Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ -2
ವಿಷಯ: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟಗಳು, ತಿದ್ದುಪಡಿಗಳು,ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
1) ಯುಎಸ್ ನ ಸಂವಿಧಾನವು ತನ್ನ ಎಲ್ಲಾ ನಿಬಂಧನೆ ಗಳಲ್ಲಿ ” ಒಡೆಯಲಾರದ ರಾಜ್ಯಗಳಿಂದ ಕೂಡಿದ ಒಡೆಯಲಾರದ ಒಕ್ಕೂಟವನ್ನು” ಸೃಷ್ಟಿಸಿದೆ, ಮತ್ತೊಂದೆಡೆ ಭಾರತವು, ” ಒಡೆಯಬಲ್ಲ ರಾಜ್ಯಗಳ ಒಡೆಯಲಾರದ ಒಕ್ಕೂಟವನ್ನು” ಹೊಂದಿದೆ. ಇವೆರಡರ ನಡುವಿನ ಹೋಲಿಕೆ ಮತ್ತು ವ್ಯತಿರಿಕ್ತತೆ ಗಳನ್ನು ಬರೆಯಿರಿ. (250 ಪದಗಳು)
ವಿಷಯ: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದವರಿಗೆ ಕಲ್ಯಾಣ ಯೋಜನೆಗಳು ಮತ್ತು ಯೋಜನೆಗಳ ಕಾರ್ಯಕ್ಷಮತೆ; ಈ ದುರ್ಬಲ ವರ್ಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಕಾರ್ಯವಿಧಾನಗಳು, ಕಾನೂನುಗಳು, ಸಂಸ್ಥೆಗಳು.
2) ಸಲಿಂಗ ಸಂಬಂಧಗಳನ್ನು ಕಾನೂನುಬದ್ಧವಾಗಿಸಿದ ಪ್ರಜಾಪ್ರಭುತ್ವದ ರಾಷ್ಟ್ರಗಳ ಸಾಲಿಗೆ ಭಾರತ ಅಂತಿಮವಾಗಿ ಸೇರ್ಪಡೆಯಾಗಿದೆ. ನಾಗರಿಕರು ತಾವು ಆಯ್ಕೆ ಮಾಡಿದ ಯಾರನ್ನಾದರೂ ಮದುವೆಯಾಗುವ ಹಕ್ಕನ್ನು ಗುರುತಿಸಲ್ಪಟ್ಟ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳ ಸಾಲಿಗೆ ಈಗ ಸೇರುವ ಸಮಯವಾಗಿದೆ. ಟಿಪ್ಪಣಿ ಬರೆಯಿರಿ.(250 ಪದಗಳು)
ವಿಷಯ: ಆರೋಗ್ಯ, ಶಿಕ್ಷಣ ,ಮಾನವ ಸಂಪನ್ಮೂಲ ಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.
3) ದೇಶದಲ್ಲಿ ಮಕ್ಕಳು ಮತ್ತು ಮಹಿಳೆಯರ ಪೋಷಣೆಯಲ್ಲಿ ಪೌಷ್ಟಿಕಾಂಶವನ್ನು ಖಚಿತಪಡಿಸಿಕೊಳ್ಳಲು ಜೀವನಚಕ್ರದ ವಿಧಾನದೊಂದಿಗೆ ಕಾರ್ಯತಂತ್ರ ಹಾಗೂ ಸಾಕ್ಷಿ ಆಧಾರಿತ ಅಂಶಗಳನ್ನು ಅನುಷ್ಠಾನಗೊಳಿಸುವುದರಿಂದ ಆರ್ಥಿಕ ಲಾಭವನ್ನು ಪಡೆಯಬಹುದು. ವಿವರಿಸಿ(250 ಪದಗಳು)
ವಿಷಯ:ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದವರಿಗೆ ಕಲ್ಯಾಣ ಯೋಜನೆಗಳು ಮತ್ತು ಯೋಜನೆಗಳ ಕಾರ್ಯಕ್ಷಮತೆ; ಈ ದುರ್ಬಲ ವರ್ಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಕಾರ್ಯವಿಧಾನಗಳು, ಕಾನೂನುಗಳು, ಸಂಸ್ಥೆಗಳು.
4) ಭಾರತ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಗಳ ಅಭಿವೃದ್ಧಿಗೆ ತೆಗೆದುಕೊಂಡ ವಿವಿಧ ಉಪಕ್ರಮಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಿ. (250 ಪದಗಳು)
ಸಾಮಾನ್ಯ ಅಧ್ಯಯನ -3
ವಿಷಯ: ವಿಪತ್ತು ಮತ್ತು ವಿಪತ್ತು ನಿರ್ವಹಣೆ.
5)” ಭಾರತದಲ್ಲಿ ಪ್ರವಾಹಗಳು ಮತ್ತೆ-ಮತ್ತೆ ಘಟಿಸುವ ವಿದ್ಯಾಮಾನಗಳಾಗಿವೆ ಮತ್ತು ಅವು ಜೀವಕ್ಕೆ, ಆಸ್ತಿಗೆ,ಜೀವನೋಪಾಯ ವ್ಯವಸ್ಥೆಗಳಿಗೆ ಹಾಗೂ ಮೂಲಸೌಕರ್ಯಗಳಿಗೆ ಭಾರೀ ನಷ್ಟವನ್ನು ಉಂಟು ಮಾಡುತ್ತವೆ”. ಈ ಮೇಲಿನ ಹೇಳಿಕೆಯ ಅಡಿಯಲ್ಲಿ, ಭಾರತದಲ್ಲಿ ಯೋಜಿತವಲ್ಲದ ನಗರೀಕರಣವು ಸಮಸ್ಯೆಗೆ ಹೇಗೆ ಪೂರಕವಾಗುತ್ತಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.(250 ಪದಗಳು)
ಸಾಮಾನ್ಯ ಅಧ್ಯಯನ -4
6) ನೈತಿಕತೆಯನ್ನು ಸಾಮಾಜಿಕ ರೂಢಿಗಳಿಂದ ಪಡೆಯಲಾಗಿದೆ ಆದರೂ ಎಲ್ಲಾ ಸಾಮಾಜಿಕ ರೂಢಿಗಳು ನೈತಿಕವಾಗಿ ಇರುವುದಿಲ್ಲ. ಉದಾಹರಣೆ ಜೊತೆಗೆ ವಿವರಿಸಿ.(250 ಪದಗಳು).
7) ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ಎಂದರೇನು? ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರಕ್ಕೆ ಕಾರಣಗಳು ಯಾವುವು? ಚರ್ಚಿಸಿ.(250 ಪದಗಳು)








