Kannada Literature Optional Classes at Insights
One of Its Kind only Exam Oriented Classes
ಕನ್ನಡ ಸಾಹಿತ್ಯ ಕಳೆದ 6 ವರ್ಷಗಳಿಂದ ಬಹು ಭರವಸೆಯ ಐಚ್ಚಿಕ ವಿಷಯವಾಗಿ ಬಹುತೇಕ ವಿದ್ಯಾರ್ಥಿಗಳ ಆಯ್ಕೆಯಾಗಿರುವುದು ಜಾಹೀರಾದ ಸಂಗತಿ. 330 ರವರೆಗೂ ಇದರ ಅಂಕ ವ್ಯಾಪ್ತಿಯ ಸಾಧ್ಯತೆಯನ್ನು 2014 ರಿಂದ 2017 ರ ಸಾಲಿನಲ್ಲಿ ಮನಗಂಡಿದ್ದೇವೆ. ಅಲ್ಲದೇ 2017 ರಲ್ಲಿ ಇನ್ಸೈಟ್ಸ್ ನವರೇ ಆದ ಕೆ. ಆರ್ ನಂದಿನಿ ಅವರು ಕನ್ನಡ ಐಚ್ಚಿಕದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ದೇಶಕ್ಕೆ ಪ್ರಥಮ ರಾಂಕ್ ಪಡೆದಿರುವುದೂ ಹೆಗ್ಗಳಿಕೆಯ ಸಂಗತಿ. ಆದರೆ ಕಳೆದ 2 ವರ್ಷಗಳಿಂದ ಅಂಕಗಳಿಕೆ ಅಷ್ಟೊಂದು ಸ್ವಾಗತಾರ್ಹ ವಾಗಿಲ್ಲವೆಂಬುದು ಈಗಿನ ವಿದ್ಯಾರ್ಥಿಗಳ ಕಳವಳದ ಸಂಗತಿಯಾಗಿದೆ ಎಂಬುದು ನಮ್ಮ ಗಮನದಲ್ಲಿದೆ.
ಇದರ ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿದಾಗ ಬಹುತೇಕವಾಗಿ ಇದಕ್ಕೆ ಮೂಲ ಕಾರಣ – ಸಿದ್ಧ ಮಾದರಿಯ ಸಾಮಾನ್ಯ ಉತ್ತರಗಳು, ಉತ್ತರ ಪತ್ರಿಕೆಯ ಅಪೂರ್ಣತೆ, ಹಳೆಯ ಉದಾಹರಣೆಗಳ ಪುನರಾವರ್ತನೆ, ವಿಷಯದ ಮೇಲೆ ಹಿಡಿತದ ಕೊರತೆ ಹಾಗೂ ಅಗತ್ಯವಾದ ಉತ್ತರಾಭ್ಯಾಸದ ಕೊರತೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ಇವೆಲ್ಲವುಗಳನ್ನು ಮನಗಂಡು ನಮ್ಮ ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ತರಗತಿಗಳನ್ನು ವಿಶೇಷವಾಗಿ ಈ ಕೆಳಗಿನ ಅಂಶಗಳೊಂದಿಗೆ ವಿನ್ಯಾಸ ಗೊಳಿಸಲಾಗಿದೆ.
*ಧ್ಯೇಯೋದ್ದೇಶ*
ಸಮರ್ಪಕ ಸಮಯದಲ್ಲಿ ಸಮಗ್ರವಾಗಿ ಪಠ್ಯವಾರು ಸಾಹಿತ್ಯದ ವಿಷಯಗಳ ಮೇಲೆ ಹಿಡಿತ ಸಾಧಿಸುವುದು ಹಾಗೂ ವಿಶ್ಲೇಷಣಾತ್ಮಕತೆ ಯ ಮನೋಭಾವವನ್ನು ಗಳಿಸಿ ಬರವಣಿಗೆಯ ಸತತಾಭ್ಯಾಸದ ಜೊತೆಗೆ ಪರಿಣಾಮಕಾರಿ ಉತ್ತರಗಳನ್ನು ಬರೆಯುವ ಸಾಮರ್ಥ್ಯ ಹೊಂದುವುದು.
ತರಗತಿಗಳ ವಿಶೇಷತೆ –
*ಶಿಸ್ತುಬದ್ಧತೆ* – ಪ್ರಪ್ರಥಮ ಬಾರಿಗೆ ವೇಳಾಪಟ್ಟಿ ಸಹಿತವಾದ ಕನ್ನಡ ಐಚ್ಚಿಕ ತರಗತಿಗಳು
*ಸತತಾಭ್ಯಾಸ* – ಪ್ರತಿ ವಾರ ಕಿರು (ಘಟಕ) ಪರೀಕ್ಷೆಗಳು
*ನಿರಂತರ ಮಾರ್ಗದರ್ಶನ* – ಉತ್ತರಗಳ ಚರ್ಚೆ ಹಾಗೂ ವ್ಯಕ್ತಿಗತವಾದ ಸಲಹೆಗಳು. ತರಗತಿಗಳು ಮುಗಿದ ನಂತರವೂ ನಿರಂತರವಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವ ಅಧ್ಯಾಪಕರು.
*ಅಗತ್ಯವಾದ ಪಠ್ಯ ಸಾಮಗ್ರಿ* – ಸಮರ್ಪಕತೆ ಹಾಗೂ ಸಮಗ್ರತೆಯಿಂದಿಗೆ
*ನುರಿತ ಅಧ್ಯಾಪಕ ವರ್ಗ* – ಯುಪಿಎಸ್ಸಿ ಮುಖ್ಯ ಪರೀಕ್ಷೆಯ ಅಗಾಧ ಅನುಭವದೊಂದಿಗೆ.
For Details and Timetable, Please go through the following PDF












