Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 4 -11-2020

Join Our official Telegram Channel for Important Tips and Guidance : https://t.me/insightsIAStips

    ಸಾಮಾನ್ಯ ಅಧ್ಯಯನ ಪತ್ರಿಕೆ 1


 

 ಒಳಗೊಂಡಿರುವ ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆ,ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

ಲಾ ನಿನಾ ಎಂದರೇನು?


 

ಸಂದರ್ಭ:

ವಿಶ್ವ ಹವಾಮಾನ ಸಂಸ್ಥೆಯು ಇತ್ತೀಚೆಗೆ ಅಕ್ಟೋಬರ್ 29 ,2020 ರಂದು Global Seasonal Update ಎಂಬ ತನ್ನ ವರದಿಯಲ್ಲಿ ಸಮಭಾಜಕ ವೃತ್ತದ ಪೆಸಿಪಿಕ್ ಸಾಗರದ ಮಧ್ಯ ಹಾಗೂ ಪೂರ್ವಕ್ಕೆ ಒಂದು ದಶಕದ ನಂತರ ಲಾ ನೀನಾ ವಾತಾವರಣದ ಘಟನೆಯು ಮತ್ತೆ ಮರುಕಳಿಸಿದೆ ಎಂದು ಹೇಳಿದೆ.

 

ಪರಿಣಾಮಗಳು:

1) ಲಾ ನೀನಾ ಘಟಿಸುವುದರಿಂದ ಸಮುದ್ರದ ಮೇಲ್ಮೈ ತಾಪಮಾನವು ಸರಾಸರಿಗಿಂತ ಎರಡರಿಂದ ಮೂರರಷ್ಟು ಡಿಗ್ರಿ ಸೆಲ್ಸಿಯಸ್ ತಂಪು ಆಗುತ್ತದೆ.

2) ಇದು ವಿಶ್ವದ ಅನೇಕ ಭಾಗಗಳಲ್ಲಿ ತಾಪಮಾನ, ಮಳೆ ಮತ್ತು ಚಂಡಮಾರುತಗಳ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ, ಹಾಗೂ ಇದು 2021 ರ ವರೆಗೆ ಇರುತ್ತದೆ.

 

ಲಾ ನೀನಾ ಎಂದರೇನು?

ಸಮಭಾಜಕ ವೃತ್ತದ ಮಧ್ಯ ಹಾಗೂ ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೆಯನ್ನು ಬಹು ದೊಡ್ಡ ಪ್ರಮಾಣದಲ್ಲಿ ತಂಪಾಗಿಸಿ, ಜೊತೆಗೆ ಉಷ್ಣವಲಯದ ವಾತಾವರಣದಲ್ಲಿ ಗಾಳಿ, ಒತ್ತಡ ಮತ್ತು ಮಳೆಯ ವ್ಯವಸ್ಥೆಯನ್ನು ಬದಲಾವಣೆ ಮಾಡುವುದನ್ನು  ಲಾ ನಿನಾ ಕರೆಯುತ್ತಾರೆ.

1) ಇದು ಬಿಸಿ ವಾತಾವರಣದ ಎಲ್ ನೀನೋ ವ್ಯವಸ್ಥೆಗೆ ವಿರುದ್ಧವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

 

ಲಾ ನಿನಾದಿಂದ ಆಗುವ ಹವಮಾನ ಬದಲಾವಣೆಗಳು:

1) ಇದರಿಂದಾಗಿ Horn of Africa ಮತ್ತು ಮಧ್ಯ ಏಷ್ಯಾಗಳಲ್ಲಿ ಸರಾಸರಿ ಮಳೆಯ ಪ್ರಮಾಣಕ್ಕಿಂತ ಕಡಿಮೆ ಮಳೆಯನ್ನು ನೋಡಬಹುದು.

2) ಪೂರ್ವ ಆಫ್ರಿಕಾ ಪ್ರದೇಶವು ಸಾಮಾನ್ಯ ಪರಿಸ್ಥಿತಿ ಗಿಂತಲೂ ಹೆಚ್ಚಿನ ಒಣ ಪ್ರದೇಶವನ್ನು ಹೊಂದುವ ಮುನ್ಸೂಚನೆ ಇದೆ ಮತ್ತು ಇತ್ತೀಚೆಗಿನ ಮರುಭೂಮಿ ಮಿಡತೆ ಆಕ್ರಮಣದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಹಾರ ಅಭದ್ರತೆಗೆ ಕೂಡ ಕಾರಣವಾಗಬಹುದು.

3) ಇದರಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಮಳೆ ಹೆಚ್ಚಾಗಬಹುದು.

4) ನೈರುತ್ಯ ಹಿಂದೂಮಹಾಸಾಗರದ ಉಷ್ಣವಲಯದ ಚಂಡಮಾರುತದ ಮೇಲೆ ತೀವ್ರತೆಯನ್ನು ಕಡಿಮೆ ಮಾಡುವುದರೊಂದಿಗೆ ತನ್ನ ಪರಿಣಾಮವನ್ನು ಬೀರುತ್ತದೆ.

5) ಆಗ್ನೇಯ ಏಷ್ಯಾ,  ಫೆಸಿಫಿಕ್ ದ್ವೀಪಗಳಲ್ಲಿ, ಹಾಗೂ ದಕ್ಷಿಣ ಅಮೆರಿಕದ ಉತ್ತರದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯ ಪ್ರಮಾಣ ಪಡೆಯುವ ನಿರೀಕ್ಷೆಯಿದೆ.

6) ಈ ಘಟನೆಯಿಂದ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಸುರಿದು ಪ್ರವಾಹಕ್ಕೆ ಕಾರಣ ವಾಗುತ್ತದೆ.

la_nina

 


    ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ಒಳಗೊಂಡಿರುವ ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಮಧ್ಯಸ್ಥಿಕೆಗಳು ಮತ್ತು ಅವುಗಳ ವಿನ್ಯಾಸ ಹಾಗೂ ಅನುಷ್ಠಾನದಿಂದ ಆಗುವ ಸಮಸ್ಯೆಗಳು.

ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆ:


 

ಸಂದರ್ಭ:

ಈ ವರ್ಷದ ಹಣಕಾಸಿನ ಮೊದಲ ಏಳು ತಿಂಗಳಲ್ಲಿ( ಅಕ್ಟೋಬರ್ 31 ರವರೆಗೆ) ಸುಮಾರು 358 ಕೋಟಿ ರೂಗಳ ಮೌಲ್ಯದ ಔಷಧ ಉತ್ಪನ್ನಗಳು ಜನ ಔಷಧಿ ಮಳಿಗೆಗಳಲ್ಲಿ ಮಾರಾಟವಾಗಿವೆ.

1) 2019- 20 ರಲ್ಲಿ 419 ಕೋಟಿ ರೂಪಾಯಿಗಳ ಮಾರಾಟವಾಗಿತ್ತು ಆದರೆ ಈ ವರ್ಷ ಅದು 600 ಕೋಟಿ ರೂಪಾಯಿಗಳಿಗೆ ತಲುಪಿ ಕಳೆದ ವರ್ಷದ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

 

PMBJP ಯ ಪರಿಚಯ:

ಇದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ಔಷಧಗಳ ಇಲಾಖೆ  ಕೈಗೊಂಡಿರುವ ಆಂದೋಲನವಾಗಿದೆ.

1) ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ನೀಡಲು ಪ್ರಾರಂಭಿಸಲಾಗಿದೆ.

2) 2018ರಲ್ಲಿ ಇದನ್ನು ಪ್ರಾರಂಭಿಸಲಾಯಿತು ಮತ್ತು ಇದಕ್ಕೆ 2015ರಲ್ಲಿ ಮರುನಾಮಕರಣ ಮಾಡಲಾಗಿದೆ.

 

ಜಾರಿ:

Bureau of pharma PSU’s of India ಇದನ್ನು ಜಾರಿಗೊಳಿಸುವ ಸಂಸ್ಥೆಯಾಗಿದೆ.

1)BPPI ಅನು ಎಲ್ಲಾ CPSU ಗಳ ಬೆಂಬಲದೊಂದಿಗೆ ಭಾರತ ಸರ್ಕಾರ ದ ಔಷಧಗಳ ಇಲಾಖೆಯ ಅಡಿಯಲ್ಲಿ ಸ್ಥಾಪಿಸಲಾಗಿದೆ.

US_2020

 

ಒಳಗೊಂಡಿರುವ ವಿಷಯಗಳ: ಭಾರತದ ಸಂವಿಧಾನದ ಪ್ರಾವಧಾನಗಳನ್ನು ಬೇರೆ ದೇಶಗಳೊಂದಿಗೆ ಹೋಲಿಕೆ ಮಾಡುವುದು.

ಅಮೆರಿಕದ ಅಧ್ಯಕ್ಷರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?


 

ಯುಎಸ್ಎ ಯ ಅಧ್ಯಕ್ಷರಾಗಲು ಬೇಕಾಗಿರುವ ಅರ್ಹತೆಗಳು:

1) ಅಮೇರಿಕಾದಲ್ಲಿ ಸ್ವಾಭಾವಿಕವಾಗಿ ಜನಿಸಿ ನಾಗರಿಕತ್ವ ಹೊಂದಿದವರಾಗಿರಬೇಕು.

2) ಹದಿನಾಲ್ಕು ವರ್ಷಗಳ ಕಾಲ ಯುಎಸ್ಎ ದಲ್ಲಿ ನೆಲೆಸಿರಬೇಕು.

3) ಕನಿಷ್ಠ 35 ವರ್ಷ ವಯಸ್ಸನ್ನು ಹೊಂದಿದವರಾಗಿರಬೇಕು.

 

ಮತವನ್ನು ಯಾರು ಚಲಾಯಿಸುತ್ತಾರೆ?

ಅಮೆರಿಕದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಜನರು ನೇರವಾಗಿ ಚುನಾಯಿಸುವುದಿಲ್ಲ. ಅದರ ಬದಲಿಗೆ ಅವರನ್ನು “ಚುನಾವಣಾ ಕಾಲೇಜು” ಎಂಬ ಪ್ರಕ್ರಿಯೆಯ ಮೂಲಕ ‘ಮತದಾರರು'(Electors) ಚುನಾಯಿಸುತ್ತಾರೆ.

 

ಚುನಾವಣಾ ಕಾಲೇಜು ಹೇಗೆ ಕಾರ್ಯನಿರ್ವಹಿಸುತ್ತದೆ?

ಪ್ರತಿ ರಾಜ್ಯದಿಂದ ಮತದಾರರ ಸಂಖ್ಯೆ ಸರಿಸುಮಾರು ಅದರ ಜನಸಂಖ್ಯೆಯ ಗಾತ್ರಕ್ಕೆ ಅನುಗುಣವಾಗಿ ಇರುತ್ತದೆ. ಯುಎಸ್ ನ ಕಾಂಗ್ರೆಸ್ನಲ್ಲಿ ಹೊಂದಿರುವ ಪ್ರತಿನಿಧಿಗಳ ಸಂಖ್ಯೆಯನ್ನು ಇದು ಒಳಗೊಂಡಿರುತ್ತದೆ.

1) ಒಟ್ಟು 538 ಮತದಾರರು ಇದ್ದಾರೆ

2) ಪ್ರತಿ ಮತದಾರರು ಒಂದು ಮತವನ್ನು ಹಾಕಬಹುದು. ಹಾಗೂ ಅಭ್ಯರ್ಥಿಯು ಅಧ್ಯಕ್ಷ ಸ್ಥಾನವನ್ನು ಗೆಲ್ಲಬೇಕಾದರೆ 270 ಅಥವಾ ಅದಕ್ಕಿಂತ ಹೆಚ್ಚಿನ ಮತಗಳನ್ನು ಪಡೆಯಲೇಬೇಕು.

 

ಯಾವುದೇ ಅಭ್ಯರ್ಥಿಗೆ ಪೂರ್ಣಬಹುಮತ ಸಿಗದಿದ್ದರೆ ಏನಾಗಬಹುದು?

ಯುಎಸ್ ಕಾಂಗ್ರೆಸ್ನ ಕೆಳಮನೆಯಾದ ಜನಪ್ರತಿನಿಧಿಗಳ ಸಭೆ ಪ್ರತಿನಿಧಿಗಳು ನಂತರ ಅಧ್ಯಕ್ಷರಿಗೆ ಮತದಾನವನ್ನು ಮಾಡುತ್ತಾರೆ.

1) 1824 ರಲ್ಲಿ ಅಮೆರಿಕದಲ್ಲಿ ಒಮ್ಮೆ ಮಾತ್ರ ಘಟಿಸಿದೆ.

2) ಎರಡು ಪಕ್ಷಗಳ ವ್ಯವಸ್ಥೆಯನ್ನು ಹೊಂದಿರುವ ಅಮೆರಿಕದ ವ್ಯವಸ್ಥೆಗಳಲ್ಲಿ ಇದು ಇವತ್ತು ಸಂಭವಿಸುವ ಸಾಧ್ಯತೆ ಇಲ್ಲ.

 


    ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ಒಳಗೊಂಡಿರುವ ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ,ಕಂಪ್ಯೂಟರ್, ರೋಬೋಟಿಕ್ಸ್, ನ್ಯಾನೋ ತಂತ್ರಜ್ಞಾನ,ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅರಿವು.

ಅಕ್ಕಿ ಸಾರವರ್ಧನೆ ಮತ್ತು ವಿತರಣೆಯ ವ್ಯವಸ್ಥೆಯನ್ನು ಬಲಪಡಿಸುವ ಯೋಜನೆ.


 

ಸಂದರ್ಭ:

ಅಕ್ಕಿಯ ಸಾರವರ್ಧನೆ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲು ಕೇಂದ್ರ ಪ್ರಾಯೋಜಿತ ಯೋಜನೆ ಮೂಲಕ 15 ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ಯೋಚಿಸಲಾಗುತ್ತಿದೆ.

1) ಯೋಜನೆ ಅವಧಿಯನ್ನು 2019- 2020 ನೇ ಸಾಲಿನಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಇದನ್ನು ಹಮ್ಮಿಕೊಳ್ಳಲಾಗಿದೆ.

 

ಅಕ್ಕಿಯ ಸಾರವರ್ಧನೆ ಎಂದರೇನು?

ಆಹಾರದಲ್ಲಿ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳಾದ ಜೀವಸತ್ವಗಳು ಮತ್ತು ಖನಿಜಗಳನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ಕ್ರಿಯೆಯನ್ನು ಸಾರವರ್ಧನೆ ಎಂದು ಕರೆಯಲಾಗುತ್ತದೆ. ಇದು ಇದರಿಂದಾಗಿ ಆಹಾರದ ಪೌಷ್ಟಿಕಾಂಶದ ಗುಣಮಟ್ಟ ಸುಧಾರಣೆಯಾಗಿ ಸಾರ್ವಜನಿಕ ಆರೋಗ್ಯಕ್ಕೆ ಅನುಕೂಲವಾಗುತ್ತದೆ.

 

ಅಕ್ಕಿಯ ಸಾರವರ್ಧನೆ ಯ ಅವಶ್ಯಕತೆ ಇದೆಯಾ?

ವಿಶ್ವದಲ್ಲಿ ಅಕ್ಕಿಯು ಪ್ರಮುಖ ಆಹಾರವಾದ ಪದಾರ್ಥವಾಗಿದೆ. ಸುಮಾರು ಎರಡು ನೂರು ಕೋಟಿಯಷ್ಟು ಜನರು ಪ್ರತಿದಿನ ಅಕ್ಕಿಯನ್ನು ಸೇವಿಸುತ್ತಾರೆ ಮತ್ತು ಏಷ್ಯಾ ಹಾಗೂ ಆಫ್ರಿಕಾದ ಭಾಗಗಳಲ್ಲಿ ಪ್ರಮುಖ ಆಹಾರವಾಗಿದೆ.

