದ್ಧ ಹೋರಾಡುವುದಕ್ಕೆ ಸೂಕ್ತ ಪ್ರಕ್ರಿಯೆಯ ಅಭಾವವನ್ನು ಎದುರಿಸುತ್ತಿದೆ.
 5. 19ನೇ ವಿಧಿಯನ್ನು ಸಕ್ರಿಯ ನೆಲೆಯಲ್ಲಿ ನಿರ್ಬಂಧಿಸುತ್ತ್ತದೆ
 6. ಸ್ವಯಂ-ಪ್ರೇರಿತ ನೆಲೆಯಲ್ಲಿ ದೂರು ದಾಖಲಿಸಲು ಪೊಲೀಸರಿಗೆ ಅನಿರ್ಬಂಧಿತ ಅಧಿಕಾರವನ್ನು ನೀಡುತ್ತದೆ.

Sources: the Hindu.

 

ವಿಷಯ : ಗಡಿ ಭಾಗದಲ್ಲಿ ಭದ್ರತೆಯ ಸವಾಲುಗಳು ಮತ್ತು ಗಡಿ ನಿರ್ವಹಣೆ – ಭಯೋತ್ಪಾದನೆ ಮತ್ತು ವ್ಯವಸ್ಥಿತ (ಸಂಘಟಿತ) ಅಪರಾಧಗಳ ನಡುವಿನ ಸಂಬಂಧ

ಸೀಮಾಂತ ಹೆದ್ದಾರಿ (Frontier highway) ಯೋಜನೆ


ಸಂದರ್ಭ

ಮೇ ತಿಂಗಳಲ್ಲಿ ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಸಂಘರ್ಷ, ಅರುಣಾಚಲ ಪ್ರದೇಶವು ಯುದ್ಧದಂತಹ ಪರಿಸ್ಥಿತಿ ಎದುರಾದರೆ ಸೈನ್ಯವನ್ನು ವೇಗವಾಗಿ ಚಲಿಸಲು ಅನುಕೂಲವಾಗುವಂತೆ “ಭಾರತ-ಟಿಬೆಟ್ ಗಡಿಯ” ಉದ್ದಕ್ಕೂ ಮಹತ್ವಾಕಾಂಕ್ಷೆಯ ಗಡಿನಾಡಿನ ಹೆದ್ದಾರಿ ಯೋಜನೆಗೆ ಮುಂದಾಗಿದೆ .

 

ಸೀಮಾಂತ (ಗಡಿ) ಹೆದ್ದಾರಿ ಯೋಜನೆ ಬಗ್ಗೆ

 1. ಇದನ್ನು ಅರುಣಾಚಲ ಗಡಿನಾಡ ಹೆದ್ದಾರಿ ಮತ್ತು ಮಾಗೋ-ಥಿಂಗ್ಬು-ವಿಜಯನಗರ ಗಡಿ ಹೆದ್ದಾರಿ ಎನ್ನಲಾಗಿದೆ
 2. 2 ಸಾವಿರ ಕಿ.ಮೀ ಉದ್ದದ ರಸ್ತೆ ಮೆಕ್ ಮಹೊನ್ ಮಾರ್ಗವನ್ನು ಅನುಸರಿಸುತ್ತದೆ
 3. ಟ್ರಾನ್ಸ್-ಅರುಣಾಚಲ ಹೆದ್ದಾರಿ (ಮಧ್ಯದ ಮೂಲಕ) ಮತ್ತು ಅರುಣಾಚಲ ಪೂರ್ವ-ಪಶ್ಚಿಮ ಹೆದ್ದಾರಿಯ ಮೂಲಕ ಭಾರತದ ಪೂರ್ವಕ್ಕೆ ಗಮನಿಸಿ (Look East) ನೀತಿಗೆ ಪೂರಕವಾಗಿದೆ
 4. ಈ ಯೋಜನೆ ದಿಬಾಂಗ್ ವನ್ಯಜೀವಿ ಅಭಯಾರಣ್ಯವನ್ನು ಪ್ರವೇಶಿಸಲಿದ್ದು ಪರಿಸರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

 

ಇದರ ಅಗತ್ಯತೆ:

 1. ಉದ್ಯೋಗ ಸೃಷ್ಟಿಯಾಗುವುದು
 2. ಪ್ರವಾಸೋಧ್ಯಮಕ್ಕೆ ಉತ್ತೇಜನ ದೊರೆಯುವುದು
 3. ಚೀನಾದ ಆಕ್ರಮಣವನ್ನು ಪರಿಶೀಲನೆ ಮತ್ತು ಗಡಿ ಭದ್ರತೆ ವೃದ್ಧಿಯಾಗುವುದು

Sources: the Hindu.

 


ಪೂರ್ವಭಾವಿ ಪರೀಕ್ಷಾ ಕೇಂದ್ರಿತ


SITMEX-20

 1. ಭಾರತ, ಥೈಲ್ಯಾಂಡ್ ಮತ್ತು ಸಿಂಗಾಪುರ ನಡುವಿನ ತ್ರಿಪಕ್ಷೀಯ ನೌಕಾ ತಾಲೀಮು.
 2. ಇತ್ತೀಚಿನ ಆವೃತ್ತಿ ಅಂಡಮಾನ್ ಸಮುದ್ರದಲ್ಲಿ ನಡೆಯಿತು.
 3. ಕೊರೋನಾದಿಂದಾಗಿ ಇದನ್ನು ಸಮುದ್ರದಲ್ಲಿ ಮಾತ್ರ ಸಂಪರ್ಕ ರಹಿತವಾಗಿ ನಡೆಸಲಾಯಿತು.
 4. ಇದು ನೆರೆ ರಾಷ್ಟ್ರಗಳ ನಡುವೆ ಸಾಗರ ವಲಯದಲ್ಲಿ ವೃದ್ಧಿಯಾಗುತ್ತಿರುವ ಸಮನ್ವಯತೆ, ಸಹಯೋಗ ಮತ್ತು ಸಹಭಾಗಿತ್ವವನ್ನು ಎತ್ತಿ ತೋರುತ್ತದೆ.

 

ಅಪರಾಧಿ ಹಣಕಾಸು ಮತ್ತು ಕ್ರಿಪ್ಟೋ ಕರೆನ್ಸಿ ಮೇಲೆ ಜಾಗತಿಕ ಸಮಾವೇಶ

 1. ಇತ್ತೀಚಿಗೆ ಹಣಕಾಸು ಮತ್ತು ಕ್ರಿಪ್ಟೋಕರೆನ್ಸಿ ಕುರಿತ  4ನೇ ಜಾಗತಿಕ ಸಮ್ಮೇಳನ ನಡೆಯಿತು
 2. ಇಂಟರ್ಪೋಲ್, ಯುರೋಪೋಲ್ ಮತ್ತು ಬೆಸಿಲ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯಿತು.
 3. ಭಾಗಿದಾರರು : ಕಾನೂನು ಅನುಷ್ಠಾನ ಮತ್ತು ನ್ಯಾಯಾಂಗ, ಹಣಕಾಸು ಗುಪ್ತಚರ ಘಟಕಗಳು (ಎಫ್‌ಐಯು), ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪ್ರತಿನಿಧಿಗಳು

ಹಿನ್ನೆಲೆ:                                    

ಈ ಸಮ್ಮೇಳನವು 2016 ರ ಕ್ರಿಪ್ಟೋಕರೆನ್ಸಿ ಮತ್ತು ಮನಿ ಲಾಂಡರಿಂಗ್ ಕುರಿತ ಕಾರ್ಯನಿರತ ಉಪಕ್ರಮವಾಗಿದೆ .

ಅಗೋಚರ (Virtual) ಸ್ವತ್ತುಗಳು ಮತ್ತು ಕ್ರಿಪ್ಟೋಕರೆನ್ಸಿಗಳ ಮೇಲಿನ ಆರ್ಥಿಕ ಅಪರಾಧ ಮತ್ತು ಬುದ್ಧಿಮತ್ತೆಯ ತನಿಖೆಗಾಗಿ ಜ್ಞಾನ, ಪರಿಣತಿ, ಉತ್ತಮ ಪ್ರಕ್ರಿಯೆಗಳನ್ನು ಬಲಪಡಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ .

 

ರಾಷ್ಟ್ರೀಯ ನವಾಜಾತ ಸಪ್ತಾಹ – 2020

 1. ಪ್ರತಿ ವರ್ಷ ನವೆಂಬರ್ 15 ರಿಂದ 21 ರವರೆಗೆ ಆಚರಿಸಲಾಗುತ್ತದೆ.
 2. 2020 ರ ಆಶಯ: ‘ಪ್ರತಿ ನವಜಾತ ಶಿಶುವಿಗೆ ಎಲ್ಲೆಡೆ ಎಲ್ಲೆಡೆ ಗುಣಮಟ್ಟ, ಸಮಾನತೆ, ಘನತೆಯಿಂದ ಕೂಡಿದ ಸರ್ವ ಆರೋಗ್ಯ ಸೌಲಭ್ಯ ಲಭ್ಯ’
 3. ಉದ್ದೇಶ
  1. ನವಜಾತ ಆರೋಗ್ಯ ಸೌಲಭ್ಯದ ಬಲಪಡಿಸುವಿಕೆ
  2. ಪ್ರಸವ ನಂತರದ ಅವಧಿಯಲ್ಲಿ ಶಿಶು ಆರೋಗ್ಯ ಸುಧಾರಣೆ
  3. ಶಿಶು ಮರಣ ಪ್ರಮಾಣ ಮಿತಗೊಳಿಸುವಿಕೆ.
 4. 2014 ರಲ್ಲಿ, ಭಾರತದ ನವಜಾತ ಕ್ರಿಯಾ ಯೋಜನೆ (INAP) ಯನ್ನು ಆರಂಭಿಸುವ ಮೂಲಕ ನವಜಾತ ಸಾವು, ಕಡಿಮೆ ತೂಕ ನಿಯಂತ್ರಣದ ಉದ್ದೇಶವಿರುವ ಜಾಗತಿಕ ನವಜಾತ ಕ್ರಿಯಾ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಷ್ಟ್ರವಾಯಿತು.

 

ಅವಾಸ್ ದಿನ ಮತ್ತು ಆವಾಸ್ ಸಪ್ತಾಹ

2022ರ ವೇಳೆಗೆ “ ಎಲ್ಲರಿಗೂ ವಸತಿ” ಒದಗಿಸುವ ಗುರಿಯನ್ನು ಹೊಂದಿರುವ ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (ಪಿಎಂಎವೈ-ಜಿ) ಪ್ರಾರಂಭದ ನೆನಪಿಗಾಗಿ, ಪ್ರತಿ ವರ್ಷ ನವೆಂಬರ್ 20 ಅನ್ನು “ಆವಾಸ್ ದಿವಾಸ್” ಎಂದು ಆಚರಿಸಲು ನಿರ್ಧರಿಸಲಾಯಿತು .

2022 ರ ವೇಳೆಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ 2.95 ಕೋಟಿ ಪಿಎಂಎವೈ-ಜಿ ಮನೆಗಳನ್ನು ಪೂರ್ಣಗೊಳಿಸಲು ಈ ಕಾರ್ಯಕ್ರಮವು ಉದ್ದೇಶಿಸಿದೆ.

 


ದಿನಕ್ಕೊಂದು ವಿಷಯ


ಸಂವಿಧಾನದ ಮೂಲರಚನೆ:

ಸಂಬಂಧಿತ ಪ್ರಕರಣಗಳು

 1. ಶಂಕರಿ ಪ್ರಸಾದ ಪ್ರಕರಣ (1951)
 2. ಸಜ್ಜನ್ ಸಿಂಗ್ ಪ್ರಕರಣ (1965)
 3. ಗೋಲಕ್ ನಾಥ್ ಪ್ರಕರಣ (1967)
 4. ಕೇಶವಾನಂದ ಭಾರತಿ ಪ್ರಕರಣ (1973)

 

ಮೂಲರಚನೆಯ ಅಂಗಗಳು

 1. ಪ್ರಸ್ತಾವನೆ – ಸಂವಿಧಾನದ ಸರ್ವೋಚ್ಚತೆ, ಸಾರ್ವಭೌಮತೆ, ಪ್ರಜಾಪ್ರಭುತ್ವಿಯ, ಗಣತಂತ್ರ, ಜಾತ್ಯತೀತತೆ, ರಾಷ್ಟ್ರದ ಏಕತೆ ಮತ್ತು ಸಮಗ್ರತೆ, ಒಕ್ಕೂಟವಾದ,
 2. ಮೂಲಭೂತ ಹಕ್ಕುಗಳು – ಹಕ್ಕುಗಳ ಸಾರ, ಸಮಾನತೆಯ ಸಿದ್ಧಾಂತ, ಸಾಂವಿಧಾನಿಕ ಪರಿಹಾರ ಹಕ್ಕುಗಳು
 3. ನಿರ್ದೇಶಕ ತತ್ವಗಳು – ಅಧಿಕಾರ ವಿಭಜನೆ, ಕಲ್ಯಾಣ ರಾಜ್ಯ, ಹಕ್ಕು ಮತ್ತು ನಿರ್ದೇಶಕ ತತ್ವಗಳ ನಡುವೆ ಸಾಮರಸ್ಯ,
 4. ನ್ಯಾಯಾಂಗ — ನ್ಯಾಯಾಂಗದ ಸ್ವತಂತ್ರತೆ, ನ್ಯಾಯಾಂಗ ಪರಾಮರ್ಶೆ,
 5. ಸಂಸತ್ತು – ಮುಕ್ತ & ನ್ಯಾಯೋಚಿತ ಚುನಾವಣೆ, ಸಂಸದೀಯ ಮಾದರಿ ವ್ಯವಸ್ಥೆ, ತಿದ್ದುಪಡಿಯ ಸೀಮಿತ ಅಧಿಕಾರ,

 

ನೆನಪಿಡಬೇಕಾದ ಅಂಶಗಳು

 1. ಕೇಶವಾನಂದ ಭಾರತಿ ಪ್ರಕರಣ (1973) ದಲ್ಲಿ ನ್ಯಾಯಾಂಗದ ನಾವಿನ್ಯತೆಯ ರೂಪದಲ್ಲಿ ಜನನ
 2. ಭಾರತದ ಸಂವಿಧಾನದ ನಮ್ಯತೆ ಮತ್ತು ಅಧಮ್ಯತೆಯ ಸಮತೋಲನವನ್ನು ಕ್ರೋಡಿಕರಿಸಿದೆ.
 3. ಸಂವಿಧಾನಿಕ ತಳಹದಿಯನ್ನು ಹೊಂದಿಲ್ಲ
 4. ನ್ಯಾಯಾಧೀಶರ ಮನೋವಾದತೆಯನ್ನು ಅವಲಂಬಿಸಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos