Print Friendly, PDF & Email

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 6 ನವೆಂಬರ್ 2020

 

Join Our official Telegram Channel for Important Tips and Guidance: https://t.me/insightsIAStips

ಸಾಮಾನ್ಯ ಅಧ್ಯಯನ – 1


 

ವಿಷಯ: ಬಡತನ ಮತ್ತು ಹಸಿವಿಗೆ ಸಂಬಂಧಿಸಿದ ಸಮಸ್ಯೆಗಳು.

1) ಭಾರತದ ಸಮಾಜದಲ್ಲಿನ ಬಡತನದ ಹೆಚ್ಚಳಕ್ಕೆ ಕಾರಣವಾಗಿರುವ ಅಂಶಗಳನ್ನು ಪರೀಕ್ಷಿಸಿ. ಬಡತನಕ್ಕೆ ವ್ಯಕ್ತಿ ಮಾತ್ರ ಕಾರಣವಲ್ಲ, ಅದರ ಸಮಾಜದ ರಚನೆಯು ಹೌದು ಎಂದು ಭಾವಿಸುತ್ತೀರಾ?(250 ಪದಗಳು)

 

ವಿಷಯ: ಜನಪ್ರತಿನಿಧಿ ಕಾಯ್ದೆಯ ಪ್ರಮುಖ ಲಕ್ಷಣಗಳು.

2) ರಾಜಕೀಯವು ಅಪರಾಧಿಕರಣ ಆಗುತ್ತಿರುವುದನ್ನು ತಡೆಯಲು ಸಾಧ್ಯವಾಗದಿರುವುದಕ್ಕೆ ಕಾರಣಗಳನ್ನು ಸೂಚಿಸಿ ಮತ್ತು ಇದನ್ನು ಪರಿಹರಿಸಲು ಸಲಹೆಗಳನ್ನು ನೀಡಿ.(250 ಪದಗಳು)

 

ವಿಷಯ gs2: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ,ಇ-ಆಡಳಿತ ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಸಂಭಾವ್ಯತೆಯ ಪ್ರಮುಖಾಂಶಗಳು ;ನಾಗರಿಕ ಸನ್ನದು ,ಪಾರದರ್ಶಕತೆ,ಮತ್ತು ಹೊಣೆಗಾರಿಕೆ ಹಾಗೂ ಸಾಂಸ್ಥಿಕ ಕ್ರಮಗಳು.

Gs-3: ಮಾಧ್ಯಮಗಳ ಪಾತ್ರ.

3) ಟಿ ಆರ್ ಪಿ ರೇಟಿಂಗ್ ಎಂದರೇನು? ಈ ರೇಟಿಂಗ್ಗಳನ್ನು ಹೇಗೆ ದಾಖಲಿಸುತ್ತಾರೆ? ಅವುಗಳ ಪ್ರಾಮುಖ್ಯತೆ ಏನು ಚರ್ಚಿಸಿ?(250 ಪದಗಳು)

 

ವಿಷಯ: ಒಕ್ಕೂಟ ಮತ್ತು ರಾಜ್ಯಗಳ ಕಾರ್ಯಗಳು ಹಾಗೂ ಜವಾಬ್ದಾರಿಗಳು, ಫೆಡರಲ್( ಸಂಯುಕ್ತ ರಾಷ್ಟ್ರ) ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಅಧಿಕಾರಿಗಳ ಹಂಚಿಕೆ ಮತ್ತು ಸ್ಥಳೀಯ ಮಟ್ಟಗಳವರೆಗೆ ಹಣಕಾಸು ಮತ್ತು ಅದರಲ್ಲಿನ ಸವಾಲುಗಳು.

4) ಭಾರತದ ಒಕ್ಕೂಟ (ಫೆಡರಲ್( ಸಂಯುಕ್ತ ರಾಷ್ಟ್ರ) ವ್ಯವಸ್ಥೆಯ ಆರ್ಥಿಕ ವಿಷಯಗಳ ಮೇಲೆ ಟಿಪ್ಪಣಿ ಮಾಡುವುದರೊಂದಿಗೆ, ಇತ್ತೀಚೆಗೆ ಭಾರತದಲ್ಲಿನ ರಾಜ್ಯಗಳ ಆರ್ಥಿಕ ಸಾಮರ್ಥ್ಯ ಕುಸಿಯುತ್ತಿರುವುದರ ಬಗ್ಗೆ ಚರ್ಚಿಸಿ; ಹಾಗೂ ಅದರ ಕಾರಣ ಮತ್ತು ಅದರಿಂದ ಉಂಟಾಗುವ ಪರಿಣಾಮಗಳನ್ನು ಬರೆಯಿರಿ.(250 ಪದಗಳು)

 

ವಿಷಯ gs2: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಮಧ್ಯಸ್ಥಿಕೆಗಳು ಮತ್ತು ಅವುಗಳ ವಿನ್ಯಾಸ ಹಾಗೂ ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

Gs-3: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ,ಪರಿಸರ ಪ್ರಭಾವದ ಮೌಲ್ಯಮಾಪನ.

5)” ಗಂಗಾನದಿಯ ಪುನರುಜ್ಜೀವನಗೊಳಿಸುವಿಕೆಯು ಒಂದು ನಿರಂತರ ಕಾರ್ಯಾಚರಣೆಯಾಗಿದ್ದು ಅದಕ್ಕೆ ಸಾರ್ವಜನಿಕ ಸಹಭಾಗಿತ್ವದ ಅವಶ್ಯಕತೆ ಇದೆ”. ಈ ಹೇಳಿಕೆಯನ್ನು ವಿಶ್ಲೇಷಿಸಿ ಮತ್ತು ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಟಿಪ್ಪಣಿ ಬರೆಯಿರಿ.(250 ಪದಗಳು)

 


ಸಾಮಾನ್ಯ ಅಧ್ಯಯನ – 4


 

ವಿಷಯ: ಭಾರತದ ಮತ್ತು ಜಗತ್ತಿನ ನೀತಿಶಾಸ್ತ್ರದ ಚಿಂತಕರು ಹಾಗೂ ದಾರ್ಶನಿಕರ ಕೊಡೆಗಳು.

6) ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳಿಂದ ಕೂಡಿರುವ, ಆಡಳಿತ ವ್ಯವಸ್ಥೆಯನ್ನು ಜಾನ್ ರಾಲ್ಸ್ ಅವರು ತಮ್ಮ “ನ್ಯಾಯದ ಸಿದ್ಧಾಂತದಲ್ಲಿ” ಎಲ್ಲರಿಗೂ ಒಪ್ಪುವಂತಹ ನ್ಯಾಯಯುತವಾದ ಸಾರ್ವತ್ರಿಕ ವ್ಯವಸ್ಥೆಯನ್ನು ನೀಡಿದ್ದಾರೆ.ವಿವರಿಸಿ.(250 ಪದಗಳು)

 

ವಿಷಯ: ಪ್ರಕರಣ

7) ಶಾಲೆಗಳಲ್ಲಿ ಜಾತಿಯ ಆಧಾರದ ಮೇಲೆ ತಾರತಮ್ಯದ ಆಚರಣೆಗಳು ನಡೆಯುತ್ತಿವೆ ಎಂದು ಒಂದು ರಾಜ್ಯದಲ್ಲಿ ಕಂಡು ಬಂದಿದೆ. ಶಾಲೆಗಳಲ್ಲಿ ಜಾತಿ ಆಧಾರಿತ ಪಟ್ಟಿಗಳನ್ನು ಮಕ್ಕಳು ಧರಿಸುವುದು, ಶಿಕ್ಷಕರು ಮತ್ತು ಮುಖ್ಯೋಪಾಧ್ಯಯರುಗಳಿಂದ ತುಳಿತಕ್ಕೊಳಗಾದ ವರ್ಗದ ವಿದ್ಯಾರ್ಥಿಗಳಿಗೆ ಶಾಲೆಗಳ ಶೌಚಾಲಯ ಸ್ವಚ್ಛಗೊಳಿಸುವಂತೆ ಒತ್ತಾಯಿಸುವಿಕೆ, ದಲಿತ ವಿದ್ಯಾರ್ಥಿಗಳನ್ನು ಕೊನೆಯ ಆಸನಗಳಲ್ಲಿ ಕೂಡಿಸುವುದು, ಅಂಗನವಾಡಿಗಳಲ್ಲಿ ದಲಿತ ಅಡುಗೆಯವರನ್ನು ನೇಮಿಸಿಕೊಳ್ಳದಂತೆ ಪಾಲಕರಿಂದ ಆಕ್ಷೇಪಣೆಗಳು ಹೀಗೆ ಹಲವಾರು ಅಮಾನವೀಯ ಕೃತ್ಯಗಳು ಕಂಡುಬಂದಿವೆ.

ಸರ್ವಶಿಕ್ಷಣ ಅಭಿಯಾನದಡಿ ಕಾರ್ಯನಿರ್ವಹಿಸುವ ಶಾಲೆಗಳಿಂದ ವರದಿಯೂ ಬಂದಿದೆ. ಈ ತರಹದ ತಾರತಮ್ಯದಿಂದಾಗಿ ಶಾಲೆಗಳಲ್ಲಿ ದಲಿತವರ್ಗದ ಮಕ್ಕಳ ದಾಖಲಾತಿಯು ಕುಸಿಯುವಂತೆ ಮಾಡುತ್ತದೆ. ಶಾಲೆಗಳಲ್ಲಿನ ತಾರತಮ್ಯ ಪದ್ಧತಿಗಳನ್ನು ನಿಷೇಧಿಸಲು ರಾಜ್ಯ ಸರ್ಕಾರವು ಒಂದು ಸುತ್ತೋಲೆಯನ್ನು ಹೊರಡಿಸಿದೆ. ನೀವು ಆ ರಾಜ್ಯದ ಜಿಲ್ಲೆ ಒಂದರಲ್ಲಿ BDO ಆಗಿದ್ದೀರಿ.

1) ಈ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ?

2) ಈ ತರಹದ ಕೆಟ್ಟ ಅಭ್ಯಾಸಗಳಿಗೆ ಕಾರಣವಾಗುವ ಸಾಮಾಜಿಕ- ಮಾನಸಿಕ ಅಂಶಗಳನ್ನು ವಿವರಿಸಿ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos