[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 5 -11-2020

Join Our official Telegram Channel for Important Tips and Guidance : https://t.me/insightsIAStips

    ಸಾಮಾನ್ಯ ಅಧ್ಯಯನ ಪತ್ರಿಕೆ 1


 

ಒಳಗೊಂಡಿರುವ ವಿಷಯಗಳು:ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು.

ವೈವಾಹಿಕ ಪ್ರಕರಣಗಳಿಗೆ ಮಾರ್ಗಸೂಚಿಗಳ ಬಿಡುಗಡೆ:


 

ಸಂದರ್ಭ:

ಸುಪ್ರೀಂ ಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ವೈವಾಹಿಕ ಪ್ರಕರಣಗಳಿಗಾಗಿ ಮಾರ್ಗಸೂಚಿಗಳನ್ನು ನೀಡಿದೆ.

1) ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 125 ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ಹೆಂಡತಿ ಮತ್ತು ಮಗನ ಜೀವನ ನಿರ್ವಹಣೆಗಾಗಿ ಪಾವತಿಸುವ ವ್ಯವಸ್ಥೆಯ ಮೇಲಿನ ಪ್ರಶ್ನೆ  ಹೊಂದಿರುವ ಮಹಾರಾಷ್ಟ್ರದ ಒಂದು ಪ್ರಕರಣದಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ನೀಡಿದೆ.

 

ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳ ಕಿರು ಪರಿಚಯ:

1) ಯಾರ ಬೆಂಬಲವೂ ಇಲ್ಲದ ಪತ್ನಿ ಮತ್ತು ಮಕ್ಕಳು, ತಮ್ಮ ಪತಿಗೆ ಪರಿಹಾರವನ್ನು ಕೋರಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಪತ್ನಿ ಮತ್ತು ಮಕ್ಕಳು ಜೀವನಂಶ ಅಥವಾ ನಿರ್ವಹಣೆಗೆ ಅರ್ಹರಾಗುತ್ತಾರೆ.

2) ಇದನ್ನು ಉಲ್ಲಂಘಿಸಿದರೆ,ನಾಗರಿಕ ಬಂಧನ ಮತ್ತು ಆಸ್ತಿಯನ್ನು ಕೂಡ ಜಪ್ತಿ ಮಾಡುವ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.

3) ಉತ್ತಮ ಶೈಕ್ಷಣಿಕ ಅರ್ಹತೆ ಹಾಗೂ ದೈಹಿಕವಾಗಿ ಸದೃಢವಾಗಿರುವ ಪತಿಯು, ತನ್ನ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ತನಗೆ ಯಾವುದೇ ಆರ್ಥಿಕ ಮೂಲವಿಲ್ಲ ಎಂದು ಹೇಳಿದರೆ ಅದು ಇನ್ಮುಂದೆ ಕಾನೂನುಬದ್ಧವಾಗಿ ಇರುವುದಿಲ್ಲ.

4) ಈಗಾಗಲೇ ಬಾಕಿ ಇರುವ ಅಥವಾ ದಾಖಲಾಗಿರುವ ಪ್ರಕರಣಗಳ ಜೊತೆಗೆ ಅರ್ಜಿದಾರರಾದ ಪತ್ನಿ ಹಾಗೂ ಪ್ರತಿ ವಾದಿಯಾದ ಪತಿ ಇಬ್ಬರೂ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಬಹಿರಂಗಪಡಿಸಬೇಕು.

5) ಮಕ್ಕಳ ಶಿಕ್ಷಣ, ಮೂಲಭೂತ ಅಗತ್ಯಗಳು ಮತ್ತು ಇತರ ವೃತ್ತಿಪರ ಅಗತ್ಯತೆಗಳನ್ನು ಒಳಗೊಂಡಂತೆ ವೆಚ್ಚಗಳನ್ನು ಜೀವನ ಅಂಶ ಲೆಕ್ಕಾಚಾರ ಮಾಡುವಾಗ ನ್ಯಾಯಾಲಯಗಳು ಪರಿಗಣಿಸಬೇಕಾಗುತ್ತದೆ.

6) ಕಾಲಕ್ಕೆ ತಕ್ಕಂತೆ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಜೀವನಾಂಶವನ್ನು ಸಿದ್ಧಪಡಿಸಬೇಕು. ಅದು ತನ್ನ ವೈವಾಹಿಕ ಜೀವನದಲ್ಲಿ ಬದುಕಲು ಇದ್ದ ವೆಚ್ಚಕ್ಕೆ ಸರಿಹೊಂದುತ್ತದೆ.

 

ಈ ತೀರ್ಪಿನ ಅವಶ್ಯಕತೆ ಏನು?

ತಮ್ಮ ಪತ್ನಿ ಹಾಗೂ ತಮ್ಮ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ಅವರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿ ಬೀದಿಗೆ ತಳ್ಳುತ್ತಿರುವ ಪ್ರಕಣಗಳು ಹೆಚ್ಚುತ್ತಿವೆ.

 

ಮುಂದಿನ ಏನಾಗಬಹುದು?

ಜೀವನ ನಿರ್ವಹಣ ಅಂಶವನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಈ ಏಕರೂಪದ ಮಾರ್ಗಸೂಚಿಗಳನ್ನು ಕುಟುಂಬ ನ್ಯಾಯಾಲಗಳ, ಮ್ಯಾಜಿಸ್ಟ್ರೇಟ್ ಗಳು, ಮತ್ತು ಕೆಳಹಂತದ ನ್ಯಾಯಾಲಯಗಳು ಅನುಸರಿಸಬೇಕು.

 

ಒಳಗೊಂಡಿರುವ ವಿಷಯಗಳು: ಸಾಮಾಜಿಕ ಸಬಲೀಕರಣ,ಕೋಮುವಾದ,ಪ್ರಾದೇಶಿಕತೆ ಮತ್ತು ಜಾತ್ಯತೀತತೆ.

ಅಸ್ಸಾಂನ ‘ಮಿಯ’ ಜನಾಂಗ ಮತ್ತು ಅವರ ‘ಚಾರ್ -ಚಾಪೋರಿ’ ಎಂಬ ಸಂಸ್ಕೃತಿ.


 

ಚಾರ್ -ಚಾಪೋರಿ ನಲ್ಲಿ ವಾಸಿಸುವ “ಮಿಯಾ” ಜನಾಂಗದ ‘ಸಂಸ್ಕೃತಿ ಮತ್ತು ಪರಂಪರೆಯ’ನ್ನು ಪ್ರತಿಬಿಂಬಿಸುವ ಉದ್ದೇಶಿತ “ಮಿಯಾ ಮ್ಯೂಸಿಯಂ” ಅಸ್ಸಾಂನಲ್ಲಿ ಈಗ ವಿವಾದವನ್ನು ಹುಟ್ಟು ಹಾಕಿದೆ.

 

ವಿವಾದಗಳನ್ನು ಹುಟ್ಟುಹಾಕಿರುವುದು ಏಕೆ?

ನವ ವೈಷ್ಣವ  ಸುಧಾರಕರಾದ ಶ್ರೀಮಂತ ಶಂಕರದೇವ ರವರು ಪ್ರಸಿದ್ಧರಾಗಿರುವ ಗುವಾಹಟಿಯ ಕಾರ್ಯಕ್ಷೇತ್ರದಲ್ಲಿ, ಅಸ್ಸಾಂ ಆಂದೋಲನದಲ್ಲಿ ಶಾಂತಿಗಾಗಿ ಸಹಿ ಮಾಡಲಾದ ಅಸ್ಸಾಂ ಒಪ್ಪಂದದಡಿಯಲ್ಲಿ ಶರತ್ತು 6ರ ಭಾಗವಾಗಿ( ಅಸ್ಸಾಂ ಜನರ ಸಾಂಸ್ಕೃತಿಕ,ಸಾಮಾಜಿಕ,ಭಾಷಾಶಾಸ್ತ್ರವನ್ನು  ರಕ್ಷಿಸಲು,ಸಂರಕ್ಷಿಸಲು ಮತ್ತು ಉತ್ತೇಜಿಸಲು) ಈ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ.

 

ಯಾರು ಈ ಮಿಯಾಗಳು?

ಪೂರ್ವ ಬಂಗಾಳದಿಂದ( ಅಂದರೆ ಈಗಿನ ಬಾಂಗ್ಲಾದೇಶ) ಅಸ್ಸಾಂಗೆ ವಲಸೆಬಂದ ಮುಸ್ಲಿಮರನ್ನು ಮಿಯಾಗಳೆಂದು ಕರೆಯಲಾಗುತ್ತದೆ. ‘ಮಿಯಾಸ್’ ಎಂದು ಅವಹೇಳನಕಾರಿ ರೀತಿಯಲ್ಲಿ ಆಗಾಗ ಬಳಸುವುದುಂಟು.

1) ಅಸ್ಸಾಂನ ಜನಸಂಖ್ಯಾ ಸಂಯೋಜನೆಯಲ್ಲಿ ತೀವ್ರತರವಾದ ಬದಲಾವಣೆಗಳನ್ನು ತಂದಿರುವ ಇವರ ವಲಸೆಯು, ಅಸ್ಸಾಂ ಪ್ರದೇಶವನ್ನು ಬಿಟಿಷರು ಸ್ವಾಧೀನ 1826ರಲ್ಲಿ ವಶಪಡಿಸಿಕೊಳ್ಳುವುದರಲ್ಲಿ ಪ್ರಾರಂಭವಾಯಿತು ಮತ್ತು ದೇಶದ ವಿಭಜನೆ ಸಂದರ್ಭದಲ್ಲಿ ಹಾಗೂ 1971 ಬಾಂಗ್ಲಾದೇಶ ವಿಮೋಚನಾ ಸಂದರ್ಭದಲ್ಲಿ ಕೂಡ ಈ ವಲಸೆ ಮುಂದುವರಿಯಿತು.

2) ಮಿಯಾಗಳನ್ನ’ ಬಾಂಗ್ಲಾದೇಶಿ’ ಗಳೆಂದು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗುತ್ತದೆ.

 

ಚಾರ್ -ಚಾಪೋರಿ ಎಂದರೇನು?

ಚಾರ್ ಎಂದರೆ ತೇಲುವ ದ್ವೀಪ ಎಂದರ್ಥ, ಹಾಗೂ ಚಾಪೋರಿ ಎಂದರೆ ತಗ್ಗುಪ್ರದೇಶದ ಪ್ರವಾಹಪೀಡಿತ ನದಿತೀರಗಳು ಆಗಿವೆ.

