Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 6 -11-2020

Join Our official Telegram Channel for Important Tips and Guidance : https://t.me/insightsIAStips

    ಸಾಮಾನ್ಯ ಅಧ್ಯಯನ ಪತ್ರಿಕೆ  – 2


 

ಒಳಗೊಂಡಿರುವ ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಮಧ್ಯಸ್ಥಿಕೆಗಳು ಮತ್ತು ಅವುಗಳ ವಿನ್ಯಾಸ ಹಾಗೂ ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ)ಸುಗ್ರೀವಾಜ್ಞೆ,2020:


ಸಂದರ್ಭ:

ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯನ್ನು ತಿದ್ದುಪಡಿ ಮಾಡಲು  “2020ರ ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ )” ಸುಗ್ರೀವಾಜ್ಞೆಯನ್ನು ಭಾರತದ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ರವರು ಹೊರಡಿಸಿದ್ದಾರೆ.

 

 ಸುಗ್ರೀವಾಜ್ಞೆಯಲ್ಲಿ  ಇರುವ ಅಂಶಗಳು:

1) “ಮಧ್ಯಸ್ಥಿಕೆ  ಒಪ್ಪಂದವು ಅಥವಾ ಗುತ್ತಿಗೆಗಳು, ವಂಚನೆ ಅಥವಾ ಭ್ರಷ್ಟಾಚಾರದಿಂದ ಕೂಡಿದೆ” ಎಂದು ಅನಿಸಿದರೆ,ಆಗ ಮಧ್ಯಸ್ಥಗಾರರ ಪಕ್ಷಗಳು ಮಧ್ಯಸ್ಥಿಕೆಯಲ್ಲಿ ನೀಡಿದ  ತೀರ್ಪುಗಳನ್ನು ಒಪ್ಪಿಕೊಳ್ಳದೆ ಹಿಂದಕ್ಕೆ ಸರಿಯಬಹುದು.

2) ಮಧ್ಯಸ್ಥಗಾರರ ಮಾನ್ಯತೆಗೆ ಬೇಕಾಗಿರುವ ಅರ್ಹತೆಗಳನ್ನು ಒಳಗೊಂಡ ಕಾಯ್ದೆಯ 8ನೇ ಅನುಸೂಚಿಯನ್ನು  ಇದು ತೆಗೆದುಹಾಕುತ್ತದೆ.

3) ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 36 ರಲ್ಲಿ ಒಂದು ನಿಬಂಧನೆಯನ್ನು ಸೇರಿಸಲಾಗಿದ್ದು, ಅಕ್ಟೋಬರ್ 23, 2015ರಿಂದ  ಅದು ಪೂರ್ವಾನ್ವಯವಾಗುತ್ತದೆ. ಈ ತಿದ್ದುಪಡಿ ಪ್ರಕಾರ, ಮಧ್ಯಸ್ಥಿಕೆ ಒಪ್ಪಂದದ ತೀರ್ಪಿನಲ್ಲಿ  ವಂಚನೆ ಅಥವಾ ಭ್ರಷ್ಟಾಚಾರ ಒಳಗೊಂಡಿದೆ ಎಂದು ಬಲವಾದ ಸಾಕ್ಷ್ಯ ನ್ಯಾಯಾಲಯಕ್ಕೆ ಸಿಕ್ಕಿದಲ್ಲಿ, ಸೆಕ್ಷನ್ 34 ರ ಪ್ರಕಾರ ಅಂತಹ ತೀರ್ಪನ್ನು ತಡೆಯಬಹುದಾಗಿದೆ.

 

ಹಿನ್ನೆಲೆ:

ಇಲ್ಲಿಯವರೆಗೆ ಮಧ್ಯಸ್ಥಿಕೆ ಕಾನೂನಿನ ಸೆಕ್ಷನ್ 36 ರ ಅಡಿಯಲ್ಲಿ ತೀರ್ಪು ಅಕ್ರಮ ಹಾಗೂ ವಂಚನೆಯಿಂದ ಕೂಡಿದ್ದು, ಅದನ್ನು ತಡೆಹಿಡಿಯಬೇಕೆಂದು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೂ ಕೂಡ ಆ ತೀರ್ಪುಗಳು ಜಾರಿಯಾಗುತ್ತಿದ್ದವು.

 

ಒಳಗೊಂಡಿರುವ ವಿಷಯಗಳು: ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಭಾರತದ ಹದಿಹರೆಯದವರ ಭೌತಿಕ ದ್ರವ್ಯರಾಶಿ ಸೂಚ್ಯಂಕ(BMI) ಅತ್ಯಂತ ಕಳಪೆ ಮಟ್ಟದ್ದಾಗಿದೆ:


ಸಂದರ್ಭ:

ದಿ ಲ್ಯಾನ್ಸೆಟ್ ಎಂಬ ಪತ್ರಿಕೆ ಇತ್ತೀಚಿಗೆ ವಿವಿಧ ದೇಶಗಳ ಬಿಎಂಐ ಪಟ್ಟಿಯನ್ನು ಪ್ರಕಟಿಸಿದೆ.

1) 200 ದೇಶಗಳ,34 ವರ್ಷಗಳಲ್ಲಿನ ಸಾಧನೆಗಳನ್ನು ಪರಿಗಣಿಸಿ ಆಧರಿಸಿದ ದತ್ತಾಂಶವನ್ನು ಅಧ್ಯಯನದ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ.

BMI (Body Mass Index) ಭೌತಿಕ ದ್ರವ್ಯರಾಶಿ  ಸೂಚ್ಯಂಕ ಎಂದರೇನು?  ಹೇಗೆ ಅದನ್ನು ಲೆಕ್ಕಾಚಾರ ಮಾಡಲಾಗುತ್ತದೆ?

ತೂಕವನ್ನು ಕೆಜಿ ಯಲ್ಲಿ ಹಾಗೂ ಎತ್ತರವನ್ನು ಮೀಟರ್ ನಲ್ಲಿ ಪರಿಗಣಿಸಿ ಭಾಗಿಸಲಾಗುತ್ತದೆ.

ಸಾಮಾನ್ಯ ಬಿಎಂಐ 20ರಿಂದ 25 ಸೂಚ್ಯಂಕಗಳನ್ನು ಒಳಗೊಂಡಿರುತ್ತದೆ.

 

ಪ್ರಮುಖ ಅನ್ವೇಷಣೆಗಳು:

ಭಾರತದಲ್ಲಿ ಬಿಎಂಐ:

1) ಈ ಅಧ್ಯಯನದ ಪ್ರಕಾರ ಭಾರತದ ಸ್ಥಾನ 196.

2) ಭಾರತದಲ್ಲಿ 19 ವರ್ಷದ ಬಾಲಕ ಮತ್ತು ಬಾಲಕಿಯರ ಬಿಎಂಐ 20.1 ಆಗಿದೆ.

3) ಚೀನಾ ದೇಶವು 88 ನೇ ಸ್ಥಾನದಲ್ಲಿದೆ. ಮತ್ತು ಅಲ್ಲಿನ ಬಾಲಕರು ಬಿಎಂಐ 23 ಅನ್ನು ಹೊಂದಿದ್ದು ಹಾಗೂ 119 ನೇ ಸ್ಥಾನವನ್ನು ಬಾಲಕಿಯರಿಗೆ 22.2 ಬಿಎಂಐ ಹೊಂದಿರುವುದರಿಂದ ಪಡೆದಿದ್ದಾರೆ.

 

ಭಾರತಕ್ಕೆ ಇರುವ ಕಾಳಜಿಗಳು:

1) ಬಿ ಎಂ ಐ ಎತ್ತರದ ಅಂಶಗಳನ್ನು ಒಳಗೊಂಡಿರುವುದರಿಂದ,ಭಾರತದ ಹದಿಹರೆಯದವರು ವಿಶ್ವದಲ್ಲೇ ಅತ್ಯಂತ ಕಿರಿಯವರಾಗಿದ್ದಾರೆ. (ಕುಳ್ಳ)

2) ಕಳೆದ ದಶಕಗಳಲ್ಲಿ ಇದ್ದ ಅಪೌಷ್ಟಿಕಾಂಶ ಅಥವಾ ಎತ್ತರಕ್ಕೆ ಅನುಗುಣವಾಗಿನ ದೇಹದ ತೂಕ ಕಡಿಮೆ ಆಗುವಿಕೆ ಅಂಶಗಳು, ಈಗಿನ ಮಕ್ಕಳಲ್ಲಿ ಕಂಡುಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಾರೆ.

3) ಇದಕ್ಕೆಲ್ಲ ಕಾರಣ ಕಳಪೆ ಮಟ್ಟದ ಪೌಷ್ಠಿಕ ಅಂಶಗಳು ಎಂದು ಅಧ್ಯಯನವು ದೃಢಪಡಿಸಿದೆ.

 


    ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ಒಳಗೊಂಡಿರುವ ವಿಷಯಗಳು: ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು.

ಆರ್ ಬಿ ಐ ನಿಂದ ದತ್ತಾಂಶ ಸ್ಥಳೀಕರಣದ ನಿಯಮಗಳು:


ಸಂದರ್ಭ:

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಸಂಸ್ಥೆಯು ಫೇಸ್ ಬುಕ್ ಒಡೆತನದ ವಾಟ್ಸಾಪ್ ಅನ್ನು ಬಳಸಿ,ತನ್ನ ಪಾವತಿ ಸೇವೆಗಳನ್ನು ನಡೆಸಲು ಆರಂಭಿಸಿದೆ.

 

ಪ್ರಮುಖಾಂಶಗಳು:

1) ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ನ ಮೂಲಕ NPCI, ಪಾವತಿ ಸೇವೆಗಳನ್ನು ಆರಂಭಿಸಲು ವಾಟ್ಸಪ್ ಗೆ ಅನುಮತಿ ನೀಡಿದೆ.

2) ವಾಟ್ಸಪ್ ಬಳಕೆದಾರರು ಯುಪಿಐ ಒಳಗೊಂಡಿರುವ ತಮ್ಮ ಬ್ಯಾಂಕ್ ಖಾತೆಗಳನ್ನು ಇದಕ್ಕೆ ಜೋಡಿಸಬಹುದು ಹಾಗೂ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಹಣವನ್ನು ವರ್ಗಾಯಿಸಬಹುದು.

 

ಯುಪಿಐ ಎಂದರೇನು?

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಎನ್ನುವುದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಒಂದು ತ್ವರಿತಗತಿಯ ನೈಜ ಸಮಯದ (ಸಮಯಕ್ಕೆ ಅನುಗುಣವಾಗಿ Real Time)ಪಾವತಿಯ ವ್ಯವಸ್ಥೆಯಾಗಿದೆ.

2016, ಏಪ್ರಿಲ್ ತಿಂಗಳಿನಲ್ಲಿ ಇದನ್ನು ಪ್ರಾಯೋಗಿಕ ಯೋಜನೆಯನ್ನಾಗಿ ಪರಿಚಯಿಸಲಾಯಿತು, ಹಾಗೂ ಇದನ್ನು  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಿಸುತ್ತದೆ.

 

 ಆರ್ ಬಿ ಐ ಹೊರಡಿಸಿರುವ ದತ್ತಾಂಶ ಸ್ಥಳಿಕರಣ ಮಾನದಂಡಗಳ ಪ್ರಕಾರ:

1) ಭಾರತದ ಹೊರಗೆ ವಿದೇಶಗಳಲ್ಲಿ ಪಾವತಿ ವಹಿವಾಟುಗಳ ಪ್ರಕ್ರಿಯೆಗೆ ಯಾವುದೇ ನಿರ್ಬಂಧವಿಲ್ಲ ಹಾಗೂ ವಹಿವಾಟಿನ ನಂತರ ಪಾವತಿ ವ್ಯವಸ್ಥೆ ನಿರ್ವಾಹಕರು(PSO) ದತ್ತಾಂಶವನ್ನು ಸಂಸ್ಕರಿಸಿ ಭಾರತದಲ್ಲಿ ಸಂಗ್ರಹಿಸಬೇಕಾಗುತ್ತದೆ.

2) ಒಂದು ವೇಳೆ ವಿದೇಶದಲ್ಲಿ ಸಂಸ್ಕರಣೆ ಮಾಡಿದರೆ ಆ ದತ್ತಾಂಶವನ್ನು ವಿದೇಶದಲ್ಲಿರುವ ವ್ಯವಸ್ಥೆಗಳಿಂದ ಅಳಿಸಿಹಾಕಬೇಕು ಮತ್ತು ಅದನ್ನು ಭಾರತಕ್ಕೆ ವ್ಯವಹಾರ ನಡೆದ ಒಂದು ದಿನದ ಅಥವಾ 24 ಗಂಟೆಗಳ ಒಳಗೆ( ಯಾವುದು ಮೊದಲು ಅದು) ಅದನ್ನು ರವಾನಿಸಿ,ಸಂಗ್ರಹಿಸಿ ಇಡಬೇಕಾಗುತ್ತದೆ.

3) ಭಾರತದಲ್ಲಿ ಸಂಗ್ರಹಿಸಲ್ಪಟ್ಟ ದತ್ತಾಂಶಗಳನ್ನು ಅವಶ್ಯಕತೆ ಇದ್ದಾಗ ಬಳಸಿಕೊಂಡು, ಗ್ರಾಹಕ ವಿವಾದಗಳನ್ನು ಬಗೆಹರಿಸಬಹುದು.

4) ಆರ್ ಬಿ ಐ ನ ಒಪ್ಪಿಗೆ ಮೂಲಕ ಪಾವತಿ ವ್ಯವಸ್ಥೆಯ ದತ್ತಾಂಶಗಳನ್ನು, ಅಗತ್ಯವಿದ್ದರೆ ಸಾಗರೋತ್ತರ ನಿಯಂತ್ರಕ ರೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

5) ಆದಾಗ್ಯೂ ಕೆಲವು ಬ್ಯಾಂಕುಗಳು, ಅದರಲ್ಲೂ  ವಿದೇಶಿ ಬ್ಯಾಂಕುಗಳು,ವಿದೇಶಗಳಲ್ಲಿ ನಡೆಸಿದ ವ್ಯವಹಾರದ ದತ್ತಾಂಶಗಳನ್ನು ವಿದೇಶಗಳಲ್ಲಿ ಸಂಗ್ರಹಿಸಬಹುದು, ಆದರೆ ದೇಶಿಯ ಪಾವತಿ ವಹಿವಾಟುಗಳಿಗೆ ಸಂಬಂಧಿಸಿದಂತೆ ದತ್ತಾಂಶವನ್ನು, ಭಾರತದಲ್ಲಿ ಮಾತ್ರ ಸಂಗ್ರಹಿಸಬೇಕು.

 

 ದೇಶೀಯವಾಗಿ ಸಂಗ್ರಹಿಸಲಾದ ದತ್ತಾಂಶಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು:

1) ಪಾವತಿಯ ಭಾಗವಾಗಿ ಸಂಗ್ರಹಿಸಿದ ಅಥವಾ ಸಂಸ್ಕರಿಸಿದ ಪಾವತಿಗಳ,ಒಬ್ಬರಿಂದ ಒಬ್ಬರಿಗೆ(End to End) ನಡೆದ ಎಲ್ಲಾ ವಹಿವಾಟು ವಿವರಗಳು ಮತ್ತು ಮಾಹಿತಿಗಳನ್ನು ಒಳಗೊಂಡಿರಬೇಕು.

2) ಗ್ರಾಹಕರ ಹೆಸರು,ಮೊಬೈಲ್ ಸಂಖ್ಯೆ, ಇಮೇಲ್, ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಮುಂತಾದ ಮಾಹಿತಿಗಳನ್ನು ಒಳಗೊಂಡಿರಬೇಕು.

3)  ಗ್ರಾಹಕ ಮತ್ತು ಫಲಾನುಭವಿ ಖಾತೆಯ ಪಾವತಿಗೆ ಸಂಬಂಧಿಸಿದ ಸೂಕ್ಷ್ಮವಾದ ದತ್ತಾಂಶಗಳಾದ ,ಓಟಿಪಿ, PIN ಪಾಸ್ವರ್ಡಗಳನ್ನು ಒಳಗೊಂಡಿರಬೇಕು.

 

ಮಾರ್ಗಸೂಚಿಗಳ ಅಗತ್ಯವಿದೆಯೇ?

ಇತ್ತೀಚಿಗೆ ಭಾರತವು, ಪಾವತಿ ವ್ಯವಸ್ಥೆಗಳಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಂಡಿದ್ದು, ಇ-ಕಾಮರ್ಸ್ ಮತ್ತು ತಂತ್ರಜ್ಞಾನ ಆಧರಿತ ಹಣಕಾಸಿನ ವಹಿವಾಟಿನಲ್ಲಿ ಪ್ರಗತಿಯನ್ನು ಸಾಧಿಸಿದೆ. ಹೀಗಾಗಿ ಗ್ರಾಹಕರ, ಬಳಕೆದಾರರ ಮತ್ತು ಸರ್ಕಾರದ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಮಾರ್ಗಸೂಚಿಗಳು ಬೇಕಾಗುತ್ತದೆ.

 

 ಒಳಗೊಂಡಿರುವ ವಿಷಯಗಳು: ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ(STPI):


ಸಂದರ್ಭ:

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ(STPI) ಹಲವಾರು ನಗರಗಳಲ್ಲಿ ಕಚೇರಿ ಮತ್ತು ಸಂಪರ್ಕ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸುಮಾರು 400 ಕೋಟಿ ರೂಪಾಯಿಗಳವರೆಗೆ ಹೂಡಿಕೆ ಮಾಡಲು ಹಾಗೂ ಸಣ್ಣ ತಂತ್ರಜ್ಞಾನ ಸಂಸ್ಥೆಗಳಿಗೆ ಸೌಲಭ್ಯವನ್ನು ನೀಡಲು ಮುಂದಾಗಿದೆ.

 

STPI ನ ಬಗ್ಗೆ ಕಿರು ಪರಿಚಯ:

ಇದು ಒಂದು ಸ್ವಾಯತ್ತ ಸಂಸ್ಥೆ ಆಗಿದ್ದು, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY)ಕೆಳಗಡೆ ಬರುತ್ತದೆ.

1) ಇದನ್ನು 1991 ರಲ್ಲಿ ಸ್ಥಾಪಿಸಲಾಯಿತು.

2) ಭಾರತದಿಂದ ವಿದೇಶಗಳಿಗೆ ಸಾಫ್ಟ್ವೇರ್ ರಫ್ತನ್ನು  ಪ್ರೋತ್ಸಾಹಿಸುವುದು, ಉತ್ತೇಜಿಸುವುದು ಹಾಗೂ ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ.

3) ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, STPI ನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿರುತ್ತಾರೆ.

 

ಇನ್ನಿತರ ಪ್ರಮುಖ ಉದ್ದೇಶಗಳು:

1) ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಗಳು/ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ ಟೆಕ್ನಾಲಜಿ ಪಾರ್ಕು ಯೋಜನೆಗಳು,SEZ ಯೋಜನೆ ಮತ್ತು ಕಾಲಕಾಲಕ್ಕೆ ಸರ್ಕಾರಗಳು ರೂಪಿಸುವ ಮತ್ತು ವಹಿಸಿಕೊಡುವ ಯಾವುದೇ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ, ರಫ್ತುದಾರರಿಗೆ ಶಾಸನಬದ್ಧ ಪ್ರಚಾರ ಸೇವೆಗಳನ್ನು ಒದಗಿಸುವುದು.

2) ಮಾಹಿತಿ ತಂತ್ರಜ್ಞಾನ /ITES ಕ್ಷೇತ್ರದಲ್ಲಿ ಇರುವ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ ಸೂಕ್ತವಾದ ಉದ್ಯಮಶೀಲ ಪರಿಸರವನ್ನು ಕಲ್ಪಿಸಿಕೊಡುವುದು.

 

 

ಒಳಗೊಂಡಿರುವ ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ,ಕಂಪ್ಯೂಟರ್, ರೋಬೋಟಿಕ್ಸ್, ನ್ಯಾನೋ- ತಂತ್ರಜ್ಞಾನ ,ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅರಿವು.

ಕ್ಷೀರಪಥದಲ್ಲಿ (Milky Way)ಮೊದಲ ಬಾರಿಗೆ ವೇಗದ ರೇಡಿಯೋ ಸ್ಫೋಟಗಳು ಪತ್ತೆಯಾಗಿವೆ:


ಸಂದರ್ಭ:

ವೇಗದ ರೇಡಿಯೋ ಸ್ಫೋಟಗಳು( FRB)ಎಂದೇ ಕರೆಯಲ್ಪಡುವ ತೀವ್ರತರನಾದ ರೇಡಿಯೋ ಅಲೆಗಳು ಮೊದಲ ಬಾರಿಗೆ ಕ್ಷೀರಪಥದಲ್ಲಿ ಕಾಣಿಸಿಕೊಂಡಿವೆ.

1) ಇಲ್ಲಿಯವರೆಗೂ ಇಂತಹ ಅಲೆಗಳು ಬೇರೆಬೇರೆ ನಕ್ಷತ್ರಪುಂಜ ಗಳಲ್ಲಿ ಕಾಣಿಸಿದ್ದವು.

 

ಈ ಅನ್ವೇಷಣೆಯ ಪ್ರಾಮುಖ್ಯತೆ:

ಇದು ಇಲ್ಲಿಯವರೆಗೆ ಪತ್ತೆಯಾದ ಮ್ಯಾಗ್ನೆಟಾರ್ ರೇಡಿಯೋ ಸಿಗ್ನಲ್ ಗಿಂತ 3000 ಪಟ್ಟು ಪ್ರಕಾಶಮಾನವಾಗಿದೆ. ಹಾಗೂ ಈ ಎಫ್ ಆರ್ ಬಿ   ಭೂಮಿಗೆ ಅತ್ಯಂತ ಸಮೀಪವಾಗಿ ದಾಖಲಾದ ಸಂಕೇತವಾಗಿಲ್ಲ.

 

ಎಫ್ ಆರ್ ಬಿ ಗಳು ಹೇಗೆ ಉದ್ಭವಿಸುತ್ತವೆ?

ಹೊಸ ಅಧ್ಯಯನದ ಪ್ರಕಾರ, ಎಫ್ ಆರ್ ಪಿ ಗಳು ಅತ್ಯಂತ ವಿರಳ ನ್ಯೂಟ್ರಾನ್ ನಕ್ಷತ್ರವಾದ ‘ಮ್ಯಾಗ್ನೆಟಾರ್’ ಎಂಬುದರಿಂದ ರಚನೆಯಾಗುತ್ತದೆ.

 

ಮ್ಯಾಗ್ನೆಟಾರ್ಗಳು ಎಂದರೇನು?

ಮ್ಯಾಗ್ನೆಟಾರ್ ಒಂದು ನ್ಯೂಟ್ರಾನ್ ನಕ್ಷತ್ರವಾಗಿದೆ.

1)ಮ್ಯಾಗ್ನೆಟಾರ್ ಗಳು ಬ್ರಹ್ಮಾಂಡದಲ್ಲಿ ಅತ್ಯಂತ ಶಕ್ತಿಶಾಲಿ ಆಯಸ್ಕಾಂತಗಳನ್ನು ಹೊಂದಿವೆ. ಮತ್ತು ಆ ಕಾಂತಕ್ಷೇತ್ರಗಳು ಭೂಮಿಗೆ ಹೋಲಿಸಿದರೆ 5000 ಟ್ರಿಲಿಯನ್ ಪಟ್ಟು ಹೆಚ್ಚು ಶಕ್ತಿ ಹೊಂದಿವೆ.

 

ಈಗ ಕಂಡುಬಂದಿರುವ ಎಫ್ ಆರ್ ಬಿ ಗಳ  ಮೂಲ:

1) ಭೂಮಿಯಿಂದ ಸುಮಾರು 30,000 ಬೆಳಕಿನ ವರ್ಷಗಳ ದೂರದಲ್ಲಿರುವ SGR 1935+2154 ಎಂಬ ಮ್ಯಾಗ್ನೆಟಾರ್ ನಿಂದ ಬಂದಿವೆ.

2) ಇದು ಕ್ಷೀರಪಥದ ಮಧ್ಯದಲ್ಲಿರುವ, ‘ವಲ್ಪೆಕುಲಾ’ ಎಂಬ ನಕ್ಷತ್ರ ಪುಂಜದಲ್ಲಿ ಇದೆ.

 

ಒಳಗೊಂಡಿರುವ ವಿಷಯಗಳು: ಮಾಲಿನ್ಯ ಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಹಿಮಾಲಯದ ವಾತಾವರಣದಲ್ಲಿ ಕಂದು ಇಂಗಾಲದ ‘ಟಾರ್ ಬಾಲ್’ ಗಳು ಕಂಡುಬಂದಿವೆ:


ಸಂದರ್ಭ:

ಇತ್ತೀಚೆಗಿನ ಒಂದು ಅಧ್ಯಯನದದಲ್ಲಿ ಹಿಮಾಲಯದ ಟಿಬೆಟ್ ಪ್ರಸ್ಥಭೂಮಿಯಲ್ಲಿ ಟಾರ್ ಬಾಲ್ ಗಳು ಕಂಡುಬಂದಿವೆ.

1) ಹಿಮದ ಕರಗುವಿಕೆ ಹಾಗೂ ಜಾಗತಿಕ ತಾಪಮಾನದ ಏರಿಕೆಗೆ ಕಾರಣವಾಗುವ ಈ  ಟಾರ್ ಬಾಲ್ ಗಳು, ಹೆಚ್ಚಾಗಿ, ಮಾಲಿನ್ಯದ ಮಟ್ಟ ಏರಿದ ದಿನಗಳಲ್ಲಿ ಕಂಡುಬಂದಿವೆ.

 

ಟಾರ್ ಬಾಲ್ ಗಳು ಎಂದರೇನು?ಅವು ಹೇಗೆ ರಚನೆಯಾಗುತ್ತವೆ?

ಟಾರ್ ಬಾಲ್ ಗಳು  , ಬೆಳಕನ್ನು ಹೀರಿಕೊಳ್ಳುವ ಇಂಗಾಲದ ಕಣಗಳನ್ನು ಹೊಂದಿರುವ ಸಣ್ಣ ಕಣಗಳಾಗಿವೆ , ಇವು ಜೀವರಾಶಿ ಅಥವಾ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಉಂಟಾಗುತ್ತವೆ. ಹಾಗೂ ಹಿಮ ಮತ್ತು ಮಂಜುಗಡ್ಡೆಗಳ ಮೇಲೆ ಸಂಗ್ರಹವಾಗುತ್ತವೆ.

1) ಇದರಿಂದಾಗಿ ಹಿಮನದಿಗಳು ಕರಗುವುದು ಹೆಚ್ಚಾಗುತ್ತದೆ.

2) ಕಂದು ಇಂಗಾಲದಿಂದ ರೂಪುಗೊಳ್ಳುವ ಇವುಗಳು ಪಡೆಯುವಿಕೆ ಇಂಧನಗಳನ್ನು ಸುಡುವುದರಿಂದ ಹೊರಸೂಸುತ್ತವೆ.

 

ಈಗ ಎಲ್ಲಿಂದ ಬಂದಿವೆ?

ಭಾರತದ ಗಂಗಾ ನದಿ ಬಯಲಿನಲ್ಲಿ ಜೀವರಾಶಿಗಳನ್ನು ಸುಡುವುದರಿಂದ ಈ ಟಾರ್ ಬಾಲ್ ಗಳು ಉತ್ಪತ್ತಿಯಾಗಿವೆ.

 

ಕಳವಳಗಳು:

ನಮ್ಮ ಬಹುದೊಡ್ಡ ಸಾರಿಗೆ ವ್ಯವಸ್ಥೆಯು ಟಾರ್ ಬಾಲ್ ಗಳ ಉತ್ಪಾದನೆಗೆ ಹೆಚ್ಚು ಕಾರಣವಾಗಿವೆ. ಹಾಗೂ ಹವಾಮಾನದ ವೈಪರಿತ್ಯಕ್ಕೆ ಇದು ಕಾರಣವಾಗಬಹುದು. ಇದರಿಂದಾಗಿ ಹಿಮಾಲಯದ ಪ್ರದೇಶದಲ್ಲಿ ಹಿಮ ಕರಗುವಿಕೆಯು ಹೆಚ್ಚಾಗುತ್ತದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos