Print Friendly, PDF & Email

ಇನ್ಸೈಟ್ಸ್ ಐಎಎಸ್ ದೈನಂದಿನ ಪ್ರಚಲಿತ ವಿದ್ಯಮಾನಗಳು ಇನ್ನು ಮುಂದೆ ಕನ್ನಡದಲ್ಲಿ ಲಭ್ಯ

Join Our official Telegram Channel for Important Tips and Guidance : https://t.me/insightsIAStips

 

ಐಎಎಸ್ ಮತ್ತು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸು. ಪ್ರತಿ ವರ್ಷ ಒಂದಿಲ್ಲೊಂದು ಪರೀಕ್ಷಾ ತಯಾರಿಯಲ್ಲಿ ಸತತವಾಗಿ ತಮ್ಮನ್ನು ತೊಡಗಿಸಿಕೊಂಡು ಸಮಯದ ಜೊತೆ ಪೈಪೋಟಿ ನಡೆಸಿ ಪರಿಪೂರ್ಣ ತಯಾರಿಯ ಅಪೇಕ್ಷೆಯಿಂದ ಹಗಲಿರುಳು ಎನ್ನದೇ ಶ್ರಮಿಸುವ ಆಕಾಂಕ್ಷಿಗಳ ಕನಸನ್ನು ಸಾಕಾರಗೊಳಿಸಲು ನೆರವಾಗುವ ಸದುದ್ದೇಶದಿಂದ ಕನ್ನಡದಲ್ಲಿ ದೈನಂದಿನ ಪ್ರಚಲಿತ ವಿದ್ಯಮಾನಗಳನ್ನು, ಐಎಎಸ್ ಪರೀಕ್ಷಾ ತರಬೇತಿಯಲ್ಲಿ ಭಾರತದಲ್ಲೇ ಮಂಚೂಣಿಯಲ್ಲಿರುವ, ಇನ್ಸೈಟ್ಸ್ ಐಎಎಸ್ ವತಿಯಿಂದ ಹೊರತರಲಾಗಿದೆ.

 

ಉದ್ದೇಶ:

 

ಮಾರುಕಟ್ಟೆಯಲ್ಲಿ ಯಥೇಚ್ಛವಾಗಿ ಈಗಾಗಲೇ ಲಭ್ಯವಿರುವ ಅನೇಕ ಪಠ್ಯ ಸಾಮಗ್ರಿಗಳು ನಮಗೆ ಸಹಕಾರಿಯಾಗುತ್ತವೆ ಎಂದು ಒಂದೆಡೆ ಎನಿಸಿದರೂ, ವಿದ್ಯಾರ್ಥಿಗಳು ಪ್ರತಿನಿತ್ಯ ತಮ್ಮನ್ನು ಸುತ್ತುವರೆದ ರಾಶಿ ರಾಶಿ ಸಾಮಗ್ರಿಗಳ ನಡುವೆ ದಿಗ್ಭ್ರಾಂತರಾಗಿ ತಮ್ಮ ತಯಾರಿಗೆ ಅವಶ್ಯವಾಗಿ ಬೇಕಾಗಿರುವ  ಸಂಕ್ಷಿಪ್ತ, ಸಮರ್ಪಕ, ವಿಶ್ವಾಸಾರ್ಹ ಮತ್ತು ಗುಣಮಟ್ಟದ ಪಠ್ಯ ಸಾಮಗ್ರಿಗಳ ಕೊರತೆಯನ್ನು ಅನೇಕ ವರ್ಷಗಳಿಂದ ಎದುರಿಸುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ನೆರವಾಗಿ, ಐಎಎಸ್ ಅಧಿಕಾರಿಯಾಗುವ ಅವರ ಕನಸಿಗೆ ಹೆಗಲೆಣೆಯಾಗಿ ನಿಲ್ಲುವ ನಿಸ್ವಾರ್ಥ ಉದ್ದೇಶ ನಮ್ಮದು.

 

ಹಾಗಾಗಿ, ಕಳೆದ ಅನೇಕ ವರ್ಷಗಳಿಂದ ಐಎಎಸ್ ಪರೀಕ್ಷೆಯಲ್ಲಿ ಮೊದಲನೇ ರ್ಯಾಂಕ್ (ಕೆ ಆರ್ ನಂದಿನಿ – 2016) ಪಡೆದವರೂ ಸೇರಿದಂತೆ ನೂರಾರು ಅಧಿಕಾರಿಗಳನ್ನು ರೂಪಿಸಿದ ಅನುಭವ ಮತ್ತು ಉಪನ್ಯಾಸದ ಅಗಾಧ ಅನುಭವವಿರುವ ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ನಿರ್ದೇಶಕರಾದ ವಿನಯ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ನುರಿತ ಮತ್ತು ಅಗಾಧ ಅನುಭವವುಳ್ಳ ಪರೀಕ್ಷಾ ತರಬೇತುದಾರರು ವಿದ್ಯಾರ್ಥಿಗಳ ವಾಸ್ತವ ಸಮಸ್ಯೆಗಳನ್ನು ಮನಗಂಡು ಅತ್ಯಂತ ಕಾಳಜಿ ಹಾಗು ಪ್ರಾಮಾಣಿಕತೆಯಿಂದ ಸಿದ್ಧ ಪಡಿಸಿರುವ ದೈನಂದಿನ ಪ್ರಚಲಿತ ವಿದ್ಯಮಾನಗಳ ಸರಣಿಯನ್ನು ಇನ್ಸೈಟ್ಸ್ ಐಎಎಸ್ (www.insightsonindia.com) ನಿಮಗಾಗಿ ಪ್ರಸ್ತುತ ಪಡಿಸುತ್ತಿದೆ.

 

ವೈಶಿಷ್ಟ್ಯಗಳು

 

  • ಈ ಕೈಪಿಡಿಯು ಬಹುತೇಕ ಮುಖ್ಯ ವಾಹಿನಿಯ ಎಲ್ಲಾ ವಾರ್ತಾ ಪತ್ರಿಕೆಗಳ ಹಾಗು ಸರ್ಕಾರದ ಅಧಿಕೃತ ವಾರ್ತಾ ಮಾಧ್ಯಮಗಳ ಮಾಹಿತಿಗಳನ್ನು ಮೂಲವಾಗಿರಿಸಿಕೊಂಡು ಸಿದ್ಧಗೊಂಡಿದ್ದು, ಐಎಎಸ್, ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ಸೇರಿದಂತೆ ಇನ್ನು ಮುಂತಾದ ಬಹುತೇಕ ಎಲ್ಲಾ ವೃತ್ತಿ  ಪ್ರವೇಶ ಪರೀಕ್ಷೆಗಳಿಗೆ ಅವಶ್ಯವಾಗಿರುವ ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ಸಂಕ್ಷಿಪ್ತ ಹಾಗೂ ಸಮರ್ಪಕ ರೂಪದಲ್ಲಿ ಈ ಕಾರ್ಯಕ್ರಮ ಒಳಗೊಂಡಿದೆ.
  • ಓದುಗನ ಮನಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಐಎಎಸ್ ಪಠ್ಯಕ್ರಮ ಮತ್ತು ವಿಷಯಾಧಾರಿತವಾಗಿ ಮಾಹಿತಿಯನ್ನು ವರ್ಗೀಕರಿಸಿ, ಅಗತ್ಯವಾದ ಕಡೆಗಳಲ್ಲಿ pictograph, flow chart, tabular ಕಾಲಂಗಳನ್ನೂ ಒಳಗೊಂಡಿದ್ದು, ಇಲ್ಲಿನ ಮಾಹಿತಿಗಳ ಹಾಗೂ ಅವುಗಳ ವಿಶ್ಲೇಷಣೆಯ ಪ್ರಸ್ತುತಿ ಓದುಗರ ಏಕತಾನತೆಯನ್ನು ನಿವಾರಿಸುವುದಲ್ಲದೆ, ಬಹುಕಾಲ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ.
  • ಬರಿಯ ಮಾಹಿತಿಗಳಲ್ಲದೆ, ಇದನ್ನು ಓದುಗರ ಪುನರ್ಮನನಕ್ಕೆ ಸಹಕಾರಿಯಾಗುವಂತೆ ರೂಪಿಸಿ ನೀಡಲಾಗಿದ್ದು, ಇದು ತಯಾರಿಯ ಸಮರ್ಪಕತೆಗೆ ಸಹಕಾರಿಯಾಗುವುದಲ್ಲದೆ, ಸ್ಪರ್ಧಾರ್ಥಿ ಮಿತ್ರರ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.

 

ಕನ್ನಡದ ಸ್ಪರ್ಧಾರ್ಥಿಗಳ ಯಶಸ್ಸನ್ನೇ ಮೂಲ ಗುರಿಯಾಗಿಸಿಕೊಂಡು, ಉದ್ಯೋಗಾಕಾಂಕ್ಷಿಯು ಯಾವ ಹಿನ್ನೆಲೆಯವರಾಗಿದ್ದರೂ ಅವಕಾಶ ವಂಚಿತರಾಗದೆ, ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಿ ಅವರ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಪ್ರಾಮಾಣಿಕ ರೀತಿಯಲ್ಲಿ ಸಹಕಾರಿಯಾಗಬೇಕೆಂಬ ತೀವ್ರ ಕಳಕಳಿಯಿಂದ ನಮ್ಮ ತಂಡ ಈ ದೈನಂದಿನ ಪ್ರಚಲಿತ ವಿದ್ಯಮಾನಗಳನ್ನು ಪ್ರಕಟಿಸುತ್ತಿದೆ. ನಿಮ್ಮ ನಿರಂತರ ಶ್ರಮಕ್ಕೆ ನಮ್ಮ ಪ್ರಾಮಾಣಿಕ ಸಹಕಾರ ಸದಾ ಜೊತೆಯಿರುತ್ತದೆ ಎಂಬ ಭರವಸೆಯನ್ನು ನೀಡುವುದರೊಂದಿಗೆ ನಿಮ್ಮ ತಯಾರಿ ಅತ್ಯಂತ ಚೈತನ್ಯದಿಂದ ಕೂಡಿರಲಿ ಎಂದು ನಮ್ಮ ತಂಡ ಹಾರೈಸುತ್ತದೆ. ಶುಭವಾಗಲಿ.

 

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ-2-11-2020