1) ಪ್ರವಾಹ ಮತ್ತು ಸವೆತಗಳಿಂದ ಹೊಡೆತ ತಿನ್ನುವ ಈ ಪ್ರದೇಶಗಳು ಕಡಿಮೆ ಅಭಿವೃದ್ಧಿ ಸೂಚಕಗಳನ್ನು ಹೊಂದಿದೆ. ಚಾರ್ ನ  ಸುಮಾರು 80ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.

2) 2014ರ ಯುಎನ್ ಡಿಪಿ ಅಸ್ಸಾಂ ಮಾನವ ಅಭಿವೃದ್ಧಿ ವರದಿಯು ಚಾರ್ ಪ್ರದೇಶದ ಜನರನ್ನು” ಸಂವಹನ ಕೊರತೆ, ಪ್ರಾಥಮಿಕ ಶಿಕ್ಷಣದ ನಂತರ ಶಿಕ್ಷಣ ಲಭ್ಯವಿಲ್ಲದಿರುವುದು, ಬಡತನ,ಬಾಲ್ಯ ವಿವಾಹ ಹಾಗೂ ಅನಕ್ಷರತೆಯನ್ನು” ಹೊಂದಿರುವ ಪ್ರದೇಶವಾಗಿ ಗುರುತಿಸಿದೆ.

 


    ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ಒಳಗೊಂಡಿರುವ ವಿಷಯಗಳು: ವಿವಿಧ ಸಂವಿಧಾನಬದ್ಧ ಹುದ್ದೆಗಳು, ಅಧಿಕಾರಗಳು, ಕಾರ್ಯಗಳು ಮತ್ತು ವಿವಿಧ ಸಂವಿಧಾನಿಕ ಸಂಸ್ಥೆಗಳ ಹುದ್ದೆಗಳಿಗೆ ನೇಮಕ.

ರಾಜೀವ್ ಗಾಂಧಿ ಅವರ ಹತ್ಯೆಯ ಅಪರಾಧಿಗಳ ಕ್ಷಮಾಪಣೆ ಸಂದರ್ಭದಲ್ಲಿ, ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಬಹುದು.


ಸಂದರ್ಭ:

1991 ರಲ್ಲಿ ರಾಜೀವ್ ಗಾಂಧಿ ಹತ್ಯೆಯ ಹಿಂದೆ ದೊಡ್ಡ ಪಿತೂರಿ ಇದೆ ಎಂಬುದರ ಬಗ್ಗೆ ತನಿಖೆ ಮಾಡಲು ‘ಮಲ್ಟಿ ಡಿಸಿಪ್ಲಿನರಿ ಮಾನಿಟರಿಂಗ್ ಏಜೆನ್ಸಿ’ಒಂದನ್ನು ರಚಿಸಲಾಗಿತ್ತು ಮತ್ತು ಅದು ಈಗಾಗಲೇ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪೆರಾರಿವಾಲನ್ ಕೈದಿಗೆ, ತಮಿಳುನಾಡಿನ ರಾಜ್ಯಪಾಲರಿಗೆ ಕ್ಷಮಾಪಣೆ ನೀಡುವ ಅಧಿಕಾರ ಇಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಸುಪ್ರೀಂಕೋರ್ಟ್ ಇದನ್ನು ಅಲ್ಲಗೆಳೆದು ರಾಜ್ಯಪಾಲರಿಗೆ ತಮ್ಮ ಅಧಿಕಾರವನ್ನು ಚಲಾಯಿಸಲು ಅನುಮತಿ ನೀಡಿದೆ.

 

ರಾಜ್ಯಪಾಲರ ಕ್ಷಮಾಪಣ ಅಧಿಕಾರ:

ಸಂವಿಧಾನದ 161 ನೇ ವಿಧಿಯ ಪ್ರಕಾರ ರಾಜ್ಯಪಾಲರು ಕ್ಷಮಾಪಣ ಅಧಿಕಾರಗಳನ್ನು ಹೊಂದಿದ್ದಾರೆ.

1) ರಾಜಪಾಲರು ಕ್ಷಮೆಯನ್ನು ನೀಡಬಹುದು, ಹಿಂಪಡೆಯಬಹುದು,ಶಿಕ್ಷೆಯನ್ನು ವಿಧಿಸಬಹುದು ಅಥವಾ ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವನ್ನು ವಿಸ್ತರಿಸುವ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾನೂನಿನ ವಿರುದ್ಧ ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಯ ಶಿಕ್ಷೆಯನ್ನು ಅಮಾನತುಗೊಳಿಸಬಹುದು, ರವಾನಿಸಬಹುದು.

2) ರಾಜ್ಯಪಾಲರಿಗೆ ಮರಣದಂಡನೆಗೆ ಕ್ಷಮಾದಾನ ನೀಡಲು ಅಧಿಕಾರವಿಲ್ಲ. ಅದು ರಾಷ್ಟ್ರಪತಿಗಳಿಗೆ ಮಾತ್ರ ಸೀಮಿತವಾಗಿದೆ.

3) ಸೇನಾ ನ್ಯಾಯಾಲಯಗಳುಗಳು ನೀಡಿದ ಶಿಕ್ಷೆಗೆ ಸಂಬಂಧಿಸಿದಂತೆ ಕ್ಷಮಾಪಣೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ, ಅದು ಕೂಡ ರಾಷ್ಟ್ರಪತಿಗಳು ನಿರ್ವಹಿಸುತ್ತಾರೆ.

 

ಒಳಗೊಂಡಿರುವ ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ  ಇ-ಆಡಳಿತದ ಅನ್ವಯಗಳು ,ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಸಂಭಾವ್ಯತೆಯ ಪ್ರಮುಖಾಂಶಗಳು, ನಾಗರಿಕರ ಸನ್ನದು ,ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹಾಗೂ ಸಾಂಸ್ಥಿಕ ಕ್ರಮಗಳು.

 

ಟಿ ಆರ್ ಪಿ ವ್ಯವಸ್ಥೆಯ ಮಾನದಂಡಗಳನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ.


ಸಂದರ್ಭ:

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, 4 ಸದಸ್ಯರ ಸಮಿತಿಯನ್ನು ಟೆಲಿವಿಷನ್ ರೇಟಿಂಗ್ ಏಜೆನ್ಸಿಗಳಿಗೆ ಮಾರ್ಗಸೂಚಿಗಳನ್ನು ನೀಡಲು ರಚಿಸಿದೆ.

 

ಹಿನ್ನೆಲೆ:

ಸುದ್ದಿವಾಹಿನಿಗಳು ರೇಟಿಂಗ್ ಅನ್ನು ಅಕ್ರಮವಾಗಿ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಮುಂಬೈ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಸೆರೆಹಿಡಿದರು.

 

ಈಗ ಈ ಮಾರ್ಗಸೂಚಿಗಳ ಅವಶ್ಯಕತೆ ಇದೆಯಾ?

TRAI ನ ಇತ್ತೀಚಿಗೆ ನೀಡಿದ ಶಿಫಾರಸುಗಳು, ತಾಂತ್ರಿಕ ಪ್ರಗತಿಗಳು ಮತ್ತು ವಿಶ್ವಾಸಾರ್ಹತೆ ಹಾಗೂ ಪಾರದರ್ಶಕ ರೇಟಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಮಾರ್ಗಸೂಚಿಗಳು ಬೇಕಾಗುತ್ತವೆ.

 

ಟಾರ್ಗೆಟ್ ರೇಟಿಂಗ್ ಪಾಯಿಂಟ್(TRP) ಎಂದರೇನು?

ಇದು ಟೆಲಿವಿಷನ್ ರೇಟಿಂಗ್ ಪಾಯಿಂಟ್ ಎಂದೇ ಪ್ರಸಿದ್ಧವಾಗಿದೆ.

1) ಜಾಹೀರಾತು ಸಂಸ್ಥೆಗಳು ಮಾರ್ಕೆಟಿಂಗ್ ಮಾಡಲು ಮತ್ತು ವೀಕ್ಷಕರನ್ನು ಮೌಲ್ಯಮಾಪನ ಮಾಡಲು ಬಳಸುವ ಒಂದು ತಂತ್ರವಾಗಿದೆ.

2) ಒಂದು ಚಾನೆಲ್ ನನ್ನು ಎಷ್ಟು ಜನ, ಯಾವ ವರ್ಗದ ಸಾಮಾಜಿಕ-ಆರ್ಥಿಕ ಜನರು ,ಮತ್ತು ಒಂದು ನಿರ್ದಿಷ್ಟ ಅವಧಿಯಲ್ಲಿ ಎಷ್ಟು ಸಮಯದವರೆಗೆ ವೀಕ್ಷಿಸುತ್ತಿದ್ದಾರೆ ಎಂದು, ನಾವು TRP ಇಂದ ಕಂಡುಕೊಳ್ಳಬಹುದು.

 

ಇದರ ದಾಖಲೆಯನ್ನು ನೀಡುವವರು ಯಾರು?

ಆಯುಧ ದೂರದರ್ಶನ ಹೊಂದಿರುವ ಮನೆಗಳಲ್ಲಿ, ಬಾರೋಮೀಟರ್ ಅಳವಡಿಸುವ ಮೂಲಕ, “ಬ್ರಾಡ್ ಕ್ಯಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್” ಎಂಬ ಸಂಸ್ಥೆಯು ಇದನ್ನು ದಾಖಲಿಸುತ್ತದೆ.

ದೇಶದಲ್ಲಿ ಸುಮಾರು 44 ಸಾವಿರ ಮನೆಗಳಲ್ಲಿ ಇದನ್ನು ಅಳವಡಿಸಿದೆ.

 

ಯಾಕೆ ಈ ರೇಟಿಂಗ ಗಳು ಮುಖ್ಯವಾಗುತ್ತವೆ?

1) ಕೆಲವೊಂದು ಕಾರ್ಯಕ್ರಮಗಳಿಗೆ ವೀಕ್ಷಕರ ವೀಕ್ಷಣೆ ಆಧಾರದ ಮೇಲೆ ರೇಟಿಂಗ್ ಗಳನ್ನು ನಿಗದಿಪಡಿಸಲಾಗುತ್ತದೆ.

2) ಈ ರೇಟಿಂಗ್ಗಳು ವೀಕ್ಷಕರಿಗೆ ಮತ್ತೆ ಮತ್ತೆ ಅಂತಹ ಕಾರ್ಯಕ್ರಮಗಳನ್ನು ನೀಡುವ ಅಥವಾ ರದ್ದುಪಡಿಸುವ ನಿರ್ಣಯವನ್ನು ತೆಗೆದುಕೊಳ್ಳುವ ಕಾರ್ಯವನ್ನು ಮಾಡುತ್ತವೆ.

3) ಉತ್ತಮ ರೇಟಿಂಗ್ ಹೊಂದಿರುವ ಕಾರ್ಯಕ್ರಮಗಳು ಮುಂದುವರಿಯುತ್ತವೆ ಮತ್ತು ಕಳಪೆ ರೇಟಿಂಗ್ ಹೊಂದಿರುವ ಕಾರ್ಯಕ್ರಮಗಳು ನಿಲ್ಲಬಹುದು.

4) ಕಡಿಮೆ ರೇಟಿಂಗ್ ಬಂದಿರುವುದರಿಂದ,ಉತ್ತಮ ಕಾರ್ಯಕ್ರಮಗಳು ಜನಪ್ರಿಯ ಅಲ್ಲದ ಕಾರಣಕ್ಕಾಗಿ  ನಿಲ್ಲುವ ಸಂಭವ ಹೆಚ್ಚಾಗಿರುತ್ತದೆ.

5) ಜಾಹೀರಾತುದಾರರಿಗೆ ಯಾವ ಚಾನೆಲ್ನಲ್ಲಿ ತಮ್ಮ ಜಾಹೀರಾತುಗಳನ್ನು ನೀಡಬೇಕೆಂದು ಇದರಿಂದ ತಿಳಿಯುತ್ತದೆ.

 

BARC ನ ಪರಿಚಯ:

ಇಂಡಿಯನ್ ಸೊಸೈಟಿಯ ಅಡ್ವರ್ಟೈಸ್, ಇಂಡಿಯನ್ ಕ್ಯಾಸ್ಟಿಂಗ್ ಫೌಂಡೇಶನ್, ಮತ್ತು ಜಾಹೀರಾತು ಏಜೆನ್ಸಿಗಳು ಸಂಘದಿಂದ ಪ್ರತಿನಿಧಿ ಸಲ್ಪಟ್ಟ ಜಾಹಿರಾತುದಾರರು, ಜಹಿರತು ಏಜೆನ್ಸಿಗಳು ಮತ್ತು ಪ್ರಸಾರ ಕಂಪನಿಗಳ ಜಂಟಿಯಾಗಿ ಬಡತನದಲ್ಲಿ ಬೆಳೆದು ಬಂದ ಸಂಸ್ಥೆಯಾಗಿದೆ.

1)2010ರಲ್ಲಿ ಇದನ್ನು ಸ್ಥಾಪಿಸಲಾಗಿದೆ.

 

ಒಳಗೊಂಡಿರುವ ವಿಷಯಗಳು: ಭಾರತವನ್ನು ಒಳಗೊಂಡಂತೆ ದ್ವಿಪಕ್ಷಿಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಒಪ್ಪಂದಗಳು ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಅವುಗಳ ಪರಿಣಾಮ.

 

ಹವಮಾನ ಬದಲಾವಣೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದ ಪ್ಯಾರಿಸ್ ಒಪ್ಪಂದದಿಂದ ಯುಎಸ್ ಔಪಚಾರಿಕವಾಗಿ ಹಿಂದೆ ಸರಿಯುತ್ತಿದೆ.


ಸಂದರ್ಭ:

ಅಮೆರಿಕ ಸಂಯುಕ್ತ ರಾಷ್ಟ್ರವು ,ಪ್ಯಾರಿಸ್ ಒಪ್ಪಂದದಿಂದ ಔಪಚಾರಿಕವಾಗಿ ಹಿಂದೆ ಸರಿಯುತ್ತಿದೆ.

1) 2015ರ ಪ್ಯಾರಿಸ್ ಒಪ್ಪಂದಕ್ಕೆ 189 ದೇಶಗಳು ಇನ್ನೂ ಬದ್ಧವಾಗಿ ಇವೆ.

 

ಪ್ಯಾರಿಸ್ ಒಪ್ಪಂದ ಬಗ್ಗೆ ಪರಿಚಯ:

ಒಂದು ಐತಿಹಾಸಿಕ ಅಂತರಾಷ್ಟ್ರೀಯ ಒಪ್ಪಂದವಾಗಿದ್ದು , ಹವಾಮಾನ ಬದಲಾವಣೆ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಲು ಎಲ್ಲಾ ದೇಶಗಳಿಗೆ ಸಾಮಾನ್ಯ ಗುರಿಯನ್ನು ಏರ್ಪಡಿಸುವಲ್ಲಿ ಸುಮಾರು 200  ದೇಶಗಳನ್ನು ಒಟ್ಟುಗೂಡಿಸಿದ ಒಪ್ಪಂದವಾಗಿದೆ.

ಕೈಗಾರಿಕಾ ಪೂರ್ವ ಮಟ್ಟದಿಂದ ಜಾಗತಿಕ ತಾಪಮಾನವು 2ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆಯಾಗಲು ಮತ್ತು ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಮಿತಿಗೊಳಿಸಲು ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

1) ಈ ಅಂಶಗಳನ್ನು ಜಾರಿಗೆ ತರಲು ಪ್ರತಿಯೊಂದು ದೇಶವೂ ತಮ್ಮ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಮಿತಿಯಲ್ಲಿ ಇರಿಸಲು, ಉದ್ದೇಶದ ಕ್ರಿಯಾಯೋಜನೆಗಳನ್ನು ಜಾರಿಗೆ ತರುವುದಾಗಿ ತಮ್ಮ ಪ್ರತಿಜ್ಞೆ ಮಾಡಿವೆ.

2) ಹವಮಾನ ಬದಲಾವಣೆಯೊಂದಿಗೆ ಹೋರಾಟ ಮಾಡಲು ಮತ್ತು ಹೊಂದಿಕೊಳ್ಳುವಲ್ಲಿನ ಅನ್ವೇಷಣೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ನೀಡುವಂತೆ ಶ್ರೀಮಂತ ಹಾಗೂ ಮುಂದುವರಿದ ರಾಷ್ಟ್ರಗಳಿಗೆ ಈ ಒಪ್ಪಂದವು ಒತ್ತಾಯಿಸುತ್ತದೆ.

 

ಈ ಒಪ್ಪಂದದಿಂದ ದೇಶಗಳು ಹಿಂದಿ ಸರಿಯುವ ವಿಧಾನ:

1) ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯಲು ಮತ್ತು ಅದರ ಪ್ರಕ್ರಿಯೆಗೆ, ಪ್ಯಾರಿಸ್ ಒಪ್ಪಂದದ 28 ನೇ ವಿಧಿಯು ಅವಕಾಶ ಕಲ್ಪಿಸುತ್ತದೆ.

2) ಪ್ಯಾರಿಸ್ ಒಪ್ಪಂದ ಅನುಷ್ಠಾನಗೊಂಡ ಮೂರು ವರ್ಷಗಳ ನಂತರ ಒಂದು ದೇಶವು ಹಿಂದೆ ಸರಿಯುವ ನೋಟಿಸನ್ನು ನೀಡಬಹುದು.

 


    ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ಒಳಗೊಂಡಿರುವ ವಿಷಯಗಳು: ಸಂರಕ್ಷಣೆ,ಪರಿಸರ ಮಾಲಿನ್ಯ ಮತ್ತು ಅವನತಿ ,ಪರಿಸರ ಪ್ರಭಾವದ ಮೌಲ್ಯಮಾಪನ.

 

ಜೈವಿಕ-ವಿಭಜನಕಾರಿ ತಂತ್ರಜ್ಞಾನ:


ಸಂದರ್ಭ:

ಬೆಳೆಯ ಕೊಯ್ಲಿನ ನಂತರ ಉಳಿದ ಅದರ ಕೂಳೆಯನ್ನು( ಹುಲ್ಲು) ಗೊಬ್ಬರವನ್ನಾಗಿ ಮಾಡಲು, ಜೈವಿಕ -ವಿಭಜನಕಾರಿ ತಂತ್ರವು, ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದಾರೆ.

 

ದೆಹಲಿ ಸರ್ಕಾರ ,PUSA ಎಂಬ ಸಂಸ್ಥೆಯ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ ‘ಜೈವಿಕ ಕೊಳೆಯುವ ಪರಿಹಾರ’ ಪ್ರಯೋಗದಲ್ಲಿ ಇದನ್ನು ಕಂಡುಕೊಳ್ಳಲಾಗಿದೆ.

 

ಹಾಗಾದ್ರೆ ಮುಂದೇನು?

ಇದರ ಪರಿಣಾಮಕಾರಿತ್ವವನ್ನು ಮತ್ತು ಖರ್ಚು ಗಳನ್ನು ಸರ್ವೋಚ್ಚ ನ್ಯಾಯಾಲದ ಮುಂದೆ ದೆಹಲಿ ಸರ್ಕಾರವು ಮಂಡಿಸಲಿದೆ.

ಈ ಪ್ರಯೋಗದ ಪ್ರಯೋಜನವನ್ನು  ಪಂಜಾಬ್ ಮತ್ತು ಹರಿಯಾಣದ ರೈತರು ಕೂಡ ಪಡೆಯಬಹುದು.

 

ಜೈವಿಕ -ವಿಭಜಕಗಳು ಹೇಗೆ ರೂಪುಗೊಳ್ಳುತ್ತದೆ?

PUSA ಎಂಬ ವಿಭಜನಕಾರಿಯು ಏಳು ಶಿಲಿಂದ್ರಗಳ ಮಿಶ್ರಣದಿಂದ ಕೂಡಿದ್ದು, ಅದು ಕಿಣ್ವಗಳನ್ನು ಉತ್ಪಾದಿಸಿ, ಸೆಲ್ಯುಲೋಸ,ಲಿಗ್ನಿನ್ ಮತ್ತು ಭತ್ತದ ಹುಲ್ಲನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

 

ಈ ವಿಭಜನಕಾರಿ ಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ?

1) ವಿಭಜನಕಾರಿ ಮಾತ್ರೆಗಳನ್ನು ಬಳಸಿ ದ್ರವದ ರೂಪದಲ್ಲಿ ಇದನ್ನು ತಯಾರಿಸಲಾಗುತ್ತದೆ ಮತ್ತು 8ರಿಂದ 10 ದಿನಗಳ ಕಾಲ ಅದನ್ನು ಇಟ್ಟು, ನಂತರ ಅದನ್ನು ಬೆಳೆ ಕೊಯ್ಲಿನ ಹುಲ್ಲುಗಳಿಗೆ ಸಿಂಪಡಿಸಲಾಗುತ್ತದೆ.

2) 4 ಮಾತ್ರೆಗಳು, ಬೆಲ್ಲ ಮತ್ತು ಕಡಲೆ ಹಿಟ್ಟನ್ನು ಬೆರೆಸಿ ಇಪ್ಪತ್ತೈದು ಲೀಟರ್ ಇರುವ ಮಿಶ್ರಣವನ್ನು ರೈತರು ತಯಾರಿಸಬಹುದು ಮತ್ತು ಅದನ್ನು ಒಂದು ಹೆಕ್ಟೇರ್ ಭೂಮಿಗೆ ಸಿಂಪಡಿಸಬಹುದು.

3) ಬೆಳೆ ಕೊಯ್ಲಿನ ಹುಲ್ಲು ನಾಶವಾಗಲು ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ.

 

PUSA ವಿಭಜನಕಾರಿಯ ಅನುಕೂಲಗಳು:

1)ಬೆಳೆಗಳಿಗೆ ಗೊಬ್ಬರ ಮತ್ತು ಮಿಶ್ರ ಗೊಬ್ಬರವಾಗಿ ಇದು ಕಾರ್ಯನಿರ್ವಹಿಸಿ, ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ಸುಧಾರಿಸುತ್ತದೆ.  ಮುಂದೆ ಭವಿಷ್ಯದಲ್ಲಿ ರಸ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ಇದು ಪೂರಕವಾಗಿದೆ.

2) ಬೆಳೆಯ ಕೊಯ್ಲಿನ ಹುಲ್ಲನ್ನು ಸುಡುವುದರಿಂದ ಪಾರಾಗಬಹುದು ಮತ್ತು ಅಗ್ಗದ, ಪರಿಣಾಮಕಾರಿಯಾದ, ಎಲ್ಲರೂ ಮಾಡಬಹುದಾದ, ಪ್ರಾಯೋಗಿಕ ತಂತ್ರವಾಗಿದೆ.

 

ಒಳಗೊಂಡಿರುವ ವಿಷಯಗಳು: ಮಾಲಿನ್ಯ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳು.

 

ಹೊಂಜು ಎಂದರೇನು? ಮತ್ತು ಅದು ಎಷ್ಟು ಅಪಾಯಕಾರಿಯಾಗಿದೆ?:


ಸಂದರ್ಭ:

ದೆಹಲಿಯಲ್ಲಿ ಮಾಲಿನ್ಯದಿಂದ ಆಗುವ ಹೆಚ್ಚಿನ ಪ್ರಮಾಣದ ಹೊಗೆಯಿಂದಾಗಿ ಇದು ರೂಪುಗೊಂಡಿದೆ.

1) ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಅಕ್ಟೋಬರ್ ನಲ್ಲಿ ದೆಹಲಿಯ ವಾಯು ಮಾಲಿನ್ಯವು ಬಹಳಷ್ಟು ಹೆಚ್ಚಾಗಿದೆ.

 

ಹೊಂಜು ಎಂದರೇನು?

ಹೊಂಜು ಮಂಜು, ಧೂಳು ಮತ್ತು ವಾಯು ಮಾಲಿನ್ಯಕಾರಕಗಳಾದ ಸಾರಜನಕದ ಆಕ್ಸೈಡ್ ಗಳು,ಬಾಷ್ಪಶೀಲ ಸಾವಯವ ಸಂಯುಕ್ತಗಳು, ಇತ್ಯಾದಿಗಳ ಹಾನಿಕಾರಕ ಮಿಶ್ರಣವಾಗಿದ್ದು,ಇದು ಸೂರ್ಯನ ಬೆಳಕನ್ನು ಸಂಯೋಜಿಸಿ ನೆಲಮಟ್ಟದಲ್ಲಿ ಓಜೋನ್ ಪದರವನ್ನು ರೂಪಿಸುತ್ತದೆ.

ವಾತಾವರಣದಲ್ಲಿ ಓಝೋನ್ ಅಧಿಕವಾಗಿದ್ದರೆ ಒಳ್ಳೆಯದೇ, ಆದರೆ ಅದು ನೆಲಮಟ್ಟಕ್ಕೆ ಬಂದಾಗ ಮಾನವನ ಆರೋಗ್ಯದ ಮೇಲೆ ಮಾಡುವ ಪರಿಣಾಮಗಳನ್ನು ಉಂಟುಮಾಡುತ್ತದೆ.

( ಗಮನಕ್ಕೆ: 1900 ರಲ್ಲಿ ಲಂಡನ್ನಿನಲ್ಲಿ ಹೊಗೆ ಮತ್ತು ಮಂಜನ್ನು ಗಮನಿಸಿ Dr.Henry Antoine does voeux ಎಂಬ ವ್ಯಕ್ತಿಯು ತನ್ನ ಪ್ರಬಂಧದಲ್ಲಿ 1905ರಲ್ಲಿ ಹೊಂಜು ಎಂಬ ಪದವನ್ನು ಮೊಟ್ಟಮೊದಲ ಬಾರಿಗೆ ಬಳಸಿದ.

 

ಹೊಂಜು ಹೇಗೆ ರೂಪುಗೊಳ್ಳುತ್ತದೆ?

ಇದು ಓಜೋನ್ ಅನ್ನು ಒಳಗೊಂಡ, ಜೊತೆಗೆ ಸಲ್ಫರ್ ಡೈಆಕ್ಸೈಡ್, ಸಾರಜನಕದ ಡೈ ಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್, ಮತ್ತುPM10 ಕಣಗಳಂತಹ ಅಂಶಗಳನ್ನು ಒಳಗೊಂಡಿದ್ದು, ಮಾನವನ ಶ್ವಾಸಕೋಶದ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ.

 

ಹೊಂಜು ವಿದ್ಯಮಾನಕ್ಕೆ ಕಾರಣವಾಗುವ ಅಂಶಗಳು:

1) ಬಹುದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಸುಡುವಿಕೆ.

2) ಬೆಳೆಗಳನ್ನು ಕತ್ತರಿಸಿ ಸುಡುವುದು( ಉದಾಹರಣೆ, ದೆಹಲಿ ಸುತ್ತಲಿನ ಪ್ರದೇಶ)

3) ಹೊಗೆ ಮಾಲಿನ್ಯಕಾರಕಗಳಾದ ಆಟೋಮೊಬೈಲ್ ಹೊಗೆ ಸೂಸುವಿಕೆ, ವಿದ್ಯುತ್ಸ್ಥಾವರಗಳು, ಪಟಾಕಿಗಳು ,ಬಣ್ಣ, ಹೇರ್ ಸ್ಪ್ರೇ ,ಪ್ಲಾಸ್ಟಿಕ್ ಗಳಿಂದ ಉತ್ಪತ್ತಿಯಾಗಬಹುದು.

 

ಇದರಲ್ಲಿ ಸ್ಥಳೀಯ ಹವಮಾನದ ಪಾತ್ರ:

ಹೊಂಜು ರಚನೆ ಆಗಬೇಕಾದರೆ,ಹವಾಮಾನವು ತಾಪಮಾನ, ಬಿಸಿಲಿನಿಂದ ಕೂಡಿದ ,ಮತ್ತು ಶಾಂತ ಗಾಳಿಯೊಂದಿಗೆ ಇರಬೇಕಾಗುತ್ತದೆ. ಅದರಲ್ಲೂ ಬೆಚ್ಚಗಿನ ದಿನಗಳಲ್ಲಿ ಇದು ಅತ್ಯಂತ ವೇಗವಾಗಿ ರೂಪುಗೊಳ್ಳುತ್ತದೆ.

 

ವಿಧಗಳು:

ಗಂಧಕದ ಹೊಂಜು ಮತ್ತು ದ್ಯುತಿರಾಸಾಯನಿಕ ಹೊಂಜು ಎಂದು ಎರಡು ರೀತಿಗಳಲ್ಲಿ ನಾವು ಕಾಣಬಹುದಾಗಿದೆ.

ಗಂಧಕದ ಹೊಂಜು ಲಂಡನ್ ಹೊಂಜು ಎಂತಲೂ ಕರೆಯಲಾಗುತ್ತದೆ. ಇದು ಗಾಳಿಯಲ್ಲಿ ಸಲ್ಫರ್ ಆಕ್ಸೈಡ್ಗಳು ಹೆಚ್ಚಾಗುವಿಕೆಯಿಂದ ಉಂಟಾಗುತ್ತದೆ.

ಸೂರ್ಯನ ಬೆಳಕು ಸಾರಜನಕದ ಆಕ್ಸೈಡ್ ಗಳೊಂದಿಗೆ ಮತ್ತು ವಾತಾವರಣದಲ್ಲಿನ ಕನಿಷ್ಠ ಒಂದು ಬಾಷ್ಪಶೀಲ ಸಾವಯವ ಸಂಯುಕ್ತ ದೊಂದಿಗೆ(VOC) ಪ್ರತಿಕ್ರಿಯಿಸಿದಾಗ ದ್ಯುತಿರಾಸಾಯನಿಕ ಹೊಂಜು ನಿರ್ಮಾಣವಾಗುತ್ತದೆ.

 

ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು:

1) ಸಿಗರೇಟ್ ಮತ್ತು ಧೂಮಪಾನದಂತೆ ಹೊಂಜನ್ನು ಕೂಡ ದೀರ್ಘಕಾಲದವರೆಗೆ ನಾವು ಉಸಿರಾಡುವುದರಿಂದ ಶ್ವಾಸಕೋಶದಲ್ಲಿ ಉರಿ ಸಂಭವಿಸಬಹುದು.

2) ಹೊಂಜು ಶ್ವಾಸಕೋಶದ ಉಬ್ಬುವಿಕೆಗೆ ಕಾರಣವಾಗುತ್ತದೆ ಮತ್ತು ತೆಗೆದುಕೊಂಡ ಶ್ವಾಸವು Interleukin-6 ಅನ್ನು ಸ್ರವಿಸುತ್ತದೆ, ಇದು ಮಾನವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು ಹಾಗೂ ಹೃದಯಾಘಾತ ಮತ್ತು ಪಾರ್ಶ್ವವಾಯು ಕೂಡ ದಾರಿಯಾಗುತ್ತದೆ.

3)ಹೊಂಜು ಮಾನವನ ಮೂಗು ಮತ್ತು ಗಂಟಲಿನ ರಕ್ಷಣಾತ್ಮಕ ಪೊರೆಗಳನ್ನು ಒಣಗಿಸುತ್ತದೆ.

4) ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಅನಾರೋಗ್ಯಕ್ಕೆ ಈಡಾಗಬಹುದು.

5) ಇದು ಸೂರ್ಯನ ನೇರಳಾತೀತ ಕಿರಣಗಳ ಬರುವಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ವಿಟಮಿನ್ ಡಿ ಎಂತಹ ಪ್ರಮುಖ ಅಂಶಗಳ ಉತ್ಪಾದನೆಗೆ ಅಡ್ಡಿಯಾಗುತ್ತದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos