Print Friendly, PDF & Email

InsightsIAS SECURE ಇನ್ನು ಮುಂದೆ ಕನ್ನಡದಲ್ಲಿ ಲಭ್ಯ

Join Our official Telegram Channel for Important Tips and Guidance : https://t.me/insightsIAStips

 

 

Secure ಉತ್ತರ ರಚನಾ ಕಾರ್ಯಕ್ರಮವು 2013 ರಿಂದ ಇಲ್ಲಿಯವರೆಗೂ ಉಚಿತ ಮತ್ತು ನಿರಂತರವಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ಬರವಣಿಗೆಯ ಕೌಶಲ್ಯ ವೃದ್ಧಿಗೆ ನೆರವಾಗಿರುವುದಕ್ಕೆ ಪ್ರತಿ ವರ್ಷವು 100 ಕ್ಕೂ ಹೆಚ್ಚು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ವಿದ್ಯಾರ್ಥಿಗಳು ಯುಪಿಎಸ್ಸಿ  ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿರುವುದೇ ಸಾಕ್ಷಿ!

 

ಇನ್ನೂ ಮುಂದೆ Secure ಕಾರ್ಯಕ್ರಮವು ಕನ್ನಡದಲ್ಲಿಯೂ ಲಭ್ಯ ಎಂದು ತಿಳಿಸಲು ಹರ್ಷಿಸುತ್ತೇವೆ! ಇದೊಂದು ಸಂಪೂರ್ಣ ಉಚಿತ ಕಾರ್ಯಕ್ರಮವಾಗಿದ್ದು ನಿಮ್ಮಿಂದ ಬೇಡುವುದು ಉತ್ತರ ರಚನೆಯ ಶಿಸ್ತುಬದ್ಧ ಅಭ್ಯಾಸ ಮತ್ತು ನಿಷ್ಠೆಯನ್ನಷ್ಟೇ. ಕನ್ನಡದ ಪ್ರತಿಭಾವಂತ ಐಎಎಸ್ ಮತ್ತು ಕೆಎಎಸ್ ಪರೀಕ್ಷಾ ಆಕಾಂಕ್ಷಿಗಳೆಲ್ಲರೂ ಪ್ರತಿದಿನವೂ ನಮ್ಮ ಜಾಲತಾಣ www.insightsonindia.com ನಲ್ಲಿ ಮಧ್ಯಾಹ್ನ ಎರಡು ಗಂಟೆಯ ಒಳಗೆ ಪ್ರಕಟವಾಗುವ ಪ್ರಶ್ನೆಗಳಿಗೆ, ನೀವು ಆನಂತರದಲ್ಲಿ ಉತ್ತರಿಸಬಹುದು.

 

ನಿರಂತರ ಬರವಣಿಗೆಯ ಅಭ್ಯಾಸ ಮತ್ತು ಮಾರ್ಗದರ್ಶನ ಐಎಎಸ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಲು ಇರುವ ಏಕೈಕ ಮಾರ್ಗ. ನಿಮಗಿರುವ ಅಪಾರವಾದ ಜ್ಞಾನವನ್ನು ಸೀಮಿತ ಪದಗಳಲ್ಲಿ ಮತ್ತು ಸೀಮಿತ ಅವಧಿಯಲ್ಲಿ ಪ್ರಸ್ತುತಪಡಿಸುವ ಕೌಶಲ ನಿಮಗೆ ಕರಗತವಾಗಬೇಕು. ಜೊತೆಗೆ, ಉತ್ತಮ ಅಂಕ ಗಳಿಸಲು ಉತ್ತರದ ಹರಿವು (flow of content), ಆಕಾರ (Structuring & Organising your content) ಮತ್ತು ಪ್ರಸ್ತುತಿಯ (Presentation Skills) ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ! ಇವೆಲ್ಲವನ್ನೂ ಒಟ್ಟಿಗೆ ನಿರ್ವಹಿಸುವ ಮೂಲಕ ಗುಣಮಟ್ಟದ ಉತ್ತರಗಳನ್ನು ರಚಿಸಬಹುದು. ಈ ಮೂಲಕ Secure ಕಾರ್ಯಕ್ರಮವು IAS ಅಧಿಕಾರಿಯಾಗುವ ನಿಮ್ಮ ಕನಸಿಗೆ ಸೇತುವೆಯಾಗಿ ನಿಮ್ಮನ್ನು ದಡ ಸೇರಿಸಲು ನೆರವಾಗುವುದು.

 

ಉದ್ದೇಶ:

 

ಆಂಗ್ಲ ಮಾಧ್ಯಮದಲ್ಲಿ ಉತ್ತರ ಬರವಣಿಗೆಗೆ ವಿಪುಲ ಅವಕಾಶಗಳಿವೆ. ಆದರೆ, ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಕನ್ನಡದಲ್ಲೇ ಬರೆಯುವ ಆಸಕ್ತಿ ಇದ್ದರೂ ಸಹ ಗುಣಮಟ್ಟದ ಪಠ್ಯ ಸಾಮಗ್ರಿಯ ಅಲಭ್ಯತೆ, ಮಾರ್ಗದರ್ಶನದ ಕೊರತೆ ಮೊದಲಾದ ಕಾರಣಗಳಿಂದಾಗಿ ಅಸಹಾಯಕರಾಗಿ ಒಲ್ಲದ ಮನಸ್ಸಿನಿಂದ ಆಂಗ್ಲ ಭಾಷೆಯಲ್ಲೇ ಮುಂದುವರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಕಠಿಣ ಪರಿಶ್ರಮ, ಸತತ ಅಭ್ಯಾಸಗಳಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬೇಕಾದ ಎಲ್ಲ ರೀತಿಯ ಅರ್ಹತೆಗಳನ್ನು ಸಂಪಾದಿಸಿದ್ದರೂ ಸಹ ಕನ್ನಡದಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆಯಿಂದಾಗಿ ದಕ್ಷ ಅಧಿಕಾರಿಯಾಗಿ ದೇಶ ಸೇವೆ ಮಾಡುವ ಅವಕಾಶದಿಂದ ಸ್ವಲ್ಪದರಲ್ಲಿಯೇ (ಕೆಲವೇ ಅಂಕಗಳಿಂದ) ವಂಚಿತರಾಗುತ್ತಿರುವ ಪ್ರತಿಭೆಗಳ ಸಹಾಯಕ್ಕೆ ಇನ್ಸೈಟ್ಸ್ IAS ಸಂಸ್ಥೆ ಕಟಿಬದ್ಧವಾಗಿದೆ. ಅದರ ಫಲಶ್ರುತಿಯೇ ಇನ್ನು ಮುಂದೆ ಕನ್ನಡದಲ್ಲಿ Secure ಕಾರ್ಯಕ್ರಮ ಆರಂಭವಾಗುತ್ತಿರುವುದು.

 

ಪ್ರಯೋಜನಗಳು:

 

  • ಐ.ಎ.ಎಸ್ ಪಠ್ಯಕ್ರಮಕ್ಕೆ ಅನುಗುಣವಾಗಿ ಗುಣಮಟ್ಟದ ಪ್ರಶ್ನೆಗಳು.
  • ನಾಲ್ಕೂ ಸಾಮಾನ್ಯ ಅಧ್ಯಯನ ಪತ್ರಿಕೆಗಳ (General Studies 1 to 4) ಬಗ್ಗೆ ಪ್ರಶ್ನೆಗಳನ್ನು ನೀಡುವುದರಿಂದ ಸಮಗ್ರ ಮತ್ತು ಸಮತೋಲಿತ (Complete & Holistic) ಅಧ್ಯಯನ ಸಾಧ್ಯ.
  • ಸಹ ಅಭ್ಯರ್ಥಿಗಳು ಬರೆಯುವ ಗುಣಮಟ್ಟದ ಉತ್ತರಗಳಿಂದ ನಿಮ್ಮ ಉತ್ತರದ ಲೋಪ ದೋಷಗಳನ್ನು ಅರಿತು ತಿದ್ದಿಕೊಳ್ಳುವ ಮತ್ತು ಉತ್ತಮ ಅಂಶಗಳನ್ನು ಸ್ವೀಕರಿಸಿ ಅಳವಡಿಸಿಕೊಂಡು, ಮೌಲ್ಯವರ್ಧಿಸಿಕೊಳ್ಳಲು (Value addition) ಅವಕಾಶ.
  • ಪ್ರಚಲಿತ ವಿದ್ಯಮಾನ (Current affairs) ಮತ್ತು ಇತಿಹಾಸ, ಭೂಗೋಳ ಶಾಸ್ತ್ರ ಮೊದಲಾದ ಸ್ಥಿರ ಪಠ್ಯ ಕ್ರಮದ (Static part) ಅಭ್ಯಾಸವನ್ನು ಒಟ್ಟಿಗೆ ನಿರ್ವಹಿಸುವ ಮೂಲಕ ಪರಿಪೂರ್ಣ ತಯಾರಿ ನಡೆಸಿ.
  • ಮಾದರಿ ಉತ್ತರಗಳ (Synopsis) ಸಹಾಯದಿಂದ ಕಠಿಣ ಮತ್ತು ಕ್ಲಿಷ್ಟಕರವಾದ ಪ್ರಶ್ನೆ ಹಾಗೂ ವಿಷಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಿ.

 

ಕೊನೆಯದಾಗಿ, ಹೆಚ್ಚೆಚ್ಚು ಕನ್ನಡಿಗರು ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶ ಸೇವೆಗೆ ನಿಯುಕ್ತರಾಗಲಿ, ಎ.ಪಿ.ಜೆ ಅಬ್ದುಲ್ ಕಲಾಂರ ಕನಸಿನ ಭಾರತದ ನಿರ್ಮಾಣಕ್ಕೆ ಹೆಗಲಾಗಲಿ ಎಂಬ ಧ್ಯೇಯೋದ್ದೇಶಗಳೊಂದಿಗೆ ಈ ‘ಕಾಯಕ’ವನ್ನು ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಆರಂಭಿಸುತ್ತಿದ್ದೇವೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ, ನಿರಂತರವಾಗಿ ಉತ್ತರ ಬರೆಯುವ-ಕಲಿಯುವ ಮನಸ್ಸು ನಿಮಗಿದ್ದರೆ, ಐ.ಎ.ಎಸ್ ಅಧಿಕಾರಿಯಾಗುವ ಮಾರ್ಗ ನಿಮಗಾಗಿ ಸದಾ ತೆರೆದಿರುತ್ತದೆ. ನಿಮ್ಮ ಯಶಸ್ಸು ನಮ್ಮ ಗುರಿ.

 

ಇನ್ ಸೈಟ್ಸ್ ಸೆಕ್ಯೂರ್ – 2020 ಕನ್ನಡ – 2 ನವೆಂಬರ್ 2020

ಜೈ ಹಿಂದ್ | ಜೈ ಕರ್ನಾಟಕ