ಮಿಲ್ ಗಳಲ್ಲಿ ತಯಾರಾಗುವ ಅಕ್ಕಿಯು ಕಡಿಮೆ ಪೋಷಕಾಂಶವನ್ನು ಬಂದಿತ್ತು ಕಾರ್ಬೋಹೈಡ್ರೇಟ್ ಮಾತ್ರ ಹೊಂದಿರುತ್ತದೆ. ಸಾರವರ್ಧನೆ ಪೌಷ್ಠಿಕಾಂಶಗಳನ್ನು ಹೆಚ್ಚಿಸಲು ಉತ್ತಮ ಕ್ರಿಯೆಯಾಗಿದೆ.

ಸಾರವರ್ಧನೆ ಗೊಂಡ ಅಕ್ಕಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ1, ವಿಟಮಿನ್ ಬಿ12 ,ಫೋಲಿಕ್ ಆಸಿಡ್,ಕಬ್ಬಿಣ ಮತ್ತು ಸತುವನ್ನು ಒಳಗೊಂಡಿರುತ್ತದೆ.

 

ಒಳಗೊಂಡಿರುವ ವಿಷಯಗಳು: ಜೀವವೈವಿಧ್ಯ ಮತ್ತು ಅದರ ಸಂರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳು.

100ಕ್ಕೂ ಹೆಚ್ಚು ತಿಮಿಂಗಿಲಗಳನ್ನು ಶ್ರೀಲಂಕಾದ ಕಡಲತೀರದಲ್ಲಿ ರಕ್ಷಿಸಲಾಗಿದೆ.


 

ಸಂದರ್ಭ:

ಇತ್ತೀಚೆಗೆ ನೂರಕ್ಕೂ ಹೆಚ್ಚು ಕಡಲತೀರದ ತಿಮಿಂಗಿಲಗಳನ್ನು ಶ್ರೀಲಂಕದಲ್ಲಿ ರಕ್ಷಿಸಲಾಯಿತು.

ಪರಿಸರ ಸಂರಕ್ಷಣೆ ಅಧಿಕಾರಿಗಳು, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಶ್ರೀಲಂಕಾದ ನೌಕಾಪಡೆಯು ಈ ರಕ್ಷಣಾ ಕಾರ್ಯವನ್ನು ನೆರವೇರಿಸಿತು.

 

ಯಾಕೆ ತಿಮಿಂಗಲಗಳು ಕಡಲತೀರದಲ್ಲಿ ಕಾಣಿಸಿಕೊಳ್ಳುತ್ತವೆ?

ಡಾಲ್ಫಿನ್ ಗಳು ಮತ್ತು ತಿಮಿಂಗಲಗಳು ಕಡಲತೀರಗಳಲ್ಲಿ ತಾವಾಗಿಯೇ ಚಲಿಸುವ ಇದನ್ನು Cetacean Stranding ಎಂದು ಕರೆಯಲ್ಪಡುವ ಈ ವಿದ್ಯಮಾನ Beaching ಎಂದು ಹೆಸರಾಗಿದೆ.

ಕಡಲತೀರದಲ್ಲಿ ತಿಮಿಂಗಲಗಳು ಯಾಕೆ ಕಂಡುಬರುತ್ತವೆ ಎಂದು ವಿಜ್ಞಾನಿಗಳು ಇನ್ನು ಸ್ಪಷ್ಟಪಡಿಸಿಲ್ಲ. ಆದರೂ ಕೆಲವು ಸಾಮಾನ್ಯ ಸಿದ್ಧಾಂತಗಳನ್ನು ಅವರು ಮುಂದಿಟ್ಟಿದ್ದಾರೆ ಅವುಗಳೆಂದರೆ,

1) ನೀರಿನ ತಾಪಮಾನದಲ್ಲಿನ ಬದಲಾವಣೆ

2) ತಿಮಿಂಗಲಗಳ ವಾಸಸ್ಥಾನದ ಮೇಲೆ ಆಕ್ರಮಣ

3) ಭೂಕಾಂತೀಯ ಅಡಚಣೆಗಳು

4) ಬೇಟೆಯಾಡುವುದು

5) ಸೋನಾರ್ ಪ್ರಭಾವ

6) ಪ್ರತಿಕೂಲ ಹವಾಮಾನ

7) ಅವೈಜ್ಞಾನಿಕ ನೌಕಾಯಾನ

US_2020

 

 

ಒಳಗೊಂಡಿರುವ ವಿಷಯಗಳು: ಜೀವವೈವಿಧ್ಯ ಮತ್ತು ಅದರ ಸಂರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳು.

ಸಿಂಹ ಯೋಜನೆ: 6 ಸ್ಥಳಾಂತರ ತಾಣಗಳನ್ನು ಗುರುತಿಸಲಾಗಿದೆ.


 

ಹಿನ್ನೆಲೆ:

ಕುನೋ- ಪಲ್ಪೂರ್ ಅಭಯಾರಣ್ಯವನ್ನು ಹೊರತುಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15 ,2020 ರಂದು 6 ಹೊಸ ಸಿಂಹ ಯೋಜನೆಯ ತಾಣಗಳನ್ನು ಘೋಷಿಸಿದರು.

 

6 ಹೊಸ ತಾಣಗಳು:

1) ಮಾಧವ ರಾಷ್ಟ್ರೀಯ ಉದ್ಯಾನವನ ,ಮಧ್ಯಪ್ರದೇಶ

2) ಸೀತಾ ಮಾತಾ ವನ್ಯಜೀವಿ ಅಭಯಾರಣ್ಯ, ರಾಜಸ್ಥಾನ

3) ಮುಕುಂದ್ರ ಹಿಲ್ಸ್ ಟೈಗರ್ ರಿಸರ್ವ್, ರಾಜಸ್ಥಾನ

4) ಗಾಂಧಿ ಸಾಗರ ವನ್ಯಜೀವಿ ಅಭಯಾರಣ್ಯ,ಮಧ್ಯಪ್ರದೇಶ

5) ಕುಂಬಲಗಢ ವನ್ಯಜೀವಿ ಅಭಯಾರಣ್ಯ, ರಾಜಸ್ಥಾನ

6) ಜೆಸೋರ -ಬಲರಾಮ್ ಅಂಬಾಜಿ ವನ್ಯಜೀವಿ ಅಭಯಾರಣ್ಯ ಮತ್ತು ಅದರ ಪಕ್ಕದ ಪ್ರದೇಶಗಳು,ಗುಜರಾತ್

 

ಸಿಂಹ ಸ್ಥಳಾಂತರದ ಅವಶ್ಯಕತೆ ಯಾಕೆ?

1) ಗಿರ್ ಪ್ರದೇಶದಲ್ಲಿ  ಕಡಿಮೆ ಅನುವಂಶಿಕತೆಯ ಸಿಂಹಗಳ ವೈವಿಧ್ಯತೆಯನ್ನು ಕಾಣಬಹುದು. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಬಂದಾಗ ಅವುಗಳು ನಶಿಸಿ ಹೋಗುವ ಸಂಭವ ಹೆಚ್ಚಾಗಿದೆ.

2) ಗುಜರಾತ್ ರಾಜ್ಯದಲ್ಲಿ ಮೂವತ್ತು ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಿಂಹಗಳು ಕಂಡುಬರುತ್ತವೆ. ಇದನ್ನು ಏಷ್ಯಾಟಿಕ್ ಲಯನ್ ಲ್ಯಾಂಡ್ಸ್ಕೇಪ್ ಎಂದು ಕರೆಯಲಾಗುತ್ತದೆ.

3)  2013ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಕುನೋ -ಪಲ್ಪೂರ್ ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಆದೇಶ ನೀಡಿದೆ.

 

ಏಷ್ಯಾದ ಸಿಂಹಗಳ ಪರಿಚಯ:

ಐಯುಸಿಎನ್ ಕೆಂಪು ಪಟ್ಟಿಯಲ್ಲಿ ಇದನ್ನು “ಅಳಿವಿನಂಚಿನ” ಪ್ರಬೇಧ ಎಂದು ಗುರುತಿಸಲಾಗಿದೆ.

1) ಭಾರತದಲ್ಲಿ ಇದನ್ನು ಗುಜರಾತಿನ “ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ” ಮಾತ್ರ ನೋಡಬಹುದಾಗಿದೆ.

growing_no

 

ಒಳಗೊಂಡಿರುವ ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

2050ರ ಹೊತ್ತಿಗೆ ತೀವ್ರವಾಗಿ ನೀರಿನ ಸಮಸ್ಯೆಯನ್ನು ಎದುರಿಸುವ ಭಾರತದ 30 ನಗರಗಳನ್ನು ಒಳಗೊಂಡಂತೆ, ಜಗತ್ತಿನ 100 ನಗರಗಳ ಪಟ್ಟಿಯನ್ನು WWF ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದೆ.


 

ಸಂದರ್ಭ:

2050ರ ಹೊತ್ತಿಗೆ ಭಾರತದ 30 ನಗರಗಳು ಒಳಗೊಂಡಂತೆ ವಿಶ್ವದ 100 ನಗರಗಳು ತೀವ್ರವಾದ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆಂದು world wild fund for nature ಸಂಸ್ಥೆಯು ತನ್ನ ವರದಿಯಲ್ಲಿ ತಿಳಿಸಿದೆ.

 

 ನಗರಗಳ ಪಟ್ಟಿ:

1) ಜಾಗತಿಕ ಹಬ್ಎಂದು ಕರೆಯಲಾಗುವ ಬೀಜಿಂಗ್, ಜಕಾರ್ತ,ಜೋಹಾನ್ಸ್ಬರ್ಗ್, ಇಸ್ತಾನ್ ಬುಲ್,  ಮೆಕ್ಕಾ ಮತ್ತು ರಿಯೋಡಿ ಜನೈರೋ  ಗಳು ಇದರಲ್ಲಿ ಸೇರಿವೆ.

2) ಜೈಪುರ,ಇಂದೋರ್,  ಠಾಣೆ ,ಶ್ರೀನಗರ, ರಾಜಕೋಟ್,ಬೆಂಗಳೂರು ಇತ್ಯಾದಿಗಳು  ಭಾರತದ ವ್ಯಾಪ್ತಿಯಲ್ಲಿ ಬರುವ ನಗರಗಳಾಗಿವೆ.

ಈಗ ಗುರುತಿಸಲಾಗಿರುವ ಅರ್ಧದಷ್ಟು ನಗರಗಳು ಚೀನಾ ಮತ್ತು ಭಾರತದ ವ್ಯಾಪ್ತಿಯಲ್ಲಿ ಬರುತ್ತವೆ.

 

ಮುಂದಿರುವ ಸವಾಲುಗಳು?

ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ 2050ರ ಹೊತ್ತಿಗೆ ನಗರಗಳು ನಾಟಕೀಯವಾಗಿ ತೀವ್ರತರವಾದ ನೀರಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 

ಹಾಗಾದ್ರೆ ಪರಿಹಾರ ಏನು?

1) ನಗರಗಳು ಪ್ರಕೃತಿ ಆಧಾರಿತ ಪರಿಹಾರಗಳನ್ನು ಹೆಚ್ಚು ಹೆಚ್ಚು ಅಳವಡಿಸಿಕೊಂಡು, ಅವುಗಳಲ್ಲಿ ಹೂಡಿಕೆ ಮಾಡಿ ಮತ್ತು ನದಿ ಜಲಾನಯನ ಪ್ರದೇಶ, ಜೌಗುಪ್ರದೇಶ ಗಳನ್ನು ಉತ್ತಮ ಪಡಿಸಬೇಕಾಗಿದೆ.

2) ಇವುಗಳನ್ನು ನೆರವೇರಿಸಲು ಅವುಗಳಿಗೆ ಆರ್ಥಿಕ ಹೂಡಿಕೆಯನ್ನು ಮಾಡಲು ಖಾಸಗಿ ವಲಯದ ಸಹಯೋಗದೊಂದಿಗೆ ಸಾರ್ವಜನಿಕ  ಧನಸಹಾಯವನ್ನು ನಿರ್ಮಿಸಬೇಕಾಗಿದೆ.

3) ಜಾಗತಿಕವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆ  ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿ ನಗರಗಳನ್ನು ಸಜ್ಜುಗೊಳಿಸಬೇಕಾಗಿದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos